Tag: kanyadaan

  • ಅಯೋಧ್ಯೆಯಲ್ಲಿ ‘ಕನ್ಯಾದಾನ’ ಧಾರಾವಾಹಿ ಶೂಟಿಂಗ್

    ಅಯೋಧ್ಯೆಯಲ್ಲಿ ‘ಕನ್ಯಾದಾನ’ ಧಾರಾವಾಹಿ ಶೂಟಿಂಗ್

    ಮನರಂಜನೆಯ ಮಹಾರಾಜ ಅಂತಾನೇ ಮನೆಮಾತಾಗಿರುವ ಉದಯ ಟಿವಿ ಸಮಾಜಮುಖಿ ಧಾರಾವಾಹಿಗಳಿಂದ ವೀಕ್ಷಕರನ್ನ ಮನರಂಜಿಸುತ್ತಲೇ ಬಂದಿದೆ. ಸೀರಿಯಲ್‌ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸೂಪರ್‌ ಹಿಟ್‌ ಧಾರಾವಾಹಿ (Serial) ಉದಯ ವಾಹಿನಿಯ ‘ಕನ್ಯಾದಾನ’ (Kanyadaan). ತನ್ನ ಐದು ಜನ ಹೆಣ್ಣುಮಕ್ಕಳ ಜೀವನ ನೆಮ್ಮದಿದಾಯಕವಾಗಿರಬೇಕು ಅಂತ ಪರಿತಪಿಸೋ ತಂದೆಯ ಭಾವನಾತ್ಮಕ ಹೋರಾಟದ ಕಥೆ ಈಗಾಗಲೇ ಕನ್ನಡಿಗರ ಮನ ಗೆದ್ದಿದೆ.

    ಎಂಟುನೂರು ಸಂಚಿಕೆಗಳನ್ನ ಪೂರೈಸುವ ಹಂತದಲ್ಲಿರುವ, ಕನ್ನಡಿಗರ ಮನೆಮಾತಾಗಿರುವ ಕನ್ಯಾದಾನ ಮಹಿಳೆಯರ ದೈನಂದಿನ ಜೀವನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ವಿಭಿನ್ನ ಪ್ರಯೋಗಗಳ ಮೂಲಕ ಸಂಚಿಕೆಗಳಲ್ಲಿ ಹೊಸತನ ತರುವ ಪ್ರಯತ್ನದಲ್ಲಿ ಕನ್ಯಾದಾನ ಧಾರಾವಾಹಿಯು ಕಿರುತೆರೆ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿದೆ. ಮುಖ್ಯ ಭೂಮಿಕೆಯ ಕಲಾವಿದರಷ್ಟೇ ಅಲ್ಲದೇ ಬೆಳ್ಳಿತೆರೆಯ ಜನಪ್ರಿಯ ಕಲಾವಿದರೂ ಸಹ ಧಾರಾವಾಹಿಯಲ್ಲಿ ಕಾಣಿಸಿಕೊಂಡು ಮನರಂಜನೆ ನೀಡಿದ ನಿದರ್ಶನಗಳು ಹಲವಾರು. ಈ ಹಿಂದೆ ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಸುಧಾರಾಣಿಯವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಧಾರಾವಾಹಿಗೆ ಮೆರುಗು ನೀಡಿದ್ದರು. ಅದೇ ರೀತಿ ಇತ್ತೀಚಿನ ಸಂಚಿಕೆಗಳಲ್ಲಿ “ಗಾಳಿಪಟ” ಹಾರಿಸಿ ಮಿಂಚಿದ್ದ ನಟಿ ನೀತು ಸಹ ಬಹುಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಈಗ ಶ್ರೀರಾಮನವಮಿಯ ಪ್ರಯುಕ್ತ ವಿಶೇಷ ಸಂಚಿಕೆಗಳು ಬಹು ಸೊಗಸಾಗಿ ಪ್ರಸಾರವಾಗಲಿದ್ದು ವೀಕ್ಷಕರು ಇದೇ ಏಪ್ರಿಲ್ 15ರಿಂದ ಈ ಅಪರೂಪದ ಸಂಚಿಕೆಗಳನ್ನ ವೀಕ್ಷಿಸಬಹುದು.

    ಕನ್ನಡ ಧಾರಾವಾಹಿ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಐತಿಹಾಸಿಕ ಅಯೋಧ್ಯೆಯಲ್ಲಿ (Ayodhya) ವಿಶೇಷ ಸಂಚಿಕೆಗಳನ್ನ ಚಿತ್ರೀಕರಣ ಮಾಡಿರುವ ಹೆಗ್ಗಳಿಕೆ ಉದಯ ಟಿವಿಯ ʼಕನ್ಯಾದಾನʼ ತಂಡಕ್ಕೆ ಸಂದಿದೆ. ಇತ್ತೀಚೆಗಷ್ಟೇ ವಿಶ್ವಪ್ರಸಿದ್ಧ ಅಯೋಧ್ಯೆಯ ರಾಮಮಂದಿರಕ್ಕೆ ತೆರಳಿದ ʼಕನ್ಯಾದಾನʼ ತಂಡವು ತನ್ನ ಪ್ರೇಕ್ಷಕರಿಗೆ ಮೈನವೀರೇಳಿಸುವಂತಹ ವಿಶೇಷ ಸಂಚಿಕೆಗಳನ್ನ ಹೊತ್ತು ತಂದಿದೆ. ಶ್ರೀರಾಮಚಂದ್ರನ ಸನ್ನಿಧಿಯಲ್ಲಿ ಧಾರಾವಾಹಿಯ ಪ್ರಮುಖ ಪಾತ್ರಗಳು ಪ್ರೇಮವೆಂಬ ಜೀವನ್ಮುಖಿಯತ್ತ ತಮ್ಮನ್ನು ತಾವು ಹೇಗೆ ಕಂಡುಕೊಳ್ಳುತ್ತವೆ ಎಂಬುದು ವಿಶೇಷ! ʼಕನ್ಯಾದಾನʼದ ಕುಟುಂಬಗಳಲ್ಲಿ ಅಶ್ವತ್ಥನ ಹೆಣ್ಣುಮಕ್ಕಳ ಸಂಸಾರಗಳು ಶ್ರೀರಾಮನವಮಿಯ ವಿಶೇಷ ಸಂದರ್ಭದಲ್ಲಿ ಎದುರಾಗುವ ಅಗ್ನಿಪರೀಕ್ಷೆಗಳನ್ನ ಶ್ರೀರಾಮನ ಕೃಪೆಯಿಂದ ಹೇಗೆ ಮೆಟ್ಟಿ ನಿಲ್ಲುತ್ತವೆ ಎಂಬುದು ವಿಶೇಷ ಸಂಚಿಕೆಗಳ ತಿರುಳಾಗಿದೆ. ಹಾಗೆಯೇ ಅಯೋಧ್ಯೆಯ ಬಾಲರಾಮನ ದರ್ಶನದಿಂದ ಕಾರ್ತಿಕ್‌ನ ದಾಂಪತ್ಯದಲ್ಲಿ ಉಂಟಾಗುವ ಸಕಾರಾತ್ಮಕ ಬದಲಾವಣೆಗಳು ಹಾಗೂ ಆತನ ತಂಗಿಯ ಬಾಳಲ್ಲಿರುವ ಗೊಂದಲಗಳಿಗೆ ಅಂತಿಮವಾಗಿ ತೆರೆ ಬೀಳುವ ಸನ್ನಿವೇಶಗಳು ಎದುರಾಗುತ್ತವೆ.

    ಕನ್ಯಾದಾನ ಧಾರಾವಾಹಿಯಲ್ಲಿನ ಪಾತ್ರಗಳು ಮದುವೆಯ ನಂತರ ಪ್ರತಿ ಹೆಣ್ಣುಮಗಳಿಗೆ ಬದುಕಿನ ಪರೀಕ್ಷೆಗಳನ್ನು ಎದುರಿಸಲು ಮನೋಸ್ಥೈರ್ಯ ತುಂಬುತ್ತವೆ. ಈ ಧಾರಾವಾಹಿಯಲ್ಲಿ ಬರುವ ಪ್ರತಿಯೊಂದು ಪಾತ್ರವೂ ನಿಜಜೀವನದಲ್ಲಿ ನೋಡುಗರಿಗೆ ತುಂಬಾ ಹತ್ತಿರವಾಗಿರುವುದರಿಂದ ಮನರಂಜನೆಯ ಜೊತೆ ಸಮಾಜಕ್ಕೆ ಒಳ್ಳೆಯ ಸಂದೇಶವನ್ನೂ ನೀಡುತ್ತದೆ.

     

    ಕನ್ಯಾದಾನ ಧಾರಾವಾಹಿಯು ಸೋಮವಾರದಿಂದ ಶನಿವಾರದವರೆಗೆ ಸಂಜೆ 6 ಗಂಟೆಗೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತದೆ.

  • ದಾನ ಮಾಡಲು ನನ್ನ ಮಗಳು ಆಸ್ತಿಯಲ್ಲ – ತಂದೆಯಿಂದ ಕನ್ಯಾದಾನ ನಿರಾಕರಣೆ

    ದಾನ ಮಾಡಲು ನನ್ನ ಮಗಳು ಆಸ್ತಿಯಲ್ಲ – ತಂದೆಯಿಂದ ಕನ್ಯಾದಾನ ನಿರಾಕರಣೆ

    ಕೋಲ್ಕತ್ತಾ: ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ರೀತಿಯ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಈಗ ಕೊಲ್ಕತ್ತಾದಲ್ಲಿ ನಡೆದ ಒಂದು ವಿಶೇಷ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಕಳೆದ ಸೋಮವಾರ ತಂದೆಯೊಬ್ಬರು ತಮ್ಮ ಮಗಳ ಮದುವೆಯನ್ನು ಮಾಡುತ್ತಿರುತ್ತಾರೆ. ಆಗ ಕೆಲವು ಸಂಪ್ರದಾಯದ ಪ್ರಕಾರ ವಧುವಿನ ತಂದೆ ಭಾಷಣ ಮಾಡಬೇಕಾಗುತ್ತದೆ. ಈ ವೇಳೆ ವಧುವಿನ ತಂದೆ ತನ್ನ ಮಗಳನ್ನು ಕನ್ಯಾದಾನ ಮಾಡುವುದಿಲ್ಲ. ಯಾಕೆಂದರೆ ದಾನ ಮಾಡಲು ನನ್ನ ಮಗಳು ಆಸ್ತಿಯಲ್ಲ ಎಂದು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

    ಅಸ್ಮಿತಾ ಫೋಷ್ ಎಂಬವರು ಟ್ವೀಟ್ ಮಾಡಿ ಒಂದು ಮದುವೆಯ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಜೊತೆಗೆ ನಾನು ಒಂದು ಮದುವೆಗೆ ಹೋಗಿದ್ದೆ. ಅಲ್ಲಿ ಪುರುಷ ಪುರೋಹಿತರ ಬದಲು ಮಹಿಳಾ ಪುರೋಹಿತರು ವಿವಾಹದ ವಿಧಿವಿಧಾನಗಳನ್ನು ನಡೆಸಿಕೊಡುತ್ತಿದ್ದರು. ಈ ವೇಳೆ ಮಹಿಳಾ ಪುರೋಹಿತರು ವಧು, ವಧುವಿನ ತಂದೆ-ತಾಯಿಯ ಹೆಸರನ್ನು ಹೇಳಿ ಪರಿಚಯ ಮಾಡಿಕೊಡಲಾಗುತ್ತಿತ್ತು. ಬಳಿಕ ವಧುವಿನ ತಂದೆ ಒಂದು ಭಾಷಣವನ್ನು ಮಾಡಿದ್ದು, ‘ನಾನು ಕನ್ಯಾದಾನ ಮಾಡುವುದಿಲ್ಲ, ಯಾಕೆಂದರೆ ನನ್ನ ಮಗಳು ಆಸ್ತಿಯಲ್ಲ ದಾನ ಮಾಡಲು’ ಎಂದು ಹೇಳಿದ್ದಾರೆ ಅಂತ ಬರೆದು ಅಸ್ಮಿತಾ ಅವರು ಬರೆದು ಪೋಸ್ಟ್ ಮಾಡಿದ್ದಾರೆ.

    ಅಸ್ಮಿತಾ ಟ್ವೀಟ್ ಮಾಡಿದ ತಕ್ಷಣ ಸುಮಾರು 3.8 ಸಾವಿರ ಮಂದಿ ಲೈಕ್ಸ್ ಮಾಡಿದ್ದು, 890ಕ್ಕೂ ನೆಟ್ಟಿಗರು ರೀಟ್ವೀಟ್ ಮಾಡಿ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.

    ಏನಿದು ಕನ್ಯಾದಾನ?
    ಹಿಂದೂ ವಿವಾಹ ಸಂಸ್ಕಾರಗಳಲ್ಲಿ ಅತಿಮುಖ್ಯವಾದ ಸಂಸ್ಕಾರವೇ ಕನ್ಯಾದಾನ. ಕೇವಲ ಒಂದು ಹೊಣೆಗಾರಿಕೆಯನ್ನು ಕಳೆದುಕೊಳ್ಳುವ ಉದ್ದೇಶದಿಂದ ಕನ್ಯಾದಾನ ಮಾಡುವುದಿಲ್ಲ. ಕನ್ಯೆಯ ಪೋಷಕ ಅವಳನ್ನು ದಾನ ಮಾಡುವಾಗ ಅರ್ಥಗರ್ಭಿತವಾದ ಮಂತ್ರೋಚ್ಚಾರಣೆಯ ಮೂಲಕ ಧರ್ಮ, ಅರ್ಥ, ಕಾಮಗಳ ಪೊರೈಕೆಗಾಗಿ ಈ ದಾನವನ್ನು ಮಾಡುತ್ತಿರುವುದಾಗಿ ತಿಳಿಸುತ್ತಾನೆ. ಈ ವೇಳೆ ಧರ್ಮ, ಅರ್ಥ, ಕಾಮಗಳ ಸಾಧನೆಯಲ್ಲಿ ತನ್ನ ಸಹಧರ್ಮಿಣಿಯಾಗಿರಲು ನಾನು ಸ್ವೀಕರಿಸುತ್ತಿದ್ದೇನೆಂದು ವರನಿಂದ ಮೂರು ಬಾರಿ ವಚನ ತೆಗೆದುಕೊಳ್ಳುತ್ತಾನೆ.

    https://twitter.com/asmitaghosh18/status/1092427262115209222

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv