Tag: Karan Johar

  • ಹಾರ್ದಿಕ್, ರಾಹುಲ್ ವಿರುದ್ಧ ಎಸ್‍ಸಿ, ಎಸ್‍ಟಿ ಕಾಯ್ದೆ ಅಡಿ ಕೇಸ್ ದಾಖಲು

    ಹಾರ್ದಿಕ್, ರಾಹುಲ್ ವಿರುದ್ಧ ಎಸ್‍ಸಿ, ಎಸ್‍ಟಿ ಕಾಯ್ದೆ ಅಡಿ ಕೇಸ್ ದಾಖಲು

    ಜೋಧಪುರ: ಟೀಂ ಇಂಡಿಯಾ ಆಟಗಾರರಾದ ಹಾರ್ದಿಕ್ ಪಾಂಡ್ಯ ಕೆ.ಎಲ್.ರಾಹುಲ್ ಮತ್ತು ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ವಿರುದ್ಧ ಜೋಧಪುರ ನಗರದ ಲೂಣಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

    ಕೆಲವು ದಿನಗಳ ಹಿಂದೆ ಕರಣ್ ಜೋಹರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹಾರ್ದಿಕ್ ಮತ್ತು ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದರು. ಈ ಸಂಬಂಧ ದೇವರಾಮ್ ಮೇಘವಾಲ್ ಎಂಬವರು ಲೂಣಿ ಠಾಣೆಯಲ್ಲಿ ಅಶ್ಲೀಲ ಹೇಳಿಕೆ, ಎಸ್‍ಸಿ, ಎಸ್‍ಟಿ ಕಾಯ್ದೆ ಅಡಿ ದೂರು ದಾಖಲಿಸಿದ್ದಾರೆ.

    ಈ ಮೂವರು ಟಿವಿ ಕಾರ್ಯಕ್ರಮದಲ್ಲಿ ಮಹಿಳೆಯರ ಅವಹೇಳನಕಾರಿ ಹೇಳಿಕೆ ಮತ್ತು ದೇಶದ ಗಣ್ಯವ್ಯಕ್ತಿಗಳಿಗೆ ಅವಮಾನಿಸಿದ್ದಾರೆ. ಸಂವಿಧಾನ ನಿರ್ಮಾತೃ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಒಳಗೊಂಡಂತೆ ಹಿರಿಯ ನಾಯಕರನ್ನು ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ದೂರಿನನ್ವಯ ತನಿಖೆ ನಡೆಸಿ, ಅವಶ್ಯವಿದ್ದರೆ ಹಾರ್ದಿಕ್, ರಾಹುಲ್ ಮತ್ತು ಕರಣ್ ಜೋಹರ್ ಅವರಿಗೆ ನೋಟಿಸ್ ನೀಡಲಾಗುತ್ತದೆ. ಎಂದು ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಬಂಶಿಲಾಲ್ ವೈಷ್ಣವ್ ತಿಳಿಸಿದ್ದಾರೆ.

    ಸ್ತ್ರೀಯರ ಬಗ್ಗೆ ಅವಹೇಳನಕಾರಿ ಹೇಳಿಕೆ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ಮಂಡಳಿ ಇಬ್ಬರು ಆಟಗಾರರನ್ನು ಆಸ್ಟ್ರೇಲಿಯಾ ಪ್ರವಾಸದಿಂದ ಅಮಾನತು ಮಾಡಿತ್ತು. ನಿಷೇಧದ ಎರಡು ವಾರಗಳ ಬಳಿಕ ಟೀಂ ಇಂಡಿಯಾ ಆಟಗಾರರಾದ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ವಿರುದ್ಧದ ಅಮಾನತು ಆದೇಶ ರದ್ದು ಮಾಡುವಂತೆ ಬಿಸಿಸಿಐ ಆಡಳಿತ ಸಮಿತಿ (ಸಿಓಎ) ಆದೇಶ ನೀಡಿತ್ತು. ಸುಪ್ರೀಂ ಕೋರ್ಟ್ ನೇಮಿಸಿದ್ದ ಬಿಸಿಸಿಐ ಆಡಳಿತ ಮಂಡಳಿಯಲ್ಲಿರುವ ತಟಸ್ಥ ಸಲಹೆಗಾರ (ಅಮಿಕಸ್ ಕ್ಯೂರಿ) ಪಿಎಸ್ ನರಸಿಂಹ ಅವರ ಜೊತೆ ಚರ್ಚೆ ನಡೆಸಿದ ಬಳಿಕ ಅಮಾನತು ಆದೇಶ ರದ್ದುಗೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಲಿಂಗಕಾಮ ಸಿನಿಮಾ ನಿರ್ಮಾಣದ ಕನಸು ಬಿಚ್ಚಿಟ್ಟ ಕರಣ್ ಜೋಹರ್

    ಸಲಿಂಗಕಾಮ ಸಿನಿಮಾ ನಿರ್ಮಾಣದ ಕನಸು ಬಿಚ್ಚಿಟ್ಟ ಕರಣ್ ಜೋಹರ್

    ಮುಂಬೈ: ಬಾಲಿವುಡ್ ಅಂಗಳದಲ್ಲಿ ರೋಮ್ಯಾಂಟಿಕ್ ಸಿನಿಮಾ ಮೂಲಕವೇ ಖ್ಯಾತಿ ಪಡೆದಿರುವ ನಿರ್ದೇಶಕ ಕರಣ್ ಜೋಹರ್ ಸಲಿಂಗಮಕಾಮ ಪ್ರೀತಿಯ ಸಿನಿಮಾ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

    ಸ್ವಿಸ್‍ನ ದಾವೋಸ್ ನಗರದಲ್ಲಿ ನಡೆದಿದ್ದ ಎಕಾನಮಿಕ್ ಫೋರಮ್‍ನಲ್ಲಿ ತಮ್ಮ ಮುಂದಿನ ನಡೆಯ ಕುರಿತಾಗಿ ಹೇಳಿಕೊಂಡಿದ್ದಾರೆ. ಕರಣ್ ಜೋಹರ್ ಅವರ ವೃತ್ತಿ ಜೀವನವು ಹೆಚ್ಚಾಗಿ ರೋಮ್ಯಾಂಟಿಕ್ ಸಿನಿಮಾಗಳನ್ನು ಒಳಗೊಂಡಿದೆ. ಹೀಗಾಗಿ ಮತ್ತೊಂದು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.

    ಬಾಲಿವುಡ್‍ನ ದೋಸ್ತಾನಾ ಸಲಿಂಗಕಾಮ ಸಿನಿಮಾವಾಗಿದ್ದರೂ, 2008ರಲ್ಲಿಯೇ ಬಿಡುಗಡೆಯಾಗಿತ್ತು. ಆದರೆ ಪ್ರಸ್ತುತ ದಿನಮಾನಕ್ಕೆ ತಕ್ಕಂತೆ ರೋಮ್ಯಾನ್ಸ್ ಸಿನಿಮಾ ಮಾಡುವ ನಿರ್ಧಾರವನ್ನು ಕೈಗೊಂಡಿದ್ದೇನೆ. ಈ ಸಿನಿಮಾದಲ್ಲಿ ಇಬ್ಬರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಇಲ್ಲಿಯವರೆಗೂ ಯಾವ ನಟರನ್ನೂ ಆಯ್ಕೆ ಮಾಡಿಲ್ಲ ಎಂದು ಕರಣ್ ಜೋಹರ್ ತಿಳಿಸಿದ್ದಾರೆ.

    ಸಲಿಂಗಕಾಮಿ ಪ್ರಣಯ ಮತ್ತು ಪ್ರೀತಿಯನ್ನು ಆಧರಿಸಿದ ಕೆಲವು ಸಿನಿಮಾಗಳು ಭಾರತದಲ್ಲಿ ವಿವಿಧ ರೀತಿಯ ವಿವಾದಗಳಿಗೆ ಕಾರಣವಾಗಿವೆ. ಶಬಾನಾ ಆಜ್ಮಿ ಮತ್ತು ನಂದಿತಾ ದಾಸ್ ನಟನೆಯ, ಇಂಡೋ-ಕೆನಡಿಯನ್ ಫಿಲ್ಮ್ ಮೇಕರ್ ದೀಪಾ ಮೆಹ್ತಾ ನಿರ್ಮಾಣದಲ್ಲಿ 1996ರಲ್ಲಿ ತೆರೆಕಂಡ ಫೈರ್ ಸಿನಿಮಾಗೆ ಶಿವಸೇನಾ ಮತ್ತು ಬಜರಂಗ ದಳ ಚಲನಚಿತ್ರ ಬಿಡುಗಡೆಗೆ ಅಡ್ಡಿ ಪಡಿಸಿದವು ಎಂದರು.

    ಸಿನಿಮಾ ನಿರ್ಮಾಪಕರು “ನಾನೊಬ್ಬ ಪ್ರಮುಖ ಸಿನಿಮಾ ನಿರ್ಮಾಪಕನಾಗಿದ್ದು, ಸಲಿಂಗಕಾಮ ಪ್ರೀತಿ ವಿಷಯದ ಸಿನಿಮಾ ಮಾಡಬಹುದು” ಅಂತ ತಿಳಿಸಿದ್ದಾರೆ. ಹೀಗಾಗಿ ಸಲಿಂಗಕಾಮಿ ಪ್ರೇಮ ಕಥೆಯನ್ನು ಮಾಡುವ ಇಚ್ಛೆಯನ್ನು ಹೊಂದಿರುವ ಮತ್ತು ಈ ಚಿತ್ರದಲ್ಲಿ ಇಬ್ಬರು ಪ್ರಮುಖ ನಟರು ಅಭಿನಯಿಸಲಿದ್ದಾರೆ. ಆದರೆ ಇಂತವರೇ ಸಿನಿಮಾದಲ್ಲಿ ಅಭಿನಯಿಸಬೇಕು ಅಂತ ನಿರ್ಧಾರ ಮಾಡಿಲ್ಲ ಎಂದು ತಿಳಿಸಿದ್ದಾರೆ.

    ಭಾರತೀಯ ಚಲನಚಿತ್ರ ಭ್ರಾತೃತ್ವವನ್ನು ದಾವೋಸ್ ನಲ್ಲಿ ಪ್ರತಿನಿಧಿಸಲು ನನಗೆ ತುಂಬಾ ಖುಷಿಯಾಗಿದೆ. ನಮ್ಮ ದೇಶದ ಸಾಮಾಜಿಕ ಹಾಗೂ ಸಿನಿಮಾ ಉದ್ಯಮಕ್ಕೆ ಬೇಕಾದ ಅಂಶಗಳ ಕುರಿತಾಗಿ ಇಲ್ಲಿನ ಜನರ ಜೊತೆಗೆ ಚರ್ಚೆ ನಡೆಸುತ್ತಿರುವೆ. ಇದು ನನಗೆ ತುಂಬಾ ಜವಾಬ್ದಾರಿ ತಂದುಕೊಟ್ಟಿದೆ. ಅಷ್ಟೇ ಅಲ್ಲದೆ ನನ್ನ ಸಿನಿಮಾವನ್ನು ದಾವೋಸ್ ನಲ್ಲಿ ಪ್ರತಿನಿಧಿಸಲು ಸಂತೋಷವಾಗಿದೆ ಎಂದು ಕರಣ್ ಜೋಹರ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೋಹಿತ್ ಶೆಟ್ಟಿ, ಕರಣ್, ರಣ್‍ವೀರ್ ಸಿಂಗ್‍ಗೆ ದೀಪಿಕಾ ಆಶೀರ್ವಾದ!

    ರೋಹಿತ್ ಶೆಟ್ಟಿ, ಕರಣ್, ರಣ್‍ವೀರ್ ಸಿಂಗ್‍ಗೆ ದೀಪಿಕಾ ಆಶೀರ್ವಾದ!

    ಮುಂಬೈ: ಬಾಲಿವುಡ್ ಅಂಗಳದಲ್ಲಿ ಧೂಳೆಬ್ಬಿಸುತ್ತಿರುವ ಸಿಂಭಾ ಚಿತ್ರದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ನಟಿ ದೀಪಿಕಾ ಪಡುಕೋಣೆ ನಿರ್ದೇಶಕ ರೋಹಿತ್ ಶೆಟ್ಟಿ, ಕರಣ್ ಜೋಹರ್ ಹಾಗೂ ರಣ್‍ವೀರ್ ಸಿಂಗ್‍ಗೆ ಆಶೀರ್ವಾದ ಮಾಡುತ್ತಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

    ನಟ ರಣ್‍ವೀರ್ ಸಿಂಗ್ ಹಾಗೂ ಸಾರಾ ಅಲಿಖಾನ್ ಅಭಿನಯದ ಸಿಂಭಾ ಚಿತ್ರ ಸಿನಿ ಪ್ರೀಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪ್ರೇಕ್ಷಕರು ಚಿತ್ರ ನೋಡಿ ಬಹಳ ಒಳ್ಳೆಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಚಿತ್ರವನ್ನು ಸ್ಟಾರ್ ನಿರ್ದೇಶಕ ರೋಹಿತ್ ಶೆಟ್ಟಿ ನಿರ್ದೇಶಿಸಿದ್ದು, ಕರಣ್ ಜೋಹರ್ ನಿರ್ಮಿಸಿದ್ದಾರೆ. ಈ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಜೋರಾಗಿದ್ದು, ಈವರೆಗೆ ಸರಿಸುಮಾರು 190 ಕೋಟಿ ರೂ. ಕಲೆಕ್ಷನ್ ಮಾಡಿದೆ.

    ಅದ್ಭುತವಾಗಿ ಪ್ರದರ್ಶನ ಕಾಣುತ್ತಿರುವ ಸಿಂಭಾ ಚಿತ್ರದ ಯಶಸ್ಸಿನ ಖುಷಿಯನ್ನು ಸಂಭ್ರಮಿಸಲು, ನಿರ್ಮಾಪಕ ಕರಣ್ ಜೋಹರ್ ತಮ್ಮ ಮುಂಬೈ ನಿವಾಸದಲ್ಲಿ ಚಿತ್ರ ತಂಡಕ್ಕೆ ಪಾರ್ಟಿಯನ್ನು ಆಯೋಜಿಸಿದ್ದರು. ಈ ವೇಳೆ ತೆಗೆದ ಸಂಭ್ರಮಾಚರಣೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದೆ. ಅದರಲ್ಲಿ ದೀಪಿಕಾ ಪಡುಕೋಣೆ ಅವರು ನಿರ್ದೇಶಕ ರೋಹಿತ್ ಶೆಟ್ಟಿ, ಕರಣ್ ಜೋಹರ್ ಹಾಗೂ ರಣ್‍ವೀರ್ ಸಿಂಗ್‍ಗೆ ಆರ್ಶಿವಾದ ಮಾಡುತ್ತಿರುವ ಕ್ಯೂಟ್ ಫೋಟೋ ಅಭಿಮಾನಿಗಳ ಮನ ಗೆದ್ದಿದೆ.

    ನಿರ್ದೇಶಕ ರೋಹಿತ್ ಶೆಟ್ಟಿ ಅವರು ತಮ್ಮ ಮುಂದಿನ ಚಿತ್ರದ ಬಗ್ಗೆ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಿಂದ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅಕ್ಷಯ್ ಕುಮಾರ್, ರಣ್‍ವೀರ್ ಸಿಂಗ್, ಅಜಯ್ ದೇವಗನ್, ಕರಣ್ ಜೋಹರ್ ಜೊತೆ ತಾವು ಇರುವ ಫೋಟೋವನ್ನು ಹಾಕಿ, ನಿಮಗೆ ಗೊತ್ತಿರದ ಗುಟ್ಟೊಂದನ್ನು ನಾನು ಹೇಳಲಾ, ಸಿಂಗಂ ಸಿಂಭಾ ಸೂರ್ಯವಂಶಿ ಬರುತ್ತಿದೆ ಅಂತ ಬರೆದು ಪೋಸ್ಟ್ ಮಾಡಿದ್ದಾರೆ.

    ಸಿಂಭಾ ಚಿತ್ರ ತೆರೆಕಂಡ ಎರಡನೇ ವಾರಕ್ಕೆ ಸುಮಾರು 190 ಕೋಟಿ ರೂ. ತನ್ನದಾಗಿಸಿಕೊಂಡಿದೆ. ಅಲ್ಲದೆ 2018ರಲ್ಲಿ ಅತೀ ಹೆಚ್ಚು ಗಳಿಸಿದ ಸಿನಿಮಾಗಳಲ್ಲಿ ಸದ್ಯ ಸಿಂಭಾ ಚಿತ್ರ ಮೂರನೇ ಸ್ಥಾನದಲ್ಲಿದೆ.

    https://www.instagram.com/p/BsV98rqhB3j/?utm_source=ig_embed

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪುತ್ರಿ ಜಾಹ್ನವಿ ‘ಧಡಕ್’ ಟ್ರೇಲರ್ ಗೆ ಕೊನೆಗೂ ಪ್ರತಿಕ್ರಿಯಿಸಿದ ಬೋನಿ ಕಪೂರ್

    ಪುತ್ರಿ ಜಾಹ್ನವಿ ‘ಧಡಕ್’ ಟ್ರೇಲರ್ ಗೆ ಕೊನೆಗೂ ಪ್ರತಿಕ್ರಿಯಿಸಿದ ಬೋನಿ ಕಪೂರ್

    ಮುಂಬೈ: ಬಾಲಿವುಡ್‍ನ ಚಾಂದಿನಿ, ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್ ಧಡಕ್ ಚಿತ್ರದೊಂದಿಗೆ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಟ್ರೇಲರ್ ನೋಡಿದ ಬೋನಿ ಕಪೂರ್ ‘ವಾವ್..ಎಂತಹ ನೈಜ ಅಭಿನಯ ಮಾಡುತ್ತೀಯ’ ಎಂದು ಮಗಳಿಗೆ ಮೆಚ್ಚುಗೆ ನೀಡಿದ್ದಾರೆ. ಚಿತ್ರದಲ್ಲಿ ಜಾಹ್ನವಿ ನಟನೆ ಕುರಿತು ಅವರ ತಂದೆ ಬೋನಿ ಕಪೂರ್ ರವರ ಪ್ರತಿಕ್ರಿಯೆ ತಿಳಿಯಲು ಪ್ರೇಕ್ಷಕರು ಕಾಯುತ್ತಿದ್ದರು.

    ಚಿತ್ರದ ಪೋಸ್ಟರ್ ಗಳು ಹಾಗೂ ಮೊದಲ ಹಾಡು ಈಗಾಗಲೇ ರಿಲೀಸ್ ಆಗಿದ್ದು ನೋಡುಗರ ಮೆಚ್ಚುಗೆ ಪಡೆದಿದೆ. ಚಿತ್ರದ ಮೊದಲ ನೋಟವು ಪ್ರೇಕ್ಷಕರ ಹೃದಯ ಮುಟ್ಟಿದ್ದು, ಜಾಹ್ನವಿ ಅವರ ಕುಟುಂಬವೂ ಚಲನಚಿತ್ರಕ್ಕೆ ಮೆಚ್ಚುಗೆ ನೀಡಿದ್ದಾರೆ. ಇಡೀ ಕಪೂರ್ ಕುಟುಂಬವು ಚಿತ್ರದ ಟ್ರೇಲರ್ ಬಿಡುಗಡೆ ಸಮಯದಲ್ಲಿ ಜಾಹ್ನವಿಗೆ ಸಂಪೂರ್ಣ ಬೆಂಬಲ ನೀಡಿದೆ.

    ಕರಣ್ ಜೊಹರ್ ವರ ಧರ್ಮ ಪ್ರೊಡಕ್ಷನ್‍ನಲ್ಲಿ ಈ ಸಿನಿಮಾ ನಿರ್ಮಾಣವಾಗಿದ್ದು, ಚಿತ್ರದಲ್ಲಿ ಜಾಹ್ನವಿ ಕಪೂರ್ ಅವರ ಜೊತೆ ಬಾಲಿವುಡ್‍ನ ಖ್ಯಾತ ನಟ ಶಾಹಿದ್ ಕಪೂರ್ ರವರ ಸಹೋದರ ಇಶಾನ್ ಖಟ್ಟರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಧಡಕ್ ಸೂಪರ್ ಹಿಟ್ ಮರಾಠಿಯ ‘ಸೈರಾಟ್’ ಚಿತ್ರದ ರಿಮೇಕ್ ಆಗಿದ್ದು ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ.

    ಚಿತ್ರದ ಮೊದಲ ಹಾಡಿನಲ್ಲಿ ಜಾಹ್ನವಿ ಹಾಗೂ ಇಶಾನ್ ಜೋಡಿ ಪ್ರೇಕ್ಷಕರಿಗೆ ಬಹುಮೆಚ್ಚುಗೆ ಆಗಿದ್ದು, ಹಾಡಿನಲ್ಲಿ ಇಬ್ಬರೂ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಹಾಡಿನಲ್ಲಿ ಎರಡು ಹೃದಯಗಳು ಪ್ರೀತಿಸುವ ಕಥೆ ಇದಾಗಿದ್ದು, ಶಶಾಂಕ್ ಖೈತಾನ್ ಚಿತ್ರದ ನಿರ್ದೇಶಕರಾಗಿದ್ದು, ಅಜಯ್ ಅತುಲ್ ಸಂಗೀತ ನೀಡಿದ್ದಾರೆ. ಜುಲೈ 20 ರಂದು ಈ ಚಿತ್ರ ಬಿಡುಗಡೆಯಾಗಲಿದೆ.

     

  • ವಿಡಿಯೋ: ಪ್ರಿಯಕರನ ಹಾಡಿಗೆ ಮಾಜಿ ಪ್ರಿಯಕರನ ಜೊತೆ ಡ್ಯಾನ್ಸ್ ಮಾಡಿದ ದೀಪಿಕಾ!

    ವಿಡಿಯೋ: ಪ್ರಿಯಕರನ ಹಾಡಿಗೆ ಮಾಜಿ ಪ್ರಿಯಕರನ ಜೊತೆ ಡ್ಯಾನ್ಸ್ ಮಾಡಿದ ದೀಪಿಕಾ!

    ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಕಾರ್ಯಕ್ರಮವೊಂದರಲ್ಲಿ ಮಾಜಿ ಗೆಳೆಯನ ಜೊತೆ ಪ್ರಿಯಕರನ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ.

    ಬಾಲಿವುಡ್ ಸ್ಟಾರ್ ಕರಣ್ ಜೋಹರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ರಣ್‍ಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಪಾಲ್ಗೊಂಡಿದ್ದರು. ಅಷ್ಟೇ ಅಲ್ಲದೇ ಕಾರ್ಯಕ್ರಮದಲ್ಲಿ ರಣ್‍ಬೀರ್ ಹಾಗೂ ದೀಪಿಕಾ ಜೊತೆಯಲ್ಲಿ ಡ್ಯಾನ್ಸ್ ಕೂಡ ಮಾಡಿದ್ದಾರೆ.

    ಯೇ ಜವಾನಿ ಹೈ ದಿವಾನಿ, ಚೆನ್ನೈ ಎಕ್ಸ್ ಪ್ರೆಸ್, ಬಾಜಿರಾವ್ ಮಸ್ತಾನಿ ಹಾಗೂ ಹೇ ದಿಲ್ ಹೈ ಮುಷ್ಕಿಲ್ ಚಿತ್ರದ ಹಾಡಿಗೆ ಡ್ಯಾನ್ಸ್ ಹಾಡಿದ್ದಾರೆ. ನಂತರ ನಿರ್ದೇಶಕ ಕರಣ್ ಜೋಹರ್ ರಣವೀರ್ ಸಿಂಗ್ ಅಭಿನಯದ ‘ಬಾಜಿರಾವ್ ಮಸ್ತಾನಿ’ ಚಿತ್ರದ ‘ಮಲ್ಹಾರಿ’ ಹಾಡಿಗೆ ಇಬ್ಬರಿಗೂ ಡ್ಯಾನ್ಸ್ ಆಫರ್ ಮಾಡಿಸಿದ್ದಾರೆ.

    ಕರಣ್ ಜೋಹರ್ ಡ್ಯಾನ್ಸ್ ಆಫರ್‍ಗೆ ರಣ್‍ಬೀರ್ ಹಾಗೂ ದೀಪಿಕಾ ಅವರಿಗೆ ಹಾಡಿನ ಸ್ಟೆಪ್ಸ್ ಮರೆತು ಹೋಗಿತ್ತು. ನಂತರ ದೀಪಿಕಾ ತಾವು ಏನು ಡ್ಯಾನ್ಸ್ ಮಾಡಿದೆ ಎಂಬುದು ಅವರಿಗೆ ತಿಳಿದಿರಲಿಲ್ಲ ಎಂದು ಪ್ರತಿಕೆಯೊಂದು ವರದಿ ಮಾಡಿದೆ.

    ಕಾರ್ಯಕ್ರಮದಲ್ಲಿ ಹಾಕಲಾಗಿದ್ದ ಹಾಡಿನ ಸಿಗ್ನೇಚರ್ ಸ್ಟೆಪ್ ಮಾಡಬೇಕಿತ್ತು. ರಣ್‍ಬೀರ್ ಹಾಗೂ ದೀಪಿಕಾ ಎಲ್ಲ ಹಾಡಿನ ಸಿಗ್ನೇಚರ್ ಸ್ಟೆಪ್ ಮಾಡಿದ್ದರು. ಆದರೆ ರಣ್‍ವೀರ್ ಸಿಂಗ್ ನಟಿಸಿದ ಬಾಜಿರಾವ್ ಮಸ್ತಾನಿ ಚಿತ್ರದ ಮಲ್ಹಾರಿ ಹಾಡಿನ ಸಿಗ್ನೇಚರ್ ಸ್ಟೆಪ್‍ನನ್ನು ಮರೆತು ಹೋಗಿದ್ದರು.

    ರಣ್‍ವೀರ್ ಹಾಗೂ ದೀಪಿಕಾ ಇದುವರೆಗೂ ಬಾಲಿವುಡ್‍ನಲ್ಲಿ ಬಚನಾ ಹೇ ಹಸಿನೋ, ಯೇ ಜವಾನಿ ಹೇ ದಿವಾನಿ ಹಾಗೂ ತಮಾಶಾ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ ರಣ್‍ಬೀರ್ ಕಪೂರ್, ಸಂಜಯ್ ದತ್ತ್ ಜೀವನ ಚರಿತ್ರೆಯ ಬ್ರಹ್ಮಾಸ್ತ್ರ ಚಿತ್ರದಲ್ಲಿ ಬ್ಯೂಸಿಯಾಗಿದ್ದು, ದೀಪಿಕಾ ಪದ್ಮಾವತ್ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.

    Lungi Dance by Deepika Padukone & Ranbir Kapoor ! ????????

    A post shared by Deepika Padukone Fanpage (@deepika.padukone.fanpage) on

    Matargashti ????❤ My Tara & Ved ❤

    A post shared by Deepika Padukone Fanpage (@deepika.padukone.fanpage) on

    omg ae dil hai mushkil ????❤

    A post shared by Deepika Padukone Fanpage (@deepika.padukone.fanpage) on

    her entry my god ???????? video credits akash on twitter.

    A post shared by Deepika Padukone Fanpage (@deepika.padukone.fanpage) on

  • ಕರಣ್ ಜೋಹರ್ ಜೊತೆ ಇರುವ ತನ್ನ ಸಂಬಂಧದ ರಹಸ್ಯ ಬಿಚ್ಚಿಟ್ಟ ಶಾರೂಖ್ ಖಾನ್!

    ಕರಣ್ ಜೋಹರ್ ಜೊತೆ ಇರುವ ತನ್ನ ಸಂಬಂಧದ ರಹಸ್ಯ ಬಿಚ್ಚಿಟ್ಟ ಶಾರೂಖ್ ಖಾನ್!

    ಮುಂಬೈ: ನಿರ್ದೇಶಕ ಕರಣ್ ಜೋಹರ್ ನಟ ಶಾರೂಖ್ ಖಾನ್ ಅವರ ಜೊತೆ ಮಾಡಿರುವ ಎಲ್ಲಾ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿದೆ. ಆದರೆ ಈಗ ಈ ಇಬ್ಬರು ಜೊತೆಯಾಗಿ ಸಿನಿಮಾ ಮಾಡಿ ಹಲವು ವರ್ಷಗಳು ಆಗಿದೆ. ಈ ಹಿಂದೆ 2010ರಲ್ಲಿ ಕರಣ್ ಅವರ ನಿರ್ದೇಶನದಲ್ಲಿ ಬಿಡುಗಡೆಯಾದ ‘ಮೈ ನೇಮ್ ಈಸ್ ಖಾನ್’ ಚಿತ್ರದಲ್ಲಿ ಶಾರೂಖ್ ನಟಿಸಿದ್ದರು.

    ಇತ್ತೀಚಿಗೆ ನಡೆದ ‘ಇಫ್ತೆಫಾಕ್’ ಚಿತ್ರದ ಪ್ರೆಸ್ ಮೀಟ್ ನಲ್ಲಿ ಶಾರೂಖ್ ಖಾನ್ ಆಗಮಿಸಿದ್ದರು. ಆಗ ಅಲ್ಲಿದ ಮಾಧ್ಯಮದವರು ನಿಮ್ಮ ಹಾಗೂ ಕರಣ್ ಅವರ ಸಿನಿಮಾ ಯಾವಾಗ ಬರಲಿದೆ ಎಂದು ಶಾರೂಖ್ ಅವರಿಗೆ ಪ್ರಶ್ನೆ ಕೇಳಿದ್ದಾರೆ. ನಾವು ಸಾಕಷ್ಟು ಚಿತ್ರದ ಕಥೆ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಆದರೆ ಯಾವುದು ಈಗ ಫೈನಲ್ ಆಗಿಲ್ಲ ಎಂದು ಶಾರೂಖ್ ಉತ್ತರಿಸಿದ್ದಾರೆ.

    ತಮ್ಮ ಪ್ರೊಡಕ್ಷನ್ ವೆಂಚರ್ ಬಗ್ಗೆ ಮಾತನಾಡುತ್ತಾ ಕರಣ್, “ನಾನು ಹಾಗೂ ಶಾರೂಖ್ ಕೇವಲ ಒಳ್ಳೆಯ ಸ್ನೇಹಿತರು ಅಥವಾ ಒಳ್ಳೆ ಕುಟುಂಬದವರು ಅಷ್ಟೇ ಅಲ್ಲ ಒಳ್ಳೆಯ ಸಹದ್ಯೋಗಿ ಕೂಡ” ಎಂದು ಮಾಧ್ಯಮದವರಿಗೆ ತಿಳಿಸಿದರು.

    ಕರಣ್ ಹಾಗೂ ಶಾರೂಖ್ ನಡುವೆ ಜಗಳ ನಡೆದಿದೆ. ಅವರ ಮಧ್ಯೆ ಭಿನ್ನಾಭಿಪ್ರಾಯ ಇದೆ ಎಂದು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತಿತ್ತು. ಈಗ ಇವರಿಬ್ಬರು ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುವ ಮೂಲಕ ಇಬ್ಬರ ಸಂಬಂಧದ ಬಗ್ಗೆ ಹರಡಿದ್ದ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.

    ಕರಣ್ ಅವರಿಂದ ನನಗೆ ಯಾವುದೇ ತೊಂದರೆ ಇಲ್ಲ. ನಾನು ಯಾವಾಗಲೂ ಅವರನ್ನು ಪ್ರೀತಿಯಿಂದ ನೋಡುತ್ತೇನೆ. ಅವರ ಪ್ರೀತಿಯ ಹಲವು ಮುಖಗಳನ್ನು ನಾನು ನೋಡಿದ್ದೇನೆ. ನನಗೆ ಸ್ನೇಹಿತನಿಂದ ಒಬ್ಬ ಸಹೋದರನ ರೀತಿಯಲ್ಲಿ ಅವರು ನನಗೆ ನೋಡುತ್ತಾರೆ ಎಂದು ಶಾರೂಖ್ ಖಾನ್ ಕರಣ್ ಅವರನ್ನು ಹೊಗಳಿದರು.

  • ದುಬಾರಿ ಸಂಭಾವನೆ ಕೇಳಿದ ಪ್ರಭಾಸ್: ಬಾಲಿವುಡ್‍ ನಲ್ಲಿ ಲಾಂಚ್ ಮಾಡಲು ಕರಣ್ ಹಿಂದೇಟು

    ದುಬಾರಿ ಸಂಭಾವನೆ ಕೇಳಿದ ಪ್ರಭಾಸ್: ಬಾಲಿವುಡ್‍ ನಲ್ಲಿ ಲಾಂಚ್ ಮಾಡಲು ಕರಣ್ ಹಿಂದೇಟು

    ಮುಂಬೈ: ಬಾಹುಬಲಿಯ ಹೀರೋ ಪ್ರಭಾಸ್ ಅವರನ್ನು ಬಾಲಿವುಡ್ ಸಿನಿಮಾದಲ್ಲಿ ಲಾಂಚ್ ಮಾಡಲು ಮುಂದಾಗಿದ್ದ ನಿರ್ಮಾಪಕ ಕರಣ್ ಜೋಹರ್ ಈಗ ತಮ್ಮ ಈ ಪ್ರಯತ್ನದಿಂದ ಹಿಂದಕ್ಕೆ ಸರಿದಿದ್ದಾರೆ.

    ಪ್ರಭಾಸ್ ನಟನೆಯ ಬಾಹುಬಲಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಹಿಂದಿ ಆವೃತ್ತಿಯ ಬಾಹುಬಲಿ ಸಿನಿಮಾವನ್ನು ಕರಣ್ ಜೋಹರ್ ಬಿಡುಗಡೆ ಮಾಡಿದ್ದರು. ಹೀಗಾಗಿ ಬಾಲಿವುಡ್ ನಲ್ಲಿ ಪ್ರಭಾಸ್ ನನ್ನು ಕರೆತರಲು ಕರಣ್ ಎಲ್ಲಾ ರೀತಿಯ ತಯಾರಿ ನಡೆಸಿಕೊಂಡಿದ್ದರು.

    ಪ್ರಭಾಸ್ ನನ್ನು ಬಾಲಿವುಡ್ ನಲ್ಲಿ ಅದ್ಧೂರಿಯಾಗಿ ಲಾಂಚ್ ಮಾಡಲು ಕರಣ್ ನಿರ್ಧರಿಸಿದ್ದರು. ಆದರೆ ಬಾಹುಬಲಿ ಸಿನಿಮಾದ ಯಶಸ್ಸಿನಿಂದಾಗಿ ದಿಢೀರನ್ನೇ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡ ಹಿನ್ನೆಲೆಯಲ್ಲಿ ಪ್ರಭಾಸ್ ಅವರನ್ನು ಲಾಂಚ್ ಮಾಡುವ ಪ್ರಯತ್ನವನ್ನು ಕೈಬಿಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ಬಾಲಿವುಡ್ ನಲ್ಲಿ ನಟಿಸಲು ಪ್ರಭಾಸ್ ಬರೋಬ್ಬರಿ ರೂ. 20 ಕೋಟಿ ಸಂಭಾವನೆ ಕೇಳಿದ್ದರಂತೆ. ಪ್ರಭಾಸ್ ಬೇಡಿಕೆಗೆ ಕರಣ್ ಏನೂ ಹೇಳದೆ ಸುಮ್ಮನಾಗಿದ್ದಾರೆ. ದಕ್ಷಿಣ ಭಾರತದಲ್ಲಿ ಪ್ರಭಾಸ್ ಹೆಸರು ಮಾಡಿದ್ದರೂ ಹಿಂದಿಯಲ್ಲಿ ಅಷ್ಟೊಂದು ಪ್ರಸಿದ್ಧಿ ಇಲ್ಲದ ಕಾರಣ ಕರಣ್ ಜೋಹರ್ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.

    ಬಾಲಿವುಡ್ ನಲ್ಲಿ ನಟಿಸಲು ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೂ ಕೂಡ ಇಷ್ಟು ಸಂಭಾವನೆ ನೀಡಿರಲಿಲ್ಲ ಎಂದು ವರದಿಯೊಂದು ತಿಳಿಸಿದೆ. ಬಾಹುಬಲಿ ಯಶಸ್ಸಿನ ನಂತರ ಪ್ರಭಾಸ್ ದಕ್ಷಿಣ ಭಾರತದಲ್ಲಿ ಒಂದು ಸಿನಿಮಾಗೆ 30 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ.

    ಪ್ರಭಾಸ್ ಈಗ ‘ಸಾಹೋ’ ಚಿತ್ರದಲ್ಲಿ ನಟಿಸುತ್ತಿದ್ದು, ಇತ್ತೀಚಿಗೆ ಅವರ ಹುಟ್ಟುಹಬ್ಬದ ದಿನದಂದು ಚಿತ್ರದ ಮೊದಲ ಲುಕ್ ಅನ್ನು ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಪ್ರಭಾಸ್ ಜೊತೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.