Tag: Karawara

  • ನನ್ನದು ಮಾನವ ಕುಲ, ಮಾನವ ನಕ್ಷತ್ರ – ಕುಲ, ಗೋತ್ರ ಕೇಳಿದ ಪುರೋಹಿತರಿಗೆ ಸತೀಶ್‌ ಜಾರಕಿಹೊಳಿ ಉತ್ತರ

    ನನ್ನದು ಮಾನವ ಕುಲ, ಮಾನವ ನಕ್ಷತ್ರ – ಕುಲ, ಗೋತ್ರ ಕೇಳಿದ ಪುರೋಹಿತರಿಗೆ ಸತೀಶ್‌ ಜಾರಕಿಹೊಳಿ ಉತ್ತರ

    ಕಾರವಾರ: ಪೂಜಾ ಕಾರ್ಯವೊಂದಕ್ಕೆ ಕುಲ, ಗೋತ್ರ ಕೇಳಿದ ಪುರೋಹಿತರಿಗೆ ಸಚಿವ ಸತೀಶ್‌ ಜಾರಕಿಹೊಳಿ (Satish Jarkiholi) ಉತ್ತರ ವಿಶಿಷ್ಟವಾಗಿದೆ. ಪುರೋಹಿತರಿಗೆ ನಾಸ್ತಿಕ ಮನೋಭಾವದ ಸಚಿವರು ಮಾನವೀಯತೆ ಪಾಠ ಹೇಳಿದ್ದಾರೆ.

    ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿ ತಾಲೂಕಿನ ಶಿವಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಹೆಗ್ಗಾರ ಗ್ರಾಮದಲ್ಲಿ ಕಾಲುಸಂಕ ನಿರ್ಮಾಣ ಕಾಮಗಾರಿಯ ಉದ್ಘಾಟನಾ ಸಮಾರಂಭಕ್ಕೆ ಸಚಿವ ಸತೀಶ್‌ ಜಾರಕಿಹೊಳಿ ಆಗಮಿಸಿದ್ದರು. ಗಣಪತಿ ಪೂಜೆ ಸಂದರ್ಭದಲ್ಲಿ ಪೂಜಾ ಕಾರ್ಯ ನೆರವೇರಿಸಲು ಹೆಗ್ಗಾರಿನ ಮಹಾಬಲೇಶ್ವರ ಗೋಪಾಲಕೃಷ್ಣ ದೀಕ್ಷಿತ್ ಎಂಬ ಪುರೋಹಿತರು ಇದ್ದರು. ಇದನ್ನೂ ಓದಿ: ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಬಾವ ನಾಪತ್ತೆ – ಕಿಡ್ನ್ಯಾಪ್ ಶಂಕೆ

    ಈ ವೇಳೆ ಪುರೋಹಿತರು, ಜಾರಕಿಹೊಳಿ ಅವರಿಗೆ ನಿಮ್ಮ ಕುಲ, ನಕ್ಷತ್ರ ಯಾವುದು ಎಂದು ಪೂಜಾ ಕಾರ್ಯಕ್ಕಾಗಿ ಕೇಳಿದ್ದಾರೆ. ನನ್ನ ಕುಲ ಮಾನವ ಕುಲ, ಮಾನವ ನಕ್ಷತ್ರ ಎಂದು ಹೇಳುವ ಮೂಲಕ ಮಾನವತಾ ವಾದದ ಪಾಠ ಮಾಡಿದ್ದಾರೆ. ಇನ್ನು ಪುರೋಹಿತರು ಸಹ ಅವರು ಹೇಳಿದಂತೆಯೇ ನಕ್ಷತ್ರವನ್ನು ಮಾನವ ನಕ್ಷತ್ರ, ಮನುಷ್ಯ ಕುಲ ಎಂದು ಮಂತ್ರಹೇಳುವ ಮೂಲಕ ಗಣಪತಿ ಪೂಜೆ ನೆರವೇರಿಸಿದರು.

    ನಾಸ್ತಿಕ ಮನೋಭಾವ ಹೊಂದಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಜನರಲ್ಲಿ ಜಾಗೃತಿ ಮೂಡಿಸಲು ಧಾರ್ಮಿಕ ಅನಿಷ್ಟ ಪದ್ದತಿ, ಮೂಡ ನಂಬಿಕೆ ವಿರುದ್ಧ ನಿರಂತರವಾಗಿ ಸಮರ ಸಾರುತ್ತಾ ಬಂದಿದ್ದಾರೆ. ಇದನ್ನೂ ಓದಿ: ಡಾಕ್ಟರ್‌ ಆಗಬೇಕೆಂದು ಕನಸು ಕಂಡಿದ್ದ ಹುಡುಗಿ ರಕ್ತದ ಕ್ಯಾನ್ಸರ್‌ಗೆ ಬಲಿ – ಮಗಳ ಆಸೆಯಂತೆ ದೇಹದಾನ ಮಾಡಿದ ಪೋಷಕರು

  • ಮಂಗಳೂರು, ಕಾರವಾರದಲ್ಲಿ ಬಂದರು ನಿರ್ಮಾಣ – 13 ಐಲ್ಯಾಂಡ್ ಅಭಿವೃದ್ಧಿ: ಮಂಕಾಳ್ ವೈದ್ಯ

    ಮಂಗಳೂರು, ಕಾರವಾರದಲ್ಲಿ ಬಂದರು ನಿರ್ಮಾಣ – 13 ಐಲ್ಯಾಂಡ್ ಅಭಿವೃದ್ಧಿ: ಮಂಕಾಳ್ ವೈದ್ಯ

    ಬೆಂಗಳೂರು: ಮಂಗಳೂರು (Mangaluru) ಮತ್ತು ಕಾರವಾರದಲ್ಲಿ (Karawara) ಬಂದರು ನಿರ್ಮಾಣ ಮಾಡಲಾಗುತ್ತದೆ ಎಂದು ಮೀನುಗಾರಿಕೆ ಮತ್ತು ಬಂದರು ಇಲಾಖೆ ಸಚಿವ ಮಂಕಾಳ್ ವೈದ್ಯ (Mankal Vaidya) ತಿಳಿಸಿದ್ದಾರೆ.

    ಉತ್ತರ ಕನ್ನಡ,  ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಇಲಾಖೆ ಅಧಿಕಾರಿಗಳು ಸಭೆ ವಿಧಾನಸೌಧದಲ್ಲಿ ನಡೆಯಿತು. ಸಭೆ ಬಳಿಕ ಮಾತನಾಡಿದ ಸಚಿವ ಮಂಕಾಳ್ ವೈದ್ಯ, ಕಾರವಾರ, ಮಂಗಳೂರಿನಲ್ಲಿ ಬಂದರು ಮಾಡಲು ಇವತ್ತಿನ ಸಭೆಯಲ್ಲಿ ಚರ್ಚೆಯಾಗಿದೆ. 1 ಕೋಟಿ ರೂ. ನಿಂದ 1 ಸಾವಿರ ಕೋಟಿ ರೂ.ನಲ್ಲಿ ಬಂದರು (Port) ಮಾಡಬಹುದು. ಯಾವ ಮಾದರಿಯಲ್ಲಿ ಬಂದರು ಮಾಡಬೇಕು ಎಂದು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ. ಮಾರುಕಟ್ಟೆ ಮತ್ತು ಪ್ರವಾಸೋದ್ಯಮ ಗಮನದಲ್ಲಿಟ್ಟುಕೊಂಡು ಬಂದರು ಮಾಡಲು ಚರ್ಚೆಯಾಗಿದೆ. ಆದಷ್ಟು ಬೇಗ ಇದಕ್ಕೆ ಬ್ಲೂ ಪ್ರಿಂಟ್ ರೆಡಿ ಮಾಡುವುದಾಗಿ ತಿಳಿಸಿದರು.

    ಮೀನುಗಾರರಿಗೆ 200 ಲೀಟರ್ ಡೀಸೆಲ್ ಕೊಡುವುದಾಗಿ ಹೇಳಿದ್ದೇವೆ ಅದನ್ನು ಕೊಡುತ್ತೇವೆ. ಮೀನುಗಾರರಿಗೆ ಸೀಮೆಎಣ್ಣೆ ಬಗ್ಗೆ ಸಮಸ್ಯೆ ‌ಇತ್ತು. ಇದರಿಂದ ಮೀನುಗಾರಿಗೆ ಸಮಸ್ಯೆ ಆಗುತ್ತಿತ್ತು. ಹೀಗಾಗಿ 10 ತಿಂಗಳು ಬಿಳಿ ಸೀಮೆಎಣ್ಣೆಯನ್ನು ಸರ್ಕಾರವೇ ಖರೀದಿ ಮಾಡಿ 35 ರೂಪಾಯಿ ಸಬ್ಸಿಡಿ ದರದಲ್ಲಿ ಮೀನುಗಾರಿಕೆ (Fishing) ಮಾಡುವವರಿಗೆ ಕೊಡುತ್ತಿದ್ದೇವೆ. ಕೇಂದ್ರ ಸರ್ಕಾರ ಸೀಮೆಎಣ್ಣೆ ಕೊಡುತ್ತಿಲ್ಲ. ಹೀಗಾಗಿ ದೇಶದಲ್ಲಿ ‌ಮೊದಲ ಬಾರಿಗೆ ನಾವೇ ಸೀಮೆಎಣ್ಣೆ ‌ಕೊಡುತ್ತಿದ್ದೇವೆ. ಸರ್ಕಾರ 300 ಲೀಟರ್ ನೀಡಲು ಸಿದ್ದ ಎಂದು ಹೇಳಿದರು.  ಇದನ್ನೂ ಓದಿ: ಬ್ರಿಟನ್‌ನಲ್ಲಿ ಹಿಂದೂಗಳೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ರಿಷಿ ಸುನಾಕ್‌, ಪತ್ನಿ ಅಕ್ಷತಾ ಮೂರ್ತಿ

    ಬೆಂಗಳೂರಿನಲ್ಲಿ ನವೆಂಬರ್ 21 ರಂದು ವಿಶ್ವ ಮೀನುಗಾರಿಕೆ ದಿನ ಕಾರ್ಯಕ್ರಮ ಮಾಡುತ್ತಿದ್ದೇವೆ. ಅಂದು 8 ಲಕ್ಷ ಮೌಲ್ಯದ ಮೀನುಗಾರರಿಗೆ ಮೀನು ಮಾರಾಟ ಮಾಡುವ ಗಾಡಿ ಕೊಡುತ್ತಿದ್ದೇವೆ. 300 ಗಾಡಿ ಪೈಕಿ ಬೆಂಗಳೂರಿಗೆ 150 ಗಾಡಿ ಕೊಡುತ್ತಿದ್ದೇವೆ. ಸರ್ಕಾರ ಸೆಕ್ಯುರಿಟಿ ಫಂಡ್ ಹೆಸರಿನಲ್ಲಿ ಫಲಾನುಭವಿಗಳಿಂದ 2 ಲಕ್ಷ ರೂ. ಡೆಪಾಸಿಟ್ ಪಡೆದುಕೊಳ್ಳುತ್ತದೆ. ಎಸ್‌ಸಿ ಎಸ್‌ಟಿ ಫಲಾನುಭವಿಗಳಿಂದ 1.5 ಲಕ್ಷ ರೂ. ಡೆಪಾಸಿಟ್‌ ತೆಗೆದುಕೊಳ್ಳುತ್ತೇವೆ ಎಂದರು.

     

    3 ಜಿಲ್ಲೆಗಳಲ್ಲಿ 13 ಐಲ್ಯಾಂಡ್ ಗುರುತಿಸಿದ್ದು, ಅಭಿವೃದ್ಧಿ ಮಾಡಲು ಪಿಪಿಪಿ ಮಾಡೆಲ್ ಮಾಡಬೇಕಾ ಎಂಬುದರ ಬಗ್ಗೆ ಚರ್ಚೆ ನಡೆದಿದೆ. ಐಲ್ಯಾಂಡ್ ಅಭಿವೃದ್ಧಿ ಮಾಡಿದರೆ ಪ್ರವಾಸೋದ್ಯಮ ಅಭಿವೃದ್ಧಿ ಆಗಲಿದೆ. ಈ‌ ನಿಟ್ಟಿನಲ್ಲಿ ಇವತ್ತಿನ ಸಭೆಯಲ್ಲಿ ಚರ್ಚೆಯಾಗಿದೆ ಎಂದರು. ಅಂಕೋಲದಲ್ಲಿ (Ankola)‌ ವಿಮಾನ ನಿಲ್ದಾಣಕ್ಕೆ (Air Port) ಬೇಕಾದ ಜಮೀನು ಖರೀದಿಯ ಪ್ರಕ್ರಿಯೆಗಳು ನಡೆಯುತ್ತಿವೆ. ಭೂಮಿ ಕೊಡುವವರಿಗೆ ಪರ್ಯಾಯ ಭೂಮಿ ನೀಡಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

  • ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ – ಸಾತೇರಿ ದೇವಿ ಮೂರ್ತಿಗೆ ಉಡಿಸಿದ ಸೀರೆ 1.06 ಲಕ್ಷ ರೂ.ಗೆ ಹರಾಜು

    ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ – ಸಾತೇರಿ ದೇವಿ ಮೂರ್ತಿಗೆ ಉಡಿಸಿದ ಸೀರೆ 1.06 ಲಕ್ಷ ರೂ.ಗೆ ಹರಾಜು

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರ (Karawara) ತಾಲೂಕಿನ ಹಣಕೋಣ ಗ್ರಾಮದಲ್ಲಿರುವ ಸಾತೇರಿ ದೇವಿ (Sateri Devi), ದೇವಸ್ಥಾನದಲ್ಲಿ ವರ್ಷಕ್ಕೆ ಒಂದು ಬಾರಿ ಏಳು ದಿನಗಳ ಕಾಲ ಭಕ್ತರಿಗೆ ದರ್ಶನ ನೀಡುತ್ತಾಳೆ.

    ಉಳಿದ ದಿನ ಪ್ರತಿ ಸೋಮವಾರ ದೇವಾಲಯದ ಗರ್ಭಗುಡಿಯ ಎದುರಿನ ಬಾಗಿಲ ಬಳಿ ನಿಂತು ದೇವಿಗೆ ಪೂಜೆ ಸಲ್ಲಿಸಲಾಗುತ್ತದೆ. ಗಣೇಶ ಚತುರ್ಥಿ ಮುಗಿದ ಮೂರನೇ ದಿನದ ಮಧ್ಯರಾತ್ರಿ ದೇಗುಲದ ಬಾಗಿಲು ತೆರೆಯಲಾಗಿದ್ದು, ಈ ಬಾರಿ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದರು. ಇದನ್ನೂ ಓದಿ: ಜ.22 ರಂದು ಅಯೋಧ್ಯೆ ರಾಮ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ನಿರೀಕ್ಷೆ: ನೃಪೇಂದ್ರ ಮಿಶ್ರಾ

    ಇಷ್ಟಾರ್ಥ ನೆರವೇರಿಸು ದೇವಿ ಎಂದು ಪ್ರಸಿದ್ಧಿ ಪಡೆದಿರುವ ದೇವಿ ದೇವಸ್ಥಾನಕ್ಕೆ ಪ್ರತಿ ವರ್ಷ ಸಾವಿರಾರು ಭಕ್ತರು ಹರಕೆ ಕಟ್ಟಿಕೊಂಡು ಬರುತ್ತಾರೆ. ಇಷ್ಟಾರ್ಥ ನೆರವೇರಿದ ಬಳಿಕ ಶಕ್ತಿಯಾನುಸಾರ ಕಾಣಿಕೆ, ಆಭರಣ ಅರ್ಪಿಸಿ ಕೃತಾರ್ಥರಾಗುತ್ತಾರೆ.

    ಹೀಗೆ ದೇವಿಗೆ ನೀಡಿದ ಹರಕೆ ರೂಪದ ಆಭರಣ, ಸೀರೆಗಳನ್ನು ಪ್ರಸಾದ ರೂಪದಲ್ಲಿ ಭಕ್ತರಿಗೆ ಹರಾಜಿನ ಮೂಲಕ ನೀಡಲಾಗುತ್ತದೆ. ಇಂದು (ಮಂಗಳವಾರ) ಸಾತೇರಿ ದೇವಿ ಮೂರ್ತಿಗೆ ಉಡಿಸಿದ ಸೀರೆ 1.06 ಲಕ್ಷ ರೂ.ಗೆ ಹರಾಜಾಗಿದೆ. ಉದ್ಯಮಿ ಪ್ರದೀಪ ಕದಂ ಎಂಬವರು ಈ ಸೀರೆಯನ್ನು ಆಡಳಿತ ಮಂಡಳಿ ಹಾಕಿದ ಹರಾಜಿನಲ್ಲಿ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ನಡ್ಡಾ ಪ್ರಾರ್ಥನೆ ವೇಳೆ ಗಣೇಶ ಪೆಂಡಾಲ್‍ನಲ್ಲಿ ಅಗ್ನಿ ದುರಂತ – ಪವಾಡದಂತೆ ಸುರಿದ ಮಳೆಯಿಂದ ತಪ್ಪಿದ ಅನಾಹುತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಸೀದಿಯಲ್ಲಿ ಮೌಲ್ವಿಯಿಂದ ಬಾಲಕನಿಗೆ ಲೈಂಗಿಕ ದೌರ್ಜನ್ಯ – ಬಂಧನ

    ಮಸೀದಿಯಲ್ಲಿ ಮೌಲ್ವಿಯಿಂದ ಬಾಲಕನಿಗೆ ಲೈಂಗಿಕ ದೌರ್ಜನ್ಯ – ಬಂಧನ

    ಕಾರವಾರ: ಕುರಾನ್ ಓದಲು ಬರುತಿದ್ಧ ಅಪ್ರಾಪ್ತ ಬಾಲಕನ ಮೇಲೆ ಮೌಲ್ವಿಯೊಬ್ಬ (Mawlawi) ಮಸೀದಿಯಲ್ಲಿ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾ ನಗರದಲ್ಲಿ ನಡೆದಿದೆ.

    ಘಟನೆ ಸಂಬಂಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತನ ಬಂಧನ ಮಾಡಲಾಗಿದೆ. ಇದನ್ನೂ ಓದಿ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಬುರ್ಕಾ ಧರಿಸಿ ನೃತ್ಯ – ವ್ಯಕ್ತಿ ಬಂಧನ

    ಪಶ್ಚಿಮ ಬಂಗಾಳ ಮೂಲದ ಅಬ್ಬುಸ್ ಸಮದ್ ಜಿಯಾಯಿ (25) ಬಂಧಿತ ಮೌಲ್ವಿಯಾಗಿದ್ದಾನೆ. ನಿನ್ನೆ ರಾತ್ರಿ ಬಾಲಕನಿಗೆ ಮಸೀದಿಯಲ್ಲಿ ವಸ್ತ್ರ ಬಿಚ್ಚಿಸಿ ಲೈಂಗಿಕ ದೌರ್ಜನ್ಯವೆಸಗಿದ್ದನು.

    ಈ ಕುರಿತು ಬಾಲಕನ ತಂದೆಯ ದೂರಿನನ್ವಯ ಮೌಲ್ವಿಯನ್ನು ಕುಮಟಾ ಠಾಣೆ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇದನ್ನೂ ಓದಿ: ಮಸೀದಿ ಮೇಲೆ ಭಗವಾಧ್ವಜ ಹಾರಿಸಿ ಪರಾರಿಯಾದ ಕಿಡಿಗೇಡಿಗಳು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಷ ಸೇವಿಸಿ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

    ವಿಷ ಸೇವಿಸಿ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

    ಕಾರವಾರ: ವಿಷ ಸೇವಿಸಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲ ತಾಲೂಕಿನಲ್ಲಿ ನಡೆದಿದೆ.

    ಬೆಳಂಬರದ ತಾಳೇಬೈಲಿ ಗ್ರಾಮದ ಶಿಲ್ಪ ಗೌಡ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಈಕೆ ಅಂಕೋಲ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಇದನ್ನೂ ಓದಿ: ಆದಿಯೋಗಿ ಪ್ರತಿಮೆ ನೋಡಲು ಬಂದವ ಸ್ನೇಹಿತರ ಕಣ್ಣೆದುರೇ ನೀರಲ್ಲಿ ಮುಳುಗಿ ಸಾವು

    ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ವಿಷ ಸೇವಿಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಸಂಬಂಧ ಅಂಕೋಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಿಯಂತ್ರಣ ತಪ್ಪಿ ಕಾರು ಪಲ್ಟಿ – ಚಾಲಕನಿಗೆ ಗಾಯ

    ನಿಯಂತ್ರಣ ತಪ್ಪಿ ಕಾರು ಪಲ್ಟಿ – ಚಾಲಕನಿಗೆ ಗಾಯ

    ಕಾರವಾರ: ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ (Car Overturns) ಘಟನೆ ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಉತ್ತರ ಕನ್ನಡ (Uttara Kannada) ಜಿಲ್ಲೆಯ ಹೊನ್ನಾವರ (Honnavara) ತಾಲೂಕಿನಲ್ಲಿ ಈ ಘಟನೆ ನಡೆದಿದ್ದು ಕಾರು ಪಲ್ಟಿಯಾಗಿ ಚಾಲಕ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇದನ್ನೂ ಓದಿ: ಡೋಲು ಬಡಿಯುತ್ತ ಪಬ್ ಮೇಲೆ ದಾಳಿ- ಸಂಘಟನೆ ಕಾರ್ಯಕರ್ತರು ವಶಕ್ಕೆ

    ಧಾರೇಶ್ವರದಿಂದ ಚಂದಾವರ ಮಾರ್ಗವಾಗಿ ಸಾಗರಕ್ಕೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ್ದು ಅಪಾಯಕಾರಿ ತಿರುವಿನಲ್ಲಿ ವೇಗವಾಗಿ ಆಗಮಿಸಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಇದನ್ನೂ ಓದಿ: ಕರಾವಳಿ ಗರಿಷ್ಠ ತಾಪಮಾನ ಇಳಿಕೆ ಸಾಧ್ಯತೆ – ಹೀಟ್ ವೇವ್ ಅಲರ್ಟ್ ವಾಪಸ್

  • ಆಳ ಸಮುದ್ರದ ಬೋಟ್ ಖರೀದಿಗೆ ನಿರುತ್ಸಾಹ ತೋರಿದ ಕರಾವಳಿ ಮೀನುಗಾರರು

    ಆಳ ಸಮುದ್ರದ ಬೋಟ್ ಖರೀದಿಗೆ ನಿರುತ್ಸಾಹ ತೋರಿದ ಕರಾವಳಿ ಮೀನುಗಾರರು

    ಕಾರವಾರ: ಮತ್ಸ್ಯ ಸಂಪದ ಯೋಜನೆಗೆ (Pradhan Mantri Matsya Sampada Yojana)  ಕೇಂದ್ರ ಬಜೆಟ್‍ನಲ್ಲಿ (Union Budget)  ಸಾವಿರಾರು ಕೋಟಿ ಅನುದಾನ ಘೋಷಿಸಿದೆ. ಇದೇ ಯೋಜನೆಯ ಅನುದಾನ ಬಳಸಿ ರಾಜ್ಯ ಸರ್ಕಾರ ಆಳಸಮುದ್ರ (Deep-Sea Fishing ) ದೋಣಿ ಖರೀದಿಗೆ ರೂಪಿಸಿದ್ದ ಯೋಜನೆ ಜಿಲ್ಲೆಯಲ್ಲಿ ಸಮರ್ಪಕ ಅನುಷ್ಠಾನಕ್ಕೆ ಬಂದಿಲ್ಲ.

    ಸರ್ಕಾರ ಸೂಚಿಸಿದ ದೋಣಿಗಳ ಖರೀದಿಗೆ ಇಲ್ಲಿನ ಮೀನುಗಾರರು ಒಪ್ಪದಿರುವುದು ಯೋಜನೆಯ ಹಿನ್ನೆಲೆಗೆ ಕಾರಣವಾಗಿದೆ. ಮೀನುಗಾರರ ಬೇಡಿಕೆಗೆ ತಕ್ಕ ದೋಣಿ ಖರೀದಿಗೆ ಸಹಾಯಧನ ಒದಗಿಸಲು ಸರ್ಕಾರ ಒಪ್ಪದ ಕಾರಣ ಯೋಜನೆ ಘೋಷಣೆಗೆ ಸೀಮಿತವಾಗಿಯೇ ಉಳಿದುಕೊಂಡಿದೆ.

    ಕೇಂದ್ರ ಸರ್ಕಾರದ ಮತ್ಸ್ಯ ಸಂಪದ ಯೋಜನೆ ಸಹಯೋಗದೊಂದಿಗೆ ಕಳೆದ ರಾಜ್ಯ ಬಜೆಟ್‍ನಲ್ಲಿ ಸರ್ಕಾರ 100 ಆಳಸಮುದ್ರ ಮೀನುಗಾರಿಕೆ ದೋಣಿಗಳ ಖರೀದಿಗೆ ಸಹಾಯಧನ ನೀಡುವುದಾಗಿ ಘೋಷಣೆ ಮಾಡಿತ್ತು. ಈ ಪೈಕಿ 50 ದೋಣಿಗಳನ್ನು ಉತ್ತರ ಕನ್ನಡಕ್ಕೆ ನೀಡಲು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದರು.  ಇದನ್ನೂ ಓದಿ: ರಾಜ್ಯಕ್ಕೆ ಪದೇ ಪದೇ ಪ್ರಧಾನಿ ಆಗಮನ – ‘ಬ್ರ್ಯಾಂಡ್ ಮೋದಿ’ ಅಸ್ತ್ರ ಪ್ರಯೋಗ

    1.20 ಕೋಟಿ ರೂ. ಮೌಲ್ಯದ ದೋಣಿ (Boat) ಖರೀದಿಗೆ ಶೇ.40ರಷ್ಟು ಸಹಾಯಧನವನ್ನು ಸರ್ಕಾರ ನೀಡಲು ನಿರ್ಧರಿಸಿತ್ತು. ಮಾಲೀಕರು ಮಹಿಳೆಯರಾಗಿದ್ದಾರೆ ಶೇ.60ರಷ್ಟು ಸಹಾಯಧನ ನೀಡಲು ಯೋಜನೆಯಡಿ ಅವಕಾಶ ಕಲ್ಪಿಸಿತ್ತು. ಆದರೆ ವರ್ಷ ಕಳೆದರೂ ಜಿಲ್ಲೆಯಲ್ಲಿ ಕೇವಲ ಮೂರು ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಅಂಕೋಲಾದ (Ankola) ಮೀನುಗಾರರೊಬ್ಬರಿಗೆ ಮಾತ್ರ ದೋಣಿ ಖರೀದಿಗೆ ಕಾರ್ಯಾದೇಶ ನೀಡಲಾಗಿದೆ.

    ಆಳಸಮುದ್ರದ ಗಿಲ್‍ನೆಟ್, ಲಾಂಗ್‍ನೆಟ್ ದೋಣಿಗಳಿಗೆ ಮಾತ್ರ ಸಹಾಯಧನ ನೀಡುವುದಾಗಿ ತಿಳಿಸಲಾಗುತ್ತಿದೆ. ಉತ್ತರ ಕನ್ನಡ ಭಾಗದಲ್ಲಿ ಅಂತಹ ದೋಣಿ ಬಳಕೆ ಮಾಡಲು ಮೀನುಗಾರರು ಒಪ್ಪುವುದಿಲ್ಲ. ಪರ್ಸಿನ್ ದೋಣಿಗಳ ಖರೀದಿಗೆ ಸಹಾಯಧನ ಒದಗಿಸಲು ಸರ್ಕಾರ ಮುಂದಾಗಬೇಕು. ಈ ಸಂಬಂಧ ನಿಯಮಾವಳಿಗೆ ತಿದ್ದುಪಡಿ ತರಬೇಕು. ಕಾಟಾಚಾರಕ್ಕೆ ಯೋಜನೆ ಘೋಷಿಸಬಾರದು ಎಂದು ಮೀನು ಮಾರಾಟಗಾರರ ಸಹಕಾರ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್ ಆಗ್ರಹಿಸಿದ್ದಾರೆ.

    ಉತ್ತರ ಕನ್ನಡದ ಮೀನುಗಾರರ ಬೇಡಿಕೆಯಂತೆ ಪರ್ಸೀನ್ ಹಾಗೂ ಟ್ರಾಲರ್ ಬೋಟ್‌ಗಳನ್ನು ಖರೀದಿಗೆ ಸಹಾಯಧನ ಒದಗಿಸುವ ಕುರಿತು ನಿಯಮಾವಳಿಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಗೋಕರ್ಣದಲ್ಲಿ ವಿದೇಶಿ ಪ್ರಜೆಗಳಿಂದ ಭಿಕ್ಷಾಟನೆ!

    ಗೋಕರ್ಣದಲ್ಲಿ ವಿದೇಶಿ ಪ್ರಜೆಗಳಿಂದ ಭಿಕ್ಷಾಟನೆ!

    ಕಾರವಾರ: ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ವಿದೇಶಿ ಪ್ರಜೆಗಳ ದಂಡೇ ಹರಿದುಬರುತಿತ್ತು. ಬೀಚ್‌ನಲ್ಲಿ ಅರೆಬರೆ ಬಟ್ಟೆ ತೊಟ್ಟು ಮೋಜು-ಮಸ್ತಿಯಲ್ಲಿ ನಿರತರಾಗುತಿದ್ದ ವಿದೇಶಿಗರು, ಕೊರೊನಾ ನಂತರ ಭಿಕ್ಷೆ ಬೇಡುವುದು ಹಾಗೂ ವ್ಯಾಪಾರ ಮಾಡಲು ಇದೀಗ ಗೋಕರ್ಣದತ್ತ ಬರುತ್ತಿದ್ದಾರೆ.

    ಹೌದು, ಇದು ಆಶ್ಚರ್ಯ ಎನಿಸಿದರೂ ಸತ್ಯ‌. ಈ ಹಿಂದೆ ಸಾವಿರಾರು ಸಂಖ್ಯೆಯಲ್ಲಿ ವಿದೇಶಿಗರು ಗೋಕರ್ಣಕ್ಕೆ ಬಂದು ವರ್ಷಗಟ್ಟಲೇ ನೆಲೆಸಿ ಎಂಜಾಯ್ ಮಾಡುತಿದ್ದರು. ಇದರಿಂದಾಗಿ ಗೋಕರ್ಣದ ಹೋಮ್ ಸ್ಟೇ, ರೆಸಾರ್ಟ್‌ಗಳಿಗೆ ಉತ್ತಮ ಆದಾಯ ಬರುತ್ತಿತ್ತು. ಇದನ್ನೂ ಓದಿ: ಸ್ಕೂಟರ್ ಹಿಂದೆ ಧರಧರನೇ ವೃದ್ದನನ್ನ ಎಳೆದೊಯ್ದ ಆರೋಪಿಗೆ ನ್ಯಾಯಾಂಗ ಬಂಧನ

    ಯಾವಾಗ ಕೊರೊನಾ ಸಂಕಷ್ಟ ಎದುರಾಯಿತೊ, ಹಲವು ವಿದೇಶಿಗರು ತಮ್ಮ ದೇಶಕ್ಕೆ ತೆರಳಲು ಹಣವಿಲ್ಲದೇ ಕೇಂದ್ರ ಸರ್ಕಾರದ ಮೊರೆ ಹೋಗಿದ್ದರು. ಕೆಲವರ ವೀಸಾ ಅವಧಿ ಮುಗಿದಿದ್ದರಿಂದ ವೀಸಾ ವಿಸ್ತರಣೆಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಇನ್ನೂ ಹಲವರು ಇಲ್ಲಿಯೇ ನೆಲಸಿದ್ದು, ತಮ್ಮ ದೇಶಕ್ಕೆ ಮರಳಲು ಭಿಕ್ಷಾಟನೆಯ ಮೊರೆ ಹೋಗಿದ್ದಾರೆ. ಕೆಲವರು ಸ್ಥಳೀಯರ ಸಹಾಯದಲ್ಲಿ ಭೂಮಿಯನ್ನು ಲೀಸ್‌ನಲ್ಲಿ ಪಡೆದು ಕೃಷಿ ಮಾಡಿ ಅದರಿಂದ ಬಂದ ಹಣದಲ್ಲಿ ಜೀವನ ಸಾಗಿಸುತಿದ್ದಾರೆ.

    ಇದೀಗ ಗೋಕರ್ಣದ ಬೀದಿಯಲ್ಲಿ ವಿದೇಶಿ ಮಹಿಳೆಯೊಬ್ಬರು ಪ್ರತಿದಿನ ಪಿಟೀಲು ನುಡಿಸಿ ಭಿಕ್ಷೆ ಬೇಡುತ್ತಿರುವ ವೀಡಿಯೋ ವೈರಲ್ ಆಗಿದೆ. ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೆ.ಆರ್‌. ಪೇಟೆಯಲ್ಲಿ ಜೆಡಿಎಸ್‍ ಬಂಡಾಯದ ಬಾವುಟ – ಹೆಚ್‍ಡಿಕೆ ನಡೆಗೆ ವಿರೋಧ

    ಪ್ರವಾಸಕ್ಕೆಂದು ಬರುವ ವಿದೇಶಿಗರು ಗೋಕರ್ಣದಲ್ಲಿ ಭಿಕ್ಷೆ ಬೇಡುವುದರ ಜೊತೆಗೆ ವ್ಯಾಪಾರಕ್ಕೆ ಇಳಿದಿರುವುದು ಸರಿಯಲ್ಲ. ಅವರನ್ನು ಮರಳಿ ದೇಶಕ್ಕೆ ಸರ್ಕಾರ ಕಳುಹಿಸುವ ವ್ಯವಸ್ಥೆ ಮಾಡಬೇಕು. ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ಡೇರಾ ಹಾಕಿ ವಾಸಿಸುತಿದ್ದಾರೆ. ಇದರಿಂದ ಧಾರ್ಮಿಕ ಕ್ಷೇತ್ರದಲ್ಲಿ ಸ್ಥಳೀಯರು ಮುಜುಗರ ಪಡುವಂತಾಗಿದೆ ಎಂದು ಸ್ಥಳೀಯರು ಅಕ್ರೋಶ ಹೊರಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • GPS ಟ್ರ್ಯಾಕರ್ ಬಳಸಿ ಉದ್ಯಮಿಯಿಂದ 50 ಲಕ್ಷ ದರೋಡೆ ಮಾಡಿದ್ದ ಖತರ್ನಾಕ್ ಕಳ್ಳರ ಬಂಧನ

    GPS ಟ್ರ್ಯಾಕರ್ ಬಳಸಿ ಉದ್ಯಮಿಯಿಂದ 50 ಲಕ್ಷ ದರೋಡೆ ಮಾಡಿದ್ದ ಖತರ್ನಾಕ್ ಕಳ್ಳರ ಬಂಧನ

    ಕಾರವಾರ: ಉದ್ಯಮಿಯೊಬ್ಬರಿಗೆ ಪಿಸ್ತೂಲ್ ಹಾಗೂ ಚಾಕು ತೋರಿಸಿ 50 ಲಕ್ಷ ಹಣ ದೋಚಿದ್ದ ಪ್ರಕರಣವನ್ನು ಶಿರಸಿ ಠಾಣೆ ಪೊಲೀಸರು ಭೇದಿಸಿದ್ದು, 9 ದರೋಡೆಕೋರರನ್ನು ಬಂಧಿಸಿ ಅವರಿಂದ 13.82 ಲಕ್ಷ ಹಣ, ಕೃತ್ಯಕ್ಕೆ ಉಪಯೋಗಿಸಿದ್ದ ಎರಡು ಕಾರು, 12 ಮೊಬೈಲ್ ಮತ್ತು ಜಿಪಿಎಸ್‌ ಟ್ರ್ಯಾಕರ್ ವಶಕ್ಕೆ ಪಡೆಯಲಾಗಿದೆ.

    ಸಿದ್ದಾಪುರ ತಾಲ್ಲೂಕು ನೆಜ್ಜೂರು ಗ್ರಾಮದ ಜಾವೇದ್ ಖಾನ್ ಎಂಬವರು ಇಬ್ಬರು ಸಂಬಂಧಿಕರೊಂದಿಗೆ ಬೆಳಗಾವಿಯಿಂದ ವಾಪಸ್ಸಾಗುವ ವೇಳೆ ದರೋಡೆಕೋರರು ಅಡ್ಡಗಟ್ಟಿ ಹಣ ದೋಚಿದ್ದರು. ಆರೋಪಿತರಾದ ಶಿವಮೊಗ್ಗ ಜಿಲ್ಲೆ ಸಾಗರದ ಶ್ರೀಧರ ನಗರದ ಆಸಿಫ್ ಅಬ್ದುಲ್ ಸತ್ತಾರ (29), ಅಬ್ದುಲ್ ಸತ್ತಾರ (32), ಮನ್ಸೂರ್ ಅಲಿಯಾಸ್ ಮಹಮದ್ ಜಾಫರ್ ಖಾನ್ (31), ಸಿದ್ದಾಪುರ ತಾಲ್ಲೂಕು ನೆಜ್ಜೂರಿನ ಅಜಿಮುಲ್ಲಾ ಅನ್ಸರ್ ಸಾಬ್ (29), ಭಟ್ಕಳ ಬದ್ರಿಯಾ ಕಾಲೋನಿಯ ಅಬ್ದುಲ್ ರೆಹಮಾನ್ ವಟರಾಗ (30), ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಮೇಲಿನ‌ ಪೇಟೆಯ ರಿಯಾಜ್ ಫಯಾಜ್ (32), ಕೊಪ್ಪ ತಾಲ್ಲೂಕು ನೇತಾಜಿ ನಗರದವರಾದ ವಿಶ್ವನಾಥ ವಾಸು ಶೆಟ್ಟಿ (41), ಮನೋಹರ ಆನಂದ ಶೆಟ್ಟಿ (36), ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಬಾಳೆಬೈಲ್‌ನ ಇಕ್ಬಾಲ್ ಅಬ್ದುಲ್ ಕೆ. (40) ಬಂಧಿತರು. ಪ್ರಕರಣದಲ್ಲಿ ಇನ್ನೂ ಹಲವು ಆರೋಪಿಗಳು ಭಾಗಿಯಾಗಿದ್ದು, ಅವರ ಹುಡುಕಾಟ ನಡೆಸಲಾಗುತ್ತಿದೆ. ಇದನ್ನೂ ಓದಿ: ಮೈಸೂರಿನಲ್ಲಿ ಬೇಕಾಬಿಟ್ಟಿ ಮನೆ ಬಾಡಿಗೆ ಕೊಡುವಂತಿಲ್ಲ – ಪೊಲೀಸ್ ಕ್ಲಿಯರೆನ್ಸ್ ಕಡ್ಡಾಯ

    ಉದ್ಯಮಿ ಜಾವೇದ್ ಹಣಕಾಸು ವ್ಯವಹಾರ ಅರಿತಿದ್ದ ಆಸೀಫ್ ಆಗಾಗ ಅವರ ಮನೆಗೆ ಭೇಟಿ ನೀಡುತ್ತಿದ್ದ. ಭೂಮಿ ಖರೀದಿಗೆ ಬೆಳಗಾವಿಗೆ ತೆರಳುವುದನ್ನು ಅರಿತಿದ್ದರಿಂದ ವಾಹನಕ್ಕೆ ಜಿಪಿಎಸ್‌ ಟ್ರ್ಯಾಕರ್ ಅಳವಡಿಸಿದ್ದ. ನಿರಂತರವಾಗಿ ಟ್ರ್ಯಾಕರ್ ಮೂಲಕ ಚಲನವಲನ ಗಮನಿಸುತ್ತಿದ್ದ ಈತ ಸಹಚರರ ಜೊತೆ ಸೇರಿ ನಿರ್ಜನ ಪ್ರದೇಶದಲ್ಲಿ ಅಡ್ಡಗಟ್ಟಿ ಕೃತ್ಯ ಎಸಗಿದ್ದ ಎಂದು ತನಿಖೆಯ ನೇತೃತ್ವ ವಹಿಸಿದ್ದ ಡಿಎಸ್ಪಿ ರವಿ ನಾಯ್ಕ ಮಾಹಿತಿ ನೀಡಿದ್ದಾರೆ.

    ಪ್ರಕರಣ ಭೇದಿಸುವಲ್ಲಿ ಸಿಪಿಐ ರಾಮಚಂದ್ರ ನಾಯಕ, ಎಸ್ಐಗಳಾದ ಹನುಮಂತ ಬಿರಾದಾರ, ಭೀಮಾಶಂಕರ ಸಿನ್ನೂರು, ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಇದನ್ನೂ ಓದಿ: ಬಾಣಂತಿ ಡಿಸ್ಚಾರ್ಜ್ ಮಾಡಲು ಲಂಚಕ್ಕೆ ಬೇಡಿಕೆ – ಇಬ್ಬರು ವೈದ್ಯ ಸಿಬ್ಬಂದಿ ಅಮಾನತು

    Live Tv
    [brid partner=56869869 player=32851 video=960834 autoplay=true]

  • ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತಾ ಸಾವು ಪ್ರಕರಣ – ನ್ಯಾಯಾಲಯಕ್ಕೆ ಆಕ್ಷೇಪಣಾ ಅರ್ಜಿ ಸಲ್ಲಿಕೆ

    ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತಾ ಸಾವು ಪ್ರಕರಣ – ನ್ಯಾಯಾಲಯಕ್ಕೆ ಆಕ್ಷೇಪಣಾ ಅರ್ಜಿ ಸಲ್ಲಿಕೆ

    ಕಾರವಾರ: ಹಿಂದೂ ಕಾರ್ಯಕರ್ತ ಪರೇಶ್‌ ಮೇಸ್ತಾ (Paresh Mesta) ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (CBI) ತಂಡವು ಹೊನ್ನಾವರದ ನ್ಯಾಯಾಲಯಕ್ಕೆ ಸಲ್ಲಿಸಿರುವ ʼಬಿʼ ರಿಪೋರ್ಟ್‌ನ್ನು (B Report) ಆಕ್ಷೇಪಿಸಿ ಮೇಸ್ತಾ ತಂದೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ (Uttara Kannada) ಹೊನ್ನಾವರದ ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತಾ ಪ್ರಕರಣದಲ್ಲಿ ಸಿಬಿಐ ತನಿಖಾ ತಂಡವು ಅಕ್ಟೋಬರ್ 6 ರಂದು ಹೊನ್ನಾವರದ ನ್ಯಾಯಾಲಯಕ್ಕೆ ʼಬಿ‌ʼ ರಿಪೋರ್ಟ್ ಸಲ್ಲಿಕೆ ಮಾಡಿತು. ಇದನ್ನು ಆಕ್ಷೇಪಿಸಿ ಪರೇಶ್ ಮೇಸ್ತಾ ತಂದೆ ಕಮಾಲಕ ಮೇಸ್ತಾ ಅವರು ಹೊನ್ನಾವರದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ವಕೀಲರ ಮೂಲಕ ಹಾಜರಾಗಿ ಆಕ್ಷೇಪಣ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇದನ್ನೂ ಓದಿ: ನೀಟ್ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ ಬಡ ಪ್ರತಿಭಾವಂತನ ಬೆನ್ನಿಗೆ ನಿಂತ ಶಾಸಕ ಪರಣ್ಣ ಮುನವಳ್ಳಿ

    ಕಳೆದ ಅಕ್ಟೋಬರ್ 6 ರಂದು ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಸಿದ್ದ ಸಿಬಿಐ ತನಿಖಾ ತಂಡ, ಪರೇಶ್ ಮೇಸ್ತಾ ಕೊಲೆ ನಡೆದಿಲ್ಲ. ಅದು ಸಹಜ ಸಾವು. ಆರೋಪಿತರನ್ನು ದೋಷಮುಕ್ತ ಮಾಡಬಹುದೆಂದು ನ್ಯಾಯಾಲಯಕ್ಕೆ ವರದಿ ನೀಡಿತ್ತು.

    ಬಿ ರಿಪೋರ್ಟ್‌ ಕುರಿತು ಆಕ್ಷೇಪಣೆ ಮಾಡಿದ್ದ ಪರೇಶ್ ಮೇಸ್ತಾ ತಂದೆ ಕಮಲಾಕರ ಮೇಸ್ತಾ, ತನ್ನ ಮಗನ ಸಾವು ಸಹಜವಾಗಿದ್ದಲ್ಲ. ಅವನನ್ನು ಕೊಲೆ ಮಾಡಿ, ಸಾಕ್ಷಿ ನಾಶ ಮಾಡಲಾಗಿದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆಯಾಗಬೇಕು ಎಂದು ನ್ಯಾಯಾಲಯದ ಮುಂದೆ ಹಾಜರಾಗಿ ಆಕ್ಷೇಪಣೆ ಸಲ್ಲಿಕೆ ಮಾಡಿದ್ದಾರೆ. ಇದನ್ನೂ ಓದಿ: ವಿವಾದಿತ ಬಸ್ ನಿಲ್ದಾಣಕ್ಕೆ ರಾತ್ರೋರಾತ್ರಿ ನಾಮಫಲಕ – ಸುತ್ತೂರು ಶ್ರೀಗಳ, ಮೋದಿ ಫೋಟೋ ಬಳಕೆ

    Live Tv
    [brid partner=56869869 player=32851 video=960834 autoplay=true]