Tag: karnataka bandh

  • ಯಾರೋ ನಿನ್ನೆ, ಮೊನ್ನೆ ಬಂದವರ ಹಿಂದೆ ನಾನು ಹೋಗ್ಲಾ? – ಕನ್ನಡಪರ ಸಂಘಟನೆಗಳ ವಿರುದ್ಧ ಕರವೇ ಅಧ್ಯಕ್ಷ ಗುಡುಗು

    ಯಾರೋ ನಿನ್ನೆ, ಮೊನ್ನೆ ಬಂದವರ ಹಿಂದೆ ನಾನು ಹೋಗ್ಲಾ? – ಕನ್ನಡಪರ ಸಂಘಟನೆಗಳ ವಿರುದ್ಧ ಕರವೇ ಅಧ್ಯಕ್ಷ ಗುಡುಗು

    ಬೆಂಗಳೂರು: ಕರ್ನಾಟಕ ಬಂದ್ (Karnataka Bandh) ವಿಚಾರವಾಗಿ ಕೆಲವು ಕನ್ನಡಪರ ಸಂಘಟನೆಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike) ಅಧ್ಯಕ್ಷ ನಾರಾಯಣಗೌಡ ಆಕ್ರೋಶ ಹೊರಹಾಕಿದ್ದಾರೆ. ಯಾರೋ ನಿನ್ನೆ, ಮೊನ್ನೆ ಬಂದವರ ಹಿಂದೆ ಹೋಗಬೇಕಾ ಎಂದು ಹೇಳುವ ಮೂಲಕ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರಿನಲ್ಲಿ ಕೆಪಿಸಿಸಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಿರಂಗವಾಗಿ ಕೆಲ ಕನ್ನಡಪರ ಸಂಘಟನೆಗಳ ಬಗ್ಗೆ ಹೇಳಿಕೆ ನೀಡಿದ್ದಾರೆ. ನನ್ನ ನೇತೃತ್ವದಲ್ಲಿ ಹೋರಾಟ ಕರೆಯಬೇಕಿತ್ತು. ನಾನು ಯಾರೋ ನಿನ್ನೆ, ಮೊನ್ನೆ ಬಂದವರ ಹಿಂದೆ ಹೋಗ್ಲಾ? ಯಾರೋ ಎರಡು ಸಾವಿರ, ಮೂರು ಸಾವಿರ ಖರ್ಚು ಮಾಡುವವನ ಹಿಂದೆ ನಾನು ಹೋಗ್ಲಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಅ.15 ರವರೆಗೆ ತಮಿಳುನಾಡಿಗೆ 3,000 ಕ್ಯೂಸೆಕ್‌ ನೀರು ಹರಿಸಿ – ಕರ್ನಾಟಕಕ್ಕೆ ಕಾವೇರಿ ಪ್ರಾಧಿಕಾರ ಸೂಚನೆ

    ಮುಂದುವರೆದು ಮಾತನಾಡಿದ ಅವರು, ವಾಟಾಳ್ ನಾಗರಾಜ್ ಅವರ ಹೋರಾಟದ ಬಗ್ಗೆ ಆಕ್ಷೇಪ ಇಲ್ಲ. ಆದರೆ ಅವರ ಸುತ್ತಮುತ್ತ ಇರುವವರ ಬಗ್ಗೆ ಆಕ್ಷೇಪ ಇದೆ. ಬಂದ್ ಬಿಟ್ಟರೆ ನಾನು ಎಲ್ಲರ ಜೊತೆಯಲ್ಲೂ ಹೋರಾಡುತ್ತೇನೆ. ನಾಯಕತ್ವವನ್ನು ನಾನೇ ವಹಿಸಿಕೊಳ್ಳುತ್ತೇನೆ. ನನಗೆ ಇತಿಹಾಸ ಇಲ್ವಾ ಎಂದು ಕೇಳಿದ್ದಾರೆ.

    ಕೆಪಿಸಿಸಿ ಕಚೇರಿಗೆ ಆಗಮಿಸಿ ಜಮೀರ್ ಅಹ್ಮದ್ ಅವರನ್ನು ಭೇಟಿಯಾಗಿದ್ದೇನೆ. ಈ ವೇಳೆ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಬಂದಿದ್ದೆ. ಈ ವೇಳೆ ಅವರು ನಿಂಬೆಹಣ್ಣು ಕೊಟ್ಟರು ಎಂದು ತಿಳಿಸಿದ್ದಾರೆ.

    ಬೆಂಗಳೂರು ಬಂದ್‍ನಲ್ಲಿ ಭಾಗಿಯಾಗಿ, ಕರ್ನಾಟಕ ಬಂದ್‍ನಲ್ಲಿ ಅವರು ಪಾಲ್ಗೊಂಡಿಲ್ಲ. ಈ ಹೋರಾಟದಿಂದ ದೂರ ಉಳಿದಿರುವುದು ವೈಯುಕ್ತಿಕ ಪ್ರತಿಷ್ಠೆಗೆ ಎಂಬ ಮಾತುಗಳು ಸಹ ಕೇಳಿ ಬಂದಿವೆ. ಇದನ್ನೂ ಓದಿ: ಕಾವೇರಿಗಾಗಿ ಕೈಕೊಯ್ದುಕೊಂಡು ರಕ್ತ ಚೆಲ್ಲಿದ ಹೋರಾಟಗಾರ; ಸಿದ್ದು, ಡಿಕೆಶಿ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾವೇರಿಗಾಗಿ ಕೈಕೊಯ್ದುಕೊಂಡು ರಕ್ತ ಚೆಲ್ಲಿದ ಹೋರಾಟಗಾರ; ಸಿದ್ದು, ಡಿಕೆಶಿ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ

    ಕಾವೇರಿಗಾಗಿ ಕೈಕೊಯ್ದುಕೊಂಡು ರಕ್ತ ಚೆಲ್ಲಿದ ಹೋರಾಟಗಾರ; ಸಿದ್ದು, ಡಿಕೆಶಿ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ

    ಚಿಕ್ಕಮಗಳೂರು: ಕರ್ನಾಟಕ ಬಂದ್‍ಗೆ (Karnataka Bandh) ರಾಜ್ಯದ ವಿವಿಧ ಕಡೆಗಳಿಂದ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಆದ್ರೆ ಚಿಕ್ಕಮಗಳೂರಿನ (Chikkamagaluru) ಜಿಲ್ಲೆಯ ಕಳಸ ಪಟ್ಟಣದಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಕನ್ನಡಪರ ಹೋರಾಟಗಾರನೊಬ್ಬ ಕೈ ಕೊಯ್ದುಕೊಂಡು ರಕ್ತ ಕೊಡುತ್ತೇವೆಯೇ ಹೊರತು ನೀರು ಕೊಡುವುದಿಲ್ಲ ಎಂದು ಆಕ್ರೋಶ ಹೊರಹಾಕಿರುವ ಘಟನೆ ನಡೆದಿದೆ.

    ಕನ್ನಡಪರ ಸಂಘಟನೆ ಕಾರ್ಯಕರ್ತ ರಾಜು ಪ್ರತಿಭಟನೆ ವೇಳೆ ಏಕಾಏಕಿ ಕೈ ಕೊಯ್ದುಕೊಂಡು ರಕ್ತ ನೆಲಕ್ಕೆ ಬೀಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕರ್ನಾಟಕ ಬಂದ್‌ ಯಶಸ್ವಿಯಾಗಿ ಸಾಗಿದ್ದು, ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಜಿಲ್ಲೆಯ 103ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ಗೆ ಸಂಪೂರ್ಣ ಬೆಂಬಲ ಸೂಚಿಸಿವೆ. ಬೆಳಗ್ಗೆಯಿಂದಲೇ ಜಿಲ್ಲೆಯಲ್ಲಿ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡುವ ಮೂಲಕ ಸಾರ್ವಜನಿಕರೂ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾವೇರಿ ಹೋರಾಟಕ್ಕೆ ಬೆಂಬಲ ನೀಡಲು ಬೈಕ್ ರ‍್ಯಾಲಿ – ಪ್ರತಿಭಟನೆಯಲ್ಲಿ ಭಾಗಿಯಾದ ಚಕ್ರವರ್ತಿ ಸೂಲಿಬೆಲೆ

    ಕಳಸ ಪಟ್ಟಣದಲ್ಲಿ ರೈತ ಸಂಘ ಹಾಗೂ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ರೈತರಿಗೆ ಅನುಕೂಲವಾಗಬೇಕು, ತಮಿಳುನಾಡಿಗೆ ನೀರು ಬಿಡುವುದನ್ನು ಕೂಡಲೇ ನಿಲ್ಲಿಸಬೇಕು ಹೋರಾಟಗಾರರು ಆಗ್ರಹಿಸಿ, ಹೋರಾಟಗಾರ ರಾಜು ತನ್ನ ಕೈಕೊಯ್ದುಕೊಂಡು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬಳಿಕ ಜೊತೆಗಿದ್ದ ರೈತ ಸಂಘ ಹಾಗೂ ಇತರೆ ಹೋರಾಟಗಾರರು ರಾಜು ಅವರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಕಾಫಿನಾಡಲ್ಲಿ ಕಾವೇರಿ ಕಿಚ್ಚು – ಸುರಿವ ಮಳೆಯಲ್ಲೂ ಹಮಾಲಿ ಕಾರ್ಮಿಕರ ಪ್ರತಿಭಟನೆ 

    ಅಲ್ಲದೇ ಪ್ರತಿಭಟನೆ ವೇಳೆ ಬಿಜೆಪಿ ಕಾರ್ಯಕರ್ತರು (BJP Workers) ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾವೇರಿ ಹೋರಾಟಕ್ಕೆ ಬೆಂಬಲ ನೀಡಲು ಬೈಕ್ ರ‍್ಯಾಲಿ – ಪ್ರತಿಭಟನೆಯಲ್ಲಿ ಭಾಗಿಯಾದ ಚಕ್ರವರ್ತಿ ಸೂಲಿಬೆಲೆ

    ಕಾವೇರಿ ಹೋರಾಟಕ್ಕೆ ಬೆಂಬಲ ನೀಡಲು ಬೈಕ್ ರ‍್ಯಾಲಿ – ಪ್ರತಿಭಟನೆಯಲ್ಲಿ ಭಾಗಿಯಾದ ಚಕ್ರವರ್ತಿ ಸೂಲಿಬೆಲೆ

    ರಾಮನಗರ: ನಮೋ ಯುವ ಬ್ರಿಗೇಡ್ 2.0 ಬೈಕ್ ರ‍್ಯಾಲಿ ಹಿನ್ನೆಲೆ ಇಂದು (ಶುಕ್ರವಾರ) ರಾಮನಗರಕ್ಕೆ ಬೈಕ್ ರ‍್ಯಾಲಿ (Bike Rally) ಮೂಲಕ ಆಗಮಿಸಿದ ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಕರ್ನಾಟಕ ಬಂದ್‌ಗೆ (Karnataka Bandh) ಬೆಂಬಲ ವ್ಯಕ್ತಪಡಿಸಿದ್ದಾರೆ.

    ಚನ್ನಪಟ್ಟಣದಲ್ಲಿ ಕನ್ನಡಪರ ಸಂಘಟನೆಗಳ ಜೊತೆ ಪ್ರತಿಭಟನೆಯಲ್ಲಿ ಭಾಗಿಯಾದ ಸೂಲಿಬೆಲೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಚನ್ನಪಟ್ಟಣದ ಗಾಂಧಿ ವೃತ್ತದಲ್ಲಿ ಕನ್ನಡಪರ ಹಾಗೂ ರೈತ ಸಂಘಟನೆಗಳ ಜೊತೆ ರಸ್ತೆಯಲ್ಲಿ ಕೂತು ಪ್ರತಿಭಟನೆಗೆ ಬೆಂಬಲ ನೀಡಿದರು.

    ಇದೇ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕಾವೇರಿ ಹೋರಾಟಕ್ಕೆ ನಮೋ ಬ್ರಿಗೇಡ್ ಸಂಪೂರ್ಣ ಬೆಂಬಲ ನೀಡಿದೆ. ಇಂದು ಬೈಕ್ ರ‍್ಯಾಲಿ ಮೂಲಕ ಚನ್ನಪಟ್ಟಣ, ಮಂಡ್ಯ, ಚಾಮರಾಜನಗರದ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದೇನೆ. ಹೋರಾಟದಲ್ಲಿ ಭಾಗಿಯಾಗಿ ನೀರು ನಿಲ್ಲಿಸಬೇಕು ಎಂದು ಆಗ್ರಹ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮೋದಿಯವರು ಕರ್ನಾಟಕವನ್ನ ಪಾಕಿಸ್ತಾನದಲ್ಲಿದೆ ಎಂದು ತಿಳಿದಿದ್ದಾರಾ: ಕಾಂಗ್ರೆಸ್‌ ಪ್ರಶ್ನೆ

    ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ದೃಢ ನಿಲುವು ಮಾಡಿಲ್ಲ. ಸಂಪೂರ್ಣವಾಗಿ ನೀರು ನಿಲ್ಲಿಸುವ ಕೆಲಸ ಮಾಡಿಲ್ಲ. ಸಿಎಂ, ಡಿಸಿಎಂ ಅವರ ಹೇಳಿಕೆ ಗಮನಿಸಿದ್ದೇನೆ. ಅವರ ವೈಯಕ್ತಿಕ ಹಿತಾಸಕ್ತಿಗೆ ರಾಜ್ಯದ ಜನರ ಹಿತಾಸಕ್ತಿ ಬಲಿಯಾಗುವ ಆತಂಕ ಇದೆ. ರಾಜ್ಯ ಸರ್ಕಾರ ನೀರು ಬಿಡಲ್ಲ ಎಂದಾಗ ತಮಿಳುನಾಡು ಸರ್ಕಾರ ನೀರು ಬೇಕು ಅಂತ ಹೋರಾಟ ಮಾಡಿದರೆ ಮಾತ್ರ ಕೇಂದ್ರ ಮಧ್ಯ ಪ್ರವೇಶ ಮಾಡಬಹುದು. ಆದರೆ ಅವರು ಕೇಳೋಕು ಮುಂಚೆಯೇ ನೀರು ಬಿಡುತ್ತಿದ್ದಾರೆ ಎಂದರು.

    ಇಂಡಿಯಾ ಒಕ್ಕೂಟವನ್ನು ಓಲೈಸಲು ರಾಜ್ಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಕಿಡಿಕಾರಿದ್ದಾರೆ. ಇದನ್ನೂ ಓದಿ: ಕರ್ನಾಟಕ ಬಂದ್ ಬಿಸಿ – 60 ವಿಮಾನ ರದ್ದು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Karnataka Bandh: ಎಲ್ಲ ರಾಜ್ಯದ ರೈತರೂ ಒಂದೇ, ಸರಕಾರಗಳು ಕೂತು ಮಾತನಾಡಲಿ : ನಟ ಶಿವಣ್ಣ

    Karnataka Bandh: ಎಲ್ಲ ರಾಜ್ಯದ ರೈತರೂ ಒಂದೇ, ಸರಕಾರಗಳು ಕೂತು ಮಾತನಾಡಲಿ : ನಟ ಶಿವಣ್ಣ

    ಕಾವೇರಿ (Cauvery)  ಸಮಸ್ಯೆ ಈಗಿನದ್ದಲ್ಲ. ಆವಾಗಿನಿಂದಲೂ ಹೋರಾಟ ಮಾಡುತ್ತಾ ಬಂದಿದ್ದೇವೆ. ಈ ಸಮಸ್ಯೆ ಎಲ್ಲಿದೆ? ಯಾರು ಮಾಡುತ್ತಿರುವುದು? ಯಾಕೆ ಪರಿಹಾರ ಸಿಗುತ್ತಿಲ್ಲ ಎಂದು ಪ್ರಾಮಾಣಿಕವಾಗಿ ನೋಡಬೇಕಿದೆ. ಯಾವ ರಾಜ್ಯದವರಾದರೂ ಅವರು ರೈತರೆ. ಅದರಲ್ಲಿ ಭೇದ ಭಾವ ಮಾಡಬಾರದು. ಎರಡೂ ಸರಕಾರಗಳು ಕೂತುಕೊಂಡು ಚರ್ಚೆ ಮಾಡಿ ಸಮಸ್ಯೆಯನ್ನು ಸರಿ ಮಾಡಬೇಕು ಎಂದಿದ್ದಾರೆ ನಟ ಶಿವರಾಜ್ ಕುಮಾರ್.

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೇತೃತ್ವದಲ್ಲಿ ಆಯೋಜನೆಯಾಗಿದ್ದ ಕಾವೇರಿ ನದಿ ನೀರು ಹೋರಾಟದ ಕಾರ್ಯಕ್ರಮದಲ್ಲಿ ಶಿವಣ್ಣ (Shivaraj Kumar) ಮಾತನಾಡಿ, ‘ಕಲಾವಿದರ ಹೋರಾಟಕ್ಕೆ ಬರೊಲ್ಲಅಂತೀರಾ. ಕಲಾವಿದರು ಬಂದು ಏನ್ ಮಾಡ್ಬೇಕು?. ನಾವು ಬಂದು ನಿಂತಿಕೊಳ್ತೀವಿ ಏನು ಆಗುತ್ತೆ ಹೇಳಿ? ನಾವು ಬಂದು ಮಾತನಾಡಿ ಹೋದ್ರೆ ಸಮಸ್ಯೆ ಬಗೆಹರಿಯುತ್ತಾ?. ಎಲ್ಲ ನಾಯಕರು ಕೂತು ಮಾತನಾಡಿ ಚರ್ಚೆ ಮೂಲಕ ಬಗೆಹರಿಸಬೇಕು’ ಎಂದರು.

    ನಿನ್ನೆಯಷ್ಟೇ ಕೆಲ ಕನ್ನಡ ಪರ ಹೋರಾಟಗಾರರು ತಮಿಳ ನಟ ಸಿದ್ಧಾರ್ಥ ಅವರ ಸಿನಿಮಾ ಪ್ರಚಾರವನ್ನು ಮಾಡಲು ಬಿಟ್ಟಿರಲಿಲ್ಲ. ಈ ನಡೆಗೆ ಶಿವರಾಜ್ ಕುಮಾರ್ ಆಕ್ಷೇಪಣೆ ವ್ಯಕ್ತ ಪಡಿಸಿದರು. ‘ಮೊನ್ನೆ ಕಲಾವಿದರೊಬ್ಬರ ಮಾತನ್ನು ನಿಲ್ಲಿಸಿದ್ರಂತೆ ಅದು ತಪ್ಪು ಅಲ್ವಾ? ಎಂದು ವೇದಿಕೆಯ ಮೇಲೆಯೇ ಪ್ರಶ್ನೆ ಮಾಡಿದರು.

    ಈ ಹೋರಾಟದಲ್ಲಿ ಶಿವರಾಜ್‌ಕುಮಾರ್, ದರ್ಶನ್, ಶ್ರೀಮುರಳಿ, ಹಿರಿಯ ನಟ ಶ್ರೀನಿವಾಸ್ ಮೂರ್ತಿ, ಪದ್ಮ ವಾಸಂತಿ, ಉಮಾಶ್ರೀ, ನವೀನ್ ಕೃಷ್ಣ, ಲೂಸ್ ಮಾದ, ಪ್ರಮೀಳಾ ಜೋಷಾಯ್, ವಸಿಷ್ಠ ಸಿಂಹ, ಧ್ರುವ ಸರ್ಜಾ, ಪೂಜಾ ಗಾಂಧಿ, ಶ್ರುತಿ,  ಸುಂದರ್ ರಾಜ್ ಸೇರಿದಂತೆ ಹಲವು ಕಿರುತೆರೆ ನಟ-ನಟಿಯರು ಭಾಗಿಯಾಗಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕರ್ನಾಟಕ ಬಂದ್ ಬಿಸಿ – 60 ವಿಮಾನ ರದ್ದು

    ಕರ್ನಾಟಕ ಬಂದ್ ಬಿಸಿ – 60 ವಿಮಾನ ರದ್ದು

    ಬೆಂಗಳೂರು: ಕರ್ನಾಟಕ ಬಂದ್ (Karnataka Bandh) ಹಿನ್ನೆಲೆ ವಿಮಾನ (Flight) ಹಾರಾಟಗಳಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಕಳೆದ ಮಧ್ಯರಾತ್ರಿಯಿಂದ ಇಂದು ಮಧ್ಯರಾತ್ರಿ 12 ಗಂಟೆಯವರೆಗೆ 60ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿದೆ.

    ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಕೆಂಪೇಗೌಡ ವಿಮಾನ ನಿಲ್ದಾಣದಿಂದ ತೆರಳುವ 44 ವಿಮಾನಗಳು ರದ್ದಾಗಿದ್ದು, ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸುವ 16 ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ.

    ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವ ವಿಚಾರವಾಗಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಬಂದ್ ಇಂದು ಬೆಳಗ್ಗೆ 6 ಗಂಟೆಯಿಂದ ಪ್ರಾರಂಭವಾಗಿದ್ದು, ಸಂಜೆ 6 ಗಂಟೆಯವರೆಗೂ ನಡೆಯಲಿದೆ. ಕರ್ನಾಟಕ ಬಂದ್‌ಗೆ ರಾಜ್ಯದ ವಿವಿಧ ಕಡೆಗಳಿಂದ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಏರ್‌ಪೋರ್ಟ್ ಒಳಗಡೆ ಪ್ರತಿಭಟನೆಗೆ ಯತ್ನ – ಐವರು ಪೊಲೀಸರ ವಶಕ್ಕೆ

    ಕರ್ನಾಟಕ ಬಂದ್ ಹಿನ್ನೆಲೆ ಹೆಚ್ಚಿನ ಪ್ರಯಾಣಿಕರು ಕೊನೆ ಕ್ಷಣದಲ್ಲಿ ತಮ್ಮ ವಿಮಾನದ ಟಿಕೆಟ್‌ಗಳನ್ನು ಕ್ಯಾನ್ಸಲ್ ಮಾಡಿದ್ದಾರೆ. ಈ ಕಾರಣಕ್ಕೆ ಹಲವು ವಿಮಾನಯಾನ ಸಂಸ್ಥೆಗಳು ವಿಮಾನ ಹಾರಾಟಗಳನ್ನು ರದ್ದು ಮಾಡಿವೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಈವರೆಗೂ ಪರಿಹಾರ ಸಿಗದೇ ಇರೋ ಏಕೈಕ ಸಮಸ್ಯೆ ಕಾವೇರಿಯದ್ದು: ನಟ ಉಪೇಂದ್ರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಫಿನಾಡಲ್ಲಿ ಕಾವೇರಿ ಕಿಚ್ಚು – ಸುರಿವ ಮಳೆಯಲ್ಲೂ ಹಮಾಲಿ ಕಾರ್ಮಿಕರ ಪ್ರತಿಭಟನೆ

    ಕಾಫಿನಾಡಲ್ಲಿ ಕಾವೇರಿ ಕಿಚ್ಚು – ಸುರಿವ ಮಳೆಯಲ್ಲೂ ಹಮಾಲಿ ಕಾರ್ಮಿಕರ ಪ್ರತಿಭಟನೆ

    ಚಿಕ್ಕಮಗಳೂರು: ಕರ್ನಾಟಕ ಬಂದ್‍ಗೆ (Karnataka Bandh) ರಾಜ್ಯದ ವಿವಿಧ ಕಡೆಗಳಿಂದ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ನಗರದಲ್ಲಿಯೂ (Chikkamagaluru) ಸಹ ಹಮಾಲಿ ಕಾರ್ಮಿಕರು ಮಳೆಯನ್ನು ಲೆಕ್ಕಿಸದೆ ಪ್ರತಿಭಟನೆ ನಡೆಸಿದ್ದಾರೆ.

    ಪ್ರತಿಭಟನೆ ವೇಳೆ 300ಕ್ಕೂ ಹೆಚ್ಚು ಹಮಾಲಿ ಕಾರ್ಮಿಕರ ಸಂಘಟನೆಗಳು ಭಾಗಿಯಾಗಿವೆ. ಈ ಮೂಲಕ ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರದ ಕ್ರಮವನ್ನು ಪ್ರತಿಭಟನಾಕಾರರು ಖಂಡಿಸಿದ್ದಾರೆ. ಅಲ್ಲದೇ ಈ ಕೂಡಲೇ ನೀರು ಹರಿಸುವುದನ್ನು ನಿಲ್ಲಿಸಿ ನಾಡಿನ ರೈತರ ಹಿತವನ್ನು ಕಾಪಾಡಬೇಕು. ಕಾವೇರಿ ನೀರನ್ನು (Cauvery Water) ಈಗಲೇ ಈ ಪ್ರಮಾಣದಲ್ಲಿ ಹರಿಸಿದರೆ ಮಳೆ ಇಲ್ಲದ ಕಾರಣ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಏರ್‌ಪೋರ್ಟ್ ಒಳಗಡೆ ಪ್ರತಿಭಟನೆಗೆ ಯತ್ನ – ಐವರು ಪೊಲೀಸರ ವಶಕ್ಕೆ

    ನಗರದ ಐ.ಜಿ.ರಸ್ತೆಯಲ್ಲಿ ಕಾರ್ಮಿಕರು ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಈ ವೇಳೆ ಭಾರೀ ಮಳೆ ಸುರಿದಿದೆ. ಆದರೂ ಕಾರ್ಮಿಕರು ಮಳೆಯ ಮಧ್ಯೆಯೇ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದ್ದಾರೆ. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಬೆಂಗಳೂರಿನಲ್ಲೂ ಪ್ರತಿಭಟನೆಯ ಕಾವು ತೀವ್ರಗೊಳ್ಳುತ್ತಿದೆ. ಪ್ರತಿಭಟನೆ ವೇಳೆ ಯಾವುದೇ ಸಮಸ್ಯೆಗಳು ಎದುರಾಗದಂತೆ ಪೊಲೀಸರನ್ನು ನಿಯೋಜಿಸಲಾಗಿದೆ. ಇದರ ನಡುವೆಯೇ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ನಾಡಿನ ರೈತರಿಗೆ ನೀರಿಲ್ಲದೆ ಭತ್ತ ಬೆಳೆಯುವ ಭಾಗ್ಯ: ಬಿಜೆಪಿ ಆಕ್ರೋಶ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾವೇರಿ ಕರ್ನಾಟಕ ಬಂದ್‌ಗೆ ಬೀದರ್‌ನಲ್ಲಿ ನೀರಸ ಪ್ರತಿಕ್ರಿಯೆ

    ಕಾವೇರಿ ಕರ್ನಾಟಕ ಬಂದ್‌ಗೆ ಬೀದರ್‌ನಲ್ಲಿ ನೀರಸ ಪ್ರತಿಕ್ರಿಯೆ

    ಬೀದರ್ : ಕಾವೇರಿಗಾಗಿ ಇಂದು ವಿವಿಧ ಸಂಘಟನೆಗಳು ಕರ್ನಾಟಕ ಬಂದ್‌ಗೆ (Karnataka Bandh) ಕರೆ ನೀಡಿದ್ದರೂ ಗಡಿ ಜಿಲ್ಲೆ ಬೀದರ್‌ನಲ್ಲಿ (Bidar) ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಸದ್ಯಕ್ಕೆ ಗಡಿ ಜಿಲ್ಲೆಯಲ್ಲಿ ಕಾವೇರಿ ಬಂದ್ ಬಿಸಿ ತಟ್ಟದೇ ಪ್ರತಿಭಟನೆಗೆ (Protest) ಮಾತ್ರ ಕರ್ನಾಟಕ ಬಂದ್‌ ಸೀಮಿತವಾಗಿದೆ. ಸಾರಿಗೆ, ಆಟೋ ಸಂಚಾರ, ಅಂಗಡಿ – ಮುಗ್ಗಟ್ಟು, ವ್ಯಾಪಾರ, ವಹಿವಾಟು ಸೇರಿದಂತೆ ಜನ ಜೀವನ ಎಂದಿನಂತೆ ನಡೆಯುತ್ತಿದೆ.

    ಕನ್ನಡ ಪರ, ರೈತ ಪರ, ದಲಿತ ಪರ ಸಂಘಟನೆಗಳು ಅಂಬೇಡ್ಕರ್ ವೃತ್ತದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗ ಮಾಡಿ ಮನವಿ ಸಲ್ಲಿಸಲಿವೆ‌. ಹೀಗಾಗಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿದೆ. ಇದನ್ನೂ ಓದಿ: ಕಾವೇರಿಗಾಗಿ ನಾವು ಬಂದ್‌ಗೆ ಕರೆ ಕೊಟ್ಟರೆ ಸರ್ಕಾರ ನಮ್ಮನ್ನು ಬಂದ್‌ ಮಾಡಲು ಹೊರಟಿದೆ : ವಾಟಾಳ್‌ ಆಕ್ರೋಶ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಏರ್‌ಪೋರ್ಟ್ ಒಳಗಡೆ ಪ್ರತಿಭಟನೆಗೆ ಯತ್ನ – ಐವರು ಪೊಲೀಸರ ವಶಕ್ಕೆ

    ಏರ್‌ಪೋರ್ಟ್ ಒಳಗಡೆ ಪ್ರತಿಭಟನೆಗೆ ಯತ್ನ – ಐವರು ಪೊಲೀಸರ ವಶಕ್ಕೆ

    ಬೆಂಗಳೂರು: ಕಾವೇರಿ (Cauvery) ನೀರು ತಮಿಳುನಾಡಿಗೆ (Tamil Nadu) ಬಿಡುತ್ತಿರುವ ವಿಚಾರವಾಗಿ ಶುಕ್ರವಾರ ಕರ್ನಾಟಕ ಬಂದ್ (Karnataka Bandh) ಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಪ್ರತಿಭಟನೆಗೆ ಯತ್ನಿಸಿದ ಐವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವಿಮಾನದ ಟಿಕೆಟ್ ಬುಕ್ ಮಾಡಿದ್ದ ನಮ್ಮ ಕರ್ನಾಟಕ ಸೇನೆಯ ಐವರು ಕಾರ್ಯಕರ್ತರು ವಿಮಾನದ ಬಳಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದರು. ಆದರೆ ಕೊನೆ ಕ್ಷಣದಲ್ಲಿ ವಿಮಾನ ನಿಲ್ದಾಣದ ಒಳಗಡೆ ಇದ್ದ ಐವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಕಾವೇರಿಗಾಗಿ ನಾವು ಬಂದ್‌ಗೆ ಕರೆ ಕೊಟ್ಟರೆ ಸರ್ಕಾರ ನಮ್ಮನ್ನು ಬಂದ್‌ ಮಾಡಲು ಹೊರಟಿದೆ : ವಾಟಾಳ್‌ ಆಕ್ರೋಶ

    ಪ್ರತಿಭಟನಾಕಾರರು 09:50ರ ವೇಳೆಗೆ ಶಿವಮೊಗ್ಗಕ್ಕೆ ಹೊರಡಲಿದ್ದ ಇಂಡಿಗೋ 7731 ವಿಮಾನದ ಟಿಕೆಟ್ ಬುಕ್ ಮಾಡಿದ್ದರು. ಏರ್‌ಪೋರ್ಟ್ ಒಳಗೆ ಪ್ರವೇಶಿಸುತ್ತಿದ್ದ ವೇಳೆ ಅವರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: Karnataka Bandh: ಫಿಲ್ಮ್ ಚೇಂಬರ್ ಮುಂದೆ ಕಲಾವಿದರ ಪ್ರತಿಭಟನೆಗೆ ಸಿದ್ಧತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಡಿನ ರೈತರಿಗೆ ನೀರಿಲ್ಲದೆ ಭತ್ತ ಬೆಳೆಯುವ ಭಾಗ್ಯ: ಬಿಜೆಪಿ ಆಕ್ರೋಶ

    ನಾಡಿನ ರೈತರಿಗೆ ನೀರಿಲ್ಲದೆ ಭತ್ತ ಬೆಳೆಯುವ ಭಾಗ್ಯ: ಬಿಜೆಪಿ ಆಕ್ರೋಶ

    ಬೆಂಗಳೂರು: ಕರ್ನಾಟಕ ಬಂದ್ (Karnataka Bandh) ವೇಳೆ ಬಿಜೆಪಿ (BJP) ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದೆ. ಕಾಂಗ್ರೆಸ್ ಸರ್ಕಾರ ನಾಡಿನ ರೈತರಿಗೆ ನೀರಿಲ್ಲದೆ ಭತ್ತ ಬೆಳೆಯುವ ಭಾಗ್ಯವನ್ನು ಪರಿಚಯಿಸಿದೆ ಎಂದು ಕಿಡಿಕಾರಿದೆ.

    ಟ್ವಿಟ್ಟರ್‌ನಲ್ಲಿ ಬಿಜೆಪಿ, ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರು ಎಂಬುದು ಹಳೇ ಗಾದೆ. ಊರು ಕೊಳ್ಳೆ ಹೊಡ್ಸಿದ್ರು, ಆಮೇಲೆ ಕೋಟೆ ಬಾಗಿಲು ಹಾಕುವ ನಾಟಕ ಆಡಿಸಿದರು. ಇದು ಕ್ರಾಂಗೆಸ್ ಸರ್ಕಾರ ನೋಡಿ ಮಾಡಿರುವ ಹೊಸ ಗಾದೆ ಎಂದು ವ್ಯಂಗ್ಯವಾಡಿದೆ. ಇದನ್ನೂ ಓದಿ: ಕಾವೇರಿ ತವರು ಕೊಡಗಿನಲ್ಲೇ ತಟ್ಟದ ಬಂದ್ ಬಿಸಿ

    ಕರ್ನಾಟಕದ ಕಾವೇರಿಯನ್ನು (Cauvery Water) ಸ್ಟಾಲಿನ್ ನಾಡಿನ ರೈತರಿಗೆ ಎರೆಡೆರಡು ಬೆಳೆ ಬೆಳೆಯಲು ಹರಿಸಲಾಗುತ್ತಿದೆ. ಸರ್ಕಾರ ನಾಡಿನ ರೈತರಿಗೆ ನೀರಿಲ್ಲದೆ ಭತ್ತ ಬೆಳೆಯುವ `ಕರ್ನಾಟಕ ಮಾಡೆಲ್’ನ್ನು ಪರಿಚಯಿಸುತ್ತಿದೆ. ಇದು ನಾಡದ್ರೋಹಿ ಕಾಂಗ್ರೆಸ್ ಸರ್ಕಾರ ಎಂದು ಬಿಜೆಪಿ ಆಕ್ರೋಶ ಹೊರಹಾಕಿದೆ.

    ರಾಜ್ಯದೆಲ್ಲೆಡೆ ಕಾವೇರಿ ವಿಚಾರವಾಗಿ ಕೂಗು ಕೇಳಿಬರುತ್ತಿದೆ. ಬೆಂಗಳೂರಿನಲ್ಲಿ ಪ್ರತಿಭಟನೆಯ ಕಾವು ತೀವ್ರಗೊಳ್ಳುತ್ತಿದೆ. ಪ್ರತಿಭಟನೆ ವೇಳೆ ಯಾವುದೇ ಸಮಸ್ಯೆಗಳು ಎದುರಾಗದಂತೆ ಪೊಲೀಸರನ್ನು ನಿಯೋಜಿಸಲಾಗಿದೆ. ಇದರ ನಡುವೆಯೇ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ ಬಂದ್ – ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾವೇರಿಗಾಗಿ ನಾವು ಬಂದ್‌ಗೆ ಕರೆ ಕೊಟ್ಟರೆ ಸರ್ಕಾರ ನಮ್ಮನ್ನು ಬಂದ್‌ ಮಾಡಲು ಹೊರಟಿದೆ : ವಾಟಾಳ್‌ ಆಕ್ರೋಶ

    ಕಾವೇರಿಗಾಗಿ ನಾವು ಬಂದ್‌ಗೆ ಕರೆ ಕೊಟ್ಟರೆ ಸರ್ಕಾರ ನಮ್ಮನ್ನು ಬಂದ್‌ ಮಾಡಲು ಹೊರಟಿದೆ : ವಾಟಾಳ್‌ ಆಕ್ರೋಶ

    ಬೆಂಗಳೂರು: ಕಾವೇರಿಗಾಗಿ ನಾವು ಕರ್ನಾಟಕ ಬಂದ್‌ಗೆ (Karnataka Bandh) ಕರೆ ಕೊಟ್ಟರೆ ಸರ್ಕಾರ ನಮ್ಮನ್ನು ಬಂದ್‌ ಮಾಡಲು ಹೊರಟಿದೆ ಎಂದು ಕನ್ನಡ ಹೋರಾಟಗಾರ ವಾಟಾಳ್‌ ನಾಗರಾಜ್‌ (Vatal Nagaraj) ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಡಾಲರ್ಸ್‌ ಕಾಲನಿ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇವತ್ತು ಎರಡು ಬಂದ್‌ ನಡೆಯುತ್ತಿದೆ. ನಾವು ಕಾವೇರಿಗಾಗಿ (Cauvery) ಬಂದ್‌ಗೆ ಕರೆ ನೀಡಿದರೆ ಸರ್ಕಾರ ನಮ್ಮ ಪ್ರತಿಭಟನೆಯನ್ನು ಬಂದ್‌ ಮಾಡುತ್ತಿದೆ. ಸರ್ಕಾರ ಕಾವೇರಿ ಸಮಸ್ಯೆಯನ್ನು ಅರ್ಥಮಾಡಿಕೊಂಡಿಲ್ಲ ಎಂದು ಸಿಟ್ಟು ಹೊರಹಾಕಿದರು.  ಇದನ್ನೂ ಓದಿ: ಕಾವೇರಿ ಕುರಿತು ಸಲಹೆ, ಮಾರ್ಗದರ್ಶನ ಪಡೆಯಲು ಇಂದು ಸಿಎಂ ಸಭೆ

    ಬಂದ್‌ಗೆ ಬೆಂಬಲ ನೀಡಿದ ಜನತೆಗೆ ಧನ್ಯವಾದ ಹೇಳಿದ ವಾಟಾಳ್‌, ಅಖಂಡ ಕರ್ನಾಟಕ ಹೆಸರನ್ನು ಕನ್ನಡಿಗರು ಉಳಿಸಿದ್ದಾರೆ. ದೇಶಕ್ಕೆ ಕನ್ನಡಿಗರ ಶಕ್ತಿ ಪ್ರದರ್ಶನವಾಗಿದೆ ಎಂದು ಹೇಳಿದರು.

    ಇಂದು ವಾಟಾಳ್‌ ನಾಗರಾಜ್‌ ಬುರ್ಖಾ ಧರಿಸಿ ತಲೆಯ ಮೇಲೆ ನೀರಿನ ಖಾಲಿ ಕೊಡ ಹಿಡಿದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.