ಚೆನ್ನೈ: ಕನ್ಯಾಕುಮಾರಿ (Kanyakumari) ಕರಾವಳಿಯಲ್ಲಿರುವ ವಿವೇಕಾನಂದ ರಾಕ್ ಸ್ಮಾರಕ ಮತ್ತು 133 ಅಡಿ ಎತ್ತರದ ತಿರುವಳ್ಳುವರ್ ಪ್ರತಿಮೆಯನ್ನು ಸಂಪರ್ಕಿಸುವ ಗಾಜಿನ ಸೇತುವೆಯನ್ನು (Glass Bridge) ತಮಿಳುನಾಡು (Tamil Nadu) ಸಿಎಂ ಎಂ.ಕೆ ಸ್ಟಾಲಿನ್ (M.K Stalin) ಅವರು ಸೋಮವಾರ ಸಂಜೆ ಉದ್ಘಾಟಿಸಿದ್ದಾರೆ.
ಈ ಗಾಜಿನ ಸೇತುವೆಯು ದೇಶದಲ್ಲೇ ಮೊದಲನೆಯದಾಗಿದೆ. ಪ್ರವಾಸಿಗರಿಗೆ ಇಬ್ಬರು ಮಹಾನ್ ವ್ಯಕ್ತಿಗಳ ಸ್ಮಾರಕಗಳು ಮತ್ತು ಸುತ್ತಲೂ ಸಮುದ್ರದ ವೀಕ್ಷಣೆಗಾಗಿ ಇದನ್ನು ನಿರ್ಮಿಸಲಾಗಿದೆ. ಅಲ್ಲದೇ ಈ ಸೇತುವೆ ಸಮುದ್ರದ ಮೇಲೆ ನಡೆಯುವ ರೋಮಾಂಚಕ ಅನುಭವವನ್ನು ನೀಡುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ತಿರುವಳ್ಳುವರ್ ಪ್ರತಿಮೆ ಅನಾವರಣದ ಬೆಳ್ಳಿಹಬ್ಬದ ಸಂದರ್ಭದಲ್ಲಿ ರಾಜ್ಯ ಸರ್ಕಾರವು 37 ಕೋಟಿ ರೂ. ವೆಚ್ಚದಲ್ಲಿ ಈ ಸೇತುವೆಯನ್ನು ನಿರ್ಮಿಸಿದೆ. ಬೌಸ್ಟ್ರಿಂಗ್ ಕಮಾನನ್ನು ಗಾಜಿನ ಸೇತುವೆಗೆ ಲವಣಯುಕ್ತ ಗಾಳಿಯನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಸೇತುವೆ 77 ಮೀಟರ್ ಉದ್ದ ಮತ್ತು 10 ಮೀಟರ್ ಅಗಲವಿದೆ.
ಉದ್ಘಾಟನೆಯ ನಂತರ ಎಂ.ಕೆ ಸ್ಟಾಲಿನ್ ಹಾಗೂ ಡಿಸಿಎಂ ಉದಯನಿಧಿ ಸ್ಟಾಲಿನ್, ರಾಜ್ಯ ಸಚಿವರು, ಸಂಸದೆ ಕನಿಮೋಳಿ ಮತ್ತು ಹಿರಿಯ ಅಧಿಕಾರಿಗಳು ಸೇತುವೆಯ ಮೇಲೆ ಓಡಾಡಿ ಸಂಭ್ರಮಿಸಿದ್ದಾರೆ. ಬಳಿಕ ತಿರುವಳ್ಳುವರ್ ಪ್ರತಿಮೆ ಬಳಿ ಲೇಸರ್ ಲೈಟ್ ಶೋ ನಡೆಯಿತು.
ಚೆನ್ನೈ: ಜಾತ್ಯಾತೀತತೆ ಎನ್ನುವುದು ಯುರೋಪಿಯನ್ ದೇಶದ ಪರಿಕಲ್ಪನೆಯಾಗಿದೆ. ಭಾರತದಲ್ಲಿ ಸೆಕ್ಯುಲರಿಸಂ ಅಗತ್ಯವಿಲ್ಲ ಎಂದು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ (Governer R N Ravi) ಹೇಳಿದ್ದಾರೆ. ಸದ್ಯ ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದ್ದು ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಕನ್ಯಾಕುಮಾರಿಯ (Kanyakumari) ತಿರುವಟ್ಟಾರ್‌ನಲ್ಲಿ ನಡೆದ ಹಿಂದೂ ಧರ್ಮದ ವಿದ್ಯಾಪೀಠಂನ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಜಾತ್ಯಾತೀತತೆ (Secularism) ಎನ್ನುವುದು ಪಶ್ಚಿಮದ ದೂರದ ದೇಶದಿಂದ ಬಂದ ಪರಿಕಲ್ಪನೆಯಾಗಿದ್ದು, ಜಾತ್ಯಾತೀತತೆಗೆ ಭಾರತದಲ್ಲಿ ನೆಲೆಯಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: MUDA Case| ಮಂಗಳವಾರ ಸಿಎಂಗೆ ಬಿಗ್ ಡೇ – ತೀರ್ಪು ಬೆನ್ನಲ್ಲೇ ನಡೆಯಲಿದೆ CLP ಸಭೆ
ಯೂರೋಪಿನಲ್ಲಿ (Europe) ಚರ್ಚ್ ಹಾಗೂ ರಾಜರ ನಡುವೆ ಜಗಳ ಉಂಟಾದಾಗ ಜಾತ್ಯಾತೀತತೆ ಎಂಬ ಪರಿಕಲ್ಪನೆ ಹುಟ್ಟಿಕೊಂಡಿದೆ. ಭಾರತದಲ್ಲಿ ಧರ್ಮ ಎಂಬ ಪರಿಕಲ್ಪನೆ ಇರಬೇಕಾದರೆ ಜಾತ್ಯಾತೀತತೆ ಅಗತ್ಯವಿಲ್ಲ. ಅದು ಯೂರೋಪಿನಲ್ಲಿಯೇ ಇರಲಿ. ಈ ದೇಶದ ಜನರ ಮೇಲೆ ಬಹಳಷ್ಟು ವಂಚನೆ ಮಾಡಲಾಗಿದೆ. ಅದರಲ್ಲಿ ಈ ಜಾತ್ಯಾತೀತತೆಯು ಒಂದು. ಇದು ಜನರಿಗೆ ತಪ್ಪು ಕಲ್ಪನೆಯನ್ನು ನೀಡುತ್ತಿದೆ ಎಂದರು.
ಈ ಹೇಳಿಕೆ ಬೆನ್ನಲ್ಲೇ ವಿಪಕ್ಷಗಳಿಂದ ಭಾರೀ ವಿವಾದ ವ್ಯಕ್ತವಾಗಿದೆ. ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾದ (Communist Party Of India) ನಾಯಕಿ ಬೃಂದಾ ಕಾರಟ್ (Brinda Karat) ಮಾತನಾಡಿ, ರಾಜ್ಯಪಾಲರಿಗೆ ಸಂವಿಧಾನದ ಮೌಲ್ಯ ಏನು ಎಂದು ತಿಳಿದಿಲ್ಲ. ಸಂವಿಧಾನವು ವಿದೇಶಿ ಪರಿಕಲ್ಪನೆ ಎಂದು ಹೇಳುತ್ತಾರೆ. ಸಂವಿಧಾನದಲ್ಲಿ ನಂಬಿಕೆಯಿಲ್ಲದವರು ಇದನ್ನೆಲ್ಲ ಪ್ರಶ್ನಿಸುತ್ತಾ ರಾಜ್ಯಪಾಲರ ಸ್ಥಾನದಲ್ಲಿದ್ದಾರೆ ಎಂದು ಟೀಕಿಸಿದ್ದಾರೆ.
— Manickam Tagore .B????????மாணிக்கம் தாகூர்.ப (@manickamtagore) September 23, 2024
ತಮಿಳುನಾಡು ಕಾಂಗ್ರೆಸ್ ಸಂಸದ ಮಣಿಕ್ಕಂ ಟಾಗೋರ್ (Manickam Tagore) ತಮ್ಮ ಎಕ್ಸ್ ಖಾತೆಯಲ್ಲಿ ರಾಜ್ಯಪಾಲರು ಸಂವಿಧಾನಕ್ಕೆ ವಿರುದ್ಧವಾದ ಹೇಳಿಕೆಯನ್ನು ನೀಡಿದ್ದಾರೆ. ಜಾತ್ಯಾತೀತತೆ ವಿದೇಶಗಳಲ್ಲಿ ವಿಭಿನ್ನವಾಗಿರಬಹುದು. ಭಾರತದಲ್ಲಿ ನಾವು ಪ್ರತಿಯೊಂದು ಧರ್ಮವನ್ನು, ಅವರ ಆಚರಣೆಗಳನ್ನು ಹಾಗೂ ಅವರ ಸಂಪ್ರದಾಯಗಳನ್ನು ಗೌರವಿಸುತ್ತೇವೆ. ಇದು ಭಾರತದಲ್ಲಿರುವ ಜಾತ್ಯಾತೀತದ ಕಲ್ಪನೆಯಾಗಿದೆ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.ಇದನ್ನೂ ಓದಿ: ‘ಬಿಗ್ ಬಾಸ್ 11’ರಲ್ಲಿ ಸುದೀಪ್ ಕಾಸ್ಟ್ಯೂಮ್ ಹೇಗಿರುತ್ತೆ?: ಸುಳಿವು ಕೊಟ್ಟ ಕಿಚ್ಚ
ಸ್ವಾಮಿ ವಿವೇಕಾನಂದರ ಅಧ್ಯಾತ್ಮದ ಪ್ರಿಯ ತಾಣ ಕನ್ಯಾಕುಮಾರಿಯಲ್ಲಿ (ವಿವೇಕಾನಂದ ರಾಕ್ ಸ್ಮಾರಕ) ಪ್ರಧಾನಿ ಮೋದಿ ಧ್ಯಾನಸ್ಥರಾಗಿದ್ದಾರೆ. ಲೋಕಸಭಾ ಚುನಾವಣಾ ಪ್ರಚಾರ ಒತ್ತಡಗಳಿಂದ ಬಿಡುವು ಪಡೆದು ಪ್ರಕೃತಿಯ ಪ್ರಶಾಂತ ತಾಣದಲ್ಲಿ ಆಧ್ಯಾತ್ಮಿಕ ಅನುಭೂತಿ ಪಡೆಯುತ್ತಿದ್ದಾರೆ.
ಕೈಯಲ್ಲಿ ರುದ್ರಾಕ್ಷಿ, ಹಣೆಯಲ್ಲಿ ವಿಭೂತಿ.. ಖಾವಿ ಧರಿಸಿ ಸಂತನಂತೆ ಕಂಡ ಮೋದಿ.
ಚೆನ್ನೈ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕನ್ಯಾಕುಮಾರಿಯಲ್ಲಿರುವ (Kanyakumari) ವಿವೇಕಾನಂದ ರಾಕ್ ಸ್ಮಾರಕದಲ್ಲಿ ( Vivekananda Rock Memorial) ಇಂದಿನಿಂದ ಎರಡು ದಿನಗಳ ಧ್ಯಾನ ಆರಂಭಿಸಿದ್ದಾರೆ. ಧ್ಯಾನಕ್ಕೂ ಮುನ್ನ ಮೋದಿಯವರು ಭಗವತಿ ಅಮ್ಮನ ದೇಗುಲಕ್ಕೆ ಭೇಟಿ ನೀಡಿದರು.
ಪ್ರಧಾನಮಂತ್ರಿಯವರು ಮೇ 30 ರ ಸಂಜೆಯಿಂದ (ಇಂದು) ಜೂನ್ 1 ರ ಸಂಜೆಯವರೆಗೆ ಸುಮಾರು 45 ಗಂಟೆಗಳ ಕಾಲ ಆಧ್ಯಾತ್ಮಿಕ ಪ್ರವಾಸದಲ್ಲಿರಲಿದ್ದಾರೆ. ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಸ್ಥಳದಲ್ಲಿಯೇ ಧ್ಯಾನ ಮಂಟಪದಲ್ಲಿ ಅವರು ಹಗಲು-ರಾತ್ರಿ ಧ್ಯಾನ ಮಾಡುತ್ತಾರೆ.
#WATCH | Prime Minister Narendra Modi arrives at Vivekananda Rock Memorial in Kanyakumari, Tamil Nadu
He will meditate from 30th May evening to 1st June evening.
PM Modi will meditate day and night at the same place where Swami Vivekanand did meditation, at the Dhyan… pic.twitter.com/7QfKkvRLLN
ಇಂದು ಸಂಜೆ ತಿರುವನಂತಪುರದಿಂದ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಮೋದಿ ನಂತರ ಭಗವತಿ ಅಮ್ಮನವರ ದೇವಸ್ಥಾನದಲ್ಲಿ (Bhagavathy Amman Temple) ಪೂಜೆ ಸಲ್ಲಿಸಿದರು. ಧೋತಿ ಮತ್ತು ಬಿಳಿ ಶಾಲು ಧರಿಸಿದ ಮೋದಿ ಅವರು ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ಪ್ರದಕ್ಷಿಣೆ ಹಾಕಿದರು. ಈ ವೇಳೆ ಅರ್ಚಕರು ವಿಶೇಷ ‘ಅರತಿ’ಯನ್ನು ನಡೆಸಿ, ಪ್ರಧಾನಿಯವರಿಗೆ ದೇವರ ಪ್ರಸಾದವನ್ನು ನೀಡಿದರು. ಅಲ್ಲದೇ ಮೋದಿಯವರಿಗೆ ಶಾಲು ಮತ್ತು ದೇಗುಲದ ಪ್ರಧಾನ ದೇವರ ಫೋಟೋವನ್ನು ನೀಡಲಾಯಿತು.
#WATCH | Prime Minister Narendra Modi offers prayer at Bhagavathy Amman Temple in Kanyakumari, Tamil Nadu
He will meditate from 30th May evening to 1st June evening.
PM Modi will meditate day and night at the same place where Swami Vivekanand did meditation, at the Dhyan… pic.twitter.com/xKqZpnuQbV
ಇದಾದ ಬಳಿಕ ದೋಣಿಯ ಮೂಲಕ ರಾಕ್ ಸ್ಮಾರಕವನ್ನು ತಲುಪಿದರು. ಧ್ಯಾನ ಪ್ರಾರಂಭಕ್ಕೂ ಮುನ್ನ ಮೋದಿಯವರು ಸ್ಮಾರಕವನ್ನು ಸುತ್ತುವರಿದಿರುವ ಸಮುದ್ರದ ರುದ್ರರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಂಡರು. ಬಳಿಕ ಜೂನ್ 1 ರವರೆಗೆ ನಡೆಯಲಿರುವ ಧ್ಯಾನವನ್ನು ಪ್ರಾರಂಭಿಸಿದರು. ಧ್ಯಾನದ ಬಳಿಕ ಅಂದರೆ ಜೂನ್ 1 ರಂದು ಮೋದಿಯವರು ಸ್ಮಾರಕದ ಪಕ್ಕದಲ್ಲಿರುವ ತಿರುವಳ್ಳುವರ್ ಪ್ರತಿಮೆಗೆ ಭೇಟಿ ನೀಡುವ ಸಾಧ್ಯತೆಯಿದೆ.
ಸ್ಮಾರಕದ ಆವರಣದಲ್ಲಿ ಭದ್ರತಾ ಸಿಬ್ಬಂದಿ ಜಮಾಯಿಸಿದ್ದರೆ, ಇಡೀ ಕನ್ಯಾಕುಮಾರಿ ಜಿಲ್ಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸುಮಾರು 2,000 ಮಂದಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜೊತೆಗೆ ಕರಾವಳಿ ಕಾವಲು ಪಡೆ ಮತ್ತು ನೌಕಾಪಡೆಯಿಂದ ಹೆಚ್ಚಿನ ನಿಗಾ ವಹಿಸಲಾಗಿದೆ. ಇತ್ತ ಎರಡು ದಿನಗಳ ಕಾಲ ಮೀನುಗಾರಿಕೆಗೂ ನಿಷೇಧ ಹೇರಲಾಗಿದೆ.
– 2 ದಿನ ಧ್ಯಾನ ಮಾಡಲಿದ್ದಾರೆ 73 ವರ್ಷದ ಪ್ರಧಾನಿ – 2019ರ ಚುನಾವಣೆಯಲ್ಲಿ 145 ಕಾರ್ಯಕ್ರಮದಲ್ಲಿ ಭಾಗಿ – ಅತಿ ಹೆಚ್ಚು ಕ್ಷೇತ್ರಗಳಿರುವ ರಾಜ್ಯದಲ್ಲಿ ಹೆಚ್ಚು ಕಾರ್ಯಕ್ರಮ
ನವದೆಹಲಿ: ತಮಿಳುನಾಡಿನ ಕನ್ಯಾಕುಮಾರಿಯಿಂದ (Kanyakumari) ಲೋಕಸಭಾ ಚುನಾವಣೆ (Lok Sabha Election) ಪ್ರಚಾರ ಆರಂಭಿಸಿದ ಮೋದಿ (PM Narendra Modi) ಈಗ ಅದೇ ಕನ್ಯಾಕುಮಾರಿಯಲ್ಲೇ ಎರಡು ದಿನ ಧ್ಯಾನ ಮಾಡುವ ಮೂಲಕ ಈ ಬಾರಿಯ ಚುನಾವಣೆಯನ್ನು ಮುಗಿಸುತ್ತಿದ್ದಾರೆ.
ಹೌದು. ಲೋಕಸಭಾ ಚುನಾವಣೆಗೆ ಮಾರ್ಚ್ ಮೊದಲ ವಾರದಿಂದಲೇ ಮೋದಿ ಪ್ರಚಾರ ಆರಂಭಿಸಿದ್ದರೂ ಚುನಾವಣಾ ಆಯೋಗ (Election Commission) ಮಾರ್ಚ್ 16 ರಂದು ಚುನಾವಣಾ ವೇಳಾಪಟ್ಟಿ ಪ್ರಕಟಿಸಿ ದೇಶಾದ್ಯಂತ ನೀತಿ ಸಂಹಿತೆ ಜಾರಿ ಮಾಡಿತ್ತು. ಅಂದೇ ಮೋದಿ ಅವರ ಕನ್ಯಾಕುಮಾರಿಯ ಪ್ರಚಾರ ಸಭೆ ನಿಗದಿಯಾಗಿತ್ತು. ಕನ್ಯಾಕುಮಾರಿಯಲ್ಲಿ ಪ್ರಚಾರ ಆರಂಭಿಸಿದ ಮೋದಿ ಮೇ 30 ರಂದು ಪಂಜಾಬ್‌ನ ಹೋಶಿಯಾಪುರ್ ಸಮಾವೇಶದಲ್ಲಿ ಈ ಚುನಾವಣೆಯ ಕೊನೆಯ ಪ್ರಚಾರ ಭಾಷಣ ಮಾಡಿದರು.
7 ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಸುದೀರ್ಘ ಪ್ರಚಾರ ನಡೆಸಿದ 73 ವರ್ಷದ ಮೋದಿ ಎರಡು ದಿನ ಕನ್ಯಾಕುಮಾರಿ ವಿವೇಕಾನಂದ ಸ್ಮಾರಕದಲ್ಲಿ (Vivekananda Rock Memorial) 45 ಗಂಟೆಗಳ ಕಾಲ ಧ್ಯಾನ ಮಾಡಲಿದ್ದಾರೆ. ಜೂನ್ 1 ರಂದು ಮಧ್ಯಾಹ್ನ 3 ಗಂಟೆಯವರೆಗೆ ಮೋದಿಯವರು ಕನ್ಯಾಕುಮಾರಿಯಲ್ಲೇ ಇರಲಿದ್ದಾರೆ ಎಂದು ವರದಿಯಾಗಿದೆ.
ಚುನಾವಣಾ ವೇಳಾಪಟ್ಟಿ ಪ್ರಕಟವಾದ ನಂತರ ಮೋದಿ 76 ದಿನಗಳಲ್ಲಿ ಒಟ್ಟು 206 ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಈ ಪೈಕಿ ಮೂರು ದಿನ ಐದು ಕಾರ್ಯಕ್ರಮ, 22 ದಿನ ನಾಲ್ಕು ಕಾರ್ಯಕ್ರಮದಲ್ಲಿ ಮೋದಿ ಭಾಗಿಯಾಗಿದ್ದು ಇದೆ. ಚುನಾವಣಾ ಅವಧಿಯಲ್ಲಿ ಒಟ್ಟು 80 ಸಂದರ್ಶನಗಳನ್ನು ನೀಡಿದ್ದಾರೆ. ಮತದಾನ ಆರಂಭವಾದಾಗಿನಿಂದ ಸರಾಸರಿ ದಿನಕ್ಕೆ ಒಂದಕ್ಕಿಂತ ಹೆಚ್ಚು ಸಂದರ್ಶನ ಕೊಟ್ಟಿದ್ದಾರೆ. ಇದನ್ನೂ ಓದಿ: ಕನ್ಯಾಕುಮಾರಿ ತಲುಪಿದ ಪ್ರಧಾನಿ ನರೇಂದ್ರ ಮೋದಿ
2019 ರ ಚುನಾವಣೆಯಲ್ಲಿ ಪ್ರಧಾನಿ ಅವರು ಸುಮಾರು 145 ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ ಈ ಬಾರಿ ಈ ದಾಖಲೆಯನ್ನು ಮೀರಿ ಮೋದಿ ಭರ್ಜರಿಯಾಗಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ.
4 ರಾಜ್ಯಗಳಲ್ಲಿ ಹೆಚ್ಚು ಕಾರ್ಯಕ್ರಮ
ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳಿರುವ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರದಲ್ಲಿ ಮೋದಿ ಅವರ ಹೆಚ್ಚಿನ ಕಾರ್ಯಕ್ರಮ ನಿಗದಿಯಾಗಿತ್ತು. ಉತ್ತರ ಪ್ರದೇಶದಲ್ಲಿ ಬರೋಬ್ಬರಿ 31 ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಇಲ್ಲಿ 80 ಲೋಕಸಭಾ ಕ್ಷೇತ್ರಗಳಿದ್ದು 2019 ರ ಚುನಾವಣೆಯಲ್ಲಿ 64 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಬಾರಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಬಿಜೆಪಿ ಹಾಕಿಕೊಂಡಿದೆ. ಬಿಹಾರ 20, ಮಹಾರಾಷ್ಟ್ರ 19, ಪಶ್ಚಿಮ ಬಂಗಾಳದೊಂದಿಗೆ 18 ಕಾರ್ಯಕ್ರಮಗಳಲ್ಲಿ ಮೋದಿ ಪಾಲ್ಗೊಂಡಿದ್ದರು.
ಒಡಿಶಾದಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ ಕಾರಣ 10 ರ‍್ಯಾಲಿಯಲ್ಲಿ ಭಾಗವಹಿಸಿ ಪುರಿಯಲ್ಲಿ ದೊಡ್ಡ ರೋಡ್ ಶೋ ನಡೆಸಿದ್ದಾರೆ. ಮಧ್ಯಪ್ರದೇಶ 10, ಜಾರ್ಖಂಡ್ 7, ರಾಜಸ್ಥಾನ 5 ಮತ್ತು ಛತ್ತೀಸ್‌ಗಢದಲ್ಲಿ 4 ಮೋದಿ ಕಾರ್ಯಕ್ರಮ ನಿಗದಿಯಾಗಿತ್ತು. ಇದನ್ನೂ ಓದಿ: ಕುಟುಂಬದ ಜೊತೆ ವಿಶ್ರಾಂತಿಗೆ ತೆರಳಿದ ಹೆಚ್‌ಡಿಕೆ
ಮೋದಿ ಅವರು ಕರ್ನಾಟಕ ಮತ್ತು ತೆಲಂಗಾಣದಲ್ಲಿ ತಲಾ 11 ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಂಗಳೂರಿನಲ್ಲಿ ದೊಡ್ಡ ರೋಡ್ ಶೋ ನಡೆಸಿ ಮೋದಿ ಮತಯಾಚನೆ ನಡೆಸಿದ್ದರು. ತಮಿಳುನಾಡಿನಲ್ಲಿ 7 ಸೇರಿದಂತೆ ಐದು ದಕ್ಷಿಣದ ರಾಜ್ಯಗಳಲ್ಲಿ 35 ಚುನಾವಣಾ ಕಾರ್ಯಕ್ರಮಗಳಲ್ಲಿ ಮೋದಿ ಭಾಗವಹಿಸಿದ್ದರು.
ಪ್ರಧಾನಿಯವರ ತವರು ರಾಜ್ಯ ಗುಜರಾತ್‌ನಲ್ಲಿ 5, ಪಂಜಾಬ್‌ನಲ್ಲಿ 5, ಹರ್ಯಾಣದಲ್ಲಿ 3 ಕಾರ್ಯಕ್ರಮ, ದೆಹಲಿ, ಹಿಮಾಚಲ ಪ್ರದೇಶ, ಉತ್ತರಾಖಂಡದಲ್ಲಿ ತಲಾ 2 ರ‍್ಯಾಲಿ ನಡೆಸಿದರು. ಈಶಾನ್ಯ ರಾಜ್ಯಗಳಲ್ಲಿ 2 ಜಮ್ಮು ಕಾಶ್ಮೀರದಲ್ಲಿ ಒಂದು ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಂಡಿದ್ದರು.
– 1991 ರಲ್ಲಿ ಇದೇ ಸ್ಥಳದಿಂದ ನಡೆದಿತ್ತು ‘ಏಕತಾ ಯಾತ್ರೆ’ – ಸ್ವಾಮಿ ವಿವೇಕಾನಂದ ಧ್ಯಾನ ಮಾಡಿದ ಸ್ಥಳದಲ್ಲೇ ಮೋದಿ ಧ್ಯಾನ
ನವದೆಹಲಿ: ಲೋಕಸಭಾ ಚುನಾವಣೆಗೆ (Lok Sabha Elections 2024) ಬಿರುಸಿನ ಪ್ರಚಾರವನ್ನು ಪ್ರಧಾನಿ ಮೋದಿ (Narendra Modi) ಅಂತ್ಯಗೊಳಿಸಿದ್ದಾರೆ. ಕನ್ಯಾಕುಮಾರಿಯಲ್ಲಿ (Kanyakumari) ಇಂದಿನಿಂದ 2 ದಿನಗಳ ಕಾಲ ಧ್ಯಾನ ಮಾಡಲಿದ್ದಾರೆ. ಈ ಹೊತ್ತಿನಲ್ಲೇ ಮೋದಿ ಅವರ 33 ವರ್ಷಗಳ ಹಿಂದಿನ ಫೋಟೊ ವೈರಲ್ ಆಗಿದೆ.
ಕನ್ಯಾಕುಮಾರಿಯ ವಿವೇಕಾನಂದ ಸ್ಮಾರಕದ ಬಳಿ ಧ್ಯಾನ ಪೀಠಂನಲ್ಲಿ ಪ್ರಧಾನಿ ಮೋದಿ ಅವರು ಇಂದಿನಿಂದ 2 ದಿನ ಧ್ಯಾನ ಮಾಡಲಿದ್ದಾರೆ. ಅದಕ್ಕಾಗಿ ಪ್ರಧಾನಿ ದಕ್ಷಿಣ ಭಾರತಕ್ಕೆ ಭೇಟಿ ನೀಡುವ ಮುನ್ನವೇ ಅವರ 33 ವರ್ಷಗಳ ಹಳೆಯ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಕನ್ಯಾಕುಮಾರಿಯಲ್ಲಿನ ಮೋದಿ ಧ್ಯಾನಕ್ಕೆ ದೀದಿ ಕಟು ಟೀಕೆ
ಅದು, 1991 ರ ಡಿಸೆಂಬರ್ 11 ರಂದು ತೆಗೆದ ಫೋಟೊ. ಕನ್ಯಾಕುಮಾರಿಯಲ್ಲಿರುವ ಐಕಾನಿಕ್ ವಿವೇಕಾನಂದ ರಾಕ್ ಮೆಮೋರಿಯಲ್‌ನಿಂದ ಕಾಶ್ಮೀರದ ವರೆಗೆ ‘ಏಕತಾ ಯಾತ್ರೆ’ ಕೈಗೊಳ್ಳಲಾಗಿತ್ತು. ಆಗ ತೆಗೆದ ಫೋಟೊ ಇದು.
ಈಗ ವೈರಲ್ ಆಗಿರುವ ಚಿತ್ರದಲ್ಲಿ, ನರೇಂದ್ರ ಮೋದಿ ಮತ್ತು ಪಕ್ಷದ ಹಿರಿಯ ನಾಯಕ ಡಾ. ಮುರಳಿ ಮನೋಹರ್ ಜೋಶಿ ಸೇರಿದಂತೆ ಎಲ್ಲಾ ‘ಏಕತಾ ಯಾತ್ರಿಗಳು’ ಸ್ವಾಮಿ ವಿವೇಕಾನಂದರ ಪ್ರತಿಮೆಯಲ್ಲಿ ಗೌರವ ಸಲ್ಲಿಸುತ್ತಿರುವುದನ್ನು ಕಾಣಬಹುದು. ಇದನ್ನೂ ಓದಿ: ಎನ್‌ಡಿಎ ಅಧಿಕಾರಕ್ಕೆ ಬಂದ್ರೆ ಜೂನ್ 9 ರಂದು ಮೋದಿ ಪ್ರಮಾಣ ವಚನ!
ಏಕತಾ ಯಾತ್ರೆಯನ್ನು 1991 ರ ಡಿಸೆಂಬರ್‌ನಲ್ಲಿ ಕನ್ಯಾಕುಮಾರಿಯಿಂದ ಪ್ರಾರಂಭಿಸಲಾಯಿತು. 1992 ರ ಜನವರಿ 26 ರಂದು ಶ್ರೀನಗರದಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವುದರೊಂದಿಗೆ ಮುಕ್ತಾಯಗೊಳಿಸಲಾಗಿತ್ತು. ಹಿರಿಯ ಬಿಜೆಪಿ ನಾಯಕ ಮುರಳಿ ಮನೋಹರ್ ಜೋಶಿ ಈ ಯಾತ್ರೆಯ ನೇತೃತ್ವ ವಹಿಸಿದ್ದರು. ಆಗ ಬಿಜೆಪಿ ಕಾರ್ಯಕರ್ತರಾಗಿದ್ದ ನರೇಂದ್ರ ಮೋದಿ ಅವರು ಮೆರವಣಿಗೆಯನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಭಾರತವು ಭಯೋತ್ಪಾದಕ ಶಕ್ತಿಗಳ ವಿರುದ್ಧ ದೃಢವಾಗಿ ಮತ್ತು ಒಗ್ಗಟ್ಟಿನಿಂದ ನಿಲ್ಲುತ್ತದೆ ಎಂಬ ಬಲವಾದ ಸಂದೇಶವನ್ನು ಜಗತ್ತಿಗೆ ರವಾನಿಸುವುದು ಯಾತ್ರೆಯ ಗುರಿಯಾಗಿತ್ತು. 14 ರಾಜ್ಯಗಳನ್ನು ಒಳಗೊಂಡು ಈ ಯಾತ್ರೆ ಸಾಗಿತು. ರಾಷ್ಟ್ರೀಯ ಏಕತೆಗೆ ದೇಶದ ಅಚಲ ಬದ್ಧತೆಯನ್ನು ಯಾತ್ರೆ ಪ್ರತಿಧ್ವನಿಸಿತು. ಇದನ್ನೂ ಓದಿ: ಮೋದಿ ಭಾಷಣ ಪ್ರಧಾನಿ ಕಚೇರಿಯ ಘನತೆ ಕ್ಷೀಣಿಸುವಂತೆ ಮಾಡಿದೆ: ಮನಮೋಹನ್ ಸಿಂಗ್ ಆರೋಪ
1892 ರಲ್ಲಿ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಸ್ಥಳವಾದ ಧ್ಯಾನ ಮಂಟಪದಲ್ಲಿ ಈಗ ಪ್ರಧಾನಿ ಮೋದಿ ಅವರು 48 ಗಂಟೆಗಳ ಕಾಲ ಧ್ಯಾನ ಮಾಡಲಿದ್ದಾರೆ. ಆ ಮೂಲಕ ಆಧ್ಯಾತ್ಮಿಕ ಅನುಭೂತಿ ಪಡೆಯಲಿದ್ದಾರೆ. ಹಿಂದೂ ತತ್ವಜ್ಞಾನಿ-ಸಂತನಿಗೆ ಗೌರವ ಸಲ್ಲಿಸಲು ರಾಕ್ ಸ್ಮಾರಕವನ್ನು ನಿರ್ಮಿಸಲಾಗಿದೆ.
ಕೋಲ್ಕತ್ತಾ: ಜೂನ್ 4 ರ ಚುನಾವಣಾ ಫಲಿತಾಂಶಕ್ಕೂ (Loksabha Elections 2024) ಮುನ್ನ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಧ್ಯಾನ ಮಾಡಲು ತಮಿಳುನಾಡಿನ ಕನ್ಯಾಕುಮಾರಿಗೆ ಭೇಟಿ ನೀಡುವ ಕುರಿತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಕಟುವಾಗಿ ಟೀಕಿಸಿದ್ದಾರೆ.
ಯಾರು ಬೇಕಾದರು ಹೋಗಿ ಧ್ಯಾನ ಮಾಡಬಹುದು. ಆದರೆ ಧ್ಯಾನ ಮಾಡುವಾಗ ಕ್ಯಾಮೆರಾ ತೆಗೆದುಕೊಂಡು ಹೋಗುತ್ತಾರೆಯೇ ಎಂದು ದೀದಿ ಪ್ರಶ್ನಿಸಿದ್ದಾರೆ. ಅಲ್ಲದೇ ಚುನಾವಣೆಗೆ 48 ಗಂಟೆಗಳ ಮೊದಲು ಎಸಿ ರೂಮಿನಲ್ಲಿ ಹೋಗಿ ಕೂರುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಚುನಾವಣೆ ಮುಗಿಯುತ್ತಿದ್ದಂತೆ 2 ದಿನ ಕನ್ಯಾಕುಮಾರಿಯಲ್ಲಿ ಧ್ಯಾನ ಮಾಡಲಿದ್ದಾರೆ ಮೋದಿ
ಲೋಕಸಭಾ ಚುನಾವಣಾ ಪ್ರಚಾರದ ನಂತರ ಕನ್ಯಾಕುಮಾರಿಯಲ್ಲಿ ಸ್ವಾಮಿ ವಿವೇಕಾನಂದರಿಗೆ ಗೌರವಾರ್ಥವಾಗಿ ನಿರ್ಮಿಸಲಾದ ಸ್ಮಾರಕವಾದ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಪ್ರಧಾನಿ ಮೋದಿ ಧ್ಯಾನ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಾನು ಕೂಡ ಕನ್ಯಾಕುಮಾರಿಗೆ ಭೇಟಿ ನೀಡುವ ಪ್ಲಾನ್ ಮಾಡಿದ್ದೆ. ಆದರೆ ಮೋದಿಯವರು ಅಲ್ಲಿಗೆ ಭೇಟಿ ನೀಡುವ ಕುರಿತು ತಿಳಿದುಕೊಂಡೆ ಎಂದರು.
ಮೋದಿ ಭೇಟಿಯ ಕುರಿತು ಯಾಕೆ ಯಾರೂ ಬಾಯಿಬಿಡುತ್ತಿಲ್ಲ ಎಂದು ನನಗೆ ತಿಳಿದಿಲ್ಲ. ಸ್ವಾಮಿ ವಿವೇಕಾನಂದರು ಅಲ್ಲಿ ಧ್ಯಾನ ಮಾಡಿದ್ದರು. ಆದರೆ ಈಗ ಪ್ರಧಾನಿ ಅಲ್ಲಿಗೆ ಹೋಗಿ ಧ್ಯಾನ ಮಾಡುತ್ತಿದ್ದಾರೆ. ಇದು ನಿಜಕ್ಕೂ ನನಗೆ ತುಂಬಾ ಬೇಸರ ತಂದಿದೆ ಎಂದು ಬ್ಯಾನರ್ಜಿ ಹೇಳಿದರು.
ಉದ್ದೇಶವೊಂದರ ಸಲುವಾಗಿ ಪರಮಾತ್ಮ ನನ್ನನ್ನು ಕಳುಹಿಸಿದ್ದಾನೆ ಎಂದು ಈ ಹಿಂದೆ ಮೋದಿ ಹೇಳಿದ್ದರು. ಈ ಹೇಳಿಕೆಗೂ ಬ್ಯಾನರ್ಜಿ ಪ್ರಧಾನಿಯವರನ್ನು ಗೇಲಿ ಮಾಡಿದರು. ಅವರು (ಮೋದಿ) ದೇವರಾಗಿದ್ದರೆ ಯಾಕೆ ಧ್ಯಾನ ಮಾಡಬೇಕು..?. ಇತರರು ಅವರಿಗಾಗಿ ಧ್ಯಾನ ಮಾಡಬೇಕಲ್ವ ಎಂದು ಹೇಳಿದರು.
ಇದೇ ವೇಳೆ ಎಚ್ಚರಿಕೆ ನೀಡಿದ ಬ್ಯಾನರ್ಜಿ, ಕನ್ಯಾಕುಮಾರಿಯಲ್ಲಿ ಮೋದಿ ಅವರ ಧ್ಯಾನವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಿದರೆ ಅದು ಮಾದರಿ ನೀತಿ ಸಂಹಿತೆ (MCC) ಉಲ್ಲಂಘನೆಯಾಗುತ್ತದೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದರು.
ನವದೆಹಲಿ: ಲೋಕಸಭಾ ಚುನಾವಣಾ (Lok Sabha Election) ಪ್ರಚಾರ ಮುಗಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಎರಡು ದಿನ ಧ್ಯಾನ (Meditation) ಮಾಡಲಿದ್ದಾರೆ.
ಸ್ವಾಮಿ ವಿವೇಕಾನಂದರು (Swami Vivekanand) ಧ್ಯಾನ ಮಾಡಿದ್ದ ಕನ್ಯಾಕುಮಾರಿಯ ಧ್ಯಾನ ಮಂದಿರದಲ್ಲಿ ಮೋದಿ ಮೇ 30ರ ಸಂಜೆಯಿಂದ ಜೂನ್ 1ರ ಸಂಜೆವರೆಗೆ ಧ್ಯಾನ ಮಾಡಲಿದ್ದಾರೆ.
ತಿರುನಲ್ವೇಲಿ ಡಿಐಜಿಗೆ ಭದ್ರತೆಯ ಉಸ್ತುವಾರಿ ನೀಡಲಾಗಿದ್ದು ಈಗಾಗಲೇ ಸ್ಥಳದಲ್ಲಿ ಮೋದಿಗೆ ಭದ್ರತೆ ನೀಡುವ ಎಸ್‌ಪಿಜಿ ತಂಡ ಬಿಡುಬಿಟ್ಟಿದೆ. ಈ ಸ್ಥಳದ ಭದ್ರತೆಗೆ 2000 ಪೊಲೀಸರನ್ನು ನಿಯೋಜಿಸಲಾಗುತ್ತದೆ.
ಚೆನೈ: ರೈಲ್ವೇ ಟ್ರ್ಯಾಕ್‍ನಲ್ಲಿದ್ದ ಟ್ರಕ್ ಟೈರ್‌ಗೆ ಕನ್ಯಾಕುಮಾರಿ-ಚೆನ್ನೈ ಎಗ್ಮೋರ್ ಎಕ್ಸ್‌ಪ್ರೆಸ್ (Chennai-Kanyakumari Express Train) ರೈಲು ಡಿಕ್ಕಿಯಾದ ಘಟನೆ ತಮಿಳುನಾಡಿನಲ್ಲಿ (Tamil Nadu) ಶನಿವಾರ ನಡೆದಿದೆ.
ಲೋಕೋ ಪೈಲಟ್ ದೂರದಿಂದಲೇ ಎರಡು ಟ್ರಕ್ ಟೈರ್‌ಗಳನ್ನು ರೈಲ್ವೇ ಟ್ರ್ಯಾಕ್‍ನಲ್ಲಿ ಇರುವುದನ್ನು ಗಮನಿಸಿದ್ದಾರೆ. ಕೂಡಲೇ ರೈಲನ್ನು ಕ್ರಮೇಣ ನಿಧಾನಗೊಳಿಸಿದ್ದಾರೆ. ಆದರೂ ಇಂಜಿನ್ ಮುಂಭಾಗ ಟೈರ್‌ಗೆ ಡಿಕ್ಕಿಯಾಗಿದೆ. ರೈಲಿನ ವೇಗ ಕಡಿಮೆ ಇದ್ದುದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ಚೆನ್ನೈ (Chennai) ಕಡೆಗೆ ಪ್ರಯಾಣಿಸುತ್ತಿದ್ದ ರೈಲು ಮಧ್ಯರಾತ್ರಿ 12:30ರ ಸುಮಾರಿಗೆ ತಿರುಚ್ಚಿಗೆ ಆಗಮಿಸಿತ್ತು. ಲೊಕೋ ಪೈಲಟ್ (Loco Pilot) ರಘುರಾಮನ್ ಮತ್ತು ಸಹಾಯಕ ಲೊಕೋ ಪೈಲಟ್ ವಿನೋದ್ ಎಂಬವರು ರೈಲನ್ನು ಚಲಾಯಿಸುತ್ತಿದ್ದರು. 1:05ರ ಸುಮಾರಿಗೆ ರೈಲು ವಾಲಾಡಿ ನಿಲ್ದಾಣವನ್ನು ದಾಟಿದ ನಂತರ ಲೋಕೋ ಪೈಲಟ್ ಹಳಿಯಲ್ಲಿ ಕಪ್ಪು ವಸ್ತು ಇರುವುದನ್ನು ಗಮನಿಸಿ ಬ್ರೇಕ್ ಹಾಕಿದ್ದಾರೆ.
ಬಳಿಕ ಎರಡು ದೊಡ್ಡ ಟೈರ್‌ಗಳನ್ನು ಒಂದರ ಮೇಲೊಂದು ಹಾಕಿರುವುದು ಅವರ ಅರಿವಿಗೆ ಬಂದಿದೆ. ಟೈರ್‌ಗೆ ಡಿಕ್ಕಿಯಾಗಿ ರೈಲು ಸ್ವಲ್ಪ ದೂರದಲ್ಲಿ ನಿಂತಿದೆ. ಈ ವೇಳೆ ಒಂದು ಟೈರ್ ಇಂಜಿನ್‍ಗೆ ಸಿಕ್ಕಿಹಾಕಿಕೊಂಡಿತು. ಇದರಿಂದಾಗಿ ರೈಲಿನ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ತಕ್ಷಣ ಲೋಕೋ ಪೈಲಟ್ ಸಮೀಪದ ವಾಲಾಡಿ ಠಾಣೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ದುರಸ್ತಿಯಾದ ನಂತರ ರೈಲು ಅಲ್ಲಿಂದ ತೆರಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರಭಾಕರನ್, ವೃದ್ಧಾಚಲಂನ ಇನ್ಸ್‌ಪೆಕ್ಟರ್ ರತಿನಕುಮಾರ್ ಮತ್ತು ಸಹಾಯಕ ಭದ್ರತಾ ಆಯುಕ್ತ ಚಿನ್ನತುರೈ ನೇತೃತ್ವದಲ್ಲಿ ರೈಲ್ವೆ ಭದ್ರತಾ ಪಡೆ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದೆ. ವಿಧ್ವಂಸಕ ಕೃತ್ಯ ಎಸಗಲು ಕೆಲ ದುಷ್ಕರ್ಮಿಗಳು ಟ್ರಕ್‍ನ ಟೈರ್‌ಗಳನ್ನು ಹಳಿಗಳ ಮೇಲೆ ಇಟ್ಟಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ರೈಲ್ವೆ ಪೊಲೀಸರು (Railway Police) ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತ- ಬ್ರಿಟನ್ ಪ್ರಧಾನಿ ರಿಶಿ ಸುನಕ್ ಸಂತಾಪ
ಚೆನ್ನೈ: ಮಾನಸಿಕ ಅಸ್ವಸ್ಥನನ್ನು ರಕ್ಷಿಸಲು ತೆರಳಿದ ಪೊಲೀಸ್ ಕಾನ್ಸ್ ಸ್ಟೇಬಲ್ (Police Constable) ನನ್ನೇ ಕುಡುಕರಿಬ್ಬರು ಥಳಿಸಿದ ಘಟನೆ ತಮಿಳುನಾಡಿನ ಕನ್ಯಾಕುಮಾರಿ (Kanyakumari) ಯಲ್ಲಿ ನಡೆದಿದೆ.
ಕುಡುಕರಿಬ್ಬರು ಮಾನಸಿಕ ಅಸ್ವಸ್ಥನ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಇದನ್ನು ಗಮನಿಸಿದ ಪೊಲೀಸ್ ಕಾನ್ಸ್ ಸ್ಟೇಬಲ್ ಅವರು ಆತನನ್ನು ಕುಡುಕರಿಂದ ರಕ್ಷಿಸಲು ತೆರಳಿದ್ದಾರೆ. ಇದರಿಂದ ಮತ್ತೆ ರೊಚ್ಚಿಗೆದ್ದ ಕುಡುಕರು ಪೊಲೀಸ್ (Police) ಮೇಲೆಯೇ ಹಲ್ಲೆಗೆ ಮುಂದಾಗಿದ್ದಾರೆ.
ಪೊಲೀಸ್ ಮೇಲೆ ಹಲ್ಲೆಗೆ ಯತ್ನಿಸಿದನ್ನು ಗಮನಿಸಿದ ವಾಹನಸವಾರರು ಕೂಡಲೇ ಮಧ್ಯಪ್ರವೇಶ ಮಾಡಿದ್ದಾರೆ. ಅಲ್ಲದೆ ಕುಡುಕರಿಗೇ ಥಳಿಸಿದ್ದಾರೆ. ಸದ್ಯ ಮೂವರು ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಆರೋಪಿಗಳ ವಿರುದ್ಧ ಕೀರಿಪಾರೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]