Tag: Karnataka Assembly Elections 2018

  • ರಾಜ್ಯಾದ್ಯಂತ ಬಿಜೆಪಿಯಿಂದ ಕರಾಳ ದಿನಾಚರಣೆ – ಮಂಗ್ಳೂರಲ್ಲಿ ನಿಷೇಧಾಜ್ಞೆ ಜಾರಿ

    ರಾಜ್ಯಾದ್ಯಂತ ಬಿಜೆಪಿಯಿಂದ ಕರಾಳ ದಿನಾಚರಣೆ – ಮಂಗ್ಳೂರಲ್ಲಿ ನಿಷೇಧಾಜ್ಞೆ ಜಾರಿ

    ಬೆಂಗಳೂರು/ಮಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ 25ನೇ ಮುಖ್ಯಮಂತಿಯಾಗಿ ಇಂದು ಸಂಜೆ 4.30ರ ಸುಮಾರಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇತ್ತ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಖಂಡಿಸಿ ಬಿಜೆಪಿ ಕರಾಳ ದಿನವನ್ನು ಆಚರಿಸುತ್ತಿದೆ.

    ಎಚ್‍ಡಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ವಿರೋಧಿಸಿ ಕಪ್ಪುಪಟ್ಟಿ ಧರಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ. ಬೆಂಗಳೂರಿನ ಮೌರ್ಯ ಸರ್ಕಲ್‍ನಲ್ಲಿರುವ ಗಾಂಧಿ ಪ್ರತಿಮೆ ಬಳಿ ಬೆಳಗ್ಗೆ 11 ಗಂಟೆಗೆ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಕರಾಳ ದಿನಾಚರಣೆ ನಡೆಯಲಿದೆ.

    ಆಯಾ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಆಯಾ ಭಾಗದ ನಾಯಕರ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಿದೆ. ಮಂಗಳೂರು ನಗರದಲ್ಲಿ ಕಲಂ 35ರ ಅನ್ವಯ ನಿಷೇಧಾಜ್ಞೆ ಹೇರಲಾಗಿದೆ. ಇಂದು ಮಧ್ಯಾಹ್ನ 12 ಗಂಟೆಯಿಂದ ಮೇ25ರ ಬೆಳಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ಇರಲಿದೆ ಅಂತ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.

    ಇನ್ನು ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಯಾವುದೇ ವಿಜಯೋತ್ಸವ, ರಾಜಕೀಯ ಸಭೆ ನಡೆಸಬಾರದು ಎಂದು ಪೊಲೀಸ್ ಆಯುಕ್ತ ವಿಫುಲ್ ಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

  • ರೋಷನ್ ಬೇಗ್‍ರನ್ನು ಡಿಸಿಎಂ ಮಾಡಿ: ಮುಸ್ಲಿಂ ಸಂಘಟನೆಗಳಿಂದ ಬೇಡಿಕೆ

    ರೋಷನ್ ಬೇಗ್‍ರನ್ನು ಡಿಸಿಎಂ ಮಾಡಿ: ಮುಸ್ಲಿಂ ಸಂಘಟನೆಗಳಿಂದ ಬೇಡಿಕೆ

    ಬೆಂಗಳೂರು: ನಮ್ಮ ಸಮುದಾಯದ ನಾಯಕರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಮುಸ್ಲಿಂ ಸಂಘಟನೆಗಳ ಒಕ್ಕೂಟವು ಒತ್ತಾಯಿಸಿದೆ.

    ಈ ಹಿಂದೆ ವೀರಶೈವ ಸಮಾಜದ ಮುಖಂಡರು ತಮ್ಮ ಸಮಾಜದವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಮತ್ತು 5 ಮಂದಿ ಶಾಸಕರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದರು. ಈ ಬೆನ್ನಲ್ಲೆ, ಶಿವಾಜಿನಗರದ ಶಾಸಕ ಆರ್.ರೋಷನ್ ಬೇಗ್ ಅವರನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂದು ಮುಸ್ಲಿಂ ಸಂಘಟನೆಗಳ ಒಕ್ಕೂಟದ ಪ್ರಧಾನ ಸಂಚಾಲಕ ಸಮಿಉಲ್ಲಾ ಖಾನ್ ಒತ್ತಾಯಿಸಿದ್ದಾರೆ.

    ರಾಜಕೀಯದಲ್ಲಿ ಮುಸ್ಲಿಮರಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ, ಕಾಂಗ್ರೆಸ್‍ನಿಂದ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ರೋಷನ್ ಬೇಗ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

  • ಕರಾವಳಿಯಲ್ಲಿ ಸಂಘರ್ಷಕ್ಕೆ ಅವಕಾಶ ನೀಡಲ್ಲ, ಸಮಸ್ಯೆ ಇದ್ರೆ ಕರೆ ಮಾಡಿ: ಎಚ್‍ಡಿಕೆ

    ಕರಾವಳಿಯಲ್ಲಿ ಸಂಘರ್ಷಕ್ಕೆ ಅವಕಾಶ ನೀಡಲ್ಲ, ಸಮಸ್ಯೆ ಇದ್ರೆ ಕರೆ ಮಾಡಿ: ಎಚ್‍ಡಿಕೆ

    ಮಂಗಳೂರು: ಕರಾವಳಿ ಜನತೆ ಸೌಹಾರ್ದತೆಯಿಂದ ಬದುಕಬೇಕು. ಕ್ಷುಲ್ಲಕ ವಿಚಾರದಲ್ಲಿ ದ್ವೇಷ ಸಾಧಿಸಿ ಅಮಾಯಕರನ್ನು ಬಲಿ ಕೊಡಬೇಡಿ. ನಾನು ಕರಾವಳಿ ಭಾಗದಲ್ಲಿ ಸಂಘರ್ಷಕ್ಕೆ ಅವಕಾಶ ನೀಡುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

    ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಪತ್ನಿ ಅನಿತಾ ಅವರೊಂದಿಗೆ ಇಂದು ಎಚ್‍ಡಿಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಗೌರವಿಸಿದರು.

    ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭಾವೋದ್ವೇಗದ ವಿಚಾರಕ್ಕೆ ಒತ್ತು ಕೊಟ್ಟು ಸಂಘರ್ಷಕ್ಕೆ ಅವಕಾಶ ಮಾಡಿಕೊಡಬೇಡಿ. ನಾನು ಕರಾವಳಿ ಭಾಗದಲ್ಲಿ ಸಂಘರ್ಷಕ್ಕೆ ಅವಕಾಶ ನೀಡುವುದಿಲ್ಲ. ಇದಕ್ಕೆ ಇಲ್ಲಿನ ಯುವಕರ ಸಹಕಾರ ಬೇಕು. ಏನೇ ಸಮಸ್ಯೆ ಇದ್ದರೂ ನನಗೆ ಕರೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಐದು ವರ್ಷ ಸುಭದ್ರ ಸರ್ಕಾರ ನಡೆಸಲು ಧಾರ್ಮಿಕ ಕ್ಷೇತ್ರಗಳಿಗೆ ಹಾಗೂ ಹಿರಿಯರನ್ನು ಭೇಟಿ ಮಾಡುತ್ತಿರುವೆ. ನಾವು ಕಾಂಗ್ರೆಸ್ ಜತೆ ಸರ್ಕಾರ ರಚನೆ ಮಾಡುತ್ತಿರವುದನ್ನು ಅಪವಿತ್ರ ಮೈತ್ರಿ ಎಂದು ಅನೇಕರು ಟೀಕೆ ಮಾಡಿದ್ದಾರೆ. ಆದರೆ, ಇಲ್ಲಿ ಪವಿತ್ರ ಅಪವಿತ್ರ ಮಾತು ಬರುವುದಿಲ್ಲ. ಶಾಸಕರ ಸಂಖ್ಯಾಬಲ ಇದ್ದರೆ ಮಾತ್ರ ಸರ್ಕಾರ ಉಳಿಯುತ್ತದೆ ಎಂದು ಅವರು ಪ್ರತಿಕ್ರಿಯಿಸಿದರು.

    ನಮ್ಮ ಕುಟುಂಬ ದೇವರ ಮೇಲೆ ನಂಬಿಕೆ ಇಟ್ಟಿದ್ದು, ದೇವರ ಅನುಗ್ರಹದಿಂದಲೇ ರಾಜ್ಯದ ಜವಾಬ್ದಾರಿ ಸಿಕ್ಕಿದೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ರಾಜ್ಯದಲ್ಲಿ ಉತ್ತಮ ಮಳೆ, ಬೆಳೆ ನೀಡಿ ಆರ್ಥಿಕ ಪರಿಸ್ಥಿತಿ ಏರಿಕೆಯಾಗಲಿ ಎಂದು ದೇವರಲ್ಲಿ ಪಾರ್ಥನೆ ಸಲ್ಲಿಸಿರುವೆ ಎಂದು ಕುಮಾರಸ್ವಾಮಿ ಹೇಳಿದರು.

  • ವರುಣಾದಲ್ಲಿ ಎಷ್ಟು ನೋಟಾ ವೋಟು ಬಿದ್ದಿದೆ?

    ವರುಣಾದಲ್ಲಿ ಎಷ್ಟು ನೋಟಾ ವೋಟು ಬಿದ್ದಿದೆ?

    ಬೆಂಗಳೂರು: ಹುಬ್ಬಳ್ಳಿ-ಧಾರವಾಡ ಕೇಂದ್ರ ಮತಕ್ಷೇತ್ರ ಹೊರತುಪಡೆಸಿ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಆದರೆ, ಈ ಫಲಿತಾಂಶವು ಅತಂತ್ರ ವಾತಾವರಣ ಉಂಟು ಮಾಡಿದೆ. ಈ ಸಂಬಂಧ ಅನೇಕ ಕಾರಣಗಳು ಕೇಳಿಬರುತ್ತಿದ್ದು, ಅದರಲ್ಲಿ ನೋಟಾ ಕೂಡಾ ಒಂದು ಎಂದು ಹೇಳಬಹುದು.

    ತಮ್ಮ ಕ್ಷೇತ್ರದಲ್ಲಿ ಸೂಕ್ತ ಅಭ್ಯರ್ಥಿ ಯಾರು ಇಲ್ಲವೆಂದು ಮತದಾರರು ನೋಟಾ ಆಯ್ಕೆ ಮಾಡಿರಬಹುದು. ಇಲ್ಲವೇ, ತಮ್ಮ ಅಭ್ಯರ್ಥಿಗೆ ಟಿಕೇಟ್ ಸಿಗದಿರುವುದಕ್ಕೆ ಅಥವಾ ಅಭ್ಯರ್ಥಿಗಳನ್ನು ಬದಲಾಯಿಸಿದಕ್ಕೆ ಅಭಿಮಾನಿಗಳು ನೋಟಾ ಮೊರೆ ಹೋಗಿದ್ದಾರೆ. ಈ ಬಾರಿ ಒಟ್ಟು 3,08,743 ನೋಟಾ ಮತಗಳು ಚಲಾವಣೆಯಾಗಿದೆ. ಇದರ ಪರಿಣಾಮ ಕೆಲವು ಕ್ಷೇತ್ರಗಳ ಫಲಿತಾಂಶದಲ್ಲಿ ವ್ಯತ್ಯಾಸ ಕಂಡುಬಂದಿದೆ.

     

    ಶೇ 0.9ರಷ್ಟು ಜನರು ನೋಟಾ ಮೊರೆ ಹೋಗಿದ್ದು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ಅಭ್ಯರ್ಥಿಗಳ ನಂತರದ ಸ್ಥಾನವನ್ನು ಇದು ತುಂಬುತ್ತದೆ. ವಿಜಯೇಂದ್ರಗೆ ಕೈ ತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿಯಿಂದ ನೋಟಾ ಅಭಿಯಾನ ಆರಂಭವಾಗಿದೆ ಎನ್ನುವ ಮೆಸೇಜ್‍ಗಳು ಹರಿದಾಡಿತ್ತು. ಆದರೆ ಇಲ್ಲಿ ಬಿಜೆಪಿ ಅಭ್ಯರ್ಥಿ 37,819 ಮತಗಳನ್ನು ಪಡೆದರೆ, 1,497 ನೋಟಾ ಮತಗಳು ಬಿದ್ದಿದೆ. ಸಿಎಂ ಪುತ್ರ ಯತೀಂದ್ರ ಅವರು ಇಲ್ಲಿ 96,435 ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದರು.