Tag: Karan Johar

  • `ಲೈಗರ್’ ಟ್ರೈಲರ್ ರಿಲೀಸ್: ಆ್ಯಕ್ಷನ್ ಅವತಾರದಲ್ಲಿ ಮಿಂಚಿದ ವಿಜಯ್ ದೇವರಕೊಂಡ

    `ಲೈಗರ್’ ಟ್ರೈಲರ್ ರಿಲೀಸ್: ಆ್ಯಕ್ಷನ್ ಅವತಾರದಲ್ಲಿ ಮಿಂಚಿದ ವಿಜಯ್ ದೇವರಕೊಂಡ

    ಕ್ಷಿಣ ಭಾರತದ ಸ್ಟಾರ್ ನಟ ವಿಜಯ್ ದೇವರಕೊಂಡ ನಟನೆಯ ಬಹುನಿರೀಕ್ಷಿತ ಚಿತ್ರ `ಲೈಗರ್’ ಟ್ರೈಲರ್ ರಿಲೀಸ್ ಆಗಿದ್ದು, ಬಾಕ್ಸರ್ ಆಗಿ ಮಿಸ್ಟರ್ ವಿಜಯ್ ದೇವರಕೊಂಡ ಅಕ್ಷರಶಃ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲೂ ʻಲೈಗರ್ʼ ಆಗಿ ವಿಜಯ್ ಸಂಚಲನ ಮೂಡಿಸಿದ್ದಾರೆ.

    ವಿಜಯ್ ದೇವರಕೊಂಡ, ಪುರಿ ಜಗನ್ನಾಥ್ ಕಾಂಬಿನೇಷನ್‌ನ ಹೈವೋಲ್ಟೇಜ್ ಕಾಂಬಿನೇಶನ್ `ಲೈಗರ್’ ಸೆಟ್ಟೇರಿದ ದಿನದಿಂದಲೂ ಸಾಕಷ್ಟು ಸುದ್ದಿ ಮಾಡಿತ್ತು. ಪೋಸ್ಟರ್‌ಗಳಿಂದಲೇ ನಿರೀಕ್ಷೆ ಹೆಚ್ಚಿಸಿದ್ದ `ಲೈಗರ್’ ಟ್ರೈಲರ್ ರಿಲೀಸ್ ಆಗಿ, ಈಗ ಸಿನಿಮಾ ಮೇಲಿನ ಕ್ಯೂರಿಯಾಸಿಟಿಯನ್ನು ದುಪ್ಪಟ್ಟು ಮಾಡಿದೆ. ಮಾಸ್ ಲುಕ್‌ನಲ್ಲಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದು, ವಿಜಯ್‌ಗೆ ನಾಯಕಿಯಾಗಿ ಬ್ಯೂಟಿ ಕ್ವೀನ್ ಅನನ್ಯಾ ಪಾಂಡೆ ನಟಿಸಿದ್ದಾರೆ. ʻಲೈಗರ್‌ʼನಲ್ಲಿ ವಿಜಯ್ ರಗಡ್ ಆಗಿ ನಟಿಸಿದ್ದು, ಟ್ರೈಲರ್ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ.ಈ ಸಿನಿಮಾ ಮೂಲಕ ವಿಜಯ್ ದೇವರಕೊಂಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬರುತ್ತಿದ್ದಾರೆ. ಇದನ್ನೂ ಓದಿ:ಸ್ಟಾರ್ ಹೀರೋ ಎದುರು ಖಡಕ್ ವಿಲನ್ ಆಗಿ ಮಿಂಚಲಿದ್ದಾರೆ ಸಮಂತಾ

    ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲಿ ʻಲೈಗರ್‌ʼ ಚಿತ್ರ ತೆರೆ ಕಾಣುತ್ತಿದೆ. ಈ ಚಿತ್ರದಲ್ಲಿ ಬಾಕ್ಸರ್ ಪಾತ್ರದಲ್ಲಿ ವಿಜಯ್ ದೇವರಕೊಂಡ ಅಭಿನಯಿಸಿದ್ದು, ಬಹುಕೋಟಿ ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಬಾಲಿವುಡ್ ಖ್ಯಾತ ನಿರ್ಮಾಣ ಸಂಸ್ಥೆ ಧರ್ಮ ಪ್ರೊಡಕ್ಷನ್ ಮತ್ತು ಪುರಿ ಕನೆಕ್ಟ್ಸ್‌ ಬಂಡವಾಳ ಹೂಡಿದ್ದಾರೆ. ವಿಶ್ವ ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್ ಈ ಚಿತ್ರದಲ್ಲಿ ಗೆಸ್ಟ್ ರೋಲ್‌ನಲ್ಲಿ ನಟಿಸಿದ್ದು, ರಮ್ಯಾ ಕೃಷ್ಣ ವಿಜಯ್ ದೇವರಕೊಂಡ ತಾಯಿಯಾಗಿ ಅಭಿನಯಿಸಿದ್ದಾರೆ. ಕನ್ನಡದಲ್ಲಿಯೂ ರಿಲೀಸ್ ಆಗ್ತಿರುವ ಲೈಗರ್ ಚಿತ್ರ ಆಗಸ್ಟ್ ೨೫ಕ್ಕೆ ತೆರೆಗೆ ಅಬ್ಬರಿಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಸಮಂತಾ ಡಿವೋರ್ಸ್ ಕೊಡಲು ಕಾರಣ ಯಾರು? ಕರಣ್ ಶೋನಲ್ಲಿ ಬಹಿರಂಗ

    ಸಮಂತಾ ಡಿವೋರ್ಸ್ ಕೊಡಲು ಕಾರಣ ಯಾರು? ಕರಣ್ ಶೋನಲ್ಲಿ ಬಹಿರಂಗ

    ಬಿಟೌನ್ ನಲ್ಲಿ ಈಗ ಕಾಫಿ ವಿತ್ ಕರಣ್ ಶೋದ್ದೇ ಮಾತು. ದಿನಕ್ಕೊಂದು ಹೊಸ ಹೊಸ ವಿಷಯಗಳನ್ನು ಬಹಿರಂಗ ಪಡಿಸುತ್ತಲೇ ಅಚ್ಚರಿಗೆ ಕಾರಣವಾಗುತ್ತಿದ್ದಾರೆ ಕರಣ್ ಜೋಹಾರ್. ಮೊನ್ನೆಯಷ್ಟೇ ದಕ್ಷಿಣದ ಖ್ಯಾತ ನಟಿ ಸಮಂತಾ ಮತ್ತು ಬಾಲಿವುಡ್ ನಟ ಅಕ್ಷಯ್ ಕುಮಾರ್ ಎಪಿಸೋಡ್ ಅನ್ನು ಶೂಟ್ ಮಾಡಿರುವ ಕರಣ್, ಅಲ್ಲಿ ಸಾಕಷ್ಟು ವಿಷಯಗಳನ್ನು ಹಂಚಿಕೊಳ್ಳುವಂತೆ ಮಾಡಿದ್ದಾರೆ.

    ಈ ಶೋನಲ್ಲಿ ಪಾಲ್ಗೊಳ್ಳಲು ವೇದಿಕೆಗೆ ಬರುವ ಅಕ್ಷಯ್ ಕುಮಾರ್, ಬರುವಾಗ ಸಮಂತಾ ಅವರನ್ನು ಹೊತ್ತುಕೊಂಡು ಬರುತ್ತಾರೆ. ಅದೊಂದು ರೀತಿಯಲ್ಲಿ ತಮಾಷೆಯಿಂದ ಕೂಡಿದ ದೃಶ್ಯವಾದರೂ, ಸಮಂತಾ ಮತ್ತು ಅಕ್ಷಯ್ ಕುಮಾರ್ ನಡುವಿನ ಬಾಂಧವ್ಯವನ್ನು ಅದು ಬಿಚ್ಚಿಟ್ಟಿದೆ. ಈ ಎಪಿಸೋಡ್ ನಲ್ಲಿ ಸಮಂತಾಗೆ ಸಾಕಷ್ಟು ಪ್ರಶ್ನೆಗಳನ್ನೇ ಮಾಡಿರುವ ಕರಣ್, ನಂತರ ಡಿವೋರ್ಸ್ ಬಗ್ಗೆ ಮಾತನಾಡುತ್ತಾರೆ. ಸಮಂತಾ ಬದುಕಿನಲ್ಲಿ ಬಿರುಗಾಳಿ ಎದ್ದಿದ್ದು ಯಾವಾಗ? ಯಾರು ಡಿವೋರ್ಸ್ ಕೊಡಲು ಮೊದಲು ಮುಂದಾಗಿದ್ದು  ಎಂದು ಪ್ರಶ್ನೆ ಕೇಳುತ್ತಾರೆ ಕರಣ್. ಇದನ್ನೂ ಓದಿ:ಡಾ.ಪುನೀತ್ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ : ಅಪ್ಪು ಕುಟುಂಬಕ್ಕೆ ಆಹ್ವಾನ

    ಶೋನಲ್ಲಿ ಸಮಂತಾ ಏನೆಲ್ಲ ಹೇಳಿದ್ದಾರೆ ಎನ್ನುವುದು ಎಪಿಸೋಡ್ ಪ್ರಸಾರವಾದಾಗ ಗೊತ್ತಾಗಲಿಲ್ಲ, ಈಗ ರಿಲೀಸ್ ಆಗಿರುವ ಪ್ರೋಮೋದಲ್ಲಿ ಸಮಂತಾ, ‘ಡಿವೋರ್ಸ್ಗೆ ಅವನೇ ಕಾರಣ’ ಎಂದಷ್ಟೇ ಹೇಳಿದ್ದಾರೆ. ಅವನೇ ಎಂದರೆ ಪತಿಯಾ ಅಥವಾ ಬೇರೆ ಯಾರಾದರೂ ಇದ್ದಾರೆ ಎನ್ನುವುದನ್ನು ಆ ಕಂತಿನಲ್ಲೇ ರಿವಿಲ್ ಆಗಲಿದೆ. ಆದರೆ, ಅವರು ಯಾರ ಬಗ್ಗೆ ಹೇಳಿದ್ದಾರೆ ಎನ್ನುವುದು ಸದ್ಯಕ್ಕಿರುವ ಕುತೂಹಲ. ಪ್ರೊಮೋ ನೋಡಿದರೆ, ಇಡೀ ಎಪಿಸೋಡ್ ಲವಲವಿಕೆಯಿಂದ ಕೂಡಿದ್ದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ‘ಎಕ್ಸ್’ ಜೊತೆ ‘ಸೆಕ್ಸ್’ ಮಾಡುವಿರಾ?: ಆ ಹುಡುಗಿಯರ ಮುಂದೆ ಕರಣ್ ಜೋಹಾರ್ ಪ್ರಶ್ನೆ

    ‘ಎಕ್ಸ್’ ಜೊತೆ ‘ಸೆಕ್ಸ್’ ಮಾಡುವಿರಾ?: ಆ ಹುಡುಗಿಯರ ಮುಂದೆ ಕರಣ್ ಜೋಹಾರ್ ಪ್ರಶ್ನೆ

    ಟ, ನಿರ್ಮಾಪಕ, ನಿರ್ದೇಶಕ ಕರಣ್ ಜೋಹಾರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮ ದಿನಕ್ಕೊಂದು ಹಾಟ್ ಟಾಪಿಕ್ ಒದಗಿಸುತ್ತಿದೆ. ಅದರಲ್ಲೂ ಸಾರಾ ಅಲಿಖಾನ್ ಮತ್ತು ಜಾಹ್ನವಿ ಕಪೂರ್ ಜೊತೆ ನಡೆಸಿದ ಸಂದರ್ಶನದಲ್ಲಿ ಹತ್ತು ಹಲವು ಬೆಚ್ಚಿ ಬೀಳಿಸುವಂತಹ ವಿಷಯಗಳನ್ನು ಕರಣ್ ಹೊರ ಹಾಕಿದ್ದಾರೆ. ತಮ್ಮ ಮುಂದೆ ಕೂತಿರುವುದು ತಮ್ಮ ಮಗಳ ವಯಸ್ಸಿನ ಇಬ್ಬರು ಹುಡುಗಿಯರು ಎನ್ನುವುದನ್ನೂ ಮರೆತು ಕರಣ್ ಪ್ರಶ್ನೆಗಳನ್ನು ಕೇಳಿದ್ದಾರೆ.

    ಮೊದಲ ಕಂತಿನಲ್ಲಿ ಸಾರಾ ಅಲಿಖಾನ್ ಮತ್ತು ಜಾಹ್ನವಿ ಕಪೂರ್ ಅವರ ಎಕ್ಸ್ ಬಾಯ್ ಫ್ರೆಂಡ್ ಬಗ್ಗೆ ಮಾತನಾಡಿದ್ದ ಕರಣ್, ಈ ಬಾರಿ ಎಕ್ಸ್ ಬಾಯ್ ಫ್ರೆಂಡ್ ಜೊತೆ ಸೆಕ್ಸ್ ಮಾಡಲು ಆಸಕ್ತಿ ಹೊಂದಿದ್ದೀರಾ ಎಂದು ಪ್ರಶ್ನೆ ಮಾಡುವ ಮೂಲಕ ಇಬ್ಬರನ್ನೂ ಮುಜುಗರಕ್ಕೀಡು ಮಾಡಿದ್ದಾರೆ. ತನ್ನ ಮುಂದಿ ಕೂತಿರುವವರು ಚಿಕ್ಕ ವಯಸ್ಸಿನ ನಟಿಯರು ಎನ್ನುವುದನ್ನೂ ಮರೆತು ಬೋಲ್ಡ್ ಆಗಿಯೇ ಪ್ರಶ್ನೆ ಕೇಳಿರುವ ಕರಣ್ ಜೋಹಾರ್, ‘ನಿಮ್ಮ ಎಕ್ಸ್ ಗಳ ಜೊತೆ ಸೆಕ್ಸ್ ಮಾಡುವುದಕ್ಕೆ ಆಸಕ್ತಿ ಹೊಂದಿದ್ದೀರಾ?’ ಎಂದು ಪ್ರಶ್ನೆ ಕೇಳುತ್ತಿದ್ದಂತೆಯೇ ಇಬ್ಬರೂ ಕೆಲ ಕ್ಷಣ ಮೌನಕ್ಕೆ ಜಾರಿದ್ದಾರೆ. ಇದನ್ನೂ ಓದಿ:ಅವಳಿ ಮಕ್ಕಳಿಗೆ ತಾಯಿಯಾಗಲಿದ್ದಾರಾ ಆಲಿಯಾ: ರಣ್‌ಬೀರ್‌ ಕೊಟ್ರು ಬ್ರೇಕಿಂಗ್‌ ನ್ಯೂಸ್

    ಕರಣ್ ಈ ರೀತಿಯ ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ಕನಸು ಮನಸಲ್ಲೂ ಎಣಿಸಿರದ ಆ ಯುವ ನಟಿಯರು ಸಾವರಿಸಿಕೊಂಡು ಸಾರಾ ‘ನೋ’ ಎಂದರೆ, ಜಾಹ್ನವಿ ಈ ಕುರಿತು ಮಾತನಾಡದೇ ಸುಮ್ಮನಾಗಿ ಬಿಡುತ್ತಾರೆ. ಆದರೂ, ಕರಣ್ ಸುಮ್ಮನಿರುವುದಿಲ್ಲ. ಮತ್ತೆ ಮತ್ತೆ ಆ ವಿಷಯವನ್ನೇ ಕೆದುಕುವುದಕ್ಕೆ ಪ್ರಯತ್ನಿಸುತ್ತಾರೆ. ಈ ಹಿಂದೆಯೂ ಕೂಡ ಈ ಇಬ್ಬರೂ ಅಣ್ಣ ತಮ್ಮಂದಿರ ಜೊತೆ ಡೇಟಿಂಗ್ ಮಾಡುತ್ತಿದ್ದರು ಎನ್ನುವ ವಿಷಯವನ್ನು ಇದೇ ಶೋನಲ್ಲಿ ಕರಣ್ ಬಹಿರಂಗ ಪಡಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಸಾರಾ ಅಲಿಖಾನ್ ಮತ್ತು ಜಾಹ್ನವಿ ಕಪೂರ್ ‘ಲವ್ವಿಡವ್ವಿ’ ಬಹಿರಂಗ ಪಡಿಸಿದ ಕರಣ್ ಜೋಹಾರ್

    ಸಾರಾ ಅಲಿಖಾನ್ ಮತ್ತು ಜಾಹ್ನವಿ ಕಪೂರ್ ‘ಲವ್ವಿಡವ್ವಿ’ ಬಹಿರಂಗ ಪಡಿಸಿದ ಕರಣ್ ಜೋಹಾರ್

    ಬಾಲಿವುಡ್ ನಲ್ಲಿ ಕರಣ್ ಜೋಹಾರ್ ನಡೆಸಿಕೊಡುತ್ತಿರುವ ಕಾಫಿ ವಿತ್ ಕರಣ್ ಕಾರ್ಯಕ್ರಮ ಬಿಸಿಬಿಸಿ ಸುದ್ದಿಗಳ ಕಾರಣದಿಂದಾಗಿ ಗಮನ ಸೆಳೆಯುತ್ತಿದೆ. ಸಿಲೆಬ್ರಿಟಿಗಳ ವೃತ್ತಿ ಬದುಕಿಗಿಂತ ಅವರ ಖಾಸಗಿ ಬದುಕಿನ ರಸನಿಮಿಷಗಳೇ ಹೆಚ್ಚು ಸದ್ದು ಮಾಡುತ್ತಿವೆ. ಹಾಗಾಗಿ ಸಿಲೆಬ್ರಿಟಿಗಳ ಒಂದು ರೀತಿಯಲ್ಲಿ ಭಯದಿಂದಲೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವಂತಾಗಿದೆ.

    ಡೇಟಿಂಗ್, ಬಾಯ್ ಫ್ರೆಂಡ್, ಬ್ರೇಕ್ ಅಪ್, ಅಕ್ರಮ ಸಂಬಂಧ ಕೇವಲ ಇಂಥದ್ದೇ ಪ್ರಶ್ನೆಗಳನ್ನು ಕೇಳುವ ಮೂಲಕ ಕರಣ್ ಜೋಹಾರ್ ಅತಿಥಿಗಳಿಗೆ ಶಾಕ್ ಮೇಲೆ ಶಾಕ್ ಕೊಡುತ್ತಿದ್ದಾರೆ. ಕೆಲವರು ಈ ಕುರಿತು ಬೋಲ್ಡ್ ಆಗಿಯೇ ಉತ್ತರಿಸಿದ್ದರೆ, ಇನ್ನೂ ಕೆಲವರು ಮೌನಕ್ಕೆ ಜಾರುತ್ತಾರೆ. ಆದರೂ, ಕರಣ್ ಇಂತಹ ಪ್ರಶ್ನೆಗಳನ್ನು ಕೇಳದೇ ಬಿಡುವುದಿಲ್ಲ. ಇದನ್ನೂ ಓದಿ : ‘ಮದುವೆನೂ ಇಲ್ಲ, ರಿಂಗೂ ಇಲ್ಲ’ ಲಲಿತ್ ಮೋದಿಗೆ ತಿವಿದ ಸುಶ್ಮಿತಾ ಸೇನ್

    ಕೆಲ ದಿನಗಳ ಹಿಂದೆಯಷ್ಟೇ ಬಾಲಿವುಡ್ ನಟಿಯರಾದ ಸಾರಾ ಅಲಿಖಾನ್ ಮತ್ತು ಜಾಹ್ನವಿ ಕಪೂರ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇವರಿಬ್ಬರೂ ಕುಚಿಕು ಗೆಳೆತಿಯರು ಆಗಿರುವುದರಿಂದ ಮತ್ತು ಬಾಲಿವುಡ್ ನಲ್ಲಿ ಸಣ್ಣ ವಯಸ್ಸಿನಲ್ಲೇ ಡೇಟಿಂಗ್ ಮಾಡಿದವರು ಎಂದು ಹಣೆಪಟ್ಟ ಕಟ್ಟಿಕೊಂಡಿರುವುದರಿಂದ ಇವರು ಏನೆಲ್ಲ ಮಾತನಾಡಲಿದ್ದಾರೆ ಎನ್ನುವ ಕುತೂಹಲವಂತೂ ನೋಡುಗರಿಗೆ ಇತ್ತು. ಅದಕ್ಕೆ ತಕ್ಕಂತೆ ಕರಣ್ ಪ್ರಶ್ನೆ ಕೇಳಿದ್ದಾರೆ.

    ಅನೇಕ ಪ್ರಶ್ನೆಗಳನ್ನು ಈ ಜೋಡಿಗೆ ಕೇಳಿದ ಕರಣ್, ಅಚ್ಚರಿ ಎನ್ನುವಂತೆ ನೀವಿಬ್ಬರೂ ಒಂದೇ ಕುಟುಂಬದ ಹುಡುಗರ ಜೊತೆ ಡೇಟಿಂಗ್ ಮಾಡುತ್ತಿದ್ದೀರಿ ಅಲ್ಲವಾ ಎಂದು ಕರಣ್ ಕೇಳುತ್ತಾರೆ. ಈ ಪ್ರಶ್ನೆಯನ್ನು ಕನಸು ಮನಸಲ್ಲೂ ಎಣಿಸಿರದ ಸಾರಾ ಮತ್ತು ಜಾಹ್ನವಿ ಒಂದು ಕ್ಷಣ ಕಕ್ಕಾಬಿಕ್ಕಿಯಾಗುತ್ತಾರೆ. ಕೊನೆಗೆ ಆ ಹುಡುಗರು ಯಾರು ಎನ್ನುವುದನ್ನು ಕರಣ್ ಅವರೇ ಬಾಯ್ಬಿಡ್ತಾರೆ. ಮಹಾರಾಷ್ಟ್ರದ ಮಾಜಿ ಸಿಎಂ. ಶಿಂಧೆ ಅವರ ಮಕ್ಕಳಾದ ವೀರ ಪಹಾರಿ, ಶಿಖರ್ ಪಹಾರಿ ಹೆಸರು ಹೇಳುವ ಮೂಲಕ ಮತ್ತೆ ಅಚ್ಚರಿಗೆ ದೂಡುತ್ತಾರೆ ಕರಣ್. ಆದರೆ, ಈ ಕುರಿತು ಸಾರಾ ಆಗಲಿ, ಜಾಹ್ನವಿ ಆಗಲೇ ಏನೂ ಹೇಳದೇ ಮೌನಕ್ಕೆ ಜಾರುತ್ತಾರೆ.

    Live Tv
    [brid partner=56869869 player=32851 video=960834 autoplay=true]

  • ಕರಣ್ ಜೊತೆ ಫಸ್ಟ್ ನೈಟ್ ಗುಟ್ಟು ಬಿಚ್ಚಿಟ್ಟ ದೀಪಿಕಾ ಪಡುಕೋಣೆ ಪತಿ ರಣವೀರ್

    ಕರಣ್ ಜೊತೆ ಫಸ್ಟ್ ನೈಟ್ ಗುಟ್ಟು ಬಿಚ್ಚಿಟ್ಟ ದೀಪಿಕಾ ಪಡುಕೋಣೆ ಪತಿ ರಣವೀರ್

    ಯಾವುದೇ ಫಿಲ್ಟರ್ ಇಲ್ಲದೇ ಪ್ರಶ್ನೆಗಳಿಗೆ ಉತ್ತರಿಸುವ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋ ದಿನವೂ ಸುದ್ದಿಯಾಗುತ್ತಿದೆ. ಈಗಾಗಲೇ ಹಲವು ಕಂತುಗಳ ಚಿತ್ರೀಕರಣ ಕೂಡ ನಡೆದಿದ್ದು, ಅವುಗಳ ಪ್ರೋಮೋವನ್ನು ಪ್ರಚಾರಕ್ಕಾಗಿ ಪ್ರಸಾರ ಮಾಡಲಾಗುತ್ತಿದೆ. ಅಚ್ಚರಿಯ ಸಂಗತಿ ಅಂದರೆ, ಒಂದು ಕಂತಿನಲ್ಲಿ ರಣಬೀರ್ ಕಪೂರ್ ಪತ್ನಿ ಆಲಿಯಾ ಭಟ್ ಮತ್ತು ದೀಪಿಕಾ ಪಡುಕೋಣೆ ಪತಿ ರಣವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಈ ಎಪಿಸೋಡ್ ನ ಪ್ರೋಮೋ ಸಖತ್ ವೈರಲ್ ಆಗಿದೆ.

    ಆಲಿಯಾ ಭಟ್ ಅವರನ್ನು ಕರಣ್ ಜೋಹರ್ ಮದುವೆ ಬಗ್ಗೆ ಕೇಳುತ್ತಾರೆ. ಮದುವೆಯ ಮೊದಲನೇ ದಿನ ಹೇಗಿತ್ತು? ಎಂದು ಪ್ರಶ್ನೆ ಮಾಡುತ್ತಾರೆ. ಮೊದಲ ರಾತ್ರಿಯ ಬಗ್ಗೆಯೂ ಅವರು ಪ್ರಸ್ತಾಪಿಸುತ್ತಾರೆ. ಈ ಕುರಿತು ಬೋಲ್ಡ್ ಆಗಿಯೇ ಮಾತನಾಡಿರುವ ಆಲಿಯಾ ಭಟ್ ‘ಮದುವೆಯ ದಿನ ತುಂಬಾ ಸುಸ್ತಾಗಿರುತ್ತೇವೆ. ಅವತ್ತು ಫಸ್ಟ್ ನೈಟ್ ಕಷ್ಟ’ ಎಂದು ಹೇಳಿಕೊಳ್ಳುತ್ತಾರೆ. ಈ ಅಚ್ಚರಿಯ ಉತ್ತರವನ್ನು ಕೇಳಿದ ಕರಣ್, ಇದೇ ಪ್ರಶ್ನೆಯನ್ನು ರಣವೀರ್ ಸಿಂಗ್‍ಗೂ ಕೇಳುತ್ತಾರೆ. ಇದನ್ನೂ ಓದಿ: ಕಾಳಿ ಕೈಗೆ ಸಿಗರೇಟು : ಮಾಳವಿಕಾ ಅವಿನಾಶ್ ಛೀಮಾರಿ, ನಟ ಕಿಶೋರ್ ವಿಭಿನ್ನ ಪ್ರತಿಕ್ರಿಯೆ

    ರಣವೀರ್ ಸಿಂಗ್ ಕೂಡ ಮೊದಲ ರಾತ್ರಿಯ ಬಗ್ಗೆ ಅಷ್ಟೇ ಬೋಲ್ಡ್ ಆಗಿ ಮಾತನಾಡಿದ್ದು, ನಾನು ಫಸ್ಟ್ ನೈಟ್ ಗಾಗಿ ಕಾಯುತ್ತಿದ್ದೆ. ತುಂಬಾ ಸ್ಟ್ರಾಂಗ್ ಆಗಿದ್ದೆ. ನನಗೇನೂ ಹಾಗೆ ಅನಿಸಿಲ್ಲ. ಮದುವೆ ದಿನದ ರಾತ್ರಿಗೆ ಮತ್ತಷ್ಟು ಉತ್ಸುಕತೆಯಿಂದ ಕಾಯುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ರಣವೀರ್ ಮಾತು ಸಖತ್ ವೈರಲ್ ಕೂಡ ಆಗಿದೆ. ಆಲಿಯಾ ಮತ್ತು ರಣವೀರ್ ಮಾತುಗಳನ್ನು ಟ್ರೋಲ್ ಮಾಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಫಸ್ಟ್ ನೈಟ್ ಅನ್ನೋದೇ ಇಲ್ಲ ಎಂದು ಹೇಳಿ ಪತಿಯನ್ನೇ ಬೆಚ್ಚಿ ಬೀಳಿಸಿದ ನಟಿ ಆಲಿಯಾ ಭಟ್

    ಫಸ್ಟ್ ನೈಟ್ ಅನ್ನೋದೇ ಇಲ್ಲ ಎಂದು ಹೇಳಿ ಪತಿಯನ್ನೇ ಬೆಚ್ಚಿ ಬೀಳಿಸಿದ ನಟಿ ಆಲಿಯಾ ಭಟ್

    ತ್ತೀಚೆಗಷ್ಟೇ ಮದುವೆಯಾಗಿ, ಇದೀಗ ತಾನು ತಾಯಿ ಆಗುತ್ತಿರುವುದಾಗಿಯೂ ಘೋಷಣೆ ಮಾಡಿರುವ ಬಾಲಿವುಡ್ ನಟಿ ಆಲಿಯಾ ಭಟ್ ಮತ್ತೆ ಸುದ್ದಿಯಾಗಿದ್ದಾರೆ. ಮದುವೆಯಾಗಿ 50 ದಿನಕ್ಕೆ ತಾವು ತಾಯಿ ಆಗುತ್ತಿರುವುದಾಗಿ ತಿಳಿಸಿ, ಅಭಿಮಾನಿಗಳಿಗೆ ಅಚ್ಚರಿ ತಂದಿದ್ದರು. ಇದೀಗ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮತ್ತೊಂದು ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಇದೂ ಇನ್ನೂ ಅಚ್ಚರಿ ಮೂಡಿಸಿದೆ.

    ಬಾಲಿವುಡ್ ನಟ ಕರಣ್ ಜೋಹಾರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಜೋಡಿ ಭಾಗಿಯಾಗಿದೆ. ಈಗಾಗಲೇ ಇವರ ಕಂತು ಚಿತ್ರೀಕರಣ ಕೂಡ ಆಗಿದೆ. ಇದರ ಒಂದು ತುಣುಕನ್ನು ಕರಣ್ ಜೋಹಾರ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಪ್ರೋಮೋದಲ್ಲಿ ಆಲಿಯಾ ಆಡಿದ ಮಾತು ನಿಜಕ್ಕೂ ಅಚ್ಚರಿ ಮೂಡಿಸಿದೆ. ಶೋನ ರಾಪಿಡ್ ಫಯರ್ ರೌಂಡ್ ನಲ್ಲಿ ಕರಣ್ ಜೋಹಾರ್, ಆಲಿಯಾ ಭಟ್ ಅವರಿಗೆ ‘ಮದುವೆಯ ನಂತರ ನಿಮಗೆ ಅರ್ಥವಾದ ಒಂದು ಸಂಗತಿ ಯಾವುದು? ಎಂದು ಕೇಳುತ್ತಾರೆ. ಈ ಪ್ರಶ್ನೆಗೆ ಅಷ್ಟೇ ಚುರುಕಾಗಿ ಉತ್ತರ ನೀಡಿದ್ದಾರೆ ಆಲಿಯಾ ಭಟ್. ಇದನ್ನೂ ಓದಿ: ‘ಕೆಜಿಎಫ್ 2’, ‘ಆರ್.ಆರ್.ಆರ್’ ದಾಖಲೆ ಮುರಿಯತ್ತಾ ರಾಮ್ ಗೋಪಾಲ್ ವರ್ಮಾ ಅವರ ‘ಲಡ್ಕಿ’ ಸಿನಿಮಾ ?

    ಕರಣ್ ಪ್ರಶ್ನೆಗೆ ಉತ್ತರಿಸಿರುವ ಆಲಿಯಾ ಭಟ್,  ಮದುವೆ ದಿನ ಎಲ್ಲರೂ ಸುಸ್ತಾಗಿರುತ್ತದೆ. ಮದುವೆಯಾದ ನಂತರ, ಮದುವೆಯ ದಿನ ಸುಸ್ತಾಗಿರುತ್ತದೆ. ಹಾಗಾಗಿ ಫಸ್ಟ್ ನೈಟ್ ಅನ್ನುವುದೇ ಇರುವುದಿಲ್ಲ ಎಂದು ಹೇಳಿದ್ದಾರೆ. ಅದು ಪತಿ ಎದುರಿಗೆ ಇದ್ದಾಗಲೇ ಹೇಳಿದ್ದರಿಂದ ವಿಡಿಯೋ ಭಾರೀ ವೈರಲ್ ಕೂಡ ಆಗಿದೆ. ಅಲ್ಲದೇ, ಆಲಿಯಾ ಭಟ್ ಗೆ ಅನೇಕರು ಕಾಮೆಂಟ್ ಕೂಡ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕರಣ್‌ ಜೋಹರ್‌ ನಿರ್ಮಾಣದಲ್ಲಿ ಈ ಸ್ಟಾರ್‌ ನಟನಿಗೆ ನಾಯಕಿಯಾದ ರಶ್ಮಿಕಾ ಮಂದಣ್ಣ

    ಕರಣ್‌ ಜೋಹರ್‌ ನಿರ್ಮಾಣದಲ್ಲಿ ಈ ಸ್ಟಾರ್‌ ನಟನಿಗೆ ನಾಯಕಿಯಾದ ರಶ್ಮಿಕಾ ಮಂದಣ್ಣ

    ನ್ನಡತಿ ರಶ್ಮಿಕಾ ಮಂದಣ್ಣ ಸ್ಯಾಂಡಲ್‌ವುಡ್ ಮತ್ತು ದಕ್ಷಿಣದ ಸಿನಿಮಾಗಳಲ್ಲಿ ಮಿಂಚಿ ರಾರಾಜಿಸಿದ ಮೇಲೆ ಈಗ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈಗಾಗಲೇ ನಟಿಸಿರುವ ಬಾಲಿವುಡ್ ಚಿತ್ರಗಳೇ ರಿಲೀಸ್ ಆಗಿಲ್ಲ. ಈ ಬೆನ್ನಲ್ಲೇ ಹಿಂದಿ ಬಿಗ್ ಪ್ರಾಜೆಕ್ಟ್‌ವೊಂದು ರಶ್ಮಿಕಾ ಮಂದಣ್ಣಗೆ ಒಲಿದು ಬಂದಿದೆ. ಟೈಗರ್ ಶ್ರಾಫ್‌ಗೆ ಕಿರಿಕ್ ಸುಂದರಿ ರಶ್ಮಿಕಾ ನಾಯಕಿಯಾಗಲಿದ್ದಾರೆ.

    ಧರ್ಮ ಪ್ರೋಡಕ್ಷನ್ಸ್ ಅಡಿಯಲ್ಲಿ ಕರಣ್ ಜೋಹರ್ ನಿರ್ಮಾಣ ಮಾಡುತ್ತಿರುವ ಹೊಸ ಸಿನಿಮಾಗೆ ಹೊಸ ಜೋಡಿಯನ್ನ ತೆರೆಯ ಮೇಲೆ ತೋರಿಸುವ ಯೋಚನೆ ಇದ್ದು, ಬಾಲಿವುಡ್‌ನ ಸ್ಟಾರ್ ನಟ ಟೈಗರ್ ಶ್ರಾಫ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅವರನ್ನ ಆಯ್ಕೆ ಮಾಡಲಾಗಿದೆ. ಆ್ಯಕ್ಷನ್ ಕಥೆ ಜತೆ ಮುದ್ದಾದ ಪ್ರೇಮ ಕಥೆಯನ್ನ ಬೆಳ್ಳಿಪರದೆಯಲ್ಲಿ ತೋರಿಸಲು ಬರಹಗಾರ ಮತ್ತು ನಿರ್ದೇಶಕ ಶಶಾಂಕ್ ಖೈತಾನ್ ರೆಡಿಯಾಗಿದ್ದಾರೆ. ಇದನ್ನೂ ಓದಿ:ಹೆರಿಗೆಯ ವಿಡಿಯೋ ಹಂಚಿಕೊಂಡ ಸಂಜನಾ ಗಲ್ರಾನಿ

    ಯಂಗ್ ಟೈಗರ್ ಶ್ರಾಫ್ ಈ ಬಾರಿ ಸ್ಪೋರ್ಟ್ಸ್ ಕಥೆಯಲ್ಲಿ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. ಕ್ರಿಡಾಪಟುವಾಗಿ ಟೈಗರ್ ನಟಿಸಲಿದ್ದಾರೆ. ಎಂದೂ ಮಾಡಿರದ ಭಿನ್ನ ಕಥೆ ಪಾತ್ರದ ಮೂಲಕ ಟೈಗರ್ ಮತ್ತು ರಶ್ಮಿಕಾ ರೆಡಿಯಾಗಿದ್ದಾರೆ. ಈ ಹೊಸ ಜೋಡಿಯನ್ನ ಪ್ರೇಕ್ಷಕರು ಮೆಚ್ಚಿಕೊಳ್ತಾರಾ ಅಂತಾ ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಕಾಫಿ ವಿತ್ ಕರಣ್ ಶೋದಲ್ಲಿ ಕಾಣಿಸಿಕೊಳ್ಳಲು ಕೋಟಿ ರೂ ಕೇಳಿದ್ರಾ ರಣಬೀರ್ ಕಪೂರ್

    ಕಾಫಿ ವಿತ್ ಕರಣ್ ಶೋದಲ್ಲಿ ಕಾಣಿಸಿಕೊಳ್ಳಲು ಕೋಟಿ ರೂ ಕೇಳಿದ್ರಾ ರಣಬೀರ್ ಕಪೂರ್

    ಬಾಲಿವುಡ್ ನ ಖ್ಯಾತ ನಿರ್ದೇಶಕ, ನಟ ಕರಣ್ ಜೋಹಾರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪ್ರತಿಯೊಬ್ಬರಿಗೂ ಏನೋ ಒಂದು ರೀತಿಯಲ್ಲಿ ಹಿಂಜರಿಕೆ. ಕಾರಣ, ಕಾಫಿಗೆ ಫಿಲ್ಟರ್ ಇದ್ದರೆ ಕರಣ್ ಗೆ ಈ ಫಿಲ್ಟರ್ ಕಡಿಮೆ. ಹಾಗಾಗಿಯೇ ವೈಯಕ್ತಿಕ ವಿಚಾರಗಳನ್ನೆಲ್ಲ ಅವರು ಕೆದುಕುತ್ತಾ ಹೋಗುತ್ತಾರೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕನಿಷ್ಠ ಮಾನದಂಡ ಒಂದಷ್ಟು ವಿವಾದಿಗಳನ್ನು ಅತಿಥಿಗಳು ಮೈಮೇಲೆ ಹಾಕಿಕೊಂಡರಬೇಕು.

    ಕೇವಲ ವಿವಾದಗಳು ಮಾತ್ರವಲ್ಲ, ಯಾವುದೇ ಮುಚ್ಚುಮರೆ ಇಲ್ಲದೇ ಮಾತನಾಡಬೇಕು. ಬೆಡ್ ರೂಮ್ ವಿಷಯದಿಂದ ಹಿಡಿದು ತಾವು ಹಾಕುವ ಒಳಉಡುಪುಗಳ ಬಣ್ಣದ ವಿಷಯವನ್ನೂ ಕರಣ್ ಸಡನ್ನಾಗಿ ಮಾತನಾಡುತ್ತಾರೆ. ಅದಕ್ಕೆ ಉತ್ತರಿಸಲೇಬೇಕು. ಹಾಗಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಿಲಿಬ್ರಿಟಿಗಳು ಒಪ್ಪುವುದಿಲ್ಲ. ಬರಲೇಬೇಕು ಎಂಬ ಒತ್ತಡವಿದ್ದರೆ ಸಂಭಾವನೆಗೆ ಡಿಮಾಂಡ್ ಮಾಡಲಾಗುತ್ತದೆ. ಇಂಥದ್ದೇ ಸಂಭಾವನೆ ಕಾರಣಕ್ಕಾಗಿ ರಣಬೀರ್ ಕಪೂರ್ ಸುದ್ದಿಯಾಗಿದ್ದಾರೆ.  ಇದನ್ನೂ ಓದಿ: ಎನ್.ಎಫ್.ಟಿ (NFT) ಮಾರುಕಟ್ಟೆಗೆ ಕನ್ನಡದ ಮತ್ತೊಬ್ಬ ಸೂಪರ್ ಸ್ಟಾರ್ ಎಂಟ್ರಿ

    ಈಗಾಗಲೇ ಹಲವು ಕಂತುಗಳನ್ನು ಚಿತ್ರೀಕರಿಸಿರುವ ಕರಣ್ ಜೋಹಾರ್, ಆಲಿಯಾ ಭಟ್ ಜೊತೆ ರಣಬೀರ್ ಕಪೂರ್ ಅವರನ್ನೂ ಆಹ್ವಾನಿಸಿದ್ದರಂತೆ. ಆದರೆ, ಈ ಕಾರ್ಯಕ್ರಮಕ್ಕೆ ಬರಲು ರಣಬೀರ್ ಒಪ್ಪಿಲ್ಲ. ಬರುವುದಾದರೆ ಕೋಟಿ ಲೆಕ್ಕದಲ್ಲಿ ಸಂಭಾವನೆ ನೀಡಬೇಕು ಎಂದು ಕೇಳಿದ್ದಾರಂತೆ. ಹಾಗಾಗಿಯೇ ರಣಬೀರ್ ಕೈ ಬಿಟ್ಟು ಕೇವಲ ಆಲಿಯಾ ಭಟ್ ಅವರನ್ನಷ್ಟೇ ಕಾರ್ಯಕ್ರಮಕ್ಕೆ ಕರೆಯಿಸಿಕೊಂಡಿದ್ದಾರೆ. ಆ ಎಸಿಸೋಡ್ ಶೂಟಿಂಗ್ ಆಗಿದೆ. ಆಲಿಯಾ ಸಖತ್ ಬೋಲ್ಡ್ ಆಗಿಯೇ ಮಾತನಾಡಿದ್ದಾರೆ ಎನ್ನುವ ಸುದ್ದಿಯಿದೆ.

    Live Tv
    [brid partner=56869869 player=32851 video=960834 autoplay=true]

  • ಕರಣ್ ಜೋಹರ್ ಟೀಮ್ ಸೇರಿಕೊಂಡ ಸಮಂತಾ: ಹೀರೋ ಯಾರು ಗೊತ್ತಾ?

    ಕರಣ್ ಜೋಹರ್ ಟೀಮ್ ಸೇರಿಕೊಂಡ ಸಮಂತಾ: ಹೀರೋ ಯಾರು ಗೊತ್ತಾ?

    ಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ತಮ್ಮ ಫ್ಯಾನ್ಸ್‌ಗೆ ಮತ್ತೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಬಾಲಿವುಡ್‌ನಲ್ಲಿ ಗ್ರ್ಯಾಂಡ್ ಆಗಿ ಎಂಟ್ರಿ ಕೊಡಲಿದ್ದಾರೆ. ಕರಣ್ ಜೋಹರ್ ಕ್ಯಾಂಪ್‌ಗೆ ʻಪುಷ್ಪʼ ಬ್ಯೂಟಿ ಸಮಂತಾ ಸೇರಿಕೊಂಡಿದ್ದಾರೆ.

    `ದಿ ಫ್ಯಾಮಿಲಿಮೆನ್ 2′, `ಪುಷ್ಪ’ ಸಿನಿಮಾ ಸಕ್ಸಸ್ ನಂತರ ಸಮಂತಾಗೆ ಬಾಲಿವುಡ್ ಬಂಪರ್ ಆರ‍್ಸ್ ಹರಿದು ಬರುತ್ತಿದೆ. ಈಗ ಕರಣ್ ಜೋಹರ್ ನಿರ್ಮಾಣದ ಸಿನಿಮಾದಲ್ಲಿ ಸಮಂತಾಗೆ ನಟಿಸಲು ಬುಲಾವ್ ಬಂದಿದೆಯಂತೆ. ಒಂದೊಳ್ಳೆ ಕಥೆಯ ಮೂಲಕ ಕಮಾಲ್ ಮಾಡಲಿದ್ದಾರೆ. ಇನ್ನೊಂದು ಸೂಪರ್ ಗುಡ್ ನ್ಯೂಸ್ ಅಂದ್ರೆ ಬಿಟೌನ್ ಖಿಲಾಡಿ ಅಕ್ಷಯ್ ಕುಮಾರ್‌ಗೆ ನಾಯಕಿಯಾಗಿ ಸಮಂತಾ ಫಿಕ್ಸ್ ಆಗಿದ್ದಾರೆ. ಇದನ್ನೂ ಓದಿ:ಮತ್ತೆ ನಿರ್ದೇಶನದತ್ತ ಮುಖ ಮಾಡಿದ ಅಜಯ್ ದೇವಗನ್

    ಕರಣ್ ನೇತೃತ್ವದಲ್ಲಿ ಅಕ್ಷಯ್ ಕುಮಾರ್ ಮತ್ತು ಸಮಂತಾ ಒಟ್ಟಿಗೆ ತೆರೆಯ ಮೇಲೆ ಮಿಂಚಲಿದ್ದಾರೆ. ಆದರೆ ಇಷ್ಟೇಲ್ಲಾ ಈ ಚಿತ್ರದ ಬಗ್ಗೆ ಚರ್ಚೆ ಆಗುತ್ತಿದ್ದರು. ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇತ್ತೀಚೆಗಷ್ಟೇ ಸಮಂತಾ, ಅಕ್ಷಯ್ ಕಾಫಿ ವಿತ್ ಕರಣ್ ಟಾಕ್ ಶೋನಲ್ಲಿ ಕಾಣಿಸಿಕೊಂಡಿದ್ದರು. ಈ ಫೋಟೋಗಳು ಕೂಡ ಈಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಸೌತ್ ಸಿನಿಮಾದಲ್ಲಿ ಕ್ರೇಜ್ ಹುಟ್ಟು ಹಾಕಿರೋ ಸಮಂತಾ ಬಾಲಿವುಡ್‌ನಲ್ಲೂ ಗೆಲ್ಲೋ ಕುದುರೆ ಆಗುತ್ತಾರಾ ಅಂತಾ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ‘ಕಾಫಿ ವಿತ್ ಕರಣ್’ ಕಾರ್ಯಕ್ರಮಕ್ಕೆ ಕೈ ಕೊಟ್ಟ ಸಮಂತಾ?

    ‘ಕಾಫಿ ವಿತ್ ಕರಣ್’ ಕಾರ್ಯಕ್ರಮಕ್ಕೆ ಕೈ ಕೊಟ್ಟ ಸಮಂತಾ?

    ಬಾಲಿವುಡ್ ನಿರ್ದೇಶಕ, ನಿರ್ಮಾಪಕ ಕರಣ್ ಜೋಹಾರ್ ನಡೆಸಿಕೊಡುತ್ತಿದ್ದ ಕಾಫಿ ವಿತ್ ಕರಣ್ ಕಾರ್ಯಕ್ರಮ ಸಿಕ್ಕಾಪಟ್ಟೆ ಸಂಚಲನ ಮೂಡಿಸಿತ್ತು. ಈ ಶೋನಿಂದಾಗಿ ಅನೇಕ ಗಾಸಿಪ್ ಗಳು ಬಾಲಿವುಡ್ ನಲ್ಲಿ ಹುಟ್ಟಿಕೊಂಡಿದ್ದವು. ಅಲ್ಲದೇ, ನೇರವಂತಿಕೆ ಮಾತಿನಿಂದಾಗಿ ಈ ಕಾರ್ಯಕ್ರಮ ಯಶಸ್ಸಿ ಆಗಿತ್ತು. ಬಾಲಿವುಡ್ ನ ಅನೇಕ ಸ್ಟಾರ್ ನಟ ನಟಿಯರು ಈ ಶೋನಲ್ಲಿ ಭಾಗಿಯಾದ ಹೆಗ್ಗಳಿಕೆ ಇದರದ್ದು. ಈ ಬಾರಿ ಕರಣ್, ಈ ಕಾರ್ಯಕ್ರಮವನ್ನು ಓಟಿಟಿಗಾಗಿ ಮಾಡುತ್ತಿದ್ದಾರೆ.

    ಈ ಶೋ ದಕ್ಷಿಣದ ಖ್ಯಾತ ನಟಿ ಸಮಂತಾ ಅವರ ಎಪಿಸೋಡ್ ನಿಂದ ಶುರುವಾಗುತ್ತಿದೆ ಎಂದು ಹೇಳಲಾಗಿತ್ತು. ಅಲ್ಲದೇ ಈ ಶೋನಲ್ಲಿ ಅವರು ಭಾಗಿಯಾಗಿದ್ದು, ಆ ಕಂತನ್ನು ಶೂಟ್ ಮಾಡಲಾಗಿದೆ ಎಂದೂ ಸುದ್ದಿ ಆಯಿತು. ಆದರೆ, ಈವರೆಗೂ ಸಮಂತಾ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿಲ್ಲವಂತೆ. ಆಯೋಜಕರಿಗೆ ಶೋನಲ್ಲಿ ಭಾಗವಹಿಸಲು ಕರೆ ಬಂದಿದ್ದರೂ, ಇನ್ನೂ ಅವರು ಒಪ್ಪಿಕೊಂಡಿಲ್ಲ ಎನ್ನುತ್ತಿವೆ ಮೂಲಗಳು. ಇದನ್ನೂ ಓದಿ:ಪಿಂಕ್ ಕಲರ್ ಸೀರೆಯಲ್ಲಿ ಹಾಟ್ ಆಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ

    ಸಮಂತಾ ಅವರ ವೈವಾಹಿಕ ಬದುಕಿನಲ್ಲಿ ಬಿರುಗಾಳಿ ಎದ್ದಿದೆ. ಅಲ್ಲದೇ ಡಿವೋರ್ಸ್ ನಂತರ ಅವರ ಜೀವನ ನಾನಾ ತಿರುವುಗಳನ್ನು ಪಡೆದುಕೊಂಡಿದೆ. ಈ ಎಲ್ಲದರ ಕುರಿತು ಸಮಂತಾ ಅವರಿಂದ ಬಾಯ್ಬಿಡಿಸುವ ಯೋಚನೆ ಕರಣ್ ಅವರಿಗಿತ್ತು. ಈ ಎಪಿಸೋಡ್ ಮೂಲಕ ಶೋ ಶುರುವಾದರೆ, ಗ್ರ್ಯಾಂಡ್ ಓಪನಿಂಗ್ ಸಿಗಲಿದೆ ಎಂದು ನಂಬಲಾಗಿತ್ತು. ಅದು ನಿಜವೂ ಆಗಿತ್ತು. ಆದರೆ, ಈವರೆಗೂ ಸಮಂತಾ ಶೂಟಿಂಗ್ ನಲ್ಲಿ ಭಾಗಿಯಾಗಿಲ್ಲ ಎಂದು ಗೊತ್ತಾಗಿದೆ.

    Live Tv