Tag: Kapila River

  • ಕಬಿನಿಯಿಂದ ನೀರು ಬಿಡುಗಡೆ – ಕಪಿಲಾ ನದಿ ಉಕ್ಕಿ ಭತ್ತದ ಬೆಳೆ ಮುಳುಗಡೆ

    ಕಬಿನಿಯಿಂದ ನೀರು ಬಿಡುಗಡೆ – ಕಪಿಲಾ ನದಿ ಉಕ್ಕಿ ಭತ್ತದ ಬೆಳೆ ಮುಳುಗಡೆ

    ಮೈಸೂರು: ಕಬಿನಿ ಜಲಾಶಯದ (Kabini Dam) ಒಳ ಹರಿವು ಹೆಚ್ಚಾದ ಹಿನ್ನೆಲೆ ಭಾರೀ ಪ್ರಮಾಣದ ನೀರನ್ನು ನದಿಗೆ ಹರಿಸುತ್ತಿರುವ ಪರಿಣಾಮ ಕಪಿಲಾ ನದಿ (Kapila River) ಉಕ್ಕಿ ಭತ್ತದ ಬೆಳೆ (Paddy Crop) ಸಂಪೂರ್ಣ ಮುಳುಗಡೆಯಾಗಿದೆ.

    ಕೇರಳದ ವಯನಾಡಿನಲ್ಲಿ ಮಳೆಯ ಅಬ್ಬರ ಹೆಚ್ಚಾದ ಪರಿಣಾಮ ಮೈಸೂರು (Mysuru) ಜಿಲ್ಲೆಯ ಹೆಚ್‌ಡಿ ಕೋಟೆಯ ಬೀಚನಹಳ್ಳಿಯಲ್ಲಿನ ಕಬಿನಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ. ಹೀಗಾಗಿ ಜಲಾಶಯದಿಂದ ಭಾರೀ ಪ್ರಮಾಣದ ನೀರು ನದಿಗೆ ಹರಿಸಲಾಗುತ್ತಿದ್ದು, ಕಪಿಲಾ ನದಿ ಉಕ್ಕಿ ಭತ್ತದ ಬೆಳೆ ನಾಶವಾಗಿದೆ. ನಂಜನಗೂಡು ತಾಲೂಕು ಹುಲ್ಲಳ್ಳಿ ಹಾಗೂ ರಾಂಪುರ ನಾಲೆಗಳಲ್ಲಿ ಹೆಚ್ಚಿದ ನೀರಿನಿಂದ ಭತ್ತದ ಬೆಳೆ ನದಿ ನೀರಿನಲ್ಲಿ ಮುಳುಗಡೆ ಆಗಿದೆ. ಇದನ್ನೂ ಓದಿ: ಇಂದು ಸುರ್ಜೇವಾಲ ಜೊತೆ ಒನ್ ಟು ಒನ್ ಮೀಟಿಂಗ್‌ – 8 ಶಾಸಕರಿಗೆ ಬುಲಾವ್‌

    ಬೊಕ್ಕಹಳ್ಳಿ ಹದಿನಾರು ಮೂಡಹಳ್ಳಿ, ಅಲತ್ತೂರು, ನಗರ್ಲೆ, ಕುಪ್ಪರವಳ್ಳಿ, ಹೊಸಕೋಟೆ, ಸುತ್ತೂರು, ಬೀಳುಗಲಿ, ತಾಯೂರು, ಹಾರೋಪುರ ಗ್ರಾಮಗಳಲ್ಲಿ ಬೆಳೆ ನಾಶ ಉಂಟಾಗಿದೆ. ರೈತರು ಬೆಳೆದ ನೂರಾರು ಎಕರೆ ಭತ್ತದ ಫಸಲು ನಾಶವಾಗಿದೆ. ಇದನ್ನೂ ಓದಿ: ಮೊದಲ ಬಾರಿಗೆ ಜೂನ್ ತಿಂಗಳಲ್ಲಿ KRS ಭರ್ತಿ – ಇಂದು ಬಾಗಿನ ಅರ್ಪಿಸಿ ಹೊಸ ದಾಖಲೆ ಬರೆಯಲಿದ್ದಾರೆ ಸಿಎಂ

  • ಮೈದುಂಬಿ ಹರಿಯುತ್ತಿದ್ದಾಳೆ ಕಪಿಲಾ – ಮುಳುಗಡೆಯ ಭೀತಿಯಲ್ಲಿ ನಂಜನಗೂಡಿನ ಸ್ನಾನ ಘಟ್ಟ

    ಮೈದುಂಬಿ ಹರಿಯುತ್ತಿದ್ದಾಳೆ ಕಪಿಲಾ – ಮುಳುಗಡೆಯ ಭೀತಿಯಲ್ಲಿ ನಂಜನಗೂಡಿನ ಸ್ನಾನ ಘಟ್ಟ

    ಮೈಸೂರು: ಕೇರಳದ (Kerala) ವಯನಾಡಿನಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮೈಸೂರಿನ ಕಪಿಲಾ ನದಿ (Kapila River) ಮೈದುಂಬಿ ಹರಿಯುತ್ತಿದೆ.

    ಮಳೆಯ ಪರಿಣಾಮ ಹೆಚ್.ಡಿ ಕೋಟೆಯ (HD Kote) ಕಬಿನಿ ಜಲಾಶಯ ಬಹುಬೇಗ ಭರ್ತಿಯಾಗಿದೆ. ಜಲಾಶಯದ ಭದ್ರತಾ ದೃಷ್ಟಿಯಿಂದ ಹೊರಹರಿವು ಹೆಚ್ಚಿಸಲಾಗುತ್ತಿದ್ದು, ಪರಿಣಾಮ ಕಪಿಲಾ ನದಿ ಮೈದುಂಬಿ ಹರಿಯುತ್ತಿದೆ.ಇದನ್ನೂ ಓದಿ: ನೀನು ಚಪ್ಪಲಿ ಹೊಲಿಯಲು ಯೋಗ್ಯ: ನಿಂದಿಸಿದ್ದ ಮೂವರು ಇಂಡಿಗೋ ಅಧಿಕಾರಿಗಳ ವಿರುದ್ಧ ಅಟ್ರಾಸಿಟಿ ಕೇಸ್‌

    ಈಗಾಗಲೇ ನಂಜನಗೂಡಿನ ಶ್ರೀನಂಜುಂಡೇಶ್ವರಸ್ವಾಮಿಯ ಸ್ನಾನ ಘಟ್ಟದಲ್ಲಿನ 16 ಕಾಲು ಮಂಟಪಗಳು ಮುಳುಗಡೆಯ ಹಂತಕ್ಕೆ ಬಂದಿವೆ. ಸ್ನಾನಘಟ್ಟದ ಮೆಟ್ಟಿಲುಗಳು ಬಹುತೇಕ ಮುಳುಗಡೆಯಾಗಿವೆ. ಹೀಗಾಗಿ ಧ್ವನಿವರ್ಧಕದ ಮೂಲಕ ನದಿ ಹತ್ತಿರ ಹೋಗದಂತೆ ಜನರಿಗೆ ಎಚ್ಚರಿಕೆ ಸಂದೇಶ ನೀಡಲಾಗುತ್ತಿದೆ.

    ಕಪಿಲಾ ನದಿ ನೋಡಲು ಭಕ್ತಾದಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ನದಿ ಹತ್ತಿರ ಸುಳಿಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.ಇದನ್ನೂ ಓದಿ: ಯಶ್‌ಗೆ ಹಾಲಿವುಡ್‌ನ ಆಸ್ಕರ್ ವಿಜೇತ ಪ್ರೊಡ್ಯೂಸರ್ ಬಲ!

  • ಇಂದಿನಿಂದ ಮೈಸೂರು-ಊಟಿ ಸಂಚಾರ ಮುಕ್ತ

    ಇಂದಿನಿಂದ ಮೈಸೂರು-ಊಟಿ ಸಂಚಾರ ಮುಕ್ತ

    ಮೈಸೂರು: ಕಪಿಲಾ ನದಿಯಲ್ಲಿ ನೀರಿನ ಪ್ರಮಾಣ ತಗ್ಗಿದ ಹಿನ್ನೆಲೆಯಲ್ಲಿ ಇಂದಿನಿಂದ ಮೈಸೂರು-ಊಟಿ ಸಂಚಾರ ಮುಕ್ತವಾಗಿದೆ.

    ನಂಜನಗೂಡಿನಲ್ಲಿ ಕಪಿಲಾ ಅಬ್ಬರ ಕಡಿಮೆಯಾಗಿದ್ದು, ಬ್ಯಾರಿಕೇಡ್‍ಗಳನ್ನ ತೆಗೆದು ಹಾಕುವ ಮೂಲಕ ಪೊಲೀಸರು ಮೈಸೂರು-ಊಟಿ ಸಂಚಾರ ಮುಕ್ತ ಮಾಡಿದ್ದಾರೆ. ಕಪಿಲಾ ನದಿಯ ನೀರು ರಾಷ್ಟ್ರೀಯ ಹೆದ್ದಾರಿಯ ಮಲ್ಲನಮೂಲೆ ಮಠದ ಬಳಿ ರಸ್ತೆವರೆಗೂ ಹರಿದು ಬಂದಿತ್ತು. ಹೀಗಾಗಿ ಕಳೆದ ಮೂರು ದಿನಗಳಿಂದ ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು.

    ಶನಿವಾರ ಮೈಸೂರು-ಊಟಿ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿತ್ತು. ಇದರಿಂದ ಮೈಸೂರು ಊಟಿ ರಸ್ತೆಯಲ್ಲಿ ಸಂಚಾರಕ್ಕೆ ಬ್ರೇಕ್ ಬಿದ್ದಿತು. ಮೈಸೂರು-ಊಟಿ ರಸ್ತೆಯಲ್ಲಿದ್ದ ನೀರು ಖಾಲಿಯಾಗಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಭಾನುವಾರ ಕೂಡ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿತ್ತು.

    ಇದೀಗ ಕಬಿನಿ ಡ್ಯಾಂನಿಂದ ಕಡಿಮೆ ನೀರು ಬಿಟ್ಟ ಹಿನ್ನೆಲೆಯಲ್ಲಿ ಕಪಿಲಾ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಹೀಗಾಗಿ ಇಂದಿನಿಂದ ಮೈಸೂರು-ಊಟಿ ಸಂಚಾರ ಮುಕ್ತವಾಗಿದೆ. ಕಪಿಲೆಯ ಅಬ್ಬರ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ನಂಜನಗೂಡಿನ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಅಲ್ಲದೇ ನಂಜನಗೂಡಿನಲ್ಲಿ ಪ್ರವಾಹದ ಆತಂಕ ದೂರವಾಗುತ್ತಿದೆ.

  • ಪೊಲೀಸ್ ಠಾಣೆಯಲ್ಲಿ ಬುಲೆಟ್ ನಾಪತ್ತೆ ಪ್ರಕರಣ- ಕಪಿಲಾ ನದಿಯಲ್ಲಿ 20 ಗುಂಡುಗಳು ಪತ್ತೆ

    ಪೊಲೀಸ್ ಠಾಣೆಯಲ್ಲಿ ಬುಲೆಟ್ ನಾಪತ್ತೆ ಪ್ರಕರಣ- ಕಪಿಲಾ ನದಿಯಲ್ಲಿ 20 ಗುಂಡುಗಳು ಪತ್ತೆ

    ಮೈಸೂರು: ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ 50 ಸಜೀವ ಗುಂಡುಗಳು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಂಜನಗೂಡಿನ ಕಪಿಲಾ ನದಿಯಲ್ಲಿ 20 ಗುಂಡುಗಳು ಪತ್ತೆಯಾಗಿವೆ.

    ಜಿಲ್ಲೆಯ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ 50 ಗುಂಡುಗಳು ನಾಪತ್ತೆಯಾಗಿದ್ದವು. 303 ಮಾದರಿ ಬಂದೂಕಿನ ಗುಂಡುಗಳು ನಾಪತ್ತೆಯಾಗಿದ್ದವು. ಗುಂಡುಗಳು ಹೇಗೆ ನಾಪತ್ತೆಯಾಗಿವೆ ಎಂಬುದು ಪತ್ತೆಯಾಗಿಲ್ಲ. ಈ ಸಂಬಂಧ ಎಸ್‍ಪಿ ಸಿ.ಬಿ.ರಿಷ್ಯಂತ್ ಇಬ್ಬರನ್ನು ಅಮಾನತುಗೊಳಿಸಿದ್ದರು. ಇದೀಗ ಕಪಿಲಾ ನದಿಯಲ್ಲಿ ಗುಂಡುಗಳು ಪತ್ತೆಯಾಗಿದೆ.

    ಮಾಹಿತಿ ಆಧಾರದ ಮೇರೆಗೆ ಕಪಿಲಾ ನದಿಯಲ್ಲಿ ಎಎಸ್‍ಪಿ ಸ್ನೇಹ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದೆ. ಸತತ 2 ಗಂಟೆಗಳ ಶೋಧದ ನಂತರ 20 ಗುಂಡುಗಳು ಪತ್ತೆಯಾಗಿದೆ. ಸದ್ಯಕ್ಕೆ ಉಳಿದ 30 ಗುಂಡುಗಳ ಪತ್ತೆಗಾಗಿ ತನಿಖೆ ಮುಂದುವರಿದೆ.

    ಈ ಸಂಬಂಧ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

  • ಸೆಲ್ಫಿ ಕ್ಲಿಕ್ಕಿಸಿಕೊಂಡು ಕಪಿಲಾ ನದಿಗೆ ಹಾರಿ ತಾಯಿ-ಮಗಳು ಆತ್ಮಹತ್ಯೆ

    ಸೆಲ್ಫಿ ಕ್ಲಿಕ್ಕಿಸಿಕೊಂಡು ಕಪಿಲಾ ನದಿಗೆ ಹಾರಿ ತಾಯಿ-ಮಗಳು ಆತ್ಮಹತ್ಯೆ

    ಮೈಸೂರು: ಕಪಿಲಾ ನದಿ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಬಳಿಕ ನದಿಗೆ ಹಾರಿ ತಾಯಿ-ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಬಂಡಿಪಾಳ್ಯ ಗ್ರಾಮದ ನಿವಾಸಿಗಳಾದ ಮುಂಜುಳಾ(38) ಹಾಗೂ ಸೌಮ್ಯ(19) ಆತ್ಮಹತ್ಯೆ ಮಾಡಿಕೊಂಡವರು. ಮನೆಯವರಿಗೆ ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ತಾಯಿ, ಮಗಳು ತೆರಳಿದ್ದರು. ಆದರೆ ನದಿಯ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಂಡ ನಂತರ ನದಿಗೆ ಹಾರಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ತಾಯಿ, ಮಗಳ ಮೃತದೇಹ ನೀರಿನಲ್ಲಿ ತೇಲುತ್ತಿದ್ದುದನ್ನು ನೋಡಿದ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಬಂದು ಮೃತದೇಹಗಳನ್ನು ನದಿಯಿಂದ ಹೊರ ತೆಗೆದಿದ್ದಾರೆ.

    ಸದ್ಯ ತಾಯಿ, ಮಗಳ ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ಸತ್ತೆ ಹೋದ್ರು ಎಂದು ಕೊಂಡ ಅರ್ಚಕ ಪವಾಡ ಸದೃಶವಾಗಿ ಬಚಾವ್

    ಸತ್ತೆ ಹೋದ್ರು ಎಂದು ಕೊಂಡ ಅರ್ಚಕ ಪವಾಡ ಸದೃಶವಾಗಿ ಬಚಾವ್

    ಮೈಸೂರು: ಕಳೆದ ಶನಿವಾರ ಬೆಳಗ್ಗೆ ಸ್ನೇಹಿತರ ಜೊತೆ ಸವಾಲು ಹಾಕಿ ಭೋರ್ಗರೆಯುತ್ತಿದ್ದ ಕಪಿಲಾ ನದಿಯಲ್ಲಿ ಈಜಲು ಬಿದ್ದಿದ್ದ ನಂಜನಗೂಡಿನ ಅರ್ಚಕ ವೆಂಕಟೇಶ್ ಪವಾಡ ಸದೃಶವಾಗಿ ಪರಾಗಿದ್ದಾರೆ.

    ನಂಜನಗೂಡಿನ ಸೇತುವೆ ಮೇಲಿಂದ ಹೆಜ್ಜಿಗೆ ಸೇತುವೆವರೆಗೂ ಈಜುತ್ತೇನೆ ಎಂದು ವೆಂಕಟೇಶ್ ಸ್ನೇಹಿತರ ಜೊತೆ ಸವಾಲಾಕಿದ್ದರು. ಆದರೆ ಹರಿಯುವ ನದಿಯಲ್ಲಿ ಹಾದಿ ತಪ್ಪಿದ ವೆಂಕಟೇಶ್ ತಾವು ತಲುಪಬೇಕಾದ ಸ್ಥಳ ಬಿಟ್ಟು ಬೇರೆ ಸ್ಥಳಕ್ಕೆ ಹೋಗಿದ್ದರು. ನದಿಯೊಳಗೆ ಹಾಕಿದ್ದ ದೊಡ್ಡ ಪೈಪ್ ಒಳಗೆ ನುಸುಳಿ ಬಿಟ್ಟಿದ್ದರು. ನಂತರ ಅಲ್ಲಿಂದ ಪಾರಾಗಿ ಸೇತುವೆಯೊಂದನ್ನು ಹಿಡಿದು ಅದರ ಅಡಿ ಮಲಗಿದ್ದರು.

    ಶನಿವಾರದಿಂದ ನಾಪತ್ತೆಯಾಗಿದ್ದ ಕಾರಣ ಅವರು ಸತ್ತೆ ಹೋಗಿದ್ದಾರೆ ಎನ್ನಲಾಗಿತ್ತು. ಆದರೆ ಇಂದು ಸಂಜೆ ವೇಳೆಗೆ ಈಜಿಕೊಂಡು ಮತ್ತೆ ದಡ ಸೇರಲು ಯಶಸ್ವಿಯಾಗಿದ್ದಾರೆ. ಕಳೆದ 2 ದಿನಗಳಿಂದ ಊಟವಿಲ್ಲದೆ ಸೇತುವೆ ಕೆಳಗೆ ಮಲಗಿದ್ದ ಅವರು ನೀರಿನಲ್ಲಿ ತೇಲಿ ಬಂದ ಎಳನೀರು ಕುಡಿದು ಕಾಲ ಕಳೆದಿದ್ದರು.

    ನೀರಿನಲ್ಲಿ ಕೊಚ್ಚಿ ಹೋಗಿದ್ದ ಅವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿದೆ. ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಹಣಕ್ಕಾಗಿ ಸವಾಲು ಎಸೆದು ಈಜಲು ಹೋಗಿಲ್ಲ. ಹೊಳೆ ತುಂಬಿದ ವೇಳೆ ಈಜುವುದು ಒಂದು ಹವ್ಯಾಸವಾಗಿದ್ದು, ನೀರಿನಲ್ಲಿ ಈಜುವುದು ನಮಗೇ ಒಂದು ರೀತಿ ಸಾಹಸವಾಗಿದೆ. ಈ ಹಿಂದೆ ಹಲವು ಬಾರಿ ನಾವು ಇಂತಹದ್ದೆ ಸಾಹಸ ಮಾಡಿದ್ದೇವೆ. ಆದರೆ ನನಗೆ ಈ ಸೇತುವೆಯ ಬಗ್ಗೆ ಹೆಚ್ಚು ಮಾಹಿತಿ ಇರಲಿಲ್ಲ. ಆದ್ದರಿಂದ ಸಮಸ್ಯೆ ಎದುರಾಗಿತ್ತು. ಯೋಗ ಹಾಗೂ ಉಪವಾಸ ಇರುವುದು ಅಭ್ಯಾಸವಿರುವುದರಿಂದ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಯಾರ ಸಹಾಯವನ್ನು ನಿರೀಕ್ಷೆ ಮಾಡದೆ ಮತ್ತೆ ಈಜಿ ದಡಕ್ಕೆ ಬಂದೆ ಎಂದು ತಿಳಿಸಿದರು.

  • ಸವಾಲೆಸೆದು ಕಪಿಲಾ ನದಿಗೆ ಹಾರಿದ ಪೂಜಾರಿ ನಾಪತ್ತೆ

    ಸವಾಲೆಸೆದು ಕಪಿಲಾ ನದಿಗೆ ಹಾರಿದ ಪೂಜಾರಿ ನಾಪತ್ತೆ

    ಮೈಸೂರು: ಸ್ನೇಹಿತರ ಜೊತೆ ಸವಾಲು ಹಾಕಿ ಕಪಿಲಾ ನದಿಗೆ ಹಾರಿದ ಪೂಜಾರಿಯೊಬ್ಬರು ನಾಪತ್ತೆಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

    ಮೈಸೂರಿನ ನಂಜನಗೂಡು ಪಟ್ಟಣದ ಲಿಂಗ ಭಟ್ಟರ ಗುಡಿಯ ಪೂಜಾರಿಯಾಗಿ ಕೆಲಸ ಮಾಡುತ್ತಿದ್ದ 53 ವರ್ಷದ ವೆಂಕಟೇಶ್ ನಾಪತ್ತೆಯಾದ ವ್ಯಕ್ತಿ. ಉಕ್ಕಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಈಜುವ ದುಃಸ್ಸಾಹಸಕ್ಕೆ ಹೋಗಿ ನಾಪತ್ತೆ ಆಗಿದ್ದಾರೆ.

    ಸ್ನೇಹಿತರ ಜೊತೆ ಸವಾಲು ಹಾಕಿ ಶನಿವಾರ ಬೆಳಗ್ಗೆ ಸುಮಾರು 9 ಗಂಟೆಯ ವೇಳೆಯಲ್ಲಿ ನಂಜನಗೂಡು ಪಟ್ಟಣದ ಹೊಸ ರೈಲ್ವೆ ಸೇತುವೆಯಿಂದ ಕಪಿಲಾ ನದಿಗೆ ಧುಮುಕಿದ ಪೂಜಾರಿ ವೆಂಕಟೇಶ್ ಮೂರು ದಿನ ಕಳೆದರು ಇನ್ನೂ ಪತ್ತೆಯಾಗಿಲ್ಲ.

    ಈ ಬಗ್ಗೆ ವೆಂಕಟೇಶ್ ಕುಟುಂಬಸ್ಥರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

  • ತಗ್ಗಿತು ಕಪಿಲಾ ಪ್ರವಾಹ – ಸಹಜ ಸ್ಥಿತಿಯತ್ತ ನಂಜನಗೂಡು

    ತಗ್ಗಿತು ಕಪಿಲಾ ಪ್ರವಾಹ – ಸಹಜ ಸ್ಥಿತಿಯತ್ತ ನಂಜನಗೂಡು

    ಮೈಸೂರು: ಕಪಿಲಾ ನದಿಯ ಪ್ರವಾಹದಲ್ಲಿ ಇಳಿಕೆಯಾಗಿದ್ದು, ಮುಳುಗುವ ಭೀತಿಯಲ್ಲಿದ್ದ ಮೈಸೂರು ಜಿಲ್ಲೆಯ ನಂಜನಗೂಡು ಸಹಜ ಸ್ಥಿತಿಯತ್ತ ಮರಳುತ್ತಿದೆ.

    ಕಳೆದ ನಾಲ್ಕು ದಿನಗಳಿಂದ ಕಪಿಲಾ ನದಿ ಪ್ರವಾಹ ನಂಜನಗೂಡು ಭಾಗದ ಜನರ ಕಂಗೆಡಿಸಿತ್ತು. ಶ್ರೀಕಂಠೇಶ್ವರ ಸ್ವಾಮಿ ದೇಗುಲದವರೆಗೂ ಪ್ರವಾಹದ ನೀರು ಬಂದಿತ್ತು ಅಲ್ಲದೆ ಕಪಿಲಾನದಿ ತೀರದ ಬಹುತೇಕ ದೇಗುಲಗಳು, ತಗ್ಗು ಪ್ರದೇಶಗಳು ಜಲಾವೃತವಾಗಿದ್ದವು.

    ಊಟಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕೂಡ ಜಲಾವೃತವಾಗಿ ಹೆದ್ದಾರಿ ಕೂಡ ಬಂದ್ ಆಗಿತ್ತು. ಕಬಿನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರು ಬಿಟ್ಟಿದ್ದರಿಂದ ಈ ಭಾರೀ ಪ್ರವಾಹ ಉಂಟಾಗಿತ್ತು. ಇದೀಗ ಹೊರಹರಿವು ಇಳಿಕೆಯಾಗಿ ಕಪಿಲಾ ನದಿ ನೀರಿನ ಮಟ್ಟ ಕಡಿಮೆಯಾದ್ದರಿಂದ ಪ್ರವಾಹದ ನೀರು ಸಹ ಇಳಿ ಮುಖವಾಗಿದೆ.

    ಕಳೆದ ಮೂರು ದಿನಗಳಿಂದ ಕಪಿಲಾ ನದಿ ರಭಸದಿಂದ ಹರಿಯುತ್ತಿರುವ ಹಿನ್ನೆಲೆಯಲ್ಲಿ ನಂಜಗೂಡು -ಹೆಜ್ಜಿಗೆ ನಡುವೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದರಿಂದ ಸೇತುವೆ ರಸ್ತೆ ಕುಸಿದು ಬೀಳುವ ಆತಂಕ ಸ್ಥಳೀಯರಲ್ಲಿ ಎದುರಾಗಿದೆ.

    ರಸ್ತೆ ಹಾಗೂ ಸೇತುವೆಯಲ್ಲಿ ಬಿರುಕು ಉಂಟಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು, ಸೇತುವೆ ಮೇಲ್ಭಾಗದಲ್ಲಿ ಭಾರೀ ವಾಹನಗಳು ಸಂಚರಿಸದಂತೆ ನಿರ್ಬಂಧ ಹೇರಿದ್ದರು. ಅಲ್ಲದೇ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ಕೊನೆ ಅವಧಿಯಲ್ಲಿ ಈ ಸೇತುವೆ ಉದ್ಘಾಟನೆ ಆಗಿತ್ತು. ಕಳಪೆ ಕಾಮಗಾರಿಯಿಂದಾಗಿಯೇ ಸೇತುವೆ ಹಾಗೂ ರಸ್ತೆಯಲ್ಲಿ ಬಿರುಕು ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ರಾಷ್ಟ್ರೀಯ ಹೆದ್ದಾರಿ ಬಂದ್:
    ಕಪಿಲಾ ನದಿಯಿಂದ ಸುಮಾರು 80 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಿರುವುದರಿಂದ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಸಂಪರ್ಕ ಕಳೆದ ಎರಡು ದಿನಗಳಿಂದ ಸಂಪೂರ್ಣ ಕಡಿತಗೊಂಡಿತ್ತು. ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ನಂಜನಗೂಡಿನ ರಾಷ್ಟ್ರೀಯ ಹೆದ್ದಾರಿ 766 ರಸ್ತೆ ಮೇಲೆ ನೀರು ಹರಿದು ಹೋಗುತ್ತಿದ್ದ ಕಾರಣ ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ವಾಹನ ಸವಾರರು ಇತರೇ ಮಾರ್ಗಗಳತ್ತ ತೆರಳಿ ಪ್ರಯಾಣ ಮುಂದುವರಿಸಿದ್ದರು. ಈ ಕುರಿತು ಪರ್ಯಾಯ ಮಾರ್ಗಗಳನ್ನು ಅಧಿಕಾರಿಗಳು ಸೂಚಿಸಿದ್ದಾರೆ.

  • ಮುನಿದ ಕಪಿಲೆ: ನಂಜನಗೂಡು-ಹೆಜ್ಜಿಗೆ ಸೇತುವೆಯಲ್ಲಿ ಬಿರುಕು

    ಮುನಿದ ಕಪಿಲೆ: ನಂಜನಗೂಡು-ಹೆಜ್ಜಿಗೆ ಸೇತುವೆಯಲ್ಲಿ ಬಿರುಕು

    ಮೈಸೂರು: ಕಳೆದ ಮೂರು ದಿನಗಳಿಂದ ಕಪಿಲಾ ನದಿ ರಭಸದಿಂದ ಹರಿಯುತ್ತಿರುವ ಹಿನ್ನೆಲೆಯಲ್ಲಿ ನಂಜಗೂಡು – ಹೆಜ್ಜಿಗೆ ನಡುವೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಸೇತುವೆಯಲ್ಲಿ ಬಿರುಕು ಕಾಣಿಸಿದೆ. ಇದರಿಂದ ಸೇತುವೆ ರಸ್ತೆ ಕುಸಿದು ಬೀಳುವ ಆತಂಕ ಸ್ಥಳೀಯರಲ್ಲಿ ಎದುರಾಗಿದೆ.

    ರಸ್ತೆ ಹಾಗೂ ಸೇತುವೆಯಲ್ಲಿ ಬಿರುಕು ಉಂಟಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು, ಸೇತುವೆ ಮೇಲ್ಭಾಗದಲ್ಲಿ ಭಾರೀ ವಾಹನಗಳು ಸಂಚರಿಸದಂತೆ ನಿರ್ಬಂಧ ಹೇರಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ಕೊನೆ ಅವಧಿಯಲ್ಲಿ ಈ ಸೇತುವೆ ಉದ್ಘಾಟನೆ ಆಗಿತ್ತು. ಕಳಪೆ ಕಾಮಗಾರಿಯಿಂದಾಗಿಯೇ ಸೇತುವೆ ಹಾಗೂ ರಸ್ತೆಯಲ್ಲಿ ಬಿರುಕು ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದನ್ನೂ ಓದಿ: ಕಬಿನಿ ಜಲಾಶಯದಿಂದ ದಾಖಲೆ ಪ್ರಮಾಣದಲ್ಲಿ ನೀರು ಹೊರಕ್ಕೆ

    ರಾಷ್ಟ್ರೀಯ ಹೆದ್ದಾರಿ ಬಂದ್:
    ಕಪಿಲಾ ನದಿಯಿಂದ ಸುಮಾರು 80 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಿರುವುದರಿಂದ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಸಂಪರ್ಕ ಕಳೆದ ಎರಡು ದಿನಗಳಿಂದ ಸಂಪೂರ್ಣ ಕಡಿತಗೊಂಡಿದೆ. ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ನಂಜನಗೂಡಿನ ರಾಷ್ಟ್ರೀಯ ಹೆದ್ದಾರಿ 766 ರಸ್ತೆ ಮೇಲೆ ನೀರು ಹರಿದು ಹೋಗುತ್ತಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ವಾಹನ ಸವಾರರು ಇತರೇ ಮಾರ್ಗಗಳತ್ತ ತೆರಳಿ ಪ್ರಯಾಣ ಮುಂದುವರಿಸಿದ್ದಾರೆ. ಈ ಕುರಿತು ಪರ್ಯಾಯ ಮಾರ್ಗಗಳನ್ನು ಅಧಿಕಾರಿಗಳು ಸೂಚಿಸಿದ್ದಾರೆ. ಇದನ್ನೂ ಓದಿ: ಕಪಿಲಾ ನದಿ ಪ್ರವಾಹ: ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್

    ಕಬಿನಿ ಜಲಾನಯನ ಪ್ರದೇಶದಲ್ಲಿ ಪ್ರವಾಹ ಉಂಟಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಕಬಿನಿ ಜಲಾಶಯದಿಂದ ಬರೋಬ್ಬರಿ 80 ಸಾವಿರ ಕ್ಯೂಸೆಕ್ಸ್ ನೀರು ಹೊರಕ್ಕೆ ಯಾವುದೇ ಕ್ಷಣದಲ್ಲಿ ಮತ್ತಷ್ಟು ಜಲಾಶಯಕ್ಕೆ ಒಳಹರಿವು ಸಾಧ್ಯತೆ ಇದೆ. ಆದ್ದರಿಂದ ನದಿ ಪಾತ್ರದ ಜನರು ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಲಾಗಿದೆ. ಆದರೆ ಇದೇ ಮೊದಲ ಬಾರಿಗೆ ಕಪಿಲಾ ನದಿ ದಾಖಲೆ ರೂಪದಲ್ಲಿ ಉಕ್ಕಿ ಹರಿಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಉಕ್ಕಿಹರಿಯುತ್ತಿರೋ ಕಪಿಲಾ ನದಿಯಲ್ಲಿ ಯುವಕರ ಸ್ವಿಮ್ಮಿಂಗ್ – ಇತ್ತ ಇಳಿವಯಸ್ಸಲ್ಲೂ ನೀರಿಗೆ ಧುಮುಕಿದ ವೃದ್ಧ

    ಉಕ್ಕಿಹರಿಯುತ್ತಿರೋ ಕಪಿಲಾ ನದಿಯಲ್ಲಿ ಯುವಕರ ಸ್ವಿಮ್ಮಿಂಗ್ – ಇತ್ತ ಇಳಿವಯಸ್ಸಲ್ಲೂ ನೀರಿಗೆ ಧುಮುಕಿದ ವೃದ್ಧ

    -ಮೈಸೂರಲ್ಲಿ ಪ್ರವಾಹ ಪರಿಸ್ಥಿತಿ

    ಮೈಸೂರು: ಭಾರೀ ಮಳೆಗೆ ನೀರಿನ ಮಟ್ಟ ಹೆಚ್ಚಾಗಿರುವ ಕಾರಣ ನದಿಗೆ ಇಳಿಯದಂತೆ ಅಧಿಕಾರಿಗಳು ಹಾಗೂ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಎಚ್ಚರಿಕೆಯ ಬಳಿಕವೂ ನೀರಿನಲ್ಲಿ ಈಜಾಡುವ ಮೂಲಕ ಯುವಕನೊಬ್ಬ ದುಸ್ಸಾಹಸ ಮಾಡಿದ್ದಾನೆ.

    ಉಕ್ಕಿ ಹರಿಯುತ್ತಿರುವ ನಂಜನಗೂಡಿನ ಸೇತುವೆ ಬಳಿ ಕಪಿಲಾ ನದಿಗೆ ಜಿಗಿದು ಯುವಕನೊಬ್ಬ ಈಜಾಡಿದ್ದು, ಈ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಮತ್ತೊಂದೆಡೆ ವೃದ್ಧರೊಬ್ಬರು ನಂಜನಗೂಡಿನ ಮಲ್ಲನಮೂಲೆ ಮಠದ ಬಳಿ ನದಿಗೆ ಧುಮುಕಿ ಈಜಾಡಿದ್ದಾರೆ.

    ಈಗಾಗಲೇ ಕಬಿನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರು ಬಿಡುಗಡೆಯಾಗಿದ್ದು, ಪೊಲೀಸರು ನದಿಗೆ ಇಳಿಯದಂತೆ ಎಚ್ಚರಿಕೆ ನೀಡಿದ್ದರೂ ವೃದ್ಧ ಯಾವುದೇ ಎಚ್ಚರಿಕೆಗೂ ಮುಲಾಜು ನೀಡದೆ ಈಜಾಡಿದ್ದಾರೆ. ಬೆಳಗ್ಗೆ ಅಷ್ಟೇ ಇದೇ ಸ್ಥಳದಲ್ಲಿ ಇಬ್ಬರು ಯುವಕರು ಸೆಲ್ಫಿ ತೆಗೆದುಕೊಳ್ಳಲು ರೈಲ್ವೇ ಸೇತುವೆ ನಿಷೇಧಿತ ಪ್ರದೇಶಕ್ಕೆ ತೆರಳಿದ್ದರು. ಈ ಕುರಿತು ಸಹ ಮುನ್ನೇಚ್ಚರಿಕೆ ನೀಡಲಾಗಿತ್ತು.

    ಕಳೆದ ಕೆಲ ದಿನಗಳ ಹಿಂದೆ ನದಿಗೆ ನೀರು ಬಿಟ್ಟಿದ ವೇಳೆಯೂ ಕಪಿಲಾ ನದಿಯಲ್ಲಿ ಈಜಾಲು ತೆರಳಿದ್ದ ವೇಳೆ ಯುವನೊಬ್ಬ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಕಳೆದ ಒಂದು ತಿಂಗಳ ಅವಧಿಯಲ್ಲಿ ಕಪಿಲಾ ನದಿಯಲ್ಲಿ 3 ಮೂವರು ಯುವಕು ನೀರು ಪಾಲಾಗಿದ್ದರು ಈ ಘಟನೆ ಮಾಸುವ ಮುನ್ನವೇ ಯುವಕರು ದುಸ್ಸಾಹಸ ತೋರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews