ತಮ್ಮದೇ ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಹುಬ್ಬಳ್ಳಿಗೆ ಮೂರು ಕಾರುಗಳು ಹೊರಟಿದ್ದವು. ಮೂರು ಕಾರುಗಳ ಪೈಕಿ ನಡುವಿನ ಕಾರಿನಲ್ಲಿ ಶಾಸಕಿ ಇದ್ದರು. ತಮ್ಮದೇ ಕಾರ್ಯಕರ್ತರೊಂದಿಗೆ ಹುಬ್ಬಳ್ಳಿಗೆ ತೆರಳುತ್ತಿದ್ದ ವೇಳೆ ಅವಘಡ ನಡೆದಿದೆ.
ರಾಯಚೂರು: ದೇವದುರ್ಗ (Devadurga) ಶಾಸಕಿ ಕರೆಮ್ಮ ನಾಯಕ್ (Karemma Nayak) ಪಿ.ಎಗಳ ಮೇಲೆ ಜಾತಿ ನಿಂದನೆ ಕೇಸ್ ದಾಖಲಾದ ಹಿನ್ನೆಲೆ ರೊಚ್ಚಿಗೆದ್ದ ಶಾಸಕಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ (Protest) ನಡೆಸಿದ್ದಾರೆ.
ಪುತ್ರ, ಸಹೋದರ ಹಾಗೂ ಆಪ್ತ ಕಾರ್ಯದರ್ಶಿ ಪರವಹಿಸಿ ರಾಯಚೂರಿನ (Raichur) ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ಪ್ರತಿಭಟನೆ ನಡಸಿದ್ದಾರೆ. ತನಿಖೆ ಮಾಡದೇ ಹೇಗೆ ಅಟ್ರಾಸಿಟಿ ದಾಖಲಿಸಿದ್ದೀರಿ ಎಂದು ಪ್ರತಿಭಟನೆ ನಡೆಸಿದ್ದು, ನಾವೂ ಸಹ ಪ್ರತಿಭಟನೆ ನಡೆಸುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. ಈ ವೇಳೆ ದೂರು ತೆಗೆದುಕೊಳ್ಳಲು ದೇವದುರ್ಗ ಪೊಲೀಸರು ನಿರಾಕರಿಸಿದ್ದು, ನ್ಯಾಯ ಬೇಕು ಎಂದು ಶಾಸಕಿ ಪ್ರತಿಭಟನೆಗೆ ಕುಳಿತಿದ್ದಾರೆ. ಇದನ್ನೂ ಓದಿ: ಸುಮಲತಾಗೆ ಟಿಕೆಟ್ ನೀಡಿದ್ರೆ ಮಂಡ್ಯ ಗೆಲುವು ಸುಲಭ – ಅಮಿತ್ ಶಾ ಎದುರು ಬಿಜೆಪಿ ನಾಯಕರ ಬ್ಯಾಟಿಂಗ್
ಅಕ್ರಮ ಮರಳು ಸಾಗಣೆ ಟ್ರಾಕ್ಟರ್ ಜಪ್ತಿ ಮಾಡಿದ್ದಕ್ಕೆ ರಾಯಚೂರಿನ ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ಪುತ್ರ , ಆಪ್ತ ಸಹಾಯಕರು ಸೇರಿ ಹಲವರು ಹಲ್ಲೆ ಮಾಡಿದ್ದಾರೆ ಅಂತ ಆರೋಪಿಸಿ ದೇವದುರ್ಗ ಠಾಣೆ ಕಾನ್ಸ್‌ಟೇಬಲ್ ಹನುಮಂತರಾಯ ದೂರು ನೀಡಿದ್ದು ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವದುರ್ಗ ಪೇದೆ ಹನುಮಂತ್ರಾಯ ನಾಯಕ್ ಮೇಲೆ ಹಲ್ಲೆ, ಜಾತಿನಿಂದನೆ ಮಾಡಿದ್ದಕ್ಕೆ ಶಾಸಕಿ ಪುತ್ರ ಸಂತೋಷ್, ಸಹೋದರ ತಿಮ್ಮಾರೆಡ್ಡಿ, ಆಪ್ತ ಕಾರ್ಯದರ್ಶಿ ಇಲಿಯಾಸ್, ರಫೀಕ್ ಸೇರಿ 8 ಜನರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಈ ಹಿನ್ನೆಲೆ ಸುಳ್ಳು ಅಟ್ರಾಸಿಟಿ ಕೇಸ್ ದಾಖಲಿಸಿದ್ದೀರಿ ಎಂದು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದು, ಠಾಣೆ ಮುಂದೆ ನೂರಾರು ಜನ ನೆರೆದಿದ್ದರು. ಇದನ್ನೂ ಓದಿ: 2 ವರ್ಷದ ಹಿಂದೆ ಅರ್ಧ ಕೆಜಿ ಚಿನ್ನ, 50 ಲಕ್ಷ ಕೊಟ್ಟು ಮದ್ವೆ- ಗೃಹಿಣಿ ನೇಣು ಬಿಗಿದು ಆತ್ಮಹತ್ಯೆ
ಸ್ಥಳಕ್ಕೆ ಎಸ್‌ಪಿ ನಿಖಿಲ್ ಬಿ ಭೇಟಿ ನೀಡಿ ಸೂಕ್ತ ಕ್ರಮದ ಭರವಸೆ ನೀಡಿದ ಬಳಿಕ ಶಾಸಕಿ ಪ್ರತಿಭಟನೆ ಹಿಂಪಡೆದಿದ್ದಾರೆ. ಮಧ್ಯರಾತ್ರಿಯಿಂದ ಬೆಳಗಿನ ಜಾವದವರೆಗೆ ಠಾಣೆಮುಂದೆ ಪ್ರತಿಭಟನೆ ನಡೆಸಿದ್ದು, ಅಕ್ರಮ ಮರಳುಗಾರಿಕೆಗೆ ಸಾಥ್ ನೀಡುತ್ತಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನಿಯರು ಭಾರತದ ಅತಿದೊಡ್ಡ ಆಸ್ತಿ – ಕಾಂಗ್ರೆಸ್ ಮಾಜಿ ಸಚಿವ
ರಾಯಚೂರು: ನನ್ನ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿಯೊಂದಿಗೆ ಹೊಂದಾಣಿಕೆ ಆಗಲ್ಲ ಎಂದು ರಾಯಚೂರಿನ (Raichur) ದೇವದುರ್ಗ (Devadurga) ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್ (Karemma Nayak) ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ (BJP-JDS Alliance) ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ದೇವದುರ್ಗದಲ್ಲಿ ಬಿಜೆಪಿ ಕಾರ್ಯಕರ್ತರು ಸತತವಾಗಿ ನನಗೆ ಕಾಟ ನೀಡಿದ್ದಾರೆ. ನನ್ನ ಮೇಲೆ ಮತ್ತು ನನ್ನ ಮಗಳ ಮೇಲೆ ಅಟ್ಯಾಕ್ ಮಾಡಿದ್ರು. ಜೆಡಿಎಸ್ ಕಾರ್ಯಕರ್ತರಿಗೆ ಚಪ್ಪಲಿಯಿಂದ ಹೊಡೆಯುವುದಾಗಿ ಹೇಳಿದ್ರು ಎಂದು ಆರೋಪಿಸಿದರು.
ದೇವದುರ್ಗದಲ್ಲಿ ಬಿಜೆಪಿಯವರು ಏನೇನೋ ಕಷ್ಟ ನೀಡಿದ್ದಾರೆ ಎಂಬುವುದು ನನ್ನ ವರಿಷ್ಠರಿಗೆ ಗೊತ್ತಿದೆ. ದೇವೇಗೌಡರು ನನಗೆ ಮಗಳ ಸಮಾನವಾಗಿ ನೋಡಿದ್ದಾರೆ. ನನಗೆ ನೋವು ಆದಾಗ ಅವರು ಕಷ್ಟ ಮತ್ತು ನೋವು ಪಟ್ಟಿದ್ದಾರೆ. ನನ್ನ ಪಾರ್ಟಿ ಯಾವತ್ತೂ ನನಗೆ ಟಾರ್ಗೆಟ್ ಮಾಡಲ್ಲ. ನೀನು ಹೇಗೆ ಇರಬೇಕಂತೀಯೋ ಹಾಗೇ ಇರಮ್ಮ ಎಂದು ಹೇಳಿದ್ದಾರೆ ಎಂದರು. ಇದನ್ನೂ ಓದಿ: ಬಿಜೆಪಿ ಜೊತೆ ಮೈತ್ರಿ – ಜೆಡಿಎಸ್‌ನಲ್ಲಿಅಸಮಾಧಾನವಿಲ್ಲ ಎಂದ ಖಾಶೆಂಪೂರ್
ಕುಮಾರಣ್ಣನಿಗೆ ಕೆಟ್ಟದಾಗಿ ಬೈದ ವ್ಯಕ್ತಿ ಇಲ್ಲಿದ್ದಾನೆ. ದೇವೇಗೌಡರ ಕುಟುಂಬಕ್ಕೆ ಬೈದ ವ್ಯಕ್ತಿಯ ಪಕ್ಷದೊಂದಿಗೆ ನಾನು ಹೊಂದಾಣಿಕೆ ಆಗಬೇಕಾ? ಎಂದು ಪರೋಕ್ಷವಾಗಿ ಮಾಜಿ ಶಾಸಕ ಶಿವನಗೌಡ ನಾಯಕ್ ವಿರುದ್ಧ ಕಿಡಿಕಾರಿದರು. ರಾಷ್ಟ್ರೀಯ ಪಕ್ಷದ ಬಗ್ಗೆ ನಾನು ಏನು ಮಾತನಾಡಲ್ಲ. ಅವರದೇ ಆದ ಸಿದ್ಧಾಂತ ಇರುತ್ತದೆ. ಕ್ಷೇತ್ರದ ಜನರ ಮನಸ್ಸಿಗೆ ಧಕ್ಕೆ ಆಗದಂತೆ ನಾನು ನಡೆದುಕೊಳ್ಳುವೆ ಎಂದು ಶಾಸಕಿ ಕರೆಮ್ಮ ನಾಯಕ್ ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಬಿಜೆಪಿ-ಜೆಡಿಎಸ್ ಶಾಸಕರು ಚರ್ಚೆ ಮಾಡಿದ್ದಾರೆ: ಡಿಕೆಶಿ
ಬೆಂಗಳೂರು: ವಿಧಾನಸಭೆಯಲ್ಲಿ ದೇವದುರ್ಗ ಶಾಸಕಿ ಕರೆಮ್ಮ ನಾಯಕ್ (Karemma Nayak) ಅಳಲು ತೋಡಿಕೊಂಡ ಘಟನೆ ನಡೆಯಿತು. ದೇವದುರ್ಗದಲ್ಲಿ ಅಕ್ರಮ ಮರಳು ದಂಧೆ ಮಿತಿ ಮೀರಿದೆ. ಅದನ್ನು ಬಂದ್ ಮಾಡಿಸುವ ಪ್ರಯತ್ನ ಮಾಡಿದೆ. ಕೆಲವರು ನನ್ನ ಮೇಲೆ ಲಾರಿ ಹತ್ತಿಸ್ತೀನಿ ಅಂತ ಮಾತಾಡ್ತಾರೆ ಅಂತಾ ಗಂಭೀರವಾದ ವಿಷಯವನ್ನು ಪ್ರಸ್ತಾಪ ಮಾಡಿದ್ರು.
ಮಾಜಿ ಶಾಸಕರ ಬೆಂಬಲಿಗರು ನಮ್ಮ ಮೇಲೆ ದಬ್ಬಾಳಿಕೆ ಮಾಡ್ತಿದ್ದಾರೆ. ಅಧಿಕಾರಿಗಳು ನಾನೊಬ್ಬ ಶಾಸಕಿ ಅನ್ನೋದನ್ನೇ ಪರಿಗಣಿಸದೇ ಪ್ರತಿಷ್ಠೆ ತೋರಿಸುತ್ತಿದ್ದಾರೆ. ಮಟ್ಕಾ ದಂಧೆ ಬಂದ್ ಮಾಡಿಸಿದರೂ ಪೊಲೀಸರು ಸಹಕಾರ ನೀಡ್ತಿಲ್ಲ. ಶಿಷ್ಟಾಚಾರಕ್ಕೂ ಪೊಲೀಸರು ಶಾಸಕಿ ಅಂತ ನನಗೆ ಗೌರವ ನೀಡ್ತಿಲ್ಲ ಅಂತಾ ಅಸಹಾಯಕತೆ ವ್ಯಕ್ತಪಡಿಸಿದ್ರು.
ಶಿಷ್ಟಾಚಾರವನ್ನೂ ಪೊಲೀಸರು ಪಾಲಿಸುತ್ತಿಲ್ಲ. ಮಾಜಿ ಶಾಸಕರು ಪೊಲೀಸರಿಗೆ ಹೆದರಿಸ್ತಿದ್ದಾರೆ. ಆರೇ ತಿಂಗಳಿಗೆ ಚುನಾವಣೆ ಮಾಡಿಸ್ತೀನಿ ಅಂತ ಪೊಲೀಸರಿಗೆ ಮಾಜಿ ಶಾಸಕರು ಹೇಳ್ತಿದ್ದಾರೆ. ಇದರಿಂದ ನನಗೆ ಆತಂಕ ಆಗ್ತಾ ಇದೆ. ನನ್ನ ಸಹೋದರನ ತಮ್ಮನ ಮೇಲೆ ಮರಳು ದಂಧೆಯವರು ಹಲ್ಲೆ ಮಾಡಿದ್ದಾರೆ. ನನಗೆ ಸೂಕ್ತ ಭದ್ರತೆ ಸರ್ಕಾರ ಒದಗಿಸಬೇಕು ಅಂತಾ ಮನವಿ ಮಾಡಿದ್ರು. ಇದನ್ನೂ ಓದಿ: ಪೆನ್‌ಡ್ರೈವ್ ಬಿಡುಗಡೆಗೆ ಕಾಂಗ್ರೆಸ್ಸಿನವರಿಂದಲೇ ತಡೆ – ಕೈ ಒಳಜಗಳಕ್ಕೆ ಬೆಂಕಿ ಹಚ್ಚಿದ ಹೆಚ್‌ಡಿಕೆ
ಮೊನ್ನೆ ಯಾರೋ ಒಬ್ಬ ಅನಾಮಿಕ ವ್ಯಕ್ತಿ ಬಂದು ಸದನದಲ್ಲಿ ನನ್ನ ಸೀಟಿನಲ್ಲಿ ಕೂತಿದ್ದು ಇನ್ನೂ ಏನಾಗತ್ತೋ ಅನ್ನೋ ಆತಂಕ ಮೂಡಿಸುತ್ತಿದೆ. ಸರ್ಕಾರ ನನಗೆ ಭದ್ರತೆ ನೀಡಬೇಕು ಎಂದು ಅಳಲು ತೋಡಿಕೊಂಡ್ರು. ಶಾಸಕಿಗೆ ಸ್ಪೀಕರ್ ಖಾದರ್ ಭರವಸೆ ನೀಡಿದ್ರು. ನಿಮ್ಮ ಆತಂಕದ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಲಿ. ಗೃಹ ಸಚಿವರ ಜೊತೆಗೆ ನಾನೂ ಮಾತಾಡ್ತೇನೆ. ಆದರೆ ಅನಾಮಿಕ ವ್ಯಕ್ತಿ ಬಂದು ಕುಳಿತುಕೊಂಡ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಅವರು ಬಂದಾಗ ನೀವು ಬೇಗ ಬಂದಿರಲಿಲ್ಲ. ಖುರ್ಚಿ ಖಾಲಿ ಇದೆ ಅಂತ ಆತ ಅಲ್ಲಿಯೇ ಕೂತುಕೊಂಡ. ನೀವು ಬೇಗ ಬಂದಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ ಅಂತೇಳಿದ್ರು.
ರಾಯಚೂರು: ಜಿಲ್ಲೆಯ ದೇವದುರ್ಗದ ಶಾಸಕಿ (Devadurga MLA) ಕರೆಮ್ಮ ನಾಯಕ್‌ಗೆ (Karemma Nayak) ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿರುವ ಆರೋಪ ಹಿನ್ನೆಲೆ 8 ಜನರ ವಿರುದ್ಧ ದೇವದುರ್ಗ (Devadurga) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂನ್ 4 ರಂದು ತಾಲೂಕಿನ ಆಲದಮರ ತಾಂಡದಲ್ಲಿ ವಿದ್ಯುತ್ ಅವಘಡದಿಂದ ಲೈನ್‌ಮ್ಯಾನ್ ವಿರೂಪಾಕ್ಷಿ ಮೃತಪಟ್ಟಿದ್ದರು. ಘಟನಾ ಸ್ಥಳಕ್ಕೆ ಶಾಸಕಿ ಭೇಟಿ ನೀಡಿದಾಗ ತಡವಾಗಿ ಬಂದಿದ್ದಾರೆ ಎಂದು ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈ ಹಿಡಿದು ಎಳೆದಾಡಿ, ಚಪ್ಪಲಿ ಎಸೆದಿರುವ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಒಡಿಶಾ ರೈಲು ದುರಂತವಾಗಿ 4 ದಿನ ಕಳೆದರೂ 101 ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ
ಘಟನೆ ಹಿನ್ನೆಲೆ ಜೆಡಿಎಸ್ ಕಾರ್ಯಕರ್ತರು ಹಾಗೂ ಶಾಸಕಿ ಕರೆಮ್ಮ ನಾಯಕ್ ಅಭಿಮಾನಿಗಳು ದೇವದುರ್ಗ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಮಾಡಿ ಆರೋಪಿಗಳ ಬಂಧನಕ್ಕೆ ಒತ್ತಾಯ ಮಾಡಿದ್ದಾರೆ. ಬಂಡೆಗುಡ್ಡದ ಭದ್ರಪ್ಪ, ಅಮರೇಶ, ಭಗವಂತ್ರಾಯ ಸೇರಿ 8 ಜನ ವಿರುದ್ಧ ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವಿಧಾನಸಭೆ ಗೆದ್ದ ಕಾಂಗ್ರೆಸ್‍ಗೆ ಲೋಕಸಭೆಯೇ ಟಾರ್ಗೆಟ್- ವಿವಾದ ಸೃಷ್ಠಿಸದಂತೆ ಹೈಕಮಾಂಡ್ ಸೂಚನೆ