ಭಾನುವಾರ ಬಿಜೆಪಿ-ಜೆಡಿಎಸ್ ಪ್ರಮುಖ ನಾಯಕರಿಂದ ಸದನದಲ್ಲಿ ಹೋರಾಟದ ಬಗ್ಗೆ ಚರ್ಚೆಯ ವಿಷಯಗಳ ಪ್ರಸ್ತಾಪವಾಗಿದೆ. ಸರ್ಕಾರದ ವಿರುದ್ಧ ಒಟ್ಟಾಗಿ ಹೋರಾಟ ನಡೆಸಲು ಎರಡು ಪಕ್ಷಗಳಿಂದ ಚರ್ಚೆ ನಡೆದಿದೆ ಎನ್ನಲಾಗಿದೆ. ವಿಪಕ್ಷಗಳ ಅಸ್ತ್ರಕ್ಕೆ ಪ್ರತಿ ಅಸ್ತ್ರ ಹೂಡಲು ಸರ್ಕಾರದಿಂದಲೂ ಸಿದ್ಧತೆ ನಡೆದಿದೆ.
ವಿಪಕ್ಷಗಳಿಗೆ ಅಸ್ತ್ರ?
* ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದಲ್ಲಿ 11 ಅಮಾಯಕ ಜೀವಗಳ ಸಾವು ವಿಷಯ.
* ರಾಜ್ಯದಲ್ಲಿ ರಸಗೊಬ್ಬರದ ಕೊರತೆಯಿಂದ ರೈತರಿಗೆ ಸಮಸ್ಯೆ ವಿಷಯ.
* ಧರ್ಮಸ್ಥಳದ ಕೊಲೆಗಳ ಪ್ರಕರಣ.
* SCSP-TSP ಹಣವನ್ನ ಗ್ಯಾರಂಟಿ ಬಳಕೆ ಮಾಡಿಕೊಂಡಿರೋ ವಿಷಯ ಪ್ರಸ್ತಾಪ.
* ವಿಪಕ್ಷಗಳ ಶಾಸಕರಿಗೆ ಅನುದಾನ ಕೊಡದೇ ಕೇವಲ ಆಡಳಿತ ಪಕ್ಷದ ಶಾಸಕರಿಗೆ ಮಾತ್ರ ಅನುದಾನ ಕೊಟ್ಟಿರೋ ವಿಚಾರ.
* ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ, ಮಂಗಳೂರು ದ್ವೇಷದ ಕೊಲೆ ಸೇರಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರೋ ವಿಚಾರ.
* ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿಯ ಕಿತ್ತಾಟದ ವಿಷಯ.
* ರಾಹುಲ್ ಗಾಂಧಿಯ ಮತಗಳ್ಳತನ ಆರೋಪಕ್ಕೆ ಸಚಿವ ರಾಜಣ್ಣ, ಇಬ್ರಾಹಿಂ ಮಾತುಗಳನ್ನ ಪ್ರಸ್ತಾಪ ಮಾಡಿ ಸರ್ಕಾರವನ್ನ ಕಟ್ಟಿ ಹಾಕೋ ಪ್ಲ್ಯಾನ್.
ಬೆಂಗಳೂರು: ಮುಡಾ ಅಕ್ರಮ ಪ್ರಕರಣದ (MUDA Scam Case) ಚರ್ಚೆ ಕುರಿತು ನಿಲುವಳಿ ಮಂಡನೆ ಪ್ರಸ್ತಾಪಕ್ಕೆ ವಿಧಾನಸಭೆಯಲ್ಲಿ ಬಿಜೆಪಿ – ಜೆಡಿಎಸ್ ಸದಸ್ಯರಿಗೆ (BJP – JDS Members) ಹಿನ್ನಡೆಯಾಗಿದ್ದು, ನಿಲುವಳಿ ತಿರಸ್ಕಾರ ಮಾಡಿ ಸ್ಪೀಕರ್ ಯು.ಟಿ ಖಾದರ್ (UT Khader) ರೂಲಿಂಗ್ ನೀಡಿದ್ದಾರೆ. ಎರಡು ಪಕ್ಷಗಳ ಸದಸ್ಯರ ವಾದ – ಪ್ರತಿವಾದ ಆಲಿಸಿ ಕೊನೆಗೆ ಸರ್ಕಾರದ ಆಗ್ರಹದಂತೆ ಸ್ಪೀಕರ್ ನಿಲುವಳಿ ತಿರಸ್ಕರಿಸಿದರು.
ನಿಲುವಳಿ ತಿರಸ್ಕಾರದ ಬಳಿಕ ʻಶೇಮ್ ಶೇಮ್ʼ ಎಂದು ಬಿಜೆಪಿ ಸದಸ್ಯರಿಗೆ ಕಾಂಗ್ರೆಸ್ ಶಾಸಕರು ಛೇಡಿಸಿದ್ರು. ತುರ್ತು ವಿಚಾರ ಅಲ್ಲ, ಪ್ರಕರಣದ ತನಿಖೆ ವಿಚಾರಣಾ ಆಯೋಗದಲ್ಲಿದೆ. ಹಾಗಾಗಿ ನಿಲುವಳಿ ಪ್ರಸ್ತಾಪಕ್ಕೆ ಅವಕಾಶ ಇಲ್ಲ, ನಿಯಮ 69ರ ಅಡಿ ಚರ್ಚೆಗೂ ಅವಕಾಶ ಇಲ್ಲ ಎಂದು ಸ್ಪೀಕರ್ ರೂಲಿಂಗ್ ಕೊಟ್ಟು ಕಲಾಪ ಮುಂದೂಡಿದರು. ಇದನ್ನೂ ಓದಿ: ಸುಪ್ರೀಂ ಕೋರ್ಟ್‌ಗೆ ಹೋಗಿ ರಾಜ್ಯ ಸರ್ಕಾರ ಬರ ಪರಿಹಾರ ಹಣ ಪಡೆದುಕೊಂಡು ಬಂದಿದೆ – ಕೃಷ್ಣಬೈರೇಗೌಡ
ಇದಕ್ಕೂ ಮುನ್ನ ಕಲಾಪ ಆರಂಭವಾಗುತ್ತಿದಂತೆ ನಿಲುವಳಿ ಪ್ರಸ್ತಾಪಕ್ಕೆ ಬಿಜೆಪಿ ಆಗ್ರಹಿಸಿತು. ಆದರೆ ಪ್ರಶ್ನೋತ್ತರ ಕಲಾಪದ ಬಳಿಕ ನಿರ್ಣಯ ತೆಗೆದುಕೊಳ್ಳುವುದಾಗಿ ಸ್ಪೀಕರ್ ಭರವಸೆ ನೀಡಿದರು. ಆಗ ಸದನದಲ್ಲಿ ವಾಕ್ಸಮರವೇ ನಡೆಯಿತು. ಮುಖ್ಯಮಂತ್ರಿಗಳೇ ಇದರಲ್ಲಿ ನೇರ ಪಾಲುದಾರರು ಇದ್ದಾರೆ, ಚರ್ಚೆ ಆಗಬೇಕು ಎಂದು ಆರ್.ಅಶೋಕ್ (R Ashoka) ಆಗ್ರಹಿಸಿದರೆ, ರಾಜ್ಯದ ಜನರೇ ನೋಡ್ತಿದ್ದಾರೆ, ಸಿಎಂ ಮೇಲೆಯೇ ಆರೋಪ ಇರೋದ್ರಿಂದ ಚರ್ಚೆಗೆ ತಗೊಳ್ಳಿ ಅಂತ ಅಶ್ವಥ್ ನಾರಾಯಣ್ ಒತ್ತಾಯಿಸಿದರು. ಆಗ ಸಚಿವ ಬೈರತಿ ಸುರೇಶ್ (Byrathi Suresh) ಆಕ್ರೋಶ ಹೊರಹಾಕಿ, ಮುಡಾದಲ್ಲಿ ನಿಮ್ಮದು ಭ್ರಷ್ಟಾಚಾರ ಇದೆ, ಚರ್ಚೆಗೆ ಕೊಡಿ. ನನ್ನ ಹತ್ರನೂ ದಾಖಲೆ ಇದೆ. ಇಲ್ಲಿ ಕುಳಿತಿರುವ ಮಹಾನುಭಾವರದ್ದು ಇದೆ, ಬರೀ ಒಬ್ಬರದ್ದೇ ಹೇಳೋದು ಅಲ್ಲ, ನಮಗೂ ಅವಕಾಶ ಕೊಡಿ, ನಾವು ಚರ್ಚೆ ಮಾಡ್ತೀವಿ ಎಂದು ಸುರೇಶ್ ಅಬ್ಬರಿಸಿದರು.
ಎಲ್ಲರದ್ದೂ ಬಯಲಿಗೆ ಬರಲಿ, ರಾಜ್ಯ ಲೂಟಿ ಹೊಡೆದಿರುವ ಎಲ್ಲರ ಹೆಸರು ಹೊರಗೆ ಬರಲಿ, ಕ್ಲೀನ್ ಇಂಡಿಯಾ, ಕ್ಲೀನ್ ಕರ್ನಾಟಕ, ಕ್ಲೀನ್ ಆಲ್ ಪಾರ್ಟಿ ಎಂದು ಯತ್ನಾಳ್ ಗುಡುಗಿದರೆ, ಹೊರಗೆ ಬರಬೇಕು, ಎಲ್ಲ ತೆಗೆಯಿರಿ, ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಅಂತಾರೆ, ಅದು ಹೊರಗೆ ಬರಲಿ ಎಂದು ಅಶ್ವಥ್ ನಾರಾಯಣ್ (Ashwath Narayan) ಆಗ್ರಹಿಸಿದರು. ಆಗ ಸದನದಲ್ಲಿ ಮಾತಿನ ಚಕಮಕಿ, ಗದ್ದಲ ಉಂಟಾಯಿತು. ಇದನ್ನೂ ಓದಿ: ಡಿಕೆಶಿ ಭಾಷಣದ ವೇಳೆ ‘ಡಿ ಬಾಸ್.. ಡಿ ಬಾಸ್’ ಘೋಷಣೆ ಕೂಗಿದ ದರ್ಶನ್ ಅಭಿಮಾನಿಗಳು
ಸರ್ಕಾರದ ಪರವಾಗಿ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಹೆಚ್.ಕೆ ಪಾಟೀಲ್, ಸದನದ ನಿಯಮಾನುಸಾರ ಚರ್ಚೆಗೆ ತಗೊಳ್ಳೋಕೆ ಸಾಧ್ಯವಿಲ್ಲ. ಕಾರ್ಯವಿಧಾನ, ನಡವಳಿಕೆಯಲ್ಲಿ ಅವಕಾಶ ಇಲ್ಲ. ಈಗಾಗಲೇ ನಿವೃತ್ತ ನ್ಯಾಯಾಧೀಶರಾದ P.N ದೇಸಾಯಿ ಏಕಸದಸ್ಯ ಆಯೋಗದಿಂದ ವಿಚಾರಣೆ ನಡೆಯುತ್ತಿದೆ. ಆರು ತಿಂಗಳ ಒಳಗೆ ಸರ್ಕಾರಕ್ಕೆ ವರದಿ ಒಪ್ಪಿಸುವ ನಿರೀಕ್ಷೆ ಇದೆ. 2006 ರಿಂದ 2024ರ ವರೆಗೆ ನಡೆದಿರುವ ಅಕ್ರಮದ ಬಗ್ಗೆ ತನಿಖೆ ಆಗ್ತಿದೆ. ಹೀಗಾಗಿ ನಿಯಮ 63ರ ಪ್ರಕಾರ ಇದನ್ನು ಚರ್ಚೆಗೆ ತಗೊಳ್ಳೋಕೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ತುಳುವನ್ನ 2ನೇ ಹೆಚ್ಚುವರಿ ಭಾಷೆಯಾಗಿ ಘೋಷಿಸಿ – ಕಾಂಗ್ರೆಸ್ ಶಾಸಕ ಅಶೋಕ್ ರೈ ಒತ್ತಾಯ; ತುಳುವಿನಲ್ಲೇ ಮನವಿ
ಇದಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಆಕ್ಷೇಪಿಸಿ, ನಿನ್ನೆ ಶಿವಲಿಂಗೇಗೌಡ ಜಾರಿ ನಿರ್ದೇಶನಾಲಯದ ಬಗ್ಗೆ ಸದನದಲ್ಲಿ ಚರ್ಚೆ ಮಾಡಿದ್ರಲ್ಲ ಹೇಗೆ ಅನುಮತಿ ಕೊಟ್ರಿ? ಎಂದು ಗುಡುಗಿದರು. ಸದನ ಆರಂಭವಾಗುವ ಹಿಂದಿನ ದಿನ ಸರ್ಕಾರ ನಿವೃತ್ತ ನ್ಯಾಯಾಧೀಶರ ಸಮಿತಿ ರಚಿಸಿದೆ. ಅಂದರೆ ಸದನದಲ್ಲಿ ಇದರ ಬಗ್ಗೆ ಚರ್ಚೆ ಆಗಬಾರದೆಂದು ಮೊದಲೇ ನಿರೀಕ್ಷಣಾ ಜಾಮೀನು ಪಡೆದುಕೊಂಡಿದೆ ಅಂತ ಶಾಸಕ ಸುರೇಶ್ ಕುಮಾರ್ ಆರೋಪಿಸಿದರು. ನಂತರ ಮುಖ್ಯಮಂತ್ರಿಗಳ ಮನೆಯವರಿಗೆ 14 ಫ್ಲಾಟ್‌ಗಳನ್ನು ಕೊಟ್ಟಿದ್ದಾರೆ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಆರೋಪಿಸಿದರು. ಇದಕ್ಕೆ ಕೈ ಸದಸ್ಯರಿಂದ ಆಕ್ಷೇಪ ವ್ಯಕ್ತವಾಯಿತು. ಒಟ್ಟಾಗಿ ನಿಂತು ಬಿಜೆಪಿ ಶಾಸಕರಿಗೆ ಕೈ ಸದಸ್ಯರು ತಿರುಗೇಟು ನೀಡಿದ್ರು. ಅಂತಿಮವಾಗಿ ಸ್ಪೀಕರ್ ಚರ್ಚೆಗೆ ಅವಕಾಶ ಕೊಡದೇ ರೂಲಿಂಗ್ ಕೊಟ್ಟು, ಸದನ ಮುಂದೂಡಿದರು.
ಬೆಂಗಳೂರು: ಬಿಜೆಪಿ ಅವಧಿಯಲ್ಲಿ 21 ಹಗರಣಗಳು (BJP Period Scam) ನಡೆದಿವೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು, ವಿಧಾನಸಭೆ ಕಲಾಪದಲ್ಲಿ 21 ಹಗರಣಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ.
ವಿಧಾನಸಭೆಯ ಕಲಾಪದಲ್ಲಿಂದು ಮುಡಾ ಹಾಗೂ ವಾಲ್ಮೀಕಿ ನಿಗಮದಲ್ಲಿನ ಹಗರಣ (Valmiki Corporation Scam) ವಿರುದ್ಧ ವಿಪಕ್ಷಗಳ ಹೋರಾಟ ತೀವ್ರಗೊಂಡಿತ್ತು. ಬಿಜೆಪಿ-ಜೆಡಿಎಸ್‌ನಿಂದ ಸದನದಲ್ಲಿ ಪ್ರತಿಭಟನೆ ಮುಂದುವರುದು, ಸದನದ ಬಾವಿಗಿಳಿದು ದೋಸ್ತಿ ನಾಯಕರು ಪ್ರತಿಭಟನೆ ನಡೆಸಿದರು. ಬಳಿಕ ವಾಲ್ಮೀಕಿ ನಿಗಮದ ಹಗರಣ ಚರ್ಚೆ ವೇಳೆ ಉತ್ತರ ನೀಡಲು ಮುಂದಾದ ಸಿಎಂ ಬಿಜೆಪಿ ಅವಧಿಯಲ್ಲಿ ನಡೆದಿದೆ ಎನ್ನಲಾದ 21 ಹಗರಣಗಳ ಪಟ್ಟಿ ಬಿಡುಗಡೆ ಮಾಡಿದರು. ಇದನ್ನೂ ಓದಿ: ಗುಡ್‌ನ್ಯೂಸ್ ಕೊಟ್ಟ ʻಕಾಟೇರʼ ನಿದೇರ್ಶಕ; ತರುಣ್ ಸುಧೀರ್ – ಸೋನಲ್ ಮದುವೆ ಡೇಟ್ ಫಿಕ್ಸ್
ಇದೇ ವೇಳೆ ಬೊಮ್ಮಾಯಿ, ಯಡಿಯೂರಪ್ಪ ಕಾಲದಲ್ಲಿ ಹಗರಣಗಳು ನಡೆದಿವೆ. ಭ್ರಷ್ಟಾಚಾರ ಪಿತಾಮಹರೇ ಬಿಜೆಪಿಗರು. ನಮ್ಮ ಹಗರಣಗಳು ಬಿಚ್ಚಬಾರದು ಎಂದು ಇಲ್ಲಿ ಗಲಾಟೆ ಮಾಡ್ತಿದ್ದಾರೆ? ನನ್ನ ರಾಜಕೀಯ ಜೀವನದಲ್ಲೇ ಇಷ್ಟು ಕೆಟ್ಟದಾಗಿ ಪ್ರತಿಪಕ್ಷಗಳು ನಡೆದುಕೊಂಡಿಲ್ಲ. ಕೇಂದ್ರ ಹಾಗೂ ಆರ್‌ಎಸ್‌ಎಸ್ ಸೂಚನೆಯಿಂದ ಈ ರೀತಿ ಮಾಡ್ತಿದ್ದಾರೆ. ಕೇವಲ ಪ್ರಚಾರಕ್ಕಾಗಿ ಈ ರೀತಿ ಗಲಾಟೆ ಮಾಡ್ತಿದ್ದಾರೆ. ರಾಜ್ಯದ ಜನರ ಬಗ್ಗೆ ಚರ್ಚೆ ಮಾಡುವ ಆಸಕ್ತಿ ಇವರಿಗಿಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಪ್ರತಿಪಕ್ಷಗಳ ವಿರುದ್ಧ ಅಬ್ಬರಿಸಿ ಬೊಬ್ಬರಿದರು. ಇದನ್ನೂ ಓದಿ: ಸದನದಲ್ಲಿ `ಒಂದು ಮೊಟ್ಟೆಯ ಕಥೆ’; ನಾನಂತೂ ಮೊಟ್ಟೆ ತಿನ್ನಲ್ಲ, ಮುಟ್ಟೋದೂ ಇಲ್ಲ: ಲಕ್ಷ್ಮಿ ಹೆಬ್ಬಾಳ್ಕರ್
ಸಿಎಂ ಬಿಡುಗಡೆ ಮಾಡಿದ ಹಗರಣಗಳ ಪಟ್ಟಿ
* ಎಪಿಎಂಸಿ ಹಗರಣ – 2020-21 – 47.16 ಕೋಟಿ ರೂ.
* ಭೋವಿ ಅಭಿವೃದ್ಧಿ ನಿಗಮ – 2021-22 – 87.00 ಕೋಟಿ ರೂ.ಗಿಂತಲೂ ಹೆಚ್ಚು
* ದೇವರಾಜ ಅರಸು ಟ್ರಕ್ ಟರ್ಮಿನಲ್ – 2022-23 – ಶ್ರೀರಾಮುಲು 50.00 ಕೋಟಿ ರೂ.ಗಿಂತ ಅಧಿಕ
* ಗಂಗಾ ಕಲ್ಯಾಣ ಯೋಜನೆ – (ಅಂಬೇಡ್ಕರ್, ಭೋವಿ, ಆದಿಜಾಂಬವ, ಮುಂತಾದ ನಿಗಮಗಳು) 2021-22 – 430.00 ಕೋಟಿ ರೂ.ಗಿಂತ ಅಧಿಕ
* ಪ್ರವಾಸೋದ್ಯಮ ಇಲಾಖೆ 2021-22 – ಸಿ.ಪಿ ಯೋಗೇಶ್ವರ್ 2.47 ಕೋಟಿ ರೂ.
* ಕಿಯೋನಿಕ್ಸ್ ಹಗರಣ 2019 ರಿಂದ 2023 – ಅಶ್ವತ್ಥ್ನಾರಾಯಣ – 500 ಕೋಟಿ ರೂ. – ಸಿ.ಎ.ಜಿ. ವರದಿಯಲ್ಲಿ ಉಲ್ಲೇಖ
* ಕೋವಿಡ್ ಹಗರಣ – 2019-20 – ಕೆ.ಸುಧಾಕರ್ – 40,000 ಕೋಟಿಗೂ ಹೆಚ್ಚು ಹಗರಣ
* 40% ಹಗರಣ – 2019-20 – 2,000 ಕೋಟಿ ರೂ.ಗಿಂತ ಅಧಿಕ ಹಗರಣ
* ಪಿಎಸ್‌ಐ ಮತ್ತು ಇತರೆ ನೇಮಕಾತಿ – 2019-20 ಹಾಗೂ 2022-23 – ನೂರಾರು ಕೋಟಿ ರೂ.
* ಪರಶುರಾಮ ಥೀಮ್ ಪಾರ್ಕ್ ಹಗರಣ – 2022-23 – ವಿ. ಸುನೀಲ್‌ಕುಮಾರ್ – 11.00 ಕೋಟಿಗೂ ಹೆಚ್ಚು
* ಬಿಟ್‌ಕಾಯಿನ್ ಹಗರಣ – 2021 ರಿಂದ 2023 – ಸಾವಿರಾರು ಕೋಟಿ ರೂ. ಹಗರಣ
* ಯಡಿಯೂರಪ್ಪ ನವರ ಅಕ್ರಮ ಆಸ್ತಿ – 2021 – 750 ಕೋಟಿ ರೂ.ಗಿಂತ ಹೆಚ್ಚು
* ಯಡಿಯೂರಪ್ಪ ಮತ್ತು ವಿಜಯೇಂದ್ರ ಕುಟುಂಬದ ಆದಾಯ ಮೀರಿದ ಆಸ್ತಿ ಪ್ರಕರಣ – ನೂರಾರು ಕೋಟಿ
* ಯಡಿಯೂರಪ್ಪ ಅವರ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಈಶ್ವರಪ್ಪ ರಾಜ್ಯಪಾಲರಿಗೆ ದೂರು ನೀಡಿದ್ದರು.
* ಬಿಜೆಪಿ ಸರ್ಕಾರದ ಅಬಕಾರಿ ಸಚಿವರ ಹಗರಣದ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದಿದ್ದರು – ನೂರಾರು ಕೋಟಿ ರೂ. ಅಬಕಾರಿ
* ಕೆಕೆಆರ್‌ಡಿಬಿ ಹಗರಣ – 2019-20 ರಿಂದ ಏಪ್ರಿಲ್-2023 – ಪಿ. ಮುನಿರತ್ನ 200 ಕೋಟಿಗೂ ಹೆಚ್ಚು (ದತ್ತಾತ್ರೇಯ ಪಾಟೀಲರೇವೂರ ನಿಗಮದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಹಗರಣ)
* ಕಂದಾಯ ಇಲಾಖೆಯ ಹಗರಣ 2019-20 ರಿಂದ ಏಪ್ರಿಲ್-2023 – ಅಶೋಕ್ ಮೇಲೆ ಸುಪ್ರೀಂ ಕೋರ್ಟ್ನಲ್ಲಿ ಕೇಸ್ ಇದೆ
* ಕೃಷಿ ಇಲಾಖೆಯಲ್ಲಿ 2021 ರಿಂದ 2023 – ಬಿ.ಸಿ.ಪಾಟೀಲ್ – ಕೃಷಿ ಇಲಾಖೆಯ ನೌಕರರೇ ಲಂಚ ವಸೂಲಿ ಮಾಡುತ್ತಿದ್ದ ಕುರಿತು
ರಾಜ್ಯಪಾಲರಿಗೆ ಪತ್ರ ಬರೆದಿದ್ದರು.
* ಮೊಟ್ಟೆ ಹಗರಣ – 2019 ರಿಂದ 2021 – ಶಶಿಕಲಾ ಜೊಲ್ಲೆ ಪರಣ್ಣ ಮುನವಳ್ಳಿ ಕೂಡ ಭಾಗಿಯಾಗಿದ್ದರು.
* ಕೆಐಎಡಿಬಿ 2008 ರಿಂದ 2013 – ಕಟ್ಟಾ ಸುಬ್ರಮಣ್ಯ ನಾಯ್ಡು, ಮುರುಗೇಶ ನಿರಾಣಿ, ಮುಂತಾದವರು ಭಾಗಿಯಾಗಿದ್ದ ಬೃಹತ್ ಹಗರಣ ಕಾಂಡದ ಬಿಸಿ ಇನ್ನೂ ಆರಿಲ್ಲ.
* ಗಣಿ ಹಗರಣ, ಬಿಡಿಎ ಮತ್ತು ಕೆಐಎಡಿಬಿ ಡಿನೋಟಿಫಿಕೇಶನ್ ಹಗರಣ – ಬಿಎಸ್‌ವೈ ಸೇರಿ ಹಲವು ಸಚಿವರಗಳು ಜೈಲಿಗೆ ಹೋಗಿದ್ದಾರೆ.
* ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕಿನ ಬೃಹತ್ ಹಗರಣ – ಸಾವಿರಾರು ಕೋಟಿ ಹಗರಣ – ಐಟಿ, ಇಡಿ, ಸಿಬಿಐ ತನಿಖೆ ಇದುವರೆಗೆ ಯಾರನ್ನೂ ಬಂಧಿಸುವ ಕೆಲಸ ಆಗಿಲ್ಲ.
ಬಿಜೆಪಿ ಅವಧಿಯಲ್ಲಿ ಲೆಕ್ಕ ಹಾಕಲಾಗದಷ್ಟು ಹಗರಣಗಳು ಬಯಲಾಗುತ್ತಲೇ ಇವೆ. ಈ ಹಗರಣಗಳ ಕುರಿತು ವಿವಿಧ ತನಿಖೆ ನಡೆಯುತ್ತಿವೆ. ಭ್ರಷ್ಟರು ಹಾಗೂ ದುರುಳರು ಜೈಲಿಗೆ ಹೋಗುವ ದಿನಗಳ ದೂರವಿಲ್ಲ ಎಂದು ಅವರು ಗುಡುಗಿದರು.
ಬೆಂಗಳೂರು: CL7 ಮದ್ಯದ ಪರವಾನಗಿ (Wine Shop Licence) ನೀಡಲು ಅಧಿಕಾರಿಗಳು ಲಂಚ ತಿನ್ನುತ್ತಿದ್ದಾರೆ ಅಂತ ಆಡಳಿತ ಪಕ್ಷದ ಸದಸ್ಯರೇ ಸರ್ಕಾರ (Karnataka Government) ವಿರುದ್ಧ ಆರೋಪ ಮಾಡಿರುವ ಘಟನೆ ವಿಧಾನ ಪರಿಷತ್ ನಲ್ಲಿ ನಡೀತು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಅನಿಲ್ ಕುಮಾರ್ (Congress MLC Anil Kumar) ಪ್ರಶ್ನೆ ಕೇಳಿದರು. CL-7 ಮದ್ಯದ ಅಂಗಡಿಗೆ ಅನುಮತಿ ನೀಡಲು 80 ರಿಂದ 85 ಲಕ್ಷ ರೂ. ಲಂಚ ಪಡೆದು ಅನುಮತಿ ನೀಡಲಾಗುತ್ತಿದೆ. ನನ್ನ ಜಿಲ್ಲೆಯಲ್ಲಿಯೇ ಇದು ಆಗ್ತಿದೆ. ನಿಯಮ ಬಿಟ್ಟು ಲಕ್ಷಾಂತರ ರೂ. ಪಡೆದು CL7 ಅನುಮತಿ ನೀಡಲಾಗ್ತಿದೆ. ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೆ ಎಂದು ಬಾಂಬ್ ಸಿಡಿಸಿದರು. ಇದನ್ನೂ ಓದಿ: ಅಫ್ಜಲ್ ಖಾನ್ ಕೊಲ್ಲಲು ಛತ್ರಪತಿ ಶಿವಾಜಿ ಬಳಿಸಿದ್ದ ‘ವಾಘ್ ನಖ್’ ಅಸ್ತ್ರ ಜು.19ಕ್ಕೆ ಲಂಡನ್‌ನಿಂದ ಭಾರತಕ್ಕೆ
ಬೆಂಗಳೂರು: ನಗರ ಅಥವಾ ಬೆಂಗಳೂರು ಸುತ್ತಮುತ್ತ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (International Airport) ನಿರ್ಮಾಣ ಮಾಡಲಾಗುತ್ತದೆ ಎಂದು ಬೃಹತ್ ಕೈಗಾರಿಕೆ ಮತ್ತು ಮೂಲಭೂತ ಸೌಕರ್ಯಗಳ ಸಚಿವ ಎಂಬಿ ಪಾಟೀಲ್ ಘೋಷಣೆ ಮಾಡಿದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ನವೀನ್ ಪ್ರಶ್ನೆಗೆ ಸಚಿವ ಎಂ.ಬಿ ಪಾಟೀಲ್ (MB Patil) ಉತ್ತರ ನೀಡಿದರು.
ತುಮಕೂರು ಹಾಗೂ ಚಿತ್ರದುರ್ಗದ ಮಧ್ಯೆ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಪ್ರಸ್ತಾಪ ಇಲ್ಲ. ಆದರೆ ಬೆಂಗಳೂರಿನಲ್ಲಿ (Bengaluru) 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವ ಪ್ರಸ್ತಾಪ ಇದೆ. ಈಗಾಗಲೇ ಏರ್‌ಪೋರ್ಟ್ ನಿರ್ಮಾಣಕ್ಕೆ 7-8 ಸ್ಥಳಗಳನ್ನ ಗುರುತಿಸಲಾಗಿದೆ. ಈಗ ಇರೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅನುಕೂಲ ಅಗುವಂತೆ ಹಾಗೂ ರಾಜ್ಯದ ಜನರಿಗೆ ಅನುಕೂಲ ಆಗುವಂತೆ ಹೊಸ ಏರ್‌ಪೋರ್ಟ್ (Airport) ನಿರ್ಮಾಣ ಮಾಡ್ತೀವಿ. ಬೆಂಗಳೂರಿನ 50-60 ಕಿಲೋಮೀಟರ್ ಸುತ್ತಮುತ್ತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಚಿಂತನೆ ಇದೆ ಅಂತ ತಿಳಿಸಿದರು. ಇದನ್ನೂ ಓದಿ: ಜಮ್ಮು ಕಾಶ್ಮೀರದ ದೋಡಾದಲ್ಲಿ ಎನ್‌ಕೌಂಟರ್ – ಅಧಿಕಾರಿ ಸೇರಿದಂತೆ ನಾಲ್ವರು ಯೋಧರು ಹುತಾತ್ಮ
7-8 ಲೊಕೇಶನ್ ಗಳಲ್ಲಿ ಮೆರಿಟ್ ಆಧಾರದಲ್ಲಿ ಜಾಗ ಫೈನಲ್ ಮಾಡಿ ಏರ್‌ಪೋರ್ಟ್ ಮಾಡ್ತೀವಿ. ತುಮಕೂರು, ಚಿತ್ರದುರ್ಗ ಸೇರಿ ಹಲವು ಜಿಲ್ಲೆಗಳಲ್ಲಿ ಏರ್‌ಪೋರ್ಟ್ ಮಾಡೊಕೆ ಒತ್ತಡ ಬರ್ತಿದೆ. ಬೆಂಗಳೂರು ಮತ್ತು ರಾಜ್ಯಕ್ಕೆ ಅನುಕೂಲ ಆಗೋ ರೀತಿ ಜಾಗದ ಬಗ್ಗೆ ನಿರ್ಧಾರ ನಾವು ತೆಗೆದುಕೊಳ್ಳಬೇಕು. ಈಗ ಇರುವ ಏರ್‌ಪೋರ್ಟ್ 2035ರ ವೇಳೆಗೆ ತನ್ನ ಸಾಮರ್ಥ್ಯದ ಪೀಕ್‌ಗೆ ಹೋಗುತ್ತದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: Trump Assassination Attempt | 48 ಗಂಟೆಯ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡ ಟ್ರಂಪ್
ಅಷ್ಟರಲ್ಲಿ ಹೊಸ ವಿಮಾನ ನಿಲ್ದಾಣ ಮಾಡುವ ಪ್ಲ್ಯಾನ್ ನಾವು ಮಾಡಿಕೊಳ್ಳಬೇಕು. ಹೊಸ ಅಂತಾರಾಷ್ಟ್ರೀಯ ವಿಮಾನ ನಿರ್ಮಾಣ ಪ್ರಾರಂಭ ಮಾಡುವ ಬಗ್ಗೆ ಪ್ರಕ್ರಿಯೆ ಶುರು ಮಾಡಲಾಗಿದೆ. ಏರ್‌ಪೋರ್ಟ್ ನಿರ್ಮಾಣ ಮಾಡುವ ಏಜೆನ್ಸಿ (ಹೈಡಕ್) ಜೊತೆಗೂ ಚರ್ಚೆ ಆಗಿದೆ. ಎಲ್ಲಿ ಮಾಡಬೇಕು ಅಂತ ಮೆರಿಟ್ ಆಧಾರದಲ್ಲಿ ಚರ್ಚೆ ನಡೆಸಿ, ಕೇಂದ್ರದ ಜೊತೆಗೂ ಮಾತನಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Valmiki Scam | ಕೋಟ್ಯಂತರ ರೂ. ಬೆಲೆ ಬಾಳುವ ಐಷಾರಾಮಿ ಕಾರು ವಶಕ್ಕೆ
– ವಾಲ್ಮೀಕಿ ನಿಗಮದ ಹಣ ಲೂಟಿ ಹೊಡೆದಿದ್ದು ಹಲ್ಕಾ ಕೆಲಸ ಎಂದ ವಿಪಕ್ಷ ನಾಯಕ
ಬೆಂಗಳೂರು: ವಿಧಾನಮಂಡಲ ಅಧಿವೇಶನದ ಮೊದಲ ದಿನವೇ ವಾಲ್ಮೀಕಿ ನಿಗಮದ ಹಗರಣ ಪ್ರತಿಧ್ವನಿಸಿದೆ. ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಆರ್. ಅಶೋಕ್ (R Ashoka), ನಿಯಮ 69ರ ಅಡಿಯಲ್ಲಿ ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಅಕ್ರಮ ಪ್ರಕರಣ (Valmiki Corporation Corruption Scam )ಕುರಿತು ಚರ್ಚೆಗೆ ಅವಕಾಶ ಕೋರಿದರು. ಪ್ರಶ್ನೋತರ ಕಲಾಪ ಬಳಿಕ ಚರ್ಚೆಗೆ ಅವಕಾಶ ನೀಡಲಾಯಿತು.
ಬಳಿಕ ಮಾತು ಆರಂಭಿಸಿದ ಆರ್. ಅಶೋಕ್, ದಲಿತರ ಹಣ ಲೂಟಿ ಮಾಡಲಾಗಿದೆ. ಲೂಡಿ ಹೊಡೆದು ಬೇರೆ ರಾಜ್ಯಗಳಿಗೆ ಕಳಿಸಿಕೊಡಲಾಗಿದೆ. ಈತರಹದ ಹಗರಣ ರಾಜ್ಯದಲ್ಲಿ ಇದೇ ಮೊದಲು. ಕಟಾಕಟ್ ಅಂತ ನೂರಕ್ಕೆ ನೂರು ದಲಿತರ ಹಣ (Dalits Money) ಲೂಟಿ ಆಗಿದೆ. ಇದು ಕರ್ನಾಟಕ ಇತಿಹಾಸಕ್ಕೆ ಕಪ್ಪು ಚುಕ್ಕೆ. ನಿಗಮದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸರ್ಕಾರದ ಹೆಡ್ ಮಾಸ್ಟರ್ ಸಿಎಂ ಕೈಚೆಲ್ಲಿ ಕೂತಿದ್ರು:
ವಾಲ್ಮೀಕಿ ನಿಗಮದ ಹಣ ಲೂಟಿ ಹೊಡೆದಿದ್ದು ಹಲ್ಕಾ ಕೆಲಸ. ಸತ್ತಿರುವ ಚಂದ್ರಶೇಖರನ್ ದಲಿತ, ಲೂಟಿ ಆಗಿರೋದು ದಲಿತರ ಹಣ. 187 ಕೋಟಿ ರೂ. ಕಟಾಕಟ್ ಅಂತ ವರ್ಗಾವಣೆ ಆದಾಗ ಸರ್ಕಾರ ಕಣ್ಮುಚ್ಚಿ ಕೂತಿತ್ತು. ಸರ್ಕಾರದ ಹೆಡ್ ಮಾಸ್ಟರ್ ಸಿಎಂ ಅವರೇ ಕೈಚೆಲ್ಲಿ ಕೂತಿದ್ರು ಎಂದರು. ಇದಕ್ಕೆ ಗರಂ ಆದ ಸಿಎಂ ನಾನು ವರ್ಗಾವಣೆ ಮಾಡು ಅಂತ ಹೇಳಿದ್ನಾ? ಎಂದು ತಿರುಗೇಟು ಕೊಟ್ಟರು. ಮತ್ತೆ ಮಾತು ಮುಂದುವರಿಸಿದ ಅಶೋಕ್, ವಾಲ್ಮೀಕಿ ನಿಗಮದ ಅಕ್ರಮದಲ್ಲಿ ಮಾಜಿ ಸಚಿವ, ಶಾಸಕ, ನಿಗಮದ ಅಧಿಕಾರಿಗಳು, ಹವಾಲಾ ದಂಧೆಕೋರರು, ಬ್ಯಾಂಕಿನವ್ರು ಈ ಐದು ವರ್ಗದವರೂ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
187 ಕೋಟಿ ಅಲ್ಲ, 89 ಕೋಟಿ ರೂ. ಅಕ್ರಮ:
ಅಶೋಕ್ ಚರ್ಚೆ ವೇಳೆ ಸಿಎಂ ಮಧ್ಯಪ್ರವೇಶಿಸಿದ ಸಿಎಂ, ಸದನಕ್ಕೆ ತಪ್ಪು ಮಾಹಿತಿ ಹೋಗಬಾರದು ಜಾರಿ ನಿರ್ದೇಶನಾಲಯದವರು ಅಕ್ರಮದಲ್ಲಿ ಅವರ ಪಾತ್ರದ ಬಗ್ಗೆ ನಾಗೇಂದ್ರ ಒಪ್ಕೊಂಡಿಲ್ಲ. ಇದು ರಿಮ್ಯಾಂಡ್ ಅರ್ಜಿಯಲ್ಲಿ ಕೊಟ್ಟಿರುವ ಮಾಹಿತಿ. ಇದು ಒಪ್ಪಿತ ಸತ್ಯಾಂಶ ಅಲ್ಲ. ನಿಗಮದಲ್ಲಿ 187 ಕೋಟಿ ರೂ. ಅಕ್ರಮ ಆಗಿಲ್ಲ. 89.62 ಕೋಟಿ ರೂ. ಅಕ್ರಮ ಆಗಿದೆ. ತಪ್ಪು ಮಾಹಿತಿ ಹೋಗಬಾರದು ಅಂತ ಹೇಳಿದರು. ಈ ವೇಳೆ ಘೋಷಣೆ ಕೂಗಿದ ಬಿಜೆಪಿ ಸದಸ್ಯರು ನಾನು ಯಾರನ್ನೂ ಡಿಫೆಂಡ್ ಮಾಡ್ಕೊಳ್ತಿಲ್ಲ, ಯಾರ ರಕ್ಷಣೆಯೂ ಮಾಡ್ತಿಲ್ಲ. 187 ಕೋಟಿ ರೂ. ಲೂಟಿಯಾಗಿರೋದನ್ನ ಯಾರೂ ಒಪ್ಪಿಕೊಂಡಿಲ್ಲ, ನಾನಾಗಲೀ, ನಾಗೇಂದ್ರ ಆಗಲೀ ಒಪ್ಪಿಕೊಂಡಿಲ್ಲ. ಇದು ಇಡಿಯವ್ರು ಹೇಳಿರೋದು, ಸದನಕ್ಕೆ ತಪ್ಪು ಮಾಹಿತಿ ಹೋಗಬಾರದು ಅಂತ ಸಿಎಂ ಸ್ಪಷ್ಟನೆ ನೀಡಿದರು.
6 ಪುಟಗಳ ಡೆತ್ ನೋಟ್ ಓದಿದ ಅಶೋಕ್:
ಮತ್ತೆ ಚರ್ಚೆ ಆರಂಭಿಸಿದ ಅಶೋಕ್, ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಡೀಲ್ ನಡೆದಿದ್ದು ಶಾಂಗ್ರೀಲಾ ಹೊಟೇಲ್ ನಲ್ಲಿ. ಈ ಲೂಟಿ ಹಣ ಚಂದ್ರಶೇಖರನ್ ಆತ್ಮಹತ್ಯೆಯಿಂದ ಬಯಲಿಗೆ ಬಂತು. ಆ ಆಪಾದನೆ ತಮ್ಮ ಮೇಲೆ ಬರಬಾರದು ಅಂತ ದಲಿತ ಚಂದ್ರಶೇಖರನ್ ಬಲಿದಾನ ಆಗಿದೆ ಎಂದರಲ್ಲದೇ ಸಾವಿಗೂ ಮುನ್ನ ಚಂದ್ರಶೇಖರನ್ ಬರೆದಿದ್ದ 6 ಪುಟಗಳ ಡೆತ್ ನೋಟ್ ಓದಿದರು. ಡೆತ್ ನೋಟ್ ನಲ್ಲಿ ಯಾರು ಸುಳ್ಳು ಬರೆಯಲ್ಲ, ಸಾಯುವಾಗ ಯಾರೂ ಸುಳ್ಳು ಹೇಳಲಲ್ಲ. ಡೆತ್ ನೋಟ್ ನಲ್ಲಿ ಅಕ್ರಮದ ಎಲ್ಲ ವಿವರ ಇದೆ. ಹೇಗೆ ಡೀಲ್ ನಡೆದಿದೆ ಅಂತ ಅವರು ವಿವರಿಸಿರುವುದಾಗಿ ಅಶೋಕ್ ಹೇಳಿದರು.
ಇವರಿಗೇ ಶಾಪ ತಟ್ಟದೇ ಇರಲ್ಲ:
ಚಂದ್ರಶೇಖರನ್ ಅವರದ್ದು ಆತ್ಮಹತ್ಯೆ ಅಲ್ಲ, ಕೊಲೆ. ಸರ್ಕಾರಿ ಪ್ರಾಯೋಜಕತ್ವದ ಕೊಲೆ ಇದು. ಒಬ್ಬ ದಲಿತ ಅಧಿಕಾರಿ ಒತ್ತಡಕ್ಕೆ ಒಳಗಾಗಿ ಅವಮಾನ ತಡೆಯದೇ ಆತ್ಮಹತ್ಯೆ ಮಾಡ್ಕೊಂಡ್ರು. ಈ ಜೀವಕ್ಕೆ ಬೆಲೆ ಇಲ್ವಾ? ಸರ್ಕಾರಕ್ಕೆ ಕಣ್ಣಿಲ್ವಾ? ಚಂದ್ರಶೇಖರನ್ ಸತ್ತು 30 ದಿನ ಆಯ್ತಲ್ಲ, ಸರ್ಕಾರ ಏನ್ ಮಾಡ್ತಿದೆ? ಚಂದ್ರಶೇಖರನ್ ಸಾವನ್ನಪ್ಪದೇ ಇದ್ದಿದ್ದರೇ 187 ಕೋಟಿ ಅಕ್ರಮ ಯಾರಿಗೂ ಗೊತ್ತಾಗ್ತಿರಲಿಲ್ಲ. ಅಮಾಯಕ ಚಂದ್ರಶೇಖರನ್ ಹಗರಣವನ್ನ ಬಯಲಿಗೆಳೆದಿದ್ದಾರೆ. ಸಾಕ್ಷಿ ಸಿಕ್ಕಿದೆ, ದುಡ್ಡು ಸಿಕ್ಕಿದೆ, ಬೇನಾಮಿ ಖಾತೆಗಳ ವಿವರ ಗೊತ್ತಾಗಿದೆ, ಕೆಲವರ ಬಂಧನ ಆಗಿದೆ ಇವರಿಗೆ ಶಾಪ ತಟ್ಟದೇ ಇರಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ದಲಿತರ ಹಣವನ್ನು ಕಾಂಗ್ರೆಸ್ ಲೂಟಿ ಮಾಡಿದೆ ಈ ಬಗ್ಗೆ ಚರ್ಚೆ ಆಗ್ಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashoka) ಒತ್ತಾಯಿಸಿದರು. ಪ್ರಶ್ನೋತ್ತರ ಅವಧಿ ಮುಗಿದ ನಂತರ ಮಾತಾಡಿ ಚರ್ಚೆಗೆ ರೆಡಿ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಘೋಷಣೆ ಮಾಡಿದರು. ಪ್ರಶ್ನೋತ್ತರ ಕಲಾಪದ ಬಳಿಕ ಬಿಜೆಪಿಯ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕೊಡೋದಾಗಿ ಸ್ಪೀಕರ್ ರೂಲಿಂಗ್ ಕೊಟ್ಟರು. ಅದರಂತೆ, ಪ್ರಶ್ನೋತ್ತರ ಕಲಾಪ ಮುಗಿಯುವವರೆಗೂ ಸುಮ್ಮನಿದ್ದ ಬಿಜೆಪಿ ಆಮೇಲೆ ಸರ್ಕಾರದ ವಿರುದ್ಧ ಮುಗಿಬಿದ್ದಿತು.
ವಾಲ್ಮೀಕಿ ನಿಗಮದ ಹಣ ಲೂಟಿ ಹೊಡೆದಿದ್ದು ಹಲ್ಕಾ ಕೆಲಸ. ಸತ್ತಿರುವ ಚಂದ್ರಶೇಖರನ್ ದಲಿತ, ಲೂಟಿ ಆಗಿರೋದು ದಲಿತರ ಹಣ, 187 ಕೋಟಿ ರೂ. ಹಣ ಕಟಾಕಟ್ ಅಂತ ವರ್ಗಾವಣೆ ಆದಾಗ ಸರ್ಕಾರ ಕಣ್ಮುಚ್ಚಿ ಕೂತಿತ್ತು ಎಂದು ಅಶೋಕ್ ವಾಗ್ದಾಳಿ ನಡೆಸಿದರು. ಇದಕ್ಕೆ, ವರ್ಗಾವಣೆ ಮಾಡು ಅಂತ ನಾನು ಹೇಳಿದ್ನಾ? ಸದನಕ್ಕೆ ಏನೇನೋ ತಪ್ಪು ಮಾಹಿತಿ ನೀಡ್ಬೇಡಿ. ವರ್ಗಾವಣೆ ಆಗಿರೋದು 187 ಕೋಟಿಯಲ್ಲ, 89.62 ಕೋಟಿ ರೂ. ಅಂತ, ಸದನಕ್ಕೆ ತಪ್ಪು ಮಾಹಿತಿ ಕೊಡಬೇಡಿ ಅಂತ ಸಿಎಂ ಗರಂ ಆದರು. ಅಲ್ಲಿಗೆ ಒಪ್ಕೊಂಡಂತೆ ಆಯ್ತಲ್ಲ ಎಂದು ಬಿಜೆಪಿಗರು ಘೋಷಣೆ ಕೂಗಿದರು. ಇದಕ್ಕೆ ಮತ್ತೆ ಸಿಎಂ ಸ್ಪಷ್ಟೀಕರಣ ಕೊಟ್ಟರು. ಇದನ್ನೂ ಓದಿ: ಜೈಲಿನಲ್ಲಿರೋ ಇಮ್ರಾನ್ ಖಾನ್‌ಗೆ ಮತ್ತೆ ಶಾಕ್ – ದೇಶ ವಿರೋಧಿ ಚಟುವಟಿಕೆ ಆರೋಪದಡಿ ಪಿಟಿಐ ನಿಷೇಧ!
ಲೂಟಿಯನ್ನು ಯಾರೂ ಒಪ್ಪಿಕೊಂಡಿಲ್ಲ. ಇದು ಇ.ಡಿ ಅವರು ಹೇಳಿರುವುದು ಅಷ್ಟೇ. ಇದು ಒಪ್ಪಿತ ಸತ್ಯವಲ್ಲ ಎಂದು ಹೇಳಿದರು. ಈ ವೇಳೆ ಡಿಕೆ ಶಿವಕುಮಾರ್ ಮತ್ತು ಅಶೋಕ್ ನಡುವೆ ಒಂದಿಷ್ಟು ಜಟಾಪಟಿ ನಡೆಯಿತು. ಇದಕ್ಕೂ ಮುನ್ನ, ಯತ್ನಾಳ್ ಹಾಗೂ ಸಿಎಂ ಮಧ್ಯೆ ಮಾತಿನ ಸಮರ ನಡೀತು. ಪರಿಷತ್‌ನಲ್ಲೂ ಸಿಎಂ ರಾಜೀನಾಮೆ ಒತ್ತಾಯಿಸಿ ವಿಪಕ್ಷಗಳು ಗದ್ದಲ ಎಬ್ಬಿಸಿದವು. ಇದನ್ನೂ ಓದಿ: ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಸಹೋದರ ಅರೆಸ್ಟ್; 2 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್!
ಯತ್ನಾಳ್-ಸಿಎಂ ಮಾತಿನ ಜಟಾಪಟಿ:
ವಾಲ್ಮೀಕಿ ಹಗರಣ ವಿಚಾರದಲ್ಲಿ ಸಿಎಂ, ಯತ್ನಾಳ್ ನಡುವೆ ಮಾತಿನ ಜಟಾಪಟಿ ನಡೆಯಿತು. ವಾಲ್ಮೀಕಿ ಹಗರಣದ ಚರ್ಚೆಗೆ ಸಿಎಂ ಆಗ್ರಹಿಸುತ್ತಿದ್ದಂತೆ ಬಿಜೆಪಿಯ ಡಿ.ಎಸ್ ವೀರಯ್ಯ ಅರೆಸ್ಟ್ ಆಗಿದ್ದಾರಲ್ಲ, ಅದರ ಬಗ್ಗೆ ಹೇಳ್ರೀ ಅಂತ ಬಿಜೆಪಿಗೆ ಟಾಂಗ್ ಕೊಟ್ಟರು. ಈ ವೇಳೆ ಅಡ್ಜಸ್ಟ್‌ಮೆಂಟ್ ಬೇಕಿಲ್ಲ, ನಮ್ಮ ಪಕ್ಷವೂ ಸ್ವಚ್ಛ ಆಗಬೇಕು, ನಿಮ್ಮ ಪಕ್ಷವೂ ಸ್ವಚ್ಛ ಆಗಬೇಕು ಅಂತ ಯತ್ನಾಳ್ ಗುಡುಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಹೇ ಯತ್ನಾಳ್ ನಿಮಗೆ ಸೀರಿಯಸ್‌ನೆಸ್ ಇಲ್ಲ, ಏನ್ ಮಾತಾಡ್ತೀರಿ, ಯಾವಾಗ ಯಾವ ನಿಲುವು ತಗೋತೀರಿ ಅಂತ ನಿಮಗೇ ಗೊತ್ತಿರಲ್ಲ. ನಿಮ್ಮ ಪಕ್ಷದಲ್ಲಿ ಸಿಎಂ ಆಗೋದಕ್ಕೆ ಎರಡೂವರೆ ಸಾವಿರ ಕೋಟಿ ಕೊಡಬೇಕು ಅಂದಿದ್ರಿ. ಪುನಃ ಅಲ್ಲಿಂದ ಹಿಂದಕ್ಕೇ ಹೋದ್ರಿ. ನಿಮ್ಮ ಸರ್ಕಾರ ಇದ್ದಾಗ ಯಾಕೆ ಸಿಬಿಐ ತನಿಖೆಗೆ ಕೊಡಲಿಲ್ಲ ಎಂದು ಟಾಂಗ್ ಕೊಟ್ಟರು.
– ಅನಧಿಕೃತ ಹುಕ್ಕಾಬಾರ್ ನಡೆಸಿದ್ರೆ 1 ಲಕ್ಷ ರೂ. ವರೆಗೆ ದಂಡ
ಬೆಂಗಳೂರು: ವಿಧಾನಸಭೆಯಲ್ಲಿಂದು (Assembly) ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಯಮನ) (ಕರ್ನಾಟಕ ತಿದ್ದುಪಡಿ) ವಿಧೇಯಕ ಅಂಗೀಕರಿಸಲಾಯಿತು.
ಈ ಕುರಿತು ಸದನದಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao), ಇನ್ಮುಂದೆ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಿಗರೇಟ್ ಮಾರಾಟ ಮಾಡುವಂತಿಲ್ಲ ಎಂದು ತಾಕೀತು ಮಾಡಿದರು. ಈ ಹಿಂದೆ ಸಿಗರೇಟು ಮಾರಾಟ ವಯೋಮಿತಿಯನ್ನು 18 ವರ್ಷಕ್ಕೆ ನಿಗದಿಪಡಿಸಲಾಗಿತ್ತು, ಈಗ ವಯಸ್ಸಿನ ಮಿತಿಯನ್ನು 21 ವರ್ಷಕ್ಕೆ ಹೆಚ್ಚಿಸಿದ್ದೇವೆ ಎಂದು ತಿಳಿಸಿದರು.
ಅಲ್ಲದೇ ಶಾಲೆಗಳಿಂದ 100 ಮೀಟರ್ ವ್ಯಾಪ್ತಿಯಲ್ಲಿ ಸಿಗರೇಟ್ ಮಾರಾಟ (Cigarette Sale) ಮಾಡುವಂತಿಲ್ಲ. ಒಂದು ವೇಳೆ ಮಾರಾಟ ಮಾಡುವರಿಗೆ ದಂಡದ ಪ್ರಮಾಣ 100 ರೂ. ನಿಂದ 1000 ರೂ. ಗೆ ಏರಿಕೆ ಮಾಡಿದ್ದೇವೆ ಎಂದು ತಿಳಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, ನಿಮ್ಮ ನಿಲುವು ಸ್ವಾಗತಾರ್ಹವಾಗಿದೆ. ಆದ್ರೆ ಈ ಕಾನೂನು ಇನ್ನೂ 5 ವರ್ಷ ಹೀಗೇ ಇರುತ್ತೆ. ಆದ್ದರಿಂದ ದಂಡದ ಮೊತ್ತವನ್ನು 10,000 ರೂ.ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ಯೋಚನೆ ಮಾಡಿ ಹೇಳ್ತೀನಿ: ಡಾ.ಸಿ.ಎನ್.ಮಂಜುನಾಥ್
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್, ಸಿಗರೇಟ್ ಮಾಡುವವರು ಅದೊಂದನ್ನೇ ಮಾರಲ್ಲ. ಸಣ್ಣಪುಟ್ಟ ವ್ಯಾಪಾರಿಗಳಿರುತ್ತಾರೆ, ದಿನಸಿಯನ್ನೂ ಮಾರಾಟ ಮಾಡ್ತಿರ್ತಾರೆ. 10 ಸಾವಿರ ದಂಡ ಹಾಕಿದ್ರೆ ಸಮಸ್ಯೆಯಾಗುತ್ತೆ. ಆದ್ದರಿಂದ 1 ಸಾವಿರಕ್ಕೆ ಮಿತಿಗೊಳಿಸಿದ್ದೇವೆ. ಹುಕ್ಕಾ ಬಾರ್ ನಡೆಸೋರು ಶ್ರೀಮಂತರಿರ್ತಾರೆ. ಆದ್ದರಿಂದ ಅವರಿಗೆ 50,000 ರೂ. ನಿಂದ 1 ಲಕ್ಷ ರೂ.ವೆರೆಗೆ ದಂಡ ವಿಧಿಸುತ್ತೇವೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ದಾವಣಗೆರೆಯಲ್ಲಿ ಮಂತ್ರ ಮಾಂಗಲ್ಯ ಮೂಲಕ ಮದುವೆ; ಅನಾಥ ಯುವತಿ ಬಾಳಿಗೆ ದಾಂಪತ್ಯದ ಬೆಳಕು!
ಹುಕ್ಕಾ ಬಾರ್‌ಗೆ ನಿಷೇಧ:
ಅಲ್ಲದೇ ಯಾವುದೇ ಬಾರ್ & ರೆಸ್ಟೋರೆಂಟ್ ಹಾಗೂ ಇತರ ಕಡೆಗಳಲ್ಲಿ ಹುಕ್ಕಾ ಬಾರ್‌ಗೆ ನಿಷೇಧ ಹೇರಿದ್ದೇವೆ. ಹುಕ್ಕಾ ಬಾರ್ ಅನಧಿಕೃತವಾಗಿ ನಡೆಸಿದರೆ ಒಂದು ವರ್ಷಕ್ಕೆ ಕಡಿಮೆ ಇಲ್ಲದಂತೆ ಹಾಗೂ 3 ವರ್ಷಕ್ಕೆ ವಿಸ್ತರಣೆ ಮಾಡುವ ಜೈಲು ಶಿಕ್ಷೆ ಮತ್ತು 50 ಸಾವಿರದಿಂದ 1 ಲಕ್ಷ ರೂ. ವರೆಗೆ ದಂಡ ವಿಧಿಸಲು ಅವಕಾಶವಿದೆ ಎಂದು ಹೇಳಿದರು. ಇದನ್ನೂ ಓದಿ: 4 ದಿನದ ಕೂಸನ್ನು ಬಿಸಿ ನೀರಿನಲ್ಲಿ ಕೂರಿಸಿ ಸ್ನಾನ ಪ್ರಕರಣ- ಧಾರವಾಡದ ಆಸ್ಪತ್ರೆಗೆ 10 ಲಕ್ಷ ದಂಡ
ಬೆಂಗಳೂರು: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಾಮಕುಮಾರ ನಂದಿ ಮಹಾರಾಜರ ಕೊಲೆ ಪ್ರಕರಣವನ್ನ ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದಲ್ಲಿ ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿ (Assembly) ಪ್ರತಿಭಟನಾ ಧರಣಿ ನಡೆಸಿದರು.
ಧರಣಿಗೂ ಮೊದಲು ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜೈನಮುನಿ ಕೊಲೆಗೂ ಬೇರೆ ಕೊಲೆಗೂ ಹೋಲಿಕೆ ಮಾಡುವುದು ಸರಿಯಲ್ಲ. ಯಾರಿಗೂ ಹಿಂಸೆ ಬಯಸದ ಜೈನ ಮುನಿಗಳನ್ನ ಕರೆಂಟ್ ಶಾಕ್ ಕೊಟ್ಟು ಹತ್ತೆ ಮಾಡಿರಬೇಕೆಂದರೆ ಇದರ ಹಿಂದೆ ಷಡ್ಯಂತರ ಇದೆ. ಈ ಪ್ರಕರಣದಲ್ಲಿ ಅವರು ಕೊಂದು ಇಷ್ಟೊಂದು ತುಂಡು ಮಾಡಿ ಕೊಳವೆ ಬಾವಿಯಲ್ಲಿ ಹಾಕುವಷ್ಟು ಸಮಯ ಇದ್ದರೇ ಅವರು ಎಷ್ಟು ಪೂರ್ವ ನಿಯೋಜಿತ ಯೋಜನೆ ರೂಪಿಸಿದ್ದರು ಎನ್ನುವುದಕ್ಕೆ ಸಾಕ್ಷಿ ಎಂದು ಹೇಳಿದರು.
ಈ ಪ್ರಕರಣದಲ್ಲಿ ಯಾರನ್ನೋ ರಕ್ಷಣೆ ಮಾಡುವ ಪ್ರಯತ್ನ ನಡೆಸಿದ್ದೀರಿ ಎನ್ನುವ ಅನುಮಾನ ಮೂಡುತ್ತಿದೆ. ಪ್ರಕರಣವನ್ನು ಸಿಬಿಐಗೆ ಕೊಡುವುದರಿಂದ ರಾಜ್ಯ ಪೊಲಿಸರ ಘನತೆ ಏನು ಕಡಿಮೆ ಆಗುವುದಿಲ್ಲ. ಅನೇಕ ಪ್ರಕರಣಗಳನ್ನು ಹಿಂದೆ ಸಿಬಿಐಗೆ ಕೊಟ್ಟಿದ್ದಾರೆ. ಈ ಪ್ರಕರಣ ಸಿಬಿಐಗೆ ಕೊಡುವುದರಿಂದ ಏನು ಕಳೆದುಕೊಳ್ಳುವುದಿದೆ? ಸಿಬಿಐಗೆ ಕೊಡದಿದ್ದರೆ ಅನುಮಾನ ಹುಟ್ಟುತ್ತದೆ. ನೀವು ಸಿಬಿಐ, ಇನ್ಸ್‌ಪೆಕ್ಟರ್ ನಿಂದ ತನಿಖೆ ಮಾಡಿಸಲು ಬಯಸುತ್ತಿದ್ದೀರಿ ಇದರ ವಿರುದ್ದ ಪ್ರತಿಭಟನೆ ನಡೆಸುತ್ತೇವೆ ಎಂದು ಸದನದ ಬಾವಿಗಿಳಿದು ಧರಣಿ ನಡೆಸಿದರು. ಇದನ್ನೂ ಓದಿ: ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರಕ್ಕೆ ಸೂಚಿಸುವಂತೆ ರಾಜ್ಯಪಾಲರಿಗೆ ಮನವಿ: ಬೊಮ್ಮಾಯಿ
ಆರೋಪಿಗಳ ಮೇಲೆ ಕ್ರಮಣಕ್ಕೆ ಆಗ್ರಹ:
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಯುವಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ ಎನ್ನುವ ವ್ಯಕ್ತಿಯನ್ನ ಬರ್ಬರವಾಗಿ ಹತ್ಯೆ ಮಾಡಿದ್ದು, ಹಂತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಹನುಮ ಜಯಂತಿ ಕಾರ್ಯಕ್ರಮದಲ್ಲಿ ಅವಕಾಶ ನೀಡಲಿಲ್ಲ, ದೇವರ ಫೋಟೊ ಜಾಗದಲ್ಲಿ ಪುನೀತ್ ರಾಜಕುಮಾರ್ ಫೋಟೋ ಇಡುವ ವಿಚಾರಕ್ಕೆ ಮಣಿಕಂಠ, ವೇಣುಗೋಪಾಲ ನಡುವೆ ಗಲಾಟೆಯಾಗಿದೆ. ಮಾರನೇ ದಿನ ಮಾತುಕತೆಗೆಂದು ಕರೆಸಿಕೊಂಡು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಅವರನ್ನು ಆಸ್ಪತ್ರೆಗೆ ತೆಗೆದುಕೊಂಡು ಹೊಗುವಾಗ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಇಷ್ಟು ಸಣ್ಣ ವಿಚಾರಕ್ಕೆ ಕೊಲೆಯಾಗಿರೋದು ಆಘಾತಕಾರಿ, ಧಾರ್ಮಿಕ ಆಚರಣೆಗಳು ನಿರಂತರವಾಗಿ ನಡೆಯುತ್ತವೆ. ಈ ರೀತಿಯ ಕೊಲೆಗಳು ಸಮಾಜದ ಮೇಲೆ ಪರಿಣಾಮ ಬೀರುತ್ತವೆ. ಇದರಲ್ಲಿ ಯಾರೇ ಇದ್ದರೂ ಅವರ ವಿರುದ್ಧ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಈ ರೀತಿಯ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಪೊಲಿಸರು ಇನ್ನೂ ಯಾರನ್ನೂ ಬಂಧಿಸಿಲ್ಲ. ಆದರೆ ಮೆಲಧಿಕಾರಿಗಳು ಆರೋಪಿಗಳ ಹೆಸರುಗಳನ್ನು ಹೇಳಿ ದಾರಿ ತಪ್ಪಿಸುತ್ತಿದ್ದಾರೆ. ಸಕಲೇಶಪುರ, ಕಲಬುರಗಿ, ನಂಜನಗೂಡಿನಲ್ಲಿ ಹಲವು ಪ್ರಕರಣಗಳು ನಡೆದಿವೆ. ಇಂತಹ ಪ್ರಕರಣಗಳನ್ನ ಸರ್ಕಾರ ಗಂಭಿರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಹೇಳಿದರು.
ಬೆಂಗಳೂರು: ವಿಧಾನಸಭೆ ಕಲಾಪದಲ್ಲಿಂದು (Assembly Session) ವರ್ಗಾವಣೆ ದಂಧೆ ಆರೋಪ ವಿಚಾರ ದೊಡ್ಡ ಸದ್ದು ಮಾಡ್ತು. ಯತ್ನಾಳ್ ಮಾಡಿದ ಆರೋಪ ಕಾಂಗ್ರೆಸ್-ಬಿಜೆಪಿ (Congress, BJP) ಮಧ್ಯೆ ಮಾತಿನ ಕಿಚ್ಚು ಹಚ್ಚಿತ್ತು. ಸದಸ್ಯರು ಪರಸ್ಪರ ಏರು ದನಿಯಲ್ಲಿ ವಾಗ್ವಾದಕ್ಕಿಳಿದು ಕಲಾಪದಲ್ಲಿ ಕೋಲಾಹಲ ಎಬ್ಬಿಸಿದ್ದರು.
ವಿಧಾನಸಭೆಯಲ್ಲಿಂದು ಮಾಜಿ ಸಿಎಂ HDK ಗೈರಾಗಿದ್ದರು. ಆದ್ರೂ ವರ್ಗಾವಣೆ ಫೈಟ್ ಜೋರಾಗಿಯೇ ಕಾವೇರಿತ್ತು. ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹತ್ತಿಸಿದ ವರ್ಗಾವಣೆ ಕಿಡಿಗೆ ಕೆಲ ಗಂಟೆಗಳ ಕಲಾಪ ಉಭಯ ಪಕ್ಷಗಳ ಸದಸ್ಯರ ಜಟಾಪಟಿಗೆ ಬಲಿಯಾಯ್ತು. ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರ ಹುದ್ದೆಗೆ ಅನರ್ಹ ಅಧಿಕಾರಿಯನ್ನ ವರ್ಗಾವಣೆ ಮಾಡಲಾಗಿದೆ ಎಂದು ಶೂನ್ಯವೇಳೆಯಲ್ಲಿ ಯತ್ನಾಳ್ ವಿಷಯ ಪ್ರಸ್ತಾಪಿಸಿದರು. ಈ ವೇಳೆ ನಗರಾಭಿವೃದ್ಧಿ ಇಲಾಖೆ ಸಚಿವ ಬೈರತಿ ಸುರೇಶ್ ವಿರುದ್ಧ ಯತ್ನಾಳ್ ವರ್ಗಾವಣೆ ವ್ಯಾಪಾರ ನಡೆಸುತ್ತಿರುವ ಗಂಭೀರ ಆರೋಪ ಮಾಡಿದ್ದರಿಂದ ಸದನದಲ್ಲಿ ಪರಸ್ಪರ ಮಾತಿನ ಬೆಂಕಿ ಹಚ್ಚಿಕೊಳ್ತು.
ವಿಜಯಪುರ ಪಾಲಿಕೆಗೆ ಅರ್ಹತೆಯಿಲ್ಲದ, ಐಎಎಸ್, ಕೆಎಎಸ್ ಕೇಡರ್ ಇಲ್ಲದ ಅಧಿಕಾರಿಯನ್ನ ವರ್ಗಾಯಿಸಲಾಗಿದೆ. ಆ ಮೂಲಕ ಹೈಕೋರ್ಟ್, ಕೆಎಟಿ, ಸರ್ಕಾರದ ನಿಯಮಗಳನ್ನ ಉಲ್ಲಂಘಿಸಲಾಗಿದೆ. ಆ ಅಧಿಕಾರಿ ಸೌಜನ್ಯಕ್ಕೂ ನನ್ನ ಬಂದು ಮಾತಾಡಿಸಿಲ್ಲ. ಈ ವರ್ಗಾವಣೆ ಮೂಲಕ ಸಚಿವರು ವ್ಯಾಪಾರ ಮಾಡಿರಬಹುದು ಎಂದು ಗಂಭೀರ ಆರೋಪ ಮಾಡಿದ್ರು. ಯತ್ನಾಳ್ ಆರೋಪಕ್ಕೆ ಸಚಿವ ಬೈರತಿ ಸುರೇಶ್ ಹಾಗೂ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸದನದಲ್ಲಿ ಗದ್ದಲ, ಕೋಲಾಹಲ ಸೃಷ್ಟಿಯಾಗಿ ಸದಸ್ಯರು ಪರಸ್ಪರ ಮಾತಿನ ಸಮರ ನಡೆಸಿದರು. ಇದನ್ನೂ ಓದಿ: ವಿಧಾನಸೌಧದಲ್ಲಿ ನಮಾಜ್ ಮಾಡೋಕೆ ಅದೇನು ಮೆಕ್ಕಾ-ಮದೀನಾನಾ – ಮುತಾಲಿಕ್ ಪ್ರಶ್ನೆ
ಅಷ್ಟೇ ಅಲ್ಲ ಯತ್ನಾಳ್ ಮಾತಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸಹ ಕಿಡಿಕಾರಿದ್ರು. ಯತ್ನಾಳ್ ನೀವು ಹಿರಿಯರು, ವರ್ಗಾವಣೆ ಬಗ್ಗೆ ಮಾತ್ರ ಮಾತಾಡಿ, ಅದು ಬಿಟ್ಟು ವ್ಯಾಪಾರ ಅಂತೆಲ್ಲ ಏನ್ರಿ ಮಾತಾಡೋದು ಅಂತ ಸಿದ್ದರಾಮಯ್ಯ ಗರಂ ಆಗಿ ಗದರಿದರು. ಇನ್ನು ಡಿಕೆಶಿ ಸಹ, ಯತ್ನಾಳ್ ನೀವು ಮುಖ್ಯಮಂತ್ರಿ ಹುದ್ದೆಗೆ 2,500 ಕೋಟಿ ರೂ., ಮಂತ್ರಿ ಹುದ್ದೆಗೆ 1,000 ಕೋಟಿ ರೂ. ಅಂತೆಲ್ಲಾ ಆರೋಪ ಮಾಡಿದ್ರಿ. ಮಾತಿನ ಮೇಲೆ ಹಿಡಿತವಿರಲಿ, ನಮ್ಮ ಪಕ್ಷದಲ್ಲಿ ಇದ್ದಿದ್ದರೆ, ನಿಮ್ಮನ್ನ 24 ಗಂಟೆಯಲ್ಲಿ ವಜಾ ಮಾಡ್ತಿದ್ದೆ ಅಂತ ಕಿಡಿಕಾರಿದ್ರು. ಈ ವೇಳೆ ಯತ್ನಾಳ್ ಪರ ಮಾಜಿ ಸಿಎಂ ಬೊಮ್ಮಾಯಿ ಸಮರ್ಥಿಸಿಕೊಂಡ್ರು. ಉಭಯ ಪಕ್ಷಗಳ ಸದಸ್ಯರ ನಡುವೆ ಭಾರೀ ಜಟಾಪಟಿ ನಡೀತು. ಬೈರತಿ ಸುರೇಶ್ ಕ್ಷಮೆಗೆ ಆಗ್ರಹಿಸಿ ಬಿಜೆಪಿ ಸದಸ್ಯರು ಸದನದ ಬಾವಿಗೆ ಇಳಿದು ಧರಣಿ ನಡೆಸಿದ್ರು. ಸ್ಪೀಕರ್ ಅನಿವಾರ್ಯವಾಗಿ ಸದನವನ್ನ ಹತ್ತು ನಿಮಿಷ ಕಾಲ ಮುಂದೂಡಿದರು. ಬಳಿಕ ಸ್ಪೀಕರ್ ನೇತೃತ್ವದಲ್ಲಿ ಸಂಧಾನ ಸಭೆ ನಡೆಸಲಾಯ್ತು. ಇದನ್ನೂ ಓದಿ: ರಾಜ್ಯದಲ್ಲಿ ಡಿಸಿ, ಸಿಇಓ, ಕಮಿಷನರ್‌ಗಳಿಗೆ ರೇಟ್ ಫಿಕ್ಸ್ ಆಗಿದೆ: ಕಟೀಲ್ ಗಂಭೀರ ಆರೋಪ
ಬಹಳ ಹೊತ್ತು ಸಂಧಾನ ಸಭೆ ನಡೆಸಿ ಮತ್ತೆ ಕಲಾಪ ಆರಂಭವಾದಾಗ ಮತ್ತೆ ಜಟಾಪಟಿ ನಡೀತು. ಈ ವೇಳೆ ಸಿದ್ದರಾಮಯ್ಯ ಸಲಹೆ ಮೇರೆಗೆ ಉಭಯ ಕಡೆಯಿಂದಲೂ ವಿಷಾದ ವ್ಯಕ್ತಪಡಿಸಿ ಗದ್ದಲಕ್ಕೆ ಬ್ರೇಕ್ ಹಾಕಲಾಯ್ತು. ಅಧಿಕಾರಿ ವರ್ಗ ಬಗ್ಗೆ ಉತ್ತರಿಸಿದ ಸಚಿವ ಬೈರತಿ ಸುರೇಶ್, ವರ್ಗಾವಣೆಯಲ್ಲಿ ನಿಯಮ ಉಲ್ಲಂಘನೆ ಆಗಿದ್ದರೆ ವಾಪಸ್ ಪಡೆಯೋದಾಗಿಯೂ ಸರಿ ಇದ್ದರೆ ಅದೇ ಅಧಿಕಾರಿ ಮುಂದುವರೆಸೋದಾಗಿಯೂ ಉತ್ತರಿಸಿದರು. ಅಲ್ಲಿಗೆ ಯತ್ನಾಳ್ ಹಚ್ಚಿದ್ದ ವರ್ಗಾವಣೆ ಕಿಡಿಯೂ ತಣ್ಣಗಾಯ್ತು.