Tag: Karnataka Assembly Elections

  • ಅಭ್ಯರ್ಥಿಯಿಂದಲೇ ಚುನಾವಣಾ ಬಹಿಷ್ಕಾರ – ಮತಗಟ್ಟೆಗೆ ಏಜೆಂಟ್‍ಗಳನ್ನು ನೇಮಿಸದ ವಾಟಾಳ್

    ಅಭ್ಯರ್ಥಿಯಿಂದಲೇ ಚುನಾವಣಾ ಬಹಿಷ್ಕಾರ – ಮತಗಟ್ಟೆಗೆ ಏಜೆಂಟ್‍ಗಳನ್ನು ನೇಮಿಸದ ವಾಟಾಳ್

    ಚಾಮರಾಜನಗರ: ಚಾಮರಾಜನಗರ (Chamarajanagar) ವಿಧಾನಸಭೆಗೆ ಪಕ್ಷೇತರವಾಗಿ ಸ್ಪರ್ಧಿಸಿರುವ ವಾಟಾಳ್ ನಾಗರಾಜ್ (Vatal Nagaraj) ಅವರು ಚುನಾವಣಾ ಬಹಿಷ್ಕಾರ ಮಾಡಿದ್ದಾರೆ.

    ರಾಜ್ಯ ವಿಧಾನಸಭೆ ಚುನಾವಣೆಯ (Karnataka Assembly Election) ಮತದಾನವು ಬೀರುಸಿನಿಂದ ನಡೆಯುತ್ತಿದೆ. ಆದರೆ ವಾಟಾಳ್ ನಾಗರಾಜ್ ಚುನಾವಣಾ ಬಹಿಷ್ಕಾರ ಮಾಡಿದ್ದಾರೆ. ಅಷ್ಟೇ ಅಲ್ಲದೇ ಏಜೆಂಟ್‍ಗಳನ್ನು ನೇಮಿಸದೇ ಮತದಾನ ಪ್ರಕ್ರಿಯೆಯಿಂದ ದೂರ ಉಳಿದಿದ್ದಾರೆ. ಇದನ್ನೂ ಓದಿ: ಡಿಎಂಕೆ ಫೈಲ್ಸ್ ರಿಲೀಸ್ – ಅಣ್ಣಾಮಲೈ ವಿರುದ್ಧ ಮಾನನಷ್ಟ ಕೇಸ್

    ಈ ಬಗ್ಗೆ ಮಾತನಾಡಿದ ಅವರು, ಇದು ಚುನಾವಣೆಯಲ್ಲ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮಂಗಳವಾರ ರಾತ್ರಿಯಿಡೀ ಮತದಾರರಿಗೆ ಹಣ ಹಂಚಿದ್ದಾರೆ. ಆದರೆ ನಾನು ಮತದಾರರಿಗೆ ಒಂದು ನಯಾಪೈಸೆ ಕೊಟ್ಟಿಲ್ಲ. ಚುನಾವಣಾಧಿಕಾರಿಗಳು ನಿಷ್ಕ್ರಿಯರಾಗಿದ್ದಾರೆ. ಇಂತಹ ಭ್ರಷ್ಟ ವ್ಯವಸ್ಥೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಚುನಾವಣಾ ವ್ಯವಸ್ಥೆ ಖಂಡಿಸಿ ಚುನಾವಣೆ ಬಹಿಷ್ಕಾರ ಮಾಡಿದ್ದೇನೆ ಎಂದು ಕಿಡಿಕಾರಿದರು. ಇದನ್ನೂ ಓದಿ: ವಿಶೇಷ ಚೇತನನಿಂದ ಮತದಾನ – ಕಾಲು ಬೆರಳಿಗೆ ಶಾಯಿ ಹಾಕಿದ ಅಧಿಕಾರಿಗಳು

  • ಒಂದೇ ಕುಟುಂಬದ 65 ಮಂದಿ ಏಕಕಾಲಕ್ಕೆ ಮತದಾನ

    ಒಂದೇ ಕುಟುಂಬದ 65 ಮಂದಿ ಏಕಕಾಲಕ್ಕೆ ಮತದಾನ

    ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಇಂದು ವಿಧಾನಸಭೆಗೆ ಚುನಾವಣೆ (Karnataka Assembly Election) ಭರದಿಂದ ಸಾಗುತ್ತಿದ್ದು, ಬೆಳ್ಳಂಬೆಳಗ್ಗೆಯೇ ಚಿಕ್ಕಬಳ್ಳಾಪುರದಲ್ಲಿ (Chikkaballapura) ಒಂದೇ ಕುಟುಂಬದ 65 ಮಂದಿ ಏಕಕಾಲಕ್ಕೆ ಮತದಾನ ಮಾಡಿದ್ದಾರೆ.

    ಚಿಕ್ಕಬಳ್ಳಾಪುರ ನಗರದ ಬಾದಂ ಕುಟುಂಬದವರಿಂದ ಮತದಾನ ನಡೆದಿದೆ. ಒಂದೇ ಕುಟುಂಬದ 65 ಮಂದಿಯೂ ಏಕಕಾಲಕ್ಕೆ ಜ್ಯೂನಿಯರ್ ಕಾಲೇಜು ಆವರಣಕ್ಕೆ ಬಂದು ಮತ (Vote) ಚಲಾಯಿಸಿದ್ದಾರೆ. ಇದನ್ನೂ ಓದಿ: Karnataka Election 2023 | ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ಮತದಾನ | Live Updates

    ಬಾದಾಮ್ ಕುಟುಂಬದ ಸದಸ್ಯರೆಲ್ಲರೂ ಒಂದೇ ಬಾರೀ ಎಲ್ಲರೂ ಆಗಮಿಸಿ ಮತ ಚಲಾಯಿಸುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಬಾದಂ ಕುಟುಂಬಸ್ಥರು, ಪ್ರತಿ ಬಾರಿಯೂ ಕುಟುಂಬಸ್ಥರೆಲ್ಲರೂ ಒಮ್ಮೆಲೆ ಆಗಮಿಸಿ ಮತ ಚಲಾವಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದಾಖಲೆ ಮರೆತು ಬಂದ ಪ್ರಮೋದಾ ದೇವಿ ಒಡೆಯರ್ – ಅರಮನೆಗೆ ತೆರಳಿದ ಬಳಿಕ ವೋಟ್ ಮಾಡಿದ ರಾಜವಂಶಸ್ಥೆ

  • 4 ತಿಂಗಳ ಮಗುವಿನೊಂದಿಗೆ ಬಂದು ಮತದಾನ ಮಾಡಿದ ಮಹಿಳೆ

    4 ತಿಂಗಳ ಮಗುವಿನೊಂದಿಗೆ ಬಂದು ಮತದಾನ ಮಾಡಿದ ಮಹಿಳೆ

    ಮಡಿಕೇರಿ: ರಾಜ್ಯದಲ್ಲಿ ಇಂದು ವಿಧಾನಸಭೆಗೆ ಚುನಾವಣೆ (Karnataka Assembly Election) ಭರದಿಂದ ಸಾಗುತ್ತಿದ್ದು, ಬೆಳ್ಳಂಬೆಳಗ್ಗೆಯೇ 4 ತಿಂಗಳ ಮಗುವಿನೊಂದಿಗೆ ಬಂದು ಮಹಿಳೆಯೊಬ್ಬಳು (Woman) ಮತದಾನ ಮಾಡಿದ್ದಾರೆ.

    ಮಡಿಕೇರಿಯ ಕಾವೇರಿ ಹಾಲ್ ಸಮೀಪದ ನಿವಾಸಿ ಆಶಿಕಾ ಸರತಿ ಸಾಲಿನಲ್ಲಿ ನಿಂತು ಮತ (Vote) ಚಲಾಯಿಸಿದರು. ಮಡಿಕೇರಿಯ (Madikeri) ಸಂತಜೋಸೆಫರ್ ಶಾಲೆಗೆ ಆಶಿಕಾ 4 ತಿಂಗಳ ಮಗುವಿನೊಂದಿಗೆ ಮತಗಟ್ಟೆಗೆ ಬಂದು ಮತ ಹಾಕಿದ್ದಾರೆ. ಈ ಮೂಲಕ ಮತದಾನ ಮಾಡಲು ನಿರ್ಲಕ್ಷ್ಯ ಮಾಡುವವರಿಗೆ ರೋಲ್ ಮಾಡೆಲ್ ಆಗಿದ್ದಾರೆ. ಇದನ್ನೂ ಓದಿ: ದಾಖಲೆ ಮರೆತು ಬಂದ ಪ್ರಮೋದಾ ದೇವಿ ಒಡೆಯರ್ – ಅರಮನೆಗೆ ತೆರಳಿದ ಬಳಿಕ ವೋಟ್ ಮಾಡಿದ ರಾಜವಂಶಸ್ಥೆ

    ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬವೆಂದೇ ಪರಿಗಣಿಸಲ್ಪಟ್ಟಿರುವ ಕರ್ನಾಟಕ ಚುನಾವಣೆ ಇಂದು ಬೀರುಸಿನಿಂದ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಗೆ ರಾಜ್ಯದ 224 ಮತ ಕ್ಷೇತ್ರಗಳಲ್ಲಿ ಮತದಾನ ಆರಂಭ ಆಗಿದೆ. ಇದನ್ನೂ ಓದಿ: ಮನೆಯಲ್ಲಿ ಅವಕಾಶ ಇದ್ರೂ ಮತಗಟ್ಟೆಗೆ ಬಂದೇ ವೋಟ್ ಮಾಡಿದ 103 ವರ್ಷದ ಅಜ್ಜಿ

  • ರಾಮನಗರದಲ್ಲಿ ಘಟಾನುಘಟಿ ನಾಯಕರಿಂದ ನಾಮಪತ್ರ ಸಲ್ಲಿಕೆ – ಕುಬೇರರ ಆಸ್ತಿ ಎಷ್ಟಿದೆ ಗೊತ್ತಾ?

    ರಾಮನಗರದಲ್ಲಿ ಘಟಾನುಘಟಿ ನಾಯಕರಿಂದ ನಾಮಪತ್ರ ಸಲ್ಲಿಕೆ – ಕುಬೇರರ ಆಸ್ತಿ ಎಷ್ಟಿದೆ ಗೊತ್ತಾ?

    ರಾಮನಗರ: ಜಿಲ್ಲೆಯಲ್ಲಿ ಮಂಗಳವಾರ ನಾಮಪತ್ರ ಸಲ್ಲಿಕೆಯ ಭರಾಟೆ ಹೆಚ್ಚಾಗಿದೆ. ಘಟಾನುಘಟಿ ನಾಯಕರು ಆಯಾ ತಾಲೂಕುಗಳಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

    ಕನಕಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಆರ್.ಅಶೋಕ್ (R Ashoka), ಚನ್ನಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ (CP Yogeshwara), ಮಾಗಡಿಯಲ್ಲಿ ಜೆಡಿಎಸ್ (JDS) ಅಭ್ಯರ್ಥಿಯಾಗಿ ಹಾಲಿ ಶಾಸಕ ಮಂಜುನಾಥ್ (Majunath) ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ಹೆಚ್.ಸಿ ಬಾಲಕೃಷ್ಣ (HC Balakrishna) ನಾಮಪತ್ರ ಸಲ್ಲಿಸಿದ್ರು. ನಾಮಪತ್ರ ಸಲ್ಲಿಕೆ ವೇಳೆ ಎಲ್ಲಾ ನಾಯಕರು ತಮ್ಮ ತಮ್ಮ ಆಸ್ತಿ ವಿವರಗಳನ್ನ ಚುನಾವಣಾ ಆಯೋಗಕ್ಕೆ (Election Commission) ಸಲ್ಲಿಸಿದ್ದಾರೆ. ಇದನ್ನೂ ಓದಿ: 1,214 ಕೋಟಿ ಆಸ್ತಿಯ ಒಡೆಯ ಡಿಕೆ ಶಿವಕುಮಾರ್‌- ಪತ್ನಿ, ಮಕ್ಕಳ ಬಳಿ ಎಷ್ಟು ಆಸ್ತಿಯಿದೆ?

    ಕನಕಪುರ ವಿಧಾನಸಭೆ ಕ್ಷೇತ್ರದಿಂದ ಸ್ಫರ್ಧೆ ಮಾಡ್ತಿರೋ ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ಬಿಎಸ್ಸಿ ಪದವೀಧರರಾಗಿದ್ದಾರೆ. ಅವರ ಒಟ್ಟು ಆಸ್ತಿ ಮೌಲ್ಯ 5.28 ಕೋಟಿ ರೂ., ಪತ್ನಿ ಆಸ್ತಿ ಮೌಲ್ಯ 11.50 ಕೋಟಿ ರೂ. ಹಾಗೂ ಅವಿಭಜಿತ ಕುಟುಂಬದ ಆಸ್ತಿ 70.38 ಕೋಟಿ ರೂ. ಇದೆ. ಅಶೋಕ್ ಅವರ ಒಟ್ಟು ಚರಾಸ್ತಿ 2.18 ಕೋಟಿ ರೂ., ಪತ್ನಿ ಹೆಸರಿನ ಚರಾಸ್ತಿ 1.16 ಕೋಟಿ ರೂ., ಅವಿಭಜಿತ ಕುಟುಂಬದ ಚರಾಸ್ತಿ 8.96ಕೋಟಿ ರೂ. ಇದೆ. ಆರ್. ಅಶೋಕ್ ಸ್ಥಿರಾಸ್ತಿ 3.10 ಕೋಟಿ ರೂ., ಪತ್ನಿ ಹೆಸರಿನ ಸ್ಥಿರಾಸ್ತಿ 10.44 ಕೋಟಿ ರೂ., ಅವಿಭಜಿತ ಕುಟುಂಬದ ಸ್ಥಿರಾಸ್ತಿ 61.42 ಕೋಟಿ ರೂ. ಇದೆ. ಅಶೋಕ್ ಹೆಸರಲ್ಲಿ ಒಟ್ಟು ಸಾಲ, 97.78 ಲಕ್ಷ ಹಾಗೂ ಪತ್ನಿ ಹೆಸರಲ್ಲಿ 64 ಲಕ್ಷ ಸಾಲ ಇದ್ದು, ಅವಿಭಜಿತ ಕುಟುಂಬದ ಸಾಲ 7.95 ಕೋಟಿ ರೂ. ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಅಶೋಕ್ ವಾರ್ಷಿಕ ಆದಾಯ 18.44 ಲಕ್ಷ ರೂ. ಆಗಿದ್ದು ಆದಾಯ ಮೂಲ ಕೃಷಿ ಮತ್ತು ಬಾಡಿಗೆ ಎಂದು ತೋರಿಸಲಾಗಿದೆ. ಅಶೋಕ್ ಹೆಸರಿನಲ್ಲಿ 400 ಗ್ರಾಂ ಚಿನ್ನ ಹಾಗೂ 12 ಕೆಜಿ ಬೆಳ್ಳಿ ಇದೆ. ಪತ್ನಿ ಬಳಿ 617 ಗ್ರಾಂ ಚಿನ್ನ, 11 ಕೆ.ಜಿ ಬೆಳ್ಳಿ, 17.5ಲಕ್ಷ ಮೌಲ್ಯ ಡೈಮಂಡ್ ನೆಕ್ಲಸ್ ಇದೆ. 2 ಇನ್ನೋವಾ ಕಾರುಗಳನ್ನ ಆರ್.ಅಶೋಕ್ ಹೊಂದಿದ್ದಾರೆ. ಅಶೋಕ್ ವಿರುದ್ಧ ಎಸಿಬಿಯಲ್ಲಿ ಒಂದು ಪ್ರಕರಣ ದಾಖಲಾಗಿದ್ದು, ಮತ್ತೊಂದು ಪ್ರಕರಣ ನ್ಯಾಯಾಲಯದ ವಿಚಾರಣೆ ಹಂತದಲ್ಲಿದೆ. ಇದನ್ನೂ ಓದಿ: ಹೆಚ್‍ಡಿಡಿ ಮುಂದೆ ಗಳಗಳನೆ ಅತ್ತ ನಿಖಿಲ್ ಕುಮಾರಸ್ವಾಮಿ

    ಸಿ.ಪಿ.ಯೋಗೇಶ್ವರ್ ಆಸ್ತಿ ವಿವಿರ:
    ಯೋಗೇಶ್ವರ್ ಬಿಎಸ್‌ಸಿ ಪದವೀಧರ.
    ಒಟ್ಟು ಸ್ಥಿರಾಸ್ತಿ/ಚರಾಸ್ತಿ ಮೌಲ್ಯ: 30.68 ಕೋಟಿ
    ಯೋಗೇಶ್ಚರ್ ಒಟ್ಟು ಚರಾಸ್ತಿ‌ ಮೌಲ್ಯ: 5.09 ಕೋಟಿ
    ಪತ್ನಿ ಹೆಸರಲ್ಲಿ ಚರಾಸ್ತಿ ಮೌಲ್ಯ: 2.43 ಕೋಟಿ
    ಯೋಗೇಶ್ವರ್ ಸ್ಥಿರಾಸ್ತಿ ಮೌಲ್ಯ: 25.59 ಕೋಟಿ
    ಪತ್ನಿ ಹೆಸರಿನ ಸ್ಥಿರಾಸ್ತಿ ಮೌಲ್ಯ: 21.40 ಕೋಟಿ
    ಸಿಪಿವೈ ವಾರ್ಷಿಕ ಆದಾಯ: 41 ಲಕ್ಷ
    ಸಿಪಿವೈ ಒಟ್ಟು ಸಾಲ: 13.12 ಕೋಟಿ
    ಪತ್ನಿ ಹೆಸರಿನಲ್ಲಿರುವ ಸಾಲ: 3.20 ಕೋಟಿ
    ಸಿಪಿವೈ ಆದಾಯ ಮೂಲ: ಬಾಡಿಗೆ ಮತ್ತು ವ್ಯವಹಾರ
    ಸಾರ್ವಜನಿಕರು ಮತ್ತು ಇತರರಿಂದ ಪಡೆದಿರುವ 1 ಕೆಜಿ ಚಿನ್ನ, 50 ಕೆಜಿ ಬೆಳ್ಳಿ, 250 ಗ್ರಾಂ ಚಿನ್ನಾಭರಣ ಇದೆ.
    ಪತ್ನಿ ಬಳಿ 1.5ಕೆ.ಜಿ ಚಿನ್ನ ಹಾಗೂ 20 ಕೆಜಿ ಬೆಳ್ಳಿ ಇದೆ.
    ಸಿಪಿವೈ ಸ್ವಂತ ಕಾರು ಇಲ್ಲ ಎಂದು ಹೇಳಿಕೊಂಡಿದ್ದಾರೆ.
    ಯೋಗೇಶ್ವರ್ ವಿರುದ್ಧ 10 ಪ್ರಕರಣಗಳಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.

    ಹೆಚ್‌.ಸಿ ಬಾಲಕೃಷ್ಣ:
    ವಿದ್ಯಾರ್ಹತೆ: ಎಂಬಿಬಿಎಸ್ (ಅಪೂರ್ಣ ಪದವಿ)
    ಒಟ್ಟು ಆಸ್ತಿ ಮೌಲ್ಯ: 10.39 ಕೋಟಿ
    ಬಾಲಕೃಷ್ಣ ಸ್ಥಿರಾಸ್ತಿ: 9.93 ಕೋಟಿ
    ಪತ್ನಿ ಹೆಸರಲ್ಲಿ ಸ್ಥಿರಾಸ್ತಿ: 23.52 ಕೋಟಿ
    ಬಾಲಕೃಷ್ಣ ಒಟ್ಟು ಚರಾಸ್ತಿ: 46.75 ಲಕ್ಷ
    ಪತ್ನಿ ಹೆಸರಿನ ಚರಾಸ್ತಿ: 1.20 ಕೋಟಿ
    ಬಾಲಕೃಷ್ಣ ಒಟ್ಟು ಸಾಲ: 1.23 ಕೋಟಿ
    ಪತ್ನಿ ಹೆಸರಲ್ಲಿನಲ್ಲಿರುವ ಸಾಲ: 11.13 ಕೋಟಿ
    ವಾರ್ಷಿಕ ಆದಾಯ: 7.5 ಲಕ್ಷ
    ಆದಾಯ ಮೂಲ: ವ್ಯವಸಾಯ
    ಬಾಲಕೃಷ್ಣ ಬಳಿ ಸ್ವಂತ ಕಾರು ಇಲ್ಲ, ಪತ್ನಿ ಬಳಿ 3 ಕಾರು ಇದೆ.
    ಬಾಲಕೃಷ್ಣ 475 ಗ್ರಾಂ ಚಿನ್ನ ಹಾಗೂ 1.5 ಕೆಜಿ ಬೆಳ್ಳಿ‌, 70 ಎಕರೆಗೂ ಹೆಚ್ಚು ಕೃಷಿ ಭೂಮಿ ಹೊಂದಿದ್ದಾರೆ.
    ಪತ್ನಿ ಬಳಿ 1.113 ಕೆಜಿ ಚಿನ್ನ, 4 ಕೆಜಿ ಬೆಳ್ಳಿ ಇದೆ.
    ಇನ್ನೂ ಬಾಲಕೃಷ್ಣ ವಿರುದ್ಧ ಕುದೂರು, ರಾಮನಗರ ಗ್ರಾಮಾಂತರ ಠಾಣೆಗಳಲ್ಲಿ ಎರಡು ಪ್ರಕರಣ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಸಂಬಂಧದ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ‌.

    ಎ.ಮಂಜುನಾಥ್ ಆಸ್ತಿ ವಿವರ:
    ಎ.ಮಂಜುನಾಥ್ ಬಿಬಿಎಂ ಪದವೀಧರ.
    ಒಟ್ಟು ಆಸ್ತಿ ಮೌಲ್ಯ: 10.65 ಕೋಟಿ
    ಮಂಜುನಾಥ್ ಚರಾಸ್ತಿ ಮೌಲ್ಯ: 1.02 ಕೋಟಿ.
    ಪತ್ನಿ ಹೆಸರಿನ ಚರಾಸ್ತಿ: 55 ಲಕ್ಷ
    ಮಂಜುನಾಥ್ ಸ್ಥಿರಾಸ್ತಿ: 9.45 ಕೋಟಿ
    ಪತ್ನಿ ಹೆಸರಿನಲ್ಲಿರುವ ಸ್ಥಿರಾಸ್ಥಿ: 10.88 ಕೋಟಿ
    ಮಂಜುನಾಥ್‌ ಹೆಸರಲ್ಲಿರುವ ಸಾಲ: 1.18 ಕೋಟಿ
    ಪತ್ನಿ ಹೆಸರಲ್ಲಿರುವ ಸಾಲ: 4.15 ಕೋಟಿ
    ವಾರ್ಷಿಕ ಆದಾಯ: 13.26 ಲಕ್ಷ
    ಪತ್ನಿ ಹೆಸರಲ್ಲಿ 3 ವೈನ್ ಸ್ಟೋರ್ ಇದೆ
    ಮಂಜುನಾಥ್‌ ಬಳಿ 250 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ ಹೊಂದಿದ್ದಾರೆ.
    ಪತ್ನಿ ಬಳಿ 400 ಗ್ರಾಂ ಚಿನ್ನ, 1.5 ಕೆಜಿ ಬೆಳ್ಳಿ ಇದೆ.
    ಮಂಜುನಾಥ್ ಹೆಸರಲ್ಲಿ 5 ಕಾರು, ಪತ್ನಿ ಹೆಸರಲ್ಲಿ 2 ಕಾರು ಇದೆ.
    ಅಲ್ಲದೇ ಮಂಜುನಾಥ್ ವಿರುದ್ಧ ಮಾಗಡಿ ಮತ್ತು ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ನಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ.

  • ಪ್ರಚಾರದ ನೆಪದಲ್ಲಿ ಮಹಿಳೆಯರನ್ನ ಮಂಚಕ್ಕೆ ಕರೆದ ಆರೋಪ – JDS ಅಭ್ಯರ್ಥಿ ವಿರುದ್ಧ ಕ್ರಮಕ್ಕೆ ಆಗ್ರಹ

    ಪ್ರಚಾರದ ನೆಪದಲ್ಲಿ ಮಹಿಳೆಯರನ್ನ ಮಂಚಕ್ಕೆ ಕರೆದ ಆರೋಪ – JDS ಅಭ್ಯರ್ಥಿ ವಿರುದ್ಧ ಕ್ರಮಕ್ಕೆ ಆಗ್ರಹ

    ತುಮಕೂರು: ಚುನಾವಣಾ ಪ್ರಚಾರಕ್ಕೆ ಮಹಿಳೆಯರನ್ನು ಕರೆಸುವ ನೆಪದಲ್ಲಿ ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ತುಮಕೂರಿನ (Tumakuru) ನಗರ ವೃತ್ತದಲ್ಲಿ 5 ಸಾವಿರಕ್ಕೂ ಹೆಚ್ಚು ಮಹಿಳೆಯರು ಪ್ರತಿಭಟನೆ (Protest) ನಡೆಸಿದ್ದಾರೆ.

    ಜೆಡಿಎಸ್‌ (JDS) ಅಭ್ಯರ್ಥಿ ಗೋವಿಂದರಾಜು ವಿರುದ್ಧ ಸಾವಿರಾರು ಮಹಿಳೆಯರು ಕ್ರಮಕ್ಕೆ ಆಗ್ರಹಿಸಿದ್ದಾರೆ. ಗೋವಿಂದರಾಜು ಅವರನ್ನ ಜೆಡಿಎಸ್ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದು ಅವರಿಗೆ ʻಬಿʼ ಫಾರಂ ಕೊಡದೇ ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

    ಇಂತಹ ವ್ಯಕ್ತಿತ್ವ ಉಳ್ಳವರು ಶಾಸಕರಾದರೆ ಕ್ಷೇತ್ರದ ಮಹಿಳೆಯರು ಹಗಲು ಹೊತ್ತಿನಲ್ಲಿ ಭಯದಿಂದ ಓಡಾಡುವ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿ ಚಿಂಚನಸೂರ್ ಆರೋಗ್ಯ ವಿಚಾರಿಸಿದ ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು

    ಮಹಿಳೆಯೊಬ್ಬರನ್ನ ಪ್ರಚಾರಕ್ಕೆ ಕರೆಯುವ ನೆಪದಲ್ಲಿ ಗೋವಿಂದರಾಜು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದಾರೆ. ಅಲ್ಲದೇ ಇವರ 8 ಪೋಲಿ ಆಡಿಯೋಗಳು ಬಿಡುಗಡೆಯಾಗಿದ್ದು, ಜನಪ್ರತಿನಿಧಿಯಾಗಲು ಹೊರಟವರ ಬಣ್ಣ ಬಯಲಾಗಿದೆ. ಈ ಕೂಡಲೇ ಗೋವಿಂದರಾಜು ಅವರನ್ನ ಪಕ್ಷದಿಂದ ಉಚ್ಛಾಟಿಸಬೇಕು ಎಂದು ಮಹಿಳೆಯರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಹೋಗುವವರು ಹೋಗಲಿ ಪಕ್ಷ ಸ್ವಚ್ಛವಾಗುತ್ತದೆ: ಶೆಟ್ಟರ್ ವಿರುದ್ಧ ಜಾರಕಿಹೊಳಿ ಕಿಡಿ 

  • ಬಿಜೆಪಿ ನನ್ನ ಪತ್ನಿಗೆ ಯಾವುದೇ ಆಫರ್ ನೀಡಿಲ್ಲ, ಆಡಿಯೋ ಟೇಪ್ ಫೇಕ್: ಕೈ ಶಾಸಕ ಶಿವರಾಮ್ ಹೆಬ್ಬಾರ್

    ಬಿಜೆಪಿ ನನ್ನ ಪತ್ನಿಗೆ ಯಾವುದೇ ಆಫರ್ ನೀಡಿಲ್ಲ, ಆಡಿಯೋ ಟೇಪ್ ಫೇಕ್: ಕೈ ಶಾಸಕ ಶಿವರಾಮ್ ಹೆಬ್ಬಾರ್

    ಬೆಂಗಳೂರು: ಶನಿವಾರ ವಿಧಾನ ಸಭೆಯಲ್ಲಿ ಶಾಸಕರ ಪ್ರಮಾಣ ವಚನ ಸ್ವೀಕಾರ ಒಂದು ಕಡೆ ನಡೆದಿದ್ರೆ, ಇತ್ತ ಕಾಂಗ್ರೆಸ್ ತಮ್ಮ ಶಾಸಕರಿಗೆ ಬಿಜೆಪಿ ನಾಯಕರು ಕರೆ ಮಾಡಿ ಆಫರ್ ನೀಡಿರುವ ಆಡಿಯೋ ಟೇಪ್ ಗಂಟೆಗೆ ಒಂದರಂತೆ ಬಿಡುಗಡೆಯಾಗುತಿತ್ತು. ಈ ಆಡಿಯೋಗಳ ಪೈಕಿ ನನ್ನ ಪತ್ನಿಗೆ ಕರೆ ಮಾಡಿ ಆಫರ್ ನೀಡಿದ್ದಾರೆ ಎನ್ನಲಾದ ಟೇಪ್ ನಕಲಿ ಎಂದು ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.

    ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರ ಆಪ್ತ ಎಂಎಲ್‍ಸಿ ಪುಟ್ಟಸ್ವಾಮಿ ಹಾಗೂ ಪುತ್ರ ವಿಜಯೇಂದ್ರ ಇಬ್ಬರೂ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ಅವರಿಗೆ ಆಫರ್ ನೀಡಿದೆ ಎನ್ನಲಾದ ಆಡಿಯೋವನ್ನು ಕಾಂಗ್ರೆಸ್ ಬಿಡುಗಡೆ ಮಾಡಿತ್ತು.

    ಈ ಆಡಿಯೋಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಶಿವರಾಮ್ ಹೆಬ್ಬಾರ್, ಆ ಆಡಿಯೋದಲ್ಲಿರುವುದು ನನ್ನ ಪತ್ನಿಯ ಧ್ವನಿ ಅಲ್ಲ. ಈ ಆಡಿಯೋ ಟೇಪ್ ಫೇಕ್ ಎಂದು ಫೇಸ್ ಬುಕ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕೈ ಶಾಸಕನ ಪತ್ನಿಗೆ ಕರೆ: ಪುಟ್ಟಸ್ವಾಮಿಯಿಂದ 15 ಕೋಟಿ ಆಫರ್ – ಆಡಿಯೋ

    ಫೇಸ್‍ಬುಕ್ ಪೋಸ್ಟ್ ನಲ್ಲಿ ಏನಿದೆ?
    ಮಾನ್ಯರೇ,
    ಇವತ್ತು ನ್ಯೂಸ್ ಚಾನಲ್ ಗಳಲ್ಲಿ ನನ್ನ ಪತ್ನಿಯೊಂದಿಗೆ ಬಿಜೆಪಿಯವರು ನಡೆಸಿದ್ದಾರೆ ಎನ್ನುವ ಟೇಪ್ ಬಿಡುಗಡೆ ವಿಷಯ, ಸದನದಲ್ಲಿದ್ದ ನನಗೆ ತಡವಾಗಿ ಮಾಹಿತಿ ಬಂತು. ಇದು ನನ್ನ ಹೆಂಡತಿಯ ಧ್ವನಿಯೂ ಅಲ್ಲ ಮತ್ತು ನನ್ನ ಹೆಂಡತಿಗೆ ಯಾರ ಫೋನ್ ಕರೆ ಬಂದೂ ಇಲ್ಲ. ರಾಜಕೀಯ ಕಾರಣಕ್ಕಾಗಿ ಈ ರೀತಿ ಸುಳ್ಳು ಟೇಪ್ ಗಳನ್ನು ಯಾರೇ ಬಿಡುಗಡೆ ಮಾಡಿದರೂ ಅದಕ್ಕೆ ನನ್ನ ದಿಕ್ಕಾರ.

    ಈ ಆಡಿಯೋ ಟೇಪ್ ಫೇಕ್…. ಇದನ್ನು ಖಂಡಿಸುತ್ತೇನೆ. ನನ್ನ ಕ್ಷೇತ್ರದ ಜನರು ಮತ್ತೊಮ್ಮೆ ಸೇವೆ ಮಾಡಲು ನನಗೆ ಅವಕಾಶ ಕೊಟ್ಟಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು. ನನ್ನ ಜನಪರ ಕೆಲಸಗಳು ಮುಂದುವರಿಯಲಿದೆ.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿರುವ ಶಾಸಕರು, ಸದ್ಯ ನಾನು ಬೆಂಗಳೂರಿನಲ್ಲಿದ್ದೇನೆ. ನನ್ನ ಅಧಿಕೃತ ಫೇಸ್‍ಬುಕ್ ಪೇಜ್‍ನ್ನು ಪುತ್ರ ನಿರ್ವಹಣೆ ಮಾಡ್ತಾನೆ. ನನ್ನ ಪೇಜ್‍ನಲ್ಲಿ ಬರೆದುಕೊಂಡಿರುವ ಮಾಹಿತಿಗಳೆಲ್ಲವೂ ಸತ್ಯ ಅಂತಾ ತಿಳಿಸಿದ್ದಾರೆ.

    ಹಿರೇಕೆರೂರು ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ಅವರಿಗೆ ಯಡಿಯೂರಪ್ಪ, ಶ್ರೀರಾಮುಲು ಮತ್ತು ಮುರಳೀಧರ್ ರಾವ್ ಆಫರ್ ನೀಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್‍ಗಳನ್ನು ಕಾಂಗ್ರೆಸ್ ಬಿಡುಗಡೆ ಮಾಡಿತ್ತು. ಕಾಂಗ್ರೆಸ್ ಆಡಿಯೋ ಕ್ಲಿಪ್‍ಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರು ಅದು ನಮ್ಮ ಧ್ವನಿಯೇ ಅಲ್ಲ. ತಂತ್ರಜ್ಞಾನ ಮತ್ತು ಮಿಮಿಕ್ರಿ ಕಲಾವಿದರಿಂದ ಮಾಡಿಸಿರುವ ಸಾಧ್ಯತೆಗಳಿವೆ ಅಂತಾ ಎಲ್ಲ ಆರೋಪಗಳನ್ನು ನಿರಾಕರಣೆ ಮಾಡಿದ್ದಾರೆ.

    https://twitter.com/ShobhaBJP/status/997776225207648256

  • ಕಾಂಗ್ರೆಸ್-ಜೆಡಿಎಸ್ ಅಧಿಕಾರಕ್ಕಾಗಿ ಒಂದಾಗಿಲ್ಲ: ಮಲ್ಲಿಕಾರ್ಜುನ್ ಖರ್ಗೆ

    ಕಾಂಗ್ರೆಸ್-ಜೆಡಿಎಸ್ ಅಧಿಕಾರಕ್ಕಾಗಿ ಒಂದಾಗಿಲ್ಲ: ಮಲ್ಲಿಕಾರ್ಜುನ್ ಖರ್ಗೆ

    ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ಮುಂದಾಗಿವೆ. ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ವಿಶೇಷ ಸಂದರ್ಶನ ನೀಡಿದ್ದು, ಅಧಿಕಾರಕ್ಕಾಗಿ ನಾವು ಒಂದಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಧಿಕಾರಕ್ಕಾಗಿ ಒಂದಾಗಿದೆ ಎಂಬುವುದು ನಮ್ಮ ವಿರೋಧಿಗಳ ಮಾತು. ಆದ್ರೆ ತತ್ವ ಸಿದ್ದಾತಗಳ ಅಡಿಯಲ್ಲಿ ಒಂದಾಗಿದ್ದೇವೆ. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಬೇಕು. ಸಂವಿಧಾನ ಬಾಹಿರ ಮತ್ತು ಅಕ್ರಮವಾಗಿ ಸರ್ಕಾರ ರಚನೆಗೆ ಮುಂದಾಗಿದ್ದ ಬಿಜೆಪಿ ವಿರುದ್ಧ ಹೋರಾಟ ಮಾಡುವ ಸಲುವಾಗಿ ಎರಡೂ ಪಕ್ಷಗಳು ಒಂದಾಗಿವೆ ಅಂತಾ ತಿಳಿಸಿದ್ರು.

    ಈ ಹಿಂದೆ 5 ವರ್ಷಗಳಲ್ಲಿ ಕಾಂಗ್ರೆಸ್ ಹಲವು ಜನಪರ ಯೋಜನೆಗಳನ್ನು ತಂದಿದೆ. ನಮ್ಮ ಎಲ್ಲ ಕಾರ್ಯಕ್ರಮಗಳು ಸಹ ರಾಜ್ಯದ ಜನರಿಗೂ ತಲುಪಿವೆ. ಆದ್ರೂ ಚುನಾವಣೆಯಲ್ಲಿ ಅನಿರೀಕ್ಷಿತವಾದ ಫಲಿತಾಂಶ ಹೊರಬಂದಿದ್ದು, ನಾವು ಎಲ್ಲಿ ಎಡವಿದ್ದು, ನಮ್ಮ ನ್ಯೂನತೆಗಳು ಏನು ಎಂಬುದರ ಬಗ್ಗೆ ಗ್ರೌಂಡ್ ಲೆವಲ್‍ನಿಂದ ಮಾಹಿತಿ ಪಡೆದುಕೊಂಡು ಕಾಂಗ್ರೆಸ್ ನಾಯಕರ ಜೊತೆ ಚರ್ಚೆ ನಡೆಸಲಿದ್ದೇವೆ. ಇಂತಹ ಕಾರಣಗಳಿಗೆ ನಮಗೆ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲು ಆಗಿಲ್ಲ ಎಂಬುದನ್ನು ಈ ಸಮಯದಲ್ಲಿ ಹೇಳಲು ಸಾಧ್ಯವಿಲ್ಲ ಅಂತಾ ಸ್ಪಷ್ಟಪಡಿಸಿದ್ರು.

    ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಎಲ್ಲಿಯೂ ಹಿನ್ನಡೆಯಾಗಿಲ್ಲ. ಶೇಕಡಾವಾರು ಮತಗಳನ್ನು ನೋಡಿದ್ರೆ ಹೆಚ್ಚಿನ ಮತಗಳು ಕಾಂಗ್ರೆಸ್‍ಗೆ ಲಭಿಸಿದ್ದು, ಜಾತ್ಯಾತೀತ ಪಕ್ಷಗಳು ಸಹ ನಮ್ಮೊಂದಿಗಿವೆ. ಬಿಜೆಪಿ ಅಧಿಕಾರದ ದುರಾಸೆಯಿಂದಾಗಿ ಯಡಿಯೂರಪ್ಪ ಅವರಿಗೆ ಪ್ರಮಾಣ ವಚನ ನೀಡುವಂತೆ ಮಾಡಿತು. ಆದ್ರೂ ವಿಶ್ವಾಸಮತ ಯಾಚನೆಗೂ ಮುನ್ನವೇ ಬಿಜೆಪಿ ಸೋಲೊಪ್ಪಿಕೊಂಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಕಾಂಗ್ರೆಸ್‍ಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯವಿದೆ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ರು.

  • ಕೈ ಶಾಸಕ ಪ್ರತಾಪ್ ಗೌಡ ಪಾಟೀಲ್ ಮನೆಗೆ ಕಾರ್ಯಕರ್ತರ ಮುತ್ತಿಗೆ- ಜಿಲ್ಲಾ ಕಾಂಗ್ರೆಸ್ ಎಚ್ಚರಿಕೆ

    ಕೈ ಶಾಸಕ ಪ್ರತಾಪ್ ಗೌಡ ಪಾಟೀಲ್ ಮನೆಗೆ ಕಾರ್ಯಕರ್ತರ ಮುತ್ತಿಗೆ- ಜಿಲ್ಲಾ ಕಾಂಗ್ರೆಸ್ ಎಚ್ಚರಿಕೆ

    ರಾಯಚೂರು: ಜಿಲ್ಲೆಯ ಮಸ್ಕಿ ಕಾಂಗ್ರೆಸ್ ಶಾಸಕ ಪ್ರತಾಪ್ ಗೌಡ ಪಾಟೀಲ್ ಇಂದು ಸಂಜೆಯೊಳಗೆ ಸಂಪರ್ಕಕ್ಕೆ ಬಾರದಿದ್ದರೆ ನಾಳೆ ಅವರ ಮನೆಗೆ ಮುತ್ತಿಗೆ ಹಾಕುವುದಾಗಿ ರಾಯಚೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಮಣ್ಣ ಇರಬಗೇರಾ ಎಚ್ಚರಿಕೆ ನೀಡಿದ್ದಾರೆ.

    ರಾಯಚೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ರಾಮಣ್ಣ ಪ್ರತಾಪ್ ಗೌಡ ಕಾಂಗ್ರೆಸ್ ಮುಖಂಡರೊಂದಿಗೆ ಸಂಪರ್ಕ ಕಡಿತಗೊಳಿಸಿಕೊಂಡಿದ್ದಾರೆ. ನಿನ್ನೆ ಸಂಜೆ 4 ಗಂಟೆಯಿಂದ ನಾಪತ್ತೆಯಾಗಿರುವ ಪ್ರತಾಪ್ ಗೌಡ ಅವರು ಕೂಡಲೇ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರನ್ನು ಸಂಪರ್ಕಿಸಬೇಕು. ಸಂಪರ್ಕಕ್ಕೆ ಬಾರದಿದ್ದರೆ ಮಸ್ಕಿಯಲ್ಲಿನ ಪ್ರತಾಪ್ ಗೌಡ ಪಾಟೀಲ್ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಹೇಳಿದ್ದಾರೆ.

     

    ಕಾಂಗ್ರೆಸ್, ಜೆಡಿಎಸ್ ಮೈತ್ರಿ ಬಳಿಕ ಕಾಂಗ್ರೆಸ್‍ನಿಂದ ಆಯ್ಕೆ ಆಗಿದ್ದ ಪ್ರತಾಪ್ ಗೌಡ ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಪಕ್ಷದ ನಾಯಕರು ಸತತವಾಗಿ ಪಾಟೀಲ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರತಾಪ್ ಗೌಡ ಪಾಟೀಲ್ ಅವರ ಈ ನಡೆಯಿಂದ ಕಾಂಗ್ರೆಸ್ ನಾಯಕರು ತೀವ್ರ ಸಂಕಟ ಎದುರಿಸುತ್ತಿದ್ದಾರೆ. ಅಲ್ಲದೇ ಬಿಜೆಪಿಯ ಆಪರೇಷನ್ ಕಮಲಕ್ಕೆ ಒಳಗಾಗಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ.

    ಬಿಜೆಪಿ ನಾಯಕ ಶ್ರೀ ರಾಮುಲು ಹಾಗೂ ಎಂಎಲ್‍ಸಿ ಮನೋಹರ್ ಮಸ್ಕಿ ಅವರ ಪ್ರಭಾವದಿಂದ ದೆಹಲಿಯ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದೆ.

  • ಪ್ರಧಾನಿ ವಿರುದ್ಧ ಮಾತನಾಡಲು ಆರಂಭಿಸಿದ್ದ ದಿನದಿಂದ ಬಾಲಿವುಡ್ ಆಫರ್ ಗಳೇ ಬಂದಿಲ್ಲ: ಪ್ರಕಾಶ್ ರೈ

    ಪ್ರಧಾನಿ ವಿರುದ್ಧ ಮಾತನಾಡಲು ಆರಂಭಿಸಿದ್ದ ದಿನದಿಂದ ಬಾಲಿವುಡ್ ಆಫರ್ ಗಳೇ ಬಂದಿಲ್ಲ: ಪ್ರಕಾಶ್ ರೈ

    ನವದೆಹಲಿ: ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಮಾತನಾಡಲು ಆರಂಭಿಸಿದ ಬಳಿಕ ತನಗೆ ಬಾಲಿವುಡ್ ನಲ್ಲಿ ಯಾವುದೇ ಸಿನಿಮಾ ಆಫರ್ ಬಂದಿಲ್ಲ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ.

    ಖಾಸಗಿ ಮಾಧ್ಯಮವೊಂದರ ಸಂದರ್ಶನದ ವೇಳೆಯಲ್ಲಿ ಈ ಕುರಿತು ಮಾತನಾಡಿದ ರೈ, ಕಳೆದ ಆಕ್ಟೋಬರ್ ತಿಂಗಳಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಸಂಭ್ರಮಿಸುತ್ತಿದ್ದ ಬಿಜೆಪಿ ಕಾರ್ಯಯರ್ತರ ವಿರುದ್ಧ ಪ್ರಧಾನಿ ಮೋದಿ ಅವರ ಮೌನವನ್ನು ಪ್ರಶ್ನಿಸಿದ್ದೆ. ಬಳಿಕ ಹಿಂದಿ ಚಿತ್ರೋದ್ಯಮ ತನ್ನನ್ನು ಸೈಡ್ ಲೈನ್ ಮಾಡಿದೆ ಎಂದು ಹೇಳಿದರು.

    ಸದ್ಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪರೋಕ್ಷವಾಗಿ ಪ್ರಚಾರ ನಡೆಸುತ್ತಿರುವ ಪ್ರಕಾಶ್ ರೈ, ತನಗೆ ದಕ್ಷಿಣ ಚಿತ್ರ ರಂಗದಿಂದ ಯಾವುದೇ ಸಮಸ್ಯೆ ಉಂಟಾಗಿಲ್ಲ. ಆದರೆ ಬಾಲಿವುಡ್ ಈ ನಡೆಯಿಂದ ತನಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ. ಏಕೆಂದರೆ ತನ್ನ ಬಳಿ ಸಾಕಷ್ಟು ಹಣ ಇದೆ ಎಂದು ತಿಳಿಸಿದ್ದಾರೆ.

    ಗೌರಿ ಲಂಕೇಶ್ ಅವರ ಹತ್ಯೆ ತನಗೆ ತುಂಬಾ ಗೊಂದಲ ಉಂಟು ಮಾಡಿತು. ಆಕೆ ಪ್ರಶ್ನೆಗಳನ್ನು ಕೇಳುತ್ತಿದ್ದಳು. ಆದರೆ ಆಕೆಯ ಹತ್ಯೆ ಬಳಿಕ ನಿಶಬ್ಧ ಮೂಡಿತ್ತು. ಬಳಿಕ ತಾನು ಪ್ರಶ್ನೆ ಮಾಡಲು ಆರಂಭಸಿದೆ. ತಾನು ಮಾಡುವ ಕಾರ್ಯವನ್ನು ಬಿಜೆಪಿ ತಡೆಯಲು ಮುಂದಾಗಿದೆ ಎಂದು ಆರೋಪಿಸಿದರು.

    ಇದೇ ವೇಳೆ ಅಮಿತ್ ಶಾ ಅವರ ವಿರುದ್ಧ ವಾಗ್ದಾಳಿ ಮಾಡಿರುವ ಪ್ರಕಾಶ್ ರೈ, ದೇಶಕ್ಕೆ ಅಮಿತ್ ಶಾ ಅವರ ಕೊಡುಗೆ ಏನು? ನಾಯಕರಾಗಿ ಅವರ ಸಾಧನೆ ಏನು? ದೇಶದ ಅಭಿವೃದ್ಧಿ ಬಗ್ಗೆ ಅವರು ಯಾವ ಯೋಜನೆಗಳನ್ನು ರೂಪಿಸಿದ್ದಾರೆ. ಯಾವ ಆಧಾರದ ಮೇಲೆ ಅವರನ್ನು ಚಾಣಕ್ಯ ಎಂದು ಕರೆಯಲಾಗುತ್ತದೆ ಅಂತಾ ಪ್ರಶ್ನಿಸಿದರು.

  • ಮೋದಿ ಅಲೆ ಮೂಲಕ ಕ್ಷೇತ್ರದಲ್ಲಿ ನೂರಕ್ಕೆ ನೂರು ಗೆಲ್ಲೋದು ಕಷ್ಟ: ಬಿಜೆಪಿ ಅಭ್ಯರ್ಥಿಯ ಪತಿ

    ಮೋದಿ ಅಲೆ ಮೂಲಕ ಕ್ಷೇತ್ರದಲ್ಲಿ ನೂರಕ್ಕೆ ನೂರು ಗೆಲ್ಲೋದು ಕಷ್ಟ: ಬಿಜೆಪಿ ಅಭ್ಯರ್ಥಿಯ ಪತಿ

    ಚಿಕ್ಕೋಡಿ: ತಮ್ಮ ಕ್ಷೇತ್ರದಲ್ಲಿ ಬಿಜೆಪಿ ತನ್ನ ಸ್ವಶಕ್ತಿಯಿಂದ ಗೆಲ್ಲುತ್ತೆ, ಆದರೆ ಮೋದಿ ಅಲೆ ಕರ್ನಾಟಕದಲ್ಲಿ ವಕೌಟ್ ಆಗುವುದು ಡೌಟ್ ಎಂದು ಚಿಕ್ಕೋಡಿ ಬಿಜೆಪಿ ಮುಖಂಡ, ಶಶಿಕಲಾ ಜೊಲ್ಲೆ ಅವರ ಪತಿ ಅಣ್ಣಾಸಾಹೇಬ ಜೊಲ್ಲೆ ಹೇಳಿದ್ದಾರೆ.

    ಜಿಲ್ಲೆಯ ಯಕ್ಸಂಬಾ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೋದಿ ಅಲೆಯಲ್ಲಿ ನೂರಕ್ಕೆ ನೂರು ಗೆಲ್ಲೋದು ಕಷ್ಟ. ಆದರೆ ಮೋದಿ ಅವರ ಅಲೆ ಕಳೆದ ಬಾರಿಗಿಂತ ಹೆಚ್ಚಾಗಿದೆ. ಮೊದಲು ಪಕ್ಷ ಆ ಬಳಿಕ ನಮ್ಮ ಕಾರ್ಯ ಬರುತ್ತೆ. ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ, ಬೀರೇಶ್ವರ ಬ್ಯಾಂಕಿನ ಕೆಲಸ ಇಟ್ಟುಕೊಂಡು ಮತಯಾಚನೆ ಮಾಡುತ್ತೇವೆ. ತಮ್ಮ ಪತ್ನಿ ಶಶಿಕಲಾ ಪಕ್ಕದ ನಿಪ್ಪಾಣಿ ಕ್ಷೇತ್ರದಲ್ಲಿ ಮಾಡಿದ ಸಾಧನೆ ತನಗೆ ಶ್ರೀರಕ್ಷೆ ಎಂದು ಹೇಳಿದ್ದಾರೆ.

    ಅಣ್ಣಾ ಸಾಹೇಬ ಜೊಲ್ಲೆ ಚಿಕ್ಕೋಡಿ-ಸದಲಗಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು ಪಕ್ಷದ ನಾಯಕರು ಈಗಾಗಲೇ ಟಿಕೆಟ್ ಖಚಿತ ಪಡಿಸಿದ್ದು ಹೀಗಾಗೀ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರವವನ್ನು ಕೈಗೊಂಡಿದ್ದೇವೆ. ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ ಹಾಗೂ ತಮ್ಮ ನಡುವೆ 20 ವರ್ಷದ ಪೈಪೋಟಿ ನಡೆದಿದೆ. ಹಾಗಾಗಿ ಕ್ಷೇತ್ರದಲ್ಲಿ ಹೊಂದಾಣಿಕೆ ಎಂಬುವುದು ಕೇವಲ ಕಟ್ಟು ಕಥೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಬಿಜೆಪಿ 72 ಮಂದಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಈ ಪಟ್ಟಿಯಲ್ಲಿ ಅಣ್ಣಾಸಾಹೇಬ ಜೊಲ್ಲೆ ಅವರ ಪತ್ನಿ ಶಶಿಕಲಾ ಜೊಲ್ಲೆ ಅವರಿಗೆ ನಿಪ್ಪಾಣಿ ಕ್ಷೇತ್ರದ ಟಿಕೆಟ್ ಸಿಕ್ಕಿದೆ.