Tag: Karnataka Assembly Winter Session

  • ಪರದೇಶಿ ಟಿಪ್ಪುವನ್ನು ಹೊಗಳಿ, ಸಾವರ್ಕರ್ ಫೋಟೋ ಕಂಡರೂ ಉರಿದು ಬೀಳುವವರು ದೇಶ ವಿರೋಧಿಗಳು: ಬಿಜೆಪಿ

    ಪರದೇಶಿ ಟಿಪ್ಪುವನ್ನು ಹೊಗಳಿ, ಸಾವರ್ಕರ್ ಫೋಟೋ ಕಂಡರೂ ಉರಿದು ಬೀಳುವವರು ದೇಶ ವಿರೋಧಿಗಳು: ಬಿಜೆಪಿ

    ಬೆಂಗಳೂರು: ಅರ್ಜುನನನ್ನು ಶಂಕಿಸಬಹುದು. ಆದರೆ ಗಾಂಢೀವವನ್ನು ಶಂಕಿಸಬಹುದೇ? ಸಾವರ್ಕರ್ ಎಂದರೆ ಗಾಂಢೀವ! ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಕಾಂಗ್ರೆಸ್‍ಗೆ (Congress) ಜನರಿಗಿಂತ ನಿಮ್ಹಾನ್ಸ್ ಆಸ್ಪತ್ರೆಯ ನುರಿತ ಮನೋವೈದ್ಯರ ಅವಶ್ಯಕತೆ ಹೆಚ್ಚಾಗಿದೆ. ಪರದೇಶಿ ಟಿಪ್ಪುವನ್ನು (Tippu) ಹೊಗಳುವವರು, ದೇಶಪ್ರೇಮಿ ಸಾವರ್ಕರ್ (Savarkar) ಫೋಟೋ ಕಂಡರೂ ಉರಿದು ಬೀಳುವವರು ಒಂದೋ ದೇಶ ವಿರೋಧಿಯಾಗಿರಬೇಕು ಅಥವಾ ಮಾನಸಿಕ ಅಸ್ವಸ್ಥರಾಗಿರಬೇಕು ಎಂದು ಬಿಜೆಪಿ (BJP) ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ.

    ಟ್ವೀಟ್‍ನಲ್ಲಿ ಏನಿದೆ?
    1970ರಲ್ಲಿ ಇಂದಿರಾ ಗಾಂಧಿ (Indira Gandhi) ಸರ್ಕಾರ ವೀರ ಸಾವರ್ಕರ್ ಅಂಚೆ ಚೀಟಿ ಬಿಡುಗಡೆ ಮಾಡಿತ್ತು. ಸಾವರ್ಕರ್ ಕುರಿತು ಡಾಕ್ಯುಮೆಂಟರಿ ನಿರ್ಮಾಣಕ್ಕಾಗಿ ಸಾವರ್ಕರ್ ಸ್ಮಾರಕ ಸಮಿತಿಗೆ ಸ್ವತಃ ಇಂದಿರಾ ಗಾಂಧಿ ದೇಣಿಗೆ ನೀಡಿದ್ದರು. ಕಾಂಗ್ರೆಸಿನ ಇತಿಹಾಸ ಪ್ರಜ್ಞೆ ಪ್ರಧಾನಮಂತ್ರಿ ಬದಲಾದಂತೆ ಬದಲಾಗುವುದೇ? ಸಾವರ್ಕರ್ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರು ಖುದ್ದು ಸಾವರ್ಕರ್ ಹೋರಾಟವನ್ನು ಕೊಂಡಾಡಿ ಅವರೊಬ್ಬ ಅದ್ಭುತ ಸ್ವಾತಂತ್ರ್ಯ ಹೋರಾಟಗಾರ ಎಂದು ಶ್ಲಾಘಿಸಿ ಪತ್ರ ಬರೆದಿದ್ದರು. ಇದನ್ನೂ ಓದಿ: ಬೆಳಗಾವಿ ಅಧಿವೇಶನ: ಸಾವರ್ಕರ್‌ ಸೇರಿ 7 ಮಂದಿ ಫೋಟೋ ಅನಾವರಣ

    ಇದರ ಜೊತೆಗೆ ವೀರ ಸಾವರ್ಕರ್ ಸ್ಮಾರಕ ನಿಧಿಗೆ ವೈಯುಕ್ತಿಕವಾಗಿ 11,000 ರೂಪಾಯಿ ದೇಣಿಗೆ ಕೂಡಾ ನೀಡಿದ್ದರು. ಸಾವರ್ಕರ್ ಅಸ್ಪೃಶ್ಯತಾ ನಿವಾರಣೋಪಾಯಗಳು ಅಂಬೇಡ್ಕರ್ ಅವರಿಗೆ ಪ್ರೇರಣೆಯಾಗಿತ್ತು, ಆದರೆ ಕಾಂಗ್ರೆಸ್ಸಿಗರಿಗೆ ಆಗಲೇ ಇಲ್ಲ! ‘ಅಸ್ಪೃಶ್ಯತೆ ನಿವಾರಿಸಲು ನನ್ನ ಆಶಯಕ್ಕನುಗುಣವಾಗಿ ಸಮಾಜದೊಳಗಿದ್ದು ಶ್ರಮಿಸುತ್ತಿರುವ ಕೆಲವೇ ಕೆಲವು ಮಂದಿಯಲ್ಲಿ ಸಾವರ್ಕರ್ ಕೂಡಾ ಒಬ್ಬರು’ ಎಂದು ಅಂಬೇಡ್ಕರ್ ಕೊಂಡಾಡಿದ್ದರು. ತಾಯಿ ಭಾರತಿಗೆ ಕನ್ನಡದಾರತಿ ಎತ್ತುವೆ ಎಂದ ಆಲೂರು ವೆಂಕಟರಾಯರಿಗೆ, ಭಾರತ ಜನನಿಯ ತನುಜಾತೆ ಎಂದ ಕುವೆಂಪುರವರಿಗೆ, ಭಾಷೆಯಲ್ಲ, ಕಾವ್ಯವೇ ನವಮೇಘರೂಪ ಎಂದ ಬೇಂದ್ರೆಯವರಿಗೆ ಪ್ರೇರಣೆಯಾದವರು ಸಾವರ್ಕರ್. ಅಂಥಹ ವೀರ ಸಾವರ್ಕರ್ ಅವರು ಕಾಂಗ್ರೆಸ್ಸಿಗೆ ಮಾತ್ರ ವಿರೋಧಿಸುವುದೇಕೆ? ಸಿಂಗಾಪುರದ “ಫ್ರೀ ಇಂಡಿಯಾ ರೇಡಿಯೋ” ಭಾಷಣದಲ್ಲಿ ನೇತಾಜಿ, “ರಾಜಕೀಯ ಪ್ರಬುದ್ಧತೆಯಿಲ್ಲದ ಕಾಂಗ್ರೆಸ್ ಸೈನಿಕರನ್ನು ಹಣಕ್ಕಾಗಿ ಮಾರಿಕೊಂಡವರು ಎಂದು ಹೀಯಾಳಿಸುತ್ತಿರುವಾಗ ಸಾವರ್ಕರ್ ಸೇನೆಗೆ ಸೇರಿ ಎನ್ನುತ್ತಿರುವುದು ಸ್ಫೂರ್ತಿದಾಯಕ” ಎಂದಿದ್ದರು.

    ಸಾವರ್ಕರ್ ನಿಂದಕರೆಲ್ಲರೂ ನೇತಾಜಿ ನಿಂದಕರೂ ಆಗಿದ್ದಾರೇಕೆಂದು ಈಗ ತಿಳಿಯಿತೇ? ಕಾಂಗ್ರೆಸ್ ಇಂದು ಸಾವರ್ಕರ್‌ರನ್ನು ವಿರೋಧಿಸಬಹುದು. ಆದರೆ ಸಾವರ್ಕರ್‌ರನ್ನು ಅಪಾರವಾಗಿ ಪ್ರೀತಿಸುವವರು, ಗೌರವಿಸುವವರ ಸಾಲಲ್ಲಿ ಗಾಂಧೀಜಿಯೂ ನಿಲ್ಲುತ್ತಾರೆ. ಗಾಂಧೀಜಿ ಪತ್ರಗಳಲ್ಲಿ ಸಾವರ್ಕರ್‌ರನ್ನು ಪ್ರೀತಿಯಿಂದ ‘ಭಾಯ್’ ಎಂದು ಸಂಬೋಧಿಸುತ್ತಿದ್ದರು. ಕಾಂಗ್ರೆಸ್ ಗಾಂಧೀಜಿಯನ್ನೂ ವಿರೋಧಿಸುವುದೇ? ಒಂದು ಸಮುದಾಯದ ಓಲೈಕೆಯಲ್ಲೇ ನಿರತರಾಗಿರುವ ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್‍ಗೆ ಟಿಪ್ಪು, ಶಾರಿಕ್‍ನಂಥವರೇ ದೇವರಾಗಿದ್ದಾರೆಯೇ ವಿನಾ, ದಲಿತರಿಗೂ ಪತಿತ ಪಾವನ ಮಂದಿರ ಕೊಟ್ಟ ಸಾವರ್ಕರ್ ದೇವರಾಗಲಿಲ್ಲ. ಇದನ್ನೂ ಓದಿ: ನಾವು ಹಿಂದೂಗಳೇ – ಹುಟ್ಟಿದ್ದು ಹಿಂದೂವಾಗಿ ಸಾಯುವುದು ಹಿಂದೂವಾಗಿಯೇ: ಡಿಕೆಶಿ

    ಸಮಾಜವಾದಿ ಸಿದ್ದರಾಮಯ್ಯ ಈಗೆಲ್ಲಿ ಹೋದರು? ಮಾನ್ಯ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರೇ, ಸಾವರ್ಕರ್ ಅವರನ್ನು ಓದುವುದು ಬೇಡ. ಕೇವಲ ನಿಮ್ಮ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಮಾತನ್ನು ನೀವು ಅರ್ಥ ಮಾಡಿಕೊಂಡಿದ್ದರೂ, ಸಾವರ್ಕರ್ ಅವರ ಭಾವಚಿತ್ರಕ್ಕೆ ನೀವೇ ಹಾರ ಹಾಕುತ್ತಿದ್ದಿರೇನೋ! ಮಸ್ತಕದಲ್ಲೂ ಏನಿಲ್ಲ, ಪುಸ್ತಕವೂ ಓದಲ್ಲ ಎನ್ನುವವರಿಗೆ ಏನೆನ್ನೋಣ? ಅಂಡಮಾನಿನ ಕತ್ತಲ ಕೋಣೆಯಲ್ಲಿ ವೀರ ಸಾವರ್ಕರ್ ಕಾಲ ಕಳೆಯದಿರುತ್ತಿದ್ದರೆ, ಅವರ ಚಿಂತನೆಗಳು ರಾಷ್ಟ್ರದಲ್ಲಿ ಹರಿಯದಿರುತ್ತಿದ್ದರೆ ಭಾರತ 1947 ರಲ್ಲಿ ಸ್ವತಂತ್ರವಾಗುತ್ತಲೂ ಇರಲಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿ ಇರುತ್ತಲೂ ಇರಲಿಲ್ಲ! ಅಂದು ವೀರ ಸಾವರ್ಕರ್ ಕತ್ತಲ ಕೋಣೆಯಲ್ಲಿ ಕಾಲ ಕಳೆಯದಿರುತ್ತಿದ್ದರೆ, ಇಂದು ವಿರೋಧಿಸುವವರಿಗೆ ಧ್ವನಿಯೇ ಇರುತ್ತಿರಲಿಲ್ಲ. ಇಂದಿನ ಆಡಳಿತದ ಯಾವ ಸಂಕೇತಗಳೂ ಇರುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಿಎಂ ಬೊಮ್ಮಾಯಿ ಸುಳ್ಳಿನ ರಾಜ – ನಮ್ಮ ಒತ್ತಾಯದಿಂದ ಅಧಿವೇಶನ ನಡೆಯುತ್ತಿದೆ: ಡಿಕೆಶಿ ಕಿಡಿ

    Live Tv
    [brid partner=56869869 player=32851 video=960834 autoplay=true]

  • ಸಿಎಂ ಬೊಮ್ಮಾಯಿ ಸುಳ್ಳಿನ ರಾಜ – ನಮ್ಮ ಒತ್ತಾಯದಿಂದ ಅಧಿವೇಶನ ನಡೆಯುತ್ತಿದೆ: ಡಿಕೆಶಿ ಕಿಡಿ

    ಸಿಎಂ ಬೊಮ್ಮಾಯಿ ಸುಳ್ಳಿನ ರಾಜ – ನಮ್ಮ ಒತ್ತಾಯದಿಂದ ಅಧಿವೇಶನ ನಡೆಯುತ್ತಿದೆ: ಡಿಕೆಶಿ ಕಿಡಿ

    ಬೆಳಗಾವಿ: ಸುವರ್ಣಸೌಧದಲ್ಲಿ (Suvarna Soudha) ಸಾವರ್ಕರ್ (Savarkar) ಫೋಟೋ ವಿಚಾರವಾಗಿ ನನಗೆ ಗೊತ್ತೆ ಇಲ್ಲಾ ಅಂತ ಮುಖ್ಯಮಂತ್ರಿಗಳು ಹೇಳಿದ್ರು. ಅವರು ಸುಳ್ಳಿನ ರಾಜ. ಮುಖ್ಯಮಂತ್ರಿಗಳಿಗೆ ಸುಳ್ಳಿನ ರಾಜ ಅಂತ ಕರೆಯಬೇಕಾಗುತ್ತೆ ಎಂದು ಡಿ.ಕೆ ಶಿವಕುಮಾರ್ (DK Shivakumar)  ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಸುವರ್ಣಸೌಧದ ಮುಂಭಾಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ನಾವು ಉತ್ತರ ಕರ್ನಾಟಕದಲ್ಲಿ ಅಧಿವೇಶನ ಮಾಡಲೇಬೇಕೆಂಬ ಒತ್ತಾಯದಿಂದಾಗಿ ಅಧಿವೇಶನ ನಡೆಯುತ್ತಿದೆ. ಬಿಜೆಪಿ ಸರ್ಕಾರ ಬಂದ ನಂತರ ಉತ್ತರ ಕರ್ನಾಟಕವನ್ನು ಸಂಪೂರ್ಣ ಮರೆತಿದ್ದಾರೆ. ಉತ್ತರ ಕರ್ನಾಟಕವನ್ನು ಸರ್ಕಾರ ಮರೆತಿದ್ದು, ಇಲ್ಲಿನ ಪರಿಸ್ಥಿತಿಯನ್ನು ಸಮಸ್ಯೆಗಳನ್ನು ಆಲಿಸಲು ಸರ್ಕಾರ ವಿಫಲವಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಏಯ್‌ ಯತ್ನಾಳ್‌ – ಕಾರಿಡಾರ್‌ನಲ್ಲಿ ಸಿದ್ದು ಇತಿಹಾಸ ಪಾಠ

    ಸರ್ಕಾರ ಇಲ್ಲಿನ ಪರಿಸ್ಥಿಯನ್ನು ಮರೆತು ಅಧಿವೇಶನದ ದಾರಿ ತಪ್ಪಿಸಲು ಹೊರಟಿದೆ. ಸ್ವಾತಂತ್ರಕ್ಕೆ ಸಾವರ್ಕರ್ ಕೊಡುಗೆ ಇಲ್ಲ. ಅವರು ತಪ್ಪು ಒಪ್ಪಿಕೊಂಡು ಪತ್ರ ಬರೆದು ಕೊಟ್ಟಿದ್ದರು. ಅವರು ಬ್ರಿಟಿಷರ ಜೊತೆ ಕೈ ಜೋಡಿಸಿದ್ದರು. ಕಮೀಷನ್, ಮತದಾರರ ಪಟ್ಟಿ ಹಗರಣ ಯಾವುದೂ ಚರ್ಚೆ ಆಗಬಾರದು ಅಂತ ಬಿಜೆಪಿಯವರು ಇದೀಗ ಸವರ್ಕರ್ ಫೋಟೋ ಹಾಕಿ ವಿವಾದ ಸೃಷ್ಟಿಸುತ್ತಿದ್ದಾರೆ. ಸ್ಪೀಕರ್ ಗಾಂಧಿ ಹಾಗೂ ಅಂಬೇಡ್ಕರ್ ಸೇರಿದಂತೆ ಮಹನಿಯರ ಫೋಟೋ ಹಾಕ್ತೀವಿ ಅಂತ ಹೇಳಿದ್ದರು. ಆದರೆ ಇಲ್ಲಿಗೆ ಬಂದ ಮೇಲೆ ಮಾಧ್ಯಮ ಮೂಲಕ ಸಾವರ್ಕರ್ ಫೋಟೋ ಹಾಕೋದು ಗೊತ್ತಾಯಿತು. ಸಾವರ್ಕರ್‌ಗೂ ನಮ್ಮ ರಾಜ್ಯಕ್ಕೂ ಏನು ಸಂಬಂಧ? ಸಾವರ್ಕರ್ ವಿವಾದಾತ್ಮಕ ವ್ಯಕ್ತಿ ಅಂತ ಎಲ್ಲರಿಗೂ ಗೊತ್ತು. ಇದೀಗ ಬಿಜೆಪಿ ಅಧಿವೇಶನಕ್ಕೆ ಅಡ್ಡಿ ತರಲು ಹೊರಟಿದೆ ಎಂದು ಚಾಟಿ ಬೀಸಿದ್ದಾರೆ. ಇದನ್ನೂ ಓದಿ: ನಾವು ಹಿಂದೂಗಳೇ – ಹುಟ್ಟಿದ್ದು ಹಿಂದೂವಾಗಿ ಸಾಯುವುದು ಹಿಂದೂವಾಗಿಯೇ: ಡಿಕೆಶಿ

    Live Tv
    [brid partner=56869869 player=32851 video=960834 autoplay=true]

  • ನಾವು ಹಿಂದೂಗಳೇ – ಹುಟ್ಟಿದ್ದು ಹಿಂದೂವಾಗಿ ಸಾಯುವುದು ಹಿಂದೂವಾಗಿಯೇ: ಡಿಕೆಶಿ

    ನಾವು ಹಿಂದೂಗಳೇ – ಹುಟ್ಟಿದ್ದು ಹಿಂದೂವಾಗಿ ಸಾಯುವುದು ಹಿಂದೂವಾಗಿಯೇ: ಡಿಕೆಶಿ

    ಬೆಳಗಾವಿ: ನಾವು ಹಿಂದೂಗಳೇ (Hindu), ಹುಟ್ಟಿದ್ದು ಹಿಂದೂವಾಗಿ ಸಾಯುವುದು ಹಿಂದೂವಾಗಿಯೇ. ಬಿಜೆಪಿಯವರದ್ದು ನಾಟಕ. ಒಳಗಿನಿಂದ ನಮ್ಮಲ್ಲಿ ಹಿಂದುತ್ವವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಹಿಂದುತ್ವದ ಜಪ ಮಾಡಿದ್ದಾರೆ.

    ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ (Karnataka Assembly Winter Session) ಸಾವರ್ಕರ್ ಬಿಸಿ ಜೋರಾಗಿ ತಟ್ಟುವ ಸಾಧ್ಯತೆ ಹೆಚ್ಚಿದೆ. ಇಂದಿನಿಂದ 10 ದಿನಗಳ ಕಾಲ ಅಧಿವೇಶನ ನಡೆಯಲಿದೆ. ಬೆಳಗಾವಿ ಸುವರ್ಣಸೌಧದಲ್ಲಿ (Suvarna Soudha) ಮೊದಲ ದಿನದಿಂದಲೇ ಹಿಂದುತ್ವ ವಿಚಾರವೇ ಹೆಚ್ಚು ಪ್ರತಿಧ್ವನಿಸುವ ಮುನ್ಸೂಚನೆ ಸಿಕ್ಕಿದೆ. ಇದನ್ನೂ ಓದಿ: ಬೆಳಗಾವಿ ಅಧಿವೇಶನ: ಸಾವರ್ಕರ್‌ ಸೇರಿ 7 ಮಂದಿ ಫೋಟೋ ಅನಾವರಣ

    ಸುವರ್ಣಸೌಧದ ಮುಂಭಾಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಸ್ಪೀಕರ್ ಗಾಂಧಿ ಹಾಗೂ ಅಂಬೇಡ್ಕರ್ ಸೇರಿದಂತೆ ಮಹನಿಯರ ಫೋಟೋ ಹಾಕ್ತೀವಿ ಅಂತ ಹೇಳಿದ್ದರು. ಆದರೆ ಇಲ್ಲಿಗೆ ಬಂದ ಮೇಲೆ ಮಾಧ್ಯಮ ಮೂಲಕ ಸಾವರ್ಕರ್ (Savarkar) ಫೋಟೋ ಹಾಕೋದು ಗೊತ್ತಾಯಿತು. ಸಾವರ್ಕರ್‌ಗೂ ನಮ್ಮ ರಾಜ್ಯಕ್ಕೂ ಏನು ಸಂಬಂಧ? ಸಾವರ್ಕರ್ ವಿವಾದಾತ್ಮಕ ವ್ಯಕ್ತಿ ಅಂತ ಎಲ್ಲರಿಗೂ ಗೊತ್ತು. ಇದೀಗ ಬಿಜೆಪಿ ಅಧಿವೇಶನಕ್ಕೆ ಅಡ್ಡಿ ತರಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಮೊದಲ ಬಾರಿಗೆ ಎಂಇಎಸ್ ಮಹಾಮೇಳಾವ್‌ಗೆ ಬ್ರೇಕ್

    ಫೋಟೋ ವಿಚಾರವಾಗಿ ನನಗೆ ಗೊತ್ತೆ ಇಲ್ಲಾ ಅಂತ ಮುಖ್ಯಮಂತ್ರಿಗಳು ಹೇಳಿದ್ರು. ಅವರು ಸುಳ್ಳಿನ ರಾಜ. ಮುಖ್ಯಮಂತ್ರಿಗಳಿಗೆ ಸುಳ್ಳಿನ ರಾಜ ಅಂತ ಕರೆಯಬೇಕಾಗುತ್ತೆ. ಸ್ವಾತಂತ್ರಕ್ಕೆ ಸಾವರ್ಕರ್ ಕೊಡುಗೆ ಇಲ್ಲ. ಅವರು ತಪ್ಪು ಒಪ್ಪಿಕೊಂಡು ಪತ್ರ ಬರೆದು ಕೊಟ್ಟಿದ್ದರು. ಅವರು ಬ್ರಿಟಿಷರ ಜೊತೆ ಕೈ ಜೋಡಿಸಿದ್ದರು. ಕಮೀಷನ್, ಮತದಾರರ ಪಟ್ಟಿ ಹಗರಣ ಯಾವುದೂ ಚರ್ಚೆ ಆಗಬಾರದು ಅಂತ ಬಿಜೆಪಿಯವರು ಹೀಗೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]