Tag: kappatagudda

  • ಕಪ್ಪತ್ತಗುಡ್ಡದಲ್ಲಿ ಮತ್ತೆ ಪ್ರತ್ಯಕ್ಷವಾದ ಚಿರತೆ

    ಕಪ್ಪತ್ತಗುಡ್ಡದಲ್ಲಿ ಮತ್ತೆ ಪ್ರತ್ಯಕ್ಷವಾದ ಚಿರತೆ

    ಗದಗ: ಎದುರಿಗೆ ಬಂದ ಚಿರತೆಯನ್ನು (Leopard) ಕಂಡು ವಾಹನ ಸವಾರರು ಆತಂಕಕ್ಕೆ ಒಳಗಾದ ಘಟನೆ ಗದಗ (Gadag) ಜಿಲ್ಲೆಯಲ್ಲಿ ನಡೆದಿದೆ.

    ಗದಗ ಜಿಲ್ಲೆಯ ಮುಂಡರಗಿ (Mundaragi) ತಾಲೂಕಿನ ಡೋಣಿ ಗ್ರಾಮದ ಬಳಿಯ ಕಪ್ಪತ್ತಗುಡ್ಡದಲ್ಲಿ (Kappatagudda) ಚಿರತೆಯೊಂದು ಪ್ರತ್ಯಕ್ಷವಾಗಿದೆ. ಕಪ್ಪತ್ತಗುಡ್ಡದ ಗಾಳಿಗುಂಡಿ ಬಸವಣ್ಣ ದೇವಸ್ಥಾನದ ಬಳಿ ಸ್ಕಾರ್ಪಿಯೋ ವಾಹನದಲ್ಲಿ ಹೋಗುತ್ತಿದ್ದ ಸಂದರ್ಭ ಚಿರತೆ ಕಂಡುಬಂದಿದೆ. ರಸ್ತೆಮಧ್ಯ ಚಿರತೆ ಅಲ್ಲಾಡದಂತೆ ಗಾಂಭೀರ್ಯವಾಗಿ ನಿಂತುಕೊಂಡಿದ್ದರಿಂದ ಒಂದು ಕ್ಷಣ ವಾಹನ ಸವಾರರು ಭಯಭೀತರಾಗಿದ್ದಾರೆ. ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದೆ. ಇದನ್ನೂ ಓದಿ: ಯುಗಾದಿ ಹಬ್ಬದಂದು ಮತ್ತೆ ಮುನ್ನೆಲೆಗೆ ಬಂತು ಹಲಾಲ್ ಬಾಯ್ಕಾಟ್ ಅಭಿಯಾನ  

    ಘಟನೆಯಿಂದ ಕಪ್ಪತ್ತಗುಡ್ಡ ಸೆರಗಿನ ಗ್ರಾಮಗಳಲ್ಲಿ ಆತಂಕ ಹೆಚ್ಚಿದೆ. ಕಪ್ಪತ್ತಗುಡ್ಡಕ್ಕೆ ಬರುವ ಜನರಿಗೆ ಚಿರತೆ ನೋಡಿದ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ (Forest Department) ಸ್ಥಳೀಯರು ಆಗ್ರಹಿಸಿದ್ದಾರೆ. ಈ ಹಿಂದೆಯೂ ಕಪ್ಪತ್ತ ಮಲ್ಲೇಶ್ವರ ದೇವಸ್ಥಾನದ ಬಳಿ, ಕಡಕೋಳ ಭಾಗ ಹಾಗೂ ಮೈನಿಂಗ್ ಪ್ರದೇಶಲ್ಲಿ ಚಿರತೆ ಸೆರೆಹಿಡಿಯಲಾಗಿದೆ. ಗಾಳಿಗುಂಡಿ ಬಸವಣ್ಣ ಬಳಿ ಪ್ರತ್ಯಕ್ಷವಾದ ಚಿರತೆ ವೀಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಒಂಟಿ ಮನೆಗೆ ನುಗ್ಗಿ ಡಕಾಯಿತಿ ಮಾಡಿದ್ದ ರೌಡಿ ಗ್ಯಾಂಗ್ ಅರೆಸ್ಟ್

  • ಔಷಧಿಯ ಸಸ್ಯಕಾಶಿ ಕಪ್ಪತ್ತಗುಡ್ಡಕ್ಕೆ ಬೆಂಕಿ – ಸತತ 2 ಗಂಟೆ ಹೊತ್ತಿ ಉರಿದ ಕಾಡು

    ಔಷಧಿಯ ಸಸ್ಯಕಾಶಿ ಕಪ್ಪತ್ತಗುಡ್ಡಕ್ಕೆ ಬೆಂಕಿ – ಸತತ 2 ಗಂಟೆ ಹೊತ್ತಿ ಉರಿದ ಕಾಡು

    ಗದಗ: ಔಷಧಿಯ ಸಸ್ಯಕಾಶಿ, ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೆ ಹೆಸರಾದ ಕಪ್ಪತಗುಡ್ಡದಲ್ಲಿ (Kappatagudda Forest) ಬೆಂಕಿ (Fire) ಕಾಣಿಸಿಕೊಂಡಿದ್ದು, ಸತತ 2 ಗಂಟೆಗಳ ಕಾಲ ಅರಣ್ಯ ಹೊತ್ತಿ ಉರಿದಿದೆ.

    ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಬಳಿಯ ಗೆಜ್ಜಿ ಸಿದ್ಧೇಶ್ವರ ಮಠದ ಬಳಿ ಗುಡ್ಡಕ್ಕೆ ಬೆಂಕಿ (Forest Fire) ತಗುಲಿದೆ. ಇದರಿಂದ ಸುಮಾರು 30 ಹೆಕ್ಟರ್‌ಗೂ ಅಧಿಕ ಪ್ರದೇಶದ ಅರಣ್ಯ (Forest) ಬೆಂಕಿಗಾಹುತಿಯಾಗಿದೆ. ಇದನ್ನೂ ಓದಿ: ನಿಶ್ಚಿತಾರ್ಥದ ಸಂಭ್ರಮದಲ್ಲಿ `ಸತ್ಯ’ ಧಾರಾವಾಹಿ ಹೀರೋ ಸಾಗರ್-ಸಿರಿ

    ಕಪ್ಪತ್ತಗುಡ್ಡಕ್ಕೆ ಬೆಂಕಿಯ ಕೆನ್ನಾಲೆಗೆಯಿಂದ ಪ್ರತಿ ವರ್ಷ ಅರಣ್ಯ ನಾಶವಾಗಿ ಅಲ್ಲಿಯ ಪ್ರಾಣಿ, ಪಕ್ಷಿಗಳು, ಆಯುರ್ವೇದ ಔಷಧೀಯ ಸಸ್ಯಗಳು ಹಾನಿಯಾಗ್ತಿವೆ. ಬೆಂಕಿಯನ್ನು ತಡೆಯಲು ಅರಣ್ಯ ಇಲಾಖೆ ವಿಫಲವಾದಂತಿದೆ. ಬೆಂಕಿ ಕಾಣಿಸಿಕೊಂಡು 2 ಗಂಟೆಯಾದ್ರೂ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಆಗಮಿಸಿರಲಿಲ್ಲ. ಇದು ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ವೈಯಕ್ತಿಕ ಡೇಟಾ ಸಂರಕ್ಷಣೆ – ನಿಯಮ ಉಲ್ಲಂಘಿಸಿದ್ರೆ 500 ಕೋಟಿವರೆಗೂ ಬೀಳುತ್ತೆ ದಂಡ

    ಕುರಿಗಾಯಿಗಳು ತಮ್ಮ ಕುರಿ ಮೇಕೆಗಳೆಗೆ ಮೆಲ್ಭಾಗಕ್ಕೆ ಹೋಗಲು ದಾರಿಗಾಗಿ ಹಾಗೂ ಹೊಸ ಚಿಗುರುಗಾಗಿ ಬೆಂಕಿ ಹಚ್ತಾರೆ, ಕೆಲವೊಮ್ಮೆ ವಿಂಡ್ ಪ್ಯಾನ್ ಗಳ ವಿದ್ಯುತ್ ಸ್ಪರ್ಶದಿಂದ ಬೆಂಕಿ ತಗಲುತ್ತೆ. ಇಲ್ಲದಿದ್ರೆ ಉರುವಲು ಕಟ್ಟಿಗಾಗಿ ಕೆಲವು ಕಿಡಗೇಡಿಗಳು ಸಹ ಬೆಂಕಿ ಹಚ್ಚಿ ಗಿಡಮರಗಳು ಸುಟ್ಟ ನಂತರ ಕಟ್ಟಿಗೆ ಪಡೆದುಕೊಳ್ತಾರೆ. ಈ ಕಾರಣಗಳಿಂದ ಬೆಂಕಿ ಕಾಣಿಸಿಕೊಂಡಿರಬಹುದು ಅನ್ನೋ ಅನುಮಾನ ಮೂಡಿದೆ.

    ಸಾಕಷ್ಟು ಪ್ರಮಾಣದ ಆಯುರ್ವೇದ ಸಸ್ಯಗಳು ಅಗ್ನಿಯ ಜ್ವಾಲೆಗೆ ಹೊತ್ತಿ ಉರಿದಿದೆ. ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆರೋಪಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಪ್ಪತ್ತಗುಡ್ಡ ಆಸುಪಾಸಿನಲ್ಲೇ ಅಕ್ರಮ ಕಲ್ಲು ಗಣಿಗಾರಿಕೆ

    ಕಪ್ಪತ್ತಗುಡ್ಡ ಆಸುಪಾಸಿನಲ್ಲೇ ಅಕ್ರಮ ಕಲ್ಲು ಗಣಿಗಾರಿಕೆ

    -ಸರ್ಕಾರದ ಆದೇಶಕ್ಕೂ ಗಣಿಕುಳಗಳು ಡೋಂಟ್‍ಕೇರ್

    ಗದಗ: ಜಿಲ್ಲೆಯ ಕಪ್ಪತ್ತಗುಡ್ಡ ಅಕ್ಕಪಕ್ಕದಲ್ಲೇ ಸಾಕಷ್ಟು ಕಲ್ಲು ಗಣಿಗಾರಿಕೆ ಕ್ವಾರಿಗಳು ತಲೆ ಎತ್ತಿವೆ. ಕಪ್ಪತ್ತಗುಡ್ಡ ವನ್ಯಜೀವಿ ಧಾಮ ಆದ್ರೂ, ಈ ಪ್ರದೇಶದಲ್ಲಿ ಸಕ್ರಮದ ಹೆಸರಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಕಪ್ಪತ್ತಗುಡ್ಡ ವನ್ಯಜೀವಿ ಧಾಮದ 1 ಕಿಲೋ ಮೀಟರ್ ವ್ಯಾಪ್ತಿ 14 ಕಲ್ಲುಗಣಿಗಾರಿಕೆ ಕ್ವಾರಿಗಳನ್ನ ತಕ್ಷಣ ಸ್ಥಗಿತ ಮಾಡುವಂತೆ ಸರ್ಕಾರ ನೋಟಿಸ್ ನೀಡಿದೆ. ಆದರೆ ಇಲ್ಲಿರುವ ಘಟಕಗಳು ಪ್ರಭಾವಿಗಳದ್ದು ಎಂದು ತಿಳಿದು ಬಂದಿದೆ. ಹಾಗಾಗಿ ಜಿಲ್ಲಾಡಳಿತದ ಮೇಲೆ ಒತ್ತಡ ಹಾಕಿ ಎಗ್ಗಿಲದೇ ಗಣಿಗಾರಿಕೆ ನಡೆಸುತ್ತಿದ್ದಾರೆ. ಹಗಲು ರಾತ್ರಿ ಅನ್ನದೇ ಬ್ಲಾಸ್ಟಿಂಗ್ ಮಾಡ್ತಿದ್ದಾರೆ.

    ಕಪ್ಪತ್ತಗುಡ್ಡ ವ್ಯಾಪ್ತಿಯ ಎಲ್ಲಾ ಗಣಿ ಘಟಕಗಳಿಗೆ ಜಿಲ್ಲಾಡಳಿತ ನೋಟಿಸ್ ನೀಡಿದೆ. ಇದನ್ನ ನೋಡಿದ ಗಣಿಕುಳಗಳು ಹೌಹಾರಿದ್ದಾರೆ. ಗಣಿ ಇಲಾಖೆಯಿಂದ ಅನುಮತಿ ಪಡೆದ ಕಲ್ಲು ಗಣಿಗಾರಿಕೆ ಕ್ವಾರಿಗಳಿಗೆನೇ ಇದೀಗ ಕಂಟಕ ಎದುರಾಗಿದೆ. ಕ್ವಾರಿಗಳನ್ನು ಉಳಿಸಿಕೊಳ್ಳಲು ಪ್ರಭಾವಿಗಳು ಭಾರೀ ಲಾಬಿ ನಡೆಸಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ. ಈ ಬಗ್ಗೆ ಅಧಿಕಾರಿಗಳನ್ನ ಕೇಳಿದರೆ 15 ದಿನ ಗಡವು ನೀಡಿದ್ದೆವೆ ಎಂದು ಹೇಳುತ್ತಾರೆ.

    ಸರ್ಕಾರದಿಂದ ಪರವಾನಿಗೆ ಪಡೆದ ಕ್ವಾರಿಗಳು ಇದ್ದರೂ ಕೂಡಾ ಕಾನೂನು ಮೀರಿ ಬ್ಲಾಸ್ಟಿಂಗ್ ಮಾಡಿ ಲೂಟಿ ಮಾಡುತ್ತಿರುವ ಆರೋಪಗಳು ಸಹ ಇವೆ.. ಅದೇನೆ ಇರಲಿ ಎಷ್ಟೇ ಒತ್ತಡ ಹಾಕಿದ್ರು ಯಾವುದಕ್ಕೂ ಮಣಿಯದೆ ಕಪ್ಪತ್ತಗುಡ್ಡ, ಪರಿಸರ ಉಳಿಸಿ ಬೆಳಸಬೇಕು ಎಂಬುದು ಇಲ್ಲಿನ ಜನರ ಆಶಯ.

  • ಔಷಧೀಯ ಸಸ್ಯಕಾಶಿ ಮತ್ತೆ ಬೆಂಕಿಗಾಹುತಿ

    ಔಷಧೀಯ ಸಸ್ಯಕಾಶಿ ಮತ್ತೆ ಬೆಂಕಿಗಾಹುತಿ

    ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ, ಔಷಧೀಯ ಸಸ್ಯಕಾಶಿ ಎಂದೆ ಖ್ಯಾತಿಯಾದ ಗದಗ ಜಿಲ್ಲೆ ಕಪ್ಪತ್ತಗುಡ್ಡ ಮತ್ತೆ ಬೆಂಕಿಗಾಹುತಿಯಾಗಿದೆ.

    ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಕಪ್ಪತ್ತ ಮಲ್ಲಯ್ಯನ ದೇವಸ್ಥಾನದ ಬಳಿಯ ಕೆಪಿಟಿಸಿಎಲ್ ವಿಂಡ್ ಪ್ಯಾನ್ ಬಳಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಅಪಾರ ಪ್ರಮಾಣದ ಔಷಧೀಯ ಸಸ್ಯಗಳು ಸಂಪತ್ತು ಸೇರಿದಂತೆ ಪ್ರಾಣಿ ಪಕ್ಷಿಗಳು ಬೆಂಕಿಗೆ ಆಹುತಿಯಾಗಿದೆ.

    ಕಪ್ಪತ್ತಗುಡ್ಡದಲ್ಲಿ ಶುಕ್ರವಾರ ಮಧ್ಯರಾತ್ರಿ ವೇಳೆಗೆ ಬೆಂಕಿ ಕಾಣಿಸಿಕೊಂಡಿತ್ತು. ಇದು ವಿಂಡ್ ಫ್ಯಾನ್ ಶಾರ್ಟ್ ಸರ್ಕ್ಯೂಟ್‍ನಿಂದ ಆಗಿದೆಯಾ? ಅಥವಾ ಕಿಡಿಗೇಡಿಗಳ ಕೃತ್ಯನಾ? ಎಂಬುದು ತಿಳಿದು ಬಂದಿಲ್ಲ. ಬೇಸಿಗೆ ಸಂದರ್ಭದಲ್ಲಿ ಪ್ರತಿ ವರ್ಷವೂ ಈ ಭಾಗದಲ್ಲಿ ಬೆಂಕಿ ಹತ್ತಿಕೊಳ್ಳುತ್ತಿದ್ದು, ಇದುವರೆಗೂ ಬೆಂಕಿ ಹೇಗೆ ಹೊತ್ತಿಕೊಳ್ಳುತ್ತದೆ ಎನ್ನುವ ನಿಖರವಾದ ಕಾರಣ ತಿಳಿದು ಬರುತ್ತಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸುವ ಕಾರ್ಯ ನಡೆಸಿದರೂ ಕೆಲಕಾಲ ಬೆಂಕಿ ಹತೋಟಿಗೆ ತರಲು ಹರಸಾಹಸ ಪಡಬೇಕಾಯಿತು.

  • ಗದಗ್‍ನಲ್ಲಿ 3ನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ: ಇಬ್ಬರು ಅಸ್ವಸ್ಥ

    ಗದಗ್‍ನಲ್ಲಿ 3ನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ: ಇಬ್ಬರು ಅಸ್ವಸ್ಥ

    ಗದಗ: ಕಪ್ಪತ್ತಗುಡ್ಡ ಸಂರಕ್ಷಿತ ಅರಣ್ಯ ಪ್ರದೇಶ ಘೋಷಣೆಗಾಗಿ ಆಗ್ರಹಿಸಿ ಗದಗನಲ್ಲಿ ಅಹೋರಾತ್ರಿ ಉಪವಾಸ ಸತ್ಯಾಗ್ರಹ 3 ನೇ ದಿನವಾದ ಇಂದು ಮುಂದುವರೆದಿದೆ. ಇಂದು ನಡೆಯುವ ಹೋರಾಟವನ್ನ ಬಸವ ಯೋಗ ಸಮೀತಿಯ ಯೋಗ ಶಿಬಿರ ಮೂಲಕ ಆರಂಭವಾಗಿದೆ. ಇಂದು ಬೆಳಗಿನಜಾವ ಅಸ್ವಸ್ಥಗೊಂಡ ಒಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

    ಇಂದು ಬೆಳಗ್ಗಿನ ಜಾವ ನಡೆದ ಉಪವಾಸ ಸತ್ಯಾಗ್ರಹದ ವೇಳೆ ಜನಸಂಗ್ರಾಮದ ಮುಖಂಡರಾದ ಪ್ರಭುಗೌಡ ಮತ್ತು ಪ್ರತಿಮಾ ನಾಯಕ್ ಎಂಬವರ ಶುಗರ್ ಲೆವಲ್ ಕಡಿಮೆ ಆಗಿ ಅಸ್ವಸ್ಥಗೊಂಡಿದ್ದು, ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರತಿಮಾ ನಾಯಕ್ ಮಾತ್ರ ಕೇವಲ ನೀರು ಕುಡಿಯುವ ಮೂಲಕ ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ. ಪ್ರತಿಭಟನ ನಿರರತ ಸ್ಥಳದಲ್ಲಿ ಅಂಬುಲೆನ್ಸ್, ವೈದ್ಯರು ಹಾಗೂ ಪೊಲೀಸ್ ಸಿಬ್ಬಂದಿಗಳು ಠಿಕಾಣಿ ಹೂಡಿದ್ದಾರೆ.

    ವೈದ್ಯರು ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹೀರೆಮಠರನ್ನು ಚೆಕಪ್ ಮಾಡಲು ಹೋದಾಗ ನನ್ನ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿ ಚೆಕಪ್ ಬೇಡ ಎಂದು ಹೇಳಿದ್ದಾರೆ. ತೋಂಟದ ಸಿದ್ಧಲಿಂಗ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟಕ್ಕೆ ಇಂದು ಅನೇಕ ಸ್ವಾಮಿಜುಗಳು, ಹಿರಿಯ ಸಾಹಿತಿ ಪಾಟೀಲ್ ಪುಟ್ಟಪ್ಪನವರು, ಪರಿಸರ ಪ್ರೇಮಿಗಳು ಹಾಗೂ ಗದಗ ಜಿಲ್ಲಾ ವಕೀಲರ ಸಂಘದಿಂದ ಇಂದು ತಮ್ಮ ಕಾರ್ಯಕಲಾಪಗಳನ್ನ ಬಹಿಷ್ಕರಿಸಿ ಹೋರಾಟಕ್ಕೆ ಸಾಥ್ ನೀಡ್ತಿದ್ದಾರೆ.

    ಕಪ್ಪತ್ತಗುಡ್ಡ ಉಳಿಯುವಿಕೆಗೆ ಬೃಹತ್ ಪ್ರಮಾಣದಲ್ಲಿ ಇಷ್ಟೆಲ್ಲಾ ಹೋರಾಟ ನಡೆಯುತ್ತಿದ್ರೂ ಇತ್ತ ಮುಖ್ಯಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ ಪಾಟೀಲ್ ಈ ಬಗ್ಗೆ ಗಮನ ಹರಿಸದೇ ಇರುವುದು ವಿಪರ್ಯಾಸ.