Tag: karnataka bhavana

  • ಡೆಲ್ಲಿಗೆ ಸಿಎಂ, ಡಿಸಿಎಂ: ಮಹತ್ವದ 2 ಕೇಸ್‌ ಬಗ್ಗೆ ರಿಪೋರ್ಟ್‌ ಸಲ್ಲಿಕೆ ಸಾಧ್ಯತೆ

    ಡೆಲ್ಲಿಗೆ ಸಿಎಂ, ಡಿಸಿಎಂ: ಮಹತ್ವದ 2 ಕೇಸ್‌ ಬಗ್ಗೆ ರಿಪೋರ್ಟ್‌ ಸಲ್ಲಿಕೆ ಸಾಧ್ಯತೆ

    ಬೆಂಗಳೂರು: ಸಿಎಂ, ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಸೇರಿದಂತೆ ಸಿಎಂ ಆಪ್ತ ಕೆಲ ಸಚಿವರು ನಾಳೆ ಡೆಲ್ಲಿಗೆ ಭೇಟಿ ನೀಡಲಿದ್ದಾರೆ. ಕರ್ನಾಟಕ ಭವನ (Karnataka Bhavana) ಉದ್ಘಾಟನೆ ನೆಪದಲ್ಲಿ ತೆರಳುತ್ತಿದ್ದು, ಉಳಿದೆಲ್ಲವೂ ರಾಜಕೀಯನಾ ಎಂಬ ಪ್ರಶ್ನೆ ಎದ್ದಿದೆ.

    ಅಂದಹಾಗೆ ಎರಡೂವರೆ ತಿಂಗಳ ಬಳಿಕ ಡೆಲ್ಲಿ ಪ್ರವಾಸ ಕೈಗೊಳ್ತಿರುವ ಸಿಎಂ ಸಿದ್ದರಾಮಯ್ಯ (Siddaramaiah) ಕರ್ನಾಟಕದಲ್ಲಿ ಸರ್ಕಾರ, ಸಂಘಟನೆಯಲ್ಲಾದ ಬೆಳವಣಿಗೆಗಳ ಬಗ್ಗೆ ರಿಪೋರ್ಟ್ ನೀಡುವ ಸಾಧ್ಯತೆ ಇದೆ. ಹೈಕಮಾಂಡ್‌ಗೆ ಎರಡೂವರೆ ತಿಂಗಳ ರಿಪೋರ್ಟ್ ಕೊಡಲಿರುವ ಸಿದ್ದರಾಮಯ್ಯ, ಹೈಕಮಾಂಡ್ ಕೇಳಬಹುದಾದ ಎಲ್ಲದಕ್ಕೂ ಉತ್ತರ ಸಿದ್ಧ ಮಾಡಿದ್ದಾರೆ ಎಂಬುದು ಮೂಲಗಳ ಮಾಹಿತಿ. ಇದನ್ನೂ ಓದಿ: ಕೃಷ್ಣಾ, ಭೀಮಾ ನದಿಗೆ ನೀರು ಬಿಡುವಂತೆ ಮನವಿ: ಫಡ್ನವೀಸ್‌ಗೆ ಸಿಎಂ ಪತ್ರ

     

    ಸರ್ಕಾರದ ಮುಂದಿನ ರೋಡ್‌ ಮ್ಯಾಪ್‌ ಕೂಡ ವರದಿಯಲ್ಲಿ ಇರುತ್ತೆ ಎನ್ನಲಾಗಿದೆ. ಪ್ರಮುಖವಾಗಿ ರನ್ಯಾರಾವ್ ಕೇಸ್, ಹನಿಟ್ರ್ಯಾಪ್ ಯತ್ನದ ವಿಚಾರಗಳಿಗೆ ಸಂಬಂಧಿಸಿದ ವರದಿ ನೀಡುವ ಸಾಧ್ಯತೆಯಿದೆ.

    ಪಕ್ಷದೊಳಗೆ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆಯೂ ರಿಪೋರ್ಟ್ ನೀಡಲಿದ್ದು, ಸಿಎಂ ಎರಡೂವರೆ ತಿಂಗಳ ವರದಿಯಿಂದ ಏನು ಆಗುತ್ತೆ? ಸರ್ಕಾರ ಅಥವಾ ಪಕ್ಷದ ಮಟ್ಟದಲ್ಲಿ ಏನಾದ್ರೂ ಬದಲಾವಣೆಗಳಿಗೆ ಪೂರಕ ಆಗುತ್ತಾ ಎಂಬ ಕುತೂಹಲ ಮನೆ ಮಾಡಿದೆ.

  • ನಾಳೆ ದೆಹಲಿಯಲ್ಲಿ ನೂತನ ಕರ್ನಾಟಕ ಭವನ ಉದ್ಘಾಟನೆ – 138 ಕೋಟಿ ವೆಚ್ಚದಲ್ಲಿ ನಿರ್ಮಾಣ

    ನಾಳೆ ದೆಹಲಿಯಲ್ಲಿ ನೂತನ ಕರ್ನಾಟಕ ಭವನ ಉದ್ಘಾಟನೆ – 138 ಕೋಟಿ ವೆಚ್ಚದಲ್ಲಿ ನಿರ್ಮಾಣ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ(Delhi) ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ನೂತನ ಕರ್ನಾಟಕ ಭವನ(ಕಾವೇರಿ)  ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಇದರ ಉದ್ಘಾಟನಾ ಸಮಾರಂಭವು ಬುಧವಾರ ಸಂಜೆ 6:30ಕ್ಕೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಅವರು ಈ ಭವ್ಯ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.

    ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಘನ ಉಪಸ್ಥಿತಿ ವಹಿಸಿದ್ದಲಿದ್ದು, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಿಸಿಎಂ ಡಿ.ಕೆ.ಶಿವಕುಮಾರ್, ಗೌರವ ಆಹ್ವಾನಿತರಾಗಿ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣ ಸ್ವಾಮಿ ಅವರನ್ನ ಆಹ್ವಾನಿಸಲಾಗಿದೆ. ಇದನ್ನೂ ಓದಿ: ಜಾರ್ಖಂಡ್‌ | ಗೂಡ್ಸ್ ರೈಲುಗಳ ನಡುವೆ ಡಿಕ್ಕಿ – ಇಬ್ಬರು ಲೋಕೋ ಪೈಲಟ್‌ ಸೇರಿ 3 ಸಾವು

    ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ನಿರ್ಮಲಾ ಸೀತರಾಮನ್ ಅವರಿನ್ನೂ ಆಹ್ವಾನಿಸಿದೆ. ದೆಹಲಿ ವಿಶೇಷ ಪ್ರತಿನಿಧಿಗಳಾದ ಟಿ.ಬಿ.ಜಯಚಂದ್ರ, ಪ್ರಕಾಶ್ ಹುಕ್ಕೇರಿ ಕೂಡಾ ಭಾಗಿಯಾಗಲಿದ್ದಾರೆ.

    ಕರ್ನಾಟಕ ಭವನದ ವಿಶೇಷತೆಗಳು

    ದೆಹಲಿಯ ಪ್ರತಿಷ್ಠಿತ ಪ್ರದೇಶವಾದ ಚಾಣಕ್ಯಪುರಿಯಲ್ಲಿ (Chanakyapuri) ನಿರ್ಮಾಣವಾಗಿರುವ ಈ ಕಟ್ಟಡವು 3,532 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಒಟ್ಟು 12,212 ಚದರ ಮೀಟರ್ (1,31,450 ಚದರ ಅಡಿ) ನಿರ್ಮಾಣ ಪ್ರದೇಶವನ್ನು ಒಳಗೊಂಡಿರುವ ಈ ಭವನವು 2ಬಿ+ಜಿ+6ಯು ರಚನೆಯಲ್ಲಿ 9 ಅಂತಸ್ತುಗಳನ್ನು ಹೊಂದಿದೆ.

    ಈ ಕಟ್ಟಡದಲ್ಲಿ ಒಟ್ಟು 52 ಕೊಠಡಿಗಳಿದ್ದು, ಅದರಲ್ಲಿ 2 ವಿವಿಐಪಿ ಸೂಟ್‌ಗಳು, 32 ಸೂಟ್ ರೂಂಗಳು ಮತ್ತು 18 ಸಿಂಗಲ್ ರೂಂಗಳು ಸೇರಿವೆ. ಇದರ ಜೊತೆಗೆ 86 ಶೌಚಾಲಯಗಳು ಮತ್ತು ಬೇಸ್‌ಮೆಂಟ್‌ನಲ್ಲಿ 10 ಕಾರ್ ಪಾರ್ಕಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಯೋಜನೆಯು 2018ರಲ್ಲಿ ಆರಂಭವಾಗಿದ್ದು, ಇದಕ್ಕಾಗಿ 81.00 ಕೋಟಿ ರೂ. ಮೀಸಲಿಟ್ಟಿತ್ತು. ಆದರೆ ಕಾಮಗಾರಿ ಅಂತ್ಯದ ವೇಳೆಗೆ ಯೋಜನೆಯ ವೆಚ್ಚ 138 ಕೋಟಿ ರೂ. ತಲುಪಿದೆ. ಇದನ್ನೂ ಓದಿ: ಇಂದಿನಿಂದ ಹಾಲಿನ ದರ ಏರಿಕೆ – ಬೆಳಗ್ಗೆ ಸಪ್ಲೈ ಆದ ಹಾಲಿನಲ್ಲಿ ಪರಿಷ್ಕೃತ ದರ ಜಾರಿ ಆಗಿಲ್ಲ

    ಕಟ್ಟಡದ ಒಟ್ಟು 10 ಮಹಡಿಗಳಲ್ಲಿ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ:

    ಕೆಳಗಿನ ಬೇಸ್‌ಮೆಂಟ್ (2335 ಚ.ಮೀ.): ಲಿಫ್ಟ್ ಲಾಬಿ, ಸ್ಟೇರ್‌ಕೇಸ್, ಡ್ರೈವರ್ ಲಾಂಡ್ರಿ, ಸೆಕ್ಯುರಿಟಿ ರೂಂ, ಬಿಎಂಎಸ್ ರೂಂ, 50 ಕಾರ್ ಪಾರ್ಕಿಂಗ್ ಸ್ಥಳವಿದೆ.

    ಮೇಲಿನ ಬೇಸ್‌ಮೆಂಟ್ (2335 ಚ.ಮೀ.): ಸ್ಟೇರ್‌ಕೇಸ್, ಸ್ಟಾಫ್ ರೂಂ, 24 ಕಾರ್ ಪಾರ್ಕಿಂಗ್ ಸ್ಥಳ, ಸ್ಟಾಫ್ ರೆಸ್ಟ್ ರೂಂ ಇದೆ. ಇದನ್ನೂ ಓದಿ: ಮತ್ತೆ ಪ್ರಭಾಸ್‌ಗೆ ಜೊತೆಯಾದ ಬಾಲಿವುಡ್ ಬ್ಯೂಟಿ ದಿಶಾ ಪಟಾನಿ

    ಗ್ರೌಂಡ್ ಫ್ಲೋರ್ (1050 ಚ.ಮೀ.): ರಿಸೆಪ್ಷನ್, ವೇಟಿಂಗ್ ರೂಂ, ಬೋರ್ಡ್ ರೂಂ, ಪ್ಯಾಂಟ್ರಿ, ಮೀಡಿಯಾ ಬ್ರೀಫಿಂಗ್, ವಿಐಪಿ ಲಾಂಜ್, ಟಾಯ್ಲೆಟ್, ಫೈರ್ ಕಂಟ್ರೋಲ್ ರೂಂ, ಟೂರಿಸಂ ಇನ್ಫೊ ಡೆಸ್ಕ್, ಸೆಕ್ಯುರಿಟಿ ರೂಂ ಇದೆ.

    ಮೊದಲನೇ ಮಹಡಿ (1005 ಚ.ಮೀ.): ಆರ್‌ಸಿ ಚೇಂಬರ್, ಡಿಆರ್‌ಸಿ, ಪಿಎ ರೂಂ, ಸ್ಟಾಫ್ ರೂಂ, ಆಡಳಿತಾತ್ಮಕ ದಾಖಲೆ ಕೊಠಡಿ, ಸರ್ವರ್ ರೂಂ, ಪ್ಯಾಂಟ್ರಿ, ಲಿಯಾಸನ್ ಆಫೀಸರ್ ರೂಂ, ಕಾನ್ಫರೆನ್ಸ್ ರೂಂ ಇದೆ.

    ಎರಡನೇ ಮಹಡಿ (1050 ಚ.ಮೀ.): 3 ಸೂಟ್ ರೂಂಗಳು, 4 ಸಿಂಗಲ್ ರೂಂಗಳು, ಎಡ್ ಸ್ಪೆಷಲ್ ರಿಪ್ರೆಸೆಂಟೇಟಿವ್, ಪಿಎ ರೂಂ, ಲೀಗಲ್ ರೆಕಾರ್ಡ್ ರೂಂ ಇದೆ.

    ಮೂರನೇ ಮಹಡಿ (1050 ಚ.ಮೀ.): 8 ಸೂಟ್ ರೂಂಗಳು, 3 ಸಿಂಗಲ್ ರೂಂಗಳು, ಜಿಮ್, ಪ್ಯಾಂಟ್ರಿ. ನಾಲ್ಕನೇ ಮಹಡಿ (1050 ಚ.ಮೀ.): 9 ಸೂಟ್ ರೂಂಗಳು, ಪ್ಯಾಂಟ್ರಿ, ಹೌಸ್‌ಕೀಪಿಂಗ್ ಇದೆ. ಇದನ್ನೂ ಓದಿ: ಇಂದಿನಿಂದ ವಾಹನ ಸವಾರರಿಗೆ ಟೋಲ್ ಬಿಸಿ – ಶೇ.5ರಷ್ಟು ದರ ಏರಿಕೆ

    ಐದನೇ ಮಹಡಿ (1050 ಚ.ಮೀ.): 6 ಸೂಟ್ ರೂಂಗಳು, 4 ಸಿಂಗಲ್ ರೂಂಗಳು, ಪ್ಯಾಂಟ್ರಿ, ಹೌಸ್‌ಕೀಪಿಂಗ್ ಇದೆ.

    ಆರನೇ ಮಹಡಿ (1050 ಚ.ಮೀ.): 6 ಸೂಟ್ ರೂಂಗಳು, 3 ಸಿಂಗಲ್ ರೂಂಗಳು, ಪ್ಯಾಂಟ್ರಿ, ಹೌಸ್‌ಕೀಪಿಂಗ್ ಇದೆ.

    ಏಳನೇ ಮಹಡಿ (237.00 ಚ.ಮೀ.): ಟೆರೇಸ್, ಸ್ಟೇರ್‌ಕೇಸ್ ರೂಂ, ಸೌರ ಶಕ್ತಿ ಘಟಕಗಳನ್ನು ಹೊಂದಿದೆ. ಇದನ್ನೂ ಓದಿ: ಹೊಸತೊಡಕು ಗಮ್ಮತ್ತು – ಕೆಜಿ ಮಟನ್‌ಗೆ 900 ರೂ.

    ಕರ್ನಾಟಕ ಭವನ (ಕಾವೇರಿ) ದೆಹಲಿಗೆ ಭೇಟಿ ನೀಡುವ ಕರ್ನಾಟಕದ ಸರ್ಕಾರಿ ಅಧಿಕಾರಿಗಳು, ಗಣ್ಯರು ಮತ್ತು ಸಾರ್ವಜನಿಕರಿಗೆ ಆರಾಮದಾಯಕ ಆತಿಥ್ಯ ಸೌಲಭ್ಯವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಈ ಭವನವು ಕರ್ನಾಟಕದ ಸಂಸ್ಕೃತಿ, ಪರಂಪರೆ ಮತ್ತು ಆತಿಥ್ಯವನ್ನು ಪ್ರತಿಬಿಂಬಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇದರ ಜೊತೆಗೆ, ದೆಹಲಿಯಲ್ಲಿ ಕರ್ನಾಟಕ ಸರ್ಕಾರದ ಕಾರ್ಯಕ್ರಮಗಳು, ಸಭೆ-ಸಮಾರಂಭಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಇದು ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.

  • ದೆಹಲಿಯ ಕರ್ನಾಟಕ ಭವನದ ನೌಕರನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

    ದೆಹಲಿಯ ಕರ್ನಾಟಕ ಭವನದ ನೌಕರನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

    ಬಳ್ಳಾರಿ: ದೆಹಲಿಯ ಕರ್ನಾಟಕ ಭವನದ (Delhi Karnataka Bhavan) ನೌಕರನ ಶವ ನೇಣು ಬಿಗಿದ ಸ್ಥಿತಿಯಲ್ಲಿ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಖಾನಾ ಹೊಸಳ್ಳಿ ಹೊರವಲಯದಲ್ಲಿ ಪತ್ತೆಯಾಗಿದೆ.

    ಎಂ ಬಿ ಅಯ್ಯನಹಳ್ಳಿ ಗ್ರಾಮದ ಮಾರುತಿ(35) ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಾರುತಿ ದೆಹಲಿಯ ಕರ್ನಾಟಕ ಭವನದಲ್ಲಿ ಅಡುಗೆ ವಿಭಾಗದಲ್ಲಿ (Kitchen Department) ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ದರ್ಶನ್ ಖೈದಿ ನಂಬರಿನಲ್ಲಿ ಮಗುವಿನ ಫೋಟೋ ಶೂಟ್‌ ಮಾಡಿದ ಪೋಷಕರಿಗೆ ಸಂಕಷ್ಟ

     

    ಪತ್ನಿ ಹಾಗೂ ಮಕ್ಕಳನ್ನು ಪತ್ನಿಯ ತವರು ಮನೆಗೆ ಬಿಟ್ಟು ತಂದೆ, ತಾಯಿಯನ್ನು ನೋಡಿಕೊಂಡು ಬರುವೆ ಎಂದು ಮಾರುತಿ ಮೂರು ದಿನಗಳ ಹಿಂದೆ ದೆಹಲಿಯಿಂದ ಸ್ವಗ್ರಾಮ ಅಯ್ಯನಹಳ್ಳಿಗೆ ಬಂದಿದ್ದರು.

    ಮಂಗಳವಾರ ಸಂಜೆ ಕಾನಾಹೊಸಳ್ಳಿ ಹೊರವಲಯದ ಹುಣಸೆ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಕಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ವರದಿ ಬರಬೇಕಿದೆ.

     

  • ಜಮ್ಮು- ಕಾಶ್ಮೀರದಲ್ಲಿ ಕರ್ನಾಟಕ ಭವನ?

    ಜಮ್ಮು- ಕಾಶ್ಮೀರದಲ್ಲಿ ಕರ್ನಾಟಕ ಭವನ?

    ನವದೆಹಲಿ: ಕೇಂದ್ರ ಸರ್ಕಾರ ಆರ್ಟಿಕಲ್ 370 ರದ್ದು ಮಾಡಿದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಕರ್ನಾಟಕ ಭವನ ನಿರ್ಮಿಸಲು ರಾಜ್ಯ ಸರ್ಕಾರ ಉತ್ಸಾಹ ತೋರಿದೆ. ಈ ಸಂಬಂಧ ಜಮ್ಮು-ಕಾಶ್ಮೀರ ಅಧಿಕಾರಿಗಳ ಜೊತೆ ರಾಜ್ಯ ಸರ್ಕಾರದ ಅಧಿಕಾರಿಗಳು ನಿರಂತರ ಮಾತುಕತೆ ನಡೆಯುತ್ತಿದ್ದಾರೆ.

    ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಕೇಂದ್ರವು ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಕೂಡಲೇ ರಾಜ್ಯ ಸರ್ಕಾರವು ಜಮ್ಮು-ಕಾಶ್ಮೀರದಲ್ಲಿ ಐಷಾರಾಮಿ ಹೋಟೆಲ್ ನಿರ್ಮಾಣ ಮಾಡಲು ಪ್ರಸ್ತಾಪಿಸಿತ್ತು. ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅಂದಿನ ಜಮ್ಮು-ಕಾಶ್ಮೀರ ಗವರ್ನರ್ ಸತ್ಯಪಾಲ್ ಮಲಿಕ್ ಅವರಿಗೆ ಪತ್ರ ಬರೆದು ರಾಜ್ಯ ಸರ್ಕಾರದ ಆಶಯವನ್ನು ವಿವರಿಸಿದ್ದರು.

    ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ಕರ್ನಾಟಕ ಭವನ ನಿರ್ಮಿಸಲು ಚಿಂತಿಸಿದ್ದು 10ರಿಂದ 15 ಎಕರೆ ಭೂಮಿಯನ್ನು ಖರೀದಿಸಲು ಸರ್ಕಾರ ಯೋಚಿಸಿದೆ. ಅಮರನಾಥ ಯಾತ್ರೆಯಂತಹ ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಪದೇಪದೇ ತೆರಳುವ ಕರ್ನಾಟಕ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲು ಕರ್ನಾಟಕ ಭವನ ನಿರ್ಮಿಸಲು ಚಿಂತಿಸಲಾಗುತ್ತಿದ್ದು. ವಾಣಿಜ್ಯ ಉದ್ದೇಶಕ್ಕಿಂತ ಹೆಚ್ಚಾಗಿ, ಸಾರ್ವಜನಿಕರ ಸೇವೆ ಉದ್ದೇಶದಿಂದ ಭವನ ನಿರ್ಮಿಸಲಾಗುತ್ತಿದೆ. ಇಲ್ಲಿ ಗಣ್ಯರು ಸೇರಿದಂತೆ ರಾಜ್ಯಪಾಲರಿಗೂ ಕೊಠಡಿ ನಿರ್ಮಿಸುವ ಚಿಂತನೆಯಲ್ಲಿ ಪ್ರವಾಸೋದ್ಯಮ ಇಲಾಖೆ ಚಿಂತಿಸಿದೆ.

    ಜಮ್ಮು-ಕಾಶ್ಮೀರದಲ್ಲಿ ಕೆಲ ತಿಂಗಳ ಕಾಲ ಇಂಟರ್‌ನೆಟ್ ಸ್ಥಗಿತಗೊಳಿಸಿದ ಹಿನ್ನೆಲೆ ಅಧಿಕಾರಿಗಳನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ಪಸ್ತಾಪ ನೆನೆಗುದಿಗೆ ಬಿದ್ದಿದ್ದೆ. ಮಾಹಿತಿಗಳ ಪ್ರಕಾರ ರಾಜ್ಯ ಸರ್ಕಾರದ ಪ್ರಸ್ತಾವನೆ ರಾಜ್ಯಪಾಲರ ಕಚೇರಿ ತಲುಪಿದ್ದು, ಆ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಹೀಗಾಗಿ ಪ್ರವಾಸೋದ್ಯಮ ಇಲಾಖೆ ಅಧಿಕಾರಗಳ ತಂಡ ಜಮ್ಮು-ಕಾಶ್ಮೀರಕ್ಕೆ ಭೇಟಿ ಮಾಡಲು ಚಿಂತಿಸಿದ್ದು ಕೇಂದ್ರಾಡಳಿತ ಪ್ರದೇಶವಾಗಿ ಬದಲಾದ ಹಿನ್ನೆಲೆ ಹೊಸ ಪತ್ರವನ್ನು ಬರೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.