Tag: karanataelections 2018

  • ಬಹುಮತ ಹೇಗೆ ಸಾಬೀತು ಮಾಡ್ತೀರಾ ಪ್ರಶ್ನೆಗೆ ಶೋಭಾ ಕರಂದ್ಲಾಜೆ ಉತ್ತರ

    ಬಹುಮತ ಹೇಗೆ ಸಾಬೀತು ಮಾಡ್ತೀರಾ ಪ್ರಶ್ನೆಗೆ ಶೋಭಾ ಕರಂದ್ಲಾಜೆ ಉತ್ತರ

    ಬೆಂಗಳೂರು: ಕರ್ನಾಟಕದಲ್ಲಿ ಈ ಬಾರಿ ಯಾರಿಗೂ ಬಹುಮತ ಸಿಕ್ಕಿಲ್ಲ. ಆದ್ರೂ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚಿಸಲು ಅನುಮತಿ ನೀಡಿದ್ದಾರೆ.

    ರಾಜಭವನದ ಗಾಜಿನ ಮನೆಯಲ್ಲಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಮಾಡುವ ಮೊದಲು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚಿಸಲು ಅನುಮತಿ ನೀಡಿದ್ದಾರೆ. ಯಡಿಯೂರಪ್ಪವರು ಪ್ರಮಾಣ ವಚನ ಸ್ವೀಕಾರ ಮಾಡುತ್ತೀರೊದು ಸಂತೋಷವನ್ನು ತಂದಿದೆ ಅಂತಾ ಹೇಳಿದ್ರು.

    ಇದೇ ವೇಳೆ ಮಧ್ಯಾಹ್ನದೊಳಗೆ ಹೇಗೆ ಬಹುಮತ ಹೇಗೆ ಸಾಬೀತು ಮಾಡ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಯಡಿಯೂರಪ್ಪ ಸಿಎಂ ಆಗ್ತೀರೋದು ಖುಷಿ ತಂದಿದೆ. ಬಹುಮತ ಸಾಬೀತು ಹೇಗೆ ಮಾಡುತ್ತೇವೆ ಎಂಬುದನ್ನು ಮಾಧ್ಯಮಗಳಿಗೆ ಹೇಳಲಿಕ್ಕೆ ಬರಲ್ಲ. ಅದು ಪಕ್ಷದ ಆಂತರಿಕ ವಿಚಾರ ಎಂದು ತಿಳಿಸಿ ಕಾರ್ಯಕ್ರಮದತ್ತ ತೆರಳಿದ್ರು.