Tag: karimani

  • ಕರಿಮಣಿ ಮಾಲೀಕ ಸತ್ತಿದ್ದು ರೀಲ್ಸ್‌ಗಲ್ಲಾ, ಸಾಲಕ್ಕೆ- ಪತ್ನಿ ಸ್ಪಷ್ಟನೆ

    ಕರಿಮಣಿ ಮಾಲೀಕ ಸತ್ತಿದ್ದು ರೀಲ್ಸ್‌ಗಲ್ಲಾ, ಸಾಲಕ್ಕೆ- ಪತ್ನಿ ಸ್ಪಷ್ಟನೆ

    ಚಾಮರಾಜಗರ: ಪತ್ನಿಯ ಕರಿಮಣಿ ರೀಲ್ಸ್‌ಗೆ (Reels) ಮನನೊಂದು ಪತಿ ಕುಮಾರ್ ಆತ್ಮಹತ್ಯೆ  (Suicide) ಮಾಡಿಕೊಂಡು ಸಾವನ್ನಪ್ಪಿದ್ದ ಪ್ರಕರಣಕ್ಕೆ ಆತನ ಪತ್ನಿ (Wife)  ಪ್ರತಿಕ್ರಿಯಿಸಿ ಗಂಡ ಸಾಲಬಾಧೆಯಿಂದ ಮೃತಪಟ್ಟಿದ್ದು ಎಂದು ಸ್ಟಷ್ಟನೆ ನೀಡಿದ್ದಾರೆ.

    ಹನೂರು ತಾಲೂಕಿನ ಪಿಜಿ ಪಾಳ್ಯ ಗ್ರಾಮದ ಕುಮಾರ್ (33) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕುಮಾರ್ ಪತ್ನಿ ರೂಪ ಪ್ರತಿಕ್ರಿಯಿಸಿ, ನಾನು ರೀಲ್ಸ್ ಮಾಡಿದಕ್ಕೆ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ಈ ಹಿಂದಿನಿಂದಲೂ ನಾನು ರೀಲ್ಸ್ ಮಾಡಿದ್ದೇನೆ. ಅದು ನನ್ನ ಪತಿ ಕುಮಾರ್‌ಗೂ ತಿಳಿದಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಸದ್ದಿಲ್ಲದೇ ಬಸ್‌ ಹತ್ತಿ, ಮೊಬೈಲ್‌ ಎಗರಿಸಿಕೊಂಡು ಹೋಗ್ತಿದ್ರು; 120 ಮೊಬೈಲ್‌ಗಳೊಂದಿಗೆ ಕಳ್ಳಿಯರ ಗ್ಯಾಂಗ್‌ ಸಿಕ್ಕಿಬಿದ್ದಿದ್ದು ಹೇಗೆ?

    ನನ್ನ ಮೇಲೆ ಅವರ ಕುಟುಂಬಸ್ಥರು ಸುಮ್ಮನೆ ಆರೋಪಿಸುತ್ತಿದ್ದಾರೆ. ನಿಜವಾಗಿಯೂ ನನ್ನ ಪತಿ ಸಾವಿಗೆ ಅವರು ಮಾಡಿಕೊಂಡಿದ್ದ ಸಾಲವೇ ಕಾರಣ. ಕುಮಾರ್ ದಿನ ನಿತ್ಯ ಕುಡಿಯುವ ಮತ್ತು ಇಸ್ಪೀಟ್ ಆಡುವ ಚಟವಿತ್ತು. ಈ ಹಿನ್ನಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಾವಿಗೆ ನಾನು ಮಾಡಿದ್ದ ರೀಲ್ಸ್ ಕಾರಣವಲ್ಲವೆಂದು ಪತಿ ಸಾವಿನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:  ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ – ವಾರ್ಡನ್, ತಾಲೂಕಾಧಿಕಾರಿ ವಿರುದ್ಧ ದೂರು ದಾಖಲು

    ಕುಮಾರ್ ಪತ್ನಿ ರೂಪಾ ಗುಂಡಾಲ್ ಜಲಾಶಯಕ್ಕೆ ಹೋಗಿದ್ದ ವೇಳೆ ಸೋದರ ಮಾವ ಗೋವಿಂದ ಹಾಗೂ ಸಹೋದರಿ ದೀಪಾ ಜೊತೆಗೆ ಕರಿಮಣಿ ಮಾಲೀಕ ನೀನಲ್ಲ ಎಂಬ ಹಾಡಿಗೆ ರೀಲ್ಸ್ ಮಾಡಿದ್ದರು. ರೂಪಾಳ ಈ ರೀಲ್ಸ್ ನೋಡಿ ಕುಮಾರ್ ಸ್ನೇಹಿತರು ಆತನನ್ನು ರೇಗಿಸುತ್ತಿದ್ದರು. ಇದರಿಂದ ಬೇಸರಗೊಂಡು ಆತ್ಮಹತ್ಯೆಗೆ ಶರಣಾಗಿದ್ದ ಎಂದು ಕುಮಾರ್ ಕುಟುಂಬಸ್ಥರು ರೂಪಾ ಮೇಲೆ ಆರೋಪ ಮಾಡಿದ್ದರು. ಇದನ್ನೂ ಓದಿ: ಹೃದಯಾಘಾತ – ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮಲಗಿದಲ್ಲೇ ಸಾವು!

    ಈ ರೀಲ್ಸ್‌ಗೂ ಮುನ್ನಾ ಪತಿ ಕುಮಾರ್ ಹಾಗೂ ಪತ್ನಿ ರೂಪಾ ನಡುವೆ ಹಲವು ಬಾರಿ ಕೌಟುಂಬಿಕ ಕಲಹ ನಡೆದಿತ್ತು. ರೀಲ್ಸ್ ಮಾಡದಂತೆ ಹಲವು ಸಲ ಎಚ್ಚರಿಕೆ ಕೂಡ ನೀಡಿದ್ದರು. ಆದರೆ ಇದನ್ನೂ ಲೆಕ್ಕಿಸದೆ ರೂಪಾ ರೀಲ್ಸ್ ಮಾಡಿದ್ದರು. ಇದನ್ನೂ ಓದಿ:  ಬಣ್ಣದ ಕಾರ್ಖಾನೆಯಲ್ಲಿ ಭೀಕರ ಅಗ್ನಿ ದುರಂತ – 11 ಮಂದಿ ಸಜೀವ ದಹನ

  • ‘ಕರಿಮಣಿ ಮಾಲೀಕ ನೀನಲ್ಲ’- ಪತ್ನಿ ರೀಲ್ಸ್‌ನಿಂದ ಬೇಸತ್ತು ಪತಿ ಸೂಸೈಡ್

    ‘ಕರಿಮಣಿ ಮಾಲೀಕ ನೀನಲ್ಲ’- ಪತ್ನಿ ರೀಲ್ಸ್‌ನಿಂದ ಬೇಸತ್ತು ಪತಿ ಸೂಸೈಡ್

    ಚಾಮರಾಜನಗರ: ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡಿಂಗ್ ರೀಲ್ಸ್ (Trending Reels) ಅಂದ್ರೆ ಅದು ಕರಿಮಣಿ ಮಾಲೀಕ ನೀನಲ್ಲ (Karimani Malika Neenalla). ಈ ರೀಲ್ಸ್ (Wife Reels) ಇದೀಗ ಒಬ್ಬ ವ್ಯಕ್ತಿಯ ಸಾವಿಗೆ ಕಾರಣವಾಗಿದೆ.

    ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಿಜಿ ಪಾಳ್ಯ ಗ್ರಾಮದ ಕುಮಾರ್ (33) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕುಮಾರ್ ಪತ್ನಿ ರೂಪಾ ಗುಂಡಾಲ್ ಜಲಾಶಯಕ್ಕೆ ಹೋಗಿದ್ದ ವೇಳೆ ಸೋದರ ಮಾವ ಗೋವಿಂದ ಹಾಗೂ ಸಹೋದರಿ ದೀಪಾ ಜೊತೆಗೆ ಕರಿಮಣಿ ಮಾಲೀಕ ನೀನಲ್ಲ ಎಂಬ ಹಾಡಿಗೆ ರೀಲ್ಸ್ ಮಾಡಿದ್ದರು. ಇದನ್ನೂ ಓದಿ: ಫ್ಲಾಟ್‌ಗೆ ಕರೆಸಿಕೊಂಡು ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ ರೇಪ್‌; ನಾಲ್ವರ ಬಂಧನ

    ಈ ರೀಲ್ಸ್ ಗೂ ಮುನ್ನಾ ಪತಿ ಕುಮಾರ್ ಹಾಗೂ ಪತ್ನಿ ರೂಪಾ ನಡುವೆ ಹಲವು ಬಾರಿ ಕೌಟುಂಬಿಕ ಕಲಹ ನಡೆದಿತ್ತು. ರೀಲ್ಸ್ ಮಾಡದಂತೆ ಹಲವು ಸಲ ಎಚ್ಚರಿಕೆ ಕೂಡ ನೀಡಿದ್ದರು. ಆದರೆ ಇದನ್ನೂ ಲೆಕ್ಕಿಸದೆ ರೂಪಾ ರೀಲ್ಸ್ ಮಾಡಿದ್ದರು. ರೂಪಾ ರೀಲ್ಸ್ ನೋಡಿದ್ದ ಕುಮಾರ್ ಸ್ನೇಹಿತರು ರೇಗಿಸಿದ್ದರು. ಇದರಿಂದ ಮನಸ್ಸಿಗೆ ಕುಮಾರ್ ಬೇಸರಗೊಂಡಿದ್ದರು. ಪತ್ನಿಯ ಬಳಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ಕೂಡ ಮಾಡಿಕೊಂಡಿದ್ದರಂತೆ. ಪತ್ನಿ ರೂಪಾ ಕುಮಾರ್ ಮಾತಿಗೆ ಸೊಪ್ಪು ಹಾಕಿಲ್ಲವೆಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಕುಮಾರ್ ಕುಟುಂಬಸ್ಥರು ರೂಪಾ, ಯಶೋದಾ, ಗೋವಿಂದ ಮೂವರ ಮೇಲೂ ದೂರು ಕೊಟ್ಟಿದ್ದಾರೆ. ಮೂವರು ನಮ್ಮ ಅಣ್ಣನ ಸಾವಿಗೆ ಕಾರಣರಾಗಿದ್ದು, ಪ್ರಕರಣ ದಾಖಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಹಿಂದೆಯೂ ಕೂಡ ರೂಪಾ ಹಾಗೂ ಕುಮಾರ್ ನಡುವೆ ಕಲಹ ನಡೆದಿತ್ತು. ಆ ವೇಳೆಯೂ ಆತ್ಮಹತ್ಯೆಗೆ ಯತ್ನಿಸಿದ್ದನು. ನಂತರ ಎಲ್ಲಾ ಸೇರಿ ಬಿಡಿಸಿದ್ದೇವು. ಈಗ ಮತ್ತೆ ರೀಲ್ಸ್ ಹಾಗೂ ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆದು ಮನನೊಂದು ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ದೂರು ಕೊಟ್ಟಿದ್ದಾರೆ.

    ಒಟ್ಟಿನಲ್ಲಿ ರೀಲ್ಸ್ ಹುಚ್ಚಿನಿಂದ ಪತಿಯ ಪ್ರಾಣ ಪಕ್ಷಿ ಹಾರಿಹೋಗಿದೆ.

  • ‘ಕರಿಮಣಿ’ ಕಥೆ ಹೇಳಲು ಸಜ್ಜಾದ ಸ್ಪಂದನಾ ಸೋಮಣ್ಣ

    ‘ಕರಿಮಣಿ’ ಕಥೆ ಹೇಳಲು ಸಜ್ಜಾದ ಸ್ಪಂದನಾ ಸೋಮಣ್ಣ

    ಟಿ ಸ್ಪಂದನಾ ಸೋಮಣ್ಣ (Spandana Somanna) ಅವರು ‘ಗೃಹಪ್ರವೇಶ’ ಸೀರಿಯಲ್ ಬಳಿಕ ‘ಕರಿಮಣಿ’ (Karimani) ಕಥೆ ಹೇಳಲು ಇದೀಗ ರೆಡಿಯಾಗಿದ್ದಾರೆ. ಸಿನಿಮಾ ಜೊತೆಗೆ ಕಿರುತೆರೆಯತ್ತ ನಟಿ ಮುಖ ಮಾಡಿದ್ದಾರೆ. ಇದನ್ನೂ ಓದಿ: ದರ್ಶನ್ ಜೊತೆಗಿನ ಸಮಸ್ಯೆ ಬೇಗ ಹುಡುಕಿಕೊಳ್ಳಿ ಅಂತಿದ್ದಾರೆ ಸುದೀಪ್ ಫ್ಯಾನ್ಸ್

    ಈ ಧಾರಾವಾಹಿಯಲ್ಲಿ ಎರಡು ಮನಸ್ಸುಗಳನ್ನು ಒಂದು ಮಾಡುವ ಈ ‘ಕರಿಮಣಿ’ ಧಾರಾವಾಹಿಯಲ್ಲಿ ನಾಯಕಿ ಹಾಗೂ ನಾಯಕ ಇಬ್ಬರ ಆಲೋಚನೆಗಳು ಡಿಫರೆಂಟ್ ಆಗಿದ್ದು,‌ ಮುಂದೆ ಇಬ್ಬರು ಹೇಗೆ ಒಂದಾಗುತ್ತಾರೆ ಎಂಬ ಕುತೂಹಲವಿದೆ. ಯಾಕೆಂದರೆ ಪ್ರೊಮೋದಲ್ಲೇ ನಾಯಕಿ ಸಾಹಿತ್ಯಳ ಮದುವೆ ನಡೆಯುತ್ತಿದ್ದು, ನಾಯಕ ಕರ್ಣ ಈ ಮದುವೆಯನ್ನು ತಡೆಯಬೇಕು ಎಂದು ಹೊರಟಿದ್ದಾನೆ.

    ಮನೆಗೆ ಹೆಣ್ಣು ಮಗಳ ಪ್ರಾಮುಖ್ಯತೆ ಎಷ್ಟಿರುತ್ತದೆ ಎಂಬುದು ತಿಳಿದಿರುವ ಕರ್ಣ, ಸಾಹಿತ್ಯ ಬಗ್ಗೆ ತಪ್ಪಾಗಿ ತಿಳಿದುಕೊಂಡಿದ್ದು, ಆಕೆ ಕೆಟ್ಟವಳು ಅವಳು ಮದುವೆಯಾಗಿ ಯಾರ ಮನೆಗೂ ಅನ್ಯಾಯವಾಗಬಾರದು ಎಂದಿದ್ದಾನೆ. ಸಾಹಿತ್ಯ ಮತ್ತು ಕರ್ಣ ಇಬ್ಬರ ಸಂಬಂಧವೇನು? ಇವರಿಬ್ಬರು ಕಥೆ ಏನು ಎಂಬುದು ಧಾರಾವಾಹಿ ಪ್ರಾರಂಭವಾದ ನಂತರವೇ ತಿಳಿಯಬೇಕಿದೆ. ಅಂದಹಾಗೆ, ವಾಹಿನಿಯಲ್ಲಿ ಪ್ರಸಾರ ಸಮಯ ಇನ್ನೂ ರಿವೀಲ್ ಮಾಡಿಲ್ಲ.

    ಮೈಸೂರಿನ ಬೆಡಗಿ ಸ್ಪಂದನಾಗೆ ನಾಯಕನಾಗಿ ಅಶ್ವಿನ್ ಕಾಣಿಸಿಕೊಂಡಿದ್ದಾರೆ. ಸದ್ಯ ‘ಕರಿಮಣಿ’ ಸೀರಿಯಲ್ ತುಣುಕು ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ:ನಶೆಯ ನಾಕಾಶೆಯಲ್ಲಿ ‘ಸಾರಾಂಶ’ದ ನಿನಾದ

    ಸದ್ಯ ‘ಸ್ಪಂದನಾ’ ಕನ್ನಡ ಸಿನಿಮಾಗಳ ಜೊತೆ ಪರಭಾಷೆಯ ಸೀರಿಯಲ್‌ನಲ್ಲಿಯೂ ನಟಿಸಿ ಬಂದಿದ್ದಾರೆ. ಇದೀಗ ಒಂದಿಷ್ಟು ಸಿನಿಮಾ ಕಥೆಗಳು ಮಾತುಕತೆ ಹಂತದಲ್ಲಿದೆ. ಇದರ ನಡುವೆ ‘ಕರಿಮಣಿ’ ಸೀರಿಯಲ್ ಮೂಲಕ ಬರುತ್ತಿರೋ ಸ್ಪಂದನಾ ಪ್ರೇಕ್ಷಕರ ಮನಗೆಲ್ಲುತ್ತಾರಾ ಕಾಯಬೇಕಿದೆ.

  • ತಾಯಿ ಮಾಂಗಲ್ಯ ಕದ್ದು ಲವರ್‍ಗೆ ಕೊಟ್ಳು : ನ್ಯಾಯಕ್ಕಾಗಿ ಅಲೆಯುತ್ತಿದ್ದಾಳೆ ಕಾರವಾರದ ಪ್ರೇಯಸಿ

    ತಾಯಿ ಮಾಂಗಲ್ಯ ಕದ್ದು ಲವರ್‍ಗೆ ಕೊಟ್ಳು : ನ್ಯಾಯಕ್ಕಾಗಿ ಅಲೆಯುತ್ತಿದ್ದಾಳೆ ಕಾರವಾರದ ಪ್ರೇಯಸಿ

    ಕಾರವಾರ: ಪ್ರೀತಿ ಮಾಯೆ ಹುಷಾರು ಅಂತಾರೆ. ಪ್ರೀತಿಗಾಗಿ ಏನ್ ಮಾಡೋಕೂ ರೆಡಿ ಇರ್ತಾರೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ತನ್ನ ಪ್ರಿಯತಮನಿಗಾಗಿ ತಾಯಿಯ ಮಾಂಗಲ್ಯ ಸರವನ್ನೇ ಕದ್ದು ನೀಡಿದ ಆ ಯುವತಿ ಈಗ ವಂಚನೆಗೊಳಗಾಗಿ ನ್ಯಾಯಕ್ಕಾಗಿ ಅಲೆಯುತಿದ್ದಾಳೆ.

    ಹೌದು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕರ್ಕಿಯ ತಪ್ಪಲಕೇರಿಯ ನೇತ್ರಾವತಿ, ಹುಟ್ಟುತ್ತಾನೆ ತಂದೆ-ತಾಯಿಯನ್ನೇ ಕಳೆದುಕೊಂಡು ಚಿಕ್ಕಮ್ಮನ ಆಶ್ರಯದಲ್ಲಿ ಬೆಳೆದವಳು. ಸಾಕು ಮಗಳು ಚೆನ್ನಾಗಿ ಓದ್ಲಿ ಅಂತಾ ಕಾಲೇಜಿಗೆ ಕಳಿಸಿದ್ರು. ಆದ್ರೆ ಈಕೆ ಹೊನ್ನಾವರದ ಈಶ್ವರ್ ಎಂಬಾತನನ್ನು ಲವ್ ಮಾಡಿದ್ಲು. ಆತ ಕೂಡ ಈಕೆಯನ್ನು ಮದ್ವೆಯಾಗ್ತೀನಿ ಅಂತಾ ಹೇಳಿದ್ದ. ಕಷ್ಟದಲ್ಲಿದ್ದೀನಿ ಸಹಾಯ ಮಾಡು ಅಂತಾ ಹೇಳಿದವನಿಗೆ ಈಕೆ ತನ್ನ ಸಾಕು ತಾಯಿಯ ತಾಳಿ ಸರವನ್ನೇ ಕದ್ದು ಕೊಟ್ಟಿದ್ದಾಳೆ. ಆದ್ರೆ ಆತ ನೇತ್ರಾವತಿಯನ್ನು ವಂಚಿಸಿ ಎಸ್ಕೇಪ್ ಆಗಿದ್ದಾನೆ.

    ಈ ವಿಚಾರ ತಿಳಿದ ನೇತ್ರಾವತಿ ತಾಯಿ ಈ ಮುಂಚೆಯೇ ದೂರು ನೀಡಿದ್ರು. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ದಕ್ಷಿಣ ವಲಯದ ಐಜಿಪಿಯವರಿಗೆ ದೂರು ನೀಡಿ ವಂಚನೆ ಮಾಡಿದ ಹುಡುಗನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

    ಒಟ್ಟಿನಲ್ಲಿ ಪ್ರೀತಿಗಾಗಿ ತಾಯಿಯ ತಾಳಿಯನ್ನೇ ಕದ್ದು ನೀಡಿದ ಈಕೆ ಈಗ ಮೋಸ ಹೋಗಿದ್ದು, ಪೊಲೀಸರು ಈಕೆಗೆ ನ್ಯಾಯ ಕೊಡಿಸುತ್ತಾರೋ ಅನ್ನೋದನ್ನು ಕಾದು ನೋಡಬೇಕು.