Tag: karadantu

  • ಕರದಂಟು ಉದ್ಯಮಿ ಬೆನ್ನಿಗೆ ನಿಂತ ಅಶ್ವಿನಿ ಪುನೀತ್ ರಾಜ್ ಕುಮಾರ್

    ಕರದಂಟು ಉದ್ಯಮಿ ಬೆನ್ನಿಗೆ ನಿಂತ ಅಶ್ವಿನಿ ಪುನೀತ್ ರಾಜ್ ಕುಮಾರ್

    ಮೀನಘಡದ ಜನಪ್ರಿಯ ವಿಜಯ ಕರದಂಟು (Karadantu) ಸಂಸ್ಥೆಯ ಐದನೇ ಮಳಿಗೆ ಮೊನ್ನೆ ಮಲ್ಲೇಶ್ವರದಲ್ಲಿ ಪ್ರಾರಂಭವಾಗಿದೆ. ನಿರ್ಮಾಪಕಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ (Ashwini Puneeth Rajkumar) ಈ ಮಳಿಗೆಯನ್ನು ಉದ್ಘಾಟಿಸಿದ್ದಾರೆ. ಈ ಮೂಲಕ ಯುವ ಉದ್ಯಮಿಗಳ ಬೆನ್ನಿಗೆ ನಿಂತಿದ್ದಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್.

    1907ರಲ್ಲಿ ಅಮೀನಘಡದಲ್ಲಿ ಪ್ರಾರಂಭವಾದ ವಿಜಯ ಕರದಂಟು ಇಂದು ರಾಜ್ಯಾದ್ಯಂತ 18 ಶಾಖೆಗಳನ್ನು ಹೊಂದಿದೆ. ಅಮೀನಘಡದಲ್ಲಿ ಪ್ರಾರಂಭವಾದ ಮಳಿಗೆ ಇಂದು ಬಾದಾಮಿ, ಐಹೊಳೆ, ಬಾಗಲಕೋಟೆ, ರಾಯಚೂರು, ಸಿಂಧನೂರು, ಇಳಕಲ್ಲು, ಹುಬ್ಬಳ್ಳಿ, ಬೆಂಗಳೂರು ಮುಂತಾದ ಊರುಗಳಲ್ಲಿವೆ. ಬೆಂಗಳೂರಿನಲ್ಲೇ ವಿಜಯನಗರ, ಮಲ್ಲೇಶ್ವರ, ಜಯನಗರ, ಡಿ.ವಿ.ಜಿ. ರಸ್ತೆ ಮತ್ತು ಮಲ್ಲೇಶ್ವರದಲ್ಲಿ ಮಳಿಗೆಗಳಿದ್ದು, ಈ ಸಂಸ್ಥೆಯನ್ನು ಕುಟುಂಬದ ನಾಲ್ಕನೇ ತಲೆಮಾರಿನವರಾದ ಸಂತೋಷ್​ (Santhosh) ಮತ್ತು ಸುನೀಲ್​ (Sunil) ಮುನ್ನಡೆಸುತ್ತಿದ್ದಾರೆ. ಇದನ್ನೂ ಓದಿ: ತೆರೆಗೆ ಅಪ್ಪಳಿಸಲು ಸಜ್ಜಾದ ರಕ್ಷಿತ್‌ ನಟನೆಯ `ಸಪ್ತಸಾಗರದಾಚೆ ಎಲ್ಲೋ’ ಚಿತ್ರ

    ‘ಪೌಷ್ಠಿಕ ಸಿಹಿತಿನಿಸು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರದಂಟಿಗೆ ಶುದ್ಧ ತುಪ್ಪ, ಸಾವಯವ ಬೆಲ್ಲ, ಗೋಡಂಬಿ, ಬಾದಾಮಿ, ಅಂಜೂರ, ಒಣಕೊಬ್ಬರಿ, ಗಸಗಸೆ, ಒಣದ್ರಾಕ್ಷಿ ಮುಂತಾದ ಪೌಷ್ಠಿಕ ಪದಾರ್ಥಗಳನ್ನು ಬೆರಸಿ ಮಾಡಲಾಗುತ್ತದೆ. ಹಿಂದೆ ಗರಡಿಮನೆ ಪೈಲ್ವಾನರ ಶಕ್ತಿ-ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕರದಂಟನ್ನು ನೀಡಲಾಗುತ್ತಿತ್ತು. ಅಷ್ಟೇ ಅಲ್ಲ, ಗರ್ಭಿಣಿಯರಲ್ಲಿ ಪೌಷ್ಠಿಕಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಕರದಂಟನ್ನು ಕೊಡಲಾಗಿತ್ತು. ಆದರೆ, ಈಗ ಕರದಂಟು ಆರೋಗ್ಯಕರ ಸಿಹಿತಿನಿಸಾಗಿದ್ದು, ಎಲ್ಲ ವಯಸ್ಸಿನವರೂ ಸವಿಯಬಹುದಾಗಿದೆ’ ಎನ್ನುತ್ತಾರೆ ಸುನೀಲ್ ಮತ್ತು ಸಂತೋಷ್.

    ಇದರಲ್ಲಿ ಸಕ್ಕರೆ ಪ್ರಮಾಣ ಬಹಳ ಕಡಿಮೆ ಇರುವುದರಿಂದ ಮಧುಮೇಹ ಇರುವವರು ಸಹ ಯಾವುದೇ ಭಯವಿಲ್ಲದೆ ಈ ಸಿಹಿತಿನಿಸನ್ನು ತಿನ್ನಬಹುದಾಗಿದೆಯಂತೆ. ವಿಜಯ ಕರದಂಟು ಮಳಿಗೆಗಳಲ್ಲಿ ಕರದಂಟು ಅಲ್ಲದೆ ಕಾಜು, ಪೇಡ, ಬಂಗಾಲಿ ಸೇರಿದಂತೆ ಬೇರೆ ಸಿಹಿತಿನಿಸುಗಳು ಸಹ ಲಭ್ಯವಿದೆ ಎನ್ನುವುದು ಸುನೀಲ್ ಮಾತು.

  • ಗೋಕಾಕ್‌ನ ಫೇಮಸ್ ಕರದಂಟು ಸವಿದಿದ್ದೀರಾ?

    ಗೋಕಾಕ್‌ನ ಫೇಮಸ್ ಕರದಂಟು ಸವಿದಿದ್ದೀರಾ?

    ನಾವು ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲೊಂದು ಫೇಮಸ್ ಅಡುಗೆ ಅಥವಾ ತಿಂಡಿ ಎಂಬುದು ಇದ್ದೇ ಇರುತ್ತದೆ. ಭಾರತದ ಸಣ್ಣ ಪುಟ್ಟ ಪ್ರದೇಶಗಳಲ್ಲೂ ಅದೆಷ್ಟೋ ಸಾಂಪ್ರದಾಯಿಕ ಖಾದ್ಯಗಳಿವೆ. ನಾವಿಂದು ಗೋಕಾಕ್‌ನ ಫೇಮಸ್ ಸಿಹಿ ಒಣ ಹಣ್ಣುಗಳಿಂದ ತಯಾರಿಸಲಾಗುವ ಕರದಂಟು (Karadantu) ಮಾಡುವುದು ಹೇಗೆಂದು ಹೇಳಿಕೊಡುತ್ತೇವೆ. ಇದನ್ನು ಒಮ್ಮೆ ನೀವೂ ಮನೆಯಲ್ಲಿ ಖಂಡಿತಾ ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ತುಪ್ಪ – ಕಾಲು ಕಪ್
    ಗೊಂದ್ – 50 ಗ್ರಾಂ
    ಕತ್ತರಿಸಿದ ಬಾದಾಮಿ – ಕಾಲು ಕಪ್
    ಕತ್ತರಿಸಿದ ಗೋಡಂಬಿ – ಕಾಲು ಕಪ್
    ಕತ್ತರಿಸಿದ ಪಿಸ್ತಾ – 2 ಟೀಸ್ಪೂನ್
    ಕತ್ತರಿಸಿದ ಅಂಜೂರ – ಕಾಲು ಕಪ್
    ಒಣದ್ರಾಕ್ಷಿ – 2 ಟೀಸ್ಪೂನ್
    ಒಣ ಕುಂಬಳಕಾಯಿ ಬೀಜ – 2 ಟೀಸ್ಪೂನ್
    ಒಣ ತೆಂಗಿನ ತುರಿ – 1 ಕಪ್
    ಗಸಗಸೆ – 2 ಟೀಸ್ಪೂನ್
    ತುಪ್ಪ – 2 ಟೀಸ್ಪೂನ್
    ಕತ್ತರಿಸಿದ ಒಣ ಖರ್ಜೂರ – 5 (ಬೀಜ ಬೇರ್ಪಡಿಸಿ)
    ಬೆಲ್ಲ – 1 ಕಪ್
    ನೀರು – ಕಾಲು ಕಪ್
    ಜಾಯಿಕಾಯಿ ಪುಡಿ – ಕಾಲು ಟೀಸ್ಪೂನ್
    ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್ ಇದನ್ನೂ ಓದಿ: ರುಚಿಕರವಾದ ದಹಿ ವಡಾ ಮಾಡುವುದು ಹೇಗೆ ಗೊತ್ತಾ?

    ಮಾಡುವ ವಿಧಾನ:
    * ಮೊದಲಿಗೆ ಪ್ಯಾನ್‌ನಲ್ಲಿ ಕಾಲು ಕಪ್ ತುಪ್ಪ ಮತ್ತು ಕಾಲು ಕಪ್ ಗೊಂದ್ ತೆಗೆದುಕೊಳ್ಳಿ. ಗೊಂದ್ ಸ್ವಲ್ಪ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ. ಬಳಿಕ ಅದನ್ನು ಪಕ್ಕಕ್ಕಿಡಿ.
    * ಈಗ ಉಳಿದ ತುಪ್ಪದಲ್ಲಿ ಬಾದಾಮಿ, ಗೋಡಂಬಿ, ಪಿಸ್ತಾ, ಅಂಜೂರ, ಒಣದ್ರಾಕ್ಷಿ ಮತ್ತು ಕುಂಬಳಕಾಯಿ ಬೀಜಗಳನ್ನು ಸೇರಿಸಿ ಗರಿಗರಿಯಾಗುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ. ಬಳಿಕ ಅದನ್ನು ಪಕ್ಕಕ್ಕಿರಿಸಿ.
    * ಒಣ ತೆಂಗಿನ ತುರಿಯನ್ನು ಪ್ಯಾನ್‌ಗೆ ಹಾಕಿ, ಪರಿಮಳ ಬರುವವರೆಗೆ ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ.
    * ಇದೀಗ ಒಂದು ದೊಡ್ಡ ಬಟ್ಟಲು ತೆಗೆದುಕೊಂಡು, ಹುರಿದ ಎಲ್ಲಾ ಪದಾರ್ಥಗಳನ್ನೂ (ಗೋಂದ್, ಒಣ ಹಣ್ಣುಗಳು, ತೆಂಗಿನ ತುರಿಯನ್ನು) ಅದಕ್ಕೆ ಹಾಕಿ, ಮಿಶ್ರಣ ಮಾಡಿ.
    * ಈಗ ಒಂದು ಕಡಾಯಿಯಲ್ಲಿ 2 ಟೀಸ್ಪೂನ್ ತುಪ್ಪ ಬಿಸಿ ಮಾಡಿ, ಅದಕ್ಕೆ ಒಣ ಖರ್ಜೂರ ಹಾಕಿ ಹುರಿದುಕೊಳ್ಳಿ.

    * ಅದಕ್ಕೆ ಬೆಲ್ಲ ಹಾಗೂ ನೀರು ಸೇರಿಸಿ, ಬೆಲ್ಲವನ್ನು ಚೆನ್ನಾಗಿ ಕರಗಿಸಿಕೊಳ್ಳಿ.
    * ಮಿಶ್ರಣ ನೊರೆನೊನೆರೆಯಾಗುತ್ತಿದ್ದಂತೆ ಅದಕ್ಕೆ ಹುರಿದಿಟ್ಟಿದ್ದ ಪದಾರ್ಥಗಳನ್ನು ಹಾಕಿ, ಜಾಯಿಕಾಯಿ ಪುಡಿ ಹಾಗೂ ಏಲಕ್ಕಿ ಪುಡಿ ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
    * ಈಗ ಒಂದು ಟ್ರೇ ತೆಗೆದುಕೊಂಡು, ಅದಕ್ಕೆ ಬೇಕಿಂಗ್ ಪೇಪರ್ ಹಾಕಿ, ಅದರ ಮೇಲೆ ಮಿಶ್ರಣವನ್ನು ಸುರಿಯಿರಿ.
    * ಮಿಶ್ರಣ ಸೆಟ್ ಆಗಲು 30 ನಿಮಿಷ ಹಾಗೆಯೇ ಬಿಡಿ.
    * ಬಳಿಕ ಚಾಕು ಸಹಾಯದಿಂದ ನಿಮಗೆ ಬೇಕಾದ ಆಕಾರಕ್ಕೆ ತುಂಡುಗಳಾಗಿ ಕತ್ತರಿಸಿಕೊಳ್ಳಿ.
    * ಇದೀಗ ಕರದಂಟು ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನು ನೀವು ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿಟ್ಟರೆ 1 ತಿಂಗಳ ವರೆಗೆ ಬೇಕೆಂದಾಗ ಸವಿಯಬಹುದು. ಇದನ್ನೂ ಓದಿ: ವಿಶೇಷ ದಿನಗಳಿಗಾಗಿ ಸಿಹಿ ಸಿಹಿ ಮಲಾಯಿ ಲಡ್ಡು ರೆಸಿಪಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k