Tag: Kapil Mishra

  • ನೈಟ್‌ಕ್ಲಬ್ ಪಾರ್ಟಿಯಲ್ಲಿ ರಾಹುಲ್ – ವೀಡಿಯೋ ಫುಲ್ ವೈರಲ್

    ನೈಟ್‌ಕ್ಲಬ್ ಪಾರ್ಟಿಯಲ್ಲಿ ರಾಹುಲ್ – ವೀಡಿಯೋ ಫುಲ್ ವೈರಲ್

    ಕಠ್ಮಂಡು: ಇಲ್ಲಿನ ಕಠ್ಮಂಡುವಿನ ವರ್ಲ್ಡ್‌ಕ್ಲಾಸ್‌ ನೈಟ್‌ಕ್ಲಬ್ ಪಾರ್ಟಿಯೊಂದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾಣಿಸಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿದ್ದಾರೆ.

    ಪ್ರಮುಖ ರಾಜಕೀಯ ವಿದ್ಯಮಾನಗಳ ನಡುವೆ ಸದಾ ಬ್ಯುಸಿ ಶೆಡ್ಯೂಲ್‌ನಲ್ಲಿರುವ ರಾಹುಲ್‌ಗಾಂಧಿ ಈ ನಡುವೆಯೂ ಪಾರ್ಟಿಮೂಡ್‌ನಲ್ಲಿ ಕಾಣಿಸಿಕೊಂಡಿದ್ದು ಟೀಕೆಗೆ ಗುರಿಯಾಗಿದ್ದಾರೆ. ಪಾರ್ಟಿಯಲ್ಲಿ ಸ್ನೇಹಿತರೊಟ್ಟಿಗೆ ಎಂಜಾಯ್ ಮಾಡುತ್ತಿರುವ ವೀಡಿಯೋ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

    ಈ ವಿಡಿಯೋವನ್ನು ಬಿಜೆಪಿ ನಾಯಕ ಕಪಿಲ್ ಮಿಶ್ರಾ, `ಯಾರು? ಅವರು ಯಾರು?’ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಬಿಜೆಪಿಯ ಸಾಮಾಜಿಕ ಜಾಲತಾಣ ಮುಖ್ಯಸ್ಥ ಅಮಿತ್ ಮಾಳವಿಯಾ ಕೂಡ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

    ರಾಹುಲ್ ಗಾಂಧಿ ಮುಂಬೈ ಮೇಲೆ ದಾಳಿ ನಡೆದಾಗಲೂ ನೈಟ್‌ಕ್ಲಬ್‌ನಲ್ಲಿದ್ದರು. ಅವರ ಪಕ್ಷ ಸ್ಫೋಟಗೊಳ್ಳುತ್ತಿರುವ ಸಮಯದಲ್ಲೂ ನೈಟ್‌ಕ್ಲಬ್‌ನಲ್ಲಿದ್ದಾರೆ ಎಂದು ಕಾಲೆಳೆದಿದ್ದಾರೆ. ಪತ್ರಕರ್ತೆಯ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಲು ರಾಹುಲ್‌ ಗಾಂಧಿ ನೇಪಾಳಕ್ಕೆ ಆಗಮಿಸಿದ್ದರು.

  • ಠಾಕೂರ್, ಮಿಶ್ರಾ ವಿರುದ್ಧ ಯಾಕೆ ಎಫ್‍ಐಆರ್ ಹಾಕಬಾರದು – ಕೇಂದ್ರ, ದೆಹಲಿ ಸರ್ಕಾರಕ್ಕೆ ಸುಪ್ರೀಂ ಛೀಮಾರಿ

    ಠಾಕೂರ್, ಮಿಶ್ರಾ ವಿರುದ್ಧ ಯಾಕೆ ಎಫ್‍ಐಆರ್ ಹಾಕಬಾರದು – ಕೇಂದ್ರ, ದೆಹಲಿ ಸರ್ಕಾರಕ್ಕೆ ಸುಪ್ರೀಂ ಛೀಮಾರಿ

    – ಸಂಯಮ ಕಾಪಾಡುವಂತೆ ಮೋದಿ ಮನವಿ
    – ಪ್ರಧಾನಿ, ಶಾ ರಾಜೀನಾಮೆಗೆ ವಿರೋಧ ಪಕ್ಷಗಳ ಆಗ್ರಹ

    ನವದೆಹಲಿ: ಹಿಂಸಾಚಾರ ಸಂಬಂಧ ಕೇಂದ್ರ ಮತ್ತು ದೆಹಲಿ ಸರ್ಕಾರ ಹಾಗೂ ಪೊಲೀಸರಿಗೆ ದೆಹಲಿ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಗಳು ಛೀಮಾರಿ ಹಾಕಿವೆ.

    1984ರ ಸಿಖ್ ದಂಗೆಯಂಥ ಪರಿಸ್ಥಿತಿ ಪುನರಾವರ್ತನೆ ಆಗಬಾರದು ಅಂತ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಆದೇಶಿಸಿದೆ. ಹಿಂಸಾಚಾರಕ್ಕೆ ಪ್ರೇರಣೆ ಎನ್ನಲಾಗ್ತಿರೋ ಬಿಜೆಪಿ ನಾಯಕರಾದ ಕೇಂದ್ರ ಸಚಿವ ಅನುರಾಗ್ ಠಾಕೂರ್, ಸಂಸದರಾದ ಪ್ರವೇಶ್ ವರ್ಮಾ, ಅಭಯ್ ವರ್ಮಾ ಹಾಗೂ ಮಾಜಿ ಶಾಸಕ ಕಪಿಲ್ ಮಿಶ್ರಾ ಹೇಳಿಕೆಗಳ ವೀಡಿಯೋ ಕ್ಲಿಪ್ಪಿಂಗ್ಸ್ ಗಳನ್ನು ಕೋರ್ಟ್ ನಲ್ಲಿ ಪ್ಲೇ ಮಾಡಲಾಯಿತು.

    ಸೂಕ್ಷ್ಮವಾಗಿ ಆಲಿಸಿದ ಜಡ್ಜ್ ಮುರಳೀಧರ್, ಇಂಥ ಹೇಳಿಕೆಗೆಳು ರಿಪೀಟ್ ಆಗಿವೆ. ಸಾರ್ವಜನಿಕ ಆಸ್ತಿ ನಷ್ಟ ಮಾಡೋವ್ರ ಮೇಲೆ ಎಫ್‍ಐಆರ್ ಹಾಕೋ ನೀವ್ಯಾಕೆ ಇಂಥ ಹೇಳಿಕೆ ಕೊಡೋವ್ರ ಮೇಲೆ ಹಾಕಲ್ಲ. ಸಮಾಜಕ್ಕೆ ತಪ್ಪು ಸಂದೇಶ ಹೋಗಲ್ವಾ ಅಂತ ಪೊಲೀಸರನ್ನು ಪ್ರಶ್ನಿಸಿದ್ರು.

    ಇದಕ್ಕೆ ಉತ್ತರಿಸಿದ ದೆಹಲಿ ಸಾಲಿಟರ್ ಜನರಲ್ ತುಷಾರ್ ಮೆಹ್ತಾ, ದೆಹಲಿ ಪೊಲೀಸರೇನು ಪಿಕ್‍ನಿಕ್‍ಗೆ ಹೋಗಿರಲಿಲ್ಲ. ಅವರ ಮೇಲೂ ಆ್ಯಸಿಡ್ ದಾಳಿಗಳು ನಡೆದಿವೆ ಎಂದರು

    ಇನ್ನೊಂದು ಕಡೆ ನಿಮ್ಮಲ್ಲಿ ವೃತ್ತಿಪರತೆ ಇಲ್ಲವೇ? ಅಂತ ದೆಹಲಿ ಪೊಲೀಸರನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಹಿಂಸಾಚಾರ ಸಂಭವಿಸಿದ ತಕ್ಷಣವೇ ಕಾರ್ಯಪ್ರವೃತ್ತ ಆಗಿದ್ರೆ ಇಷ್ಟು ಹಾನಿಯನ್ನು ತಡೆಯಬಹುದಿತ್ತು. ಇದು ನಿಮ್ಮ ವಿಫಲತೆಯನ್ನು ತೋರಿಸ್ತಿದೆ ಅಂತ ಜಡ್ಜ್ ಕೆ.ಎಂ. ಜೋಸೆಫ್ ಬಿಸಿಮುಟ್ಟಿಸಿದ್ದಾರೆ.

    ಪ್ರಚೋದನಾಕಾರಿ ಹೇಳಿಕೆ ನೀಡಿದವರ ವಿರುದ್ಧ ಯಾಕೆ ಕ್ರಮಕೈಗೊಂಡಿಲ್ಲ. ಯಾರಿಗಾಗಿ ಕಾಯುತ್ತಾ ಕೂತಿದ್ದೀರಿ ಅಂತ ಪ್ರಶ್ನಿಸಿದ್ದಾರೆ. ಪ್ರಕರಣದಲ್ಲಿ ದೆಹಲಿ ಹೈಕೋರ್ಟೇ ತೀರ್ಮಾನ ಕೈಗೊಳ್ಳಲಿದೆ ಅಂತ ಸುಪ್ರೀಂಕೋರ್ಟ್ ಹೇಳಿದೆ.

    ಮೋದಿ ಮನವಿ:
    ಶಕ್ತಿಕೇಂದ್ರದಲ್ಲೇ ಸೃಷ್ಟಿಯಾಗಿರೋ ಇಂಥಾ ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ಶಾಂತಿ ಕಾಪಾಡುವಂತೆ ಟ್ವಿಟರ್ ನಲ್ಲಿ ಮನವಿ ಮಾಡಿದ್ದಾರೆ.

    ಇನ್ನು,ಸಾವು-ನೋವಿನಲ್ಲೂ ರಾಜಕೀಯ ಕೆಸರೆರಚಾಟ ನಡೀತಿದೆ. ಇಷ್ಟೆಲ್ಲಾ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರವೇ ಜವಾಬ್ದಾರಿ. ಗೃಹ ಸಚಿವರೇ ನೇರಹೊಣೆ. ಅವರು ಎಲ್ಲೋಗಿದ್ರು. ಈ ಕ್ಷಣವೇ ರಾಜೀನಾಮೆ ಕೊಡ್ಬೇಕು ಅಂತ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕಿಡಿಕಾರಿದ್ರು.

    ದ್ವೇಷ ಭಾಷಣಗಳ ಮೂಲಕ ಉದ್ದೇಶ ಪೂರ್ವಕವಾಗಿಯೇ ದೆಹಲಿಯಲ್ಲಿ ಭಯದ ವಾತಾವರಣ ಸೃಷ್ಟಿಸಲಾಗ್ತಿದೆ ಅಂತ ದೂರಿದ್ರು. ನಾಳೆ ಪ್ರತಿಭಟನೆ ಮಾಡಲಿರುವ ಕಾಂಗ್ರೆಸ್, ರಾಷ್ಟ್ರಪತಿಗಳಿಗೆ ದೂರು ನೀಡಲಿದೆ. ಆದರೆ, ಸೋನಿಯಾ ಗಾಂಧಿ ಡರ್ಟಿ ಪಾಲಿಟಿಕ್ಸ್ ಮಾಡ್ತಿದ್ದಾರೆ ಅಂತ ಕೇಂದ್ರ ಸಚಿವರಾದ ಪ್ರಕಾಶ್ ಜಾವ್ಡೇಕರ್, ರವಿಶಂಕರ್ ಪ್ರಸಾದ್ ತಿರುಗೇಟು ನೀಡಿದರು.

    ಸೋನಿಯಾ ಗಾಂಧಿ ಅವರ ಹೇಳಿಕೆ ದುರಾದೃಷ್ಟ. ಖಂಡನೀಯ. ಇಂಥ ಸಮಯದಲ್ಲಿ ಎಲ್ಲಾ ಪಕ್ಷಗಳು ಶಾಂತಿ ಕಾಪಾಡುವಂತೆ ಮನವಿ ಮಾಡ್ಬೇಕು. ಅದನ್ನು ಬಿಟ್ಟು ಸರ್ಕಾರವನ್ನು ನಿಂದಿಸೋದು, ಕೊಳಕು ರಾಜಕೀಯ ಸರಿಯಲ್ಲ ಅಂದ್ರು. ಈ ಮಧ್ಯೆ, ಅಮಿತ್ ಶಾ ರಾಜೀನಾಮೆ ಕೊಡ್ಬೇಕು ಅಂತ ಎನ್‍ಸಿಪಿಯ ಸುಪ್ರಿಯಾ ಸುಳೆ ಹೇಳಿದ್ರೆ, ದೆಹಲಿಯಲ್ಲಿ ಸೇನೆಯ ನಿಯೋಜನೆ ಬಿಟ್ಟರೆ ಬೇರೆ ದಾರಿಯಿಲ್ಲ ಅಂತ ಸಿಪಿಎಂ ಸೀತಾರಾಂ ಯೆಚೂರಿ ಹೇಳಿದ್ದಾರೆ.

  • ಕೇಜ್ರಿವಾಲ್ 2 ಕೋಟಿ ಲಂಚ ತೆಗೆದುಕೊಂಡಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ: ಆಪ್ ಶಾಸಕ

    ಕೇಜ್ರಿವಾಲ್ 2 ಕೋಟಿ ಲಂಚ ತೆಗೆದುಕೊಂಡಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ: ಆಪ್ ಶಾಸಕ

    ನವದೆಹಲಿ: ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿ ಮುಖ್ಯಮಂತ್ರಿ ಪಟ್ಟವನ್ನು ಏರಿದ್ದ ಕೇಜ್ರಿವಾಲ್ ವಿರುದ್ಧ 2 ಕೋಟಿ ಲಂಚ ತೆಗೆದುಕೊಂಡಿರುವ ಗಂಭೀರ ಆರೋಪ ಕೇಳಿಬಂದಿದೆ.

    ಪ್ರವಾಸೋದ್ಯಮ ಸಚಿವ ಸ್ಥಾನದಿಂದ ವಜಾಗೊಂಡಿರುವ ಕಪಿಲ್ ಮಿಶ್ರಾ ಅವರು, ಕೇಜ್ರಿವಾಲ್ ಸತ್ಯೇಂದ್ರ ಜೈನ್ ರಿಂದ 2 ಕೋಟಿ ರೂ. ಲಂಚ ಪಡೆದಿದ್ದಾರೆ. ಲಂಚ ಪಡೆದಿರುವುದನ್ನು ನಾನು ಕಣ್ಣಾರೆ ನೋಡಿದ್ದೇನೆ ಎಂದು ಹೇಳಿದ್ದಾರೆ.

    ಕುಮಾರ್ ವಿಶ್ವಾಸ್ ಅವರ ಜತೆಗೂಡಿ ಆಮ್ ಆದ್ಮಿ ಪಕ್ಷದ ನಾಯಕತ್ವದ ವಿರುದ್ಧವೇ ಸಡ್ಡು ಹೊಡೆದಿದ್ದ ಪ್ರವಾಸೋದ್ಯಮ ಸಚಿವ ಕಪಿಲ್ ಮಿಶ್ರಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲಾಗಿದೆ.ಇದೇ ವೇಳೆ ನಾನು ಆಪ್‍ನ ಸ್ಥಾಪಕ ಸದಸ್ಯನಾಗಿದ್ದು, ಆಪ್ ನಲ್ಲೇ ಇರುತ್ತೇನೆ. ಬಿಜೆಪಿ ಪಕ್ಷವನ್ನು ಸೇರುವುದಿಲ್ಲ ಎಂದು ಹೇಳಿದರು.

    ಮಂತ್ರಿ ಸ್ಥಾನದಿಂದ ವಜಾ ಮಾಡುತ್ತಿದ್ದಂತೆ ಮಿಶ್ರಾ, ಹಗರಣದಲ್ಲಿ ತೊಡಗಿದ ಕೆಲ ಆಮ್ ಆದ್ಮಿ ಪಕ್ಷದ ನಾಯಕರ ಬಣ್ಣ ಬಯಲು ಮಾಡುತ್ತೇನೆಂದು ಎಂದು ಹೇಳಿದ್ದರು.

    ಭ್ರಷ್ಟಾಚಾರ ಆರೋಪವಿಲ್ಲದ, ಸಿಬಿಐ ವಿಚಾರಣೆ ಎದುರಿಸದ ಏಕೈಕ ಸಚಿವ ನಾನು. ನನಗೆ ಮಾಹಿತಿಯನ್ನೂ ನೀಡದೆ ನನ್ನನ್ನು ಸಂಪುಟದಿಂದ ಹೊರಹಾಕಲಾಗಿದೆ ಕೇಜ್ರಿವಾಲ್ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದ್ದರು.