Tag: Kapil Cricket Club

  • ಪ್ರತಿಭಾವಂತ ಕ್ರಿಕೆಟ್ ಆಟಗಾರರಿಗೆ ಶೋಧ – ಕಪಿಲ್ ಕ್ರಿಕೆಟ್ ಕ್ಲಬ್‍ನಿಂದ ತರಬೇತಿ ಶಿಬಿರ

    ಪ್ರತಿಭಾವಂತ ಕ್ರಿಕೆಟ್ ಆಟಗಾರರಿಗೆ ಶೋಧ – ಕಪಿಲ್ ಕ್ರಿಕೆಟ್ ಕ್ಲಬ್‍ನಿಂದ ತರಬೇತಿ ಶಿಬಿರ

    ಬೆಂಗಳೂರು: ಪ್ರತಿಭಾವಂತ ಕ್ರಿಕೆಟ್ ಆಟಗಾರರನ್ನು ಗುರುತಿಸಿ ಪ್ರೋತ್ಸಾಹಿಸಲು ಪ್ರತಿಷ್ಠಿತ ಕಪಿಲ್ ಕ್ರಿಕೆಟ್ ಕ್ಲಬ್ ವಾರ್ಷಿಕ ತರಬೇತಿ ಶಿಬಿರವನ್ನು ಆರಂಭಿಸಿದೆ.

    ಬೆಂಗಳೂರಿನ ಬಸವೇಶ್ವರ ನಗರದ ಕಪಿಲ್ ಕ್ರಿಕೆಟ್ ಕ್ಲಬ್ ಪ್ರತಿಭಾವಂತ ಕ್ರಿಕೆಟ್ ಪಟುಗಳಿಗಾಗಿ ಆಯೋಜಿಸಿರುವ ಶಿಬಿರ ಜೂನ್ 3 ರಿಂದ ಆರಂಭಗೊಂಡಿದ್ದು, ಸುತ್ತಮುತ್ತಲ 3 ಮೈದಾನಗಳಲ್ಲಿ ಶಿಬಿರ ನಡೆಸಿ ತರಬೇತಿ ನೀಡುತ್ತಿದೆ. 5 ವರ್ಷದ ಮಕ್ಕಳಿಂದ 16 ವರ್ಷದೊಳಗಿನ ಮಕ್ಕಳಿಗಾಗಿ ಇಲ್ಲಿ ತರಬೇತಿ ನೀಡಿ ಪ್ರತಿಭಾವಂತರನ್ನು ಗುರುತಿಸುವ ಕಾರ್ಯದಲ್ಲಿ ತೊಡಗಿದೆ. ಇದನ್ನೂ ಓದಿ: ಕಪಾಳಮೋಕ್ಷ ಪ್ರಕರಣ: 14 ವರ್ಷಗಳ ಬಳಿಕ ಶ್ರೀಶಾಂತ್‍ಗೆ ಕ್ಷಮೆಯಾಚಿಸಿದ ಭಜ್ಜಿ

    ಕಳೆದ 14 ವರ್ಷಗಳಿಂದ ಸತತವಾಗಿ ವಾರ್ಷಿಕ ತರಬೇತಿ, ಬೇಸಿಗೆ ಶಿಬಿರಗಳನ್ನು ನಡೆಸುತ್ತಿರುವ ಕಪಿಲ್ ಕ್ರಿಕೆಟ್ ಕ್ಲಬ್, ಇತ್ತೀಚೆಗೆ ಎರಡು ತಿಂಗಳ ಕಾಲ 150 ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಯಶಸ್ವಿಯಾಗಿ ನಡೆಸಿತ್ತು. ಉತ್ಸಾಹಿ ಹಿರಿಯ ಆಟಗಾರರು ಮತ್ತು ತಜ್ಞ ಕ್ರಿಕೆಟ್ ಪಟುಗಳ ಮಾರ್ಗದರ್ಶನದಲ್ಲಿ ತರಬೇತಿ ನೀಡಿ, ಪ್ರತಿಭಾವಂತರನ್ನು ವೃತ್ತಿಪರ ಕ್ರಿಕೆಟ್‍ಗೆ ಪೂರಕವಾಗಿ ತಯಾರಿ ನಡೆಸಲಾಗುತ್ತದೆ. ಎಂದು ಕ್ಲಬ್ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದ್ದಾರೆ. ಇದನ್ನೂ ಓದಿ: French Open 2022 ಗಾಯಗೊಂಡ ಅಲೆಕ್ಸಾಂಡರ್ ಜೆರೆವ್ – ಕ್ರೀಡಾ ಸ್ಪೂರ್ತಿ ಮೆರೆದ ನಡಾಲ್ ನಡೆಗೆ ಮೆಚ್ಚುಗೆ

    ಇಲ್ಲಿ ತರಬೇತಿ ಪಡೆದ ಸಾಕಷ್ಟು ಮಕ್ಕಳು ಜಿಲ್ಲಾಮಟ್ಟ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಭವಿಷ್ಯ ರೂಪಿಸಿಕೊಂಡಿದ್ದಾರೆ ಎಂದು ತಿಳಿಸಿರುವ ಅವರು, ಆಸಕ್ತ ಕ್ರಿಕೆಟ್ ಪ್ರೇಮಿಗಳು ಒಟ್ಟುಗೂಡಿ ಈ ಸತ್ಕಾರ್ಯದಲ್ಲಿ ತೊಡಗಿರುವುದಾಗಿ ಹೇಳಿದ್ದಾರೆ.

    ಪ್ರಸ್ತುತ ಬಸವೇಶ್ವರನಗರದ ಕಾರ್ಮೆಲ್ ಶಾಲಾ ಮೈದಾನ, ವಿಜಯನಗರದ ಸರ್ವಜ್ಞ ಶಾಲಾ ಮೈದಾನದಲ್ಲಿ ವಾರ್ಷಿಕ ತರಬೇತಿ ನೀಡಲಾಗುತ್ತಿದ್ದು ಮಕ್ಕಳನ್ನು ದೈಹಿಕ ಮತ್ತು ಮಾನಸಿಕವಾಗಿ ತಯಾರುಗೊಳಿಸಿ ಭವಿಷ್ಯದ ಕ್ರಿಕೆಟ್ ಪಟುಗಳಾಗಿ ರೂಪುಗೊಳಿಸುವುದೇ ನಮ್ಮ ಗುರಿ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ನರಸಿಂಹಮೂರ್ತಿ 9845066713 ಅಥವಾ ವಿಲಿಯಂ, ಉಪಾಧ್ಯಕ್ಷ  9242997043, ಕಾರ್ಯದರ್ಶಿ ಲಕ್ಷ್ಮೀಕಾಂತ್, 9538676716 ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

  • ಕಪಿಲ್ ಕ್ರಿಕೆಟ್ ಕ್ಲಬ್‍ನಿಂದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ – ವೃತ್ತಿಪರ ಕ್ರಿಕೆಟ್‍ಗೆ ಪೂರಕವಾಗಿ ಆಯೋಜನೆ

    ಕಪಿಲ್ ಕ್ರಿಕೆಟ್ ಕ್ಲಬ್‍ನಿಂದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ – ವೃತ್ತಿಪರ ಕ್ರಿಕೆಟ್‍ಗೆ ಪೂರಕವಾಗಿ ಆಯೋಜನೆ

    ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಕಪಿಲ್ ಕ್ರಿಕೆಟ್ ಕ್ಲಬ್ ಈ ಬಾರಿ ಆಯೋಜಿಸಿದ್ದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ ಯಶಸ್ವಿಯಾಗಿದೆ.

    ಏಪ್ರಿಲ್ 1 ರಿಂದ ಮೇ 14ರವರೆಗೆ ಬಸವೇಶ್ವರನಗರದ ಕಾರ್ಮೆಲ್ ಶಾಲಾ ಮೈದಾನದಲ್ಲಿ ನಡೆದ ಶಿಬಿರದದಲ್ಲಿ 150ಕ್ಕೂ ಹೆಚ್ಚು ಬಾಲಕರು ತರಬೇತಿ ಪಡೆದರು. ಇಂದು ಶಿಬಿರದ ಸಮಾರೋಪ ಮತ್ತು ಪ್ರಮಾಣಪತ್ರ ವಿತರಣಾ ಸಮಾರಂಭ ನಡೆಯಿತು. ಇದನ್ನೂ ಓದಿ: ಉದ್ದನೆ ಕೂದಲಿನ, ತುಟಿಗೆ ಬಣ್ಣ ಹಚ್ಚಿ ದೈತ ದಾಂಡಿಗನಾಗಿ ಗಮನಸೆಳೆದ ಸೈಮಂಡ್ಸ್ ಇನ್ನು ನೆನಪು ಮಾತ್ರ

    ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಪಿಲ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ನರಸಿಂಹಮೂರ್ತಿ, 15 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಕ್ಲಬ್ ಕಳೆದ 14 ವರ್ಷಗಳಿಂದ ಸತತವಾಗಿ ಶಿಬಿರಗಳನ್ನು ಆಯೋಜಿಸಿ ಪ್ರತಿಭಾವಂತ ಕ್ರಿಕೆಟ್ ಪಟುಗಳ ಶೋಧಕಾರ್ಯದಲ್ಲಿ ನಿರತವಾಗಿದೆ. 5 ವರ್ಷದಿಂದ 16 ವರ್ಷ ವಯೋಮಾನದ ಮಕ್ಕಳಿಗೆ ಬೇಸಿಗೆ ತರಬೇತಿ ಆಯೋಜಿಸಲಾಗುತ್ತಿದೆ. ಸರಾಸರಿ ಪ್ರತಿವರ್ಷ 150ಕ್ಕೂ ಹೆಚ್ಚು ಮಕ್ಕಳು ನಮ್ಮಲ್ಲಿ ತರಬೇತಿ ಪಡೆಯುತ್ತಿದ್ದಾರೆ. ನಮ್ಮಲ್ಲಿ ತರಬೇತಿ ಪಡೆಯುವವರ ಪೈಕಿ ಕನಿಷ್ಠ ಶೇಕಡಾ 10 ರಷ್ಟು ಮಕ್ಕಳು ವೃತ್ತಿಪರ ಕ್ರಿಕೆಟ್‍ನಲ್ಲಿ ಭಾಗವಹಿಸುತ್ತಾರೆ. ಜಿಲ್ಲಾಮಟ್ಟ, ವಲಯಮಟ್ಟ, ರಾಜ್ಯಮಟ್ಟ ಹಾಗೂ ರಾಷ್ಟ್ರಮಟ್ಟದಲ್ಲೂ ಭಾಗಿವಹಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯ ಎಂದರು.

    ಉದ್ಯಮಿ, ಸಮಾಜ ಸೇವಕ ಶ್ರೀಧರ್ ಮಾತನಾಡಿ, ಕಪಿಲ್ ಕ್ರಿಕೆಟ್ ಕ್ಲಬ್‍ನ ಸೇವೆಯನ್ನು ಶ್ಲಾಘಿಸಿ, ನಾಡಿಗೆ ಒಳ್ಳೆಯ ಪ್ರತಿಭಾವಂತ ಕ್ರಿಕೆಟ್ ಪಟುಗಳನ್ನು ಕೊಡುಗೆಯಾಗಿ ನೀಡುವಲ್ಲಿ ಮಹತ್ತರ ಪಾತ್ರ ವಹಿಸಿದೆ. ಭವಿಷ್ಯದಲ್ಲೂ ಕ್ಲಬ್‍ನ ಉತ್ತಮ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. ಇದನ್ನೂ ಓದಿ: ಥಾಮಸ್‌ ಕಪ್‌ ಬ್ಯಾಡ್ಮಿಂಟನ್‌ – ಭಾರತ ಚಾಂಪಿಯನ್‌, ಇತಿಹಾಸ ಸೃಷ್ಟಿ

    ಜೂನ್ ಮೊದಲ ವಾರದಲ್ಲಿ ವಾರ್ಷಿಕ ತರಬೇತಿ ಶಿಬಿರ ಕೂಡ ಆರಂಭವಾಗಲಿದ್ದು 100 ಹೆಚ್ಚು ಆಟಗಾರರು ಭಾಗವಹಿಸಲಿದ್ದಾರೆ. ಶಿಬಿರದಲ್ಲಿ ಮಕ್ಕಳ ದೈಹಿಕ ಸಾಮರ್ಥ್ಯ ವೃದ್ಧಿ, ಮಾನಸಿಕ ಸ್ಥೈರ್ಯ ತುಂಬಿ ಮನೋಬಲ ಹೆಚ್ಚಿಸುವುದರ ಜೊತೆಗೆ ವೃತ್ತಿಪರ ಕ್ರಿಕೆಟ್‍ಗೆ ಪೂರಕವಾಗಿ ತಯಾರಿ ಮಾಡಲಾಗುವುದು ಎಂದು ಕಪಿಲ್ ಕ್ರಿಕೆಟ್ ಕ್ಲಬ್ ಹೇಳಿದೆ. ಸಮಾರಂಭದಲ್ಲಿ ಉದ್ಯಮಿ ಸಮಾಜ ಸೇವಕ ಶ್ರೀಧರ್, ಮಾಕ್ಸ್ ಮುಲ್ಲರ್ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಸುರೇಶ್, ಕಪಿಲ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ನರಸಿಂಹಮೂರ್ತಿ ಶಿಬಿರದಲ್ಲಿ ಪಾಲ್ಗೊಂಡವರಿಗೆ ಪ್ರಮಾಣಪತ್ರ ಮತ್ತು ಸ್ಮರಣಿಕೆ ವಿತರಿಸಿದರು.