Tag: Karan Johar

  • ಬಿಗ್ ಬಾಸ್ ನಿರೂಪಣೆಗೆ ಸಲ್ಮಾನ್ ಖಾನ್ ಬ್ರೇಕ್

    ಬಿಗ್ ಬಾಸ್ ನಿರೂಪಣೆಗೆ ಸಲ್ಮಾನ್ ಖಾನ್ ಬ್ರೇಕ್

    ಕಿರುತೆರೆಯ ಬಿಗ್ ಶೋ ಬಿಗ್ ಬಾಸ್ (Bigg Boss Hindi) ಸೀಸನ್ 16 ಹಿಂದಿ ಸಾಕಷ್ಟು ವಿಚಾರಗಳಿಂದ ಹೈಲೈಟ್ ಆಗುತ್ತಿದೆ. ಸಲ್ಮಾನ್ ಖಾನ್(Salman Khan) ನೇತೃತ್ವದಲ್ಲಿ ಶೋ ಅದ್ಭುತವಾಗಿ ಮೂಡಿ ಬರುತ್ತಿದೆ. ಆದರೆ ಈಗ ದೊಡ್ಮನೆಯಿಂದ ಹೊರಗೆ ಇರಬೇಕಾದ ಪರಿಸ್ಥಿತಿಯನ್ನ ಸಲ್ಮಾನ್ ಎದುರಿಸುತ್ತಿದ್ದಾರೆ. ಅನಾರೋಗ್ಯದ ನಿಮಿತ್ತ ಸಲ್ಲು ಶೋನಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

    ಹಿಂದಿ ಬಿಗ್ ಬಾಸ್‌ಗೆ(Bigg Boss) ಅಪಾರ ಅಭಿಮಾನಿಗಳಿದ್ದಾರೆ. ಅದರಲ್ಲೂ ವೀಕೆಂಡ್‌ನಲ್ಲಿ ಸಲ್ಲುನ ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿರುತ್ತಾರೆ. ಆದರೆ ಇದೀಗ ಫ್ಯಾನ್ಸ್‌ಗೆ ಸ್ಯಾಡ್ ನ್ಯೂಸ್‌ವೊಂದು ಸಿಕ್ಕಿದೆ. ಸಲ್ಮಾನ್ ಖಾನ್ ಇದೀಗ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಬಿಗ್ ಬಾಸ್‌ನಿಂದ ಕೊಂಚ ಬ್ರೇಕ್ ತೆಗೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ:ನಾನು ಸಿಂಗಲ್, ನಂಗೂ ಜೋಡಿ ಬೇಕು ಎಂದು ಬಿಗ್ ಬಾಸ್‌ಗೆ ಕಾವ್ಯಶ್ರೀ ಬೇಡಿಕೆ

    ಸಲ್ಲು ಡೆಂಗ್ಯೂ ಇರುವುದು ಪತ್ತೆಯಾಗಿದೆ. ಹಾಗಾಗಿ ಅವರ ಸ್ಥಿತಿ ಉತ್ತಮವಾಗಿಲ್ಲ. ಹಾಗಾಗಿ ಬಿಗ್ ಬಾಸ್ ನಿರೂಪಣೆಗೆ ಸ್ವಲ್ಪ ವಿರಾಮ ತೆಗೆದುಕೊಂಡಿದ್ದಾರೆ. ಶುಕ್ರವಾರ ಮತ್ತು ಶನಿವಾರದ ಸಂಚಿಕೆಗಳು ಗುರುವಾರವೇ ಶೂಟ್ ಮಾಡುತ್ತಾರೆ. ಈ ಶೂಟ್‌ಗೆ ನಟ ಗೈರಾಗಿದ್ದಾರೆ. ಇನ್ನೂ ನೆಚ್ಚಿನ ನಟ ಸಲ್ಲು ಶೀಘ್ರದಲ್ಲಿ ಗುಣಮುಖವಾಗಲಿ ಎಂದು ಫ್ಯಾನ್ಸ್ ಹಾರೈಸಿದ್ದಾರೆ.

    ನಿರ್ಮಾಪಕ ಕರಣ್ ಜೋಹರ್ (Karan Johar) ಅವರು ಜನಪ್ರಿಯ ರಿಯಾಲಿಟಿ ಟಿವಿ ಶೋ ಬಿಗ್ ಬಾಸ್ ೧೬ರ ಮುಂಬರುವ ಮೂರು ಸಂಚಿಕೆಗಳನ್ನು ಹೋಸ್ಟ್ ಮಾಡಲಿದ್ದಾರೆ ಎಂದು ಕಾರ್ಯಕ್ರಮದ ಮೂಲಗಳು ತಿಳಿಸಿವೆ. ಕರಣ್ ಅವರು ಸಲ್ಮಾನ್ ಸ್ಥಾನವನ್ನು ತುಂಬುತ್ತಿದ್ದಾರೆ. ಅವರು ದೀಪಾವಳಿ ವಿಶೇಷ ಸೇರಿದಂತೆ ಬಿಗ್ ಬಾಸ್‌ನ ಮೂರು ಸಂಚಿಕೆಗಳಿಗೆ ಚಿತ್ರೀಕರಣ ಮಾಡಲಿದ್ದಾರೆ. ಇದು ಶನಿವಾರ ಮತ್ತು ಭಾನುವಾರದ ಬದಲಾಗಿ ಸೋಮವಾರ ಪ್ರಸಾರವಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಪತ್ನಿ ಜೊತೆ ಸೆಕ್ಸ್ ಎಂಜಾಯ್ ಮಾಡ್ತೀನಿ, ಕರಣ್ ಜೋಹಾರ್ ರೀತಿ ಅಲ್ಲ: ಕಾಶ್ಮೀರ್ ಫೈಲ್ಸ್ ನಿರ್ದೇಶಕನ ಟಾಂಗ್

    ಪತ್ನಿ ಜೊತೆ ಸೆಕ್ಸ್ ಎಂಜಾಯ್ ಮಾಡ್ತೀನಿ, ಕರಣ್ ಜೋಹಾರ್ ರೀತಿ ಅಲ್ಲ: ಕಾಶ್ಮೀರ್ ಫೈಲ್ಸ್ ನಿರ್ದೇಶಕನ ಟಾಂಗ್

    ಬಾಲಿವುಡ್ ನಿರ್ದೇಶಕ ಕರಣ್ ಜೋಹಾರ್ (Karan Johar) ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದ ಬಗ್ಗೆ ದಿ ಕಾಶ್ಮೀರ್ ಫೈಲ್ಸ್ (The Kashmir Files) ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೆಂಡ ಕಾರಿದ್ದಾರೆ. ಅಂತಹ ಸೆಕ್ಸ್ ಆಧರಿಸಿದ ಕಾರ್ಯಕ್ರಮಕ್ಕೆ ನನ್ನನ್ನು ಕರೆಯುವುದೂ ಇಲ್ಲ, ನಾನು ಹೋಗುವುದೂ ಇಲ್ಲ ಎಂದು ಹೇಳಿದ್ದಾರೆ. ಕರಣ್ ಜೋಹಾರ್ ಕೇಳುವ ಪ್ರಶ್ನೆಗಳಿಗೂ ಆಕ್ಷೇಪ ವ್ಯಕ್ತಪಡಿಸಿರುವ ಅಗ್ನಿಹೋತ್ರಿ (Vivek Agnihotri) ಕಾರ್ಯಕ್ರಮಕ್ಕೆ ಹೋಗುವವರ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ.

    ಕಾಫಿ ವಿತ್ ಕರಣ್ (Koffee With Karan) ಕಾರ್ಯಕ್ರಮಕ್ಕೆ ಹೋಗುವುದು ಎಂದರೆ ನಮ್ಮ ಮರ್ಯಾದೆಯನ್ನು ನಾವೇ ಕಳೆದುಕೊಂಡಂತೆ. ನಮ್ಮ ಸೆಕ್ಸ್ ಲೈಫ್ ಹೇಳಿಕೊಳ್ಳುವುದಕ್ಕೆ ಅಲ್ಲಿಗೆ ಹೋಗಬೇಕಾ? ಅದು ಹೇಳಿಕೊಳ್ಳುವಂತಹ ವಿಷಯವಾ? ಡೇಟಿಂಗ್, ಲವ್, ಬ್ರೇಕ್ ಅಪ್, ಸೆಕ್ಸ್ ಬರೀ ಇದರ ಸುತ್ತಲೇ ಇಡೀ ಕಾರ್ಯಕ್ರಮ ರೂಪುಗೊಂಡಿರುತ್ತದೆ. ಅದೊಂದು ರೀತಿಯಲ್ಲಿ ಅಸಹ್ಯ ಅನಿಸುವಂಥದ್ದು ಎಂದಿದ್ದಾರೆ ವಿವೇಕ್. ಇದನ್ನೂ ಓದಿ:ಲಾಡ್ಜ್ ಕೋಣೆಯಲ್ಲಿ ಶವವಾಗಿ ಪತ್ತೆಯಾದ ನಟಿ ಆಕಾಂಕ್ಷಾ ಮೋಹನ್

    ನನ್ನ ಲೈಫ್ ಸೆಕ್ಸ್ ಸುತ್ತ ಇಲ್ಲ. ನಾನು ಮಾಡಬೇಕಿರುವ ಕೆಲಸ ತುಂಬಾ ಇದೆ. ಸೆಕ್ಸ್ ಅನ್ನುವುದು ತುಂಬಾ ಮಹತ್ವವಾದದ್ದು ಏನೂ ಇಲ್ಲ. ನಾನು ಸೆಕ್ಸ್ (Sex) ಅನ್ನು ನನ್ನ ಹೆಂಡತಿ ಜೊತೆ ಎಂಜಾಯ್ ಮಾಡುತ್ತೇನೆ. ಕರಣ್ ಜೋಹಾರ್ ತರಹ ಅಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ. ಇಂತಹ ಕಾರಣಗಳಿಗಾಗಿಯೇ ನಾನು ಕಾಫಿ ವಿತ್ ಕರಣ್ ಕಾರ್ಯಕ್ರಮಕ್ಕೆ ಹೋಗಲಾರೆ ಎಂದು ಹೇಳಿದ್ದಾರೆ ಅಗ್ನಿಹೋತ್ರಿ.

    ಕರಣ್ ಜೋಹಾರ್ ನಿರ್ಮಾಣದ ಬ್ರಹ್ಮಾಸ್ತ್ರ ಸಿನಿಮಾ ಬಗ್ಗೆ ಅಗ್ನಿಹೋತ್ರಿ ಕಾಮೆಂಟ್ ಮಾಡಿದ್ದರು. ಬೈಕಾಟ್ ಬ್ರಹ್ಮಾಸ್ತ್ರಕ್ಕೆ ಪರೋಕ್ಷೆವಾಗಿ ಇವರು ಬೆಂಬಲ ಸೂಚಿಸಿದ್ದರು. ಕಂಗನಾ ರಣಾವತ್ ಮಾತಿಗೆ ಬೆಂಬಲವನ್ನೂ ಸೂಚಿಸಿದ್ದರು. ನಂತರ ಬ್ರಹ್ಮಾಸ್ತ್ರಕ್ಕೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ. ನನ್ನನ್ನು ಬಿಟ್ಟು ಬಿಡಿ ಎಂದು ನೆಟ್ಟಿಗರನ್ನು ಕೇಳಿದ್ದರು. ಇದೀಗ ಮತ್ತೆ ಕರಣ್ ಬಗ್ಗೆ ಗುಡುಗಿದ್ದಾರೆ. ಸೆಕ್ಸ್ ವಿಚಾರ ಇಟ್ಕೊಂಡು ತಿವಿದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಲವ್ ಬ್ರೇಕ್ ಅಪ್ ಗೆ ಕಾರಣನಾದ ಕರಣ್ ಜೋಹಾರ್

    ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಲವ್ ಬ್ರೇಕ್ ಅಪ್ ಗೆ ಕಾರಣನಾದ ಕರಣ್ ಜೋಹಾರ್

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ ಡೇಟಿಂಗ್ (Dating) ವಿಚಾರ ಹಲವು ವರ್ಷಗಳಿಂದ ಹರಿದಾಡುತ್ತಲೇ ಇದೆ. ಒಟ್ಟೊಟ್ಟಿಗೆ ಹೋಟೆಲ್ ನಲ್ಲಿ ಕಾಣಿಸಿಕೊಳ್ಳುವುದು, ತಡರಾತ್ರಿ ಪಾರ್ಟಿ ಮಾಡುವುದು ಹಾಗೂ ನ್ಯೂ ಯಿಯರ್ ಅನ್ನು ಗೋವಾದಲ್ಲಿ ಆಚರಿಸೋದು ಹೀಗೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದೆ. ಹಾಗಾಗಿ ಇಬ್ಬರೂ ಡೇಟಿಂಗ್ ಮಾಡುವ ವಿಚಾರ ಆಗಾಗ್ಗೆ ಚರ್ಚೆ ಆಗುತ್ತಲೇ ಇರುತ್ತದೆ.

    ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಡೇಟಿಂಗ್ ವಿಚಾರ ಕೇವಲ ಟಾಲಿವುಡ್ ನಲ್ಲಿ ಮಾತ್ರವಲ್ಲ ಬಾಲಿವುಡ್ ವುಡ್ ನಲ್ಲೂ ಸದ್ದು ಮಾಡಿದೆ. ಹೀಗಾಗಿಯೇ ಕರಣ್ ಜೋಹಾರ್ (Karan Johar) ಕೂಡ ಈ ಇಬ್ಬರ ರಿಲೇಶನ್ ಶಿಪ್ ಬಗ್ಗೆ ಮಾತನಾಡಿದ್ದಾರೆ. ಕಾಫಿ ವಿತ್ ಕರಣ್ ಶೋನಲ್ಲಿ ಇಂಥದ್ದೊಂದು ಚರ್ಚೆ ನಡೆದಿದ್ದು, ರಶ್ಮಿಕಾ ಮತ್ತು ವಿಜಯ್ ಡೇಟಿಂಗ್ ಕುರಿತಾಗಿ ಕರಣ್ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಅದು ಕೂಡ ಚರ್ಚೆ ಆಗುತ್ತಿದೆ. ಇದನ್ನೂ ಓದಿ:‘ಬಿಗ್ ಬಾಸ್’ ಶೋ ನಡೆಸಲು ಸಲ್ಮಾನ್ ಖಾನ್ ಗೆ 1000 ಕೋಟಿ ಸಂಭಾವನೆ: ಸತ್ಯ ಒಪ್ಪಿಕೊಂಡ ನಟ

    ಕಾಫಿ ವಿತ್ ಕರಣ್ ಶೋಗೆ ಬಾಲಿವುಡ್ ನಟಿ ನಿಹಾರಿಕಾ (Niharika) ಬಂದಿದ್ದರು. ಈ ಸಂದರ್ಭದಲ್ಲಿ ಕರಣ್ ಮಾತನಾಡ್ತಾ ತನ್ನನ್ನು ವಿಕ್ಕಿ ಕೌಶಲ್ ತಮ್ಮ ಮದುವೆಗೆ ಆಹ್ವಾನಿಸಲಿಲ್ಲ. ಅದು ಯಾಕೆ ಅಂತಾನೇ ಗೊತ್ತಾಗಲಿಲ್ಲ ಎನ್ನುತ್ತಾರೆ. ಆಗ ನಿಹಾರಿಕಾ, ನೀವೇನೂ ಬೇಸರ ಮಾಡಿಕೊಳ್ಳಬೇಡಿ. ನನ್ನ ಮದುವೆಗೆ ಕಂಡಿತಾ ಕರೆಯುತ್ತೇನೆ ಅಂತಾರೆ. ನಿಹಾರಿಕಾ ಹೀಗೆ ಆಹ್ವಾನ ನೀಡುತ್ತಿದ್ದಂತೆಯೇ ನಿಹಾರಿಕಾಳ ಮದುವೆ ಯಾರ ಜೊತೆ ಆಗಬೇಕು ಎಂದು ಚರ್ಚಿಸುತ್ತಾರೆ ಕರಣ್.

    ಮೊದಲು ಪ್ರಭಾಸ್ ಹೆಸರು ಸೂಚಿಸುವ ಕರಣ್, ನೀವು ಪ್ರಭಾಸ್ ಜೊತೆ ಮದುವೆ ಆಗಬಹುದು ಎನ್ನುತ್ತಾರೆ. ಪ್ರಭಾಸ್ ವಯಸ್ಸಲ್ಲಿ ದೊಡ್ಡವರು ಅಂತಾಳೆ. ಹಾಗಾದರೆ, ವಿಜಯ್ ದೇವರಕೊಂಡ (Vijay Devarakonda) ಜೊತೆ ಮದುವೆ ಆಗಬಹುದು. ಅವರು ಸಿಂಗಲ್ ಅನ್ನುತ್ತಾರೆ ಕರಣ್. ತಕ್ಷಣವೇ ವಿಜಯ್ ಮತ್ತು ರಶ್ಮಿಕಾ ಡೇಟಿಂಗ್ ವಿಚಾರ ಬರುತ್ತದೆ. ನನ್ನ ಪ್ರಕಾರ ಅವರಿಬ್ಬರ ಮಧ್ಯೆ ಅಂಥದ್ದೂ ಏನೂ ಇಲ್ಲ. ವಿಜಯ್ ಸಿಂಗಲ್ ಎನ್ನುವುದು ನನಗೆ ಗೊತ್ತು ಎಂದು ಹೇಳುವ ಮೂಲಕ ವಿಜಯ್ ಮತ್ತು ರಶ್ಮಿಕಾ ಲವ್ ಅನ್ನು ಬ್ರೇಕ್ ಅಪ್ ಮಾಡುತ್ತಾರೆ ಕರಣ್.

    Live Tv
    [brid partner=56869869 player=32851 video=960834 autoplay=true]

  • ನಟ ಚಂಕಿ ಪಾಂಡೆಗೆ ಅನೇಕ ಮಹಿಳೆಯರ ಜೊತೆ ಸಂಬಂಧವಿತ್ತು: ಪತ್ನಿ ಭಾವನಾ ಬಿಚ್ಚಿಟ್ಟ  ರಹಸ್ಯ

    ನಟ ಚಂಕಿ ಪಾಂಡೆಗೆ ಅನೇಕ ಮಹಿಳೆಯರ ಜೊತೆ ಸಂಬಂಧವಿತ್ತು: ಪತ್ನಿ ಭಾವನಾ ಬಿಚ್ಚಿಟ್ಟ ರಹಸ್ಯ

    ಬಾಲಿವುಡ್ ಹೆಸರಾಂತ ನಟ, ಅನನ್ಯ ಪಾಂಡೆ ಅವರ ತಂದೆ ಚಂಕಿ (Chunky Pandey) ಪಾಂಡೆ ಕುರಿತಾಗಿ ಸ್ವತಃ ಪತ್ನಿಯೇ ರಹಸ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಪತಿಗೆ ಅನೇಕ ಮಹಿಳೆಯರ ಜೊತೆ ಸಂಬಂಧವಿತ್ತು ಎನ್ನುವುದನ್ನು ಬಹಿರಂಗವಾಗಿ ಭಾವನಾ ಪಾಂಡೆ ಹೇಳಿಕೊಂಡಿದ್ದಾರೆ. ಈ ಮಾತು ಬಾಲಿವುಡ್ ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ಸ್ವತಃ ಮಗಳಿಗೆ ಈ ಮಾತು ಇರಸುಮುರಸು ಉಂಟು ಮಾಡಿದೆ.

    ಕರಣ್ ಜೋಹಾರ್ (Karan Johar) ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗಿಯಾದ್ದ ಭಾವನಾ ಪಾಂಡೆ (Bhavana Pandey), ತನ್ನ ಪತಿಯ ಡೇಟಿಂಗ್ ಕುರಿತಾಗಿಯೂ ಮಾತನಾಡಿದ್ದಾರೆ. ಅಲ್ಲದೇ, ತಮ್ಮ ಗಂಡನಿಗೆ ಸಿನಿಮಾ ರಂಗದ ಅನೇಕ ಮಹಿಳೆಯರ ಜೊತೆ ಸಂಬಂಧವಿತ್ತು. ಅದು ನನಗೂ ಗೊತ್ತಿತ್ತು. ನನಗೆ ಗೊತ್ತಿದೆ ಅಂತ ಚಂಕಿ ಪಾಂಡೆಗೂ ಗೊತ್ತಿತ್ತು ಎಂದು ಹೇಳುವ ಮೂಲಕ ಇನ್ನೂ ಅಚ್ಚರಿ ಮೂಡಿಸಿದ್ದಾರೆ. ನೂರಾರು ಸಿನಿಮಾಗಳ ಮೂಲಕ ಮನ ರಂಜನೆ ನೀಡಿರುವ ಮತ್ತು ಮಗಳನ್ನು ಇದೇ ರಂಗಕ್ಕೆ ಕರೆತಂದಿರುವ ಚಂಕಿ ಬಗ್ಗೆ ಮೊದಲ ಬಾರಿಗೆ ಇಂಥದ್ದೊಂದು ಮಾತು ಕೇಳಿ ಬಂದಿದೆ. ಇದನ್ನೂ ಓದಿ:ತಮ್ಮ ‘ಕೊನೆ ಆಸೆ’ ತಿಳಿಸಿದ ಸೋನು ಶ್ರೀನಿವಾಸ್ ಗೌಡ: ಅವನಿಗೆ ಹೃದಯ ಪೂರ್ವಕ ಹಾರೈಕೆ

    ಕಾಫಿ ವಿತ್ ಕರಣ್ (Koffee With Karan) ಶೋನಲ್ಲಿ ಬರೀ ಡೇಟಿಂಗ್, ಸೆಕ್ಸ್, ಅನೈತಿಕ ಸಂಬಂಧ, ಬಾಯ್ ಫ್ರೆಂಡ್ ಹೀಗೆ ಇಂಥದ್ದೇ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈವರೆಗೂ ಬಂದಿರುವಂತಹ ಅತಿಥಿಗಳು, ಯಾವುದಕ್ಕೂ ಮುಜಗರ ಪಟ್ಟುಕೊಳ್ಳದೇ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ. ಅಲ್ಲದೇ, ಇನ್ನೂ ಅನೇಕ ಸಂಗತಿಗಳನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಹಾಗಾಗಿ ಈ ಶೋ ಬಗ್ಗೆ ಎಲ್ಲರಿಗೂ ಕುತೂಹಲ. ಬಾಲಿವುಡ್ ನ ಖ್ಯಾತ ನಟ ನಟಿಯರೆಲ್ಲ ಈ ಶೋಗೆ ಬಂದಿರುವುದು ವಿಶೇಷ.

    ಈ ಹಿಂದೆ ಚಂಕಿ ಪಾಂಡೆ ಪುತ್ರಿ ಅನನ್ಯಾ ಪಾಂಡೆ (Ananya Pandey) ಕೂಡ ಬಂದಿದ್ದರು. ಅವರು ಅನೇಕ ವಿಷಯಗಳನ್ನು ಖುಲ್ಲಂ ಖುಲ್ಲ ಮಾತನಾಡಿದ್ದರು. ತಮ್ಮ ಮತ್ತು ವಿಜಯ್ ದೇವರಕೊಂಡ ಜೊತೆಗೆ ಖಾಸಗಿ ಸಂಗತಿಗಳನ್ನೂ ಅವರು ಹಂಚಿಕೊಂಡಿದ್ದರು. ಮಗಳ  ಆ ಮಾತುಗಳಿಗೆಲ್ಲ ಚಂಕಿ ಬೆಂಬಲ ವ್ಯಕ್ತ ಪಡಿಸಿದ್ದರು. ಇದೀಗ ಚಂಕಿ ಬಗ್ಗೆಯೇ ಅಂತಹ ಮಾತುಗಳು ಕೇಳಿ ಬಂದಿವೆ. ಅದೂ ಸ್ವತಃ ಪತ್ನಿಯಿಂದಲೇ ಎನ್ನುವುದು ವಿಶೇಷ.

    Live Tv
    [brid partner=56869869 player=32851 video=960834 autoplay=true]

  • 1000 ಕೋಟಿ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್

    1000 ಕೋಟಿ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್

    `ಕೆಜಿಎಫ್ 2′( KGF 2) ಆದ್ಮೇಲೆ ಯಶ್ ಮುಂದಿನ ಸಿನಿಮಾ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. `ಕೆಜಿಎಫ್ 2′ ಸೂಪರ್ ಸಕ್ಸಸ್ ನಂತರ ಯಶ್(Yash) ಮುಂದಿನ ನಡೆಯೇನು ಎಂಬುದರ ಬಗ್ಗೆ ಚಿತ್ರರಸಿಕರು ಕ್ಯೂರಿಯಸ್ ಆಗಿದ್ದಾರೆ. ಇನ್ನೂ ಯಶ್ ಇದೇ ದಸರಾಗೆ ಅಧಿಕೃತ ಅಪ್‌ಡೇಟ್ ಕೊಡಲು ರೆಡಿಯಾಗಿದ್ದಾರೆ.

    ರಾಕಿಂಗ್ ಸ್ಟಾರ್ ಯಶ್ ಈಗಾಗಲೇ ವಿಭಿನ್ನ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದಾರೆ. ಕೆಜಿಎಫ್ ಪಾರ್ಟ್ 1 ಮತ್ತು ಪಾರ್ಟ್ 2 ಬಂದ ಮೇಲೆ ಯಶ್ ಮಾರುಕಟ್ಟೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹೀಗಿರುವಾಗ ಯಶ್ ಮುಂದಿನ ಸಿನಿಮಾ ಬಗ್ಗೆ ಚಿತ್ರರಂಗ ಮತ್ತು ಅಭಿಮಾನಿಗಳ ವಲಯದಲ್ಲಿ ರಾಕಿಭಾಯ್‌ ಮುಂದಿನ ಚಿತ್ರದ ಸಖತ್‌ ನಿರೀಕ್ಷೆಯಿದೆ. ಸದ್ಯ ಯಶ್, ಕಾಲಿವುಡ್ ನಿರ್ದೇಶಕ ಶಂಕರ್ (Director Shankar) ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ.

    `ಮಫ್ತಿ’ ನಿರ್ದೇಶಕ ನರ್ತನ್ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ತಮಿಳಿನ ನಿರ್ದೇಶಕ ಶಂಕರ್ ಅವರ ಐತಿಹಾಸಿಕ ಸಿನಿಮಾಗೆ ಯಶ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 1000 ಕೋಟಿ ಬಜೆಟ್‌ನಲ್ಲಿ ಮೂಡಿಬರಲಿರುವ ಈ ಚಿತ್ರಕ್ಕೆ ಯಶ್ ಡಿಫರೆಂಟ್ ರೋಲ್‌ನಲ್ಲಿ ಮಿಂಚಲಿದ್ದಾರೆ. ಇದನ್ನೂ ಓದಿ:ಜೈಲಿನಿಂದ ಬಿಡುಗಡೆಯಾಗಿ ಒಂದು ವರ್ಷ: ಕೊನೆಗೂ ಮೌನ ಮುರಿದ ಶಿಲ್ಪಾ ಶೆಟ್ಟಿ ಪತಿ

    ಎಸ್. ವೆಂಕಟೇಶನ್ ಬರೆದಿರೋ `ವೇಲ್‌ಪರಿ’ ಹಿಸ್ಟಾರಿಕಲ್ ಕಾದಂಬರಿಯಲ್ಲಿ ಯಶ್ ನಟಿಸೋದು ಪಕ್ಕಾ ಎನ್ನಲಾಗುತ್ತಿದೆ. ಯಶ್ ಮತ್ತು ಶಂಕರ್ ಕಾಂಬಿನೇಷನ್ ಸಿನಿಮಾಗೆ ಕರಣ್ ಜೋಹರ್(Karan Johar)  ಬಂಡವಾಳ ಹೂಡಲಿದ್ದಾರೆ. 1000 ಕೋಟಿ ವೆಚ್ಚದಲ್ಲಿ ಬಹುಭಾಷೆಗಳಲ್ಲಿ ಈ ಚಿತ್ರ ಮೂಡಿ ಬರಲಿದೆ.

    Live Tv
    [brid partner=56869869 player=32851 video=960834 autoplay=true]

  • ಇಬ್ಬರು ಹುಡುಗರ ಜೊತೆ ಡೇಟ್ ಬೇಡ: ಮಗಳಿಗೆ ಶಾರುಖ್ ಪತ್ನಿಯ ಪಾಠ

    ಇಬ್ಬರು ಹುಡುಗರ ಜೊತೆ ಡೇಟ್ ಬೇಡ: ಮಗಳಿಗೆ ಶಾರುಖ್ ಪತ್ನಿಯ ಪಾಠ

    ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಮತ್ತು ಗೌರಿ ಖಾನ್ (Gauri Khan) ದಂಪತಿಯ ಮುದ್ದಿನ ಮಗಳು ಸುಹಾನಾ ಖಾನ್. ಸಖತ್ ಬೋಲ್ಡ್ ಆಗಿರುವಂತಹ ಹುಡುಗಿ. ಅಪ್ಪ ಅಮ್ಮನ ಬಗ್ಗೆ ಸಿಕ್ಕಾಪಟ್ಟೆ ಗೌರವ ಹೊಂದಿರುವ ಹುಡುಗಿ ಕೂಡ. ಇಂತಹ ಹುಡುಗಿಗೆ ಸ್ವತಃ ಅಮ್ಮನೇ ಡೇಟಿಂಗ್ ಪಾಠ ಮಾಡಿದ್ದಾರೆ. ಅದು ಕರಣ್ ಜೋಹಾರ್ ನಡೆಸಿ ಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ ಎನ್ನುವುದು ವಿಶೇಷ. ಮಗಳಿಗೆ ಹೀಗೂ ಸಲಹೆ ಕೊಡಬಹುದಾ? ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

    ಕರಣ್ ಜೋಹಾರ್ (Karan Johar) ನಡೆಸಿಕೊಡುವ ಕಾಫಿ ವಿತ್ ಕರಣ ಶೋ ನಲ್ಲಿ ಡೇಟಿಂಗ್, ಲವ್, ಸೆಕ್ಸ್, ಬ್ರೇಕ್ ಅಪ್, ಬಾಯ್ ಫ್ರೆಂಡ್ ಇಂಥದ್ದೇ ವಿಷಯವನ್ನು ಹೆಚ್ಚಾಗಿ ಕೇಳುತ್ತಾರೆ ಕರಣ್. ಯಾವುದೇ ಮುಜುಗರವಿಲ್ಲದೇ ಬಂದಂತಹ ಅತಿಥಿಗಳು ಉತ್ತರ ಕೊಡುತ್ತಾರೆ. ಅಲ್ಲದೇ, ಸ್ವತಃ ಕರಣ್ ಗೂ ಕಾಲೆಳೆಯುವ ಪ್ರಸಂಗಗಳು ಕೂಡ ಎದುರಾಗಿವೆ. ಇಂತಹ ಶೋಗೆ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಬಂದಿದ್ದರು. ಅವರಿಗೆ ಕರಣ್ ಪ್ರಶ್ನೆಯೊಂದನ್ನು ಕೇಳಿದರು. ಇದನ್ನೂ ಓದಿ:ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಅನುಭವ ಬಿಚ್ಚಿಟ್ಟ ನಟಿ ಶಮಾ ಸಿಕಂದರ್

    ಡೇಟಿಂಗ್ (Dating) ವಿಷಯದಲ್ಲಿ ಮಗಳು ಸುಹಾನಿಗೆ (Suhana Khan) ನೀವು ಕೊಡುವ ಸಲಹೆ ಏನು ಅಂತ ಗೌರಿ ಖಾನ್ ಗೆ ಕರಣ್ ಜೋಹಾರ್ ಕೇಳುತ್ತಾರೆ. ತಕ್ಷಣವೇ ಉತ್ತರಿಸುವ ಗೌರಿ ಖಾನ್, ‘ಯಾವುದೇ ಕಾರಣಕ್ಕೂ ಇಬ್ಬರು ಹುಡುಗರೊಂದಿಗೆ ಒಂದೇ ಸಲ ಡೇಟ್ ಮಾಡಬೇಡ’ ಎಂದು ಸಲಹೆ ಕೊಡುತ್ತಾರೆ ಗೌರಿ ಖಾನ್. ಇದನ್ನು ಕೇಳಿದ ನೆಟ್ಟಿಗರು ಗೌರಿ ಖಾನ್ ಬಗ್ಗೆ ಟ್ರೋಲ್ ಮಾಡುತ್ತಿದ್ದಾರೆ. ಡೇಟ್ ಬೇಡ ಎಂದು ಹೇಳುತ್ತಾರೆ ಅಂದುಕೊಂಡಿದ್ದ ಅಭಿಮಾನಿಗಳಿಗೆ ಗೌರಿ ಮಾತು ಅಚ್ಚರಿ ಮೂಡಿಸಿವೆ.

    Live Tv
    [brid partner=56869869 player=32851 video=960834 autoplay=true]

  • ಕರಣ್ ಜೋಹಾರ್ ಬಾಳಲ್ಲೂ ಲವ್ ಬ್ರೇಕಪ್: ಇದೇನ್ ಗುರೂ ಹೊಸ ಸುದ್ದಿ ಅಂತಿದೆ ಬಿಟೌನ್

    ಕರಣ್ ಜೋಹಾರ್ ಬಾಳಲ್ಲೂ ಲವ್ ಬ್ರೇಕಪ್: ಇದೇನ್ ಗುರೂ ಹೊಸ ಸುದ್ದಿ ಅಂತಿದೆ ಬಿಟೌನ್

    ಬಾಲಿವುಡ್ ನಲ್ಲಿ ನಡೆಯುವ ಲವ್ (Love), ಬ್ರೇಕ್ ಅಪ್, ಅಫೇರ್ ಇಂತಹ ವಿಷಯಗಳು ಮೊದಲು ತಿಳಿಯುವುದು ಕರಣ್ ಜೋಹಾರ್ (Karan Johar) ಗೆ. ಹಾಗಾಗಿ ಕಾಫಿ ವಿತ್ ಕರಣ್ ಶೋನಲ್ಲಿ (Koffee With Karan) ಬಹುತೇಕ ಇಂತಹ ಪ್ರಶ್ನೆಗಳನ್ನೇ ಅತಿಥಿಗಳಿಗೆ ಕರಣ್ ಕೇಳುತ್ತಾನೆ. ಬಹುತೇಕ ಅವು ನಿಜವೂ ಆಗಿರುವುದರಿಂದ ಅನೇಕ ನಟ ನಟಿಯರು ಅವುಗಳನ್ನು ಒಪ್ಪಿಕೊಂಡಿದ್ದಾರೆ. ಇನ್ನೂ ಕೆಲವರು ತೇಲಿಸಿ ಬಿಟ್ಟಿದ್ದಾರೆ. ಆದರೂ, ಕರಣ್ ಸುದ್ದಿ ಪಕ್ಕಾ ಆಗಿರುತ್ತದೆ.

    ಬಿಟೌನ್ (Bollywood) ಟಾ‍ಪ್ ನಟ ನಟಿಯರು, ನಿರ್ದೇಶಕರು, ನಿರ್ಮಾಪಕರು ಹೀಗೆ ಅನೇಕರು ಕರಣ್ ಶೋ ಗೆ ಬಂದಿದ್ದಾರೆ. ತಮ್ಮ ಖಾಸಗಿ ಸಂಗತಿಗಳನ್ನು ಬಟಾಬಯಲು ಮಾಡಿಕೊಂಡಿದ್ದಾರೆ. ತಮ್ಮ ಸೆಕ್ಸ್ ಲೈಫ್ ನಿಂದ ಹಿಡಿದು ಮದುವೆ, ಅಫೇರ್, ಡೇಟಿಂಗ್ ಹೀಗೆ ಸೆನ್ಸಾರ್ ಇಲ್ಲದೇ ಮಾತನಾಡಿದ್ದಾರೆ. ಆದರೂ, ಈವರೆಗೂ ಕರಣ್ ವಿಚಾರವನ್ನು ಕೆದಕಲು ಯಾರೂ ಹೋಗಿರಲಿಲ್ಲ. ಅಲ್ಲದೇ, ಕರಣ್ ಜೀವನದ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಇದನ್ನೂ ಓದಿ:ಬಿಗ್ ಬಾಸ್ ಟಿವಿ ಸೀಸನ್‌ನಲ್ಲಿ ಮತ್ತೆ ಪ್ರಶಾಂತ್‌ ಸಂಬರಗಿ, ಅನುಪಮಾ ಗೌಡ, ದೀಪಿಕಾ ದಾಸ್‌

    ಮೊನ್ನೆಯಷ್ಟೇ ಕರಣ್ ಶೋ ಗೆ ಅನಿಲ್ ಕಪೂರ್ ಮತ್ತು ವರುಣ್ ಧವನ್ (Varun Dhawan) ಆಗಮಿಸಿದ್ದರು. ಅನಿಲ್ ಕಪೂರ್ ಕೂಡ ಯಾವುದನ್ನೂ ಮುಚ್ಚಿಟ್ಟುಕೊಳ್ಳದೇ ಎಲ್ಲವನ್ನೂ ಮಾತನಾಡಿದರು. ಈ ವಯಸ್ಸಲ್ಲೂ ಹ್ಯಾಂಡ್ ಸಮ್ ಆಗಿ ಕಾಣುವುದರ ಹಿಂದಿನಿ ಸಿಕ್ರೇಟ್ ಏನು ಅಂತ ಅನಿಲ್ ಕಪೂರ್ ಗೆ ಕೇಳಿದಾಗ, ಕ್ಷಣ ಹೊತ್ತೂ ಯೋಚಿಸಿದೇ ಸೆಕ್ಸ್ ಅಂದರು ಅನಿಲ್. ಹಾಗೆಯೇ ವರಣ್ ಧವನ್ ಅವರನ್ನು ಕೇಳಲಾಯಿತು. ಅದರಲ್ಲೂ ವರಣ್ ಬ್ರೇಕ್ ಅಪ್ ಬಗ್ಗೆ ಕರಣ್ ಕೇಳಿ  ತಾವೇ ತಗಲಕ್ಕೊಂಡಿದ್ದಾರೆ.

    ವರಣ್ ಮದುವೆಗೂ ಮುಂಚೆ ಆದ ಲವ್ ಬ್ರೇಕ್ ಅಪ್ (Breakup) ಬಗ್ಗೆ ಕರಣ್ ಕೇಳಿದಾಗ, ನನ್ನದೇನೂ ಸರಿ ನಿಮ್ಮ ಜೀವನದಲ್ಲೂ ಅದು ನಡೆದಿದೆಯಲ್ಲ ಎಂದು ನೇರವಾಗಿಯೇ ಕೇಳಿದರು. ಕರಣ್ ತಪ್ಪಿಸಿಕೊಳ್ಳುವುದಕ್ಕೆ ನೋಡಿದರು, ಆದರೂ ಧವನ್ ಸುಮ್ಮನೆ ಬಿಡಲಿಲ್ಲ. ಕೊನೆಗೂ ತನ್ನ ಜೀವನದಲ್ಲೂ ಲವ್ ಬ್ರೇಕ್ ಅಪ್ ಆಗಿದೆ. ನಾನು ಹೇಗೆ ಅಂತ ನಿನಗೆ ಗೊತ್ತಲ್ಲ. ಈ ವಿಷಯದಲ್ಲಿ ಸಹಕರಿಸು ಎಂದು ಹೇಳಿ ಟಾಪಿಕ್ ಮುಗಿಸಿಬಿಟ್ಟರು ಕರಣ್. ಅಲ್ಲಿಗೆ ಮೊದಲ ಬಾರಿಗೆ ಕರಣ್ ಲವ್ ಬ್ರೇಕ್ ಅಪ್ ವಿಚಾರ ಆಚೆ ಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ‘ಬ್ರಹ್ಮಾಸ್ತ್ರ’ ಕಲೆಕ್ಷನ್ ಎಲ್ಲಾ ಬುರುಡೆ ಎಂದು ಟೀಕೆ ಮಾಡಿದ ನಟಿ ಕಂಗನಾ ರಣಾವತ್

    ‘ಬ್ರಹ್ಮಾಸ್ತ್ರ’ ಕಲೆಕ್ಷನ್ ಎಲ್ಲಾ ಬುರುಡೆ ಎಂದು ಟೀಕೆ ಮಾಡಿದ ನಟಿ ಕಂಗನಾ ರಣಾವತ್

    ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಕಾಂಬಿನೇಷನ್ ನ ‘ಬ್ರಹ್ಮಾಸ್ತ್ರ’ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಕಳೆದ ಎರಡು ದಿನಗಳಿಂದ ಚರ್ಚೆ ಆಗುತ್ತಿದೆ. ಸಿನಿಮಾ ರಿಲೀಸ್ ಆಗಿ ಮೊದಲನೇ ದಿನವೇ ನೂರು ಕೋಟಿ ಕ್ಲಬ್ ಗೆ ಸಿನಿಮಾ ಸೇರಿತು ಎಂದು ಹೇಳಲಾಗಿತ್ತು. ಇದೀಗ ಮೂರು ದಿನಗಳ ಒಟ್ಟು ಕಲೆಕ್ಷನ್ 125 ಕೋಟಿ ಎಂದು ವರದಿಯಾಗಿದೆ. ಸಿನಿಮಾ ತಂಡವು ಅಧಿಕೃತ ಮಾಹಿತಿ ಕೊಡದೇ ಇರುವ ಕಾರಣಕ್ಕಾಗಿ ಈ ಕಲೆಕ್ಷನ್ ಸೋಮವಾರಕ್ಕೆ 200 ಕೋಟಿ ತಲುಪಿದೆ.

    ಸಿನಿಮಾದ ನಿರ್ಮಾಪಕ ಕರಣ್ ಜೋಹಾರ್ ಬ್ರಹ್ಮಾಸ್ತ್ರ ಸಿನಿಮಾದ ಕಲೆಕ್ಷನ್ ದಾಖಲೆ ರೀತಿಯಲ್ಲಿ  ಆಗಿದೆ. ಮೊದಲ ದಿನವೇ ನೂರು ಕೋಟಿ ಕ್ಲಬ್‍ಗೆ ಸೇರಿದ್ದು ನಿಜ ಎಂದು ಹೇಳಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೇ ವೀಕೆಂಡ್ ನಲ್ಲಿ ಪ್ರೇಕ್ಷಕರು ಸಿನಿಮಾ ಒಪ್ಪಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ನೋಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಹಾಗಾಗು ಶುಕ್ರವಾರ, ಶನಿವಾರ ಮತ್ತು ಭಾನುವಾರದ ಒಟ್ಟು ಕಲೆಕ್ಷನ್ ಅಂದಾಜು 200 ಕೋಟಿ ಎಂದು ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರ. ಇದನ್ನೂ ಓದಿ:ನಂದಿನಿ ಔಟ್ ಆದ್ಮೇಲೆ ಸಾನ್ಯ ಜೊತೆ ಜಶ್ವಂತ್ ಲವ್ವಿ-ಡವ್ವಿ: ರೂಪೇಶ್‌ಗೆ ಟೆನ್ಷನ್ ಶುರು

     

    ಇದೆಲ್ಲವನ್ನೂ ಬಾಲಿವುಡ್ ನಟಿ ಕಂಗನಾ ರಣಾವತ್ ಅಲ್ಲಗಳೆಯುತ್ತಾರೆ. ಬ್ರಹ್ಮಾಸ್ತ್ರ ಸಿನಿಮಾದ ಕಲೆಕ್ಷನ್ ಫೇಕ್, ಅದೊಂದು ಬುರುಡೆ ಪುರಾಣ ಎಂದು ಟೀಕೆ ಮಾಡಿದ್ದಾರೆ. ಸುಖಾಸುಮ್ಮನೆ ಕಲೆಕ್ಷನ್ ಬಗ್ಗೆ ಗಾಸಿಪ್ ಹಬ್ಬಿಸಲಾಗುತ್ತಿದೆ. 350 ಕೋಟಿಗೂ ಅಧಿಕ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ ಎಂದು ಕೇಳಲ್ಪಟ್ಟಿದ್ದೆ. ಈವರೆಗೂ ನೂರೇ ಕೋಟಿ ಬಂದಿದೆ ಎಂದರೂ, ಇನ್ನೂ 250 ಕೋಟಿ ಬರಬೇಕು. ಈಗಲೇ ಸಿನಿಮಾ ಗೆದ್ದಿದೆ ಅಂದು ಹೇಳುವುದಕ್ಕೆ ಆಗುವುದಿಲ್ಲ ಎಂದು ಟೀಕೆ ಮಾಡಿದ್ದಾರೆ.

     

     

    Live Tv
    [brid partner=56869869 player=32851 video=960834 autoplay=true]

  • ಬಾಲಿವುಡ್ ನಲ್ಲಿ ಟ್ಯಾಲೆಂಟ್ ಇರುವಂಥ ನಟರೇ ಇಲ್ಲವೆಂದು ಬಿಟೌನ್ ನಲ್ಲಿ ಬೆಂಕಿ ಹಚ್ಚಿದ ಕರಣ್ ಜೋಹಾರ್

    ಬಾಲಿವುಡ್ ನಲ್ಲಿ ಟ್ಯಾಲೆಂಟ್ ಇರುವಂಥ ನಟರೇ ಇಲ್ಲವೆಂದು ಬಿಟೌನ್ ನಲ್ಲಿ ಬೆಂಕಿ ಹಚ್ಚಿದ ಕರಣ್ ಜೋಹಾರ್

    ಬಾಲಿವುಡ್ ಅನೇಕ ಸ್ಟಾರ್ ನಟರಿಗೆ ಸಿನಿಮಾ ಮಾಡಿದ ಹೆಗ್ಗಳಿಕೆ ಕರಣ್ ಜೋಹಾರ್ (Karan Johar) ಅವರದ್ದು. ನಿರ್ದೇಶಕರಾಗಿ, ನಿರ್ಮಾಪಕರಾಗಿ ಬಹುತೇಕ ನಟರಿಗೆ ಕರಣ್ ಸಿನಿಮಾ ಮಾಡಿದ್ದಾರೆ. ಅದರಲ್ಲೂ ಕರಣ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಶೋಗೆ ಬಾರದೇ ಇರುವ  ನಟ ನಟಿಯರೇ ಇಲ್ಲ. ಬಾಲಿವುಡ್ ಬಗ್ಗೆ ಆಳ ಅಗಲ ಗೊತ್ತಿರುವ ಕರಣ್, ಇಡೀ ಬಾಲಿವುಡ್ ತಲೆತಗ್ಗಿಸುವಂತಹ ಹೇಳಿಕೆಯನ್ನು ನೀಡಿದ್ದಾರೆ. ಆ ಹೇಳಿಕೆ ಇದೀಗ ಬಾಲಿವುಡ್ ನಲ್ಲಿ ಬೆಂಕಿ ಹಚ್ಚಿದೆ.

    ಖಾಸಗಿ ವಾಹಿನಿಯೊಂದರ ಟಾಕ್ ಶೋನಲ್ಲಿ ಮಾತನಾಡಿರುವ ಕರಣ್ ಜೋಹಾರ್, ಬಾಲಿವುಡ್ (Bollywood,) ನಲ್ಲಿ ಹೇಳಿಕೊಳ್ಳುವಂತಹ ಮತ್ತು ಟ್ಯಾಲೆಂಟ್ (Talent) ಇರುವಂತಹ ನಟ ಯಾರೂ ಇಲ್ಲ ಎಂದು ಹೇಳುವ ಮೂಲಕ ಸ್ವತಃ ನಿರೂಪಕರನ್ನೇ ಬೆಚ್ಚಿ ಬೀಳಿಸಿದ್ದಾರೆ. ಈ ಮೂಲಕ ದಕ್ಷಿಣದ ತಾರೆಯರನ್ನು ಪರೋಕ್ಷವಾಗಿ ಹೊಗಳಿದ್ದಾರೆ. ಅಲ್ಲಿಗೆ ಮತ್ತೊಂದು ಸುತ್ತಿನ ದಕ್ಷಿಣ ಮತ್ತು ಬಾಲಿವುಡ್ ತಾರೆಯರ ವಾರ್ ಶುರುವಾಗುತ್ತಾ ಕಾದು ನೋಡಬೇಕು. ಇದನ್ನೂ ಓದಿ:ಬಿಕಿನಿಯಲ್ಲಿ `ಲೈಗರ್’ ಬ್ಯೂಟಿ ಅನನ್ಯಾ ಪಾಂಡೆ ಮಿಂಚಿಂಗ್

    ಆ ಶೋವನ್ನು ರಿತೇಶ್ ದೇಶಮುಖ (Riteish Deshmukh) ನಡೆಸಿಕೊಡುತ್ತಿದ್ದು, ಅತಿಥಿಯಾಗಿ ಕರಣ್ ಜೋಹಾರ್ ಬಂದಿದ್ದರು. ‘ನೀವು ನಟನನ್ನು ಆಯ್ಕೆ ಮಾಡಿಕೊಳ್ಳುವಾಗ ಲುಕ್‍ಗೆ ಆದ್ಯತೆ ಕೊಡುತ್ತೀರಾ? ಅಥವಾ ಮತ್ತೇನಾದರೂ ನೋಡುತ್ತೀರಾ?’ ಎಂದು ಪ್ರಶ್ನೆ ಮಾಡುತ್ತಾರೆ. ಲುಕ್ ಜೊತೆ ಟ್ಯಾಲೆಂಟ್ ಕೂಡ ನೋಡುತ್ತೇನೆ. ಆದರೆ, ಈವರೆಗೂ ನನಗೆ ಟ್ಯಾಲೆಂಟ್ ಸಿಕ್ಕಿಲ್ಲ ಎಂದು ಉತ್ತರಿಸಿದ್ದಾರೆ. ಕರಣ್ ಅವರ ಈ ಉತ್ತರ ಇದೀಗ ಹಲವರ ಕಂಗೆಣ್ಣಿಗೆ ಗುರಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬೇಬಿ ಆನ್ ಬೋರ್ಡ್ ಎಂದು ಬರೆದಿದ್ದ ಡ್ರೆಸ್ ಧರಿಸಿ, ಸಿನಿಮಾ ಪ್ರಚಾರದಲ್ಲಿ ಮಿಂಚಿದ ಆಲಿಯಾ ಭಟ್

    ಬೇಬಿ ಆನ್ ಬೋರ್ಡ್ ಎಂದು ಬರೆದಿದ್ದ ಡ್ರೆಸ್ ಧರಿಸಿ, ಸಿನಿಮಾ ಪ್ರಚಾರದಲ್ಲಿ ಮಿಂಚಿದ ಆಲಿಯಾ ಭಟ್

    ಬಾಲಿವುಡ್‌ನ ಮುದ್ದಾದ ಜೋಡಿ ರಣ್‌ಬೀರ್ ಮತ್ತು ಆಲಿಯಾ ಭಟ್ ಸದ್ಯ ʻಬ್ರಹ್ಮಾಸ್ತ್ರʼ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಚಿತ್ರದ ಪ್ರೀ ರಿಲೀಸ್ ಈವೆಂಟ್‌ನಲ್ಲಿ `ಬೇಬಿ ಆನ್ ಬೋರ್ಡ್’ ಎಂದು ಬರೆದಿದ್ದ ಡ್ರೆಸ್ ಧರಿಸಿ ಬಂದಿದ್ದ ಆಲಿಯಾ ಲುಕ್ ಈಗ ಅಭಿಮಾನಿಗಳ ಸೆಳೆಯುತ್ತಿದೆ.

    ಇದೇ ಸೆಪ್ಟೆಂಬರ್ 9ಕ್ಕೆ `ಬ್ರಹ್ಮಾಸ್ತ್ರ’ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರದ ಪ್ರಚಾರ ಕಾರ್ಯ ಕೂಡ ಭರದಿಂದ ಸಾಗುತ್ತಿದೆ. `ಬ್ರಹ್ಮಾಸ್ತ್ರʼ ಜೋಡಿ ಆಲಿಯಾ ಮತ್ತು ರಣ್‌ಬೀರ್ ಕೂಡ ಪ್ರಚಾರಕ್ಕೆ ಸಾಥ್ ನೀಡಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಆಲಿಯಾ ಭಟ್ ಲುಕ್, ಅವರು ಧರಿಸಿದ ಪಿಂಕ್‌ ಕಲರ್‌ ಡ್ರೆಸ್ ಇದೀಗ ಎಲ್ಲರ ಗಮನ ಸೆಳೆದಿದೆ. ಇದನ್ನೂ ಓದಿ:ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಧ್ರುವ ಸರ್ಜಾ

    ಬೇಬಿ ಆನ್ ಬೋರ್ಡ್ ಎಂದು ಬರೆದಿದ್ದ ಡ್ರೆಸ್ ಧರಿಸಿ ಈ ಸಿನಿಮಾ ಪ್ರಚಾರದಲ್ಲಿ ಭಾಗಿಯಾಗಿ, ಕ್ಯಾಮರಾ ಕಣ್ಣಿಗೆ ಮುದ್ದಾಗಿ ಪೋಸ್ ನೀಡಿದ್ದಾರೆ. ಗರ್ಭಿಣಿ ಆಲಿಯಾ, ಸಮಾರಂಭದಲ್ಲಿ ಪಿಂಕ್‌ ಕಲರ್‌ ಡ್ರೆಸ್‌ನಲ್ಲಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಆಲಿಯಾ ಭಟ್ ಫೋಟೋಸ್ ಸಖತ್ ವೈರಲ್ ಆಗುತ್ತಿದೆ.

     

    View this post on Instagram

     

    A post shared by Viral Bhayani (@viralbhayani)

    ಇನ್ನು ಬ್ರಹ್ಮಾಸ್ತç ಚಿತ್ರದ ಈವೆಂಟ್‌ನಲ್ಲಿ ಆಲಿಯಾ, ರಣ್‌ಬೀರ್, ಮೌನಿ ರಾಯ್, ನಾಗಾರ್ಜುನ, ರಾಜಮೌಳಿ, ಕರಣ್‌ ಜೋಹರ್  ಭಾಗಿಯಾಗಿದ್ದರು. ಇನ್ನು ಸಮಾರಂಭದ ಮುಖ್ಯ ಅತಿಥಿಯಾಗಿ ಜ್ಯೂ.ಎನ್‌ಟಿಆರ್ ಕೂಡ ಭಾಗವಹಿಸಿ, ಚಿತ್ರತಂಡಕ್ಕೆ ಶುಭಹಾರೈಸಿದ್ದರು.

    Live Tv
    [brid partner=56869869 player=32851 video=960834 autoplay=true]