Tag: karishma tanna

  • ಪ್ರಿಯಕರನನ್ನು ವರಿಸಿದ ನಟಿ ಕರೀಷ್ಮಾ ತನ್ನಾ

    ಪ್ರಿಯಕರನನ್ನು ವರಿಸಿದ ನಟಿ ಕರೀಷ್ಮಾ ತನ್ನಾ

    ಬೆಂಗಳೂರು: ನಟಿ ಕರೀಷ್ಮಾ ತನ್ನಾ ಅವರು ಪ್ರಿಯಕರ ವರುಣ್ ಬಂಗೇರಾ ಜೊತೆಗೆ ನಿನ್ನೆ ಹಸೆಮಣೆ ಏರಿದ್ದಾರೆ.

    ನಿನ್ನೆ ಸಂಜೆ ವೇಳೆಗೆ ಕರೀಷ್ಮಾ ಹಾಗೂ ವರುಣ್ ಮದುವೆ ನೆರವೇರಿದೆ. ವರುಣ್ ಅವರು ಕರೀಷ್ಮಾ ಹಣೆಗೆ ಕುಂಕುಮ ಇಡುತ್ತಿರುವ ಫೋಟೋ ವೈರಲ್ ಆಗಿದೆ. ಮದುವೆಯ ಫೋಟೋ ಹಾಗೂ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ  ಹರಿದಾಡುತ್ತಿವೆ.

    ಗುರುವಾರದಿಂದಲೇ ಕರೀಷ್ಮಾ ಹಾಗೂ ವರುಣ್ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿತ್ತು. ಈ ಬಗ್ಗೆ ಕರೀಷ್ಮಾ ಅಪ್‍ಡೇಟ್ ನೀಡುತ್ತಲೇ ಬಂದಿದ್ದರು. ಗುರುವಾರ ಹಳದಿ ಕಾರ್ಯಕ್ರಮಗಳು ಜೋರಾಗಿ ನಡೆದಿತ್ತು. ಆ ಬಳಿಕ ಮೆಹಂದಿ ಕಾರ್ಯಕ್ರಮ ಕೂಡ ಅದ್ದೂರಿಯಾಗಿ ನಡೆದಿತ್ತು. ಇದನ್ನೂ ಓದಿ: ಪ್ಯಾಡಿಂಗ್ ಧರಿಸುವುದರ ಹಿಂದಿನ ಕಾರಣ ಬಿಚ್ಚಿಟ್ಟ ‘ನಿನ್ನಿಂದಲೇ’ ಹೀರೋಯಿನ್

     

    View this post on Instagram

     

    A post shared by @karishmatanna.queen.portugal


    ಕೆಲವು ವರ್ಷಗಳ ಹಿಂದೆ ಪಾರ್ಟಿ ಒಂದರಲ್ಲಿ ವರುಣ್ ಹಾಗೂ ಕರೀಷ್ಮಾ ಭೇಟಿ ಆಗಿದ್ದರು. ಆ ಬಳಿಕ ಇವರ ನಡುವೆ ಫ್ರೆಂಡ್‍ಶಿಪ್ ಬೆಳೆದಿತ್ತು. ಅದು ಪ್ರೀತಿಗೆ ತಿರುಗಿ ಈ ಜೋಡಿ ನವೆಂಬರ್‌ನಲ್ಲಿ ನಿಶ್ಚಿತಾರ್ಥ್ ಮಾಡಿಕೊಂಡಿತ್ತು. ಇದೀಗ ಕುಟುಂಬದ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.

    2001ರಲ್ಲೇ ಕರೀಷ್ಮಾ ಕಿರುತೆರೆ ಲೋಕಕ್ಕೆ ಕಾಲಿಟ್ಟರು. ಆ ಬಳಿಕ ಹಲವು ಸೀರಿಯಲ್ ನಟಿಸಿದ್ದಾರೆ. ನಂತರ ಇವರಿಗೆ ಸಿನಿಮಾದಲ್ಲಿ ನಟಿಸುವ ಹಲವು ಅವಕಾಶಗಳು ಬಂದಿದ್ದವು. ಕನ್ನಡದಲ್ಲಿ ಐ ಆ್ಯಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ ಚಿತ್ರದಲ್ಲಿ ಪ್ರೇಮ್‍ಗೆ ಜೊತೆಯಾಗಿ ನಟಿಸಿದ್ದಾರೆ.