Tag: Kapata Nataka Paatradhaari

  • ಪ್ರೇಕ್ಷಕರ ಮನಗೆದ್ದ ಹುಲಿರಾಯನ ಕಪಟ ನಾಟಕ!

    ಪ್ರೇಕ್ಷಕರ ಮನಗೆದ್ದ ಹುಲಿರಾಯನ ಕಪಟ ನಾಟಕ!

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೊಸಬರ ತಂಡಗಳು ಅಡಿಗಡಿಗೆ ಪ್ರೇಕ್ಷಕರ ಮನ ಗೆಲ್ಲುವಂಥಾ ಸಿನಿಮಾಗಳನ್ನು ಸೃಷ್ಟಿಸುತ್ತಿವೆ. ಆ ಸಾಲಿನಲ್ಲಿ ಕ್ರಿಶ್ ನಿರ್ದೇಶನದ ‘ಕಪಟ ನಾಟಕ ಪಾತ್ರಧಾರಿ’ ಚಿತ್ರವೂ ಸೇರಿಕೊಂಡಿದೆ. ಈ ಹಿಂದೆ ‘ಹುಲಿರಾಯ’ ಎಂಬ ಚಿತ್ರದ ಮೂಲಕ ನಾಯಕನಾಗಿ ಆರ್ಭಟಿಸಿದ್ದ ಬಾಲು ನಾಗೇಂದ್ರ ಅವರ ಅದ್ಭುತ ನಟನೆ, ಸಣ್ಣ ಸುಳಿವನ್ನೂ ಬಿಟ್ಟು ಕೊಡದಂತೆ ಬೇರೆಯದ್ದೇ ಅನುಭೂತಿಯನ್ನು ಪ್ರತಿ ಪ್ರೇಕ್ಷಕರಲ್ಲಿಯೂ ತುಂಬಿಸುವ ಅಮೋಘವಾದ ಕಥೆಯೊಂದಿಗೆ ಈ ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ನೀಡುತ್ತಿದೆ.

    ಇದು ಕ್ರಿಶ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಮೊದಲ ಚಿತ್ರ. ಹೀಗೆಂದರೆ ನಂಬಲು ತುಸು ಕಷ್ಟವಾಗುವಂಥಾ ಅಚ್ಚುಕಟ್ಟುತನದೊಂದಿಗೆ ಅವರು ಕಪಟ ನಾಟಕ ಪಾತ್ರಧಾರಿಯನ್ನು ರೂಪಿಸಿದ್ದಾರೆ. ಇಲ್ಲಿನ ಕಥೆ ಒಂದು ರೀತಿಯಲ್ಲಿ ವಿಶೇಷವಾಗಿದ್ದರೆ, ನಿರ್ದೇಶಕರು ಅದನ್ನು ನಿರೂಪಣೆ ಮಾಡಿರೋ ರೀತಿ ಮತ್ತೊಂದು ಥರದಲ್ಲಿ ವಿಶಿಷ್ಟವಾಗಿದೆ. ಇದರಲ್ಲಿನ ಪಾತ್ರಗಳಿಗೆ ಬಾಲು ನಾಗೇಂದ್ರ, ಸಂಗೀತಾ ಭಟ್ ಮತ್ತು ಇತರೇ ತಾರಾಗಣ ಜೀವ ತುಂಬಿರೋ ರೀತಿಯಂತೂ ಇಡೀ ಸಿನಿಮಾದ ಪ್ರಮುಖ ಶಕ್ತಿಯೆಂದರೂ ಅತಿಶಯವಲ್ಲ. ಒಟ್ಟಾರೆಯಾಗಿ ಒಂದಕ್ಕೊಂದು ಪೂರಕವಾದ ಎಲ್ಲ ಅಂಶಗಳು ಒಗ್ಗೂಡಿಕೊಂಡು ಕಪಟ ನಾಟಕ ಪಾತ್ರಧಾರಿಯನ್ನು ಪುಷ್ಕಳ ಗೆಲುವಿನತ್ತ ಸರಾಗವಾಗಿಯೇ ಕರೆದೊಯ್ಯುತ್ತಿವೆ.

    ಒಂದು ವರ್ಗವನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಿದರೆ ಒಂದಂಶವನ್ನು ಪ್ರಧಾನವಾಗಿ ಪರಿಗಣಿಸಿದರೆ ಸಾಕಾಗುತ್ತದೆ. ಆದರೆ ನಿರ್ದೇಶಕ ಕ್ರಿಶ್ ಕಪಟ ನಾಟಕ ಪಾತ್ರಧಾರಿ ಎಲ್ಲ ವರ್ಗಗಳ ಪ್ರೇಕ್ಷಕರಿಗೂ ಮೆಚ್ಚುಗೆಯಾಗಬೇಕೆಂಬ ಉದ್ದೇಶದಿಂದಲೇ ಈ ಕಥೆಯನ್ನು ರೂಪಿಸಿದ್ದಾರೆ. ಅದರಲ್ಲಿ ಯಶವನ್ನೂ ಕಂಡಿದ್ದಾರೆ. ಇಲ್ಲಿ ರೋಚಕ ತಿರುವುಗಳಿವೆ, ಹಾರರ್ ಅಂಶಗಳಿವೆ, ಮಾಸ್, ಲವ್, ಸೆಂಟಿಮೆಂಟ್ ಸೇರಿದಂತೆ ಎಲ್ಲವೂ ಇವೆ. ಆದರೆ ಕಥೆ ಎತ್ತ ಹೊರಳಿಕೊಂಡರೂ ಮನೋರಂಜನೆಗೆ ಮಾತ್ರ ಯಾವ ಕಾರಣದಿಂದಲೂ ಕೊರತೆಯಾಗದಂತೆ ಕ್ರಿಶ್ ಈ ಸಿನಿಮಾವನ್ನು ಕಟ್ಟಿ ಕೊಟ್ಟಿದ್ದಾರೆ. ಆದ ಕಾರಣದಿಂದಲೇ ಇದು ಎಲ್ಲ ವರ್ಗದ ಪ್ರೇಕ್ಷಕರೂ ತಲೆದೂಗಿ ಮೆಚ್ಚಿಕೊಳ್ಳುವಂತೆ ಮೂಡಿ ಬಂದಿದೆ.

  • ಕಪಟ ನಾಟಕ ಪಾತ್ರಧಾರಿ: ಆಟೋ ಚಾಲಕನ ಬದುಕಿನ ಸವಾರಿ!

    ಕಪಟ ನಾಟಕ ಪಾತ್ರಧಾರಿ: ಆಟೋ ಚಾಲಕನ ಬದುಕಿನ ಸವಾರಿ!

    ಬೆಂಗಳೂರು: ಇದುವರೆಗೂ ಆಟೋ ಚಾಲಕರ ಬಗ್ಗೆ ಒಂದಷ್ಟು ಕಥೆಗಳು ಕನ್ನಡದಲ್ಲಿ ಸಿನಿಮಾ ಸ್ವರೂಪ ಪಡೆದುಕೊಂಡಿವೆ. ಇದೀಗ ಇದೇ ನವೆಂಬರ್ 8ರಂದು ತೆರೆಗಾಣಲು ರೆಡಿಯಾಗಿರೋ ಕಪಟ ನಾಟಕ ಪಾತ್ರಧಾರಿ ಚಿತ್ರ ಕೂಡಾ ಆಟೋ ಚಾಲಕನೊಬ್ಬನ ಬದುಕಿನ ಕಥೆಯಾಧರಿಸಿದ ಚಿತ್ರವೇ. ಆದರೆ ಈ ಕಥೆ ಮಾತ್ರ ಈವರೆಗೆ ಬಂದಿರುವ ಅಷ್ಟೂ ಕಥೆಗಳಿಗಿಂತಲೂ ಡಿಫರೆಂಟಾಗಿದೆ ಅನ್ನೋದು ಚಿತ್ರತಂಡದ ಭರವಸೆ. ಅದಕ್ಕೆ ಇತ್ತೀಚೆಗಷ್ಟೇ ಬಿಡುಗಡೆಯಾಗಿರೋ ಟ್ರೇಲರ್ ಮೂಲಕವೇ ಮತ್ತಷ್ಟು ಶಕ್ತಿ ಸಿಕ್ಕಿದಂತಾಗಿದೆ.

    ಕಪಟ ನಾಟಕ ಪಾತ್ರಧಾರಿಯಲ್ಲಿ ಬಾಲು ನಾಗೇಂದ್ರ ಮಧ್ಯಮ ವರ್ಗಕ್ಕಿಂತಲೂ ತುಸು ಕೆಳ ಮಟ್ಟದಲ್ಲಿರೋ ಕುಟುಂಬದ ಹುಡುಗನಾಗಿ ನಟಿಸಿದ್ದಾರೆ. ಆತ ಸೋಮಾರಿಗಳಲ್ಲಿಯೇ ಪರಮ ಸೋಮಾರಿ. ಹಾಗಂತ ಅವನು ಜಡ ಭರತನಲ್ಲ. ಚುರುಕಿನ ಸ್ವಭಾವದ ಈತ ಕೈಯಿಟ್ಟ ಯಾವ ಕೆಲಸವೂ ಬರಖತ್ತಾಗೋದಿಲ್ಲ ಎಂಬ ನಂಬಿಕೆ ಆಸುಪಾಸಿನವರಲ್ಲಿಯೇ ಗಟ್ಟಿಯಾಗುವಂಥಾ ವಿದ್ಯಮಾನಗಳು ಜರುಗುತ್ತಿರುತ್ತವೆ. ಅಷ್ಟಕ್ಕೂ ಈತನಿಗೆ ಸರಿಯಾದೊಂದು ಕೆಲಸ ಹಿಡಿದು ಮೈ ಮುರಿದು ದುಡಿಯೋ ಕಾನ್ಸೆಪ್ಟಿನಲ್ಲಿಯೇ ಒಲವಿರೋದಿಲ್ಲ. ಆದರೆ ಬದುಕು ಬಿಡಬೇಕಲ್ಲಾ? ಅದರ ಅನಿವಾರ್ಯತೆಗೆ ಸಿಕ್ಕು ಆಟೋ ಓಡಿಸಿಕೊಂಡು ಬದುಕ ಬೇಕಾಗಿ ಬಂದಾಗ ಅಲ್ಲಾಗೋ ಸ್ಥಿತ್ಯಂತರಗಳನ್ನು ಮಜವಾದ ಕಥೆಯೊಂದಿಗೆ ಇಲ್ಲಿ ನಿರೂಪಿಸಲಾಗಿದೆ.

    ಹೀಗೆ ಅನಿವಾರ್ಯವಾಗಿ ಆಟೋ ಚಾಲಕನಾಗೋ ನಾಯಕ ಯಾವುದೋ ಕಪಟ ನಾಟಕದ ಪಾತ್ರಧಾರಿಯಾಗ ಬೇಕಾಗಿ ಬರುತ್ತದೆ. ಅದುವೇ ಆತನನ್ನು ಸಂಕಷ್ಟದ ಹುದುಲೊಳಗೆ ಹೂತು ಬಿಡುತ್ತದೆ. ಇದರ ನಡುವೆಯೇ ಈ ಆಟೋ ಚಾಲಕ ಪ್ರೇಮಿಯಾಗುತ್ತಾನೆ. ಅಲ್ಲಲ್ಲಿ ನಗಿಸುತ್ತಾನೆ. ಕಚಗುಳಿ ಇಡುತ್ತಾನೆ. ಇಂಥಾ ಮನೋರಂಜನಾತ್ಮಕವಾದ ಗಟ್ಟಿ ಕಥೆ ಹೊಂದಿರೋ ಚಿತ್ರ ಕಪಟ ನಾಟಕ ಪಾತ್ರಧಾರಿ. ಆಟೋ ಚಾಲಕನನ್ನು ಬರಸೆಳೆದುಕೊಳ್ಳೋ ಆ ಘಟನೆ ಯಾವುದು ಎನ್ನುವುದರಿಂದ ಮೊದಲ್ಗೊಂಡು ಎಲ್ಲ ಕುತೂಹಲಗಳಿಗೂ ಇಲ್ಲಿ ಭರಪೂರ ಉತ್ತರ ಸಿದ್ಧವಿದೆ. ಆದರೆ ಅದಕ್ಕಾಗಿ ನವೆಂಬರ್ 8ರ ವರೆಗೆ ಕಾಯಬೇಕಷ್ಟೆ!

  • ಕಪಟ ನಾಟಕ ಪಾತ್ರಧಾರಿಯ ಹಾರರ್ ಲುಕ್!

    ಕಪಟ ನಾಟಕ ಪಾತ್ರಧಾರಿಯ ಹಾರರ್ ಲುಕ್!

    ಬೆಂಗಳೂರು: ಬಾಲು ನಾಗೇಂದ್ರರಂಥಾ ವಿಶಿಷ್ಟ ನಟ ಪ್ರಧಾನ ಪಾತ್ರವನ್ನು ನಿರ್ವಹಿಸಿದ್ದಾರೆಂದ ಮೇಲೆ ಆ ಚಿತ್ರದ ಕಥೆಯೂ ಡಿಫರೆಂಟಾಗಿದೆ ಎಂದೇ ಅರ್ಥ. ಅದು ಪ್ರೇಕ್ಷಕರಿಗೂ ಕೂಡಾ ಚೆನ್ನಾಗಿಯೇ ಗೊತ್ತಿರುವಂಥಾದ್ದು. ಈಗಾಗಲೇ ಹೊರ ಬಂದಿರೋ ಹಾಡುಗಳು ಮತ್ತು ಟ್ರೇಲರ್ ಮೂಲಕವೇ ಈ ಸಿನಿಮಾದ ಭಿನ್ನ ಕಥೆಯ ಸುಳಿವೂ ಕೂಡಾ ಸ್ಪಷ್ಟವಾಗಿ ಜಾಹೀರಾಗಿದೆ. ಈ ಚಿತ್ರ ಇದೇ ನವೆಂಬರ್ 8ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಈ ಕಡೆಯ ಹೊತ್ತಿನಲ್ಲಿ ಈ ಥರದ ಗಾಢವಾದ ನಿರೀಕ್ಷೆ, ಕುತೂಹಲ, ಕ್ರೇಜ್‌ಗಳು ಮೇಳೈಸಿವೆಯಲ್ಲಾ? ಇದೆಲ್ಲವನ್ನೂ ಮೀರಿಸುವ ಹೂರಣ ಈ ಸಿನಿಮಾದೊಳಗಿದೆ.

    ಈ ಚಿತ್ರ ಆಟೋ ಡ್ರೈವರ್ ಒಬ್ಬನ ದಿನಚರಿಯನ್ನೊಳಗೊಂಡಿರುವಂಥಾದ್ದು. ಆದರೆ ನಿರ್ದೇಶಕ ಕ್ರಿಶ್ ಈ ದಿನಚರಿಯ ಪರಿಧಿಯೊಳಗೆ ಇಡೀ ಬ್ರಹ್ಮಾಂಡವನ್ನೇ ತಂದು ನಿಲ್ಲಿಸಿದ್ದಾರೆ. ಇದರಲ್ಲಿರೋದು ಆಟೋ ಡ್ರೈವರನ ದಿನಚರಿಯೆಂಬಂತೆ ಸಿಂಪಲ್ ಕಥೆಯ ಸುಳಿವು ಕೊಟ್ಟಿದ್ದ ಚಿತ್ರತಂಡ ಟ್ರೇಲರ್ ಮೂಲಕ ಅಚ್ಚರಿಗೆ ಕಾರಣವಾಗಿತ್ತು. ಯಾಕೆಂದರೆ ಅದರಾಚೆಗೆ ಅಲ್ಲಿ ಅನೇಕ ಕೊಂಬೆ ಕೋವೆ, ಸಸ್ಪೆನ್ಸ್ ಥ್ರಿಲ್ಲರ್ ಅನುಭವವಾಗಿತ್ತು. ಇದೆಲ್ಲವನ್ನೂ ಮೀರಿದ ಬಿರುಸಿನ ಕಥೆ ಇಲ್ಲಿದೆ ಎಂಬ ಸ್ಪಷ್ಟ ಸೂಚನೆಯೂ ಸಿಕ್ಕಿತ್ತು.

    ಇದೆಲ್ಲವನ್ನು ಹೊರತು ಪಡಿಸಿ ಚಿತ್ರತಂಡ ಕೊಂಚ ಸಸ್ಪೆನ್ಸ್ ಆಗಿಟ್ಟು, ಅಷ್ಟಾಗಿ ಎಲ್ಲಿಯೂ ಹೇಳಿಕೊಳ್ಳದ ಮತ್ತೊಂದು ಅಂಶವೂ ಈ ಚಿತ್ರದಲ್ಲಿದೆ. ಅದು ಹಾರರ್ ಶೇಡ್. ಇದು ಪ್ರತಿ ಪ್ರೇಕ್ಷಕರನ್ನೂ ಕೂಡಾ ಸುಳಿವೇ ಕೊಡದೆ ಬೆಚ್ಚಿ ಬೀಳಿಸಲಿದೆಯಂತೆ. ಇಡೀ ಕಥೆ ಗಂಭೀರವಾಗಿ, ಹಾಸ್ಯಮಯವಾಗಿ, ಉಸಿರು ಬಿಗಿ ಹಿಡಿದು ನೋಡುವಂಥಾ ಆವೇಗದೊಂದಿಗೆ ಸಾಗುತ್ತಿರುವಾಗಲೇ ಇಲ್ಲಿ ಏಕಾಏಕಿ ಹಾರರ್ ಅಂಶಗಳು ಪ್ರತ್ಯಕ್ಷವಾಗಲಿವೆಯಂತೆ. ಹಾಗೆ ಹಾರರ್ ಶೇಡ್ ತೆರೆದುಕೊಳ್ಳಲು ಕಾರಣವೇನು? ಅದರ ತೀವ್ರತೆ ಏನು ಎಂಬುದಕ್ಕೆಲ್ಲ ಇದೇ ನವೆಂಬರ್ ಎಂಟರಂದು ನಿಖರ ಉತ್ತರ ಸಿಗಲಿದೆ.

  • ಮತ್ತೆ ವೀಡಿಯೋ ಸಾಂಗ್‍ನೊಂದಿಗೆ ಬಂದ ಕಪಟ ನಾಟಕ ಪಾತ್ರಧಾರಿ!

    ಮತ್ತೆ ವೀಡಿಯೋ ಸಾಂಗ್‍ನೊಂದಿಗೆ ಬಂದ ಕಪಟ ನಾಟಕ ಪಾತ್ರಧಾರಿ!

    ಬೆಂಗಳೂರು:ಕಪಟ ನಾಟಕ ಪಾತ್ರಧಾರಿಯ ದರ್ಶನವಾಗಲು ಕೆಲವೇ ಕೆಲ ದಿನಗಳು ಮಾತ್ರ ಬಾಕಿ ಉಳಿದುಕೊಂಡಿವೆ. ಈ ಕ್ಷಣಗಳನ್ನು ಮತ್ತಷ್ಟು ಕಳೆಗಟ್ಟಿಸುವ ಸಲುವಾಗಿಯೇ ಚಿತ್ರತಂಡ ಮತ್ತೊಂದು ವೀಡಿಯೋ ಸಾಂಗ್ ಅನ್ನು ಬಿಡುಗಡೆಗೊಳಿಸಿದೆ. ಇದು ಈ ಹಿಂದೆಯೇ ಬಿಡುಗಡೆಯಾಗಿ ಭಾರೀ ಕ್ರೇಜ್ ಸೃಷ್ಟಿಸಿದ್ದ ‘ಯಾಕೆ ಅಂತ ಗೊತ್ತಿಲ್ಲ ಕಂಡ್ರಿ, ನನ್ನನ್ನು ನೋಡಿ ನಕ್ಬಿಟ್ಲು ಸುಂದ್ರಿ’ ಎಂಬ ಹಾಡಿನ ವೀಡಿಯೋ. ಈ ಹಾಡು ಆರಂಭದಲ್ಲಿ ಬಿಡುಗಡೆಯಾದಾಗಲೇ ತಾಜಾ ಸಾಹಿತ್ಯ ಮತ್ತು ವಿಶಿಷ್ಟ ಸೌಂಡಿಂಗ್‍ನ ಸಂಗೀತ ಸಂಯೋಜನೆಯ ಮೂಲಕ ಹಿಟ್ ಆಗಿತ್ತು. ಇದೀಗ ಹೊರ ಬಂದಿರೋ ವೀಡಿಯೋ ಸಾಂಗ್ ಕೂಡಾ ಮತ್ತೊಂದು ಸಲ ಪ್ರೇಕ್ಷಕರನ್ನು ತಾಕಿದೆ. ಈ ಮೂಲಕವೇ ಬಿಡುಗಡೆಯ ಕ್ಷಣಗಳನ್ನು ಮತ್ತಷ್ಟು ನಿರೀಕ್ಷೆಗಳಿಂದ ಶೃಂಗರಿಸುವಲ್ಲಿ ಚಿತ್ರ ತಂಡ ಗೆದ್ದಿದೆ.

    ಇದು ಕ್ರಿಶ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಚಿತ್ರ. ಇದು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದೇ ಚೆಂದದ ಹಾಡುಗಳ ಮೂಲಕ. ಒಂದಕ್ಕಿಂತ ಒಂದು ಚೆಂದ ಎಂಬಂಥಾ ಹಾಡುಗಳು ವಿಶಿಷ್ಟ ಸಾಹಿತ್ಯದ ಮೂಲಕವೂ ಗಮನ ಸೆಳೆದಿದ್ದವು. ಆ ಸಾಲಿನಲ್ಲಿ ಹಸಿದಾ ಶಿಖನು ಎಂಬ ಹಾಡೂ ಕೂಡಾ ಸೇರಿಕೊಂಡಿದೆ. ಇದೀಗ ಬಂದಿರೋ ಈ ಲಿರಿಕಲ್ ವಿಡಿಯೋ ದ್ಯಷ್ಯಗಳಂತೂ ನೋಡುಗರನ್ನೆಲ್ಲ ಆವರಿಸಿಕೊಳ್ಳುವಂತೆ ಮೂಡಿ ಬಂದಿದೆ. ಇದರಲ್ಲಿ ನಾಯಕ ಬಾಲು ನಾಗೇಂದ್ರ ಮತ್ತು ನಾಯಕಿ ಸಂಗೀತಾ ಭಟ್ ಚೆಂದದ ಲುಕ್ಕುಗಳಲ್ಲಿ ಕಂಗೊಳಿಸಿದ್ದಾರೆ. ಈ ಮೂಲಕ ಕಪಟ ನಾಟಕ ಪಾತ್ರಧಾರಿಯ ಹಾಡುಗಳ ಹವಾ ಅಡೆತಡೆಯಿಲ್ಲದೆ ಮುಂದುವರೆದಿದೆ.

    ಇದು ಕ್ರಿಶ್ ನಿರ್ದೇಶನದ ಮೊದಲ ಚಿತ್ರ. ಇದರ ಹಿಂದೆ ಶಶಕ್ತವಾದ ಪ್ರತಿಭಾವಂತರ ತಂಡವಿದೆ. ಈ ಹಿಂದೆ ‘ಕಡ್ಡಿಪುಡಿ’ ಮುಂತಾದ ಚಿತ್ರಗಳಲ್ಲಿ ವಿಲನ್ ರೋಲ್ ಮಾಡುತ್ತಲೇ ‘ಹುಲಿರಾಯ’ ಚಿತ್ರದ ಮೂಲಕ ನಾಯಕನಾಗಿ ಅಬ್ಬರಿಸಿದ್ದ ಬಾಲು ನಾಗೇಂದ್ರ ಈ ಸಿನಿಮಾ ನಾಯಕ. ಆಟೋ ಚಾಲಕನೊಬ್ಬನ ಬದುಕಿನ ಹಿನ್ನೆಲೆಯಲ್ಲಿ ಹಾಡುಗಳಷ್ಟೇ ಡಿಫರೆಂಟಾದ ಕಥೆಯನ್ನು ಕಪಟನಾಟಕ ಪಾತ್ರಧಾರಿಯ ಮೂಲಕ ನಿರ್ದೇಶಕ ಕ್ರಿಶ್ ಹೇಳಲಣಿಯಾಗಿದ್ದಾರೆ. ಸಂಗೀತಾ ಭಟ್ ಬಹುಕಾಲದ ನಂತರ ಕಪಟನಾಟಕ ಪಾತ್ರಧಾರಿಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಚಾಣಕ್ಯ, ಅನಿರುದ್ಧ್ ಶಾಸ್ತ್ರಿ ಮತ್ತು ವೇಣು ಹಸ್ರಾಳಿ ಇದರ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದರೆ, ಪರಮೇಶ್ ಛಾಯಾಗ್ರಹಣ ಮತ್ತು ಶ್ರೀಕಾಂತ್ ಸಂಕಲನ ಈ ಚಿತ್ರಕ್ಕಿದೆ. ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿರೋ ಈ ಚಿತ್ರ ನವೆಂಬರ್ 8ರಂದು ತೆರೆಗಾಣುತ್ತಿದೆ.

  • ಟ್ರೇಲರ್ ಮೂಲಕ ನಡುಕ ಹುಟ್ಟಿಸಿದ ಕಪಟನಾಟಕ ಪಾತ್ರಧಾರಿ!

    ಟ್ರೇಲರ್ ಮೂಲಕ ನಡುಕ ಹುಟ್ಟಿಸಿದ ಕಪಟನಾಟಕ ಪಾತ್ರಧಾರಿ!

    ಬೆಂಗಳೂರು: ಬಾಲು ನಾಗೇಂದ್ರ ನಾಯಕನಾಗಿ ನಟಿಸಿರೋ ‘ಕಪಟನಾಟಕ’ ಪಾತ್ರಧಾರಿ ಚಿತ್ರ ಒಂದರ ಹಿಂದೊಂದರಂತೆ ಬಿಡುಗಡೆಯಾಗಿದ್ದ ಹಾಡುಗಳೊಂದಿಗೆ ಪ್ರೇಕ್ಷಕರನ್ನು ತಲುಪಿಕೊಂಡಿತ್ತು. ಈ ಕಾರಣದಿಂದಲೇ ಈ ಸಿನಿಮಾ ಸುತ್ತ ಒಂದಷ್ಟು ಕೌತುಕಗಳಿಗೂ ಜೀವ ಬಂದಂತಾಗಿತ್ತು. ಇದೀಗ ಕ್ರಿಶ್ ನಿರ್ದೇಶನದ ‘ಕಪಟನಾಟಕ’ ಪಾತ್ರಧಾರಿಯ ಟ್ರೇಲರ್ ಬಿಡುಗಡೆಯಾಗಿದೆ. ಇದರಲ್ಲಿಯೇ ಪ್ರೇಕ್ಷಕರ ಎಣಿಕೆಯೂ ಮಿಗಿಲಾದ ಕಥೆಯ ಸುಳಿವುಗಳು ಅನಾವರಣಗೊಂಡಿದೆ. ಇದನ್ನೂ ಓದಿ:  ಕಪಟನಾಟಕ ಪಾತ್ರಧಾರಿಯಾಗಿ ಹಾಡಾದ ಹುಲಿರಾಯ!

    ಬಾಲು ನಾಗೇಂದ್ರ ‘ಹುಲಿರಾಯ’ ಚಿತ್ರದ ನಂತರದಲ್ಲಿ ತಮಗೊಪ್ಪುವ ಕಥೆಗಾಗಿ ತೀವ್ರ ಹುಡುಕಾಟ ನಡೆಸಿ, ಬಂದ ಹಲವಾರು ಅವಕಾಶಗಳಲ್ಲಿ ‘ಕಪಟನಾಟಕ’ ಪಾತ್ರಧಾರಿಯನ್ನು ಮಾತ್ರವೇ ಒಪ್ಪಿಕೊಂಡಿದ್ದಾರೆ. ಅಷ್ಟೆಲ್ಲ ಅಳೆದೂ ತೂಗಿ ಅವರು ಈ ಕಥೆಯನ್ನೇ ಏಕೆ ಒಪ್ಪಿಕೊಂಡಿದ್ದಾರೆಂಬುದಕ್ಕೆ ಈ ಟ್ರೇಲರ್‍ನಲ್ಲಿ ಸಾಕ್ಷಿಗಳು ಸಿಕ್ಕಿವೆ. ಸಿಕ್ಕ ಕೆಲಸಗಳನ್ನೆಲ್ಲ ಬಿಡುತ್ತಾ, ಆಟೋ ಡ್ರೈವರ್ ಆಗಿ ಸೇರಿಕೊಳ್ಳೋ ನಾಯಕನಿಗೆ ಹಬ್ಬಿಕೊಳ್ಳುವ ಪ್ರೀತಿ, ಆತನಿಗೆ ಸುತ್ತಿಕೊಳ್ಳುವ ಒಂದು ಭೀಕರ ಕ್ರೈಂ ಮತ್ತು ಅದರ ಸುತ್ತಾ ಹರಡಿಕೊಳ್ಳುವ ಹಾರರ್ ವೃತ್ತಾಂತದ ಸುತ್ತಾ ಮಜವಾದ ಕಥೆಯನ್ನು ಈ ಚಿತ್ರ ಒಳಗೊಂಡಿದೆ ಎಂಬುದು ಈ ಟ್ರೇಲರ್ ಮೂಲಕವೇ ಸಾಬೀತಾಗಿದೆ. ಇದನ್ನೂ ಓದಿ: ಕಪಟನಾಟಕ ಪಾತ್ರಧಾರಿಯ ವಿಶೇಷ ಲಿರಿಕಲ್ ವೀಡಿಯೋ!

    ಈ ಚಿತ್ರದ ಶೀರ್ಷಿಕೆ, ಹಾಡುಗಳನ್ನು ಕೇಳಿದ ಪ್ರೇಕ್ಷಕರಿಗೆ ಇದರಲ್ಲೇನೋ ಇದೆ ಎಂಬಂಥಾ ಭರವಸೆ ಮೂಡಿಕೊಂಡಿತ್ತು. ಆದರೀಗ ಈ ಟ್ರೇಲರ್ ನೋಡಿದವರೆಲ್ಲ ತಾವು ಎಣಿಸಿದ್ದಕ್ಕಿಂತಲೂ ಮಜವಾದ ಕಥೆ ಈ ಸಿನಿಮಾದಲ್ಲಿರೋದು ಖಾತರಿಯಾಗಿದೆ. ಬಾಲು ನಾಗೇಂದ್ರ ಈ ಹಿಂದೆ ‘ಹುಲಿರಾಯ’ ಚಿತ್ರದಲ್ಲಿ ವಿಶಿಷ್ಟವಾದ ಪಾತ್ರದ ಮೂಲಕ ನಾಯಕನಾಗಿ ಮನಗೆದ್ದಿದ್ದವರು. ಅವರು ‘ಕಪಟನಾಟಕ’ ಪಾತ್ರಧಾರಿಯಾಗಿ ಅದಕ್ಕಿಂತಲೂ ಮಜವಾದ ಪಾತ್ರ ಮಾಡಿರೋದಕ್ಕೂ ಈ ಟ್ರೇಲರ್ ಸಾಕ್ಷಿಯಂತೆ ಮೂಡಿ ಬಂದಿದೆ. ಒಟ್ಟಾರೆಯಾಗಿ ಇತ್ತೀಚಿನ ದಿನಗಳಲ್ಲಿ ಬಂದಿರೋ ಭರವಸೆಯ ಟ್ರೇಲರುಗಳಲ್ಲಿ ‘ಕಪಟನಾಟಕ’ ಪಾತ್ರಧಾರಿಯ ಟ್ರೇಲರ್ ಕೂಡಾ ಒಂದೆಂದು ಪ್ರೇಕ್ಷಕರು ಪರಿಗಣಿಸಿದ್ದಾರೆ.