Tag: Kapileshwar Temple

  • ಚಂದ್ರಯಾನ-3 ಯಶಸ್ಸಿಗೆ ಪ್ರಾರ್ಥಿಸಿ ಬೆಳಗಾವಿ ಕಪಿಲೇಶ್ವರ ಮಂದಿರದಲ್ಲಿ ಮಹಾರುಧ್ರಾಭಿಷೇಕ

    ಚಂದ್ರಯಾನ-3 ಯಶಸ್ಸಿಗೆ ಪ್ರಾರ್ಥಿಸಿ ಬೆಳಗಾವಿ ಕಪಿಲೇಶ್ವರ ಮಂದಿರದಲ್ಲಿ ಮಹಾರುಧ್ರಾಭಿಷೇಕ

    ಬೆಳಗಾವಿ: ಚಂದ್ರಯಾನ-2 (Chandrayaan-3) ಯಶಸ್ವಿಯಾಗಿ ಚಂದ್ರನ (Moon) ಅಂಗಳಕ್ಕೆ ಇಳಿಯುವಂತೆ ಪ್ರಾರ್ಥಿಸಿ ಬೆಳಗಾವಿಯ (Belagavi) ಕಪಿಲೇಶ್ವರ ಮಂದಿರದಲ್ಲಿ (Kapileshwar Temple) ಮಹಾರುಧ್ರಾಭಿಷೇಕ ಪೂಜೆ ನೆರವೇರಿಸಿದರು.

    ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿರುವ ಚಂದ್ರಯಾನ-2 ಚಂದ್ರನ ಕಕ್ಷೆಗೆ ಇಳಿಯಲು ಕ್ಷಣಗಣನೆ ಶುರುವಾಗಿದೆ. ದೇಶಾದ್ಯಂತ ಇದು ಯಶಸ್ವಿಯಾಗಿ ಲ್ಯಾಂಡಿಂಗ್ ಆಗಲಿ ಎಂದು ದೇವಸ್ಥಾನಗಳಲ್ಲಿ ಪ್ರಾರ್ಥಿಸಲಾಗುತ್ತಿದೆ. ಹೀಗಾಗಿ ದಕ್ಷಿಣಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಕಪಿಲೇಶ್ವರ ಮಂದಿರದಲ್ಲಿ ಆಡಳಿತ ಮಂಡಳಿ ವತಿಯಿಂದ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಅಲ್ಲದೇ ಸಾರ್ವಜನಿಕರು ಕೂಡ ದೇವರಲ್ಲಿ ಪ್ರಾರ್ಥಿಸಿದ್ದು ವಿಶೇಷವಾಗಿತ್ತು.

    ಅರ್ಚಕ ನಾಗರಾಜ ಕಟ್ಟಿ ಪಬ್ಲಿಕ್ ಟಿವಿ ಜತೆಗೆ ಮಾತನಾಡಿ, 140 ಕೋಟಿ ಭಾರತೀಯರ ಬಯಕೆ ಈಡೇರಲಿ ಎಂದು ಕಪಿಲೇಶ್ವರ ದೇವರಿಗೆ ವಿಶೇಷ ಅಭಿಷೇಕ, ರುದ್ರಾಭಿಷೇಕ, ಶತರುದ್ರಾಭಿಷೇಕ, ಲಘುರುದ್ರಾಭಿಷೇಕ, ರುದ್ರಾಕ್ಷಿ, ಏಕಾದಶಿ ಪೂಜೆಗಳನ್ನು ಮಾಡಿದ್ದೇವೆ. ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಸ್ಪರ್ಶ ಮಾಡಲಿ. ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತಾಗಲಿ. ಇದರಲ್ಲಿ ನಮ್ಮ ಬೆಳಗಾವಿಯ ಇಬ್ಬರು ವಿಜ್ಞಾನಿಗಳು ಕೈ ಜೋಡಿಸಿರುವುದು ಹೆಮ್ಮೆಯ ಸಂಗತಿ ಎಂದರು. ಇದನ್ನೂ ಓದಿ: Chandrayaan-3: ಬಾಹ್ಯಾಕಾಶ ಯೋಜನೆಗಳಿಗೆ ನೂರಾರು ಕೋಟಿ ವ್ಯಯ – ಭಾರತಕ್ಕೇನು ಲಾಭ?

    ನಗರಸೇವಕ ಶಂಕರಗೌಡ ಪಾಟೀಲ್ ಮಾತನಾಡಿ, ಇದು ಕೇವಲ ವಿಜ್ಞಾನಿಗಳ ಸಾಧನೆ ಅಲ್ಲ, ಇಡೀ ದೇಶದ ಸಾಧನೆ. ಚಂದ್ರನ ಮೇಲೆ ಇಳಿಯುತ್ತಿರುವ 4ನೇ ಮತ್ತು ಸೌತ್ ಪೋಲ್‌ನಲ್ಲಿ ಇಳಿಯುತ್ತಿರುವ ಮೊದಲ ದೇಶ ಎನ್ನುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಸುರಕ್ಷಿತವಾಗಿ ವಿಕ್ರಮ ಇಳಿಯಲಿ ಎಂದು ಹಾರೈಸಿದರು. ಇದನ್ನೂ ಓದಿ: ಪಾಕಿಸ್ತಾನ ಮಾಧ್ಯಮಗಳು ಚಂದ್ರಯಾನ-3 ಲ್ಯಾಂಡಿಂಗ್‌ ಕಾರ್ಯಕ್ರಮ ಪ್ರಸಾರ ಮಾಡಲಿ: ಪಾಕ್‌ ಮಾಜಿ ಸಚಿವ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಪಿಲೇಶ್ವರ ಮಂದಿರ ಕೆಡವಿ ಏನು ಕಟ್ಟಿದ್ದಾರೆ ಎಂಬ ಬಗ್ಗೆಯೂ ಸರ್ವೇ ಆಗಲಿ: ಲತೀಫ್‍ಖಾನ್ ಹೊಸ ಬಾಂಬ್

    ಕಪಿಲೇಶ್ವರ ಮಂದಿರ ಕೆಡವಿ ಏನು ಕಟ್ಟಿದ್ದಾರೆ ಎಂಬ ಬಗ್ಗೆಯೂ ಸರ್ವೇ ಆಗಲಿ: ಲತೀಫ್‍ಖಾನ್ ಹೊಸ ಬಾಂಬ್

    ಬೆಳಗಾವಿ: ದಕ್ಷಿಣ ಕಾಶಿ ಎಂದು ನಮ್ಮ ಬೆಳಗಾವಿಯ ಕಪಿಲೇಶ್ವರ ಮಂದಿರಕ್ಕೆ ಪ್ರತೀತಿ ಇದೆ. ಅಷ್ಟು ದೊಡ್ಡ ದೇವಾಲಯ ಒಂದು ಸಣ್ಣ ದೇವಾಲಯವಾಗಿ ಉಳಿಯಲು ಕಾರಣವೇನು? ಆ ದೇವಸ್ಥಾನ ಕೆಡವಿ ಏನು ಕಟ್ಟಿದರು ಎಂದು ಎಂಐಎಂ ಪಕ್ಷದ ಮುಖಂಡ ಲತೀಫ್‍ಖಾನ್ ಪಠಾಣ ಹೊಸ ಬಾಂಬ್ ಸಿಡಿಸಿದರು.

    ಮಾಧ್ಯಮಗಳ ಜೊತೆಗೆ ಮಾತನಾಡಿದ ಲತೀಫ್‍ಖಾನ್ ಪಠಾಣ ಅವರು, ಈಗಾಗಲೇ ಸಾಕಷ್ಟು ಬಾರಿ ನಾನು ಹೇಳಿದ್ದೇನೆ. 25-30 ವರ್ಷಕ್ಕಿಂತ ಮೊದಲು ಆರ್‌ಎಸ್‍ಎಸ್‍ನವರು ಇಡೀ ಭಾರತದಲ್ಲಿ ಈ ರೀತಿ ಸೂಕ್ಷ್ಮ ಪ್ರದೇಶಗಳ ಬಗ್ಗೆ ಬಹಳಷ್ಟು ಅಧ್ಯಯನ ಮಾಡಿದ್ದಾರೆ. ಯಾವ ಸಂದರ್ಭದಲ್ಲಿ ಯಾವ ವಿಷಯವನ್ನು ಮುನ್ನೆಲೆಗೆ ತರಬೇಕು. ಜನರ ದಾರಿ ತಪ್ಪಿಸಬೇಕು ಎಂಬುದು ಅವರ ಹಿಡನ್ ಅಜೆಂಡಾ ಆಗಿದೆ. ಆ ಪ್ರಕಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಸೆ.15ವರೆಗೆ ಪದ್ಮ ಪ್ರಶಸ್ತಿ ನಾಮನಿರ್ದೇಶನ ಮಾಡಿ 

    ಹಿರಿಯರು ಹೇಳಿದ್ದನ್ನು ಕೇಳಿದ್ದೇನೆ ಎಂದು ಅಭಯ್ ಪಾಟೀಲ್ ಹೇಳುತ್ತಾರೆ. ನಾನು ಕೂಡ ಹಿರಿಯರು ಹೇಳಿದಂತೆ ಹೇಳುತ್ತಿದ್ದೇನೆ. ದಕ್ಷಿಣ ಕಾಶಿ ಎಂದು ಕರೆಯುವ ಕಪಿಲೇಶ್ವರ ಮಂದಿರ ಎಂಬ ಮಾತಿದೆ. ಅಷ್ಟು ದೊಡ್ಡ ದೇವಾಲಯ ಒಂದು ಸಣ್ಣ ದೇವಾಲಯವಾಗಿ ಉಳಿಯಲು ಕಾರಣ ಏನು? ಆ ದೇವಸ್ಥಾನ ಕೆಡವಿ ಏನು ಕಟ್ಟಿದರು ಎಂದು ಪ್ರಶ್ನಿಸಿದರು.

    1,300 ವರ್ಷಗಳ ಹಿಂದಿನ ಬೆಳಗಾವಿಯ ಕೋಟೆಯನ್ನು ಒಮ್ಮೆ ಸರ್ವೇ ಮಾಡಿಸಬೇಕು. ಯಾವ ಸಮುದಾಯದವರು ಅದನ್ನು ಕೆಡವಿದ್ದಾರೆ ಎನ್ನುವುದನ್ನು ಸರ್ವೇ ಮಾಡಬೇಕು. ದಕ್ಷಿಣ ಕಾಶಿ ಎಂದು ಕರೆಯುವ ಕಪಿಲೇಶ್ವರ ಮಂದಿರ ಕೆಡವಿ ಕೋಟೆ ಕೊಟ್ಟಿದ್ದಾರೆ. ಸಾಕಷ್ಟು ರಾಜ ಮನೆತನಗಳು ಈ ಭಾಗವನ್ನು ಆಳಿದ್ದಾರೆ. ಅದನ್ನು ಯಾರು ಕೆಡವಿದರು ಎಂಬುದು ತನಿಖೆ ಆಗಲಿ ಎಂದು ಆಗ್ರಹಿಸಿದರು.

    Kapileshwar Temple Belgaum,Places To Visit In Kapileshwar Temple,Things To Do in Kapileshwar Temple

    ಕೊರೊನಾ ಸಂದರ್ಭದಲ್ಲಿ ಔಷಧಿ, ಆಕ್ಸಿಜನ್ ಪೂರೈಕೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ. ದೇಶದಲ್ಲಿ ಸಾಕಷ್ಟು ನಿರುದ್ಯೋಗ ಸಮಸ್ಯೆಯಿದೆ. 2023-24 ಚುನಾವಣೆಯಲ್ಲಿ ಜನರಿಗೆ ಏನು ಹೇಳಬೇಕು ಎಂಬುದು ಬಗ್ಗೆ ಅವರಿಗೆ ತಿಳಿದಿಲ್ಲ. ಹೀಗಾಗಿ ಜಾತಿ ಗದ್ದಲ ಎಬ್ಬಿಸಿದ್ರೆ ನಾವು ಇದರಿಂದ ಉಳಿದುಕೊಳ್ಳಬಹುದು ಎಂದು ತಿಳಿದುಕೊಂಡಿದ್ದಾರೆ ಎಂದು ಕಿಡಿಕಾರಿದರು.

    91ರ ಕಾನೂನು ಪ್ರಕಾರ ಹಳೆಯ ಆರಾಧನಾ ಕಟ್ಟಡಗಳು ಯಥಾಸ್ಥಿತಿಯಲ್ಲಿ ಇರಬೇಕು ಎಂಬ ಕಾನೂನು ಇದೆ. ಆದರೆ ಇದೆಲ್ಲ ಇದ್ದರೂ ಕೂಡ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ. ಸರ್ವೋಚ್ಛ ನ್ಯಾಯಾಲಯ ಯಾವ ರೀತಿ ನಿರ್ಣಯ ಕೊಡುತ್ತೋ ಅದಕ್ಕೆ ನಾವು ಬದ್ಧ. ಅದೇ ರೀತಿ ಅಯೋಧ್ಯೆ ತೀರ್ಪನ್ನು ಯಾವುದೇ ಗಲಭೆ ಇಲ್ಲದೇ ನಾವು ಒಪ್ಪಿಕೊಂಡಿದ್ದೇವೆ. ಇಷ್ಟಕ್ಕೆ ನಾವು ಸುಮ್ಮನಿದ್ದೇವೆ ಎಂದು ತಿಳಿದುಕೊಂಡು ಅದನ್ನೇ ಮುಂದುವರಿಸುತ್ತಿದ್ದಾರೆ ಎಂದು ಎಚ್ಚರಿಕೆ ಕೊಟ್ಟರು.

    ಈ ದೇಶವನ್ನು ಹಿಂದೂ ರಾಷ್ಟ್ರ ಮಾಡುತ್ತೇವೆ ಎನ್ನುವುದು ಸಂವಿಧಾನ ವಿರೋಧವೇ?ಇದು ಕೊರೊನಾಗಿಂತ ದೊಡ್ಡ ಭಯಾನಕ ರೋಗವಾಗಿದೆ. ಕೊರೊನಾ ರೋಗಕ್ಕೆ ಜಗತ್ತಿನ ಎಲ್ಲ ವೈದ್ಯರು ಬೆನ್ನು ಹತ್ತಿ ಔಷಧಿ ಕಂಡುಹಿಡಿದರು. ಆದರೆ, ಈ ರೋಗಕ್ಕೆ ಔಷಧಿ ಕಂಡುಹಿಡಿಯುವವರು ಮಾನಸಿಕ ರೋಗಿಗಳಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

    3 ಸಾವಿರ ವರ್ಷಗಳ ಹಿಂದೆ ನೋಡಿದ್ರೆ ಬೇರೆ-ಬೇರೆ ಧರ್ಮಗಳು, ಇನ್ನೊಂದು ಧರ್ಮಗಳ ಮೇಲೆ ದಾಳಿ ಮಾಡಿ ತಮ್ಮ ಧರ್ಮಗಳನ್ನು ಪ್ರಚಾರ ಮಾಡಿದ್ದಾರೆ. ಈಗ 700-800 ವರ್ಷಗಳ ಹಳೆಯ ವಿಚಾರಗಳನ್ನು ಎತ್ತಿಕೊಂಡು ಈಗಿನ ವಾತಾವರಣ ಹದಗೆಡಿಸುವ ಕೆಲಸ ಮಾಡಲಾಗುತ್ತಿದೆ. ಇದು ಯಾರಿಗೂ ಹಿತಕರ ಬೆಳವಣಿಗೆ ಅಲ್ಲ ಎಂದು ಎಚ್ಚರಿಸಿದರು. ಇದನ್ನೂ ಓದಿ: ಮೊದಲ ಪ್ರಯತ್ನದಲ್ಲಿ UPSC ಪರೀಕ್ಷೆಯಲ್ಲಿ ಉತ್ತೀರ್ಣ

    ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಬೆಳಗಾವಿ ಒಂದು ಕೇಂದ್ರ ಸ್ಥಳವಾಗಿದೆ. ಆದರೂ ಇಲ್ಲಿ ಯಾವ ವ್ಯಾಪಾರಿಗಳು ಇಲ್ಲಿ ಹೂಡಿಕೆ ಮಾಡಲು ಬರುತ್ತಿಲ್ಲ. ಇಂತಹ ವಿವಾದಗಳನ್ನು ಸೃಷ್ಟಿ ಮಾಡಿ ತಮ್ಮದೇಯಾದ ರಾಜಕೀಯ ಮಾಡುತ್ತಿದ್ದಾರೆ. ಇದು ರಾಜಕೀಯಕ್ಕೆ ಸಿಮೀತವಾಗಿದೆ. ಜನರ ಮನಸ್ಸಿನಲ್ಲಿ ಇದು ಯಾವುದೂ ಇಲ್ಲ. ಇದನ್ನು ಬಿಟ್ಟು 2023-24ರ ಚುನಾವಣೆ ಗೆಲ್ಲಲು ಇವರಿಗೆ ಸಾಧ್ಯವಿಲ್ಲ ಎಂದು ಆರೋಪಿಸಿದರು.