Tag: Karan Johar

  • ಶಾರುಖ್ ಖಾನ್ ಜೊತೆ ತಮಗೆ ಸಂಬಂಧವಿದೆ ಎಂದಾಗ ತುಂಬಾ ನೋವು ಮಾಡಿಕೊಂಡಿದ್ದರಂತೆ ಕರಣ್ ಜೋಹಾರ್

    ಶಾರುಖ್ ಖಾನ್ ಜೊತೆ ತಮಗೆ ಸಂಬಂಧವಿದೆ ಎಂದಾಗ ತುಂಬಾ ನೋವು ಮಾಡಿಕೊಂಡಿದ್ದರಂತೆ ಕರಣ್ ಜೋಹಾರ್

    ಬಾಲಿವುಡ್ ನಟ ಶಾರುಖ್ ಖಾನ್ ವೃತ್ತಿ ಬದುಕಿನಲ್ಲಿ ನಿರ್ದೇಶಕ ಕಂ ನಿರ್ಮಾಪಕ ಕರಣ್ ಜೋಹಾರ್ ಪಾಲು ದೊಡ್ಡದಿದೆ. ಶಾರುಖ್ ಖಾನ್ ನಟನೆಯ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದು ಇದೇ ಕರಣ್. ಹಾಗಾಗಿ ಇಬ್ಬರ ನಡುವೆ ಒಳ್ಳೆಯ ಬಾಂಧವ್ಯವಿತ್ತು. ಹಾಗಾಗಿ ಎಲ್ಲ ಕಡೆಯೂ ಇಬ್ಬರೂ ಓಡಾಡುತ್ತಿದ್ದರು. ಒಟ್ಟೊಟ್ಟಿಗೆ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು. ಇಂತಹ ವೇಳೆಯಲ್ಲಿ ಬಾಲಿವುಡ್ ಆಡಿದ ಆ ಮಾತು ಕರಣ್ ಅವರಿಗೆ ತುಂಬಾ ನೋವನ್ನುಂಟು ಮಾಡಿತ್ತಂತೆ.

    ಬಾಲಿವುಡ್ ನಲ್ಲಿ ಡೇಟಿಂಗ್ ಮಾಡುವುದು ಕಾಮನ್ ಎನ್ನುವಂತಾಗಿದೆ. ಆದರೆ, ಹುಡುಗ ಹುಡುಗರ ಜೊತೆಯೇ ಡೇಟಿಂಗ್ ಸ್ವಲ್ಪ ಅರಗಿಸಿಕೊಳ್ಳುವುದು ಮತ್ತು ಒಪ್ಪಿಕೊಳ್ಳುವುದು ಕಷ್ಟ. ಇಂತಹ ವೇಳೆಯಲ್ಲಿ ಶಾರುಖ್ ಖಾನ್ ಜೊತೆ ಕರಣ್ ಜೋಹಾರ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗಿತ್ತಂತೆ. ಶಾರುಖ್ ಖಾನ್ ಜೊತೆಗೆ ಈ ರೀತಿ ಹೋಲಿಸಿ ಮಾತನಾಡುತ್ತಿರುವುದು ತಮಗೆ ತುಂಬಾ ನೋವು ಮತ್ತು ದುಃಖ ತಂದಿತ್ತು ಎಂದು ಕರಣ್ ಜೋಹಾರ್ ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.  ಇದನ್ನೂ ಓದಿ:ನಿರೂಪಕಿ ಅನುಶ್ರೀಗೆ ಗಿಫ್ಟ್ ನೀಡಿದ ಶಿವರಾಜ್‌ಕುಮಾರ್

    ಕರಣ್ ಜೋಹಾರ್ ‘ಅನ್ ಸೂಟಬಲ್ ಬಾಯ್’ ಹೆಸರಿನಲ್ಲಿ ಆತ್ಮಚರಿತ್ರೆ ಬರೆದುಕೊಂಡಿದ್ದು, ಈ ಪುಸ್ತಕದಲ್ಲಿ ಅನೇಕ ಸಂಗತಿಗಳನ್ನು ಬರೆದಿದ್ದಾರೆ. ಅಲ್ಲದೇ, ಶಾರುಖ್ ಖಾನ್ ನನ್ನ ತಂದೆ ಸಮಾನರು ಎಂದು ಅವರು ಗೌರವ ಸೂಚಿಸಿದ್ದಾರೆ. ಸಲ್ಲದ ಮಾತುಗಳಿಂದ ಅವರು ಎಷ್ಟೊಂದು ಸಂಕಟಗಳನ್ನು ಅನುಭವಿಸಿದರು ಎನ್ನುವುದನ್ನೂ ಅವರು ಬರೆದಿದ್ದಾರೆ. ಅಲ್ಲಿಗೆ ಶಾರುಖ್ ಖಾನ್ ಜೊತೆಗಿನ ಗಾಸಿಪ್ ಗೆ ತೆರೆ ಎಳೆದಿದ್ದಾರೆ.

    Live Tv

  • ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಹಾಕಿದವರ ಲಿಸ್ಟ್ ನಲ್ಲಿ ಕರಣ್ ಜೋಹರ್

    ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಹಾಕಿದವರ ಲಿಸ್ಟ್ ನಲ್ಲಿ ಕರಣ್ ಜೋಹರ್

    ಬಾಲಿವುಡ್ ನೊಂದಿಗೆ ಭೂಗತ ಜಗತ್ತಿನ ನಂಟಿದೆ ಎಂದು ಹಲವು ವರ್ಷಗಳಿಂದ ಕೇಳುತ್ತಲೇ ಬಂದಿದ್ದೇವೆ. ಬಾಲಿವುಡ್ ನಟ ನಟಿಯರು, ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಆಗಾಗ್ಗೆ ಅವರು ಜೀವ ಬೆದರಿಕೆ ಹಾಕುತ್ತಲೇ ಇರುತ್ತಾರೆ. ಅನೇಕ ಬಾರಿಗೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದೂ ಇದೆ. ಇದನ್ನು ಬಗ್ಗು ಬಡಿಯಲು ನಾನಾ ತಂತ್ರಗಳನ್ನು ಪೊಲೀಸ್ ಇಲಾಖೆ ಮಾಡುತ್ತಲೇ ಬಂದಿದೆ. ಆದರೆ, ಇನ್ನೂ ಆ ಬೆದರಿಕೆ ಕರೆಗಳು ನಿಂತಿಲ್ಲ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ  ಸಿಕ್ಕಿದೆ.

    ಇತ್ತೀಚೆಗಷ್ಟೇ ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಹಾಕಿರುವ ವಿಚಾರ ಬಿಟೌನ್ ನಲ್ಲಿ ಭಾರೀ ಸದ್ದು ಮಾಡಿತ್ತು. ಅದರಲ್ಲೂ  ಈ ಬೆದರಿಕೆ ಪತ್ರದ ಹಿಂದೆ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಮತ್ತು ಆತನ ಗ್ಯಾಂಗ್ ಇದೆ ಎಂದು ಹೇಳಲಾಗಿತ್ತು. ಈ ಗ್ಯಾಂಗ್ ನ ಹಲವು ಸದಸ್ಯರನ್ನು ಈಗಾಗಲೇ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ತನಿಖೆಯಲ್ಲಿ ಹಲವು ರೋಚಕ ಮತ್ತು ಆಘಾತಕಾರಿ ಅಂಶಗಳು ಬೆಳಕಿಗೆ ಬರುತ್ತಿವೆ. ಇದನ್ನೂ ಓದಿ: ವೈರಲ್ ಆಯ್ತು ಪರಿಣಿತಿ ಚೋಪ್ರಾ ಸ್ಕೂಬಾ ಡೈವಿಂಗ್ ವಿಡಿಯೋ

    ಸಲ್ಮಾನ್ ಖಾನ್ ಜೀವ ಬೆದರಿಕೆಯ ಪ್ರಮುಖ ಆರೋಪಿ ಲಾರೆನ್ಸ್ ಬಿಷ್ಣೋಯಿಯ ಗ್ಯಾಂಗಿನ ಸದಸ್ಯ ಸಿದ್ಧೇಶ‍್ ಕಾಂಬ್ಳೆ ಅನ್ನು ವಶಕ್ಕೆ ಪಡೆದಿರುವ ಪೊಲೀಸ್ ಅಧಿಕಾರಿಗಳು, ಎಲ್ಲ ರೀತಿಯಿಂದಲೂ ಬಾಯಿ ಬಿಡಿಸುತ್ತಿದ್ದಾರೆ. ಹಾಗಾಗಿ ಆತ ಕೆಲವು ವಿಚಾರಗಳನ್ನು ಪೊಲೀಸ್ ರ ಮುಂದೆ ಬಾಯ್ಬಿಟ್ಟಿದ್ದಾನೆ ಎನ್ನಲಾಗುತ್ತಿದೆ. ತಮ್ಮ ಹಿಟ್ ಲಿಸ್ಟ್ ನಲ್ಲಿ ನಿರ್ಮಾಪಕ, ನಿರ್ದೇಶಕ, ನಟ ಕರಣ್ ಜೋಹರ್ ಕೂಡ ಇದ್ದರು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾನೆ.

    ಹಾಲಿವುಡ್ ನಿರ್ಮಾಪಕರಿಗೆ ಜೀವ ಬೆದರಿಕೆ ಹಾಕಿ, ಹಣ ವಸೂಲಿ ಮಾಡಲು ದೊಡ್ಡದೊಂದು ಪಟ್ಟಿಯನ್ನೇ ಸಿದ್ಧ ಪಡಿಸುತ್ತಿದ್ದರಿಂದ ಲಾರೆನ್ಸ್ ಅಂಡ್ ಗ್ಯಾಂಗ್. ಈ ಲಿಸ್ಟ್ ನಲ್ಲಿ ಕರಣ್ ಜೋಹರ್ ಹೆಸರು ಪ್ರಮುಖವಾಗಿ ಇತ್ತು ಎಂದು ಹೇಳಿದ್ದಾರೆ. ಬರೋಬ್ಬರಿ ಐದು ಕೋಟಿಗೂ ಅಧಿಕ ಹಣವನ್ನು ವಸೂಲಿ ಮಾಡಲು ಈ ಗ್ಯಾಂಗ್ ಪ್ಲ್ಯಾನ್ ಮಾಡಲಾಗಿತ್ತಂತೆ.

    Live Tv

  • ಫಿಲ್ಮ್ ಮೇಕರ್ ಕರಣ್ ಜೋಹರ್ ಇನ್ನೂ ಯಾಕೆ ಮದುವೆಯಾಗಿಲ್ಲ.?

    ಫಿಲ್ಮ್ ಮೇಕರ್ ಕರಣ್ ಜೋಹರ್ ಇನ್ನೂ ಯಾಕೆ ಮದುವೆಯಾಗಿಲ್ಲ.?

    ಬಾಲಿವುಡ್‌ನ ನಿರ್ಮಾಪಕ ಕರಣ್ ಜೋಹರ್ ಇತ್ತೀಚೆಗಷ್ಟೇ ತಮ್ಮ 50ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು. ಬಾಲಿವುಡ್‌ನ ತಮ್ಮ ಸ್ನೇಹಿತರಿಗೆಲ್ಲಾ ಕರಣ್ ಜೋಹರ್ ಪಾರ್ಟಿ ಆಯೋಜಿಸಿದ್ದರು. ಇತ್ತೀಚೆಗಷ್ಟೇ ನೀಡಿದ ಸಂದರ್ಶನವೊಂದನ್ನು ತಮಗೆ ಜೀವನ ಸಂಗಾತಿ ಇಲ್ಲದಿರುವುದು ದೊಡ್ಡ ವಿಷಾದ ಎಂದು ಸಂದರ್ಶನದಲ್ಲಿ ಕರಣ್ ಜೋಹರ್ ಮಾತನಾಡಿದ್ದಾರೆ.

    ಹಿಂದಿ ಚಿತ್ರರಂಗದ ಫಿಲ್ಮ್ ಮೇಕರ್ ಕರಣ್ ಜೋಹರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಕರಣ್ ಜೋಹರ್ ಇತ್ತೀಚೆಗಷ್ಟೇ ತಮ್ಮ ೫೦ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು. ಇಡೀ ಬಾಲಿವುಡ್‌ಯೇ ಕರಣ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಾಥ್ ನೀಡಿದ್ದರು. ಇನ್ನು ವೃತ್ತಿ ಬದುಕಿನ ಮೇಲೆ ಹೆಚ್ಚು ಆಸಕ್ತಿ ಹೊಂದಿರುವ ಕರಣ್ ಜೋಹರ್ ಇತ್ತೀಚೆಗಷ್ಟೇ ಸಂದರ್ಶನವೊಂದನ್ನು ನೀಡಿದ್ದಾರೆ. ತಮ್ಮ ಜೀವನ ಸಂಗಾತಿಯ ಕುರಿತು ಸಂದರ್ಶನದಲ್ಲಿ ಕರಣ್ ಜೋಹರ್ ಮಾತನಾಡಿದ್ದಾರೆ. ಇದನ್ನೂ ಓದಿ: ಗಲ್ಲಾಪೆಟ್ಟಿಗೆ ಉಡೀಸ್ ಮಾಡಿದ `ಆರ್‌ಆರ್‌ಆರ್’ ಕಲೆಕ್ಷನ್: 1100 ಕೋಟಿ ಬಾಚಿದ ಚಿತ್ರ

    ನಾನು ನನ್ನ ವೈಯಕ್ತಿಕ ಜೀವನದ ಬಗ್ಗೆ ಸ್ವಲ್ಪ ಹೆಚ್ಚು ಗಮನ ಹರಿಸಬೇಕಿತ್ತು ಎಂದೆನಿಸುತ್ತದೆ. ಪರ್ಸನಲ್ ಲೈಫ್ ಬಗ್ಗೆ ನಾನು ಹೆಚ್ಚು ಪ್ರಾಮುಖ್ಯತೆ ಕೊಟ್ಟಿಲ್ಲ. ನಿರ್ಮಾಪಕ ಹಾಗೂ ನಿರ್ದೇಶಕನ ಜವಾಬ್ದಾರಿಗಳು ಹೆಚ್ಚಾಗಿದ್ದ ಕಾರಣ ನನ್ನ ವೈಯಕ್ತಿಕ ಜೀವನಕ್ಕೆ ಹೆಜ್ಜೆ ಪ್ರಾಮುಖ್ಯತೆ ಕೊಡಲಾಗಲಿಲ್ಲ. ಪರ್ಸನಲ್ ಲೈಫ್‌ಗೆ ಸಮಯ ನೀಡದಿರುವುದು ನನ್ನ ಜೀವನದ ದೊಡ್ಡ ವಿಷಾದ. ಈಗ ಎಲ್ಲವೂ ತಡವಾಗಿದೆ. ಈಗ ಜೀವನ ಸಂಗಾತಿಯನ್ನು ಹುಡುಕಲು ಸಮಯ ಮೀರಿದೆ. ನನ್ನ ಜೀವನದಲ್ಲಿ ಆ ಸ್ಥಾನ ಯಾವಾಗಲೂ ಹಾಗೇ ಖಾಲಿ ಇರುತ್ತದೆ. ಇದೇ ನನ್ನ ಜೀವನದ ಆಳವಾದ ವಿಷಾದ ಎಂದು ಸಂದರ್ಶನದಲ್ಲಿ ಕರಣ್ ಜೋಹರ್ ಹೇಳಿದ್ದಾರೆ.

    ಇನ್ನು ಬಾಡಿಗೆ ತಾಯಿಯ ಮೂಲಕ ಕರಣ್ ಜೋಹರ್, ಅವಳಿ ಮಕ್ಕಳನ್ನು ಬರಮಾಡಿಕೊಂಡಿದ್ದರು. ತಮ್ಮ ತಂದೆ ತಾಯಿ ಹೆಸರನ್ನೇ ಆ ಮಕ್ಕಳಿಗೆ ಇಟ್ಟಿದ್ದಾರೆ. ಆ ಮಕ್ಕಳೇ ಇಂದು ಕರಣ್ ಜೋಹರ್ ಪ್ರಪಂಚವಾಗಿದ್ದಾರೆ.

    Live Tv

  • ಶಾರುಖ್ ಖಾನ್ ಕೋವಿಡ್ ದೃಢ : ಬಾಲಿವುಡ್ ನಟ ನಟಿಯರ ಬೆನ್ನತ್ತಿದ ಕೊರೋನಾ

    ಶಾರುಖ್ ಖಾನ್ ಕೋವಿಡ್ ದೃಢ : ಬಾಲಿವುಡ್ ನಟ ನಟಿಯರ ಬೆನ್ನತ್ತಿದ ಕೊರೋನಾ

    ನಿನ್ನೆಯಷ್ಟೇ ನಿರ್ದೇಶಕ, ನಟ ಕರಣ್ ಜೋಹಾರ್ ಬರ್ತಡೇ ಪಾರ್ಟಿಯಲ್ಲಿ ಪಾಲ್ಗೊಂಡವರಿಗೆ ಕೊರೋನಾ ಶಾಕ್ ಸುದ್ದಿ ಪ್ರಕಟವಾಗಿತ್ತು. ಇದೀಗ ಒಬ್ಬೊಬ್ಬರಿಗೆ ಕೋವಿಡ್ ದೃಢವಾಗುತ್ತಿದೆ. ಶಾರುಖ್ ಖಾನ್ ಸೇರಿದಂತೆ ಹಲವು ನಟ ನಟಿಯರಿಗೆ ಕೋವಿಡ್ ದೃಢವಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಪಾರ್ಟಿಯಲ್ಲಿ ಪಾಲ್ಗೊಂಡ ಬಹುತೇಕರು ಕೋವಿಡ್ ಟೆಸ್ಟ್ಗೆ ಒಳಗಾಗಿದ್ದಾರೆ. ಇದನ್ನು ಓದಿ : ಯಶ್ ಮುಂದಿನ ಸಿನಿಮಾ ನರ್ತನ್ ಜೊತೆ ಫಿಕ್ಸ್ : ಘೋಷಣೆಯೊಂದೇ ಬಾಕಿ

    ಕರಣ್ ಜೋಹಾರ್ ತಮ್ಮ 50ನೇ ವರ್ಷದ ಹುಟ್ಟು ಹಬ್ಬಕ್ಕೆ ಬಾಲಿವುಡ್ ನ ಸಾಕಷ್ಟು ತಾರೆಯರು ಆಹ್ವಾನಿಸಿದ್ದರು. ಕನ್ನಡದ ನಟಿ ರಶ್ಮಿಕಾ ಮಂದಣ್ಣ, ದಕ್ಷಿಣದ ತಾರೆಯರಾದ ವಿಜಯ್ ದೇವರಕೊಂಡ, ಸಮಂತಾ ಸೇರಿದಂತೆ ಹಲವು ತಾರೆಯರು ಭಾಗಿಯಾಗಿದ್ದರು. ಇದೀಗ ಬಹುತೇಕ ತಾರೆಯರಿಗೆ ಕೋವಿಡ್ ಕಂಟಕ ಎದುರಾಗಿದೆ. ಇನ್ನೂ ಓದಿ : ಪಠ್ಯ ಪುಸ್ತಕ ಪರಿಷ್ಕರಣೆ ಆಕ್ರೋಶ ಹೊರ ಹಾಕಿದ ನಟ ಚೇತನ್ : ಗಾಂಧಿ, ನೆಹರು ನಮ್ ವಿರೋಧಿಗಳು ಎಂದ ನಟ

    ಈ ಹಿಂದೆ ಬಾಲಿವುಡ್ ನಟಿ ಕತ್ರೀನಾ ಅವರಿಗೆ ಕೋವಿಡ್ ಪಾಸಿಟಿವ್ ಆಗಿದ್ದು ಕೂಡ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಅವರು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಅವರು ವಿಜಯ್ ಸೇತುಪತಿ ಜೊತೆ ನಟಿಸಬೇಕಿದ್ದ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿ ಆಗಿಲ್ಲ ಎನ್ನಲಾಗುತ್ತಿದೆ. ಮತ್ತು ಕರಣ್ ಅವರ ಪಾರ್ಟಿಯಲ್ಲಿ ಕಾಣಿಸಿಕೊಳ್ಳದೇ ಇರುವುದಕ್ಕೂ ಇದೇ ಕಾರಣವಂತೆ. ಇದನ್ನೂ ಓದಿ: ಎರಡೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ಕಮಲ್ ಹಾಸನ್ ನಟನೆಯ `ವಿಕ್ರಮ್’ ಚಿತ್ರ

    ಇತ್ತೀಚೆಗಷ್ಟೇ ಬಾಲಿವುಡ್ ಸಿನಿಮಾ ರಂಗ ಚೇತರಿಕೆ ಕಂಡಿತ್ತು. ಹಲವು ಸಿನಿಮಾಗಳು ಕೂಡ ಬಿಡುಗಡೆ ಆಗಿದ್ದವು. ಇದೀಗ ತಾರೆಯರಿಗೆ ಕೋವಿಡ್ ಮತ್ತು ಮಹಾರಾಷ್ಟ್ರದಲ್ಲಿ ಕೋವಿಡ್ ಸಂಖ್ಯೆ ಹೆಚ್ಚಳದಿಂದಾಗಿ ಮತ್ತೆ ಆತಂಕ ಎದುರಾಗಿದೆ.

  • ಕರಣ್ ಜೋಹರ್ ಹುಟ್ಟುಹಬ್ಬಕ್ಕೆ ಬಂದ 55 ಮಂದಿಗೆ ಕೊರೊನಾ ಕಂಟಕ

    ಕರಣ್ ಜೋಹರ್ ಹುಟ್ಟುಹಬ್ಬಕ್ಕೆ ಬಂದ 55 ಮಂದಿಗೆ ಕೊರೊನಾ ಕಂಟಕ

    ಬಾಲಿವುಡ್‌ನ ಹೆಸರಾಂತ ನಿರ್ಮಾಪಕ ಕರಣ್ ಜೋಹರ್ ಇತ್ತೀಚೆಗಷ್ಟೇ ತಮ್ಮ 50ನೇ ವರ್ಷದ ಹುಟ್ಟು ಹಬ್ಬವನ್ನ ಅದ್ದೂರಿಯಾಗಿ ಆಚರಿಸಿದ್ದರು. ಈಗ ಕರಣ್ ಬರ್ತಡೇಗೆ ಬಂದ ಅತಿಥಿಗಳಿಂದ ಶಾಕಿಂಗ್ ಅಪ್‌ಡೇಟ್ ಸಿಕ್ಕಿದೆ. ಕರಣ್ ಬರ್ತಡೇ ಪಾರ್ಟಿಗೆ ಬಂದ 55 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

    ಹಿಂದಿ ಚಿತ್ರರಂಗದಲ್ಲಿ ನಿರ್ದೇಶಕ, ನಿರೂಪಕ, ಮತ್ತು ನಿರ್ಮಾಪಕನಾಗಿ ಛಾಪೂ ಮೂಡಿಸಿದ ನಟ ಕರಣ್ ಜೋಹರ್ ಇತ್ತೀಚೆಗಷ್ಟೇ ತಮ್ಮ 50ನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದರು. ಅಷ್ಟೇ ಅಲ್ಲ, ಈ ಬರ್ತಡೇ ಪಾರ್ಟಿಗೆ ಇಡೀ ಬಾಲಿವುಡ್ ಚಿತ್ರರಂಗನೇ ಸಾಕ್ಷಿಯಾಗಿತ್ತು. ಕರಣ್ ಆಹ್ವಾನಕ್ಕೆ ಓಗೊಟ್ಟು ಅನೇಕ ಸೆಲೆಬ್ರಿಟಿಗಳು ಬರ್ತಡೇಗೆ ಹಾಜರ್ ಆಗಿದ್ದರು. ಇದೀಗ ಬರ್ತಡೇ ಪಾರ್ಟಿನೇ ಅನೇಕರಿಗೆ ಕುತ್ತು ತಂದಿದೆ. ಈ ಪೈಕಿ ಅನೇಕ ಸೆಲೆಬ್ರಿಟಿಗಳಿಗೆ ಕೊರೊನಾ ಪಾಸಿಟಿವ್ ಆಗಿದೆ. ಈ ಕುರಿತು ಇನ್ನಷ್ಟೇ ಕರಣ್ ಕಡೆಯಿಂದ ಸ್ಪಷ್ಟನೆ ಸಿಗಬೇಕಿದೆ.

    ಪ್ರತಿ ಬಾರಿ ಕರಣ್ ಜೋಹರ್ ಬರ್ತಡೇ ಪಾರ್ಟಿ ಆಯೋಜನೆ ಮಾಡಿದಾಗಲೂ ಒಂದಲ್ಲಾ ಒಂದು ಆರೋಪ ಏದುರಿಸುವ ಕರಣ್, ಈ ಬಾರಿ ಕೊರೊನಾ ಕಳಂಕ ಎದುರಾಗಿದೆ. ಇನ್ನು ಯಶ್ ರಾಜ್ ಸ್ಟುಡಿಯೋದಲ್ಲಿ ಕರಣ್ ಹುಟ್ಟುಹಬ್ಬಕ್ಕೆ ಸಲ್ಮಾನ್ ಖಾನ್, ಶಾರುಖ್ ಖಾನ್, ಅಮೀರ್ ಖಾನ್, ರಶ್ಮಿಕಾ ಮಂದಣ್ಣ, ಅನನ್ಯಾ ಪಾಂಡೆ, ವಿಜಯ್ ದೇವರಕೊಂಡ, ಜಾನ್ವಿ ಕಪೂರ್, ಕತ್ರಿನಾ, ವಿಕ್ಕಿ ಕೌಶಲ್, ರಣ್‌ಬೀರ್ ಕಪೂರ್ ಹೀಗೆ ಬಾಲಿವುಡ್ ದಿಗ್ಗಜರೆಲ್ಲ ಒಟ್ಟುಗೂಡಿದ್ದರು. ಇದನ್ನೂ ಓದಿ: ʻಕೆಜಿಎಫ್‌ 2ʼ 50ನೇ ದಿನದ ಸೆಲೆಬ್ರೇಶನ್‌ನಲ್ಲಿ ಯಶ್‌ ಜೊತೆ ರಾಧಿಕಾ ಕಾಣಿಸಿಕೊಂಡಿದ್ದು ಹೀಗೆ

    ಈಗ ಬರ್ತಡೇ ಪಾರ್ಟಿಗೆ ಬಂದ 55 ಮಂದಿಗೆ ಕೊರೊನಾ ಪಾಸಿಟಿವ್ ಆಗಿದೆ. ಯಾರೆಲ್ಲ ಸೆಲೆಬ್ರಿಟಿಗೆ ಕೊರೊನಾ ಆಗಿದೆ ಎಂಬುದು ತಿಳಿದು ಬಂದಿಲ್ಲ. ಇನ್ನು ಕರಣ್ ಜೋಹರ್ ಕೊರೊನಾ ಕಂಟಕ ಕಳಂಕದ ಬಗ್ಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.

  • ಕರಣ್ ಜೋಹಾರ್ ಬರ್ತಡೇ ಪಾರ್ಟಿಗೆ ‘ಬಾಡಿಗಾರ್ಡ್ಸ್ ‘ ನಿರ್ಬಂಧ

    ಕರಣ್ ಜೋಹಾರ್ ಬರ್ತಡೇ ಪಾರ್ಟಿಗೆ ‘ಬಾಡಿಗಾರ್ಡ್ಸ್ ‘ ನಿರ್ಬಂಧ

    ಸಾಮಾನ್ಯವಾಗಿ ಯಾವುದೇ ಪಾರ್ಟಿ ಮತ್ತು ಸಮಾರಂಭಕ್ಕೆ ಸಿನಿಮಾ ರಂಗದ ಸಿಲೆಬ್ರಿಟಿಗಳು ಹೋದಾಗ ಅವರ ಜೊತೆ ಬಾಡಿಗಾರ್ಡ್ಸ್ ಹೋಗುವುದು ವಾಡಿಕೆ. ಕೆಲವು ನಟರಂತೂ ಬಾಡಿಗಾರ್ಡ್ಸ್ ಇಲ್ಲದೇ ಮನೆಯಿಂದ ಹೊರಗೆ ಒಂದು ಹೆಜ್ಜೆಯನ್ನೂ ಇಡುವುದಿಲ್ಲ. ಆದರೆ, ಮೊನ್ನೆ ನಡೆದ ಕರಣ್ ಜೋಹಾರ್ ಹುಟ್ಟು ಹಬ್ಬಕ್ಕೆ ಬಾಡಿಗಾರ್ಡ್ಸ್‍ ನಿರ್ಬಂಧಿಸಲಾಗಿತ್ತು ಎಂದು ವರದಿಯಾಗಿದೆ. ಇದನ್ನೂ ಓದಿ : ಸದ್ದಿಲ್ಲದೇ ಶೂಟಿಂಗ್ ಮುಗಿಸಿದ ಮಂಸೋರೆ ನಿರ್ದೇಶನದ ‘19.20.21’ ಸಿನಿಮಾ

    ಬಾಲಿವುಡ್ ನಟ, ನಿರ್ಮಾಪಕ, ನಿರ್ದೇಶಕ ಕರಣ್ ಜೋಹಾರ್ ಮೊನ್ನೆಯಷ್ಟೇ ಅದ್ಧೂರಿಯಾಗಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಇದು ಅವರ 50ನೇ ವರ್ಷದ ಹುಟ್ಟು ಹಬ್ಬವಾಗಿದ್ದರಿಂದ, ಎಂದಿಗಿಂತಲೂ ಅದ್ಧೂರಿತನವನ್ನೇ ಕಾಪಾಡಿಕೊಳ್ಳಲಾಗಿತ್ತು. ಕೇವಲ ಬಾಲಿವುಡ್ ನಟ ನಟಿಯರು ಮಾತ್ರವಲ್ಲ, ದಕ್ಷಿಣದ ತಾರೆಯರಿಗೂ ಆಹ್ವಾನ ನೀಡಲಾಗಿತ್ತು. ಈ ಆಹ್ವಾನದ ಜೊತೆಗೆ ಬಾಡಿಗಾರ್ಡ್ಸ್ ಕರೆದುಕೊಂಡು ಬರಬೇಡಿ ಎಂದು ಖಡಕ್ಕಾಗಿ ಸೂಚನೆ ನೀಡಲಾಗಿತ್ತು. ಇದನ್ನೂ ಓದಿ : ಒಟಿಟಿಯಲ್ಲೂ ರಾಜಮೌಳಿ ‘RRR’ ದಾಖಲೆ

    ದೀಪಿಕಾ ಪಡುಕೋಣೆ, ಐಶ್ವರ್ಯ ರೈ, ಶಾರುಖ್ ಖಾನ್, ದಕ್ಷಿಣದಿಂದ ರಶ್ಮಿಕಾ ಮಂದಣ್ಣ, ಪೂಜಾ ಹೆಗಡೆ, ವಿಜಯ್ ದೇವರಕೊಂಡ ಸೇರಿದಂತೆ ಸಾಕಷ್ಟು ಸಿಲೆಬ್ರಿಟಿಗಳು ಈ ಹುಟ್ಟು ಹಬ್ಬದ ಪಾರ್ಟಿಗೆಯಲ್ಲಿ ಹಾಜರಿದ್ದರು. ರಶ್ಮಿಕಾ ಅಂತ ಪಾರ್ಟಿಯಲ್ಲಿ ಹಾಕಿಕೊಂಡು ಡ್ರೆಸ್ ನಿಂದಾಗಿ ಟ್ರೋಲ್ ಕೂಡ ಆದರು. ಇದಕ್ಕೆ ಕಾರಣ, ತಮ್ಮೊಂದಿಗೆ ಸಹಾಯಕರನ್ನು ಕರೆದುಕೊಂಡು ಹೋಗದೇ ಇರುವುದು ಎನ್ನುವುದು ಈಗ ಬಹಿರಂಗವಾಗಿದೆ. ಇದನ್ನೂ ಓದಿ : ಅಭಿಷೇಕ್ ಅಂಬರೀಶ್ ನಟನೆಯ ಕಾಳಿ ಸಿನಿಮಾ ಫಸ್ಟ್ ಲುಕ್ ರಿಲೀಸ್

    ಕನ್ನಡದಿಂದಲೂ ಈ ಪಾರ್ಟಿಗೆ ಯಶ್, ಪ್ರಶಾಂತ್ ನೀಲ್ ಸೇರಿದಂತೆ ಹಲವು ತಾರೆಯರು ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇವರಾರೂ ಆ ಪಾರ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಅದಕ್ಕೆ ಕಾರಣವೂ ಗೊತ್ತಾಗಿಲ್ಲ. ಕೆಜಿಎಫ್ 2 ಸಿನಿಮಾದ ಟ್ರೈಲರ್ ರಿಲೀಸ್ ವೇಳೆ ಕರಣ್ ಜೋಹಾರ್ ಅವರೇ ಕಾರ್ಯಕ್ರಮವನ್ನು ಹೋಸ್ಟ್ ಮಾಡಿದ್ದರಿಂದ, ಆ ತಂಡವು ಬರ್ತಡೇ ಪಾರ್ಟಿಗೆ ಹೋಗಲಿದೆ ಎಂದು ವರದಿಯಾಗಿತ್ತು.

  • ಕರಣ್ ಬರ್ತ್‌ಡೇ ಪಾರ್ಟಿಯಲ್ಲಿ ರಶ್ಮಿಕಾ ಮಂದಣ್ಣ ಕಾಸ್ಟ್ಯೂಮ್‌ಗೆ ಬಾಲಿವುಡ್ ಫಿದಾ

    ಕರಣ್ ಬರ್ತ್‌ಡೇ ಪಾರ್ಟಿಯಲ್ಲಿ ರಶ್ಮಿಕಾ ಮಂದಣ್ಣ ಕಾಸ್ಟ್ಯೂಮ್‌ಗೆ ಬಾಲಿವುಡ್ ಫಿದಾ

    ನಿನ್ನೆಯಷ್ಟೇ ಬಾಲಿವುಡ್‌ನಲ್ಲಿ ಬಹುದೊಡ್ಡ ಬರ್ತ್‌ಡೇ ಪಾರ್ಟಿ ನಡೆದಿದೆ. ನಿರ್ದೇಶಕ, ನಟ, ನಿರ್ಮಾಪಕ ಕರಣ್ ಜೋಹಾರ್ ಅವರಿಗೆ 50 ತುಂಬಿದ ಸಂದರ್ಭದಲ್ಲಿ ಇಡೀ ಭಾರತೀಯ ಸಿನಿಮಾ ರಂಗವನ್ನೇ ಪಾರ್ಟಿಯ ನೆಪದಲ್ಲಿ ಒಂದಾಗಿಸಿದ್ದರು ಕರಣ್. ಇದನ್ನೂ ಓದಿ : ತೆರೆಯ ಮೇಲೂ ನಿರ್ದೇಶಕನಾಗಿ ನಟಿಸಿದ ಯೋಗರಾಜ್ ಭಟ್

    ಈ ಬಾರಿ ಬಾಲಿವುಡ್ ನಟ ನಟಿಯರಿಗೆ ಮಾತ್ರವಲ್ಲ, ದಕ್ಷಿಣದ ಅನೇಕ ತಾರೆಯರಿಗೆ ಕರಣ್ ಆಹ್ವಾನ ನೀಡಿದ್ದರು. ಹಾಗಾಗಿ ಸಮಂತಾ, ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ದಕ್ಷಿಣದ ಕಲಾವಿದರು ಕೂಡ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ : ಪೊಲೀಸ್ ಪೇದೆ ನನ್ನನ್ನು ಸೆಕ್ಸ್ ವರ್ಕರ್ ರೀತಿ ನೋಡಿದ : ಮಲಯಾಳಿ ನಟಿ ಅರ್ಚನಾ ಆರೋಪ

    ತಡರಾತ್ರಿವರೆಗೂ ನಡೆದ ಪಾರ್ಟಿಯಲ್ಲಿ ಸಖತ್ ಮಿಂಚಿದ್ದು ಅಂದರೆ, ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ. ಕರಿ ಬಣ್ಣದ ಕಾಸ್ಟ್ಯೂಮ್‌ನಲ್ಲಿ ರಶ್ಮಿಕಾ ಮಂದಣ್ಣ ಆಧುನಿಕ ದೇವತೆಯಂತೆ ಮಿಂಚಿದ್ದಾರೆ ಎಂದು ಬಾಲಿವುಡ್ ಸಿನಿ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ : ಕಾಶ್ಮೀರ ಟಿವಿ ಸ್ಟಾರ್ ನಟಿ ಹತ್ಯೆ ಮಾಡಿದ ಭಯೋತ್ಪಾದಕರು

    ಈ ಪಾರ್ಟಿಯಲ್ಲಿ ವಿಜಯ್ ದೇವರಕೊಂಡ ಭಾಗಿಯಾಗಿದ್ದರೂ ಕೂಡ, ರಶ್ಮಿಕಾ ಮತ್ತು ವಿಜಯ್ ಅಂತರವನ್ನು ಕಾಪಾಡಿಕೊಂಡಿದ್ದರು ಎನ್ನುವ ಸುದ್ದಿಯು ಕೂಡ ಇದೆ. ಒಟ್ಟಿಗೆ ಅನೇಕ ಪಾರ್ಟಿಗಳಲ್ಲಿ ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದ ವಿಜಯ್ ಮತ್ತು ರಶ್ಮಿಕಾ ಇತ್ತೀಚಿನ ದಿನಗಳಲ್ಲಿ ದೂರ ದೂರ ಓಡಾಡುತ್ತಿದ್ದಾರೆ. ಈ ಪಾರ್ಟಿಯಲ್ಲೂ ಅವರಿಬ್ಬರೂ ಬೇರೆ ಬೇರೆಯಾಗಿಯೇ ಬಂದರು ಎನ್ನುತ್ತಿವೆ ಮೂಲಗಳು. ಹಾಗಾಗಿ ಇಬ್ಬರ ಮಧ್ಯ ಮನಸ್ತಾಪ ಆಗಿರುವುದು ನಿಜ ಎನ್ನಲಾಗುತ್ತಿದೆ.

  • ಕರಣ್ ಜೋಹರ್ ಬರ್ತ್‌ಡೇ ಪಾರ್ಟಿಯಲ್ಲಿ ಸಿನಿ ತಾರೆಯರ ದಂಡು

    ಕರಣ್ ಜೋಹರ್ ಬರ್ತ್‌ಡೇ ಪಾರ್ಟಿಯಲ್ಲಿ ಸಿನಿ ತಾರೆಯರ ದಂಡು

    ಬಾಲಿವುಡ್‌ನ ಪ್ರತಿಭಾವಂತ ನಿರ್ಮಾಪಕ ಕರಣ್ ಜೋಹರ್ 50ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಕರಣ್ ಹುಟ್ಟುಹಬ್ಬದ ಸಂಭ್ರಮಕ್ಕೆ ಇಡೀ ಚಿತ್ರರಂಗವೇ ಸಾಕ್ಷಿಯಾಗಿದೆ. ಪಾರ್ಟಿಗೆ ಆಗಮಿಸಿ ನಿರ್ಮಾಪಕ ಕರಣ್‌ಗೆ ಶುಭಹಾರೈಸಿದ್ದಾರೆ. ಯಾರೆಲ್ಲ ತಾರೆಯರು ಬರ್ತ್‌ಡೇ ಸಂಭ್ರಮಕ್ಕೆ ಸಾಕ್ಷಿಯಾದರು.. ಇಲ್ಲಿದೆ ಡಿಟೈಲ್ಸ್

    ನಿರ್ದೇಶಕನಾಗಿ, ನಿರ್ಮಾಪಕನಾಗಿ, ನಿರೂಪಕನಾಗಿ ಹಿಂದಿ ಚಿತ್ರರಂಗಕ್ಕೆ ಕೊಟ್ಟಿರೋ ಕೊಡುಗೆ ಅಪಾರ. ಇನ್ನು ಮೇ 25ರಂದು 50ನೇ ವರ್ಷಕ್ಕೆ ಕರಣ್ ಜೋಹರ್ ಕಾಲಿಟ್ಟಿದ್ದಾರೆ.

    ಆಫ್‌ ಸೆಂಚುರಿ ಭಾರಿಸಿರೋ ಕರಣ್ ಬರ್ತಡೇಯನ್ನ ಅದ್ದೂರಿಯಾಗಿ ಮುಂಬೈನ ಯಶ್ ರಾಜ್ ಸ್ಟುಡಿಯೋದಲ್ಲಿ ಆಚರಿಸಲಾಯ್ತು. ಒಂದ್ ಕಡೆ ಕರಣ್ ಹುಟ್ಟುಹಬ್ಬ ಅನ್ನೋ ಖುಷಿಯಾಗಿದ್ರೆ, ಬರ್ತ್‌ಡೇಗೆ ಮತ್ತಷ್ಟು ಹೊಳಪು ತುಂಬಲು ಬಾಲಿವುಡ್ ಮತ್ತು ಸೌತ್ ಸಿನಿರಂಗದ ತಾರೆಯರೆಲ್ಲ ಜೊತೆಯಾಗಿದ್ದೆ ಮತ್ತೊಂದು ವಿಶೇಷ. ಇದನ್ನೂ ಓದಿ: ಕಾಶ್ಮೀರ ಟಿವಿ ಸ್ಟಾರ್ ನಟಿ ಹತ್ಯೆ ಮಾಡಿದ ಭಯೋತ್ಪಾದಕರು

    ಕರಣ್ ಜೋಹರ್ ಹುಟ್ಟುಹಬ್ಬದ ಪಾರ್ಟಿಗೆ ಸಲ್ಮಾನ್ ಖಾನ್,ಕರೀನಾ ಮತ್ತು ಸೈಫ್ ಆಲಿಖಾನ್, ವಿಕ್ಕಿ ಮತ್ತು ಕತ್ರಿನಾ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ, ಟೈಗರ್ ಶ್ರಾಫ್, ಸಿದ್ಧಾರ್ಥ್ ಮತ್ತು ಪ್ರಿಯಾಂಕಾ ಚೋಪ್ರಾ, ವರುಣ್ ಧವನ್, ಕಿಯಾರಾ, ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್, ರಣ್‌ಬೀರ್ ಕಪೂರ್ ಮತ್ತು ನೀತು ಕಪೂರ್ ಹೀಗೆ ಸಾಕಷ್ಟು ಸ್ಟಾರ್ಸ್ ಈ ಪಾರ್ಟಿಗೆ ಭಾಗವಹಿಸಿದ್ದರು.

    ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

  • ದಕ್ಷಿಣದ ಸಿನಿಮಾಗಳಿಗೆ ಭೇಷ್ ಎಂದ ನಿರ್ದೇಶಕ ಕರಣ್ ಜೋಹರ್

    ದಕ್ಷಿಣದ ಸಿನಿಮಾಗಳಿಗೆ ಭೇಷ್ ಎಂದ ನಿರ್ದೇಶಕ ಕರಣ್ ಜೋಹರ್

    ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ದಕ್ಷಿಣದ ಸಿನಿಮಾಗಳು ಸಕ್ಸಸ್ ಕಾಣುತ್ತಿದೆ. ಕೆಲ ಬಾಲಿವುಡ್ ಸ್ಟಾರ್ಸ್ ಅಸಮಾಧಾನ ಹೊರಹಾಕಿದ್ದರೆ, ಇನ್ನು ಕೆಲವರು ಸೌತ್ ಚಿತ್ರಗಳನ್ನ ನೋಡಿ ಮೆಚ್ಚಿಕೊಂಡಿದ್ದರು. ಈಗ ನಿರ್ದೇಶಕ ಕರಣ್ ಜೋಹರ್ ದಕ್ಷಿಣದ ಸಿನಿಮಾಗಳನ್ನು ಹಾಡಿ ಹೊಗಳಿದ್ದಾರೆ.

    ಹಿಂದಿ ಚಿತ್ರರಂಗದಲ್ಲಿ ದಕ್ಷಿಣದ ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಹಿಂದಿ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸೌತ್ ಚಿತ್ರಗಳ ಗೆಲುವಿಗೆ ಕೆಲ ಬಾಲಿವುಡ್ ಮಂದಿ ಅಸಮಾಧಾನ ಹೊರ ಹಾಕಿದರೆ, ಇನ್ನು ಕೆಲವರು ಚಿತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದೀಗ ಬಾಲಿವುಡ್ ನಿರ್ದೇಶಕ ಕಮ್ ನಿರ್ಮಾಪಕ ಕರಣ್ ಜೋಹರ್ ಸೌತ್ ಸಿನಿಮಾಗಳನ್ನು ಹಾಡಿ ಹೊಗಳಿದ್ದಾರೆ. ಅಷ್ಟೇ ಅಲ್ಲ, ಕಥೆ, ಸಿನಿಮಾ ಕ್ವ್ಯಾಲಿಟಿ ಬಗ್ಗೆ ಭೇಷ್ ಎಂದಿದ್ದಾರೆ.

    ಕೆಜಿಎಫ್ 2, ಪುಷ್ಪ, ಆರ್‌ಆರ್‌ಆರ್ ಚಿತ್ರಗಳು ಗೆಲ್ಲಲು ನಿರ್ದೇಶಕರ ಪಾತ್ರ ದೊಡ್ಡದಿದೆ. ಈ ಸಿನಿಮಾಗಳು ಭಾರತೀಯ ಸಿನಿಮಾಗಳೇ ಆಗಿರುವುದರಿಂದ ನಮಗೆ ಹೆಮ್ಮೆ ಎನಿಸುತ್ತದೆ. ನಮ್ಮ ಭಾರತೀಯ ಚಿತ್ರರಂಗದಲ್ಲಿ ಪ್ರಶಾಂತ್‌ನೀಲ್,ಸುಕುಮಾರ್, ರಾಜಮೌಳಿ ಅಂತಹ ಟ್ಯಾಲೆಂಟೆಡ್ ನಿರ್ದೇಶಕರು ನಮ್ಮಲ್ಲಿದ್ದಾರೆ ಎನ್ನುವುದೇ ಖುಷಿ ಎಂದಿದ್ದಾರೆ. ಇನ್ನು ಹಿಂದಿಯ `ಭೂಲ್ ಭುಲಯ್ಯಾ 2′ ಚಿತ್ರ ಇದೀಗ ತೆರೆಕಂಡಿದ್ದು, ಸಿನಿಪ್ರೇಕ್ಷಕರ ಗಮನ ಸೆಳೆಯುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ಅಖಾಡಕ್ಕೆ ರಾಕ್ ಲೈನ್ ವೆಂಕಟೇಶ್ : ಉಲ್ಟಾ ಆದ ಲೆಕ್ಕಾಚಾರ

    ಯಾವ ಭಾಷೆಯಲ್ಲಿ ಸಿನಿಮಾ ನಿರ್ಮಾಣವಾದ್ದರೂ, ಅದು ಭಾರತೀಯ ಚಿತ್ರದ ಭಾಗವೇ ಆಗಿದೆ ಎಂದು ಅಕ್ಷಯ್ ಕುಮಾರ್ ಹೇಳಿಕೆಯನ್ನು ಕರಣ್ ಜೋಹರ್ ಸಮರ್ಥಿಸಿಕೊಂಡಿದ್ದಾರೆ.

  • ಕರಣ್ ಜೋಹಾರ್ @50; ಅದ್ಧೂರಿ ಹುಟ್ಟುಹಬ್ಬಕ್ಕೆ ಯಶ್‌ಗೆ ಆಹ್ವಾನ

    ಕರಣ್ ಜೋಹಾರ್ @50; ಅದ್ಧೂರಿ ಹುಟ್ಟುಹಬ್ಬಕ್ಕೆ ಯಶ್‌ಗೆ ಆಹ್ವಾನ

    ಬಾಲಿವುಡ್‌ನ ಖ್ಯಾತ ನಿರೂಪಕ, ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹಾರ್ ಇದೇ ತಿಂಗಳು ಮೇ 25ಕ್ಕೆ ಅವರಿಗೆ 50 ವರ್ಷ. ಈ ಬಾರಿಯ ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲೇ ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿ ಅವರು ದಕ್ಷಿಣದ ಅನೇಕ ಸ್ಟಾರ್ ನಟರನ್ನು ಮತ್ತು ನಿರ್ದೇಶಕರನ್ನು ತಮ್ಮ ಹುಟ್ಟುಹಬ್ಬದ ಪಾರ್ಟಿಗೆ ಆಹ್ವಾನಿಸುತ್ತಿದ್ದಾರೆ ಎನ್ನುವ ಸುದ್ದಿ ಸಿಕ್ಕಿದೆ. ಇದನ್ನೂ ಓದಿ:  ಫ್ಯಾಟ್‌ ಸರ್ಜರಿ ಎಫೆಕ್ಟ್‌ – ಕಿರುತೆರೆ ನಟಿ ಚೇತನಾ ರಾಜ್‌ ಸಾವು

    ಕರಣ್ ಜೋಹಾರ್ ಹುಟ್ಟುಹಬ್ಬವೆಂದರೆ ಬಿಟೌನ್‌ನಲ್ಲಿ ವಿಶೇಷತೆ ಇದ್ದೇ ಇರುತ್ತದೆ. ಬಹುತೇಕ ಬಾಲಿವುಡ್ ಸಿಲೆಬ್ರಿಟಿಗಳು ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುತ್ತಾರೆ. ಈ ಬಾರಿಯ ಸ್ಪೆಷಲ್ ಅಂದರೆ, ಕನ್ನಡದ ಯಶ್, ನಿರ್ದೇಶಕ ಪ್ರಶಾಂತ್ ನೀಲ್, ತೆಲುಗಿನ ಜೂನಿಯರ್ ಎನ್‌ಟಿಆರ್‌ ಹಾಗೂ ರಾಜಮೌಳಿ ಸೇರಿದಂತೆ ಹಲವು ಸಿಲೆಬ್ರಿಟಿಗಳನ್ನು ಆಹ್ವಾನಿಸಿದ್ದಾರಂತೆ. ಇದನ್ನೂ ಓದಿ: ರಾಖಿ ಸಾವಂತ್ ಹೊಸ ಬಾಯ್‌ಫ್ರೆಂಡ್‌ ಮೈಸೂರಿನವನು : ಗೆಳೆಯ ಕೊಟ್ಟ ದುಬಾರಿ ಉಡುಗೊರೆ

    ಕರಣ್ ಜೋಹಾರ್ ಕೆಜಿಎಫ್ 2 ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ಹೋಸ್ಟ್ ಮಾಡಿದ್ದರು. ಆ ಮೂಲಕ ದಕ್ಷಿಣದ ಮೊದಲ ಕಾರ್ಯಕ್ರಮದಲ್ಲಿ ಅವರು ನಿರೂಪಕರಾಗಿ ಕಾಣಿಸಿಕೊಂಡಿದ್ದರು. ಅಲ್ಲಿಂದ ಯಶ್ ಮತ್ತು ಅವರ ಮಧ್ಯ ಒಂದೊಳ್ಳೆ ಬಾಂಧವ್ಯವೂ ಏರ್ಪಟ್ಟಿದೆ. ಇದೆಲ್ಲ ಕಾರಣಕ್ಕಾಗಿ ಈ ಬಾರಿ ಯಶ್ ಅವರು ಕರಣ್ ಜೋಹಾರ್ ಅವರ ಬರ್ತ್‌ಡೇ ಪಾರ್ಟಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನುವ ಮಾಹಿತಿ ಇದೆ.

    ಐವತ್ತು ವರ್ಷ ತುಂಬಿದ ಸಂದರ್ಭದಲ್ಲಿ ವಿಭಿನ್ನ ರೀತಿಯಲ್ಲೇ ಕರಣ್ ಜೋಹಾರ್ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರಂತೆ. ಅಲ್ಲದೇ ಈವರೆಗೂ ತಮ್ಮ ಸಿನಿಮಾದಲ್ಲಿ ಕೆಲಸ ಮಾಡಿದ ಬಹುತೇಕ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಆಹ್ವಾನ ಹೋಗಿದೆಯಂತೆ. ಇದೊಂದು ರೀತಿಯಲ್ಲಿ ಬರ್ತ್‌ಡೇ ಪಾರ್ಟಿ ಅನ್ನುವುದಕ್ಕಿಂತ ಧನ್ಯವಾಗಳನ್ನು ಹೇಳುವ ಕಾರ್ಯಕ್ರಮವಾಗಿ ರೂಪುಗೊಂಡಿದೆ ಎನ್ನುತ್ತಿದೆ ಬಿಟೌನ್.