Tag: karimani serial

  • ಚಾಮರಾಜಪೇಟೆಯಲ್ಲಿ ನಡೆಯಲಿದೆ ವಿನೋದ್ ದೊಂಡಾಳೆ ಅಂತ್ಯಕ್ರಿಯೆ

    ಚಾಮರಾಜಪೇಟೆಯಲ್ಲಿ ನಡೆಯಲಿದೆ ವಿನೋದ್ ದೊಂಡಾಳೆ ಅಂತ್ಯಕ್ರಿಯೆ

    ‘ಕರಿಮಣಿ’ (Karimani), ‘ಗಂಗೆ ಗೌರಿ’ ಸೇರಿದಂತೆ ಹಲವು ಸೀರಿಯಲ್‌ಗಳನ್ನು ನಿರ್ದೇಶಿಸಿದ್ದ ವಿನೋದ್ ದೊಂಡಾಳೆ (Vinod Dondale) ಜು.20ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು (ಜು.21) ಚಾಮರಾಜಪೇಟೆ ಟಿ.ಆರ್ ಮಿಲ್‌ನಲ್ಲಿ ವಿನೋದ್ ದೊಂಡಾಳೆ ಅಂತ್ಯಕ್ರಿಯೆ ನಡೆಯಲಿದೆ.

    ನಾಗರಭಾವಿಯಲ್ಲಿರುವ ನಿವಾಸದಲ್ಲಿ ನಿರ್ದೇಶಕ ವಿನೋದ್ ಅಂತಿಮ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದ್ದು, ಇಂದು ಮಧ್ಯಾಹ್ನ 12 ಗಂಟೆಯ ನಂತರ ಚಾಮರಾಜಪೇಟೆ ಟಿ.ಆರ್ ಮಿಲ್‌ನಲ್ಲಿ ವಿನೋದ್ ಅಂತ್ಯಕ್ರಿಯೆ ನಡೆಯಲಿದೆ. ಇದನ್ನೂ ಓದಿ:ಸಿನಿಮಾ ಟಿಕೆಟ್, ಒಟಿಟಿ ಸಬ್‌ಸ್ಕ್ರಿಪ್ಶನ್ ಮೇಲೆ ಸೆಸ್‌ ವಿಧಿಸಲು ರಾಜ್ಯ ಸರ್ಕಾರ ಪ್ಲ್ಯಾನ್‌!

    ಅಂದಹಾಗೆ, ಕಿರುತೆರೆಯಿಂದ ಸಿನಿಮಾ ರಂಗಕ್ಕೂ ಎಂಟ್ರಿ ಕೊಟ್ಟಿದ್ದ ಇವರು ಸದ್ಯ ನೀನಾಸಂ ಸತೀಶ್ ನಟನೆಯ ‘ಅಶೋಕ ಬ್ಲೇಡ್’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದರು. ಈಗಾಗಲೇ ಸಿನಿಮಾ ಶೇಕಡ 90ರಷ್ಟು ಚಿತ್ರೀಕರಣ ಮುಗಿಸಿದೆ. ಮುಂದಿನ ಹಂತದ ಚಿತ್ರೀಕರಣಕ್ಕೂ ವಿನೋದ್ ಸಿದ್ಧತೆ ಮಾಡಿಕೊಂಡಿದ್ದರು. ನಿನ್ನೆಯಷ್ಟೇ ಶೂಟಿಂಗ್ ಕುರಿತಂತೆ ನೀನಾಸಂ ಸತೀಶ್ ಜೊತೆ ಚರ್ಚೆ ಮಾಡಿದ್ದರು.

    ವಿನೋದ್ ದೊಂಡಾಳೆ ಅವರು ಅತಿಥಿ, ಬೇರು, ತುತ್ತೂರಿ, ವಿಮುಕ್ತಿ ಸೇರಿದಂತೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದರು.

  • 5 ವರ್ಷಗಳ ಬಳಿಕ ನಟನೆಗೆ ಮರಳಿದ ‘ಅಮೆರಿಕಾ ಅಮೆರಿಕಾ’ ಚಿತ್ರದ ನಟಿ

    5 ವರ್ಷಗಳ ಬಳಿಕ ನಟನೆಗೆ ಮರಳಿದ ‘ಅಮೆರಿಕಾ ಅಮೆರಿಕಾ’ ಚಿತ್ರದ ನಟಿ

    ದೊರೆ, ಬಂಗಾರದ ಮನೆ, ‘ಅಮೆರಿಕಾ ಅಮೆರಿಕಾ’ (America America) ಚಿತ್ರಗಳ ಮೂಲಕ ಮೋಡಿ ಮಾಡಿದ್ದ ನಟಿ ಹೇಮಾ ಪ್ರಭಾತ್ (Hema Prabath) ಮತ್ತೆ ನಟನೆಗೆ ಮರಳಿದ್ದಾರೆ. ಆದರೆ ಈ ಸಿನಿಮಾ ಬದಲು ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಜನಪ್ರಿಯ ಸೀರಿಯಲ್‌ವೊಂದಕ್ಕೆ ಹೇಮಾ ಸಾಥ್ ನೀಡಿದ್ದಾರೆ.

    90ರ ದಶಕದಲ್ಲಿ ಪಡ್ಡೆಹುಡುಗರ ನಿದ್ದೆಗೆಡಿಸಿದ ಚೆಲುವೆಯಾಗಿ ಹೇಮಾ ಕನ್ನಡಿಗರ ಮನಗೆದ್ದಿದ್ದರು. ಬಳಿಕ ಮದುವೆ, ಸಂಸಾರ ಅಂತ ನಟಿ ವೈಯಕ್ತಿಕ ಬದುಕಿನಲ್ಲಿ ಬ್ಯುಸಿಯಾದರು. ಆದರೆ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿದ್ದರು.

    ಮೈಸೂರಿನ ಬೆಡಗಿ ಸ್ಪಂದನಾ ಸೋಮಣ್ಣ, ಅಶ್ವೀನ್ ನಟನೆಯ ‘ಕರಿಮಣಿ’ (Karimani) ಎಂಬ ಸೀರಿಯಲ್‌ಗೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ತಿದೆ. ಕರಿಮಣಿ ಧಾರಾವಾಹಿಯಲ್ಲಿ ಹೇಮಾ ನಟಿಸುತ್ತಿದ್ದಾರೆ. ಅವರ ಪಾತ್ರಕ್ಕೆ ಪ್ರಾಮುಖ್ಯತೆ ಇದೆ.

    ಅಂದಹಾಗೆ, 5 ವರ್ಷಗಳ ಹಿಂದೆ ರಕ್ಷಾ ಬಂಧನ (Raksha Bandhana) ಎಂಬ ಸೀರಿಯಲ್ ಕಡೆಯದಾಗಿ ನಟಿ ಕಾಣಿಸಿಕೊಂಡಿದ್ದರು. ಈಗ ಮತ್ತೆ ‘ಕರಿಮಣಿ’ (Karimani) ಸೀರಿಯಲ್‌ಗೆ ಹೇಮಾ ಬಂದಿರೋದು ವಿಶೇಷ. ಇದನ್ನೂ ಓದಿ:ಡ್ರೋನ್ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ- ಫೇಕ್ ಪ್ರಮೋಟರ್ ವಿರುದ್ಧ ವಿನಯ್ ಕಿಡಿ

    ಹೇಮಾ ಪ್ರಭಾತ್ ಅವರು ಅದೆಷ್ಟೇ ಸಿನಿಮಾ ಮಾಡಿದ್ರು ಕೂಡ ಇಂದಿಗೂ ಅವರನ್ನು ಕರೆಯೋದು ರಮೇಶ್ ಅರವಿಂದ್ (Ramesh Aravind) ನಾಯಕಿ ಎಂದೇ ಹೈಲೆಟ್ ಆಗಿದ್ದಾರೆ. ‘ಅಮೆರಿಕಾ ಅಮೆರಿಕಾ’ ಚಿತ್ರದಲ್ಲಿ ಭೂಮಿಕಾ ಎಂಬ ಪಾತ್ರದಲ್ಲಿ ನಟಿಸಿದ್ದರು. ಈಗ ಮತ್ತೆ ಹೇಮಾ ಕಿರುತೆರೆ ಬಂದಿರೋದು ಫ್ಯಾನ್ಸ್‌ ಖುಷಿ ಕೊಟ್ಟಿದೆ.