ಆನೇಕಲ್: ಹಸಿ ಕರಗದ ಬಳಿಕ ಆನೇಕಲ್‌ನಲ್ಲಿ (Anekal) ಎರಡನೇ ದಿನ ನಡೆಯುವ ಇತಿಹಾಸ ಪ್ರಸಿದ್ಧ ಧರ್ಮರಾಯಸ್ವಾಮಿ ದೇವಾಲಯದ ಒಣ ಕರಗ (Karaga) ಮಹೋತ್ಸವ ಅದ್ಧೂರಿಯಾಗಿ ನೆರವೇರಿದೆ.
ಒಣ ಕರಗವನ್ನು ಹೊತ್ತು ಸಾಗಿದ ಅರ್ಚಕ ರಮೇಶ್ ಆನೇಕಲ್‌ನ ರಾಜಬೀದಿಗಳಲ್ಲಿ ನರ್ತನ ಮಾಡುತ್ತಾ ಗತವೈಭವ ನೆನೆಪಿಗೆ ಬರುವಂತೆ ಮಾಡಿದ್ದಾರೆ. ಕರಗ ಮಂಡಿಯೂರಿ ದೇವಾಲಯದಿಂದ ಹೊರ ಬಂದಿದ್ದು, ನಂತರ ಸಂತೆಮಾಳ ಸಮೀಪ ಕೆಂಡದ ಮೇಲೆ ಕರಗ ಹೊತ್ತ ರಮೇಶ್ ನರ್ತನ ಮಾಡಿ, ಬಳಿಕ ವೀರ ವಸಂತನ ಶಿರಶ್ಛೇಧನ ಮುಗಿಸಿ ಆನೇಕಲ್ ಪಟ್ಟಣದ ತಿಲಕ್ ವೃತ್ತ, ಉಳಿ ತಿಗಳರ ಬೀದಿ, ಅಂಬೇಡ್ಕರ್ ಕಾಲೋನಿ, ಕೆಇಬಿ ಕಚೇರಿ, ತಾಲೂಕು ಕಚೇರಿ ರಸ್ತೆ ಮಾರ್ಗವಾಗಿ ಮರಳಿ ದೇವಾಲಯದ ಬಳಿ ಬಂದು ಅಲ್ಲಿ ಕರಗ ನರ್ತನ ನಡೆಯಿತು. ಕರಗ ಸಾಗುತ್ತಿದ್ದ ದಾರಿಯುದ್ದಕ್ಕೂ ಸಾವಿರಾರು ಮಂದಿ ಭಕ್ತಾದಿಗಳು ಕರಗವನ್ನು ನೋಡಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಯುಎಸ್-ಚೀನಾ ಟಾರಿಫ್ ವಾರ್ ಮತ್ತಷ್ಟು ಜೋರು – ಚೀನಾ ಉತ್ಪನ್ನಗಳಿಗೆ 245% ಸುಂಕ ವಿಧಿಸಿದ ಅಮೆರಿಕ
ರಾಜ ಬೀದಿಗಳಲ್ಲಿ ಸಂಚಾರ ಮಾಡಿದ ದ್ರೌಪತಮ್ಮ ದೇವಿ ಕರಗ ಮುಂಜಾನೆ 5:56 ಗಂಟೆಗೆ ಮರಳಿ ಮಂಡಿಯೂರಿ ನರ್ತನ ಮಾಡುತ್ತಾ ದೇವಾಲಯದ ಒಳಗೆ ತಲುಪಿದೆ. ಸಾಕಷ್ಟು ವಿವಾದಗಳಿಂದ ಕೂಡಿದ್ದ ಕರಗಕ್ಕೆ ಈ ಬಾರಿ ಹೈಕೋರ್ಟ್ ತೆರೆ ಎಳೆದಿದ್ದು, ಮುಂದಿನ ಬಾರಿ ಇನ್ನಷ್ಟು ವಿಜೃಂಭಣೆಯಿಂದ ಕರಗ ಮಹೋತ್ಸವ ನಡೆಯುವ ನಿರೀಕ್ಷೆ ಇದೆ. ಕರಗ ಸಾಗುವ ರಸ್ತೆಯುದ್ದಕ್ಕೂ ಹೂವಿನ ಅಲಂಕಾರ ಮಾಡಲಾಗಿತ್ತು. ಇದನ್ನೂ ಓದಿ: ಭಾರತದ ಮೊದಲ ಆನ್-ಬೋರ್ಡ್ ಎಟಿಎಂ ಪ್ರಯೋಗ ಯಶಸ್ವಿ – ಇನ್ಮುಂದೆ ರೈಲಿನಲ್ಲೂ ಇರಲಿದೆ ಎಟಿಎಂ!
– 13ನೇ ಬಾರಿಗೆ ದ್ರೌಪದಮ್ಮನ ಕರಗ ಹೊತ್ತು ಸಾಗಿದ ಅರ್ಚಕ ಜ್ಞಾನೇಂದ್ರ – ಕರಗ ಉತ್ಸವದಲ್ಲಿ ಗೋವಿಂದ ನಾಮಸ್ಮರಣೆ
ಬೆಂಗಳೂರು: ಜಗಮಗಿಸುತ್ತಿರೋ ವಿದ್ಯುತ್ ದೀಪಗಳು, ಖಡ್ಗ ಹಿಡಿದುಕೊಂಡು ನಿಂತಿದ್ದ ವೀರ ಕುಮಾರರು, ಬಣ್ಣ ಬಣ್ಣದ ಹೂವುಗಳಿಂದ ಅಲಂಕೃತಗೊಂಡ ತೇರುಗಳು, ಭಕ್ತಸಾಗರದಲ್ಲಿ ಗೋವಿಂದ ಗೋವಿಂದ ಉದ್ಗೋಷ, ಈ ದೃಶ್ಯಗಳು ಬೆಂಗಳೂರಿನ (Bengaluru) ತಿಗಳರ ಪೇಟೆಯಲ್ಲಿರೋ ಧರ್ಮರಾಯಸ್ವಾಮಿ ದೇವಸ್ಥಾನದ (Dharmaraya Swamy Temple) ಆವರಣದಲ್ಲಿ ನಡೆದ ಕರಗ ಮಹೋತ್ಸವದಲ್ಲಿ (Karaga Mahotsava) ಕಂಡು ಬಂದವು. ಚೈತ್ರ ಪೂರ್ಣಿಮೆ ಬೆಳದಿಂಗಳ ಬೆಳಕಲ್ಲಿ ವಿಶ್ವವಿಖ್ಯಾತ ಬೆಂಗಳೂರು ಕರಗ ಸಂಪನ್ನವಾಗಿದೆ.
ಬೆಂಗಳೂರು ಕರಗ ತನ್ನದೇ ಆದ ವಿಶಿಷ್ಟ ಇತಿಹಾಸ ಹೊಂದಿರೋ ಸಾಂಪ್ರದಾಯಿಕ ಸಂಭ್ರಮ. ಅದು ಒಂದಲ್ಲ, ಎರಡಲ್ಲ, ಬರೊಬ್ಬರಿ 8 ಶತಮಾನಗಳ ವೈಭವದ ಸಡಗರ. ಈ ಬಾರಿ ಕೂಡ ಆ ವೈಭವದ ಸಂಭ್ರಮ ಅದ್ಧೂರಿಯಾಗಿ ನೆರವೇರಿದ್ದು, ಸಾವಿರಾರು ಸಂಖ್ಯೆಯ ಭಕ್ತರು ಕರಗ ಕಣ್ತುಂಬಿಕೊಳ್ಳುವ ಮೂಲಕ ಪುನೀತರಾದರು. ಇದನ್ನೂ ಓದಿ: ಮಸ್ಕ್‌ಗೆ ಭಾರತದ ಮಾರುಕಟ್ಟೆ ಮೇಲೇಕೆ ಕಣ್ಣು?
ತಿಗಳರ ಪೇಟೆಯ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ 10 ದಿನದಿಂದ ನಡೆದ ದ್ರೌಪದಿ ದೇವಿ ಕರಗಕ್ಕೆ ಕಳೆದ ರಾತ್ರಿ ವಿಶೇಷ ದಿನ. ಚೈತ್ರ ಪೂರ್ಣಿಮೆಯ ಈ ಮಧ್ಯರಾತ್ರಿ ಧರ್ಮರಾಯನ ದೇವಾಲಯದಿಂದ ಅರ್ಚಕ ಜ್ಞಾನೇಂದ್ರ ಕರಗವನ್ನು ಹೊತ್ತು ಹೊರಬರುತ್ತಿದ್ದಂತೆ ಅಲ್ಲಿ ಸೇರಿದ್ದ ಸಹಸ್ರಾರು ಜನರ ಉದ್ಘೋಷ ಮುಗಿಲು ಮುಟ್ಟಿತ್ತು. ಸರಿಯಾಗಿ 2 ಗಂಟೆಗೆ ಆರಂಭವಾದ ಕರಗ ಉತ್ಸವ ಪೇಟೆ, ಬೀದಿಗಳಲ್ಲಿ ಸಂಚರಿಸಿ, ಅನೇಕ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿತು. ಹಾಗೆಯೇ ಮಸ್ತಾನ್ ದರ್ಗಾದಲ್ಲೂ ಪೂಜೆ ಸ್ವೀಕರಿಸಿ ಭಾವೈಕ್ಯತೆಯ ಸಂದೇಶ ಸಾರಿತು. ಇದೇ ವೇಳೆ ಧರ್ಮರಾಯ ಸ್ವಾಮಿ ದೇವಾಲಯಕ್ಕೆ ಸಿಎಂ ಕೂಡ ಭೇಟಿ ನೀಡಿ ದೇವಿ ದರ್ಶನ ಪಡೆದು, ಸಂಭ್ರಮಕ್ಕೆ ಸಾಕ್ಷಿಯಾದರು. ಇದನ್ನೂ ಓದಿ: ಕಾಂಗ್ರೆಸ್‌ನವ್ರಿಗೆ ಚೊಂಬು ಈಗಲೇ ಫಲಿತಾಂಶದ ರೂಪದಲ್ಲಿ ಕಾಣ್ತಿದೆ: ಅಮಿತ್ ಶಾ ತಿರುಗೇಟು
ದರ್ಗಾದಲ್ಲಿ ಪೂಜೆ ಸ್ವೀಕರಿಸಿ ಅಣ್ಣಮ್ಮ ದೇವಸ್ಥಾನ ತಲುಪಿದ ಕರಗ ಮೆರವಣಿಗೆ ಅಲ್ಲೂ ಪೂಜೆ ಸ್ವೀಕರಿಸಿತು. ಹೀಗೆ ಪೇಟೆ, ಬೀದಿಗಳ ದೇಗುಲಗಳಿಗೆ ತೆರಳಿ ಸಂಪ್ರದಾಯದಂತೆ ಪೂಜೆ ಸ್ವೀಕರಿಸಿದ ಕರಗ ಸೂರ್ಯೋದಯದ ನಂತರ ಮರಳಿ ಧರ್ಮರಾಯನ ದೇಗುಲ ಸೇರಿತು. ಒಟ್ಟಾರೆ ಕರಗ ಮಹೋತ್ಸವ ವರ್ಷದಿಂದ ವರ್ಷಕ್ಕೆ ತನ್ನ ಹಿರಿಮೆ ಹೆಚ್ಚಿಸಿಕೊಳ್ಳುತ್ತಲೇ ಇದ್ದು, ಈ ಬಾರಿ ಕೂಡ ಯಾವುದೇ ಸಮಸ್ಯೆಗಳಿಲ್ಲದೆ ಅಚ್ಚುಕಟ್ಟಾಗಿ ಕರಗೋತ್ಸವ ಅಂತ್ಯಗೊಂಡಿದೆ. ಇದನ್ನೂ ಓದಿ: ಮೋದಿಗೆ ಜನರ ಸಂಕಷ್ಟದ ಅರಿವಿಲ್ಲ: ಪ್ರಿಯಾಂಕಾ ಗಾಂಧಿ
ಬೆಂಗಳೂರು: ಕಳೆದ 8 ಶತಮಾನಗಳಿಂದ ಸಾಂಪ್ರದಾಯಿಕವಾಗಿ ನೆರವೇರುತ್ತಿರೋ ವಿಶ್ವವಿಖ್ಯಾತ ಐತಿಹಾಸಿಕ ಕರಗಕ್ಕೆ (Karaga) ಕ್ಷಣಗಣನೆ ಆರಂಭವಾಗಿದೆ. ಇಂದು ಮಧ್ಯರಾತ್ರಿ 12.30ಕ್ಕೆ ಕರಗ ಮಹೋತ್ಸವಕ್ಕೆ ವಿಜೃಂಭಣೆಯಿಂದ ವಿದ್ಯುಕ್ತ ಚಾಲನೆ ದೊರೆಯಲಿದೆ. ಈ ಬಾರಿ ಕೂಡ ಕರಗದಲ್ಲಿ ಲಕ್ಷಾಂತರ ಮಂದಿ ಭಕ್ತರು ಪಾಲ್ಗೊಳ್ಳುವ ಸಾಧ್ಯತೆ ಇದೆ.
ಐತಿಹಾಸಿಕ ಬೆಂಗಳೂರು ಧರ್ಮರಾಯಸ್ವಾಮಿ ದ್ರೌಪದಿ ಕರಗ ಉತ್ಸವಕ್ಕೆ ಕೌಂಟ್ ಡೌನ್ ಶುರುವಾಗಿದೆ. ಇಂದು ಮಧ್ಯರಾತ್ರಿ 12.30 ಕ್ಕೆ ಕರಗ ಶಕ್ತ್ಯೋತ್ಸವ ಆರಂಭವಾಗಲಿದ್ದು, ಕರಗೋತ್ಸವಕ್ಕೆ ಜಿಲ್ಲಾಡಳಿತ ಮತ್ತು ಬಿಬಿಎಂಪಿ ಸಕಲ ಸಿದ್ಧತೆ ಮಾಡಿಕೊಂಡಿವೆ. ಕಳೆದೊಂದು ವಾರದಿಂದ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರುತ್ತಿದ್ದು ಧರ್ಮರಾಯಸ್ವಾಮಿ ದೇವಸ್ಥಾನ ನವ ವಧುವಿನಂತೆ ಕಂಗೊಳಿಸುತ್ತಿದೆ. ಕರಗ ಸಾಗುವ ದಾರಿಯುದ್ದಕ್ಕೂ ರಸ್ತೆಯನ್ನ ಅಗಲೀಕರಣ ಮಾಡಿ ಸ್ವಚ್ಚಗೊಳಿಸಲಾಗಿದೆ. ವಿದ್ಯುತ್ ದೀಪ, ಹೂಗಳಿಂದ ಅಲಂಕಾರ ಮಾಡಲಾಗಿದೆ.
ಈ ಬಾರಿಯೂ ಕೂಡ ಜ್ಞಾನೇಂದ್ರ ಅವರೇ 13ನೇ ಬಾರಿ ಕರಗ ಹೊರಲಿದ್ದಾರೆ. ಪೂಜೆ ಕುಣಿತ ವಾದ್ಯ ಮೇಳಗಳ ನಡುವೆ ಹೆಜ್ಜೆಹಾಕಲಿದ್ದಾರೆ. ಕರಗ ಆರಂಭಕ್ಕೂ ಮುನ್ನ ಪಾಂಡವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ದೊಡ್ಡ ರಥದಲ್ಲಿ ಪಾಂಡವರ ಮೆರವಣಿಗೆ, ಚಿಕ್ಕರಥದಲ್ಲಿ ಮುತ್ಯಲಮ್ಮ ದೇವಿ ರಥೋತ್ಸವ ನೆರವೇರಲಿದೆ. ಬಳಿಕ ಆರಂಭವಾಗಲಿರುವ ಕರಗ ಉತ್ಸವ ಎಲ್ಲಾ ಪೇಟೆಗಳನ್ನು ಸುತ್ತಿ ಬೆಳಗ್ಗೆ 9 ಗಂಟೆ ಒಳಗೆ ಮತ್ತೆ ಧರ್ಮರಾಯ ಸ್ವಾಮಿ ದೇವಾಲಯ ತಲುಪಲಿದೆ. ಇದನ್ನೂ ಓದಿ: ಬರಪರಿಹಾರ ಬಿಡುಗಡೆ – ಇಂದು ಕೇಂದ್ರದ ವಿರುದ್ಧ ರಾಜ್ಯ ಸರ್ಕಾರ ಪ್ರತಿಭಟನೆ
ಈ ಬಾರಿ ಕೂಡ ಲಕ್ಷಾಂತರ ಸಂಖ್ಯೆಯ ಭಕ್ತರು ದ್ರೌಪದಿ ದೇವಿಯ ದರ್ಶನಕ್ಕೆ ಭಾಗಿಯಾಗುವ ಸಾಧ್ಯತೆ ಇದೆ. ಕಳೆದ ಬಾರಿ ಆದ ಅಹಿತಕರ ಘಟನೆ ನಡೆಯದಂತೆ ಕರಗೋತ್ಸವ ನಡೆಸಲು ಕರಗ ಉತ್ಸವ ವ್ಯವಸ್ಥಾಪಕ ಸಮಿತಿ ಕ್ರಮ ವಹಿಸಿದೆ. ಈ ಬಗ್ಗೆ ಮಾತನಾಡಿದ ಕರಗ ಉತ್ಸವ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಸತೀಶ್, ಯಾವುದೇ ರೀತಿಯ ಗೊಂದಲ ಇಲ್ಲ. ದರ್ಗಾಗೆ ಕರಗ ಹೋಗುತ್ತೆ. ಇದು ಹಲವು ವರ್ಷಗಳಿಂದ ನಡೆದುಕೊಂಡಿರುವ ಬಂದಿರುವ ಪದ್ಧತಿ. ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎಂದಿದ್ದಾರೆ.
ಬಿಬಿಎಂಪಿ ಕರಗ ಉತ್ಸವಕ್ಕೆ ಒಂದೂವರೆ ಕೋಟಿ ಅನುದಾನ ಮೀಸಲಿಟ್ಟಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಖಾಕಿ ಕಣ್ಗಾವಲಿದೆ. ಡಿಸಿಪಿ ನೇತೃತ್ವದಲ್ಲಿ ದೇವಸ್ಥಾನ ಸುತ್ತಮುತ್ತ, ಕರಗ ಸಾಗುವ ಹಾದಿ ಉದ್ದಕ್ಕೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಪೆÇಲೀಸರು ಹಾಗೂ 3 ಕೆಎಸ್‍ಆರ್‍ಪಿ ತುಕಡಿ ನಿಯೋಜಿಸಲಾಗಿದೆ. ಇಂದು ಬೆಳಗ್ಗೆ 6 ರಿಂದ ನಾಳೆ ಬೆಳಗ್ಗೆ 10 ಗಂಟೆವರೆಗೆ ಮದ್ಯ ನಿಷೇಧಿಸಲಾಗಿದೆ.
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಐತಿಹಾಸಿಕ ಕರಗ (Bengaluru Karaga) ಶಕ್ತ್ಯೋತ್ಸವ ಅದ್ದೂರಿಯಾಗಿ ನೇರವೇರಿದೆ.
ಚೈತ್ರ ಪೌರ್ಣಿಮೆಯ ಬೆಳದಿಂಗಳಿನಲ್ಲಿ ಮಲ್ಲಿಗೆಯ ಕಂಪಿನೊಂದಿಗೆ ಕರಗ ಶಕ್ತ್ಯೋತ್ಸವ ಆರಂಭವಾಯ್ತು. ನಗರದ ಅನೇಕ ಕಡೆ ಕರಗ ಮೆರವಣಿಗೆ ಸಾಗಿದೆ. ಮಧ್ಯರಾತ್ರಿ 2 ಗಂಟೆ 24 ನಿಮಿಷಕ್ಕೆ ಆರಂಭವಾದ ಕರಗ ಮೆರವಣಿಗೆ, ದೇವಾಲಯದ ಹೊರಭಾಗದ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲಾಯಿತು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವಿರೇಂದ್ರ ಹೆಗಡೆ (Dr. D Veerendra Heggade) ಯವರು ಧಾರ್ಮಿಕ ವಿಧಿ-ವಿಧಾನಗಳಲ್ಲಿ ಭಾಗವಹಿಸಿದ್ರು. ಆ ಬಳಿಕ ಆರಂಭವಾದ ಕರಗ ಮೆರವಣಿಗೆ, ನಗರದ ಕೆಲ ಭಾಗಗಳ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ನಗರದ ಅನೇಕ ಕಡೆ ಸಾಗುವ ಮೂಲಕ ಲಕ್ಷಾಂತರ ಜನರಿಗೆ ದರ್ಶನ ನೀಡಿದೆ. ಪ್ರತಿವರ್ಷದಂತೆ ಈ ವರ್ಷವು ಮಸ್ತಾನ್ ದರ್ಗಾಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಾಯಿತು. ಇದನ್ನೂ ಓದಿ: ಕಾಂಗ್ರೆಸ್-ಬಿಜೆಪಿ ಘರ್ಷಣೆ, 15 ಕಾರು ಜಖಂ – ಸುರಪುರದಲ್ಲಿ ಶನಿವಾರದವರೆಗೆ ನಿಷೇಧಾಜ್ಞೆ ಜಾರಿ
ಬಳಿಕ ಇನ್ನೂ ಹಲವು ಕಡೆ ಕರಗ ಮೆರವಣಿಗೆ ಮುಂದುವರಿದಿದ್ದು, ಸುಮಾರು ಬೆಳಗ್ಗೆ 9 ಗಂಟೆ ವೇಳೆಗೆ ಮತ್ತೆ ಹಿಂದಿರುಗಿ ಮೂಲ ಸ್ಥಾನ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ದೇವಾಲಯಕ್ಕೆ ತಲುಪಲಿದೆ. ಗುರುವಾರ ರಾತ್ರಿ ಲಕ್ಷಾಂತರ ಮಂದಿ ಭಕ್ತರು ಕರಗವನ್ನು ಕಣ್ತುಂಬಿಕೊಂಡಿದ್ದಾರೆ.
ಹೆಡ್ ಬುಷ್ (Head Bush) ಸಿನಿಮಾಗೆ ಸಂಬಂಧ ಪಟ್ಟಂತೆ ಎರಡೆರಡು ವಿವಾದಗಳು ಚಿತ್ರತಂಡಕ್ಕೆ ಮಗ್ಗಲುಮುಳ್ಳಾಗಿ ಕಾಡುತ್ತಿವೆ. ವೀರಗಾಸೆ ಕಲಾವಿದರಿಗೆ ಅವಮಾನ ಮಾಡಲಾಗಿದೆ ಎನ್ನುವುದು ಒಂದು ವಿವಾದವಾದರೆ, ‘ಜುಜುಬಿ ಕರಗ’ (Karaga) ಎನ್ನುವ ಪದವನ್ನು ಬಳಸಲಾಗಿದ್ದು ಮತ್ತೊಂದು ವಿವಾದಕ್ಕೆ ಕಾರಣವಾಗಿತ್ತು. ನಿನ್ನೆಯಷ್ಟೇ ವೀರಗಾಸೆಗೆ ಸಂಬಂಧಿಸಿದಂತೆ ಚಿತ್ರತಂಡ ಕ್ಷಮೆ ಕೇಳಿತ್ತು. ಈಗ ಜುಜುಬಿ ಕರಗ ಎನ್ನುವ ಪದವನ್ನು ಮ್ಯೂಟ್ ಮಾಡುವುದಾಗಿ ತಂಡ ಒಪ್ಪಿಕೊಂಡಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಧರ್ಮರಾಯ ಸ್ವಾಮಿ ದೇವಸ್ಥಾನದ ಹಿರಿಯರು, ಚಿತ್ರತಂಡದ ಸದಸ್ಯರು ಮತ್ತು ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ ಹರೀಶ್, ಕಾರ್ಯದರ್ಶಿ ಸುಂದರರಾಜ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಸಂಧಾನ ಸಭೆಯಲ್ಲಿ ಜುಜುಬಿ ಕರಗ ಎನ್ನುವ ಪದವನ್ನು ಮ್ಯೂಟ್ ಮಾಡುವುದಾಗಿ ಚಿತ್ರತಂಡ ಒಪ್ಪಿಕೊಳ್ಳುವ ಮೂಲಕ ಈ ವಿವಾದಕ್ಕೂ ಸುಖಾಂತ್ಯ ಹಾಡಲಾಗಿದೆ. ಇದನ್ನೂ ಓದಿ: ಹಿಂದುತ್ವದಲ್ಲೇ ಬ್ರಾಹ್ಮಣತ್ವವಿದೆ; ಪಬ್ಲಿಸಿಟಿಗೋಸ್ಕರ ನಟ ಚೇತನ್ ವಿವಾದಿತ ಹೇಳಿಕೆ – ಪೇಜಾವರ ಶ್ರೀ
ವಿವಾದಕ್ಕೆ (Controversy) ಸಂಬಂಧ ಪಟ್ಟಂತೆ ಧನಂಜಯ್ (Dhananjay) ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಬೆಂಬಲ ವ್ಯಕ್ತವಾಗುತ್ತಿದ್ದು, ‘ನಿಮ್ಮೊಂದಿಗೆ ನಾವಿದ್ದೇವೆ’ ಎನ್ನುವ ಹ್ಯಾಷ್ ಟ್ಯಾಗ್ ಕೂಡ ಟ್ರೆಂಡ್ ಆಗಿದೆ. ಕೇವಲ ಅಭಿಮಾನಿಗಳು ಮಾತ್ರವಲ್ಲ, ಸಿನಿಮಾ ರಂಗದ ಅನೇಕರು ಧನಂಜಯ್ ಪರ ಧ್ವನಿ ಎತ್ತಿದ್ದಾರೆ.
ಈ ವಿವಾದದ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿರುವ ನಟ ಚೇತನ್, ‘ನಾನು ಸಿನಿಮಾ ಅನ್ನು ವೀಕ್ಷಿಸಿದೆ. ಕೆಲವು ವಿಭಾಗಗಳಿಗೆ ಆಕ್ಷೇಪಾರ್ಹ ಎಂದು ಕರೆಯಬಹುದಾದ ಚಲನಚಿತ್ರದ ದೃಶ್ಯಗಳನ್ನು ಕತ್ತರಿಸುವಂತೆ ಒತ್ತಾಯಿಸಲಾಗಿದೆ. ಪ್ರಸ್ತುತ ಬೇಡಿಕೆಗಳು ಸೃಜನಶೀಲ ಸ್ವಾತಂತ್ರ್ಯಗಳಿಗೆ ವಿರುದ್ಧವಾಗಿವೆ. ಸೆನ್ಸಾರ್ ಮಂಡಳಿಯ ಅನುಮತಿ ಪಡೆದ ನಂತರ ಚಿತ್ರ ಮತ್ತು ಚಿತ್ರಣಕ್ಕೆ ಸ್ವಾತಂತ್ರ್ಯ ನೀಡಬೇಕು. ಭಿನ್ನಾಭಿಪ್ರಾಯವು ಪ್ರಜಾಸತ್ತಾತ್ಮಕವಾಗಿದೆ, ಹೊರತು ಬೆದರಿಕೆಗಳಲ್ಲ’ ಎಂದು ಬರೆದುಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ (Head Bush) ಸಿನಿಮಾ ಎರಡು ಕಾರಣಗಳಿಂದಾಗಿ ವಿವಾದಕ್ಕೆ ತುತ್ತಾಗಿದೆ. ಸಿನಿಮಾದಲ್ಲಿ ಕರಗ (Karaga) ಮತ್ತು ವೀರಗಾಸೆಗೆ (Veeragase) ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಹಲವರು ದೂರು ಕೂಡ ದಾಖಲಿಸಿದ್ದಾರೆ. ಹೀಗಾಗಿ ಚಿತ್ರತಂಡ ಸಂಕಷ್ಟಕ್ಕೆ ಸಿಲುಕಿತ್ತು. ಸಿನಿಮಾ ಬೈಕಾಟ್ ಮಾಡಬೇಕು, ದೃಶ್ಯಗಳನ್ನು ಕತ್ತರಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿತ್ತು.
ಎರಡೂ ವಿವಾದಗಳ (Controversy) ಕುರಿತು ಪ್ರತಿಕ್ರಿಯೆ ನೀಡಿದ್ದ ಧನಂಜಯ್ (Dhananjay), ತಾವು ಯಾವುದೇ ರೀತಿಯಲ್ಲಿ ತಪ್ಪು ಮಾಡಿಲ್ಲ. ಅವಮಾನ ಕೂಡ ಮಾಡಿಲ್ಲ. ಸಿನಿಮಾ ನೋಡಿದ ನಂತರ ಮಾತನಾಡಿ ಎಂದು ಕೇಳಿಕೊಂಡಿದ್ದರು. ಆದರೂ, ಪ್ರತಿಭಟನೆ ಮಾತ್ರ ನಿಲ್ಲಲಿಲ್ಲ. ಫಿಲ್ಮ್ ಚೇಂಬರ್ ಗೂ ದೂರು ದಾಖಲಿಸಿದ್ದರು. ಹಾಗಾಗಿ ಇಂದು ತಮ್ಮ ತಂಡದೊಂದಿಗೆ ಪತ್ರಿಕಾಗೋಷ್ಠಿ ಮಾಡಿದ ಧನಂಜಯ್, ಕ್ಷಮೆ ಕೇಳಿದ್ದಾರೆ. ಇದನ್ನೂ ಓದಿ: ಹಿಂದುತ್ವದಲ್ಲೇ ಬ್ರಾಹ್ಮಣತ್ವವಿದೆ; ಪಬ್ಲಿಸಿಟಿಗೋಸ್ಕರ ನಟ ಚೇತನ್ ವಿವಾದಿತ ಹೇಳಿಕೆ – ಪೇಜಾವರ ಶ್ರೀ
ನಾವು ಯಾರನ್ನೂ ನೋಯಿಸುವ ಉದ್ದೇಶದಿಂದ ಸಿನಿಮಾ ಮಾಡಿಲ್ಲ. ದೇವರ ಬಗ್ಗೆ, ವೀರಗಾಸೆ ಹಾಗೂ ಕರಗದ ಬಗ್ಗೆ ನಮಗೂ ಅಪಾರವಾದ ಅಭಿಮಾನಿ, ಭಕ್ತಿ ಇದೆ. ಆದರೂ, ನಿಮಗೆ ನೋವು ಆಗಿದ್ದರೆ ಕ್ಷಮಿಸಿ ಎಂದು ನಿರ್ದೇಶಕ ಶೂನ್ಯ ಅವರು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ. ಆದರೂ, ಕರಗ ಸಮಿತಿಯ ಸದಸ್ಯರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಹೋಗಿ ದೂರು ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಡಾಲಿ ಧನಂಜಯ್ (Dhananjay) ನಟನೆಯ ಹೆಡ್ ಬುಷ್ (Head Bus) ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ಎರಡೆರಡು ವಿವಾದಗಳು ಚಿತ್ರತಂಡಕ್ಕೆ ಅಂಟಿಕೊಂಡಿವೆ. ಈಗಾಗಲೇ ವೀರಗಾಸೆ ಕಲಾವಿದರಿಗೆ ಚಿತ್ರದಲ್ಲಿ ಅವಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತವಾಗಿತ್ತು, ಇದೀಗ ಚಿತ್ರದಲ್ಲಿ ಕರಗ ಆಚರಣೆ ಬಗ್ಗೆ ಮತ್ತು ಕರಗ ಹೊತ್ತವರ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಆರೋಪ ಕೇಳಿ ಬಂದಿದೆ.
ಹೆಡ್ ಬುಷ್ ಚಿತ್ರದಲ್ಲಿ ದ್ರೌಪದಮ್ಮನ ಕರಗಕ್ಕೆ ಅವಮಾನ ಮಾಡಲಾಗಿದೆ ಎಂದು ಧರ್ಮರಾಯ ದೇವಸ್ಥಾನ ಅಧ್ಯಕ್ಷ ಸತೀಶ್ ಆರೋಪ ಮಾಡಿದ್ದಾರೆ. ಹಾಗಾಗಿ ಚಿತ್ರದಲ್ಲಿ ಕರಗದ ಬಗ್ಗೆ ತೋರಿಸಲಾದ ಸೀನ್‌ಗಳನ್ನು ತೆಗೆಯುವಂತೆ ಅವರು ಆಗ್ರಹ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಸತೀಶ್, ‘ಸಿನಿಮಾದಲ್ಲಿ ತೋರಿಸಲಾಗಿದ್ದು ನಮ್ಮ ತಿಗಳರ ಪೇಟೆಯ ಕರಗ ಅಲ್ಲ. ಹೆಸರಘಟ್ಟದ ಕರಗವನ್ನು ತೋರಿಸಿ, ತಿಗಳರ ಕರಗ ಎಂದು ತೋರಿಸಲಾಗಿದೆ. ಚಿತ್ರದಲ್ಲಿ ಜುಜುಬಿ ಕರಗ ಅಂತ ಹೆಸರು ಬಳಕೆ ಮಾಡಲಾಗಿದೆ. ಇದು ಸರಿಯಲ್ಲ’ ಎಂದಿದ್ದಾರೆ.
ಅಷ್ಟೇ ಅಲ್ಲದೇ, ಸಿನಿಮಾದಲ್ಲಿ ಅರ್ಚಕರಾದ ಶಿವಶಂಕರ್ ಎಂಬುವರ ಹೆಸರು ಕೂಡ ದುರ್ಬಳಕೆ ಮಾಡಲಾಗಿದೆ ಎಂದು ಸತೀಶ್ ಆರೋಪಿಸುತ್ತಾರೆ. ಅವರನ್ನು ಏಕವಚನದಲ್ಲಿ ಸಂಬೋಧಿಸುವುದು ಸರಿಯಲ್ಲ ಎಂದಿದ್ದಾರೆ. ಕರಗಕ್ಕೆ (Karaga) ಅನೇಕ ಸಂಪ್ರಯದಾಯಗಳು ಇವೆ. ಅದೆಲ್ಲವನ್ನು ಸಿನಿಮಾದಲ್ಲಿ ಉಲ್ಲಂಘನೆ ಮಾಡಲಾಗಿದೆ. ಇದಕ್ಕಾಗಿ ಇಂದು ನಾವೆಲ್ಲ ಚರ್ಚಿಸಿ ಮೊದಲು ಫಿಲ್ಮ್ ಚೇಂಬರ್‌ಗೆ ದೂರು ನೀಡುತ್ತೇವೆ ಎನ್ನುತ್ತಾರೆ. ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ
‘ಹೆಡ್ ಬುಷ್’ ಸಿನಿಮಾದಲ್ಲಿ ವೀರಭದ್ರ ದೇವರ ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂದು ವೀರಗಾಸೆ ಕಲಾವಿದರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಸಾಹಸ ಸನ್ನಿವೇಶದಲ್ಲಿ ವೀರಗಾಸೆ ಕಲಾವಿದರಿಗೆ ಒದೆಯಲಾಗಿದೆ. ಅದು ಕಲೆ ಮತ್ತು ವೀರಭದ್ರ ದೇವರಿಗೆ ಮಾಡಿದ ಅಪಮಾನ ಎಂದು ಕಲಾವಿದರು ಆಕ್ಷೇಪಿಸಿದ್ದಾರೆ. ಇದೀಗ ವಿವಾದವಾಗಿ ಮಾರ್ಪಟ್ಟಿದೆ.
ವೀರಗಾಸೆ (Veeragase) ಕಲೆಗೆ ಮತ್ತು ಅದಕ್ಕೆ ಸಂಬಂಧಿಸಿದ ವೀರಭದ್ರ ದೇವರಿಗೆ ಅವಮಾನ ಮಾಡಿದ ನಿರ್ದೇಶಕರು, ಕಲಾವಿದರು ಹಾಗೂ ನಿರ್ಮಾಪಕರು ಕೂಡಲೇ ಕ್ಷಮೆ ಕೇಳಬೇಕು ಹಾಗೂ ಆ ದೃಶ್ಯವನ್ನು ಸಿನಿಮಾದಿಂದ ಕೈ ಬಿಡಬೇಕು ಎಂಬ ಆಗ್ರಹ ಕೂಡ ಕೇಳಿ ಬರುತ್ತಿದೆ. ಈ ಕುರಿತು ನಟ ಧನಂಜಯ್ ಪ್ರತಿಕ್ರಿಯೆ ನೀಡಿದ್ದಾರೆ. ತಾನೂ ಕೂಡ ವೀರಭದ್ರ ದೇವರ ಆರಾಧಕ ಆಗಿರುವುದರಿಂದ ಯಾವುದೇ ಕಾರಣಕ್ಕೂ ಅವಮಾನ ಮಾಡಿಲ್ಲ ಎಂದು ಹೇಳಿದ್ದಾರೆ.
ಧನಂಜಯ್ ಈವರೆಗೂ ಯಾವುದೇ ವಿವಾದಕ್ಕೆ ಒಳಗಾದವರು ಅಲ್ಲ. ಅದರಲ್ಲೂ ಶರಣ ಪರಂಪರೆಯನ್ನು ಓದಿಕೊಂಡು ಬೆಳೆದವರು. ಕಲೆ ಮತ್ತು ಸಂಸ್ಕೃತಿ ಬಗ್ಗೆ ಅಪಾರ ಅಭಿಮಾನ ಹೊಂದಿದವರು. ಈ ಕಾರಣದಿಂದಾಗಿಯೇ ಇಂದು ವೀರಗಾಸೆ ಕಲಾವಿದರನ್ನು ಧನಂಜಯ್ ಭೇಟಿ ಮಾಡುತ್ತಿದ್ದಾರೆ. ಅವರೊಂದಿಗೆ ಆ ದೃಶ್ಯದ ಕುರಿತು ವಿವರಣೆಯನ್ನು ಕೊಡಲಿದ್ದಾರೆ. ಆ ದೃಶ್ಯ ಹಾಗೂ ಅದನ್ನು ಸಿನಿಮಾದಲ್ಲಿ ಯಾಕೆ ಆ ರೀತಿ ಅಳವಡಿಸಲಾಗಿದೆ ಎನ್ನುವ ಕುರಿತು ಚರ್ಚಿಸಲಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಹಿಜಬ್, ಹಲಾಲ್ ಕಟ್ ಹಾಗೂ ಜಟ್ಕಾ ಕಟ್, ಮಸೀದಿಗಳಲ್ಲಿ ಸೌಂಡ್ ಬ್ಯಾನ್‍ಗೊಳಿಸುವ ಬಗ್ಗೆ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದೆ. ಈ ಮಧ್ಯೆ ಇದೀಗ ಐತಿಹಾಸಿಕ ಬೆಂಗಳೂರು ಕರಗ ಉತ್ಸವದ ಮೇಲೂ ಕರಿನೆರಳಿನ ಭೀತಿ ಎದುರಾಗಿದೆ. ಕರಗ ಉತ್ಸವದ ವೇಳೆ ಮೂರ್ತಿಯನ್ನು ದರ್ಗಾಕ್ಕೆ ತೆಗೆದುಕೊಂಡು ಹೀಗುವುದಕ್ಕೆ ಹಿಂದೂ ಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.
ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಕರಗ ಉತ್ಸವ ಇಂದಿಗೂ ತನ್ನ ಆಕರ್ಷಣೆಯನ್ನು ಕಳೆದುಕೊಂಡಿಲ್ಲ. ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಕಾಲದಿಂದಲೂ ಕರಗ ಉತ್ಸವ ನಡೆದುಕೊಂಡು ಬರುತ್ತಿದೆ. ಉತ್ಸವಕ್ಕೆ ದೇಶ, ವಿದೇಶಗಳಿಂದ ಸಾವಿರಾರು ಮಂದಿ ಆಗಮಿಸುತ್ತಿದ್ದರು. ಇಂದಿಗೂ ಕರಗ ಉತ್ಸವಕ್ಕೆ ರಾಜ್ಯ, ಹೊರ ರಾಜ್ಯ ಹಾಗೂ ವಿದೇಶಗಳ 50 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ. ಇದನ್ನೂ ಓದಿ: ಮಾವಿನಹಣ್ಣಿನ ಮಾರ್ಕೆಟ್ ನಮ್ಮದಾಗಬೇಕು – ಹಾಸನದಲ್ಲಿ ಹೊಸ ಅಭಿಯಾನ
ರಾತ್ರಿ ಆರಂಭವಾಗುವ ಕರಗ ಸಾಮಾನ್ಯವಾಗಿ ಆಂಜನೇಯ ಸ್ವಾಮಿ ದೇವಸ್ಥಾನ ರಸ್ತೆ, ಅವೆನ್ಯೂ ರಸ್ತೆ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ರಸ್ತೆ, ಮಸ್ತಾನ್ ಸಾಬ್ ದರ್ಗಾ, ಅಣ್ಣಮ್ಮ ದೇವಸ್ಥಾನ ರಸ್ತೆ, ಮೈಸೂರು ಬ್ಯಾಂಕ್ ಸರ್ಕಲ್, ಮಾರ್ಗವಾಗಿ ಕರಗ ಸಾಗುತ್ತದೆ. ವಿಶೇಷವೆಂದರೆ ಪ್ರತಿ ವರ್ಷ ಕರಗ ಉತ್ಸವ ಮೂರ್ತಿಯನ್ನು ಮಸ್ತಾನ್ ಸಾಬ್ ದರ್ಗಾದ ಒಳಗೆ ಕೊಂಡ್ಯೊಯಲಾಗುತ್ತದೆ. ಅದರಂತೆ ಈ ಬಾರಿ ಕೂಡ ಸಂಪ್ರದಾಯದಂತೆ ಕರಗ ಉತ್ಸವ ಮೂರ್ತಿಯನ್ನು ದರ್ಗಾಕ್ಕೆ ಬರಲಿ ಎಂದು ಮೌಲ್ವಿಗಳು ಆಹ್ವಾನ ನೀಡಿ ಮನವಿ ಮಾಡಿದ್ದಾರೆ. ಆದರೆ ಕೆಲ ಹಿಂದೂ ಪರ ಸಂಘಟನೆಗಳು ಕರಗ ಉತ್ಸವ ಮೂರ್ತಿಯನ್ನು ದರ್ಗಾಕ್ಕೆ ತೆಗೆದುಕೊಂಡು ಹೋಗಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿವೆ.
ಶ್ರೀ ಧರ್ಮರಾಯಸ್ವಾಮಿ ದೇವಾಲಯಕ್ಕೆ ಮುಸ್ಲಿಂ ಧರ್ಮಗುರುಗಳು ಭೇಟಿ ನೀಡಿ, ಕರಗ ಉತ್ಸವ ಮೊದಲಿನಿಂದಲೂ ಹಿಂದೂ ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಹೀಗಾಗಿ ಏನೇ ವಿರೋಧ ಬಂದರೂ ಮಸ್ತಾನ್ ಸಾಬ್ ದರ್ಗಾಕ್ಕೆ ಕರಗ ಉತ್ಸವ ಭೇಟಿ ನೀಡಲಿ. ನೂರಾರು ವರ್ಷಗಳ ಇತಿಹಾಸದಂತೆ ಆಚರಣೆ ನಡೆಯಲಿದೆ ಎಂದು ಸಮಿತಿಯಿಂದ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹಲಾಲ್ ಆಯ್ತು ಈಗ ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹ ಪ್ರತಿಷ್ಠಾಪಿಸದಂತೆ ಅಭಿಯಾನ
ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಕರಗ ಉತ್ಸವ ಸಮಿತಿ ಅಧ್ಯಕ್ಷ ಸತೀಶ್ ಅವರು, ಕರಗ ಉತ್ಸವದ ಸಂದರ್ಭದಲ್ಲಿ ದರ್ಗಾಗೆ ಭೇಟಿ ನೀಡಿ ಮುಂದೆ ಸಾಗುವುದು ಹಿಂದಿನಿಂದ ನಡೆದು ಬಂದ ಪದ್ಧತಿಯಾಗಿದೆ. ಈಗಾಗಲೇ ಕೆ.ಆರ್. ಮಾರುಕಟ್ಟೆ ಸರ್ಕಲ್‍ನಲ್ಲಿರುವ ದರ್ಗಾದಿಂದ ಮುಸ್ಲಿಂ ಮುಖಂಡರು ಕರಗ ಉತ್ಸವ ಸಮಿತಿಯನ್ನು ಭೇಟಿ ಮಾಡಿ, ಎಲ್ಲರೂ ಎಂದಿನಂತೆ ಕೂಡಿ ಕರಗ ಆಚರಣೆ ಮಾಡೋಣ ಎಂದು ಹೇಳಿದ್ದಾರೆ. ಧರ್ಮರಾಯಸ್ವಾಮಿ ದೇವಸ್ಥಾನದಿಂದ ಹೊರಡಲಿರುವ ಕರಗ ದಾರಿಯಲ್ಲಿ ಸಿಗುವ ದರ್ಗಾದ ಒಳಗೆ ಹೋಗಿ ದರ್ಗಾದ ದರ್ಶನ ಮಾಡಿ ಮುಂದೆ ಸಾಗುವ ಇತಿಹಾಸವಿದೆ. ಶತಮಾನಗಳ ಇತಿಹಾಸವಿರುವ ಬೆಂಗಳೂರಿನ ಕರಗ ಎಂದಿನಂತೆ ನಡೆಯಲಿದೆ ಎಂದಿದ್ದಾರೆ.
ಎರಡು ವರ್ಷ ಕೊರೊನಾ ಕರಿನೆರಳು ಕರಗದ ಮೇಲೆ ಬಿದ್ದಿತ್ತು. ಹೀಗಾಗಿ ಈ ಬಾರಿ ವಿಜೃಂಭಣೆಯಿಂದ ಕರಗ ಆಚರಣೆಗೆ ಸಿದ್ಧತೆ ನಡೆದಿದೆ. ಬೆಂಗಳೂರಿನ ಐತಿಹಾಸಿಕ ಕರಗ ಆಚರಣೆಯು ಏಪ್ರಿಲ್ 8 ರಿಂದ ಪ್ರಾರಂಭವಾಗಲಿದೆ. ಏಪ್ರಿಲ್ 16 ರಂದು ನಡೆಯುವ ಕರಗ ಶಕ್ತ್ಯೋತ್ಸವ ನಡೆಯುವ ದಿನವಾಗಿದ್ದು, ಏಪ್ರಿಲ್ 18ರಂದು ಸಂತೋತ್ಸವ ಧ್ವಜಾರೋಹಣದ ಮೂಲಕ ಕರಗ ಉತ್ಸವಕ್ಕೆ ತೆರೆ ಬೀಳಲಿದೆ.
ಮಡಿಕೇರಿ: ಐತಿಹಾಸಿಕ ಹಿನ್ನೆಲೆಯ ಮಡಿಕೇರಿಯ ನಾಲ್ಕು ಶಕ್ತಿ ದೇವತೆಗಳ ಕರಗ ಉತ್ಸವಕ್ಕೆ ನಗರದ ಪಂಪಿನ ಕೆರೆಯ ಬನ್ನಿ ಮಂಟಪದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಇಂದು ಸಂಜೆ ಚಾಲನೆ ನೀಡಲಾಯಿತು.
ಮಡಿಕೇರಿ ನಗರ ದಸರಾ ಸಮಿತಿ, ದಶಮಂಟಪ ಸಮಿತಿಯ ಪದಾಧಿಕಾರಿಗಳು, ಸಂಘ ಸಂಸ್ಥೆಗಳ ಪ್ರಮುಖರು, ಜನಪ್ರತಿನಿಧಿಗಳು, ಅಧಿಕಾರಿಗಳು ನಾಲ್ಕು ಶಕ್ತಿ ದೇವತೆಗಳ ಕರಗಗಳಿಗೆ ಸಂಜೆ ಪೂಜೆ ಸಲ್ಲಿಸಿ, ನಾಡಿನ ಒಳಿತಿಗೆ ಪ್ರಾರ್ಥಿಸುವ ಮೂಲಕ ಕರಗ ಮೆರವಣಿಗೆ ಆರಂಭಗೊಂಡಿತು. ಮಡಿಕೇರಿ ನಗರದ ನಾಲ್ಕು ಶಕ್ತಿ ದೇವತೆಗಳಾದ ರಾಜಾಸೀಟು ಬಳಿಯ ಶ್ರೀಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಗೌಳಿಬೀದಿಯ ಶ್ರೀ ಕಂಚಿಕಾಮಾಕ್ಷಿ, ನಗರಸಭೆ ಬಳಿಯ ಶ್ರೀ ದಂಡಿನ ಮಾರಿಯಮ್ಮ, ಪೆನ್ ಷನ್ ಲೇನ್‍ನ ಶ್ರೀ ಕೋಟೆ ಮಾರಿಯಮ್ಮ ಕರಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯಿತು. ಇದನ್ನೂ ಓದಿ: ನಾಯಿಯಿಂದ ನಾಯಿಗೆ ರಕ್ತದಾನ
ಮಧ್ಯಾಹ್ನ ನಾಲ್ಕು ಶಕ್ತಿ ದೇವತೆಗಳ ದೇವಸ್ಥಾನಗಳಲ್ಲಿ ಸಂಪ್ರದಾಯದಂತೆ ವಿಶೇಷ ಪೂಜೆ ಸಲ್ಲಿಸಿದ ವ್ರತಧಾರಿಗಳು ಹಾಗೂ ದೇವಾಲಯ ಸಮಿತಿಯ ಪ್ರಮುಖರು ಕರಗ ಅಲಂಕಾರಕ್ಕೆ ಅಗತ್ಯವಿರುವ ಫಲ, ಪುಷ್ಪಗಳೊಂದಿಗೆ ಪಂಪಿನ ಕೆರೆಗೆ ತೆರಳಿದರು. ವಿವಿಧ ಪೂಜಾ, ಕೈಂಕರ್ಯಗಳ ಮೂಲಕ ಕರಗಗಳನ್ನು ಕಟ್ಟಿ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಚಾಲನೆ ನೀಡಲಾಯಿತು.
ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ ಸೇರಿದಂತೆ ದಸರಾ ಸಮೀಪ ಪ್ರಮುಖರು ಗಣ್ಯರು ಪೂಜೆಯಲ್ಲಿ ಭಾಗಿಯಾಗಿದ್ದರು. ಪಂಪಿನಕೆರೆ ಬಳಿಯಿಂದ ಹೊರಟ ನಾಲ್ಕು ಕರಗಗಳಿಗೆ ಮಹದೇವಪೇಟೆಯ ಶ್ರೀಚೌಡೇಶ್ವರಿ ದೇವಾಲಯ, ಕನ್ನಿಕಾ ಪರಮೇಶ್ವರಿ ದೇಗುಲದಲ್ಲಿ ಪೂಜೆ ಸಲ್ಲಿಸಲಾಯಿತು. ಸಂಪ್ರದಾಯದಂತೆ ಪೇಟೆ ಶ್ರೀರಾಮ ಮಂದಿರದ ಬಳಿ ಕರಗಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ದೇವಾಲಯಗಳಿಗೆ ಕೊಂಡೊಯ್ಯಲಾಯಿತು. ಇದನ್ನೂ ಓದಿ: ಡ್ರಗ್ಸ್ ಕೇಸ್ – ಶಾರೂಖ್ ಪುತ್ರ ಆರ್ಯನ್ ಜೈಲುಪಾಲು
ಕೊರೊನಾ ವೈರಸ್ ಹಿನ್ನೆಲೆ ಸುರಕ್ಷತಾ ದೃಷ್ಟಿಯಿಂದ ಜಿಲ್ಲಾಡಳಿತ ಸರಳ ದಸರಾಗೆ ಮುಂದಾಗಿದೆ. ಹೀಗಾಗಿ ಪ್ರತಿವರ್ಷ ಕೋಟ್ಯಂತರ ರೂ. ಖರ್ಚು ಮಾಡಿ, ವಿಜೃಂಭಣೆಯಿಂದ ನಡೆಸಲಾಗುತ್ತಿದ್ದ ಮಂಜಿನ ನಗರಿ ಮಡಿಕೇರಿಯ ದಸರಾ ಈ ಬಾರಿ ಸರಳವಾಗಿ ನಡೆಯಲಿದೆ.
ಬೆಂಗಳೂರು: ಈ ವರ್ಷವೂ ಕರಗ ಮಹೋತ್ಸಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಇದ್ದು, ಹಿಂದಿನ ವರ್ಷದಂತೆ ಈ ವರ್ಷ ಸಹ ಕರಗ ಮಹೋತ್ಸವನ್ನು ದೇವಸ್ಥಾನಕ್ಕೆ ಮಾತ್ರ ಸಿಮೀತಗೊಳಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಜಿಲ್ಲಾಧಿಕಾರಿ ಮಂಜುನಾಥ್ ಶಿಫಾರಸು ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕರಗ ಮಹೋತ್ಸವವನ್ನು ರದ್ದುಪಡಿಸಿ, ದೇವಾಲಯದ ಪ್ರಾಂಗಣದಲ್ಲೇ ಅರ್ಚಕರು, ಸಿಬ್ಬಂದಿ, ಸಮುದಾಯದ ಹಿರಿಯರು ಮಾತ್ರ ಭಾಗಿಯಾಗಲು ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟಿದ್ದಾರೆ. ದೇವಸ್ಥಾನದ ಒಳಪ್ರಾಂಗಣದಲ್ಲಿ ಮಾತ್ರ ವಿಧಿ ವಿಧಾನದಂತೆ ಕರಗ ಆಚರಿಸುವಂತೆ ತಿಳಿಸಿದ್ದಾರೆ.
ಇಂದು ಬಿಬಿಎಂಪಿ ಮುಖ್ಯ ಆಯುಕ್ತ, ಜಿಲ್ಲಾಧಿಕಾರಿ ಮಂಜುನಾಥ್, ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಇಂದಿನ ಸಭೆಯಲ್ಲಿ ಕರಗ ಉತ್ಸವ ಸಮಿತಿಯೂ ರಚನೆಯಾಗಿದೆ. ಈ ಬಗ್ಗೆಯೂ ಚರ್ಚೆ ನಡೆಸಲಾಗಿದೆ.
ಕರಗಕ್ಕೆ ಬ್ರೇಕ್ ಹಾಕಲು ಕಾರಣ
ಕರಗ ನಡೆಯುವ ವಾರ್ಡ್ ನಲ್ಲೇ 105 ಪಾಸಿಟಿವ್ ದಾಖಲೆ ಕೇಸ್ ಗಳಿವೆ. ಉತ್ಸವ, ಮೆರವಣಿಗೆಗೆ ಅವಕಾಶ ನೀಡುವ ಸ್ಥಿತಿಯೇ ಇಲ್ಲ. ಮೆರವಣಿಗೆ ವೇಳೆ ಸಾಮಾಜಿಕ ಅಂತರ, ಮಾಸ್ಕ್ ಧರಿಸುವ ಬಗ್ಗೆ ಜನ ನಿಯಮ ಪಾಲಿಸುವುದಿಲ್ಲ. ಕರಗ ನಡೆಯುವ ಧರ್ಮರಾಯ ಸ್ವಾಮಿ ವಾರ್ಡ್ ಕೊರೊನಾ ಹಾಟ್ ಸ್ಪಾಟ್ ಆಗಿದೆ. ಕರಗದಿಂದ ಕೊರೊನಾ ಹೆಚ್ಚಾದರೆ ಜವಾಬ್ದಾರಿ ಹೊರಲು ಯಾರೂ ಸಿದ್ಧರಿಲ್ಲ ಹೀಗಗಿ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ.
ಏ.19 ರಿಂದ ಏ.27 ರವರೆಗೆ ಬೆಂಗಳೂರು ಕರಗ ನಡೆಯಲಿದ್ದು, ಬಹುತೇಕ ಸಾಂಪ್ರದಾಯಿಕ ಆಚರಣೆಗಷ್ಟೇ ಸೀಮಿತವಾಗಲಿದೆ. ದೇವಾಲಯದ ಪ್ರಾಂಗಣದಲ್ಲೇ ನಡೆಸುವ ಸಾಧ್ಯತೆ ಹೆಚ್ಚಿದೆ. ಕರಗ ಆಚರಣೆ ಮೇಲೆ ಪೊಲೀಸರು, ಸಮಿತಿ ಹಾಗೂ ಮಾರ್ಷಲ್ ಕಣ್ಗಾವಲು ಇಡಲಿದ್ದಾರೆ. ಕರಗದಲ್ಲಿ ಭಾಗವಹಿಸುವ ಜನರ ಸಂಖ್ಯೆಯನ್ನೂ ಸಮಿತಿ, ಅಧಿಕಾರಿಗಳೇ ನಿರ್ಧರಿಸುತ್ತಾರೆ.
ಈ ಬಗ್ಗೆ ಮಾಹಿತಿ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಉತ್ಸವ ಸಮಿತಿ ರಚನೆ ಆಗಿದೆ, ಉತ್ಸವ ಸಮಿತಿ ತನ್ನ ಶಿಫಾರಸುಗಳನ್ನು ಸಭೆ ಮುಂದೆ ಮಂಡಿಸಿದೆ. ಈಗಿನ ಸಂದರ್ಭದಲ್ಲಿ ಕರಗ ಕಷ್ಟ, ಬೆಂಗಳೂರು ಕರಗ ಆಚರಣೆ ಸಂಬಂಧ ಇಂದು ಹಲವು ಸಭೆ ನಡೆಯಲಿದೆ. ಏ.17 ರೊಳಗೆ ಸಭೆ ನಡೆಸಿ ಕರಗ ಆಚರಣೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. 5 ರಿಂದ 7 ಜನರು ಸೇರಿ ಕರಗ ಹೇಗೆ ನಡೆಸಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಜಿಲ್ಲಾಧಿಕಾರಿ ನೀಡಿರುವ ವರದಿ ಬಗ್ಗೆ ಸಹ ಚರ್ಚೆ ಆಗಿದೆ. ಉತ್ಸವ ಸಮಿತಿ ಅಭಿಪ್ರಾಯವೂ ಸೇರಿಸಿ 2 ದಿನಗಳೊಳಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಕರಗ ಆಚರಣೆಗೆ ಶಾಸಕರು ತಮ್ಮದೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೆರವಣಿಗೆಗೆ ಅವಕಾಶ ಕೊಡಲು ಆಗಲ್ಲ, ದೇವಾಲಯ ಮುಂದೆ ಸಣ್ಣ ಪ್ರಮಾಣದ ಮೆರವಣಿಗೆ ಮಾಡಲು ಅವಕಾಶ ನೀಡುವಂತೆ ಕೇಳುತ್ತಿದ್ದಾರೆ. ಸಂಪಿಗೆ ಕೆರೆ, ಪಾಲಿಕೆ ಆವರಣದಲ್ಲಿ ಕರಗ ಓಡಾಡಲು ಅವಕಾಶ ಕೊಡಿ ಎಂದು ಅಭಿಪ್ರಾಯ ಬಂದಿದೆ. ಆದರೆ ಕಳೆದ ವರ್ಷಕ್ಕಿಂತ ಈ ಬಾರಿ ಧರ್ಮರಾಯ ಸ್ವಾಮಿ ವಾರ್ಡ್‍ನಲ್ಲಿ ಕೇಸ್ ಗಳ ಸಂಖ್ಯೆ ಹೆಚ್ಚಿದೆ. ಈ ಹಂತದಲ್ಲಿ ಅದ್ಧೂರಿ ಆಚರಣೆಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬೆಡ್ ಕೊರತೆ ಇಲ್ಲ
ರಂಜಾನ್ ಸಂಬಂಧ ಸರ್ಕಾರ ಮಾರ್ಗಸೂಚಿ ನೀಡಿದೆ, ನಿಯಮ ಪಾಲಿಸಲಾಗುತ್ತಿದೆಯೇ ಎಂಬ ಬಗ್ಗೆ ಪೊಲೀಸರು ನಿಗಾ ಇಡುತ್ತಾರೆ. ಅಗತ್ಯ ಬಿದ್ದರೆ ಪಾಲಿಕೆ ಜತೆಗೆ ಇರುತ್ತದೆ. ಟೆಸ್ಟ್ ಆದ ಕೂಡಲೇ ನೆಗೆಟಿವ್, ಪಾಸಿಟಿವ್ ಎಂಬ ಎಸ್‍ಎಂಎಸ್ ಬರುವ ಬಗ್ಗೆ ವ್ಯವಸ್ಥೆ ಆಗುತ್ತಿದೆ. ಸಾರ್ವಜನಿಕ ಲ್ಯಾಬ್ ಗಳಲ್ಲಿ ರಿಸಲ್ಟ್ ತಡವಾಗುತ್ತಿತ್ತು. ಈಗ 24 ಗಂಡೆಯೊಳಗೆ ರಿಸಲ್ಟ್ ಬರುತ್ತೆ ಎಂಬ ಮಾಹಿತಿ ಸಿಕ್ಕಿದೆ. ಸಾರ್ವಜನಿಕರು ಸಾಧ್ಯವಾದಷ್ಟು ಮನೆಯಲ್ಲೇ ಇರಬೇಕಿದೆ. ಸರ್ಕಾರದ ಮಾರ್ಗಸೂಚ ಪಾಲನೆ ಮಾಡಿ ಎಂದು ಮನವಿ ಮಾಡಿದರು.
ಕೆಲ ಪಬ್, ಬಾರ್ ಗಳಲ್ಲಿ ಶೇ.50ರಷ್ಟು ಸೀಮಿತಕ್ಕೆ ಅವಕಾಶ ಕೊಟ್ಟಿದೆ. ಟ್ರೇಡ್ ಬಿಸಿನೆಸ್ ಗಳಲ್ಲಿ ಯಾವುದೇ ನಿರ್ಬಂಧ ಇಲ್ಲ. ರಾಷ್ಟ್ರೀಯ ವ್ಯವಸ್ಥೆ ಪ್ರಕಾರ ಜೀವ – ಜೀವನ ಎಲ್ಲವೂ ನಡೆಯಬೇಕಿದೆ. 6 ಸಾವಿರ ಬೆಡ್ ಗಳಲ್ಲಿ 2,500 ಬೆಡ್ ಗಳು ರಿಸರ್ವ್ ಆಗಿದೆ. ಕೆಲ ಆಸ್ಪತ್ರೆಗಳಲ್ಲಿ ಇನ್ನು ಬೆಡ್ ಕೊಡುವ ಬಗ್ಗೆ ಹೇಳುತ್ತಿದ್ದಾರೆ ಎಂದರು.
ಸಮಯಕ್ಕೆ ಸರಿಯಾಗಿ ಟೆಸ್ಟ್ ಮಾಡಿಸಿಕೊಳ್ಳಿ, ಹಲವು ಕೇಸ್ ಗಳು ಬರುತ್ತಿವೆ. ಕಡೇ ಕ್ಷಣದಲ್ಲಿ ಬಂದು ಬೆಡ್ ಕೇಳುತ್ತಾರೆ. ಇದರಿಂದ ಬೆಡ್ ಸಿಗದೇ ಒದ್ದಾಟ ಆಗುತ್ತಿದೆ. ನಮ್ಮಲ್ಲಿ ಬೆಡ್ ಗಳು ಇದೆ, ಯಾರಿಗೆ ಬೇಕಾದರೂ ನಾನು ಬೆಡ್ ಕೊಡಿಸುತ್ತೇನೆ ಎಂದರು.
ಐಸಿಯು ಬೆಡ್ ಗಳನ್ನು ಸಹ ಹೆಚ್ಚಳ ಮಾಡಲಾಗಿದೆ. ಶೇ.6ರಷ್ಟು ಬೆಡ್‍ಗಳ ಸಂಖ್ಯೆ ಹೆಚ್ಚಳ ಆಗಿದೆ. 1 ಸಾವಿರ ಐಸಿಯು, ವೆಂಟಿಲೆಟರ್ ಬೆಡ್ ಗಳು ಬರಲಿದೆ. ಕೋವಿಡ್ ಕೇರ್ ಗಳಲ್ಲೂ ಐಸಿಯು, ವೆಂಟಿಲೇಟರ್ ಬೆಡ್ ಗಳ ಸಿದ್ಧತೆ ಮಾಡಲಾಗುತ್ತದೆ. ಜನರು ಭಯಭೀತರಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಅಗತ್ಯ ಇದ್ದರೆ ಮಾತ್ರ ಬೆಡ್ ಬಳಸಿ ಎಂದು ಮನವಿ ಮಾಡಿದರು.
4 ಕೋವಿಡ್ ಶವಗಾರ ಮೀಸಲಿಡಲಾಗಿದೆ, ಕಾರಣಾಂತರಗಳಿಂದ ಸಮಸ್ಯೆ ಎದುರಾಗಿದೆ. ಸಮಸ್ಯೆ ಬಗೆಹರಿಸಲಾಗುವುದು. ಸಂಬಳ, ಸುರಕ್ಷತೆ ವಿಷಯ ಎಲ್ಲವೂ ಚರ್ಚೆ ಆಗಿದೆ. ಕೂಡಲೇ ಎಲ್ಲ ಸರಿಪಡಿಸಲಾಗುತ್ತದೆ. ಅಡ್ವಾನ್ಸ್ ಲೈಪ್ ಸರ್ಪೋರ್ಟ್(ಎಎಲ್‍ಎಸ್) ಅಂಬುಲೆನ್ಸ್ ಲಭ್ಯ ಇದೆ. ನಗರದ 8 ವಲಯಗಳಿಗೆ ತಲಾ ಒಂದರಂತೆ ಅಂಬುಲೆನ್ಸ್ ಮೀಸಲಿರಿಸಲಾಗಿದೆ. 8 ವಲಯಗಳ ನಂಬರ್ ಸಹ ಎಲ್ಲರಿಗೂ ಪ್ರಚಾರ ಮಾಡಲಾಗುತ್ತದೆ. ಕಳೆದ ಬಾರಿ 6-10 ಸಾವಿರ ಬೆಡ್ ಗಳ ವ್ಯವಸ್ಥೆ ಮಾಡಲಾಗಿತ್ತು. 50-100 ಬೆಡ್ ಇರುವ ವಲಯಗಳ ಜಾಗದಲ್ಲಿ ಕೋವಿಡ್ ಕೇರ್ ಸೆಂಟರ್ ಓಪನ್ ಮಾಡಲಾಗುವುದು. ಮುಂದಿನ 3 ದಿನಗಳಲ್ಲಿ 10 ಕೋವಿಡ್ ಕೇರ್ ಸೆಂಟರ್ ತೆರೆಯಲಾಗುವುದು. 1,500 ಬೆಡ್ ಗಳ ವ್ಯವಸ್ಥೆ ಮಾಡಲಾಗುವುದು. ಅಲ್ಲದೆ ಅಂಬುಲೆನ್ಸ್ ಗಳನ್ನು ಬಾಡಿಗೆ ಪಡೆಯಲು ಸಹ ಪ್ಲ್ಯಾನ್ ಮಾಡಲಾಗಿದೆ ಎಂದು ವಿವರಿಸಿದರು.