Tag: Kapu Mariamma Temple

  • ಕಾಪು ಮಾರಿಗುಡಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭೇಟಿ

    ಕಾಪು ಮಾರಿಗುಡಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭೇಟಿ

    ಸ್ಯಾಂಡಲ್‌ವುಡ್ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ಅವರು ಉಡುಪಿಯ ಕಾಪು ಹೊಸ ಮಾರಿಗುಡಿ ದೇಗುಲಕ್ಕೆ (Udupi Kapu Mariyamma Temple) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:‘ಫಣಿ’ ಚಿತ್ರದ ಮೋಷನ್ ಪೋಸ್ಟರ್ ಅನಾವರಣ ಮಾಡಿದ ತೆಲುಗು ನಿರ್ದೇಶಕ ಕೆ.ರಾಘವೇಂದ್ರ ರಾವ್

    ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಭೇಟಿ ನೀಡಿದ್ದಾರೆ. ಕಾಪು ಮಾರಿಯಮ್ಮನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದ್ದಾರೆ. ಈ ವೇಳೆ, ಸಂಪೂರ್ಣ ಜೀರ್ಣೋದ್ಧಾರವಾಗಿರುವ ದೇಗುಲವನ್ನು ವೀಕ್ಷಣೆ ಮಾಡಿದ್ದಾರೆ. ಬಳಿಕ ನವದುರ್ಗ ಲೇಖನ ಪುಸ್ತಕ ಪಡೆದುಕೊಂಡಿದ್ದಾರೆ. ದೇವಿ ದರ್ಶನದ ಬಳಿಕ ದೇಗುಲದ ಪ್ರಧಾನ ಅರ್ಚಕರು ಪ್ರಸಾದ ನೀಡಿ ಅವರನ್ನು ಗೌರವಿಸಿದ್ದಾರೆ. ಇದನ್ನೂ ಓದಿ:ಪುಸ್ತಕ ರೂಪದಲ್ಲಿ ಪುನೀತ್‌ ರಾಜ್‌ಕುಮಾರ್ ಜೀವನಗಾಥೆ- ‘ಅಪ್ಪು’ ಜೀವನ ಚರಿತ್ರೆ ಬರೆದ ಅಶ್ವಿನಿ

    ಇತ್ತೀಚೆಗೆ ಕಾಪು ಮಾರಿಯಮ್ಮನ ದೇವಸ್ಥಾನಕ್ಕೆ ಪೂಜಾ ಹೆಗ್ಡೆ, ಶಿಲ್ಪಾ ಶೆಟ್ಟಿ, ಕಂಗನಾ ರಣಾವತ್ ಸೇರಿದಂತೆ ಅನೇಕರು ಭೇಟಿ ನೀಡಿದ್ದರು.

  • ಬಾಲಿವುಡ್ ನಟಿ ಪೂಜಾ ಹೆಗ್ಡೆ ಉಡುಪಿಗೆ- ಮದುವೆ ಬಗ್ಗೆ ಮಾತನಾಡಿದ್ರೆ ಮಾರುದ್ದ ಓಡಿದ್ರು

    ಬಾಲಿವುಡ್ ನಟಿ ಪೂಜಾ ಹೆಗ್ಡೆ ಉಡುಪಿಗೆ- ಮದುವೆ ಬಗ್ಗೆ ಮಾತನಾಡಿದ್ರೆ ಮಾರುದ್ದ ಓಡಿದ್ರು

    – ಕಾಪು ಮಾರಿಯಮ್ಮನ ದೇವಸ್ಥಾನದಲ್ಲಿ ವಿಶೇಷ ಪೂಜೆ

    ಉಡುಪಿ: ಬಾಲಿವುಡ್ ನಟಿ ಪೂಜಾ ಹೆಗ್ಡೆ ಉಡುಪಿಗೆ ಆಗಮಿಸಿದ್ದರು. ತನ್ನ ಕುಟುಂಬದ ಮನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿರುವುದರಿಂದ ಪೂಜಾ ಜಿಲ್ಲೆಗೆ ಆಗಮಿಸಿದ್ದರು. ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇವರ ಜೊತೆ ಕುಟುಂಬಸ್ಥರೂ ಇದ್ದರು.

    ಬಾಲಿವುಡ್‍ನ ಹೃತಿಕ್ ರೋಷನ್ ಅಭಿನಯದ ಮೊಹೆಂಜೋದಾರೋ ಮತ್ತು ಟಾಲಿವುಡ್‍ನ ಅಲ್ಲು ಅರ್ಜುನ್ ಅಭಿನಯದ ದುವ್ವಾಡ ಜಗನ್ನಾಥಮ್ ಚಿತ್ರದಲ್ಲಿ ಪೂಜಾ ಹೆಗ್ಡೆ ಅಭಿನಯಿಸಿದ್ದು, ಎರಡೂ ಚಿತ್ರಗಳು ಒಳ್ಳೆ ಹೆಸರು ಮಾಡಿವೆ.

    ಒಂದು ತೆಲುಗು ಚಿತ್ರ ಕೈಯ್ಯಲ್ಲಿದ್ದು, ಹಿಂದಿಯ ಮೂರು ಸ್ಕ್ರಿಪ್ಟ್‍ಗಳನ್ನು ಓದುತ್ತಿದ್ದೇನೆ. ಇಷ್ಟವಾದರೆ ಅದಕ್ಕೆ ಸಹಿ ಮಾಡುತ್ತೇನೆ ಎಂದು ಹೇಳಿರುವ ಪೂಜಾ, ಮದುವೆ ಸುದ್ದಿ ತೆಗೆದ ಕೂಡಲೇ ಮಾರು ದೂರ ಓಡಿದರು. ಮದುವೆ ಬಗ್ಗೆ ಮಾತನಾಡಲು ನಾನು ಇನ್ನೂ ಚಿಕ್ಕವಳು. ನನ್ನ ಮುಂದೆ ದೊಡ್ಡ ದೊಡ್ಡ ಕನಸಿದೆ. ಚಿತ್ರರಂಗದಲ್ಲಿ ಹೆಸರು ಮಾಡಿದ ನಂತರ ಆ ಬಗ್ಗೆ ಯೋಚನೆ ಮಾಡಿ ಮಾತನಾಡುತ್ತೇನೆ ಎಂದು ಹೇಳಿದರು.

    ಕನ್ನಡದಲ್ಲಿ ನಟಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಒಳ್ಳೆಯ ಡೈರೆಕ್ಟರ್ ಮತ್ತು ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ಸ್ಯಾಂಡಲ್‍ವುಡ್‍ನಲ್ಲಿಯೂ ನಟಿಸೋಕೆ ರೆಡಿ ಎಂದರು. ಟಾಲಿವುಡ್ ಚಿತ್ರದಲ್ಲಿ ಬ್ಯುಸಿ ಇರುವ ಪೂಜಾ ಹೆಗ್ಡೆ, ಒಂದು ದಿನದ ಮಟ್ಟಿಗೆ ಉಡುಪಿಗೆ ಆಗಮಿಸಿದ್ದರು.

    ಸಾರ್ವಜನಿಕ ಗಣೇಶೋತ್ಸವ ಹಾಗೂ ಸಂಬಂಧಿಕರ ಮನೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪೂಜಾ ಫುಲ್ ಖುಷಿಯಾಗಿದ್ದರು. ಕಾಪು ಮಾರಿಯಮ್ಮ ದೇವಸ್ಥಾನ ಸಮೀಪದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ಕಾಪುವಿನಲ್ಲಿದ್ದ ವೇಷಗಳೆಲ್ಲಾ ನಟಿ ಪೂಜಾ ಹೆಗ್ಡೆ ಅವರಿಗೆ ಮುತ್ತಿಗೆ ಹಾಕಿದವು. ಹಬ್ಬದ ಖುಷಿಗೆ ಹಣ ಕೊಡಲು ಬೇಡಿಕೆಯಿಟ್ಟರು. ನಟಿ ಪೂಜಾ ತಂದೆಯ ಪರ್ಸಿಂದ ಬಂದ ಎಲ್ಲಾ ವೇಷಧಾರಿಗಳಿಗೆ ಹಣ ಕೊಟ್ಟರು.