ಬೆಳಗಾವಿ: ವಿಪಕ್ಷಗಳ ತೀವ್ರ ವಿರೋಧದ ನಡುವೆ ವಿಧಾನಸಭೆಯಲ್ಲಿ ಮತಾಂತರ ತಡೆ ವಿಧೇಯಕ ಅಂಗೀಕಾರಗೊಂಡಿದೆ.
ಬಿಜೆಪಿ ಮತಾಂತರ ತಡೆ ವಿಧೇಯಕ ಪ್ರಕ್ರಿಯೆ ಆರಂಭಿಸುತ್ತಿದ್ದಂತೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತು. ಬಳಿಕ ಧ್ವನಿ ಮತದ ಮೂಲಕ ಬಿಲ್ ಅಂಗೀಕಾರ ಪಡಿಸಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧೇಯಕ ಪಾಸ್ ಮಾಡಿಕೊಡಿ ಎಂದು ಮನವಿ ಮಾಡಿಕೊಂಡರು. ಆದರೆ ಕಾಂಗ್ರೆಸ್ ಸದನದಲ್ಲಿ ಗದ್ದಲ ನಡೆಸಿತು. ಈ ನಡುವೆಯೇ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ 2021 ಅಂಗೀಕಾರಗೊಂಡಿತು. ಇದನ್ನೂ ಓದಿ: ಮತಾಂತರ ತಡೆ ಮಸೂದೆಯಲ್ಲಿರುವ ಪ್ರಮುಖ ಅಂಶಗಳು ಏನು?
ಸದನದಲ್ಲಿ ಗದ್ದಲ, ಮಾತಿನ ಚಕಮಕಿ
ಕಾಂಗ್ರೆಸ್‍ನವರು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಇದು ಸಮಾಜದ ಪರ ಇರುವ ಮಸೂದೆ ಎಂದ ಬಸವರಾಜ ಬೊಮ್ಮಾಯಿ ಕಿಡಿಕಾರಿದರು. ದ್ವಿಮುಖ ನೀತಿ ಕಾಂಗ್ರೆಸ್‍ನದ್ದು, ಈ ಹಿಂದೆ 2014ರಿಂದ 2016ರ ಅವಧಿಯಲ್ಲಿ ಕಾಂಗ್ರೆಸ್ ಮತಾಂತರ ಬಿಲ್ ಮಂಡಿಸಲು ಮುಂದಾಗಿತ್ತು. ನಿಮ್ಮ ಕಾನೂನು ಸಚಿವರು ಪರಿಶೀಲನೆಗೆ ಒಪ್ಪಿ ಸಹಿ ಹಾಕಿದ್ದಾರೆ. ಆರ್‌ಎಸ್‌ಎಸ್ ಕಾನೂನು ಪರ ಇದೆ, ಇದು ಓಪನ್ ಸೀಕ್ರೆಟ್. ಆರ್‌ಎಸ್‌ಎಸ್ ನೀತಿಯನ್ನು ಏಕೆ ಒಪ್ಪಿ ನೀವು ಬಿಲ್ ಪರಿಶೀಲನೆ ಮಾಡಿದ್ರಿ ಎಂದು ಸಿದ್ದರಾಮಯ್ಯಗೆ ಬೊಮ್ಮಾಯಿ ತಿರುಗೇಟು ನೀಡಿದರು. ಇದನ್ನೂ ಓದಿ: ಮತಾಂತರ ತಡೆ ಮಸೂದೆಗೆ ವಿರೋಧ ಇದೆ: ಸಿದ್ದರಾಮಯ್ಯ
ಬೆಂಗಳೂರು: ಬಿಜೆಪಿಯವರು ಆಯಿಲ್ ಬಾಂಡ್‍ಗೂ ನಮಗೂ ಏನ್ರೀ ಸಂಬಂಧ ಅಂತಾರೆ. ಆದರೆ ಯುಪಿಎ ಅವಧಿಯ ಆಯಿಲ್ ಬಾಂಡ್ ಕಡೆ ಕೈತೋರಿಸಿ ತೈಲ ಬೆಲೆ ಏರಿಕೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ ಎನ್ನುವ ಮೂಲಕ ಇಂದಿನ ವಿಧಾನಸಭಾ ಅಧಿವೇಶನದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳೆರಡು ಪರಸ್ಪರ ಕಾದಾಡಿಕೊಂಡವು.
ಏನಿದು ಆಯಿಲ್ ಬಾಂಡ್?
ಆಯಿಲ್ ಬಾಮಡ್ ಎಂದರೆ ತೈಲ ಕಂಪನಿಗಳು, ರಸಗೊಬ್ಬರ ಸಂಸ್ಥೆಗಳು, ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ ಸಂಸ್ಥೆಗಳಿಗೆ ಬಾಂಡ್ ಜಾರಿ ಮಾಡುವ ಹಕ್ಕು ಕೇಂದ್ರಕ್ಕಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಿದ್ದರೂ, ಅದರ ಭಾರ ದೇಶದ ಜನರಿಗೆ ಬೀಳಬಾರದೆಂದು ಕೇಂದ್ರ ಸರ್ಕಾರ ಸಬ್ಸಿಡಿ ನೀಡುತ್ತಿತ್ತು. ಅಂದರೇ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಎಷ್ಟೇ ಇದ್ದರೂ, ದೇಶದಲ್ಲಿ ತೈಲ ಬೆಲೆ ನಿಯಂತ್ರಣ ಕೇಂದ್ರದ ಕೈಯಲ್ಲಿ ಇರುತ್ತಿತ್ತು. ನಗದು ಸಬ್ಸಿಡಿ ಬದಲಿಗೆ ಕೇಂದ್ರ ಸರ್ಕಾರ ಮೂರು ತೈಲ ಕಂಪನಿಗಳಿಗೆ ಬಾಂಡ್‍ಗಳನ್ನು ವಿತರಿಸುತ್ತಿತ್ತು. ಈ ಬಾಂಡ್‍ಗಳು ಸುಧೀರ್ಘ ಅವಧಿಗೆ ಇರುತ್ತವೆ. ಬಾಂಡ್‍ಗಳ ಮೇಲೆ ತೈಲ ಕಂಪನಿಗಳಿಗೆ ಕೇಂದ್ರ ಕಾಲಕಾಲಕ್ಕೆ ಬಡ್ಡಿ ನೀಡುತ್ತದೆ. ವಾಜಪೇಯಿ ಸರ್ಕಾರ, ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ತೈಲ ಬಾಂಡ್‍ಗಳನ್ನು ವಿತರಿಸಿತ್ತು. ಯುಪಿಎ ಸರ್ಕಾರ ತನ್ನ ಬೊಕ್ಕಸದ ಮೇಲೆ ಭಾರ ಬೀಳದಿರಲು 2005ರಿಂದ 2010ರ ಅವಧಿಯಲ್ಲಿ ಬಾಂಡ್ ವಿತರಿಸಿತ್ತು. ಆರ್ಥಿಕ ಬಿಕ್ಕಟ್ಟಿನ ಬಳಿಕ 2010ರಲ್ಲಿ ಪೆಟ್ರೋಲ್ ದರ ನಿಯಂತ್ರಣದಿಂದ ಯುಪಿಎ ಹಿಂದೆ ಸರಿಯಿತು. ಅಲ್ಲಿಗೆ ತೈಲ ಬಾಂಡ್ ವಿತರಣೆ ನಿಂತಿತ್ತು. 2014ರ ಅಕ್ಟೋಬರ್‍ನಲ್ಲಿ ಡೀಸೆಲ್ ಮೇಲಿನ ಕೇಂದ್ರದ ನಿಯಂತ್ರಣವನ್ನು ಮೋದಿ ಸರ್ಕಾರ ತಪ್ಪಿಸಿತ್ತು. ಈ ಮೂಲಕ ಆಯಿಲ್ ಬಾಂಡ್ ಕೇಂದ್ರ ಸರ್ಕಾರಕ್ಕೆ ಹೊರೆ ಆಗುವಂತಾಯಿತು.
ಕೇಂದ್ರದ ಮೇಲೆ ಆಯಿಲ್ ಬಾಂಡ್ ಹೊರೆ ಎಷ್ಟು?
ಯುಪಿಎ ಅವಧಿಯಲ್ಲಿ ಜಾರಿಯಾದ ತೈಲ ಬಾಂಡ್ ಮೊತ್ತ ಬರೋಬ್ಬರಿ 1.31 ಲಕ್ಷ ಕೋಟಿ ರೂ. ಆಗಿದ್ದು, 1.31 ಲಕ್ಷ ಕೋಟಿಗೆ ಬಡ್ಡಿ ಸೇರಿ 2.62 ಲಕ್ಷ ಕೋಟಿಯನ್ನು 2026ರ ಮಾರ್ಚ್ ಹೊತ್ತಿಗೆ ಕೇಂದ್ರ ಪಾವತಿಸಬೇಕು. ಸಿಸಿಐಎಲ್ ಪ್ರಕಾರ, 2014ರಿಂದ ಇಲ್ಲಿಯವರೆಗೆ 70 ಸಾವಿರ ಕೋಟಿ ಪಾವತಿಸಲಾಗಿದ್ದು, ಪ್ರಸಕ್ತ ವರ್ಷ ಕೇಂದ್ರ ಸರ್ಕಾರ 10 ಸಾವಿರ ಕೋಟಿ ರೂಪಾಯಿ ಪಾವತಿಸಬೇಕಿದೆ. 2023ಕ್ಕೆ 26,15 ಕೋಟಿ ರೂ., 2024ಕ್ಕೆ 5 ಸಾವಿರ ಕೋಟಿ ಪಾವತಿ ಮಾಡಬೇಕು. ತೈಲ ಬೆಲೆ ಏರಿಕೆ ಮೂಲಕ 20-21 ಆರ್ಥಿಕ ವರ್ಷದ ಮೊದಲ 10 ತಿಂಗಳಲ್ಲಿ ಗಳಿಸಿದ್ದು 2.94 ಲಕ್ಷ ಕೋಟಿ ಆಗಿದೆ. ಈ ಹೊರೆಯನ್ನು ಸರಿದೂಗಿಸಲು ಸರ್ಕಾರ ತೈಲ ದರ ಏರಿಕೆಯ ಮೂಲಕ ಪ್ರಯತ್ನಿಸುತ್ತಿದೆ. ಇದನ್ನೂ ಓದಿ: ಸಿದ್ದರಾಮಯ್ಯ ದೆಹಲಿಗೆ ಹೋಗಬೇಕು – ಸದನದಲ್ಲಿ ಸ್ವಾರಸ್ಯಕರ ಚರ್ಚೆ
ಬೆಂಗಳೂರು : ನಾಳೆಯಿಂದ ವಿಧಾನಮಂಡಲದ ಜಂಟಿ ಅಧಿವೇಶನ ಆರಂಭವಾಗಲಿದೆ. ಜೊತೆಗೆ ನಾಳೆ ವಿಧಾನ ಪರಿಷತ್ ಒಂದು ಸ್ಥಾನಕ್ಕೆ ಉಪಚುನಾವಣೆಯೂ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದು ಸಿಎಂ ಯಡಿಯೂರಪ್ಪನವರು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಬೆಂಗಳೂರಿನ ಖಾಸಗಿ ಹೊಟೇಲಿನಲ್ಲಿ ಕರೆದಿದ್ದಾರೆ.
ಇಂದು ಸಂಜೆ 7 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಪಕ್ಷದ ಎಲ್ಲ 117 ಶಾಸಕರಿಗೂ ಶಾಸಕಾಂಗ ಪಕ್ಷದ ಸಭೆಗೆ ಕಡ್ಡಾಯವಾಗಿ ಬರಬೇಕೆಂದು ಈಗಾಗಲೇ ಸಂದೇಶ ನೀಡಲಾಗಿದೆ.
ಅಧಿವೇಶನದ ಮೊದಲ ದಿನವೇ ರಾಜ್ಯಪಾಲರು ಜಂಟಿ ಸದನವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಂತರ ವಿಧಾನ ಪರಿಷತ್ ಒಂದು ಸ್ಥಾನಕ್ಕೆ ವಿಧಾನಸಭೆಯಿಂದ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ಪಕ್ಷೇತರ ಅಭ್ಯರ್ಥಿ ಕೊನೆಯ ಕ್ಷಣದಲ್ಲಿ ಕಣದಿಂದ ನಿವೃತ್ತಿ ಘೋಷಿಸಿದರೂ ನಿಗದಿಯಂತೆ ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಬಿಜೆಪಿ ಅಭ್ಯರ್ಥಿಯಾಗಿ ಡಿಸಿಎಂ ಲಕ್ಷ್ಮಣ್ ಸವದಿ ಮಾತ್ರ ಕಣದಲ್ಲಿದ್ದು, ಗೆಲುವು ನಿರೀಕ್ಷಿತ. ಆದರೂ ಚುನಾವಣಾ ಪ್ರಕ್ರಿಯೆಯಲ್ಲಿ ಎಲ್ಲ ಶಾಸಕರೂ ಕಡ್ಡಾಯವಾಗಿ ಹಾಜರಿರಬೇಕೆಂದು ಇಂದಿನ ಶಾಸಕಾಂಗ ಪಕ್ಷದ ಸಭೆಯಲ್ಲಿ ವಿಪ್ ಜಾರಿ ಮಾಡಲಾಗುತ್ತದೆ. ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಮುಖ್ಯ ಸಚೇತಕ ಸುನೀಲ್ ಕುಮಾರ್ ಪಕ್ಷದ ಶಾಸಕರಿಗೆ ವಿಪ್ ಜಾರಿ ಮಾಡಲಿದ್ದಾರೆ.
ಜಂಟಿ ಅಧಿವೇಶನದಲ್ಲಿ ವಿಪಕ್ಷಗಳ ಪ್ರಶ್ನೆಗಳಿಗೆ, ಟೀಕೆಗಳಿಗೆ ತಕ್ಕ ಉತ್ತರ ಕೊಡಲು ಇವತ್ತಿನ ಸಭೆಯಲ್ಲಿ ರಣತಂತ್ರ ಹೆಣೆಯಲಾಗುತ್ತದೆ. ವಿಪಕ್ಷಗಳು ಸರ್ಕಾರವನ್ನು ಕಟ್ಟಿ ಹಾಕಲು ತಂತ್ರ ಹೆಣೆದಿವೆ. ವಿಪಕ್ಷಗಳ ಅಸ್ತ್ರಗಳಿಗೆ ಇವತ್ತಿನ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರತಿ ಅಸ್ತ್ರ ಹೂಡುವ ಕುರಿತು ಚರ್ಚಿಸಲಾಗುತ್ತದೆ.
ಮುಖ್ಯವಾಗಿ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ನೂತನ ಸಚಿವರಿಗೆ ಸಿಎಂ ಯಡಿಯೂರಪ್ಪ ಪಾಠ ಮಾಡಲಿದ್ದಾರೆ. ವಲಸಿಗ ಸಚಿವರು ಇತ್ತೀಚೆಗಷ್ಟೇ ಸಂಪುಟ ಸೇರ್ಪಡೆಯಾಗಿದ್ದಾರೆ. ತಮ್ಮ ತಮ್ಮ ಇಲಾಖೆಗಳ ಬಗ್ಗೆ ಇನ್ನೂ ಯಾವುದೇ ಅರಿವು ಈ ಹೊಸ ಸಚಿವರಿಗೆ ಇಲ್ಲ. ಹೀಗಾಗಿ ಸದನದಲ್ಲಿ ಹೇಗಿರಬೇಕು, ವಿಪಕ್ಷಗಳ ಪ್ರಶ್ನೆಗಳಿಗೆ ಯಾವ ರೀತಿ ಉತ್ತರಿಸಬೇಕೆಂದು ನೂತನ ಸಚಿವರಿಗೆ ಇಂದು ಸಿಎಂ ಯಡಿಯೂರಪ್ಪ ಪಾಠ ಮಾಡಲಿದ್ದಾರೆ.
ನವದೆಹಲಿ: ಶಕ್ತಿ ಇದ್ದರೆ ಅವಿಶ್ವಾಸ ಗೊತ್ತುವಳಿ ಮಂಡಿಸಲಿ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ನಡವಳಿಕೆ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ. ಸರ್ಕಾರ ಅಸ್ಥಿರಗೊಳಿಸಲು ಮುಂದಾದ ಅವರನ್ನು ಯಾರೂ ಹಿಡಿದಿಟ್ಟಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಹೀಗಾಗಿ ಕರ್ನಾಟಕದಲ್ಲಿಯೂ ಅವರೇ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಕಲಾಪಕ್ಕೆ ಕಾಂಗ್ರೆಸ್ ಶಾಸಕರು ಗೈರಾಗಿರುವ ಕುರಿತು ಪ್ರತಿಕ್ರಿಯೆ ನೀಡಿದ ದೇವೇಗೌಡರು, ಮದುವೆ, ಕಾರ್ಯಕ್ರಮ, ವೈಯಕ್ತಿಕ ಕೆಲಸದ ಒತ್ತಡದಿಂದಾಗಿ ಅವರು ಇಂದು ಸದನಕ್ಕೆ ಹಾಜರಾಗಿಲ್ಲ. ನಾಳೆಯಿಂದ ಎಲ್ಲರೂ ಬರುತ್ತಾರೆ. ಆಗ ಬಿಜೆಪಿಯವರಿಗೆ ಅಗತ್ಯವಿದ್ದಲ್ಲಿ ಅವಿಶ್ವಾಸ ಮಂಡಿಸಲಿ ಎಂದು ಕುಟುಕಿದರು.
ಲೋಕಸಭೆಯಲ್ಲಿ ಕಾಂಗ್ರೆಸ್‍ನೊಂದಿಗೆ ಸೀಟು ಹಂಚಿಕೆ ಬಗ್ಗೆ ಯಾವುದೇ ಮಾತುಕತೆಯಾಗಿಲ್ಲ. ಬಜೆಟ್ ವಿಚಾರವಾಗಿ ಮಾತನಾಡಲು ದೆಹಲಿಗೆ ಬಂದಿರುವೆ. ಆದರೆ ಸಂಸತ್ ಕಲಾಪ ಮುಂದೂಡಿಕೆಯಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿಲ್ಲ ಎಂದು ತಿಳಿಸಿದರು.
ಬೆಂಗಳೂರು: ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಚುನಾವಣೆ ನಡೆದಿದ್ದು, ಈಗ ಕರ್ನಾಟಕದಲ್ಲಿ ಚುನಾವಣೆಗೆ ಭರ್ಜರಿ ತಯಾರಿ ನಡೆಯುತ್ತಿದೆ.
2018ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬರೋಬ್ಬರಿ 320 ಕೋಟಿ ರೂಪಾಯಿ ವೆಚ್ಚವಾಗಲಿದೆ. ಹೀಗಾಗಿ ಆದಷ್ಟು ಶೀಘ್ರವಾಗಿ ಹಣ ಬಿಡುಗಡೆ ಮಾಡುವಂತೆ ರಾಜ್ಯ ಚುನಾವಣಾ ಆಯುಕ್ತರು ಹಣಕಾಸು ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.
ಈ ಬಾರಿ ಮತಗಟ್ಟೆಗಳಲ್ಲಿ ವಿವಿಪಿಎಟಿ ಅಳವಡಿಸಿದ ಇವಿಎಂ ಬಳಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಮತಗಟ್ಟೆಗಳ ಸಂಖ್ಯೆಯೂ ಹೆಚ್ಚಾಗಲಿದ್ದು, ಹಣದುಬ್ಬರ, ಬೆಲೆ ಏರಿಕೆಯಿಂದ ಖರ್ಚು ಹೆಚ್ಚಾಗಲಿದೆ ಎಂದು ಚುನಾವಣಾ ಆಯೋಗದ ಮೂಲಗಳು ಹೇಳಿವೆ.
ಹಿಂದಿನ ಬಾರಿ ಚುನಾವಣೆಗೆ ಸುಮಾರು 54,261 ಮತಗಟ್ಟೆಗಳು ಇದ್ದವು. ಆದರೆ ಈ ಬಾರಿಯ ಚುನಾವಣೆಯಲ್ಲಿ ಸುಮಾರು 57,000 ಮತಗಟ್ಟೆಗಳು ಇರಲಿವೆ. ಇನ್ನು ಮತದಾರರ ಸಂಖ್ಯೆಯೂ 4.9 ಕೋಟಿಗೆ ಏರಿಕೆಯಾಗಿದೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.