Tag: karnakata elections 2018

  • ಕೈ ಅಭ್ಯರ್ಥಿ ಆನಂದ್ ಸಿಂಗ್ ಹೆಸರಿದ್ದ ಆಸನಗಳನ್ನು ಒಡೆದ ಚುನಾವಣಾ ಆಯೋಗ!

    ಕೈ ಅಭ್ಯರ್ಥಿ ಆನಂದ್ ಸಿಂಗ್ ಹೆಸರಿದ್ದ ಆಸನಗಳನ್ನು ಒಡೆದ ಚುನಾವಣಾ ಆಯೋಗ!

    ಬಳ್ಳಾರಿ: ಮಾಜಿ ಶಾಸಕ, ವಿಜಯನಗರದ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಸಿಂಗ್ ಹೆಸರಿದ್ದ ಆಸನಗಳನ್ನು ಚುನಾವಣಾ ಆಯೋಗ ಒಡೆದು ಹಾಕಿದೆ.

    ಹೊಸಪೇಟೆ ಮುನ್ಸಿಪಲ್ ಮೈದಾನದಲ್ಲಿ ವಾಯುವಿಹಾರಿಗಳಿಗಾಗಿ ಮೈದಾನದ ಸುತ್ತೆಲ್ಲಾ ನೂರಾರು ಆಸನಗಳನ್ನು ಅಳವಡಿಸಲಾಗಿತ್ತು. ಇದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದಸಿಂಗ್ ಹೆಸರಿದ್ದ ಕಾರಣ ಚುನಾವಣಾ ಅಧಿಕಾರಿಗಳು ಜೆಸಿಬಿ ಮೂಲಕ ಎಲ್ಲ ಆಸನಗಳನ್ನು ಒಡೆದು ಹಾಕಿದ್ದಾರೆ.

    ವಾಯು ವಿಹಾರಿಗಳಿಗಾಗಿ ನಿರ್ಮಾಣವಾಗಿದ್ದ ಆಸನಗಳನ್ನು ಒಡೆದು ಹಾಕಿರುವುದು ಆನಂದ್‍ಸಿಂಗ್ ಅಭಿಮಾನಿಗಳು ಹಾಗೂ ವಾಯುವಿಹಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಆನಂದಸಿಂಗ್ ಹೆಸರಿದ್ದ ಮಾತ್ರಕ್ಕೆ ಆಸನಗಳನ್ನು ಒಡೆದು ಹಾಕಿದ್ದು ಸರಿನಾ ಅಂತಾ ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಚುನಾವಣೆಯ ನೀತಿ ಸಂಹಿತೆ ಜಾರಿಯಾದ ನಂತರ ನಾಮಫಲಕ, ಬೋರ್ಡ್ ಬ್ಯಾನರ್ ಗಳಲ್ಲಿ ಅಭ್ಯರ್ಥಿಗಳ ಹೆಸರನ್ನು ಹಾಕುವುದಕ್ಕೆ ನಿಷೇಧವಿದೆ. ಹೀಗಾಗಿ ನಾನು ಕಾನೂನು ಪ್ರಕಾರವಾಗಿ ಆಸನಗಳನ್ನು ಒಡೆದು ಹಾಕಿದ್ದೇವೆ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.