Tag: Karnataka Assembly Election 2018

  • ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯನೇ ನೇರ ಕಾರಣ, ಪಕ್ಷದ ಪ್ರತಿಯೊಬ್ಬರಿಗೂ ಗೊತ್ತು: ಕೋಳಿವಾಡ

    ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯನೇ ನೇರ ಕಾರಣ, ಪಕ್ಷದ ಪ್ರತಿಯೊಬ್ಬರಿಗೂ ಗೊತ್ತು: ಕೋಳಿವಾಡ

    ಹಾವೇರಿ: ಸಿದ್ದರಾಮಯ್ಯ ನನಗಿಂತ 13 ವರ್ಷದ ಬಚ್ಚಾ, ಅವನಿಂದ ಕಾಂಗ್ರೆಸ್‍ಗೆ ಏನು ಅನುಕೂಲವಾಗಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.

    ನಾನು ಸೋತಿದ್ದೇನೆ. ಆದರೆ, ಪಕ್ಷವನ್ನು ಬಿಟ್ಟು ಹೋಗುವುದಿಲ್ಲ. 1996 ರಿಂದ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯನೇ ನೇರ ಕಾರಣ. ಇದು ಪಕ್ಷದ ಪ್ರತಿಯೊಬ್ಬರಿಗೂ ಗೊತ್ತು ಎಂದು ಅವರು ದೂರಿದ್ದಾರೆ.

    ನನ್ನ ಸೋಲಿಗೆ ಸಿಎಂ ಸಿದ್ದರಾಮಯ್ಯ ಪ್ರಚಾರ ಮಾಡದಿರುವುದೇ ಕಾರಣ. ಅವರ ಮೇಲೆ ಯಾವ ಒತ್ತಡ ಇತ್ತೋ ನನಗೆ ಗೊತ್ತಿಲ್ಲ. ನಾನು ಹರಕೆಯೆ ಕುರಿ ಆಗಿಲ್ಲ, ಬಲಿಪಶು ಆಗಿಲ್ಲ. ರಾಜಕೀಯದಲ್ಲಿ ಏನು ಬೇಕಾದ್ರೂ ಆಗಬಹುದು ಅಂತ ತಮ್ಮ ಪರ ಪ್ರಚಾರಕ್ಕೆ ಬಾರದ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಬಾಗೂರು ಮಂಜೇಗೌಡ ಪರೋಕ್ಷ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

  • ಯಾರೇ ಏನೇ ಹೇಳಿದ್ರೂ ಸರ್ಕಾರ ರಚನೆ ಮಾಡೋದು ನಾವೇ: ಜಾವಡೇಕರ್ ತಿರುಗೇಟು

    ಯಾರೇ ಏನೇ ಹೇಳಿದ್ರೂ ಸರ್ಕಾರ ರಚನೆ ಮಾಡೋದು ನಾವೇ: ಜಾವಡೇಕರ್ ತಿರುಗೇಟು

    ಬೆಂಗಳೂರು: ಎರಡು ಪಕ್ಷಗಳು ಸುಪ್ರೀಂ ಕೋರ್ಟ್ ಗೆ ಹೋದರೆ ಹೋಗಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರಿಗೆ ಈ ಹಕ್ಕು ಇರಬಹುದು. ಆದರೆ, ಸರ್ಕಾರವನ್ನು ರಚನೆ ಮಾಡವವರು ನಾವೇ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

    ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ನಡೆ ಅವರ ಶಾಸಕರಲ್ಲಿ ಅಸಮಾಧಾನ ಹುಟ್ಟಿಸಿದೆ. ಹೀಗಾಗಿ, ಅವರು ಶಾಸಕಾಂಗ ಸಭೆಗೆ ಹಾಜರಾಗಿಲ್ಲ. ಇದರಿಂದಾಗಿ ಹೆಚ್.ಡಿ.ಕುಮಾರಸ್ವಾಮಿ ಅವರು ಈಗ ಡಿಸ್ಟರ್ಬ್ ಆಗಿದ್ದಾರೆ. ಇದನ್ನ ಅರಿಯದೇ ಬಿಜೆಪಿಯನ್ನು ದೂರುವುದು ಸರಿಯಲ್ಲ ಎಂದರು.

    ನಾವು ಹೆಚ್ಚು ಕ್ಷೇತ್ರದಲ್ಲಿ ಜಯ ಗಳಿಸಿದ್ದೇವೆ. ಸರ್ಕಾರ ರಚನೆ ನಮ್ಮ ಸಂವಿಧಾನಾತ್ಮಕ ಹಕ್ಕು. ನಮ್ಮ ಮನವಿಯನ್ನು ರಾಜ್ಯಪಾಲರು ಮಾನ್ಯ ಮಾಡುತ್ತಾರೆ ಎನ್ನುವ ವಿಶ್ವಾಸ ನಮಗಿದೆ. ಶಾಸಕರ ಕುದುರೆ ವ್ಯಾಪಾರ ಸಂಸ್ಕೃತಿಯನ್ನು ಬಿಜೆಪಿ ಮಾಡುವುದಿಲ್ಲ. ಈಗಾಗಲೇ ಕಾಂಗ್ರೆಸ್ ಶಾಸಕರಲ್ಲಿಯೇ ಒಡಕು ಉಂಟಾಗಿದೆ ಇದನ್ನ ಅವರು ಅರಿಯಲಿ ಎಂದು ಜಾಡವೇಕರ್ ತಿರುಗೇಟು ನೀಡಿದರು.

  • 11.30ಕ್ಕೆ ಸರಿಯಾಗಿ ಎಚ್‍ಡಿಕೆಯನ್ನು ಆಯ್ಕೆ ಮಾಡಿದ್ದು ಯಾಕೆ: ರೇವಣ್ಣ ಹೇಳ್ತಾರೆ ಓದಿ

    11.30ಕ್ಕೆ ಸರಿಯಾಗಿ ಎಚ್‍ಡಿಕೆಯನ್ನು ಆಯ್ಕೆ ಮಾಡಿದ್ದು ಯಾಕೆ: ರೇವಣ್ಣ ಹೇಳ್ತಾರೆ ಓದಿ

    ಬೆಂಗಳೂರು: ಜೆಡಿಎಸ್‍ನ ಎಲ್ಲ ಸದಸ್ಯರು ಹೆಚ್.ಡಿ.ಕುಮಾರಸ್ವಾಮಿ ಅವರನ್ನು ನಮ್ಮ ಪಕ್ಷದ ಶಾಸಕಾಂಗ ಸಭೆಯ ನಾಯಕರನ್ನಾಗಿ ಆಯ್ಕೆ ಮಾಡಿದ್ದೇವೆ ಎಂದು ಹೆಚ್.ಡಿ ರೇವಣ್ಣ ಹೇಳಿದ್ದಾರೆ.

    ಶಾಂಗ್ರಿಲಾ ಹೋಟೆಲ್‍ನಲ್ಲಿ ಜೆಡಿಎಸ್ ಶಾಸಕಾಂಗ ಸಭೆ ಬಳಿಕ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡುವ ವೇಳೆ ಎಚ್‍ಡಿ. ರೇವಣ್ಣ ಇಂದು “11.30ಕ್ಕೆ ಸರಿಯಾಗಿ” ಹೆಚ್ ಡಿ ಕುಮಾರಸ್ವಾಮಿ ಅವರನ್ನು ಜೆಡಿಎಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ ಅಂತ ಹೇಳಿದ್ರು. ಈ ವೇಳೆ ಅದ್ಯಾಕೆ 11.30ಕ್ಕೆ ಆಯ್ಕೆ ಮಾಡಿದ್ದು ಎಂದು ಪತ್ರಕರ್ತರು ಪ್ರಶ್ನಿಸಿದ್ದಕ್ಕೆ ರೇವಣ್ಣ, ಏಯ್.. ಅದೆಲ್ಲಾ ಗೊತ್ತಲ್ಲ ನಿಮಗೆ. ಈವಾಗ ಎಲ್ಲ ಟೈಂ ನೋಡಿಕೊಂಡು ಕುತ್ಕೊತ್ತಾರ ಎಂದು ಹಾಸ್ಯದ ಧಾಟಿಯಲ್ಲಿ ಉತ್ತರ ನೀಡಿದರು.

    ಇದಕ್ಕೂ ಮುನ್ನ, ಒಕ್ಕಲಿಗರ ಸಂಘದ ಅಧ್ಯಕ್ಷ ಬೆಟ್ಟೇಗೌಡರ ನಿವಾಸಕ್ಕೆ ರೇವಣ್ಣ ಭೇಟಿ ನೀಡಿದ್ದರು. ಈ ವೇಳೆ ಅವರು, ಯಾವುದೇ ಹೈಜಾಕ್ ಆಗಲಿ ಏನೇ ಆಗಲಿ, ಹೆಚ್.ಡಿ.ಕುಮಾರಸ್ವಾಮಿ ಹೇಳಿದಂತೆ ಸರ್ಕಾರ ರಚನೆಯಾಗುತ್ತದೆ. ಅವರೇ ಸಿಎಂ ಆಗುವುದು ನಿಶ್ಚಿತ ಎಂದರು.

    ಈ ಬಾರಿ ನಮ್ಮ ಪಕ್ಷದಿಂದ ಆಯ್ಕೆಯಾದ 38 ಶಾಸಕರು ಎಲ್ಲಿಯೂ ಹೋಗುವುದಿಲ್ಲ. ನಿಷ್ಠೆಯಿಂದ ಪಕ್ಷದ ಜೊತೆಗಿರುತ್ತಾರೆ. ಕುಮಾರಸ್ವಾಮಿ ಸಿಎಂ ಆಗೋದು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ದೇವೇಗೌಡರು ಈಗಾಗಲೇ ಜೆಡಿಎಸ್ ಶಾಸಕರ ಜವಾಬ್ದಾರಿಯನ್ನು ಹೇಗೆ ನಿರ್ವಹಿಸಬೇಕು ಎಂದು ಶ್ರೀಕಂಠೇಗೌಡರಿಗೆ ನಿರ್ದೇಶನ ನೀಡಿದ್ದಾರೆ. ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಕೇಳಿಬಂದಿದೆ.

    ಮೇ 18ರಂದು ಎಚ್‍ಡಿ ದೇವೇಗೌಡ 85ನೇ ವರ್ಷದ ಹುಟ್ಟುಹಬ್ಬವನ್ನು ಆಚಿರಿಸಕೊಳ್ಳಲಿದ್ದಾರೆ. ಹೀಗಾಗಿ ಚುನಾವಣೆಗೂ ಮುನ್ನ ನಡೆದ ಪ್ರಚಾರ ಕಾರ್ಯಕ್ರಮಗಳಲ್ಲಿ ಮೇ 18 ಶುಕ್ರವಾರದಂದು ನಾನು ಪ್ರಮಾಣವಚನ ಸ್ವೀಕರಿಸುತ್ತೇನೆ. ಮುಂದಿನ ಮುಖ್ಯಮಂತ್ರಿ ನಾನೇ ಎಂದು ಹೇಳಿದ್ದರು.

    https://www.youtube.com/watch?v=YO0Wcn5mxCM

  • ಹೈಜಾಕ್ ಆಗಲಿ, ಏನೇ ಆಗಲಿ ಕುಮಾರಸ್ವಾಮಿಯೇ ಸಿಎಂ-  ಹೆಚ್.ಡಿ.ರೇವಣ್ಣ

    ಹೈಜಾಕ್ ಆಗಲಿ, ಏನೇ ಆಗಲಿ ಕುಮಾರಸ್ವಾಮಿಯೇ ಸಿಎಂ- ಹೆಚ್.ಡಿ.ರೇವಣ್ಣ

    ಬೆಂಗಳೂರು: ಯಾವುದೇ ಹೈಜಾಕ್ ಆಗಲಿ ಏನೇ ಆಗಲಿ, ಎಚ್.ಡಿ.ಕುಮಾರಸ್ವಾಮಿ ಹೇಳಿದಂತೆ ಸರ್ಕಾರ ರಚನೆಯಾಗುತ್ತದೆ. ಅವರೇ ಸಿಎಂ ಆಗುವುದು ನಿಶ್ಚಿತ ಎಂದು ಜೆಡಿಎಸ್ ಮುಖಂಡ ಹೆಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದಾರೆ.

    ಒಕ್ಕಲಿಗರ ಸಂಘದ ಅಧ್ಯಕ್ಷ ಬೆಟ್ಟೇಗೌಡರ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಈ ಬಾರಿ ನಮ್ಮ ಪಕ್ಷದಿಂದ ಆಯ್ಕೆಯಾದ 38 ಶಾಸಕರು ಎಲ್ಲಿಯೂ ಹೋಗುವುದಿಲ್ಲ. ನಿಷ್ಠೆಯಿಂದ ಪಕ್ಷದ ಜೊತೆಗಿರುತ್ತಾರೆ. ಕುಮಾರಸ್ವಾಮಿ ಸಿಎಂ ಆಗೋದು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರಿನ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸದ ಕಡೆಗೆ ಎಲ್ಲರ ಚಿತ್ತ ಹರೆದಿದ್ದು, ಎಚ್.ಡಿ.ರೇವಣ್ಣ ಅವರು ದೇವರ ಪ್ರಸಾದ ಹಿಡಿದು ದೇವೇಗೌಡರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ದಾಸರಹಳ್ಳಿ ಶಾಸಕ ಮಂಜುನಾಥ್, ಡಿ.ಸಿ.ತಮ್ಮಣ್ಣ, ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ಹಾಜರಿದ್ದರು.

    ದೇವೇಗೌಡರು ಈಗಾಗಲೇ ಜೆಡಿಎಸ್ ಶಾಸಕರ ಜವಾಬ್ದಾರಿಯನ್ನು ಹೇಗೆ ನಿರ್ವಹಿಸಬೇಕು ಎಂದು ಶ್ರೀಕಂಠೇಗೌಡರಿಗೆ ನಿರ್ದೇಶನ ನೀಡಿದ್ದಾರೆ. ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಕೇಳಿಬಂದಿದೆ.

    ಬೀದರ್ ದಕ್ಷಿಣ ಶಾಸಕ ಬಂಡೆಪ್ಪ ಕಾಂಶೆಂಪುರ್ ಮತ್ತು ಸಕಲೇಶಪುರ ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರು ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದಾರೆ.

  • ದತ್ತಾಗೆ ಸೋಲು, ನಾಲ್ಕರಲ್ಲಿ ಬಿಜೆಪಿ ಕೈ ಹಿಡಿದ ಚಿಕ್ಕಮಗಳೂರು ಜನ!

    ದತ್ತಾಗೆ ಸೋಲು, ನಾಲ್ಕರಲ್ಲಿ ಬಿಜೆಪಿ ಕೈ ಹಿಡಿದ ಚಿಕ್ಕಮಗಳೂರು ಜನ!

    ಚಿಕ್ಕಮಗಳೂರು: ಜಿಲ್ಲೆಯಲ್ಲಿ 5 ಮತಕ್ಷೇತ್ರಗಳಿದ್ದು, 2013ರಲ್ಲಿ ಜೆಡಿಎಸ್ ಹಾಗೂ ಬಿಜೆಪಿ ತಲಾ ಎರಡು ಕ್ಷೇತ್ರದಲ್ಲಿ ಜಯಗಳಿಸಿತ್ತು. ಆದರೆ ಈ ಚುನಾವಣೆಯಲ್ಲಿ ಜೆಡಿಎಸ್ ಮರೆಯಾಗಿದ್ದು, ಬಿಜೆಪಿ 4 ಕ್ಷೇತ್ರದಲ್ಲಿ ಜಯಗಳಿಸಿದೆ.

    2013ರಲ್ಲಿ ಶೃಂಗೇರಿ ಕ್ಷೇತ್ರದಿಂದ ಬಿಜೆಪಿಯ ಡಿ.ಎನ್.ಜೀವರಾಜ್ ಜಯಗಳಿಸಿದ್ದರು. ಆದರೆ, ಈ ಬಾರಿ ಅವರು ಕೇವಲ 2,013 ಮತಗಳ ಅಂತರದಲ್ಲಿ ಸೋತಿದ್ದಾರೆ. ಕಾಂಗ್ರೆಸ್‍ನ ಟಿ.ಡಿ.ರಾಜೇಗೌಡ ಅವರು 62,469 ಮತ ಪಡೆದು ಜಯಗಳಿಸಿದ್ದಾರೆ.

    ಮೂಡಿಗೆರೆ ಮತಕ್ಷೇತ್ರದಿಂದ ಬಿಜೆಪಿಯ ಎಂ.ಪಿ.ಕುಮಾರಸ್ವಾಮಿ ಅವರು 58,783 ಮತ ಪಡೆದು ಜಯಗಳಿಸಿದ್ದಾರೆ. ಎದುರಾಳಿ ಕಾಂಗ್ರೆಸ್‍ನ ಮೋಟಮ್ಮ ಅವರು 46,271 ಮತ ಪಡೆದು ಸೋತಿದ್ದಾರೆ. 2013ರಲ್ಲಿ ಜಯಗಳಿಸಿದ್ದ ಬಿ.ಬಿ.ನಿಂಗಯ್ಯ ಅವರಿಗೆ ಮೂರನೇ ಸ್ಥಾನ ಸಿಕ್ಕಿದೆ.

    2013ರಲ್ಲಿ ಚಿಕ್ಕಮಗಳೂರು ಮತಕ್ಷೇತ್ರದಿಂದ ಬಿಜೆಪಿಯ ಸಿ.ಟಿ.ರವಿ ಆಯ್ಕೆಯಾಗಿದ್ದರು. ಈ ಚುನಾವಣೆಯಲ್ಲಿಯೂ ಅವರು 69,863 ಮತ ಪಡೆದು ಜಯಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ಶಂಕರ್ ಅವರು 25,716 ಮತಗಳ ಅಂತರದಿಂದ ಸೋತಿದ್ದಾರೆ.

    ತರೀಕರೆ ಮತಕ್ಷೇತ್ರದಲ್ಲಿ ಕಾಂಗ್ರೆಸ್‍ನ್ನು ಹಿಂದಿಕ್ಕಿ ಬಿಜೆಪಿಯ ಡಿ.ಎಸ್.ಸುರೇಶ್ ಅವರು 11,687 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಎದುರಾಳಿ ಪಕ್ಷೇತರ ಅಭ್ಯರ್ಥಿ ಜಿ.ಎಚ್.ಶ್ರೀನಿವಾಸ್ ಅವರು 33,253 ಮತಪಡೆದು ಸೋತಿದ್ದರು. 2013ರಲ್ಲಿ ಅವರು ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

    2013ರಲ್ಲಿ ಕಡೂರು ಮತಕ್ಷೇತ್ರದಿಂದ ಜೆಡಿಎಸ್‍ನ ವೈ.ಎಸ್.ವಿ.ದತ್ತ ಜಯಗಳಿಸಿದ್ದರು. ಆದರೆ, ಈ ಚುನಾವಣೆಯಲ್ಲಿ ಅವರಿಗೆ ಭಾರಿ ಪೈಪೋಟಿ ನೀಡಿದ ಬಿಜೆಪಿಯ ಬೆಳ್ಳಿ ಪ್ರಕಾಶ್ ಅವರು 15,372 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ವೈ.ಎಸ್.ವಿ.ದತ್ತ ಅವರು 46,860 ಮತ ಪಡೆದು ಸೋತಿದ್ದಾರೆ.

  • ಕರ್ನಾಟಕದ ಮ್ಯಾಂಚೆಸ್ಟರ್ ನಲ್ಲಿ ಮಗ ಸೋತ್ರೆ, ತಂದೆ ಗೆದ್ದರು!

    ಕರ್ನಾಟಕದ ಮ್ಯಾಂಚೆಸ್ಟರ್ ನಲ್ಲಿ ಮಗ ಸೋತ್ರೆ, ತಂದೆ ಗೆದ್ದರು!

    ದಾವಣಗೆರೆ: ಕರ್ನಾಟಕದ ಮ್ಯಾಂಚೆಸ್ಟರ್ ಖ್ಯಾತಿಯ ಜಿಲ್ಲೆಯಲ್ಲಿ 8 ಮತಕ್ಷೇತ್ರಗಳಿದ್ದು, ಅದರಲ್ಲಿ ಬಿಜೆಪಿ 6 ಹಾಗೂ ಕಾಂಗ್ರೆಸ್ 2 ಕ್ಷೇತ್ರದಲ್ಲಿ ಜಯಗಳಿಸಿವೆ. 2013ರಲ್ಲಿ 7 ಕ್ಷೇತ್ರಗಳಿಸಿತ್ತು. ಆ ವರ್ಷ, ಶಾಮನೂರು ಶಿವಶಂಕರಪ್ಪ ಹಾಗೂ ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ ಅವರು ಜಯಗಳಿಸಿದ್ದರು. ಆದರೆ, ಈ ಬಾರಿ ಅಪ್ಪ ಗೆಲವು ಸಾಧಿಸಿದರೆ, ಮಗ ಸೋತಿದ್ದಾರೆ.

    2013ರಲ್ಲಿ ಜಗಳೂರು ಕ್ಷೇತ್ರದಿಂದ ಕೆಜೆಪಿ ಪರ ಸ್ಪರ್ಧಿಸಿ ಎಸ್.ವಿ.ರಾಮಚಂದ್ರ ಅವರು ಸೋತಿದ್ದರು. ಆದರೆ, ಈಗ ಬಿಜೆಪಿಯಿಂದ ಕಣಕ್ಕಿಳಿದ ಅವರು 29,221 ಮತಗಳ ಅಂತರದಿಂದ ಜಯಸಾಧಿಸಿದ್ದಾರೆ. ಅವರು 78,948 ಮತ ಪಡೆದಿದ್ದರೆ, ಕಾಂಗ್ರೆಸ್‍ನ ಎಚ್.ಪಿ.ರಾಜೇಶ್ ಅವರು 49,272 ಮತ ಪಡೆದು ಸೋತಿದ್ದಾರೆ.

    ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಹರಪನಹಳ್ಳಿ ಕ್ಷೇತ್ರವನ್ನು ಈ ಬಾರಿ ಬಿಜೆಪಿ ಭೇದಿಸಿದ್ದು, ಅಲ್ಲಿ ಕರುಕಾಕರ ರೆಡ್ಡಿ ಅವರು ಒಟ್ಟು 57,821 ಮತ ಪಡೆದು ಜಯಸಾಧಿಸಿದ್ದಾರೆ. ಅವರ ಎದುರಾಳಿ ಕಾಂಗ್ರೆಸ್‍ನ ಎಂ.ಪಿ.ರವೀಂದ್ರ ಅವರು 50,937 ಮತ ಪಡೆದಿದ್ದು, 6,884 ಮತಗಳ ಅಂತರದಲ್ಲಿ ಸೋತಿದ್ದಾರೆ.

    ಹರಿಹರ ಮತಕ್ಷೇತ್ರದಿಂದ 2013ರಲ್ಲಿ ಜೆಡಿಎಸ್‍ನ ಎಚ್.ಎಸ್.ಶಿವಶಂಕರ್ ಜಯಗಳಿಸಿದ್ದರು. ಆದರೆ, ಅವರು ಈ ಬಾರಿ 4,523 ಮತಗಳಿಂದ ಕಾಂಗ್ರೆಸ್ ವಿರುದ್ಧ ಸೋತಿದ್ದಾರೆ. ಕಾಂಗ್ರೆಸ್‍ನ ಎಸ್.ರಾಮಪ್ಪ ಅವರು ಒಟ್ಟು 54,663 ಮತಗಳಿಸಿ ಆಯ್ಕೆಯಾಗಿದ್ದಾರೆ.

    ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಬಿಜೆಪಿಯ ಎಸ್.ಎ.ರವೀಂದ್ರನಾಥ್ ಅವರು 4,071 ಮತಗಳ ಅಂತರದಲ್ಲಿ ಜಯಗಳಿಸಿದ್ದು, ಒಟ್ಟು 72,540 ಮತ ಪಡೆದಿದ್ದಾರೆ. 2013ರಲ್ಲಿ ಜಯಗಳಿಸಿದ್ದ ಕಾಂಗ್ರೆಸ್‍ನ ಎಸ್.ಎಸ್.ಮಲ್ಲಿಕಾರ್ಜುನ್ ಅವರು 74,540 ಮತ ಪಡೆದಿದ್ದಾರೆ.

    ದಾವಣಗೆರೆ ದಕ್ಷಿಣ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಈ ಬಾರಿಯೂ ಶಾಮನೂರು ಶಿವಶಂಕರಪ್ಪ ಅವರು 57,709 ಮತ ಪಡೆದು ಜಯಗಳಿಸಿದ್ದಾರೆ. ಬಿಜೆಪಿಯ ಯಶ್ವಂತರಾವ್ ಜಾದವ್ ಅವರು 40,224 ಮತ ಪಡೆದಿದ್ದಾರೆ.

    ಮಾಯಕೊಂಡ ಮತಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಇಲ್ಲಿ ಬಿಜೆಪಿಯ ಪ್ರೊ. ಲಿಂಗಣ್ಣ ಅವರು 6,696 ಮತಗಳ ಅಂತರದಲ್ಲಿ ಜಯಗಳಿಸಿದ್ದು, ಒಟ್ಟು 36,895 ಮತ ಪಡೆದಿದ್ದಾರೆ. ಎದುರಾಳಿ ಕೆ.ಎಸ್.ಬಸವರಾಜ ಅವರು 30,199 ಮತ ಪಡೆದು ಸೋತಿದ್ದಾರೆ.

    ಹೊನ್ನಾಳಿ ಕ್ಷೇತ್ರವು ಕೊನೆ ಕ್ಷಣದವರೆಗೆ ಕುತೂಹಲ ಮೂಡಿಸಿತ್ತು. ಕೊನೆಗೆ ಬಿಜೆಪಿಯ ಎಂ.ಪಿ.ರೇಣುಕಾಚಾರ್ಯ ಅವರು ಒಟ್ಟು 78,014 ಮತ ಪಡೆದು ಆಯ್ಕೆಯಾಗಿದ್ದಾರೆ. 2013ರಲ್ಲಿ ಜಯಗಳಿಸಿದ್ದ ಡಿ.ಜಿ.ಶಾಂತಗೌಡ ಅವರು ಕೇವಲ 4,172 ಮತಗಳ ಅಂತರದಲ್ಲಿ ಸೋತಿದ್ದಾರೆ.

    2013ರಲ್ಲಿ ಚನ್ನಗಿರಿ ಮತಕ್ಷೇತ್ರದಿಂದ ಕಾಂಗ್ರೆಸ್ ಜಯಗಳಿಸಿತ್ತು. ಆದರೆ, ಈ ಬಾರಿ ಬಿಜೆಪಿಯ ವಿರೂಪಾಕ್ಷ ಮಾಡಾಳು ಅವರು 25,780 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. ಅವರು ಒಟ್ಟು 73,794 ಮತ ಪಡೆದಿದ್ದರೆ, ಪರಾಭವಗೊಂಡ ಕಾಂಗ್ರೆಸ್‍ನ ವಡ್ನಾಳ್ ರಾಜಣ್ಣ ಅವರು 48,014 ಮತ ಪಡೆದಿದ್ದಾರೆ.

  • ಮತಯಂತ್ರದ ದೋಷ – ಕೋಲಾರದ ಹತ್ತು ಕಡೆ ಮತದಾನ ವಿಳಂಬ

    ಮತಯಂತ್ರದ ದೋಷ – ಕೋಲಾರದ ಹತ್ತು ಕಡೆ ಮತದಾನ ವಿಳಂಬ

    ಕೋಲಾರ:  ಜಿಲ್ಲೆಯ ಹತ್ತು ಮತಗಟ್ಟೆಯಲ್ಲಿ ಮತಯಂತ್ರಗಳ ದೋಷದಿಂದಾಗಿ ಮತದಾರರು ಪರದಾಡುವಂತಾಗಿದೆ. ಸರದಿಯಲ್ಲಿ ನಿಂತಿದ್ದ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು, ಚುನಾವಣಾ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡಿದ್ದಾರೆ.

    ಕೋಲಾರದ ಗೌರಿಪೇಟೆ (ಮತಗಟ್ಟೆ ಸಂಖ್ಯೆ 141 ಮತ್ತು 135), ಮಹಾಲಕ್ಷ್ಮಿ ಬಡಾವಣೆ (ಮತಗಟ್ಟೆ ಸಂಖ್ಯೆ 193), ಕೋಲಾರ ತಾಲ್ಲೂಕಿನ ಲಕ್ಕೂರು (ಮತಗಟ್ಟೆ ಸಂಖ್ಯೆ 161 ಹಾಗೂ 163), ವೇಮಗಲ್ (ಮತಗಟ್ಟೆ ಸಂಖ್ಯೆ 60) ಸೇರಿದಂತೆ ವಿವಿಧ ಕಡೆ ಮತಯಂತ್ರದಲ್ಲಿ ದೋಷ ಕಂಡುಬಂದಿದೆ. ಹೀಗಾಗಿ ಮತದಾರರು ಸರದಿಯಲ್ಲಿಯೇ ನಿಲ್ಲುವಂತಾಗಿದೆ.

    7 ಗಂಟೆಗೆ ಮತದಾನ ಆರಂಭಗೊಂಡಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ 8 ಗಂಟೆಯಾದರೂ ಮತದಾನ ಪ್ರಾರಂಭವಾಗಿರಲಿಲ್ಲ. ಹೀಗಾಗಿ ಜನ ಪ್ರಶ್ನಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

  • ಬಾದಾಮಿಯಲ್ಲಿ ಸಿಎಂ ವಿರುದ್ಧ ಪ್ರಚಾರಕ್ಕಿಳಿದ ವಾಲ್ಮೀಕಿ ಸಮುದಾಯ

    ಬಾದಾಮಿಯಲ್ಲಿ ಸಿಎಂ ವಿರುದ್ಧ ಪ್ರಚಾರಕ್ಕಿಳಿದ ವಾಲ್ಮೀಕಿ ಸಮುದಾಯ

    ಬಾಗಲಕೋಟೆ: ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರನ್ನು ಸೋಲಿಸಲು ಬಿಜೆಪಿ ವಿವಿಧ ತಂತ್ರಗಳನ್ನು ರೂಪಿಸುತ್ತಿದೆ. ಈ ಬೆನ್ನಲ್ಲೆ, ಹೈದರಾಬಾದ್ ಕರ್ನಾಟಕದ ವಾಲ್ಮೀಕಿ ಸಮುದಾಯವು ಸಿಎಂ ವಿರುದ್ಧ ಪ್ರಚಾರಕ್ಕೆ ಮುಂದಾಗಿವೆ.

    ಮೀಸಲಾತಿ ವಿಚಾರದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯವಾಗಿದೆ. ನಮ್ಮ ಅಭಿವೃದ್ಧಿಗೆ ಸಿಎಂ ಯಾವುದೇ ಕೊಡುಗೆ ನೀಡಿಲ್ಲ. ಅಲ್ಲದೇ ಹೈದರಾಬಾದ್ ಕರ್ನಾಟಕದಲ್ಲಿ ಸ್ವಜಾತಿಯವರಿಗೆ ನಕಲಿ ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ವಾಲ್ಮೀಕಿ ಸಮುದಾಯದ ನಾಯಕರು ಆರೋಪಿಸಿದ್ದಾರೆ.

    6 ಜಿಲ್ಲೆಯ ತಂಡಗಳು ಸೋಮವಾರ ರಾತ್ರಿ ಬಾದಾಮಿಗೆ ಬಂದು ಸಿಎಂ ವಿರುದ್ಧ ಪ್ರಚಾರ ಮಾಡುತ್ತಿವೆ. ಅಲ್ಲದೇ, ಶ್ರೀರಾಮುಲು ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಈ ತಂಡದಲ್ಲಿ ಹೈದರಾಬಾದ್ ಕರ್ನಾಟಕ ವಾಲ್ಮೀಕಿ ಸಮುದಾಯದ ವಿಭಾಗೀಯ ಅಧ್ಯಕ್ಷ ನಂದಕುಮಾರ ಪಾಟೀಲ, ಕಾರ್ಯದರ್ಶಿ ರಘುವೀರ ನಾಯಕ್, ಯಾದಗಿರಿ ಜಿಲ್ಲಾಧ್ಯಕ್ಷ ಮರಿಯಪ್ಪ ನಾಯಕ ಸೇರಿದಂತೆ 6 ಜಿಲ್ಲೆಗಳ ಪದಾಧಿಕಾರಿಗಳ ಸೇರಿದ್ದಾರೆ.

    ಹೈದರಾಬಾದ್ ಕರ್ನಾಟಕ ಜಿಲ್ಲೆಗಳಾದ ರಾಯಚೂರು, ಯಾದಗಿರಿ, ಕಲಬುರಗಿ, ಕೊಪ್ಪಳ, ಬೀದರ್, ಬಳ್ಳಾರಿಯಿಂದ ಸುಮಾರು 100ಕ್ಕೂ ಅಧಿಕ ಜನರು ಬಾದಾಮಿಗೆ ಬಂದಿದ್ದಾರೆ. ಇವರು ಬಾದಾಮಿ, ಗುಳೇದಗುಡ್ಡ, ಶಿವಯೋಗಿ ಮಂದಿರದಲ್ಲಿ ವಾಸ್ತವ್ಯ ಹೂಡಿದ್ದಾರೆ. ಮೂರು ದಿನಗಳ ಕಾಲ ಈ ತಂಡವು ಸಿಎಂ ವಿರುದ್ಧ ಪ್ರಚಾರ ಮಾಡಲಿದೆ ಎಂಬುದಾಗಿ ತಿಳಿದುಬಂದಿದೆ.

  • ಅಂಗಡಿ ಮುಂಭಾಗ ನಿಂತಿದ್ದ  ಅಭ್ಯರ್ಥಿಯ ಕಾರು ಇದ್ದಕ್ಕಿದ್ದಂತೆ ಹೊತ್ತಿ ಉರಿಯಿತು!

    ಅಂಗಡಿ ಮುಂಭಾಗ ನಿಂತಿದ್ದ ಅಭ್ಯರ್ಥಿಯ ಕಾರು ಇದ್ದಕ್ಕಿದ್ದಂತೆ ಹೊತ್ತಿ ಉರಿಯಿತು!

    ಕಲಬುರಗಿ: ಚುನಾವಣೆ ಪ್ರಚಾರಕ್ಕೆ ತೆರಳಿದ್ದ ಟವೇರಾ ಕಾರ್ ಗೆ ಆಕಸ್ಮಿಕ ಬೆಂಕಿ ತಗಲಿ ಹೊತ್ತಿ ಉರಿದ ಘಟನೆ ಟೆಂಗಳಿ ಕ್ರಾಸ್ ಬಳಿ ನಡೆದಿದೆ.

    ಚಿತ್ತಾಪುರ ಮತಕ್ಷೇತ್ರದ ಬಿಎಸ್‍ಪಿ ಅಭ್ಯರ್ಥಿ ದೇವರಾಜ್ ಒಡೆಯರ್ ಅವರಿಗೆ ಸೇರಿದ ಕಾರ್ ಅದಾಗಿದ್ದು, ಉದ್ದೇಶ ಪೂರ್ವಕವಾಗಿ ಈ ಕೃತ್ಯ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ.

    ಜಿಲ್ಲೆಯ ಚಿತ್ತಾಪುರ ತಾಲೂಕಿನ ಟೆಂಗಳಿ ಕ್ರಾಸ್ ಬಳಿ ಕೆಎ-35, 9550 ಸಂಖ್ಯೆಯ ಟವೇರಾ ಕಾರ್ ನಿಲ್ಲಿಸಿ ಕಾರಿನಲ್ಲಿದ್ದವರು ಟೀ ಕುಡಿಯಲು ಹೋಗಿದ್ದರು. ಈ ವೇಳೆ ಯಾರೋ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದ್ದಾರೆ ಎಂದು ದೇವರಾಜ್ ಒಡೆಯರ್ ಶಂಕೆ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಮಾಡಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಂಬರೀಶ್ ಮನವೊಲಿಕೆಗೆ ಮುಂದಾದ ಕೈ ಬಳಗ

    ಅಂಬರೀಶ್ ಮನವೊಲಿಕೆಗೆ ಮುಂದಾದ ಕೈ ಬಳಗ

    ಬೆಂಗಳೂರು: ಚುನಾವಣೆ ಹಾಗೂ ಪ್ರಚಾರದ ಕುರಿತಾಗಿ ಏನನ್ನು ಮಾತನಾಡದೇ ಸಿಎಂ ಹಾಗೂ ಕಾಂಗ್ರೆಸ್ ಮುಖಂಡರನ್ನು ಸತಾಯಿಸುತ್ತಿರುವ ನಟ ಅಂಬರೀಶ್ ಅವರ ಮನವೊಲಿಸಲು ಕೈ ಬಳಗವೇ ಮುಂದಾಗಿದೆ.

    ಇಲ್ಲಿನ ಗಾಲ್ಫ್ ರಸ್ತೆಯಲ್ಲಿರುವ ನಟ ಅಂಬರೀಶ್ ನಿವಾಸಕ್ಕೆ ಸಚಿವ ಕೆ.ಜೆ.ಜಾರ್ಜ್ ಭೇಟಿ ನೀಡಿ ಮಂಡ್ಯ ಮತಕ್ಷೇತ್ರದಿಂದ ಸ್ಪರ್ಧಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ, ಚುನಾವಣೆ ಪ್ರಚಾರಕ್ಕೆ ಸಿದ್ಧರಾಗುವಂತೆ ಒಂದು ಗಂಟೆ ಜಾರ್ಜ್ ಅವರು ಅಂಬರೀಶ್ ಜೊತೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

    ಈ ಮುನ್ನ ಟಿಕೆಟ್ ಸಿಗಲಿ ನೋಡೋಣ ಎನ್ನುತ್ತಿದ್ದ ಅಂಬರೀಶ್, ಟಿಕೆಟ್ ಸಿಕ್ಕ ಮೇಲೂ ಪಕ್ಷದ ಮುಖಂಡರನ್ನು ಸಂಪರ್ಕಿಸಿಲ್ಲ. ಅಲ್ಲದೇ ಬಿ ಫಾರ್ಮ್ ಅನ್ನು ಕೂಡ ಪಡೆದಿಲ್ಲ. ಸ್ಪರ್ಧೆ ಮಾಡುವ ಕುರಿತಾಗಿಯೂ ಅವರು ಏನನ್ನೂ ಹೇಳದೆ ಕಾಂಗ್ರೆಸ್ ನಾಯಕರನ್ನು ಸತಾಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

    ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಮತ್ತು ಸಿಎಂ ಸಿದ್ದರಾಮಯ್ಯನವರ ಸಲಹೆಯಂತೆ ಸಚಿವ ಕೆ.ಜೆ.ಜಾರ್ಜ್ ಅವರನ್ನು ಅಂಬಿ ನಿವಾಸಕ್ಕೆ ಸಂಧಾನಕ್ಕೆ ಕಳುಹಿಸಲಾಗಿತ್ತು ಎನ್ನಲಾಗಿದೆ.

    ಅಂಬರೀಶ್ ಭೇಟಿ ನಂತರ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್, ನಾನು ಅಂಬರೀಶ್ ಒಳ್ಳೆಯ ಸ್ನೇಹಿತರು. ಪ್ರತಿ ಚುನಾವಣೆ ಸಂದರ್ಭದಲ್ಲಿಯೂ ಅವರನ್ನು ಭೇಟಿ ಮಾಡುತ್ತೇನೆ. ಯಾವುದೇ ಸಂಧಾನ ಮಾತುಕತೆಗೆ ನಾನು ಇಲ್ಲಿಗೆ ಬಂದಿಲ್ಲ. ನನ್ನ ಮತಕ್ಷೇತ್ರದ ಪ್ರಚಾರಕ್ಕೆ ಬೆಂಬಲ ನೀಡುವಂತೆ ಕೇಳಲು ಬಂದಿದ್ದೆ. ಅವರಿಗೆ ಟಿಕೆಟ್ ಸಿಕ್ಕಿದೆ. ಬಿ ಫಾರ್ಮ್ ಪಡೆಯುವ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

    ನನಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಆದರೆ, ಪ್ರಚಾರದ ಕುರಿತಾಗಿ ಏನು ಹೇಳಿಲ್ಲ. ಅವರ ಆರೋಗ್ಯ ಚೆನ್ನಾಗಿದೆ. ಸಿನಿಮಾ ಚಿತ್ರೀಕರಣಕ್ಕೂ ಹೋಗುತ್ತಿದ್ದಾರೆ. ಅವರು ಸಿನಿಮಾ ಹೀರೋ. ಹೀಗಾಗಿ ಅವರಿಗೆ ಬಿ ಫಾರ್ಮ್ ಅನ್ನು ಮನೆಗೆ ಕೊಟ್ಟು ಕಳಿಸಬಹುದು ಎಂದು ತಿಳಿಸಿದ್ದಾರೆ.