Tag: Karawara

  • ಕಂಟೇನರ್ ಲಾರಿಗಳಲ್ಲಿ ಸಾಗಾಟವಾಗುತ್ತಿದ್ದ 500 ಕ್ವಿಂಟಲ್ ಪಡಿತರ ಅಕ್ಕಿ ವಶ

    ಕಂಟೇನರ್ ಲಾರಿಗಳಲ್ಲಿ ಸಾಗಾಟವಾಗುತ್ತಿದ್ದ 500 ಕ್ವಿಂಟಲ್ ಪಡಿತರ ಅಕ್ಕಿ ವಶ

    ಕಾರವಾರ: ಕಂಟೇನರ್ ಲಾರಿಗಳಲ್ಲಿ ಸಾಗಾಟವಾಗುತ್ತಿದ್ದ ದಾಖಲೆ ರಹಿತ 500 ಕ್ವಿಂಟಲ್ ಪಡಿತರ ಅಕ್ಕಿಯನ್ನು ಪೊಲೀಸರು ವಶ ಪಡೆದಿದ್ದಾರೆ.

    ದಾಖಲೆ ರಹಿತವಾಗಿ ಹಾವೇರಿ ಜಿಲ್ಲೆಯ ಅಕ್ಕಿಆಲೂರು ಕಡೆಯಿಂದ ಮಂಗಳೂರು ಕಡೆಗೆ ಎರಡು ಕಂಟೇನರ್ ಲಾರಿಗಳಲ್ಲಿ ಸಾಗಾಟ ಮಾಡಲಾಗುತ್ತಿತ್ತು. ಈ ಲಾರಿಗಳಲ್ಲಿ ಸುಮಾರು 500 ಕ್ವಿಂಟಲ್ ರೇಷನ್ ಅಕ್ಕಿ ಇದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಹೊನ್ನಾವರ ಪೊಲೀಸರು ಲಾರಿ ಸಮೇತ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ:  ಕ್ರಿಸ್‍ಮಸ್ ಮೆರವಣೆಗೆಯಲ್ಲಿ ಭಾರೀ ಅಪಘಾತ – 20 ಜನರಿಗೆ ತೀವ್ರಗಾಯ

     ಹೊನ್ನಾವರ ತಾಲೂಕಿನ ಆರೊಳ್ಳಿಯ ರಾಷ್ಟ್ರೀಯ ಹೆದ್ದಾರಿ 69ರಲ್ಲಿ 500 ಕ್ವಿಂಟಲ್ ಅಕ್ಕಿ, ವಾಹನ ಸೇರಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಇದು ಅನ್ನಭಾಗ್ಯ ಪಡಿತರ ಅಕ್ಕಿ ಎನ್ನುವ ಅನುಮಾನ ಹುಟ್ಟುಹಾಕಿದೆ. 500 ಕ್ವಿಂಟಲ್ ಅಕ್ಕಿ ತುಂಬಿದ 2 ಲಾರಿಯನ್ನು ತಾಲೂಕು ತಹಶಿಲ್ದಾರ್ ಹಾಗೂ ಆಹಾರ ನಿರೀಕ್ಷಕರು ಮಾಹಿತಿ ಪಡೆದು ಪರಿಶೀಲನೆ ನಡೆಸಿದ್ದಾರೆ.

    ವಶಪಡಿಸಿಕೊಂಡ ಅಕ್ಕಿಯನ್ನು ಹೊನ್ನಾವರದ ಕರ್ಕಿಯಲ್ಲಿರುವ ದಾಸ್ತಾನು ಮಳಿಗೆಯಲ್ಲಿ ಸಂಗ್ರಹ ಮಾಡಲಾಗಿದೆ. ಹೊನ್ನಾವರ ಪೆÇಲೀಸರು ತನಿಖೆ ಕೈಗೊಂಡಿದ್ದು, ಚುರುಕುಗೊಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಹೊನ್ನಾವರ ಸಿಪಿಐ ಶ್ರೀಧರ್ ಎಸ್.ಆರ್., ಪಿಎಸ್‍ಐ ಶಶಿಕುಮಾರ್, ನಿರಂಜನ್, ತಹಶೀಲ್ದಾರ್ ನಾಗರಾಜ್ ನಾಯ್ಕಡ್, ಆಹಾರ ನಿರೀಕ್ಷಕ ವೆಂಕಟ್ರಮಣ, ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.

  • ಭಟ್ಕಳ ಸಮುದ್ರ ತೀರದಲ್ಲಿ ಕಾಣಿಸಿಕೊಂಡ ದೈತ್ಯಕಾರದ ತಿಮಿಂಗಿಲ

    ಭಟ್ಕಳ ಸಮುದ್ರ ತೀರದಲ್ಲಿ ಕಾಣಿಸಿಕೊಂಡ ದೈತ್ಯಕಾರದ ತಿಮಿಂಗಿಲ

    ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವಾಗ ಬೃಹತ್ ತಿಮಿಂಗಿಲ ಕಾಣಿಸಿಕೊಂಡು ಮೀನುಗಾರರನ್ನು ಆತಂಕ ಪಡಿಸಿದ ಘಟನೆ ಭಟ್ಕಳದ ಅರಬ್ಬಿ ಸಮುದ್ರದ ಕಡಲ ತೀರದಲ್ಲಿ ನಡೆದಿದೆ.

    ಸಮುದ್ರದಲ್ಲಿ ಹವಾಮಾನ ವೈಪರೀತ್ಯವಾದ್ದರಿಂದ ಬೃಹತ್ ಗಾತ್ರದ ತಿಮಿಂಗಿಲವು ಇದೀಗ ತೀರ ಪ್ರದೇಶಗಳತ್ತ ಆಹಾರ ಅರಸಿ ಬರುತಿದ್ದು, ಇಂದು ಭಟ್ಕಳದ ಅರಬ್ಬಿ ಸಮುದ್ರದ ಕಡಲ ತೀರದಲ್ಲಿ ಪ್ರತ್ಯಕ್ಷವಾಗಿದೆ. ಈ ದೃಶ್ಯವನ್ನು ಮೀನುಗಾರರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು ಒಂದು ಕ್ಷಣ ತಿಮಿಂಗಿಲ ಕಂಡ ಮೀನುಗಾರರ ಎದೆ ಝಲ್ ಎನಿಸಿದೆ. ಇದನ್ನೂ ಓದಿ: ಕಾರವಾರ ಕಡಲತೀರದಲ್ಲಿ ಅಪರೂಪದ ಗ್ರೀನ್ ಸೀ ಆಮೆ ಕಳೇಬರ ಪತ್ತೆ

    ಕೆಲದಿನಗಳ ಹಿಂದೆ ಭಟ್ಕಳ, ಕಾರವಾರ ಕಡಲ ತೀರಗಳಲ್ಲಿ ಅಪರೂಪದ ಟೈಗರ್ ಶಾರ್ಕ್ ಮೀನು, ಹಾಕ್ಸ್ ಬಿಲ್ ಮತ್ತು ಗ್ರೀನ್ ಸೀ ಆಮೆಗಳ ಕಳೇಬರ ಪತ್ತೆಯಾಗಿತ್ತು. ಇದನ್ನೂ ಓದಿ: ರಸ್ತೆಯಲ್ಲಿದ್ದ ಸಸಿ ಕಿತ್ತುಕೊಂಡು ನೆಟ್ಟಿಗರ ಕಣ್ಣಿಗೆ ಗುರಿಯಾದ ಮಹಿಳೆಯರು – ವೀಡಿಯೋ ವೈರಲ್

  • ಅಂತ್ಯಕ್ರಿಯೆಗೆ ಹೊರಟವರ ಕಾರು ಪಲ್ಟಿ – ದಂಪತಿ ದುರ್ಮರಣ

    ಅಂತ್ಯಕ್ರಿಯೆಗೆ ಹೊರಟವರ ಕಾರು ಪಲ್ಟಿ – ದಂಪತಿ ದುರ್ಮರಣ

    ಕಾರವಾರ: ಸಂಬಂಧಿಕರೊಬ್ಬರ ಅಂತ್ಯಕ್ರಿಯೆಗೆ ಹೊರಟಿದ್ದ ದಂಪತಿ ಸಂಚರಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ, ಪಕ್ಕದಲ್ಲಿದ್ದ ಕೆರೆಗೆ ಬಿದ್ದು ಇಬ್ಬರು ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಅಮ್ಮಾಜಿ ಕೆರೆ ಬಳಿ ನಡೆದಿದೆ.


    ಮುಂಡಗೋಡು ತಾಲೂಕಿನ ಅರಶಿಣಗೇರಿಯ ರಾಜು ವರ್ಗಿಸ್ ಹಾಗೂ ಬ್ಲೆಸ್ಸಿ ಮೃತಪಟ್ಟ ದಂಪತಿಗಳಾಗಿದ್ದು, ಇಂದು ಬೆಳಗ್ಗೆ ಅವರಿಬ್ಬರು ಸಂಬಂಧಿಕರೊಬ್ಬರು ಮೃತಪಟ್ಟ ಹಿನ್ನೆಲೆ ಅವರನ್ನು ನೋಡಲು ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕೆರೆಗೆ ಬಿದ್ದಿದೆ. ಇದನ್ನೂ ಓದಿ: 6 ತಿಂಗಳಲ್ಲಿ ಅಪ್ರಾಪ್ತೆ ಮೇಲೆ 400 ಮಂದಿ ರೇಪ್

    ಕಾರು ಪಲ್ಟಿಯಾಗಿ ಕೆರೆಗೆ ಮಗುಚಿ ಬಿದ್ದ ಕಾರಣ ಕಾರಿನ ಡೋರ್ ತೆರೆಯಲಾರದೆ ದಂಪತಿ ಅಸುನೀಗಿದ್ದಾರೆ. ಘಟನೆ ಸಂಬಂಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದಲಿತರು ಕೋಳಿ ಕೊಟ್ಟರೆ ತಿನ್ನುತ್ತಾರಾ? : ಕ್ಷಮೆ ಕೇಳಿದ ಹಂಸಲೇಖ

  • ಕಾಲೇಜಿನಲ್ಲಿ ವಿದ್ಯಾರ್ಥಿಗಳ 250 ಮೊಬೈಲ್ ಜಪ್ತಿ – ಫೋನ್ ನೋಡಿ ಪೋಷಕರು ಶಾಕ್

    ಕಾಲೇಜಿನಲ್ಲಿ ವಿದ್ಯಾರ್ಥಿಗಳ 250 ಮೊಬೈಲ್ ಜಪ್ತಿ – ಫೋನ್ ನೋಡಿ ಪೋಷಕರು ಶಾಕ್

    ಕಾರವಾರ: ಕೊರೊನಾ ಬಂದ ನಂತರ ಆನ್‍ಲೈನ್ ಕ್ಲಾಸ್‍ಗಳಿಗೆ ಮಕ್ಕಳ ಕೈಗಳಲ್ಲಿ ಮೊಬೈಲ್‍ಗಳು ಬಂದು ಕುಳಿತಿವೆ. ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ತೊಡಕಾಗಬಾರದು ಎಂದು ಹಲವು ಪೋಷಕರು, ಮಕ್ಕಳಿಗೆ ತಮ್ಮ ಕಷ್ಟಗಳನ್ನು ಬದಿಗೊತ್ತಿ ಮೊಬೈಲ್ ಖರೀದಿ ಮಾಡಿಕೊಟ್ಟಿದ್ದರು. ಇದೀಗ ಭೌತಿಕ ತರಗತಿ (ಆಫ್‍ಲೈನ್ ಕ್ಲಾಸ್)ಗಳು ಪ್ರಾರಂಭವಾಗಿದೆ. ಆದ್ರೆ ಈ ಮೊಬೈಲ್ ವ್ಯಾಮೋಹ ಮಾತ್ರ ಮಕ್ಕಳನ್ನು ಬಿಟ್ಟು ಹೋಗುತ್ತಿಲ್ಲ.

    ಆನ್‍ಲೈನ್ ತರಗತಿಗೆ ಮಾತ್ರ ಸೀಮಿತವಾಗಿದ್ದ ಮೊಬೈಲ್ ವಿದ್ಯಾರ್ಥಿಗಳ ಕೈಯಲ್ಲಿ ಚಾಟಿಂಗ್, ಗೇಮಿಂಗ್, ಅಶ್ಲೀಲ ವೀಡಿಯೋ ವೀಕ್ಷಣೆಗೆ ಬಳಕೆಯಾಗುತ್ತಿದೆ. ಹೌದು ಇದಕ್ಕೆ ನಿದರ್ಶನ ಎನ್ನುವಂತೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಸರ್ಕಾರಿ ಪಿ.ಯು ಕಾಲೇಜಿನಲ್ಲಿ ಇಂದು ಕಾಲೇಜಿನ ಪ್ರಾಚಾರ್ಯರು ತರಗತಿ ಸಮಯದಲ್ಲಿ ವಿದ್ಯಾರ್ಥಿಗಳು ಬಳಸುತಿದ್ದ 250 ವಿವಿಧ ಕಂಪನಿಯ ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ವಿದ್ಯಾರ್ಥಿಗಳ ಪೋಷಕರಿಗೆ ಮಾಹಿತಿ ನೀಡಿದಾಗ ಹಲವು ಪೋಷಕರಿಗೆ ತಮ್ಮ ಮಕ್ಕಳ ಬಳಿ ಮೊಬೈಲ್ ಇರುವುದೇ ತಿಳಿದಿರಲಿಲ್ಲ. ಹಲವು ವಿದ್ಯಾರ್ಥಿಗಳ ಮೊಬೈಲ್‍ನಲ್ಲಿ ಗೂಗಲ್ ಹಿಸ್ಟರಿ ತೆಗೆದು ನೋಡಿದಾಗ ಅಶ್ಲೀಲ ವೀಡಿಯೋ ಸೇರಿದಂತೆ ಇತರೆ ವೀಡಿಯೋ ನೋಡಿರುವುದು ಗಮನಕ್ಕೆ ಬಂದಿದೆ. ಇನ್ನೂ ಕೆಲವರು ಮೊಬೈಲ್ ಮರಳಿ ಪಡೆಯಲು ತಮ್ಮ ಪೋಷಕರು ಎಂದು ಇತರೆ ವ್ಯಕ್ತಿಗಳನ್ನು ಕರೆತಂದು ಪ್ರಾಚಾರ್ಯರ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಇದನ್ನೂ ಓದಿ: ನಾನು ಮಂತ್ರಿ ಆಗಿರುವವರೆಗೆ ನನ್ನ ಮಗ MLA,MLC ಆಗುವುದು ಬೇಡ: ಈಶ್ವರಪ್ಪ

    ಕಾಲೇಜು ಪ್ರಾರಂಭವಾದಾಗ ಮಕ್ಕಳು ಅಧ್ಯಯನದ ಕಡೆ ಗಮನ ನೀಡದಿರುವುದು ಗಮನಕ್ಕೆ ಬಂತು. ಇತರೆ ಚಟುವಟಿಕೆಯಲ್ಲಿ ಸಹ ವಿದ್ಯಾರ್ಥಿಗಳು ಹಿಂದೆ ಬಿದ್ದಿದ್ದರು, ಸದಾ ಮೊಬೈಲ್‍ನಲ್ಲಿ ಮಕ್ಕಳು ಕಾಲ ಕಳೆಯುವುದನ್ನು ನೋಡಿ ಅನಿವಾರ್ಯವಾಗಿ ಕಾಲೇಜಿನಲ್ಲಿ ಮಕ್ಕಳ ಮೊಬೈಲ್ ಅನ್ನು ಜಪ್ತಿ ಮಾಡಲಾಯಿತು ಎಂದು ಕಾಲೇಜಿನ ಪ್ರಾಂಶುಪಾಲ ಸತೀಶ್ ನಾಯ್ಕ ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಪೊಲ್ಯೂಷನ್ ಲಾಕ್‍ಡೌನ್ – 1 ವಾರ ಆನ್‌ಲೈನ್‌ ಕ್ಲಾಸ್‌, ವರ್ಕ್‌ ಫ್ರಂ ಹೋಂ

    ಸದ್ಯ ಮಕ್ಕಳಿಗೆ ಎಚ್ಚರಿಕೆ ನೀಡಿ ಮೊಬೈಲ್ ಅನ್ನು ಮರಳಿ ನೀಡಲಾಗಿದೆ. ಆದರೇ ಮಕ್ಕಳು ಮೊಬೈಲ್‍ಗಳನ್ನು ಅಧ್ಯಯನ ವಿಷಯಕ್ಕೆ ಹೊರತುಪಡಿಸಿ, ಇತರೆ ವಿಷಯಗಳಿಗೆ ಬಳಸುತ್ತಿರುವುದು ಮಾತ್ರ ಆತಂಕ ತರುವಂತೆ ಮಾಡಿದೆ.

  • ಎಚ್‍ಡಿಕೆ, ಸಿದ್ದರಾಮಯ್ಯನವರಿಗೆ ಅರಿವಿಲ್ಲ ರಾಜಕೀಯವಾಗಿ ಹತಾಶರಾಗಿದ್ದಾರೆ: ಹೆಬ್ಬಾರ್

    ಎಚ್‍ಡಿಕೆ, ಸಿದ್ದರಾಮಯ್ಯನವರಿಗೆ ಅರಿವಿಲ್ಲ ರಾಜಕೀಯವಾಗಿ ಹತಾಶರಾಗಿದ್ದಾರೆ: ಹೆಬ್ಬಾರ್

    ಕಾರವಾರ: ರಾಜಕೀಯವಾಗಿ ಹತಾಶರಾಗಿರುವ ಸಿದ್ದರಾಮಯ್ಯ ಹಾಗೂ ಎಚ್.ಡಿ ಕುಮಾರಸ್ವಾಮಿ ಆರ್‌ಎಸ್‌ಎಸ್‌ ಮತ್ತು ಪ್ರಧಾನಿ ಮೋದಿ ಬಗ್ಗೆ ಟೀಕಿಸುತ್ತಿದ್ದಾರೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಕುಟುಕಿದ್ದಾರೆ.

    ಮನುವಿಕಾಸ ಹಾಗೂ ಅಜೀಂ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ನಗರದ ರಾಘವೇಂದ್ರ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ಕೆರೆ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಗೆ ತಾವು ಯಾರನ್ನು ಟೀಕಿಸುತ್ತಿದ್ದೇವೆ ಎಂಬ ಅರಿವಿಲ್ಲ. ಅವರಿಬ್ಬರೂ ಪರಸ್ಪರ ಟೀಕಿಸುತ್ತ ಕಾಲ ಕಳೆಯುತ್ತಿದ್ದಾರೆ. ಪದೇ ಪದೇ ಸಂಘ ಪರಿವಾರದ ಮೇಲೆ ಹರಿಹಾಯುತ್ತಾರೆ. ಇದು ಅವರಿಬ್ಬರೂ ಗೊಂದಲ್ಲಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತಿದೆ ಎಂದು ಗುಡುಗಿದರು. ಇದನ್ನೂ ಓದಿ: ಸಿದ್ದರಾಮಯ್ಯನವರಿಗೆ ಮತಿಭ್ರಮಣೆ ಆಗಿದೆ: ತೇಲ್ಕೂರ್

    ವಿಜಯ ದಶಮಿ ಮುಗಿಯಲಿ ಎಂದು ಕಾಯುತ್ತಿದ್ದೇವು. ಇಂದಿನಿಂದ ಎಲ್ಲಾ ಸಚಿವರು. ಹಾನಗಲ್ ಕ್ಷೇತ್ರದಲ್ಲಿ ಬೀಡು ಬಿಡಲಿದ್ದು, ಅ.28ರ ವರೆಗೆ ನಿರಂತರ ಪ್ರಚಾರ ನಡೆಸಲಿದ್ದೇವೆ ಎಂದರು. ಕೃಷಿಕರನ್ನು ಮತ್ತು ಸೈನಿಕರನ್ನು ನಾವು ಗೌರವಿಸದೇ ಇದ್ದರೆ ನಮಗೆ ಬದುಕಲು ಸಾಧ್ಯವೇ ಇಲ್ಲ. ರೈತರು ಕೃಷಿಯಿಂದ ವಿಮುಖವಾದರೆ ದೇಶ ಸಫಲತೆ ಕಾಣಲು ಸಾಧ್ಯವಿಲ್ಲ. ಆದ್ದರಿಂದ ರೈತರನ್ನು ಗೌರವಿಸುವ ಅವರಿಗೆ ಗೌರವ ಕೊಡುವ ಕಾರ್ಯವಾಗಬೇಕು. ಸರ್ಕಾರ ಸಾಕಷ್ಟು ನೀರಿನ ಯೋಜನೆಗಳ ಬಗ್ಗೆ ಕಾರ್ಯ ನಿರ್ವಹಿಸುತ್ತಿದ್ದು, ಮನುವಿಕಾಸದಂತ ಸಂಸ್ಥೆ ಕೆರೆ ಹೂಳೆತ್ತುವ ಮೂಲಕ ಪೂರಕ ಕಾರ್ಯ ನಿರ್ವಹಿಸುತ್ತಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಭಾರತ ದೇಶದ ಹಿಂದುತ್ವದ ಸಂಕೇತ ಕೇಸರಿ – ಸಿದ್ದರಾಮಯ್ಯಗೆ ಮುನಿರತ್ನ ಟಾಂಗ್

    ಕಾರ್ಯಕ್ರದಲ್ಲಿ ಮನು ವಿಕಾಸ ಸಂಸ್ಥೆಯ ಅಧ್ಯಕ್ಷರಾದ ಗಣಪತಿ ಭಟ್, ಡಿವೈಎಸ್‍ಪಿ ರವಿ ನಾಯ್ಕ್, ಜಿಲ್ಲೆಯ ಹಾಗೂ ಹಾವೇರಿ ಜಿಲ್ಲೆಯ ಪ್ರಗತಿಪರ ರೈತರು ಉಪಸ್ಥಿತರಿದ್ದರು.

  • ಊಟದ ವಿಚಾರಕ್ಕೆ ತಾಯಿ, ಮಗನ ಗಲಾಟೆ – ಕುಡಿದ ಮತ್ತಿನಲ್ಲಿ ಗುಂಡು ಹಾರಿಸಿ ತಾಯಿ, ಅಕ್ಕನ ಹತ್ಯೆ

    ಊಟದ ವಿಚಾರಕ್ಕೆ ತಾಯಿ, ಮಗನ ಗಲಾಟೆ – ಕುಡಿದ ಮತ್ತಿನಲ್ಲಿ ಗುಂಡು ಹಾರಿಸಿ ತಾಯಿ, ಅಕ್ಕನ ಹತ್ಯೆ

    ಕಾರವಾರ: ಕುಡಿದ ಅಮಲಿನಲ್ಲಿ ಊಟದ ವಿಚಾರವಾಗಿ ಗಲಾಟೆ ಮಾಡಿಕೊಂಡು ತಾಯಿ ಹಾಗೂ ಅಕ್ಕನನ್ನು ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕುಡಗುಂದದಲ್ಲಿ ನಡೆದಿದೆ.

    ಮಂಜುನಾಥ್ ಜಯಂತ್ ನಾರಾಯಣ ಹಸಲರ್, ಕೊಲೆಗೈದ ಆರೋಪಿ. ತಾಯಿ ಪಾರ್ವತಿ ಹಾಗೂ ಅಕ್ಕ ರಮ್ಯಾ ಮೃತ ದುರ್ದೈವಿಗಳಾಗಿದ್ದಾರೆ. ಊಟದ ವಿಷಯದಲ್ಲಿ ಗಲಾಟೆ ತೆಗೆದಿದ್ದ ಮಂಜುನಾಥ್ ಮನೆಯಲ್ಲಿದ್ದ ನಾಡ ಬಂದೂಕನ್ನು ತೆಗೆದುಕೊಂಡು ತಾಯಿ ಹಾಗೂ ಅಕ್ಕನಿಗೆ ಹೊಡೆದಿದ್ದಾನೆ. ಈ ವೇಳೆ ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ:  ಸಿಂಹಕ್ಕೂ ಅಂಜದೇ ಮಾಂಸ ತಿನ್ನಿಸಿದ ರಾಕಿ ಬಾಯ್ – ವೀಡಿಯೋ ವೈರಲ್

    ಇನ್ನೂ ತಂದೆ ನಾರಾಯಣ್ ಮನೆಯಲ್ಲಿ ಇರಲ್ಲದೇ ಇರುವ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ:  ನನ್ನಿಂದ ತಪ್ಪಾಗಿದೆ, ಡಿಕೆಶಿ ಮುಖ ನೋಡಲು ಆಗ್ತಿಲ್ಲ: ಸಲೀಂ ಕಣ್ಣೀರು

  • ಶಿರಸಿಯಲ್ಲಿ ಚಿರತೆ ಕಾಟ -ಮನೆಯಿಂದ ಹೊರ ಬರಲು ಹೆದರಿದ ಜನ

    ಶಿರಸಿಯಲ್ಲಿ ಚಿರತೆ ಕಾಟ -ಮನೆಯಿಂದ ಹೊರ ಬರಲು ಹೆದರಿದ ಜನ

    -ಚಿರತೆ ಸೆರೆಗೆ ಅರಣ್ಯಾಧಿಕಾರಿಗಳ ತಂಡ ದಿನವಿಡೀ ಗಸ್ತು

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಅರಣ್ಯ ವಲಯ ವ್ಯಾಪ್ತಿಯ ಶಿವಳ್ಳಿ, ದಾನಂದಿ ಭಾಗದಲ್ಲಿ ಚಿರತೆ ಜಾನುವಾರುಗಳ ಮೇಲೆ ಕೆಲ ದಿನಗಳಿಂದ ಸತತ ದಾಳಿ ನಡೆಸುತ್ತಿದೆ. ಇದರಿಂದಾಗಿ ಗ್ರಾಮದ ಜನ ಮನೆಯಿಂದ ಹೊರ ಬರಲು ಹೆದರುತಿದ್ದು, ಅಪಾಯಕಾರಿ ಚಿರತೆ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.

    ಬಿಸಲಕೊಪ್ಪ, ಎಕ್ಕಂಬಿ, ಶಿವಳ್ಳಿ ಭಾಗದಲ್ಲಿ ಸಮೃದ್ದ ಅರಣ್ಯ ಪ್ರದೇಶ, ಸಾಗುವಾನಿ ನೆಡುತೋಪು ಹೆಚ್ಚಿದ್ದು ಪ್ರಾಣಿಗಳ ಓಡಾಟಕ್ಕೆ ಅನುಕೂಲವಾಗಿದೆ. ಹೀಗಾಗಿ ಚಿರತೆ, ಆನೆಗಳು ಈ ಪ್ರದೇಶಕ್ಕೆ ಲಗ್ಗೆ ಇಡುವುದು ಸಾಮಾನ್ಯವಾದಂತಾಗಿದೆ. ಹದಿನೈದು ದಿನಗಳಿಂದ ಈಚೆಗೆ ಬೊಪ್ಪನಳ್ಳಿ, ದಾನಂದಿ ಭಾಗದಲ್ಲಿ ಸುಮಾರು ನಾಲ್ಕು ಹಸುಗಳನ್ನು ಚಿರತೆ ಬಲಿ ಪಡೆದಿದೆ. ಈ ಪೈಕಿ ಎರಡು ಕರು ಮತ್ತು ಎರಡು ದೊಡ್ಡ ಆಕಳು ಸೇರಿದೆ. ಇದನ್ನೂ ಓದಿ: ಅರಣ್ಯ ಪ್ರದೇಶಕ್ಕೆ ಎಳೆದೊಯ್ದು 55ರ ಮಹಿಳೆ ಮೇಲೆ ಗ್ಯಾಂಗ್ ರೇಪ್

    cheetah

    ಕೊರ್ಸೆ, ದಾನಂದಿ, ಶಿವಳ್ಳಿ, ಬೊಪ್ಪನಳ್ಳಿ, ಸಂಬಯ್ಯನಜಡ್ಡಿ, ಗೇರಮನೆ ಸುತ್ತಮುತ್ತ ಚಿರತೆಗಳು ಹದಿನೈದು ದಿನಗಳಿಂದ ನಿರಂತರವಾಗಿ ಓಡಾಡುತ್ತಿದೆ. ಈಚೆಗೆ ಮೂರು ಚಿರತೆಗಳು ಒಟ್ಟೊಟ್ಟಿಗೆ ಇದ್ದಿದ್ದನ್ನು ಸ್ಥಳೀಯರು ನೋಡಿದ್ದಾರೆ. ಇನ್ನು ಸಂಜೆಯಾಗುತ್ತಿದ್ದಂತೆ ಚಿರತೆಗಳು ಗ್ರಾಮದ ಭಾಗದಲ್ಲಿ ಓಡಾಡುತಿದ್ದು, ಚಿರತೆ ಭಯದಿಂದ ಮಕ್ಕಳು ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಜನರು ಸೊಪ್ಪಿನ ಬೆಟ್ಟ, ತೋಟಕ್ಕೆ ತೆರಳಲು ಆತಂಕ ಪಡುತ್ತಿದ್ದು, ಸಂಜೆಯಾಗುತ್ತಿದ್ದಂತೆ ಭಯದಲ್ಲಿ ಗ್ರಾಮಗಳು ಖಾಲಿ ಹೊಡೆಯುತ್ತಿದೆ.

    ಪ್ರತಿ ದಿನ ಚಿರತೆಗಳು ಗ್ರಾಮದಲ್ಲಿ ಕಾಣಿಸುತ್ತಿರುವುದರಿಂದ ಗ್ರಾಮದಲ್ಲಿ ಭಯ ಆವರಿಸಿದೆ. ಜಾನುವಾರುಗಳ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ ಆಯ್ದ ಜಾಗಗಳನ್ನು ಗುರುತಿಸಿ ಅಲ್ಲಿ ಬೋನುಗಳನ್ನು ಇರಿಸಿದೆ. ಅರಣ್ಯ ರಕ್ಷಕರು ಗಸ್ತು ತಿರುಗಲು ಆರಂಭಿಸಿದ್ದಾರೆ. ಇದನ್ನೂ ಓದಿ: ಮದುವೆಗಾಗಿ ಮತಾಂತರ ತಪ್ಪು: ಮೋಹನ್ ಭಾಗವತ್

    ಜನರ ಆತಂಕ ದೂರ ಮಾಡಲು ಜಾನುವಾರುಗಳನ್ನು ಬಲಿ ಪಡೆಯುತ್ತಿರುವ ಪ್ರಾಣಿ ಸೆರೆ ಹಿಡಿಯುವ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಯಕ್ಕುಂಬಿ ವಿಭಾಗದ ಡೆಪ್ಯುಟಿ ಆರ್.ಎಫ್.ಓ ರವೀಂದ್ರ ಎಸ್.ಕರ್ನಲ್ ಮಾಹಿತಿ ನೀಡಿದ್ದಾರೆ. ಚಿರತೆ ದಾಳಿಗೆ ಮೃತಪಟ್ಟ ಆಕಳುಗಳ ವಾರಸುದಾರರಿಗೆ ಇಲಾಖೆಯಿಂದ ಪರಿಹಾರ ಒದಗಿಸಲಾಗುವುದು. ಗ್ರಾಮಗಳತ್ತ ಚಿರತೆ ನುಗ್ಗದಂತೆ ಎಚ್ಚರವಹಿಸಲಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಗ್ಗತ್ತಲಲ್ಲಿ ಕರ್ನಾಟಕ ಮುಳುಗುವ ಆತಂಕ – ಇಂಧನ ಸಚಿವರು ಹೇಳಿದ್ದೇನು?

    ಶಿರಸಿ ವಿಭಾಗದ ಡಿಸಿಎಫ್ ಎಸ್.ಜಿ ಹೆಗಡೆ ಮಾರ್ಗದರ್ಶನದಲ್ಲಿ ಎ.ಸಿ.ಎಫ್. ಅಶೋಕ್ ಅಲಗೇರ್, ಬನವಾಸಿ ಆರ್.ಎಫ್.ಒ. ಉಷಾ ಕಬ್ಬೇರರವರ ತಂಡ ರಚನೆ ಮಾಡಿ ಚಿರತೆ ಹಿಡಿಯುವ ಕಾರ್ಯಾಚರಣೆ ನಡೆದಿದೆ.

  • ಕಾಸರಕೋಡು ಇಕೋ ಬೀಚ್‍ಗೆ ಎರಡನೇ ಬಾರಿ ಅಂತರಾಷ್ಟ್ರೀಯ ಮಟ್ಟದ ಬ್ಲೂ ಫ್ಲಾಗ್ ಮಾನ್ಯತೆ

    ಕಾಸರಕೋಡು ಇಕೋ ಬೀಚ್‍ಗೆ ಎರಡನೇ ಬಾರಿ ಅಂತರಾಷ್ಟ್ರೀಯ ಮಟ್ಟದ ಬ್ಲೂ ಫ್ಲಾಗ್ ಮಾನ್ಯತೆ

    ಕಾರವಾರ: ವಿಶ್ವ ಮಟ್ಟದಲ್ಲಿ ಹೆಸರು ಮಾಡಿದ್ದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡ್ ಕಡಲತೀರದ ಇಕೋ ಬೀಚ್‍ನಲ್ಲಿ ಮಳೆಯ ಅಬ್ಬರ, ಸುನಾಮಿ ನಡುವೆಯೂ ಈ ವರ್ಷ ತನ್ನ ಗುಣಮಟ್ಟವನ್ನು ಕಾಯ್ದುಕೊಳ್ಳುವ ಮೂಲಕ ಅಂತರಾಷ್ಟ್ರೀಯ ಮಾನ್ಯತೆಯ ಬ್ಲೂ ಫ್ಲ್ಯಾಗ್ ಮಾನ್ಯತೆಯನ್ನು ಮತ್ತೆ ಪಡೆದಿದೆ.

    kasarkod eco beach

    ಪರಿಸರ ಸ್ನೇಹಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಕಡಲ ತೀರವನ್ನು ಪ್ರವಾಸೋದ್ಯಮ ಸ್ನೇಹಿಯಾಗಿ ಜಿಲ್ಲಾಡಳಿತ ನಿರ್ಮಾಣ ಮಾಡಿತ್ತು. ಕಳೆದ ವರ್ಷ ಸುಮಾರು 8 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಕಡಲತೀರದ ಸುಮಾರು 750 ಮೀಟರ್ ವ್ಯಾಪ್ತಿಯಲ್ಲಿ ಪ್ರವಾಸಿಗರು ಕುಳಿತುಕೊಳ್ಳಲು ವಿನೂತನ ಬಗೆಯ ಆಸನ ವ್ಯವಸ್ಥೆ, ವಾಚ್ ಟವರ್, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಪರಿಸರ ಸ್ನೇಹಿ ಸೌಲಭ್ಯಗಳ ವ್ಯವಸ್ಥೆಯನ್ನು ಮಾಡಲಾಗಿತ್ತು. ಇದನ್ನೂ ಓದಿ: ಸ್ಟೈಲಿಷ್ ಕೇಶ ವಿನ್ಯಾಸ, ಕ್ಲೀನ್ ಶೇವ್, ಟ್ರಿಮ್‍ಗೂ ತಾಲಿಬಾನ್ ನಿಷೇಧ

    kasarkod eco beach

    ಇದರೊಂದಿಗೆ ಮಕ್ಕಳ ಆಟಿಕೆಗಳನ್ನು ಸಹ ಅಳವಡಿಸಲಾಗಿದ್ದು, ಅಂತರಾಷ್ಟ್ರೀಯ ಗುಣಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಡಲತೀರದಲ್ಲಿ ಸ್ವಚ್ಛತೆಯನ್ನು ಸಹ ಕಾಯ್ದುಕೊಳ್ಳಲಾಗಿದೆ. ಇದಲ್ಲದೇ ಈ ಬಾರಿ ಸಹ ಬೀಚ್‍ಗೆ ಹಾನಿಯಾಗಿದ್ದರೂ, ಎಲ್ಲವನ್ನೂ ಸಮರ್ಪಕವಾಗಿ ಪುನಃ ನಿರ್ಮಿಸುವ ಮೂಲಕ ಇದೀಗ ಮತ್ತೊಮ್ಮೆ ವಿಶ್ವ ಮಟ್ಟದಲ್ಲಿ ತನ್ನನ್ನು ಗುರುತಿಸಿಕೊಂಡಿದೆ. ಇದನ್ನೂ ಓದಿ: ಬೆಳಗಾವಿ ಜನರ ಪ್ರೀತಿಗೆ ಬಿ.ಸಿ.ಪಾಟೀಲ್ ಸಂತಸ -“ರೈತರೊಂದಿಗೊಂದು ದಿನ” ಬಗ್ಗೆ ಕೌರವನ ಮಾತು

    kasarkod eco beach
    ಜಿಲ್ಲೆಯ ಇಕೋ ಕಡಲತೀರಕ್ಕೆ ಎರಡನೇಯ ಬಾರಿ ಅಂತರಾಷ್ಟ್ರೀಯ ಮಾನ್ಯತೆಯ ಬ್ಲೂ ಫ್ಲ್ಯಾಗ್ ಮನ್ನಣೆ ಸಿಕ್ಕಿರುವುದು ನಿಜಕ್ಕೂ ಹೆಮ್ಮೆಯ ವಿಚಾರವೇ. ಸದ್ಯ ಕೊರೊನಾ ಅಬ್ಬರದಿಂದಾಗಿ ಮಂಕಾಗಿರುವ ಉತ್ತರ ಕನ್ನಡ ಪ್ರವಾಸೋದ್ಯಮಕ್ಕೆ ಇದರಿಂದ ಒಂದಿಷ್ಟು ಚೇತರಿಕೆ ಕಾಣಲಿದೆ. ಇದನ್ನೂ ಓದಿ: ಮೂಕಜೀವಿಗಳ ಸಂಕಷ್ಟಕ್ಕೆ ಮಿಡಿಯುವ ಕೋಟೆನಾಡಿನ ಮಾನವೀಯತೆಯ ಹೃದಯ

    ಕಳೆದ ವರ್ಷ ಕೊರೊನಾ ಮೊದಲನೇಯ ಅಲೆಯ ಬಳಿಕ ಸಾಕಷ್ಟು ಪ್ರವಾಸಿಗರು ಬ್ಯೂಫ್ಲಾಗ್ ಕಡಲತೀರಕ್ಕೆ ಭೇಟಿ ನೀಡಿದ್ದರು. ಕುಟುಂಬಸ್ಥರು, ಮಕ್ಕಳು ಸಹ ಕಡಲತೀರಕ್ಕೆ ಆಗಮಿಸಿ ಎಂಜಾಯ್ ಮಾಡಲು ಅನುಕೂಲಕರ ವಾತಾವರಣ ಇರುವುದರಿಂದಾಗಿ ಪ್ರವಾಸಿಗರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಜೊತೆಗೆ ಕಡಲತೀರದ ನಿರ್ವಹಣೆಗಾಗಿಯೇ ಸಿಬ್ಬಂದಿ ನಿಯೋಜನೆ ಮಾಡಿದ್ದು, ಪ್ರತಿನಿತ್ಯ ಬೀಚ್‍ನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ಪ್ರವಾಸಿಗರ ಸುರಕ್ಷತೆಗೂ ಇದರಿಂದ ಅನುಕೂಲವಾಗಿತ್ತು. ಈ ಬಾರಿ ತೌಕ್ತೆ ಚಂಡಮಾರುತ ಅಪ್ಪಳಿಸಿದ ವೇಳೆ ಕಡಲತೀರದ ಒಂದು ಬದಿಗೆ ಕೊಂಚ ಹಾನಿಯಾಗಿತ್ತಾದರೂ ಇಲ್ಲಿನ ಸಿಬ್ಬಂದಿ ಕಡಲತೀರವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವ ಕೆಲಸ ಮಾಡಿದ್ದರು. ಈ ಹಿನ್ನಲೆ ಈ ಬಾರಿಯೂ ಸಹ ಕಡಲತೀರಕ್ಕೆ ಬ್ಯೂಫ್ಲ್ಯಾಗ್ ಮನ್ನಣೆ ಲಭಿಸುವಂತಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಖ್ಯಾತಿಯನ್ನು ಹೆಚ್ಚಿಸುವಂತಾಗಿದೆ.

  • ಸಿಎಂ ಆಗೋ ಹುಮ್ಮಸ್ಸಲ್ಲಿ ಸಿದ್ದರಾಮಯ್ಯ ಮನಸ್ಸಿಗೆ ಬಂದಂತೆ ಮಾತಾಡ್ತಿದ್ದಾರೆ: ಶಿವರಾಮ್ ಹೆಬ್ಬಾರ್

    ಸಿಎಂ ಆಗೋ ಹುಮ್ಮಸ್ಸಲ್ಲಿ ಸಿದ್ದರಾಮಯ್ಯ ಮನಸ್ಸಿಗೆ ಬಂದಂತೆ ಮಾತಾಡ್ತಿದ್ದಾರೆ: ಶಿವರಾಮ್ ಹೆಬ್ಬಾರ್

    ಕಾರವಾರ: ಬಿಜೆಪಿಯವರು ಹಿಟ್ಲರ್ ಸಂಸ್ಕೃತಿಯವರು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವರಾಮ್ ಹೆಬ್ಬಾರ್ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕೆಂಬ ಹುಮ್ಮಸ್ಸಿಗೆ ಡಿಕೆ ಶಿವಕುಮಾರ್ ಅಡ್ಡಿಯಾದ ಕಾರಣ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

    ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಹೇಳಿಕೆಗಳಿಂದ ಏನೂ ಆಗಲ್ಲ. ಅವರು ವಿಧಾನಸಭೆಯಲ್ಲೂ ಇದನ್ನೇ ಹೇಳಿದ್ದರು. ಅದಕ್ಕೆ ಮುಖ್ಯಮಂತ್ರಿಯವರು ಅಲ್ಲಿ ಸರಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಆದರೂ ಅವರಿಗೆ ಸಮಾಧಾನವಾದಂತೆ ಕಾಣುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಲೇಹ್‍ನಿಂದ ಮನಾಲಿಗೆ ಸೈಕ್ಲಿಂಗ್ ಮಾಡಿ ಭಾರತೀಯ ಸೇನಾಧಿಕಾರಿ ಗಿನ್ನೆಸ್ ದಾಖಲೆ

    ಭಾರತ್ ಬಂದ್ ಕುರಿತು ಪ್ರತಿಕ್ರಿಯಿಸಿದ ಅವರು, ಭಾರತ್ ಬಂದ್ ಕರ್ನಾಟಕದಲ್ಲಿ ಯಶಸ್ವಿಯಾಗಿಲ್ಲ. ಅನೇಕ ಸ್ವಯಂಘೋಷಿತ ನಾಯಕರು ಭಾರತ್ ಬಂದ್‍ಗೆ ಕರೆಕೊಟ್ಟು ಸಂಪೂರ್ಣ ವಿಫಲತೆ ಕಂಡಿದ್ದಾರೆ. ಭಾರತ್ ಬಂದ್‍ನಿಂದ ಯಾವ ಸಾಧನೆಯೂ ಆಗಿಲ್ಲ. ಕಳೆದ ಒಂದು ವರ್ಷದಿಂದ ಭಾರತ ಬಂದಾಗಿಯೇ ಇದೆ. ಮತ್ತೆ ಭಾರತ್ ಬಂದ್ ಮಾಡುವುದರಿಂದ ಶಿಕ್ಷಣ, ವ್ಯಾಪಾರ – ಉದ್ಯಮದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ರಾಜ್ಯದ ಹಾಗೂ ದೇಶದ ಜನ ಈ ಭಾರತ್ ಬಂದ್ ಅನ್ನು ಒಪ್ಪಿಕೊಂಡಿಲ್ಲ. ಪ್ರಬಲವಾಗಿ ವಿರೋಧಿಸಿದ್ದಾರೆ ಎಂದು ನುಡಿದಿದ್ದಾರೆ.

    ಕೆಲವರು ನೈತಿಕವಾಗಿ ಬೆಂಬಲವನ್ನಷ್ಟೇ ನೀಡಿದ್ದಾರೆ. ಯಾವ ಉದ್ದೇಶಕ್ಕೆ ಭಾರತ್ ಬಂದ್ ಮಾಡಿದ್ದಾರೋ ಈ ಬಗ್ಗೆ ಸರ್ಕಾರ ವಿಧಾನಸಭೆಯ ಒಳಗೆ ಹಾಗೂ ಹೊರಗೆ ತನ್ನ ಪ್ರತಿಕ್ರಿಯೆ ನೀಡಿದೆ. ಒಟ್ಟಾರೆ ದೇಶದಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಸರ್ಕಾರ ನಿಶ್ಚಿತ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಎದುರಲ್ಲೇ ಶಾಸಕಿ ರೂಪಾಲಿ ನಾಯ್ಕ್ ಗರಂ

  • ಭಕ್ತರಿಗಿಲ್ಲ ಪೂಜೆ, ಪ್ರಸಾದ – ಮತ್ತೆ  ಭುಗಿಲೆದ್ದ ಮಹಾಬಲೇಶ್ವರನ ಮೇಲಿನ ಹಕ್ಕು ವಿವಾದ

    ಭಕ್ತರಿಗಿಲ್ಲ ಪೂಜೆ, ಪ್ರಸಾದ – ಮತ್ತೆ ಭುಗಿಲೆದ್ದ ಮಹಾಬಲೇಶ್ವರನ ಮೇಲಿನ ಹಕ್ಕು ವಿವಾದ

    -ಹೊರ ಊರಿನ ಭಕ್ತರಿಗೆ ಆತ್ಮಲಿಂಗ ಸ್ಪರ್ಶ, ಪ್ರಸಾದಕ್ಕೆ ನಿರ್ಬಂಧ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ವಿವಾದ ಮತ್ತೆ ತಾರಕಕ್ಕೆ ಏರಿದೆ.

    ಮಹಾಬಲೇಶ್ವರ ಮಂದಿರದ ಗರ್ಭಗುಡಿಯಲ್ಲಿರುವ ಆತ್ಮಲಿಂಗ ಪೀಠದಲ್ಲಿ ಆಸೀನರಾಗುವ ಮತ್ತು ನಂದಿಗೃಹದಲ್ಲಿನ ಪ್ರಸಾದ ವಿತರಣೆ ವಿಚಾರದಲ್ಲಿ ಉಪಾಧಿವಂತರ ಎರಡು ಬಣಗಳ ನಡುವೆ ವಿವಾದ ಏರ್ಪಟ್ಟಿದೆ. ಹೀಗಾಗಿ ಸೆಪ್ಟೆಂಬರ್ 27ರವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಉಪ ವಿಭಾಗಾಧಿಕಾರಿ ಸೂಚಿಸಿದ್ದಾರೆ. ಇದನ್ನೂ ಓದಿ: ಹೆಮ್ಮೆಯಿಂದ ಬದುಕಿದ್ದು, ಅವಮಾನದಿಂದ ಬದುಕಲು ಸಾಧ್ಯವಾಗ್ತಿಲ್ಲ: ಗಿರಿ ಡೆತ್‍ನೋಟ್

    ಈ ಸಂಬಂಧ ದೇವಸ್ಥಾನದ ಉಸ್ತುವಾರಿ ಸಮಿತಿ ಕಾರ್ಯದರ್ಶಿಯಾಗಿರುವ ಉಪ ವಿಭಾಗಾಧಿಕಾರಿ ರಾಹುಲ ಪಾಂಡೆಯವರು ಉಭಯ ಬಣಗಳ ಪ್ರತ್ಯೇಕ ಸಭೆ ನಡೆಸಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಉಪವಿಭಾಗಾಧಿಕಾರಿ ರಾಹುಲ ಪಾಂಡೆ, ಜಿಲ್ಲೆಯ ಎಲ್ಲ ದೇಗುಲಗಳಲ್ಲಿ ಭಕ್ತರಿಗೆ ಸೇವಾಕಾರ್ಯಗಳನ್ನು ಹಮ್ಮಿಕೊಳ್ಳಲು ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ. ಆದರೆ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ಎರಡು ಬಣಗಳ ನಡುವಿನ ವಿವಾದದ ಕಾರಣ ಭಕ್ತರಿಗೆ ಅವಕಾಶ ಸಿಗುತ್ತಿಲ್ಲ ಎಂದಿದ್ದಾರೆ.

    mahabaleshwar temple

    ದೇಗುಲ ನಿರ್ವಹಣಾ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 27ರಂದು ಸಮಿತಿಯ ಸಭೆ ನಡೆಯಲಿದೆ. ಎರಡು ಬಣಗಳ ನಡುವಿನ ವಿವಾದ, ಭಕ್ತರಿಗೆ ಪೂಜೆ ಹಾಗೂ ಸೇವೆಗೆ ವ್ಯವಸ್ಥೆ ವಿಷಯವನ್ನು ಸಭೆಯಲ್ಲಿ ಮಂಡಿಸಲಾಗುವುದು. ಸಭೆಯ ನಿರ್ಣಯದಂತೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ತಿಳಿಸಲಾಗಿದೆ. ಇದನ್ನೂ ಓದಿ: MSc ಓದಿ ಕಸ ಗುಡಿಸುತ್ತಿದ್ದ ಮಹಿಳೆಗೆ ಸರ್ಕಾರಿ ಕೆಲಸ ಕೊಟ್ಟ ಸಚಿವರು

    mahabaleshwar temple

    ಸದ್ಯ ಭಕ್ತರು ಹೊರಭಾಗದಿಂದ ಮಾತ್ರ ದೇವರ ದರ್ಶನಕ್ಕೆ ಅವಕಾಶ ಇದ್ದು, ಸ್ಥಳೀಯರು ವೈಯಕ್ತಿಕ ಪೂಜೆ ಸಲ್ಲಿಸಬಹುದಾಗಿದೆ. ಇದರಂತೆ ಸ್ಥಳೀಯರಿಗೆ ಬೆಳಗ್ಗೆ 6 ರಿಂದ 11 ಹಾಗೂ ಅಪರಾಹ್ನ 5 ರಿಂದ ರಾತ್ರಿ 7 ರವರೆಗೆ ಪೂಜೆಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಉಪಾದೀವಂತ ಪಂಗಡದ ಗುದ್ದಾಟದಿಂದಾಗಿ ಹೊರಭಾಗದಿಂದ ಬರುವ ಭಕ್ತರಿಗೆ ಆತ್ಮಲಿಂಗ ಸ್ಪರ್ಶ ಪೂಜೆ, ಪ್ರಸಾದಗಳಿಗೆ ಅವಕಾಶ ಮಾಡಿಕೊಡಲಾಗಿಲ್ಲ. ಇನ್ನೂ ದೇವಸ್ಥಾನದಲ್ಲಿ ಅಹಿತಕರ ಘಟನೆ ನಡೆಯದಂತೆ ಪೂಲೀಸರ ನಿಯೋಜನೆ ಮಾಡಲಾಗಿದೆ.