Tag: Karnataka Budget 2021

  • ನಿಗಮ ಮಂಡಳಿಗಳ ಅಭಿವೃದ್ಧಿಗೆ ಅನುದಾನ – ಅಲ್ಪಸಂಖ್ಯಾತರ ಏಳಿಗೆಗೆ 1,500 ಕೋಟಿ

    ನಿಗಮ ಮಂಡಳಿಗಳ ಅಭಿವೃದ್ಧಿಗೆ ಅನುದಾನ – ಅಲ್ಪಸಂಖ್ಯಾತರ ಏಳಿಗೆಗೆ 1,500 ಕೋಟಿ

    ಬೆಂಗಳೂರು: ವಿವಿಧ ಮಂಡಳಿಗಳ ಅಭಿವೃದ್ಧಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅನುದಾನ ಘೋಷಿಸಿದ್ದಾರೆ. ಅಲ್ಪಸಂಖ್ಯಾತರ ಏಳಿಗೆಗಾಗಿ 1,500 ಕೋಟಿ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ಮತ್ತು ಒಕ್ಕಲಿಗ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಹೊಸ ನಿಗಮ ಸ್ಥಾಪಸಿ 500 ಕೋಟಿ ಮೀಸಲಿರಿದ್ದಾರೆ.

    ಬಡ, ಹಿಂದುಳಿದ ಮತ್ತು ಶೋಷಿತ ಸಮುದಾಯಗಳ ಅಭ್ಯುದಯಕ್ಕೆ ಸರ್ಕಾರದ ಒತ್ತು. ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ಆದಿಜಾಂಬವ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ, ಡಿ.ದೇವರಾಜ ಅರುಸು ಹಿಂದುಳಿದ ಅಭಿವೃದ್ಧಿ ನಿಗಮ, ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ, ಉಪ್ಪಾರ, ಆರ್ಯವೈಶ್ಯ, ಮರಾಠಾ, ಅಂಬಿಗರ ಚೌಡಯ್ಯ, ಕಾಡುಗೊಲ್ಲರ, ಸವಿತಾ ಅಭಿವೃದ್ಧಿ ನಿಗಮಗಳಿಗೆ ಪ್ರಸಕ್ತ ಸಾಲಿನಲ್ಲಿ 500 ಕೋಟಿ ಮೀಸಲು.

    ವೀರಶೈವ ಲಿಂಗಾಯತ ಸಮಾಜದ ಸಮಗ್ರ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ.ಗಳ ಅನುದಾನ. ಈಗಾಗಲೇ 100 ಕೋಟಿ ಬಿಡುಗಡೆಗೊಳಿಸಲಾಗಿದೆ. ಒಕ್ಕಲಿಗ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಹೊಸ ನಿಗಮ ಸ್ಥಾಪನೆ. ನಿಗಮ ಚಟುವಟಿಕೆಗಳಿಗೆ 500 ಕೋಟಿ ವೆಚ್ಚ ಮಾಡಲು ಯೋಜಿಸಲಾಗಿದೆ. ಅಲ್ಪಸಂಖ್ಯಾತರ ಏಳಿಗೆಗಾಗಿ 1,500 ಕೋಟಿ ಮೀಸಲು

    ಕ್ರಿಶ್ಚಿಯನ್ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಚರ್ಚ್ ಗಳ ದುರಸ್ತಿ, ನವೀಕರಣ, ಸಮುದಾಯದ ಭವನ ಕಟ್ಟಡ ನಿರ್ಮಾಣ, ಆನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ನೆರವು ಮುಂತಾದ ಕಾರ್ಯಕ್ರಮಳಿಗೆ 200 ಕೋಟಿ ಮೀಸಲು

    2020-21ನೇ ಸಾಲಿನಲ್ಲಿ 400 ಸರ್ಕಾರಿ ಉರ್ದು ಶಾಲೆಗಳಲ್ಲಿ ಉರ್ದು ಮಾಧ್ಯಮಗಳೊಂದಿಗೆ ಆಂಗ್ಲ ಮಾಧ್ಯಮ ಆರಂಭಿಸಲು ಸರ್ಕಾರದಿಂದ ಆದೇಶ ಹೊರಡಿಸಲಾಗುವುದು.

    ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದ ಮೊರಾರ್ಜಿ ದೇಸಾಯಿ ವಸತಿ ಶಾಲೆ/ಮಾದರಿ ಶಾಲೆ/ಕಾಲೇಜುಗಳಲ್ಲಿ ತಂತ್ರಜ್ಞಾನ ಆಧಾರಿತ ಕಲಿಕಾ ಕಾರ್ಯಕ್ರಮ ಅನುಷ್ಠಾನಗೊಳಿಸಿ, ಸದರಿ ಶಾಲಾ/ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಡಿಜಿಟಲ್ ತಂತ್ರಜ್ಞಾನದ ಮೂಲಕ ಎಲ್ಲ ವಿಷಯಗಳಲ್ಲಿ ಬೋಧನಾ ಮತ್ತು ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು.

    ಶ್ರವಣಬೆಳಗೊಳ ಸೇರಿದಂತೆ ಮತ್ತಿತ್ತರ ಜೈನ ಪುಣ್ಯ ಕ್ಷೇತ್ರಗಳಲ್ಲಿ ವಸತಿ ಗೃಹ, ಪಾದಚಾರಿ ರಸ್ತೆಗಳು ಮತ್ತು ಇತರೆ ಮೂಲಭೂತ ಸೌಕರ್ಯಗಳಿಗಾಗಿ 50 ಕೋಟಿ ಮೀಸಲು. ಡಾ.ಬಿ.ಆರ್.ಅಂಬೇಡ್ಕರ್ ಭೇಟಿ ನೀಡಿದ್ದ ಹಾಸನದ ಎ.ಕೆ.ಬೋರ್ಡಿಂಗ್ ಹೋಮ್‍ಗೆ ಸ್ಥಳದಲ್ಲಿ ಸ್ಮಾರಕ ನಿರ್ಮಾಣಕ್ಕೆ ಒಂದು ಕೋಟಿ ರೂಪಾಯಿ ನೀಡಲಾಗಿದೆ.

    ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಕೊಲ್ಹಾಪುರಿ ಪಾದರಕ್ಷೆಗಳ ಕ್ಲಸ್ಟರ್ ಮತ್ತು ಚಿತ್ರದುರ್ಗ ನಗರದಲ್ಲಿ ಕೇಂದ್ರ ಪಾದರಕ್ಷಾ ತರಬೇತಿ ಸಂಸ್ಥೆಯ ವಿಸ್ತರಣಾ ಕೇಂದ್ರ ಪ್ರಾರಂಗಣ ಪರಿಶಿಷ್ಟ ಪಂಗಡದ ಆಶ್ರಮ ಶಾಲೆಗಳನ್ನು ವಾಲ್ಮೀಕಿ ಆಶ್ರಮ ಶಾಲೆ ಎಂದು ಮರು ನಾಮಕಾರಣ ಮಾಡಲಾಗುವುದು.

  • ಕೊರೊನಾ ಇದ್ದರೂ ಅಬಕಾರಿ ಇಲಾಖೆಯ ಟಾರ್ಗೆಟ್‌ ರೀಚ್‌!

    ಕೊರೊನಾ ಇದ್ದರೂ ಅಬಕಾರಿ ಇಲಾಖೆಯ ಟಾರ್ಗೆಟ್‌ ರೀಚ್‌!

    ಬೆಂಗಳೂರು: ಕೋವಿಡ್‌ 19 ನಿಂದ ಹಲವು ಸಮಸ್ಯೆ ಸೃಷ್ಟಿಯಾಗಿ ಆದಾಯಕ್ಕೆ ಸಮಸ್ಯೆ ಆಗಿದ್ದರೂ ಮದ್ಯ ಸರ್ಕಾರದ ಕೈ ಹಿಡಿದಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ನಿರೀಕ್ಷಿತ ಗುರಿಯನ್ನು ಸಾಧಿಸುವ ವಿಶ್ವಾಸವನ್ನು ಹೊಂದಿದೆ.

    ಹೌದು. 2020-21ರ ಸಾಲಿನಲ್ಲಿ ಅಬಕಾರಿ ಇಲಾಖೆಗೆ 22,700 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆಯ ಗುರಿಯನ್ನು ನಿಗದಿ ಪಡಿಸಲಾಗಿತ್ತು. ಈ ಪೈಕಿ ಫೆಬ್ರವರಿ ಅಂತ್ಯಕ್ಕೆ 20,900 ಕೋಟಿ ರಾಜಸ್ವ ಸಂಗ್ರಹವಾಗಿದ್ದು, ನಿಗದಿತ ಗುರಿಯನ್ನು ಸಾಧಿಸಬಹುದು ಎಂಬ ನಿರೀಕ್ಷೆಯನ್ನು ನಾವು ಹೊಂದಿದ್ದೇವೆ ಎಂದು ಯಡಿಯರೂಪ್ಪ ತಮ್ಮ ಬಜೆಟ್‌ ಭಾಷಣದಲ್ಲಿ ಹೇಳಿದ್ದಾರೆ.

    2021-22ನೇ ಹಣಕಾಸು ವರ್ಷದಲ್ಲಿ ಅಬಕಾರಿ ಇಲಾಖೆಗೆ 24,580 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿ ಪಡಿಸಲಾಗಿದೆ.

  • ಕೊರೊನಾ ಸಂಕಷ್ಟದ ಮಧ್ಯೆ ನಾಳೆ ರಾಜ್ಯ ಬಜೆಟ್ – ಸಿಎಂ ಬಿಎಸ್‍ವೈ ಮೇಲೆ ನೂರೆಂಟು ನಿರೀಕ್ಷೆ

    ಕೊರೊನಾ ಸಂಕಷ್ಟದ ಮಧ್ಯೆ ನಾಳೆ ರಾಜ್ಯ ಬಜೆಟ್ – ಸಿಎಂ ಬಿಎಸ್‍ವೈ ಮೇಲೆ ನೂರೆಂಟು ನಿರೀಕ್ಷೆ

    ಬೆಂಗಳೂರು: ಕೊರೊನಾ ಹಾವಳಿ, ಲಾಕ್‍ಡೌನ್ ಸಂಕಷ್ಟದ ಮಧ್ಯೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೋಮವಾರ ಬಜೆಟ್ ಮಂಡಿಸುತ್ತಿದ್ದಾರೆ. ನಾಳೆ ಮಧ್ಯಾಹ್ನ 12 ಗಂಟೆ 5 ನಿಮಿಷಕ್ಕೆ ತಮ್ಮ 8ನೇ ಬಾರಿಯ ಬಜೆಟ್ ಮಂಡಿಸ್ತಿದ್ದು, ರಾಜ್ಯದ ಖಜಾನೆ ಭರ್ತಿಗೆ ಹಲವು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುವ ಸಾಧ್ಯತೆ ಇದೆ.

    ಈಗಾಗಲೇ ಹಿಂದಿನ ಸರ್ಕಾರಗಳ ಯೋಜನೆಗಳು ಮುಗಿದೋಗಿವೆ. ಈಗ ನಮ್ಮ ಸರ್ಕಾರದ ಯೋಜನೆಗಳು ಅಂತ ಮೊನ್ನೆ ಹೇಳಿಕೆ ಕೊಟ್ಟಿರೋದು ಸಾವಿರಾರು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಹಾಗಾಗಿ ಹಣಕಾಸಿನ ಕೊರತೆ, ಆರ್ಥಿಕ ಸವಾಲುಗಳ ಮಧ್ಯೆ ಕೃಷಿ, ಕೈಗಾರಿಕೆ, ಅಬಕಾರಿ, ಆಸ್ತಿ ನೊಂದಣಿ, ಸಾರಿಗೆ ಕ್ಷೇತ್ರಗಳಿಗೆ ನಿರೀಕ್ಷಿತ ಅನುದಾನ ಸಿಗಲಿದ್ಯಾ? ಜನಪ್ರಿಯ ಯೋಜನೆಗನ್ನು ಘೋಷಿಸ್ತಾರಾ ಅನ್ನೋದು ಕುತೂಹಲವಾಗಿದೆ.

    ಬಿಎಸ್‍ವೈ ಮುಂದಿರುವ ಸವಾಲುಗಳು: ಕೊರೊನಾ ವರ್ಷವಾದ ಹಿನ್ನೆಲೆ ಖಜಾನೆಗೆ ಹಣಕಾಸಿನ ಕೊರತೆ ಇದೆ ಎನ್ನಲಾಗ್ತಿದೆ. ಈ ಬಾರಿಯ ಬಜೆಟ್‍ಗೆ ಹಿಂದಿನ ಬಜೆಟ್‍ನಲ್ಲಿ ಉಳಿದ ಹಣವೇ ಆಸರೆ ಆಗಬಹುದು. ಕಳೆದ ಬಾರಿ 2 ಲಕ್ಷದ 37 ಸಾವಿರ ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಲಾಗಿತ್ತು. ಕೊರೊನಾ ಹೊಡೆತ ಹಿನ್ನೆಲೆ ಜನಪ್ರಿಯ ಯೋಜನೆಗಳಿಗೆ ಕೊಕ್ ನೀಡುವ ಸಾಧ್ಯತೆಗಳಿವೆ.

    ಬಿಎಸ್‍ವೈ ಬಜೆಟ್ ನಿರೀಕ್ಷೆಗಳು:
    * ಪೆಟ್ರೋಲ್, ಡಿಸೇಲ್ ಮೇಲೆ ತೆರಿಗೆ ವಿಧಿಸೋದು ಡೌಟ್
    * ರೈತರ ಸಾಲದ ಪ್ರಮಾಣ ಹೆಚ್ಚಳ ಸಾಧ್ಯತೆ.
    * ಕೃಷಿ ಮಾರುಕಟ್ಟೆಗೆ ಹೊಸ ಯೋಜನೆ ಘೋಷಣೆ ಸಾಧ್ಯತೆ
    * ಕೃಷಿ ಯಾಂತ್ರೀಕರಣಕ್ಕೆ ಹೆಚ್ಚಿನ ಒತ್ತು ಸಾಧ್ಯತೆ.
    * ಬೆಲೆ ಸ್ಥಿರೀಕರಣ ಸಂಬಂಧ 5 ಸಾವಿರ ಕೋಟಿ ರೂ. ಆವರ್ತ ನಿಧಿ ಘೋಷಣೆ ನಿರೀಕ್ಷೆ.
    * ಮಹಿಳಾ ಸಬಲೀಕರಣಕ್ಕೆ ಆದ್ಯತೆ, ಯೋಜನೆ ಜಾರಿ ಸಾಧ್ಯತೆ (ಸೋಮವಾರ ಅಂತಾರಾಷ್ಟ್ರೀಯ ಮಹಿಳಾ ದಿನ, ಮಹಿಳಾ ಸ್ವಸಹಾಯ ಗುಂಪುಗಳಿಗೆ ಮತ್ತಷ್ಟು ಆದ್ಯತೆ)
    * ಅಬಕಾರಿ ತೆರಿಗೆ ಕೊಂಚ ಹೆಚ್ಚಳ ಮಾಡೋ ಸಾಧ್ಯತೆ.
    * ಆಸ್ತಿ ನೋಂದಣಿ ಶುಲ್ಕ ಹೆಚ್ಚಳ ಸಾಧ್ಯತೆ.

    * ಪ್ರತಿ ತಾಲೂಕಲ್ಲಿ 2 ಗೋಶಾಲೆ ಆರಂಭಕ್ಕೆ ಆರ್ಥಿಕ ನೆರವು.
    * ಒತ್ತುವರಿಯಾದ ಗೋಮಾಳ ಮರು ಸ್ವಾಧೀನಕ್ಕೆ ಪ್ರತ್ಯೇಕ ನೀತಿ ಸಾಧ್ಯತೆ
    * ಸಾರಿಗೆ ಸಂಸ್ಥೆಗಳ ಆರ್ಥಿಕ ಪುನಶ್ಚೇತನಕ್ಕಾಗಿ ಪರ್ಯಾಯ ಯೋಜನೆ.
    * ಬೃಹತ್ ನೀರಾವರಿ ಯೋಜನೆಗೆ ಆದ್ಯತೆ ನಿರೀಕ್ಷೆ.
    * ನೀರಾವರಿ ಯೋಜನೆಯಡಿ ಹಳ್ಳಿಗಳಲ್ಲಿ ಚೆಕ್ (ಚಿಕ್ಕ) ಡ್ಯಾಮ್ ನಿರ್ಮಾಣಕ್ಕೆ ಒತ್ತು.
    * ಕೆಲವು ನೂತನ ತಾಲೂಕುಗಳ ಘೋಷಣೆ ಸಾಧ್ಯತೆ.

     

    * ಪ್ರತಿ ತಾಲೂಕಿಗೆ ಹೈಟೆಕ್ ಪ್ರಾಥಮಿಕ ಆರೋಗ್ಯ ಕೇಂದ್ರ ಘೋಷಣೆ ಸಾಧ್ಯತೆ
    * ರಾಜ್ಯ, ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಹೈಟೆಕ್ ಆರೋಗ್ಯ ಕೇಂದ್ರ.
    * ಪ್ರತಿ ತಾಲೂಕಿಕೊಂದು ಸುಸಜ್ಜಿತ ಮಾದರಿ ಸರ್ಕಾರಿ ಶಾಲೆಗಳ ಪ್ರಾರಂಭ
    * ಉನ್ನತ ಶಿಕ್ಷಣ ಇಲಾಖೆಯ ಕಾಲೇಜುಗಳಲ್ಲಿ ಹೈಟೆಕ್ ತರಗತಿಗೆ ಪ್ರಾರಂಭಕ್ಕೆ ಅನುದಾನ ನಿರೀಕ್ಷೆ

  • ಮಾರ್ಚ್ ಒಳಗಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು: ಸಿಎಂ ಬಿಎಸ್‍ವೈ

    ಮಾರ್ಚ್ ಒಳಗಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು: ಸಿಎಂ ಬಿಎಸ್‍ವೈ

    ಶಿವಮೊಗ್ಗ: ಈ ಬಾರಿಯ ಹಣಕಾಸು ಸಾಲಿನಲ್ಲಿ ಅನುಮೋದನೆಗೊಂಡಿರುವ ಎಲ್ಲಾ ಕಾಮಗಾರಿಗಳನ್ನು ತ್ವರಿತವಾಗಿ ಹಾಗೂ ಗುಣಮಟ್ಟದಲ್ಲಿ ಯಾವುದೇ ರಾಜಿಯಾಗದೇ ಮಾರ್ಚ್ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಶಿಕಾರಿಪುರ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸಿಎಂ ಬಿಎಸ್‍ವೈ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಲೋಕೋಪಯೋಗಿ ಇಲಾಖೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡದೆ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದರು.

    ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳನ್ನು ಹೆಚ್ಚು ಹೆಚ್ಚು ಬೆಳೆಯಲು ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಪ್ರತಿ ವರ್ಷ ತೋಟಗಾರಿಕಾ ಬೆಳೆಗಳ ಕ್ಷೇತ್ರ ಹೆಚ್ಚಳವಾಗಬೇಕು. ರೈತರು ಮಿಶ್ರ ಬೆಳೆ ಬೆಳೆಯುವುದರಿಂದ ಹೆಚ್ಚಿನ ಆರ್ಥಿಕ ಲಾಭ ಪಡೆಯಲು ಸಾಧ್ಯವಿದೆ. ಒಂದೆರಡು ಎಕರೆ ಜಮೀನಿನಲ್ಲಿ ಮಾವು, ಬಾಳೆ, ಶುಂಠಿ, ತೆಂಗು ಮೊದಲಾದ ಮಿಶ್ರ ಬೆಳೆಗಳನ್ನು ಬೆಳೆದು ಲಕ್ಷಾಂತರ ರೂ. ಲಾಭ ಪಡೆಯಲು ಸಾಧ್ಯವಿದೆ ಎಂದರು.

    ಹನಿ ನೀರಾವರಿಗೆ ಹೆಚ್ಚಿನ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಹನಿ ನೀರಾವರಿ ಸೌಲಭ್ಯಕ್ಕಾಗಿ ಬಾಕಿ ಇರುವ ಅರ್ಜಿಗಳ ಮಾಹಿತಿ ಒದಗಿಸಬೇಕು. ಈಗಾಗಲೇ ಹನಿ ನೀರಾವರಿ ಅಳವಡಿಸಿರುವ ರೈತರಿಗೆ ಸಬ್ಸಿಡಿ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

    ಈ ಬಾರಿ ಉತ್ತಮ ಮಳೆಯಾಗಿರುವ ಕಾರಣ ಎಲ್ಲಾ ಕೆರೆ ಕಟ್ಟೆಗಳು ತುಂಬಿವೆ. ಆದ್ದರಿಂದ ಕೆರೆ ಹೂಳು ತೆಗೆಯುವ ಕಾಮಗಾರಿಗಳನ್ನು ಸದ್ಯಕ್ಕೆ ಕೈಗೆತ್ತಿಕೊಳ್ಳಬಾರದು. ಹೂಳೆತ್ತುವ ಕಾಮಗಾರಿಗಳಿಗೆ ಈಗಾಗಲೇ ಟೆಂಡರ್ ಆಗಿದ್ದರೂ, ನೀರು ಖಾಲಿಯಾದರೆ ಮಾತ್ರ ಕಾಮಗಾರಿ ಆರಂಭಿಸಿ. ಅನುದಾನ ದುರುಪಯೋಗಕ್ಕೆ ಯಾವುದೇ ಇಲಾಖೆಗಳು ಆಸ್ಪದ ನೀಡಬಾರದು ಎಂದು ಹೇಳಿದರು.

    ಜಲಜೀವನ ಮಿಷನ್ ಯೋಜನೆಯಡಿ ಮನೆ ಮನೆಗೆ ಗಂಗೆ ಯೋಜನೆಯಲ್ಲಿ ಪ್ರತಿ ಫಲಾನುಭವಿ ನೀಡಬೇಕಾಗಿರುವ ಕಾಮಗಾರಿಯ ಶೇ.10 ರಷ್ಟು ಹಣವನ್ನು ಸರ್ಕಾರದಿಂದ ನೇರವಾಗಿ ಪಾವತಿಸುವ ಕುರಿತು ಈ ಬಾರಿಯ ಬಜೆಟ್ ನಲ್ಲಿ ಕ್ರಮ ಕೈಗೊಳ್ಳಲಾಗುವುದು. ಜಲಜೀವನ್ ಮಿಷನ್ ಅಡಿ ಮನೆ ಮನೆಗೆ ನೀರು ಪೂರೈಕೆ ಮಾಡುವ ಯೋಜನೆಯನ್ನು ತ್ವರಿತವಾಗಿ ಅನುಷ್ಟಾನಗೊಳಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

    ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ತಾ.ಪಂ ಅಧ್ಯಕ್ಷ ಸುರೇಶ್ ನಾಯ್ಕ್, ಜಿಲ್ಲಾಧಿಕಾರಿ ಶಿವಕುಮಾರ್, ಸಿಇಒ ವೈಶಾಲಿ, ಎಸ್ಪಿ ಶಾಂತರಾಜು ಉಪಸ್ಥಿತರಿದ್ದರು.