Tag: Karnataka Assembly Election 2023

  • ಕಾಂಗ್ರೆಸ್‍ನಲ್ಲಿ ಮತ್ತೆ ದಲಿತ ಸಿಎಂ ಕೂಗು- ಪ್ರಿಯಾಂಕ್ ಖರ್ಗೆ ಪರ ಕ್ಯಾಂಪೇನ್

    ಕಾಂಗ್ರೆಸ್‍ನಲ್ಲಿ ಮತ್ತೆ ದಲಿತ ಸಿಎಂ ಕೂಗು- ಪ್ರಿಯಾಂಕ್ ಖರ್ಗೆ ಪರ ಕ್ಯಾಂಪೇನ್

    ಕಲಬುರಗಿ: ರಾಜ್ಯ ವಿಧಾನಸಭಾ ಚುನಾವಣೆಯ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಮುನ್ನಡೆ ಬೆನ್ನಲ್ಲೇ ಇದೀಗ ಕೈ ನಾಯಕರಲ್ಲೀಗ ಸಿಎಂ ರೇಸ್ ಆರಂಭವಾಗಿದೆ. ಇನ್ನು ದಲಿತ ಸಿಎಂ ಮತ್ತೆ ಸದ್ದು ಮಾಡುತ್ತಿದ್ದು ಪ್ರಿಯಾಂಕ್ ಖರ್ಗೆಯವರನ್ನು ಸಿಎಂ ಮಾಡಬೇಕು ಅಂತಾ ಪೆÇೀಸ್ಟರ್ ವಾರ್ ಆರಂಭವಾಗಿದೆ.

    ಹೌದು. ಚುನಾವಣೋತ್ತರ ಸಮೀಕ್ಷೆ (Exit Poll) ಗಳಲ್ಲಿ ಕಾಂಗ್ರೆಸ್‍ಗೆ ಬಹುಮತದ ಸುಳಿವು ಸಿಗುತ್ತಿದ್ದಂತೆ ಪಕ್ಷದಲ್ಲಿ ಆಂತರಿಕವಾಗಿ ಸಿಎಂ ಹುದ್ದೆಗೆ ಪೈಪೋಟಿ ಶುರುವಾಗಿದೆ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಜೊತೆಗೆ ಈಗ ಪರಮೇಶ್ವರ್ ಕೂಡ ಸಿಎಂ ಗಾದಿ ಮೇಲೆ ಟವೆಲ್ ಹಾಕಲು ನೋಡಿದ್ದಾರೆ. ಅತ್ತ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ ಆಗಬೇಕೆಂದು ಬೆಂಬಲಿಗರು ಅಭಿಯಾನ ಆರಂಭಿಸಿದ್ದಾರೆ.

    ಕಾಂಗ್ರೆಸ್ (Congress) ನಾಯಕರು ಹಾಕಿರುವ ಪೋಸ್ಟ್‌ ನಲ್ಲಿ ಪ್ರಿಯಾಂಕ್ ಖರ್ಗೆ ಅವರು ಮುಂದಿನ ಸಿಎಂ. ಇದು ಅಪ್ಪನ ಕನಸಲ್ಲ, ಕೋಟ್ಯಂತರ ಕನ್ನಡಿಗರ ಕನಸು. ಪ್ರಿಯಾಂಕ್ ಖರ್ಗೆ ಅವರಿಗೆ ಅರ್ಹತೆ, ಸಾಮರ್ಥ್ಯ, ಯೋಗ್ಯತೆ, ಜ್ಞಾನ, ಬದ್ಧತೆ ಹಾಗೂ ಕನ್ನಡಿಗರ ಆಶೀರ್ವಾದವಿದೆ. ಹೀಗಾಗಿ ಮುಂದಿನ ಪ್ರಿಯಾಂಕ್ ಖರ್ಗೆ (Priyank Kharge) ಸಿಎಂ ಅಂತಾ ಕಲಬುರಗಿ ಕೈ ನಾಯಕರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಗಳನ್ನು ಹಾಕಿದ್ದಾರೆ.

    ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೆ ನಾನೇ ಸಿಎಂ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆ.ಶಿವಕುಮಾರ್‌ (DK Shivakumar) ಈಗಾಗಲೇ ಸಿಎಂ ಕುರ್ಚಿಯ ಮೇಲೆ ಟವೆಲ್ ಹಾಕಿದ್ದಾರೆ. ಈ ಮಧ್ಯೆ ದಲಿತ ಸಿಎಂ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಇದನ್ನೂ ಓದಿ: ಎಕ್ಸಿಟ್ ಪೋಲ್ ನಂಬಿದ ಕಾಂಗ್ರೆಸ್‍ನಲ್ಲಿ ನಾನಾ ಲೆಕ್ಕಾಚಾರ- ಸಿಎಂ ಆಗುವ ಕನಸಲ್ಲಿ ಸಿದ್ದು, ಡಿಕೆ

  • ನಾಳೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ – LIVE UPDATES

    ನಾಳೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ – LIVE UPDATES

    ರ್ನಾಟಕ ವಿಧಾನಸಭೆ ಚುನಾವಣೆ (Karnataka Election 2023) ಮೇ 10ರ ಬುಧವಾರ ನಡೆಯಲಿದ್ದು, ಮತದಾನಕ್ಕೆ ಕ್ಷಣಗಣನೆ (Karnataka Voting) ಆರಂಭವಾಗಿದೆ. ರಾಜ್ಯಾದ್ಯಂತ ಮತಗಟ್ಟೆಗಳಲ್ಲಿ ಸಿದ್ಧತೆಗಳು ಹೇಗಿವೆ, ಮನೆ ಮನೆ ಪ್ರಚಾರದ ಹೇಗೆ ನಡೆಯುತ್ತಿದೆ, ಈ ಚುನಾವಣೆಯ ತಾಜಾ ಸುದ್ದಿಗಳ ಈ ಕ್ಷಣದ ಮಾಹಿತಿ..

     

  • ಉತ್ತರ ಪ್ರದೇಶದಲ್ಲಿ ಶ್ರೀರಾಮ ಸೇನೆ ಬ್ಯಾನ್ ಮಾಡಿದ್ದು ಯಾಕೆ ಅಂತ ಯೋಗಿ ಹೇಳಬೇಕು: ಡಿಕೆ ಸುರೇಶ್

    ಉತ್ತರ ಪ್ರದೇಶದಲ್ಲಿ ಶ್ರೀರಾಮ ಸೇನೆ ಬ್ಯಾನ್ ಮಾಡಿದ್ದು ಯಾಕೆ ಅಂತ ಯೋಗಿ ಹೇಳಬೇಕು: ಡಿಕೆ ಸುರೇಶ್

    ರಾಮನಗರ: ಉತ್ತರ ಪ್ರದೇಶದಲ್ಲಿ ಶ್ರೀರಾಮ ಸೇನೆ (Sri Ram Sena) ಬ್ಯಾನ್ ಮಾಡಿದ್ದು ಯಾಕೆಂದು ಯೋಗಿ (Yogi Adityanath) ಹೇಳಬೇಕು ಎಂದು ಕಾಂಗ್ರೆಸ್ (Congress) ನಾಯಕ ಡಿ.ಕೆ ಸುರೇಶ್ (D.K. Suresh) ಕಿಡಿಕಾರಿದ್ದಾರೆ.

    ಕನಕಪುರದಲ್ಲಿ (Kanakapur) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ (BJP) ಆಡಳಿತದ ಮೂರು ರಾಜ್ಯಗಳಲ್ಲಿ ಶ್ರೀರಾಮ ಸೇನೆ ಬ್ಯಾನ್ ಆಗಿದೆ. ಯಾಕೆ ಬ್ಯಾನ್ ಮಾಡಿದ್ದಾರೆ ಎಂದು ಬಿಜೆಪಿಗರು ಹೇಳಬೇಕು. ಚುನಾವಣೆ ಹೊಸ್ತಿಲಲ್ಲಿ ಗೆಲ್ಲಲು ಆಗದೆ ಧರ್ಮದ ಹೆಸರಿನಲ್ಲಿ ಅಡ್ಡ ಬರುತ್ತಿರುವುದು ಒಳ್ಳೆಯದಲ್ಲ. ನಾವು ಸಹ ಹಿಂದೂಗಳು, ಹಿಂದುತ್ವದ ಬಗ್ಗೆ ಬಿಜೆಪಿಯಿಂದ ಸಲಹೆ ಪಡೆಯಬೇಕಾಗಿಲ್ಲ. ನಾವೂ ದೇವಸ್ಥಾನಕ್ಕೆ ಹೋಗಿ ದೇವರ ಪೂಜೆ ಮಾಡುತ್ತೇವೆ. ಆದರೆ ಚುನಾವಣಾ ಪ್ರಚಾರದಲ್ಲಿ ರಾಮ ಮತ್ತು ಹನುಮನ ತಂದು ಪೂಜೆ ಮಾಡುವುದಿಲ್ಲ. ವೋಟಿಗಾಗಿ ಪೂಜೆ ಮಾಡುವವರಿಗೆ ಜನ ಉತ್ತರಿಸಲಿದ್ದಾರೆ ಎಂದರು. ಇದನ್ನೂ ಓದಿ: ಕಳೆದ ಬಾರಿ ರಾಹುಲ್ ಗಾಂಧಿ ಮಾಡಿದ್ದನ್ನು, ಈ ಬಾರಿ ಮೋದಿ ಮಾಡಿದ್ದಾರೆ: ಬೇಸರ ವ್ಯಕ್ತಪಡಿಸಿದ ಹೆಚ್‌ಡಿಡಿ

    ಇನ್ನೂ ಕನಕಪುರದಲ್ಲಿ ಅಮಿತ್ ಶಾ ಪ್ರಚಾರದ ವಿಚಾರವಾಗಿ ಮಾತನಾಡಿದ ಅವರು, ಯಾರು ಬೇಕಾದರೂ ಬಂದು ಪ್ರಚಾರ ಮಾಡಲಿ. ಅಮಿತ್ ಶಾ ಬಂದರೂ ಸಂತೋಷ, ಮೋದಿ ಬಂದರೂ ಸಂತೋಷ. ಅವರಿಬ್ಬರೂ ಮೇಕೆದಾಟು ಯೋಜನೆಗೆ ಯಾವಾಗ ಅನುಮತಿ ಕೊಡುತ್ತೀರಾ? ಅದರ ಬಗ್ಗೆ ನಿಲುವು ಸ್ಪಷ್ಟಪಡಿಸಲಿ ಎಂದಿದ್ದಾರೆ.

    ಕನಕಪುರದಲ್ಲಿ ಭಯದ ವಾತಾವರಣ ಇದೆ ಎಂಬ ಬಿ.ಎಲ್ ಸಂತೋಷ್ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿ.ಎಲ್ ಸಂತೋಷ್ ಅವರಿಗೆ ನಾನೇ ಎಲ್ಲಾ ರೀತಿಯ ರಕ್ಷಣೆ ನೀಡುತ್ತೇನೆ. ಅವರೇ ಮನೆಮನೆಗೆ ಬಂದು ಮತ ಕೇಳಲಿ. ನಾನು ಒಂದು ಮಾತು ಹೇಳಿದ್ರೆ ಸಾಕು ಅವರಿಗೆ ರಕ್ಷಣೆ ಸಿಗುತ್ತದೆ. ಅದಕ್ಕಾಗಿ ಬಿಎಸ್‍ಎಫ್‍ನ ಅಗತ್ಯವಿಲ್ಲ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಬಜರಂಗದಳ ನಿಷೇಧಿಸಲು ನಿಮ್ಮ ಬಳಿ ಧೈರ್ಯ, ತಾಕತ್ ಇಲ್ಲ: ಕಾಂಗ್ರೆಸ್‌ ವಿರುದ್ಧ ಫಡ್ನವೀಸ್‌ ವಾಗ್ದಾಳಿ

  • ಅಂಜನಾದ್ರಿ ಅಭಿವೃದ್ಧಿ ಮಾಡ್ತೇವೆ, ಯುವಕರಿಗೆ ಆಂಜನೇಯನ ವಿಚಾರಗಳ ಬೆಳೆಸಲು ವಿಶೇಷ ಕಾರ್ಯಕ್ರಮ: ಡಿಕೆಶಿ

    ಅಂಜನಾದ್ರಿ ಅಭಿವೃದ್ಧಿ ಮಾಡ್ತೇವೆ, ಯುವಕರಿಗೆ ಆಂಜನೇಯನ ವಿಚಾರಗಳ ಬೆಳೆಸಲು ವಿಶೇಷ ಕಾರ್ಯಕ್ರಮ: ಡಿಕೆಶಿ

    ಮೈಸೂರು: ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದರೆ ಆಂಜನೇಯ ಹುಟ್ಟಿದ ಸ್ಥಳ ಅಂಜನಾದ್ರಿ (Anjanadri) ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ವಿಶೇಷ ಮಂಡಳಿ ರಚನೆ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D.K Shivakumar) ಮೈಸೂರಿನಲ್ಲಿ (Mysuru) ಗುರುವಾರ ಹೇಳಿದ್ದಾರೆ. ಇದನ್ನೂ ಓದಿ: ತಂದೆಗೆ ಟಿಕೆಟ್ ಸಿಕ್ಕಿದ್ದಕ್ಕೆ ಗಾಳಿಯಲ್ಲಿ ಗುಂಡು ಹಾರಿಸಿದ ಬಿಜೆಪಿ ಅಭ್ಯರ್ಥಿಯ ಪುತ್ರ – ಕಾಂಗ್ರೆಸ್‍ನಿಂದ ವೀಡಿಯೋ ರಿಲೀಸ್

    ನಗರದ ಚಾಮುಂಡೇಶ್ವರಿ ದೇವಾಲಯಕ್ಕೆ (Chamundeshwari Temple) ಭೇಟಿ ನೀಡಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪ್ರಣಾಳಿಕೆ ನೋಡಿ ಬಿಜೆಪಿಗರಿಗೆ (BJP) ಗಾಬರಿಯಾಗಿದೆ. ಬಜರಂಗದಳಕ್ಕೂ ಆಂಜನೇಯನಿಗೂ ವ್ಯತ್ಯಾಸವಿದೆ. ಬಜರಂಗದಳ ಒಂದು ರಾಜಕೀಯ ಪಕ್ಷದ ಭಾಗ. ಹುಟ್ಟುವ ಎಲ್ಲವೂ ಬಸವ ಆಗುವುದಕ್ಕೆ ಸಾಧ್ಯವಿಲ್ಲ. ಹನುಮಂತನ ಹೆಸರಿಟ್ಟುಕೊಂಡವರೆಲ್ಲಾ ಹನುಮಂತ ಆಗಲು ಸಾಧ್ಯವೇ ಎಂದು ಪ್ರಶ್ನಿಸಿ ಬಿಜೆಪಿ ವಿರುದ್ಧ ಗುಡುಗಿದ್ದಾರೆ.

    ಬಜರಂಗದಳದವರು (Bajrang Dal) ನೈತಿಕ ಪೊಲೀಸ್ ಗಿರಿ ಮಾಡುತ್ತಿದ್ದಾರೆ. ಬಜರಂಗ ಬಲಿಯ ನಿಜವಾದ ಭಕ್ತರು ನಾವು. ಬಜರಂಗಿಯ ಕುಂಕುಮ ನನ್ನ ಹಣೆಯಲ್ಲಿಯೇ ಇದೆ. ಈ ನಾಡಿನಲ್ಲಿ ಆಂಜನೇಯ ಹುಟ್ಟಿದ್ದಕ್ಕೆ ಸಾಕ್ಷಿ ಇದೆ. ಇತಿಹಾಸ ಸೃಷ್ಟಿಸಿದ ಆಂಜನೇಯ ದೇವಾಲಯ ಅಭಿವೃದ್ಧಿಗೆ ಕಾಂಗ್ರೆಸ್ ವಿಶೇಷ ಒತ್ತು ನೀಡಲಿದೆ. ಯುವಕರಿಗೆ ಆಂಜನೇಯನ ವಿಚಾರಗಳನ್ನು ಬೆಳೆಸಲು ವಿಶೇಷ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳುವ ಮೂಲಕ ಡ್ಯಾಮೇಜ್ ಕಂಟ್ರೋಲ್ ಮಾಡಲು ಪ್ರಯತ್ನಿಸಿದರು.

    ಬಿಜೆಪಿಯವರು ಒಂದಾದರೂ ಆಂಜನೇಯನ ದೇವಾಲಯವನ್ನು ಕಟ್ಟಿದ್ದಾರಾ? ಯಾರಿಗೆ ಏನೂ ಸಹಾಯ ಮಾಡಿದ್ದೇವೆ, ಕೆಲಸ ಮಾಡಿದ್ದೇವೆ ಎಂದು ಪ್ರಧಾನಿಗಳು ಭಾಷಣದಲ್ಲಿ ಹೇಳುತ್ತಿಲ್ಲ. ದೇವರ ಹೆಸರಿನಲ್ಲಿ ಪ್ರಧಾನಿ ಹಾಗೂ ಬಿಜೆಪಿ ರಾಜಕೀಯ ನಡೆಸಲು ಯತ್ನಿಸುತ್ತಿದೆ. ಬಿಜೆಪಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್ ಪ್ರಾಣಾಳಿಕೆಯನ್ನು ಈಶ್ವರಪ್ಪ ಸುಟ್ಟು ಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಭ್ರಷ್ಟಾಚಾರದ ಫಲವಾಗಿ ಬಿಜೆಪಿಗರು ಈಶ್ವರಪ್ಪನನ್ನೆ ಸುಟ್ಟು ಹಾಕಿದ್ದಾರೆ ಎಂದು ಹೇಳಿ ತಿರುಗೇಟು ನೀಡಿದರು.

    ಗರ್ಭಗುಡಿಯಲ್ಲಿ ರುದ್ರಾಕ್ಷಿ ಜಪ ಮಾಡಿದ್ದೇನೆ, ರಾಜ್ಯಕ್ಕೆ ಬಂದಿರುವ ದುಃಖವನ್ನು ದೂರ ಮಾಡುವಂತೆ ದೇವರಲ್ಲಿ ಪ್ರಾರ್ಥಿಸಿದ್ದೇನೆ. ದುಷ್ಟರನ್ನು ದೂರ ಮಾಡಿ ಶಿಷ್ಟರನ್ನು ದೇವರು ಕಾಪಾಡುತ್ತಾರೆ ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಮಾಜಿ ಸಿಎಂ ಸಿದ್ಧರಾಮಯ್ಯ ಪರವಾಗಿ ರಮ್ಯಾ, ಶಿವಣ್ಣ ದುನಿಯಾ ವಿಜಯ್ ಕ್ಯಾಂಪೇನ್

  • ವಿಜಯ ಸಂಕಲ್ಪ ಯಾತ್ರೆ ಬದಲು CD ಯಾತ್ರೆ ಮಾಡಿ: HDK

    ವಿಜಯ ಸಂಕಲ್ಪ ಯಾತ್ರೆ ಬದಲು CD ಯಾತ್ರೆ ಮಾಡಿ: HDK

    ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ (Karnataka Assembly Election 2023) ಸಿಡಿಗಳೇ ಬ್ರಹ್ಮಾಸ್ತ್ರಗಳಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗುತ್ತಿದೆ.

    ಪ್ರಹ್ಲಾದ್ ಜೋಶಿ (Pralhad Joshi)  ವಿರುದ್ಧ ವಾಗ್ದಾಳಿ ನಡೆಸಿರುವ ಕುಮಾರಸ್ವಾಮಿಗೆ (H.D Kumaraswamy)  ಟಕ್ಕರ್ ಕೊಡುವ ಭರದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ (N.Ravikumar) ಅವರು ಹೆಚ್‍ಡಿಕೆ ಮೇಲೆ ಮತ್ತೊಂದು ಸಿಡಿ ಬಾಂಬ್ ಸಿಡಿಸಿದ್ದಾರೆ. ಹೆಚ್‍ಡಿಕೆ ತಾಜ್ ವೆಸ್ಟೆಂಡ್ ಹೊಟೇಲ್, ಅವರ ಮನೆ, ತೋಟದ ಮನೆ, ಇವೆಲ್ಲ ಪ್ರಕರಣಗಳ ಬಗ್ಗೆ ನಮಗೂ ಗೊತ್ತಿದೆ. ಅವರು ಮಾತಾಡಲಿ, ಅವರು ಇದೇ ರೀತಿ ಮುಂದುವರಿದರೆ ನಾವೂ ಮಾತಾಡ್ತೀವಿ. ನಾವೂ ರಾಜಕಾರಣ ಮಾಡಲು ಬಂದವರು. ಅವರೇನು ಹರಿಶ್ಚಂದ್ರ ಅಲ್ಲ, ನಾವೂ ಮಾತಾಡ್ತೇವೆ ಅಂತ ಗುಡುಗಿದ್ದಾರೆ.

    ಹೆಚ್‍ಡಿಕೆ ಸ್ವಜಾತಿ ಕೂಪಿಷ್ಟ ಅಂತ ಜರಿದಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟಿರುವ ಕುಮಾರಸ್ವಾಮಿ, ಸಿಡಿಯಲ್ಲಿ ರವಿಕುಮಾರ್ ಎಕ್ಸ್‌ಪರ್ಟ್‌ ಇದ್ದಾರೆ. ವಿಜಯ ಸಂಕಲ್ಪ ಯಾತ್ರೆ ಬದಲು ಸಿಡಿ ಯಾತ್ರೆ ಮಾಡಿ. ಅದನ್ನು ತೋರಿಸಿಕೊಂಡು ಓಡಾಡಿ. ನಾಲ್ಕು ವರ್ಷದ ಹಿಂದಿನ ಸಿಡಿ ಯಾತ್ರೆ ಮಾಡಿ. ಬಿಜೆಪಿಯವರು ಈ ರಾಜ್ಯ ಲೂಟಿ ಮಾಡಿದ್ದಾರೆ. ಬಿಜೆಪಿಯನ್ನು (BJP) ರಾಜ್ಯದಿಂದ ಜನ ಹೊರಗೆ ಕಳುಹಿಸಲಿದ್ದಾರೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

    ಈ ಬಗ್ಗೆ ವಾಗ್ದಾಳಿ ಮುಂದುವರಿಸಿದ ಎನ್. ರವಿಕುಮಾರ್, ರಾಜ್ಯದ ಅತ್ಯಂತ ಸ್ವಾರ್ಥ ರಾಜಕಾರಣಿ ಹೆಚ್‍ಡಿಕೆ. ನಮ್ಮನೆ ಬಾಗಿಲಿಗೆ ಎಲ್ರೂ ಬರಬೇಕು ಅನ್ಕೊಂಡಿರೋರು. ಪ್ರಹ್ಲಾದ್ ಜೋಶಿ ಅವರು ಸರಿಯಾಗಿ ಹೇಳಿದ್ದಾರೆ. ರಾಜ್ಯದಲ್ಲಿ ಸ್ಮಾರ್ಥ ಬ್ರಾಹ್ಮಣರು, ಪೇಶ್ವೆ ಬ್ರಾಹ್ಮಣರು ಅಂತ ಇಲ್ಲ. ಮಹಾರಾಷ್ಟ್ರದಲ್ಲಿ ಇರೋದು. ಕುಮಾರಸ್ವಾಮಿ ಪಿಎಚ್‍ಡಿ ಮಾಡಿದ್ದಾರಾ? ಕುಮಾರಸ್ವಾಮಿ ಕಿರುಕುಳಕ್ಕೆ ಬ್ರಾಹ್ಮಣ ವೈಎಸ್‍ವಿ ದತ್ತಾ ಪಕ್ಷ ಬಿಟ್ ಹೋಗಿದ್ದಾರೆ. ಬ್ರಾಹ್ಮಣರು ಸಿಎಂ, 8 ಜನ ಡಿಸಿಎಂ ಮಾಡೋ ಬಗ್ಗೆ ಚರ್ಚೆ ಆಗಿಲ್ಲ, ಆ ರೀತಿ ಏನೂ ಇಲ್ಲ. ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ಹೆಚ್‍ಡಿಕೆ ಭಯದಿಂದ ಚಡಪಡಿಸ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಣವಿಲ್ಲವೆಂಬ ನೆಪವೊಡ್ಡಿ ಕಣದಿಂದ ಹಿಂದೆ ಸರಿದ ಟಿಕೆಟ್ ಆಕಾಂಕ್ಷಿ – ಚುನಾವಣೆ ಮುನ್ನವೇ ಸೋಲಿನ ಭೀತಿ?

    ಹಣವಿಲ್ಲವೆಂಬ ನೆಪವೊಡ್ಡಿ ಕಣದಿಂದ ಹಿಂದೆ ಸರಿದ ಟಿಕೆಟ್ ಆಕಾಂಕ್ಷಿ – ಚುನಾವಣೆ ಮುನ್ನವೇ ಸೋಲಿನ ಭೀತಿ?

    ತುಮಕೂರು: ಕ್ಷೇತ್ರದ ಕಾಂಗ್ರೆಸ್ (Congress) ಟಿಕೆಟ್ ಪ್ರಬಲ ಆಕಾಂಕ್ಷಿಯಾದ (Ticket Aspirant) ಮಾಜಿ ಶಾಸಕ ರಫಿಕ್ ಅಹ್ಮದ್‍ಗೆ (Rafiq Ahmed) ಸೋಲಿನ ಭೀತಿ ಮತ್ತೆ ಕಾಡ್ತಾ ಇದ್ಯಾ? ಹಣ ಇಲ್ಲ ಎಂಬ ನೆಪವೊಡ್ಡಿ ಕಣದಿಂದ ಹಿಂದೆ ಸರಿಯುತ್ತಿದ್ದಾರೆ ಎಂಬ ಗುಮಾನಿ ಹುಟ್ಟಿಕೊಂಡಿದೆ.

    ಕಾಂಗ್ರೆಸ್‍ನ ಇನ್ನೊಬ್ಬ ಟಿಕೆಟ್ ಆಕಾಂಕ್ಷಿ ಅಟ್ಟಿಕಾ ಬಾಬು (Attica Babu) ಮಾತು ಈ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಅಟ್ಟಿಕಾ ಗೋಲ್ಡ್ ಕಂಪನಿಯ ಮಾಲೀಕ ಅಟ್ಟಿಕಾ ಬಾಬು ಕೆಲದಿನಗಳ ಹಿಂದೆ ಮಸೀದಿಗಳಿಗೆ ಭೇಟಿ ಕೊಟ್ಟು ಆಡಿದ ಮಾತುಗಳು ರಫಿಕ್ ಅಹ್ಮದ್ ಸ್ಪರ್ಧೆ ಮಾಡಲ್ಲ ಎನ್ನುವುದಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ. ರಫಿಕ್ ಅಹ್ಮದ್ ನನಗೆ ಸಹಾಯ ಮಾಡುತ್ತಾರೆ. ಅವರ ಬಳಿ ಹಣ ಇಲ್ಲ. ಹಾಗಾಗಿ ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಅಟ್ಟಿಕಾ ಬಾಬು ಮಸೀದಿಯಲ್ಲಿ ಹೇಳಿದ್ದಾರೆ. ಅಟ್ಟಿಕಾ ಬಾಬು ಕೂಡ ಮುಸ್ಲಿಂ ಸಮುದಾಯದವನಾಗಿದ್ದು, ನನ್ನ ಹೆಸರು ಅಯೂಬ್ ನನ್ನ ತಂದೆ ಪಾಷ ಸಾಬ್ ಎಂದು ಹೇಳಿಕೊಂಡಿದ್ದಾರೆ. ಈ ವೀಡಿಯೋ ಸಾಕಷ್ಟು ವೈರಲ್ ಆಗಿದ್ದು ಸಂಚಲನ ಸೃಷ್ಟಿಸಿದೆ. ಇದನ್ನೂ ಓದಿ: Union Budget 2023ː ಕರ್ನಾಟಕಕ್ಕೆ ಬಂಪರ್ ಕೊಡುಗೆ – ರೈಲ್ವೆಗೆ ದಾಖಲೆಯ 7,561 ಕೋಟಿ ಅನುದಾನ

    ಹಾಲಿ ಶಾಸಕರಾಗಿದ್ದರೂ ಕಳೆದ ಬಾರಿ ರಫಿಕ್ ಅಹ್ಮದ್ ಮೂರನೇ ಸ್ಥಾನಕ್ಕೆ ಕುಸಿದಿದ್ದರು. ತುಮಕೂರು ನಗರದಲ್ಲಿ ಮುಸ್ಲಿಂ ಸಮುದಾಯದ ಮತ ಹೆಚ್ಚಿದ್ದರೂ ಕಾಂಗ್ರೆಸ್‍ನಿಂದ ಮುಸ್ಲಿಂ ಸಮುದಾಯದ ವ್ಯಕ್ತಿಗೆ ಟಿಕೆಟ್ ಕೊಟ್ಟರೆ ಗೆಲುವು ಕಷ್ಟವಾಗುತ್ತದೆ ಎಂಬ ಲೆಕ್ಕಾಚಾರ ಇದೆ. ಕಾಂಗ್ರೆಸ್‍ನಿಂದ ಹಿಂದೂ ವ್ಯಕ್ತಿಗೆ ಟಿಕೆಟ್ ಕೊಟ್ಟರೆ ಗೆಲುವು ಸುಲಭ ಎಂಬ ಸ್ಟ್ರಾಟಜಿಯನ್ನು ನಾಯಕರು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಶಾಸಕ ರಫಿಕ್ ಅಹ್ಮದ್‍ಗೆ ಸೋಲಿನ ಭೀತಿ ಕಾಡ್ತಾ ಇದ್ದು, ಚುನಾವಣೆಗೆ ಖರ್ಚು ಮಾಡಲು ಹಣ ಇಲ್ಲ ಎಂಬ ನೆಪವೊಡ್ಡಿ ಕಣದಿಂದ ಹಿಂದೆ ಸರಿಯುತ್ತಾರೆ ಎಂಬ ಮಾತು ಆಪ್ತ ಮೂಲಗಳಿಂದ ಕೇಳಿ ಬರುತ್ತಿದೆ. ಹಾಗಾಗಿ ತಮ್ಮ ಸಮುದಾಯದವರೇ ಆದ ಅಟ್ಟಿಕಾ ಗೋಲ್ಡ್ ಕಂಪನಿಯ ಅಟ್ಟಿಕಾ ಬಾಬು ಅವರ ಬೆಂಬಲಕ್ಕೆ ರಫಿಕ್ ಅಹ್ಮದ್ ನಿಂತಿದ್ದಾರೆ ಎನ್ನುವ ಸಂಗತಿ ಚರ್ಚೆ ಆಗುತ್ತಿದೆ. ಇದನ್ನೂ ಓದಿ: ಕರಗಿತು 10 ಲಕ್ಷ ಕೋಟಿ – ಶ್ರೀಮಂತರ ಪಟ್ಟಿಯಿಂದ 22ನೇ ಸ್ಥಾನಕ್ಕೆ ಜಾರಿದ ಅದಾನಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕುಮಾರಸ್ವಾಮಿಯನ್ನು ಬಿಟ್ಟು ನಾನು ಏನೂ ಮಾಡಲ್ಲ – ಟಿಕೆಟ್ ದಂಗಲ್ ಬಗ್ಗೆ ಮೌನ ಮುರಿದ ರೇವಣ್ಣ

    ಕುಮಾರಸ್ವಾಮಿಯನ್ನು ಬಿಟ್ಟು ನಾನು ಏನೂ ಮಾಡಲ್ಲ – ಟಿಕೆಟ್ ದಂಗಲ್ ಬಗ್ಗೆ ಮೌನ ಮುರಿದ ರೇವಣ್ಣ

    ಹಾಸನ: ನಾನು ಹೆಚ್‌.ಡಿ ಕುಮಾರಸ್ವಾಮಿಯನ್ನು (H.D Kumaraswamy) ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಕೆಲವರು ಭವಾನಿ ಅವರಿಗೆ ಟಿಕೆಟ್‌ ಕೊಡಿ ಅಂತಾರೆ, ಕೆಲವರು ಇನ್ನೊಬ್ಬರಿಗೆ ಕೊಡಿ ಅಂತಾರೆ. ಅದನ್ನೆಲ್ಲಾ ಕೂತು ತೀರ್ಮಾನ ಮಾಡೋದು ಪಕ್ಷ. ಕುಮಾರಸ್ವಾಮಿ ಮತ್ತು ಹೆಚ್‌.ಡಿ ದೇವೇಗೌಡರು (H.D DeveGowd)  ಏನ್ ತೀರ್ಮಾನ ಮಾಡ್ತಾರೋ ಅದೇ ಅಂತಿಮ ಎಂದು ಹಾಸನದ ಟಿಕೆಟ್ (Hassan Constituency Ticket) ಗೊಂದಲದ ಚರ್ಚೆಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ (H.D Revanna) ತೆರೆ ಎಳೆದಿದ್ದಾರೆ.

    ಹೊಳೆನರಸೀಪುರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಕುಮಾರಸ್ವಾಮಿ ಮತ್ತು ದೇವೇಗೌಡರು ರಾಜ್ಯದ ಅಧ್ಯಕ್ಷರು ಜಿಲ್ಲಾ ಮುಖಂಡರು ಏನು ತೀರ್ಮಾನ ಮಾಡ್ತಾರೆ ಅದೇ ಅಂತಿಮ. ನಾನು ಕುಮಾರಸ್ವಾಮಿಯನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಕೆಲವರು ಭವಾನಿ (Bhavani) ಅವರಿಗೆ ಕೊಡಿ ಅಂತಾರೆ, ಕೆಲವರು ಇನ್ನೊಬ್ಬರಿಗೆ ಕೊಡಿ ಅಂತಾರೆ. ಅದನ್ನೆಲ್ಲಾ ಕೂತು ತೀರ್ಮಾನ ಮಾಡೋದು ಪಕ್ಷ. ನಾನಾಗಲಿ, ಸೂರಜ್ ಆಗಲಿ, ಪ್ರಜ್ವಲ್ ಆಗಲಿ ಯಾರೂ ತೀರ್ಮಾನ ಮಾಡುವ ಪ್ರಶ್ನೆ ಇಲ್ಲ. ಪಕ್ಷದ ಹೈಕಮಾಂಡ್ ಏನು ಹೇಳುತ್ತೆ ಅದಕ್ಕೆ ಎಲ್ಲರೂ ಬದ್ಧರಾಗಿ ಇರಬೇಕಾಗುತ್ತೆ. ಕುಮಾರಸ್ವಾಮಿ ಮತ್ತೆ ದೇವೇಗೌಡರು ಇಬ್ರಾಹಿಂ ಸಾಹೇಬ್ರು ಜಿಲ್ಲೆಯ ಶಾಸಕರು ನಮ್ಮ ಏಳು ಸೀಟ್ ತೀರ್ಮಾನ ಮಾಡ್ತಾರೆ. ನಮ್ಮ ಜಿಲ್ಲೆಯ ಅಭಿವೃದ್ಧಿ ಮುಖ್ಯ. ಕುಮಾರಸ್ವಾಮಿ, ದೇವೇಗೌಡರ ತೀರ್ಮಾನವೇ ಅಂತಿಮ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಮಹಿಳಾ ಶಕ್ತಿಗೆ ಮತ್ತೊಂದು ಭರವಸೆ ಭವಾನಿ ಅಮ್ಮ – ಸಾಮಾಜಿಕ ಜಾಲತಾಣದಲ್ಲಿ JDS ಬೆಂಬಲಿಗರ ಬ್ಯಾಟಿಂಗ್

    ಕುಮಾರಸ್ವಾಮಿ ಮತ್ತು ರೇವಣ್ಣನನ್ನು ಯಾವುದೇ ಕಾರಣದಿಂದ ಬೇರ್ಪಡಿಸಲು ಆಗಲ್ಲ. ಯಾರಾದ್ರು ಬೇರ್ಪಡಿಸುತ್ತೇನೆ ಎಂದುಕೊಂಡಿದ್ದರೆ ಅದು ಭ್ರಮೆ. ನಮ್ಮ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರ ದೇವೇಗೌಡರು, ಕುಮಾರಸ್ವಾಮಿ ರಾಜ್ಯದ ಅಧ್ಯಕ್ಷ, ಸಿ.ಎಂ ಇಬ್ರಾಹಿಂ ತೀರ್ಮಾನ ಮಾಡ್ತಾರೆ. ಎಲ್ಲರೂ ಕೂತು ಚರ್ಚೆ ಮಾಡಿ ಜನರ ವಿಶ್ವಾಸ, ಸ್ಥಳೀಯ ಶಾಸಕರ ಅಭಿಪ್ರಾಯ ಪಡೆಯುತ್ತಾರೆ. ನಾನೊಬ್ಬನೇ ತೀರ್ಮಾನ ಮಾಡುವ ಪ್ರಶ್ನೆಯೇ ಇಲ್ಲಾ. ಕಳೆದ ಹತ್ತು ವರ್ಷದಿಂದ ಹಾಸನ ಜಿಲ್ಲೆ ಅಭಿವೃದ್ಧಿ ಆಗಿಲ್ಲ. ಏರ್‌ಪೋರ್ಟ್‌  ನಿಲ್ಲಿಸಿದ್ದಾರೆ. ಐಐಟಿ ಜಾಗ ಬೇರೆಯದಕ್ಕೆ ಬಳಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ತಾರಕಕ್ಕೇರಿದ ಹಾಸನ `ಟಿಕೆಟ್’ ಸಂಘರ್ಷ – ಜೆಡಿಎಸ್‍ನಲ್ಲಿ ಕುಟುಂಬ ಕದನ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕರ್ನಾಟಕದ ಮಹಿಳಾ ಶಕ್ತಿಗೆ ಮತ್ತೊಂದು ಭರವಸೆ ಭವಾನಿ ಅಮ್ಮ – ಸಾಮಾಜಿಕ ಜಾಲತಾಣದಲ್ಲಿ JDS ಬೆಂಬಲಿಗರ ಬ್ಯಾಟಿಂಗ್

    ಕರ್ನಾಟಕದ ಮಹಿಳಾ ಶಕ್ತಿಗೆ ಮತ್ತೊಂದು ಭರವಸೆ ಭವಾನಿ ಅಮ್ಮ – ಸಾಮಾಜಿಕ ಜಾಲತಾಣದಲ್ಲಿ JDS ಬೆಂಬಲಿಗರ ಬ್ಯಾಟಿಂಗ್

    – ಹಾಸನ ಟಿಕೆಟ್ ದಂಗಲ್ ಬಗ್ಗೆ ತೀವ್ರ ಚರ್ಚೆ

    ಹಾಸನ: ವಿಧಾನಸಭಾ ಕ್ಷೇತ್ರದ (Assembly Election) ಟಿಕೆಟ್‍ಗಾಗಿ ಜೆಡಿಎಸ್‍ನಲ್ಲಿ (JDS) ನಡೆಯುತ್ತಿರುವ ಫೈಟ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ. ಈ ನಡುವೆ ಕರ್ನಾಟಕದ ಮಹಿಳಾ ಶಕ್ತಿಗೆ ಮತ್ತೊಂದು ಭರವಸೆ ಅಮ್ಮ. ಹಾಸನದ ಮುಂದಿನ ಎಂಎಲ್‍ಎ ಭವಾನಿ ರೇವಣ್ಣ (Bhavani Revanna) ಇದು ಮಹಿಳೆಯರ ಕೋರಿಕೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಭವಾನಿ ರೇವಣ್ಣ ಪರ ಬ್ಯಾಟ್ ಬೀಸಿದ್ದಾರೆ.

    ಪಕ್ಷ ಅಧಿಕಾರಕ್ಕೆ ತಂದು ಗೌಡರ ಕನಸಿನ ಪಕ್ಷ ಉಳಿಸಲು ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ಹೋರಾಡುತ್ತಿದ್ದಾರೆ. ತಮ್ಮ ಆರೋಗ್ಯ ಲೆಕ್ಕಿಸದೆ ಕುಮಾರಸ್ವಾಮಿ ಹೋರಾಡುತ್ತಿದ್ದರೆ ಇಲ್ಲಿ ಒಂದು ಸ್ಥಾನಕ್ಕಾಗಿ ಅವರ ಮನಸ್ಸಿಗೆ ನೋವು ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಜೆಡಿಎಸ್ ಕಾರ್ಯಕರ್ತರು ನಿಂತಿರೋದು ಕುಮಾರಸ್ವಾಮಿ ಹಾಗೂ ದೇವೇಗೌಡರು ಎನ್ನುವ ಶಕ್ತಿಯ ಹಿಂದೆ, ನಮ್ಮ ಗುರಿ ಕುಮಾರಸ್ವಾಮಿ ಸಿಎಂ ಮಾಡೋದು, ಜೆಡಿಎಸ್‍ಗೆ ಇವತ್ತು ಜನ ಬೆಂಬಲ ಇರೋದಕ್ಕೆ ಕುಮಾರಸ್ವಾಮಿ ಕಾರಣವೇ ಹೊರತು ರೇವಣ್ಣ ಮಕ್ಕಳಲ್ಲ. ತಮ್ಮ ಮಾತಿನ ಮೂಲಕ ಕುಮಾರಸ್ವಾಮಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿರುವ ರೇವಣ್ಣ (H.D Revanna)  ಪುತ್ರರ ವಿರುದ್ಧ ಕೆಲ ಬೆಂಬಲಿಗರು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ತಾರಕಕ್ಕೇರಿದ ಹಾಸನ `ಟಿಕೆಟ್’ ಸಂಘರ್ಷ – ಜೆಡಿಎಸ್‍ನಲ್ಲಿ ಕುಟುಂಬ ಕದನ

    ಈ ಎಲ್ಲಾ ಬೆಳವಣಿಗೆ ನೋಡಿದ್ರೆ ಜೆಡಿಎಸ್ ಸರ್ವನಾಶಕ್ಕೆ ಹಾಸನದವರು ಮುನ್ನುಡಿ ಬರೆಯುತ್ತಿದ್ದಾರೆ. ಕುಮಾರಸ್ವಾಮಿ ಅವರ ಮಾತಿನಂತೆ ಎಲ್ಲರೂ ನಡೆಯಲಿ ಎಂದು ಹಾಸನ ಟಿಕೆಟ್ ದಂಗಲ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ಬೆಂಬಲಿಗರು ಪೋಸ್ಟ್ ಮಾಡಿದ್ದಾರೆ. ಇತ್ತ ಹಾಸನಕ್ಕೆ ಭವಾನಿ ರೇವಣ್ಣಗೆ ಟಿಕೆಟ್ ಕೊಡಬೇಕೆಂದು ಕಾರ್ಯಕರ್ತರು ಪಟ್ಟು ಹಿಡಿದಿದ್ದು, ಭವಾನಿ ಪರ ಟ್ರೆಂಡ್ ಸೆಟ್ ಮಾಡುತ್ತಿದ್ದಾರೆ. ಕರ್ನಾಟಕದ ಅಮ್ಮ ಭವಾನಿ ರೇವಣ್ಣ ಎಂದು ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಫೋಟೋ ಜೊತೆ ಭವಾನಿ ಫೋಟೋ ಸೇರಿಸಿ ವೈರಲ್ ಮಾಡಿದ್ದಾರೆ. ಇದನ್ನೂ ಓದಿ: ಸ್ವತಂತ್ರ ಸರ್ಕಾರವೇ ನನ್ನ ಗುರಿ; ಅನುಗ್ರಹಕ್ಕೆ ರಾಯರ ಬಳಿ ಪ್ರಾರ್ಥಿಸಿದ್ದೇನೆ – ಹೆಚ್‌ಡಿಕೆ

    ಕರ್ನಾಟಕದ ಮಹಿಳಾ ಶಕ್ತಿಗೆ ಮತ್ತೊಂದು ಭರವಸೆ ಅಮ್ಮ. ಹಾಸನದ ಮುಂದಿನ ಎಂಎಲ್‍ಎ ಭವಾನಿ ರೇವಣ್ಣ ಇದು ಮಹಿಳೆಯರ ಕೋರಿಕೆ ಎಂದು ಹಕ್ಕೊತ್ತಾಯದ ಪೋಸ್ಟ್‌ಗಳು ವೈರಲ್ ಆಗಿವೆ. ದಿನೇ ದಿನೇ ಭವಾನಿ ರೇವಣ್ಣಗೆ ಟಿಕೆಟ್ ಕೊಡಬೇಕೆಂದು ಭವಾನಿ ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ. ಮತ್ತೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ನಿಖಿಲ್ ಮತ್ತು ಪ್ರಜ್ವಲ್, ಸೂರಜ್ ಅಭಿಮಾನಿಗಳ ನಡುವೆ ಮಾತಿನ ಸಮರ ಜೋರಾಗಿದೆ. ಸೂರಜ್, ಪ್ರಜ್ವಲ್ ಚೈಲ್ಡ್ ರೀತಿ ಮಾತನಾಡುತ್ತಾರೆ ಎಂದು ನಿಖಿಲ್ ಅಭಿಮಾನಿಗಳು ಕಿಡಿ ಕಾರಿದರೆ, ಜೆಡಿಎಸ್‍ಗೆ ಮುಖ್ಯ ಪವರ್ ಅಂದ್ರೆ ನಮ್ ಸೂರಜ್ ಬಾಸ್, ಹಾಸನದಲ್ಲಿ ಭವಾನಿ ಅಕ್ಕ ಬಿಟ್ಟು ಬೇರೆ ಯಾರು ಬಂದರು ಸೋಲು ಖಚಿತ ಎಂದು ತಿರುಗೇಟು ನೀಡಿದ್ದಾರೆ. ಭವಾನಿ ಅವರು ಹಾಸನ ಬಿಟ್ಟು ಉತ್ತರ ಕರ್ನಾಟಕದಲ್ಲಿ ನಿಲ್ಲಲಿ ಎನ್ನೋರು ನಿಖಿಲ್‍ಗೂ ರಾಮನಗರ ಬಿಟ್ಟು ಉತ್ತರ ಕರ್ನಾಟಕದಲ್ಲಿ ನಿಲ್ಲೋಕೆ ಹೇಳಿ ಎಂಬ ಆಕ್ರೋಶದ ಮಾತುಗಳು ಕೇಳಿ ಬರುತ್ತಿವೆ. ನಾಯಕರ ಟಿಕೆಟ್ ಫೈಟ್‍ನಿಂದ ಕಾರ್ಯಕರ್ತರ ನಡುವೆ ಮಾತಿನ ಸಮರವೇ ನಡೆಯುತ್ತಿದೆ. ತಮ್ಮ ತಮ್ಮ ನಾಯಕರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • RSS ನಾಯಕರ ಜೊತೆ ಅಮಿತ್ ಶಾ ರಹಸ್ಯ ಸಭೆ – ಏನಿದರ ಗುಟ್ಟು..!

    RSS ನಾಯಕರ ಜೊತೆ ಅಮಿತ್ ಶಾ ರಹಸ್ಯ ಸಭೆ – ಏನಿದರ ಗುಟ್ಟು..!

    ಬೆಳಗಾವಿ: ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ (Amit Shah) ನಿನ್ನೆ ರಾತ್ರಿ ಬಿಜೆಪಿ (BJP) ನಾಯಕರ ಹೈವೋಲ್ಟೇಜ್ ಸಭೆಗೂ ಮುನ್ನ ಆರ್‌ಎಸ್‌ಎಸ್‌ನ (RSS) 6 ಹಿರಿಯ ನಾಯಕರ ಜೊತೆ ರಹಸ್ಯ ಸಭೆ ನಡೆಸಿದ್ದಾರೆ ಎನ್ನಲಾಗಿದೆ.

    ನಗರದ ಕೊಲ್ಲಾಪುರ ಸರ್ಕಲ್ ಬಳಿ ಖಾಸಗಿ ಹೋಟೆಲ್‍ಗೆ ಅಮಿತ್ ಶಾ ಆಗಮನಕ್ಕೂ ಮುನ್ನವೇ ಆರ್‌ಎಸ್‌ಎಸ್‌ ನಾಯಕರು ಆಗಮಿಸಿದ್ದರು. ಈ ವೇಳೆ ಉತ್ತರ ಕರ್ನಾಟಕ ಪ್ರಾಂತದ ಆರ್‌ಎಸ್‌ಎಸ್‌ ನಾಯಕರ ಜೊತೆಗೆ ಅಮಿತ್ ಶಾ ರಹಸ್ಯ ಸಭೆ ನಡೆಸಿದ್ದಾರೆ. ಚುನಾವಣೆ ವರ್ಷ ಹಿನ್ನೆಲೆ ಆರ್‌ಎಸ್‌ಎಸ್‌ ಕಾರ್ಯಕರ್ತರ ಜೊತೆಗಿನ ಮಾತುಕತೆ ಮಹತ್ವ ಪಡೆದುಕೊಂಡಿದೆ. ಇದನ್ನೂ ಓದಿ: ಬೆಳಗಾವಿ ನಾಯಕರಿಗೆ ಅಮಿತ್‌ ಶಾ ಒಗ್ಗಟ್ಟಿನ ಪಾಠ – 15 ಸ್ಥಾನ ಗೆಲ್ಲುವ ಗುರಿ

    ಈ ವೇಳೆ ಆರ್‌ಎಸ್‌ಎಸ್‌ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು ಕಿತ್ತೂರು ಕರ್ನಾಟಕ ಭಾಗದಲ್ಲಿ ಬಿಜೆಪಿ ಅತಿ ಹೆಚ್ಚು ಸೀಟ್ ಗೆಲ್ಲುವ ವಿಶ್ವಾಸವಿದೆ. ಆದ್ರೆ ನಾಯಕರಲ್ಲಿ ಒಗ್ಗಟ್ಟಿನ ಅಗತ್ಯವಿದೆ ಎಂದು ಆರ್‌ಎಸ್‌ಎಸ್‌ ನಾಯಕರು ಸಲಹೆ ನೀಡಿದ್ದಾರೆ. ಚುನಾವಣೆ ತಂತ್ರಗಾರಿಕೆ, ಮಾರ್ಗಸೂಚಿ ಹಾಗೂ ಆರ್‌ಎಸ್‌ಎಸ್‌ ಜೊತೆ ಪಕ್ಷದ ನಾಯಕರ ಸಮನ್ವಯತೆ ಬಗ್ಗೆ ಚರ್ಚೆ ನಡೆದಿದ್ದು, ಕೆಲ ನಾಯಕರ ಸಮನ್ವಯತೆ ಕೊರತೆ ಬಗ್ಗೆ ಅಮಿತ್ ಶಾ ಬಳಿ ಆರ್‌ಎಸ್‌ಎಸ್‌ ನಾಯಕರ ದೂರು ನೀಡಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ. ಇದನ್ನೂ ಓದಿ: ತಾರಕಕ್ಕೇರಿದ ಹಾಸನ `ಟಿಕೆಟ್’ ಸಂಘರ್ಷ – ಜೆಡಿಎಸ್‍ನಲ್ಲಿ ಕುಟುಂಬ ಕದನ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತಾರಕಕ್ಕೇರಿದ ಹಾಸನ `ಟಿಕೆಟ್’ ಸಂಘರ್ಷ – ಜೆಡಿಎಸ್‍ನಲ್ಲಿ ಕುಟುಂಬ ಕದನ

    ತಾರಕಕ್ಕೇರಿದ ಹಾಸನ `ಟಿಕೆಟ್’ ಸಂಘರ್ಷ – ಜೆಡಿಎಸ್‍ನಲ್ಲಿ ಕುಟುಂಬ ಕದನ

    ಹಾಸನ: ಜೆಡಿಎಸ್ (JDS) ಭದ್ರಕೋಟೆ ಹಾಸನ (Hassan) ಜಿಲ್ಲೆಯಲ್ಲಿ ಟಿಕೆಟ್ ಸಂಘರ್ಷ ತಾರಕಕ್ಕೇರಿದೆ. ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ (H.D DeveGowda) ಕುಟುಂಬದಲ್ಲಿ ಇದೀಗ ಟಿಕೆಟ್ ಫೈಟ್ ಜೋರಾಗಿದೆ.

    ಬಿಜೆಪಿ (BJP) ತೆಕ್ಕೆಯಲ್ಲಿರುವ ಹಾಸನ ವಿಧಾನಸಭಾ ಕ್ಷೇತ್ರವನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H.D Kumaraswamy) ದಿ.ಎಚ್.ಎಸ್.ಪ್ರಕಾಶ್ ಪುತ್ರ ಹೆಚ್.ಪಿ.ಸ್ವರೂಪ್‍ಗೆ (H.P Swaroop) ಟಿಕೆಟ್ ನೀಡಲು ಒಲವು ತೋರಿಸಿದ್ದರು. ಭವಾನಿ ರೇವಣ್ಣ (Bhavani Revanna) ಯಾವಾಗ ಬಹಿರಂಗವಾಗಿ ನನ್ನನ್ನೇ ಅಭ್ಯರ್ಥಿ ಮಾಡ್ತಾರೆ ಎಂದು ಸ್ವಯಂ ಘೋಷಣೆ ಮಾಡಿಕೊಂಡರು ಅಲ್ಲಿಂದ ಜೆಡಿಎಸ್ ಪಾಳಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಇದನ್ನೂ ಓದಿ: ಬೆಳಗಾವಿ ನಾಯಕರಿಗೆ ಅಮಿತ್‌ ಶಾ ಒಗ್ಗಟ್ಟಿನ ಪಾಠ – 15 ಸ್ಥಾನ ಗೆಲ್ಲುವ ಗುರಿ

    123 ಸೀಟ್ ಗೆದ್ದು ಅಧಿಕಾರಕ್ಕೆ ಬರುತ್ತೇವೆ ಅಂತಿರೋ ಜೆಡಿಎಸ್‍ನಲ್ಲಿ ಹಾಸನದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ವಿಚಾರವಾಗಿ ಕುಟುಂಬ ಕದನ ಭುಗಿಲೇಳುವಂತೆ ಮಾಡಿದೆ. ಟಿಕೆಟ್ ಬೇಕೇ ಬೇಕು ಎಂದು ಭವಾನಿ ರೇವಣ್ಣ ಪಟ್ಟು ಹಿಡಿದಿದ್ದಾರೆ. ಆದ್ರೆ ಇದಕ್ಕೆ ಹೆಚ್.ಡಿ.ಕುಮಾರಸ್ವಾಮಿ ಅಡ್ಡಿಯಾಗಿರುವುದು ಹೆಚ್.ಡಿ.ರೇವಣ್ಣ (H.D Revanna) ಕುಟುಂಬಕ್ಕೆ ನುಂಗಲಾರದ ತುತ್ತಾಗಿದೆ. ಆದರೂ ಹಠ ಬಿಡದ ಭವಾನಿ ಹಾಸನ ಕ್ಷೇತ್ರದಾದ್ಯಂತ ಮತ್ತಷ್ಟು ಆಕ್ಟೀವ್ ಆಗಿ ಓಡಾಡ್ತಿದ್ದಾರೆ. ತಾಯಿಗೆ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಹಾಗೂ ಎಂಎಲ್‍ಸಿ ಸೂರಜ್ ರೇವಣ್ಣ (Suraj Revanna) ಬೆನ್ನೆಲುಬಾಗಿ ನಿಂತಿದ್ದಾರೆ.

    ಭವಾನಿ ರೇವಣ್ಣ-ಕುಮಾರಸ್ವಾಮಿ ಕಿತ್ತಾಟಕ್ಕೆ ಬ್ರೇಕ್ ಹಾಕಲು, ಕುಟುಂಬದ ಹಿತ ಕಾಯಲು ದೇವೇಗೌಡರ ಮಧ್ಯಪ್ರವೇಶ ಆಗಿದೆ. ನಾನು ಹೇಳೋವರೆಗೂ ಹಾಸನ ಟಿಕೆಟ್ ಕುರಿತು ಯಾರು ಮಾತನಾಡಬಾರದು ಅಂತ ದೇವೇಗೌಡರು ಫರ್ಮಾನು ಹೊರಡಿಸಿದ್ದಾರೆ ಎನ್ನಲಾಗಿದೆ. ಆದಾಗ್ಯೂ, ದೊಡ್ಡಗೌಡರ ಎಚ್ಚರಿಕೆ ನಡುವೆಯೂ ಚಿಕ್ಕಪ್ಪ ಹೆಚ್‍ಡಿಕೆಗೆ ಭವಾನಿ ರೇವಣ್ಣ ಪುತ್ರ ಎಂಎಲ್‍ಸಿ ಸೂರಜ್ ರೇವಣ್ಣ ಟಕ್ಕರ್ ಕೊಟ್ಟಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಎಲ್ಲಾ ನಾನೇ ನಿರ್ಧಾರ ಮಾಡ್ತೀನಿ- ದೊಡ್ಡಗೌಡ್ರ ಗುಟುರಿಗೆ ಎಲ್ಲರೂ ಗಪ್ ಚಿಪ್

    ಎಚ್‍ಡಿಕೆ ವಿರೋಧದ ನಡುವೆ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಓಡಾಟ ಜಾಸ್ತಿ ಆಗುತ್ತಿದ್ದಂತೆ ಹೆಚ್.ಪಿ.ಸ್ವರೂಪ್ ಕೂಡ ಹಳ್ಳಿಹಳ್ಳಿಗೆ ತೆರಳಿ ಪ್ರಚಾರದಲ್ಲಿ ತೊಡಗಿದ್ದಾರೆ. ಪ್ರತಿನಿತ್ಯ ಕಾರ್ಯಕರ್ತರು, ಆಪ್ತರ ಸಭೆ ನಡೆಸಿ ಟಿಕೆಟ್ ಕೈತಪ್ಪಿದ್ರೆ ಮುಂದಿನ ನಡೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಹೆಚ್‍ಡಿಕೆ ಟಿಕೆಟ್ ನೀಡಿದರು ಹೆಚ್.ಡಿ.ರೇವಣ್ಣ ಎದುರು ಹಾಕಿಕೊಂಡು ಚುನಾವಣಾ ಅಖಾಡಕ್ಕೆ ಇಳಿದು ಜಯಗಳಿಸುವುದು ಸ್ವರೂಪ್‍ಗೆ ಕಷ್ಟಕರವಾಗಿದ್ದು, ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ.

    ಒಟ್ಟಿನಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಗೊಂದಲ ಫ್ಯಾಮಿಲಿ ಫೈಟ್ ಆಗಿ ಮಾರ್ಪಟ್ಟಿದೆ. ಭವಾನಿ ರೇವಣ್ಣಗೆ ಟಿಕೆಟ್ ಕೊಡಲು ಹೆಚ್‍ಡಿಕೆ ವಿರೋಧ ವ್ಯಕ್ತಪಡಿಸುತ್ತಿದ್ದರೂ. ರೇವಣ್ಣ ನಡೆ ಮಾತ್ರ ನಿಗೂಢವಾಗಿದೆ. ಆದ್ರೆ ದೇವೇಗೌಡರು ಯಾರಿಗೆ ಮಣೆ ಹಾಕ್ತಾರೆ ಅನ್ನೋದು ಕುತೂಹಲ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k