Tag: Kanwar yatra

  • ಕನ್ವರ್ ಯಾತ್ರೆಯ ಮಾರ್ಗದಲ್ಲಿ ಹೋಟೆಲ್‌ಗಳಿಗೆ ಕ್ಯೂಆರ್ ಕೋಡ್ ಕಡ್ಡಾಯ – ಆದೇಶ ಎತ್ತಿ ಹಿಡಿದ ಸುಪ್ರೀಂ

    ಕನ್ವರ್ ಯಾತ್ರೆಯ ಮಾರ್ಗದಲ್ಲಿ ಹೋಟೆಲ್‌ಗಳಿಗೆ ಕ್ಯೂಆರ್ ಕೋಡ್ ಕಡ್ಡಾಯ – ಆದೇಶ ಎತ್ತಿ ಹಿಡಿದ ಸುಪ್ರೀಂ

    – ಯುಪಿ, ಉತ್ತರಾಖಂಡ ಸರ್ಕಾರದ ಆದೇಶಕ್ಕೆ ತಡೆ ನಿರಾಕರಿಸಿದ ಸುಪ್ರೀಂ

    ನವದೆಹಲಿ: ಕನ್ವರ್ ಯಾತ್ರೆಯ (Kanwar Yatra) ಮಾರ್ಗದಲ್ಲಿರುವ ಹೋಟೆಲ್‌ಗಳಿಗೆ ಕ್ಯೂಆರ್ ಕೋಡ್‌ಗಳನ್ನು (QR Code) ಕಡ್ಡಾಯವಾಗಿ ಪ್ರದರ್ಶಿಸುವಂತೆ ಆದೇಶಿಸಿದ್ದ ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಸರ್ಕಾರಗಳ ಆದೇಶಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ (Supreme Court) ನಿರಾಕರಿಸಿದೆ.

    ಕನ್ವರ್ ಯಾತ್ರೆಯ ಸಂದರ್ಭದಲ್ಲಿ ಯಾತ್ರಿಗಳಿಗೆ ಆಹಾರ ಸೇವೆಗಳ ಸುರಕ್ಷತೆ ಮತ್ತು ಪಾರದರ್ಶಕತೆಯನ್ನು ಖಾತ್ರಿಪಡಿಸಲು ಈ ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ರಾಜ್ಯ ಸರ್ಕಾರಗಳು ವಾದಿಸಿವೆ. ಈ ಕೋಡ್‌ಗಳ ಮೂಲಕ ಗ್ರಾಹಕರು ಆಹಾರ ಮಳಿಗೆಗಳ ಗುಣಮಟ್ಟ, ಪರವಾನಗಿ ಮತ್ತು ಶುಚಿತ್ವದ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದಾಗಿದೆ. ಇದನ್ನೂ ಓದಿ: ಅಮೆರಿಕದಿಂದ ಮೂರು ಅಪಾಚೆ ಹೆಲಿಕಾಪ್ಟರ್‌ಗಳ ಮೊದಲ ಬ್ಯಾಚ್ ಆಗಮನ

    ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್‌ವಿಎನ್ ಭಟ್ಟಿ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿತು. ಅರ್ಜಿದಾರರು ಈ ಆದೇಶವು ವ್ಯಾಪಾರಿಗಳ ಮೇಲೆ ಅನಗತ್ಯ ಒತ್ತಡವನ್ನುಂಟುಮಾಡುತ್ತದೆ ಮತ್ತು ಗೌಪ್ಯತೆಯ ಉಲ್ಲಂಘನೆಗೆ ಕಾರಣವಾಗಬಹುದು ಎಂದು ವಾದಿಸಿದರು. ಆದರೆ, ಸರ್ಕಾರದ ಪರ ವಕೀಲರು, ಈ ಯೋಜನೆಯು ಯಾತ್ರಿಗಳ ಸುರಕ್ಷತೆಗಾಗಿ ಮತ್ತು ಸಾರ್ವಜನಿಕ ಹಿತಾಸಕ್ತಿಗಾಗಿ ಜಾರಿಗೊಳಿಸಲಾಗಿದೆ ಎಂದು ಸಮರ್ಥಿಸಿಕೊಂಡರು. ಇದನ್ನೂ ಓದಿ: ಅಣ್ಣ ಬುದ್ಧಿ ಹೇಳಿದ್ದಕ್ಕೆ ಮಗುವನ್ನು ಬರ್ಬರವಾಗಿ ಕೊಂದ ಚಿಕ್ಕಪ್ಪ

    ನ್ಯಾಯಾಲಯವು ಈ ಆದೇಶಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿದರೂ, ವಿಷಯದ ಸಂಪೂರ್ಣ ವಿಚಾರಣೆಗೆ ಒಪ್ಪಿಗೆ ನೀಡಿದೆ ಮತ್ತು ಮುಂದಿನ ವಿಚಾರಣೆಯನ್ನು ಶೀಘ್ರದಲ್ಲಿ ನಿಗದಿಪಡಿಸಲಾಗುವುದು ಎಂದು ತಿಳಿಸಿದೆ. ಇದನ್ನೂ ಓದಿ: ಶೀಘ್ರವೇ ಧರ್ಮಸ್ಥಳ ಪ್ರಕರಣಗಳ ತನಿಖೆ ಆರಂಭ; ಎಸ್‌ಐಟಿ ತಂಡದಿಂದ ಯಾರೂ ಹೊರಗುಳಿಯಲ್ಲ: ಪರಮೇಶ್ವರ್

  • ಬಿಹಾರದಲ್ಲಿ ಕನ್ವರ್ ಯಾತ್ರೆ ವೇಳೆ ಡಿಜೆ ವಾಹನಕ್ಕೆ ವಿದ್ಯುತ್ ಸ್ಪರ್ಶ – 9 ಮಂದಿ ದುರ್ಮರಣ

    ಬಿಹಾರದಲ್ಲಿ ಕನ್ವರ್ ಯಾತ್ರೆ ವೇಳೆ ಡಿಜೆ ವಾಹನಕ್ಕೆ ವಿದ್ಯುತ್ ಸ್ಪರ್ಶ – 9 ಮಂದಿ ದುರ್ಮರಣ

    ಪಾಟ್ನ: ಕನ್ವರ್ ಯಾತ್ರೆ (Kanwar Yatra) ವೇಳೆ ಡಿಜೆ ವಾಹನಕ್ಕೆ (DJ Vehicle) ಹೈಟೆನ್ಷನ್ ತಂತಿ ತಗುಲಿದ ಪರಿಣಾಮ ಕರೆಂಟ್ ಶಾಕ್ (Electrocuted) ಹೊಡೆದು 9 ಮಂದಿ ಕನ್ವರ್ ಯಾತ್ರಿಗಳು ಸಾವನ್ನಪ್ಪಿದ ಘಟನೆ ಬಿಹಾರದ (Bihar) ವೈಶಾಲಿಯಲ್ಲಿ ನಡೆದಿದೆ.

    ಹಾಜಿಪುರ ಕೈಗಾರಿಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸುಲ್ತಾನ್‌ಪುರ ಗ್ರಾಮದ ಯುವಕರನ್ನು ಒಳಗೊಂಡ ತಂಡವು ಸೋನ್‌ಪುರ ಬಾಬಾ ಹರಿಹರನಾಥದಲ್ಲಿ ‘ಜಲಾಭಿಷೇಕ’ ಮಾಡಲು ಗಂಗಾಜಲವನ್ನು ಹೊತ್ತು ಸರನ್‌ನ ಪಹೇಲಜಾ ಘಾಟ್‌ಗೆ ತೆರಳುತ್ತಿತ್ತು. ಈ ವೇಳೆ ಡಿಜೆ ಹಾಡುಗಳೊಂದಿಗೆ ಮೆರವಣಿಗೆ ತೆರಳುತ್ತಿದ್ದ ವೇಳೆ 11,000 ವೋಲ್ಟ್ನ ಹೈಟೆನ್ಷನ್ ತಂತಿಗೆ ಡಿಜೆ ವಾಹನದ ಮೇಲ್ಭಾಗ ತಾಗಿ ದುರಂತ ಸಂಭವಿಸಿದೆ. ಇದನ್ನೂ ಓದಿ: ನಿಗದಿಯಾಗಿದ್ದ ಕೊಪ್ಪಳ, ವಿಜಯನಗರ ಸಿಎಂ ಪ್ರವಾಸ ದಿಢೀರ್‌ ರದ್ದು

    ಕನ್ವರಿಯಾಗಳು ಅಥವಾ ಶಿವಭಕ್ತರು ಡಿಜೆ ವಾಹನದಲ್ಲಿ ತೆರಳುತ್ತಿದ್ದರು. ವಾಹನ ತುಂಬಾ ಎತ್ತರವಾಗಿದ್ದರಿಂದ ಹೈಟೆನ್ಷನ್ ತಂತಿಗೆ ಸಿಕ್ಕಿಹಾಕಿಕೊಂಡು ಘಟನೆ ಸಂಭವಿಸಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಾಜಿಪುರ ಉಪವಿಭಾಗೀಯ ಪೊಲೀಸ್ ಅಧಿಕಾರಿ ಓಂ ಪ್ರಕಾಶ್ ತಿಳಿಸಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ – ಎನ್‌ಐಎಯಿಂದ ಸ್ಪಾಟ್‌ ಮಹಜರು

    ಘಟನೆಯಲ್ಲಿ ಆರು ಮಂದಿಗೆ ಗಾಯಗಳಾಗಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಅವರು ಹಾಜಿಪುರದ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ತಮಿಳುನಾಡಿಗೂ ಕಾವೇರಿ ಹರಿದರೂ ರೈತರಿಗೆ ತಪ್ಪದ ಕಂಟಕ!

    ಕನ್ವಾರಿಯಾಗಳು ಅಥವಾ ಶಿವಭಕ್ತರು ಶ್ರಾವಣ ಮಾಸದಲ್ಲಿ ದೇವರಿಗೆ ಅರ್ಪಿಸಲು ತಮ್ಮ ಊರಿನಿಂದ ಗಂಗಾಜಲವನ್ನು ಒಯ್ಯುತ್ತಾರೆ. ಕನ್ವರ್ ಯಾತ್ರೆಯು ಪ್ರತಿ ವರ್ಷ ನಡೆಯುವ ಅತಿ ದೊಡ್ಡ ಧಾರ್ಮಿಕ ಯಾತ್ರೆಗಳಲ್ಲಿ ಒಂದಾಗಿದೆ. ಇದನ್ನೂ ಓದಿ: 45 ದಿನದಿಂದ ಕರೆಂಟ್ ಇಲ್ಲದೆ ಕತ್ತಲಲ್ಲಿ ಕಾಫಿನಾಡ ಅತ್ತಿಗುಂಡಿ ಗ್ರಾಮ

  • ಉತ್ತರ ಪ್ರದೇಶ ಸರ್ಕಾರಕ್ಕೆ ಹಿನ್ನಡೆ; ವ್ಯಾಪಾರಿಗಳ ಮಾಹಿತಿ ಬಹಿರಂಗಪಡಿಸುವ ಆದೇಶಕ್ಕೆ ತಡೆ

    ಉತ್ತರ ಪ್ರದೇಶ ಸರ್ಕಾರಕ್ಕೆ ಹಿನ್ನಡೆ; ವ್ಯಾಪಾರಿಗಳ ಮಾಹಿತಿ ಬಹಿರಂಗಪಡಿಸುವ ಆದೇಶಕ್ಕೆ ತಡೆ

    ನವದೆಹಲಿ: ಕನ್ವರ್ ಯಾತ್ರಾ (Kanwar Yatra) ಮಾರ್ಗಗಳ ಉದ್ದಕ್ಕೂ ಆಹಾರ ಮತ್ತು ಪಾನೀಯ ಅಂಗಡಿಗಳು ತಮ್ಮ ಸಂಸ್ಥೆಗಳ ನಿರ್ವಾಹಕರು/ಮಾಲೀಕರ ಹೆಸರು ಮತ್ತು ಗುರುತನ್ನು ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಿದ ಉತ್ತರ ಪ್ರದೇಶ ಸರ್ಕಾರದ ಆದೇಶಕ್ಕೆ ಸುಪ್ರೀಂ ಕೋರ್ಟ್ (Supreme Court) ಮಧ್ಯಂತರ ತಡೆ ನೀಡಿದೆ.

    ಅಸೋಸಿಯೇಷನ್ ​​ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಮತ್ತು ಸಂಸದೆ ಮಹುವಾ ಮೊಯಿತ್ರಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಹೃಷಿಕೇಶ್ ರಾಯ್ ಮತ್ತು ಎಸ್‌ವಿಎನ್ ಭಟ್ಟಿ ಅವರ ಪೀಠವು ಉತ್ತರ ಪ್ರದೇಶ, ಮಧ್ಯಪ್ರದೇಶ, ದೆಹಲಿ ಮತ್ತು ಕನ್ವರ್ ಯಾತ್ರೆ ನಡೆಯುವ ಇತರ ರಾಜ್ಯ ಸರ್ಕಾರಗಳಿಗೆ ನೋಟಿಸ್ ನೀಡಿದೆ. ಜು.26ಕ್ಕೆ ವಿಚಾರಣೆ ಮುಂದೂಡಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ 40 ಕೋಟಿ ರೂ. ಹಣ ಖಜಾನೆಯಿಂದ ನೇರವಾಗಿ ಬೇರೆ ಖಾತೆಗಳಿಗೆ: ಸ್ಪಷ್ಟೀಕರಣ ಕೇಳಿದ ಬೊಮ್ಮಾಯಿ

    ಅಸೋಸಿಯೇಷನ್ ​​ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಪರ ವಾದಿಸಿದ ಹಿರಿಯ ವಕೀಲ ಚಂದರ್ ಉದಯ್ ಸಿಂಗ್, ಅಧಿಕಾರಿಗಳು ಸ್ವಯಂಪ್ರೇರಣೆಯಿಂದ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಇದು ಯಾವುದೇ ಶಾಸನಬದ್ಧ ಬೆಂಬಲವನ್ನು ಆಧರಿಸಿಲ್ಲ. ಇದನ್ನು ಮಾಡಲು ಯಾವುದೇ ಕಾನೂನು ಪೊಲೀಸ್ ಆಯುಕ್ತರಿಗೆ ಅಧಿಕಾರವನ್ನು ನೀಡುವುದಿಲ್ಲ. ಸಸ್ಯಾಹಾರ ಅಥವಾ ಮಾಂಸಾಹಾರ ಇತ್ಯಾದಿಗಳನ್ನು ಮಾತ್ರ ಉಲ್ಲೇಖಿಸಬೇಕಾಗಿದೆ. ಇದು ಕೇವಲ ಢಾಬಾಗಳಿಗೆ ಮಾತ್ರವಲ್ಲ, ಈಗ ಪ್ರತಿಯೊಬ್ಬ ಮಾರಾಟಗಾರರಿಗೂ ಅನ್ವಯಿಸುತ್ತದೆ. ಆದರೆ ಸರ್ಕಾರದ ಆದೇಶ ಈ ಯಾವುದೇ ಉದ್ದೇಶವನ್ನು ಪೂರೈಸುವುದಿಲ್ಲ. ಇಂತಹ ನಿರ್ದೇಶನದಿಂದ ಕೆಲವು ಮಾಲೀಕರು ಆರ್ಥಿಕ ಬಹಿಷ್ಕಾರಕ್ಕೆ ಒಳಗಾಗಿ ನಷ್ಟ ಹೊಂದಲಿದ್ದಾರೆ ಎಂದು ಹೇಳಿದರು.

    ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದಿಸಿದರು. ಕನ್ವರಿಯಾ ಯಾತ್ರೆಗಳು ದಶಕಗಳಿಂದ ನಡೆಯುತ್ತಿವೆ. ಮುಸ್ಲಿಮರು ಸೇರಿದಂತೆ ಎಲ್ಲಾ ಧರ್ಮದ ಜನರು ಅವರ ದಾರಿಯಲ್ಲಿ ಸಹಾಯ ಮಾಡುತ್ತಾರೆ. ಈಗ ನೀವು ಅವರನ್ನು ಹೊರಗಿಡುತ್ತಿದ್ದೀರಿ. ಹಿಂದೂಗಳು ನಡೆಸುತ್ತಿರುವ ಅನೇಕ ಸಸ್ಯಾಹಾರಿ ರೆಸ್ಟೋರೆಂಟ್‌ಗಳು ಮುಸ್ಲಿಂ ಮತ್ತು ದಲಿತ ಉದ್ಯೋಗಿಗಳನ್ನು ಹೊಂದಿರಬಹುದು. ಅವರಲ್ಲಿ ಮುಸ್ಲಿಂ ಅಥವಾ ದಲಿತ ಉದ್ಯೋಗಿಗಳಿದ್ದರೆ ನೀವು ಅಲ್ಲಿ ತಿನ್ನುವುದಿಲ್ಲ ಎಂದು ಹೇಳುತ್ತೀರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಇಂದಿನಿಂದ ಸಂಸತ್‌ ಅಧಿವೇಶನ ಆರಂಭ – ನಾಳೆ ಕೇಂದ್ರ ಬಜೆಟ್‌ ಮಂಡನೆ

    ಈ ವೇಳೆ ಮಧ್ಯ ಪ್ರವೇಶ ಮಾಡಿದ ನ್ಯಾ. ರಾಯ್, ಕನ್ವರಿಯಾಗಳ ನಿರೀಕ್ಷೆಗಳ ಬಗ್ಗೆ ಕೇಳಿದರು? ಇದಕ್ಕೆ ಉತ್ತರಿಸಿದ ಅರ್ಜಿದಾರರ ಪರ ವಕೀಲರು, ಅವರು ಶಿವನನ್ನು ಪೂಜಿಸುತ್ತಾರೆ. ಹೌದು? ಅವರು ಸಸ್ಯ ಆಹಾರವನ್ನು ಬಯಸುತ್ತಾರೆ ಎಂದರು. ಇದಕ್ಕೆ ಪ್ರತಿವಾದ ಮಾಡಿದ ಸಿಂಘ್ವಿ, ಆದರೆ ಒಂದು ನಿರ್ದಿಷ್ಟ ಸಮುದಾಯದಿಂದ ಬೆಳೆಯಬೇಕೆಂದು, ಬಡಿಸಬೇಕೆಂದು ಅವರು ನಿರೀಕ್ಷಿಸುತ್ತಾರೆಯೇ? ಊಟದ ಮಾಲೀಕರು ಯಾರು ಎಂದು ಕೆಲವರು ಕೇಳುವುದಿಲ್ಲ. ಆದರೆ ಏನು ನೀಡಲಾಗುತ್ತಿದೆ ಎಂದು ಮಾತ್ರ ಕೇಳುತ್ತಾರೆ ಎಂದರು.

    ವಾದ ಆಲಿಸಿದ ಬಳಿಕ ಮಧ್ಯಂತರ ಆದೇಶ ಪ್ರಕಟಿಸಿದ ಸುಪ್ರೀಂ ಕೋರ್ಟ್, ಸರ್ಕಾರದ ನಿರ್ದೇಶನಗಳನ್ನು ಜಾರಿಗೊಳಿಸುವುದನ್ನು ನಿಷೇಧಿಸುವ ಮಧ್ಯಂತರ ಆದೇಶವನ್ನು ರವಾನಿಸುವುದು ಸೂಕ್ತವೆಂದು ನಾವು ಪರಿಗಣಿಸುತ್ತೇವೆ. ಆಹಾರ ಮಾರಾಟಗಾರರು, ವ್ಯಾಪಾರಿಗಳು ಇತ್ಯಾದಿಗಳು ಆಹಾರದ ಪ್ರಕಾರವನ್ನು ಪ್ರದರ್ಶಿಸುವ ಅಗತ್ಯವಿದೆ. ಅವರ ವೈಯಕ್ತಿಯ ಮಾಹಿತಿ ನೀಡುವಂತೆ ಒತ್ತಾಯಿಸುವಂತಿಲ್ಲ. ಅವರು ಕನ್ವರಿಯಾರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಅವರ ಹೆಸರುಗಳನ್ನು ಬಹಿರಂಗಪಡಿಸಲು ಒತ್ತಾಯಿಸಬಾರದು ಎಂದು ನ್ಯಾಯಾಲಯ ಆದೇಶಿಸಿದೆ.

  • ಕನ್ವರ್ ಯಾತ್ರೆಯ ಮಾರ್ಗಗಳಲ್ಲಿ ಮಾಂಸ ಮಾರಾಟ ಮಾಡುವಂತಿಲ್ಲ: ಯೋಗಿ ಆದಿತ್ಯನಾಥ್‌ ಸೂಚನೆ

    ಕನ್ವರ್ ಯಾತ್ರೆಯ ಮಾರ್ಗಗಳಲ್ಲಿ ಮಾಂಸ ಮಾರಾಟ ಮಾಡುವಂತಿಲ್ಲ: ಯೋಗಿ ಆದಿತ್ಯನಾಥ್‌ ಸೂಚನೆ

    ಲಕ್ನೋ: ಕನ್ವರ್‌ ಯಾತ್ರೆಯ (Kanwar Yatra) ಮಾರ್ಗಗಳಲ್ಲಿ ಮುಕ್ತವಾಗಿ ಮಾಂಸ ಮಾರಾಟವನ್ನು ರದ್ದು ಮಾಡಲು ಉತ್ತರ ಪ್ರದೇಶ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಅಗತ್ಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸರ್ಕಾರ ಸೂಚನೆಗಳನ್ನು ನೀಡಿದೆ.

    ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಂಬರುವ ಹಬ್ಬದ ಸೀಸನ್‌ಗೆ ಮುನ್ನ ಪೊಲೀಸ್ ಕಮಿಷನರ್‌, ವಿಭಾಗೀಯ ಕಮಿಷನರ್‌, ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಈ ಸಂಬಂಧ ನಿರ್ದೇಶನಗಳನ್ನು ನೀಡಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ರಸ್ತೆಗಳಿಗೆ ಸಾವರ್ಕರ್‌, ವಾಜಪೇಯಿ ಹೆಸರು ಮರು ನಾಮಕರಣ

    ಈ ಬಾರಿ ಅಧಿಕ ಶ್ರಾವಣ ಇರುವ ಕಾರಣಕ್ಕೆ 8 ಸೋಮವಾರಗಳು ಬರಲಿವೆ. ಶಿವಭಕ್ತರಿಗೆ ಶ್ರಾವಣ ಮಾಸ ಬಹಳ ಮುಖ್ಯ. ಈ ಅವಧಿಯಲ್ಲಿ ಶ್ರಾವಣಿ ಶಿವರಾತ್ರಿ, ನಾಗಪಂಚಮಿ, ರಕ್ಷಾಬಂಧನ ಹಬ್ಬಗಳನ್ನು ಆಚರಿಸಲಾಗುವುದು. ಈ ಹಿನ್ನೆಲೆಯಲ್ಲಿ ಮುಕ್ತವಾಗಿ ಮಾಂಸ ಮಾರಾಟ ಮಾಡುವಂತಿಲ್ಲ ಎಂದಿದ್ದಾರೆ.

    ಪವಿತ್ರ ಮಾಸ ಶ್ರಾವಣದಲ್ಲಿ ಜುಲೈ 4ರಿಂದ ಸಾಂಪ್ರದಾಯಿಕ ಕನ್ವರ್ ಯಾತ್ರೆ ಆರಂಭವಾಗಲಿದ್ದು, ಇದಕ್ಕೂ ಮುನ್ನ ಜೂನ್ 29ರಂದು ಬಕ್ರಿದ್‌ ಆಚರಣೆಯಾಗಲಿದ್ದು, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಈ ಬಾರಿ ಸೂಕ್ಷ್ಮವಾಗಿರುವುದು ಸ್ಪಷ್ಟ. ನಾವು ನಿರಂತರವಾಗಿ ಜಾಗರೂಕರಾಗಿರಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚಾಗುತ್ತಿದೆ ದರೋಡೆ ಕೇಸ್‌ – ಶಾ ವಿರುದ್ಧ ಕೇಜ್ರಿವಾಲ್ ಆಕ್ರೋಶ

    ಭಕ್ತರ ನಂಬಿಕೆಯನ್ನು ಗೌರವಿಸಿ, ಕನ್ವರ್ ಮಾರ್ಗದಲ್ಲಿ ಮಾಂಸ ಮಾರಾಟಕ್ಕೆ ಅವಕಾಶ ನೀಡಬಾರದು. ಮಾರ್ಗವನ್ನು ಸ್ವಚ್ಛವಾಗಿ ಮತ್ತು ನೈರ್ಮಲ್ಯದಿಂದ ಇಡಬೇಕು. ಬೀದಿದೀಪಗಳ ವ್ಯವಸ್ಥೆ ಮಾಡಬೇಕು, ಬಿಸಿ ವಾತಾವರಣ ಇರುವುದರಿಂದ ಕುಡಿಯುವ ನೀರಿನ ವ್ಯವಸ್ಥೆಯೂ ಆಗಬೇಕು ಎಂದು ಹೇಳಿದ್ದಾರೆ.

    ಅಲ್ಲದೇ ಕನ್ವರ್ ಯಾತ್ರೆ ನಡೆಯುವ ಮಾರ್ಗಗಳಲ್ಲಿ ಸಿಸಿಟಿವಿ ಅಳವಡಿಸಲಬೇಕು, ಡೈವರ್‌ಗಳನ್ನು ನಿಯೋಜಿಸಬೇಕು, ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಕನ್ವರ್ ಕ್ಯಾಂಪ್‌ಗಳನ್ನು ಸ್ಥಾಪಿಸುವ ಸ್ಥಳಗಳನ್ನು ಮುಂಚಿತವಾಗಿ ಗುರುತಿಸಬೇಕು ಎಂದು ಸಿಎಂ ಆದೇಶಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕನ್ವರ್‌ ಯಾತ್ರೆ ವೇಳೆ ಹಿಂದಿಕ್ಕಿದ್ದಕ್ಕೆ ಯೋಧನನ್ನು ಹೊಡೆದು ಕೊಂದ ಶಿವ ಭಕ್ತರ ಗುಂಪು!

    ಕನ್ವರ್‌ ಯಾತ್ರೆ ವೇಳೆ ಹಿಂದಿಕ್ಕಿದ್ದಕ್ಕೆ ಯೋಧನನ್ನು ಹೊಡೆದು ಕೊಂದ ಶಿವ ಭಕ್ತರ ಗುಂಪು!

    ಲಕ್ನೋ: ಕನ್ವರ್‌ ಯಾತ್ರೆ ಕೈಗೊಂಡಿದ್ದ ವೇಳೆ ಕನ್ವಾರಿಯಾಗಳ (ಶಿವ ಭಕ್ತರ) ಗುಂಪೊಂದನ್ನು ಹಿಂದಿಕ್ಕಿದ ಕಾರಣಕ್ಕೆ 25 ವರ್ಷ ವಯಸ್ಸಿನ ಯೋಧರೊಬ್ಬರನ್ನು ಹತ್ಯೆ ಮಾಡಿರುವ ಘಟನೆ ಹರಿದ್ವಾರದಲ್ಲಿ ನಡೆದಿದೆ.

    ಉತ್ತರ ಪ್ರದೇಶದಿಂದ ಕನ್ವಾರಿಯಾಗಳ ಗುಂಪಿನೊಂದಿಗೆ ಯೋಧ ಕಾರ್ತಿಕ್‌ ಅವರು ಕನ್ವರ್‌ ಯಾತ್ರೆ ಕೈಗೊಂಡಿದ್ದರು. ಹರಿಯಾಣದಿಂದ ಯಾತ್ರೆ ಕೈಗೊಂಡಿದ್ದ ಕನ್ವಾರಿಯಾಗಳ ಮತ್ತೊಂದು ಗುಂಪು ಯೋಧ ಕಾರ್ತಿಕ್‌ರನ್ನು ಹತ್ಯೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರವೀಣ್ ಹತ್ಯೆ ಪ್ರಕರಣ- NIA ತನಿಖೆಗೆ ವಹಿಸುವಂತೆ ಅಮಿತ್ ಶಾಗೆ ಪತ್ರ ಬರೆದ ಶೋಭಾ ಕರಂದ್ಲಾಜೆ

    ಭಾರತೀಯ ಸೇನೆಯ ಜಾಟ್ ರೆಜಿಮೆಂಟ್‌ನ ಯೋಧ ಕಾರ್ತಿಕ್ ಹಲ್ಲೆಗೊಳಗಾದವರು. ಎರಡು ಗುಂಪುಗಳು ಮೋಟಾರ್‌ ಬೈಕ್‌ನಲ್ಲಿ ಚಲಾಯಿಸುತ್ತಿದ್ದ ವೇಳೆ ಪರಸ್ಪರ ರೇಸಿಂಗ್ ಮಾಡಿದ್ದಾರೆ. ಹರಿಯಾಣದಿಂದ ಬಂದ ಕನ್ವಾರಿಯಾಗಳು ಕಾರ್ತಿಕ್ ಮೇಲೆ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಿದ್ದಾರೆ.

    ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಯೋಧರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಹರಿದ್ವಾರ ಪೊಲೀಸ್ ಅಧೀಕ್ಷಕ (ಗ್ರಾಮೀಣ) ಪ್ರಮೇಂದ್ರ ದೋಭಾಲ್ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದ್ದು, ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:  ಶೇ. 50ರಷ್ಟು ವಿಮಾನವಷ್ಟೇ ಕಾರ್ಯ ನಿರ್ವಹಿಸಲು ಸ್ಪೈಸ್‍ಜೆಟ್‍ಗೆ ಆದೇಶ

    ಕಾರ್ತಿಕ್ ಅವರು ಮುಜಾಫರ್‌ನಗರ ಜಿಲ್ಲೆಯ ಸಿಸೌಲಿ ಗ್ರಾಮದವರಾಗಿದ್ದು, ಮಂಗಳವಾರ ಈ ಘಟನೆ ಸಂಭವಿಸಿದೆ. ತನ್ನ ಗುಂಪಿನ ಇತರ ಸದಸ್ಯರೊಂದಿಗೆ ಗಂಗಾಜಲವನ್ನು ಸಂಗ್ರಹಿಸಿ ಹರಿದ್ವಾರದಿಂದ ಹಿಂದಿರುಗುತ್ತಿದ್ದ ವೇಳೆ ಘಟನೆ ನಡೆದಿದೆ ಎಂದು ಎಸ್‌ಪಿ ದೋಭಾಲ್ ತಿಳಿಸಿದ್ದಾರೆ.

    ಬಂಧಿತರನ್ನು ಸುಂದರ್ (38), ರಾಹುಲ್ (20), ಸಚಿನ್ (25), ಆಕಾಶ್ (21), ಪಂಕಜ್ (22) ಮತ್ತು ರಿಂಕು (24) ಎಂದು ಪೊಲೀಸರು ಗುರುತಿಸಿದ್ದಾರೆ. ಇವರೆಲ್ಲರೂ ಹರಿಯಾಣದ ಪಾಣಿಪತ್ ಜಿಲ್ಲೆಯ ಚುಲ್ಕಾನಾ ಗ್ರಾಮದವರು ಎಂದು ಎಸ್ಪಿ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವೃದ್ಧ ತಂದೆ, ತಾಯಿಯನ್ನು ಹೆಗಲ ಮೇಲೆ ಹೊತ್ತು ತೀರ್ಥಯಾತ್ರೆಗೆ ಹೊರಟ ವ್ಯಕ್ತಿ – ವೀಡಿಯೋ ವೈರಲ್

    ವೃದ್ಧ ತಂದೆ, ತಾಯಿಯನ್ನು ಹೆಗಲ ಮೇಲೆ ಹೊತ್ತು ತೀರ್ಥಯಾತ್ರೆಗೆ ಹೊರಟ ವ್ಯಕ್ತಿ – ವೀಡಿಯೋ ವೈರಲ್

    ಡೆಹ್ರಾಡೂನ್: ಪೋಷಕರು ಮಕ್ಕಳ ಜೀವನಕ್ಕೆ ದಾರಿ ದೀಪವಾಗಿರುತ್ತಾರೆ. ಮಕ್ಕಳು ಚಿಕ್ಕವರಿದ್ದಾಗಿಂದಲೂ ದೊಡ್ಡವರಾಗುವವರೆಗೂ ಸರಿಯಾದ ಹಾದಿಯಲ್ಲಿ ನಡೆಸಿ, ಜೀವನವನ್ನು ಕಟ್ಟಿಕೊಳ್ಳುವವರೆಗೂ ತಮ್ಮ ಮಕ್ಕಳಿಗೆ ಬೆನ್ನೆಲುಬಾಗಿ ಸದಾ ಕಾಲ ಜೊತೆಯಾಗಿರುತ್ತಾರೆ. ಅವರ ಋಣ ತೀರಿಸಲು ಎಂದಿಗೂ ಸಾಧ್ಯವಿಲ್ಲ.

    ನಿಜಕ್ಕೂ ಅಂತಹ ಪೋಷಕರ ಪ್ರೀತಿ ನಿಮಗೆ ಸಿಕ್ಕಿದೆ ಎಂದರೆ, ನೀವು ಬಹಳ ಅದೃಷ್ಟವಂತರು ಎಂದೇ ಹೇಳಬಹುದು. ಆದರೆ ಅದೆಷ್ಟೋ ಮಂದಿ ತಂದೆ, ತಾಯಿಗೆ ವಯಸ್ಸಾದ ಬಳಿಕ ವೃದ್ಧಾಶ್ರಮಗಳಿಗೆ ಸೇರಿಸುವಂತವರು ಕೂಡ ಇದ್ದಾರೆ. ಈ ಎಲ್ಲದರ ಮಧ್ಯೆ ತೇತ್ರಾಯುಗದ ಶ್ರವಣಕುಮಾರನಂತೆ ವ್ಯಕ್ತಿಯೋರ್ವ ತನ್ನ ತಂದೆ, ತಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಕನ್ವರ್ ಯಾತ್ರೆಗೆ ಹೋಗುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಐಪಿಎಸ್ ಅಧಿಕಾರಿ ಅಶೋಕ್ ಕುಮಾರ್ ಅವರು ಈ ವೀಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಯುವಕನೋರ್ವ ತನ್ನ ಪೋಷಕರನ್ನು ಹೆಗಲ ಮೇಲೆ ಹೊತ್ತುಕೊಂಡು ಕನ್ವರ್ ಯಾತ್ರೆಗೆ ಹೋಗುತ್ತಿರುವನ್ನು ಕಾಣಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ವಯಸ್ಸಾದ ಪೋಷಕರನ್ನು ಮಕ್ಕಳು ತಿರಸ್ಕರಿಸುವುದೇ ಹೆಚ್ಚಾಗಿದೆ. ವಯಸ್ಸಾದ ಬಳಿಕ ಅವರನ್ನು ಮನೆಯಿಂದ ಹೊರಹಾಕಲಾಗುತ್ತಿದೆ. ಈ ನಡುವೆ ತೇತ್ರಾಯುಗದ ಶ್ರವಣ ಕುಮಾರನಂತೆ, ತನ್ನ ವೃದ್ಧ ತಂದೆ, ತಾಯಿಯನ್ನು ಪಲ್ಲಕ್ಕಿಯ ಮೇಲೆ ಕೂರಿಸಿಕೊಂಡು ವ್ಯಕ್ತಿ ಕನ್ವರ್ ಯಾತ್ರೆಗೆ ತೆರಳಿದ್ದಾನೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಇಡಿ ವಿಚಾರಣೆಗೆ ಸೋನಿಯಾ ಹಾಜರ್ – ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಜಲಫಿರಂಗಿ

    ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, 10 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಿದ್ದಾರೆ. ವ್ಯಕ್ತಿಯ ಮನೋಭಾವಕ್ಕೆ “ಜಿತ್ನಿ ತಾರೀಫ್ ಕರು ಉತ್ನಿ ಕಾಮ್ ಹೈ’ ಎಂದು ಕಾಮೆಂಟ್ ಮಾಡುವ ಮೂಲಕ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ, ಜೊತೆಗೆ ಆತನಿಗೊಂದು ಸೆಲ್ಯೂಟ್ ಎನ್ನುತ್ತಿದ್ದಾರೆ. ಇದನ್ನೂ ಓದಿ: 3-4 ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ, ಈಗ ಋಣ ತೀರಿಸುವ ಸಮಯ ಬಂದಿದೆ: ರಮೇಶ್ ಕುಮಾರ್

    Live Tv
    [brid partner=56869869 player=32851 video=960834 autoplay=true]

  • ಏನಿದು ಕನ್ವರ್ ಯಾತ್ರೆ, ವಿವಾದಕ್ಕಿಡಾಗಿರುವುದೇಕೆ?

    ಏನಿದು ಕನ್ವರ್ ಯಾತ್ರೆ, ವಿವಾದಕ್ಕಿಡಾಗಿರುವುದೇಕೆ?

    -ಶಬ್ಬೀರ್ ನಿಡಗುಂದಿ

    ನವದೆಹಲಿ : ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಟೀಕೆಗೊಳಪಟ್ಟ ಕುಂಭಮೇಳದ ಬಳಿಕ, ಈಗ ಮೂರನೇ ಅಲೆಯ ಭೀತಿಯ ನಡುವೆ ಕನ್ವರ್ ಯಾತ್ರೆ ಹೊಸ ವಿವಾದಕ್ಕೆ ಕಾರಣವಾಗಿದೆ. ಕನ್ವರ್ ಯಾತ್ರೆಗೆ ಅವಕಾಶ ನೀಡಬೇಕಾ ಬೇಡವಾ ಅನ್ನೊ ವಿಚಾರಕ್ಕೆ ಸಂಬಂಧಿಸಿದಂತೆ ಪರ ವಿರೋಧ ಚರ್ಚೆಗಳು ಶುರುವಾಗಿದೆ.

    ಕನ್ವರ್ ಯಾತ್ರೆಗೆ ಈ ಬಾರಿ ಅನುಮತಿ ನಿರಾಕರಿಸಿರುವ ಉತ್ತರಾಖಂಡ ಸರ್ಕಾರ ಕೊರೊನಾ ಸಂದರ್ಭದಲ್ಲಿ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಜನರ ಜೀವದ ಜೊತೆ ಚೆಲ್ಲಾಟವಾಡುವ ಪ್ರಯತ್ನ ಬೇಡ ಎಂದು ಹೇಳಿದೆ. ಭಾರತೀಯ ವೈದ್ಯಕೀಯ ಸಂಘ ಬರೆದ ಪತ್ರದ ಬಳಿಕ ಸಿಎಂ ಪುಷ್ಕರ್ ಸಿಂಗ್ ಧಾಮಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಒಂದು ವೇಳೆ ಯಾತ್ರೆ ನಡೆಯುವ ಹರಿದ್ವಾರ ನಗರವನ್ನು ಪ್ರವೇಶಿಸಬೇಕಾದರೇ 14 ದಿನದ ಕ್ವಾರಂಟೈನ್ ಮುಗಿಸಬೇಕು ಎಂದು ಹೇಳಲಾಗಿದೆ.

    ಆದರೆ ಈ ನಡುವೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭಿನ್ನ ನಿಲುವು ತೆಗೆದುಕೊಂಡಿದ್ದಾರೆ. ಯಾತ್ರೆಗೆ ಷರತ್ತು ಬದ್ಧ ಅನುಮತಿ ನೀಡುವುದಾಗಿ ಹೇಳಿದ್ದಾರೆ. ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಕೇಂದ್ರೀಕೃತವಾಗಿ ಆಚರಿಸುವ ಯಾತ್ರೆ ಇದಾಗಿದ್ದು, ಈಗ ಅನುಮತಿ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದೆ.

    ಉತ್ತರ ಪ್ರದೇಶ ಸರ್ಕಾರ ಇಂತದೊಂದು ನಿರ್ಧಾರ ತೆಗೆದುಕೊಳ್ಳುತ್ತಿದ್ದಂತೆ ಸುಪ್ರೀಂಕೋರ್ಟ್ ಸ್ವಯಂ ದೂರು ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದೆ. ಕೊರೊನಾ ಸಂದರ್ಭದಲ್ಲಿ ಲಕ್ಷಾಂತರ ಜನ ಸೇರುವ ಕಾರ್ಯಕ್ರಮಕ್ಕೆ ಅನುಮತಿ ನೀಡುವ ವಿಚಾರದ ಬಗ್ಗೆ ಅದು ಆತಂಕ ವ್ಯಕ್ತಪಡಿಸಿದೆ. ಸದ್ಯ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು ವಿಚಾರಣೆ ಮುಂದೂಡಲಾಗಿದೆ.

    ಜುಲೈ 25 ರಿಂದ ಅಗಸ್ಟ್ 6 ಈವರೆಗೂ ಈ ಯಾತ್ರೆ ನಡೆಯಲಿದೆ. 2019ರಲ್ಲಿ ನಡೆದ ಕನ್ವರ್ ಯಾತ್ರೆ ಸಂದರ್ಭದಲ್ಲಿ ಹರಿದ್ವಾರಕ್ಕೆ 3.5 ಕೋಟಿ ಮತ್ತು ಉತ್ತರಪ್ರದೇಶದ ನದಿ ತೀರಗಳಿಗೆ 2 -3 ಕೋಟಿ ಭಕ್ತಾದಿಗಳು ಭೇಟಿ ನೀಡಿದ್ದರು. ಈ ಪ್ರಮಾಣದಲ್ಲಿ ಸೇರುವ ಈ ಯಾತ್ರೆ ಈಗ ಕೊರೊನಾ ಸಂದರ್ಭದಲ್ಲಿ ದೊಡ್ಡ ಆತಂಕವನ್ನು ಸೃಷ್ಟಿ ಮಾಡುತ್ತಿದೆ.

    ಏನಿದು ಕನ್ವರ್ ಯಾತ್ರೆ?
    ಕನ್ವರ್ ಯಾತ್ರೆ ಎಂಬುದು ಹಿಂದೂ ಕ್ಯಾಲೆಂಡರ್ ತಿಂಗಳ ಶ್ರಾವಣ (ಸಾವನ್) ದಲ್ಲಿ ಆಯೋಜಿಸಲಾಗುವ ತೀರ್ಥಯಾತ್ರೆಯಾಗಿದೆ. ಕೇಸರಿ ಬಟ್ಟೆಯ ಹೊದಿಕೆಯಿರುವ ಶಿವ ಭಕ್ತರು ಗಂಗಾ ಅಥವಾ ಇತರ ಪವಿತ್ರ ನದಿಗಳಿಂದ ಪವಿತ್ರ ನೀರಿನ ಹೂಜಿಗಳೊಂದಿಗೆ ಬರಿಗಾಲಿನಲ್ಲಿ ನಡೆಯುತ್ತಾರೆ. ಗಂಗಾ ಬಯಲು ಪ್ರದೇಶದಲ್ಲಿ, ಉತ್ತರಾಖಂಡದ ಹರಿದ್ವಾರ, ಗೌಮುಖ್ ಮತ್ತು ಗಂಗೋತ್ರಿ, ಬಿಹಾರದ ಸುಲ್ತಂಗಂಜ್, ಮತ್ತು ಉತ್ತರ ಪ್ರದೇಶದ ಪ್ರಯಾಗ್ರಾಜ್, ಅಯೋಧ್ಯೆ ಅಥವಾ ವಾರಣಾಸಿಯಂತಹ ತೀರ್ಥಯಾತ್ರೆಯ ಸ್ಥಳಗಳಿಂದ ನೀರನ್ನು ತೆಗೆದುಕೊಂಡು ಹೋಗಲಾಗುತ್ತದೆ.

    ನೀರಿನ ಹೂಜಿಗಳನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಹೋಗುವ ಶಿವ ಭಕ್ತರನ್ನು ಕನ್ವರ್ಸ್ ಎಂದು ಕರೆಯಲಾಗುತ್ತೆ. ಅಲಂಕೃತ ಜೋಲಿಗಳ ಮೇಲೆ ನೀರನ್ನು ತಂದು 12 ಜೋರ್ತಿಲಿಂಗಗಳು ಅಥವಾ ತಮ್ಮ ಗ್ರಾಮ ಅಥವಾ ಪಟ್ಟಣಗಳಲ್ಲಿರುವ ಶಿವಲಿಂಗದ ದೇವಸ್ಥಾನಗಳಲ್ಲಿ ಪೂಜೆಗೆ ಬಳಕೆ ಮಾಡಲಾಗುತ್ತದೆ. ವಿಶೇಷ ಪೂಜೆಯ ಬಳಿಕ ನದಿಯ ನೀರು ಹೂಜಿಗಳಲ್ಲಿ ತುಂಬಿದ ಮೇಲೆ ಅದನ್ನು ನೆಲಕ್ಕೆ ತಾಗಿಸುವಂತಿಲ್ಲ. ಇವುಗಳನ್ನು ಹೊತ್ತು ನೂರಾರು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಪ್ರಯಾಣಿಸಬೇಕು. ಈ ಕಾರಣದಿಂದಲೇ ಕನ್ವರ್ಸ್ ರನ್ನು ಪೂಜ್ಯ ಭಾವದಿಂದ ನೋಡಲಾಗುತ್ತೆ. ಈ ರೀತಿಯ ಶಿವಪೂಜೆಗೆ ಗಂಗಾನದಿಯ ತಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಶೇಷ ಮಹತ್ವವಿದೆ. ಕನ್ವರ್ ಯಾತ್ರೆಗೆ ಹೋಲುವ ಪ್ರಮುಖ ಹಬ್ಬವನ್ನು ತಮಿಳುನಾಡಿನಲ್ಲಿ ಆಚರಿಸಲಾಗುತ್ತದೆ, ಅಲ್ಲಿ ಮುರುಗನನ್ನು ಪೂಜಿಸಲಾಗುತ್ತದೆ.

    ಪೌರಾಣಿಕ ಹಿನ್ನೆಲೆ:
    ಲೋಕಕಲ್ಯಾಣಕ್ಕಾಗಿ ಶಿವ ವಿಷ ಸೇವಿಸಿದಾಗ ಅದನ್ನು ಪಾರ್ವತಿ ಗಂಟಲಿನಲ್ಲಿ ತಡೆ ಹಿಡಿಯುತ್ತಾಳೆ. ಶಿವನ ಗಂಟಲು ನೀಲಿ ಬಣ್ಣಕ್ಕೆ ತಿರುಗುತ್ತ ನೀಲಕಂಠ ಅಥವಾ ವಿಷಕಂಟನಾಗುತ್ತಾನೆ. ಅದಾಗ್ಯೂ ವಿಷ ದೇಹವನ್ನು ಸೇರಿ ದೇಹ ಊದಿಕೊಳ್ಳುತ್ತದೆ, ವಿಷ ಪರಿಣಾಮ ಕಡಿಮೆ ಮಾಡಲು ನೀಡು ಅರ್ಪಿಸಲಾಗಿತ್ತು. ಇದರ ನಂಬಿಕೆಗಾಗಿ ಪ್ರತಿ ವರ್ಷ ಪವಿತ್ರ ನದಿಗಳಿಂದ ತಂದ ನೀರಿನಿಂದ ಶಿವಲಿಂಗಕ್ಕೆ ಪೂಜೆ ಸಲ್ಲಿಸಲಾಗುತ್ತೆ. ಮತ್ತೊಂದು ನಂಬಿಕೆಯ ಪ್ರಕಾರ, ಶಿವ ಭಕ್ತ ಪರಶುರಾಮ ಮೊದಲು ಈ ಪದ್ದತಿಯನ್ನು ಆರಂಭಿಸಿದ ಎನ್ನಲಾಗುತ್ತೆ. ಪರಶುರಾಮ್ ಶಿವನ ಆರಾಧನೆಗಾಗಿ ಶ್ರಾವಣ ಮಾಸದಲ್ಲಿ ಪ್ರತಿ ಸೋಮವಾರ ಗಂಗಾಜಲ ತಂದು ಪೂಜಿಸುತ್ತಿದ್ದ ಎಂದು ನಂಬಲಾಗುತ್ತೆ.

    ಕಾಲ್ನಡಿಗೆ ಪ್ರಯಾಣ:
    ಕನ್ವರ್ ಯಾತ್ರೆ ಕಾಲ್ನಡಿಗೆಯ ಅತ್ಯಂತ ಕಷ್ಟಕರವಾದ ಪ್ರಯಾಣ. ಇದು 100 ಕಿಲೋಮೀಟರ್‍ಗಳಷ್ಟು ವಿಸ್ತರಾವಾಗಿರಬಹುದು. ವೃದ್ಧರು, ಯುವಕರು, ಮಹಿಳೆಯರು, ಪುರುಷರು, ಮಕ್ಕಳು, ಮತ್ತು ವಿಕಲಚೇತನರು ಸೇರಿ ಎಲ್ಲ ವರ್ಗದ ಜನರು ಇದರಲ್ಲಿ ಭಾಗಿಯಾಗುತ್ತಾರೆ.

    ‘ಬೋಲ್ ಬಾಮ್’ ಮತ್ತು ‘ಜೈ ಶಿವಶಂಕರ್’ ಎಂದು ಜಪಿಸುವ ಈ ಭಕ್ತಾದಿಗಳು ಗಂಗೋತ್ರಿ, ಗೌಮುಖ್, ಮತ್ತು ಹರಿದ್ವಾರ ಮುಂತಾದ ಪವಿತ್ರ ನದಿ ಸಂಗಮಗಳ ತಾಣಗಳಲ್ಲಿ ಸೇರುತ್ತಾರೆ. ಪಶ್ಚಿಮ ಉತ್ತರ ಪ್ರದೇಶ, ಪಂಜಾಬ್, ಹರಿಯಾಣ ಮತ್ತು ದೆಹಲಿಯಂತಹ ರಾಜ್ಯಗಳ ಭಕ್ತರು ಸಾಮಾನ್ಯವಾಗಿ ಉತ್ತರಾಖಂಡಕ್ಕೆ ಪ್ರಯಾಣಿಸಿದರೇ, ಅಯೋಧ್ಯೆ ಮತ್ತು ಹತ್ತಿರದ ಜಿಲ್ಲೆಗಳಿಂದ ಬರುವ ಭಕ್ತರು ಬಿಹಾರದ ಭಾಗಲ್ಪುರ್ ಜಿಲ್ಲೆಯ ಗಂಗಾನದಿ ಮೂಲಕ ಸುಲ್ತಂಗಂಜ್ಗೆ ಹೋಗುತ್ತಾರೆ.

    ಕೆಲವರು ಜಾರ್ಖಂಡ್‍ನ ದಿಯೋಘರ್‍ನಲ್ಲಿರುವ ಬಾಬಾ ಬೈದ್ಯನಾಥ ಧಮ್‍ಗೆ ಪವಿತ್ರ ನೀರನ್ನು ಅರ್ಪಿಸಲಾಗುತ್ತೆ. ಇನ್ನು ಕೆಲವರು ಜಾರ್ಖಂಡ್‍ನ ದುಮ್ಕಾ ಜಿಲ್ಲೆಯ ಬಾಬಾ ಬಸುಕಿನಾಥ್ ಧಾಮ್‍ಗೆ ಪ್ರಯಾಣಿಸುತ್ತಾರೆ. ಪೂರ್ವ ಯುಪಿಯ ಜನರು ಅಯೋಧ್ಯೆಯ ಸರಯು ನದಿಯಿಂದ ನೀರನ್ನು ತೆಗೆದುಕೊಂಡು ಪಟ್ಟಣದ ಕ್ಷೀರೇಶ್ವರ ಮಹಾದೇವ್ ದೇವಸ್ಥಾನಕ್ಕೆ ಅರ್ಪಿಸುತ್ತಾರೆ. ಇತರರು ವಾರಣಾಸಿಗೆ ಹೋಗಿ ಕಾಶಿ ವಿಶ್ವನಾಥರಿಗೆ ಗಂಗಾ ನೀರು ಅರ್ಪಿಸುತ್ತಾರೆ.

    ಕನ್ವರ್ ಯಾತ್ರೆಯ ಕಠಿಣ ನಿಯಮಗಳು:
    ಯಾತ್ರೆ ಕೆಲವು ಕಠಿಣ ನಿಯಮಗಳನ್ನು ಅನುಸರಿಸುತ್ತದೆ, ಕೆಲವು ಭಕ್ತರು ಪ್ರಯಾಣದ ವೇಳೆ, ನಿದ್ದೆ ಮಾಡುವಾಗ, ಊಟ ಮಾಡುವ ಸಮಯದಲ್ಲಿ ಪ್ರತಿ ಬಾರಿ ತಮ್ಮನ್ನು ತಾವು ನಿವಾಳಿಸಿಕೊಳ್ಳುತ್ತಾರೆ. ಪವಿತ್ರ ನೀರಿನಿಂದ ತುಂಬಿದ ಹೂಜಿ ಎಂದಿಗೂ ನೆಲವನ್ನು ಮುಟ್ಟಬಾರದು. ಹೂಜಿ ತುಂಬಿದ ನಂತರ, ದೇವಾಲಯಗಳಿಗೆ ಯಾತ್ರೆ ಸಂಪೂರ್ಣವಾಗಿ ಕಾಲ್ನಡಿಗೆಯಲ್ಲಿರಬೇಕು.

    ಕೊರೊನಾ ಸಂಕಷ್ಟ ಮತ್ತು ಭದ್ರತೆ:
    ಸದ್ಯ ಕೊರೊನಾ ಎರಡನೇ ಅಲೆ ಅಂತ್ಯವಾದರೂ ಮೂರನೇ ಅಲೆಯ ಭೀತಿ ಇದೆ. ಎರಡನೇ ಅಲೆಯಲ್ಲಿ ಉತ್ತರ ಪ್ರದೇಶ ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಂಕು ಹೆಚ್ಚಾಗಲು ಕುಂಭಮೇಳ ಕಾರಣವಾಯ್ತು ಎನ್ನುವ ಆರೋಪವಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಕನ್ವರ್ ಯಾತ್ರೆಗೆ ಅನುಮತಿ ನೀಡಿದ್ದಲ್ಲಿ ಸೋಂಕು ಹೆಚ್ಚಾಗಲು ದಾರಿ ಮಾಡಿಕೊಟ್ಟಂತಾಗಲಿದೆ ಎನ್ನುವ ಭೀತಿ ಇದೆ. ಇದರ ಜೊತೆ ಕೋಟ್ಯಾಂತರ ಭಕ್ತಾಧಿಗಳು ಅಂತರ ರಾಜ್ಯಗಳ ನಡುವೆ ದೊಡ್ಡ ಪ್ರಮಾಣದಲ್ಲಿ ಸಂಚಾರ ಮಾಡುವುದರಿಂದ ಸೋಂಕು ವ್ಯಾಪಿಸಬಹುದು ಎನ್ನುವ ಆತಂಕವೂ ಇದೆ.

    ಇದೇ ಆತಂಕವನ್ನು ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ನ ನ್ಯಾ. ಆರ್ ಎಫ್ ನಾರಿಮನ್ ಪೀಠ ವ್ಯಕ್ತಪಡಿಸಿದೆ. ಒಂದು ಕಡೆ ಕೊರೊನಾ ಮತ್ತೊಂದು ಕಡೆ ಇಷ್ಟು ದೊಡ್ಡ ಜನ ಸಂಖ್ಯೆ ಭದ್ರತೆ ವ್ಯವಸ್ಥೆ ಕಲ್ಪಿಸುವ ಕಷ್ಟ ಎಂದು ಹೇಳಲಾಗುತ್ತಿದೆ. ಈ ಕಾರಣಗಳಿಂದ ಉತ್ತರಾಖಂಡ ಸರ್ಕಾರ ಯಾತ್ರೆಗೆ ಅನುಮತಿ ನಿರಾಕರಿಸಿದೆ. ಆದರೆ ಉತ್ತರ ಪ್ರದೇಶ ಯಾತ್ರೆ ನಡೆಸುವ ಸಿದ್ದತೆಯಲ್ಲಿದೆ. ಸದ್ಯ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದ್ದು,ಕೋರ್ಟ್ ಅನುಮತಿ ನೀಡುವ ಬಗ್ಗೆ ಏನು ಹೇಳಲಿದೆ ಕಾದು ನೋಡಬೇಕು.

  • ತಂದೆ, ತಾಯಿಯನ್ನು ಹೊತ್ತು ಕನ್ವರ್ ಯಾತ್ರೆ ಕೈಗೊಂಡ ನಾಲ್ವರು ಸಹೋದರರು

    ತಂದೆ, ತಾಯಿಯನ್ನು ಹೊತ್ತು ಕನ್ವರ್ ಯಾತ್ರೆ ಕೈಗೊಂಡ ನಾಲ್ವರು ಸಹೋದರರು

    ಚಂಡೀಗಢ್: ಹರ್ಯಾಣ ಮೂಲದ ನಾಲ್ವರು ಸಹೋದರರು ಹೆತ್ತವರನ್ನು ಹೊತ್ತುಕೊಂಡು ಕನ್ವರ್ ಯಾತ್ರೆ ಕೈಗೊಂಡಿದ್ದಾರೆ. ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಹರ್ಯಾಣದ ಪಾಣಿಪತ್‍ನಿಂದ ಪ್ರಯಾಣ ಆರಂಭಿಸಿರುವ ಸಹೋದರು ಈಗಾಗಲೇ ಉತ್ತರ ಪ್ರದೇಶದ ಶಾಮ್ಲಿ ತಲುಪಿದ್ದಾರೆ. ಅಲ್ಲಲ್ಲಿ ಕೆಲ ಹೊತ್ತು ವಿಶ್ರಾಂತಿ, ಆಹಾರ ಸೇವನೆ ಮಾಡಿ ಸಹೋದರರು ಯಾತ್ರೆ ಮುಂದುವರಿಸಿದ್ದಾರೆ.

    ಪಾಣಿಪತ್‍ನಿಂದ ಉತ್ತರಾಖಂಡದ ಹರಿದ್ವಾರವೂ ಸುಮಾರು 175 ಕಿ.ಮೀ. ಇದೆ. ಕಳೆದ ವರ್ಷ ಇಬ್ಬರು ಸಹೋದರು ಮಾತ್ರ ತಂದೆ, ತಾಯಿಯನ್ನು ಹೊತ್ತು ಯಾತ್ರೆ ಮಾಡಿದ್ದರು. ಈ ಬಾರಿ ಮತ್ತಿಬ್ಬರು ಸಹೋದದರು ಅವರಿಗೆ ಸಾಥ್ ನೀಡಿದ್ದಾರೆ. ಬಾಸ್ಕೇಟ್ ರೀತಿ ಆಸನದಲ್ಲಿ ತಂದೆ ಹಾಗೂ ತಾಯಿಯನ್ನು ಕೂರಿಸಿ, ಬಿದಿರಿನ ಕೋಲಿನ ಸಹಾಯದಿಂದ ಇಬ್ಬರು ಯುವಕರು ಹೊತ್ತು ಸಾಗುತ್ತಿದ್ದಾರೆ. ಸ್ವಲ್ಪ ದೂರ ಇಬ್ಬರು ಹೆತ್ತವರನ್ನು ಹೊತ್ತು ಸಾಗುತ್ತಾರೆ. ಅವರಿಗೆ ಆಯಾಸವಾಗುತ್ತಿದ್ದಂತೆ ಮತ್ತಿಬ್ಬರು ಹೆಗಲು ನೀಡುತ್ತಿದ್ದಾರೆ.

  • 6 ಕೋಟಿ ರೂ. ಮೌಲ್ಯದ ಚಿನ್ನಾಭರಣ ಧರಿಸಿ ಗೋಲ್ಡನ್ ಬಾಬಾ ಯಾತ್ರೆ

    6 ಕೋಟಿ ರೂ. ಮೌಲ್ಯದ ಚಿನ್ನಾಭರಣ ಧರಿಸಿ ಗೋಲ್ಡನ್ ಬಾಬಾ ಯಾತ್ರೆ

    ಹರಿದ್ವಾರ: ಉತ್ತರಾಖಂಡ ಪ್ರಸಿದ್ಧ ಕನ್ವರ ಯಾತ್ರೆ ಆರಂಭವಾಗಿದ್ದು, ಪ್ರತಿ ಬಾರಿ ಯಾತ್ರೆಯಲ್ಲಿ ಕೇಂದ್ರ ಬಿಂದುವಾಗುವ ಗೋಲ್ಡನ್ ಬಾಬಾ ಈ ಬಾರಿಯೂ ತಾವು ಧರಿಸುವ ಚಿನ್ನಾಭರಣದಿಂದ ಎಲ್ಲರ ಗಮನ ಸೆಳೆದಿದ್ದಾರೆ.

    56 ವರ್ಷದ ಗೋಲ್ಡನ್ ಬಾಬಾ ಖ್ಯಾತಿಯ ಪುರಿ ಮಹಾರಾಜ್ ಅವರು ಈ ಬಾರಿ ಸುಮಾರು 6 ಕೋಟಿ ರೂ. ಮೌಲ್ಯದ 20 ಕೆಜಿ ಚಿನ್ನಾಭರಣವನ್ನು ಧರಿಸಿ ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ತಾವು ಯಾತ್ರೆಯ ಕೇಂದ್ರ ಬಿಂದುವಾಗಿ ಗುರುತಿಸಿಕೊಂಡಿದ್ದು, ಜನರು ನಾನು ತೆರಳುವ ಎಲ್ಲಾ ಸ್ಥಳಗಳಿಗೆ ಆಗಮಿಸುತ್ತಾರೆ. ಯಾತ್ರೆ ವೇಳೆ ಪೊಲೀಸರು ನನಗೆ ರಕ್ಷಣೆ ನೀಡುತ್ತಾರೆ ಎಂದು ತಿಳಿಸಿದ್ದಾರೆ.

    ಕಾರು ಹಾಗೂ ಚಿನ್ನದ ಮೇಲಿನ ಆಕರ್ಷಣೆ ನಾನು ಮೃತ ಪಡುವವರೆಗೂ ಹೋಗುವುದಿಲ್ಲ. ಅಲ್ಲದೇ ನಾನು 25 ಬಾರಿ ಕನ್ವರ್ ಯಾತ್ರೆ ಮಾಡುತ್ತಿದ್ದು, ಇದು ಕೊನೆಯ ಯಾತ್ರೆಯಾಗಿದೆ. ಈ ಯಾತ್ರೆಯ ಅವಧಿಯಲ್ಲಿ ಮಾತ್ರ ಚಿನ್ನಾಭರಣಗಳನ್ನು ಧರಿಸುತ್ತೇನೆ. ಹೆಚ್ಚಿನ ತೂಕದ ಅಭರಣ ಧರಿಸುವುದರಿಂದ ನನ್ನ ದೇಹದ ಆರೋಗ್ಯದ ಮೇಲೆ ಹೆಚ್ಚಿನ ಪ್ರಭಾವ ಉಂಟಾಗುತ್ತದೆ ಎಂದು ಹೇಳಿದ್ದಾರೆ.

    ಅಂದಹಾಗೇ ಪುರಿ ಮಹಾರಾಜ್ ಬಾಬಾ ಆಗುವ ಮುನ್ನ ದೆಹಲಿಯಲ್ಲಿ ಉದ್ಯಮಿಯಾಗಿದ್ದು, ಬಳಿಕ ಬಾಬಾ ಆಗಿ ಪರಿವರ್ತನೆಯಾಗಿದ್ದಾರೆ ಎನ್ನಲಾಗಿದೆ. ಸದ್ಯ ಪುರಿ ಮಹಾರಾಜ್ 25 ಬಾರಿ ಕನ್ವರ್ ಯಾತ್ರೆಯಲ್ಲಿ ಭಾಗವಹಿಸಿದ್ದು, ಅವರೊಂದಿಗೆ ಭಾಗವಹಿಸುವ ಇತರೇ ಮಂದಿಗೆ 1.25 ಕೋಟಿ ರೂ. ಖರ್ಚು ಮಾಡಿದ್ದಾರೆ. ಅವರೊಂದಿಗೆ ಬರುವ 250 ರಿಂದ 300 ಮಂದಿ ಯಾತ್ರಿಗಳ ಊಟ, ವಸತಿ, ಆಹಾರ, ವೈದ್ಯಕೀಯ ಸೇವೆಯನ್ನು ನೀಡುತ್ತಿದ್ದಾರೆ.

    ಕೇವಲ ಚಿನ್ನಾಭರಣಗಳನ್ನ ಮಾತ್ರ ಧರಿಸದೇ ಬಾಬಾ 27 ಲಕ್ಷ ರೂ. ಮೌಲ್ಯದ ರೋಲೆಕ್ಸ್ ವಾಚ್ ಸಹ ಹೊಂದಿದ್ದು, ಸ್ವತಃ ಬಿಎಂಡಬ್ಲೂ, 3 ಫಾರ್ಚುನರ್, 2 ಆಡಿ ಹಾಗೂ 2 ಇನ್ನೋವಾ ಕಾರುಗಳನ್ನು ಹೊಂದಿದ್ದಾರೆ. ಅಲ್ಲದೇ ಯಾತ್ರೆಯ ವೇಳೆ ಜಾಗ್ವಾರ್ ಸೇರಿದಂತೆ ಹಲವು ಐಷಾರಾಮಿ ಕಾರುಗಳನ್ನು ಬಾಡಿಗೆಗೆ ಸಹ ಪಡೆಯುತ್ತಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.