Tag: Karan Johar

  • ಟ್ರೋಲ್‍ಗಳಿಂದ ಬೇಸತ್ತು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ ಕರಣ್ ಜೋಹರ್

    ಟ್ರೋಲ್‍ಗಳಿಂದ ಬೇಸತ್ತು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ ಕರಣ್ ಜೋಹರ್

    ನವದೆಹಲಿ: ಬಾಲಿವುಡ್‍ನ ಹೆಸರಾಂತ ನಿರ್ಮಾಪಕ ಕರಣ್ ಜೋಹರ್ ಟ್ರೋಲ್‍ಗೆ ಒಳಗಾಗಿರುವುದು, ಅವರ ವಿರುದ್ಧ ಟೀಕಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅನೇಕ ಬಾರಿ ಈ ರೀತಿಯ ಘಟನೆಗಳು ನಡೆದಿದೆ. ಇದಾವುದಕ್ಕೂ ಕರಣ್ ಜೋಹರ್ ತಲೆ ಕೆಡಿಸಿಕೊಂಡವರಲ್ಲ. ಯಾವುದೇ ಟ್ರೋಲ್‍ಗಳಿಗೆ ಕಿವಿಗೊಡದೆ ತಮ್ಮ ಕೆಲಸದ ಕಡೆ ಚಿತ್ತ ಹರಿಸುತ್ತಿದ್ದರು. ಆದರೆ ಇದೀಗ ಅವರು ತುಂಬಾ ನೊಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರಂತೆ.

    ಹೌದು ಇತ್ತೀಚೆಗೆ ಅವರ ವಿರುದ್ಧ ವಿಪರೀತ ದಾಳಿ ನಡೆಯುತ್ತಿದ್ದು, ಇದರಿಂದಾಗಿ ಕರಣ್ ಜೋಹರ್ ಮಾನಸಿಕವಾಗಿ ಕುಗ್ಗಿದ್ದಾರಂತೆ. ಬಿಕ್ಕಿ ಬಿಕ್ಕಿ ಅಳುತ್ತಿದ್ದಾರಂತೆ. ಹೀಗೆಂದು ಅವರ ಆತ್ಮೀಯ ಸ್ನೇಹಿತರು ತಿಳಿಸಿರುವ ಕುರಿತು ವರದಿಯಾಗಿದೆ. ಕರಣ್ ಜೋಹರ್ ಧೋನಿ ಸಿನಿಮಾ ಖ್ಯಾತಿಯ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಟ್ರೋಲ್‍ಗೆ ಒಳಗಾಗಿದ್ದಾರೆ.

    ಈ ಎಲ್ಲ ಬೆಳವಣಿಗೆಗಳಿಂದಾಗಿ ಇತ್ತೀಚೆಗೆ ಅವರು ಕೆಲ ಪ್ರಮುಖ ವ್ಯಕ್ತಿಗಳನ್ನು ಹೊರತುಪಡಿಸಿ ಉಳಿದೆಲ್ಲರನ್ನೂ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಿಂದ ಅನ್‍ಫಾಲೋ ಮಾಡಿದ್ದರು. ಕೆಲವರನ್ನು ಮಾತ್ರ ಫಾಲೋ ಮಾಡುತ್ತಿದ್ದರು. ಇದಾದ ಬಳಿಕ ಅವರು ಇನ್ನೂ ಕುಗ್ಗಿದ್ದಾರೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ. ಅಲ್ಲದೆ ಈ ವರೆಗೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪೋಸ್ಟ್ ಹಾಕಿಲ್ಲ.

    ಕರಣ್ ಜೋಹರ್ ಅವರು ಮಾತನಾಡಿದ ಮಾತುಗಳು, ಅವರ ವಿಡಿಯೋಗಳು ಇದೀಗ ಮುನ್ನೆಲೆಗೆ ಬರುತ್ತಿದ್ದು, ಸಾಕಷ್ಟು ಟ್ರೋಲ್ ಆಗುತ್ತಿವೆ. ಬಾಲಿವುಡ್‍ನಲ್ಲಿ ಸ್ವಜನ ಪಕ್ಷಪಾತವಿದೆ. ಇದಕ್ಕೆ ಸಾಕ್ಷಿಯೇ ಕೆಲವು ನಿರ್ಮಾಪಕರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳಲಾಗಿತ್ತು. ಸ್ಟಾರ್‍ಗಳ ಮಕ್ಕಳಿಗೆ ಬೆಂಬಲ ನೀಡುತ್ತಾರೆ, ಹೊರಗಿನಿಂದ ಬಂದವರನ್ನು ಲೇವಡಿ ಮಾಡುತ್ತಾರೆ, ಉದ್ದೇಶಪೂರ್ವಕವಾಗಿ ಅವರನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತಾರೆ ಎಂಬ ಆರೋಪ ಕರಣ್ ಜೋಹರ್ ಮೇಲಿದೆ. ಅಲ್ಲದೆ ಸ್ವಜನಪಕ್ಷಪಾತದ ಕೇಂದ್ರ ಬಿಂದು ಕರಣ್ ಜೋಹರ್, ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಕರಣ್ ಅವರ ಈ ವರ್ತನೆಯೂ ಒಂದು ಕಾರಣ ಎಂದು ಆರೋಪಿಸಲಾಗುತ್ತಿದೆ. ಇದರಿಂದ ಕರಣ್ ತೀವ್ರ ನೊಂದಿದ್ದಾರಂತೆ.

    ಆರೋಗ್ಯವೂ ಹದಗೆಟ್ಟಿದೆ
    ಕರಣ್ ಮಾನಸಿಕವಾಗಿ ಘಾಸಿಗೊಂಡಿರುವುದರಿಂದ ಆರೋಗ್ಯದ ಮೇಲೂ ಪರಿಣಾಮ ಬೀರಿದ್ದು, ಅವರ ಮಾನಸಿಕ ಹಾಗೂ ಆರೋಗ್ಯದ ಸ್ಥಿತಿ ಈಗ ಹದಗೆಟ್ಟಿದೆ ಎಂದು ಅವರ ಸ್ನೇಹಿತರು ಹೇಳಿದ್ದಾರೆ. ಈ ಹಿಂದೆ ಅವರನ್ನು ಮಾತ್ರ ಟ್ರೋಲ್ ಮಾಡಲಾಗುತ್ತಿತ್ತು. ಈಗ ಅವರಿಗೆ ಆಪ್ತರಾಗಿರುವವರ ವಿರುದ್ಧವೂ ದಾಳಿ ನಡೆಯುತ್ತಿದೆ. ಅವರ ಮೂವರು ಮಕ್ಕಳಿಗೆ ಜೀವ ಬೆದರಿಕೆ ಕರೆ ಬರುತ್ತಿವೆ. ಅಲ್ಲದೆ ಸುಶಾಂತ್ ಘಟನೆಗೆ ಸಂಬಂಧವೇ ಇಲ್ಲದ ಅನನ್ಯಾ ಪಾಂಡೆಯಂತಹ ನಟಿಯರನ್ನು ಟೀಕಿಸಲಾಗುತ್ತಿದೆ. ಸುಶಾಂತ್ ಸಾವಿಗೆ ಪರಿಹಾರ ನೀಡಲು ಆತ್ಮಹತ್ಯೆ ಮಾಡಿಕೊಳ್ಳಿ ಎಂದು ಆಕೆಗೆ ಬೆದರಿಸಲಾಗುತ್ತಿದೆಯಂತೆ.

    ಬಾಲಿವುಡ್‍ನಲ್ಲಿ ಯಾರೂ ಬೆಂಬಲ ನೀಡುತ್ತಿಲ್ಲ
    ಕರಣ್ ಜೋಹರ್ ಸದ್ಯ ಮಾತನಾಡುವ ಸ್ಥಿತಿಯಲ್ಲಿಲ್ಲ. ಅವರು ಸುಧಾರಿಸಿಕೊಳ್ಳಲು ಸಮಯ ಬೇಕಾಗುತ್ತದೆ. ಫೋನ್‍ನಲ್ಲಿ ನನ್ನ ಜೊತೆ ಮಾತನಾಡುವಾಗ ಬಿಕ್ಕಿ ಬಿಕ್ಕಿ ಅಳುತ್ತಾರೆ. ಈ ರೀತಿ ಆಗಲು ನಾನು ಮಾಡಿರುವ ತಪ್ಪಾದರೂ ಏನೆಂದು ಪ್ರಶ್ನಿಸುತ್ತಿದ್ದಾರೆ ಎಂದು ಅವರ ಆತ್ಮೀಯ ಸ್ನೇಹಿತರು ತಿಳಿಸಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ಬಾಲಿವುಡ್‍ನಲ್ಲಿ ಯಾರೂ ಅವರ ಬೆಂಬಲಕ್ಕೆ ಬರುತ್ತಿಲ್ಲ ಎಂಬ ಬೇಸರ ಸಹ ಅವರಲ್ಲಿ ಕಾಡುತ್ತಿದೆ ಎನ್ನಲಾಗಿದೆ. ಹೀಗಾಗಿ ಇತ್ತೀಚೆಗೆ ಮುಂಬೈ ಚಿತ್ರೋತ್ಸವದ ಮಂಡಳಿಗೂ ಅವರು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

  • 8 ಮಂದಿ ಸೆಲಿಬ್ರಿಟಿಗಳನ್ನ ಬಿಟ್ಟು ಎಲ್ಲರನ್ನ ಅನ್ ಫಾಲೋ ಮಾಡಿದ ಕರಣ್ ಜೋಹರ್

    8 ಮಂದಿ ಸೆಲಿಬ್ರಿಟಿಗಳನ್ನ ಬಿಟ್ಟು ಎಲ್ಲರನ್ನ ಅನ್ ಫಾಲೋ ಮಾಡಿದ ಕರಣ್ ಜೋಹರ್

    ಮುಂಬೈ: ಯುವ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬಳಿಕ ಬಾಲಿವುಡ್‍ನಲ್ಲಿ ಸಂಚಲನವೇ ಸೃಷ್ಟಿಯಾಗಿದೆ. ಸುಶಾಂತ್ ಸಿಂಗ್ ಸಾವಿಗೆ ಬಾಲಿವುಡ್‍ನ ಕೆಲವು ನಿರ್ಮಾಣ ಸಂಸ್ಥೆಗಳು ಹಾಗೂ ಸ್ಟಾರ್ ನಟರು ಎಂಬ ಆರೋಪ ನೆಟ್ಟಿಗರಿಂದ ಕೇಳಿ ಬಂದಿದೆ.

    ಇದೇ ವಿಚಾರವಾಗಿ ಗಾಯಕ ಸೋನು ನಿಗಮ್ ಕೂಡ ಮಾತನಾಡಿ ಮೂಸಿಕ್ ಇಂಡಸ್ಟ್ರಿಯಲ್ಲಿ ಇಂತಹ ಸಾವು ಸಂಭವಿಸದಿರಲಿ ಎಂದು ಕೇಳಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹೊಸ ಬಾಲಿವುಡ್ ಖ್ಯಾತ ನಿರ್ಮಾಣಕ ಕರಣ್ ಜೋಹರ್ ಹೆಜ್ಜೆ ಇಟ್ಟಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಸುಶಾಂತ್‍ನಂತೆ ಮ್ಯೂಸಿಕ್ ಇಂಡಸ್ಟ್ರಿಯಲ್ಲೂ ಆತ್ಮಹತ್ಯೆಯ ಸುದ್ದಿ ಬರಬಹುದು: ಸೋನು ನಿಗಮ್

    ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಹಿನ್ನೆಲೆ ಬಾಲಿವುಡ್‍ನ ಖ್ಯಾತ ನಿರ್ಮಾಪಕ ಕರಣ್ ಜೋಹರ್, ನಟ ಸಲ್ಮಾನ್ ಖಾನ್, ನಟಿ ಅಲಿಯಾ ಭಟ್, ಸೋನಂ ಕಪೂರ್, ಏಕ್ತ ಕಪೂರ್ ಸೇರಿದ್ದಂತೆ ಅನೇಕರ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಫಾಲೋ ಮಾಡುತ್ತಿದ್ದರೆ ಅನ್ ಫಾಲೋ ಮಾಡುವಂತೆ ಕೆಲ ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ

    ಕರಣ್ ಜೋಹರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಾಕಷ್ಟು ನಾಯಕರು, ಕಲಾವಿದರನ್ನು ಫಾಲೋ ಮಾಡುತ್ತಿದ್ದರು. ಆದರೆ ಈಗ 8 ಮಂದಿ ಸೆಲೆಬ್ರಿಟಿಗಳನ್ನು ಹೊರತುಪಡೆಸಿ ಉಳಿದೆಲ್ಲರನ್ನು ಅನ್ ಫಾಲೋ ಮಾಡಿದ್ದಾರೆ. ಸದ್ಯ ಅವರು ಹಿರಿಯ ನಟ ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಅಕ್ಷಯ್ ಕುಮಾರ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಧರ್ಮ ಪ್ರೊಡಕ್ಷನ್ ಸೇರಿದಂತೆ ಕೇವಲ 8 ಮಂದಿಯನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ.

    ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ನಟಿ ಅಲಿಯಾ ಭಟ್ ಮತ್ತು ಕರಣ್ ಜೋಹರ್ ಇಬ್ಬರು ಸೇರಿ ಸುಶಾಂತ್ ಸಿಂಗ್ ಅವರನ್ನು ಅಪಹಾಸ್ಯ ಮಾಡಿದ್ದರು. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದಾರೆ.

  • ಸುಶಾಂತ್ ಆತ್ಮಹತ್ಯೆ- ಎಂಟು ಸೆಲೆಬ್ರಿಟಿಗಳ ವಿರುದ್ಧ ದೂರು ದಾಖಲು

    ಸುಶಾಂತ್ ಆತ್ಮಹತ್ಯೆ- ಎಂಟು ಸೆಲೆಬ್ರಿಟಿಗಳ ವಿರುದ್ಧ ದೂರು ದಾಖಲು

    ಪಾಟ್ನಾ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಸೆಲೆಬ್ರಿಟಿಗಳ ವಿರುದ್ಧ ವಕೀಲ ಸುಧಿರ್ ಕುಮಾರ್ ಓಜಾ ಮುಜಾಫರ್ಪುರ್ ನ್ಯಾಯಾಲಯದಲ್ಲಿ ದೂರು ದಾಖಲಸಿದ್ದಾರೆ.

    ಏಳು ಸಿನಿಮಾಗಳಿಂದ ಸುಶಾಂತ್ ಅವರನ್ನು ಕೈ ಬಿಡಲಾಗಿತ್ತು. ಜೊತೆಗೆ ಕೆಲ ಸಿನಿಮಾಗಳು ಬಿಡುಗಡೆ ಆಗಿಲ್ಲ. ಈ ಎಲ್ಲ ಘಟನೆಗಳು ಸುಶಾಂತ್ ಅವರಿಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರಿಂದ ನಟ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವಕೀಲ ಓಜಾ ಆರೋಪಿಸಿದ್ದಾರೆ.

    ಬಾಲಿವುಡ್ ಸಿನಿಮಾ ನಿರ್ದೇಶಕರಾದ ಕರಣ್ ಜೋಹರ್, ಸಂಜಯ್ ಲೀಲಾ ಬನ್ಸಾಲಿ, ನಿರ್ಮಾಪಕಿ ಏಕ್ತಾ ಕಪೂರ್ ಮತ್ತು ನಟ ಸಲ್ಮಾನ್ ಖಾನ್ ಸೇರಿದಂತೆ ಎಂಟು ಜನರ ವಿರುದ್ಧ ಐಪಿಸಿ ಸೆಕ್ಸನ್ 306, 109, 504 ಮತ್ತು 506 ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.

    ಭಾನುವಾರ ಬೆಳಗ್ಗೆ 9.30ಕ್ಕೆ ಜ್ಯೂಸ್ ಕುಡಿದು ತನ್ನ ಕೋಣೆ ಸೇರಿದ್ದ ಸುಶಾಂತ್ ಸಿಂಗ್ ರಜಪೂತ್, ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಈ ವೇಳೆ ಮನೆಯಲ್ಲಿ ಅಡುಗೆ ಕೆಲಸದವ, ಮ್ಯಾನೇಜರ್ ಮತ್ತು ಓರ್ವ ಗೆಳೆಯನಿದ್ದ. ಸೋಮವಾರ ಸಂಜೆ ಸುಶಾಂತ್ ಅಂತ್ಯಕ್ರಿಯೆ ಮುಂಬೈನ ವಿಲೆ ಪಾರ್ಲೆಯ ಸೇವಾ ಸಮಾಜದಲ್ಲಿ ನಡೆಯಿತು. ಕೊರೊನಾ ಹಿನ್ನೆಲೆಯಲ್ಲಿ ಕುಟುಂಬ ಮತ್ತು ಆಪ್ತರಿಗೆ ಅಂತಿಮ ವಿಧಿ ವಿಧಾನಗಳಲ್ಲಿ ಅನುಮತಿ ನೀಡಲಾಗಿತ್ತು. ಮಾನಸಿಕ ಖಿನ್ನತೆಗೊಳಗಾಗಿದ್ದರಿಂದ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಕೈ ಪೋ ಚೆ ಸಿನಿಮಾ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದ ಸುಶಾಂತ್‍ಗೆ ಧೋನಿ ಸಿನಿಮಾ ದೊಡ್ಡ ಬ್ರೇಕ್ ನೀಡಿತ್ತು. 10ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಸುಶಾಂತ್ ಅವರನ್ನು ಬಾಲಿವುಡ್ ತಾರತಮ್ಯದಿಂದ ನೋಡಲಾಗುತ್ತಿತ್ತು ಎಂಬ ಸುದ್ದಿ ಹರಿದಾಡಿತ್ತು. ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಬಾಲಿವುಡ್‍ನಲ್ಲಿ ತಾರತಮ್ಯದ ಜನರು ಪ್ರಶ್ನೆ ಎತ್ತುತ್ತಿದ್ದಾರೆ. ಸುಶಾಂತ್‍ನನ್ನು ಮಾನಸಿಕವಾಗು ಕುಗ್ಗಿಸಿ ಆತ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಲಾಯ್ತು. ಇದು ಸೂಸೈಡ್ ಅಲ್ಲ, ಪೂರ್ವ ನಿಯೋಜಿತ ಕೊಲೆ ಎಂದು ನಟ ಕಂಗನಾ ರಣಾವತ್ ಆರೋಪಿಸಿದ್ದರು.

  • ಸುಶಾಂತ್ ಆತ್ಮಹತ್ಯೆ ಬಳಿಕ ಕರಣ್ ಜೋಹರ್, ಆಲಿಯಾ ಹೆಸ್ರು ಟ್ರೆಂಡ್ ಆಗ್ತಿರೋದ್ಯಾಕೆ?

    ಸುಶಾಂತ್ ಆತ್ಮಹತ್ಯೆ ಬಳಿಕ ಕರಣ್ ಜೋಹರ್, ಆಲಿಯಾ ಹೆಸ್ರು ಟ್ರೆಂಡ್ ಆಗ್ತಿರೋದ್ಯಾಕೆ?

    ಮುಂಬೈ: ಸುಶಾಂತ್ ಸಿಂಗ್ ರಜಪೂತ್ ನಿಧನಕ್ಕೆ ಸಂತಾಪ ಸೂಚಿಸಿದ ಬಳಿಕ ನಿರ್ದೇಶಕ ಕರಣ್ ಜೋಹರ್ ಮತ್ತು ನಟಿ ಆಲಿಯಾ ಭಟ್ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿವೆ. ಒಂದು ರೀತಿ ಸುಶಾಂತ್ ಅಭಿಮಾನಿಗಳು ಕರಣ್ ಮತ್ತು ಆಲಿಯಾ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

    ಸುಶಾಂತ್ ಸಿಂಗ್ ರಜಪೂತ್ ಕುಟುಂಬಕ್ಕೆ ಯಾವುದೇ ಸಿನಿಮಾ ಹಿನ್ನೆಲೆ ಇರಲಿಲ್ಲ. ಹಾಗಾಗಿ ಆರಂಭದ ದಿನಗಳಲ್ಲಿ ಸ್ಟಾರ್ ನಟರ ಹಿಂದೆ ಡ್ಯಾನ್ಸರ್ ಆಗಿದ್ದ ಸುಶಾಂತ್ ತಮ್ಮ ಪರಿಶ್ರಮ ಪರಿಣಾಮ ಸ್ಟಾರ್ ಪಟ್ಟಕ್ಕೇರಿದ ನಾಯಕ ನಟ. ಬಾಲಿವುಡ್ ನಲ್ಲಿ ಆಗಾಗ್ಗೆ ನೆಪ್ಟೋಯಿಸಂ ಪದ ಕೇಳಿ ಬರುತ್ತಲೇ ಇರುತ್ತೆ. ಇಲ್ಲಿ ಕೇವಲ ಸ್ಟಾರ್ ಕುಡಿಗಳಿಗೆ ಮಾತ್ರ ಪ್ರಾಶಸ್ತ್ಯ ನೀಡಲಾಗುತ್ತೆ. ಪ್ರತಿಭೆಗಳನ್ನು ತುಳಿಯುವ ಪ್ರಯತ್ನ ನಡೆಯುತ್ತೆ ಎಂದು ಹಲವು ಕಲಾವಿದರು ತಮ್ಮ ಅಸಮಾಧಾನ ಹೊರ ಹಾಕಿರುವ ಉದಾಹರಣೆಗಳಿವೆ.

    ಕರಣ್ ಟ್ವೀಟ್: ಸುಶಾಂತ್ ಸಾವಿಗೆ ಸಂತಾಪ ಸೂಚಿಸಿ ಕರಣ್ ಜೋಹರ್ ಟ್ವಿಟ್ಟರ್ ಮತ್ತು ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಕೆಲ ಸಾಲುಗಳು ಚರ್ಚೆಗೆ ಗ್ರಾಸವಾಗಿವೆ. ನಿಮ್ಮೊಂದಿಗೆ ದೂರವಿದಿದ್ದು ನನ್ನ ತಪ್ಪು. ನಿಮಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಗೆಳೆಯನ ಅವಶ್ಯಕತೆ ಇತ್ತು. ಆದ್ರೆ ಇದನ್ನು ನಾನು ಅರ್ಥ ಮಾಡಿಕೊಳ್ಳಲಿಲ್ಲ. ಮುಂದೆ ಈ ರೀತಿಯ ತಪ್ಪು ಮರುಕಳಿಸದಂತೆ ಎಚ್ಚರವಾಗಿರುತ್ತೇನೆ. ವೈಭವೋಪೇತ ಜೀವನಕ್ಕೆ ಒಗ್ಗಿಕೊಂಡಿದ್ದೇವೆ. ಈ ಅದ್ಧೂರಿ, ಆಡಂಬರದಲ್ಲಿ ಕೆಲವರು ಕಳೆದು ಹೋಗುತ್ತಾರೆ. ಕೇವಲ ಸಂಬಂಧಗಳನ್ನು ಬೆಳಸಿಕೊಂಡರೆ ಸಾಲದು, ಅವುಗಳನ್ನು ಕಾಪಾಡಿಕೊಳ್ಳುವುದು ಸಹ ಅತ್ಯಗತ್ಯ. ನಿಮ್ಮ ಸಿಹಿಯಾದ ನಗು ಮತ್ತು ಅಪ್ಪುಗೆ ಸದಾ ನೆನಪಿನಲ್ಲಿರುತ್ತದೆ ಎಂದು ಕರಣ್ ಜೋಹರ್ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

    https://www.instagram.com/p/CBacnPSJRtT/

    ಆಲಿಯಾ ಭಟ್ ಟ್ವೀಟ್: ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿರುವ ಆಲಿಯಾ ಭಟ್, ವಿಷಯ ಕೇಳಿ ಶಾಕ್ ಆಯ್ತು. ಸುಶಾಂತ್ ಸಾವು ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನೀವು ನಮ್ಮನ್ನೆಲ್ಲ ಬಿಟ್ಟು ಹೋದ್ರಿ. ನಾವು ನಿಮ್ಮನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತೇವೆ. ನಿಮ್ಮ ಕುಟುಂಬ ಮತ್ತು ಮಿತ್ರರ ದುಃಖದಲ್ಲಿ ನಾವಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.

    ಆಕ್ರೋಶ ಯಾಕೆ?: ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಶೋನಲ್ಲಿ ಸುಶಾಂತ್ ಅವರನ್ನ ತುಂಬಾ ಉದ್ದೇಶಪೂರ್ವಕವಾಗಿ ಕೆಳಮಟ್ಟದಲ್ಲಿ ತೋರಿಸಲಾಗುತ್ತಿತ್ತು ಅನ್ನೋದು ಅಭಿಮಾನಿಗಳ ಆರೋಪ. ಶೋನ ರ‍್ಯಾಪಿಡ್ ಫೈರ್ ಸುತ್ತಿನಲ್ಲಿ ಸೆಲೆಬ್ರಿಟಿಗಳು ಟಾಪ್ ನಟರ ಪಟ್ಟಿಯಲ್ಲಿ ಸುಶಾಂತ್ ಹೆಸರು ಕೊನೆಯಲ್ಲಿರುತ್ತಿತ್ತು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದರು.

    ಇದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಆಲಿಯಾ ಭಟ್, ನಟನೆಯಲ್ಲಿ ಈ ಮೂವರನ್ನು ಕ್ರಮಾಂಕದಲ್ಲಿ ಹೇಳಿ ಎಂದು ಸುಶಾಂತ್, ರಣ್‍ವೀರ್ ಸಿಂಗ್ ಮತ್ತು ವರುಣ್ ಧವನ್ ಹೆಸರನ್ನು ಪ್ರಶ್ನೆ ಕೇಳಲಾಗುತ್ತು. ಈ ಸುಶಾಂತ್ ಸಿಂಗ್ ರಜಪೂರ್ ಯಾರು ಎಂದು ಆಲಿಯಾ ಪ್ರಶ್ನೆ ಮಾಡಿದ್ದರು. ಇದೀಗ ಇಬ್ಬರ ಸಂತಾಪಕ್ಕೆ ಅಭಿಮಾನಿಗಳು ತೋರಿಕೆಗಾಗಿ ಟ್ವೀಟ್ ಮಾಡುವ ಅವಶ್ಯಕತೆ ಇಲ್ಲ ಎಂದು ಹಳೆಯ ಹೇಳಿಕೆ, ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಟ್ರೋಲ್ ಮಾಡುತ್ತಿದ್ದಾರೆ.

  • ಪ್ರಭಾವಶಾಲಿ ಯುವ ಭಾರತೀಯರ ಪಟ್ಟಿಯಲ್ಲಿ ರಾಕಿಂಗ್ ಸ್ಟಾರ್ ಯಶ್

    ಪ್ರಭಾವಶಾಲಿ ಯುವ ಭಾರತೀಯರ ಪಟ್ಟಿಯಲ್ಲಿ ರಾಕಿಂಗ್ ಸ್ಟಾರ್ ಯಶ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ದಿ ಜಿಕ್ಯೂ 50 ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ.

    ದಿ ಜಿಕ್ಯೂ ಇಂಡಿಯಾ ಆಯೋಜಿಸಿದ್ದ, ಜಿಕ್ಯೂ 50 ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರು (The GQ 50 Most Influential Young Indians) ಪಟ್ಟಿಯಲ್ಲಿ ಯಶ್ ಪ್ರಮುಖ ಸ್ಥಾನ ಪಡೆದುಕೊಂಡಿದ್ದಾರೆ.

    ಸೋಮವಾರ ಸಂಜೆ ಮುಂಬೈನಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಮಾಡಿದ ಸಾಧನೆ, ಯುವ ಮನಸ್ಸುಗಳಲ್ಲಿ ಸಂಚಲನ ಸೃಷ್ಟಿಸಿದ, ಅವರ ಯೋಚನೆ, ಯೋಜನೆಯನ್ನು ಪರಿಗಣಿಸಿ, ಭಾರತದ 50 ಶ್ರೇಷ್ಠ ಯುವ ಪ್ರಭಾವಶಾಲಿಗಳಿಗೆ ಜಿಕ್ಯೂ ಇಂಡಿಯಾ ಪ್ರಶಸ್ತಿ ನೀಡಿ ಗೌರವಿಸಿದೆ.

    ದಿ ಜಿಕ್ಯೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಈ 50 ಯುವ ಭಾರತೀಯರು ಒಂದೇ ವೇದಿಕೆಯಲ್ಲಿ ಸೇರಿಸುವ ಮೂಲಕ ಈ ಕಾರ್ಯಕ್ರಮವನ್ನು ಮಾಡಿದೆ. 50 ಬೇರೆ ಬೇರೆ ಕ್ಷೇತ್ರಗಳಲ್ಲಿ ಆಯ್ಕೆಯಾದ ಯುವ ವ್ಯಕ್ತಿಗಳ ಸಾಲಲ್ಲಿ ಇಡೀ ಭಾರತೀಯ ಚಿತ್ರರಂಗದಿಂದ ಯಶ್ ಆಯ್ಕೆಯಾಗಿದ್ದರು.

    ಈ ಕಾರ್ಯಕ್ರಮಕ್ಕೆ ಬಾಲಿವುಡ್‍ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕರಣ್ ಜೋಹರ್ ನಟ ಯಶ್ ಅವರಿಗೆ 2019ರ ಭಾರತೀಯ ಚಿತ್ರರಂಗದ ಅತ್ಯಂತ ಪ್ರಭಾವ ಶಾಲಿ ಯುವ ಭಾರತೀಯ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದ್ದಾರೆ.

    ಈ ಬಗ್ಗೆ ಯಶ್ ಟ್ವೀಟ್ ಮಾಡುವ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಟ್ವಿಟ್ಟರಿನಲ್ಲಿ ಯಶ್, “GQ ಇಂಡಿಯಾ 50 ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಗೌರವದಾಯಕವಾಗಿದೆ. ಚಿತ್ರರಂಗದಲ್ಲಿ ನಮ್ಮ ಸಾಧನೆಯನ್ನು ಗುರುತಿಸಿರುವುದಕ್ಕೆ ಧನ್ಯವಾದಗಳು. ನನಗೆ ನಿರಂತರವಾಗಿ ಪ್ರೋತ್ಸಾಹಿಸಿದ ಅಭಿಮಾನಿಗಳಿಗೆ ಹಾಗೂ ನಮಗೆ ಆಶೀರ್ವಾದಿಸಿದ ಎಲ್ಲರಿಗೂ ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದಾರೆ.

  • ಟ್ರೋಲ್ ಮಾಡಿದ್ದವನ ಬೆವರಿಳಿಸಿದ ಕರಣ್ ಜೋಹರ್-ಟ್ವೀಟ್ ಡಿಲೀಟ್

    ಟ್ರೋಲ್ ಮಾಡಿದ್ದವನ ಬೆವರಿಳಿಸಿದ ಕರಣ್ ಜೋಹರ್-ಟ್ವೀಟ್ ಡಿಲೀಟ್

    ಮುಂಬೈ: ಬಾಲಿವುಡ್ ನ ಪ್ರಸಿದ್ಧ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ತಮ್ಮನ್ನು ಟ್ರೋಲ್ ಮಾಡಿದ ಯುವಕನ ಬೆವರು ಇಳಿಸಿದ್ದಾರೆ. ಕರಣ್ ಜೋಹರ್ ಪ್ರತಿಕ್ರಿಯೆ ನೀಡುತ್ತಿದ್ದಂತೆ ಯುವಕ ತನ್ನ ಟ್ವೀಟ್ ಡಿಲೀಟ್ ಮಾಡಿಕೊಂಡಿದ್ದಾನೆ.

    ಕರಣ್ ಜೋಹರ್ ಅವರ ಖಾಸಗಿ ಜೀವನದ ವಿಷಯ ಬಹುದಿನಗಳಿಂದಲೂ ಚರ್ಚೆಯಲ್ಲಿದೆ. ಆದ್ರೆ ಇದೂವರೆಗೂ ಕರಣ್ ಜೋಹರ್ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಈ ಸಂಬಂಧ ಅಂತೆ-ಕಂತೆಗಳು ಬಾಲಿವುಡ್ ನಲ್ಲಿ ಮೊದಲಿನಿಂದಲೂ ಹರಿದಾಡುತ್ತಿವೆ. ಮದುವೆ ಆಗದಿದ್ದರೂ ಸರಗೋಸಿ ಮೂಲಕ ಎರಡು ಮಕ್ಕಳನ್ನು ಕರಣ್ ಜೋಹರ್ ಪಡೆದುಕೊಂಡಿದ್ದಾರೆ. ಇದೀಗ ಕರಣ್ ಜೋಹರ್ ಅವರ ವೈಯಕ್ತಿಕ ಜೀವನ ಕುರಿತು ಟೀಕಿಸಿದ್ದ ಯುವಕನ ಟ್ವೀಟ್ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

    ಏನದು ಟ್ವೀಟ್?
    ಕರಣ್ ಜೋಹರ್ ಅವರ ಜೀವನಾಧರಿಸಿದ ಸಿನಿಮಾ ಮಾಡಬೇಕು. ಚಿತ್ರಕ್ಕೆ ‘ಕರಣ್ ಜೋಹರ್: ದಿ ಗೇ’ ಎಂದು ಹೆಸರಿಡಬೇಕೆಂದು ಬರೆದು ಟ್ವೀಟ್ ಮಾಡಿದ್ದನು. ಸದಾ ನಗುತ್ತಲೇ ಮಾತನಾಡುವ ಕರಣ್ ಜೋಹರ್ ತಮ್ಮದೇ ಶೈಲಿಯಲ್ಲಿ ನೆಟ್ಟಿಗನ ಚಳಿ ಬಿಡಿಸಿದ್ದಾರೆ. ನೀವು ವಾಸ್ತವದ ಜೀವನದಲ್ಲಿ ಒರಿಜಿನಲ್ ಜೀನಿಯಸ್ ಆಗಿದ್ದೀರಿ. ಇಷ್ಟು ದಿನ ಎಲ್ಲಿ ಅಡಗಿಕೊಂಡಿದ್ದೀರಿ? ಇಂದು ಟ್ವಿಟ್ಟರ್ ನಲ್ಲಿ ಅತ್ಯಂತ ಅನುಕೂಲಕರವಾದ ವಿಷಯವನ್ನು ಚರ್ಚೆಗೆ ತಂದಿರೋದಕ್ಕೆ ನಿಮಗೆ ಧನ್ಯವಾದಗಳೆಂದು ಮೃದು ಮಾತಿನಲ್ಲಿ ಚಾಟಿ ಬೀಸಿದ್ದಾರೆ.

    ಕರಣ್ ಜೋಹರ್ ಪ್ರತಿಕ್ರಿಯೆ ನೀಡುತ್ತಿದ್ದಂತೆ ಯುವಕ ಟ್ವೀಟ್ ಡಿಲೀಟ್ ಮಾಡಿದ್ದಾನೆ. ಈ ಸಂಬಂಧ ಹಲವರು ಯುವಕನ ಟ್ವೀಟ್‍ಗೆ ಕಿಡಿಕಾರಿದ್ದು, ಬೇರೋಬ್ಬರ ಖಾಸಗಿ ಜೀವನದ ಬಗ್ಗೆ ಪ್ರಶ್ನೆ ಮಾಡೋದು ತಪ್ಪು. ಈ ರೀತಿಯ ಟ್ವೀಟ್ ಗಳಿಗೆ ಕರಣ್ ಜೋಹರ್ ಪ್ರತಿಕ್ರಿಯಿಸಬಾರದು. ಮತ್ತೆ ಹಲವರು ನಿಮ್ಮ ಉತ್ತರ ಟ್ರೋಲ್ ಮಾಡುವವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ ಎಂದು ಕಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

  • 40 ಕೋಟಿ ಆಫರ್ ರಿಜೆಕ್ಟ್ ಮಾಡಿದ ವಿಜಯ್ ದೇವರಕೊಂಡ

    40 ಕೋಟಿ ಆಫರ್ ರಿಜೆಕ್ಟ್ ಮಾಡಿದ ವಿಜಯ್ ದೇವರಕೊಂಡ

    ಮುಂಬೈ: ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿನಯದ ‘ಡಿಯರ್ ಕಾಮ್ರೆಡ್’ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ರಿಲೀಸ್ ಆಗಿದೆ. ಈ ಮಧ್ಯೆ ಹಿಂದಿ ಭಾಷೆಯಲ್ಲಿ ರಿಮೇಕ್ ಮಾಡಲು ವಿಜಯ್ ದೇವರಕೊಂಡ ಅವರಿಗೆ ಆಫರ್ ನೀಡಲಾಗಿತ್ತು. ಆದರೆ ವಿಜಯ್ ತಮಗೆ ಬಂದಿದ್ದ ಆಫರ್ ರನ್ನು ನಿರಾಕರಿಸಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

    ಬಾಲಿವುಡ್ ನಟ, ನಿರ್ಮಾಪಕ ಕರಣ್ ಜೋಹರ್ ‘ಡಿಯರ್ ಕಾಮ್ರೆಡ್’ ಸಿನಿಮಾವನ್ನು ಹಿಂದಿ ಭಾಷೆಗೆ ರಿಮೇಕ್ ಮಾಡುತ್ತಿದ್ದಾರೆ. ಹೀಗಾಗಿ ಹಿಂದಿಯಲ್ಲಿ ದೇವರಕೊಂಡ ಅವರನ್ನ ಪರಿಚಯಿಸಲು ಇಷ್ಟಪಟ್ಟಿದ್ದರು. ಅದರಂತೆಯೇ ರೀಮೇಕ್ ಸಿನಿಮಾಗಾಗಿ ಸ್ವತಃ ದೇವರಕೊಂಡ ಅವರನ್ನೇ ಕರೆತರುವ ಪ್ಲ್ಯಾನ್ ಮಾಡಿದ್ದರು.

    ಅದಕ್ಕಾಗಿ ಕರಣ್ ಜೋಹರ್ ಅವರು ವಿಜಯ್‍ಗೆ ಬರೋಬ್ಬರಿ 40 ಕೋಟಿ ರೂ. ಆಫರ್ ನೀಡಿದ್ದರು. ಆದರೆ ನಟ ವಿಜಯ್ ದೇವರಕೊಂಡ 40 ಕೋಟಿ ರೂ. ಆಫರ್ ರನ್ನು ಬೇಡ ಎಂದು ನಿರಾಕರಿಸಿದ್ದಾರೆ. ಈ ಹಿಂದೆ ಕೂಡ ‘ಅರ್ಜುನ್ ರೆಡ್ಡಿ’ ಸಿನಿಮಾವನ್ನು ಕರಣ್ ಜೋಹರ್ ಹಿಂದಿಗೆ ರೀಮೇಕ್ ಮಾಡಲು ಪ್ರಯತ್ನ ಮಾಡಿದ್ದರು. ಆಗಲೂ ವಿಜಯ್‍ಗೆ ಮುಂಬೈನಲ್ಲಿ ದುಬಾರಿ ಅಪಾರ್ಟ್ ಮೆಂಟ್ ಆಫರ್ ನೀಡಲಾಗಿತ್ತು. ಆದರೆ ಅಂದು ಕೂಡ ಕರಣ್ ಅವರ ಆಫರ್ ರನ್ನು ನಿರಾಕರಿಸಿದ್ದರು.

    ನಟ ವಿಜಯ್ ಸಂದರ್ಶನವೊಂದರಲ್ಲಿ “ಒಂದೇ ಸಿನಿಮಾವನ್ನು ಮತ್ತೆ ಮಾಡುವುದು ಕಷ್ಟದ ಕೆಲಸ. ಏಕಕಾಲದಲ್ಲಿ ಎರಡು ಭಾಷೆಯಲ್ಲಿ ಅಭಿನಯಸುತ್ತೇನೆ. ಆದರೆ ತೆಲುಗಿನಲ್ಲಿ ಮಾಡಿದ ಸಿನಿಮಾವನ್ನೇ ಹಿಂದಿಯಲ್ಲಿ ನಾನೇ ಮಾಡುವುದು ನನಗೆ ಸರಿ ಎನ್ನಿಸುತ್ತಿಲ್ಲ” ಎಂದು ತಿಳಿಸಿದ್ದಾರೆ.

  • ನಿರ್ದೇಶಕ ಕರಣ್ ಮನೆಯಲ್ಲಿ ನಶೆಯಲ್ಲಿ ತೇಲಾಡಿದ ಬಾಲಿವುಡ್ ಕಲಾವಿದರು: ಶಾಸಕ ಆರೋಪ

    ನಿರ್ದೇಶಕ ಕರಣ್ ಮನೆಯಲ್ಲಿ ನಶೆಯಲ್ಲಿ ತೇಲಾಡಿದ ಬಾಲಿವುಡ್ ಕಲಾವಿದರು: ಶಾಸಕ ಆರೋಪ

    ನವದೆಹಲಿ: ಖ್ಯಾತ ನಿರ್ದೇಶಕ ಕರಣ್ ಜೋಹರ್ ಅವರ ಮನೆಯಲ್ಲಿ ಬಾಲಿವುಡ್ ಕಲಾವಿದರು ಡ್ರಗ್ಸ್ ನಶೆಯಲ್ಲಿ ತೇಲಾಡಿದ್ದಾರೆ ಎಂದು ಶಿರೋಮಣಿ ಅಕಾಲಿ ದಳದ ಶಾಸಕ ಮಜಿಂದರ್ ಸಿರ್ಸಾ ಗಂಭೀರವಾಗಿ ಆರೋಪಿಸಿದ್ದಾರೆ.

    ಇತ್ತೀಚೆಗೆ ಕರಣ್ ಜೋಹರ್ ಬಾಲಿವುಡ್ ಕಲಾವಿದರಾದ ದೀಪಿಕಾ ಪಡುಕೋಣೆ, ರಣ್‍ಬೀರ್ ಕಪೂರ್, ವಿಕ್ಕಿ ಕೌಶಾಲ್, ಅರ್ಜುನ್ ಕಪೂರ್, ಮಲೈಕಾ ಅರೋರಾ, ಶಾಹಿದ್ ಕಪೂರ್, ವರುಣ್ ಧವನ್, ನಿರ್ದೇಶಕ ಅಯಾನ್ ಮುಖರ್ಜಿ ಸೇರಿದಂತೆ ಹಲವು ಸೆಲೆಬ್ರಿಟಿಗಳಿಗೆ ಪಾರ್ಟಿ ನೀಡಿದ್ದಾರೆ. ಈ ಪಾರ್ಟಿಯ ವಿಡಿಯೋವನ್ನು ಕರಣ್ ಜೋಹರ್ ಅವರು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಇದೀಗ ವಿವಾದಕ್ಕೆ ಗುರಿಯಾಗಿದೆ.

    ಶಾಸಕ ಮಜಿಂದರ್ ಸಿರ್ಸಾ ತಮ್ಮ ಟ್ವಿಟ್ಟರಿನಲ್ಲಿ ಪಾರ್ಟಿಯ ವಿಡಿಯೋ ಹಾಕಿ ಅದಕ್ಕೆ, ಕಾಲ್ಪನಿಕ vs ವಾಸ್ತವ. ಬಾಲಿವುಡ್ ತಾರೆಯರು ಹೆಮ್ಮೆಯಿಂದ ಹೇಗೆ ಡ್ರಗ್ಸ್ ನಶೆಯಲ್ಲಿದ್ದಾರೆ ಎಂಬುದನ್ನು ನೋಡಿ. ನಾನು ಈ ಕಲಾವಿದರ ಮೂಲಕ ಡ್ರಗ್ ಅಬ್ಯೂಸ್ ವಿರುದ್ಧ ಧ್ವನಿ ಎತ್ತುತ್ತೇನೆ. ನಿಮಗೂ ಅಸಹ್ಯ ಎನಿಸಿದರೆ ರೀ-ಟ್ವೀಟ್ ಮಾಡಿ ಎಂದು ಬರೆದುಕೊಂಡಿದಲ್ಲದೆ, ಶಾಹಿದ್ ಕಪೂರ್, ದೀಪಿಕಾ ಪಡುಕೋಣೆ, ಅರ್ಜುನ್ ಕಪೂರ್, ವರುಣ್ ಧವನ್, ಕರಣ್ ಜೋಹರ್ ಹಾಗೂ ವಿಕ್ಕಿ ಕೌಶಾಲ್ ಅವರಿಗೆ ಟ್ಯಾಗ್ ಕೂಡ ಮಾಡಿದ್ದಾರೆ.

    ಮಂಜಿದರ್ ಅವರ ಟ್ವೀಟ್‍ಗೆ ಕಾಂಗ್ರೆಸ್ ನಾಯಕ ಮಿಲಿಂದ್ ದಿಯೋರಾ ಅವರು ರೀ-ಟ್ವೀಟ್ ಮಾಡುವ ಮೂಲಕ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ. “ನನ್ನ ಪತ್ನಿ ಕೂಡ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಅಲ್ಲದೆ ಅವರು ಈ ವಿಡಿಯೋದಲ್ಲೂ ಇದ್ದಾರೆ. ಯಾವುದೇ ಕಲಾವಿದರೂ ಡ್ರಗ್ ನಶೆಯಲ್ಲಿ ಇರಲಿಲ್ಲ. ನಿಮಗೆ ಯಾರ ಬಗ್ಗೆ ಗೊತ್ತಿಲ್ಲವೋ ಅವರ ಬಗ್ಗೆ ಸುಳ್ಳು ಸುದ್ದಿಯನ್ನು ಹರಡಿಸುವುದನ್ನು ನಿಲ್ಲಿಸಿ. ನೀವು ಕ್ಷಮೆ ಕೇಳುವ ಧೈರ್ಯ ಮಾಡುತ್ತೀರಾ ಎಂದು ನಿರೀಕ್ಷಿಸುತ್ತೇನೆ” ಎಂದು ಶಾಸಕ ಮಿಲಿಂದ್ ರೀ-ಟ್ವೀಟ್ ತಿರುಗೇಟು ನೀಡಿದ್ದಾರೆ.

  • ದಾಖಲೆಯ ಮೊತ್ತಕ್ಕೆ ‘ಡಿಯರ್ ಕಾಮ್ರೇಡ್’ ರಿಮೇಕ್ ಹಕ್ಕು ಪಡೆದ ಕರಣ್ ಜೋಹರ್

    ದಾಖಲೆಯ ಮೊತ್ತಕ್ಕೆ ‘ಡಿಯರ್ ಕಾಮ್ರೇಡ್’ ರಿಮೇಕ್ ಹಕ್ಕು ಪಡೆದ ಕರಣ್ ಜೋಹರ್

    ಮುಂಬೈ: ಟಾಲಿವುಡ್‍ನ ರೊಮ್ಯಾಟಿಂಕ್ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮೋಡಿ ಮತ್ತೊಮ್ಮೆ ವರ್ಕೌಟ್ ಆಗಿದ್ದು, ಸದ್ಯ ಈ ಜೋಡಿ ಅಭಿನಯದ ‘ಡಿಯರ್ ಕಾಮ್ರೇಡ್’ ಚಿತ್ರಕ್ಕೆ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದೇ ಬೆನ್ನಲ್ಲೇ ಈ ಚಿತ್ರದ ಹಿಂದಿ ರಿಮೇಕ್ ರೈಟ್ಸ್ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ.

    ಒಂದೆಡೆ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿರುವ ಸುದ್ದಿ ಸದ್ದು ಮಾಡುತ್ತಿದ್ದಂತೆ ಇನ್ನೊಂದೆಡೆ ಬಾಲಿವುಡ್‍ನಲ್ಲಿ ಡಿಯರ್ ಕಾಮ್ರೇಡ್ ಚಿತ್ರ ಸೆಟ್ಟೇರಲಿದೆ. ಹೌದು ಬಿಟೌನ್‍ನ ಖ್ಯಾತ ನಿರ್ದೇಶಕ/ನಿರ್ಮಾಪಕ ಕರಣ್ ಜೋಹರ್ ಈ ಚಿತ್ರವನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ್ದಾರೆ. ಬರೋಬ್ಬರಿ 6 ಕೋಟಿ ರೂ. ಹಣ ನೀಡಿ ‘ಡಿಯರ್ ಕಾಮ್ರೇಡ್’ ಚಿತ್ರದ ರಿಮೇಕ್ ರೈಟ್ಸ್ ಖರೀದಿಸಿದ್ದಾರೆ ಎಂದು ವರದಿಯಾಗಿದೆ.

    ಈಗಾಗಲೇ ಟಾಲಿವುಡ್ ‘ಅರ್ಜುನ್ ರೆಡ್ಡಿ’ ಬಾಲಿವುಡ್‍ನಲ್ಲಿ ‘ಕಬೀರ್ ಸಿಂಗ್’ ಆಗಿ ಸಿನಿ ಪ್ರಿಯರ ಮನ ಗೆದ್ದಿದೆ. ಕಬೀರ್ ಸಿಂಗ್ ಹಿಟ್ ಆಗಿದ್ದೇ ತಡ ಇತ್ತ ‘ಟಾಲಿವುಡ್ ರೌಡಿ’ ಚಿತ್ರಗಳಿಗೆ ಬಾಲಿವುಡ್‍ನಲ್ಲಿ ಹೊಸ ಕ್ರೇಜ್ ಸೃಷ್ಟಿಯಾಗಿದೆ. ‘ಅರ್ಜುನ್ ರೆಡ್ಡಿ’ ರಿಮೇಕ್ ‘ಕಬೀರ್ ಸಿಂಗ್’ ಸಿನಿಮಾ 277 ಕೋಟಿ ಹಣ ಗಳಿಕೆ ಜೊತೆ ಪ್ರೇಕ್ಷಕರ ಮನ ಗೆದ್ದಿರುವಾಗ ‘ಡಿಯರ್ ಕಾಮ್ರೇಡ್’ ಚಿತ್ರ ಕೂಡ ಭಾರೀ ಪ್ರಮಾಣದಲ್ಲಿ ಲಾಭ ತಂದುಕೊಡಲಿದೆ ಎಂದು ಈ ಚಿತ್ರದ ರಿಮೇಕ್ ಹಕ್ಕಿಗಾಗಿ ಹಲವು ನಿರ್ಮಾಪಕರು ರೇಸ್‍ನಲ್ಲಿ ಇದ್ದರು. ಆದರೆ ಕರಣ್ ಜೋಹರ್ ಎಲ್ಲರನ್ನು ಹಿಂದಿಕ್ಕಿ ಚಿತ್ರದ ರಿಮೇಕ್ ಹಕ್ಕನ್ನು ಬರೋಬ್ಬರಿ 6 ಕೋಟಿ ನೀಡಿ ತಮ್ಮದಾಗಿಸಿಕೊಂಡಿದ್ದಾರೆ.

    ಸ್ವತಃ ಕರಣ್ ಜೋಹರ್ ಟ್ವೀಟ್ ಮಾಡಿ, ಬೆರಗುಗೊಳಿಸುವಂತಹ ಲವ್ ಸ್ಟೋರಿ, ಅದ್ಭುತ ನಟನೆ, ಸಂಗೀತ ಸಂಯೋಜನೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ನಟನೆ, ನಿರ್ದೇಶಕ ಭರತ್ ಕಮ್ಮಾ ಶ್ರಮ ಅದ್ಭುತ. ಈ ಸುಂದರ ಚಿತ್ರವನ್ನು ಧರ್ಮ ವ ರಿಮೇಕ್ ಮಾಡುತ್ತಿದೆ ಎಂದು ಫೋಷಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

    ಟಾಲಿವುಡ್ ಅಂಗಳದಲ್ಲಿ ಇದೊಂದು ದಾಖಲೆಯಾಗಿದ್ದು, ಇದುವರೆಗೂ ಯಾವುದೇ ಚಿತ್ರದ ರಿಮೇಕ್ ರೈಟ್ಸ್ ಇಷ್ಟೊಂದು ಮೊತ್ತಕ್ಕೆ ಮಾರಾಟವಾಗಿರಲಿಲ್ಲ ಎನ್ನಲಾಗಿದೆ. ಬಾಲಿವುಡ್‍ನಲ್ಲಿ ಸೌತ್ ಸಿನಿಮಾಗಳ ರಿಮೇಕ್ ಚಿತ್ರಗಳು ಅಬ್ಬರಿಸಲು ಆರಂಭಿಸಿದ್ದು, ಈಗಾಗಲೇ ಅಕ್ಷಯ್ ಕುಮಾರ್ ತಮಿಳಿನ ‘ವೀರಂ’ (ಬಚ್ಚನ್ ಪಾಂಡೆ), ‘ಕಾಂಚಾನಾ’ (ಲಕ್ಷ್ಮಿ ಬಾಂಬ್) ಚಿತ್ರಗಳನ್ನು ರಿಮೇಕ್ ಮಾಡಲು ಮುಂದಾಗಿದ್ದಾರೆ.

    ‘ಗೀತಾ ಗೋವಿಂದಂ’ ಚಿತ್ರದ ಮೂಲಕ ಟಾಲಿವುಡ್ ರೊಮ್ಯಾಂಟಿಕ್ ಜೋಡಿಯಾಗಿ ರಶ್ಮಿಕಾ ಹಾಗೂ ವಿಜಯ್ ಸಖತ್ ಫೇಮಸ್ ಆಗಿದ್ದರು. ಈ ಯುವ ಜೋಡಿ ಇದೀಗ ‘ಡಿಯರ್ ಕಾಮ್ರೇಡ್’ ಮೂಲಕ ಪ್ರೀತಿ ಸಂದೇಶವನ್ನು ಎತ್ತಿ ಹಿಡಿದಿದೆ. ಜುಲೈ 26ರಂದು ‘ಡಿಯರ್ ಕಾಮ್ರೇಡ್’ ಸಿನಿಮಾ ನಾಲ್ಕು ಭಾಷೆಯಲ್ಲಿ ಬಿಡುಗಡೆಯಾಗಿದ್ದು, ಎಲ್ಲಾ ಭಾಷೆಗಳಲ್ಲಿಯೂ ಪ್ರೇಕ್ಷಕರಲ್ಲಿ ಸಖತ್ ಕ್ರೇಜ್ ಹುಟ್ಟಿಸಿದೆ.

    ಡಿಯರ್ ಕಾಮ್ರೇಡ್ ಭರತ್ ಕಮ್ಮಾ ನಿದೇರ್ಶನದಲ್ಲಿ ಮೂಡಿ ಬಂದಿದ್ದು, ಚಿತ್ರ ಸ್ಟೂಡೆಂಟ್ ಯುನಿಯನ್ ಲೀಡರ್ ಓರ್ವ ಕ್ರಿಕೆಟ್ ಆಟಗಾರ್ತಿಗೆ ಮನಸೋತು, ಅವರಿಬ್ಬರ ನಡುವಿನ ಪ್ರೀತಿ, ಸಿಟ್ಟು, ಗಲಾಟೆಗಳ ರೋಮ್ಯಾಂಟಿಕ್ ಪ್ರೇಮ ಕಥನವಾಗಿದೆ. ಈ ಚಿತ್ರದಲ್ಲಿ ರಶ್ಮಿಕಾ ಹಾಗೂ ವಿಜಯ್ ಕೆಮಿಸ್ಟ್ರಿಗೆ ಅಭಿಮಾನಿಗಳು ಮನಸೋತಿದ್ದಾರೆ. ಸದ್ಯ ಡಿಯರ್ ಕಾಮ್ರೆಡ್ ಚಿತ್ರ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

    https://twitter.com/karanjohar/status/1153656232084934658

  • ಕರಣ್ ಜೋಹರ್ ಧರ್ಮ ಪ್ರೊಡಕ್ಷನ್ ಹೌಸ್ ಗೋಡೌನ್‍ನಲ್ಲಿ ಅಗ್ನಿ ಅವಘಡ

    ಕರಣ್ ಜೋಹರ್ ಧರ್ಮ ಪ್ರೊಡಕ್ಷನ್ ಹೌಸ್ ಗೋಡೌನ್‍ನಲ್ಲಿ ಅಗ್ನಿ ಅವಘಡ

    ಮುಂಬೈ: ಬಾಲಿವುಡ್ ಸ್ಟಾರ್ ನಿರ್ದೇಶಕ ಕರಣ್ ಜೋಹರ್ ಅವರ ಪ್ರೊಡಕ್ಷನ್ ಹೌಸ್ ಗೋಡೌನ್‍ನಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಇಂದು ನಸುಕಿನ ಜಾವ ಸುಮಾರು 2.30ಕ್ಕೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

    ಮುಂಬೈ ಪಾಲಿಕೆ ಲೀಸ್‍ಗೆ ನೀಡಿದ್ದ ಕಟ್ಟಡದಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ಅವಘಡದಿಂದ ಗೋಡೌನ್‍ನಲ್ಲಿ ಉಡುಪು, ಚಿತ್ರೀಕರಣದ ವಸ್ತುಗಳು, ಪುಸ್ತಕಗಳು ಸೇರಿದಂತೆ ಸಾಕಷ್ಟು ವಸ್ತುಗಳು ಸುಟ್ಟು ಹೋಗಿದೆ.

    ಈ ವಿಷಯ ತಿಳಿಯುತ್ತಿದ್ದಂತೆ 8 ಅಗ್ನಿಶಾಮಕ ವಾಹನ ಹಾಗೂ 6 ನೀರಿನ ಟ್ಯಾಂಕರ್ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದೆ. ಈ ಅಗ್ನಿ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ. ಮೂರು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಅಂತಿಮವಾಗಿ ನಂದಿಸಲಾಯಿತು.

    ಬೆಂಕಿಯಲ್ಲಿ ಹಾನಿಯಾದ ವಸ್ತುಗಳು ಮುಂಬರುವ, ‘ಸ್ಟೂಡೆಂಟ್ ಆಫ್ ದಿ ಇಯರ್’, ‘ಡ್ರೈವ್’, ‘ಗುಡ್ ನ್ಯೂಸ್’, ‘ಬ್ರಹ್ಮಾಸ್ತ್ರ’ ಹಾಗೂ ‘ತಾಕತ್’ ಚಿತ್ರದಲ್ಲಿ ಬಳಸಲಾಗಿತ್ತು. ಅಗ್ನಿ ಅವಘಡದ ಫೋಟೋ ವೈರಲ್ ಆಗಿದ್ದು, ಈ ಬಗ್ಗೆ ಕರಣ್ ಜೋಹರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.