Tag: karan kundra

  • ಮದುವೆಗೆ ಸಜ್ಜಾದ ‘ಬಿಗ್ ಬಾಸ್’ ಖ್ಯಾತಿಯ ತೇಜಸ್ವಿ ಪ್ರಕಾಶ್, ಕರಣ್ ಕುಂದ್ರಾ ಜೋಡಿ

    ಮದುವೆಗೆ ಸಜ್ಜಾದ ‘ಬಿಗ್ ಬಾಸ್’ ಖ್ಯಾತಿಯ ತೇಜಸ್ವಿ ಪ್ರಕಾಶ್, ಕರಣ್ ಕುಂದ್ರಾ ಜೋಡಿ

    ಹಿಂದಿ ಕಿರುತೆರೆಯ ಫೇಮಸ್ ಜೋಡಿ ತೇಜಸ್ವಿ ಪ್ರಕಾಶ್ (Tejasswi Prakash) ಮತ್ತು ಕರಣ್ ಕುಂದ್ರಾ (Karan Kundrra) ಮದುವೆಗೆ (Wedding) ಸಜ್ಜಾಗಿದ್ದಾರೆ. ಕಳೆದ ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಈ ಜೋಡಿ ಇದೀಗ ಮದುವೆ ಬಗ್ಗೆ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಇದನ್ನೂ ಓದಿ:ಮಗನ ಮುದ್ದಾದ ಫೋಟೋ ಹಂಚಿಕೊಂಡ ‘ಬಿಗ್‌ ಬಾಸ್‌’ ಖ್ಯಾತಿಯ ಕವಿತಾ ದಂಪತಿ

    ಇತ್ತೀಚೆಗೆ ತಾಯಿಯೊಂದಿಗೆ ‘ಸೆಲೆಬ್ರಿಟಿ ಮಾಸ್ಟರ್ ಶೆಫ್ ಶೋ’ಗೆ ತೇಜಸ್ವಿ ಆಗಮಿಸಿದ್ದರು. ಈ ವೇಳೆ, ನಿರೂಪಕಿ ಮಗಳ ಮದುವೆ ಯಾವಾಗ? ಎಂದು ತೇಜಸ್ವಿ ತಾಯಿಗೆ ಕೇಳಿದ್ದಾರೆ. ಆಗ ಈ ವರ್ಷದ ಅಂತ್ಯದಲ್ಲಿ ಮದುವೆ ಆಗಲಿದ್ದಾರೆ ಎಂದು ತಿಳಿಸಿದ್ದಾರೆ. ಆಗ ನಿರೂಪಕಿ ಅಭಿನಂದನೆಗಳನ್ನು ತಿಳಿಸಿದ್ದಾರೆ. ಅದಕ್ಕೆ ನಟಿ ತೇಜಸ್ವಿ ನಾಚಿ ನೀರಾಗಿದ್ದಾರೆ.

    ಇನ್ನೂ ಈ ಹಿಂದೆ ತೇಜಸ್ವಿ ಅವರು ಕರಣ್ ಕುಂದ್ರಾ ಜೊತೆ ಕೋರ್ಟ್ ಮ್ಯಾರೇಜ್ ಆಗೋದಾಗಿ ಹೇಳಿದ್ದರು. ಸರಳ ಮದುವೆ ಬಗ್ಗೆ ಮಾತನಾಡಿದ್ದರು. ಇದನ್ನೂ ಓದಿ:ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ನಟನೆಯ ‘ಸಿಕಂದರ್’ ಚಿತ್ರದ ಸಾಂಗ್ ರಿಲೀಸ್

    ಇನ್ನೂ 2021ರ ‘ಬಿಗ್ ಬಾಸ್ ಹಿಂದಿ 15’ರಲ್ಲಿ ತೇಜಸ್ವಿ ಮತ್ತು ಕರಣ್ ಕುಂದ್ರಾ ಸ್ಪರ್ಧಿಗಳಾಗಿದ್ದರು. ಈ ಶೋನಲ್ಲಿ ಇಬ್ಬರಿಗೂ ಪ್ರೇಮಾಂಕುರವಾಯಿತು. ಈಗ ಕಳೆದ 4 ವರ್ಷಗಳಿಂದ ಇಬ್ಬರೂ ಡೇಟಿಂಗ್‌ ಮಾಡ್ತಿದ್ದಾರೆ. ಅಂದಹಾಗೆ, ಈ ಶೋನಲ್ಲಿ ತೇಜಸ್ವಿ ವಿನ್ನರ್‌ ಆಗಿದ್ದಾರೆ.

  • `ಕಾಂತಾರ’ ಚಿತ್ರದ ಹಾಡನ್ನ ಕನ್ನಡದಲ್ಲಿ ಹಾಡಿದ ಹಿಂದಿ ನಟಿ ತೇಜಸ್ವಿ

    `ಕಾಂತಾರ’ ಚಿತ್ರದ ಹಾಡನ್ನ ಕನ್ನಡದಲ್ಲಿ ಹಾಡಿದ ಹಿಂದಿ ನಟಿ ತೇಜಸ್ವಿ

    ಹಿಂದಿ ಕಿರುತೆರೆಯ `ಬಿಗ್ ಬಾಸ್’ 15ರ (Bigg Boss Hindi) ವಿನ್ನರ್ ಆಗಿರುವ ತೇಜಸ್ವಿ ಪ್ರಕಾಶ್ (Tejasswi Prakash) ಅವರು ಪ್ರಸ್ತುತ `ನಾಗಿನ್ 6’ರಲ್ಲಿ (Naagin 6) ನಟಿಸುತ್ತಿದ್ದಾರೆ. ಇದೀಗ ಹಿಂದಿ ನಟಿ ಕನ್ನಡದಲ್ಲಿ ಹಾಡಿರೋದ್ದಕ್ಕೆ ಕನ್ನಡಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕಾಂತಾರ (Kantara) ಸಿನಿಮಾದ ಹಾಡನ್ನ ನಟಿ ತೇಜಸ್ವಿ ಹಾಡಿದ್ದಾರೆ.

     

    View this post on Instagram

     

    A post shared by Tejasswi Prakash (@tejasswiprakash)

    ಬಾಲಿವುಡ್ (Bollywood) ನಟಿ ತೇಜಸ್ವಿ ಪ್ರಕಾಶ್ ಅವರು ತಾವೇ ಹಾಡಿರುವ ರಿಷಬ್ ಶೆಟ್ಟಿ (Rishab Shetty) ನಿರ್ದೇಶನದ, ನಟನೆಯ ‘ಕಾಂತಾರ’ ಸಿನಿಮಾದ ಹಾಡೊಂದನ್ನು ಏಕಾಏಕಿ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿ ಆಶ್ಚರ್ಯ ಮೂಡಿಸಿದ್ದಾರೆ. ತೇಜಸ್ವಿಯ ಹಾಡು ಕೇಳಿ ಕನ್ನಡಿಗರು ಮೆಚ್ಚಿದ್ದಾರೆ. `ಕರುಮದ ಕಲ್ಲನು’ ಎನ್ನುವ ಹಾಡನ್ನು ತೇಜಸ್ವಿ ಹಾಡಿ ಸೈ ಎನಿಸಿಕೊಂಡಿದ್ದಾರೆ.

     

    View this post on Instagram

     

    A post shared by Tejasswi Prakash (@tejasswiprakash)

    `ಕರುಮದ’ ಕಲ್ಲನು ಎನ್ನುವ ಕನ್ನಡದ ಹಾಡನ್ನು ತೇಜಸ್ವಿ ಅವರು ಹಾಡಿದ ಪರಿ ಅನೇಕರಿಗೆ ಇಷ್ಟ ಆಗಿದೆ. ಸೆಲೆಬ್ರಿಟಿಗಳಿಂದ ಸಾಮಾನ್ಯ ಜನರವರೆಗೆ ಅನೇಕರು ಈ ಹಾಡನ್ನು ಮೆಚ್ಚಿದ್ದಾರೆ. ಅಷ್ಟೇ ಅಲ್ಲದೆ ತೇಜ ಅವರ ವಿಥೌಟ್ ಮೇಕಪ್ ಲುಕ್ ಕೂಡ ಅನೇಕರ ಪ್ರಶಂಸೆಗೆ ಪಾತ್ರವಾಗಿದೆ. ಹಾಡು ಹಾಡಿರುವ ವಿಡಿಯೋವನ್ನು ಅಪ್‌ಲೋಡ್ ಮಾಡಿರುವ ತೇಜಸ್ವಿ ಅವರು ಇದರ ಸಾಹಿತ್ಯವನ್ನು ಇಂಗ್ಲಿಷ್‌ನಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ಮತ್ತೆ ಕಿರುತೆರೆಗೆ ಮರಳಿದ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ

     

    View this post on Instagram

     

    A post shared by Karan Kundrra (@kkundrra)

    ಬಿಗ್ ಬಾಸ್‌ನಲ್ಲಿ (Bigg Boss) ತೇಜಸ್ವಿ ಅವರು ತಮ್ಮ ಸಹಸ್ಪರ್ಧಿ ಕರಣ್ ಕುಂದ್ರಾ (Karan Kundra) ಜೊತೆ ಪ್ರೀತಿ ಚಿಗುರಿತ್ತು. ಸದ್ಯದಲ್ಲೇ ಈ ಜೋಡಿ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರು ಈಗ ಬೇರೇ ಬೇರೆ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದಾರೆ.

  • ಬಾಯ್‌ಫ್ರೆಂಡ್ ಜೊತೆ ಮಿಂಚಿದ ಬಿಗ್ ಬಾಸ್ ವಿನ್ನರ್ ತೇಜಸ್ವಿ ಪ್ರಕಾಶ್

    ಬಾಯ್‌ಫ್ರೆಂಡ್ ಜೊತೆ ಮಿಂಚಿದ ಬಿಗ್ ಬಾಸ್ ವಿನ್ನರ್ ತೇಜಸ್ವಿ ಪ್ರಕಾಶ್

    ಹಿಂದಿ ಕಿರುತೆರೆಯ ಬಿಗ್ ಶೋ ಬಿಗ್ ಬಾಸ್ ಮೂಲಕ ಗಮನ ಸೆಳೆದ ಜೋಡಿ ತೇಜಸ್ವಿ ಪ್ರಕಾಶ್ ಮತ್ತು ಕರಣ್ ಕುಂದ್ರಾ ಮತ್ತೆ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್‌ನಿಂದ ಶುರುವಾದ ಈ ಜೋಡಿಯ ಪಯಣ ಇದೀಗ ಮದುವೆಯ ಹಂತಕ್ಕೆ ಬಂದು ನಿಂತಿದೆ. ಸದ್ಯ ಈ ಜೋಡಿ ಹೊಸ ಫೋಟೋಶೂಟ್ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ.

     

    View this post on Instagram

     

    A post shared by Tejasswi Prakash (@tejasswiprakash)

    ಬಿಗ್ ಬಾಸ್ ಸೀಸನ್ 15ರಲ್ಲಿ ತೇಜಸ್ವಿ ಮತ್ತು ಕರಣ್ ಕುಂದ್ರಾ ಕಮಾಲ್ ಮಾಡಿದ್ದರು. ದೊಡ್ಮನೆಯಿಂದ ಪರಿಚಿತರಾದ ಈ ಜೋಡಿ, ಬಳಿಕ ಸ್ನೇಹದಿಂದ ಪ್ರೀತಿಗೆ ತಿರುಗಿ ಇದೀಗ ಮುಂಬೈನ ಬೀದಿ ಬೀದಿಗಳಲ್ಲಿ ಡೇಟಿಂಗ್ ಮಾಡುತ್ತಿದ್ದಾರೆ. ತಮ್ಮ ಪ್ರೀತಿಯನ್ನ ಮುಚ್ಚಿಡದೇ ಈಗಾಗಲೇ ಸಾಕಷ್ಟು ತಮ್ಮ ಪ್ರೀತಿಯ ವಿಚಾರವನ್ನು ಅಧಿಕೃತವಾಗಿ ತೇಜಸ್ವಿ ಮತ್ತು ಕರಣ್ ತಿಳಿಸಿದ್ದಾರೆ. ಮೊದಲು ಕೆರಿಯರ್ ಕಡೆ ಗಮನ ಕೊಡ್ತಿರುವ ಈ ಜೋಡಿ, ಮದುವೆಯ ಬಗ್ಗೆ ಸದ್ಯ ಯಾವುದೇ ಪ್ಲ್ಯಾನ್ ಇಲ್ವಂತೆ. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಬದಲು ಆರ್.ಆರ್.ಆರ್ ಸಿನಿಮಾ ಆಸ್ಕರ್ ಗೆ ಕಳುಹಿಸಿ: ಮತ್ತೆ ತಿವಿದ ಅನುರಾಗ್ ಕಶ್ಯಪ್

     

    View this post on Instagram

     

    A post shared by Tejasswi Prakash (@tejasswiprakash)

    ಇನ್ನು ಬಿಗ್ ಬಾಸ್ ಸೀಸನ್ 15ರಲ್ಲಿ ತೇಜಸ್ವಿ ಪ್ರಕಾಶ್ ವಿನ್ನರ್ ಆಗಿ ಹೊರಹೊಮ್ಮಿದ್ದರು. ಸದ್ಯ ಕಿರುತೆರೆ ಜನಪ್ರಿಯ ಶೋ ನಾಗಿನ್ ಸೀರಿಯಲ್‌ನಲ್ಲಿ ನಾಗಿನ್ ಆಗಿ ಪ್ರಮುಖ ಪಾತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನು ಕರಣ್ ಕುಂದ್ರಾ ಆಲ್ಬಂ ಸಾಂಗ್ಸ್, ಜೊತೆ ಖಾಸಗಿ ವಾಹಿನಿಯ ನಿರೂಪಕನಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಜೋಡಿಯ ನಯಾ ಫೋಟೋಶೂಟ್ ನೋಡಿ, ಫ್ಯಾನ್ಸ್ ಫಿದಾ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]