Tag: Karnataka Assembly Election 2023

  • ಕುಮಾರಣ್ಣ ವಿಸರ್ಜನೆ ಮಾಡ್ತೇನೆ ಎಂದು ಹೇಳ್ತಾ ಇದ್ದಾರೆ – ಈಗಲೇ ಬಂದು ಕಾಂಗ್ರೆಸ್ ಸೇರಿಕೊಳ್ಳಿ ಎಂದು ಕರೆಯುತ್ತಿದ್ದೇನೆ: ಡಿಕೆಶಿ

    ಕುಮಾರಣ್ಣ ವಿಸರ್ಜನೆ ಮಾಡ್ತೇನೆ ಎಂದು ಹೇಳ್ತಾ ಇದ್ದಾರೆ – ಈಗಲೇ ಬಂದು ಕಾಂಗ್ರೆಸ್ ಸೇರಿಕೊಳ್ಳಿ ಎಂದು ಕರೆಯುತ್ತಿದ್ದೇನೆ: ಡಿಕೆಶಿ

    ಬೆಂಗಳೂರು: ಈ ಬಾರಿ ಸೋತರೆ ಜೆಡಿಎಸ್ (JDS) ವಿಸರ್ಜನೆ ಮಾಡುತ್ತೇನೆ ಎಂದು ಕುಮಾರಣ್ಣ ಹೇಳ್ತಾ ಇದ್ದಾರೆ ಅದಕ್ಕೆ ಈಗಲೇ ಬಂದು ಜೆಡಿಎಸ್‍ನವರೆಲ್ಲಾ ಕಾಂಗ್ರೆಸ್ (Congress) ಸೇರಿಕೊಳ್ಳಿ ಎಂದು ಹೇಳ್ತಾ ಇದ್ದೇನೆ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ.

    ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಬಗ್ಗೆ ಸಾಫ್ಟ್ ಕಾರ್ನರ್ ಏನಿಲ್ಲಾ. ಹೇ ಹಾಗಂತ ನಾನೇನು ಕುಸ್ತಿ ಆಡ್ಲಾ…? ನಾನು ನೀತಿ ಮೇಲೆ ಹೋಗ್ತೇನೆ, ಯಾರ ಮೇಲೂ ವೈಯಕ್ತಿಕ ವಿಚಾರ ಇಲ್ಲ. ಜೆಡಿಎಸ್‍ನವರು ನಮ್ಮ ಪಾರ್ಟಿಗೆ ಸೇರುತ್ತಿದ್ದಾರೆ. ಮಂಡ್ಯ, ಕನಕಪುರದಲ್ಲಿ ಸೇರುತ್ತಿದ್ದಾರೆ. ಜೆಡಿಎಸ್‍ನವರಿಗೆ ನಾವು ಹೇಳ್ತಾ ಇದ್ದೇವೆ ನೋಡ್ರಪ್ಪ ಕುಮಾರಣ್ಣ ವಿಸರ್ಜನೆ ಮಾಡ್ತೇನೆ ಎಂದು ಹೇಳ್ತಾ ಇದ್ದಾರೆ. ಈಗಲೇ ಬಂದು ಕಾಂಗ್ರೆಸ್ ಸೇರಿಕೊಳ್ಳಿ ಎಂದು ಹೇಳ್ತಾ ಇದ್ದೇನೆಂದು ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ (H.D Kumaraswamy) ಅವರನ್ನು ಕುಟುಕಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಅಶೋಕ್ ಗೋಬ್ಯಾಕ್ ಭುಗಿಲು- ವರಿಷ್ಠರಿಗೆ ವರದಿ ರವಾನೆ

    ನನಗೆ ವಿಸರ್ಜನೆ ಪದ ಗೊತ್ತಿಲ್ಲ, ಅವರು ಹೇಳಿದ್ರು ಒಂದು ಪೊಲಿಟಿಕಲ್ ಪಾರ್ಟಿದು. ನನಗೆ ಅಧಿಕಾರಿ ಸಿಗಲಿಲ್ಲ ಅಂದ್ರೆ ವಿಸರ್ಜನೆ ಮಾಡ್ತೇನೆ ಎಂದು ಅವರು ಹೇಳಿದ್ರು. ವಿಸರ್ಜನೆ ಮಾಡುವ ಕಾಲ ಅವರಿಗೆ. ನನಗೂ ಈಡಿ ರಾಜ್ಯ ಗೊತ್ತಿದೆ, ನಾನೇನು ಅವರು ಗೆಲ್ಲಲ್ಲ ಎಂದು ಹೇಳಲ್ಲ. ಒಂದು ಪೊಲಿಟಿಕಲ್ ಪಾರ್ಟಿ ಸರಿ ಇಲ್ಲ ಎಂದು ಹೇಳಲ್ಲ. ಅವರದ್ದೆ ಆದ ಸಿದ್ಧಾಂತ ಇದೆ. ಅವರೇ ವಿಸರ್ಜನೆ ಮಾಡ್ತೇನೆ ಎಂದಾಗ, ಕಾರ್ಯಕರ್ತರು ಕಷ್ಟ ಪಟ್ಟು ಪಾರ್ಟಿ ಉಳಿಸಿಕೊಂಡಿರುತ್ತಾರೆ. ಯಾಕೆ ಹಾಳು ಮಾಡಬೇಕು ಬನ್ನಿ ನಾನು ಇದ್ದೀನಿ ಎಂದು ಕರೆದಿದ್ದೇನೆ ಅಷ್ಟೇ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜೆಡಿಎಸ್ ವಿರುದ್ಧ ಮಾತಾಡಿದ್ರೆ ಸುಮಲತಾ ಲೀಡರ್ ಆಗಬಹುದು ಅಂದುಕೊಂಡಿದ್ದಾರೆ: ಪುಟ್ಟರಾಜು

     

    ಸರ್ಕಾರದ ವಿರುದ್ಧ ನಾವೇನು ಅಸ್ತ್ರ ಹೂಡುವ ಅವಶ್ಯಕತೆ ಇಲ್ಲ. ಜನ ಈ ಸರ್ಕಾರ ತೆಗೆಯಬೇಕೆಂದು ತೀರ್ಮಾನ ಮಾಡಿದ್ದಾರೆ. ದಿನ ಜಾಹೀರಾತು ನೀಡ್ತಿದಾರೆ. ಕಳೆದ ಬಾರಿಯ ಬಜೆಟ್ (Budget) ಜಾರಿಗೆ ಬಂದಿದ್ಯಾ?, ಯಾವುದಾದ್ರು ಈಡೇರಿಸಿದ್ದಾರಾ? ಹಿಂದೆ ಕೊಟ್ಟ ಮಾತು ಈಡೇರಿದ್ಯಾ, ಜನಕ್ಕೆ ಮುಟ್ಟಿದ್ಯಾ? ಬರೀ ಭ್ರಷ್ಟಾಚಾರ ನಡೆಯುತ್ತಿದೆ. ಮಾರ್ಕ್ಸ್ ಕಾರ್ಡ್ (Marks Card) ಮಾರಾಟ ಮಾಡುತ್ತಿದ್ದಾರೆ. ಬೆಂಗಳೂರು, ಸಿಕ್ಕಿಂ ವಿವಿಯಲ್ಲಿ ಏನಾಗ್ತಿದೆ. ರಸ್ತೆಯಲ್ಲಿ 30, 50 ಸಾವಿರ, ಲಕ್ಷ ರೂಪಾಯಿಗಳಿಗೆ ಮಾರ್ಕ್ಸ್ ಕಾರ್ಡ್ ಮಾರಾಟ ಮಾಡುತ್ತಿದ್ದಾರೆ. ಕಷ್ಟ ಪಟ್ಟು ಓದಿದ ಮಕ್ಕಳ ಪರಿಸ್ಥಿತಿ ಏನಾಗಬೇಕು ಇದೇನು ಸರ್ಕಾರನಾ? ಮೈಸೂರಿನಲ್ಲಿ (Mysuru) ಏನೇನಾಗಿದೆ? ಯಾವಾವ ಕೇಸ್ ಹೇಗೆ ವರ್ಗಾವಣೆ ಮಾಡಿದ್ರು ಇದರ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ ಆ ಬಗ್ಗೆ ಆಮೇಲೆ ಮಾತನಾಡುತ್ತೇನೆ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಎಲ್ಲಾ ಹಗರಣವನ್ನು ಬಿಚ್ಚಿಡುತ್ತೇನೆ – ಮಾಧುಸ್ವಾಮಿ ವಿರುದ್ಧ ಸಿಡಿದೆದ್ದ ಮಾಜಿ ಶಾಸಕ ಸುರೇಶ್ ಬಾಬು

    ಎಲ್ಲಾ ಹಗರಣವನ್ನು ಬಿಚ್ಚಿಡುತ್ತೇನೆ – ಮಾಧುಸ್ವಾಮಿ ವಿರುದ್ಧ ಸಿಡಿದೆದ್ದ ಮಾಜಿ ಶಾಸಕ ಸುರೇಶ್ ಬಾಬು

    ತುಮಕೂರು: ವಿಧಾನಸಭಾ ಚುನಾವಣಾ (Karnataka Assembly Election 2023) ಕಾವು ತುಮಕೂರಿನಲ್ಲೂ (Tumakuru) ಜೋರಾಗಿದೆ. ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ (J.C Madhuswamy) ಮತ್ತು ಮಾಜಿ ಶಾಸಕ ಸುರೇಶ್ ಬಾಬು (Suresh Babu) ಪರಸ್ಪರ ವಾಕ್ಸಮರಕ್ಕೆ ಇಳಿದಿದ್ದಾರೆ.

    ಮಾಧುಸ್ವಾಮಿ ನನ್ನನ್ನು ವೈಯಕ್ತಿಕವಾಗಿ ನಿಂದನೆ ಮಾಡುತಿದ್ದು ಅದು ಅವರ ಸಂಸ್ಕೃತಿ ತೋರಿಸುತ್ತಿದೆ. ಇದೇ ರೀತಿ ವೈಯಕ್ತಿಕ ನಿಂದನೆ ಮಾಡುತ್ತಿದ್ದರೆ ಮಾಧುಸ್ವಾಮಿ ಅವರ ಒಂದೊಂದು ಹಗರಣವನ್ನು ಬಿಚ್ಚಿಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಒಕ್ಕಲಿಗರ ಭದ್ರಕೋಟೆಯಲ್ಲಿ ಮತ್ತೆ ಡಿಕೆಶಿ ಸಿಎಂ ಜಪ- ಬಸವನ ಕಿವಿಯಲ್ಲಿ ತಮ್ಮ ಕೋರಿಕೆ ಹೇಳಿದ್ರಾ ಶಿವಕುಮಾರ್?

    ನೀವು ಕೆಎಂಎಫ್‍ನಲ್ಲಿ (KMF) ಇದ್ದಾಗಿನಿಂದ ಹಿಡಿದು, ಏನೇನಾಯ್ತು ಎಲ್ಲಾ ಮಾಹಿತಿ ಇದೆ. ನಿಮ್ಮನ್ನು ಯಾರು ರಾಜಕೀಯಕ್ಕೆ ತಂದ್ರು, ನೀವೇನು ಹುಟ್ಟುತ್ತಲೇ ಬೃಹಸ್ಪತಿ ಅಲ್ಲ. ನಾಗಮಂಗಲದ ಒಬ್ಬ ಮುಖಂಡ ಇದ್ರು, ಅವರ ಹೆಸರು ಕೂಡ ಗೊತ್ತು. ಅವರು ನಿಮಗೆ ಏನೇನು ಧಾರೆ ಎರೆದ್ರು ಎಲ್ಲವೂ ಕೂಡ ನನಗೆ ಗೊತ್ತಿದ್ದು ನೀವು ಇದೇ ರೀತಿ ವೈಯಕ್ತಿಕ ನಿಂದನೆ ಮುಂದುವರಿಸಿದರೆ ಎಲ್ಲಾ ರಹಸ್ಯವನ್ನೂ ಬಿಚ್ಚಿಡಬೇಕಾಗುತ್ತದೆ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಎಲ್ಲಾ ನಾನೇ ನಿರ್ಧಾರ ಮಾಡ್ತೀನಿ- ದೊಡ್ಡಗೌಡ್ರ ಗುಟುರಿಗೆ ಎಲ್ಲರೂ ಗಪ್ ಚಿಪ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜೆಡಿಎಸ್ ಬಿಟ್ಟು ಕಾಂಗ್ರೆಸ್‍ಗೆ ಬರೋಕೆ ಅವರೇನೋ ರೆಡಿ – ಕರೆಯೋಕೆ ಕೈ ನಾಯಕರೇ ಸಿದ್ಧರಿಲ್ಲ!

    ಜೆಡಿಎಸ್ ಬಿಟ್ಟು ಕಾಂಗ್ರೆಸ್‍ಗೆ ಬರೋಕೆ ಅವರೇನೋ ರೆಡಿ – ಕರೆಯೋಕೆ ಕೈ ನಾಯಕರೇ ಸಿದ್ಧರಿಲ್ಲ!

    ಬೆಂಗಳೂರು: ಹಾಸನದಲ್ಲಿ (Hassana) ಆಪರೇಷನ್ ಹಸ್ತಕ್ಕೆ ಕಾಂಗ್ರೆಸ್ (Congress) ನಾಯಕರೇ ಸಿದ್ಧರಿಲ್ವಾ? ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಕೆಪಿಸಿಸಿ (KPCC) ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ (D.K Shivakumar) ನಡೆ ನೋಡಿದರೆ ಪಕ್ಷಕ್ಕೆ ಬರುವವರನ್ನು ಕರೆಯಲು ಇವರೆ ಧೈರ್ಯ ಮಾಡುತ್ತಿಲ್ಲ ಎನ್ನಲಾಗಿದೆ.

    ಜೆಡಿಎಸ್ (JDS) ನಾಯಕರು ಸೆಲ್ಫ್ ಡಿಕ್ಲರೇಷನ್ ಮೇಲೆ ಬರಲಿ ನಾವು ಸೇರಿಸಿಕೊಳ್ಳುತ್ತೇವೆ ಎಂಬ ನಿಲುವಿನಲ್ಲಿ ಕೈ ನಾಯಕರಿದ್ದಾರೆ. ಜೆಡಿಎಸ್ ಶಾಸಕರಾದ ಎ.ಟಿ.ರಾಮಸ್ವಾಮಿ ಹಾಗೂ ಶಿವಲಿಂಗೇಗೌಡರ (Shivalinge Gowda) ಕಾಂಗ್ರೆಸ್ ಎಂಟ್ರಿಗೆ ಸಿದ್ದರಾಮಯ್ಯ, ಡಿಕೆಶಿ ನಡೆ ಅಡ್ಡಿಯಾಗಿದೆ ಎನ್ನಲಾಗಿದೆ. ಇಬ್ಬರು ಪಕ್ಷ ಒಡೆದ ಅಪಖ್ಯಾತಿ ಅಂಟದಂತೆ ಎಚ್ಚರಿಕೆ ವಹಿಸಲು ಮುಂದಾಗಿದ್ದಾರೆ. ಇದು ರಾಜಕೀಯ ಮೀರಿದ ಸ್ನೇಹದ ಎಫೆಕ್ಟಾ? ಅಥವಾ ಬೇರೆಯದೆ ರಾಜಕೀಯ ಲೆಕ್ಕಾಚಾರನಾ? ಜೆಡಿಎಸ್ ಕೆಣಕಿ ಕೆಂಗಣ್ಣಿಗೆ ಗುರಿಯಾಗದಂತೆ ಇಬ್ಬರೂ ಆಡುತ್ತಿರುವ ಸೇಫ್ ಗೇಮಾ? ನೀವು ಘೋಷಣೆ ಮಾಡಿ ನಾವು ಕರೆದುಕೊಳ್ಳುತ್ತೇವೆ ಎಂಬ ಸೇಫ್ ಗೇಮಿನ ಲೆಕ್ಕಾಚಾರದ ದಾಳವನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಉರುಳಿಸುತ್ತಿದ್ದಾರೆ. ಇದನ್ನೂ ಓದಿ: ಕೋಲಾರದ ಆಂತರಿಕ ಸಮೀಕ್ಷಾ ವರದಿ ನೋಡಿ ಸಿದ್ದರಾಮಯ್ಯ ಶಾಕ್

    ಕೈ ನಾಯಕರ ನಡೆಗೆ ಕಾಂಗ್ರೆಸ್ ನತ್ತ ಮುಖ ಮಾಡಿದ್ದ ದಳ ಶಾಸಕರು ಗಲಿಬಿಲಿಯಾಗಿದ್ದಾರೆ. ಹಾಸನದಲ್ಲಿ ಜೆಡಿಎಸ್‍ನ ಇಬ್ಬರು ಶಾಸಕರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಅರಕಲಗೂಡು ಎ.ಟಿ.ರಾಮಸ್ವಾಮಿ ಅರಸಿಕೆರೆಯ ಶಿವಲಿಂಗೇಗೌಡರು ಜೆಡಿಎಸ್‍ನಿಂದ ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆ. ಆದರೆ ಕೈ ನಾಯಕರೇ ಅವರನ್ನು ಕರೆಯಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಕೆಲ ಬಿಜೆಪಿ ಹಾಲಿ ಶಾಸಕರಿಗೆ ಬಿಗ್ ಶಾಕ್- ಆಪರೇಷನ್ ‘U-G’ ಮಾಡೆಲ್ ಜಾರಿ?

    ಆದರೆ ನೀವೇ ಪಕ್ಷ ಬಿಡುವ ಘೋಷಣೆ ಮಾಡಿ ನಾವು ಆನಂತರ ಪಕ್ಷ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂಬ ಸಂದೇಶ ರವಾನಿಸಿದ್ದಾರೆ. ಶಾಸಕರ ಸೆಲ್ಫ್ ಡಿಕ್ಲರೇಷನ್ ಅಸ್ತ್ರ ಬಳಸುತ್ತಿರುವ ಕೈ ನಾಯಕರ ನಡೆಯೇ ಜೆಡಿಎಸ್ ಶಾಸಕರಿಗೆ ಆತಂಕ ಉಂಟು ಮಾಡಿದೆ. ಇತ್ತ ಸಿದ್ದರಾಮಯ್ಯ ಹಾಗೂ ಡಿಕೆಶಿಯ ಈ ನಡೆಯಿಂದ ಕೈ ಸೇರಲು ಕಾತುರದಿಂದಿದ್ದ ಜೆಡಿಎಸ್ ಶಾಸಕರ ನೆಮ್ಮದಿ ಕೆಡಿಸಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿದ್ದರಾಮಯ್ಯ ಏಳು ಬಾರಿ ಪಕ್ಷ ಬದಲಿಸಿದ ದೊಡ್ಡ ಪಕ್ಷಾಂತರಿ: ಪ್ರಮೋದ್ ಮಧ್ವರಾಜ್ ವಾಗ್ದಾಳಿ

    ಸಿದ್ದರಾಮಯ್ಯ ಏಳು ಬಾರಿ ಪಕ್ಷ ಬದಲಿಸಿದ ದೊಡ್ಡ ಪಕ್ಷಾಂತರಿ: ಪ್ರಮೋದ್ ಮಧ್ವರಾಜ್ ವಾಗ್ದಾಳಿ

    ಉಡುಪಿ: ಸಿದ್ದರಾಮಯ್ಯ (Siddaramaiah) ಏಳು ಸಲ ಪಕ್ಷಾಂತರ ಮಾಡಿದ ರಾಜಕಾರಣಿ. ನಾನು ಹುಟ್ಟಿನಿಂದ ಎಂಟು ತಿಂಗಳ ಹಿಂದೆಯವರೆಗೆ ಕಾಂಗ್ರೆಸ್‍ನಲ್ಲಿ ಇದ್ದೆ. ಈಗ ಬಿಜೆಪಿ (BJP) ಸೇರಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಮೋದ್ ಮಧ್ವರಾಜ್ (Pramod Madhwaraj) ವಾಗ್ದಾಳಿ ನಡೆಸಿದ್ದಾರೆ.

    ಉಡುಪಿಯಲ್ಲಿ ನಡೆದ ಪ್ರಜಾ ಧ್ವನಿ ಕಾಂಗ್ರೆಸ್ ಸಮಾವೇಶದಲ್ಲಿ ಪ್ರಮೋದ್ ವಿರುದ್ಧ ಕಾಂಗ್ರೆಸ್ (Congress) ನಾಯಕರು ಸಿಡಿದೆದ್ದಿದ್ದರು. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ (D.K Shivakumar) ವಿರುದ್ಧ ಪ್ರಮೋದ್ ಮಧ್ವರಾಜ್ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಈವರೆಗೆ ಏಳು ಬಾರಿ ಪಕ್ಷವನ್ನು ಬದಲಿಸಿದ್ದಾರೆ. ಸಿದ್ದರಾಮಯ್ಯ 1978ರಲ್ಲಿ ರೈತಸಂಘದಲ್ಲಿದ್ದರು. 1983ರಲ್ಲಿ ಭಾರತೀಯ ಲೋಕದಳ, ಸಮಾಜಪಕ್ಷ ಜನತಾದಳ, ಜಾತ್ಯಾತೀತ ಜನತಾದಳ, ಅಹಿಂದ ಸೇರಿಕೊಂಡರು. ಸಿದ್ದರಾಮಯ್ಯ ಅಶಿಸ್ತಿನ ವಾತಾವರಣ ಸೃಷ್ಟಿ ಮಾಡಿ ವಜಾವಾಗಿದ್ದರು. ಹಾಗಾದ್ರೆ, ಬೇರೆ ಪಕ್ಷದಿಂದ ಕಾಂಗ್ರೆಸ್‍ಗೆ ಬರಬೇಡಿ ಎಂದು ಘೋಷಿಸಿ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್‌ಗೆ ಪ್ರಮೋದ್ ಮಧ್ವರಾಜ್ ಸವಾಲೆಸೆದಿದ್ದಾರೆ. ಇದನ್ನೂ ಓದಿ: ಯೋಗ್ಯತೆ ಮೀರಿ ನನಗೆ ಕೇಂದ್ರ ಸರ್ಕಾರ ಗೌರವ ನೀಡಿದೆ: ಎಸ್.ಎಂ.ಕೃಷ್ಣ

    ಸನ್ನಿವೇಶಕ್ಕೆ ಅನುಗುಣವಾಗಿ ದೇಶದಲ್ಲಿ ಪಕ್ಷಾಂತರ ಸಾಮಾನ್ಯ. ನನ್ನನ್ನು ಅಸಾಮಿ, ಗಿರಾಗಿ ಅಂತ ಹೇಳಿದ್ದಾರೆ. ನಾನು ಸಿದ್ದರಾಮಯ್ಯ ಕ್ಯಾಬಿನೆಟ್‍ನಲ್ಲಿ ಮಂತ್ರಿಯಾಗಿದ್ದೆ. ನನ್ನ ಬಗ್ಗೆಯೇ ಹೀಗೆ ಮಾತನಾಡುವಾಗ, ಜನಸಾಮಾನ್ಯರ ಬಗ್ಗೆ ಸಿದ್ದರಾಮಯ್ಯ ಹೇಗೆ ಮಾತನಾಡಬಹುದು ಆಲೋಚಿಸಿ. ಸಿದ್ದರಾಮಯ್ಯ ವಿರುದ್ಧ ಕೆಟ್ಟದ್ದಾಗಿ ಮಾತನಾಡಲು ಎಲ್ಲರಿಗೂ ಬರುತ್ತದೆ. ತಂದೆ ತಾಯಿ ನನಗೆ ಸಂಸ್ಕಾರ ಸೌಜನ್ಯತೆ ಕಲಿಸಿದ್ದಾರೆ ಹಾಗಾಗಿ ಮಾತನಾಡಲ್ಲ ಎಂದಿದ್ದಾರೆ. ಇದನ್ನೂ ಓದಿ: ಸ್ಯಾಂಟ್ರೋ ರವಿ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

    ಉಡುಪಿ, ಚಿಕ್ಕಮಗಳೂರು, ಉ.ಕನ್ನಡ ಮೈತ್ರಿ ಸೀಟ್ ಆಗಿತ್ತು. ಸಿದ್ದರಾಮಯ್ಯ ಮೈಸೂರು ಕ್ಷೇತ್ರ ಉಳಿಸಲು ಸ್ವಾರ್ಥ ಸಾಧನೆ ಮಾಡಿದರು. ಜೆಡಿಎಸ್‍ನಲ್ಲಿ ಟಿಕೆಟ್ ಪಡೆಯೋ ಮೊದಲು ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಪರವಾನಿಗೆ ಪಡೆದಿದ್ದೇನೆ. ಸಿದ್ದರಾಮಯ್ಯ ಅವರ ಸುಳ್ಳಿನ ಬಗ್ಗೆ ಆಕ್ಷೇಪ ಇದೆ ಖಂಡಿಸುತ್ತೇನೆ. ಜೆಡಿಎಸ್‌ನಿಂದ ಹಣ ಪಡೆದಿದ್ದಾನೆ ಎಂದು ಆರೋಪಿಸಿದ್ದಾರೆ. ಜೆಡಿಎಸ್‍ನಿಂದ (JDS) ಬಂದ ಫಂಡನ್ನು ಜಿಲ್ಲಾ ಕಾಂಗ್ರೆಸ್ ಪಡೆದಿದೆ ಎಲ್ಲಾ ಹಂಚಿಕೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿಧಾನಸಭೆ ಚುನಾವಣೆ – ವರ್ಷಕ್ಕೂ ಮುನ್ನ ಬಳ್ಳಾರಿ ಟಿಕೆಟ್‍ಗಾಗಿ ಲಾಬಿ ಶುರು

    ವಿಧಾನಸಭೆ ಚುನಾವಣೆ – ವರ್ಷಕ್ಕೂ ಮುನ್ನ ಬಳ್ಳಾರಿ ಟಿಕೆಟ್‍ಗಾಗಿ ಲಾಬಿ ಶುರು

    ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ‌ಕಾಂಗ್ರೆಸ್‌ ಪಕ್ಷದಲ್ಲಿ ಟಿಕೆಟ್‍ಗಾಗಿ ಲಾಬಿ ಶುರುವಾಗಿದ್ದು, ಬಳ್ಳಾರಿ ವಿಧಾನಸಭೆ ಕ್ಷೇತ್ರದ ಟಿಕೆಟ್ ಪಡೆಯಲು ಕಸರತ್ತು ಆರಂಭವಾಗಿದೆ.

    ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ತಮಗೆ ಟಿಕೆಟ್ ನೀಡುವಂತೆ ಕುಡುಚಿ ಶ್ರೀನಿವಾಸ್, ಕಾಂಗ್ರೆಸ್‌ನ ಹಿರಿಯ ನಾಯಕರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ. ಇಂದು ದೆಹಲಿಯಲ್ಲಿ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಭೇಟಿಯಾಗಿ ಟಿಕೆಟ್ ನೀಡುವಂತೆ ಶ್ರೀನಿವಾಸ್ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಹೆಡ್‌ಫೋನ್ ತೆಗೆದ ಯಡಿಯೂರಪ್ಪ – ಸಿದ್ದುಗೆ ಶಾಕ್!

    ಬಳ್ಳಾರಿಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಲು ಅನಿಲ್ ಲಾಡ್ ಕೂಡಾ ಪ್ರಯತ್ನ ನಡೆಸುತ್ತಿದ್ದು ಕ್ಷೇತ್ರದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಅನಿಲ್ ಲಾಡ್ ಬದಲು ತಮಗೆ ಟಿಕೆಟ್ ನೀಡಿದರೇ ತಾವು ಈಗಿನಿಂದಲೇ ಕೆಲಸ ಆರಂಭಿಸಲಿದ್ದು ಗೆಲವು ಖಚಿತ ಎಂದು ಶ್ರೀನಿವಾಸ್ ಹೈಕಮಾಂಡ್ ನಾಯಕರ ಮುಂದೆ ಹೇಳಿಕೊಂಡಿದ್ದಾರೆ.

    ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದ ಕುಡುಚಿ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆಯಾಗಿದ್ದು ಟಿಕೆಟ್‍ಗಾಗಿ ದೆಹಲಿಯಲ್ಲಿ ಭಾರಿ ಪ್ರಯತ್ನ ಮಾಡುತ್ತಿದ್ದಾರೆ. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭೇಟಿಗೂ ಪ್ರಯತ್ನಿಸುತ್ತಿದ್ದಾರೆ. ಇದನ್ನೂ ಓದಿ: ಜೇಮ್ಸ್ ಚಿತ್ರವನ್ನೂ ಯಾವುದೇ ಕಾರಣಕ್ಕೂ ತೆಗೆಯಬಾರದು: ಡಿಕೆಶಿ