Tag: karnataka bandh

  • ಕನ್ನಡಿಗರಿಗಾಗಿ ಕರೆದ ಬಂದ್ ಯಶಸ್ವಿಯಾಗಿದೆ: ವಾಟಾಳ್ ನಾಗರಾಜ್

    ಕನ್ನಡಿಗರಿಗಾಗಿ ಕರೆದ ಬಂದ್ ಯಶಸ್ವಿಯಾಗಿದೆ: ವಾಟಾಳ್ ನಾಗರಾಜ್

    ಬೆಂಗಳೂರು: ಇಡೀ ರಾಜ್ಯಾದ್ಯಂತ ಬಂದ್ ಯಶಸ್ವಿಯಾಗಿದೆ. ಇದಕ್ಕೆ ಹೋರಾಟ ಮಾಡಿದ ಸಂಘಟನೆಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಶಾಸಕ, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ತಿಳಿಸಿದ್ದಾರೆ.

    ಕರ್ನಾಟಕ ಬಂದ್ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲಾ ಜಿಲ್ಲೆಗಳಲ್ಲಿ ಬಂದ್ ಅವರದ್ದೇ ರೂಪದಲ್ಲಿ ನಡೆದಿದೆ. ಕೆಲವು ಕಡೆ ಬಸ್ ಓಡಾಡುತ್ತಿದ್ದಾವೆ, ಜನ ಇಲ್ಲ. ಬಸ್ ನಿಲ್ದಾಣದಲ್ಲಿ ಜನ ಇಲ್ಲ. ಕನ್ನಡಿಗರಿಗಾಗಿ ಕರೆದ ಬಂದ್ ಯಶಸ್ವಿ ಆಗಿದೆ. ಬಂದ್‌ನ ಬೇಡಿಕೆ ಎಲ್ಲವನ್ನೂ ಜನರ ಮುಂದೆ ಸರ್ಕಾರದ ಮುಂದೆ ಇಟ್ಟಿದ್ದೇವೆ ಎಂದರು. ಇದನ್ನೂ ಓದಿ: ಕಂತೆ ಕಂತೆ ನೋಟು ಪತ್ತೆಯಾದ ಜಡ್ಜ್‌ ಮೇಲೆ ದಾಖಲಾಗಿತ್ತು ಸಿಬಿಐ ಎಫ್‌ಐಆರ್‌

    ನಮ್ಮವರನ್ನ ಬಂಧನ ಮಾಡಿದ್ದಾರೆ. ಬೆಂಗಳೂರು ಕಮಿಷನರ್ ಚಾಲೆಂಜ್ ತೆಗೆದುಕೊಂಡಿದ್ದಾರೆ. ಇವರು ವೈಯಕ್ತಿಕವಾಗಿ ತೆಗೆದುಕೊಂಡಿದ್ದಾರೆ. ಭಾಸ್ಕರ್ ರಾವ್ ರೀತಿ ಇವರು ರಾಜಕೀಯಕ್ಕೆ ಬರುತ್ತಾರೋ ಏನೋ ಗೊತ್ತಿಲ್ಲ. ನನಗೂ ನೊಟೀಸ್ ಕೊಟ್ಟಿದ್ದಾರೆ. ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಹೋರಾಟ ಮಾಡಿ ಅಂದಿದ್ದಾರೆ. ಟೌನ್ ಹಾಲ್‌ನಲ್ಲಿ ಪರ್ಮಿಷನ್ ಇಲ್ಲ ಅಂದಿದ್ದಾರೆ. ಬಂದ್ ಹತ್ತಿಕ್ಕೋ ಕೆಲಸ ಮಾಡಬಾರದಿತ್ತು. ನಾವು ಮಾಡಿರೋ ಹೋರಾಟದಲ್ಲಿ ಒಂದು ಹನಿ ನೀರು ಸಿಗದ ರೀತಿ ಆಗಬೇಕಿತ್ತು. ಆದರೂ ಯಶಸ್ಸು ಸಿಕ್ಕಿದೆ ಎಂದು ಹೇಳಿದರು. ಇದನ್ನೂ ಓದಿ: ಕನಿಷ್ಠ ಬೆಲೆ ನೀಡಿ ನೀರಿನ ಬಾಟಲಿ ಹಿಂಪಡೆಯಲು ನಿಯಮ ರೂಪಿಸಿ: ಈಶ್ವರ ಖಂಡ್ರೆ

    ಹೋಟೆಲ್‌ನವರಿಗೆ ಭಾರಿ ದುರಹಂಕಾರ ಬಂದಿದೆ:
    ನಮ್ಮ ಹೋರಾಟ ನಿರಂತರವಾಗಿರುತ್ತದೆ, ಇಲ್ಲಿಗೆ ನಿಲ್ಲೋದಿಲ್ಲ. ಅನೇಕ ಪಿತೂರಿ ಮಾಡಿದರು. ನೈತಿಕತೆ ಬೆಂಬಲ ಅಂತ ಈಗ ಹುಟ್ಟಿದೆ. ನಮಗೆ ಈ ಬೆಂಬಲ ಬೇಡ. ಹೋಟೆಲ್‌ನವರಿಗೆ ಭಾರಿ ದುರಹಂಕಾರ ಬಂದಿದೆ. ಎಲ್ಲದೂ ಪೊಲೀಸ್ ಕೈಯಲ್ಲೇ ಇದೆ. ತೀರ ಹತ್ತಿಕ್ಕುವ ಮಟ್ಟಕ್ಕೆ ಹೋಗಬಾರದಿತ್ತು. ಆದರೂ ಬಂದ್ ಯಶಸ್ವಿ ಆಗಿದೆ ಎಂದರು. ಇದನ್ನೂ ಓದಿ: ಐಪಿಎಲ್‌ 10 ಸೆಕೆಂಡ್‌ ಜಾಹೀರಾತಿಗೆ ಲಕ್ಷ ಲಕ್ಷ – 4,500 ಕೋಟಿ ಆದಾಯ ನಿರೀಕ್ಷೆಯಲ್ಲಿ ಜಿಯೋಸ್ಟಾರ್‌

  • Karnataka Bandh| ಮೈಸೂರಲ್ಲಿ ಪ್ರತಿಭಟನಾಕಾರರು ಪೊಲೀಸರ ವಶಕ್ಕೆ

    Karnataka Bandh| ಮೈಸೂರಲ್ಲಿ ಪ್ರತಿಭಟನಾಕಾರರು ಪೊಲೀಸರ ವಶಕ್ಕೆ

    – ಎರಡು ತಾಸು ಬಸ್ ಸಂಚಾರದಲ್ಲಿ ವ್ಯತ್ಯಯ

    ಮೈಸೂರು: ಕರ್ನಾಟಕ ಬಂದ್ (Karnataka Bandh) ಹಿನ್ನೆಲೆ ಮೈಸೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು (KSRTC Bus) ತಡೆದು ಪ್ರತಿಭಟನೆ ನಡೆಸುತ್ತಿದ್ದ ಕನ್ನಡ ಪರ ಸಂಘಟನೆಗಳ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಬಸ್‌ಗಳಿಗೆ ಅಡ್ಡಲಾಗಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಕನ್ನಡ ಪರ ಸಂಘಟನೆಗಳ ಪ್ರತಿಭಟನೆಯಿಂದಾಗಿ ಎರಡು ತಾಸು ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಈ ಹಿನ್ನೆಲೆ ಪೊಲೀಸರು ಮೈಸೂರು ಕೇಂದ್ರೀಯ ಬಸ್ ನಿಲ್ದಾಣದ ಮುಂದೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳೇ ನಮ್ಮನೆ ದೇವ್ರು – ಎರಡು ಕೈ ಜೋಡಿಸಿ ಪಾಟಿದಾರ್‌ ಕೃತಜ್ಞತೆ

    ಮೈಸೂರು (Mysuru) ಗ್ರಾಮಾಂತರ ಬಸ್ ನಿಲ್ದಾಣದ ಎರಡು ಭಾಗಗಳಲ್ಲಿ ಪ್ರತಿಭಟನೆ ಮಾಡುತ್ತಿದ್ದ ಎಲ್ಲಾ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಬಸ್ ಸಂಚಾರ ವ್ಯವಸ್ಥೆ ಸಹಜ ಸ್ಥಿತಿಗೆ ಮರಳಿದೆ. ಇದನ್ನೂ ಓದಿ: ಕರ್ನಾಟಕ ಬಂದ್ ಎಫೆಕ್ಟ್ – ಸ್ಯಾಟಲೈಟ್, ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಕೆ

  • ಕರ್ನಾಟಕ ಬಂದ್ ಎಫೆಕ್ಟ್ – ಸ್ಯಾಟಲೈಟ್, ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಕೆ

    ಕರ್ನಾಟಕ ಬಂದ್ ಎಫೆಕ್ಟ್ – ಸ್ಯಾಟಲೈಟ್, ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಕೆ

    – ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸಂಚಾರ ಯಥಾಸ್ಥಿತಿ

    ಬೆಂಗಳೂರು: ಮರಾಠಿಗರ ಕನ್ನಡ ವಿರೋಧಿ ನೀತಿ, ಕನ್ನಡಿಗರ ಮೇಲೆ ಎಂಇಎಸ್ (MES) ಪುಂಡರ ದಬ್ಬಾಳಿಕೆ ಖಂಡಿಸಿ ಶನಿವಾರ ಕರ್ನಾಟಕ ಬಂದ್‌ಗೆ (Karnataka Bandh) ಕರೆ ನೀಡಲಾಗಿದೆ. ಆದರೆ ಬಂದ್ ಇದ್ದರೂ ಎಂದಿನಂತೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳು ಸಂಚರಿಸುತ್ತಿವೆ. ನಗರದ ಮೆಜೆಸ್ಟಿಕ್‌ನ  (Mejestic)ಬಿಎಂಟಿಸಿ ಬಸ್ ನಿಲ್ದಾಣ ಯಥಾಸ್ಥಿತಿಯಲ್ಲಿದೆ. ಆದರೆ ಪ್ರಯಾಣಿಕರ ಸಂಖ್ಯೆ ಸ್ಪಲ್ಪ ಕಡಿಮೆಯಾಗಿದೆ.

    ಇನ್ನು ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ (Satellite Bus Station) ಬೆಳ್ಳಂಬೆಳಗ್ಗೆ ಬಂದ್ ಬಿಸಿ ತಟ್ಟಿದೆ. ತಮ್ಮ ತಮ್ಮ ಊರುಗಳಿಗೆ ವೀಕೆಂಡ್‌ಗಳಲ್ಲೇ ಹೆಚ್ಚಾಗಿ ಹೋಗುವ ಜನ ಇಂದು ಬಂದ್ ಕಾರಣಕ್ಕೆ ಸ್ಯಾಟಲೈಟ್ ಬಸ್ ನಿಲ್ದಾಣದ ಕಡೆ ಮುಖ ಮಾಡಿಲ್ಲ. ಸ್ಯಾಟಲೈಟ್ ಕೆಎಸ್‌ಆರ್‌ಟಿಸಿ (KSRTC) ನಿಲ್ದಾಣ ಇಂದು ಪ್ರಯಾಣಿಕರ ಕೊರತೆ ಎದುರಿಸುತ್ತಿದೆ. ಇದನ್ನೂ ಓದಿ: ಬಲವಂತವಾಗಿ ಬಂದ್‌ ಮಾಡಿದ್ರೆ ಶಿಸ್ತು ಕ್ರಮ – ಬೆಳಗ್ಗೆಯಿಂದಲೇ ಬೆಂಗಳೂರಿನಲ್ಲಿ ಪೊಲೀಸರ ಕಟ್ಟೆಚ್ಚರ

    ರಾಮನಗರ, ಮೈಸೂರು, ಮದ್ದೂರು, ಮಂಡ್ಯ, ಚಾಮರಾಜನಗರ, ಕೊಳ್ಳೇಗಾಲ, ಟಿ.ನರಸೀಪುರ, ನಂಜನಗೂಡು, ಮಳವಳ್ಳಿ, ಕೊಡಗು, ಹಾಸನ ಭಾಗಕ್ಕೆ ಹೋಗುವವರು ಬಹಳಷ್ಟು ಜನ ಬಂದ್ ಅಂತ ಇಂದು ಮನೆಗಳಲ್ಲೇ ಉಳಿದುಕೊಂಡಿದ್ದಾರೆ. ಇದರ ಪರಿಣಾಮ ಬಸ್‌ಗಳು ಖಾಲಿ ಖಾಲಿ ಸಂಚಾರ ಮಾಡುತ್ತಿವೆ. ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಖ್ಯೆ, ಸಂಚಾರದಲ್ಲಿ ಯಾವುದೇ ವ್ಯತ್ಯಯ ಇಲ್ಲ. ಬಸ್‌ಗಳಿದ್ದರೂ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ. ಇದನ್ನೂ ಓದಿ: ಬೇಸಿಗೆ ರಜೆ ಹಿನ್ನಲೆ ಕಲಬುರಗಿ – ದೌಂಡ್ ನಡುವೆ 180 ವಿಶೇಷ ರೈಲು ಸಂಚಾರ

  • ಬಲವಂತವಾಗಿ ಬಂದ್‌ ಮಾಡಿದ್ರೆ ಶಿಸ್ತು ಕ್ರಮ – ಬೆಳಗ್ಗೆಯಿಂದಲೇ ಬೆಂಗಳೂರಿನಲ್ಲಿ ಪೊಲೀಸರ ಕಟ್ಟೆಚ್ಚರ

    ಬಲವಂತವಾಗಿ ಬಂದ್‌ ಮಾಡಿದ್ರೆ ಶಿಸ್ತು ಕ್ರಮ – ಬೆಳಗ್ಗೆಯಿಂದಲೇ ಬೆಂಗಳೂರಿನಲ್ಲಿ ಪೊಲೀಸರ ಕಟ್ಟೆಚ್ಚರ

    – ಬೆಳಗ್ಗೆ ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಮೆರವಣಿಗೆ
    – ಕರಾವಳಿ ಕರ್ನಾಟಕದಲ್ಲಿ ಬಂದ್‌ಗಿಲ್ಲ ಬೆಂಬಲ
    – ಹಳೇ ಮೈಸೂರು, ಕಲ್ಯಾಣ ಕರ್ನಾಟಕದಲ್ಲಿ ಮಿಶ್ರ ಬೆಂಬಲ

    ಬೆಂಗಳೂರು: ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಮರಾಠಿ ಪುಂಡರ ಹಲ್ಲೆ ಪ್ರಕರಣ ಸಂಬಂಧ ಶುರುವಾದ ಸಮರ ಈಗ ಕರ್ನಾಟಕ ಬಂದ್‌ವರೆಗೆ (Karnataka Bandh) ಬಂದಿದೆ. ಕರ್ನಾಟಕದಲ್ಲಿ ಎಂಇಎಸ್ ನಿಷೇಧ, ಮೇಕೆದಾಟು, ಕಳಸಬಂಡೂರಿ ಯೋಜನೆಗೆ ಶೀಘ್ರ ಅನುಮತಿ ಸೇರಿದಂತೆ ನಾಡು-ನುಡಿ, ನೆಲ-ಜಲ ವಿಷಯವಾಗಿ ಕನ್ನಡ ಒಕ್ಕೂಟಗಳು ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ.

    ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು ಬೆಳಗ್ಗೆ ಬೆಂಗಳೂರಿನ (Bengaluru) ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್ವರೆಗೆ ಬೃಹತ್ ಮೆರವಣಿಗೆ ಹಮ್ಮಿಕೊಂಡಿವೆ. ಬೆಳಗಾವಿ, ಮಂಡ್ಯ, ರಾಮನಗರದಲ್ಲಿ ಸಂಪೂರ್ಣ ಬೆಂಬಲ ಸಿಕ್ಕಿದೆ. ಮೈಸೂರು, ಕಲ್ಯಾಣ ಕರ್ನಾಟಕದಲ್ಲಿ ಮಿಶ್ರ ಬೆಂಬಲ ಇದೆ. ಕರಾವಳಿ ಕರ್ನಾಟಕದಲ್ಲಿ ಬಂದ್‌ಗೆ ಯಾವುದೇ ಸಂಘಟನೆ ಕರೆ ನೀಡಿಲ್ಲ.

    ಬಂದ್‌ಗೆ ಬೆಂಗಳೂರಿನಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಬೆಳಗ್ಗೆಯಿಂದಲೇ ಗಸ್ತಿನಲ್ಲಿದ್ದಾರೆ. ಯಾವುದೇ ಮೆರವಣಿಗೆ, ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಪೊಲೀಸರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

    ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಪ್ರತಿಭಟನೆಗೆ ಅವಕಾಶ ನೀಡಲಾಗಿದೆ. ಬಲವಂತವಾಗಿ ಬಂದ್ ಮಾಡಿಸಿದ್ರೆ ಶಿಸ್ತುಕ್ರಮ ಕೈಗೊಳ್ಳಲಿದ್ದಾರೆ. ಟೌನ್ ಹಾಲ್, ಮೈಸೂರ್ ಬ್ಯಾಂಕ್ ಸರ್ಕಲ್, ಮೆಜೆಸ್ಟಿಕ್‌ನಲ್ಲಿ ಖಾಕಿ ಅಲರ್ಟ್‌ ಆಗಿದ್ದು 4 ಎಸಿಪಿ ಸೇರಿದಂತೆ 11 ಇನ್ಸ್‌ಪೆಕ್ಟರ್‌ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.

    ಪ್ರಮುಖ ಸ್ಥಳದಲ್ಲಿ 65 ಪಿಎಸ್‌ಐ, ನಗರದಲ್ಲಿ ಒಟ್ಟು 1,200 ಪೊಲೀಸರ ನಿಯೋಜನೆ ಮಾಡಲಾಗಿದೆ. ಕೆಎಸ್‌ಆರ್‌ಪಿ 46, ಸಿಎಆರ್ 30 ತುಕಡಿ ಜೊತೆ ಎರಡು ವಾಟರ್ ಜೆಟ್‌ಗಳನ್ನು ನಿಯೋಜಿಸಿದ್ದಾರೆ.

    ಬೆಂಗಳೂರಿನ ಆರ್.ಮಾರ್ಕೆಟ್‌ಗೆ ತಟ್ಟದ ಬಂದ್ ಬಿಸಿ ತಟ್ಟಿಲ್ಲ. ಬೆಳಗ್ಗೆ ಎಂದಿನಂತೆ ವ್ಯಾಪಾರ, ವಹಿವಾಟು ನಡೆಯುತ್ತಿದೆ. ಹೂ, ಹಣ್ಣು ಖರೀದಿಸುವಲ್ಲಿ ಜನರು ಬ್ಯುಸಿಯಾಗಿದ್ದು ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ಸುಗಳು ಎಂದಿನಂತೆ ನಗರದಲ್ಲಿ ಸಂಚರಿಸುತ್ತಿದೆ.

     

    ಬೆಂಬಲ ಎಲ್ಲಿ ಇಲ್ಲ:
    ರಾಮನಗರ, ಚಾಮರಾಜನಗರ, ಚಿಕ್ಕಮಗಳೂರು, ಕೋಲಾರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಕೊಪ್ಪಳ, ರಾಯಚೂರು, ಬಾಗಲಕೋಟೆ.

    ಬಂದ್- 50:50
    ಮೈಸೂರು, ಕೊಡಗು, ತುಮಕೂರು, ಹಾಸನ, ಚಿಕ್ಕಬಳ್ಳಾಪುರ, ಬಳ್ಳಾರಿ, ಬೀದರ್, ವಿಜಯಪುರ, ಚಿಕ್ಕೋಡಿ, ಕಲಬುರಗಿ, ಹಾವೇರಿ, ಹುಬ್ಬಳ್ಳಿ, ಕಾರವಾರ, ಮಂಗಳೂರು, ಶಿವಮೊಗ್ಗ, ಉಡುಪಿ, ಯಾದಗಿರಿ.

  • ನೆಲ, ಜಲಕ್ಕಾಗಿ ಮಾ.22ರಂದು ಅಖಂಡ ಕರ್ನಾಟಕ ಬಂದ್ – ಏನಿರುತ್ತೆ? ಏನಿರಲ್ಲ? ಗಮನಿಸಿ..

    ನೆಲ, ಜಲಕ್ಕಾಗಿ ಮಾ.22ರಂದು ಅಖಂಡ ಕರ್ನಾಟಕ ಬಂದ್ – ಏನಿರುತ್ತೆ? ಏನಿರಲ್ಲ? ಗಮನಿಸಿ..

    – ಕರಾವಳಿಯಲ್ಲಿ ಬಂದ್‌ಗಿಲ್ಲ ಬೆಂಬಲ

    ಬೆಂಗಳೂರು: ಎಂಇಎಸ್‌ (MES) ಪುಂಡಾಟಿಕೆಗೆ ಕಡಿವಾಣ ಹಾಕಬೇಕು, ವಿವಿಧ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು, ಕನ್ನಡಿಗರ ಮೇಲೆ ಪರಭಾಷಿಕರ ದಾಳಿ ನಿಲ್ಲಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ಶನಿವಾರ (ಮಾ.22) ಕರ್ನಾಟಕ ಬಂದ್‌ (karnataka bandh) ಮಾಡಲು ಮುಂದಾಗಿವೆ.

    ಕರ್ನಾಟಕದಲ್ಲಿ ಎಂಇಎಸ್ ನಿಷೇಧ, ಮೇಕೆದಾಟು, ಕಳಸ ಬಂಡೂರಿ ಯೋಜನೆಗೆ ಶೀಘ್ರ ಅನುಮತಿ ಸೇರಿದಂತೆ ನಾಡು-ನುಡಿ, ನೆಲ-ಜಲ ವಿಷಯವಾಗಿ ಕನ್ನಡ ಒಕ್ಕೂಟಗಳು ಶನಿವಾರ ಕರ್ನಾಟಕ ಬಂದ್ ಹಮ್ಮಿಕೊಂಡಿವೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಅಖಂಡ ಕರ್ನಾಟಕ ಬಂದ್ ಕೈಗೊಂಡಿವೆ. ಬೆಳಗ್ಗೆ 10:30ಕ್ಕೆ ಬೆಂಗಳೂರಿನ (Bengaluru) ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್ ತನಕ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಇದನ್ನೂ ಓದಿ: ಮಾರ್ಚ್ 22ರ ಕರ್ನಾಟಕ ಬಂದ್‌ಗೆ ಸರ್ಕಾರದ ಬೆಂಬಲ ಇಲ್ಲ: ಡಿಕೆಶಿ

    ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕೂಡ. ನಮ್ಮ ಯೂನಿಯನ್‌ನವರು ಬೆಂಬಲ ಕೊಟ್ರೆ ಬಸ್ ಓಡಲ್ಲ ಅಂದಿದ್ದಾರೆ. ಆದರೆ, ಸರ್ಕಾರದ ನಡೆಯನ್ನು ಕನ್ನಡ ಹೋರಾಟಗಾರರು ಉಗ್ರವಾಗಿ ಖಂಡಿಸಿದ್ದಾರೆ. 20 ದಿನಗಳಿಂದ ಬಂದ್‌ಗೆ ಕರೆ ಕೊಟ್ಟಿದ್ದೇವೆ. ಆದರೂ, ಬಂದ್ ಬೇಡ ಅಂತಿರೋದು ಸರಿನಾ..? ಅಂತ ಕಿಡಿಕಾರಿದ್ದಾರೆ.

    ಅಖಂಡ ಕರ್ನಾಟಕ ಬಂದ್‌ಗೆ ಬೆಂಗಳೂರಿನ ಪ್ರಮುಖ ಮಾಲ್‌ಗಳಾದ ಒರಾಯನ್ ಮಾಲ್, ಮಂತ್ರಿ ಮಾಲ್, ಯಶವಂತಪುರದ ಮೆಟ್ರೋ ಹೋಲ್ ಸೇಲ್ ಮಾರ್ಕೆಟ್, ರಾಜಾಜಿನಗರದ ರಾಮೇಶ್ವರ ಕೆಫೆಯ ಜೊತೆ ಕನ್ನಡ ಒಕ್ಕೂಟ ಮಾತುಕತೆ ನಡೆಸಿದ್ದು, ಬಂದ್‌ಗೆ ಬೆಂಬಲ ಯಾಚಿಸಿವೆ.  ಇದನ್ನೂ ಓದಿ: ರಾಷ್ಟ್ರಗೀತೆ ಗಾಯನದ ವೇಳೆ ನಿತೀಶ್ ಕುಮಾರ್ ಮಾತುಕತೆ – ಬಿಹಾರ ಅಸೆಂಬ್ಲಿಯಲ್ಲಿ ಗದ್ದಲ, ಸಿಎಂ ಸ್ಥಾನಕ್ಕೆ ರಾಜೀನಾಮೆಗೆ ಒತ್ತಾಯ

    ಏನಿರುತ್ತೆ?
    * ಆಸ್ಪತ್ರೆ, ಮೆಡಿಕಲ್, ಹಾಲು, ಅಗತ್ಯವಸ್ತುಗಳು
    * ಮೆಟ್ರೋ, ಪೆಟ್ರೋಲ್ ಬಂಕ್, ಹೋಟೆಲ್,
    * ಎಪಿಎಂಸಿ
    * ಪೀಣ್ಯ ಕೈಗಾರಿಕಾ ಪ್ರದೇಶ ಓಪನ್ (13 ಸಾವಿರ ಕೈಗಾರಿಕೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ..)

    ಏನಿರಲ್ಲ?
    ಓಲಾ, ಉಬರ್ ಟ್ಯಾಕ್ಸಿ & ಆಟೋ

    50:50 ಬೆಂಬಲ:
    ಮಧ್ಯಾಹ್ನದ ಬಳಿಕ ಥಿಯೇಟರ್, ಮಾಲ್, ಬೇಕರಿ, ಬಾರ್ ಅಂಡ್ ರೆಸ್ಟೋರೆಂಟ್, ಅಂಗಡಿ ಮುಂಗಟ್ಟು, ಬೀದಿ ಬದಿ ವ್ಯಾಪಾರ

    17 ಜಿಲ್ಲೆಗಳಲ್ಲಿ ಬಂದ್‌ಗೆ ಬೆಂಬಲ ನಿರಾಕರಣೆ:
    ಇನ್ನೂ ಎಂಇಎಸ್ ಪುಂಡಾಟ ಖಂಡಿಸಿ ಕರೆ ನೀಡಿರುವ ಬಂದ್‌ಗೆ 17 ಜಿಲ್ಲೆಗಳು ಬೆಂಬಲ ನೀಡಿಲ್ಲ. 11 ಜಿಲ್ಲೆಗಳಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. 2 ಜಿಲ್ಲೆಗಳು ಮಾತ್ರ ಸಂಪೂರ್ಣ ಬೆಂಬಲ ನೀಡಿವೆ. ಕರ್ನಾಟಕ ಬಂದ್‌ಗೆ ಬೆಳಗಾವಿ, ಮಂಡ್ಯದಲ್ಲಿ
    ಮಾತ್ರ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಉಳಿದಂತೆ ಬಾಗಲಕೋಟೆ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಉಡುಪಿ, ಯಾದಗಿರಿ ಜಿಲ್ಲೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಳ್ಳಾರಿ, ಬೀದರ್‌, ವಿಜಯಪುರ, ಚಿಕ್ಕಬಳ್ಳಾಪುರ, ಚಿಕ್ಕೋಡಿ, ಕಲಬುರಗಿ, ಹಾಸನ, ಹಾವೇರಿ, ಹುಬ್ಬಳ್ಳಿ, ಕಾರವಾರ, ಮಡಿಕೇರಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ ಹಾಗೂ ಯಾದಗಿರಿ ಜಿಲ್ಲೆಗಳು ಬಂದ್‌ಗೆ ಬೆಂಬಲ ನಿರಾಕರಿಸಿವೆ.

  • ಪರೀಕ್ಷಾ ದಿನವೇ ಕರ್ನಾಟಕ ಬಂದ್‌ – ಆತಂಕದಲ್ಲಿ ವಿದ್ಯಾರ್ಥಿಗಳು, ಪೋಷಕರು

    ಪರೀಕ್ಷಾ ದಿನವೇ ಕರ್ನಾಟಕ ಬಂದ್‌ – ಆತಂಕದಲ್ಲಿ ವಿದ್ಯಾರ್ಥಿಗಳು, ಪೋಷಕರು

    ಬೆಂಗಳೂರು: ಶನಿವಾರ ಕನ್ನಡ ಪರ ಸಂಘಟನೆಗಳು ಕರೆ ನೀಡಿದ ಕರ್ನಾಟಕ ಬಂದ್‌ಗೆ (Karnataka Bandh) ವಿದ್ಯಾರ್ಥಿಗಳು, ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

    ಬಂದ್ ದಿನವೇ ಸರ್ಕಾರಿ, ಖಾಸಗಿ, ಅನುದಾನಿತ ಎಲ್ಲಾ ಶಾಲೆಗಳಲ್ಲೂ ಜಲವು ತರಗತಿಗಳಿಗೆ ಪರೀಕ್ಷೆ (Exam) ನಡೆಯಲಿದೆ. ಬಂದ್ ಘೋಷಿಸಿದ್ದರೂ ಶಿಕ್ಷಣ ಇಲಾಖೆ (Education Department) ಇನ್ನೂ ನಿರ್ಧಾರ ಕೈಗೊಳ್ಳದ ಕಾರಣ ಬಂದ್ ದಿನ ಪರೀಕ್ಷೆ ಇದ್ಯಾ? ಇಲ್ವೋ ಎಂಬ ಗೊಂದಲದಲ್ಲಿ ಪೋಷಕರಿದ್ದಾರೆ.

    1 ರಿಂದ 3ನೇ ತರಗತಿಗೆ ನಲಿ-ಕಲಿ ಮೌಲ್ಯಮಾಪನ, 4-5ನೇ ತರಗತಿಗೆ ಗಣಿತ ವಿಷಯಗಳ ಪರೀಕ್ಷೆ, 6 ರಿಂದ 8ನೇ ತರಗತಿಗೆ ಗಣಿತ ವಿಷಯಗಳ ಪರೀಕ್ಷೆ ನಡೆಯಲಿದೆ. ಖಾಸಗಿ ಶಾಲೆಗಳಲ್ಲಿ ಅನುಕೂಲಕ್ಕೆ ತಕ್ಕಂತೆ ಬೇರೆ ವಿಷಯಗಳ ಪರೀಕ್ಷೆ ನಡೆಯಲಿದೆ. ಇದನ್ನೂ ಓದಿ: ಇನ್ಮುಂದೆ ಖಾಸಗಿ ರಸ್ತೆಯನ್ನು ಸಾರ್ವಜನಿಕ ರಸ್ತೆ ಅಂತ ಘೋಷಣೆ ಮಾಡಲು ಬಿಬಿಎಂಪಿಗೆ ಅಧಿಕಾರ: ವಿಧೇಯಕ ಅಂಗೀಕಾರ

     

    ಬಂದ್ ದಿನ ಪರೀಕ್ಷೆ ನಡೆಸಿದರೆ ವಿದ್ಯಾರ್ಥಿಗಳಿಗೆ ಸಾರಿಗೆ ಸಮಸ್ಯೆಯಾಗುವ ಸಾಧ್ಯತೆಯಿದೆ. ವಿದ್ಯಾರ್ಥಿಗಳಿಗೆ ಸಮಸ್ಯೆಯಾದರೆ ಜವಾಬ್ದಾರಿ ಹೊರುವವರು ಯಾರು ಎಂಬ ಪ್ರಶ್ನೆ ಎದ್ದಿದೆ. ಹೀಗಾಗಿ ಶಿಕ್ಷಣ ಇಲಾಖೆ ನಿರ್ಧಾರ ತೆಗೆದುಕೊಳ್ಳುವಂತೆ ಒತ್ತಡ ಹೆಚ್ಚಾಗಿದೆ.

    ಈಗಾಗಲೇ ಶನಿವಾರ ಬಂದ್‌ ಬೇಡ ಎಂದು ಪೋಷಕರ ಸಂಘ ವಿರೋಧ ವ್ಯಕ್ತಪಡಿಸಿದೆ. ಖಾಸಗಿ ಶಾಲಾ ಆಡಳಿತ ಮಂಡಳಿಗಳಒಕ್ಕೂಟದ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಶಶಿಕುಮಾರ್‌ ಅವರು ಪರೀಕ್ಷೆ ಸಮಯದಲ್ಲಿ ಬಂದ್‌ ಬೇಡ ಎಂದಿದ್ದಾರೆ. ಪರೀಕ್ಷಾ ದಿನಾಂಕಗಳು ಈ ಹಿಂದೆಯೇ ನಿರ್ಧಾರ ಆಗಿದೆ. ನಾಡು-ನುಡಿ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಆದರೆ ಬಂದ್‌ನಲ್ಲಿ ಭಾಗಿಯಾಗಲು ಆಗುವುದಿಲ್ಲ. ಪರೀಕ್ಷೆ ಮುಂದೂಡಿಕೆ ಸಾಧ್ಯವಿಲ್ಲ ಎಂದಿದ್ದಾರೆ.

     

  • ಮಾ.22ರಂದು ಅಖಂಡ ಕರ್ನಾಟಕ ಬಂದ್‌; ʻಕಾಂತಾರʼ ನಟನ ಶಿವಾಜಿ ಚಿತ್ರ ಬಂದ್ರೆ ಬಹಿಷ್ಕಾರ – ವಾಟಾಳ್‌ ನಾಗರಾಜ್‌ ಎಚ್ಚರಿಕೆ

    ಮಾ.22ರಂದು ಅಖಂಡ ಕರ್ನಾಟಕ ಬಂದ್‌; ʻಕಾಂತಾರʼ ನಟನ ಶಿವಾಜಿ ಚಿತ್ರ ಬಂದ್ರೆ ಬಹಿಷ್ಕಾರ – ವಾಟಾಳ್‌ ನಾಗರಾಜ್‌ ಎಚ್ಚರಿಕೆ

    – ಇದು ಚಾಲಕರ ಮಾನ, ಮರ್ಯಾದೆ ಪ್ರಶ್ನೆ
    – ನಮ್ಮ ಮೆಟ್ರೋ, ಮಾಲ್‌ಗಳೂ ಬಂದ್‌ ಆಗ್ಬೇಕು; ಆಗ್ರಹ

    ಬೆಂಗಳೂರು: ಎಂಇಎಸ್‌ ಪುಂಡಾಟಿಕೆಗೆ ಕಡಿವಾಣ ಹಾಕಬೇಕು, ವಿವಿಧ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು, ಕನ್ನಡಿಗರ ಮೇಲೆ ಪರಭಾಷಿಕರ ದಾಳಿ ನಿಲ್ಲಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಆಗ್ರಹಿಸಿ ಇದೇ ಮಾ.22ರಂದು ಕರ್ನಾಟಕ ಬಂದ್‌ (Karnataka Bandh) ಮಾಡುವುದಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಘೋಷಿಸಿದರು.

    ಕರ್ನಾಟಕ ಬಂದ್‌ಗೆ ಸಂಬಂಧಿಸಿದಂತೆ ಬೆಂಗಳೂರಿನ (Bengaluru) ಖಾಸಗಿ ಹೋಟೆಲ್‌ನಲ್ಲಿಂದು ಸಭೆ ನಡೆಸಲಾಯಿತು. ಹಲವು ಕನ್ನಡಪರ ಸಂಘಟನೆಯ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಾಟಾಳ್‌ ನಾಗರಾಜ್‌, ಅಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೂ ಕರ್ನಾಟಕ ಬಂದ್‌ ನಡೆಸಲಾಗುವುದು. ಬೆಳಗ್ಗೆ 10:30ಕ್ಕೆ ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್ ತನಕ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕೊಂಕಣ ರೈಲ್ವೆ ವಿಲೀನ, ಮಂಗಳೂರು ರೈಲು ವ್ಯಾಪ್ತಿ ಪುನರ್ ರಚನೆ – ಲೋಕಸಭೆಯಲ್ಲಿ ಧ್ವನಿಯೆತ್ತಿದ ಕ್ಯಾ.ಬ್ರಿಜೇಶ್ ಚೌಟ

    ನೈತಿಕ ಬೆಂಬಲ ಅನ್ನೋರು ಮನೆಯಲ್ಲಿರಿ:
    ಯಾವುದೇ ಕಾರಣಕ್ಕೂ ಬಂದ್‌ ಹಿಂಪಡೆಯುವುದಿಲ್ಲ. ಮಹಾರಾಷ್ಟ್ರದಲ್ಲಿ (Maharashtra) ಕನ್ನಡಿಗರ ಮೇಲೆ ಪದೇ ಹಲ್ಲೆ ನಡೆಯುತ್ತಿದೆ. ಈ ಬಂದ್‌ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯಲು ನಿರ್ಧರಿಸಲಾಗಿದೆ. ಬಹುತೇಕ ಕನ್ನಡ ಪರ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ. ಆಟೋ ಚಾಲಕರ ಸಂಘಟನೆಗಳು, ಕ್ಯಾಬ್, ಒಲಾ, ಉಬರ್‌, ಹೋಟೆಲ್ ಮಾಲೀಕರು ಸೇರಿ ಎಲ್ಲರೂ ಬಂದ್‌ಗೆ ಬೆಂಬಲ ನೀಡಬೇಕು. ನಮ್ಮ ಮೆಟ್ರೋ, ಮಾಲ್‌ಗಳೂ ಬಂದ್‌ ಆಗಬೇಕು. ಇಲ್ಲದಿದ್ದರೇ ನಾವೇ ಬಂದ್‌ ಮಾಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದರಲ್ಲದೇ ಕರ್ನಾಟಕ ಬಂದ್‌ಗೆ ನಮ್ಮದು ನೈತಿಕ ಬೆಂಬಲ ಅನ್ನುವವರು ಮನೆಯಲ್ಲೇ ಕುಳಿತುಕೊಳ್ಳಿ ಎಂದು ಹೇಳಿದರು.  ಇದನ್ನೂ ಓದಿ: ಒತ್ತುವರಿ ಆಗಿದ್ರೆ ತೆರವು ಮಾಡಿಕೊಳ್ಳಿ, ನಮ್ಮ ಜಮೀನು ಹುಡುಕಿಕೊಡಿ – ಭೂ ದಾಖಲೆಗಳ ಇಲಾಖೆಗೆ ಹೆಚ್‌ಡಿಕೆ ಪತ್ರ

    ರಾಜ್ಯದಲ್ಲಿ ದಿನೇ ದಿನೇ ಕನ್ನಡಿಗರ ಮೇಲೆ ಪರಭಾಷಿಗರ ದಾಳಿ ಹೆಚ್ಚಾಗುತ್ತಿದೆ. ಬೆಂಗಳೂರು, ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆಯುತ್ತಿದೆ. ಬಿಹಾರ, ಬಂಗಾಳ, ತಮಿಳು, ತೆಲುಗು, ಮಾರ್ವಾಡಿಯವರು ರಾಜ್ಯದಲ್ಲಿ ಸುಮಾರು 2 ಕೋಟಿ ಜನ ಇದ್ದಾರೆ. ತಲೆಬೋಳಿಸೋದ್ರಿಂದ ಹಿಡಿದು ಪಾನಿಪುರಿ ಮಾರೋನು ಕೂಡ ಅನ್ಯರಾಜ್ಯದವರಿದ್ದಾರೆ. ಇದನ್ನೆಲ್ಲ ಯಾರು ಕೇಳೋದು? ಇದೆಲ್ಲದರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಅಲ್ಲದೇ ಎಂಇಎಸ್, ಶಿವಸೇನೆಯನ್ನು ನಿಷೇಧ ಮಾಡಬೇಕು. ಬೆಳಗಾವಿ ನಮ್ಮದು. ಬೆಳಗಾವಿಯಲ್ಲಿ ಶಿವಾಜಿ, ಸಂಭಾಜಿ ಪ್ರತಿಮೆ ಬೇಕಾ? ಪರಭಾಷಿಗರು ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುವುದನ್ನು ನಿಲ್ಲಿಸಬೇಕು. ಕರ್ನಾಟಕದಲ್ಲಿದ್ದು ಕನ್ನಡಿಗರ ಮೇಲೆ ಹಲ್ಲೆ ನಡೆಸುವವರು ರಾಜ್ಯ ಬಿಟ್ಟು ಹೋಗಬೇಕು ಎಂದು ಆಗ್ರಹಿಸಿದರು.  ಇದನ್ನೂ ಓದಿ: ಅಂಬೇಡ್ಕರ್ ಸೋಲಿಸುವುದಕ್ಕೆ ಸಾವರ್ಕರ್ ಕಾರಣ – ಪ್ರಿಯಾಂಕ್ ಖರ್ಗೆ, ಅಶ್ವಥ್ ನಾರಾಯಣ್ ನಡುವೆ ದಾಖಲೆ ಜಟಾಪಟಿ

    ಮಾ.22ರಂದು ಯಾರೂ ನಮ್ಮ ಮೆಟ್ರೋ ಹತ್ತಬೇಡಿ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರೊಂದಿಗೆ ಮಾತನಾಡಿದ್ದು, ಅಂದು ಬಸ್ ಓಡಿಸಬಾರದು ಅಂತ ಹೇಳಿದ್ದೇವೆ. ಇನ್ನೂ ಒಂದು ಸಲ ಹೇಳುತ್ತೇವೆ, ಅವತ್ತು ಬಸ್ ಓಡಿಸಬಾರದು. ಮಂತ್ರಿ, ಸಿಎಂ ಕಾರಿನ ಚಾಲಕರೇ ಆಗಿರಲಿ, ಮಾನ, ಮರ್ಯಾದೆ, ಗೌರವ, ಕನ್ನಡ ಅಭಿಮಾನ, ಸ್ವಾಭಿಮಾನಕ್ಕೆ ಅಂದು ಗಾಡಿ ಹತ್ತಬೇಡಿ.‌ ಚಾಲಕರು ಯಾರೇ ಇರಲಿ ಬಸ್, ಆಟೋ, ಕಾರು ಚಾಲಕರಿಗೂ ಇದು ಸ್ವಾಭಿಮಾನ, ಮರ್ಯಾದೆ ಪ್ರಶ್ನೆಯಾಗಿದೆ ಎಂದು ನುಡಿದರು.

    ರಿಷಬ್‌ ಶೆಟ್ಟಿಗೆ ಪರೋಕ್ಷ ವಾರ್ನಿಂಗ್‌:
    ಮುಂದುವರಿದು… ಶಿವಾಜಿ ಕುರಿತಾದ ಜೀವನ ಚರಿತ್ರೆ ಆಧಾರಿತ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ವಾಟಾಳ್‌ ನಾಗರಾಜ್‌ ಪರೋಕ್ಷ ಎಚ್ಚರಿಕೆ ನೀಡಿದರು. ಕಾಂತಾರ ಚಿತ್ರದ ನಟ ‘ಛತ್ರಪತಿ ಶಿವಾಜಿ’ ಸಿನಿಮಾ ಮಾಡೋದಕ್ಕೆ ಮುಂದಾಗಿದ್ದಾರೆ. ಅವರು ಸಿನಿಮಾ ಮಾಡಕೂಡದು, ಶಿವಾಜಿ ಚಿತ್ರ ಬಂದರೆ ಬಹಿಷ್ಕಾರ ಹಾಕ್ತೇವೆ ಎಂದು ರಿಷಬ್‌ ಶೆಟ್ಟಿ ಹೆಸರು ಹೇಳದೇ ಎಚ್ಚರಿಕೆ ಕೊಟ್ಟರು.

  • ಮಾ.22 ಕರ್ನಾಟಕ ಬಂದ್ – ಪರೀಕ್ಷೆ ಮುಂದೂಡಿಕೆ ಇಲ್ಲ: ಮಧು ಬಂಗಾರಪ್ಪ

    ಮಾ.22 ಕರ್ನಾಟಕ ಬಂದ್ – ಪರೀಕ್ಷೆ ಮುಂದೂಡಿಕೆ ಇಲ್ಲ: ಮಧು ಬಂಗಾರಪ್ಪ

    ಬೆಂಗಳೂರು: ಮಾ.22 ರಂದು‌ ಕರ್ನಾಟಕ ಬಂದ್ (Karnataka Bandh) ಹಿನ್ನಲೆಯಲ್ಲಿ ಈಗಾಗಲೇ ನಿಗದಿಯಾಗಿರುವ ಯಾವುದೇ ಪರೀಕ್ಷೆಗಳನ್ನು (Exams) ಮುಂದೂಡಿಕೆ ಮಾಡಲು ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಗಾಗಲೇ ಮಾ.22 ರಂದು 7,8,9ನೇ ತರಗತಿ ಪರೀಕ್ಷೆಗಳ ನಿಗದಿಯಾಗಿದೆ. ಬಂದ್ ಎಂದು ಈಗ ಮುಂದೂಡಿಕೆ ಸಾಧ್ಯವಿಲ್ಲ. ಬಂದ್ ಇದ್ದರೂ ಯಾವುದೇ ಪರೀಕ್ಷೆ ಮುಂದೂಡಿಕೆ ಮಾಡೊಲ್ಲ. ಪರೀಕ್ಷೆ ಅದರ ಪಾಡಿಗೆ ನಡೆಯಲಿದೆ. ಮಕ್ಕಳಿಗೆ ಯಾವುದೇ ತೊಂದರೆ ಆಗದೇ ಇರೋ ರೀತಿ ಬಂದ್ ಮಾಡೋರು ಸಹಕಾರ ಕೊಡ್ತಾರೆ. ಹೋರಾಟಗಾರರಿಗೆ ಮನವಿ ಮಾಡ್ತೀನಿ. ಹೋರಾಟ ಮಾಡೋಕೆ ನಿಮಗೆ ಹಕ್ಕು ಇದೆ. ಆದರೆ ಪರೀಕ್ಷೆ ಅನ್ನೋದು ಮಕ್ಕಳಿಗೆ ಮುಖ್ಯ. ಮಕ್ಕಳ ಭವಿಷ್ಯ ಪರೀಕ್ಷೆಯಲ್ಲಿದೆ. ಮಕ್ಕಳ ಭವಿಷ್ಯಕ್ಕೆ ಯಾವುದೇ ಅಡಚಣೆ ಮಾಡೋದಿಲ್ಲ ಎಂಬ ವಿಶ್ವಾಸ ಇದೆ ಎಂದಿದ್ದಾರೆ.

    ಬಂದ್ ಮಾಡುವ ಹೋರಾಟಗಾರರು ಯಾರು ಎಕ್ಸಾಂಗೆ ಹೋಗಬೇಡಿ ಎಂದು ಮಕ್ಕಳಿಗೆ ಹೇಳೋದಿಲ್ಲ. ಮಕ್ಕಳು ಗೊಂದಲ ಆಗೋದು ಬೇಡ. 6,7,8,9 ನೇ ತರಗತಿ ಪರೀಕ್ಷೆಗಳು ನಿಗದಿಯಂತೆ ನಡೆಯುತ್ತವೆ. ಮಕ್ಕಳು ಎಕ್ಸಾಂ ಬರೆಯಲಿ. ಈಗಾಗಲೇ ವೇಳಾಪಟ್ಟಿ ಸಿದ್ಧತೆ ಮಾಡಿ ಪ್ರಕಟ ಮಾಡಿದ್ದೇವೆ‌. ವೇಳಾಪಟ್ಟಿ ಬದಲಾವಣೆ ಆದ್ರೆ ಕಷ್ಟ ಆಗುತ್ತದೆ. ಮಕ್ಕಳ ಹಿತದೃಷ್ಟಿಯಿಂದ ಪರೀಕ್ಷೆ ಮುಂದೂಡಿಕೆ ಸರಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  • ಮಾ.22 ರಂದು ಕರ್ನಾಟಕ ಬಂದ್‌

    ಮಾ.22 ರಂದು ಕರ್ನಾಟಕ ಬಂದ್‌

    ಬೆಂಗಳೂರು: ಕನ್ನಡಿಗರ ಮೇಲೆ ಮರಾಠಿಗರ ದಬ್ಬಾಳಿಕೆ ಖಂಡಿಸಿ ಮತ್ತುಬೆಳಗಾವಿಯಲ್ಲಿ (Belagavi) ಎಂಇಎಸ್‌ ಪುಂಡರಿಗೆ ಕಡಿವಾಣ ಹಾಕುವಂತೆ  ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ಮಾ.22 ಶನಿವಾರ ಕರ್ನಾಟಕ ಬಂದ್‌ಗೆ (Karnataka Bandh) ಕರೆ ನೀಡಿವೆ.

    ಇಂದು ಬೆಂಗಳೂರಿನಲ್ಲಿ ವಿವಿಧ ಕನ್ನಡ ಸಂಘಟನೆಗಳ ಸಭೆ ಸೇರಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಕನ್ನಡಕ್ಕಾಗಿ, ಕನ್ನಡಿಗರಿಗಾಗಿ ಮಾ.22 ರಂದು ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಕರ್ನಾಟಕ ಬಂದ್ ನಡೆಯಲಿದೆ ವಾಟಾಳ್ ನಾಗರಾಜ್ (Vatal Nagaraj) ಹೇಳಿದ್ದಾರೆ.

    ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು, ಮಾ.3 ರಂದು ಬೆಳಗ್ಗೆ 11 ಗಂಟೆಗೆ ರಾಜಭವನ ಮುತ್ತಿಗೆ ಹಾಕಲಿದ್ದೇವೆ. ಮಾ.7ಕ್ಕೆ ಬೆಳಗಾವಿ ಚಲೋ ಕೈಗೊಳ್ಳುತ್ತೇವೆ. ಮಾ.11 ರಂದು ಮೇಕೆದಾಟು ಯೋಜನೆಗೆ ಆಗ್ರಹಿಸಿ ಅತ್ತಿಬೆಲೆ ತಮಿಳುನಾಡು ಗಡಿ ಬಂದ್ ಮಾಡಿ ಪ್ರತಿಭಟಿಸುತ್ತೇವೆ. ಮಾ.14 ರಂದು ಮೈಸೂರು, ಮಂಡ್ಯ, ರಾಮನಗರ ಡಿಸಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ತಿಳಿಸಿದರು.

    ಜಿಲ್ಲಾಧಿಕಾರಿ ಸೇರಿದಂತೆ ಇಡೀ ಬೆಳಗಾವಿಯ ಎಲ್ಲಾ ಅಧಿಕಾರಿಗಳ ಬದಲಾವಣೆ ಆಗಬೇಕು. ಎಲ್ಲಾ ಕನ್ನಡ ಅಧಿಕಾರಿಗಳನ್ನ ಹಾಕಬೇಕು. ಎಂಇಎಸ್ ನಿಷೇಧ ಮಾಡಿ ಶಿವಸೇನೆ ಕಾರ್ಯಕರ್ತರನ್ನು ಗಡಿಪಾರು ಮಾಡಬೇಕು. ಸಾಂಬಾಜಿ ಪ್ರತಿಮೆ ತೆರವು ಮಾಡಬೇಕು. ಕೇಂದ್ರ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

  • ರೈತರ ಹೊಟ್ಟೆ ಉರಿಯುತ್ತಿದೆ ಅಂತ ಹಸಿರು ಮೆಣಸಿನಕಾಯಿ ತಿಂದು ಆಕ್ರೋಶ

    ರೈತರ ಹೊಟ್ಟೆ ಉರಿಯುತ್ತಿದೆ ಅಂತ ಹಸಿರು ಮೆಣಸಿನಕಾಯಿ ತಿಂದು ಆಕ್ರೋಶ

    ಮಂಡ್ಯ: ಅಕ್ಟೋಬರ್ 15ರ ವರೆಗೆ ಪ್ರತಿನಿತ್ಯ 3,000 ಕ್ಯೂಸೆಕ್ ಕಾವೇರಿ ನೀರನ್ನ (Cauvery Water) ತಮಿಳುನಾಡಿಗೆ ಹರಿಸಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿದೆ. ಇದರಿಂದ ಮಂಡ್ಯದ ರೈತರ (Mandya Farmers) ಆಕ್ರೋಶ ಕಟ್ಟೆಯೊಡೆದಿದೆ.

    ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಆದೇಶ ಖಂಡಿಸಿ ರಸ್ತೆಯಲ್ಲೇ ವಿನೂತನ ಪ್ರತಿಭಟನೆ ನಡೆಸಿದ ರೈತರು ಹಸಿರು ಮೆಣಸಿನಕಾಯಿ ತಿಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಕೆಆರ್‌ಎಸ್, ಕಬಿನಿಯಿಂದ ಇಂದು ತಮಿಳುನಾಡಿಗೆ 6,075 ಕ್ಯೂಸೆಕ್ ನೀರು

    ಈ ಕುರಿತು ಮಾತನಾಡಿದ ರೈತಮುಖಂಡರು, ಇಂದು ಮಂಡ್ಯದ ರೈತರಿಗೆ ಸಿಹಿ ಸುದ್ದಿ ಸಿಗುತ್ತೆ ಅಂತಾ ಭಾವಿಸಿದ್ದೆವು. ಆದ್ರೆ ಕಹಿ ಮತ್ತು ಖಾರವಾದ ಸುದ್ದಿ ಬಂದಿದೆ. ಈಗ ನಿಜವಾಗಿಯೂ ಹೊಟ್ಟೆ ಉರಿಯುತ್ತಿದೆ. ಇನ್ನೂ ಈ ರಾಜ್ಯದ ರೈತರಿಗೆ ಎಷ್ಟು ಹೊಟ್ಟೆ ಉರಿಬೇಕು? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕಾವೇರಿ ಹೋರಾಟದ ಕಿಚ್ಚು; ಬಾಯಿಗೆ ಮಣ್ಣು ಹಾಕಿಕೊಂಡು ಸರ್ಕಾರದ ವಿರುದ್ಧ ರೈತರ ಆಕ್ರೋಶ

    ಕಾವೇರಿ ಕೊಳ್ಳ ಪ್ರದೇಶದ ಜನರಿಗೆ ಕಾವೇರಿ ಪ್ರಾಧಿಕಾರ ನೀಡಿರುವ ಆದೇಶ ಹೊಟ್ಟೆ ಉರಿಯುವಂತೆ ಮಾಡಿದೆ. ಆದ್ದರಿಂದ ಈ ಭ್ರಷ್ಟ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಖಾರವಾದ ಸಂದೇಶ ನೀಡಲು ಮೆಣಸಿನಕಾಯಿ ತಿಂದು ಆಕ್ರೋಶ ಹೊರಹಾಕಿದ್ದೇವೆ. ಇನ್ನಾದರೂ ಎಚ್ಚೆತ್ತುಕೊಂಡು ಕಾವೇರಿಯನ್ನ ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]