Tag: Karachi

  • ಕರಾಚಿಯ 15 ಕಡೆ ಭಾರೀ ಸ್ಫೋಟ – INS ವಿಕ್ರಾಂತ್‌ ನೌಕೆಯಿಂದ ಅಟ್ಯಾಕ್‌

    ಕರಾಚಿಯ 15 ಕಡೆ ಭಾರೀ ಸ್ಫೋಟ – INS ವಿಕ್ರಾಂತ್‌ ನೌಕೆಯಿಂದ ಅಟ್ಯಾಕ್‌

    – 1971 ರ ಬಳಿಕ ಮೊದಲ ಬಾರಿಗೆ ಕರಾಚಿ ಮೇಲೆ ಭಾರತ ದಾಳಿ

    ಇಸ್ಲಾಮಾಬಾದ್: ಭಾರತದ ಸೇನಾ ನೆಲೆಗಳನ್ನು ಟಾರ್ಗೆಟ್‌ ಮಾಡಿದ್ದ ಪಾಕ್‌ಗೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ. ಕರಾಚಿಯ 15 ಕಡೆ ಭಾರತವು ಭಾರೀ ದಾಳಿ ನಡೆಸಿದೆ. ಐಎನ್‌ಎಸ್‌ ವಿಕ್ರಾಂತ್‌ ನೌಕೆಯಿಂದ ಅಟ್ಯಾಕ್‌ ಮಾಡಲಾಗಿದೆ.

    1971 ರ ಬಳಿಕ ಕರಾಚಿ ಮೇಲೆ ಭಾರತ ದಾಳಿ ಮಾಡಿದೆ. ಕರಾಚಿ ಬಂದರನ್ನು ಭಾರತೀಯ ನೌಕಾಪಡೆ ನಾಶಪಡಿಸಿದೆ.

    ಪಾಕ್‌ ವಿರುದ್ಧ ವಿಶ್ವದ 10ನೇ ಅತಿದೊಡ್ಡ ಹಡಗು ಐಎನ್‌ಎಸ್‌ ವಿಕ್ರಾಂತ್ ಅಖಾಡಕ್ಕಿಳಿದಿದೆ.‌ ಭಾರತದ ನೌಕಾಪಡೆಯಲ್ಲಿ ಈವರೆಗೆ ಮೂರು ಯುದ್ಧನೌಕೆಗಳು ನಿಯೋಜನೆಯಾಗಿವೆ.

    ಐಎನ್‌ಎಸ್ ವಿಕ್ರಾಂತ್, ಐಎನ್‌ಎಸ್ ವಿರಾಟ್ ಮತ್ತು ಐಎನ್‌ಎಸ್ ವಿಕ್ರಮಾದಿತ್ಯ ನಿಯೋಜನೆಗೊಂಡಿವೆ. ಈ ಪೈಕಿ ಐಎನ್‌ಎಸ್ ವಿಕ್ರಾಂತ್ ಬಲಿಷ್ಠ ಯುದ್ಧ ಹಡಗು ಆಗಿದೆ.

  • ಕರಾಚಿಯ ವಿವಿಧ ಪ್ರದೇಶಗಳಲ್ಲಿ 22 ಮೃತದೇಹಗಳು ಪತ್ತೆ- ಸಂಚಲನ ಸೃಷ್ಟಿ, ಹೈ ಅಲರ್ಟ್‌

    ಕರಾಚಿಯ ವಿವಿಧ ಪ್ರದೇಶಗಳಲ್ಲಿ 22 ಮೃತದೇಹಗಳು ಪತ್ತೆ- ಸಂಚಲನ ಸೃಷ್ಟಿ, ಹೈ ಅಲರ್ಟ್‌

    ಇಸ್ಲಾಮಾಬಾದ್:‌ ಪಾಕಿಸ್ತಾನದ ಕರಾಚಿ (Karachi, Pakistan) ನಗರದಲ್ಲಿ ನಿಗೂಢ ಸಾವಿನಿಂದ ಸಂಚಲನ ಸೃಷ್ಟಿಯಾಗಿದೆ. ಇಲ್ಲಿನ ವಿವಿಧ ಪ್ರದೇಶಗಳಲ್ಲಿ ಇಲ್ಲಿಯವರೆಗೆ ಒಟ್ಟು 22 ಮೃತದೇಹಗಳು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ನಗರದಾದ್ಯಂತ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ.

         

    ಮಂಗಳವಾರ 5 ಹೊಸ ಶವಗಳು ಪತ್ತೆಯಾಗಿದ್ದು, ಈ ಮೂಲಕ ಮೃತ ದೇಹಗಳ ಸಂಖ್ಯೆ ಈಗ 22 ಕ್ಕೆ ಏರಿಕೆಯಾಗಿದೆ ಎಂದು ಬುಧವಾರ ವರದಿಯಾಗಿದೆ. ಪಾಕಿಸ್ತಾನಿ ಎನ್‌ಜಿಒಗಳ ಪ್ರಯತ್ನಗಳ ಹೊರತಾಗಿಯೂ 22 ದೇಹಗಳಲ್ಲಿ ಯಾವುದನ್ನೂ ಗುರುತಿಲು ಸಾಧ್ಯವಾಗಿಲ್ಲ ಎಂಬುದಾಗಿ ವರದಿಯಾಗಿದೆ. ಸದ್ಯ ನಗರದಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದು, ಈ ನಿಗೂಢ ಸಾವುಗಳ ಬಗ್ಗೆ ಕಳವಳವೂ ಹೆಚ್ಚಿದೆ.

    ವರದಿಯ ಪ್ರಕಾರ, ವಿಪರೀತ ಬಿಸಿಲಿ ಕಾರಣ ಈ ಸಾವುಗಳು ಸಂಭವಿಸಿರಬಹುದೆಂದು ಶಂಕಿಸಲಾಗಿದೆ. ಬಂದರು ನಗರವಾಗಿರುವ ಕರಾಚಿಯಲ್ಲಿ ಬಿಸಿಲಿನ ತಾಪಕ್ಕೆ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನಗರದ ಅನೇಕ ನಾಗರಿಕರು ಈ ಬಿಸಿಲಿನ ಶಾಖಕ್ಕೆ ತುತ್ತಾಗಿದ್ದರೆ, ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೇ ವೇಳೆ ಶವವಾಗಿ ಪತ್ತೆಯಾಗಿರುವ ಇವರ ಸಾವಿಗೆ ಇನ್ನೊಂದು ಕಾರಣವನ್ನು ಹೇಳಲಾಗುತ್ತಿದೆ. ಮಾದಕ ವ್ಯಸನದಿಂದ ಕೂಡ ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗುತ್ತಿದೆ. ಇದನ್ನೂ ಓದಿ: ನಾವು ಭಾರತದ ಜೊತೆಗಿದ್ದೇವೆ: ಪಾಕಿಸ್ತಾನ ಉಪ ಪ್ರಧಾನಿ

    ಕರಾಚಿಯ ಈಧಿ ಫೌಂಡೇಶನ್‌ನ ಅಧಿಕಾರಿ ಅಜೀಮ್ ಖಾನ್ ಅವರು, ಮೃತರಲ್ಲಿ ಹೆಚ್ಚಿನವರು ಮಾದಕ ವ್ಯಸನಿಗಳಾಗಿದ್ದಾರೆ. ಮತ್ತು ಅವರು ಬಿಸಿಲಿನ ಹೊಡೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಹಿರಿಯ ನಾಗರಿಕರೊಬ್ಬರು ಮಾದಕ ವ್ಯಸನ ಮಾರಾಟ ನಿಲ್ಲಿಸಿದಾಗ, ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಯಿತು. ಈ ಘಟನೆಯು ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಸೇವನೆಯ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ ಎಂದರು.

  • ದಾವೂದ್ ಇಬ್ರಾಹಿಂ ಸ್ಥಿತಿ ಗಂಭೀರ- ವಿಷಪ್ರಾಶನ ಅಲ್ಲಗಳೆದ ಕುಟುಂಬಸ್ಥರು

    ದಾವೂದ್ ಇಬ್ರಾಹಿಂ ಸ್ಥಿತಿ ಗಂಭೀರ- ವಿಷಪ್ರಾಶನ ಅಲ್ಲಗಳೆದ ಕುಟುಂಬಸ್ಥರು

    ಇಸ್ಲಾಮಾಬಾದ್: ಗಂಭೀರ ಆರೋಗ್ಯ ಸಮಸ್ಯೆಗಳಿಂದಾಗಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು (Dawood Ibrahim) ಪಾಕಿಸ್ತಾನದ ಕರಾಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ವರದಿಗಳ ನಡುವೆ, ಆತನ ಕುಟುಂಬದ ಸದಸ್ಯರು ವಿಷಪ್ರಾಶನ ವಿಚಾರವನ್ನು ಅಲ್ಲಗೆಳೆದಿದ್ದಾರೆ.

    ದಾವೂದ್ ಆರೋಗ್ಯದ ಕುರಿತ ವಿಚಾರ ಹೊರಬೀಳುತ್ತಿದ್ದಂತೆಯೇ ಮುಂಬೈ ಪೊಲೀಸರು ನಗರದಲ್ಲಿರುವ ಅವರ ಕುಟುಂಬ ಸದಸ್ಯರಿಂದ ಮಾಹಿತಿಯನ್ನು ಖಚಿತಪಡಿಸಿಕೊಳ್ಳಲು ತಂಡವನ್ನು ಕಳುಹಿಸಿದ್ದಾರೆ. ಆಗ ದಾವೂದ್ ಸೋದರಳಿಯ, ಆರೋಗ್ಯ ಸಮಸ್ಯೆಗಳಿಂದ ಚೆನ್ನಾಗಿಲ್ಲ ಎಂದು ಖಚಿತಪಡಿಸಿದ್ದಾರೆ. ಆದರೆ ವಿಷಪ್ರಾಶನವಾಗಿಲ್ಲ‌ (Poisoning) ಎಂದು ಅವರು ತಿಳಿಸಿದ್ದಾರೆ.

    ಭಾನುವಾರ ರಾತ್ರಿಯಿಂದ ದಾವೂದ್ ಆರೋಗ್ಯದ ಬಗ್ಗೆ ವರದಿಗಳು ಹೊರಬಿದ್ದಿವೆ. ಆದರೆ ಭಾರತೀಯ ಅಧಿಕಾರಿಗಳಿಂದ ಯಾವುದೇ ದೃಢೀಕರಣವಿಲ್ಲ. ಈ ಸಂಬಂಧ ಪಾಕಿಸ್ತಾನ ಸರ್ಕಾರದಿಂದಲೂ ಅಧಿಕೃತ ಮಾಹಿತಿ ಇಲ್ಲ. ವಿಷಪ್ರಾಶನದಿಂದಾಗಿ ದಾವೂದ್ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಹೇಳಲಾಗಿದೆ. ಸದ್ಯ ದಾವೂದ್ ಪಾಕಿಸ್ತಾನದ ಕರಾಚಿ ಆಸ್ಪತ್ರೆಯಲ್ಲಿ (Karachi Hospital) ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಯ ಸುತ್ತಮುತ್ತ ಪಾಕ್‌ ಸೇನೆಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ದಾವೂದ್ ಆಸ್ಪತ್ರೆಗೆ ದಾಖಲಾಗಿರುವುದು ಸುದ್ದಿಯಾಗುತ್ತಿದ್ದಂತೆಯೇ ಕರಾಚಿ, ರಾವಲ್ಪಿಂಡಿ, ಲಾಹೋರ್‌ ಹಾಗೂ ಇಸ್ಲಾಮಾಬಾದ್‍ನಲ್ಲಿ ಇಂಟರ್ ನೆಟ್ ಸ್ಥಗಿತಗೊಳಿಸಲಾಗಿದೆ ಎಂಬುದಾಗಿ ವರದಿಯಾಗಿದೆ. ಇದನ್ನೂ ಓದಿ: ವಿಷ ಸೇವಿಸಿರುವ ಶಂಕೆ – ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಆಸ್ಪತ್ರೆಗೆ ದಾಖಲು

    1993ರಲ್ಲಿ 250ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಮುಂಬೈ ಸ್ಫೋಟದ ಪ್ರಮುಖ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂ ದಶಕಗಳಿಂದ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ. ಜನವರಿಯಲ್ಲಿ ದಾವೂದ್ ಇಬ್ರಾಹಿಂನ ಸಹೋದರಿ ಹಸೀನಾ ಪಾರ್ಕರ್ ಅವರ ಮಗ ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ಭೂಗತ ಪಾತಕಿ ಎರಡನೇ ಬಾರಿಗೆ ಮದುವೆಯಾದ ನಂತರ ಕರಾಚಿಯಲ್ಲೇ ಇರುತ್ತಾನೆ ಎಂದು ತಿಳಿಸಿದ್ದರು.

  • BSF ಯೋಧರನ್ನು ಬಲಿ ಪಡೆದಿದ್ದ ಉಗ್ರ ಪಾಕ್‌ನಲ್ಲಿ ಗುಂಡಿನ ದಾಳಿಗೆ ಬಲಿ- 2015ರಲ್ಲಿ ನಡೆದಿದ್ದೇನು?

    BSF ಯೋಧರನ್ನು ಬಲಿ ಪಡೆದಿದ್ದ ಉಗ್ರ ಪಾಕ್‌ನಲ್ಲಿ ಗುಂಡಿನ ದಾಳಿಗೆ ಬಲಿ- 2015ರಲ್ಲಿ ನಡೆದಿದ್ದೇನು?

    ಇಸ್ಲಾಮಾಬಾದ್‌: ಪಾಕಿಸ್ತಾನದ ಕರಾಚಿಯಲ್ಲಿ (Pakistan Karachi) ಅಪರಿಚಿತ ಬಂದೂಕುದಾರಿಗಳಿಂದ ನಡೆದ ಗುಂಡಿನ ದಾಳಿಗೆ 2015ರ ಉಧಂಪುರ ದಾಳಿಯ ಮಾಸ್ಟರ್‌ ಮೈಂಡ್‌ ಲಷ್ಕರ್-ಎ-ತೊಯ್ಬಾ (LET) ಭಯೋತ್ಪಾದಕ ಹಂಜ್ಲಾ ಅದ್ನಾನ್ (Hanzla Adnan) ದುರ್ಮರಣಕ್ಕೀಡಾಗಿದ್ದಾನೆ.

    2015ರಲ್ಲಿ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಉಧಂಪುರದಲ್ಲಿ BSF ಬೆಂಗಾವಲು ಪಡೆಯ ಮೇಲೆ ನಡೆದ ದಾಳಿಯ ಮಾಸ್ಟರ್‌ ಮೈಂಡ್‌ ಇತನೇ ಆಗಿದ್ದ. 2008ರ ನವೆಂಬರ್‌ 26ರಂದು ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಎಲ್ಇಟಿ ಮುಖ್ಯಸ್ಥ ಹಫೀಜ್ ಸಯೀದ್‌ನ ನಿಕಟವರ್ತಿಯೂ ಆಗಿದ್ದ ಎಂದು ಪರಿಗಣಿಸಲಾಗಿದೆ.

    ಇತ್ತೀಚೆಗೆ ಹಂಝ್ಲಾ ಅದ್ನಾನ್ ತನ್ನ ಕಾರ್ಯಾಚರಣೆಯ ನೆಲೆಯನ್ನು ರಾವಲ್ಪಿಂಡಿಯಿಂದ ಕರಾಚಿಗೆ ಬದಲಾಯಿಸಿದ್ದ. ಕಳೆದ ಎರಡು ದಿನಗಳ ಹಿಂದೆ ತಡರಾತ್ರಿಯಲ್ಲಿ ಅಪರಿಚಿತ ಬಂದೂಕುಧಾರಿಗಳಿಂದ ನಡೆದ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ. ಇದನ್ನೂ ಓದಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಈಗ ವಿಶ್ವದ ಶಕ್ತಿಶಾಲಿ ಮಹಿಳೆ – ನಂ.1 ಸ್ಥಾನದಲ್ಲಿ ಯಾರಿದ್ದಾರೆ?

    ಅಪರಿಚಿತರು ಗುಂಡಿನ ದಾಳಿ ನಡೆಸಿದಾಗ ಹಂಜ್ಲಾ ಅದ್ನಾನ್‌ಗೆ ನಾಲ್ಕು ಬುಲೆಟ್‌ ತಗುಲಿತ್ತು, ಇದರಿಂದ ತೀವ್ರ ರಕ್ತಸ್ರಾವವಾಗಿತ್ತು. ಈ ಸುಳಿವನ್ನು ಬಿಟ್ಟುಕೊಡದ ಪಾಕಿಸ್ತಾನ ಸೇನೆ ರಹಸ್ಯವಾಗಿ ಕರಾಚಿಯ ಆಸ್ಪತ್ರೆಗೆ ಕರೆದೊಯ್ದಿತ್ತು. ಎರಡು ದಿನಗಳ ನಂತ್ರ ಚಿಕಿತ್ಸೆ ಫಲಕಾರಿಯಾಗದೇ ಡಿಸೆಂಬರ್‌ 5ರಂದು ಸಾವನ್ನಪ್ಪಿದ್ದಾನೆ ಎಂದು ಮೂಲಗಳು ತಿಳಿಸಿವೆ.

    2015ರಲ್ಲಿ ಏನಾಗಿತ್ತು?
    ಉಗ್ರ ಹಂಝ್ಲಾ ಅದ್ನಾನ್ 2015ರಲ್ಲಿ ಉಧಂಪುರದಲ್ಲಿ ಭಾರತೀಯ ಬಿಎಸ್‌ಎಫ್‌ ಯೋಧರ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿದ್ದ. ಈ ದಾಳಿಯಲ್ಲಿ ಇಬ್ಬರು ಯೋಧರು ಮೃತಪಟ್ಟಿದ್ದರು. 13 ಮಂದಿ ಗಾಯಗೊಂಡಿದ್ದರು. ಈ ಬಗ್ಗೆ ಎನ್‌ಐಎ, ಬಿಎಸ್‌ಎಫ್‌ ತನಿಖೆ ನಡೆಸಿ ಆರೋಪಪಟ್ಟಿಯನ್ನೂ ಸಲ್ಲಿಸಿತ್ತು. ಇದನ್ನೂ ಓದಿ: ಭಾರತದ ವಿರುದ್ಧ ಉಗ್ರ ಚಟುವಟಿಕೆಗಳಲ್ಲಿ ಭಾಗಿ – ಖಲಿಸ್ತಾನಿ ಭಯೋತ್ಪಾದಕ ಪಾಕ್‌ನಲ್ಲಿ ಸಾವು

    ಆ ನಂತರವೂ ಉಗ್ರನ ಆಕ್ರೋಶ ಮುಂದುವರಿದಿತ್ತು. 2016ರಲ್ಲಿಯೂ ಜಮ್ಮು ಮತ್ತು ಕಾಶ್ಮೀರದ ಪಾಂಪೋರ್‌ ಪ್ರದೇಶದಲ್ಲಿ ಸಿಆರ್‌ಪಿಎಫ್ (ಕೇಂದ್ರ ಮೀಸಲು ಪೊಲೀಸ್ ಪಡೆ) ಬೆಂಗಾವಲು ಪಡೆ ಮೇಲೆ ಎಲ್‌ಇಟಿ ಭಯೋತ್ಪಾದಕ ದಾಳಿ ನಡೆಸಿ, 8 ಸಿಆರ್‌ಪಿಎಫ್ ಯೋಧರನ್ನು ಹತ್ಯೆಗೈದಿದ್ದತ್ತು. 22 ಮಂದಿ ಗಾಯಗೊಂಡಿದ್ದರು. ಈ ದಾಳಿಯಲ್ಲೂ ಹಂಝ್ಲಾ ಅದ್ನಾನ್ ಪ್ರಮುಖ ಪಾತ್ರ ವಹಿಸಿದ್ದ ಎಂದು ಅಧಿಕಾರಿ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ನೈಜೀರಿಯಾದಲ್ಲಿ ಗುರಿ ತಪ್ಪಿದ ಸೇನಾ ಡ್ರೋನ್‌ ದಾಳಿ – 85 ಮಂದಿ ನಾಗರಿಕರು ಬಲಿ

  • ಪಾಕ್‌ನಲ್ಲಿ ಬೆಂಕಿ ಅವಘಡ – 11 ಮಂದಿ ಸಾವು

    ಪಾಕ್‌ನಲ್ಲಿ ಬೆಂಕಿ ಅವಘಡ – 11 ಮಂದಿ ಸಾವು

    ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಕರಾಚಿಯ (Karachi) ರಶೀದ್ ಮಿನ್ಹಾಸ್ ರಸ್ತೆಯಲ್ಲಿರುವ ಬಹುಮಹಡಿ ಶಾಪಿಂಗ್ ಮಾಲ್‌ನಲ್ಲಿ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 11 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕರಾಚಿ ಮೇಯರ್ ಮುರ್ತಾಜಾ ವಹಾಬ್ ಅವರು ಬೆಂಕಿ ಅವಘಡದಿಂದ ಆಗಿರುವ ಸಾವುನೋವುಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಮೃತದೇಹಗಳನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 2 ತಿಂಗಳ ಬಳಿಕ 24 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್

    ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಅವರು, ಕೆಎಂಸಿ ಅಗ್ನಿಶಾಮಕ ದಳ ಈವರೆಗೆ ಬೆಂಕಿ ಅವಘಡದಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ ಎಂದು ಖಚಿತಪಡಿಸಿದ್ದಾರೆ. 7 ಮೃತದೇಹಗಳನ್ನು ಜಿನ್ನಾ ಆಸ್ಪತ್ರೆಗೆ ಹಾಗೂ ಮತ್ತೆರಡು ಮೃತದೇಹಗಳನ್ನು ಸಿವಿಲ್ ಮತ್ತು ಅಬ್ಬಾಸಿ ಶಹೀದ್ ಆಸ್ಪತ್ರೆಗೆ ರವಾನಿಸಲಾಗಿದೆ.

    ಎರಡು ಸ್ನಾರ್ಕೆಲ್‌ಗಳು, ಎಂಟು ಅಗ್ನಿಶಾಮಕ ಟೆಂಡರ್‌ಗಳು ಮತ್ತು ಒಂದು ಬೌಸರ್ ಒಳಗೊಂಡ ಕಾರ್ಯಾಚರಣೆಯಲ್ಲಿ ಆರ್‌ಜೆ ಶಾಪಿಂಗ್ ಮಾಲ್‌ನಲ್ಲಿ ಸಿಲುಕಿಕೊಂಡಿದ್ದ ಸುಮಾರು 50 ಜನರನ್ನು ರಕ್ಷಿಸಲಾಗಿದೆ ಎಂದು ಅಗ್ನಿಶಾಮಕ ದಳ ತಿಳಿಸಿದೆ. ಇದನ್ನೂ ಓದಿ: ಇಸ್ರೇಲ್-ಹಮಾಸ್ ನಡ್ವೆ ಇಂದಿನಿಂದ ಕದನ ವಿರಾಮ – 13 ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್‌ ಸಿದ್ಧತೆ

    ಬೆಂಕಿ ಅವಘಡದಲ್ಲಿ ಸಿಲುಕಿಕೊಂಡಿದ್ದ ಅನೇಕರನ್ನು ರಕ್ಷಿಸಲಾಗುತ್ತಿದೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಸದ್ಯ ಒಂದು ಮಹಡಿಯಲ್ಲಿ ಕೂಲಿಂಗ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಮೋಸ್ಟ್‌ ವಾಂಟೆಡ್‌ ಜೈಶ್ ಉಗ್ರ ಪಾಕ್‌ನಲ್ಲಿ ನಿಗೂಢ ಹತ್ಯೆ

    ಮೋಸ್ಟ್‌ ವಾಂಟೆಡ್‌ ಜೈಶ್ ಉಗ್ರ ಪಾಕ್‌ನಲ್ಲಿ ನಿಗೂಢ ಹತ್ಯೆ

    – 20 ತಿಂಗಳಿನಲ್ಲಿ 20ನೇ ಉಗ್ರ ನಿಗೂಢ ಸಾವು

    ಕರಾಚಿ: ಭಾರತದಲ್ಲಿ(India) ಉಗ್ರ ಕೃತ್ಯಕ್ಕೆ ನಡೆಸಲು ಪ್ರೋತ್ಸಾಹ ನೀಡುತ್ತಿದ್ದ ಜೈಶ್ ಉಗ್ರ ಮೌಲಾನಾ ರಹೀಂ ಉಲ್ಲಾ ತಾರೀಖ್ (Maulana Raheem Ullah Tariq) ಕರಾಚಿಯ (Karachi) ಒರಂಗಿ ಪಟ್ಟಣ ಪ್ರದೇಶದಲ್ಲಿ ಅಪರಿಚಿತರ ಗುಂಡೇಟಿಗೆ ಬಲಿಯಾಗಿದ್ದಾನೆ.

    ಈ ಮೂಲಕ ಕಳೆದ 20 ತಿಂಗಳಿನಲ್ಲಿ ಪಾಕಿಸ್ತಾನ, ಕೆನಡಾ ಸೇರಿದಂತೆ ದೇಶಗಳಲ್ಲಿ ನಿಗೂಢವಾಗಿ ಹತ್ಯೆಯಾದ ಮೋಸ್ಟ್‌ ವಾಂಟೆಡ್‌ ಉಗ್ರರ ಹತ್ಯಾ ಸರಣಿ ಮುಂದುವರಿದಿದೆ. ಭಾರತಕ್ಕೆ ಬೇಕಾದ 20ನೇ ಉಗ್ರ ತಾರೀಖ್ ಎಂದು ವರದಿಗಳು ಹೇಳಿವೆ.

    ಜೈಶ್-ಇ-ಮೊಹಮ್ಮದ್ (Jaish-e-Mohammad) ಉಗ್ರ ಸಂಘಟನೆಯ ಸಂಸ್ಥಾಪಕ ಮಸೂದ್ ಅಜರ್‌ನ (Masood Azhar) ಆಪ್ತನಾಗಿದ್ದ ತಾರೀಖ್ ಕಾಶ್ಮೀರದಲ್ಲಿ (Kashmir) ಉಗ್ರ ಚಟುವಟಿಕೆಗಳಿಗೆ ಯುವಕರನ್ನು ನೇಮಿಸುತ್ತಿದ್ದ.

     

    ಮಸೀದಿಗೆ ಪ್ರಾರ್ಥನೆ ತೆರಳುವಾಗ ಅಪರಿಚಿತ ವ್ಯಕ್ತಿಗಳು ತಾರೀಖ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರು ಇದನ್ನು ಉದ್ದೇಶಿತ ಹತ್ಯೆ ಎಂದು ಕರೆದಿದ್ದಾರೆ. ವಿಧಿ ವಿಜ್ಞಾನ ತಂದ ತಾರೀಖ್‌ನಿಂದ ಮೊಬೈಲ್‌ ಫೋನ್‌ ಮತ್ತು ಇತರೇ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದೆ.  ಇದನ್ನೂ ಓದಿ: ಹೀನಾಯ ಸೋಲಿನ ಬೆನ್ನಲ್ಲೇ ಪಾಕ್‌ಗೆ ಮತ್ತೆ ಶಾಕ್‌ – ಗುಡ್‌ಬೈ ಹೇಳಿದ ಬೌಲಿಂಗ್‌ ಕೋಚ್‌

    3 ದಿನ ಹಿಂದಷ್ಟೇ ಲಷ್ಕರ್ ಉಗ್ರ ಅಕ್ರಂ ಖಾನ್ ಘಜೈನನ್ನು ಪಾಕ್‌ನ ಬಜ್‌‌ ನಲ್ಲಿ ಅನಾಮಿಕ ವ್ಯಕ್ತಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು. 2018ರ ಕಾಶ್ಮೀರದ ಸಂಜುವಾನ್ ಭಯೋತ್ಪಾದಕ ದಾಳಿಯ ರೂವಾರಿ ಸ್ವಾಜಾ ಶಾಹಿದ್, ಕಳೆದ ವಾರವಷ್ಟೇ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಶವವಾಗಿ ಪತ್ತೆಯಾಗಿದ್ದ.

    ಮುಂಬೈ ಮತ್ತು ಪುಲ್ವಾಮಾ ಉಗ್ರ ದಾಳಿಯ ಮಾಸ್ಟರ್ ಮೈಂಡ್, ಜೈಶ್-ಇ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರನೆಂದು ವಿಶ್ವಸಂಸ್ಥೆ ಘೋಷಿಸಿದೆ.

     

  • ಒಂದು ಮೀನಿಗೆ 70 ಲಕ್ಷ! ಅಪರೂಪದ ಮೀನು ಮಾರಿ ರಾತ್ರೋರಾತ್ರಿ 7 ಕೋಟಿ ಒಡೆಯನಾದ ಪಾಕಿಸ್ತಾನ ಮೀನುಗಾರ

    ಒಂದು ಮೀನಿಗೆ 70 ಲಕ್ಷ! ಅಪರೂಪದ ಮೀನು ಮಾರಿ ರಾತ್ರೋರಾತ್ರಿ 7 ಕೋಟಿ ಒಡೆಯನಾದ ಪಾಕಿಸ್ತಾನ ಮೀನುಗಾರ

    ಇಸ್ಲಾಮಾಬಾದ್: ಹಲವು ಔಷಧೀಯ ಗುಣಗಳನ್ನು ಹೊಂದಿರುವ ಅಪರೂಪದ ಮೀನುಗಳನ್ನು ಮಾರಾಟ ಮಾಡಿ ಪಾಕಿಸ್ತಾನದ ಮೀನುಗಾರನೊಬ್ಬ (Pakistan Fisherman) ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದಾರೆ.

    ಬಡ ಇಬ್ರಾಹಿಂ ಹೈದರಿ ಮೀನುಗಾರಿಕಾ ಗ್ರಾಮದಲ್ಲಿ ವಾಸಿಸುವ ಹಾಜಿ ಬಲೋಚ್ ಮತ್ತು ಆತನ ಸಂಗಡಿಗರು ಅರಬ್ಬಿ ಸಮುದ್ರದಿಂದ ಗೋಲ್ಡನ್ ಫಿಶ್ ಅಥವಾ “ಸೋವಾ” (Sowa Fish) ಎಂದು ಕರೆಯಲ್ಪಡುವ ಮೀನುಗಳನ್ನು ಹಿಡಿದಿದ್ದರು. ಮೀನು ಮಾರಿ ಬಂದ ಹಣವನ್ನು 7 ಮಂದಿ ಮೀನುಗಾರರು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ದಿನಕ್ಕೆ 4 ಗಂಟೆ ಕದನ ವಿರಾಮ – ಗಾಜಾ ಮೇಲಿನ ದಾಳಿಯನ್ನು ಕೊಂಚ ಸಡಿಲಿಸಿದ ಇಸ್ರೇಲ್

    ಶುಕ್ರವಾರ ಬೆಳಗ್ಗೆ ಕರಾಚಿ ಬಂದರಿನಲ್ಲಿ ಅಪರೂಪದ ಮೀನುಗಳನ್ನು ಹರಾಜು ಹಾಕಲಾಯಿತು. ಸುಮಾರು 7 ಕೋಟಿ ರೂಪಾಯಿಗೆ ಮೀನು ಮಾರಾಟವಾಗಿದೆ ಎಂದು ಪಾಕಿಸ್ತಾನದ ಮೀನುಗಾರರ ಜಾನಪದ ವೇದಿಕೆಯ ಮುಬಾರಕ್ ಖಾನ್ ತಿಳಿಸಿದ್ದಾರೆ.

    ಸೋವಾ ಮೀನು ಅಪರೂಪದ್ದು ಮತ್ತು ಬೆಲೆಬಾಳುವಂತಹದ್ದು. ಏಕೆಂದರೆ ಅದರ ಹೊಟ್ಟೆಯಲ್ಲಿರುವ ಪದಾರ್ಥಗಳು ಕಾಯಿಲೆಗಳನ್ನು ಗುಣಪಡಿಸುವ ಮತ್ತು ಔಷಧೀಯ ಗುಣಗಳನ್ನು ಹೊಂದಿವೆ ಎಂದು ಹೇಳಲಾಗುತ್ತದೆ. ಮೀನಿನ ದಾರದಂತಹ ವಸ್ತುವನ್ನು ಶಸ್ತ್ರಚಿಕಿತ್ಸಾ ವಿಧಾನಗಳಲ್ಲಿಯೂ ಬಳಸಲಾಗುತ್ತದೆ. ಇದನ್ನೂ ಓದಿ:

    ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರ ಎಲ್‌ಇಟಿ ಕಮಾಂಡರ್‌ಗೆ ಗುಂಡಿಕ್ಕಿ ಹತ್ಯೆ

    ಒಂದು ಮೀನು ಹರಾಜಿನಲ್ಲಿ ಸುಮಾರು 70 ಲಕ್ಷ ರೂಪಾಯಿಗೆ ಮಾರಾಟವಾಗುತ್ತದೆ. ಸಾಮಾನ್ಯವಾಗಿ 20 ರಿಂದ 40 ಕೆಜಿ ತೂಕದ ಮತ್ತು 1.5 ಮೀಟರ್ ವರೆಗೆ ಬೆಳೆಯುವ ಈ ಮೀನಿಗೆ ಪೂರ್ವ ಏಷ್ಯಾದ ದೇಶಗಳಲ್ಲಿ ಹೆಚ್ಚು ಬೇಡಿಕೆಯಿದೆ. ಸೋವಾ ಮೀನು ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಸಾಂಪ್ರದಾಯಿಕ ಔಷಧಗಳು ಮತ್ತು ಸ್ಥಳೀಯ ಪಾಕಪದ್ಧತಿಯಲ್ಲಿ ಅದರ ಬಳಕೆಯನ್ನು ಕಂಡುಕೊಳ್ಳುತ್ತದೆ.

    ನಾವು ಕರಾಚಿಯ ತೆರೆದ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದೆವು. ಆಗ ಈ ಬೃಹತ್ ಗೋಲ್ಡನ್ ಮೀನುಗಳನ್ನು ಹಿಡಿದಿದ್ದೇವೆ. ಸಂತಾನೋತ್ಪತ್ತಿ ಅವಧಿಯಲ್ಲಿ ಮಾತ್ರ ಮೀನುಗಳು ಕರಾವಳಿಯ ಸಮೀಪಕ್ಕೆ ಬರುತ್ತವೆ ಎಂದು ಮೀನುಗಾರರು ತಿಳಿಸಿದ್ದಾರೆ.

  • ಭಾರತಕ್ಕೆ ಬೇಕಾಗಿದ್ದ ಮೋಸ್ಟ್‌ ವಾಂಟೆಡ್‌ ಉಗ್ರ ಕರಾಚಿಯಲ್ಲಿ ಗುಂಡೇಟಿಗೆ ಬಲಿ

    ಭಾರತಕ್ಕೆ ಬೇಕಾಗಿದ್ದ ಮೋಸ್ಟ್‌ ವಾಂಟೆಡ್‌ ಉಗ್ರ ಕರಾಚಿಯಲ್ಲಿ ಗುಂಡೇಟಿಗೆ ಬಲಿ

    ಇಸ್ಲಾಮಾಬಾದ್‌: ಭಾರತಕ್ಕೆ (India) ಬೇಕಾಗಿದ್ದ ಮೋಸ್ಟ್‌ ವಾಟೆಂಡ್‌ ಉಗ್ರ ಪಾಕಿಸ್ತಾನದ (Pakistan) ಕರಾಚಿಯಲ್ಲಿ ಗುಂಡೇಟಿಗೆ ಬಲಿಯಾಗಿದ್ದಾನೆ.

    ನಿಷೇಧಿತ ಲಷ್ಕರ್‌-ಇ-ತೊಯ್ಬಾ (Lashkar-e-Taiba) ಸಂಘಟನೆಯ ಸ್ಥಾಪಕ ಸದಸ್ಯ ಉಗ್ರ ಖೈಸರ್ ಫಾರೂಕ್ (Qaiser Farooq) ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾನೆ.

    ಕರಾಚಿಯ ಬೀದಿಯಲ್ಲಿ ಇತರ ವ್ಯಕ್ತಿಗಳ ಜೊತೆ ನಡೆದುಕೊಂಡು ಹೋಗುತ್ತಿದ್ದಾಗ ಫಾರೂಕ್‌ ಮೇಲೆ ದಾಳಿ ನಡೆದಿದೆ. ಈತ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್‌ ಸಯೀದ್‌ನ (Hafiz Saeed) ಆಪ್ತ ಸಹಾಯಕನಾಗಿದ್ದ. ಇದನ್ನೂ ಓದಿ: ಭಾರತಕ್ಕೆ ಬೇಕಿದ್ದ ಮೋಸ್ಟ್‌ ವಾಂಟೆಡ್‌ ಖಲಿಸ್ತಾನಿ ಉಗ್ರ ಗುಂಡಿನ ದಾಳಿಗೆ ಬಲಿ

    ಮಂಗಳವಾರ ಹಫೀಜ್‌ ಸಯೀದ್‌ ಪುತ್ರ ಕಮಾಲುದ್ದೀನ್ ಸಯೀದ್‌ನನ್ನು ಅಪಹರಣ ಮಾಡಲಾಗಿತ್ತು. ಪೇಶಾವರದಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಕಮಾಲುದ್ದೀನ್ ಸಯೀದ್‌ನನ್ನು ಅಪಹರಣ ಮಾಡಿದ್ದರು. ಇಲ್ಲಿಯವರೆಗೆ ಕಮಾಲುದ್ದೀನ್‌ ಸಯೀದ್‌ ಎಲ್ಲಿದ್ದಾನೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಆತನನ್ನು ಹತ್ಯೆ ಮಾಡಲಾಗಿದೆ ಎಂಬ ವಿಚಾರ ಚರ್ಚೆ ಆಗುತ್ತಿದೆ.

    ಮುಂಬೈ ದಾಳಿ:
    2008 ರ ನವೆಂಬರ್ 26 ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ 10 ಲಷ್ಕರ್-ಎ-ತೈಬಾ (LeT) ಭಯೋತ್ಪಾದಕರು ಪ್ರವೇಶಿಸಿದ್ದರು. ಭಯೋತ್ಪಾದಕರು ಸರಣಿ ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟಗಳನ್ನು ನಡೆಸಿ 166 ಜನರನ್ನು ಕೊಂದಿದ್ದರು. 300 ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ್ದರು.

    ಛತ್ರಪತಿ ಶಿವಾಜಿ ಟರ್ಮಿನಸ್ (CST) ರೈಲು ನಿಲ್ದಾಣ, ಕಾಮಾ ಆಸ್ಪತ್ರೆ, ನಾರಿಮನ್ ಹೌಸ್ ವ್ಯಾಪಾರ ಮತ್ತು ವಸತಿ ಸಂಕೀರ್ಣ, ಲಿಯೋಪೋಲ್ಡ್ ಕೆಫೆ, ತಾಜ್ ಹೋಟೆಲ್ ಮತ್ತು ಒಬೆರಾಯ್ ಟ್ರೈಡೆಂಟ್ ಹೋಟೆಲ್‌ಗಳಲ್ಲಿ ದಾಳಿ ನಡೆಸಲಾಗಿತ್ತು.

     
    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 45 ಮಹಿಳೆಯರ ಮೇಲೆ ರೇಪ್ – ಪ್ರಿನ್ಸಿಪಾಲ್‍ ಅರೆಸ್ಟ್

    45 ಮಹಿಳೆಯರ ಮೇಲೆ ರೇಪ್ – ಪ್ರಿನ್ಸಿಪಾಲ್‍ ಅರೆಸ್ಟ್

    – ವೀಡಿಯೋ ಮಾಡಿ ಬ್ಲಾಕ್ ಮೇಲ್

    ಇಸ್ಲಾಮಾಬಾದ್: 45ಕ್ಕೂ ಹೆಚ್ಚು ಮಹಿಳೆಯರನ್ನು ಅತ್ಯಾಚಾರವೆಸಗಿ, ವೀಡಿಯೋ ಮಾಡಿ ಬ್ಲ್ಯಾಕ್‍ಮೇಲ್ ಮಾಡಿದ ಆರೋಪದ ಮೇಲೆ ಕರಾಚಿಯ  (Karachi) ಖಾಸಗಿ ಶಾಲೆಯ (School) ಪ್ರಾಂಶುಪಾಲನೊಬ್ಬನ್ನು (Principal) ಬಂಧಿಸಲಾಗಿದೆ.

    ಬಂಧಿತ ಆರೋಪಿ ಪ್ರಿನ್ಸಿಪಾಲ್ ಇರ್ಫಾನ್ ಗಫೂರ್ ಎಂದು ಗುರುತಿಸಲಾಗಿದೆ. ಆತನ ಮೊಬೈಲ್‌ನಿಂದ ಸುಮಾರು 25 ಸಣ್ಣ ವೀಡಿಯೋ ತುಣುಕುಗಳನ್ನು ವಶಪಡಿಸಿಕೊಂಡಿದ್ದಾರೆ. ತನಿಖೆಗಾಗಿ ಪೊಲೀಸರು ಸಿಸಿಟಿವಿಯ ಡಿವಿಆರ್ ಅನ್ನು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ತಮಿಳುನಾಡು ಸಿಎಂ ಜೊತೆಗೆ ಡಿಕೆಶಿಗೆ ವ್ಯಾಪಾರ ಸಂಬಂಧ ಇದೆ: ಸಿಪಿವೈ

    ಇರ್ಫಾನ್ ಮತ್ತು ಶಾಲೆಯ ಶಿಕ್ಷಕಿಯ ವೀಡಿಯೋ ವೈರಲ್ ಆದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಆತನನ್ನು ಬಂಧಿಸಿದ್ದಾರೆ. ಅಲ್ಲದೇ ಶಾಲೆಯನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಲೈಂಗಿಕ ಕಿರುಕುಳ, ಬೆದರಿಕೆ ಮತ್ತು ಬ್ಲ್ಯಾಕ್‍ಮೇಲ್ ಆಧಾರದ ಮೇಲೆ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    ಉದ್ಯೋಗ ನೀಡುವ ನೆಪದಲ್ಲಿ ಆರೋಪಿ ಶಿಕ್ಷಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಅಲ್ಲದೇ ವೀಡಿಯೋ ಚಿತ್ರೀಕರಿಸುವ ಮೂಲಕ ಮಹಿಳೆಯರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ. ತನಿಖೆ ಪ್ರಗತಿಯಲ್ಲಿದ್ದು, ವೀಡಿಯೋ ಹೊಂದಿರುವವರನ್ನು ಬಂಧಿಸಲಾಗುವುದು ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

    ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣವನ್ನು ಮುಂದುವರೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಜಾಗ ಗುರುತಿಸಿ: ಬೋಸರಾಜು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Pakistan Train Accident: ಭೀಕರ ರೈಲು ದುರಂತ – 20 ಮಂದಿ ಸಾವು, 80 ಮಂದಿಗೆ ಗಾಯ

    Pakistan Train Accident: ಭೀಕರ ರೈಲು ದುರಂತ – 20 ಮಂದಿ ಸಾವು, 80 ಮಂದಿಗೆ ಗಾಯ

    ಇಸ್ಲಾಮಾಬಾದ್‌: ಕರಾಚಿಯಿಂದ (Karachi) ರಾಲ್ಪಿಂಡಿಗೆ ತೆರಳುತ್ತಿದ್ದ ಹಜಾರಾ ಎಕ್ಸ್‌ಪ್ರೆಸ್‌ (Hazara Express) ರೈಲು ಭೀಕರ ದುರಂತಕ್ಕೀಡಾಗಿದೆ. ಘಟನೆಯಲ್ಲಿ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದು, 80 ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ಪಾಕಿಸ್ತಾನದ (Pakistan) ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ.

    ಕರಾಚಿಯಿಂದ 275 ಕಿಲೋ ಮೀಟರ್ ದೂರದಲ್ಲಿರುವ ರಾವಲ್ಪಿಂಡಿಗೆ (Rawalpindi) ತೆರಳುತ್ತಿದ್ದ ಹಜಾರಾ ಎಕ್ಸ್‌ಪ್ರೆಸ್‌ ರೈಲಿನ ಒಟ್ಟು 10 ಬೋಗಿಗಳು ಹಳಿ ತಪ್ಪಿದೆ. ಘಟನೆಯಲ್ಲಿ ಈವೆರೆಗೆ 20 ಮಂದಿ ಸಾವನ್ನಪ್ಪಿದ್ದು, 80 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡ ಪ್ರಯಾಣಿಕರನ್ನ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಆದ್ರೆ ಘಟನೆಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ. ಇದನ್ನೂ ಓದಿ: ಪಾಕಿಸ್ತಾನದ ಮಾಜಿ ಪ್ರಧಾನಿ ಅರೆಸ್ಟ್ – ಇಮ್ರಾನ್ ಖಾನ್‌ಗೆ 3 ವರ್ಷ ಜೈಲು, 5 ವರ್ಷ ರಾಜಕೀಯದಿಂದ ಬ್ಯಾನ್

    ರೈಲ್ವೆ ಆಡಳಿತ ಮಂಡಳಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಪಾಕಿಸ್ತಾನ ಸೇನೆ ಕೂಡ ಕಾರ್ಯಾಚರಣೆಗೆ ಕೈಜೋಡಿಸಿದ್ದು, ಸಮೀಪದ ನೆಲೆಗಳಿಂದ ಹೆಚ್ಚಿನ ಸೈನಿಕರನ್ನ ಕರೆಸಿಕೊಳ್ಳಲಾಗಿದೆ. ಘಟನಾ ಸ್ಥಳಕ್ಕೆ ಸಮೀಪದಲ್ಲಿರುವ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇತರ ಪ್ರಯಾಣಿಕರನ್ನ ನಿಗದಿತ ಸ್ಥಳಕ್ಕೆ ತಲುಪಿಸಲು ಪರ್ಯಾಯ ರೈಲು ವ್ಯವಸ್ಥೆ ಮಾಡಲಾಗಿದೆ ಎಂದು ಸ್ಥಳೀಯ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತವಾಗಿ 4 ದಿನ ಕಳೆದರೂ 101 ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ

    ಎರಡು ತಿಂಗಳ ಹಿಂದೆಯಷ್ಟೇ ಒಡಿಶಾ ರಾಜ್ಯದಲ್ಲಿ ನಡೆದ ಭೀಕರ ರೈಲು ದುರಂತ (Odisha Train Accident) ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ಕೋರಮಂಡಲ್ ಎಕ್ಸ್‌ಪ್ರೆಸ್‌ ರೈಲು ಜೂನ್ 2ರ ಸಂಜೆ ಸರಕುಗಳ ರೈಲಿಗೆ ಡಿಕ್ಕಿ ಹೊಡೆದು ಅದರ ಹೆಚ್ಚಿನ ಕೋಚ್‍ಗಳು ಹಳಿತಪ್ಪಿದ್ದವು. ಈ ಅಪಘಾತದಲ್ಲಿ ಸುಮಾರು 288 ಮಂದಿ ಸಾವನ್ನಪ್ಪಿದ್ದರು ಅಲ್ಲದೇ 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಪಾಕಿಸ್ತಾನದಲ್ಲಿ ಸಂಭವಿಸಿರುವ ದುರಂತದಲ್ಲಿ ಸಂತ್ರಸ್ತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]