Tag: Karan Johar

  • ಆತಂಕದಿಂದ ಲಗೇಜ್ ತೆಗೆದುಕೊಂಡು ಎಲ್ಲಿಗೆ ಓಡಿದರು ಆಲಿಯಾ ಭಟ್

    ಆತಂಕದಿಂದ ಲಗೇಜ್ ತೆಗೆದುಕೊಂಡು ಎಲ್ಲಿಗೆ ಓಡಿದರು ಆಲಿಯಾ ಭಟ್

    ಬಾಲಿವುಡ್ ಲವ್‌ಬರ್ಡ್ಸ್ ರಣಬೀರ್‌ ಕಪೂರ್ ಮತ್ತು ಆಲಿಯಾ ಭಟ್ ಏ.೧೪ರಂದು ಮದುವೆಯಾಗಿ ಅಭಿಮಾನಿಗಳಿಗೆ ಸಂತಸದ ಸುದ್ದಿ ಕೊಟ್ಟಿದ್ದಾರೆ. ಮದುವೆಯಾಗಿ ಎರಡೇ ದಿನಕ್ಕೆ ಈ ಜೋಡಿ ತಮ್ಮ ವೃತ್ತಿಜೀವನದ ಕಡೆ ಗಮನ ಹರಿಸಿದ್ದಾರೆ. ಪ್ರಸ್ತುತ ಆಲಿಯಾ ಅವರು ಕರಣ್ ಜೋಹರ್ ನಿರ್ದೇಶನದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ಈ ನಟಿಯ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಆಲಿಯಾ ವಿಮಾನ ನಿಲ್ದಾಣದಲ್ಲಿ ತುಂಬ ಗಾಬರಿಯಿಂದ ಓಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಆಲಿಯಾ, ಟ್ರಾಲಿಯಲ್ಲಿ ಲಗೇಜ್ ಹಾಕಿಕೊಂಡು ಓಡುತ್ತಿರುವ ದೃಶ್ಯ ಸೆರೆಯಾಗಿದೆ. ವೀಡಿಯೋ ನೋಡಿದ ಅಭಿಮಾನಿಗಳು, ಏನಾಯಿತು? ಅವರೇನಾದರೂ ಫ್ಲೈಟ್ ಮಿಸ್ ಮಾಡಿಕೊಂಡ್ರಾ ಎಂದು ಪ್ರಶ್ನೆ ಕೇಳಿದ್ದಾರೆ. ಇದನ್ನೂ ಓದಿ: ರಜನಿಕಾಂತ್ ಸಿನಿಮಾದಲ್ಲಿ ಶಿವರಾಜ್ ಕುಮಾರ್: ಏನಿದು ಭರ್ಜರಿ ಕಾಂಬಿನೇಷನ್?

    ಆದರೆ ಅಸಲಿ ಕಹಾನಿ ಬೇರೆಯೇ ಇದೆ. ಆಲಿಯಾ ಗಾಬರಿಯಿಂದ ವಿಮಾನ ನಿಲ್ದಾಣಕ್ಕೆ ಓಡಿ ಬರುವುದು ಸಿನಿಮಾದ ದೃಶ್ಯ. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದ ಶೂಟಿಂಗ್ ವೇಳೆ ತೆಗೆದ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದ್ದು, ಇದು ಸಖತ್ ವೈರಲ್ ಆಗಿದೆ. ಈ ವೀಡಿಯೋಗೆ ಅಭಿಮಾನಿಗಳು ಫುಲ್ ಪ್ರತಿಕ್ರಿಯೆ ಕೊಡುತ್ತಿದ್ದಾರೆ.

    ಆಲಿಯಾಗೆ ಸಿನಿರಂಗದಲ್ಲಿ ಬೇಡಿಕೆ ಹೆಚ್ಚು. ‘RRR’ ಸಿನಿಮಾ ಗೆದ್ದ ಮೇಲೆ ಆಲಿಯಾ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ರಣವೀರ್ ಜೊತೆ ಈ ನಟಿ  2 ನೇ ಬಾರಿಗೆ ನಟಿಸುತ್ತಿದ್ದು, ಅಭಿಮಾನಿಗಳಲ್ಲಿ ಕುತುಹಲ ಮೂಡಿಸಿದೆ. ಅಲ್ಲದೇ ಈ ಸಿನಿಮಾದಲ್ಲಿ ಕರಣ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದು ಎಲ್ಲಕಡೆ ಹಬ್ಬಿದೆ. ಈ ಸಿನಿಮಾದಲ್ಲಿ ಬಾಲಿವುಡ್ ಬಾದ್‌ಷಾ, ಸೂಪರ್ ಹಿಟ್ ಜೋಡಿ ಶಾರೂಖ್ ಮತ್ತು ಕಾಜೋಲ್ ಸಹ ನಟಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಇದನ್ನೂ ಓದಿ: ಕೇಂದ್ರ ಸಚಿವ ಅನುರಾಗ್ ಠಾಕೂರ್ ಜತೆ ಸಿನಿರಂಗದ ಸಮಸ್ಯೆ ಚರ್ಚೆ

    ಈ ಎಲ್ಲ ಕಾರಣಗಳಿಂದ ಸಿನಿಮಾ ಬಗ್ಗೆ ಎಲ್ಲರಲ್ಲಿಯೂ ಕುತೂಹಲ ಹೆಚ್ಚಾಗುವಂತೆ ಮಾಡುತ್ತಿದೆ.

  • ಕಾಜಲ್ ಜೊತೆ ಶಾರುಖ್ ಖಾನ್ ಮತ್ತೆ ರೊಮ್ಯಾನ್ಸ್

    ಕಾಜಲ್ ಜೊತೆ ಶಾರುಖ್ ಖಾನ್ ಮತ್ತೆ ರೊಮ್ಯಾನ್ಸ್

    ಬಾಲಿವುಡ್‌ನ ಬೆಸ್ಟ್ ಆನ್ ಸ್ಕ್ರೀನ್‌ ಕಪಲ್ ಅಂದ್ರೆ ಶಾರುಖ್ ಖಾನ್ ಮತ್ತು ಕಾಜಲ್, ಸಾಕಷ್ಟು ಚಿತ್ರಗಳ ಮೂಲಕ ಮೋಡಿ ಮಾಡಿರೋ ಈ ಜೋಡಿ ಮತ್ತೆ ತೆರೆಯ ಮೇಲೆ ಒಂದಾಗಲು ಸಜ್ಜಾಗಿದ್ದಾರೆ. ಪವರ್‌ಫುಲ್ ಪಾತ್ರದ ಮೂಲಕ ಕಮಾಲ್ ಮಾಡಲು ಬರುತ್ತಿದ್ದಾರೆ.

    `ಕುಚ್ ಕುಚ್ ಹೋತಾ ಹೈ’, `ಕಭಿ ಖುಷಿ ಕಭಿ ಗಮ್’, `ದಿಲ್‌ವಾಲೆ’, `ಬಾಜಿಗಾರ್’ ಚಿತ್ರಗಳ ಮೂಲಕ ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟು ಹಾಕಿರೋ ಶಾರುಖ್ ಖಾನ್ ಮತ್ತು ಕಾಜಲ್ ಜೋಡಿ ಮತ್ತೆ ಬೆಳ್ಳಿ ಪರದೆಯಲ್ಲಿ ರೊಮ್ಯಾನ್ಸ್ ಮಾಡಲು ರೆಡಿಯಾಗಿದ್ದಾರೆ.

    ನಿರ್ಮಾಪಕ ಕರಣ್ ಜೋಹರ್ `ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ನಟಿ ಆಲಿಯಾ ಭಟ್ ಮತ್ತು ರಣ್‌ವೀರ್ ಸಿಂಗ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇವರ ಪ್ರೇಮ ಕಹಾನಿಯನ್ನೇ ಭಿನ್ನವಾಗಿ ತೋರಿಸಲು ಹೊರಟಿದ್ದಾರೆ ಕರಣ್ ಜೋಹರ್. ಇದೀಗ ಚಿತ್ರದ ಮತ್ತೊಂದು ವಿಶೇಷ ಅಂದ್ರೆ ಬಿಟೌನ್ ಜೋಡಿ ಹಕ್ಕಿಗಳಾಗಿ ಫೇಮ್ ಗಿಟ್ಟಿಸಿಕೊಂಡಿದ್ದ ಶಾರುಖ್ ಮತ್ತು ಕಾಜಲ್ ಈ ಚಿತ್ರದಲ್ಲಿ ಸ್ಪೆಷಲ್ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಇದನ್ನೂ ಓದಿ: ರವಿವರ್ಮನ ಕಲ್ಪನೆಯ ಸುಂದರಿಯರಂತೆ ಪತ್ನಿಯ ಫೋಟೋ ಶೂಟ್ ಮಾಡಿಸಿದ ಜನಾರ್ದನ ರೆಡ್ಡಿ

    `ಗಲ್ಲಿ ಭಾಯ್’ ಚಿತ್ರದಲ್ಲಿ ಕಮಾಲ್ ಮಾಡಿದ್ದ ಜೋಡಿ ಆಲಿಯಾ ಮತ್ತು ರಣ್‌ವೀರ್ ಸಿಂಗ್ ಜೋಡಿ ಮತ್ತೆ `ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ಗಾಗಿ ಒಂದಾಗಿದ್ದಾರೆ. ಈ ಜೋಡಿಗೆ ಬಾಲಿವುಡ್ ರೊಮ್ಯಾಂಟಿಕ್ ಜೋಡಿ ಶಾರುಖ್ ಮತ್ತು ಕಾಜಲ್ ಸಾಥ್ ಕೊಡಲಿದ್ದಾರೆ. ಈ ಗುಡ್ ನ್ಯೂಸ್ ನಂತರ ಚಿತ್ರದ ಮೇಲಿನ ನಿರೀಕ್ಷೆ ಡಬಲ್ ಆಗಿದೆ. ರಿಲೀಸ್ ಆದಮೇಲೆ ಯಾವ ರೀತಿ ಕಮಾಲ್ ಮಾಡಬಹುದು ಅಂತಾ ಕಾದು ನೋಡಬೇಕಿದೆ.

  • ಹಳದಿ ಶೆರ್ವಾನಿ ಹಾಕಿಕೊಂಡು ಆಲಿಯಾ-ರಣಬೀರ್ ಅರಿಶಿಣ ಶಾಸ್ತ್ರಕ್ಕೆ ಹೊರಟ ಕರಣ್ ಜೋಹರ್

    ಹಳದಿ ಶೆರ್ವಾನಿ ಹಾಕಿಕೊಂಡು ಆಲಿಯಾ-ರಣಬೀರ್ ಅರಿಶಿಣ ಶಾಸ್ತ್ರಕ್ಕೆ ಹೊರಟ ಕರಣ್ ಜೋಹರ್

    ಬಾಲಿವುಡ್ ಲವ್‌ಬರ್ಡ್ಸ್ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆ ಬಗ್ಗೆ ಹಲವು ಗೊಂದಲಗಳು ಕೇಳಿ ಬರುತ್ತಿದೆ. ಈ ಜೋಡಿ ಮದುವೆ ಏಪ್ರಿಲ್ 14(ನಾಳೆ) ನಡೆಯಲಾಗುತ್ತೆ ಎಂದು ಕೇಳಿಬರುತ್ತಿತ್ತು. ಆದರೆ ಮದುವೆ ದಿನಾಂಕ ಮುಂದೆ ಹೋಗಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಹಬ್ಬಿತ್ತು. ಆದರೆ ಇದು ನಿಜವೇ ಎಂಬುದರ ಬಗ್ಗೆ ಬಿ’ಟೌನ್‍ನಲ್ಲಿ ಸಂಶಯ ಎದ್ದು ಕಾಣಿಸುತ್ತಿದೆ. ಈ ನಡುವೆ ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಅವರು ತಮ್ಮ ನಿವಾಸದಿಂದ ಹಳದಿ ಬಣ್ಣದ ಬಟ್ಟೆ ಹಾಕಿಕೊಂಡು ಅರಿಶಿಣ ಶಾಸ್ತ್ರಕ್ಕೆ ಹೋಗಿರುವುದು ಕ್ಯಾಮರಾ ಕಣ್ಣಿಗೆ ಬಿದ್ದಿದೆ.

    ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮುಂಬೈನ ಬಾಂದ್ರಾದಲ್ಲಿರುವ ಕಪೂರ್ ನಿವಾಸದಲ್ಲಿ ಈ ಲವ್‌ಬರ್ಡ್ಸ್ ವಿವಾಹವಾಗಲಿದ್ದಾರೆ. ಈ ಸುದ್ದಿ ತಮ್ಮ ನೆಚ್ಚಿನ ನಟ-ನಟಿ ಬಾಯಲ್ಲಿ ಕೇಳಬೇಕು ಎಂದು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಮದುವೆಯ ಸಂಭ್ರಮಗಳು ಇಂದಿನಿಂದ ಪ್ರಾರಂಭವಾಗಿದ್ದು, ಭಟ್ ಮತ್ತು ಕಪೂರ್ ಕುಟುಂಬಗಳು ಪ್ರಸ್ತುತ ಮೆಹೆಂದಿ ಶಾಸ್ತ್ರಕ್ಕೆ ಸಜ್ಜಾಗುತ್ತಿವೆ. ಈ ಸಮಾರಂಭಕ್ಕೆ ಎರಡು ಕುಟುಂಬದ ಆತ್ಮೀಯರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಲಿದ್ದಾರೆ. ಇದನ್ನೂ ಓದಿ: ರಾಖಿ ಸಾವಂತ್ ಗೆ ದುಬಾರಿ ಕಾರು ಕೊಡಿಸಿದ್ದು ಯಾರು? ವೀಡಿಯೋ ಸಮೇತ ಸಾಕ್ಷಿ ಇದೆ

    ಸಮಾರಂಭದ ಮೊದಲು, ನೀತು ಕಪೂರ್, ರಿದ್ಧಿಮಾ ಕಪೂರ್ ಸಾಹ್ನಿ, ಅವರ ಮಗಳು, ಆಧಾರ್ ಜೈನ್, ಅರ್ಮಾನ್ ಜೈನ್, ಅನಿಸಾ, ಅಯಾನ್ ಮುಖರ್ಜಿ, ಕರೀನಾ ಕಪೂರ್ ಖಾನ್, ಕರಿಷ್ಮಾ ಕಪೂರ್ ಮತ್ತು ಭಟ್ ಕುಟುಂಬ ಆಗಮಿಸಿದ್ದು ಕಂಡುಬಂದಿತು. ಈಗ, ಕರಣ್ ಜೋಹರ್ ಅವರು ರಣಬೀರ್ ಮತ್ತು ಆಲಿಯಾ ಅವರ ಮೆಹಂದಿ ಸಮಾರಂಭಕ್ಕೆ ಆಗಮಿಸುತ್ತಿದ್ದಂತೆ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಕರಣ್ ಸಂಭ್ರಮಾಚರಣೆಗಾಗಿ ಹಳದಿ ಶೆರ್ವಾನಿಯನ್ನು ಧರಿಸಿಕೊಂಡು ತಮ್ಮ ಮನೆಯಿಂದ ಹೊರಟಿದ್ದಾರೆ.

    ಆಲಿಯಾಗೆ ಕರಣ್ ಬಹಳ ಆಪ್ತರಾಗಿದ್ದು, ಅವರೊಂದಿಗೆ ಒಳ್ಳೆಯ ಸಂಬಂಧವನ್ನು ಹೊಂದಿದ್ದಾರೆ. ಕರಣ್ ಅವರನ್ನು ಆಲಿಯಾ ತನ್ನ ಮಾರ್ಗದರ್ಶಕ ಎಂದು ಪರಿಗಣಿಸುತ್ತಾರೆ. ಇದನ್ನೂ ಓದಿ: ಗರ್ಭಿಣಿ ಮಹಿಳೆಯ ಮೊದಲ ಕೆಲಸದ ರಹಸ್ಯ ಬಿಚ್ಚಿಟ್ಟ ನಟಿ ಪ್ರಣಿತಾ

    ಏಪ್ರಿಲ್ 17 ರಂದು ಈ ಲವ್‌ಬರ್ಡ್ಸ್ ಅದ್ದೂರಿ ಆರತಕ್ಷತೆಯನ್ನು ಮುಂಬೈನ ತಾಜ್ ಮಹಲ್ ಅರಮನೆಯಲ್ಲಿ ಆಯೋಜಿಸಲಿದ್ದಾರೆ. ಈ ಸಂಭ್ರಮಕ್ಕೆ ಶಾರುಖ್ ಖಾನ್, ರಾಣಿ ಮುಖರ್ಜಿ, ಹೃತಿಕ್ ರೋಷನ್, ಕರಣ್ ಜೋಹರ್, ಅಯನ್ ಮುಖರ್ಜಿ ಮುಂತಾದ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ರಣಬೀರ್ ಮತ್ತು ಆಲಿಯಾ ತಮ್ಮ ಮದುವೆಯ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ವರದಿಗಳಲ್ಲಿ ಹೇಳಲಾಗುತ್ತಿದೆ. ಈ ಸುದ್ದಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

  • ರಣಬೀರ್ ಕಪೂರ್‌ಗೆ ಪತ್ನಿ ಆಗ್ತಾರಾ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ?

    ರಣಬೀರ್ ಕಪೂರ್‌ಗೆ ಪತ್ನಿ ಆಗ್ತಾರಾ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ?

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಹುಭಾಷೆಗಳಲ್ಲಿ ಮಿಂಚುತ್ತಿದ್ದು, ಇವರು ಮಾಡಿದ ಆಲ್ಮೂಸ್ಟ್ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿವೆ. ಅಭಿಮಾನಿಗಳು ರಶ್ಮಿಕಾ ಅವರನ್ನು ಲಕ್ಕಿ ಸ್ಟಾರ್ ಎಂದು ಕರೆಯುತ್ತಿದ್ದಾರೆ. ಈಗ ರಶ್ಮಿಕಾ ಬಾಲಿವುಡ್ನಲ್ಲಿಯೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಅವರ ಎರಡು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ. ಈ ನಡುವೆಯೇ ಮೆಗಾ ಪ್ರಾಜೆಕ್ಟ್‌ಗೆ ಈ ತಾರೆ ಆಯ್ಕೆ ಆಗಿದ್ದಾರೆ ಎಂಬ ಸುದ್ದಿ ಬಿಟೌನ್ ಅಂಗಳದಲ್ಲಿ ಹರಿದಾಡುತ್ತಿದೆ.

    ರಶ್ಮಿಕಾ ಬಾಲಿವುಡ್ ‘ಮಿಷನ್ ಮಜ್ನು’ ಶೂಟಿಂಗ್ ಪೂರ್ತಿ ಮುಗಿದಿದ್ದು, ರಿಲೀಸ್ಗೆ ರೆಡಿ ಇದೆ. ಬಾಲಿವುಡ್‌ಗೆ 2ನೇ ಸಿನಿಮಾ ‘ಗುಡ್ ಬೈ’ ಕೂಡ ಶೂಟಿಂಗ್ ಮುಗಿದು, ಇನ್ನಷ್ಟೇ ಅದು ತೆರೆಗೆ ಬರಬೇಕಿದೆ. ಈ ವೇಳೆಯೇ ‘ಅರ್ಜುನ್ ರೆಡ್ಡಿ’ ಖ್ಯಾತಿಯ ಸಂದೀಪ್ ರೆಡ್ಡಿ ವಂಗ ಮತ್ತು ರಣಬೀರ್ ಕಪೂರ್ ಕಾಂಬಿನೇಷನ್‌ನಲ್ಲಿ ‘ಅನಿಮಲ್’ ಸಿನಿಮಾ ಮೂಡಿಬರಲಿದ್ದು ಈ ಸಿನಿಮಾಗೆ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:  ರಶ್ಮಿಕಾ ವೀಡಿಯೋ ನೋಡಿ ಸುಸ್ತಾದ ಅಭಿಮಾನಿಗಳು – ಕೊಡಗಿನ ಬೆಡಗಿಯ ಜಿಮ್ ಕಸರತ್ತು

    ಈ ಸಿನಿಮಾಗೆ ಮೊದಲು ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ನಾಯಕಿ ಎಂಬ ಸುದ್ದಿಯಿತ್ತು. ಆದರೆ ಅವರು ಸಿನಿಮಾದಿಂದ ಹೊರಬಂದಿದ್ದಾರೆ ಎಂಬ ಮಾಹಿತಿಯಿದೆ. ಆ ಪಾತ್ರವನ್ನು ರಶ್ಮಿಕಾ ನಿರ್ವಹಿಸುತ್ತಾರಂತೆ. ಈ ಸಿನಿಮಾಗೆ ಇವರೇ ಹೀರೋಯಿನ್ ಎಂದು ಅಧಿಕೃತವಾಗಿ ಘೋಷಣೆಯಾದರೆ ರಣಬೀರ್ ಅವರಿಗೆ ರಶ್ಮಿಕಾ ಪತ್ನಿಯಾಗಿ ನಟಿಸಲಿದ್ದಾರೆ. ಈ ಸುದ್ದಿ ರಶ್ಮಿಕಾ ಅಭಿಮಾನಿಗಳಿಗೆ ಫುಲ್ ಟ್ರೀಟ್ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ.

    ರಶ್ಮಿಕಾಗೆ ಹಿಂದಿಯ ದೊಡ್ಡ ಬ್ಯಾನರ್ ಆದ ಕರಣ್ ಜೋಹರ್ ಅವರ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿಯೂ ಇದೆ. ಇತ್ತೀಚೆಗಷ್ಟೇ ರಶ್ಮಿಕಾ ಅವರು ಕರಣ್ ಜೋಹರ್ ಆಫೀಸ್‌ಗೆ ಭೇಟಿ ಕೊಟ್ಟಿದ್ದು, ಬಾಲಿವುಡ್ ಸ್ಟಾರ್ ನಟರ ಜೊತೆ ಈ ನಟಿ ತೆರೆಹಂಚಿಕೊಳ್ಳುತ್ತಾರೆ ಎಂಬ ಸುದ್ದಿಯೂ ಇದೆ. ತಮಿಳು, ತೆಲುಗಿನಲ್ಲಿ ಮಾತ್ರವಲ್ಲ, ಬಾಲಿವುಡ್ ನಲ್ಲೂ ಕನ್ನಡದ ಹುಡುಗಿ ಮಿಂಚುತ್ತಿದ್ದಾರೆ. ಇದನ್ನೂ ಓದಿ: ಡಿಂಪಲ್ ಕ್ವೀನ್‍ಗೆ ಮೋಹಕತಾರೆಯ ಮೆಚ್ಚುಗೆ ಕಾಮೆಂಟ್ – ಅಭಿಮಾನಿಗಳು ಖುಷ್ 

  • ಕೆಜಿಎಫ್ 2 ಟ್ರೈಲರ್: ತಮಿಳಿನಲ್ಲಿ ಸೂರ್ಯ, ತೆಲುಗಿನಲ್ಲಿ ರಾಮ್ ಚರಣ್ ತೇಜ್ ರಿಲೀಸ್

    ಕೆಜಿಎಫ್ 2 ಟ್ರೈಲರ್: ತಮಿಳಿನಲ್ಲಿ ಸೂರ್ಯ, ತೆಲುಗಿನಲ್ಲಿ ರಾಮ್ ಚರಣ್ ತೇಜ್ ರಿಲೀಸ್

    ಇಂದು ಸಂಜೆ 6.40ಕ್ಕೆ ಯಶ್ ನಟನೆಯ ಕೆಜಿಎಫ್ 2 ಸಿನಿಮಾದ ಟ್ರೈಲರ್ ಬಿಡುಗಡೆ ಆಗಲಿದೆ. ಐದು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದ್ದು, ಹಾಗಾಗಿ ಐದು ಭಾಷೆಯಲ್ಲೂ ಏಕಕಾಲಕ್ಕೆ ಟ್ರೈಲರ್ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. ಇದನ್ನು ಓದಿ : ಚಂದನವನ ವಿಮರ್ಶಕರ ಪ್ರಶಸ್ತಿ: ರಾಜ್ ಬಿ ಶೆಟ್ಟಿ ಅತ್ಯುತ್ತಮ ನಟ, ಗಾನವಿ ಲಕ್ಷ್ಮಣ್ ನಟಿ, ಉಳಿದ ಪ್ರಶಸ್ತಿ ವಿವರ

    ತೆಲುಗಿನ ಖ್ಯಾತ ನಟ ರಾಮ್ ಚರಣ್ ತೇಜ ಕೆಜಿಎಫ್‍ 2 ತೆಲುಗು ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದರೆ, ತಮಿಳಿನ ಖ್ಯಾತ ನಟ ಸೂರ್ಯ ಕೆಜಿಎಫ್ 2 ತಮಿಳು ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ. ಈ ಟ್ರೈಲರ್ ರಿಲೀಸ್ ಅನ್ನು ವಿಶೇಷ ರೀತಿಯಲ್ಲಿ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದ್ದು, ಯಶ್ ಅಭಿಮಾನಿಗಳು ರಾಜ್ಯದ ನಾನಾ ಕಡೆ ಹಬ್ಬದಂತೆ ಆಚರಿಸುತ್ತಿದ್ದಾರೆ. ಇದನ್ನೂ ಓದಿ : ಕಾಂಗ್ರೆಸ್ ಅವಧಿಯಲ್ಲಿ ನಡೆದ ಭಯೋತ್ಪಾದನೆ ತಿಳಿಯಲು ‘ದಿ ಕಾಶ್ಮೀರ್ ಫೈಲ್ಸ್’ ನೋಡಿ: ಅಮಿತ್ ಶಾ

    ಅವತ್ತು ಬೆಂಗಳೂರಿಗೆ ಪ್ರತಿಷ್ಠತ ಸ್ಟಾರ್ ಹೋಟೆಲ್ ನಲ್ಲಿ ಕೇವಲ ಮಾಧ್ಯಮ ಗೋಷ್ಠಿ ಮಾಡುವ ಮೂಲಕ ಟ್ರೇಲರ್ ಬಿಡುಗಡೆ ಆಗುತ್ತಿದ್ದು ಭಾರತೀಯ ಭಾಷೆಯ 180ಕ್ಕೂ ಹೆಚ್ಚು ಬೇರೆ ಭಾಷೆಯ ಪತ್ರಕರ್ತರು ಅಂದು ಟ್ರೇಲರ್ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಸಂಜೆ 6.45ಕ್ಕೆ ಟ್ರೇಲರ್ ಬಿಡುಗಡೆ ಆಗಲಿದ್ದು, ಚಿತ್ರತಂಡದ ಪ್ರಮುಖ ಕಲಾವಿದರು, ತಂತ್ರಜ್ಞರು ಮತ್ತು ಕನ್ನಡದ ಹೆಸರಾಂತ ನಟರು ಹಾಗೂ ಮಂತ್ರಿಗಳು ಈ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ. ಇದನ್ನೂ ಓದಿ: ಫ್ಯಾನ್ಸ್ ಜೊತೆ ‘ಜೇಮ್ಸ್’ ವೀಕ್ಷಿಸಿದ ಶಿವಣ್ಣ ದಂಪತಿ – ಏನ್ ಹೇಳಲಿ ನನ್ನ ತಮ್ಮನ ಆ್ಯಕ್ಟಿಂಗ್ ಬಗ್ಗೆ

    ಅತಿಥಿಗಳು ಯಾರು?

    ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಮತ್ತು ಶಿವರಾಜ್ ಕುಮಾರ್ ಆಗಮಿಸುತ್ತಿದ್ದು, ಸಿನಿಮಾದ ಕಲಾವಿದರಾದ ಬಾಲಿವುಡ್ ನಟ ಸಂಜಯ್ ದತ್, ಮಲಯಾಳಂ ಹೆಸರಾಂತ ನಟ ಪೃಥ್ವಿರಾಜ್, ಬಾಲಿವುಡ್ ನಟಿ ರವೀನಾ ಟಂಡನ್, ನಟ ಯಶ್, ನಟಿ ಶ್ರೀನಿಧಿ ಶೆಟ್ಟಿ, ನಿರ್ದೇಶಕ ಪ್ರಶಾಂತ್ ನೀಲ್, ಸಂಗೀತ ನಿರ್ದೇಶಕ ರವಿ ಬಸ್ರೂರು, ನಿರ್ಮಾಪಕ ವಿಜಯ ಕಿರಗಂದೂರು ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ವೇದಿಕೆಯ ಮೇಲೆ ಇರಲಿದ್ದಾರೆ. ಇದನ್ನು ಓದಿ : ಮತ್ತೆ ನಟನೆಗೆ ಮರಳಿದ ಮಾಲಾಶ್ರೀ

    7 ಸಾವಿರ ಚಿತ್ರಮಂದಿರದಲ್ಲಿ ಸಿನಿಮಾ ರಿಲೀಸ್

    ಕೆಜಿಎಫ್ 2 ಸಿನಿಮಾ ಕನ್ನಡ, ಮಲಯಾಳಂ, ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆ ಆಗುತ್ತಿದ್ದು ವಿಶ್ವದಾದ್ಯಂತ ಏಳು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಮಾಡಲಾಗಿದೆ ಅಂತಾರೆ ನಿರ್ಮಾಪಕ ವಿಜಯ್ ಕಿರಗಂದೂರು. ಕರ್ನಾಟಕದಲ್ಲೇ 450ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆದರೆ, ತಮಿಳಿನಲ್ಲಿ ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕೆಜಿಎಫ್ 2 ಪ್ರದರ್ಶನ ಕಾಣಲಿದೆ. ಹಾಗೆಯೇ ವಿವಿಧ ಭಾಷೆಯ ಚಿತ್ರಮಂದಿರಗಳಲ್ಲಿ ಸಾವಿರ ಸಾವಿರ ಥಿಯೇಟರ್ ನಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿರುವುದು ವಿಶೇಷ.

  • ಕೆಜಿಎಫ್ 2 ಟ್ರೈಲರ್ ಬಿಡುಗಡೆಗೆ ಹೋಸ್ಟ್ ಮಾಡಲಿದ್ದಾರೆ ಕರಣ್ ಜೋಹಾರ್

    ಕೆಜಿಎಫ್ 2 ಟ್ರೈಲರ್ ಬಿಡುಗಡೆಗೆ ಹೋಸ್ಟ್ ಮಾಡಲಿದ್ದಾರೆ ಕರಣ್ ಜೋಹಾರ್

    ಬಾಲಿವುಡ್ ನ ಖ್ಯಾತ ನಿರ್ದೇಶಕ, ನಿರ್ಮಾಪಕ, ಬರಹಗಾರ, ಕಲಾವಿದ ಕರಣ್ ಜೋಹಾರ್ ರವಿವಾರ ಬೆಂಗಳೂರಿಗೆ ಬಂದು ಇಳಿಯಲಿದ್ದಾರೆ. ಇದೇ ಮೊದಲ ಬಾರಿಗೆ ಅವರು ಕನ್ನಡ ಸಿನಿಮಾವೊಂದರ ಕಾರ್ಯಕ್ರಮವನ್ನು ಹೋಸ್ಟ್ ಮಾಡಲಿದ್ದಾರೆ. ಈಗಾಗಲೇ ಬಾಲಿವುಡ್ ನಲ್ಲಿ ಸಾಕಷ್ಟು ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡಿರುವ ಅವರು ಇದೇ ಮೊದಲ ಬಾರಿಗೆ ಕನ್ನಡದ ಪ್ಯಾನ್ ಇಂಡಿಯಾ ಚಿತ್ರವೊಂದಕ್ಕೆ ಹೋಸ್ಟ್ ಮಾಡುತ್ತಿರುವುದು ಇದೇ ಮೊದಲು. ಇದನ್ನೂ ಓದಿ : RRR- ಸ್ಟಾರ್ ವಾರ್ ಬೆಂಕಿಗೆ ತಣ್ಣನೆಯ ನೀರು ಸುರಿದ ನಿರ್ದೇಶಕ ರಾಜಮೌಳಿ

    ಯಶ್ ನಟನೆಯ ‘ಕೆಜಿಎಫ್ 2’ ಸಿನಿಮಾದ ಟ್ರೈಲರ್ ಇದೇ ರವಿವಾರ ಮಾರ್ಚ್ 27ರಂದು ಬಿಡುಗಡೆ ಆಗುತ್ತಿದ್ದು, ಈ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ಕರಣ್ ಜೋಹಾರ್ ಹೊತ್ತುಕೊಂಡಿದ್ದಾರೆ. ಸಂಜೆ 6.45ಕ್ಕೆ ಟ್ರೇಲರ್ ಬಿಡುಗಡೆ ಆಗಲಿದ್ದು, ಚಿತ್ರತಂಡದ ಪ್ರಮುಖ ಕಲಾವಿದರು, ತಂತ್ರಜ್ಞರು ಮತ್ತು ಕನ್ನಡದ ಹೆಸರಾಂತ ನಟರು ಹಾಗೂ ಮಂತ್ರಿಗಳು ಈ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ. ಇದನ್ನೂ ಓದಿ : RRR ಸಿನೆಮಾ ನೋಡಲು ಬಾಗಿಲು ಮುರಿದು ಚಿತ್ರಮಂದಿರಕ್ಕೆ ನುಗ್ಗಿದ ಪ್ರೇಕ್ಷಕರು

    ಯಶ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಏ.14 ರಂದು ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳ ಮತ್ತು ಹಿಂದಿಯಲ್ಲಿ ಈ ಸಿನಿಮಾ ಏಕಕಾಲಕ್ಕೆ ರಿಲೀಸ್ ಆಗುತ್ತಿದ್ದು, ಅದಕ್ಕೂ ಮುನ್ನ ಮಾ.27ರಂದು ಚಿತ್ರದ ಟ್ರೇಲರ್ ಬಿಡುಗಡೆ ಮಾಡಲು ಸಿನಿಮಾ ತಂಡ ಸಿದ್ಧತೆ ಮಾಡಿಕೊಂಡಿದೆ. ಅವತ್ತು ಬೆಂಗಳೂರಿಗೆ ಪ್ರತಿಷ್ಠತ ಸ್ಟಾರ್ ಹೋಟೆಲ್ ನಲ್ಲಿ ಕೇವಲ ಮಾಧ್ಯಮ ಗೋಷ್ಠಿ ಮಾಡುವ ಮೂಲಕ ಟ್ರೇಲರ್ ಬಿಡುಗಡೆ ಆಗುತ್ತಿದ್ದು ಭಾರತೀಯ ಭಾಷೆಯ 180ಕ್ಕೂ ಹೆಚ್ಚು ಬೇರೆ ಭಾಷೆಯ ಪತ್ರಕರ್ತರು ಅಂದು ಟ್ರೇಲರ್ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಇದನ್ನೂ ಓದಿ: RRR ಬ್ಯಾನ್ ಮಾಡಿದ್ರೆ ಕೆಜಿಎಫ್‍ಗಿದೆ ಕಂಟಕ

    ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಮತ್ತು ಶಿವರಾಜ್ ಕುಮಾರ್ ಆಗಮಿಸುತ್ತಿದ್ದು, ಸಿನಿಮಾದ ಕಲಾವಿದರಾದ ಬಾಲಿವುಡ್ ನಟ ಸಂಜಯ್ ದತ್, ಮಲಯಾಳಂ ಹೆಸರಾಂತ ನಟ ಪೃಥ್ವಿರಾಜ್, ಬಾಲಿವುಡ್ ನಟಿ ರವೀನಾ ಟಂಡನ್, ನಟ ಯಶ್, ನಟಿ ಶ್ರೀನಿಧಿ ಶೆಟ್ಟಿ, ನಿರ್ದೇಶಕ ಪ್ರಶಾಂತ್ ನೀಲ್, ಸಂಗೀತ ನಿರ್ದೇಶಕ ರವಿ ಬಸ್ರೂರು, ನಿರ್ಮಾಪಕ ವಿಜಯ ಕಿರಗಂದೂರು ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ವೇದಿಕೆಯ ಮೇಲೆ ಇರಲಿದ್ದಾರೆ.

  • ತಂದೆಯನ್ನು ನೆನೆದು ಭಾವುಕರಾಗಿ ಕರಣ್ ಜೋಹರ್ ಪೋಸ್ಟ್

    ತಂದೆಯನ್ನು ನೆನೆದು ಭಾವುಕರಾಗಿ ಕರಣ್ ಜೋಹರ್ ಪೋಸ್ಟ್

    ಮುಂಬೈ: ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್ ಜೋಹರ್ ತಂದೆಯನ್ನು ನೆನೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಭಾವುಕರಾಗಿದ್ದಾರೆ.

    ಕರಣ್ ಇನ್‍ಸ್ಟಾಗ್ರಾಮ್ ನಲ್ಲಿ, ನೀವು ನನ್ನನ್ನು ಬಿಟ್ಟು ಹೋಗಿ ತುಂಬಾ ವರ್ಷಗಳಾಗಿದೆ. ಆದರೂ ಸಹ ಅಪ್ಪ ನೀವು ನಿನ್ನೆ ನನ್ನ ಜೊತೆಯಲ್ಲಿ ಇದ್ದ ರೀತಿ ಇದೆ. ನಾನು ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳಿಗೂ ಅವರು ಮಾರ್ಗದರ್ಶನ ನೀಡುತ್ತಿದ್ದರು. ಯಶ್ ಜೋಹರ್ ಫೌಂಡೇಶನ್ ಈಗ ಸ್ಥಾಪನೆಯಾಗಿದೆ. ಅದರಿಂದ ನಮ್ಮ ಸುತ್ತಮುತ್ತ ಒಳ್ಳೆಯ ರೀತಿ ಬದಲಾಗುತ್ತೆ ಎಂದು ನಾನು ನಂಬಿದ್ದೇನೆ. ಅದು ಅಲ್ಲದೇ ನನ್ನ ಅಪ್ಪ ಎಲ್ಲಿಯೂ ಹೋಗಿಲ್ಲ. ಅವರು ಇಲ್ಲೇ ಇದ್ದಾರೆ. ನನ್ನನ್ನು ಬೆಂಬಲಿಸುವ ಹಲವು ರೂಪದಲ್ಲಿ ಇದ್ದಾರೆ. ಅವರ ಸ್ವಭಾವ ನಡತೆ ಮತ್ತು ದಯಾ ಗುಣ ಹಲವರಿಗೆ ಸ್ಫೂರ್ತಿ ನೀಡಿದೆ ಅದರಲ್ಲಿ ನನ್ನನ್ನು ತುಂಬಾ ಪ್ರಭಾವಿಸಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಅಲ್ಲುನನ್ನು ಮೀರಿಸಲು ಡ್ಯಾನ್ಸ್ ಕ್ಲಾಸ್‍ಗೆ ಹೋಗ್ತಿದ್ದಾರೆ ರಶ್ಮಿಕಾ!

     

    View this post on Instagram

     

    A post shared by Karan Johar (@karanjohar)

    ಈ ಮೌಲ್ಯಗಳನ್ನು ನಮ್ಮ ಪರಂಪರೆಯಾಗಿ ಮುಂದುವರಿಸಲು ಮತ್ತು ಅದನ್ನು ನನ್ನ ಮಕ್ಕಳಿಗೂ ಕಲಿಸಲು ನಾನು ಆಶಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ. ಪ್ರತಿದಿನವೂ ನಿಮ್ಮ ಶಕ್ತಿ, ನಿಮ್ಮ ಪ್ರೀತಿ ಮತ್ತು ನಿಮ್ಮ ವಾತ್ಸಲ್ಯವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಕೃತಿ ಶೆಟ್ಟಿ ಜೊತೆ ರೊಮ್ಯಾನ್ಸ್ ಗೆ ನೋ ಅಂದ್ರು ವಿಜಯ್ ಸೇತುಪತಿ

    ಯಶ್ ಜೋಹರ್ ಕೂಡ ದೂಡ್ಡ ನಿರ್ಮಾಪಕರಾಗಿದ್ದು, ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ 2004 ಯಶ್ ಜೋಹರ್ ಸಾವನ್ನಪ್ಪಿದರು. ನಂತರ ಕರಣ್ ಅವರ ತಂದೆಯ ಧರ್ಮ  ಪ್ರೋಡಕ್ಷನ್ಸ್ ಅನ್ನು ವಹಿಸಿಕೊಂಡರು. ಪ್ರಸ್ತುತ ಬಾಲಿವುಡ್ ನಲ್ಲಿ ದೊಡ್ಡ ಶಕ್ತಿಯಾಗಿ ಬೆಳೆದಿದ್ದಾರೆ. ಹಲವು ಸ್ಟಾರ್‍ಗಳಿಗೆ ಗಾಡ್ ಫಾದರ್ ಸಹ ಆಗಿದ್ದಾರೆ.

  • ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿಲ್ಲ- ಎನ್‍ಸಿಬಿಗೆ ಕರಣ್ ಜೋಹರ್ ಸ್ಪಷ್ಟನೆ

    ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿಲ್ಲ- ಎನ್‍ಸಿಬಿಗೆ ಕರಣ್ ಜೋಹರ್ ಸ್ಪಷ್ಟನೆ

    ಮುಂಬೈ: ಕಳೆದ ವರ್ಷ ನಮ್ಮ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿಲ್ಲ ಎಂದು ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಎನ್‍ಸಿಬಿಗೆ ಸ್ಪಷ್ಟಪಡಿಸಿದ್ದಾರೆ.

    ಎನ್‍ಸಿಬಿ ನೀಡಿದ್ದ ನೋಟಿಸ್‍ಗೆ ಉತ್ತರಿಸಿರುವ ಕರಣ್ ಜೋಹರ್, ಕಳೆದ ವರ್ಷ ನಮ್ಮ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ ಎಂದು ಎನ್‍ಸಿಬಿ ಮೂಲಗಳನ್ನು ಆಧರಿಸಿ ವರದಿ ಮಾಡಲಾಗಿದೆ.

     

    View this post on Instagram

     

    A post shared by Karan Johar (@karanjohar)

    ಕಳೆದ ವರ್ಷ ಕರಣ್ ಜೋಹರ್ ತಮ್ಮ ಮನೆಯಲ್ಲಿ ಮಾಡಿದ್ದ ಪಾರ್ಟಿ ವಿಡಿಯೋ ವೈರಲ್ ಆಗಿದ್ದು, ಈ ಕುರಿತು ಎನ್‍ಸಿಬಿ ಪ್ರಶ್ನಿಸಿದೆ. ಈ ಫಾರ್ಟಿಯಲ್ಲಿ ಬಾಲಿವುಡ್‍ನ ಹಲವು ನಟರು ಭಾಗಿಯಾಗಿದ್ದರು. ಪಾರ್ಟಿ ಕುರಿತು ವಿವರಿಸುವಂತೆ ಎನ್‍ಸಿಬಿ ನೀಡಿದ್ದ ನೋಟಿಸ್‍ಗೆ ಕರಣ್ ಜೋಹರ್ ಶುಕ್ರವಾರ ಉತ್ತರಿಸಿದ್ದಾರೆ. ಈ ವೇಳೆ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಎನ್‍ಸಿಬಿ ವಿಭಾಗೀಯ ನಿರ್ದೇಶಕ ಸಮೀರ್ ವಾಂಖೆಡೆ ಈ ಕುರಿತು ಪ್ರತಿಕ್ರಿಯಿಸಿದ್ದು, ಉತ್ತರದ ಕುರಿತು ಪರಿಶೀಲಿಸುತ್ತಿದ್ದೇವೆ. ಕರಣ್ ಜೋಹರ್ ಅವರು ತಮ್ಮ ವಕೀಲರ ಮೂಲಕ ಬರವಣಿಗೆಯಲ್ಲಿನ ಉತ್ತರವನ್ನು ದಕ್ಷಿಣ ಮುಂಬೈನ ಕಚೇರಿಗೆ ಕಳುಹಿಸಿದ್ದಾರೆ.

    ಶಿರೋಮಣಿ ಅಕಾಲಿ ದಳದ ನಾಯಕ ಮಂಜೀಂದ್ರ ಸಿಂಗ್ ಸಿರ್ಸಾ ಎನ್‍ಸಿಬಿಗೆ ವಿಡಿಯೋ ಕಳುಹಿಸಿ ದೂರು ದಾಖಲಿಸಿದ್ದರು. ವಿಡಿಯೋ ಕುರಿತು ಕಳೆದ ವರ್ಷ ಆಗಸ್ಟ್‍ನಲ್ಲಿ ಮುಂಬೈ ಪೊಲೀಸರಿಗೆ ದೂರು ಸಲ್ಲಿಸಿದ್ದೇನೆ. ಆದರೆ ಯಾವುದೇ ತನಿಖೆ ಕೈಗೊಂಡಿಲ್ಲ ಎಂದು ಆರೋಪಿಸಿದ್ದರು. ಬಳಿಕ ಎನ್‍ಸಿಬಿಯ ಮುಂಬೈ ವಿಭಾಗೀಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

    ವಿಡಿಯೋ ವೈರಲ್ ಆಗುತ್ತಿದ್ದಂತೆ ಕರಣ್ ಜೋಹರ್ ಈ ಕುರಿತು ಸಾರ್ವಜನಿಕವಾಗಿ ಪ್ರತಿಕ್ರಿಯಿಸಿ, ನಮ್ಮ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಮಾಡಲಾಗಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಇದು ದುರುದ್ದೇಶಪೂರಿತವಾಗಿದೆ. ಅಪಪ್ರಚಾರ ಹಾಗೂ ದುರುದ್ದೇಶಪೂರಿತ ಹೇಳಿಕೆಗಳು, ವರದಿಗಳು ಹಾಗೂ ಸುದ್ದಿಗಳ ಮೂಲಕ ಅನವಶ್ಯಕವಾಗಿ ನನ್ನ ಮೇಲೆ ಆರೋಪ ಹೊರಿಸಲಾಗುತ್ತಿದೆ. ನ್ನ ಕುಟುಂಬ, ಸಹೋದ್ಯೋಗಿಗಳು ಹಾಗೂ ಧರ್ಮಾ ಪ್ರೊಡಕ್ಷನ್ಸ್ ಕುರಿತು ದ್ವೇಷ, ತಿರಸ್ಕಾರ ಹಾಗೂ ಅಪಹಾಸ್ಯ ಮಾಡಲಾಗುತ್ತಿದೆ ಎಂದು ಆಕ್ರೊಶ ವ್ಯಕ್ತಪಡಿಸಿದ್ದರು.

    ನಾನು ಮತ್ತೊಮ್ಮೆ ಖಚಿತಪಡಿಸುತ್ತೇನೆ ಡ್ರಗ್ಸ್ ಸೇವಿಸಿಲ್ಲ. ಅಲ್ಲದೆ ನಾನು ಡ್ರಗ್ಸ್ ಸೇವನೆಯನ್ನು ಪ್ರೋತ್ಸಾಹಿಸುವುದಿಲ್ಲ ಎಂದು ಕರಣ್ ಜೋಹರ್ ತಿಳಿಸಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಎನ್‍ಸಿಬಿ ಡ್ರಗ್ಸ್ ಕುರಿತು ತನಿಖೆ ಆರಂಭಿಸಿದ್ದು, ಈಗಾಗಲೇ ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ, ನಟಿ ದೀಪಿಕಾ ಪಡುಕೋಣೆ ಸೇರಿದಂತೆ ಹಲವರ ವಿಚಾರಣೆ ನಡೆಸಿದೆ.

  • ಕರಣ್ ಜೋಹರ್ ಮಾಸ್ಕ್ ಮೇಲೆ ಸಂದೇಶ

    ಕರಣ್ ಜೋಹರ್ ಮಾಸ್ಕ್ ಮೇಲೆ ಸಂದೇಶ

    ಮುಂಬೈ: ಬಾಲಿವುಡ್ ಸಿನಿಮಾ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಮುಂಬೈನಿಂದ ಗೋವಾಗೆ ತೆರಳಿದ್ದಾರೆ. ಕೊರೊನಾ ವೈರಸ್ ಹಿನ್ನೆಲೆ ಕರಣ್ ಜೋಹರ್ ವಿಶೇಷ ಮಾಸ್ಕ್ ಧರಿಸಿದ್ರು. ಮಾಸ್ಕ್ ಮೇಲಿನ ಸಾಲುಗಳು ಬಗ್ಗೆ ಚರ್ಚೆಗಳು ಆರಂಭಗೊಂಡಿವೆ.

    ಇಂದು ಮಕ್ಕಳಾದ ಯಶ್ ಮತ್ತು ರೂಹಿ ಹಾಗೂ ತಾಯಿ ಜೊತೆ ವಿಮಾನ ನಿಲ್ದಾಣಕ್ಕೆ ಬಂದ ಕರಣ್ ಜೋಹರ್ ಗೋವಾಗೆ ತೆರಳಿದ್ದಾರೆ. ಕುಟುಂಬದ ಸದಸ್ಯರು ಧರಿಸಿದ ಮಾಸ್ಕ್ ಕ್ಕಿಂತ ಕರಣ್ ಹಾಕಿಕೊಂಡಿದ್ದ ಮಾಸ್ಕ್ ಮೇಲಿನ ಸಾಲುಗಳು ನೋಡುಗರ ಕೇಂದ್ರ ಬಿಂದುವಾಗಿತ್ತು. ಈ ಸಾಲುಗಳು ಮೂಲಕ ಟ್ರೋಲ್ ಗಳಿಗೆ ಕರಣ್ ಉತ್ತರ ನೀಡಿದ್ರಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಇದನ್ನೂ ಓದಿ: ಸುಶಾಂತ್ ಸಾವಿನ ಬಳಿಕ ವೈರಲ್ ಆಯ್ತು ಕಂಗನಾ ವಿಡಿಯೋ-ಕರಣ್ ಜೋಹರ್ ಪ್ರಶ್ನೆಗೆ ಕ್ವೀನ್ ಗರಂ ಆಗಿದ್ಯಾಕೆ?

    https://www.instagram.com/p/CFKDLAJjcdg/?utm_source=ig_embed

    ”ಒಂದು ವೇಳೆ ಈ ಸಾಲುಗಳನ್ನ ಓದಿದ್ರೆ, ನೀವು ನಮಗೆ ತುಂಬಾ ಹತ್ತಿರವಾದ್ರು” ಎಂದು ಆಂಗ್ಲ ಭಾಷೆಯಲ್ಲಿ ಮಾಸ್ಕ್ ಮೇಲೆ ಬರೆಯಲಾಗಿದೆ. ಸದ್ಯ ಕರಣ್ ಮಾಸ್ಕ್ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಸುಶಾಂತ್ ನಿಧನದ ಬಳಿಕ ಕರಣ್ ಜೋಹರ್ ಅವರನ್ನ ಹೆಚ್ಚು ಟ್ರೋಲ್ ಮಾಡಲಾಗಿತ್ತು. ನಟಿ ಕಂಗನಾ ರಣಾವತ್ ಸಮಯ ಸಿಕ್ಕಾಗೆಲ್ಲ ಕರಣ್ ಜೋಹರ್ ವಿರುದ್ಧ ವಾಗ್ದಾಳಿ ನಡೆಸುತ್ತಿರುತ್ತಾರೆ.

    https://www.instagram.com/p/CFKEkAhj6SQ/

    ಕರಣ್ ಜೋಹರ್ ಜೊತೆಯಲ್ಲಿ ಸ್ಟಾರ್ ಕುಟುಂಬದ ಕಲಾವಿದರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಟ್ರೋಲ್ ಬೆನ್ನಲ್ಲೇ ನಟಿ ಸೋನಾಕ್ಷಿ ಸಿನ್ಹಾ ಟ್ವಿಟ್ಟರ್ ಗೆ ವಿದಾಯ ಹೇಳಿದ್ರೆ, ಅನಿಲ್ ಕಪೂರ್ ಪುತ್ರಿ ಸೋನಂ ಕಪೂರ್, ತಾನು ತಂದೆಯ ಕಠಿಣ ಪರಿಶ್ರಮದ ಪರಿಣಾಮ ತಾನಿಂದು ಈ ಸ್ಥಾನದಲ್ಲಿದ್ದೇನೆ ಎಂದು ಟ್ರೋಲ್ ಗಳಿಗೆ ತಿರುಗೇಟು ನೀಡಿದ್ದರು. ಇದನ್ನೂ ಓದಿ: ಕರಣ್‌ಗೆ ನೀಡಿದ್ದ ಪದ್ಮಶ್ರೀಯನ್ನು ಹಿಂಪಡೆಯಬೇಕು – ಸಿಡಿದ ಕಂಗನಾ

    https://www.instagram.com/p/CFKDl92j0yN/

    ಕರಣ್ ಜೋಹರ್ ನಿರೂಪಣೆಯ ಕಾರ್ಯಕ್ರಮದಲ್ಲಿಯೇ ಕಂಗನಾ ನೇರವಾಗಿ ವಾಗ್ದಾಳಿ ನಡೆಸಿದ್ದರು. ಕಾಫಿ ವಿಥ್ ಕರಣ್ ಕಾರ್ಯಕ್ರಮದಲ್ಲಿ ಕಂಗನಾ ಮತ್ತು ಸೈಫ್ ಅಲಿ ಖಾನ್ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಕರಾಗಿದ್ದ ಕರಣ್ ಪ್ರಶ್ನೆಯೊಂದಕ್ಕೆ ಕಂಗನಾ ಗರಂ ಆಗಿಯೇ ಉತ್ತರ ನೀಡಿದ್ದರು. ನಿಮ್ಮ ಮುಂದೆ ಅನಗತ್ಯವಾಗಿ ಆಟಿಟ್ಯೂಡ್ ತೋರಿಸಿದ ನಟ/ನಟಿ ಯಾರು ಎಂದು ಕೇಳಲಾಗಿತ್ತು. ಕಂಗನಾ ಮಾತ್ರ ಸ್ವಲ್ಪವೂ ಯೋಚಿಸದೇ ಕರಣ್ ನೀವು ಎಂದು ಉತ್ತರ ನೀಡಿದ್ದರು. ಈ ವೇಳೆ ಕರಣ್, ಹೌದಾ ಎಂದು ಹೇಳಿ ಕ್ಷಮೆ ಕೇಳಿದ್ದರು. ಇದನ್ನೂ ಓದಿ: ಸುಶಾಂತ್ ಆತ್ಮಹತ್ಯೆ ಅಲ್ಲ, ಯೋಜಿತ ಕೊಲೆ: ಕಂಗನಾ ಆರೋಪ

    https://www.instagram.com/p/CFE5tGyDeWV/

    ಇಷ್ಟು ಮಾತ್ರವಲ್ಲದೇ ಒಂದು ವೇಳೆ ನೀವು ಜೀವನ ಕಥೆಯನ್ನು ಸಿನಿಮಾ ಮಾಡಿದ್ರೆ, ನೀವು ಸಂಕುಚಿತ ಮನಸ್ಸಿನ ಪಾತ್ರ ಮಾಡ್ತೀರಿ. ಸರ್ವಾಧಿಕಾರಿತ್ವ, ಬೇರೆಯವರ ಬಗೆಗಿನ ಕೆಳಮಟ್ಟದ ಯೋಚನೆಗಳು, ಮೂವಿ ಮಾಫಿಯಾದ ಲೀಡರ್ ಆಗಿರುತ್ತೀರಿ ಎಂದು ನೆಪ್ಟೋಯಿಸಂ ಬಗ್ಗೆ ಕಂಗನಾ ತೀಕ್ಷ್ಣವಾಗಿ ಮಾತನಾಡಿದ್ದರು. ಕಪಿಲ್ ಶರ್ಮಾ ಶೋದಲ್ಲಿಯೂ ಭಾಗಿಯಾಗಿದ್ದ ವೇಳೆ ಕರಣ್ ಜೋಹರ್ ಕಾರ್ಯಕ್ರಮದ ಬಗ್ಗೆ ಕಂಗನಾ ವ್ಯಂಗ್ಯವಾಡಿದ್ದರು.

  • ಸುಶಾಂತ್ ಪ್ರಕರಣ – ಮಹೇಶ್ ಭಟ್, ಕರಣ್ ಜೋಹರ್‌ ಮ್ಯಾನೇಜರ್‌ಗೆ ಸಮನ್ಸ್

    ಸುಶಾಂತ್ ಪ್ರಕರಣ – ಮಹೇಶ್ ಭಟ್, ಕರಣ್ ಜೋಹರ್‌ ಮ್ಯಾನೇಜರ್‌ಗೆ ಸಮನ್ಸ್

    ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಮಹೇಶ್ ಭಟ್ ಮತ್ತು ಕರಣ್ ಜೋಹರ್‌ ಅವರಿಗೆ ಮುಂಬೈ ಪೊಲೀಸರು ಸಮನ್ಸ್ ನೀಡಿದ್ದಾರೆ.

    ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಯಲ್ಲಿ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಮತ್ತು ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರನ್ನು ವಿಚಾರಣೆಗೆ ಕರೆಯಲಾಗುವುದು ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಹೇಳಿದ್ದಾರೆ. ಇತ್ತೀಚೆಗೆ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಮತ್ತು ನಟಿ ಕಂಗನಾ ರಣಾವತ್‍ಗೂ ಕೂಡ ಮುಂಬೈ ಪೊಲೀಸರು ಸಮನ್ಸ್ ನೀಡಿದ್ದರು.

    ಈ ವಿಚಾರವಾಗಿ ಮಾತನಾಡಿರುವ ಅನಿಲ್ ದೇಶ್ಮುಖ್, ನಾಳೆ ಮಹೇಶ್ ಭಟ್ ಅವರನ್ನು ವಿಚಾರಣೆಗೆ ಕರೆಯಲಾಗುವುದು ಮತ್ತು ನಂತರ ನಾವು ಕರಣ್ ಜೋಹರ್ ಅವರ ವ್ಯವಸ್ಥಾಪಕರನ್ನು ಸಹ ಕರೆಯುತ್ತೇವೆ. ಅಗತ್ಯವಿದ್ದರೆ ಕರಣ್ ಜೋಹರ್ ಅವರನ್ನು ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ವಿಚಾರಣೆಗೆ ಕರೆಯಬಹುದು. ಜೊತೆಗೆ ಧರ್ಮ ಪ್ರೊಡಕ್ಷನ್ಸ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಪೂರ್ವಾ ಮೆಹ್ತಾ ಅವರನ್ನು ವಿಚಾರಣೆ ಮಾಡಬಹುದು ಎಂದು ಹೇಳಿದ್ದಾರೆ.

    ಇತ್ತೀಚೆಗೆ ಸುಶಾಂತ್ ಸಿಂಗ್ ಅವರ ಪ್ರೇಯಸಿ ರಿಯಾ ಚಕ್ರವರ್ತಿ, ಸುಶಾಂತ್ ಅವರ ಆಹ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆ ನೀಡಬೇಕು. ಈ ಪ್ರಕರಣ ಯಾವುದೇ ಲೋಪದೋಷವಿಲ್ಲದೇ ತನಿಖೆ ಆಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿ ಬೇಡಿಕೆ ಇಟ್ಟಿದ್ದರು. ಇದಾದ ಬಳಿಕ ಈ ವಿಚಾರವಾಗಿ ಮಾತನಾಡಿದ್ದ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್, ಸುಶಾಂತ್ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ. ನಮ್ಮ ಮುಂಬೈ ಪೊಲೀಸರೇ ತನಿಖೆ ಮಾಡುತ್ತಾರೆ ಎಂದು ಹೇಳಿದ್ದರು.

    ಸುಶಾಂತ್ ಸಿಂಗ್ ಅವರ ಆತ್ಮಹತ್ಯೆ ನಂತರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗಿತ್ತು. ಸುಶಾಂತ್ ಬಾಲಿವುಡ್‍ನಲ್ಲಿರುವ ಸ್ವಜನಪಕ್ಷಪಾತಕ್ಕೆ ಬಲಿಯಾಗಿದ್ದರೆ ಎಂದು ನೆಟ್ಟಿಗರು ಕೆಲ ಸ್ಟಾರ್ ಗಳನ್ನು ಮತ್ತು ಸ್ಟಾರ್ ಮಕ್ಕಳನ್ನು ಟ್ರೋಲ್ ಮಾಡಿದ್ದರು. ಇದರ ಜೊತೆಗೆ ನಟಿ ಕಂಗನಾ ರಣಾವತ್ ಕೂಡ ಬಾಲಿವುಡ್‍ನಲ್ಲಿರುವ ಮೂವಿ ಮಾಫಿಯಾಗೆ ಸುಶಾಂತ್ ಸಿಂಗ್ ಬಲಿಯಾಗಿದ್ದಾರೆ. ಬಾಲಿವುಡ್ ಸುಶಾಂತ್ ಅವರನ್ನು ಪ್ಲಾನ್ ಮಾಡಿ ಮರ್ಡರ್ ಮಾಡಿದೆ ಎಂದು ಆರೋಪಿಸಿದ್ದರು. ಇದಾದ ನಂತರ ಮುಂಬೈ ಪೊಲೀಸರು ಕಂಗನಾಗೂ ಸಮನ್ಸ್ ನೀಡಿದ್ದರು.

    ಜೂನ್ 14ರಂದು ನಟ ಸುಶಾಂತ್ ಸಿಂಗ್ ರಜಪೂತ್ ಅವರು ತಮ್ಮ ಮುಂಬೈ ನಿವಾಸದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸುಶಾಂತ್ ಆತ್ಮಹತ್ಯೆ ನಂತರ ಅವರ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದವು. ಈ ನಡುವೆ ನಟಿ ಕಂಗನಾ ರಣಾವತ್ ಅವರು ಸುಶಾಂತ್ ಅವರದ್ದು ಆತ್ಮಹತ್ಯೆಯಲ್ಲ, ಅದೊಂದು ಯೋಜಿತ ಕೊಲೆ ಎಂದು ಆರೋಪ ಮಾಡಿದ್ದರು.