Tag: Karnatak Election

  • ಭಾರೀ ಅಂತರದಿಂದ ಕಾಂಗ್ರೆಸ್ ಗೆಲುವು ಸಾಧಿಸಲಿದೆ- ಸಚಿವ ಎಂ.ಬಿ ಪಾಟೀಲ್

    ಭಾರೀ ಅಂತರದಿಂದ ಕಾಂಗ್ರೆಸ್ ಗೆಲುವು ಸಾಧಿಸಲಿದೆ- ಸಚಿವ ಎಂ.ಬಿ ಪಾಟೀಲ್

    ವಿಜಯಪುರ: ರಾಜ್ಯ ಹಾಗೂ ವಿಜಯಪುರ ಜಿಲ್ಲೆಯೆ ಹೈ ವೋಲ್ಟೇಜ್ ಮತಕ್ಷೇತ್ರ ಬಬಲೇಶ್ವರದಲ್ಲಿ 80% ಮತದಾನವಾಗಿದೆ. ಇದೇ ಮೊದಲನೆ ಬಾರಿಗೆ ಈ ಮಟ್ಟಕ್ಕೆ ಮತದಾನವಾಗಿದ್ದು, ಕಾಂಗ್ರೆಸ್ ಭಾರಿ ಅಂತರದಿಂದ ಜಯಭೇರಿ ಬಾರಿಸಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎಂ ಬಿ ಪಾಟೀಲ್ ಹೇಳಿದ್ದಾರೆ.

    ನನ್ನ ಮತಕ್ಷೇತ್ರದಲ್ಲಿ ಹೆಚ್ಚು ಮತದಾನ ಆಗಿದ್ದು ಖುಷಿ ಆಗಿದೆ. ನನ್ನ ವಿರುದ್ಧ ಹಲವು ಷಡ್ಯಂತ್ರ ಮಾಡಲಾಗಿದೆ. ನನ್ನ ಸೋಲಿಸಲು ವಿರೋಧ ಪಕ್ಷದವರು ಅನೇಕ ತಂತ್ರ ಕುತಂತ್ರಗಳನ್ನು ಮಾಡಿದರು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಸ್ವತಃ ಬಂದು ನನ್ನ ವಿರುದ್ಧ ಪ್ರಚಾರ ಮಾಡಿದರು. ಅದರ ಲಾಭ ನನಗೆ ಆಗಲಿದೆ. ಇದಕ್ಕೆ ಉತ್ತರ 15 ಕ್ಕೆ ಸಿಗಲಿದೆ ಕಾದು ನೋಡಿ ಎಂದರು.

    ರಾಜ್ಯದಲ್ಲಿ 120 ಸೀಟ್ ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದ ಕುರಿತು ಮಾತನಾಡಿದ ಅವರು, ಬಿಎಲ್‍ಡಿಇ ಸಂಸ್ಥೆಯ ನೋಟ್‍ಪ್ಯಾಡ್ ನಲ್ಲಿ ನನ್ನ ನಕಲಿ ಸಹಿ ಮಾಡಲಾಗಿದೆ. ನಕಲಿ ಸಹಿ ಮಾಡಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಕಳಿಸಲಾಗಿದೆ. ಇದರ ಹಿಂದೆ ಆರ್.ಎಸ್.ಎಸ್. ಹಾಗೂ ಬಿಜೆಪಿ ಕೈವಾಡವಿದೆ. ಅವರ ವಿರುದ್ಧ ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳತ್ತೇನೆ ಅಂದ್ರು.

  • ಪ್ರಚಾರಕ್ಕೆ ಬದಾಮಿ ಕ್ಷೇತ್ರಕ್ಕೆ ಹೋಗಲ್ಲ ಅಂದ್ರು ಯಶ್!

    ಪ್ರಚಾರಕ್ಕೆ ಬದಾಮಿ ಕ್ಷೇತ್ರಕ್ಕೆ ಹೋಗಲ್ಲ ಅಂದ್ರು ಯಶ್!

    ಚಿತ್ರದುರ್ಗ: ಬದಾಮಿ ಕ್ಷೇತ್ರವು ಬಾರಿ ಜಿದ್ದಾಜಿದ್ದಿನ ಕ್ಷೇತ್ರ. ಹೀಗಾಗಿ ಅಂತಹ ಜಿದ್ದಾಜಿದ್ದಿನ ಕ್ಷೇತ್ರಗಳಿಗೆ ನಾನು ಪ್ರಚಾರಕ್ಕೆ ಹೋಗಲ್ಲ ಎಂದು ನಟ ಯಶ್ ನಾಯಕನಟ್ಟಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

    ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ಬಹಿರಂಗ ಪ್ರಚಾರದ ವೇಳೆ ಮಾತನಾಡಿದ ಅವರು, ಜಿದ್ದಾಜಿದ್ದಿನ ಕ್ಷೇತ್ರದಲ್ಲಿ ಬಹುತೇಕ ಎರಡು ಕಡೆಯ ಅಭ್ಯರ್ಥಿಗಳು ಆತ್ಮೀಯರಾಗಿತ್ತಾರೆ. ಹೀಗಾಗಿ ಅಂತಹ ಕ್ಷೇತ್ರಕ್ಕೆ ನಾನು ಹೋಗಲ್ಲ ಎಂದಿದ್ದಾರೆ. ಇದನ್ನೂ ಓದಿ: ಸಿಎಂಗೆ ಬಿಗ್ ಶಾಕ್ ನೀಡಿದ ನಟ ಕಿಚ್ಚ ಸುದೀಪ್!

    ಅಷ್ಟೇ ಅಲ್ಲದೇ ಶ್ರೀರಾಮುಲು ನನಗೆ ಆತ್ಮೀಯರು ಅವರು ಸಾಮೂಹಿಕ ಮದುವೆ, ಇತರೆ ಕಾರ್ಯಕ್ರಮದ ಮೂಲಕ ಜನಸೇವೆ ಮಾಡಿದ್ದಾರೆ. ಹೀಗಾಗಿ ಅವರ ಕೆಲಸ ಇಷ್ಟವಾಗಿ ರಾಮುಲುರವರು ಪ್ರಚಾರಕ್ಕೆ ಆಹ್ವಾನ ನೀಡಿದ್ರಿಂದ ಈ ಕ್ಷೇತ್ರಕ್ಕೆ ಬಂದಿದ್ದೇನೆ. ಈ ಕ್ಷೇತ್ರದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾಗಬೇಕಿರುವುದರಿಂದ ಆ ನಿಟ್ಟಿನಲ್ಲಿ ಮುಂದಿನ ದಿನದಲ್ಲಿ ಇದಕ್ಕೆ ಹೋರಾಟ ಮಾಡುತ್ತೇನೆ ಎಂದಿದ್ದಾರೆ.

    ರಾಮುಲು ಜೊತೆ ಕೈಜೋಡಿಸಿ ಅಭಿವೃದ್ಧಿ ಪರ ನಿರಂತರ ಹೋರಾಟ ನಡೆಸುತ್ತೇನೆ. ನಾನು ಯಾವುದೇ ಪಕ್ಷದ ಪರ ಪ್ರಚಾರವಿಲ್ಲ. ನನಗೆ ಆತ್ಮೀಯ ಅಭ್ಯರ್ಥಿಗಳ ಪರ ಮಾತ್ರ ಪ್ರಚಾರ ಮಾಡುವೆ ಎಂದ್ರು. ಇದೇ ವೇಳೆ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಅಜಾ ಕೂಗಿದಾಗ ಭಾಷಣವನ್ನು ನಿಲ್ಲಿಸುವಂತೆ ಮಾಜಿ ಸಂಸದೆ ಶಾಂತ ಹೇಳಿದರಿಂದ ಭಾಷಣವನ್ನು ಮೊಟಕುಗೊಳಿಸಿ ಅಜಾನ್ ಮುಗಿದ ನಂತರ ಭಾಷಣವನ್ನು ಯಶ್ ಮುಂದುವರೆಸಿ ಧಾರ್ಮಿಕ ಪ್ರಾರ್ಥನೆಗೆ ಗೌರವ ಸಲ್ಲಿಸಬೇಕು ಎಂದಿದ್ದಾರೆ.