Tag: Karnataka budget 2019

  • ಮತ್ತಷ್ಟು ಏರಿಕೆಯಾಗಲಿದೆ ಮದ್ಯದ ಬೆಲೆ!

    ಮತ್ತಷ್ಟು ಏರಿಕೆಯಾಗಲಿದೆ ಮದ್ಯದ ಬೆಲೆ!

    ಬೆಂಗಳೂರು: ಮದ್ಯದ ಬೆಲೆ ಮತ್ತಷ್ಟು ಹೆಚ್ಚಳವಾಗಲಿದೆ. ಬಿಯರ್, ಡ್ರಾಟ್ ಬಿಯರ್, ಮೈಕ್ರೊ ಬ್ರಿವರಿಯಲ್ಲಿ ತಯಾರಾಗುವ ಬಿಯರ್ ಹಾಗೂ ಲೋ ಆಲ್ಕೊಹಾಲಿಕ್ ಬಿವೆರೇಜಸ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಹೆಚ್ಚಳ ಮಾಡಲಾಗುವುದು ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ಕುಮಾರಸ್ವಾಮಿ ಕಳೆದ ಬಾರಿ ಮಂಡಿಸಿಸಿದ್ದ ಬಜೆಟ್ ನಲ್ಲಿ 19,75 ಕೋಟಿ ರೂ.ನಷ್ಟು ಗುರಿ ನೀಡಲಾಗಿತ್ತು. 2019-20ನೇ ಆರ್ಥಿಕ ವರ್ಷಕ್ಕೆ 20,950 ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿಯನ್ನು ನೀಡಲಾಗಿದೆ. ಫೆ.14ರ ವೇಳೆಗೆ 17 ಸಾವಿರ ಕೋಟಿ ರೂ. ಸಂಗ್ರಹವಾಗಿದೆ.

    ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)
    * ಸರಕು ಮತ್ತು ಸೇವಾ ತೆರಿಗೆಯಡಿ ರಾಜಸ್ವ ಅಂತರ ಸರಿದೂಗದಿದ್ದರೆ, ರಾಜ್ಯಗಳಿಗೆ ಪರಿಹಾರ ಕಾಯ್ದೆಯಲ್ಲಿ ನಿಗದಿಪಡಿಸಿದಂತೆ, ಸಾಕಷ್ಟು ಪರಿಹಾರವನ್ನು 2025ನೇ ಸಾಲಿನವರೆಗೂ ನೀಡಲು ಕೇಂದ್ರಕ್ಕೆ ಒತ್ತಾಯ.
    * ವಾಣಿಜ್ಯ ತೆರಿಗೆ ಇಲಾಖೆಗೆ 76046 ಕೋಟಿ ರೂ. ರಾಜಸ್ವ ಸಂಗ್ರಹಣೆಯ ಗುರಿ ನಿಗದಿ.
    * ಜಿಎಸ್‍ಟಿ ಜಾರಿಗೆ ಹಿಂದಿನ ತೆರಿಗೆ ಬಾಕಿ ಕಡಿತಗೊಳಿಸಲು ಸಮಗ್ರ ಕರ ಸಮಾಧಾನ ಯೋಜನೆ ಜಾರಿ.

    ನೋಂದಣಿ ಮತ್ತು ಮುದ್ರಾಂಕ
    * 2019-20ನೇ ಸಾಲಿಗೆ 11,828 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿ ನಿಗದಿ.

    ಸಾರಿಗೆ
    * 2019-20ನೇ ಸಾಲಿಗೆ 7,100 ಕೋಟಿ ರೂ.ಗಳ ಸಂಗ್ರಹಣೆ ಗುರಿ ನಿಗದಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಮಾರಣ್ಣನ ಲೆಕ್ಕ: ರೇಷ್ಮೆ, ಪಶು ಸಂಗೋಪನೆ, ಮೀನುಗಾರಿಕೆಗೆ ಸಿಕ್ಕಿದ್ದೇನು?

    ಕುಮಾರಣ್ಣನ ಲೆಕ್ಕ: ರೇಷ್ಮೆ, ಪಶು ಸಂಗೋಪನೆ, ಮೀನುಗಾರಿಕೆಗೆ ಸಿಕ್ಕಿದ್ದೇನು?

    ಬೆಂಗಳೂರು:ಹಲವು ಗದ್ದಲಗಳ ನಡುವೆಯೂ ದೋಸ್ತಿ ಸರ್ಕಾರದ ಸಿಎಂ ಹೆಚ್.ಡಿ.ಕುಮಾರಸ್ವಾಮಿ 2019-20ರ ಸಾಲಿನ ಅಯವ್ಯಯವನ್ನು ಮಂಡಿಸಿದ್ದಾರೆ.

    ರೇಷ್ಮೆ ವಲಯದ ಸುಧಾರಣೆಗೆ ರೂಪಿಸಲಾದ ಯೋಜನೆಗಳು:
    * ಪ್ರಗತಿಪರ ರೇಷ್ಮೆ ಕೃಷಿಕರ ಮೂಲಕ ರೇಷ್ಮೆ ವಿಸ್ತರಣಾ ಕಾರ್ಯಕ್ರಮಕ್ಕೆ 2 ಕೋಟಿ ರೂ. ಅನುದಾನ.
    * ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಬಲಪಡಿಸಲು 10 ಕೋಟಿ ರೂ. ಅನುದಾನ.
    * ಸಂತೇಮರಹಳ್ಳಿ ರೇಷ್ಮೆ ಕಾರ್ಖಾನೆ ಆಧುನೀಕರಣ ಹಾಗೂ ಯುವಕರಿಗೆ ತರಬೇತಿ ನೀಡಲು 2 ಕೋಟಿ ರೂ. ಅನುದಾನ.
    * ಚಾಮರಾಜನಗರ ರೇಷ್ಮೆ ಕಾರ್ಖಾನೆಯ ಪುನಶ್ಚೇತನಕ್ಕೆ 5 ಕೋಟಿ ರೂ. ಅನುದಾನ.

    * ರಾಮನಗರ ಮತ್ತು ಹಾವೇರಿ ರೇಷ್ಮೆ ಮಾರುಕಟ್ಟೆ ಆಧುನೀಕರಣ ಮತ್ತು ಬಲವರ್ಧನೆಗೆ 10 ಕೋಟಿ ರೂ. ಅನುದಾನ.
    * ಚನ್ನಪಟ್ಟಣದ ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೋರೇಷನ್‍ನ ಫಿಲೇಚರ್ ಕಾರ್ಖಾನೆ ಆವರಣದ ಎಂಪೋರಿಯಂನಲ್ಲಿ ಕರ್ನಾಟಕದ ರೇಷ್ಮೆ ವಲಯದ ಸಾಧನೆಗಳ ಪ್ರದರ್ಶನ ಹಾಗೂ ರೇಷ್ಮೆ ಉತ್ಪನ್ನಗಳ ಮಾರಾಟಕ್ಕೆ ಉತ್ತೇಜನ ನೀಡಲು 10 ಕೋಟಿ ರೂ. ಅನುದಾನ.

    ಪಶುಸಂಗೋಪನೆ:
    * ರಾಜ್ಯದ 15 ಜಿಲ್ಲೆಗಳಲ್ಲಿ ಸುಸಜ್ಜಿತ ಪಶುಚಿಕಿತ್ಸಾ ವಾಹನ ಒದಗಿಸಲು 2 ಕೋಟಿ ರೂ. ಅನುದಾನ.
    * 5 ಕೋಟಿ ರೂ. ವೆಚ್ಚದಲ್ಲಿ 10,000 ಬಡ ನಿರುದ್ಯೋಗಿ ಯುವಕ-ಯುವತಿಯರಿಗೆ ‘ನಾಟಿ ಕೋಳಿ ಸಾಕಾಣಿಕೆ’ಗೆ ಪ್ರೋತ್ಸಾಹ.
    * ದೇಶೀಯ ಕುರಿ ತಳಿಗಳಲ್ಲಿ ಅವಳಿ-ಜವಳಿ ಸಂತಾನೋತ್ಪತ್ತಿಯನ್ನು ಅಭಿವೃದ್ಧಿಗೊಳಿಸುವ ಯೋಜನೆಗೆ ಪ್ರಯೋಗಾಲಯ ಸ್ಥಾಪನೆಗೆ 2 ಕೋಟಿ ರೂ. ಅನುದಾನ. ರಾಜ್ಯದಲ್ಲಿ ಮಂಗನ ಕಾಯಿಲೆಯ ಲಸಿಕೆ ತಯಾರಿಕೆಗೆ ಬೆಂಬಲ ನೀಡಲು 5 ಕೋಟಿ ರೂ. ಅನುದಾನ.
    * ರಾಜ್ಯದಲ್ಲಿ ಹಾಲು ಉತ್ಪಾದಕರ ಪ್ರೋತ್ಸಾಹ ಧನ 5 ರೂ. ನಿಂದ 6 ರೂ. ಗಳಿಗೆ ಹೆಚ್ಚಳ
    * 1459 ಕೋಟಿ ರೂ. ವೆಚ್ಚ. ಕ್ಷೀರಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ 638 ಕೋಟಿ ರೂ. ಹಾಗೂ ಅಂಗನವಾಡಿ ಮಕ್ಕಳಿಗೆ 405 ಕೋಟಿ ರೂ. ವೆZ್ಚÀ.
    * ಹಾಲು ಉತ್ಪಾದಕರ ಕ್ಷೇಮಾಭಿವೃದ್ಧಿಗೆ ಒಟ್ಟು 2502 ಕೋಟಿ ರೂ. ವಿನಿಯೋಗ.

    ಮೀನುಗಾರಿಕೆ:
    * ಮೀನುಗಾರಿಕೆ ದೋಣಿಗಳಿಗೆ ಇಸ್ರೋ ಅಧಿಕೃತಗೊಳಿಸಿರುವ ಡಿ.ಎ.ಟಿ. ಉಪಕರಣ ಅಳವಡಿಸಿಕೊಳ್ಳಲು ಶೇ.50 ರಷ್ಟು ಸಹಾಯಧನ 3 ಕೋಟಿ ರೂ. ಅನುದಾನ.
    * ಒಳನಾಡು ಮತ್ತು ಹಿನ್ನೀರು ಜಲಸಂಪನ್ಮೂಲದಲ್ಲಿ ಸಿಗಡಿ ಮತ್ತು ಮೀನು ಕೃಷಿಗೆ ಪ್ರೋತ್ಸಾಹ. 400 ಘಟಕಗಳಿಗೆ ಸಹಾಯಧನ ನೀಡಲು 2 ಕೋಟಿ ರೂ. ಅನುದಾನ.
    * ಒಳನಾಡಿನ ಕೆರೆಗಳಲ್ಲಿನ ಮೀನುಗಾರಿಕೆ ಗುತ್ತಿಗೆಗಳನ್ನು ಸಂಘ-ಸಂಸ್ಥೆಗಳ ಬದಲು ಸ್ಥಳೀಯ ಮೀನುಗಾರರಿಗೆ ಮೀಸಲಿಡುವ ಕುರಿತು ಪರಿಶೀಲನೆ.

    * ಮತ್ಸ್ಯಾಶ್ರಯ ಯೋಜನೆ ಮುಂದುವರಿಕೆ; ಪ್ರಗತಿಯಲ್ಲಿರುವ 2500 ಮನೆಗಳನ್ನು ಪೂರ್ಣಗೊಳಿಸಲು ಕ್ರಮ.
    * ಉಡುಪಿ ಜಿಲ್ಲೆಯ ಮಲ್ಪೆ ಕಡಲು ತೀರದ ಮೀನುಗಾರಿಕೆ ಚಟುವಟಿಕೆಗಳ ಅಭಿವೃದ್ಧಿಗೆ ಜೆಟ್ಟಿ ನಿರ್ಮಾಣ, ತ್ಯಾಜ್ಯ ನಿರ್ವಹಣಾ ಘಟಕ ಹಾಗೂ ಇತರೆ ನೈರ್ಮಲ್ಯ ಸೌಲಭ್ಯಗಳನ್ನು ಅಭಿವೃದ್ಧಿಗೆ 15 ಕೋಟಿ ರೂ. ಅನುದಾನ.
    * ರಾಜ್ಯದಲ್ಲಿ ಡೀಸಲ್ ಮತ್ತು ಸೀಮೆಎಣ್ಣೆ ಪಾಸ್‍ಬುಕ್ ಪಡೆದಿರುವ ದೋಣಿಗಳಿಗೆ ಡೀಸಲ್ ಮತ್ತು ಸೀಮೆಎಣ್ಣೆ ಸಬ್ಸಿಡಿ ನೀಡಲು 148.5 ಕೋಟಿ ರೂ. ಅನುದಾನ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಿಕ್ಕಿದ್ದು ಏನು?

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಿಕ್ಕಿದ್ದು ಏನು?

    ಬೆಂಗಳೂರು: ಮುಖ್ಯಮಂತ್ರಿಗಳ ಮಾತೃಶ್ರೀ ಯೋಜನೆಯ ಸಹಾಯಧನ ಮಾಸಿಕ 1 ಸಾವಿರ ರೂ. ಗಳಿಂದ 2 ಸಾವಿರ ರೂ. ಗಳಿಗೆ ಹೆಚ್ಚಳ ಮಾಡಲಾಗುವುದು. 2019ರ ನವೆಂಬರ್ 1ರಿಂದ ಜಾರಿಯಾಗಲಿರುವ ಈ ಯೋಜನೆಗೆ 470 ಕೋಟಿ ರೂ. ಅನುದಾನ ನೀಡುವುದಾಗಿ ಸಿಎಂ ಹೇಳಿದ್ದಾರೆ.

    ಸಿಕ್ಕಿದ್ದು ಏನು?
    ಅಂಗನವಾಡಿ ಕಾರ್ಯಕರ್ತೆಯರಿಗೆ 500 ರೂ. ಹಾಗೂ ಸಹಾಯಕಿಯರಿಗೆ 250 ರೂ. ಗೌರವಧನ 2019ರ ನವೆಂಬರ್ 1 ರಿಂದ ಹೆಚ್ಚಳ. 60 ಕೋಟಿ ರೂ. ಹೆಚ್ಚುವರಿ ಅನುದಾನ.

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಲ್ಲ ಮಟ್ಟದ ಕರ್ಮಚಾರಿಗಳಿಗೆ ತರಬೇತಿ ನೀಡಲು ಬಳ್ಳಾರಿಯಲ್ಲಿ ರಾಜ್ಯಮಟ್ಟದ ತರಬೇತಿ ಕೇಂದ್ರ ಹಾಗೂ ಚಿತ್ರದುರ್ಗ, ಮೈಸೂರು, ಬೆಳಗಾವಿ ಮತ್ತು ಕಲಬುರಗಿಯಲ್ಲಿ ವಿಭಾಗ ಮಟ್ಟದ ತರಬೇತಿ ಕೇಂದ್ರ ಪ್ರಾರಂಭಿಸಲು 5 ಕೋಟಿ ರೂ. ಅನುದಾನ.

    ನಗರ ಪ್ರದೇಶಗಳಲ್ಲಿ 100 ಹೊಸ ಅಂಗನವಾಡಿ ಕೇಂದ್ರ ಪ್ರಾರಂಭಿಸಲು ಕ್ರಮ. 1000 ಅಂಗನವಾಡಿ ಕಟ್ಟಡಗಳ ದುರಸ್ತಿ ಕಾಮಗಾರಿಗೆ 10 ಕೋಟಿ ರೂ. ಅನುದಾನ.

    ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೊಸ ಬಾಲಕಿಯರ ಬಾಲಮಂದಿರ ಪ್ರಾರಂಭಿಸಲು ಕ್ರಮ. ರಾಜ್ಯದ 10 ಜಿಲ್ಲೆಗಳ ಮಕ್ಕಳ ವಿಶೇಷ ನ್ಯಾಯಾಲಯಗಳನ್ನು ಮಕ್ಕಳ -ಸ್ನೇಹಿ ನ್ಯಾಯಾಲಯಗಳನ್ನಾಗಿ ಪರಿವರ್ತಿಸಲು ಒಟ್ಟು 3 ಕೋಟಿ ರೂ. ಅನುದಾನ

    ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ. ಇಲಾಖೆ ವತಿಯಿಂದ ಪ್ರಾಸ್ಥೆಟಿಕ್ಸ್ ಮತ್ತು ಆರ್ಥೊಟಿಕ್ಸ್ ಸರ್ಟಿಫಿಕೇಟ್ ಕೋರ್ಸ್‍ಗಳನ್ನು ಪ್ರಾರಂಭಿಸಲು ಕ್ರಮ. ಇಲಾಖೆಯು ಖಾಸಗಿ ಸಹಯೋಗದಿಂಗೆ ನಡೆಸುತ್ತಿರುವ ತರಬೇತಿ ಕೇಂದ್ರಗಳಲ್ಲಿ ಶ್ರವಣ ದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಹಾಗೂ ಬುದ್ಧಿಮಾಂದ್ಯ ಮಕ್ಕಳ ಶಿಕ್ಷಕರ ತರಬೇತಿ ಕಾರ್ಯಕ್ರಮವನ್ನು ಕೈಗೊಳ್ಳಲಾಗುವುದು.

    ರಾಜ್ಯದಲ್ಲಿ ಬೆನ್ನುಹುರಿ ಅಪಘಾತಕ್ಕೆ ಒಳಗಾದವರ, ಹೆಮಿಪ್ಲೆಜಿಯಾ, ಮಲ್ಟಿಪಲ್ ಸ್ಲೆರೋಸಿಸ್, ಹಾಗೂ ಅಮಿಯೋಟ್ರೋಪಿಕ್ ಲ್ಯಾಟರಲ್ ಸ್ಲೆರೋಸಿಸ್ ಖಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಪುನರ್ವಸತಿ ಕೇಂದ್ರ ಪ್ರಾರಂಭಿಸಲು 2 ಕೋಟಿ ರೂ. ಅನುದಾನ.

    2,000 ದೈಹಿಕ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ(ರೆಟ್ರೋಫಿಟೆಡ್) ಉಚಿತವಾಗಿ ನೀಡಲು 15 ಕೋಟಿ ರೂ. ಅನುದಾನ. 1,000 ದಮನಿತ ಮಹಿಳೆಯರಿಗೆ ಉದ್ಯಮಶೀಲತೆ ಮತ್ತು ಕೌಶಲ್ಯ ತರಬೇತಿ ಹಾಗೂ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ನೆರವು ನೀಡಲು 11.5 ಕೋಟಿ ರೂ. ಅನುದಾನ; ರಾಜ್ಯ ಸರ್ಕಾರದ ವಸತಿ ಯೋಜನೆಗಳಲ್ಲಿ ದಮನಿತ ಮಹಿಳೆಯರಿಗೆ ಮೀಸಲಾತಿ ನೀಡಲು ಕ್ರಮ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv