Tag: Kanwariyas

  • ಬಿಹಾರ | ಕನ್ವರ್‌ ಯಾತ್ರಾರ್ಥಿಗಳಿದ್ದ ವ್ಯಾನ್ ಕಂದಕಕ್ಕೆ ಪಲ್ಟಿ – ಐವರ ದುರ್ಮರಣ

    ಬಿಹಾರ | ಕನ್ವರ್‌ ಯಾತ್ರಾರ್ಥಿಗಳಿದ್ದ ವ್ಯಾನ್ ಕಂದಕಕ್ಕೆ ಪಲ್ಟಿ – ಐವರ ದುರ್ಮರಣ

    ಪಾಟ್ನಾ: ಕನ್ವರ್‌ ಯಾತ್ರಾರ್ಥಿಗಳಿದ್ದ (Kanwariyas) ವ್ಯಾನ್ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಐವರು ಮೃತಪಟ್ಟಿರುವ ಘಟನೆ ಬಿಹಾರದ (Bihar) ಭಗಲ್ಪುರ ಜಿಲ್ಲೆಯ ಶಹಕುಂಡ್‌ನಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

    ಪುರಾನಿ ನಿವಾಸಿಗಳಾದ ಸಂತೋಷ್ ಕುಮಾರ್ (18), ಮನೋಜ್ ಕುಮಾರ್ (24), ವಿಕ್ರಮ್ ಕುಮಾರ್ (23), ಅಂಕುಶ್ ಕುಮಾರ್ (18) ಹಾಗೂ ರವೀಶ್ ಕುಮಾರ್ (18) ಮೃತರೆಂದು ಗುರುತಿಸಲಾಗಿದೆ. ಇದನ್ನೂ ಓದಿ: ಬೆಂಗಳೂರು | Forgive Me ಅಂತ ಡೆತ್‌ ನೋಟ್‌ ಬರೆದಿಟ್ಟು 13ರ ಬಾಲಕ ಆತ್ಮಹತ್ಯೆ

    ಯಾತ್ರಾರ್ಥಿಗಳು ಶಹಕುಂಡ್‌ನ ಪುರಾನಿ ಖರೈನಿಂದ ಸುಲ್ತಾನಗಂಜ್‌ಗೆ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿ, ನಂತರ ನಂತರ ಜೆಥೌರ್ ನಾಥ್ ದೇವಾಲಯದಲ್ಲಿ ಪೂಜೆ ಮಾಡಲು ಹೊರಟ್ಟಿದ್ದರು ಎನ್ನಲಾಗಿದೆ. ವಾಹನದಲ್ಲಿ ಒಟ್ಟು 9 ಮಂದಿ ಪ್ರಯಾಣಿಸುತ್ತಿದ್ದರು. ಈ ಪೈಕಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಸ್ಥಿತಿ ಗಂಭೀರವಾಗಿದ್ದು, ಇನ್ನುಳಿದವರು ಸಣ್ಣ-ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯಾಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ ವಿಧಿವಶ

    ಶಹಕುಂಡ್ ಸುಲ್ತಾನಗಂಜ್ ಮುಖ್ಯ ರಸ್ತೆಯಲ್ಲಿರುವ ಮಹತೋ ಸ್ಥಾನದ ಬಳಿ ಆಟೋ ರಿಕ್ಷಾವನ್ನು ಓವರ್‌ಟೇಕ್ ಮಾಡುವ ಭರದಲ್ಲಿ ವ್ಯಾನ್‌ಗೆ ವಿದ್ಯುತ್ ತಂತಿಗೆ ತಗುಲಿತ್ತು. ಚಾಲಕನಿಗೆ ವಿದ್ಯುತ್ ಸ್ಪರ್ಶಿಸಿ ವ್ಯಾನ್ ನಿಯಂತ್ರಣ ತಪ್ಪಿ ಕಂದಕ್ಕೆ ಉರುಳಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

  • ಕನ್ವರ್‌ ಯಾತ್ರೆ ವೇಳೆ ಹಿಂದಿಕ್ಕಿದ್ದಕ್ಕೆ ಯೋಧನನ್ನು ಹೊಡೆದು ಕೊಂದ ಶಿವ ಭಕ್ತರ ಗುಂಪು!

    ಕನ್ವರ್‌ ಯಾತ್ರೆ ವೇಳೆ ಹಿಂದಿಕ್ಕಿದ್ದಕ್ಕೆ ಯೋಧನನ್ನು ಹೊಡೆದು ಕೊಂದ ಶಿವ ಭಕ್ತರ ಗುಂಪು!

    ಲಕ್ನೋ: ಕನ್ವರ್‌ ಯಾತ್ರೆ ಕೈಗೊಂಡಿದ್ದ ವೇಳೆ ಕನ್ವಾರಿಯಾಗಳ (ಶಿವ ಭಕ್ತರ) ಗುಂಪೊಂದನ್ನು ಹಿಂದಿಕ್ಕಿದ ಕಾರಣಕ್ಕೆ 25 ವರ್ಷ ವಯಸ್ಸಿನ ಯೋಧರೊಬ್ಬರನ್ನು ಹತ್ಯೆ ಮಾಡಿರುವ ಘಟನೆ ಹರಿದ್ವಾರದಲ್ಲಿ ನಡೆದಿದೆ.

    ಉತ್ತರ ಪ್ರದೇಶದಿಂದ ಕನ್ವಾರಿಯಾಗಳ ಗುಂಪಿನೊಂದಿಗೆ ಯೋಧ ಕಾರ್ತಿಕ್‌ ಅವರು ಕನ್ವರ್‌ ಯಾತ್ರೆ ಕೈಗೊಂಡಿದ್ದರು. ಹರಿಯಾಣದಿಂದ ಯಾತ್ರೆ ಕೈಗೊಂಡಿದ್ದ ಕನ್ವಾರಿಯಾಗಳ ಮತ್ತೊಂದು ಗುಂಪು ಯೋಧ ಕಾರ್ತಿಕ್‌ರನ್ನು ಹತ್ಯೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರವೀಣ್ ಹತ್ಯೆ ಪ್ರಕರಣ- NIA ತನಿಖೆಗೆ ವಹಿಸುವಂತೆ ಅಮಿತ್ ಶಾಗೆ ಪತ್ರ ಬರೆದ ಶೋಭಾ ಕರಂದ್ಲಾಜೆ

    ಭಾರತೀಯ ಸೇನೆಯ ಜಾಟ್ ರೆಜಿಮೆಂಟ್‌ನ ಯೋಧ ಕಾರ್ತಿಕ್ ಹಲ್ಲೆಗೊಳಗಾದವರು. ಎರಡು ಗುಂಪುಗಳು ಮೋಟಾರ್‌ ಬೈಕ್‌ನಲ್ಲಿ ಚಲಾಯಿಸುತ್ತಿದ್ದ ವೇಳೆ ಪರಸ್ಪರ ರೇಸಿಂಗ್ ಮಾಡಿದ್ದಾರೆ. ಹರಿಯಾಣದಿಂದ ಬಂದ ಕನ್ವಾರಿಯಾಗಳು ಕಾರ್ತಿಕ್ ಮೇಲೆ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಿದ್ದಾರೆ.

    ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಯೋಧರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಹರಿದ್ವಾರ ಪೊಲೀಸ್ ಅಧೀಕ್ಷಕ (ಗ್ರಾಮೀಣ) ಪ್ರಮೇಂದ್ರ ದೋಭಾಲ್ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದ್ದು, ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:  ಶೇ. 50ರಷ್ಟು ವಿಮಾನವಷ್ಟೇ ಕಾರ್ಯ ನಿರ್ವಹಿಸಲು ಸ್ಪೈಸ್‍ಜೆಟ್‍ಗೆ ಆದೇಶ

    ಕಾರ್ತಿಕ್ ಅವರು ಮುಜಾಫರ್‌ನಗರ ಜಿಲ್ಲೆಯ ಸಿಸೌಲಿ ಗ್ರಾಮದವರಾಗಿದ್ದು, ಮಂಗಳವಾರ ಈ ಘಟನೆ ಸಂಭವಿಸಿದೆ. ತನ್ನ ಗುಂಪಿನ ಇತರ ಸದಸ್ಯರೊಂದಿಗೆ ಗಂಗಾಜಲವನ್ನು ಸಂಗ್ರಹಿಸಿ ಹರಿದ್ವಾರದಿಂದ ಹಿಂದಿರುಗುತ್ತಿದ್ದ ವೇಳೆ ಘಟನೆ ನಡೆದಿದೆ ಎಂದು ಎಸ್‌ಪಿ ದೋಭಾಲ್ ತಿಳಿಸಿದ್ದಾರೆ.

    ಬಂಧಿತರನ್ನು ಸುಂದರ್ (38), ರಾಹುಲ್ (20), ಸಚಿನ್ (25), ಆಕಾಶ್ (21), ಪಂಕಜ್ (22) ಮತ್ತು ರಿಂಕು (24) ಎಂದು ಪೊಲೀಸರು ಗುರುತಿಸಿದ್ದಾರೆ. ಇವರೆಲ್ಲರೂ ಹರಿಯಾಣದ ಪಾಣಿಪತ್ ಜಿಲ್ಲೆಯ ಚುಲ್ಕಾನಾ ಗ್ರಾಮದವರು ಎಂದು ಎಸ್ಪಿ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶಿವ ಭಕ್ತರ ಮೇಲೆ ಹೂಮಳೆ ಸುರಿಸುತ್ತೀರಿ, ಮುಸ್ಲಿಮರ ಮನೆಗಳಿಗೆ ಬುಲ್ಡೋಜರ್‌ ಬಿಡ್ತೀರಿ: ಯುಪಿ ಸರ್ಕಾರದ ವಿರುದ್ಧ ಓವೈಸಿ ಕಿಡಿ

    ಶಿವ ಭಕ್ತರ ಮೇಲೆ ಹೂಮಳೆ ಸುರಿಸುತ್ತೀರಿ, ಮುಸ್ಲಿಮರ ಮನೆಗಳಿಗೆ ಬುಲ್ಡೋಜರ್‌ ಬಿಡ್ತೀರಿ: ಯುಪಿ ಸರ್ಕಾರದ ವಿರುದ್ಧ ಓವೈಸಿ ಕಿಡಿ

    ನವದೆಹಲಿ: ಶಿವ ಭಕ್ತರ (ಕನ್ವಾರಿಯಾಗಳಿಗೆ) ಮೇಲೆ ಹೆಲಿಕಾಪ್ಟರ್‌ಗಳಿಂದ ಹೂಮಳೆ ಸುರಿಸುತ್ತೀರಿ. ಆದರೆ ಬುಲ್ಡೋಜರ್‌ಗಳ ಮೂಲಕ ಮುಸ್ಲಿಮರ ಮನೆ ಕೆಡವುತ್ತೀರಿ ಎಂದು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ನೇತೃತ್ವದ ಸರ್ಕಾರದ ವಿರುದ್ಧ ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್‌ ಓವೈಸಿ ಕಿಡಿಕಾರಿದ್ದಾರೆ.

    ಸಂಸತ್‌ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ ಮಾಡಲು ತೆರಿಗೆದಾರರ ಹಣವನ್ನು ಬಳಸುತ್ತಿದ್ದೀರಿ. ತುಂಬಾ ಒಳ್ಳೆಯದು. ನಮ್ಮ ಮೇಲೂ ಸ್ವಲ್ಪ ಕರುಣೆ ತೋರಿ, ನಮ್ಮನ್ನೂ ಸಮಾನವಾಗಿ ಕಾಣಿ ಎಂದು ಹೇಳುತ್ತಿದ್ದೇವೆ. ಅವರ ಮೇಲೆ ಪುಷ್ಪವೃಷ್ಟಿ ಮಾಡುತ್ತೀರಿ. ನಮ್ಮ ಮನೆಗಳನ್ನು ಧ್ವಂಸ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪಿಎಂಎಲ್‌ಎ ಅಡಿ ಬಂಧನ ಮಾಡಬಹುದು – ಇಡಿಗೆ ಸುಪ್ರೀಂನಿಂದ ಸಿಕ್ತು ಪರಮಾಧಿಕಾರ

    ಮೀರತ್‌ನ ಪೊಲೀಸ್ ಮುಖ್ಯಸ್ಥರು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಶಿವ ಭಕ್ತರ ಮೇಲೆ ಹೂವಿನ ದಳಗಳನ್ನು ಸುರಿಸುವ ದೃಶ್ಯ ಹಾಗೂ ಹಾಪುರ್‌ನಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಕನ್ವಾರಿಯಾದ (ಶಿವ ಭಕ್ತರು) ಕಾಲುಗಳಿಗೆ ನೋವು ನಿವಾರಕ ತೈಲ ಹಚ್ಚುತ್ತಿರುವ ವೈರಲ್‌ ದೃಶ್ಯಗಳ ಬಗ್ಗೆ ಈ ವೇಳೆ ಓವೈಸಿ ಮಾತನಾಡಿದರು.

    ನೀವು ಅವರ ಪಾದಗಳಿಗೆ ಮಸಾಜ್ ಮಾಡುತ್ತಿರುವುದು ಒಳ್ಳೆಯದು. ಆದರೆ ನೀವು ಸಹರಾನ್‌ಪುರದಲ್ಲಿ ಮುಸ್ಲಿಂ ಯುವಕನನ್ನು ಕರೆದುಕೊಂಡು ಹೋಗಿ ಹೊಡೆಯುತ್ತೀರಿ. ತಾರತಮ್ಯ ಮಾಡಬೇಡಿ. ಸಂವಿಧಾನ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಮೂವರು ಸಹೋದರಿಯರು ಸಾವು

    Live Tv
    [brid partner=56869869 player=32851 video=960834 autoplay=true]