Tag: Kapil Sharma Show

  • ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದಾರೆ ನಟ ಸಲ್ಮಾನ್ ಖಾನ್

    ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದಾರೆ ನಟ ಸಲ್ಮಾನ್ ಖಾನ್

    ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ (Salman Khan) ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ನಾನಾ ಕಾಯಿಲೆಗಳಿಗೆ ತುತ್ತಾಗಿರುವ ಸಲ್ಮಾನ್ ಗೆ ಸಮಸ್ಯೆ ಉಲ್ಭಣಿಸಿದ್ದಲ್ಲಿ ಸ್ಟ್ರೋಕ್ ಕೂಡ ಆಗಬಹುದು ಅನ್ನುವ ಆತಂಕದಲ್ಲಿದ್ದಾರೆ ನಟ. ಈ ಮಾಹಿತಿಯನ್ನು ಸ್ವತಃ ಸಲ್ಮಾನ್ ಖಾನ್ ಅವರೇ ಹೇಳಿಕೊಂಡಿದ್ದಾರೆ.

    ಕಪಿಲ್ ಶೋದಲ್ಲಿ ಅನಾರೋಗ್ಯದ ಕುರಿತು ಮಾತಾಡಿರುವ ಸಲ್ಮಾನ್ ಖಾನ್, ತಾವು ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

    ಒಂದೊಂದು ಸಲ ಮೆದುಳಿನ ರಕ್ತನಾಳದಲ್ಲಿ ಊತ ಕಾಣಿಸಿಕೊಳ್ಳುತ್ತದೆಯಂತೆ. ಇದು ಅತಿಯಾದರೆ, ನರ ಛಿದ್ರಗೊಂಡು ಪ್ರಾಣಕ್ಕೆ ಅಪಾಯ ತರುವುದು ಅನ್ನೋದು ಸಲ್ಮಾನ್ ಖಾನ್ ಮಾತು. ಹಾಗಾಗಿ ಪದೇ ಪದೇ ಅವರು ಸ್ಟ್ರೋಕ್‌ನ ಆತಂಕಕ್ಕೆ ಒಳಗಾಗುತ್ತಿದ್ದಾರಂತೆ.

    ಈ ಶೋನಲ್ಲಿ ಕೇವಲ ಕಾಯಿಲೆಗಳ ಬಗ್ಗೆ ಮಾತ್ರವಲ್ಲ, ಮದ್ವೆಯ ಬಗ್ಗೆಯೂ ಮಾತಾಡಿದ್ದಾರೆ. ಇವತ್ತಿನ ವಿಚ್ಛೇದನಗಳನ್ನು ನೋಡಿದರೆ, ಮದುವೆ ಭಯ ಆಗುತ್ತದೆ ಅಂದಿದ್ದಾರೆ. ಸಿಲ್ಲಿ ಕಾರಣಕ್ಕೆ ದಂಪತಿಗಳು ದೂರವಾಗುತ್ತಿದ್ದಾರೆ. ಆಸ್ತಿ, ಹಣದಾಸೆಗೂ ಡಿವೋರ್ಸ್ ಗಳು ನಡೆಯುತ್ತಿವೆ ಅಂತಾನೂ ಸಲ್ಮಾನ್ ನೇರವಾಗಿ ಮಾತಾಡಿದ್ದಾರೆ.

  • ಬೆಂಗಳೂರಿನ ನಂದಿ ಬೆಟ್ಟದ ಸೌಂದರ್ಯ ಸವಿದ ಆ್ಯಂಕರ್ ಕಪಿಲ್ ಶರ್ಮಾ

    ಬೆಂಗಳೂರಿನ ನಂದಿ ಬೆಟ್ಟದ ಸೌಂದರ್ಯ ಸವಿದ ಆ್ಯಂಕರ್ ಕಪಿಲ್ ಶರ್ಮಾ

    ಸಿನಿಮಾ ಸೆಲೆಬ್ರಿಟಿಗಳು ಕೆಲಸಕ್ಕೆ ಬ್ರೇಕ್ ನೀಡಿ ವಿರಾಮಕ್ಕಾಗಿ ದೇಶ-ವಿದೇಶ ಸುತ್ತುವುದು ಕಾಮನ್. ಆದರೆ ಹಿಂದಿ ಕಿರುತೆರೆಯ ಸ್ಟಾರ್ ನಿರೂಪಕ ಕಪಿಲ್ ಶರ್ಮಾ (Kapil Sharma) ಇದೀಗ ಬೆಂಗಳೂರಿನಲ್ಲಿ (Bengaluru) ಬೀಡು ಬಿಟ್ಟಿದ್ದಾರೆ. ನಂದಿ ಬೆಟ್ಟದ ಸೌಂದರ್ಯ ಸವಿದಿದ್ದಾರೆ. ಕೆಲ ಕಾಲ ಸಮಯ ಕಳೆದಿದ್ದಾರೆ. ಈ ಕುರಿತ ವಿಡಿಯೋವನ್ನ ನಟ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಬೆಳಗಿನ ಜಾವ ನಂದಿ ಬೆಟ್ಟ ಹತ್ತುತ್ತಿರುವ ತುಣುಕನ್ನ ವಿಡಿಯೋದಲ್ಲಿ ನೋಡಬಹುದಾಗಿದೆ. ಮಾಸ್ಕ್ ಧರಿಸಿ ವಾಕ್ ಮಾಡುತ್ತಾ ನಂದಿ ಬೆಟ್ಟದ ಸೌಂದರ್ಯ ನೋಡುತ್ತಾ ಎಂಜಾಯ್ ಮಾಡಿದ್ದಾರೆ. ಕಪ್ಪು ಬಣ್ಣದ ಶರ್ಟ್ ಮತ್ತು ಬೂದು ಬಣ್ಣದ ಪ್ಯಾಂಟ್ ಧರಿಸಿದ್ದಾರೆ.

     

    View this post on Instagram

     

    A post shared by Kapil Sharma (@kapilsharma)

    ಮೂಲಗಳ ಪ್ರಕಾರ, ಇನ್ನೂ 15 ದಿನಗಳ ಕಾಲ ಕಪಿಲ್ ಬೆಂಗಳೂರಿನಲ್ಲಿಯೇ ವಾಸಿಸುತ್ತಾರೆ. ಹೊಸ ಹೊಸ ಸ್ಥಳಗಳಿಗೆ ನಟ ವಿಸಿಟ್ ಮಾಡುತ್ತಾರೆ. ಇದನ್ನೂ ಓದಿ:ಅಲ್ಲು ಅರ್ಜುನ್- ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’ ರಿಲೀಸ್ ಡೇಟ್ ಫಿಕ್ಸ್

    ಹಿಂದಿ ಕಿರುತೆರೆಯಲ್ಲಿ ‘ಕಾಮಿಡಿ ನೈಟ್ಸ್ ವಿತ್ ಕಪಿಲ್ ಶರ್ಮಾ’ ಶೋ ಹೆಚ್ಚಿನ ಜನಪ್ರಿಯತೆಯಿದೆ. ಜೊತೆಗೆ ಅವರು ಸಿನಿಮಾಗಳಲ್ಲಿ ಕೂಡ ಆ್ಯಕ್ಟೀವ್ ಆಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮದ್ಯಪಾನದ ದೃಶ್ಯ ತೋರಿಸಿದ್ದಕ್ಕೆ ಕಪಿಲ್ ಶರ್ಮಾ ಶೋ ವಿರುದ್ಧ FIR

    ಮದ್ಯಪಾನದ ದೃಶ್ಯ ತೋರಿಸಿದ್ದಕ್ಕೆ ಕಪಿಲ್ ಶರ್ಮಾ ಶೋ ವಿರುದ್ಧ FIR

    ಮುಂಬೈ: ಹಿಂದಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಪಿಲ್ ಶರ್ಮಾ ಶೋ ತಯಾರಕ ವಿರುದ್ಧ ಮಧ್ಯಪ್ರದೇಶದ ಶಿವಪುರಿ ಜಿಲ್ಲಾ ನ್ಯಾಯಾಲಯದಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.

    ಕಾರ್ಯಕ್ರಮದ ಸಂಚಿಕೆಯೊಂದರಲ್ಲಿ ನ್ಯಾಯಾಲಯದ ದೃಶ್ಯವನ್ನು ಪ್ರದರ್ಶಿಸುವ ವೇಳೆ ನಟರು ವೇದಿಕೆ ಮೇಲೆ ಮದ್ಯಪಾನ ಮಾಡುತ್ತಿರುವ ದೃಶ್ಯವನ್ನು ತೋರಿಸಿದ್ದರಿಂದ ದೂರು ದಾಖಲಿಸಲಾಗಿದೆ. ಅಲ್ಲದೇ ನಟರು ನ್ಯಾಯಾಲಯಕ್ಕೆ ಅಗೌರವವನ್ನು ತೋರಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: LOVE YOU MY SON: ನಿಖಿಲ್ ಕುಮಾರಸ್ವಾಮಿ

    ಶಿವಪುರಿಯ ವಕೀಲ ಸಿಜೆಎಂ ನ್ಯಾಯಾಲಯದಲ್ಲಿ ಎಫ್‍ಐಆರ್ ದಾಖಲಿಸಿದ್ದು, ಅಕ್ಟೋಬರ್ 1ರಂದು ಪ್ರಕರಣ ಕುರಿತಂತೆ ವಿಚಾರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಖಾಸಗಿ ವಾಹಿನಿಯಲ್ಲಿ ಬರುವ ಕಪಿಲ್ ಶರ್ಮಾ ಶೋ ಬಹಳ ಕಳಪೆಯಾಗಿದ್ದು, ಮಹಿಳೆಯರ ಕುರಿತಂತೆ ಅಸಭ್ಯವಾಗಿ ಟೀಕೆಗಳನ್ನು ಮಾಡುತ್ತಾರೆ. ಸಂಚಿಕೆಯೊಂದರಲ್ಲಿ ನ್ಯಾಯಾಲಯದ ಸೆಟ್ ಸ್ಥಾಪಿಸಲಾಗಿತ್ತು. ಈ ವೇಳೆ ನಟರು ಸಾರ್ವಜನಿಕವಾಗಿ ಮದ್ಯಪಾನ ಮಾಡುತ್ತಿರುವ ದೃಶ್ಯ ಕಂಡುಬಂದಿದೆ. ಇದು ನ್ಯಾಯಾಂಗ ನಿಂದನೆಯಾಗಿದೆ. ಹೀಗಾಗಿ ನಾನು ನ್ಯಾಯಾಲಯದಲ್ಲಿ ಸೆಕ್ಷನ್ 356/3ರ ಅಡಿ ತಪ್ಪಿತಸ್ಥರ ವಿರುದ್ಧ ಎಫ್‍ಐಆರ್ ನೋಂದಣಿಗೆ ಬೇಡಿಕೆ ಇಟ್ಟಿದ್ದೇನೆ. ಅಸ್ಪಷ್ಟತೆ ಇಂತಹ ಪ್ರದರ್ಶನವನ್ನು ನಿಲ್ಲಿಸಬೇಕು ಎಂದಿದ್ದಾರೆ. ಇದನ್ನೂ ಓದಿ: ಬಾಲಿವುಡ್‍ಗೆ ಎಂಟ್ರಿ ಕೊಡ್ತಿದ್ದಾರಾ ನಟ ಗೋವಿಂದ ಪುತ್ರ?

    2021 ಜನವರಿ 19ರಂದು ಈ ಸಂಚಿಕೆ ಪ್ರಸಾರವಾಗಿದೆ ಮತ್ತು ಏಪ್ರಿಲ್ 24ರಂದು ಮರುಪ್ರಸಾರ ಮಾಡಲಾಗಿದೆ. ನ್ಯಾಯಾಲಯದ ಸೆಟ್ ನಿರ್ಮಿಸಿ ಮದ್ಯಪಾನ ಮಾಡುತ್ತಿರುವ ಈ ದೃಶ್ಯ ನ್ಯಾಯಾಲಯಕ್ಕೆ ಅವಮಾನವ ತರಿಸಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನಮ್ಮ ಪರಿವಾರಕ್ಕೆ ಹೊಸ ಸದಸ್ಯನ ಆಗಮನವಾಗಿದೆ: ಎಚ್‍ಡಿಕೆ

    https://www.youtube.com/watch?v=X2rKRtM4kmQ