Tag: Karawara

  • ಪತ್ನಿಯ ಶವ ತರಲು ಹಣವಿಲ್ಲದೇ ಪರದಾಟ – ಸಹಾಯ ಮಾಡಿ ಮಾನವೀಯತೆ ಮೆರೆದ ಅಪ್ಪು ಅಭಿಮಾನಿಗಳು

    ಪತ್ನಿಯ ಶವ ತರಲು ಹಣವಿಲ್ಲದೇ ಪರದಾಟ – ಸಹಾಯ ಮಾಡಿ ಮಾನವೀಯತೆ ಮೆರೆದ ಅಪ್ಪು ಅಭಿಮಾನಿಗಳು

    ಕಾರವಾರ: ಗಂಧದಗುಡಿ (Gandhadagudi) ಸಿನಿಮಾ ವೀಕ್ಷಣೆಗಾಗಿ ಚಿತ್ರಮಂದಿರಕ್ಕೆ ತೆರಳಿದ್ದ ಅಪ್ಪು (Appu) ಅಭಿಮಾನಿಗಳು ಚಿತ್ರಮಂದಿರದ ದಿನಗೂಲಿ ನೌಕರನ ಪತ್ನಿಯ ಮೃತದೇಹ ತರಲು ಆಸ್ಪತ್ರೆಗೆ ಹಣ ಪಾವತಿಸಿ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಉತ್ತರ ಕನ್ನಡ (Uttar Kannada) ಜಿಲ್ಲೆಯ ಶಿರಸಿಯ (Sirsi) ನಟರಾಜ ಚಿತ್ರಮಂದಿರದ ದಿನಗೂಲಿ ನೌಕರನಾಗಿರುವ ಪರಶುರಾಮ ಛಲವಾದಿಯ ಗರ್ಭಿಣಿ ಪತ್ನಿ ವನಜಾ ಅವರ ಹೊಟ್ಟೆಯಲ್ಲೇ ಮಗು ಸತ್ತು ಸೋಂಕಾಗಿತ್ತು. ಶಿರಸಿಯ ಟಿಎಸ್‍ಎಸ್ ಆಸ್ಪತ್ರೆಯಲ್ಲಿ ಮೃತ ಮಗುವನ್ನು ಹೊರತೆಗೆದು ಮಹಿಳೆಗೆ ಚಿಕಿತ್ಸೆ ನೀಡುವಾಗ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಸಾವನ್ನಪ್ಪಿದ್ದರು.

    ಮಹಿಳೆಯ ಮೃತದೇಹ ಕೊಂಡೊಯ್ಯುವ ಮುನ್ನ ಶಿರಸಿಯ ಟಿಎಸ್‍ಎಸ್ ಆಸ್ಪತ್ರೆಯವರು 24,000ರೂ. ಚಾರ್ಜ್ ಮಾಡಿದ್ದರು, ಪತ್ನಿಯ ಮೃತದೇಹ ಬಿಡಿಸಿಕೊಳ್ಳಲು ಹಣವಿಲ್ಲದೇ ಪರದಾಡಿದ್ದ ಪರಶುರಾಮ ಛಲವಾದಿ ಇಂದು ತನ್ನ ನೋವನ್ನು ಚಿತ್ರಮಂದಿರಕ್ಕೆ ಆಗಮಿಸಿದ್ದ ಪುನೀತ್ ರಾಜ್‍ಕುಮಾರ್ (Puneeth Rajkumar) ಅಭಿಮಾನಿಗಳ ಜೊತೆ ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಟೀ ನಿರಾಕರಿಸಿದ ಡಿಸಿಗೆ ಮದ್ಯ ಕುಡಿತೀರಾ ಅಂದ ಮಹಾರಾಷ್ಟ್ರ ಕೃಷಿ ಸಚಿವ – ವೀಡಿಯೋ ವೈರಲ್

    ನಂತರ ವಿಷಯ ತಿಳಿದ ಅಪ್ಪು ಅಭಿಮಾನಿಗಳ ಬಳಗದಲ್ಲೇ 100 – 200 ರೂಪಾಯಿಯಂತೆ ಹಣವನ್ನು ಒಟ್ಟು ಸೇರಿಸಿ ಟಿಎಸ್‍ಎಸ್ ಆಸ್ಪತ್ರೆಗೆ ತೆರಳಿತ್ತು. ಈ ವೇಳೆ ಆಸ್ಪತ್ರೆಯವರು ಸಹ ಅಪ್ಪು ಅಭಿಮಾನಿಗಳ ಮನವಿಗೆ ಸ್ಪಂದಿಸಿ ವೆಚ್ಚವನ್ನು ಕಡಿತಗೊಳಿಸಿ ಮೃತದೇಹ ಬಿಟ್ಟುಕೊಟ್ಟಿದ್ದು, ನಂತರ ಅಭಿಮಾನಿಗಳು ಮಹಿಳೆ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಇದನ್ನೂ ಓದಿ: IPC, CRPC ಸುಧಾರಣೆಗೆ ಶೀಘ್ರದಲ್ಲೇ ನೂತನ ಕರಡು ಮಂಡನೆ – ಶಾ ಹೇಳಿಕೆ

    Live Tv
    [brid partner=56869869 player=32851 video=960834 autoplay=true]

  • ಕಳ್ಳನ ಮಾತು ನಂಬಿ ಪೊಲೀಸರೇ ಮೋಸ ಹೋದ್ರು!

    ಕಳ್ಳನ ಮಾತು ನಂಬಿ ಪೊಲೀಸರೇ ಮೋಸ ಹೋದ್ರು!

    ಕಾರವಾರ: ಮಾಸ್ಟರ್‌ ಮೈಂಡ್‌ ಮೂಲಕ ಕಳ್ಳರ ಹೆಡೆಮುರಿ ಕಟ್ಟುವ ಪೊಲೀಸರಿದ್ದಾರೆ. ಆದರೆ ಇಲ್ಲೊಬ್ಬ ಕಳ್ಳ ಪೊಲೀಸರಿಗೇ ಚಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್‌ ಆಗಿರುವ ಘಟನೆ ಭಟ್ಕಳ ಪಟ್ಟಣದಲ್ಲಿ ನಡೆದಿದೆ.

    ಭಟ್ಕಳ ಪಟ್ಟಣದ ಕೋಟೇಶ್ವರ ರಸ್ತೆಯ ಮಂಜು ಕೊರಗರ ಎನ್ನುವ ಕಳ್ಳನ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಕಳ್ಳನ ಮನೆಯಲ್ಲಿ 25 ಸೈಕಲ್, 3 ಬೈಕ್ ಜಪ್ತಿ ಮಾಡಿದ್ದಾರೆ. ಈತನನ್ನು ಬಂಧಿಸಿ ಠಾಣೆಗೆ ಕರೆದೊಯ್ಯುವ ವೇಳೆ ಪೊಲೀಸರಿಗೆ, ಬಟ್ಟೆ ಬದಲಿಸಿ ಬರುವುದಾಗಿ ಹೇಳಿದ್ದಾನೆ. ಇದನ್ನು ನಂಬಿದ ಪೊಲೀಸರು ಆತನಿಗೆ ಬಟ್ಟೆ ಬದಲಿಸಲು ಅವಕಾಶ ಕಲ್ಪಿಸಿದ್ದಾರೆ. ಈ ವೇಳೆ ಪೊಲೀಸರಿಗೆ ಯಾಮಾರಿಸಿ ಮನೆಯಿಂದ ಆತ ಪರಾರಿಯಾಗಿದ್ದಾನೆ. ಇದನ್ನೂ ಓದಿ: ವಿಜಯಪುರದಲ್ಲಿ ಮತ್ತೆ ಭೂಕಂಪ – ಬೆಚ್ಚಿಬಿದ್ದ ಜನತೆ

    ಭಟ್ಕಳ ಪಟ್ಟಣದಲ್ಲಿ ಕೆಲ‌ ದಿನಗಳಿಂದ ಸೈಕಲ್, ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿ ಮನೆ ಮೇಲೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ಭಟ್ಕಳ ಪೊಲೀಸರು ಆತ ಕದ್ದ ಸೈಕಲ್, ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸೈಕಲ್, ಬೈಕ್ ಕಳೆದುಕೊಂಡವರು ಸ್ಥಳಕ್ಕೆ ಆಗಮಿಸಿ ತಮ್ಮ ವಾಹನಗಳನ್ನು ಕೊಡುವಂತೆ ಪೊಲೀಸರಲ್ಲಿ ವಿನಂತಿ ಮಾಡಿದರು.

    ಘಟನೆ ಸಂಬಂಧ ಭಟ್ಕಳ‌ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಂಗಳೂರಿನ SDPI, PFI ನಾಯಕರ ಮನೆ ಮೇಲೆ ದಾಳಿ – ಐವರು ಅರೆಸ್ಟ್‌

    Live Tv
    [brid partner=56869869 player=32851 video=960834 autoplay=true]

  • ಶಿರಸಿಯಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿ 1 ರೂ. ಇಳಿಕೆ

    ಶಿರಸಿಯಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿ 1 ರೂ. ಇಳಿಕೆ

    ಕಾರವಾರ: ಪೆಟ್ರೋಲ್, ಡೀಸೆಲ್ ಬೆಲೆ ರಾಜ್ಯದಲ್ಲಿಯೇ ಶಿರಸಿಯಲ್ಲಿ ಗರಿಷ್ಠವಾಗಿದೆ. ಈ ಕುರಿತಂತೆ ಶಿರಸಿ ವೈದ್ಯರೊಬ್ಬರ ಸಲಹೆ ಸ್ವೀಕರಿಸಿದ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು, ಶಿರಸಿ ಗ್ರಾಹಕರಿಗೆ 1 ರೂ. ರಷ್ಟು ಇಂಧನ ದರ ಕಡಿಮೆ ಮಾಡಿದೆ.

    ಕೇಂದ್ರಕ್ಕೆ ವಿವರವಾದ ಪತ್ರ ಬರೆದಿದ್ದ ಡಾ. ರವಿಕಿರಣ ಪಟವರ್ಧನ್
    ಶಿರಸಿ ಪಟ್ಟಣದ ಖ್ಯಾತ ಆಯುರ್ವೇದ ವೈದ್ಯರಾದ ಡಾ. ರವಿಕಿರಣ ಪಟವರ್ಧನ್ ಕಳೆದ ಜೂನ್ ಮೊದಲ ವಾರದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ರಾಜ್ಯದಲ್ಲೇ ಶಿರಸಿಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಹೆಚ್ಚಿರುವುದನ್ನು ಉಲ್ಲೇಖಿಸಿ ಪತ್ರ ಬರೆದಿದ್ದರು. ಶಿರಸಿಗೆ ದೂರದ ಮಂಗಳೂರಿನಿಂದ ಇಂಧನ ಪೂರೈಸಲಾಗುತ್ತಿದೆ. ಹೀಗಾಗಿ ಸಾಗಾಟ ವೆಚ್ಛ ಅನಗತ್ಯವಾಗಿ ಗ್ರಾಹಕರ ಮೇಲೆ ಬೀಳುತ್ತಿರುವ ಅಂಶವನ್ನು ಪತ್ರದಲ್ಲಿ ಪ್ರಸ್ತಾಪಿಸಿದ್ದರು. ಇದನ್ನೂ ಓದಿ: ಸಂಧಾನಕ್ಕೂ ಸಿದ್ಧ, ಸಮರಕ್ಕೂ ಬದ್ಧ: ಆರೋಪದ ಬಗ್ಗೆ ಮುರುಘಾ ಶ್ರೀ ಮೊದಲ ಮಾತು

    ವೈದ್ಯರ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ ನಿರ್ಮಲಾ ಸೀತಾರಾಮನ್, ಪೆಟ್ರೋಲಿಯಂ ಸಚಿವಾಲಯಕ್ಕೆ ಈ ಮಾಹಿತಿ ರವಾನಿಸಿ, ಡಾ. ರವಿಕಿರಣ ಅವರಿಗೆ ಹಿಂಬರಹವನ್ನೂ ಕಳಿಸಿಕೊಟ್ಟಿದ್ದರು.

    ಈಗ ಇಂಡಿಯನ್ ಆಯಿಲ್ ಕಂಪನಿಯಿಂದ ಡಾ. ಪಟವರ್ಧನ್ ಅವರಿಗೆ ಪ್ರತ್ಯುತ್ತರ ಬಂದಿದ್ದು, ಅದರಲ್ಲಿ ಕೇಂದ್ರ ಸರ್ಕಾರದ ಸೂಚನೆಯಂತೆ ಮಂಗಳೂರಿನಿಂದ ಶಿರಸಿಗೆ ಬರುತ್ತಿದ್ದ ಪೆಟ್ರೋಲ್ ಹಾಗೂ ಡಿಸೇಲ್ ಬದಲಾಗಿ ಹುಬ್ಬಳ್ಳಿಯಿಂದ ಸರಬರಾಜು ಮಾಡಲಾಗುವುದು ಎಂಬ ಮಾಹಿತಿ ನೀಡಿದ್ದಾರೆ. ಆ ಮೂಲಕ ಶಿರಸಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 1.19 ರೂ. ಮತ್ತು ಡೀಸೆಲ್ 1.01 ರೂ. ಗಳಷ್ಟು ಕಡಿಮೆಯಾಗಿದೆ. ಇದನ್ನೂ ಓದಿ: ಪಿಎಸ್‌ಐ ಅಕ್ರಮ- ಮಹಿಳಾ ಕೋಟಾದಲ್ಲಿ ಮೊದಲ ರ‍್ಯಾಂಕ್ ಪಡೆದು ನಾಪತ್ತೆಯಾಗಿದ್ದಾಕೆ ಕೊನೆಗೂ ಲಾಕ್

    Live Tv
    [brid partner=56869869 player=32851 video=960834 autoplay=true]

  • ಗುಡ್ ನೈಟ್ ಕಾಯಿಲ್ ಲಿಕ್ವಿಡ್ ಕುಡಿದು 2 ವರ್ಷದ ಮಗು ಸಾವು

    ಗುಡ್ ನೈಟ್ ಕಾಯಿಲ್ ಲಿಕ್ವಿಡ್ ಕುಡಿದು 2 ವರ್ಷದ ಮಗು ಸಾವು

    ಕಾರವಾರ: ಗುಡ್ ನೈಟ್ ಕಾಯಿಲ್‍ನ ಲಿಕ್ವಿಡ್ ಕುಡಿದು ಎರಡು ವರ್ಷದ ಮಗು ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾವೂರಿನಲ್ಲಿ ನಡೆದಿದೆ.

    ಆರವ್ ಮಹೇಶ್ ನಾಯ್ಕ (2) ಸಾವನ್ನಪ್ಪಿರುವ ಮಗು. ಮನೆಯಲ್ಲಿ ನೆಲದ ಮೇಲೆ ಇಟ್ಟಿದ್ದ ಸೊಳ್ಳೆ ಓಡಿಸುವ ಗುಡ್ ನೈಟ್ ಲಿಕ್ವಿಡ್ ಕಾಯಿಲ್‍ನಲ್ಲಿ ಆಟವಾಡುತ್ತ ಮಗು ತೆಗೆದುಕೊಂಡು ಕುಡಿದು ಅಸ್ವಸ್ಥಗೊಂಡಿತ್ತು. ಇದನ್ನೂ ಓದಿ: ಮೊಮ್ಮಗನಿಗೆ ಶ್ರೀಕೃಷ್ಣನ ವೇಷ ಹಾಕಿ ಮುಸ್ಲಿಂ ಕುಟುಂಬದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

    ತಕ್ಷಣ ಮಗುವನ್ನು ಹೊನ್ನಾವರ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚೇತರಿಕೆ ಕಾಣದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಇಂದು ಉಡುಪಿಯ ಮಣಿಪಾಲ ಆಸ್ಪತ್ರೆಗೆ ಕರೆದೊಯ್ದಿದ್ದರು. ಆ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ. ಇದನ್ನೂ ಓದಿ: ಹಾಡಹಗಲೇ ಮೆಡಿಕಲ್‍ನಲ್ಲಿ ಬುರ್ಖಾಧಾರಿಗಳಿಂದ ಕಳ್ಳತನ

    Live Tv
    [brid partner=56869869 player=32851 video=960834 autoplay=true]

  • ಕೆರೆ ಬೇಟೆ ವೇಳೆ ಮೀನು ಸಿಗಲಿಲ್ಲವೆಂದು ಗಲಾಟೆ – ಪೊಲೀಸರ ಮೇಲೆ ಕಲ್ಲು ತೂರಾಟ

    ಕೆರೆ ಬೇಟೆ ವೇಳೆ ಮೀನು ಸಿಗಲಿಲ್ಲವೆಂದು ಗಲಾಟೆ – ಪೊಲೀಸರ ಮೇಲೆ ಕಲ್ಲು ತೂರಾಟ

    ಕಾರವಾರ: ಕೆರೆ ಬೇಟೆ ವೇಳೆಯಲ್ಲಿ ಮೀನು ಸಿಗಲಿಲ್ಲವೆಂದು ಜನ ಗಲಾಟೆ ಆರಂಭಿಸಿ ಸ್ಥಳದಲ್ಲಿದ್ದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಗೋಡಿನಲ್ಲಿ ನಡೆದಿದೆ.

    ಇಂದು ಕಾನಗೋಡಿನ ಮಾರಿಕಾಂಬಾ ದೇವಸ್ಥಾನದ ಕಮಿಟಿ ಕೆರೆಯಲ್ಲಿ ಮೀನು ಹಿಡಿಯಲು ಸೇವೆ ರೂಪದಲ್ಲಿ ಒಬ್ಬೊಬ್ಬರಿಗೆ 600 ರೂ. ಹಣ ಪಡೆದು ಅವಕಾಶ ನೀಡಿತ್ತು. ಮೀನು ಹಿಡಿಯಲು ಐದುಸಾವಿರಕ್ಕೂ ಹೆಚ್ಚು ಜನ ಕಾನಗೋಡಿನ ಕೆರೆಯಲ್ಲಿ ಸೇರಿದ್ದರು. ಆದರೆ ಕೆರೆಯಲ್ಲಿ ಮೀನು ಸಿಕ್ಕಿರಲಿಲ್ಲ. ಇದರಿಂದ ರೊಚ್ಚಿಗೆದ್ದು ಜನ ದೇವಸ್ಥಾನದ ಕಮಿಟಿಯೊಂದಿಗೆ ಗಲಾಟೆ ಆರಂಭಿಸಿದ್ದರು. ಇದನ್ನೂ ಓದಿ: ಮಹಿಳಾ ಶೌಚಾಲಯ ಪ್ರವೇಶಿಸಿ ಬಾಗಿಲು ಲಾಕ್ ಮಾಡಿಕೊಂಡ


    ಮೀನು ಸಿಗದ ಕಾರಣ ಹಣ ವಾಪಸ್ ಕೊಡುವಂತೆ ಕಮಿಟಿಯೊಂದಿಗೆ ಗಲಾಟೆ ಆರಂಭಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಗುಂಪು ಚದುರಿಸಲು ಲಾಠಿ ಜಾರ್ಜ್ ಮಾಡಿದ್ದಾರೆ. ಇದರಿಂದ ಮತ್ತಷ್ಟು ಕುಪಿತಗೊಂಡ ಜನ ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಘಟನೆಯಲ್ಲಿ ಪೊಲೀಸರು ಸೇರಿ ಹಲವರಿಗೆ ಗಾಯಗಳಾಗಿವೆ.

  • ಕಾರವಾರದ ನೌಕಾನೆಲೆಗೆ ರಾಜನಾಥ್ ಸಿಂಗ್ ಭೇಟಿ – ರಕ್ಷಣಾ ಸಿಬ್ಬಂದಿ ಕುಟುಂಬದೊಂದಿಗೆ ಸಂವಾದ

    ಕಾರವಾರದ ನೌಕಾನೆಲೆಗೆ ರಾಜನಾಥ್ ಸಿಂಗ್ ಭೇಟಿ – ರಕ್ಷಣಾ ಸಿಬ್ಬಂದಿ ಕುಟುಂಬದೊಂದಿಗೆ ಸಂವಾದ

    ಕಾರವಾರ: ದೇಶದ ಪ್ರತಿಷ್ಠಿತ ನೌಕಾ ನೆಲೆಯಾಗಿರುವ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಗಾದಲ್ಲಿರುವ ಕದಂಬ ನೌಕಾನೆಲೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಭೇಟಿ ನೀಡಿದರು.

    ರಕ್ಷಣಾ ಸಚಿವರನ್ನು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್.ಹರಿ ಕುಮಾರ್ ಮತ್ತು ವೈಸ್ ಅಡ್ಮಿರಲ್ ಅಜೇಂದ್ರ ಬಹದ್ದೂರ್ ಸಿಂಗ್, ಕಮಾಂಡಿಂಗ್ ಇನ್ ಚೀಫ್ ವೆಸ್ಟರ್ನ್ ನೇವಲ್ ಕಮಾಂಡ್ ಜೊತೆಗೆ ರಿಯರ್ ಅಡ್ಮಿರಲ್ ಅತುಲ್ ಆನಂದ್, ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ಕರ್ನಾಟಕ ನೇವಲ್ ಏರಿಯಾ (ಎಫ್‍ಒಕೆ) ಬರಮಾಡಿಕೊಂಡರು. ಇದನ್ನೂ ಓದಿ: ಎಲ್‍ ನಿನೋ ಎಫೆಕ್ಟ್ – ಕೇರಳಕ್ಕೆ ಮುಂಗಾರು ನಾಲ್ಕು ದಿನ ವಿಳಂಬ

    ರಕ್ಷಣಾ ಸಚಿವರು ಕದಂಬ ನೌಕಾ ಪ್ರದೇಶದ ರಕ್ಷಣಾ ಸಿಬ್ಬಂದಿ ಮತ್ತು ಅವರ ಕುಟುಂಬಗಳೊಂದಿಗೆ ಸಂವಾದ ನಡೆಸಿದರು. ಎರಡು ದಿನದ ಕಾರ್ಯಕ್ರಮದ ನಿಮಿತ್ತ ಆಗಮಿಸಿರುವ ರಾಜನಾಥ್ ಸಿಂಗ್ ಮೆ 27 ರಂದು ಐಎನ್‍ಎಸ್ ವಿಕ್ರಮಾದಿತ್ಯ ನೌಕೆಯ ಜಲಾಂತರ್ಗಾಮಿ ಸಮುದ್ರಯಾನದಲ್ಲಿ ಪಾಲ್ಗೊಳ್ಳುವ ಜೊತೆ ಕದಂಬ ನೌಕಾನೆಲೆಯ ಫೇಸ್-2 ಕಾಮಗಾರಿ ವೀಕ್ಷಣೆ ಮಾಡಲಿದ್ದಾರೆ. ಇದನ್ನೂ ಓದಿ: ಬೆಂಗಳೂರು – ಚೆನ್ನೈ ಎಕ್ಸ್‌ಪ್ರೆಸ್‌ವೇಗೆ ಶಂಕು: ವಿಶೇಷ ಏನು?

  • ಕಾರವಾರದಲ್ಲಿ ಉದ್ದ ಕಣ್ಣಿನ ಅಪರೂಪದ ಏಡಿ ಪತ್ತೆ

    ಕಾರವಾರದಲ್ಲಿ ಉದ್ದ ಕಣ್ಣಿನ ಅಪರೂಪದ ಏಡಿ ಪತ್ತೆ

    ಕಾರವಾರ: ಮಾಜಾಳಿ ಕಡಲತೀರದಲ್ಲಿ ಉದ್ದ ಕಣ್ಣಿನ ಏಡಿಯೊಂದು ಪತ್ತೆಯಾಗಿದೆ.

    ಕಾರವಾರದ ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಶಿವಕುಮಾರ್ ಹರಗಿ ಈ ಏಡಿಯ ಕುರಿತಾದ ಮಾಹಿತಿ ಸಂಗ್ರಹಿಸಿದ್ದಾರೆ. ತನ್ನ ಶರೀರದ ಗಾತ್ರದಷ್ಟೇ ಉದ್ದವಾದ ಕಣ್ಣನ್ನು ಹೊಂದಿರುವ ಈ ಏಡಿಗೆ ಜಪಾನ್ ಮತ್ತು ದಕ್ಷಿಣ ಏಷ್ಯಾ ರಾಷ್ಟ್ರಗಳ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಈ ಏಡಿಗಳನ್ನು ಅಲ್ಲಿ ಆಹಾರಕ್ಕಾಗಿ ಬಳಸುವ ಕಾರಣ ಬಹು ಮೌಲ್ಯವುಳ್ಳದ್ದೂ ಆಗಿದೆ. ಈ ವಿಶೇಷ ಏಡಿಯೂ ಮಾಜಾಳಿಯ ಮೀನುಗಾರ ಧನೇಶ್ ಸೈಲ್ ಪಟ್ಟೆ ಬಲೆಗೆ ಸಿಕ್ಕಿ ಬಿದ್ದಿದೆ. ಇದನ್ನೂ ಓದಿ: ಅಕ್ರಮ ಗಣಿ ಮಾಫಿಯಾಗೆ ಮಂಡ್ಯ ವ್ಯಕ್ತಿ ಬಲಿ – ಹೊಳೆನರಸೀಪುರ ಅರಣ್ಯದಲ್ಲಿ ಹೂತು ಹಾಕಿದ್ರಾ ಶವ? 

    ಸಮುದ್ರ ಮಟ್ಟ ಏರಿಕೆ: ಈ ನಾಲ್ಕು ಕರಾವಳಿ ನಗರಗಳಿಗೆ ಕಾದಿದೆ ಅಪಾಯ - Varthabharati

    ಎಲ್ಲೆಲ್ಲಿ ಸಿಗುತ್ತೆ?
    ಡಾ.ಶಿವಕುಮಾರ್ ಹರಗಿ ಅವರು ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ಕೊಟ್ಟಿದ್ದು, ಉಷ್ಣವಲಯ, ಸಮಶೀತೋಷ್ಣವಲಯದ ಸಾಗರದಲ್ಲಿ ಇವುಗಳು ಕಂಡುಬರುತ್ತವೆ. ಕೆಂಪು ಸಮುದ್ರ, ಹವಾಯಿ ದ್ವೀಪ, ಜಪಾನ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಏಷ್ಯಾ ದ್ವೀಪ ರಾಷ್ಟ್ರಗಳಲ್ಲಿ ಅತೀ ಹೆಚ್ಚಾಗಿ ಇವು ದೊರೆಯುತ್ತವೆ. ಭಾರತದ ಪೂರ್ವ ಕರಾವಳಿಯಲ್ಲೂ ಇವುಗಳು ಸಿಕ್ಕ ದಾಖಲೆಗಳಿವೆ. ಆದರೆ ಪಶ್ಚಿಮ ಕರಾವಳಿಯಲ್ಲಿ ಈ ಏಡಿ ಬಹಳ ಅಪರೂಪ ಎಂದರು.

    ಹಸಿರು ಬಣ್ಣಕ್ಕೆ ತಿರುಗಿದ ಕಡಲು, ಸುರತ್ಕಲ್ ಸಮುದ್ರ ತೀರದಲ್ಲಿ ಗೋಚರ –

    ವಿಶೇಷತೆ ಏನು?
    ಈಜಲು ಕಾಲಿನ ವ್ಯವಸ್ಥೆಗಳನ್ನು ಹೊಂದಿರುವ ಈ ಏಡಿ ಆರಾಮವಾಗಿ ಸಾಗರದಲ್ಲಿ ಈಜಬಲ್ಲದು. ಸಮುದ್ರದ ಮರಳಿನಲ್ಲಿ ಹೊಂಚು ಹಾಕಿ ಕುಳಿತು ಉದ್ದನೆಯ ದುರ್ಬಿನ್ ಮಾದರಿಯ ಕಣ್ಣಿನ ಮೂಲಕ ತನ್ನ ಬೇಟೆಯನ್ನು ಗುರುತಿಸಿ ಬೇಟೆಯಾಡುತ್ತವೆ. ಇದರ ವೈಜ್ಞಾನಿಕ ಹೆಸರು ‘ಸೂಡೊಪೊತಲಾಮಸ್ ವಿಜಿಲ್’ ಎಂದು ತಿಳಿಸಿದರು. ಇದನ್ನೂ ಓದಿ: ನಮ್ಮ ಮೇಲೆ ಅತ್ಯಾಚಾರ ನಿಲ್ಲಿಸಿ – ಕಾನ್ ಚಿತ್ರೋತ್ಸವದಲ್ಲಿ ಬೆತ್ತಲಾದ ಉಕ್ರೇನ್ ಮಹಿಳೆ 

  • ಅಗ್ನಿ ಅವಘಡ – ಕಟ್ಟಡದಿಂದ ಹಾರಿ ಜೀವ ಉಳಿಸಿಕೊಂಡ ತಾಯಿ, ಮಗಳು

    ಅಗ್ನಿ ಅವಘಡ – ಕಟ್ಟಡದಿಂದ ಹಾರಿ ಜೀವ ಉಳಿಸಿಕೊಂಡ ತಾಯಿ, ಮಗಳು

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ನಟರಾಜ ರಸ್ತೆಯ ಎರಡು ಅಂಗಡಿಗಳಲ್ಲಿ ಇಂದು ಬೆಳಗ್ಗೆ ಶಾರ್ಟ್‌ ಸಕ್ರ್ಯೂಟ್‌ನಿಂದಾಗಿ ಬೆಂಕಿ ತಗುಲಿದ್ದು, ಈ ವೇಳೆ ಮಳಿಗೆಯ ಮೇಲಿನ ಮನೆಯಲ್ಲಿದ್ದ ತಾಯಿ, ಮಗಳು ಹೊರಕ್ಕೆ ಜಿಗಿದು ಜೀವ ಉಳಿಸಿಕೊಂಡಿದ್ದಾರೆ.

    ಭಾರತಿ ಮಡಿವಾಳ್ ಹಾಗೂ ಈಕೆಯ ಮಗಳು ಮೇಘನಾ ಮಡಿವಾಳ ಪ್ರಾಣಾಪಾಯದಿಂದ ಪಾರಾದವರಾಗಿದ್ದಾರೆ. ಕಟ್ಟಡಕ್ಕೆ ಬೆಂಕಿ ತಗಲುತ್ತಿದ್ದಂತೆ ಮಳಿಗೆ ಮನೆಯಲ್ಲಿ ವಾಸವಿದ್ದ ತಾಯಿ, ಮಗಳು ಹೊರಕ್ಕೆ ಬರಲಾರದ ಸ್ಥಿತಿ ನಿರ್ಮಾಣವಾಗಿತ್ತು. ತಾಯಿ, ಮಗಳಿಬ್ಬರೂ ಪ್ರಾಣ ಉಳಿಸಿಕೊಳ್ಳಲು ಮಾಳಿಗೆಯಿಂದ ಜಿಗಿದಿದ್ದಾರೆ. ಈ ವೇಳೆ ಸ್ಥಳೀಯರು ಅವರನ್ನು ಚಾದರ ಬಳಸಿ ಹಿಡಿದು ರಕ್ಷಣೆ ಮಾಡಿದ್ದಾರೆ.

    karawara

    ಮಳಿಗೆಗೆ ಬೆಂಕಿ ತಗುಲಿದ್ದರಿಂದ ಭಾರತಿ ಅವರಿಗೆ ಸೇರಿದ್ದ ಮೇಘನಾ ಟೇಲರ್ ಅಂಗಡಿ, ಪಕ್ಕದಲ್ಲಿರುವ ರಂಗನಾಥ ರಾಯ್ಕರ್ ಅವರಿಗೆ ಸೇರಿದ ಬ್ಯೂಟಿಕ್ ಪರ್ಲ್ ಮಳಿಗೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಉಪಕರಣಗಳು ಸುಟ್ಟು ಹೋಗಿವೆ. ಇದೀಗ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದು, ಸ್ಥಳಕ್ಕೆ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿ ಪರಿಶೀಲಿಸಿದರು. ಹಾನಿಗೆ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

  • ಮಹಿಳೆಯೊಂದಿಗೆ ನಿಲ್ಲಿಸಿ ಬಲವಂತವಾಗಿ ಅಶ್ಲೀಲ ಫೋಟೋ ತೆಗೆದು ಬ್ಲಾಕ್ ಮೇಲ್ – ಮೂವರ ಬಂಧನ

    ಮಹಿಳೆಯೊಂದಿಗೆ ನಿಲ್ಲಿಸಿ ಬಲವಂತವಾಗಿ ಅಶ್ಲೀಲ ಫೋಟೋ ತೆಗೆದು ಬ್ಲಾಕ್ ಮೇಲ್ – ಮೂವರ ಬಂಧನ

    ಕಾರವಾರ: ಉದ್ಯೋಗ ಕೊಡಿಸುವುದಾಗಿ ಹನಿಟ್ರ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ ಮೂವರನ್ನು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.

    ಶಿರಸಿಯ ಉಂಚಳ್ಳಿಯ ಅಜೀತ್ ಶ್ರೀಕಾಂತ್ ನಾಡಿಗ (25), ಬನವಾಸಿಯ ಗೊಲಗೇರಿ ಓಣಿಯ ಧನುಶ್ಯ ಕುಮಾರ್ ಅಲಿಯಾಸ್‌ ದಿಲೀಪ್ ಕುಮಾರ್ ಶೆಟ್ಟಿ (25) ಮತ್ತು ಶಿವಮೊಗ್ಗ ನಗರದ ರಂಗನಾಥ ಬಡಾವಣೆ ಗೋಪಾಳದ ಪದ್ಮಜಾ ಡಿ.ಎನ್ (50) ಬಂಧಿತ ಆರೋಪಿಗಳು. ಇದನ್ನೂ ಓದಿ: ಪತಿಯನ್ನು ಹರಾಜಿಗಿಟ್ಟು, ಯಾವುದೇ ಕಾರಣಕ್ಕೂ Exchange ಇಲ್ಲವೆಂದ ಪತ್ನಿ..!

    ಏನಿದು ಘಟನೆ?:
    ಶಿರಸಿ ಮೂಲದ ವ್ಯಕ್ತಿಗೆ ಉಪನ್ಯಾಸಕ ಹುದ್ದೆ ಕೊಡಿಸುವುದಾಗಿ 17 ಜನವರಿ 2022ರಂದು ಶಿವಮೊಗ್ಗಕ್ಕೆ ಕರೆಸಿಕೊಂಡು ಕೋಣೆಯಲ್ಲಿ ಕೂಡಿ ಹಾಕಿ ನಗ್ನಗೊಳಸಿ ಮಹಿಳೆಯೊಂದಿಗೆ ನಿಲ್ಲಿಸಿ ಫೋಟೋ, ವೀಡಿಯೋ ಮಾಡಿಕೊಂಡಿದ್ದಾರೆ. ಬಳಿಕ ಈ ಫೋಟೋ ಮತ್ತು ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವುದಾಗಿ ಬೆದರಿಸಿ 15 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು.

    18 ಜನವರಿ 2022 ರಂದು ಶಿರಸಿ ಮೂಲದ ವ್ಯಕ್ತಿಯ ತಂದೆಯ ಬಳಿ ಹೋಗಿ ನಿಮ್ಮ ಮಗ ಮಹಿಳೆಯ ಜೊತೆಗೆ ಇರುವ ಕೆಲವು ನಗ್ನ ಫೋಟೋಗಳು ಮತ್ತು ವೀಡಿಯೋಗಳು ಇವೆ, ಅವುಗಳನ್ನು ಡಿಲೀಟ್ ಮಾಡಲು ಮತ್ತು ನಿಮ್ಮ ಮಗ ಜೀವಂತವಾಗಿ ಬರಲು 15 ಲಕ್ಷ ರೂ. ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಅಲ್ಲದೇ ಬಲವಂತವಾಗಿ ಭದ್ರತೆಗಾಗಿ ನಕಲಿ ದಾಖಲೆ ಸೃಷ್ಟಿ ಮಾಡಿ ಸುಳ್ಳು ಕರಾರು ಪತ್ರ ಬರೆಸಿಕೊಂಡಿದ್ದಲ್ಲದೇ ಬ್ಲ್ಯಾಂಕ್ ಚೆಕ್ ಪಡೆದಿದ್ದರು. ಇದನ್ನೂ ಓದಿ: ಹಾಸ್ಟೆಲ್‍ಗೆ ಟ್ರಾವೆಲ್ ಬ್ಯಾಗ್‍ನಲ್ಲಿ ಯುವತಿಯನ್ನು ಕರೆತಂದ ಪ್ರಿಯಕರ – ವೀಡಿಯೋ ಮಣಿಪಾಲದ್ದಲ್ಲ

    ಒಂದು ವೇಳೆ 15 ಲಕ್ಷ ರೂ. ಹಣ ಕೊಡದೇ ಇದ್ದರೆ ಬಲತ್ಕಾರದ ದೂರು ದಾಖಲಿಸುವುದಾಗಿ ಇಲ್ಲವೇ ಕೊಲೆ ಮಾಡುವುದಾಗಿ ಹೆದರಿಸಿದ್ದರು. ಈ ಕುರಿತು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ನೊಂದ ವ್ಯಕ್ತಿ ನಿನ್ನೆ ದೂರು ದಾಖಲಿಸಿದ್ದರು. ಕೂಡಲೇ ಕಾರ್ಯಪ್ರವೃತರಾದ ಪೊಲೀಸರು ಆರೋಪಿಗಳನ್ನು ಹಿಡಿಯುವಲ್ಲಿ 1 ದಿನದಲ್ಲಿ ಯಶಸ್ವಿಯಾಗಿದ್ದಾರೆ.

    ಕಾರ್ಯಚರಣೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಎಸ್. ಭದ್ರಿನಾಥ್, ಶಿರಸಿ ಡಿವೈಎಸ್‍ಪಿ ರವಿ ಡಿ.ನಾಯ್ಕ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಗಳಾದ ಸಿಪಿಐ ರಾಮಚಂದ್ರ ನಾಯ್ಕ ಹಾಗೂ ಸಿಬ್ಬಂದಿ ಮಹಾಂತೇಶ್ ಬಾರಕೇರ, ಅಶೋಕ ನಾಯ್ಕ, ರಾಮಯ್ಯ ಪೂಜಾರಿ, ವಿದ್ಯಾ ಎಚ್.ವಿ, ಯಶೋದಾ ನಾಯ್ಕ, ಪಾಂಡು ನಾಗೋಜಿ ರವರು ಭಾಗವಹಿಸಿದ್ದರು.

  • ಅಡಿಕೆ ಕದ್ದು ಸಿಕ್ಕಿಬಿದ್ದ ನಿವೃತ್ತ ASI

    ಅಡಿಕೆ ಕದ್ದು ಸಿಕ್ಕಿಬಿದ್ದ ನಿವೃತ್ತ ASI

    ಕಾರವಾರ: ಅಡಿಕೆ ತೋಟದಲ್ಲಿ ಹಸಿ ಅಡಿಕೆ ಕದ್ದು ಮಾರಲು ಪ್ರಯತ್ನಿಸಿದ್ದ ನಿವೃತ್ತ ಎಎಸ್‍ಐಯನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿರುವ ಘಟನೆ ಇಂದು ನಡೆದಿದೆ.

    ರಾಮಚಂದ್ರ ದೇವು ನಾಯ್ಕ ಎಂಬಾತನೇ ಬಂಧಿತ ಆರೋಪಿ. ಈತ ಕಳೆದ ಒಂದು ವಾರಗಳ ಹಿಂದೆ ಚಿಪಗಿಯ ತನ್ನ ಜಮೀನಿನ ಪಕ್ಕದಲ್ಲಿದ ಮಹಾಬಲೇಶ್ವರ ಭಟ್ ಎಂಬುವವರ ತೋಟದಲ್ಲಿರುವ ಅಡಿಕೆಯನ್ನು ರಾತ್ರಿ ವೇಳೆಯಲ್ಲಿ ಕದ್ದು ನಾಪತ್ತೆಯಾಗಿದ್ದ. ಈ ಕುರಿತು ಮಹಾಬಲೇಶ್ವರ ಭಟ್ ಶಿರಸಿ ಗ್ರಾಮೀಣ ಠಾಣೆಯಲ್ಲಿ ದೂರೊಂದನ್ನು ದಾಖಲಿಸಿದ್ದರು. ಇದನ್ನೂ ಓದಿ: ಖಾಸಗಿ ಬಸ್ ಹರಿದು ವ್ಯಕ್ತಿ ಸಾವು

    ಡಿವೈಎಸ್‍ಪಿ ರವಿ ನಾಯ್ಕ ಹಾಗೂ ಸಿಪಿಐ ರಾಮಚಂದ್ರ ನಾಯ್ಕ ಮಾರ್ಗದರ್ಶನದಲ್ಲಿ ಪಿಎಸ್‍ಐ ಶ್ಯಾಮ ಪಾವಸ್ಕರ ತನಿಖೆ ಕೈಗೊಂಡಿದ್ದು, ಆರೋಪಿ ದೇವು ನಾಯ್ಕ ಹಸಿ ಅಡಿಕೆಯನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿ, ಶಿರಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸುಮಾರು 30 ಸಾವಿರರ ರೂ.ಗಳ ಹಸಿ ಅಡಿಕೆ ಕಳ್ಳತನದ ಆರೋಪ ದೇವು ನಾಯ್ಕ ಮೇಲಿದ್ದು, ಆರೋಪಿಗೆ ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಇದನ್ನೂ ಓದಿ: ಪತಿಯನ್ನು ಜೈಲಿನಿಂದ ಹೊರತರಲು ಸಹಾಯ ಮಾಡೋದಾಗಿ ಹೇಳಿ ಮಹಿಳೆಯ ರೇಪ್ ಮಾಡಿದ್ರು!