ಬಾಲಿವುಡ್ ಸಿನಿಮಾ ರಂಗದ ಖ್ಯಾತ ನಟ ಟೈಗರ್ ಶ್ರಾಫ್ ಶೋವೊಂದರಲ್ಲಿ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ತಾವು ವಿಮಾನದಲ್ಲೇ ರೊಮ್ಯಾನ್ಸ್ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಕಾಫಿ ವಿತ್ ಕರಣ್ ಶೋನಲ್ಲಿ ಭಾಗಿಯಾಗಿದ್ದ ಅವರು, ತಾವು ವಿಮಾನದಲ್ಲಿ ರೊಮ್ಯಾನ್ಸ್ ಮಾಡಿರುವ ವಿಚಾರವನ್ನು ಬಹಿರಂಗ ಪಡಿಸಿದರು.

ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಡೇಟಿಂಗ್ ಮಾಡುತ್ತಿರುವ ವಿಚಾರ, ಬಿಟೌನ್ ನಲ್ಲಿ ಭಾರೀ ಸದ್ದು ಮಾಡಿತ್ತು. ಅಲ್ಲದೇ, ಇಬ್ಬರೂ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಎನ್ನುವ ವಿಷಯವೂ ಹರಿದಾಡುತ್ತಿದೆ. ಈ ಜೋಡಿ ಒಟ್ಟಿಗೆ ಹಲವು ಕಾರ್ಯಕ್ರಮಗಳಲ್ಲೂ ಭಾಗಿಯಾಗಿದ್ದಾರೆ. ಹಾಗಾಗಿ ದಿಶಾ ಜೊತೆಯೇ ವಿಮಾನದಲ್ಲಿ ರೊಮ್ಯಾನ್ಸ್ ಮಾಡಿದರಾ ಎನ್ನುವ ಪ್ರಶ್ನೆ ಮೂಡುವುದು ಸಹಜ. ಆದರೆ, ವಿಮಾನದಲ್ಲಿ ಯಾರ ಜೊತೆ ಟೈಗರ್ ರೊಮ್ಯಾನ್ಸ್ ಮಾಡಿದರು ಎನ್ನುವ ಕುರಿತು ಹೇಳಲಿಲ್ಲ. ಇದನ್ನೂ ಓದಿ:ಹೂವುಗಳನ್ನ ದೇಹಕ್ಕೆ ಅಂಟಿಸಿ, ಪ್ಲಾಸ್ಟಿಕ್ ಕವರ್‌ನಲ್ಲಿ ಮೈಮುಚ್ಚಿಕೊಂಡು ಬಂದ ಉರ್ಫಿ

ದಿಶಾ ಪಟಾನಿ ಮತ್ತು ಟೈಗರ್ ಶ್ರಾಫ್ ಡೇಟಿಂಗ್ ಕುರಿತಾಗಿಯೂ ಕರಣ್ ಪ್ರಶ್ನೆಗಳನ್ನು ಕೇಳಿದರು. ಆ ಹುಡುಗಿ ಜೊತೆ ಡೇಟಿಂಗ್ ಅಂಥದ್ದು ಏನೂ ಇಲ್ಲ. ದಿಶಾ ನನ್ನ ಬೆಸ್ಟ್ ಫ್ರೆಂಡ್ ಎಂದಷ್ಟೇ ಚುಟುಕಾಗಿ ಉತ್ತರಿಸಿ ಅನುಮಾನ ಮೂಡಿಸಿದರು ಟೈಗರ್. ಕೆಲ ದಿನಗಳ ಹಿಂದೆಯಷ್ಟೇ ಟೈಗರ್ ಮತ್ತು ದಿಶಾ ಇಬ್ಬರೂ ಬೇರೆ ಬೇರೆ ಆಗಿದ್ದಾರೆ ಎನ್ನುವ ಸುದ್ದಿ ಇತ್ತು. ಆದರೆ, ಈ ಕುರಿತು ಟೈಗರ್ ಏನನ್ನೂ ಹೇಳಲು ಇಷ್ಟ ಪಡಲಿಲ್ಲ.














ನಾನು ರಶ್ಮಿಕಾ ಅವರೊಂದಿಗೆ ಎರಡು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ರಶ್ಮಿಕಾ ನನ್ನ ಡಾರ್ಲಿಂಗ್. ಅವರನ್ನ ನಾನು ತುಂಬಾ ಇಷ್ಟಪಡುತ್ತೇನೆ. ನನಗೆ ರಶ್ಮಿಕಾ ನಿಜವಾಗಿಯೂ ಒಳ್ಳೆಯ ಸ್ನೇಹಿತೆ. ಚಲನಚಿತ್ರಗಳಲ್ಲಿ ಅಭಿನಯಿಸುವಾಗ ನಮ್ಮ ಮಧ್ಯೆ ಉತ್ತಮ ಬಂಧ ಸೃಷ್ಟಿಯಾಯಿತು. ಸಾಮಾನ್ಯವಾಗಿ ಓರ್ವ ಹುಡುಗಿಯ ಕಣ್ಣಲ್ಲಿ ಕಣ್ಣಿಟ್ಟು ನೋಡುವುದಕ್ಕೂ ನಾನು ತುಂಬಾ ಸಮಯ ತೆಗೆದುಕೊಳ್ಳುತ್ತೇನೆ. ಆದರೆ, ಚಿತ್ರೀಕರಣದ ಸಮಯದಲ್ಲಿ ನಮ್ಮಿಬ್ಬರ ನಡುವೆ ಒಳ್ಳೆಯ ಸ್ನೇಹ ಬೆಳೆಯಿತು ಎಂದಿದ್ದಾರೆ.
ವಿಜಯ್ ದೇವರಕೊಂಡ ರಿಲೇಷನ್‌ಶಿಪ್ ಸ್ಟೇಟಸ್ ಕೇಳಿದಾಗ, ಒಂದಲ್ಲಾ ಒಂದು ದಿನ ನನಗೆ ಮದುವೆಯಾಗಿ, ಮಕ್ಕಳಾಗುತ್ತದೆ. ಆ ದಿನ ನನ್ನ ಪಾರ್ಟರ್ ಬಗ್ಗೆ ಜೋರಾಗಿ ಹೇಳುತ್ತೇನೆ. ಅಲ್ಲಿಯವರೆಗೂ ನನ್ನನ್ನು ಇಷ್ಟಪಡುವವರಿಗೆ ನಾನು ನೋವು ಕೊಡಬಾರದು. ಎಲ್ಲರೂ ಇಷ್ಟೊಂದು ಪ್ರೀತಿ ಕೊಡುವಾಗ ನಾನು ಇನ್ನೊಬ್ಬರೊಂದಿಗೆ ರಿಲೇಷನ್‌ಶಿಪ್‌ನಲ್ಲಿದ್ದೇನೆ ಎಂದು ಹೇಳಲು ಬಯಸುವುದಿಲ್ಲ ಎಂದು ಮಾತನಾಡಿದ್ದಾರೆ. ಕಡೆಗೂ ತಮ್ಮ ಲವ್ ಲೈಫ್ ಬಗ್ಗೆ ಎಲ್ಲೂ ತುಟಿಕ್ ಪಿಟಿಕ್ ಎನ್ನಲಿಲ್ಲ.







`ಕಾಫಿ ವಿತ್ ಕರಣ್ ಸೀಸನ್ 7’ಕ್ಕೆ ಮೊದಲ ಅತಿಥಿಯಾಗಿ ರಣ್‌ವೀರ್ ಮತ್ತು ಆಲಿಯಾ ಭಾಗವಹಿಸಿದ್ದರು. ಎರಡನೇ ಎಪಿಸೋಡ್‌ಗೆ ಸಮಂತಾ ಮತ್ತು ಅಕ್ಷಯ್ ಕುಮಾರ್ ಭಾಗವಹಿಸಿದ್ದರು. ಈ ಶೋನಲ್ಲಿ ಹೇಳಿರುವ ಅದೆಷ್ಟೋ ಮಾತುಗಳು ಈಗ ಸಖತ್ ಸದ್ದು ಮಾಡುತ್ತಿದೆ. ಇದೀಗ ಶೋನಲ್ಲಿ ನಿರೂಪಕ ಕರಣ್ ಜೋಹರ್ ಅಕ್ಷಯ್‌ಗೆ ನವವಿವಾಹಿತರಾದ ಆಲಿಯಾ ರಣ್‌ಬೀರ್, ಮತ್ತು ವಿಕ್ಕಿ ಕತ್ರಿನಾ ದಂಪತಿಗೆ ದಾಂಪತ್ಯ ಜೀವನಕ್ಕೆ ಎನು ಸಲಹೆ ನೀಡುತ್ತೀರಾ ಎಂದು ಕೇಳಿದ್ದಾರೆ. ಇದನ್ನೂ ಓದಿ:
ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಚಿತ್ರರಂಗದ ಬೆಸ್ಟ್ ದಂಪತಿಗಳಲ್ಲಿ ಒಬ್ಬರು. ಸಾಕಷ್ಟು ವರ್ಷಗಳಿಂದ ಒಬ್ಬರಿಗೊಬ್ಬರು ಸಾಥ್ ನೀಡುತ್ತಲೇ ಬಂದಿದ್ದಾರೆ. ಈಗ ಸುಂದರ ಸಂಸಾರಕ್ಕೆ ಬಿಟೌನ್ ನವಜೋಡಿಗೆ ಕಿವಿ ಮಾತೊಂದನ್ನ ಅಕ್ಷಯ್ ಕುಮಾರ್ ಹೇಳಿದ್ದಾರೆ. ರಣ್‌ಬೀರ್‌ಗೆ ಹೆಂಡತಿಯನ್ನು ಸಂತೋಷವಾಗಿಡಿ, ಆಗ ಜೀವನ ಸುಂದರವಾಗಿರುತ್ತದೆ ಎಂದು ಹೇಳಿದ್ದಾರೆ. ಕತ್ರಿನಾ ಜತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರೋದರಿಂದ ಕತ್ರಿನಾಗೆ, ವಿಕ್ಕಿ ಕಿವಿಯನ್ನು ತಿನ್ನಬೇಡಿ, ನಿಧಾನವಾಗಿ ಹೇಳಿ ಎಂದು ಸಲಹೆ ನೀಡಿದ್ದಾರೆ.