Tag: karnataka budget

  • ನಮ್ಮ ಬಜೆಟ್ ದೇಶಕ್ಕೆ ಮಾದರಿ: ಡಿಕೆಶಿ

    ನಮ್ಮ ಬಜೆಟ್ ದೇಶಕ್ಕೆ ಮಾದರಿ: ಡಿಕೆಶಿ

    -ಹಲಾಲ್‌ ಬಜೆಟ್‌ ಎಂದ ಬಿಜೆಪಿಗೆ ಕೌಂಟರ್‌ 

    ಬೆಂಗಳೂರು: ಈ ಬಾರಿಯ ಬಜೆಟ್ (Karnataka Budget) ದೇಶಕ್ಕೆ ಮಾದರಿ. ನಮ್ಮ ಬಜೆಟ್ ಅನ್ನು ಬೇರೆಬೇರೆ ರಾಜ್ಯಗಳು ಗಮನಿಸುತ್ತಾರೆ. ಇದು ಉತ್ತಮವಾದ ಬಜೆಟ್. ಕರ್ನಾಟಕದ ಜನತೆಗೆ ಅನುಕೂಲ ಆಗಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

    ಬಜೆಟ್ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟನಲ್ ಆಗೇ ಆಗುತ್ತೆ. ಹೊಸ ಮೆಟ್ರೋ ಏನೇ ಮಾಡಿದರೂ ಅದರ ಜೊತೆಗೆ ಎಲಿವೇಟೇಡ್ ಕಾರಿಡಾರ್ ಕೂಡ ನಾವು ಮಾಡುತ್ತೇವೆ. 50% ಕಾರ್ಪೋರೇಷನ್, 50% ಬಿಎಂಆರ್‌ಸಿಎಲ್ ಕೊಡುತ್ತದೆ. ನಾವು ಕಾರಿಡಾರ್ ಮಾಡುತ್ತೇವೆ ಎಂದರು. ಇದನ್ನೂ ಓದಿ: ಭಾರತ ಸುಂಕ ಕಡಿತಗೊಳಿಸಲು ನಿರ್ಧರಿಸಿದೆ: ಟ್ರಂಪ್‌

    ನಾವು ಹೇಳಿದಂತೆ 300 ಕಿಮೀ ರಸ್ತೆ ನಿರ್ಮಾಣ ಮಡುತ್ತೇವೆ. ಕಾಲುವೆ ಪಕ್ಕದಲ್ಲಿ 50 ಅಡಿ ಬಿಟ್ಟು ರಸ್ತೆ ನಿರ್ಮಾಣ ಮಾಡುತ್ತೇವೆ. ಅದರ ಬದಲಾಗಿ ಅವರಿಗೆ ಟಿಡಿಆರ್ ಕೊಟ್ಟು ಅಲ್ಲಿ ರೋಡ್ ಮಾಡುತ್ತೇವೆ. ಹೀಗಾಗಿ 3000 ಕೋಟಿ ವೆಚ್ಚದಲ್ಲಿ 300 ಕಿ.ಮೀ ರಸ್ತೆ ನಿರ್ಮಾಣ ಆಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮಹಿಳೆಯರ ಖಾತೆಗೆ 2,500 ರೂ. – ಇಂದು ಮಹಿಳೆಯರಿಗೆ ದೆಹಲಿ ಸರ್ಕಾರದಿಂದ ಸಿಗುತ್ತಾ ಗುಡ್‌‌ ನ್ಯೂಸ್?

    ಬಿಜೆಪಿ ಹಲಾಲ್ ಬಜೆಟ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಏನು ಬೇಕಾದರೂ ಮಾತಾಡಲಿ. ಪಾಪ ಅವರು ಇನ್ನೇನು ಮಾಡುತ್ತಾರೆ? ಇನ್ನೇನು ಹೇಳೋಕೆ ಸಾಧ್ಯ? ಸತ್ಯನಾ ಮುಚ್ಚಿಡೋಕೆ ಆಗುತ್ತಾ? ಬಿಜೆಪಿಯವರು ಬಜೆಟ್‌ನ ಕಣ್ಣಲ್ಲಿ ಓದಿದ್ದಾರೆ, ಕಿವಿಯಲ್ಲಿ ಕೇಳಿಸಿಕೊಡಿದ್ದಾರೆ. ಬಾಯಲ್ಲಿ ಇನ್ನೇನು ಮಾತಾಡಬಹುದು. ಬಾಯಲ್ಲಿ ಸುಳ್ಳು ಹೇಳಬಹುದು ಅಲ್ವಾ, ಹಾಗಾಗಿ ಅದನ್ನ ಮಾಡುತ್ತಿದ್ದಾರೆ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಬಜೆಟ್‌ನಲ್ಲಿ ಈಡೇರದ ಬೇಡಿಕೆ – ಸರ್ಕಾರದ ವಿರುದ್ಧ ಸಾರಿಗೆ ನೌಕರರು, ಅಂಗನವಾಡಿ ಕಾರ್ಯಕರ್ತೆಯರ ಆಕ್ರೋಶ

    ನೀರಾವರಿಗೆ ಕಳೆದ ಬಾರಿಗಿಂತ ಈ ಬಾರಿ 2,000 ಕೋಟಿ ಅನುದಾನ ಹೆಚ್ಚು ಕೊಟ್ಟಿದ್ದೇವೆ. ಮಧ್ಯದಲ್ಲಿ ಬೇರೆಬೇರೆ ಯೋಜನೆಗಳನ್ನು ಘೋಷಣೆ ಮಾಡುತ್ತೇವೆ. ಬೋರ್ಡ್‌ನಲ್ಲಿ ಅನೇಕ ತೀರ್ಮಾನಗಳನ್ನ ಮಾಡಿದ್ದೇವೆ. ಅದನ್ನು ಸಭೆಯಲ್ಲಿ ಹೇಳುತ್ತೇನೆ ಎಂದರು. ಇದನ್ನೂ ಓದಿ: ಯೂರೋಪ್‌, ಅಮೆರಿಕ, ದುಬೈಗೆ ನಿರಂತರ ಸುತ್ತಾಟ – ನಟಿ ರನ್ಯಾ ಟ್ರಾವೆಲ್‌ ಹಿಸ್ಟರಿ ಬಯಲು

    ಬೆಂಗಳೂರು ವಿವಿಗೆ ಮನಮೋಹನ್ ಸಿಂಗ್ ಹೆಸರು ಇಟ್ಟಿರುವ ವಿಚಾರದ ಕುರಿತು ಮಾತನಾಡಿ, ಅವರು ಯಾವ್ಯಾವುದೋ ಹೆಸರು ಇಡುತ್ತಾರೆ. ಮನಮೋಹನ್ ಸಿಂಗ್ ಹೆಸರು ಇಡಬಾರದ? ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ಗೆ ಫ್ಲೈಓವರ್ ಮಾಡಿದ್ದು ಯಾರು? ಎಲೆಕ್ಟ್ರಾನಿಕ್‌ ಸಿಟಿಗೆ ಫ್ಲೈಓವರ್ ಮಾಡಿದ್ದು ಯಾರು?ನೆಲಮಂಗಲ ಫ್ಲೈಓವರ್ ಮಾಡಿದ್ದು ಯಾರು? ನರೇಗಾ ತಂದಿದ್ದು ಯಾರು? ಬಿಜೆಪಿಯವರು ಏನಾದರೂ ಮಾಡಿದ್ದಾರ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್‌ ಒಳಗೆ ಸಿಬ್ಬಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆ

  • ಬಜೆಟ್‌ನಲ್ಲಿ ಈಡೇರದ ಬೇಡಿಕೆ – ಸರ್ಕಾರದ ವಿರುದ್ಧ ಸಾರಿಗೆ ನೌಕರರು, ಅಂಗನವಾಡಿ ಕಾರ್ಯಕರ್ತೆಯರ ಆಕ್ರೋಶ

    ಬಜೆಟ್‌ನಲ್ಲಿ ಈಡೇರದ ಬೇಡಿಕೆ – ಸರ್ಕಾರದ ವಿರುದ್ಧ ಸಾರಿಗೆ ನೌಕರರು, ಅಂಗನವಾಡಿ ಕಾರ್ಯಕರ್ತೆಯರ ಆಕ್ರೋಶ

    – ಮಾರ್ಚ್ 22ರವರೆಗೆ ಸರ್ಕಾರಕ್ಕೆ ಗಡುವು

    ಬೆಂಗಳೂರು: ಶುಕ್ರವಾರ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಮಂಡಿಸಿದ ರಾಜ್ಯ ಬಜೆಟ್ (Karnataka Budget) ಕೆಲವರಿಗೆ ಸಿಹಿ, ಕೆಲವರಿಗೆ ಕಹಿಯನ್ನುಂಟು ಮಾಡಿದೆ. ಮುಖ್ಯಮಂತ್ರಿಗಳ ಬಜೆಟ್ ಮೇಲೆ ಸಾರಿಗೆ ನೌಕರರು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅವು ಈಡೇರಿಲ್ಲ. ಹೀಗಾಗಿ ಸಾರಿಗೆ ನೌಕರರು ಮತ್ತೆ ಬಸ್ ಬಂದ್ ಮಾಡುವ ಎಚ್ಚರಿಕೆ ಕೊಟ್ಟಿದ್ದಾರೆ.

    ಸರ್ಕಾರ ಹಾಗೂ ಸಾರಿಗೆ ನೌಕರರ ಪರಿಸ್ಥಿತಿ ನಾ ಕೊಡೆ, ನೀ ಬಿಡೇ ಎನ್ನುವಂತಾಗಿದೆ. ಸಾರಿಗೆ ನೌಕರರ ಭರವಸೆಗಳು ಸುಮಾರು ಮೂರು ವರ್ಷಗಳಾದರೂ ಈಡೇರುತ್ತಿಲ್ಲ. ಶಕ್ತಿ ಯೋಜನೆಯ ಎಫೆಕ್ಟ್‌ನಿಂದಾಗಿ ಸಾರಿಗೆ ನೌಕರರ ಕೆಲಸ ಹೆಚ್ಚಾಗುತ್ತಿದೆ. ಆದರೆ ಬೇಡಿಕೆಗಳು ಮಾತ್ರ ಈಡೇರಿಲ್ಲ. ಹೀಗಾಗಿ ಮಾರ್ಚ್ 22ರೊಳಗೆ ಸರ್ಕಾರಿ ನೌಕರರಿಗೆ ನೀಡುತ್ತಿರುವ ವೇತನವನ್ನು ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ ನೌಕರರಿಗೆ ನೀಡಬೇಕು. ಇಲ್ಲವಾದರೆ ಮಾರ್ಚ್ 25ರಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳ ಸಂಘಟನೆಗಳ ಒಕ್ಕೂಟ ಸಭೆ ಮಾಡಿ ಬಂದ್ ದಿನಾಂಕ ಘೋಷಣೆ ಮಾಡುತ್ತೇವೆ ಎಂದು ಸರ್ಕಾರಕ್ಕೆ ಸಾರಿಗೆ ನೌಕರರ ಒಕ್ಕೂಟ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಯೂರೋಪ್‌, ಅಮೆರಿಕ, ದುಬೈಗೆ ನಿರಂತರ ಸುತ್ತಾಟ – ನಟಿ ರನ್ಯಾ ಟ್ರಾವೆಲ್‌ ಹಿಸ್ಟರಿ ಬಯಲು

    ಅಲ್ಲದೇ ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಂತೆ ಸರಿಸಮಾನ ವೇತನ ನೀಡಬೇಕು. 7ನೇ ವೇತನ ಆಯೋಗ ಜಾರಿ ಆಗಬೇಕು. 38 ತಿಂಗಳ ವೇತನ ಹಿಂಬಾಕಿ ನೀಡಬೇಕು. ಕಾರ್ಮಿಕ ಸಂಘಟನೆಗಳ ಚುನಾವಣೆ ಮಾಡಬೇಕು. 2021ರ ವೇಳೆ ಮುಷ್ಕರದಲ್ಲಿ ವಜಾಗೊಂಡ ನೌಕರರ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಪ್ರಮುಖ ಬೇಡಿಕೆಗಳನ್ನು ನೌಕರರು ಇಟ್ಟಿದ್ದಾರೆ. ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್‌ ಒಳಗೆ ಸಿಬ್ಬಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಇತ್ತ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಮತ್ತೆ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ 1 ಸಾವಿರ, ಸಹಾಯಕಿಯರಿಗೆ 750 ರೂ. ಗೌರವಧನ ಹೆಚ್ಚಿಸಲಾಗಿದೆ. ಆದೆರೆ ಇದು ನಮಗೆ ತೃಪ್ತಿ ತಂದಿಲ್ಲ. ಎರಡರಿಂದ ಮೂರು ಸಾವಿರ ಗೌರವಧನ ಹೆಚ್ಚಳಕ್ಕೆ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಆದರೆ 1 ಸಾವಿರ, 750 ರೂಪಾಯಿ ಗೌರವಧನ ಅಷ್ಟೇ ಹೆಚ್ಚಳ ಮಾಡಿರೋದು ಭಾರೀ ನಿರಾಸೆ ಮೂಡಿಸಿದೆ. ಈ ವೇತನದಲ್ಲಿ ಜೀವನ ನಿರ್ವಹಣೆ ಕಷ್ಟ ಆಗುತ್ತದೆ. ನಮ್ಮದೇ ದುಡ್ಡಲ್ಲಿ ಮೊಬೈಲ್ ಖರೀದಿಸಿ, ಇಲಾಖೆಯ ಕೆಲಸ ಮಾಡಬೇಕಾಗುತ್ತದೆ. ಸರ್ಕಾರದ ಅಲ್ಪ ಪ್ರಮಾಣದ ಗೌರವಧನ ಹೆಚ್ಚಳ ನಮಗೆ ತೃಪ್ತಿ ತಂದಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಹೀಗಾಗಿ ಸರ್ಕಾರದ ವಿರುದ್ಧ ಮತ್ತೆ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಇದನ್ನೂ ಓದಿ: ಹಾಸನ| ಪ್ರಿಯಕರನ ಜೊತೆ ಪತ್ನಿ ಪರಾರಿ – ನದಿಗೆ ಹಾರಿ ಪತಿ ಆತ್ಮಹತ್ಯೆ

    ಸದ್ಯ ಫ್ರೀಡಂಪಾರ್ಕ್‌ನಲ್ಲಿ ಹೋರಾಟ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಗೌರವಧನ ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದು, ಹೋರಾಟ ತೀವ್ರಗೊಳಿಸಲು ಚಿಂತನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹರ್ಲೀನ್ ಡಿಯೋಲ್‍ ಅಬ್ಬರದ ಬ್ಯಾಟಿಂಗ್‌ಗೆ ಡೆಲ್ಲಿ ಬರ್ನ್‌ – ಗುಜರಾತ್‌ಗೆ 5 ವಿಕೆಟ್‌ಗಳ ರೋಚಕ ಜಯ

  • ಪತ್ರಕರ್ತರಿಗೆ ‘ಮಾಧ್ಯಮ ಸಂಜೀವಿನಿ’ ಯೋಜನೆ – 5 ಲಕ್ಷ ರೂ. ನಗದು ರಹಿತ ಚಿಕಿತ್ಸೆ

    ಪತ್ರಕರ್ತರಿಗೆ ‘ಮಾಧ್ಯಮ ಸಂಜೀವಿನಿ’ ಯೋಜನೆ – 5 ಲಕ್ಷ ರೂ. ನಗದು ರಹಿತ ಚಿಕಿತ್ಸೆ

    ಬೆಂಗಳೂರು: ಮಾನ್ಯತೆ ಹೊಂದಿರುವ ಪತ್ರಕರ್ತರು (Journalists) ಹಾಗೂ ಅವಲಂಬಿತ ಕುಟುಂಬ ಸದಸ್ಯರಿಗೆ 5 ಲಕ್ಷ ರೂ.ವರೆಗೆ ನಗದುರಹಿತ ಚಿಕಿತ್ಸೆಗಾಗಿ ‘ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ’ (Madhyama Sanjeevini Yojana) ಯೋಜನೆ ಅನುಷ್ಠಾನ ಮಾಡುವುದಾಗಿ ಬಜೆಟ್‌ನಲ್ಲಿ (Karnataka Budget) ಘೋಷಿಸಲಾಗಿದೆ.

    ರಾಜ್ಯದ ಪತ್ರಕರ್ತರಿಗೆ ನೀಡಲಾಗುತ್ತಿದ್ದ ಮಾಸಾಶನವನ್ನು 12 ಸಾವಿರ ರೂ.ನಿಂದ 15ಸಾವಿರ ರೂ.ಗಳಿಗೆ ಹಾಗೂ ಕುಟುಂಬ ಮಾಸಾಶನ 7,500 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ.

    ತುಮಕೂರಿನಲ್ಲಿ ನಡೆದ 39ನೇ ಪತ್ರಕರ್ತರ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಆರೋಗ್ಯ ಯೋಜನೆ ಘೋಷಿಸುವುದಾಗಿ ಭರವಸೆ ನೀಡಿದ್ದರು.

  • Karnataka Budget 2025 LIVE: 2028ರ ಒಲಿಂಪಿಕ್ಸ್‌ಗೆ ತಯಾರಾಗುವ 60 ಕ್ರೀಡಾಪಟುಗಳಿಗೆ ವಾರ್ಷಿಕ ತಲಾ 10 ಲಕ್ಷ ರೂ. ಪ್ರೋತ್ಸಾಹ ಧನ

    Karnataka Budget 2025 LIVE: 2028ರ ಒಲಿಂಪಿಕ್ಸ್‌ಗೆ ತಯಾರಾಗುವ 60 ಕ್ರೀಡಾಪಟುಗಳಿಗೆ ವಾರ್ಷಿಕ ತಲಾ 10 ಲಕ್ಷ ರೂ. ಪ್ರೋತ್ಸಾಹ ಧನ

    8 months agoMarch 7, 2025 2:41 pm

    ಯಾವ ಭಾಗಕ್ಕೆ ಎಷ್ಟು ಹಂಚಿಕೆ?

    ಸಾಲ ಮರುಪಾವತಿ- 18 ಪೈಸೆ

    ಇತರ ಸಾಮಾನ್ಯ ಸೇವೆ- 18 ಪೈಸೆ

    ಸಮಾಜ ಕಲ್ಯಾಣ- 15 ಪೈಸೆ

    ಇತರ ಆರ್ಥಿಕ ಸೇವೆಗಳು- 14 ಪೈಸೆ

    ಕೃಷಿ, ನೀರಾವರಿ, ಗ್ರಾಮೀಣ ಅಭಿವೃದ್ಧಿ- 14 ಪೈಸೆ

    ಶಿಕ್ಷಣ- 10 ಪೈಸೆ

    ಆರೋಗ್ಯ- 5 ಪೈಸೆ

    ಇತರ ಸಾಮಾಜಿಕ ಸೇವೆಗಳು- 3 ಪೈಸೆ

    ನೀರು ಪೂರೈಕೆ ಮತ್ತು ನೈರ್ಮಲ್ಯ- 3 ಪೈಸೆ

    ಒಟ್ಟು- 100 ಪೈಸೆ (ಒಂದು ರೂಪಾಯಿ)

    8 months agoMarch 7, 2025 2:39 pm

    ಸರ್ಕಾರಕ್ಕೆ ಆದಾಯ ಹೇಗೆ ಬರುತ್ತೆ? (ಪೈಸೆಗಳಲ್ಲಿ)

    ರಾಜ್ಯ ತೆರಿಗೆ ಆದಾಯ- 52 ಪೈಸೆ
    ಸಾಲ- 27 ಪೈಸೆ
    ಕೇಂದ್ರದ ತೆರಿಗೆ ಪಾಲು-13 ಪೈಸೆ
    ಕೇಂದ್ರ ಸರ್ಕಾರದ ಸಹಾಯಾನುದಾನ- 4 ಪೈಸೆ
    ರಾಜ್ಯ ತೆರಿಗೆಯೇತರ ರಾಜಸ್ವ- 4 ಪೈಸೆ

    ಒಟ್ಟು – 100 ಪೈಸೆ (ಒಂದು ರೂಪಾಯಿ)

    8 months agoMarch 7, 2025 2:34 pm

    ಯಾವ ಇಲಾಖೆಗೆ ಎಷ್ಟು ಹಣ ಹಂಚಿಕೆ?

    ಶಿಕ್ಷಣ ಇಲಾಖೆ- 45286 ಕೋಟಿ (10%)

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ- 34955 ಕೋಟಿ (8%)

    ಇಂಧನ- 26896 ಕೋಟಿ (6%)

    ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್- 26735 ಕೋಟಿ (6%)

    ನೀರಾವರಿ- 22181 ಕೋಟಿ (5%)

    ನಗರಾಭಿವೃದ್ಧಿ ಮತ್ತು ವಸತಿ- 21405 ಕೋಟಿ (5%)

    ಒಳಾಡಳಿತ ಮತ್ತು ಸಾರಿಗೆ- 20625 ಕೋಟಿ (5%)

    ಆರೋಗ್ಯ ಮತ್ತು ಕುಟುಂಬ- 17473 ಕೋಟಿ (4%)

    ಕಂದಾಯ- 17201 ಕೋಟಿ (4%)

    ಸಮಾಜ ಕಲ್ಯಾಣ- 16955 ಕೋಟಿ (4%)

    ಲೋಕೋಪಯೋಗಿ- 11841 ಕೋಟಿ (3%)

    ಆಹಾರ-ನಾಗರಿಕ ಸರಬರಾಜು- 8275 ಕೋಟಿ (2%)

    ಕೃಷಿ-ತೋಟಗಾರಿಕೆ- 7145 ಕೋಟಿ (2%)

    ಪಶುಸಂಗೋಪನೆ-ಮೀನುಗಾರಿಕೆ- 3977 ಕೋಟಿ (1%)

    ಇತರೆ- 1,49,857 ಕೋಟಿ (35%)

    8 months agoMarch 7, 2025 1:57 pm

    ಬಜೆಟ್ ಭಾಷಣ ಮುಕ್ತಾಯ

    3 ಗಂಟೆ 25 ನಿಮಿಷಗಳ ಕಾಲ ಬಜೆಟ್ ಮಂಡಿಸಿದ ಸಿಎಂ

    ಒಂದು ಗಾಜಿನ‌ ಲೋಟ ನೀರು ಕುಡಿದ ಸಿದ್ದರಾಮಯ್ಯ

    8 months agoMarch 7, 2025 1:48 pm

    ಒಲಿಂಪಿಕ್ಸ್‌ಗೆ ತಯಾರಾಗುವ 60 ಕ್ರೀಡಾಪಟುಗಳಿಗೆ ವಾರ್ಷಿಕ ತಲಾ 10 ಲಕ್ಷ ರೂ.

    ಗುರಿ-ಒಲಿಂಪಿಕ್ ಪದಕ ಯೋಜನೆಯಡಿ ಒಲಿಂಪಿಕ್ಸ್‌ 2028 ಗೆ ತಯಾರಿ ಕೈಗೊಳ್ಳಲು ರಾಜ್ಯದ ಅತ್ಯಂತ ಪ್ರತಿಭಾನ್ವಿತ 60 ಕ್ರೀಡಾಪಟುಗಳಿಗೆ ವಾರ್ಷಿಕ ತಲಾ 10 ಲಕ್ಷ ರೂ.ದಂತೆ ಪ್ರೋತ್ಸಾಹ ಧನ ವಿತರಣೆ. ಈ ವರ್ಷಕ್ಕೆ 6 ಕೋಟಿ ರೂ. ನೆರವು.

    ಗ್ರಾಮೀಣ ಕ್ರೀಡೆಗಳ ಪ್ರೋತ್ಸಾಹ ಹಾಗೂ ಬುಡಕಟ್ಟು ಜನಾಂಗದವರಿಗೆ ಕ್ರೀಡಾಕೂಟ ಆಯೋಜನೆಗೆ 2 ಕೋಟಿ ರೂ.

    8 months agoMarch 7, 2025 1:46 pm

    ಕೊಡಗು ಜಿಲ್ಲೆಯಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಹಾನಿಯಾಗಿರುವ ರಸ್ತೆ ಮತ್ತು ಸೇತುವೆಗಳ ಪುನರ್‌ ನಿರ್ಮಾಣ

    8 months agoMarch 7, 2025 1:45 pm

    ದಕ್ಷಿಣ ಕನ್ನಡ, ವಿಜಯಪುರ, ಮೈಸೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಒಟ್ಟು 6 ಸೇತುವೆ ನಿರ್ಮಾಣಕ್ಕೆ ಅನುಮೋದನೆ

    8 months agoMarch 7, 2025 1:43 pm

    ಬಯಲುಸೀಮೆ, ಮಲೆನಾಡು ಹಾಗೂ ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಗಳಿಗೆ 83 ಕೋಟಿ ರೂ. ಅನುದಾನ

    8 months agoMarch 7, 2025 1:41 pm

    ಗ್ರಾಪಂ ಗಳಲ್ಲಿ ಇ-ಸ್ವತ್ತು ಅಭಿಯಾನ

    ಗ್ರಾಮ ಪಂಚಾತಿತಿಗಳಲ್ಲಿ ‘ಇ-ಸ್ವತ್ತು ಅಭಿಯಾನ’ ಆರಂಭ

    ಪಂಚತಂತ್ರ ತಂತ್ರಾಂಶ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳಿಗೂ ವಿಸ್ತರಣೆ. ಹಿರಿಯ ಅಧಿಕಾರಿಗಳಿಂದ ‘ಗ್ರಾಮ ಪಂಚಾಯಿತಿ ದತ್ತು’ ಕಾರ್ಯಕ್ರಮ ಆರಂಭ

    8 months agoMarch 7, 2025 1:39 pm

    ನನ್ನ ವೃತ್ತಿ, ನನ್ನ ಆಯ್ಕೆ

    ʻನನ್ನ ವೃತ್ತಿ, ನನ್ನ ಆಯ್ಕೆʼ ಕಾರ್ಯಕ್ರಮದಡಿ ಸರ್ಕಾರಿ ಶಾಲಾ/ಕಾಲೇಜುಗಳಲ್ಲಿ 2.30 ಲಕ್ಷ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ

    ಯುವನಿಧಿ ಫಲಾನುಭವಿ ಯುವಕರಿಗೆ Industry Linkage Cell ಅಡಿ ಭವಿಷ್ಯ ಕೌಶಲ್ಯ ತರಬೇತಿ

    ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಉದ್ಯೋಗ ಮೇಳ ಆಯೋಜನೆ

    ಮಹಿಳಾ ಸ್ವ-ಸಹಾಯ ಸಂಘಗಳಿಂದ ಆಯ್ದ 50 ಸ್ಥಳಗಳಲ್ಲಿ ಶಿಶು ಪಾಲನೆಗಾಗಿ ʻವಾತ್ಸಲ್ಯ ಕೇಂದ್ರʼಗಳ ಸ್ಥಾಪನೆ

    ಮಧುಗಿರಿ, ಇಂಡಿ, ಕಂಪ್ಲಿ, ರಾಯಚೂರು ಗ್ರಾಮೀಣ ಮತ್ತು ಸಿಂಧನೂರು ತಾಲ್ಲೂಕುಗಳಲ್ಲಿ ನೂತನ GTTC ಸ್ಥಾಪನೆ

    8 months agoMarch 7, 2025 1:37 pm

    8 months agoMarch 7, 2025 1:33 pm

    80 ವರ್ಷ ಮೇಲ್ಪಟ್ಟ ಹಿರಿಯವರು ಮಾತ್ರ ಇರುವ ಮನೆಗಳಿಗೆ ಆಹಾರ ಧಾನ್ಯಗಳನ್ನು ತಲುಪಿಸುವ ʻಅನ್ನ ಸುವಿಧಾʼ ಯೋಜನೆ 75 ವಯಸ್ಸು ಮೇಲ್ಪಟ್ಟ ಹಿರಿಯ ನಾಗರಿಕರು ಇರುವ ಮನೆಗಳಿಗೂ ವಿಸ್ತರಣೆ

    8 months agoMarch 7, 2025 1:30 pm

    ಪರಿಶಿಷ್ಟ ವರ್ಗಗಳ ಕಲ್ಯಾಣ

    ಪರಿಶಿಷ್ಟ ಪಂಗಡದ 20 ಹೊಸ ಮೆಟ್ರಿಕ್‌ ನಂತರದ ವಿದ್ಯಾರ್ಥಿನಿಲಯ ಪ್ರಾರಂಭ

    78 ಬುಡಕಟ್ಟು ವಸತಿ ಶಾಲೆಗಳಲ್ಲಿ 7ನೇ ತರಗತಿ ಪ್ರಾರಂಭ. ಐದು ವಸತಿ ಶಾಲೆಗಳು 12ನೇ ತರಗತಿಯವರೆಗೆ ಮೇಲ್ದರ್ಜೆಗೆ

    ರಾಜ್ಯ ಸಿವಿಲ್‌ ಸೇವೆಗಳಲ್ಲಿ ಅರಣ್ಯ, ಅರಣ್ಯದಂಚಿನ ಹಾಡಿಗಳಲ್ಲಿ ವಾಸ ಮಾಡುತ್ತಿರುವ 13 ಬುಡಕಟ್ಟು ಜನಾಂಗಗಳ ಅಭ್ಯರ್ಥಿಗಳ ವಿಶೇಷ ನೇರ ನೇಮಕಾತಿಗೆ ಕ್ರಮ

    8 months agoMarch 7, 2025 1:26 pm

    37 ಲಕ್ಷ ರೈತರಿಗೆ 28,000 ಕೋಟಿ ರೂ. ಸಾಲ ವಿತರಣೆ ಗುರಿ

    8 months agoMarch 7, 2025 1:25 pm

    ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದ ಮೀನು ಮಾರಾಟಗಾರರಿಗೆ ನಾಲ್ಕು ಚಕ್ರ ವಾಹನ ಖರೀದಿಗೆ ಗರಿಷ್ಠ 3 ಲಕ್ಷ ರೂ. ಆರ್ಥಿಕ ನೆರವು

    8 months agoMarch 7, 2025 1:12 pm

    8 months agoMarch 7, 2025 1:08 pm

    ಕಾರ್ಮಿಕ ಇಲಾಖೆ

    ಕೆಲಸದ ಸ್ಥಳದಲ್ಲಿ ಮರಣ ಹೊಂದುವ ಕಾರ್ಮಿಕರ ಕುಟುಂಬಕ್ಕೆ 8 ಲಕ್ಷ ಪರಿಹಾರ

    ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ 31 ಜಿಲ್ಲೆಗಳಲ್ಲಿ ವಸತಿ ಶಾಲೆ

    ನೋಂದಾಯಿತ ಕಟ್ಟಡ ಕಾರ್ಮಿಕರು ಸಹಜ ಸಾವನ್ನಪ್ಪಿದ್ರೆ 1.5 ಲಕ್ಷ ಪರಿಹಾರ

    8 months agoMarch 7, 2025 1:06 pm

    8 months agoMarch 7, 2025 12:57 pm

    ಮೈಸೂರಲ್ಲಿ ಕುಸ್ತಿ, ವಾಲಿಬಾಲ್‌ ಅಕಾಡೆಮಿ ಸ್ಥಾಪಿಸಲು 2 ಕೋಟಿ ರೂ.

    ಮೈಸೂರಲ್ಲಿ ಸ್ಟಾರ್ಟ್‌ಅಪ್‌ ಪಾರ್ಕ್

    ಬನ್ನಿಮಂಟಪದಲ್ಲಿ ಹೊಸ ಸ್ಯಾಟ್‌ಲೈಟ್‌ ಬಸ್‌ ಸ್ಟ್ಯಾಂಕ್‌

    8 months agoMarch 7, 2025 12:54 pm

    ಗೃಹಜ್ಯೋತಿ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ 10,100 ಕೋಟಿ ಮೀಸಲ

    ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ರೂ.

    8 months agoMarch 7, 2025 12:53 pm

    8 months agoMarch 7, 2025 12:51 pm

    8 months agoMarch 7, 2025 12:44 pm

    ಪತ್ರಕರ್ತರ ಮಾಶಾಸನ 15 ಸಾವಿರ ವರೆಗೆ ಹೆಚ್ಚಳ

    8 months agoMarch 7, 2025 12:44 pm

    ವೈದ್ಯಕೀಯ ಕ್ಷೇತ್ರಕ್ಕೆ ಕೊಡುಗೆ

    ಬಾಗಲಕೋಟೆಯಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಘಟಕ, ವೈದ್ಯಕೀಯ ಕಾಲೇಜು ಹಾಗೂ ಕೋಲಾರದಲ್ಲಿ ಪಿಪಿಪಿ ಆಧಾರದಲ್ಲಿ ‘ವೈದ್ಯಕೀಯ ಕಾಲೇಜು ಸ್ಥಾಪನೆ’

    ರಾಜ್ಯದ 22 ವೈದ್ಯಕೀಯ ಕಾಲೇಜುಗಳಲ್ಲಿ ‘ಅಲೈಡ್‌ ಹೆಲ್ತ್‌ ಸೈನ್ಸ್‌ ಕೋರ್ಸ್‌’ಗಳ ಪ್ರಾರಂಭ

    ರಾಯಚೂರಿನಲ್ಲಿ 50 ಕೋಟಿ ವೆಚ್ಚದಲ್ಲಿ ಕಿದ್ವಾಯಿ ಪೆರಿಫರೆಲ್‌ ಕ್ಯಾನ್ಸರ್‌ ಚಿಕಿತ್ಸಾ ಘಟಕ ಸ್ಥಾಪನೆ

    8 months agoMarch 7, 2025 12:40 pm

    8 months agoMarch 7, 2025 12:35 pm

    ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ

    8 months agoMarch 7, 2025 12:34 pm

    ವಕ್ಫ್‌ ಆಸ್ತಿ ಸಂರಕ್ಷಣೆಗೆ 150 ಕೋಟಿ

    8 months agoMarch 7, 2025 12:28 pm

    ಬಾದಾಮಿ, ಚಿತ್ರದುರ್ಗದಲ್ಲಿ ಟ್ರಾಮಾ ಕೇಸ್‌ ಸೆಂಟರ್‌

    8 months agoMarch 7, 2025 12:24 pm

    ಬಿಬಿಎಂಪಿ ವ್ಯಾಪ್ತಿಯ ಸುರಂಗ ಮಾರ್ಗ ರಸ್ತೆಗೆ ಅನುದಾನ ಘೋಷಣೆ

    ಸುರಂಗ ಮಾರ್ಗದ ಯೋಜನೆಗೆ 19000 ಕೋಟಿ ರೂ. ಈ ಸಾಲಿನಲ್ಲಿ ಘೋಷಣೆ

    ಯೋಜನೆಗೆ ಒಟ್ಟು 40 ಸಾವಿರ ಕೋಟಿ ರೂ. ವೆಚ್ಚ ಮಾಡಲು ನಿರ್ಧಾರ

    ಉತ್ತರ ದಕ್ಷಿಣ ಮತ್ತು ಪೂರ್ವ ಪಶ್ಚಿಮ ಸುರಂಗ ಮಾರ್ಗದ ಕಾರಿಡಾರ್‌ಗಳ ನಿರ್ಮಾಣ

    ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಕೈಗೊಳ್ಳಲಾಗುವ 21 ಯೋಜನೆಗಳಿಗೆ 1,800 ಕೋಟಿ ಘೋಷಣೆ

    8 months agoMarch 7, 2025 12:21 pm

    500 ಹೊಸ ಕರ್ನಾಟಕ ಪಬ್ಲಿಕ್‌ ಶಾಲೆಗಳ ಆರಂಭ

    8 months agoMarch 7, 2025 12:19 pm

    ಸರಳ ವಿವಾಹಕ್ಕೆ ಪ್ರತಿ ಜೋಡಿಗೆ 50 ಸಾವಿರ ಪ್ರೋತ್ಸಾಹಧನ

    8 months agoMarch 7, 2025 12:18 pm

    ಮಹಿಳಾ ಸ್ವಸಹಾಯ ಸಂಘ ವ್ಯಾಪ್ತಿಗೆ ಇಂದಿರಾ ಕ್ಯಾಂಟೀನ್‌

    ಸ್ವಸಹಾಯ ಸಂಘಗಳ ಮಹಿಳೆಯರಿಗೆ ಇಂದಿರಾ ಕ್ಯಾಂಟೀನ್‌ ಹೊಣೆ

    8 months agoMarch 7, 2025 12:15 pm

    ಅಬಕಾರಿ ಇಲಾಖೆಗೆ ಹೊಸ ಟಾರ್ಗೆಟ್ ಫಿಕ್ಸ್ ಮಾಡಿದ ಸರ್ಕಾರ

    40 ಸಾವಿರ ಕೋಟಿ ಆದಾಯ ಸಂಗ್ರಹಣೆ ಟಾರ್ಗೆಟ್

    ಕಳೆದ ಸಲ 38,500 ಕೋಟಿ ಟಾರ್ಗೆಟ್ ನೀಡಲಾಗಿತ್ತು. (ಆದ್ರೆ 36,500 ಕೋಟಿ ಮಾತ್ರ ಕಳೆದ ಬಾರಿ ಸಂಗ್ರಹ)

    ಈ ಸಲ ಸುಮಾರು ಮೂರೂವರೆ ಸಾವಿರ ಕೋಟಿ ಹೆಚ್ಚುವರಿ ಆದಾಯ ಸಂಗ್ರಹಣೆ ಟಾರ್ಗೆಟ್

    ಈ ಮೂಲಕ ಮದ್ಯದ ದರಗಳ ಏರಿಕೆಯ ಸುಳಿವು ನೀಡಿದ ಸರ್ಕಾರ

    8 months agoMarch 7, 2025 12:11 pm

    ಅರಣ್ಯ, ಅರಣ್ಯದಂಚಿನ ಹಾಡಿಗಳಲ್ಲಿ ವಾಸಿಸುವ ಜನಾಂಗದವರಿಗೆ ನೇರ ನೇಮಕಾತಿ ಭಾಗ್ಯ

    13 ಬುಡಕಟ್ಟು ಜನಾಂಗಗಳಾದ ಜೇನು ಕುರುಬ, ಇರುಳಿಗ, ಕೊರಗ, ಸೋಲಿಗ, ಯರವ, ಪಣಿಯನ್, ಹಲಸರು, ಗೌಡಲು, ಸಿದ್ಧಿ, ಬೆಟ್ಟಕುರುಬ,

    ಕಾಡುಕುರುಬ, ಕುಡಿಯ ಮತ್ತು ಮಲೆಕುಡಿಯ ಈ ಜನಾಂಗಗಳಿಗೆ ರಾಜ್ಯ ಸಿವಿಲ್ ಸೇವೆಗಳಲ್ಲಿ ಪ್ರಾತಿನಿಧ್ಯ ನೀಡುವ ಸಲುವಾಗಿ ವಿಶೇಷ ನೇರ ನೇಮಕಾತಿಯನ್ನು ಕೈಗೊಳ್ಳಲಾಗುವುದು.

    8 months agoMarch 7, 2025 12:07 pm

    ಕನ್ನಡ ಸಿನಿಮಾಗಳ ಪ್ರೋತ್ಸಾಹಕ್ಕೆ ಸರ್ಕಾರಿ OTT

    8 months agoMarch 7, 2025 12:04 pm

    ರಾಜ್ಯದಲ್ಲಿ 100 ನಾಡಕಚೇರಿ ನಿರ್ಮಾಣ

    8 months agoMarch 7, 2025 11:58 am

    ಬೆಂಗಳೂರಿಗೆ 9 ಸಾವಿರ ಬಸ್‌ ಸೇರ್ಪಡೆ

    2 ವರ್ಷಗಳ ಮೆಟ್ರೋ ಹೆಚ್ಚುವರಿ ಮಾರ್ಗಗಳ ವಿಸ್ತರಣೆ

    ನಮ್ಮ ಮೆಟ್ರೋ ದೇವನಹಳ್ಳಿ ವರೆಗೆ ವಿಸ್ತರಣೆ

    ವರ್ತೂರು-ಬೆಳ್ಳಂದೂರು ಕೆರೆ ಪುನರುಜ್ಜೀವನಕ್ಕೆ 234 ಕೋಟಿ

    ಬೆಂಗಳೂರಿನ ಹಜ್‌ ಭವನದಲ್ಲಿ KSOU ಸ್ಥಾಪನೆ

    8 months agoMarch 7, 2025 11:57 am

    2026 ಕ್ಕೆ ವಿಜಯಪುರದಲ್ಲಿ ಏರ್‌ಪೋರ್ಟ್‌ ಆರಂಭ

    8 months agoMarch 7, 2025 11:54 am

    ಕಂಬಳ, ಎತ್ತಿನಬಂಡಿ ಓಟ, ಮಲ್ಲಕಂಬ ಸ್ಪರ್ಧೆಗಳಿಗೆ ಉತ್ತೇಜನ

    8 months agoMarch 7, 2025 11:52 am

    ಮದ್ಯದಂಗಡಿಗಳಿಗೆ ಹೊಸ ಲೈಸೆನ್ಸ್‌

    8 months agoMarch 7, 2025 11:52 am

    ಜೈನ, ಬೌದ್ಧ, ಸಿಖ್‌ ಸಮುದಾಯಗಳ ಅಭಿವೃದ್ಧಿಗೆ 100 ಕೋಟಿ

    8 months agoMarch 7, 2025 11:43 am

    ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ

    ಸರ್ಕಾರಿ ಗುತ್ತಿಗೆಗಳಲ್ಲಿ 2b ವರ್ಗಕ್ಕೂ ಮೀಸಲಾತಿ ಘೋಷಣೆ

    2 ಕೋಟಿ ಒಳಗಿನ ಕಾಮಗಾರಿಗಳಿಗೆ ಮೀಸಲಾತಿ

    ಸಮುದಾಯದ ಹೆಸರು ಹೇಳದೆ 2b ಎಂದು‌ ಉಲ್ಲೇಖಿಸಿರುವ ಸಿಎಂ

    8 months agoMarch 7, 2025 11:42 am

    ಕೃಷಿ ಕ್ಷೇತ್ರಕ್ಕೆ ಕೊಡುಗೆ

    ರಾಜ್ಯದಲ್ಲಿ 5,000 ಕಿರು ಸಂಸ್ಕರಣಾ ಘಟಕಗಳ ಸ್ಥಾಪನೆ
    ಕೃಷಿ ಭಾಗ್ಯ ಯೋಜನೆಯಡಿ 12 ಸಾವಿರ ಕೃಷಿ ಹೊಂಡ ನಿರ್ಮಾಣ
    ಬೆಳೆಗಳ ಕುರಿತು ನಿಖರ ತೀರ್ಮಾನ ಕೈಗೊಳ್ಳಲು ನೆರವು ನೀಡುವ ‘ಡಿಜಿಟಲ್‌ ಕೃಷಿ ಸೇವೆಗಳ ಕೇಂದ್ರ’ ಸ್ಥಾಪನೆ

    8 months agoMarch 7, 2025 11:40 am

    ಅರ್ಚಕರಿಗೆ ತಸ್ತೀಕ್ ಮೊತ್ತ ಹೆಚ್ಚಳ

    ದೇವಾಲಯದ ಆಸ್ತಿ ಸಂರಕ್ಷಣೆಗೆ ಬರಲಿದೆ ಭೂ ವರಾಹ

    ಒತ್ತುವರಿಯಾಗಿರುವ 328 ದೇವಾಲಯದ ಆಸ್ತಿ ಸಂರಕ್ಷಣೆಗೆ ಕ್ರಮ

    8 months agoMarch 7, 2025 11:35 am

    ನಿವೃತ್ತಿ ಹೊಂದಿದ ಕುಸ್ತಿಪಟುಗಳ ಮಾಶಾಸನ ಹೆಚ್ಚಳ

    ಅಂತಾರಾಷ್ಟ್ರೀಯ ಕುಸ್ತಿಪಟುಗಳಿಗೆ 6 ಸಾವಿರ ರೂ. ಹೆಚ್ಚಳ

    ರಾಷ್ಟ್ರೀಯ ಕುಸ್ತಿಪಟು- 5 ಸಾವಿರ ರೂ.ಗೆ ಹೆಚ್ಚಳ

    ರಾಜ್ಯಮಟ್ಟದ ಕುಸ್ತಿ ಪಟು- 4500 ರೂ.ಗೆ ಹೆಚ್ಚಳ

    8 months agoMarch 7, 2025 11:35 am

    ಬೀದಿಬದಿ ವ್ಯಾಪಾರಿಗಳಿಗೆ 1 ಲಕ್ಷ ಸಾಲಕ್ಕೆ ಸಹಾಯಧನ

    8 months agoMarch 7, 2025 11:32 am

    ಮೈಸೂರು, ಕಲಬುರಗಿಯಲ್ಲಿ ನಿಮ್ಹಾನ್ಸ್‌ ಆಸ್ಪತ್ರೆ ನಿರ್ಮಾಣ

    ಕೊಪ್ಪಳದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ
    ರಾಯಚೂರಿನಲ್ಲಿ ಕಿದ್ವಾಯಿ ಆಸ್ಪತ್ರೆ
    ಯಲಬುರ್ಗಾ, ಜೇವರ್ಗಿ, ಯಾದಗಿರಿಯಲ್ಲಿ ನರ್ಸಿಂಗ್‌ ಕಾಲೇಜು
    ಕೋಲಾರದಲ್ಲಿ ವೈದ್ಯಕೀಯ ಕಾಲೇಜು

    8 months agoMarch 7, 2025 11:28 am

    ಕರ್ನಟಕ ನಕ್ಸಲ್‌ ಮುಕ್ತ ರಾಜ್ಯ

    ಬಜೆಟ್‌ನಲ್ಲಿ ಘೋಷಣೆ‌ ಮಾಡಿದ ಸಿಎಂ

    ನಕ್ಸಲ್‌ ನಿಗ್ರಹ ಪಡೆ ವಿಸರ್ಜಿಸುವ ಘೋಷಣೆ

    8 months agoMarch 7, 2025 11:26 am

    ಗರ್ಭ ಕ್ಯಾನ್ಸರ್‌ ತಡೆಗೆ ಉಚಿತ ಲಸಿಕೆ

    8 months agoMarch 7, 2025 11:26 am

    ರಾಜ್ಯಕ್ಕೂ ಬರಲಿದೆ ವಾಟರ್ ಮೆಟ್ರೋ

    ಮಂಗಳೂರಿನಲ್ಲಿ ವಾಟರ್ ಮೆಟ್ರೋಗೆ ಪ್ಲ್ಯಾನ್

    ಬಜೆಟ್‌ನಲ್ಲಿ ಪ್ರಸ್ತಾಪ

    ಮಂಗಳೂರಲ್ಲಿ ಅಂತಾರಾಷ್ಟ್ರೀಯ ಕ್ರೂಸ್‌ ಆರಂಭ

    8 months agoMarch 7, 2025 11:23 am

    ಬೆಂಗಳೂರಿಗೆ ಬಂಪರ್‌ ಗಿಫ್ಟ್‌

    ಬೆಂಗಳೂರು ಅಭಿವೃದ್ಧಿ ಅನುದಾನ 7,000 ಕೋಟಿ ರೂ.ಗೆ ಏರಿಕೆ

    ಟನಲ್‌ ಯೋಜನೆಗೆ 40 ಸಾವಿರ ಕೋಟಿ

    8 months agoMarch 7, 2025 11:22 am

    ಮಹಿಳೆಯ ಸ್ವ ಉದ್ಯೋಗಕ್ಕಾಗಿ ಜಿಲ್ಲಾ ಹಾಗೂ ತಾಲೂಕು ಕಚೇರಿಗಳಲ್ಲಿ ಅಕ್ಕಾ ಕೆಫೆ, ಕ್ಯಾಂಟಿನ್

    8 months agoMarch 7, 2025 11:19 am

    ಶಾಲಾ ಮಕ್ಕಳಿಗೆ ವಾರದಲ್ಲಿ 6 ದಿನ ಮೊಟ್ಟೆ, ಬಾಳೆಹಣ್ಣು

    ರಾಜ್ಯದಲ್ಲಿ 2,500 ಕೋಟಿ ವೆಚ್ಚದಲ್ಲಿ 500 ಹೊಸ ಪಬ್ಲಿಕ್‌ ಶಾಲೆಗಳ ನಿರ್ಮಾಣ

    ಶಾಲಾ ಮಕ್ಕಳಿಗೆ ವಾರದಲ್ಲಿ 6 ದಿನ ಮೊಟ್ಟೆ, ಬಾಳೆಹಣ್ಣು ನೀಡಲು 1,500 ಕೋಟಿ ರೂ. ಮೀಸಲು

    8 months agoMarch 7, 2025 11:16 am

    ಬಜೆಟ್‌ನಲ್ಲಿ ಎಸ್‌ಸಿಎಸ್ಪಿ-ಟಿಎಸ್ಪಿ ಅನುದಾನ ಘೋಷಣೆ

    ಎಸ್‌ಸಿ ಸಮುದಾಯದ ಉಪಯೋಜನೆಗೆ(ಎಸ್‌ಸಿಎಸ್‌ಪಿ) – 29,992 ಕೋಟಿ ರೂ

    ಎಸ್‌ಟಿ ಸಮುದಾಯದ ಉಪಯೋಜನೆಗೆ(ಎಸ್‌ಟಿಪಿ) – 12,026 ಕೋಟಿ ರೂ ಅನುದಾನ

    ಒಟ್ಟು ಈ ಬಜೆಟ್‌ನಲ್ಲಿ ಎಸ್‌ಸಿಎಸ್ಪಿ-ಟಿಎಸ್ಪಿ ಅನುದಾನ ಘೋಷಣೆ – 42,018 ಕೋಟಿ ರೂ.

    8 months agoMarch 7, 2025 11:15 am

    ಸಿಎಂ ಬಜೆಟ್ ಓದಿನ ಮಧ್ಯೆ ಒಳ ಮೀಸಲಾತಿ ಕೊಡಲುವಂತೆ ಘೋಷಣೆ

    ವೀಕ್ಷಕರ ಗ್ಯಾಲರಿಯಲ್ಲಿದ್ದ ದಲಿತಪರ ಸಂಘಟನೆಗಳ ಮುಖಂಡರಿಂದ ಘೋಷಣೆ

    8 months agoMarch 7, 2025 11:14 am

    ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 5 ಸಾವಿರ ಕೋಟಿ ರೂ. ಮೊತ್ತದ ಹೊಸ ಯೋಜನೆಗಳನ್ನು KKRDB ಮೂಲಕ ಅನುಷ್ಠಾನ

    ಬಯಲು ಸೀಮೆ, ಮಲೆನಾಡು, ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಗೆ 83 ಕೋಟಿ ಅನುದಾನ

    ಗಡಿ ಅಭಿವೃದ್ಧಿ ಪ್ರಾಧಿಕಾರವನ್ನ ಯೋಜನಾ ಇಲಾಖೆ ವ್ಯಾಪ್ತಿಗೆ ತರಲು ನಿರ್ಧಾರ

    8 months agoMarch 7, 2025 11:09 am

    ಶಾಲೆಗಳಲ್ಲಿ ಮೊಟ್ಟೆ, ಬಾಳೆಹಣ್ಣು 6 ದಿನಗಳಿಗೆ ವಿಸ್ತರಣೆ

    8 months agoMarch 7, 2025 11:08 am

    ಮಹಿಳಾ ಸ್ವಸಹಾಯ ಸಂಘಗಳಿಂದ ಆಯ್ದ 50 ಕಡೆ ಶಿಶು ಪಾಲನೆಗಾಗಿ ವಾತ್ಯಲ್ಯ ಕೇಂದ್ರ ಸ್ಥಾಪನೆ

    8 months agoMarch 7, 2025 11:07 am

    ಮೈಸೂರು ಬನ್ನಿಮಂಟಪದಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಾಣ

    120 ಕೋಟಿ ವೆಚ್ಚ

    8 months agoMarch 7, 2025 11:07 am

    ಜಾನುವಾರುಗಳ ಆಕಸ್ಮಿಕ ಸಾವಿಗೆ ಪರಿಹಾರ ಅನುಗ್ರಹ ಯೋಜನೆ

    ಹಸು, ಕರುಗಳ ಸಾವಿನ ಪರಿಹಾರ ಧನ 10ರಿಂದ 15 ಸಾವಿರಕ್ಕೆ ಹೆಚ್ಚಳ
    ಕುರಿ, ಮೇಕೆ ಮೃತಪಟ್ಟರೆ ಪರಿಹಾರ ಧನ 5ರಿಂದ 7.5 ಸಾವಿರಕ್ಕೆ ಹೆಚ್ಚಳ

    8 months agoMarch 7, 2025 11:04 am

    ಕರಾವಳಿಯಲ್ಲಿ ಭೂಕುಸಿತ ತಡೆಗೆ ತಡೆಗೋಡೆ

    8 months agoMarch 7, 2025 11:03 am

    5 ಸಾವಿರ ಸರ್ಕಾರಿ ಶಾಲೆಗಳಲ್ಲಿ LKG-UKG

    8 months agoMarch 7, 2025 10:58 am

    ವನ್ಯಜೀವಿ ದಾಳಿಯಿಂದ ಮೃತಪಟ್ಟರೆ 20 ಲಕ್ಷ ಪರಿಹಾರ

    8 months agoMarch 7, 2025 10:57 am

    ಬೆಂಗಳೂರು ವಿವಿಗೆ ಮಾಜಿ ಪ್ರಧಾನಿ ಮನಮೋಹನ್‌ ಸಿಂಗೆ ಹೆಸರು

    8 months agoMarch 7, 2025 10:56 am

    ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜು

    8 months agoMarch 7, 2025 10:55 am

    ಗರ್ಭಕಂಠದ ಕ್ಯಾನ್ಸರ್ ತಡೆಗೆ 14 ವರ್ಷದ ಕೆಳಗಿನ ಮಕ್ಕಳಿಗೆ HPV ಲಸಿಕೆ

    8 months agoMarch 7, 2025 10:52 am

    ಆಯುಷ್ಮಾನ್‌ ಭಾರತದಡಿ 5 ಲಕ್ಷ ಚಿಕಿತ್ಸಾ ವೆಚ್ಚ

    ಹೃದ್ರೋಗ, ಕ್ಯಾನ್ಸರ್‌ ಚಿಕಿತ್ಸೆಗೆ ಹೆಚ್ಚುವರಿಯಾಗಿ 5 ಲಕ್ಷ

    8 months agoMarch 7, 2025 10:50 am

    ಮದ್ಯದಂಗಡಿಗಳಿಗೆ ಹೊಸ ಲೈಸೆನ್ಸ್ ನೀಡಲು ನಿರ್ಧಾರ

    ಇ-ಹರಾಜಿನ ಮೂಲಕ ಪರವಾನಗಿ ನೀಡಲು ಕ್ರಮ

    40 ಸಾವಿರ ಕೋಟಿ ತೆರಿಗೆ ಸಂಗ್ರಹ ಗುರಿ

    ಅಬಕಾರಿ ಸ್ಲ್ಯಾಬ್ ಗಳನ್ನ ತರ್ಕಬದ್ಧಗೊಳಿಸುವ ಪ್ರಕ್ರಿಯೆಗೆ ಚಾಲನೆ

    8 months agoMarch 7, 2025 10:49 am

    ಬಜೆಟ್‌ನಲ್ಲಿ ತೆರಿಗೆ ಸಂಗ್ರಹ ಗುರಿಯ ಪ್ರಸ್ತಾಪ

    ವಾಣಿಜ್ಯ ತೆರಿಗೆ – 1,20,000 ಕೋಟಿ

    ಅಬಕಾರಿ ತೆರಿಗೆ – 40,000 ಕೋಟಿ

    ನೋಂದಣಿ ಮತ್ತು ಮುದ್ರಾಂಕ ಶುಲ್ಕ – 28,000 ಕೋಟಿ ರೂ

    ಮೋಟಾರು ವಾಹನ ತೆರಿಗೆ – 15,000 ಕೋಟಿ ರೂ

    ಇತರೆ ತೆರಿಗೆಗಳಿಂದ – 5,100 ಕೋಟಿ ಸಂಗ್ರಹ ಗುರಿ

    8 months agoMarch 7, 2025 10:46 am

    ಅನ್ನಭಾಗ್ಯ ಅಕ್ಕಿ ನೀಡುವ ಗೋದಾಮುಗಳಲ್ಲಿ ಸಿಸಿಟಿವಿ ಅಳವಡಿಕೆ

    ಹೊಸ ನ್ಯಾಯಬೆಲೆ ಅಂಗಡಿಗಳು ಅವಶ್ಯಕತೆಗೆ ಅನುಗುಣವಾಗಿ ಓಪನ್

    8 months agoMarch 7, 2025 10:44 am

    ಅಂಗನವಾಡಿ ಕಾರ್ಯಕರ್ತೆಯರಿಗೆ 1,000 ಸಹಾಯ ಧನ ಹೆಚ್ಚಳ

    ಅಂಗನವಾಡಿ ಸಹಾಯಕರಿಗೆ 750 ರೂ. ಸಹಾಯ ಧನ ಹೆಚ್ಚಳ

    8 months agoMarch 7, 2025 10:44 am

    ಬಿಸಿಯೂಟ ತಯಾರಿಕರಿಗೆ 1 ಸಾವಿರ ಗೌರವ ಧನ ಹೆಚ್ಚಳ

    8 months agoMarch 7, 2025 10:43 am

    ಪ್ರಾಥಮಿಕ, ಫ್ರೌಡಾ ಶಾಲಾ ಮತ್ತು ಪದವಿ ಪೂರ್ವ ಕಾಲೇಜುಗಳ ಅತಿಥಿ ಶಿಕ್ಷಕರು, ಉಪನ್ಯಾಸರಿಗೆ 2 ಸಾವಿರ ಗೌರವ ಧನ ಹೆಚ್ಚಳ

    8 months agoMarch 7, 2025 10:42 am

    ಮದರಸಾದಲ್ಲಿ ಧಾರ್ಮಿಕ ಶಿಕ್ಷಣದೊಂದಿಗೆ ಔಪಚಾರಿಕ ಶಿಕ್ಷಣ

    SSLC ಪರೀಕ್ಷೆ ಬರೆಯಲು ಅವಕಾಶ

    ಕಂಪ್ಯೂಟರ್ ಸ್ಮಾರ್ಟ್ ಬೋರ್ಡ್ ವ್ಯವಸ್ಥೆ

    8 months agoMarch 7, 2025 10:40 am

    ಮೈಸೂರಲ್ಲಿ 500 ಕೋಟಿ ವೆಚ್ಚದಲ್ಲಿ ಫಿಲ್ಮ್‌ ಸಿಟಿ

    8 months agoMarch 7, 2025 10:38 am

    ಮಲ್ಟಿಪ್ಲೆಕ್ಸ್‌ಗಳಲ್ಲಿ ಏಕದರ ನಿಗದಿ

    ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಟಿಕೆಟ್‌ಗೆ 200 ರೂ. ನಿಗದಿ

    8 months agoMarch 7, 2025 10:36 am

    ಶಾಲಾ ಮಕ್ಕಳಿಗೆ ರಾಗಿ ಮಿಲ್ಟ್ ಯೋಜನೆ ವಿಸ್ತರಣೆ.

    ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಸಹಯೋಗದಲ್ಲಿ ನೀಡುತ್ತಿರೋ ಯೋಜನೆ

    3 ದಿನಗಳಿಂದ 5 ದಿನ ರಾಗಿ ಹೆಲ್ತ್ ಮಾಲ್ಟ್ ವಿಸ್ತರಣೆ

    100 ಕೋಟಿ ವೆಚ್ಚ, 25% ಸರ್ಕಾರದಿಂದ ಹಣ ಭರಿಸಲಾಗುತ್ತದೆ.

    8 months agoMarch 7, 2025 10:36 am

    ಅಲ್ಪಸಂಖ್ಯಾತ ಸರಳ ವಿವಾಹಕ್ಕೆ 50 ಸಾವಿರ

    8 months agoMarch 7, 2025 10:35 am

    ಮೈಸೂರು ವಿಮಾನ ನಿಲ್ದಾಣ ರನ್ ವೇ ವಿಸ್ತರಣೆಗೆ 319 ಕೋಟಿ

    8 months agoMarch 7, 2025 10:34 am

    50 ಸಾವಿರ ರೈತರಿಗೆ ಸಹಾಯ ಧನ

    ರಾಜ್ಯದಲ್ಲಿ ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿ 50 ಸಾವಿರ ರೈತರಿಗೆ ಸಹಾಯ ಧನ ಒದಗಿಸಲು 428 ಕೋಟಿ ಅನುದಾನ

    ಈ ವರ್ಷ 5 ಸಾವಿರ ಕಿರು ಸಂಸ್ಕಾರಣಾ ಘಟಕ ಸ್ಥಾಪನೆ

    12 ಸಾವಿರ ಕೃಷಿ ಹೊಂಡ ನಿರ್ಮಾಣ ಮಾಡಲಾಗುವುದು

    8 months agoMarch 7, 2025 10:32 am

    ಈ ಬಾರಿಯೂ ಕೊರತೆ ಬಜೆಟ್ ಮಂಡನೆ

    19,262 ಕೋಟಿ ರೂ. ಕೊರತೆ ಬಜೆಟ್

    8 months agoMarch 7, 2025 10:31 am

    ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ ಹೈಟೆಕ್

    8 months agoMarch 7, 2025 10:30 am

    ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ಕಾರ್ಯಕ್ರಮ

    ರಾಜ್ಯದ ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ಮೂಲಸೌಕರ್ಯ ಅಭಿವೃದ್ಧಿ ಹೊಸ ಕಾರ್ಯಕ್ರಮ ಜಾರಿ

    ಈ ಯೋಜನೆ ಅಡಿ ರಾಜ್ಯದ ಎಲ್ಲಾ ವಿಧಾನಸಭೆ ಕ್ಷೇತ್ರದ ರಸ್ತೆ, ಸಣ್ಣ ನೀರಾವರಿ, ಮೂಲ ಸೌಕರ್ಯಗಳಿಗೆ 8 ಸಾವಿರ ಕೋಟಿ

    8 months agoMarch 7, 2025 10:29 am

    ವೃತ್ತಿ ತೆರಿಗೆ ಏರಿಕೆ

    200 ರೂ. ರಿಂದ 300 ರೂ.ಗೆ ವೃತ್ತಿ ತೆರಿಗೆ ಏರಿಕೆ

    8 months agoMarch 7, 2025 10:29 am

    ವಾಣಿಜ್ಯ ತೆರಿಗೆಯ ಇಲಾಖೆಯ ರಾಜಸ್ವ ಸಂಗ್ರಹಣೆ ಗುರಿ 1,20,000 ಕೋಟಿ ರೂ.

    8 months agoMarch 7, 2025 10:28 am

    4,09,549 ಕೋಟಿ ಗಾತ್ರದ ಬಜೆಟ್

    8 months agoMarch 7, 2025 10:25 am

    ಈ ಬಾರಿಯೂ ಅತೀ ಹೆಚ್ಚು ಸಾಲದ ಪ್ರಸ್ತಾಪ ಮಾಡಿದ ಸಿದ್ದರಾಮಯ್ಯ

    ಈ ಬಾರಿ 1,16,000 ಕೋಟಿ ರೂ. ಸಾಲ ಮಾಡುವುದಾಗಿ ಪ್ರಸ್ತಾಪ

    8 months agoMarch 7, 2025 10:17 am

    2025-26ನೇ ಸಾಲಿನ ಬಜೆಟ್‌ ಮಂಡನೆ ಆರಂಭ

    ತಮ್ಮ 16ನೇ ಆಯವ್ಯಯ ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯ

    8 months agoMarch 7, 2025 10:11 am

    ಸಿಎಂ ಅವರನ್ನ ಗಾಲಿ ಕುರ್ಚಿಯಲ್ಲಿ ಕರೆದುಕೊಂಡು ಹೋದ ಸಂತೋಷ್ ಲಾಡ್

    8 months agoMarch 7, 2025 10:10 am

    ಸಂಪುಟ ಸಭೆ ಮುಕ್ತಾಯ

    ಬಜೆಟ್‌ಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ

    8 months agoMarch 7, 2025 10:07 am

    ಈ ಬಾರಿಯ ಬಜೆಟ್‌ ಗಾತ್ರ 4.09 ಲಕ್ಷ ಕೋಟಿ ರೂ.

    8 months agoMarch 7, 2025 10:05 am

    ಸರ್ಕಾರದ ಶೂನ್ಯ‌ ಸಾಧನೆ,‌ ವೈಫಲ್ಯಗಳ ವಿರುದ್ಧ ಬಿಜೆಪಿ-ಜೆಡಿಎಸ್ ಧರಣಿ

    8 months agoMarch 7, 2025 10:03 am

    ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ವಿಪಕ್ಷ ನಾಯಕರಿಂದ ಪ್ರತಿಭಟನೆ

    ಸರ್ಕಾರದ ವಿರುದ್ಧ ಘೋಷಣೆ ಕೂಗಿ ಧಿಕ್ಕಾರ..

    8 months agoMarch 7, 2025 9:58 am

    ನಿಂತು ಬಜೆಟ್ ಬ್ಯಾಗ್ ತೋರಿಸಿ ಆನಂತರ ವ್ಹೀಲ್ ಚೇರ್‌ನಲ್ಲಿ ಕ್ಯಾಬಿನೆಟ್‌ಗೆ ತೆರಳಿದ ಸಿಎಂ

    8 months agoMarch 7, 2025 9:57 am

    ಬಜೆಟ್‌ ಪ್ರತಿ ಹಿಡಿದು ವಿಧಾನಸೌಧಕ್ಕೆ ಸಿಎಂ ಆಗಮನ

    8 months agoMarch 7, 2025 9:52 am

    ಸಿಎಂ ಸಿದ್ದರಾಮಯ್ಯಗೆ ಬಜೆಟ್‌ ಪ್ರತಿ ಹಸ್ತಾಂತರ

    2025-26ನೇ ಸಾಲಿನ ರಾಜ್ಯ ಬಜೆಟ್‌ ಅನ್ನು ಸಿಎಂ ಸಿದ್ದರಾಮಯ್ಯ ಅವರು ಇಂದು ವಿಧಾನಸಭೆಯಲ್ಲಿ ಮಂಡಿಸಲಿದ್ದಾರೆ. ಸಿದ್ದರಾಮಯ್ಯ ಅವರಿಗೆ ಇದು ದಾಖಲೆಯ 16ನೇ ಬಜೆಟ್‌. ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್‌ ಕುಮಾರ್‌ ಸಿಂಗ್‌ ಅವರು ಸಿಎಂಗೆ ಬಜೆಟ್‌ ಪ್ರತಿ ಇರುವ ಸೂಟ್‌ ಕೇಸ್‌ ಹಸ್ತಾಂತರಿಸಿದ್ದಾರೆ.

  • ಎಲ್ಲರ ಚಿತ್ತ ಬಜೆಟ್‌ನತ್ತ – ಮುಜರಾಯಿ ಇಲಾಖೆಗೆ ಸಿಗುತ್ತಾ ಭರಪೂರ ಅನುದಾನ?

    ಎಲ್ಲರ ಚಿತ್ತ ಬಜೆಟ್‌ನತ್ತ – ಮುಜರಾಯಿ ಇಲಾಖೆಗೆ ಸಿಗುತ್ತಾ ಭರಪೂರ ಅನುದಾನ?

    ಬೆಂಗಳೂರು: ಇಂದು ಸಿಎಂ ಸಿದ್ದರಾಮಯ್ಯ (Siddaramaiah) ದಾಖಲೆಯ 16ನೇ ಬಜೆಟ್ (Karnataka Budget) ಮಂಡಿಸುತ್ತಿದ್ದು, ಎಲ್ಲರ ಚಿತ್ತ ಬಜೆಟ್‌ನತ್ತ ತಿರುಗಿದೆ.

    ಈ ಬಾರಿ ಸಿಎಂ 4 ಲಕ್ಷ ಕೋಟಿಯ ಬಜೆಟ್ ಮಂಡಿಸುವ ಸಾಧ್ಯತೆಯಿದ್ದು, ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಬಜೆಟ್‌ನಲ್ಲಿ ಮುಜರಾಯಿ ಇಲಾಖೆಗೆ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಾಹುಕಾಲ ಆರಂಭಕ್ಕೂ ಮೊದಲು ಬಜೆಟ್‌ ಮಂಡಿಸಲಿದ್ದಾರೆ ಸಿದ್ದರಾಮಯ್ಯ

    ರಾಮಲಿಂಗಾ ರೆಡ್ಡಿ ಬೇಡಿಕೆಗಳೇನು?
    ಬೆಂಗಳೂರಿನ ಕೆ.ಆರ್ ಸರ್ಕಲ್‌ನಲ್ಲಿ ನಿರ್ಮಿಸುತ್ತಿರುವ ಧಾರ್ಮಿಕ ಸೌಧ ಕಾಮಗಾರಿಗೆ 25 ಕೋಟಿ ರೂ. ಒದಗಿಸಲು ಮನವಿ ಮಾಡಲಾಗಿದೆ. ಮೆಜೆಸ್ಟಿಕ್‌ನ ಕೆಂಪೇಗೌಡ ವೃತ್ತದಲ್ಲಿ ಬಂಡಿಶೇಷಮ್ಮ ವಿದ್ಯಾರ್ಥಿ ನಿಲಯ ಹಾಗೂ ಸಂಕೀರ್ಣ ನಿರ್ಮಿಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲು ಚಿಂತಿಸಲಾಗಿದೆ. ರಾಜ್ಯದಿಂದ ವೈಷ್ಣೋದೇವಿ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಸರ್ಕಾರದಿಂದ ತಲಾ 5,000 ಸಹಾಯಧನ ಒದಗಿಸಲು 1 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಆಕ್ಸ್‌ಫರ್ಡ್‌ ವಿವಿ ಬ್ಲಾಗ್‌ನಲ್ಲಿ ಕರ್ನಾಟಕ ಮಾದರಿ ಶ್ಲಾಘನೆ – ರಾಜ್ಯಪಾಲರ ಭಾಷಣದ ಅಸಲಿಯತ್ತನ್ನು ಬಯಲು ಮಾಡಿದ ಅಶೋಕ್‌

    ಕರ್ನಾಟಕ ದೇವಾಲಯಗಳ ಅಭಿವೃದ್ಧಿ ನಿಗಮ ಸ್ಥಾಪಿಸಲು ಅನುದಾನ ಬಿಡುಗಡೆ ಮಾಡುವಂತೆ ರಾಮಲಿಂಗಾ ರೆಡ್ಡಿ ಆಗ್ರಹಿಸಿದ್ದಾರೆ. ದೇವಾಲಯ ಹಾಗೂ ಹೊರರಾಜ್ಯ ಛತ್ರಗಳಲ್ಲಿ ಲಭ್ಯವಿರುವ ಮೂಲಭೂತ ಸೌಕರ್ಯ ಒದಗಿಸಲು ಅನುದಾನ ಬಿಡುಗಡೆಗೆ ಕೋರಿಕೆ ಸಲ್ಲಿಸಿದ್ದು, ದೇವಾಲಯಗಳ ಪ್ರಸಾದವನ್ನು ಮನೆಮನೆಗೆ ಆನ್‌ಲೈನ್‌ನಲ್ಲಿ ತಲುಪಿಸುವ ಯೋಜನೆ ಮಾಡಲಾಗಿದೆ. ಮೇಲುಕೋಟೆ ಚೆಲುವ ನಾರಾಯಣಸ್ವಾಮಿ ದೇವಾಲಯದಲ್ಲಿ ಧ್ವನಿ ಹಾಗೂ ಬೆಳಕಿನ ಲೇಸರ್ ಶೋ ಹಾಗೂ ಭೂ ವರಹಾ ಯೋಜನೆಗಾಗಿ ಅಂದರೇ ದೇವಾಲಯಗಳ ಸ್ಥಿರಾಸ್ತಿ ದಾಖಲೀಕರಿಸಲು ಅನುದಾನ ಬಿಡುಗಡೆ ಮಾಡಲು ಕೋರಲಾಗಿದೆ. ಇದನ್ನೂ ಓದಿ: ಶ್ರೀಕೃಷ್ಣನ ಪೂಜಾಧಿಕಾರ ಶಿರೂರು ಮಠಕ್ಕೆ- ಅಕ್ಕಿ ಮುಹೂರ್ತದಲ್ಲಿ ಒಂದಾದ ಅಷ್ಟಮಠ

    ಇನ್ನು ಕೆಎಸ್‌ಆರ್‌ಟಿಸಿ ಸಹಯೋಗದೊಂದಿಗೆ ರಿಯಾಯಿತಿ ದರದಲ್ಲಿ ಕರ್ನಾಟಕ ಧಾರ್ಮಿಕ ಪ್ರವಾಸ ಯೋಜನೆಗೆ ಅನುದಾನದ ಅವಶ್ಯಕತೆ ಇದೆ. ರಾಜ್ಯದ ಸಿ ವರ್ಗದ ದೇವಾಲಯಗಳಿಗೆ ದಿವ್ಯಕಿರಣ, ಗುಡಿ ಸಂಪರ್ಕ ಹಾಗೂ ಗುಡಿ ಜಲ ಯೋಜನೆಗಳ ಅನುಷ್ಟಾನಕ್ಕೆ ಕೋರಿಕೆ ಸಲ್ಲಿಸಲಾಗಿದೆ. ವಾರ್ಷಿಕವಾಗಿ ಕನಿಷ್ಟ ತಸ್ತೀಕ್ ಮೊತ್ತ ಹೆಚ್ಚಿಸಲು ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬಾಗಲಕೋಟೆ ಡಿಸಿ ಕಚೇರಿ ಎದುರು ಹಾವು ಪ್ರತ್ಯಕ್ಷ – ಹೌಹಾರಿದ ನೌಕರರು

  • ಕಳೆದ 19 ತಿಂಗಳಲ್ಲಿ ಕಾನೂನು ಸುವ್ಯವಸ್ಥೆಯಲ್ಲಿ ಸಮಸ್ಯೆ ಉದ್ಭವಿಸಿಲ್ಲ – ರಾಜ್ಯಪಾಲರ ಭಾಷಣದ ಮೂಲಕ ವಿಪಕ್ಷಗಳಿಗೆ ತಿರುಗೇಟು

    ಕಳೆದ 19 ತಿಂಗಳಲ್ಲಿ ಕಾನೂನು ಸುವ್ಯವಸ್ಥೆಯಲ್ಲಿ ಸಮಸ್ಯೆ ಉದ್ಭವಿಸಿಲ್ಲ – ರಾಜ್ಯಪಾಲರ ಭಾಷಣದ ಮೂಲಕ ವಿಪಕ್ಷಗಳಿಗೆ ತಿರುಗೇಟು

    – ಈವರೆಗೆ ಗ್ಯಾರಂಟಿ ಯೋಜನೆಗಳಿಗೆ 70,000 ಕೋಟಿ ಹಣ ಬಿಡುಗಡೆ
    – 334 ಘೋಷಣೆಗಳ ಪೈಕಿ 331 ಘೋಷಣೆ ಸರ್ಕಾರಿ ಆದೇಶ ಆಗಿದೆ
    – ರಾಜ್ಯ ಸರ್ಕಾರದ ಸಾಧನೆಗಳನ್ನು ಕೊಂಡಾಡಿದ ರಾಜ್ಯಪಾಲರು

    ಬೆಂಗಳೂರು: ಕರ್ನಾಟಕ ವಿಧಾನಮಂಡಲ ಬಜೆಟ್‌ ಅಧಿವೇಶನ ಇಂದಿನಿಂದ ಆರಂಭವಾಗಿದೆ. ವಿಧಾನಸಭೆ ಮತ್ತು ಪರಿಷತ್‌ ಸದಸ್ಯರನ್ನು ಒಳಗೊಂಡ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರಾದ ಥಾವರ್‌ಚಂದ್‌ ಗೆಹ್ಲೋಟ್‌ ಭಾಷಣ ಮಾಡಿದರು.

    ಇದಕ್ಕೂ ಮುನ್ನ ವಿಧಾನಸೌಧದ ಗ್ರ್ಯಾಂಡ್‌ ಸ್ಟೆಪ್‌ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರನ್ನು ಸ್ವಾಗತಿಸಿದರು. ಈ ವೇಳೆ ಸ್ಪೀಕರ್‌ ಯು.ಟಿ ಖಾದರ್‌, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ ಉಪಸ್ಥಿತರಿದ್ದರು.

    ಅಧಿವೇಶನ ಆರಂಭದಲ್ಲಿ ರಾಜ್ಯಪಾಲರು ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳನ್ನುದ್ದೇಶಿಸಿ ಮಾತನಾಡಿದರು. ಕಳೆದ 19 ತಿಂಗಳಲ್ಲಿ ಗಂಭೀರವಾದ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳೇನು ಉದ್ಭವಿಸಿಲ್ಲ. ಪೊಲೀಸ್ ಠಾಣೆಗಳು ಜನಸ್ನೇಹಿಯಾಗಿ ಕೆಲಸ ಮಾಡುತ್ತಿವೆ ಎಂದು ಶ್ಲಾಘಿಸಿದರು.

    ಸರ್ಕಾರ ಬಂದಾಗಿನಿಂದ ಗ್ಯಾರಂಟಿ ಯೋಜನೆಗಳಿಗೆ 70,000 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ವರ್ಷಕ್ಕೆ 90,000 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗುತ್ತಿದೆ. ಸರ್ಕಾರ ಅಭಿವೃದ್ಧಿ ವೇಗ ಸದೃಢಗೊಳಿಸಿದೆ. ಆಡಳಿತ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವ ಅವಕಾಶವಾಗಿ ಬಳಕೆಗೆ ಬದ್ಧವಾಗಿದೆ ಎಂದು ವಿವರಿಸಿದರು.

    ಕಳೆದ ಬಜೆಟ್‌ನಲ್ಲಿ ಮಾಡಿದ್ದ 334 ಘೋಷಣೆಗಳ ಪೈಕಿ 331 ಘೋಷಣೆಗಳಿಗೆ ಸರ್ಕಾರಿ ಆದೇಶ ಆಗಿದೆ. ಸಾಮಾಜಿಕ ಪಿಂಚಣಿ ಯೋಜನೆ ಸೇರಿ ನೇರ ನಗದು – ಸಬ್ಸಿಡಿ ಪ್ರೋತ್ಸಾಹದಿಂದ 1.25 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಅನುಕೂಲ ಆಗಿದೆ. 13 ಸಾವಿರ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗಿದೆ. ಉನ್ನತ ಶಿಕ್ಷಣದಲ್ಲಿ 1,088 ಸಹಾಯಕ ಪ್ರಾಧ್ಯಾಪಕರ ನೇಮಕ ಮಾಡಲಾಗಿದೆ. 8,311 ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಸರ್ಕಾರದ ಸಾಧನೆಗಳನ್ನ ವಿವರಿಸಿದರು.

    5,349 ಶಾಲಾ ಕೊಠಡಿಗಳು ಪೂರ್ಣ
    ವಿವೇಕ ಯೋಜನೆ ಅಡಿ ಮತ್ತು ವಿಶೇಷ ಯೋಜನೆ ಅಡಿ 5,349 ಶಾಲಾ ಕೊಠಡಿಗಳು ಪೂರ್ಣಗೊಂಡಿವೆ. 784 ಕೊಠಡಿಗಳ ಕಾಮಗಾರಿ ಪ್ರಗತಿಯಲ್ಲಿವೆ. 522 ಕೆಪಿಎಸ್ ಶಾಲೆಗಳ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ. 1,953 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆ ಪ್ರಾರಂಭ ಮಾಡಲಾಗಿದೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಸಮಸ್ಯೆ ಇಲ್ಲ ಎಂದು ಭಾಷಣದಲ್ಲಿ ಪ್ರಸ್ತಾಪಿಸಿದರು.

    ವಿಪಕ್ಷಗಳ ಆರೋಪಕ್ಕೆ ತಿರುಗೇಟು
    ಇದೇ ವೇಳೆ ಪ್ರತಿಪಕ್ಷಗಳ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆರೋಪಕ್ಕೆ ರಾಜ್ಯಪಾಲರ ಭಾಷಣದ ಮೂಲಕ ಸರ್ಕಾರ ತಿರುಗೇಟು ನೀಡಿತು. ಕಳೆದ 19 ತಿಂಗಳಲ್ಲಿ ಗಂಭೀರವಾದ ಕಾನೂನು ಸುವ್ಯವಸ್ಥೆ ಸಮಸ್ಯೆಗಳೇನು ಉದ್ಭವಿಸಿಲ್ಲ. ಪೊಲೀಸ್ ಠಾಣೆಗಳು ಜನಸ್ನೇಹಿಯಾಗಿ ಕೆಲಸ ಮಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಇಡೀ ದೇಶದಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿವೆ. ರಾಜ್ಯ ಪೊಲೀಸ್ ಇಲಾಖೆಯು ನಿರಂತರವಾಗಿ ಜಾಗೃತಿ ಮೂಡಿಸಿ ಅಪರಾಧಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚುವ ಕೆಲಸ ಮಾಡುತ್ತಿ. ಹಾಗಾಗಿ ಈ ಪ್ರಕರಣಗಳಲ್ಲೂ ಇಳಿಕೆ ಕಾಣುತ್ತಿದೆ ಎಂದು ರಾಜ್ಯಪಾಲರು ಹೇಳಿದರು.

    ಹಾಲಿನ ಉತ್ಪಾದನೆಯಲ್ಲಿ ರಾಜ್ಯ ದಾಖಲೆ ಬರೆದಿದೆ. ದಿನಕ್ಕೆ ಕೆಎಂಎಫ್ 1 ಕೋಟಿ ಲೀಟರ್ ಹಾಲು ಸಂಗ್ರಹ ಮಾಡುತ್ತಿದ್ದು, ಇದುವರೆಗೆ ಪಶು ಪಾಲಕರಿಗೆ 1,500 ಕೋಟಿ ಪ್ರೋತ್ಸಾಹ ಧನ ನೀಡಿದೆ. ಪ್ರಸಕ್ತ ಸಾಲಿನಲ್ಲಿ 24,934 ರಾಸುಗಳಿಗೆ, 33,373 ಕುರಿ, ಮೇಕೆಗಳಿಗೆ 26.60 ಕೋಟಿ ಪ್ರೋತ್ಸಾಹ ಧನ ನೀಡಿದೆ ಎಂದರಲ್ಲದೇ ಸರ್ಕಾರ ಆರ್ಥಿಕ ಶಿಸ್ತು ಕಾಯ್ದುಕೊಂಡಿದೆ ಅಂತ ಶ್ಲಾಘಿಸಿದರು.

    ಶಕ್ತಿ ಯೋಜನೆಗೆ 8,215 ಕೋಟಿ ರೂ. ಬಿಡುಗಡೆ
    ಜನವರಿ 17ರ ವರೆಗೆ ಶಕ್ತಿ ಯೋಜನೆ ಅಡಿಯಲ್ಲಿ 376.70 ಕೋಟಿ ಮಹಿಳೆಯರು ಸಂಚಾರ ಮಾಡಿದ್ದಾರೆ. ಶಕ್ತಿ ಯೋಜನೆಗೆ ಸರ್ಕಾರದಿಂದ ಇದುವರೆಗೆ 8,215 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. 2024-25ರ ಬಜೆಟ್‌ನಲ್ಲಿ ನಮ್ಮ ಸರ್ಕಾರ ಶೇ.15.01 ರಷ್ಟು ಸಂಪತ್ತನ್ನು ಬಂಡವಾಳ ವೆಚ್ಚಗಳಿಗಾಗಿ ವಿನಿಯೋಗ ಮಾಡಲಾಗಿದೆ. ಡಿಸೆಂಬರ್ ಅಂತ್ಯದ ವರೆಗೆ 1,81,908 ಕೋಟಿ ರೂ. ರಾಜಸ್ವ ಸಂಗ್ರಹಮಾಡಿದೆ (ಕಳೆದ ವರ್ಷಕ್ಕಿಂತ 13% ಜಾಸ್ತಿ).

    ರಾಜ್ಯದ ರೈತ ಮತ್ತು ರೈತ ಉತ್ಪಾದಕರ ಸಂಸ್ಥೆಯಿಂದ ಉತ್ಪಾದನೆಯಾಗುವ ಜೇನುತುಪ್ಪಕ್ಕೆ ʻಝೇಂಕಾರ್ʼ ಹೆಸರಿನ ವಿಶೇಷ ಬ್ರ‍್ಯಾಂಡ್ ರೂಪಿಸಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗಿದೆ. ಜನವರ ಅಂತ್ಯಕ್ಕೆ 20.22 ಲಕ್ಷ ರೈತರಿಗೆ 16,942 ಕೋಟಿ ರೂ. ಬೆಳೆ ಸಾಲ ಮತ್ತು 46,000 ರೈತರಿಗೆ 1,442 ಕೋಟಿ ರೂ. ಮಧ್ಯಮ, ದೀರ್ಘಾವಧಿಯ ಕೃಷಿ ಸಾಲ ವಿತರಣೆ ಮಾಡಲಾಗಿದೆ. ಸಹಕಾರ ಸಂಘಗಳಿಗೆ ಬಡ್ಡಿ ಸಹಾಯ ಧನ ನೀಡಲು 1,451 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

  • ಮಾರ್ಚ್ 7ಕ್ಕೆ ರಾಜ್ಯ ಬಜೆಟ್ ಮಂಡನೆ?

    ಮಾರ್ಚ್ 7ಕ್ಕೆ ರಾಜ್ಯ ಬಜೆಟ್ ಮಂಡನೆ?

    ಬೆಂಗಳೂರು: ಮಾರ್ಚ್ 7 ರಂದು ರಾಜ್ಯ ಬಜೆಟ್ (Budget) ಮಂಡನೆಯಾಗುವ ಸಾಧ್ಯತೆ ಇದೆ.

    ಇದೇ ಗುರುವಾರದಿಂದ (ಫೆ.6) ಸಿಎಂ ಸಿದ್ದರಾಮಯ್ಯ ಬಜೆಟ್ ಸಿದ್ಧತೆ ಆರಂಭಿಸಲಿದ್ದಾರೆ. ಫೆಬ್ರವರಿ 6ರಿಂದ 14ರ ತನಕ ಬಜೆಟ್ ಪೂರ್ವಭಾವಿ ಚರ್ಚೆ ನಿಗದಿಯಾಗಿದ್ದು, ಶಕ್ತಿ ಭವನದಲ್ಲಿ ವಿವಿಧ ಇಲಾಖೆಗಳ ಬೇಡಿಕೆಗಳ ಕುರಿತ ಬಜೆಟ್ ಸಿದ್ಧತಾ ಸಭೆ ನಡೆಯಲಿದೆ.

    ಮಾರ್ಚ್ ಮೊದಲ ವಾರದಲ್ಲಿ ಜಂಟಿ ಅಧಿವೇಶನ ನಡೆಸಲು ಸರ್ಕಾರದ ಸಿದ್ಧತೆ ನಡೆಸಿದೆ. ಮಾರ್ಚ್ 3ರಂದು ರಾಜ್ಯಪಾಲರು ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಸಾಧ್ಯತೆ ಇದೆ. ಮುಂದಿನ ಕ್ಯಾಬಿನೆಟ್ ನಲ್ಲಿ ಬಜೆಟ್ ದಿನಾಂಕ, ಜಂಟಿ ಅಧಿವೇಶನ ದಿನಾಂಕ ಅಂತಿಮಗೊಳಿಸಲಿರುವ ಸರ್ಕಾರ ಅಧಿಕೃತ ಘೋಷಣೆ ಮಾಡಲಿದೆ.

    ಎರಡು ದಿನಗಳ ಹಿಂದಷ್ಟೇ ಮಂಡಿ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದರು. ಅದರಂತೆ ಎರಡು ದಿನ ಸಿಎಂ ಅವರ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿತ್ತು. ಸದ್ಯ ಸಿಎಂ ವಿಶ್ರಾಂತಿಯಲ್ಲಿದ್ದಾರೆ.

  • ಸಿಎಂ ಸಿದ್ದರಾಮಯ್ಯನವರ ಬಜೆಟ್‌ನಲ್ಲಿ ಬೆಳಗಾವಿಗೆ ಸಿಕ್ಕಿದ್ದೇನು?

    ಸಿಎಂ ಸಿದ್ದರಾಮಯ್ಯನವರ ಬಜೆಟ್‌ನಲ್ಲಿ ಬೆಳಗಾವಿಗೆ ಸಿಕ್ಕಿದ್ದೇನು?

    ಬೆಳಗಾವಿ: ಇಂದು ಸಿಎಂ ಸಿದ್ದರಾಮಯ್ಯನವರು‌ (Siddaramaiah) ಮಂಡಿಸಿರುವ ಬಜೆಟ್ ನಲ್ಲಿ ಬೆಳಗಾವಿ ಜಿಲ್ಲೆಯ ನಿರೀಕ್ಷೆಗೆ ತಕ್ಕಂತೆ ಮಹತ್ವ ಸಿಕ್ಕಿಲ್ಲ.

    ಅಥಣಿ-ಕೊಟ್ಟಲಗಿ-ಅಮ್ಮಾಜೇಶ್ವರಿ, ಶ್ರೀ ಚನ್ನವೃಷಭೇಂದ್ರ, ಮಹಾಲಕ್ಷ್ಮಿ, ಸತ್ತಿಗೇರಿ, ಮಾರ್ಕಂಡೇಯ, ಬೈಲಹೊಂಗಲ ವಿಧಾನಸಭಾ ಕ್ಷೇತ್ರದ ಹಳೆಯ ಏತ ನೀರಾವರಿ ಯೋಜನೆಗಳ ಪುನಶ್ಚೇತನ ಮಾಡುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ‌

    ಬೆಳಗಾವಿ ನಗರ ಪರಿಮಿತಿಯಲ್ಲಿ ವಾಹನ ದಟ್ಟಣೆ ಹಾಗೂ ಸಂಚಾರ ದಟ್ಟಣೆ ನಿವಾರಿಸಲು 450 ಕೋಟಿ ರೂ. ವೆಚ್ಚದಲ್ಲಿ 4.50 ಕಿ.ಮೀ. ಉದ್ದದ ಮೇಲ್ಸೇತುವೆ (Elevated Corridor) ನಿರ್ಮಾಣ ಕಾಮಗಾರಿಯನ್ನು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ನಿರ್ಮಾಣ. ಗೋಕಾಕ್ ಜಲಪಾತವನ್ನು ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿ. ಶ್ರೀ ಕ್ಷೇತ್ರ ರೇಣುಕಾ ಯಲ್ಲಮ್ಮನ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಸಂರಕ್ಷಿಸಿ ಅಭಿವೃದ್ಧಿಗೊಳಿಸಲು ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯನ್ನು ರಚಿಸಿ ಅಧಿಸೂಚನೆ ಹೊರಡಿಸಲಾಗಿದೆ.

    ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924 ರಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನವು ಈ ವರ್ಷ ಶತಮಾನದ ಮೈಲಿಗಲ್ಲನ್ನು ಪೂರ್ಣಗೊಳಿಸುತ್ತಿದೆ. ಮಹಾತ್ಮಾ ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದ ಏಕೈಕ ಅಧಿವೇಶನ ಇದಾಗಿದೆ. ಈ ಅಧಿವೇಶನದ ಕೊಡುಗೆಯನ್ನು ಸ್ಮರಿಸಲು 2 ಕೋಟಿ ರೂ. ವೆಚ್ಚದಲ್ಲಿ ಬೆಳಗಾವಿಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುವುದು. ಅಲ್ಲದೇ ಮಹಾತ್ಮಾ ಗಾಂಧೀಜಿಯವರು ಕರ್ನಾಟಕದಲ್ಲಿ ಭೇಟಿ ನೀಡಿದ ಸ್ಥಳಗಳಲ್ಲಿ ಸ್ಮರಣಾರ್ಥ ಫಲಕಗಳನ್ನು ಅಳವಡಿಸುವ ಬಗ್ಗೆ ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇದನ್ನೂ ಓದಿ: ಸಿಎಂಗೆ ಗೌರವ ಕೊಡುವುದು ನಮ್ಮ ಜವಾಬ್ದಾರಿ- ಅನಂತ್ ಕುಮಾರ್ ಹೆಗಡೆಗೆ ಹೈಕೋರ್ಟ್ ತರಾಟೆ

  • Karnataka Budget 2024: ಸರ್ಕಾರಕ್ಕೆ 1 ರೂಪಾಯಿ ಬಂದಿದ್ದು ಎಲ್ಲಿಂದ? 1 ರೂ. ಹೋಗಿದ್ದು ಎಲ್ಲಿಗೆ?

    Karnataka Budget 2024: ಸರ್ಕಾರಕ್ಕೆ 1 ರೂಪಾಯಿ ಬಂದಿದ್ದು ಎಲ್ಲಿಂದ? 1 ರೂ. ಹೋಗಿದ್ದು ಎಲ್ಲಿಗೆ?

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದು 15 ಬಾರಿ ಬಜೆಟ್‌ ಮಂಡಿಸಿ ರಾಜ್ಯ ರಾಜಕೀಯದ ಇತಿಹಾಸದಲ್ಲೇ ದಾಖಲೆ ಬರೆದಿದ್ದಾರೆ. ಒಟ್ಟು 3,71,383 ಕೋಟಿ ರೂ. ಗಾತ್ರದ ಬಜೆಟ್‌ ಅನ್ನು ಶುಕ್ರವಾರ ಮಂಡಿಸಿದ್ದಾರೆ. ಇದನ್ನೂ ಓದಿ: 7 ವರ್ಷದಲ್ಲಿ ರಾಜ್ಯಕ್ಕೆ 59,274 ಕೋಟಿ ಜಿಎಸ್‌ಟಿ ನಷ್ಟ: ಬಜೆಟ್‌ನಲ್ಲಿ ಕೇಂದ್ರಕ್ಕೆ ತಿವಿದ ಸಿದ್ದರಾಮಯ್ಯ

    ಬಜೆಟ್‌ ಗಾತ್ರದ ಪೈಕಿ ಒಟ್ಟು ಸ್ವೀಕೃತಿ 3,68,674 ಕೋಟಿ ರೂ., ರಾಜಸ್ವ ಸ್ವೀಕೃತಿ 2,63,178 ಕೋಟಿ ರೂ.ಗಳಿದ್ದು, ಸರ್ಕಾರಕ್ಕೆ 1 ರೂಪಾಯಿ ಬಂದಿದ್ದು ಎಲ್ಲಿಂದ ಮತ್ತು 1 ರೂ. ಹೋಗಿದ್ದು ಎಲ್ಲಿಗೆ ಎನ್ನುವ ವಿವರ ಇಲ್ಲಿದೆ. ಇದನ್ನೂ ಓದಿ: ಮೈಸೂರು ಏರ್‌ಪೋರ್ಟ್‌ ರನ್‌ವೇ ವಿಸ್ತರಣೆಗೆ ಅನುದಾನ ಘೋಷಣೆ – ತವರು ಜಿಲ್ಲೆಗೆ ಸಿಎಂ ಕೊಡುಗೆ ಏನು?

    1 ರೂಪಾಯಿ ಹೋಗಿದ್ದು ಎಲ್ಲಿಗೆ?
    (ಪೈಸೆಗಳಲ್ಲಿ ನೀಡಲಾಗಿದೆ)

    * ನೀರು ಪೂರೈಕೆ ಮತ್ತು ನೈರ್ಮಲ್ಯ – 3
    * ಸಾಲ ತೀರಿಕೆ – 18
    * ಇತರ ಸಾಮಾನ್ಯ ಸೇವೆಗಳು – 17
    * ಸಮಾಜ ಕಲ್ಯಾಣ – 15
    * ಇತರ ಆರ್ಥಿಕ ಸೇವೆಗಳು – 15
    * ಕೃಷಿ ಮತ್ತು ನೀರಾವರಿ ಮತ್ತು ಗ್ರಾಮೀಣಾಭಿವೃದ್ಧಿ – 14
    * ಶಿಕ್ಷಣ – 11
    * ಆರೋಗ್ಯ – 4
    * ಇತರ ಸಾಮಾಜಿಕ ಸೇವೆಗಳು – 3

    1 ರೂಪಾಯಿ ಬಂದಿದ್ದು ಎಲ್ಲಿಂದ?
    (ಪೈಸೆಗಳಲ್ಲಿ ನೀಡಲಾಗಿದೆ)

    * ರಾಜ್ಯದ ತೆರಿಗೆಯೇತರ ರಾಜಸ್ವದಿಂದ – 4
    * ರಾಜ್ಯ ತೆರಿಗೆ ಆದಾಯದಿಂದ – 52
    * ಸಾಲದಿಂದ – 28
    * ಕೇಂದ್ರ ತೆರಿಗೆ ಪಾಲಿನಿಂದ – 12
    * ಕೇಂದ್ರ ಸರ್ಕಾರದ ಸಹಾಯಾನುಧಾನ – 4

    ರಾಜ್ಯದ ಸ್ವಂತ ತೆರಿಗೆಗಳ ವಿವರ (ಕೋಟಿ ರೂ.ಗಳಲ್ಲಿ)
    * ಮೋಟಾರು ವಾಹನ ತೆರಿಗೆ – 13,000 (7%)
    * ನೋಂದಣಿ ಮತ್ತು ಮುದ್ರಾಂಕ – 26,000 (14%)
    * ರಾಜ್ಯ ಅಬಕಾರಿ – 38,525 (20%)
    * ವಾಣಿಜ್ಯ ತೆರಿಗೆಗಳು – 1,10,000 (58%)
    * ಇತರೇ – 2,368 (1%)

  • Karnataka Budget: ರಾಜ್ಯದ ಗ್ರಾಮೀಣ ರಸ್ತೆಗಳಿನ್ನು ಪ್ರಗತಿ ಪಥ, ಕಲ್ಯಾಣ ಪಥ.!

    Karnataka Budget: ರಾಜ್ಯದ ಗ್ರಾಮೀಣ ರಸ್ತೆಗಳಿನ್ನು ಪ್ರಗತಿ ಪಥ, ಕಲ್ಯಾಣ ಪಥ.!

    ಬೆಂಗಳೂರು: ರಾಜ್ಯದ ಗ್ರಾಮೀಣ ಭಾಗದ ರಸ್ತೆಗಳಿನ್ನು ಪ್ರಗತಿ ಪಥ ಹಾಗೂ ಕಲ್ಯಾಣ ಪಥ ಎಂಬ ಹೆಸರಿನಲ್ಲಿ ಕರೆಸಿಕೊಳ್ಳಲಿದೆ. ಸಿಎಂ ಸಿದ್ದರಾಮಯ್ಯ ಅವರು ಇಂದು ವಿಧಾನಸಭೆಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಈ ಘೋಷಣೆಯನ್ನು ಮಾಡಿದ್ದಾರೆ.

    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಡಿ ಮಾಡಿದ ಬಜೆಟ್‌ ಭಾಷಣದಲ್ಲಿ, ಗ್ರಾಮೀಣ ಭಾಗದ ರಸ್ತೆ ಸಂಪರ್ಕ ಜಾಲವನ್ನು ವ್ಯವಸ್ಥಿತವಾಗಿ ಮತ್ತು ಗುಣಾತ್ಮಕವಾಗಿ ಅಭಿವೃದ್ಧಿಪಡಿಸಲು ʼಪ್ರಗತಿ ಪಥʼ ಯೋಜನೆಯನ್ನು ಬಾಹ್ಯ ನೆರವಿನಿಂದ ಪ್ರಾರಂಭಿಸುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರು BIECಯಿಂದ ತುಮಕೂರಿಗೆ, ಏರ್‌ಪೋರ್ಟಿಂದ  ದೇವನಹಳ್ಳಿಗೆ ಮೆಟ್ರೋ ರೈಲು!

    ಏನಿದು ಪ್ರಗತಿ ಪಥ?
    ರಾಜ್ಯದ 189 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 50 ಕಿಲೋಮೀಟರ್‌ ರಸ್ತೆಯಂತೆ ರಸ್ತೆಗಳ ಅಭಿವೃದ್ಧಿ. ಒಟ್ಟು 9,450 ಕಿಲೋ ಮೀಟರ್‌ ಉದ್ದದ ರಸ್ತೆ ಸಂಪರ್ಕವನ್ನು 5,200 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಮಾಡುವ ಯೋಜನೆಯೇ ಪ್ರಗತಿ ಪಥ. ಇದನ್ನೂ ಓದಿ: ಗ್ಯಾರಂಟಿ ಭಾರದ ನಡುವೆ ಅನುದಾನ ಹಂಚಿಕೆ – ಯಾವ ಇಲಾಖೆಗೆ ಎಷ್ಟು?

    ಏನಿದು ಕಲ್ಯಾಣ ಪಥ?
    ಹೆಸರೇ ಸೂಚಿಸುವಂತೆ ಕಲ್ಯಾಣ ಕರ್ನಾಟಕ ಭಾಗದ ಗ್ರಾಮೀಣ ರಸ್ತೆಗಳ ಅಭಿವೃದ್ಧಿ. ರಾಜ್ಯದ 38 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್‌ ಮಾದರಿಯಲ್ಲಿ ಒಟ್ಟು 1,150 ಕಿಲೋ ಮೀಟರ್‌ ರಸ್ತೆ ಅಭಿವೃದ್ಧಿ. ಒಟ್ಟು 1,000 ಕೋಟಿ ವೆಚ್ಚದಲ್ಲಿ ಕಲ್ಯಾಣಪಥ ನಿರ್ಮಾಣವಾಗಲಿದೆ. ಇದನ್ನೂ ಓದಿ: ಬೆಂಗಳೂರು BIECಯಿಂದ ತುಮಕೂರಿಗೆ, ಏರ್‌ಪೋರ್ಟಿಂದ  ದೇವನಹಳ್ಳಿಗೆ ಮೆಟ್ರೋ ರೈಲು!