ಬೆಂಗಳೂರು: ಸಾರಿಗೆ ಇಲಾಖೆಯ 4 ನಿಗಮಗಳ ವಿವಿಧ ಆಸ್ತಿಯನ್ನು ಒಟ್ಟು 540 ಕೋಟಿ ರೂ.ಗೆ ಅಡವಿಟ್ಟಿದ್ದೇವೆ ಎಂದು ಸಾರಿಗೆ ಸಚಿವ ಶ್ರೀರಾಮುಲು ವಿಧಾನಪರಿಷತ್‌ನಲ್ಲಿ ಉತ್ತರಿಸಿದ್ದಾರೆ.
ವಿಧಾನಪರಿಷತ್‍ನಲ್ಲಿ ಪ್ರಶ್ನೋತ್ತರ ಅವಧಿ ವೇಳೆ ಕಾಂಗ್ರೆಸ್‍ನ ಯು.ಬಿ ವೆಂಕಟೇಶ್ ಸಾರಿಗೆ ಇಲಾಖೆಯ ಸಾಲದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ಸಾರಿಗೆ ಇಲಾಖೆ 4 ನಿಗಮಗಳ ವಿವಿಧ ಆಸ್ತಿಗಳನ್ನು ಅಡಮಾನ ಇಟ್ಟು ಸಾಲ ಪಡೆಯಲಾಗಿದೆ. ಬಿಎಂಟಿಸಿ – 390 ಕೋಟಿ ರೂ., ವಾಯುವ್ಯ ಸಾರಿಗೆ – 100 ಕೋಟಿ ರೂ., ಕಲ್ಯಾಣ ಕರ್ನಾಟಕ ಸಾರಿಗೆ – 50 ಕೋಟಿ ರೂ. ಒಟ್ಟು 540 ಕೋಟಿ ರೂ. ಸಾಲ ಮಾಡಲಾಗಿದೆ ಎಂದರು. ಇದನ್ನೂ ಓದಿ: ಪಂಚ ರಾಜ್ಯಗಳ ಚುನಾವಣೆ ಮುಗಿಯಿತು – ಪೆಟ್ರೋಲ್, ಡಿಸೇಲ್ ದರ ಏರಿಕೆಗೆ ಸಜ್ಜಾಗಿ
ಕೊರೊನಾ ಸಮಯದಲ್ಲಿ ನೌಕರರಿಗೆ ನಮಗೆ ಸಂಬಳ ಕೊಡಲು ಹಣ ಇರಲಿಲ್ಲ ಈ ವೇಳೆ ಸಾಲ ಮಾಡಿದ್ದೇವೆ. ಅಲ್ಲದೇ ನೌಕರರ ಭವಿಷ್ಯ ನಿಧಿ ಬಳಕೆಗೆ ಕೂಡ ಸಾಲ ಮಾಡಿದ್ದೇವೆ. ಕೊರೊನಾ ಸಮಯದಲ್ಲಿ ಸರ್ಕಾರ ಸಾರಿಗೆ ಇಲಾಖೆಗೆ 2,958 ಕೋಟಿ ರೂ. ನೀಡಿ ನೌಕರರಿಗೆ ಸಂಬಳ ನೀಡಲು ಮುಂದಾಗಿತ್ತು. ಸದ್ಯ ಕೋವಿಡ್‍ನಲ್ಲಿ ಮೃತರಾದ ಸಿಬ್ಬಂದಿಗಳ ಮಾಹಿತಿ ಪಡೆಯಲಾಗುತ್ತಿದ್ದು, ಮಾಹಿತಿ ಬಂದ ಹಾಗೆ ಪರಿಹಾರ ನೀಡಲಾಗುತ್ತಿದೆ ಎಂದು ಮಾಹಿತಿ ಹಂಚಿಕೊಂಡರು. ನಷ್ಟದಲ್ಲಿರುವ ಸಾರಿಗೆ ಸಂಸ್ಥೆಗಳನ್ನು ಆದಷ್ಟು ಶೀಘ್ರ ಲಾಭಕ್ಕೆ ತರಲು ಸಮಿತಿ ರಚನೆ ಮಾಡಲಾಗಿದೆ. ಆದಷ್ಟು ಬೇಗ ಸಂಸ್ಥೆಯನ್ನು ಲಾಭದತ್ತ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದರು. ಇದನ್ನೂ ಓದಿ: ಪಂಚರಾಜ್ಯಗಳ ಫಲಿತಾಂಶದ ಬೆನ್ನಲ್ಲೇ ರಾಜ್ಯಕ್ಕೆ ಬರಲಿದ್ದಾರೆ ಮೋದಿ – ಕಲಬುರಗಿಗೆ ಯಾಕೆ?
ರಾಜ್ಯದಲ್ಲಿ 1,05,864 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಇದ್ದಾರೆ. ರಾಜ್ಯದಲ್ಲಿರುವ ಜನಸಂಖ್ಯೆಗೆ ಅನುಪಾತವೂ 577 ಇದೆ. ಅಂದರೆ 577 ಜನರಿಗೆ ಒಬ್ಬ ಪೊಲೀಸ್ ಇದ್ದಾರೆ ಅಂತ ಸಚಿವರು ಮಾಹಿತಿ ನೀಡಿದರು. ಕಳೆದ 5 ವರ್ಷಗಳಲ್ಲಿ 35 ಸಾವಿರ ಹುದ್ದೆ ಭರ್ತಿ ಮಾಡಲಾಗಿದೆ. ಬಾಕಿ ಇರುವ ಸಬ್ ಇನ್ಸ್‌ಪೆಕ್ಟರ್ ನೇಮಕ ಆಗಿದೆ. ಅವ್ರಿಗೆ ಟ್ರೈನಿಂಗ್ ಆಗುತ್ತಿದೆ. ಅವರು ಬಂದ್ರೆ ಸಬ್ ಇನ್ಸ್‌ಪೆಕ್ಟರ್. ಎಲ್ಲಾ ಹುದ್ದೆ ಭರ್ತಿ ಆಗುತ್ತದೆ. ಪೇದೆಗಳ ನೇಮಕಾತಿಯೂ ಆಗಿದೆ. ಪ್ರತಿ ವರ್ಷ 4 ಸಾವಿರ ಪೊಲೀಸರ ನೇಮಕ ಆಗುತ್ತಿದೆ ಎಂದು ತಿಳಿಸಿದರು.
ಮೊದಲು ರಾಜ್ಯದಲ್ಲಿ 6 FSL ಲ್ಯಾಬ್‍ಗಳು ಇತ್ತು. ಈಗ ಇದನ್ನು ಹೆಚ್ಚಳ ಮಾಡಿ ಬಲಪಡಿಸಲಾಗಿದೆ. ಹುಬ್ಬಳ್ಳಿ, ಬಳ್ಳಾರಿಯಲ್ಲೂ FSL ಪ್ರಾರಂಭ ಮಾಡಲಾಗಿದೆ. ಮೊದಲು ನಮಗೆ DNA ಸ್ಯಾಂಪಲ್ ವರದಿ ತಡ ಆಗುತ್ತಿತ್ತು. ಎರಡು ವರ್ಷ ತಡ ಆಗ್ತಿತ್ತು. ಈಗ ಹುಬ್ಬಳ್ಳಿಯಲ್ಲಿ DNA ಲ್ಯಾಬ್ ಪ್ರಾರಂಭ ಮಾಡಿದ್ದೇವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನೋಯ್ಡಾದಲ್ಲಿ ರಾಜ್‍ನಾಥ್ ಸಿಂಗ್ ಮಗ ಪಂಕಜ್ ಸಿಂಗ್‍ಗೆ ದಾಖಲೆಯ ಜಯ
ಪೊಲೀಸರಿಗೆ ಹೊಸ, ಹೊಸ ವೆಹಿಕಲ್ ಕೊಡಿಸಿದ್ದೇವೆ. ತಂತ್ರಜ್ಞಾನ ಅಳವಡಿಕೆಯನ್ನು ಇಲಾಖೆಯಲ್ಲಿ ಮಾಡಲಾಗಿದೆ. ಟೋಯಿಂಗ್ ಮಾಡೋದನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ. ಈಗಾಗಲೇ ಸಿಎಂ ಜೊತೆ ಈ ಬಗ್ಗೆ ಚರ್ಚೆ ಆಗಿದೆ. ಹೊಸ ಟೋಯಿಂಗ್ ವ್ಯವಸ್ಥೆ ಶೀಘ್ರವಾಗಿ ಜಾರಿ ಮಾಡುತ್ತೇವೆ. ಅಲ್ಲದೆ ಟ್ರಾಫಿಕ್ ಇಲಾಖೆ ವ್ಯವಸ್ಥೆಯಲ್ಲೂ ವಿಶೇಷ ಕಾರ್ಯಕ್ರಮ ಜಾರಿ ಮಾಡುತ್ತಿದ್ದೇವೆ. ಜನ ಸ್ನೇಹಿ ಟ್ರಾಫಿಕ್ ವ್ಯವಸ್ಥೆ ತರುತ್ತಿದ್ದೇವೆ. ಶೀಘ್ರವೇ ಎರಡೂ ನೂತನ ವ್ಯವಸ್ಥೆ ಜಾರಿಗೆ ಬರುತ್ತೆ ಎಂದರು.
ಇಂಟೆಲಿಜೆನ್ಸ್ ವಿಭಾಗಕ್ಕೆ ಪ್ರತ್ಯೇಕ ತಂಡ ಮಾಡುವ ಚಿಂತನೆ ಇದೆ. ಈಗ ಇಲಾಖೆಯಲ್ಲಿ ಇರೋರನ್ನೆ ಇಂಟಲಿಜೆನ್ಸ್‌ಗೆ ಬಳಕೆ ಮಾಡಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ನೇಮಕಾತಿ ಮಾಡಿಕೊಂಡು, ಅವರಿಗೆ ವಿಶೇಷ ತರಬೇತಿ ನೀಡುವ ಬಗ್ಗೆ ಚರ್ಚೆ ಆಗುತ್ತಿದೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಲಾಗಿದೆ ಅಂತ ತಿಳಿಸಿದರು.
ಬೆಂಗಳೂರು: ಎತ್ತಿನಹೊಳೆ ಯೋಜನೆಯ ಭಾಗವಾಗಿ ಚಿಕ್ಕಬಳ್ಳಾಪುರದಲ್ಲಿ ಅಡಿಗಲ್ಲು ಹಾಕಿದಾಗ ಒಂದೇ ವರ್ಷದಲ್ಲಿ ನೀರು ಕೊದಲಾಗುವುದು ಎಂದು ಸರ್ಕಾರ ಹೇಳಿತ್ತು. ಅವತ್ತೇ ನಾನು ಕೋಲಾರದಲ್ಲಿ ಹೇಳಿದ್ದೆ, ಒಂದೇ ವರ್ಷದಲ್ಲಿ ನೀರು ಕೊಟ್ಟರೆ ತಲೆ ಬೋಳಿಸಿಕೊಳ್ತೀನಿ ಎಂದಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚಿಕ್ಕಬಳ್ಳಾಪುರದಲ್ಲಿ ಅಡಿಗಲ್ಲು ಹಾಕಿದಾಗ ಒಂದೇ ವರ್ಷದಲ್ಲಿ ನೀರು ಕೊದಲಾಗುವುದು ಎಂದು ಸರ್ಕಾರ ಹೇಳಿತ್ತು. ಅವತ್ತೇ ನಾನು ಕೋಲಾರದಲ್ಲಿ ಹೇಳಿದ್ದೆ, ಒಂದೇ ವರ್ಷದಲ್ಲಿ ನೀರು ಕೊಟ್ಟರೆ ತಲೆ ಬೋಳಿಸಿಕೊಳ್ತೀನಿ ಅಂತ. ಆಗ ನನಗೆ ಸ್ವಲ್ಪ ಕೂದಲಿತ್ತು. ಹೇ.. ಅವನಿಗೆ ಕೂದಲೇ ಇಲ್ಲ, ಅವನೆಲ್ಲಿ ತಲೆ ಬೋಳಿಸ್ಕೋತಾನೆ ಅಂದಿದ್ರು, ನನಗೆ ನೆನಪಿದೆ ಎಂದು ಎತ್ತಿನಹೊಳೆಯ ಹಣೆಬರಹವನ್ನು ಸದನದ ಗಮನಕ್ಕೆ ತಂದರು. ಎತ್ತಿನಹೊಳೆ ಯೋಜನೆಯ ಎಲ್ಲ ವಿವರಗಳನ್ನು, ಕಷ್ಟ ನಷ್ಟಗಳನ್ನು ಸವಿಸ್ತಾರವಾಗಿ ಹೇಳಿದರು. ಇದನ್ನೂ ಓದಿ: ಕನ್ನಡದಲ್ಲಿ ಮಾತಾಡೋಕೆ ಹೇಳಿ, ನಮಗೆ ಏನೂ ಅರ್ಥ ಆಗ್ತಿಲ್ಲ: ಪರಿಷತ್ ಕಲಾಪದಲ್ಲಿ ಗಲಾಟೆ
ಪ್ರಸಕ್ತ ಬಜೆಟ್‍ನಲ್ಲಿ ಈ ಯೋಜನೆಗೆ 3,000 ಕೋಟಿ ರೂಪಾಯಿ ಘೋಷಣೆ ಮಾಡಲಾಗಿದೆ. ಹಾಗೆ ನೋಡಿದರೆ ಮೊದಲಿಗೆ ಇವೆರಡೂ ಜಿಲ್ಲೆಗಳಿಗೆ ನೀರು ತರುವ ನಿರ್ಧಾರ ಮಾಡಿದ್ದು 2011-12ರಲ್ಲಿ. ಆಗ ಜಲ ಸಂಪನ್ಮೂಲ ಸಚಿವರಾಗಿದ್ದವರು ಈಗಿನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು. ಆದರೆ ಎತ್ತಿನಹೊಳೆಯ ನೀರಿನ ಮೂಲ ಯಾವುದು? ನೀರಿನ ಲಭ್ಯತೆಯ ಖಾತರಿ ಇಲ್ಲದೆ ಲೋಕಸಭೆ ಚುನಾವಣೆ ಘೋಷಣೆ ಆದಾಗ ಚಿಕ್ಕಬಳ್ಳಾಪುರದಲ್ಲಿ ತರಾತುರಿಯಲ್ಲಿ ಕಾರ್ಯಕ್ರಮ ಮಾಡಿ ಶಂಕುಸ್ಥಾಪನೆ ಮಾಡಲಾಯಿತು. ಈಗ ನೀರು ಯಾವಾಗ ಬರುತ್ತದೆ ಎಂದು ಅವರು ಕೇಳಿದರು.
ನೇತ್ರಾವತಿ ನದಿಯಿಂದ ಮೂರು ಹಂತಗಳಲ್ಲಿ ನೀರನ್ನು ಬರಪೀಡಿತ ಜಿಲ್ಲೆಗಳಿಗೆ 24 ಟಿಎಂಸಿ ನೀರನ್ನು ಹರಿಸುವ ಈ ಯೋಜನೆಗೆ 2013ರಲ್ಲಿ 8,323 ಕೋಟಿ, 2014ರಲ್ಲಿ 12,912ಕೋಟಿಗೆ ಎಸ್ಟಿಮೇಟ್ ಮಾಡಲಾಯಿತು. ಆದರೆ ಹತ್ತು ವರ್ಷ ಆದರೂ ಯೋಜನೆ ಇನ್ನೂ ಆಗುತ್ತಲೇ ಇದೆ ಎಂದು ಕುಮಾರಸ್ವಾಮಿ ಅವರು ಹೇಳಿದರು. ಇದನ್ನೂ ಓದಿ: ವಿಧಾನಸಭೆ ಕಲಾಪಕ್ಕೆ ಸಚಿವರು ಗೈರು – ಸ್ಪೀಕರ್ ಗರಂ
ಇಷ್ಟು ದಿನವಾದರೂ ಕೇವಲ ಲೈನ್ ಎಸ್ಟಿಮೇಟ್ ಮೂಲಕವೇ ಕಾಮಗಾರಿ ಮಾಡಲಾಗುತ್ತಿದೆ. ಇಷ್ಟಾದರೂ ಇಂದು ಹೊಸದಾಗಿ 3000 ಕೋಟಿ ಹಣ ಇಟ್ಟಿದ್ದು, ಅದು ಬಳಕೆ ಆಗಬೇಕು ಎನ್ನುವುದು ನನ್ನ ಆಶಯ ಎಂದರು ಅವರು.
ತುಮಕೂರಿನ ದೇವರಾಯನ ದುರ್ಗದಲ್ಲಿ 10 ಟಿಎಂಸಿ ನೀರು ಸಂಗ್ರಹಿಸಲು ಜಲಾಶಯ ಕಟ್ಟಬೇಕು ಅಂತ ಹೊರಟ ಸರ್ಕಾರ, ಕ್ರಮೇಣ ಅದನ್ನು ಕೈಬಿಟ್ಟು ಮಧುಗಿರಿಯ ಬೈರಗೊಂಡ್ಲು ಬಳಿ 5.7 ಟಿಎಂಸಿ ಜಲಾಶಯ ಕಟ್ಟಲು ಹೊರಡುತ್ತಾರೆ. ಆದರೆ, ಅಲ್ಲಿ ಅರಣ್ಯ ಪ್ರದೇಶ ಮುಳುಗಡೆ ಆಗುತ್ತದೆ ಎನ್ನುವ ಕಾರಣಕ್ಕೆ ಆ ಜಲಾಶಯದ ನೀರು ಸಂಗ್ರಹಣೆ ಪ್ರಮಾಣವನ್ನು ಕಡಿಮೆ ಮಾಡಲು ತೀರ್ಮಾನಿಸಲಾಗಿದೆ. ಹೀಗಾದರೆ ಹೇಗೆ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ಅಲ್ಲಿ ಭೂ ಸ್ವಾಧೀನ ದೊಡ್ಡ ಬಿಕ್ಕಟ್ಟಾಗಿದೆ. ದೊಡ್ಡಬಳ್ಳಾಪುರದಲ್ಲಿ ಏಕೆರೆಗೆ 32 ಲಕ್ಷ ಬೇಕೆಂದು ರೈತರು ಕೇಳುತ್ತಿದ್ದಾರೆ. ಕೊರಟಗೆರೆಗೆ 8 ಲಕ್ಷ ಗೈಡ್ ಲೈನ್ಸ್ ವ್ಯಾಲ್ಯೂ ನಿಗದಿ ಮಾಡಿದ್ದು, ಅವರೂ ಈಗ 32 ಲಕ್ಷ ರೂ. ಕೇಳುತ್ತಿದ್ದಾರೆ. ಹೀಗೆ ವೆಚ್ಚ ಏರುತ್ತಾ ಹೋಗಿ ಈಗ 25ಸಾವಿರ ಕೋಟಿ ಮರು ಅಂದಾಜಿಗೆ ಬಂದು ನಿಂತಿದೆ ಎಂದು ಯೋಜನೆಯ ಕಗ್ಗಂಟುಗಳನ್ನು ಮಾಜಿ ಮುಖ್ಯಮಂತ್ರಿಗಳು ಬಿಡಿಸಿಟ್ಟರು. ಇದನ್ನೂ ಓದಿ: ಸದನ ಬೀಗರ ಮನೆಯಲ್ಲ – ಸಚಿವರ ಗೈರಿಗೆ ಸಭಾಪತಿಗಳು ಗರಂ
ಓಪನ್ ಕೆನಾಲ್ ಗ್ರಾವಿಟಿಯಲ್ಲಿ, 15 ಡೆಲಿವರಿ ಪಾಯಿಂಟ್ ಮೂಲಕ ತುಮಕೂರು, ರಾಮನಗರ, ಚಿಕ್ಕಮಗಳೂರು, ಹಾಸನ ಜಿಲ್ಲೆಗೆ ನೀರು ಕೊಡೋದಕ್ಕೆ ಪಾಯಿಂಟ್‍ಗಳನ್ನು ಮಾಡಿದ್ದಾರೆ. ಇಷ್ಟಕ್ಕೆ 14 ಟಿಎಂಸಿ ನೀರು ಅಗತ್ಯ. ಆದರೆ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ 10 ಟಿಎಂಸಿ ನೀರು ಬೇಕು. ಅಷ್ಟು ನೀರನ್ನು ಎಲ್ಲಿಂದ ತರುತ್ತಾರೆ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ಬೆಂಗಳೂರು: ವಿಧಾನಸಭೆ ಕಲಾಪ ಆರಂಭವಾಗಿ 4 ದಿನ ಆಗಿದೆ. ನಿನ್ನೆ ಮೊನ್ನೆಯಿಂದ ನಾನು ಗಮನಿಸ್ತಿದೀನಿ ಸದನಕ್ಕೆ ಬಂದರೂ, ಬರದೇ ಹೋದರೂ ಅಡ್ಡಿ ಇಲ್ಲ ಎಂಬ ಭಾವನೆ ಕೆಲವು ಸಚಿವರಲ್ಲಿ ಇದೆ. ಇದು ಶೋಭೆ ತರಲ್ಲ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಗರಂ ಆದರು.
ಸದನದಲ್ಲಿ ಮಾತನಾಡಿದ ಅವರು, ಸದನ ಪ್ರಾರಂಭವಾಗಿ ಇಂದಿಗೆ ನಾಲ್ಕು ದಿನ ಆಯಿತು. ಪ್ರಶೋತ್ತರ ಮತ್ತು ಇತರ ಸಂದರ್ಭಗಳಲ್ಲಿ ಸದನದಲ್ಲಿ ಸಚಿವರು ಕಡ್ಡಾಯವಾಗಿ ಇರಬೇಕೆಂದು ಇದೆ. ಆದರೆ ನಿನ್ನೆ ಮೊನ್ನೆ ಮತ್ತು ಇಂದಿನ ಪರಿಸ್ಥಿತಿ ನೋಡಿದರೆ, ಸದನಕ್ಕೆ ಬಂದರೂ ತೊಂದರೆ ಇಲ್ಲ, ಬರದಿದ್ದರೂ ತೊಂದರೆ ಇಲ್ಲ ಎಂಬ ಮನಸ್ಥಿತಿ ಸದಸ್ಯರಲ್ಲಿ, ಸಚಿವರಲ್ಲಿ ಬಂದರೆ ಈ ವ್ಯವಸ್ಥೆ ಕುಸಿತ ಕಾಣುತ್ತದೆ. ಸಚಿವರಿಗೆ ಇದಕ್ಕಿಂತ ಇನ್ನಿತರ ಕಾರ್ಯಕ್ರಮ ಮುಖ್ಯವೆನಿಸಿದೆ. ಈ ಭಾವನೆಯಿಂದ ಹೊರಬನ್ನಿ. ಸಚಿವರು ಗೆಸ್ಟ್ ಅಪಿಯರೆನ್ಸ್ ಥರ ಬರ್ತಾರೆ. ಯಾವುದೋ ಒಂದು ಸಂದರ್ಭದಲ್ಲಿ ಸದನಕ್ಕೆ ಬಂದು ಹೋಗ್ತಾರೆ ಎಂದು ಸಚಿವರ ಮೇಲೆ ಅಸಮಾಧಾನಗೊಂಡರು. ಇದನ್ನೂ ಓದಿ: ನನ್ನ ದಾರಿ ತಪ್ಪಿಸಲು ಈಶ್ವರಪ್ಪ ಜಗಳ ಮಾಡುಬೇಕು ಅಂತಾ ಬರ್ತಾರೆ: ಸಿದ್ದರಾಮಯ್ಯ ಹಾಸ್ಯ ಚಟಾಕಿ
ಬೆಂಗಳೂರು: ವಿಧಾನಮಂಡಲದ ಜಂಟಿ ಅಧಿವೇಶನ ಫೆ. 14 ರಿಂದ 25ರವರೆಗೆ ಹಾಗೂ ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಅಧಿವೇಶನವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಸಚಿವ ಸಂಪುಟ ಸಭೆಯ ನಂತರ ಮಾಧ್ಯಮದವರಿಗೆ ಸಿಎಂ ಪ್ರತಿಕ್ರಿಯೆ ನೀಡಿದರು. ಸಚಿವ ಸಂಪುಟದ ಸಭೆಯ ನಂತರ ಹಲವಾರು ವಿಷಯಗಳನ್ನು ಚರ್ಚಿಸಲಾಗಿದೆ. ಕೋವಿಡ್ ಸ್ಥಿತಿಗತಿ, ಕೋವಿಡ್ ನಿರ್ವಹಣೆ, ಶಾಲಾ-ಕಾಲೇಜು ಹಾಗೂ ಸಂಘ ಸಂಸ್ಥೆಗಳ ಮನವಿಗಳನ್ನು ತಜ್ಞರ ಸಮಿತಿಯ ಮುಂದೆ ಇರಿಸಲಾಗಿದ್ದು, ತಜ್ಞರ ವರದಿ ಬಂದ ನಂತರ ಸೂಕ್ತ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಸಿಎಂ ಇಬ್ರಾಹಿಂ ಬಿಜೆಪಿಗೆ ಬರುವುದಾದರೇ ನಾನು ಸ್ವಾಗತಿಸುತ್ತೇನೆ: ಶ್ರೀರಾಮುಲು
ಬಿಬಿಎಂಪಿ ಚುನಾವಣೆ:
ಬಿಬಿಎಂಪಿ ಚುನಾವಣೆಯ ಬಗ್ಗೆ ಚರ್ಚಿಸಲಾಗಿದ್ದು, ಬೆಂಗಳೂರಿನ ಸಚಿವರೊಂದಿಗೆ ಇತರ ಜಿಲ್ಲೆಗಳ ಸಚಿವರನ್ನೂ ನಿಯೋಜಿಸಿ ಚುನಾವಣೆಯನ್ನು ಯಶಸ್ವಿಯಾಗಿ ನಿಭಾಯಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಸರ್ಕಾರದ 6 ತಿಂಗಳ ಸಾಧನೆಗಳ ಪ್ರಚಾರ:
ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸರ್ಕಾರ 6 ತಿಂಗಳ ಆಡಳಿತ ಪೂರೈಸಿರುವ ಹಿನ್ನೆಲೆಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಾಳೆ ನಡೆಯಲಿದೆ. 2023 ವರೆಗಿನ ಸರ್ಕಾರದ ಕಾರ್ಯಕ್ರಮಗಳು, ಈ 6 ತಿಂಗಳ ಅವಧಿಯಲ್ಲಿ ಸರ್ಕಾರದ ಪ್ರಮುಖ ಇಲಾಖೆಗಳ ಸಾಧನೆಗಳ ಬಗ್ಗೆ ಮುಂದಿನ ಒಂದು ವಾರದ ಕಾಲ ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮಗಳ ಮೂಲಕ ಪ್ರಚಾರ ಕೈಗೊಳ್ಳುವ ಬಗ್ಗೆ ಸಂಬಂಧಪಟ್ಟ ಸಚಿವರು ತಮ್ಮ ಇಲಾಖೆಗಳಿಗೆ ತಿಳಿಸಲು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಬಗ್ಗೆ ಸಹೋದರ ಸತೀಶ್ ಜಾರಕಿಹೊಳಿ ವ್ಯಂಗ್ಯ
ಬಿಜೆಪಿ ಚಿಂತನ-ಮಂಥನ ಸಭೆ:
ಬರುವ ದಿನಗಳಲ್ಲಿ ಪಕ್ಷ, ಸಂಘಟನೆ ಹಾಗೂ ಸರ್ಕಾರದ ಮಧ್ಯೆ ಸಮನ್ವಯ ಸಾಧಿಸುವ ಚಿಂತನ-ಮಂಥನ ಸಭೆಯನ್ನು ಪಕ್ಷದ ಅಧ್ಯಕ್ಷರು ಶೀಘ್ರದಲ್ಲಿ ನಡೆಸಲಿದ್ದು ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯುವ ತೀರ್ಮಾನವನ್ನು ಮಾಡಲಾಗಿದೆ ಎಂದರು.
ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯಾಗಿದ್ದಲ್ಲಿ ಸೂಕ್ತ ಕ್ರಮ:
ರೇಸ್ ಕೋರ್ಸ್‌ನಲ್ಲಿ ನಡೆಯುವ ಡರ್ಬಿ ರೇಸ್‍ನಲ್ಲಿ ಸಾವಿರಾರು ಜನ ಸೇರುತ್ತಿರುವ ಬಗ್ಗೆ ಕಾಂಗ್ರೆಸ್ ಪಕ್ಷದವರು ಆಕ್ಷೇಪ ಎತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿಸಲು ಯಾವುದೇ ಅವಕಾಶವಿರುವುದಿಲ್ಲ. ಕೋವಿಡ್ ಮಾರ್ಗಸೂಚಿಗಳ ಕಡ್ಡಾಯ ಪಾಲನೆ ಆಗಬೇಕು. ಮಾರ್ಗಸೂಚಿಗಳ ಉಲ್ಲಂಘನೆಯಾಗಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಇದನ್ನೂ ಓದಿ: ಕಾಂಗ್ರೆಸ್ ನಾಯಕರಿಗೆ ಮುಸಲ್ಮಾನರೇ ಅಪ್ಪ-ಅಮ್ಮ: ನಾರಾಯಣಸಾ ಭಾಂಡಗೆ
ಬಿಬಿಎಂಪಿ ಸಭೆಗಳನ್ನು ನಡೆಸುವ ಮೂಲಕ ಬೆಂಗಳೂರಿನ ಬಿಜೆಪಿಗೆ ಅನುಕೂಲವಾಗಲು ಹಾಗೂ ಅನುದಾನ ನೀಡಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಕಾಂಗ್ರೆಸ್ ಪಕ್ಷದ ಆರೋಪಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷ ಇರುವುದೇ ಆರೋಪ ಮಾಡಲು. ಅವರ ಸರ್ಕಾರ ಇದ್ದಾಗ ಏನೆಲ್ಲಾ ಮಾಡಿದ್ದರು ಎನ್ನುವುದನ್ನು ಅವರು ನೆನಪಿಸಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.