Tag: karnataka

  • ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗಿ – ಅಡುಗೆ ಸಿಬ್ಬಂದಿಗೆ ಗೇಟ್‌ಪಾಸ್‌

    ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗಿ – ಅಡುಗೆ ಸಿಬ್ಬಂದಿಗೆ ಗೇಟ್‌ಪಾಸ್‌

    ಬೀದರ್‌: ಆರ್‌ಎಸ್‌ಎಸ್ (RSS) ಪಥಸಂಚಲನದಲ್ಲಿ ಭಾಗಿಯಾದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಅಡುಗೆ ಸಿಬ್ಬಂದಿಗೆ ಸರ್ಕಾರ ಗೇಟ್‌ಪಾಸ್ ನೀಡಿದ ಘಟನೆ ಬಸವ ಕಲ್ಯಾಣದಲ್ಲಿ ನಡೆದಿದೆ.

    ಬಸವ ಕಲ್ಯಾಣದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಅಡುಗೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಮೋದ್ ತಂದೆ ಅಶೋಕ ಕುಮಾರ್‌ ಅವರನ್ನು ಕೆಲಸದಿಂದ ತಾಲೂಕು ಆಡಳಿತ ಬಿಡುಗಡೆಗೊಳಿಸಿದೆ. ಇದನ್ನೂ ಓದಿ:  ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗಿಯಾಗಿ ಅಮಾನತುಗೊಂಡಿರುವ ಪಿಡಿಒಗೆ ಮತ್ತೊಂದು ಸಂಕಷ್ಟ

     

    ಬಸವಕಲ್ಯಾಣದಲ್ಲಿ ನಡೆದ ಆರ್‌ಎಸ್‌ಎಸ್ ಪಥ ಸಂಚಲನದಲ್ಲಿ ಸಿಬ್ಬಂದಿ ಪ್ರಮೋದ್ ಭಾಗಿಯಾಗಿದ್ದು ಸರ್ಕಾರದಿಂದ ವೇತನ ಪಡೆದು ಯಾವುದೇ ಸಂಘ ಸಂಸ್ಥೆಯಲ್ಲಿ ಭಾಗಿಯಾಗಬಾರದೆಂದು ಆದೇಶ ಪ್ರತಿಯಲ್ಲಿ ಉಲ್ಲೇಖಿಸಿದೆ.

    ಬಸವಕಲ್ಯಾಣದಲ್ಲಿ ನಡೆದ ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಸುಮಾರು 20ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ನಡೆದ ಪಥಸಂಚಲನದಲ್ಲಿಹಲವು ಸರ್ಕಾರಿ ಸಿಬ್ಬಂದಿ, ಅಧಿಕಾರಿಗಳು ಭಾಗಿಯಾಗಿದ್ದಾರೆ.

  • ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಮಳೆ – ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

    ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಮಳೆ – ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

    – ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ ನಿರೀಕ್ಷೆ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಇಂದು ಬೆಳ್ಳಂಬೆಳಗ್ಗೆ ಜಿಟಿಜಿಟಿ ಮಳೆ (Rain) ಆರಂಭವಾಗಿದೆ. ನಗರದ ಹಲವೆಡೆ ಶೀತ ಗಾಳಿ ಜೊತೆ ಮಳೆ ಆರಂಭವಾಗಿದ್ದು, ನಗರಾದ್ಯಂತ ಮೋಡ ಕವಿದ ವಾತಾವರಣವಿದೆ.

    ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವವರಿಗೆ ಮಳೆ ಸಾಥ್ ಕೊಟ್ಟಿದೆ. ಇಂದೂ ಸಹ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. 13 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಭಾರೀ ಮಳೆ ಅಲರ್ಟ್ ನೀಡಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಇದನ್ನೂ ಓದಿ: ಇರಾನ್ ನಾಯಕನ ಪುತ್ರಿಯ ವಿವಾಹದಲ್ಲಿಲ್ಲ ಹಿಜಾಬ್ – ವೀಡಿಯೋ ವೈರಲ್, ನೆಟ್ಟಿಗರಿಂದ ಆಕ್ರೋಶ

    ಇನ್ನು ಜಿಟಿಜಿಟಿ ಮಳೆಗೆ ಬೆಂಗಳೂರು ಮಲೆನಾಡಿನಂತೆ ಆಗಿದೆ. ಬೆಳ್ಳಗೆಯಿಂದಲೂ ತುಂತುರು ಮಳೆ ಬಿಟ್ಟುಬಿಡದೇ ಸುರಿಯುತ್ತಿದೆ. ಚುಮುಚುಮು ಚಳಿ ಹಾಗೂ ಜಿಟಿಜಿಟಿ ಮಳೆಯೊಂದಿಗೆ ಊಟಿ ವಾತಾವರಣ ನಿರ್ಮಾಣವಾಗಿದೆ. ಇನ್ನೂ ಮುಂದಿನ ಮೂರು ದಿನಗಳವರೆಗೆ ಇದೇ ವಾತವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದನ್ನೂ ಓದಿ: ಚಿತ್ರದುರ್ಗ| ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ ಶಿಕ್ಷಕ ಜೈಲುಪಾಲು

  • ರಾಜ್ಯದ ಹವಾಮಾನ ವರದಿ 22-10-2025

    ರಾಜ್ಯದ ಹವಾಮಾನ ವರದಿ 22-10-2025

    ಮುಂದಿನ 4 ದಿನ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಹೀಗಾಗಿ ರಾಜ್ಯದಲ್ಲಿ ಅಕ್ಟೋಬರ್ 25ರವರಗೆ ಮಳೆ ಸುರಿಯುವ ಸಾಧ್ಯತೆಯಿದೆ.

    ದಕ್ಷಿಣ, ಉತ್ತರ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಗಂಟೆಗೆ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಸಂಜೆ ನಂತರ ಗುಡುಗು ಸಹಿತ ಮಳೆ ಸಾಧ್ಯತೆ ಇದ್ದು, ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಸಹಿತ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ
    ಬೆಂಗಳೂರು: 25-21
    ಮಂಗಳೂರು: 29-24
    ಶಿವಮೊಗ್ಗ: 26-21
    ಬೆಳಗಾವಿ: 29-22
    ಮೈಸೂರು: 26-21

    ಮಂಡ್ಯ: 25-22
    ಮಡಿಕೇರಿ: 24-20
    ರಾಮನಗರ: 26-22
    ಹಾಸನ: 24-19
    ಚಾಮರಾಜನಗರ: 26-22
    ಚಿಕ್ಕಬಳ್ಳಾಪುರ: 24-21

    ಕೋಲಾರ: 24-21
    ತುಮಕೂರು: 26-21
    ಉಡುಪಿ: 29-24
    ಕಾರವಾರ: 33-26
    ಚಿಕ್ಕಮಗಳೂರು: 23-19
    ದಾವಣಗೆರೆ: 27-22

    ಹುಬ್ಬಳ್ಳಿ: 30-22
    ಚಿತ್ರದುರ್ಗ: 24-22
    ಹಾವೇರಿ: 29-22
    ಬಳ್ಳಾರಿ: 27-23
    ಗದಗ: 28-22
    ಕೊಪ್ಪಳ: 28-23

    ರಾಯಚೂರು: 30-24
    ಯಾದಗಿರಿ: 31-24
    ವಿಜಯಪುರ: 32-23
    ಬೀದರ್: 30-23
    ಕಲಬುರಗಿ: 32-24
    ಬಾಗಲಕೋಟೆ: 31-23

  • ಅ.25ರವರೆಗೆ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ – ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ

    ಅ.25ರವರೆಗೆ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ – ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ

    ಬೆಂಗಳೂರು: ಇಂದಿನಿಂದ 4 ದಿನ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಹವಾಮಾನ ಇಲಾಖೆ (IMD) ಯೆಲ್ಲೋ ಅಲರ್ಟ್‌ (Yellow Alert) ಘೋಷಣೆ ಮಾಡಿದೆ. ಹೀಗಾಗಿ ರಾಜ್ಯದಲ್ಲಿ ಅಕ್ಟೋಬರ್ 25 ರವರಗೆ ಮಳೆ (Karnataka Rain) ಸುರಿಯುವ ಸಾಧ್ಯತೆಯಿದೆ.

    ದಕ್ಷಿಣ, ಉತ್ತದ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಗಂಟೆಗೆ 55 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರ – ಮನೆ, ಜಮೀನುಗಳಿಗೆ ನುಗ್ಗಿದ ನೀರು

    ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಸಂಜೆ ನಂತರ ಗುಡುಗು ಸಹಿತ ಮಳೆ ಸಾಧ್ಯತೆ ಇದ್ದು ಗಂಟೆಗೆ 30-40ಕಿ.ಮೀ ವೇಗದಲ್ಲಿ ಗಾಳಿ ಸಹಿತ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

  • ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರ – ಮನೆ, ಜಮೀನುಗಳಿಗೆ ನುಗ್ಗಿದ ನೀರು

    ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರ – ಮನೆ, ಜಮೀನುಗಳಿಗೆ ನುಗ್ಗಿದ ನೀರು

    – ಜನಜೀವನ ಅಸ್ತವ್ಯಸ್ತ

    ಬೆಂಗಳೂರು: ರಾಜ್ಯದಲ್ಲಿ ಮಳೆ (Rain) ಆರ್ಭಟ ಮತ್ತೆ ಮುಂದುವರಿದಿದೆ. ದೀಪಾವಳಿ ಸಂಭ್ರಮದಲ್ಲಿದ್ದ ಜನತೆಗೆ ಮಳೆರಾಯ ಕೊಂಚ ಬೇಸರ ತರಿಸಿದ್ದಾನೆ. ಹಾಸನ, ಚಿಕ್ಕಮಗಳೂರು, ಉಡುಪಿ ಸೇರಿ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಮಳೆ ಅಬ್ಬರ ಜೋರಾಗಿದ್ದು, ಸಾಕಷ್ಟು ಅವಾಂತರ ಸೃಷ್ಟಿಸಿದೆ. ಸತತ ಮಳೆಯಿಂದ ಬೆಳೆನಾಶವಾಗಿದ್ದು, ಬೆಳೆ ಕಳೆದುಕೊಂಡ ರೈತರು ಕಣ್ಣೀರಿಡುವಂತೆ ಮಾಡಿದೆ.

    ಹಾಸನ ಜಿಲ್ಲೆಯಲ್ಲಿ ಕಳೆದ ಐದು ದಿನಗಳಿಂದ ಬಹುತೇಕ ತಾಲೂಕುಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹೊಳೆನರಸೀಪುರ ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಬಾರಿ ಮಳೆಯಿಂದ ಕೆರೆಯ ಕೋಡಿ ಒಡೆದು ನೂರಾರು ಎಕರೆ ಪ್ರದೇಶದ ರೈತರ ಜಮೀನುಗಳು ಜಲಾವೃತಗೊಂಡಿವೆ. ಅಡಿಕೆ, ತೆಂಗಿನ ತೋಟ, ಹೊಲ, ಗದ್ದೆಗಳಲ್ಲಿ ನೀರು ತುಂಬಿಕೊಂಡಿದೆ.

    ಅರಸೀಕೆರೆ ತಾಲೂಕಿನ ಚಿಕ್ಕಮ್ಮನಹಳ್ಳಿ ಗ್ರಾಮದ ಶಂಕರಲಿಂಗಪ್ಪ ಎಂಬವರ ಮನೆಗೆ ನೀರು ನುಗ್ಗಿದೆ. ಮನೆಯಲ್ಲಿದ್ದ ವಸ್ತುಗಳೆಲ್ಲಾ ನೀರಿನಲ್ಲಿ ತೇಲಿವೆ. ಹೊಳೆನರಸೀಪುರ ಪಟ್ಟಣದ, ಕಾರ್ಖಾನೆ ಬೀದಿಯಲ್ಲಿರುವ ಮಂಜು ಎಂಬವರ ಮನೆಗೂ ನೀರು ನುಗ್ಗಿ ಅಪಾರ ಹಾನಿ ಆಗಿದೆ. ಚನ್ನರಾಯಪಟ್ಟಣ ತಾಲೂಕಿನಲ್ಲಿ ಮಳೆಗೆ ಹಳ್ಳಕೊಳ್ಳ, ಕೆರೆ ಕಟ್ಟೆಗಳು ತುಂಬಿ ಹರಿದು ಹೊಲ, ಗದ್ದೆಗಳು ಜಲಾವೃತವಾಗಿವೆ.

    ಅರಸೀಕೆರೆ ತಾಲೂಕಿನಲ್ಲೂ ಮಳೆ ಅಬ್ಬರಿಸಿದ್ದು, ಮಳೆನೀರು ಆಸ್ಪತ್ರೆ ಒಳಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ರೋಗಿಗಳು ಬೆಡ್‌ನಿಂದ ಕೆಳಗೆ ಇಳಿಯದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ರೋಗಿಗಳ ಕಡೆಯವರು ನೀರಿನಲ್ಲೇ ನಿಲ್ಲಬೇಕಾಗಿದೆ.

    ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನವನ್ನ ಅಸವ್ಯಸ್ತಗೊಳಿಸಿದೆ. ದೀಪಾವಳಿ ಹಬ್ಬದಂದೇ ಅಬ್ಬರಿಸಿದ ಮಳೆಗೆ ಮಲೆನಾಡು ಜನರು ಹೈರಾಣಾಗಿದ್ದಾರೆ. ಜಿಲ್ಲೆಯ ಕಳಸ, ಹೊರನಾಡು, ಕುದುರೆಮುಖ ಭಾಗದಲ್ಲಿ ಭಾರೀ ಮಳೆಯಾಗಿದ್ದು. ಹಳ್ಳದಂತಾದ ರಸ್ತೆಗಳಲ್ಲಿ ವಾಹನ ಚಲಾಯಿಸಲು ವಾಹನ ಸವಾರರು ಪರದಾಡಿದ್ದಾರೆ.

    ಕರಾವಳಿ ಜಿಲ್ಲೆ ಉಡುಪಿಯಲ್ಲೂ ಮಳೆ ಅಬ್ಬರ ಜೋರಾಗಿದೆ. ಗುಡುಗು, ಮಿಂಚು ಸಹಿತ ಸುರಿದ ಭಾರಿ ಮಳೆಗೆ ಉಡುಪಿ ಜನರು ಹೈರಾಣಾಗಿದ್ದಾರೆ. ಬಿರುಗಾಳಿ ಸಹಿತ ಮಳೆಯಾದ ಕಾರಣ. ಜಿಲ್ಲೆಯ ವಿವಿಧೆಡೆ ವಿದ್ಯುತ್‌ನಲ್ಲಿ ವ್ಯತ್ಯಯವಾಗಿದೆ.

    ತುಮಕೂರು ಜಿಲ್ಲಾದ್ಯಂತ ಮಳೆ ಅಬ್ಬರಿಸುತ್ತಿದ್ದು, ಜನಜೀವನಕ್ಕೆ ಬ್ರೇಕ್ ಹಾಕಿದೆ. ತಿಪಟೂರಿನಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ರಸ್ತೆಗೆ ನುಗ್ಗಿದ ಮಳೆ ನೀರು ಕೃತಕ ಕೆರೆ ಸೃಷ್ಟಿಸಿದೆ. ಕೆರೆಯಂತಾದ ಅಂಡರ್‌ಪಾಸ್‌ನಲ್ಲಿ ವಾಹನ ಸವಾರರು ಪರದಾಡುವಂತ ಸ್ಥಿತಿ ನಿರ್ಮಾಣ ಮಾಡಿದೆ. ಅವೈಜ್ಞಾನಿಕ ಕಾಮಗಾರಿಗೆ ವಾಹನ ಸವಾರರು ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ.

    ಇನ್ನು ಚಿತ್ರದುರ್ಗ ತಾಲೂಕಿನ ಕಸವನಹಳ್ಳಿ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಾಗಿದ್ದು, ಶೀತ ಹೆಚ್ಚಾಗಿ ಹೂವಿನ ಗಿಡಗಳು ಕೊಳೆರೋಗಕ್ಕೆ ತುತ್ತಾಗಿ ಕೊಳೆಯುತ್ತಿವೆ. ದೀಪಾವಳಿಗೆ ಭರ್ಜರಿ ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದ ರೈತರು ಕಂಗಲಾಗಿದ್ದಾರೆ. ಮಳೆಯಿಂದಾಗಿ ಸಕಾಲಕ್ಕೆ ಹೂವು ಕೊಯ್ಲು ಮಾಡಲಾಗದೇ ಕಲರ್ ಫುಲ್ ಸೆಂಟಿಲ್ ಹೂವು ಜಮೀನಲ್ಲೇ ಕೊಳೆಯುತ್ತಿದೆ. ಒಟ್ಟಾರೆ ರಾಜ್ಯದಲ್ಲಿ ಮಳೆ ಅಬ್ಬರ ಜೋರಾಗಿದ್ದು, ಮಳೆ ಸೃಷ್ಟಿಸಿದ ಅವಾಂತರಕ್ಕೆ ಜನರು ಹೈರಾಣಾಗಿದ್ದಾರೆ.

  • ರಾಜ್ಯದ ಹವಾಮಾನ ವರದಿ 21-10-2025

    ರಾಜ್ಯದ ಹವಾಮಾನ ವರದಿ 21-10-2025

    ರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಇಂದಿನಿಂದ ಮತ್ತೆ ಮಳೆಯ ಅಬ್ಬರ ಜೋರಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಅಕ್ಟೋಬರ್ 20ರಿಂದ 26ರವರೆಗೆ ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ಮಂಡ್ಯ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ. ಅಕ್ಟೋಬರ್ 23ರಿಂದ 26ರವರೆಗೆ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಚಾಮರಾಜನಗರ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಕೆಲವು ಜಿಲ್ಲೆಗಳಲ್ಲಿ ಮಾತ್ರ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ
    ಬೆಂಗಳೂರು: 25-22
    ಮಂಗಳೂರು: 31-25
    ಶಿವಮೊಗ್ಗ: 29-22
    ಬೆಳಗಾವಿ: 30-22
    ಮೈಸೂರು: 27-22

    ಮಂಡ್ಯ: 27-22
    ಮಡಿಕೇರಿ: 27-21
    ರಾಮನಗರ: 27-22
    ಹಾಸನ: 25-21
    ಚಾಮರಾಜನಗರ: 27-22
    ಚಿಕ್ಕಬಳ್ಳಾಪುರ: 24-21

    ಕೋಲಾರ: 24-21
    ತುಮಕೂರು: 24-22
    ಉಡುಪಿ: 31-24
    ಕಾರವಾರ: 34-26
    ಚಿಕ್ಕಮಗಳೂರು: 24-19
    ದಾವಣಗೆರೆ: 28-23

    ಹುಬ್ಬಳ್ಳಿ: 31-22
    ಚಿತ್ರದುರ್ಗ: 27-22
    ಹಾವೇರಿ: 29-22
    ಬಳ್ಳಾರಿ: 28-23
    ಗದಗ: 30-22
    ಕೊಪ್ಪಳ: 31-23

    ರಾಯಚೂರು: 31-24
    ಯಾದಗಿರಿ: 33-24
    ವಿಜಯಪುರ: 32-23
    ಬೀದರ್: 31-22
    ಕಲಬುರಗಿ: 32-23
    ಬಾಗಲಕೋಟೆ: 32-23

  • ಚಿತ್ತಾಪುರ ಆಯ್ತು ಈಗ ಸೇಡಂ – ಕೊನೆ ಕ್ಷಣದಲ್ಲಿ ಆರ್‌ಎಸ್‌ಎಸ್‌ ಪಥ ಸಂಚಲನಕ್ಕೆ ಬ್ರೇಕ್‌

    ಚಿತ್ತಾಪುರ ಆಯ್ತು ಈಗ ಸೇಡಂ – ಕೊನೆ ಕ್ಷಣದಲ್ಲಿ ಆರ್‌ಎಸ್‌ಎಸ್‌ ಪಥ ಸಂಚಲನಕ್ಕೆ ಬ್ರೇಕ್‌

    – ಧಿಕ್ಕರಿಸಿ ಪಥಸಂಚಲನ ನಡೆಸಿದ್ದ ಕಾರ್ಯಕರ್ತರು ವಶಕ್ಕೆ

    ಕಲಬುರಗಿ: ಕೊನೆ ಕ್ಷಣದಲ್ಲಿ ಆರ್‌ಎಸ್‌ಎಸ್‌ (RSS) ಹಮ್ಮಿಕೊಂಡಿದ್ದ ಪಥಸಂಚಲನಕ್ಕೆ ಸೇಡಂ (Sedam) ತಹಶೀಲ್ದಾರ್‌ ಶ್ರಿಯಾಂಕ್ ಅನುಮತಿ ನೀಡಲು ನಿರಾಕರಿಸಿದ್ದಾರೆ.

    ಭಾನುವಾರ ಸಂಜೆ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್‌ ಪ್ರತಿನಿಧಿಸುವ ಸೇಡಂ ಕ್ಷೇತ್ರದ ಸೇಡಂ ಪಟ್ಟಣದಲ್ಲಿ ಪಥಸಂಚಲನ (Rss Rout March) ನಡೆಸಲು ಆರ್‌ಎಸ್‌ಎಸ್‌ ಸಿದ್ಧತೆ ನಡೆಸಿತ್ತು. ಇದನ್ನೂ ಓದಿ:  ಈಗಲೇ ಯಾಕೆ ಪಥ ಸಂಚಲನ ಮಾಡಬೇಕು? ಸಂವಿಧಾನ, ಕಾನೂನಿಗಿಂತ ನೀವು ದೊಡ್ಡವರೇ- ಆರ್‌ಎಸ್‌ಎಸ್‌ಗೆ ಪ್ರಿಯಾಂಕ್‌ ಪ್ರಶ್ನೆ

    ಆರ್‌ಎಸ್‌ ಪಥಸಂಲಚನಕ್ಕೆ ಸಿದ್ಧತೆ ಮಾಡುತ್ತಿರುವಾಗ ಕೊನೆ ಕ್ಷಣದಲ್ಲಿ ಅನುಮತಿ ನಿರಾಕರಿಸಲಾಗಿದೆ. ಅನುಮತಿ ನಿರಾಕರಿಸಿದ ಬೆನ್ನಲ್ಲೇ ಆರ್‌ಎಸ್‌ಎಸ್‌ ಕಾರ್ಯಕರ್ತರು ಪಥಸಂಚಲನ ಮಾಡಿಸಿದ್ದಾರೆ.

    ಸೇಡಂ ಪಟ್ಟಣದ ಮಾತೃ ಛಾಯ ಕಾಲೇಜಿನಿಂದ ಗಣ ವೇಶ ಧರಿಸಿ ಪಥಸಂಚಲನ ಆರಂಭಿಸಿದರು. ಆರ್‌ಎಸ್‌ಎಸ್ ಕಾರ್ಯಕರ್ತರ ಪಥ ಸಂಚಲನದ ಮೇಲೆ ಸಾರ್ವಜನಿಕರು ಹೂವಿನ ರಾಶಿ ಸುರಿದು ಸ್ವಾಗತಿಸಿದರು.

    ಸರ್ಕಾರದ ಆದೇಶವನ್ನು ಧಿಕ್ಕರಿಸಿ ಶಾಂತಯುತವಾಗಿ ಪಥಸಂಚಲನ ನಡೆಸಿದ್ದಕ್ಕೆ 200ಕ್ಕೂ ಹೆಚ್ಚು ಆರ್‌ಎಸ್‌ಎಸ್‌ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.

    ಅನುಮತಿ ನಿರಾಕರಿಸಿದ್ದು ಯಾಕೆ?
    ಅರ್ಜಿದಾರರು ಯಾವುದೇ ಸಕ್ಷಮ ಪ್ರಾಧಿಕಾರಗಳಿಂದ ಮುಂಚಿತವಾಗಿ ಅನುಮತಿ ಪಡೆದುಕೊಂಡಿಲ್ಲ. ಇದನ್ನೂ ಓದಿ:  ಆರ್‌ಎಸ್‌ಎಸ್‌ Vs ಸರ್ಕಾರ – ನ.2 ರಂದು ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಒಪ್ಪಿದ ಲಾಯರ್‌ | ಹೈಕೋರ್ಟ್‌ನಲ್ಲಿ ಏನಾಯಿತು?

    ಸದ್ಯದ ಪರಿಸ್ಥಿತಿಯಲ್ಲಿ ಪಥಸಂಚಲನ ಮಾಡುವುದರಿಂದ ತುಂಬಾ ತೊಂದರೆಗಳು ಆಗುವ ಸಾಧ್ಯತೆ ಇರುತ್ತದೆ. ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಲ್ಲಾ ಕಡೆ ಪರ ವಿರೋಧಗಳು ನಡೆಯುತ್ತಿದೆ.

    ಚಿತ್ತಾಪುರ ಪಟ್ಟಣದಲ್ಲಿ ಭೀಮ್ ಆರ್ಮಿ ಸಂಘಟನೆಯವರು ಭೀಮ ಪಥಸಂಚಲನ ಹಮ್ಮಿಕೊಳ್ಳುವುದಾಗಿ ತಿಳಿಸಿ ವಿರೋಧ ವ್ಯಕ್ತಪಡಿಸಿರುತ್ತಾರೆ. ಅ.18 ರಂದು ಸೇಡಂ ಪಟ್ಟಣದಲ್ಲಿಯು ಸಹ ಆರ್‌ಎಸ್‌ಎಸ್‌ ಸಂಘಟನೆ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಂಡಿರುತ್ತಾರೆ. ಅದೇ ರೀತಿ ಸೇಡಂ ಪಟ್ಟಣದಲ್ಲಿಯು ಸಹ ಭೀಮ ಆರ್ಮಿ ಮತ್ತು ಇತರೆ ದಲಿತ ಸಂಘಟನೆಯವರು ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇರುತ್ತದೆ.

    ಕಲಬುರಗಿಯ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಬೆಂಬಲಿಗರಿಂದ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳಿಂದ ಆರ್‌ಎಸ್‌ಎಸ್‌ ಪಥಸಂಚಲನದ ವಿರುದ್ದ ಪ್ರತಿಭಟನೆ ಹಮ್ಮಿಕೊಂಡಲ್ಲಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟು ಕೋಮುಗಲಭೆಗಳು ಉಂಟಾಗುವ ಸಾಧ್ಯತೆಗಳು ಇರುತ್ತವೆ.

  • ಅತಿವೃಷ್ಟಿಯಿಂದ ಹಾನಿ – ಕರ್ನಾಟಕಕ್ಕೆ SDRFನಿಂದ 384 ಕೋಟಿ ರೂ. ಬಿಡುಗಡೆ

    ಅತಿವೃಷ್ಟಿಯಿಂದ ಹಾನಿ – ಕರ್ನಾಟಕಕ್ಕೆ SDRFನಿಂದ 384 ಕೋಟಿ ರೂ. ಬಿಡುಗಡೆ

    ನವದೆಹಲಿ: ಕರ್ನಾಟಕದಲ್ಲಿ (Karnataka) ಅತಿವೃಷ್ಟಿಯಿಂದ ಹಾನಿಯುಂಟಾಗಿರುವ ಹಿನ್ನೆಲೆ ಎಸ್‌ಡಿಆರ್‌ಎಫ್‌ನಿಂದ (SDRF) ರಾಜ್ಯಕ್ಕೆ 384 ಕೋಟಿ ರೂ. ಬಿಡುಗಡೆ ಮಾಡಲು ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿದೆ.

    ನೈಋತ್ಯ ಮುಂಗಾರಿನಲ್ಲಿ ಅತಿವೃಷ್ಟಿಯಿಂದ ಉಂಟಾದ ಹಾನಿಗೆ ಮಹಾರಾಷ್ಟ್ರ ಹಾಗೂ ಕರ್ನಾಟಕಕ್ಕೆ ರಾಜ್ಯ ವಿಪತ್ತು ಪರಿಹಾರ ನಿಧಿ ಅಡಿಯಲ್ಲಿ ಒಟ್ಟು 1,950 ಕೋಟಿ ಮುಂಗಡೆಯಾಗಿ ಬಿಡುಗಡೆ ಮಾಡಲು ಗೃಹಸಚಿವ ಅಮಿತ್ ಶಾ (Amit Shah) ಅನುಮತಿ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಮಹಾರಾಷ್ಟ್ರಕ್ಕೆ (Maharashtra) 1,566.40 ಕೋಟಿ ರೂ. ಅನುಮೋದಿಸಲಾಗಿದೆ. ಇದನ್ನೂ ಓದಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ ಪ್ರಕಟ – ಭಾರೀ ಮತಗಳ ಅಂತರದಿಂದ ಲಕ್ಷ್ಮಣ್ ಸವದಿ ಗೆಲುವು

    ಈ ವರ್ಷ, ಕೇಂದ್ರವು ಈಗಾಗಲೇ ಎಸ್‌ಡಿಆರ್‌ಎಫ್ ಅಡಿಯಲ್ಲಿ 27 ರಾಜ್ಯಗಳಿಗೆ 13,603.20 ಕೋಟಿ ರೂ. ಮತ್ತು ಎನ್‌ಡಿಆರ್‌ಎಫ್ ಅಡಿಯಲ್ಲಿ 15 ರಾಜ್ಯಗಳಿಗೆ 2,189.28 ಕೋಟಿ ರೂ. ಬಿಡುಗಡೆ ಮಾಡಿದೆ. ಇದನ್ನೂ ಓದಿ: ಮಳೆಯಾಟದಲ್ಲಿ ಗೆದ್ದ ಆಸ್ಟ್ರೇಲಿಯಾ – ಭಾರತದ ವಿರುದ್ಧ 7 ವಿಕೆಟ್‌ಗಳ ಗೆಲುವು

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಪ್ರವಾಹ, ಭೂಕುಸಿತ, ಮೇಘಸ್ಫೋಟದಿಂದ ತೊಂದರೆಗೊಳಗಾದ ಜನರಿಗೆ ಎಲ್ಲಾ ರೀತಿಯ ಸಹಾಯ ನೀಡಲು ಕೇಂದ್ರ ಬದ್ಧವಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ: ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಹೈಡ್ರಾಮಾ; ಜಾರಕಿಹೊಳಿ v/s ಸವದಿ-ಕತ್ತಿ ಬಣ ಜಟಾಪಟಿ

  • ದೀಪಾವಳಿ ಹಿನ್ನೆಲೆ ಜಾತಿಗಣತಿ ಸಮೀಕ್ಷೆಗೆ ಅ.23ರವರೆಗೆ ತಾತ್ಕಾಲಿಕ ಬ್ರೇಕ್

    ದೀಪಾವಳಿ ಹಿನ್ನೆಲೆ ಜಾತಿಗಣತಿ ಸಮೀಕ್ಷೆಗೆ ಅ.23ರವರೆಗೆ ತಾತ್ಕಾಲಿಕ ಬ್ರೇಕ್

    ಬೆಂಗಳೂರು: ದೀಪಾವಳಿ (Deepavali) ಹಬ್ಬದ ಹಿನ್ನೆಲೆಯಲ್ಲಿ ಜಾತಿಗಣತಿ (Caste Census) ಸಮೀಕ್ಷೆಗೆ ಅ.23ರ ವರೆಗೆ ತಾತ್ಕಾಲಿಕ ಬ್ರೇಕ್ ನೀಡಲಾಗಿದೆ.

    ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಜಾತಿಗಣತಿ ಸಮೀಕ್ಷೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆ ಬಳಿಕ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಅ.23ರ ವರೆಗೆ ಸಮೀಕ್ಷೆಗೆ ತಾತ್ಕಾಲಿಕ ಬ್ರೇಕ್ ನೀಡಲಾಗಿದೆ. ಬೆಂಗಳೂರಿನಲ್ಲಿ ಅ.23 ರಿಂದ 31 ರವರೆಗೆ ಸಮೀಕ್ಷೆ ಮುಂದುವರಿಕೆ ಆಗಲಿದೆ ಎಂದು ತಿಳಿಸಿದ್ದಾರೆ.

    ಮುಖ್ಯಮಂತ್ರಿಗಳು ಸಭೆ ಮಾಡಿದರು 27 ಜಿಲ್ಲೆಯಲ್ಲಿ 90% ಜಾಸ್ತಿ ಆಗಿದೆ. ರಾಮನಗರ, ಬೀದರ್, ಬೆಂಗಳೂರು ಅರ್ಬನ್ ಕಡಿಮೆ ಆಗಿದೆ. ಬೆಂಗಳೂರು ಅರ್ಬನ್ 50% ಆಗಿದೆ. ಬೆಂಗಳೂರಿನಲ್ಲಿ ಅ.23 ರಿಂದ 31 ರವರೆಗೆ ಗಣತಿ ಮಾಡಲು ಸೂಚನೆ ನೀಡಲಾಗಿದೆ. ಶಿಕ್ಷಕರಿಗಿಲ್ಲ, ಬೇರೆ ಸ್ಟಾಫ್‌ಗಳ ಕೈಲಿ ಸಮೀಕ್ಷೆ ಮಾಡಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಬೆಂಗಳೂರಿನಲ್ಲಿ ಸಮೀಕ್ಷೆ ಮಂದಗತಿಯಲ್ಲಿ ಸಾಗ್ತಿರೋದಕ್ಕೆ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ. ನಗರದಲ್ಲಿ ಇಲ್ಲಿವರೆಗೂ ಆಗಿರುವ ಸರ್ವೆ ಮಾಹಿತಿ ಪಡೆದುಕೊಂಡಿದ್ದಾರೆ. ಈ ವೇಳೆ ಯಾಕಿಷ್ಟು ನಿಧಾನ ಆಗ್ತಿದೆ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸಭೆ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಸಮೀಕ್ಷೆಗೆ ಇನ್ನೂ ಅವಕಾಶ ಕೊಡ್ತಿದ್ದೇವೆ. ಯಾರು ಯಾರು ಭಾಗಹಿಸಲ್ಲವೋ ಅವರು ಎಲ್ಲರೂ ಭಾಗವಹಿಸಬೇಕು. ಎಲ್ಲಾ ಸಮಾಜದವರು ಇರುವ ಅವಕಾಶ ಕಳೆದುಕೊಳ್ಳೋಕೆ ಹೋಗಬೇಡಿ. ಬೆಂಗಳೂರು ದಕ್ಷಿಣ, ಬೀದರ್, ಧಾರವಾಡ ಬಿಟ್ಟು ಉಳಿದ ಕಡೆ ಚೆನ್ನಾಗಿ ಆಗಿದೆ. ಅದಕ್ಕಾಗಿ ಇವಾಗ ಮತ್ತೆ 31 ರವರೆಗೆ ವಿಸ್ತರಣೆ ಮಾಡಿದ್ದೇವೆ. ಅ.21, 22, 23 ಹಬ್ಬದ ರಜೆ ಇದೆ. ಅವತ್ತು ಸಮೀಕ್ಷೆ ಇರಲ್ಲ. ಶಿಕ್ಷಕರು ಇರಲ್ಲ, ಬೇರೆ ನೌಕರರು ಬಳಸಿಕೊಂಡು ಸಮೀಕ್ಷೆ ಮಾಡಬೇಕು. ನಂತರ ಅ.24 ರಿಂದ 31ರವರೆಗೆ ಸಮೀಕ್ಷೆ ಮುಂದುವರಿಯಲಿದೆ. ಎಲ್ಲರು ಕೂಡ ಮಾಹಿತಿ ಕೊಡಬೇಕು ಎಂದು ತಿಳಿಸಿದ್ದಾರೆ.

  • ಆರ್‌ಎಸ್‌ಎಸ್‌ Vs ಸರ್ಕಾರ – ನ.2 ರಂದು ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಒಪ್ಪಿದ ಲಾಯರ್‌ | ಹೈಕೋರ್ಟ್‌ನಲ್ಲಿ ಏನಾಯಿತು?

    ಆರ್‌ಎಸ್‌ಎಸ್‌ Vs ಸರ್ಕಾರ – ನ.2 ರಂದು ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಒಪ್ಪಿದ ಲಾಯರ್‌ | ಹೈಕೋರ್ಟ್‌ನಲ್ಲಿ ಏನಾಯಿತು?

    ಕಲಬುರಗಿ: ಚಿತ್ತಾಪುರದಲ್ಲಿ (Chittapur) ಆರ್‌ಎಸ್‌ಎಸ್‌ ಪಥಸಂಚಲನ (RSS Route March) ವಿಚಾರ ಈಗ ಹೈಕೋರ್ಟ್‌ (High Court) ಮೆಟ್ಟಿಲೇರಿದೆ. ಆರ್‌ಎಸ್‌ಎಸ್‌ ವಾದವನ್ನು ಕೋರ್ಟ್‌ ಪುರಸ್ಕರಿಸಿದರೆ ನ.2 ರಂದು ಚಿತ್ತಾಪುರದಲ್ಲಿ ಪಥಸಂಚಲನ ನಡೆಯುವ ಸಾಧ್ಯತೆಯಿದೆ.

    ಐಟಿ, ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ತವರು ಕ್ಷೇತ್ರವಾದ ಚಿತ್ತಾಪುರದಲ್ಲಿ ಇಂದು ಆರ್‌ಎಸ್‌ಎಸ್‌ ಪಥಸಂಚಲನ ನಡೆಸಲು ಮುಂದಾಗಿತ್ತು. ಆದರೆ ತಾಲೂಕು ಆಡಳಿತ ಅನುಮತಿ ನೀಡದ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್‌ ಹೈಕೋರ್ಟ್‌ನಲ್ಲಿ ತುರ್ತು ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಪುರಸ್ಕರಿಸಿ ವಿಚಾರಣೆ ನಡೆಸಿದ ಕೋರ್ಟ್‌ ಇಂದು ಯಾವುದೇ ಆದೇಶ ಪ್ರಕಟಿಸದೇ ಮುಂದಿನ ವಿಚಾರಣೆಯನ್ನು ಅ.24ಕ್ಕೆ ಮುಂದೂಡಿದೆ.

    ವಿಚಾರಣೆ ಸಂದರ್ಭದಲ್ಲಿ ಆರ್‌ಎಸ್‌ಎಸ್‌ ಪರ ವಕೀಲರು ನ.2 ರಂದು ಪಥಸಂಚಲನ ನಡೆಸಲು ಅನುಮತಿ ನೀಡುವಂತೆ ಕೇಳಿದ್ದಾರೆ. ಇದನ್ನೂ ಓದಿ: ಕಾನೂನು ಸುವ್ಯವಸ್ಥೆ ಹಾಳಾಗಬಹುದು – ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಅನುಮತಿ ಇಲ್ಲ

    ವಿಚಾರಣೆಯಲ್ಲಿ ಏನಾಯ್ತು?
    ಅರ್ಜಿದಾರ ಅಶೋಕ್‌ ಪಾಟೀಲ್‌ ಪರವಾಗಿ ಹಿರಿಯ ವಕೀಲ ಎಂ ಅರುಣ್‌ ಶ್ಯಾಮ್‌ ವಾದಿಸಿದರು. ಈ ವೇಳೆ ಆರಂಭದಲ್ಲಿ ಪೀಠ ಪಥಸಂಚಲನಕ್ಕೆ ಅನುಮತಿ ಕೋರಿ ಯಾವ ಪ್ರಾಧಿಕಾರಕ್ಕೆ ಅನುಮತಿ ಕೇಳಬೇಕು? ಯಾವ ಕಾನೂನಿನ ಅಡಿ ಅನುಮತಿ ಕೋರಬೇಕು ಎಂಬ ವಿಚಾರದ ಬಗ್ಗೆ ಮಾತ್ರ ವಾದಿಸಿ ಎಂದು ಸೂಚಿಸಿತು.

    ಇದಕ್ಕೆ ಅರುಣ್‌ ಶಾಮ್‌ ಅ.17ಕ್ಕೆ ಚಿತ್ತಾಪುರದ ಕಾರ್ಯಕಾರಿ ಮ್ಯಾಜಿಸ್ಟ್ರೇಟ್‌ಗೆ ಅನುಮತಿ ಕೋರಲಾಗಿತ್ತು. ಆದರೆ ಅ.18 ರಂದು ಈ ಮನವಿಯನ್ನು ತಿರಸ್ಕರಿಸಿದ್ದಾರೆ ಎಂದು ಪೀಠದ ಗಮನಕ್ಕೆ ತಂದರು.

    ಈ ಸಂದರ್ಭದಲ್ಲಿ ಒಂದು ಗುಂಪು ಪಂಥಸಂಚಲನ ನಡೆಸಲು ಅವಕಾಶವಿದೆಯೇ? ಅದು ಪ್ರತಿಭಟನೆಯೇ ಆಗಿರಬೇಕಿಂದಿಲ್ಲ. ಅದು ಮೌನ ಪ್ರತಿಭಟನೆಯಾಗಿರಬಹುದು? ಜನರಲ್ಲಿ ಜಾಗೃತಿ ಮೂಡಿಸಲು ಇಚ್ಛಿಸಬಹುದು? ಇದಕ್ಕೆ ಅನುಮತಿ ಬೇಕೆ? ಹಾಗಾದರೆ ಯಾರಿಂದ ಅನುಮತಿ ಪಡೆಯಬೇಕು? ಯಾವ ಕಾನೂನು ಜಾರಿಯಲ್ಲಿದೆ. ಯಾವ ಕಾನೂನಿನ ನಿಬಂಧನೆಗೆ ನಾವು ಒಳಪಟ್ಟಿದ್ದೇವೆ. ಯಾರಿಗೆ ಅನುಮತಿ ಕೇಳಬೇಕು ಎಂಬುದು ಗೊತ್ತಾಗಬೇಕು. ಇಲ್ಲವಾದಲ್ಲಿ ನಾವು ನಿಯಮವಿಲ್ಲದ ಆಡಳಿತಕ್ಕೆ ಒಳಪಡುತ್ತೇವೆ ಎಂದು ಹೇಳಿತು.

    ಇದಕ್ಕೆ ಅರುಣ್‌ ಶ್ಯಾಮ್‌ ಅವರು ಪಥಸಂಚನವನ್ನು ರದ್ದುಪಡಿಸುವುದು ಅವರ ಉದ್ದೇಶವಾಗಿತ್ತು. ಹೀಗಾಗಿ ಅವರು ಅನುಮತಿ ನಿರಾಕರಿಸಿದ್ದಾರೆ ಎಂದು ಉತ್ತರಿಸಿದರು.

    ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ವಾದಿಸಿ, ಬೇರೊಂದು ಸಂಘಟನೆ ಇಂದು ಪಥಸಂಚಲಕ್ಕೆ ಅನುಮತಿ ಕೋರಿದೆ. ಹೀಗಾಗಿ ತಾಲೂಕು ಆಡಳಿತ ಯಾವುದೇ ಸಂಘಟನೆಗೆ ಪಥಸಂಚಲನ ನಡೆಸಲು ಅನುಮತಿ ನೀಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ:  ಪ್ರಿಯಾಂಕ್‌ ಕ್ಷೇತ್ರ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ – 12 ಪ್ರಶ್ನೆ ಕೇಳಿದ ಸರ್ಕಾರ

    ಇದಕ್ಕೆ ಪೀಠ ಎರಡೂ ಸಂಘಟನೆಗಳಿಗೆ ಬೇರೆ ಬೇರೆ ದಿನ ಅನುಮತಿ ನೀಡಿ ಎಂದಾಗ ಅರುಣ್‌ ಶ್ಯಾಮ್‌ ಇದು ಸಾಧ್ಯವಿಲ್ಲ. ಬೇರೆ ಸ್ಥಳ ನೀಡಬಹುದು ಎಂದು ಮನವಿ ಮಾಡಿದರು. ಕೊನೆಗೆ ನವೆಂಬರ್‌ 2 ರಂದು ಆರ್‌ಎಸ್‌ಎಸ್‌ ಪಥಸಂಚಲನ ನಡೆಸಲು ಅನುಮತಿಸಿದರೆ ಉತ್ತಮ. ಅಷ್ಟೇ ಅಲ್ಲದೇ ರಾಜ್ಯದ್ಯಂತ ಇದೂವರೆಗೆ 250 ಕಡೆ ಪಥಸಂಚಲನ ನಡೆಸಲಾಗಿದೆ. ಎಲ್ಲಿಯೂ ಸಮಸ್ಯೆಯಾಗಿಲ್ಲ. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲಾಗುವುದು ಎಂದು ಅರುಣ್‌ ಶ್ಯಾಮ್‌ ಮುಚ್ಚಳಿಕೆ ನೀಡಿದರು.

    ಕೊನೆಗೆ ಕೋರ್ಟ್‌ ಯಾವ ರಸ್ತೆ ಮಾರ್ಗ ಪಥಸಂಚಲನ ನಡೆಯಲಿದೆ? ಎಷ್ಟು ಜನ ಭಾಗವಹಿಸುತ್ತಾರೆ ಎಂಬುದನ್ನು ಅರ್ಜಿದಾರರು ಸರ್ಕಾರಕ್ಕೆ ನೀಡಬೇಕು. ಹೊಸದಾಗಿ ಅರ್ಜಿ ಸಲ್ಲಿಸಿ ಪಥ ಸಂಚಲನದ ಮಾಹಿತಿ, ದಿನಾಂಕ ಎಲ್ಲಾ ವಿವರಗಳನ್ನು ಒಳಗೊಂಡ ಮನವಿಯನ್ನು ಅರ್ಜಿದಾರರು ಜಿಲ್ಲಾಧಿಕಾರಿಗೆ ನೀಡಬೇಕು. ಇದರ ಪ್ರತಿಯನ್ನು ಅರ್ಜಿದಾರರು ತಹಶೀಲ್ದಾರ್‌, ಸ್ಥಳೀಯ ಪೊಲೀಸರಿಗೆ ನೀಡಬೇಕು ಎಂದು ಸೂಚಿಸಿತು.

    ಎಲ್ಲಾ ಮಾಹಿತಿಯನ್ನು ಪರಿಗಣಿಸಿ ಸರ್ಕಾರ ವರದಿ ಸಲ್ಲಿಸಬೇಕು. ಇಂದು ಅರ್ಜಿಗೆ ಸಂಬಂಧಿಸಿದಂತೆ ಮೆರಿಟ್‌ ಮೇಲೆ ಯಾವುದೇ ಆದೇಶ ನೀಡುವುದಿಲ್ಲ. ಸರ್ಕಾರದ ವರದಿ ಆಧರಿಸಿ ಪ್ರಕರಣ ಪರಿಗಣಿಸಲಾಗುವುದು ಎಂದು ಸೂಚಿಸಿದ ನ್ಯಾಯಾಲಯ ಅ. 24ರ ಮಧ್ಯಾಹ್ನ 3:30 ವಿಚಾರಣೆಯನ್ನು ಮುಂದೂಡಿತು.