Tag: kanteerava studio

  • ನಡುರಸ್ತೆಯಲ್ಲೇ ಬಸ್ ನಿಲ್ಲಿಸಿ BMTC ಚಾಲಕರಿಬ್ಬರ ಕಿತ್ತಾಟ – ವಿಡಿಯೋ ಹರಿಬಿಟ್ಟ ಪ್ರಯಾಣಿಕರು

    ನಡುರಸ್ತೆಯಲ್ಲೇ ಬಸ್ ನಿಲ್ಲಿಸಿ BMTC ಚಾಲಕರಿಬ್ಬರ ಕಿತ್ತಾಟ – ವಿಡಿಯೋ ಹರಿಬಿಟ್ಟ ಪ್ರಯಾಣಿಕರು

    ಬೆಂಗಳೂರು: ನಡುರಸ್ತೆಯಲ್ಲಿಯೇ ಬಸ್ ನಿಲ್ಲಿಸಿ ಬಿಎಂಟಿಸಿ (BMTC) ಚಾಲಕರಿಬ್ಬರು ಗಲಾಟೆ ಮಾಡಿಕೊಂಡಿರುವ ಘಟನೆ ನಗರದ ಕಂಠೀರವ ಸ್ಟುಡಿಯೋ (Kanteerava Studio) ರಸ್ತೆಯಲ್ಲಿ ನಡೆದಿದೆ.

    ಬಿಎಂಟಿಸಿ ಚಾಲಕರಿಬ್ಬರು (BMTC Drivers) ನಡುರಸ್ತೆಯಲ್ಲಿಯೇ ಬಸ್‌ ನಿಲ್ಲಿಸಿಕೊಂಡು ರಂಪಾಟ ಮಾಡಿದ್ದಾರೆ. ಪ್ರಯಾಣಿಕರು ಬಸ್ ಮೂವ್ ಮಾಡುವಂತೆ ಎಷ್ಟೇ ಕೇಳಿಕೊಂಡರೂ ತಲೆಕೆಡಿಸಿಕೊಳ್ಳದೇ ಕಿತ್ತಾಡಿದ್ದಾರೆ.ಇದನ್ನೂ ಓದಿ: ಮಂಡ್ಯ | ಗಣೇಶ ಮೆರವಣಿಗೆ ವೇಳೆ ಡಿಜೆ ಸೌಂಡ್‌ಗೆ ಕುಣಿಯುತ್ತಿದ್ದ ವ್ಯಕಿ ಹೃದಯಾಘಾತಕ್ಕೆ ಬಲಿ

    ಚಾಲಕರಿಬ್ಬರ ಗಲಾಟೆ ನೋಡಿದ ಪ್ರಯಾಣಿಕರು ನೀವು ಹೀಗೆ ಮಾಡಿದರೆ ನಾವು ಯಾರಿಗೆ ಹೇಳಬೇಕು? ಯಾಕೆ ಗಾಡಿಯನ್ನು ಸೈಡ್‌ಗೆ ಹಾಕಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇವರ ಕಿತ್ತಾಟದಿಂದ ಬೇಸತ್ತ ಪ್ರಯಾಣಿಕರು ವಿಡಿಯೋ ಮಾಡಿ ಚಾಲಕರ ಬೀದಿ ರಂಪಾಟವನ್ನು ಬಿಚ್ಚಿಟ್ಟಿದ್ದಾರೆ.ಇದನ್ನೂ ಓದಿ: ಮೈಲಾರಿ ಹೋಟೆಲ್‌ನಲ್ಲಿ ಅಚ್ಚುಮೆಚ್ಚಿನ ದೋಸೆ ಸವಿದ ಸಿಎಂ

  • ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಜನ್ಮದಿನ; ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳ ಸಾಗರ – ಅಪ್ಪು ಸಮಾಧಿ ದರ್ಶನ

    ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಜನ್ಮದಿನ; ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳ ಸಾಗರ – ಅಪ್ಪು ಸಮಾಧಿ ದರ್ಶನ

    ಇಂದು (ಮಾ.17) ಸ್ಯಾಂಡಲ್‌ವುಡ್‌ ನಟ ಪವರ್‌ ಸ್ಟಾರ್‌ ದಿವಂಗತ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಅವರ ಜನ್ಮದಿನ. ನೆಚ್ಚಿನ ನಟ ಜನ್ಮದಿನವನ್ನು ಅಭಿಮಾನಿಗಳು ಸ್ಮರಣೀಯವಾಗಿ ಆಚರಿಸುತ್ತಿದ್ದಾರೆ. ನಿನ್ನೆ ರಾತ್ರಿಯಿಂದಲೇ ಕಂಠೀರವ ಸ್ಟುಡಿಯೋಗೆ ಅಭಿಮಾನಿಗಳು ಆಗಮಿಸುತ್ತಿದ್ದು, ಅಪ್ಪು ಸಮಾಧಿ ದರ್ಶನ ಪಡೆಯುತ್ತಿದ್ದಾರೆ.

    ಅಪ್ಪು ಅವರ 49ನೇ ಜನ್ಮದಿನದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ನಟ ಯುವ ರಾಜ್‌ಕುಮಾರ್‌ ಪುನೀತ್‌ ಸಮಾಧಿ ದರ್ಶನ ಪಡೆದಿದ್ದಾರೆ. ನಂತರ ಅಪ್ಪು ಪುತ್ಥಳಿ ಅನಾವರಣ ಮಾಡಿದ್ದಾರೆ. ಭಾನುವಾರವಾದ ಇಂದು ನಗರದೆಲ್ಲೆಡೆ ಅಪ್ಪು ಪುತ್ಥಳಿಯ ತೇರು ಸಂಚರಿಸಲಿದೆ. ಇದನ್ನೂ ಓದಿ: ಮಾರ್ಚ್ 17ರಂದು ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದ ಆಚರಣೆ ಹೇಗಿರಲಿದೆ?

    ಕುಟುಂಬ ಸಮೇತ ಅಪ್ಪು ಸಮಾಧಿ ದರ್ಶನಕ್ಕೆ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಎಲ್ಲೆಡೆ ಫ್ಯಾನ್ಸ್‌ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಶನಿವಾರ ರಾತ್ರಿ 11 ಗಂಟೆಯಿಂದಲೇ ಕಂಠೀರವ ಸ್ಟೂಡಿಯೋಗೆ ಅಪ್ಪು ಫ್ಯಾನ್ಸ್ ಆಗಮಿಸುತ್ತಿದ್ದಾರೆ.

    ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಶಾಸಕ ಗೋಪಾಲಯ್ಯ ಕೂಡ ಅಪ್ಪು ಸಮಾಧಿಗೆ ಭೇಟಿ ನೀಡಿ ದರ್ಶನ ಪಡೆದರು. ಫ್ಯಾನ್ಸ್‌ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಪೊಲೀಸರ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಪುನೀತ್‌ ಫೋಟೊ, ಗುಲಾಬಿ ಹೂವನ್ನು ಸಮಾಧಿ ಬಳಿ ಇಟ್ಟು ಅಪ್ಪು ಫ್ಯಾನ್ಸ್‌ ತಮ್ಮ ನೆಚ್ಚಿನ ನಟನನ್ನು ಭಾವಪೂರ್ಣವಾಗಿ ನೆನಪಿಸಿಕೊಳ್ಳುತ್ತಿದ್ದಾರೆ.

  • ಸಾಮಾನ್ಯ ಅಭಿಮಾನಿಯಂತೆ ಸಾಲಿನಲ್ಲಿ ಪುನೀತ್ ಸಮಾಧಿಗೆ ಭೇಟಿ ನೀಡಿದ ತಮಿಳು ನಟ ವಿಜಯ್

    ಸಾಮಾನ್ಯ ಅಭಿಮಾನಿಯಂತೆ ಸಾಲಿನಲ್ಲಿ ಪುನೀತ್ ಸಮಾಧಿಗೆ ಭೇಟಿ ನೀಡಿದ ತಮಿಳು ನಟ ವಿಜಯ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ದಿ. ಪುನೀತ್ ರಾಜ್‍ಕುಮಾರ್ ಅವರನ್ನು ಕಳೆದುಕೊಂಡು ಹಲವು ದಿನಗಳೆ ಕಳೆದಿದೆ. ಅವರ ಸಮಾಧಿ ವೀಕ್ಷಣೆಗೆ ಇನ್ನೂ ಸಾವಿರಾರು ಅಭಿಮಾನಿಗಳು, ಕಲಾವಿದರು ಬರುತ್ತಲೆ ಇದ್ದಾರೆ. ಇದೀಗ ಅಪ್ಪು ಸಮಾಧಿಗೆ ತಮಿಳು ನಟ  ದಳಪತಿ ವಿಜಯ್ ಭೇಟಿ ನಿಡಿದ್ದಾರೆ.

    ಅಪ್ಪು ಕುಟುಂಬ ಸದಸ್ಯರಿಗೆ ಹೇಳದೆ ಆಗಮಿಸಿದ ವಿಜಯ್ ಅವರು ಸಾಮಾನ್ಯ ಅಭಿಮಾನಿಯಂತೆ ಸಾಲಿನಲ್ಲಿ ಬಂದು ಅಪ್ಪು ಸ್ಮಾರಕ ದರ್ಶನ ಮಾಡಿದ್ದಾರೆ. ಯಾರಿಗೂ ಸಣ್ಣ ಸುಳಿವು ಕೊಡದಂತೆ ಬಂದು ಭೇಟಿ ನೀಡಿ  ನಮನ ಅರ್ಪಿಸಿದ್ದಾರೆ. ಇದನ್ನೂ ಓದಿ : ಮಹಾಶಿವರಾತ್ರಿಗೆ ಜೇಮ್ಸ್ ಸಿನಿಮಾ ಲಿರಿಕಲ್ ವೀಡಿಯೋ ಸಾಂಗ್ ರಿಲೀಸ್

     ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ಕೆಲವು ದಿನಗಳ ಹಿಂದೆ ಟಾಲಿವುಡ್ ನಟ ಅಲ್ಲು ಅರ್ಜುನ್ ಅವರು ಭೇಟಿಕೊಟ್ಟಿದ್ದರು. ಈ ವೇಳೆ ಶಿವರಾಜ್‍ಕುಮಾರ್, ಅಶ್ವಿನಿ ಪುನೀತ್‍ ರಾಜ್‍ಕುಮಾರ್ ಅವರ ನಿವಾಸಕ್ಕೆ ಭೇಟಿಕೊಟ್ಟು ಸಾಂತ್ವಾನ ಹೇಳಿದ್ದರು. ನನ್ನ ಹಾಗೂ ಪುನೀತ್ ನಡುವೆ ಮೊದಲಿನಿಂದಲೂ ಒಳ್ಳೆಯ ಬಾಂಧವ್ಯ ಇತ್ತು. ನಾನು ಬೆಂಗಳೂರಿಗೆ ಬಂದಾಗ ಅವರನ್ನು ಭೇಟಿ ಮಾಡುತ್ತಿದ್ದೆ. ಅವರು ಹೈದರಾಬಾದ್‍ಗೆ ಬಂದಾಗ ನನ್ನನ್ನು ಭೇಟಿ ಮಾಡುತ್ತಿದ್ದರು ಹೇಳುತ್ತಾ ಭಾವಕರಾಗಿದ್ದರು. ಇದನ್ನೂ ಓದಿ : ಪುನೀತ್ ನಿರ್ಮಾಣದ ಫ್ಯಾಮಿಲಿ ಪ್ಯಾಕ್ ಚಿತ್ರ ನಿರ್ದೇಶಕನಿಗೆ ಟಾಲಿವುಡ್ ನಿಂದ ಮೆಗಾ ಆಫರ್

    ಅಪ್ಪು ಅಭಿನಯದ ಜೇಮ್ಸ್ ಸಿನಿಮಾ ಹಾಡು ಮಾರ್ಚ್ 1ಕ್ಕೆ ಬಿಡುಗಡೆಗೆಯಾಗಲಿದೆ. ಈ ಸಿನಿಮಾದಿಂದ ರಿಲೀಸ್ ಆಗುತ್ತಿರುವ ಮೊದಲ ಹಾಡು ಇದಾಗಿದೆ. ಬೆಳಗ್ಗೆ 11.11ಕ್ಕೆ ಜೇಮ್ಸ್ ಟ್ರೇಡ್ ಮಾರ್ಕ್ ಹಾಡು ಬಿಡುಗಡೆಯಾಗಲಿದೆ. ಮಾರ್ಚ್ 17ಕ್ಕೆ ಅಪ್ಪು ಹುಟ್ಟುಹಬ್ಬದ ದಿನ ಸಿನಿಮಾ ತೆರೆ ಮೇಲೆ ಬರಲಿದೆ. ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದಲ್ಲಿ ಅಪ್ಪುನನ್ನು ನೋಡಲು ಅಭಿಮಾನಿಗಳು ಕಾತುರರಾಗಿರುವುದಂತು ಸತ್ಯ.

  • ಇಂದು ಪುನೀತ್ 11ನೇ ದಿನದ ಪುಣ್ಯಾರಾಧನೆ – ಮಧ್ಯಾಹ್ನವರೆಗೆ ಅಭಿಮಾನಿಗಳಿಗೆ ಸಮಾಧಿಗೆ ನಿರ್ಬಂಧ

    ಇಂದು ಪುನೀತ್ 11ನೇ ದಿನದ ಪುಣ್ಯಾರಾಧನೆ – ಮಧ್ಯಾಹ್ನವರೆಗೆ ಅಭಿಮಾನಿಗಳಿಗೆ ಸಮಾಧಿಗೆ ನಿರ್ಬಂಧ

    ಬೆಂಗಳೂರು: ಇಂದು ಪುನೀತ್ 11ನೇ ದಿನದ ಪುಣ್ಯಾರಾಧನೆ ಇರುವುದರಿಂದ ಅಭಿಮಾನಿಗಳಿಗೆ ಮಧ್ಯಾಹ್ನದವರೆಗೂ ಅಪ್ಪು ಸಮಾಧಿ ನಿರ್ಬಂಧ ಹೇರಲಾಗಿದೆ.

    ದೊಡ್ಮನೆ ಹುಡುಗ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ ಇಂದಿಗೆ 11 ದಿನ ಕಳೆದಿದೆ. ಇಂದು ಪುನೀತ್ 11ನೇ ದಿನ ಪುಣ್ಯಸ್ಮರಣೆಯಾಗಿದ್ದು, ಸದಾಶಿವನಗರದ ಅಪ್ಪು ನಿವಾಸದ ಪುನೀತ್ ಫೋಟೋಗೆ ಕುಟುಂಬಸ್ಥರು ಪೂಜೆ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಆತ್ಮಹತ್ಯೆ ಮಾಡ್ಕೊಂಡ ಅಪ್ಪು ಅಭಿಮಾನಿ ಮನೆಗೆ ರಾಘಣ್ಣ ಭೇಟಿ, ಸಾಂತ್ವನ

    ಪುನೀತ್ 11ನೇ ದಿನದ ಪುಣ್ಯಾರಾಧನೆಯ ವಿಧಿವಿಧಾನವನ್ನು ವಿನಯ್ ರಾಜ್‍ಕುಮಾರ್ ನೆರವೇರಿಸಲಿದ್ದು, 11 ಗಂಟೆ ಬಳಿಕ ಅಪ್ಪು ಸಮಾಧಿಗೆ ಎಡೆ ಅರ್ಪಣೆ ಮಾಡಲಾಗುತ್ತದೆ. ಇನ್ನೂ ಈ ಕಾರ್ಯಕ್ರಮದಲ್ಲಿ ಕೇವಲ ಕುಟುಂಬಸ್ಥರಷ್ಟೇ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ರಾಜ್ಯದ ಎಲ್ಲ ಥಿಯೇಟರ್‌‌ಗಳಲ್ಲಿ ಏಕಕಾಲಕ್ಕೆ ಅಪ್ಪುಗೆ ಶ್ರದ್ಧಾಂಜಲಿ

    puneeth

    ಮಧ್ಯಾಹ್ನ 12 ಗಂಟೆವರೆಗೆ ಅಭಿಮಾನಿಗಳಿಗೆ ಸಮಾಧಿ ದರ್ಶನವನ್ನು ನಿಷೇಧಿಸಲಾಗಿದ್ದು, ಕಂಠೀರವ ಸ್ಟುಡಿಯೋ ಸುತ್ತ ಪೊಲೀಸ್ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಪುನೀತ್ ಅಂತ್ಯಸಂಸ್ಕಾರಕ್ಕೆ ಶ್ರಮಿಸಿದ ಎಲ್ಲರಿಗೂ ಅಶ್ವಿನಿ ಧನ್ಯವಾದ

  • ಕಂಠೀರವ ಸ್ಟುಡಿಯೋಗೆ 2 ದಿನ ಸಾರ್ವಜನಿಕರಿಗೆ ಪ್ರವೇಶ ಇಲ್ಲ

    ಕಂಠೀರವ ಸ್ಟುಡಿಯೋಗೆ 2 ದಿನ ಸಾರ್ವಜನಿಕರಿಗೆ ಪ್ರವೇಶ ಇಲ್ಲ

    ಬೆಂಗಳೂರು: ನಟ ಪುನೀತ್ ರಾಜ್‍ಕುಮಾರ್ ಅವರ ಅಂತ್ಯಕ್ರಿಯೆಯಾದ ಕಂಠೀರವ ಸ್ಟುಡಿಯೋ ಸಮುತ್ತಲಿನ ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿ ಮಾಡಲಿದ್ದು, ಇನ್ನು ಎರಡು ದಿನಗಳು ಸಾರ್ವಜನಿಕರಿಗೆ ಪ್ರವೇಶಾವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಮಂಜುನಾಥ್ ಹೇಳಿದರು.

    PUNEETH RAJ KUMAR

    ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುನೀತ್ ಅವರ ಕುಟುಂಬಸ್ಥರು ಅವರ ಸಂಪ್ರದಾಯವನ್ನು ಮುಂದುವರೆಸಬೇಕಿದೆ. ಕುಟುಂಬದವರು ಸಂಪ್ರದಾಯದಂತೆ ಐದನೇ ದಿನ ಹಾಲು-ತುಪ್ಪ ಬಿಡುತ್ತೇವೆ ಎಂದು ಹೇಳಿದ್ದಾರೆ. ಕಾರ್ಯಕ್ಕೆ ತೊಡಕಾಗದಂತೆ ಕ್ರಮವಹಿಸಲಾಗುವುದು. ಅದಕ್ಕಾಗಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಪುನೀತ್ ನೆನಪು ಮಗಳಿಗೆ ಕಾಡುತ್ತಿದೆ: ರಮೇಶ್ ಅರವಿಂದ್

    ಕಂಠೀರವ ಸ್ಟುಡಿಯೋ ಜಾಗ ತುಂಬಾ ಚಿಕ್ಕದಿದೆ. ಎಲ್ಲಾ ವ್ಯವಸ್ಥೆಯನ್ನು ಅಭಿಮಾನಿಗಳಿಗೆ ಮಾಡುತ್ತೇವೆ. ಈವರೆಗೂ ಎಲ್ಲರೂ ಸಹಕಾರ ನೀಡಿದ್ದೀರಿ, ಎಲ್ಲರಿಗೂ ಧನ್ಯವಾದ ಎಂದರು. ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್

    PUNEET

    ಪುನೀತ್ ರಾಜ್‍ಕುಮಾರ್ ಅವರ ಅಂತಿಮ ದರ್ಶನಕ್ಕೆ ಎಷ್ಟು ಲಕ್ಷ ಜನ ಬಂದಿದ್ದರು ಎನ್ನುವ ಬಗ್ಗೆ ಸರಿಯಾದ ಮಾಹಿತಿ ಇಲ್ಲ.
    ಮುಂದೆ ತಿಳಿಸುತ್ತೇವೆ ಎಂದು ಹೇಳಿದರು.

  • ಶಿವಣ್ಣನ ಆರ್‌ಡಿಎಕ್ಸ್‌ಗೆ ಮುಹೂರ್ತ ಫಿಕ್ಸ್

    ಶಿವಣ್ಣನ ಆರ್‌ಡಿಎಕ್ಸ್‌ಗೆ ಮುಹೂರ್ತ ಫಿಕ್ಸ್

    ಬೆಂಗಳೂರು: ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಆರ್‌ಡಿಎಕ್ಸ್‌ ಸಿನಿಮಾ ಸೆಟ್ಟೇರಲು ಎಲ್ಲ ಸಿದ್ಧತೆಗಳು ನಡೆದಿದ್ದು, ಫೆಬ್ರವರಿ 19ರಂದು ಸಿನಿಮಾ ಮುಹೂರ್ತ ಕಾರ್ಯಕ್ರಮ ನಿಗದಿಯಾಗಿದೆ.

    ಫೆಬ್ರವರಿ 19ರ ಬುಧವಾರ ಸಿನಿಮಾ ಮುಹೂರ್ತ ಕಾರ್ಯಕ್ರಮ ನಡೆಯಲಿದ್ದು, ಕಂಠೀರವ ಸ್ಟುಡಿಯೋದಲ್ಲಿ ಚಿತ್ರ ಲಾಂಚ್ ಆಗಲಿದೆ. ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹಾಗೂ ನಟ ಪುನೀತ್ ರಾಜ್‍ಕುಮಾರ್ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದಾರೆ. ಬೆಳಗ್ಗೆ 9.15 ರಿಂದ 11.45ರ ವರೆಗೆ ಕಾರ್ಯಕ್ರಮ ಜರುಗಲಿದೆ. ಸರಳ ಸಮಾರಂಭದ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಲಾಗುತ್ತಿದೆ.

    ಚಿತ್ರಕ್ಕೆ ‘ಆರ್‌ಡಿಎಕ್ಸ್‌’ ಎಂಬ ಶೀರ್ಷಿಕೆ ಇಡಲಾಗಿದೆ. ಆದರೆ ಈ ವರೆಗೆ ಚಿತ್ರತಂಡ ಈ ಕುರಿತು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಮುಹೂರ್ತದ ದಿನವೇ ಸಿನಿಮಾ ಹೆಸರು ಕೂಡ ಹೊರ ಬರಬಹುದು ಎನ್ನಲಾಗಿದೆ. ಇನ್ನೂ ವಿಶೇಷವೆಂದರೆ ಇದೇ ಮೊದಲ ಬಾರಿಗೆ ರವಿ ಅರಸು ಕನ್ನಡ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸತ್ಯ ಜೋತಿ ಫಿಲ್ಮ್ಸ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಹಿಂದೆ ‘ವಿವೇಗಂ’, ‘ವಿಶ್ವಾಸಂ’ ಸೇರಿದಂತೆ ಅನೇಕ ಸಿನಿಮಾಗಳನ್ನು ಈ ಸಂಸ್ಥೆ ನಿರ್ಮಿಸಿದೆ.

    ತಮಿಳು ನಿರ್ದೇಶಕ ರವಿ ಅರಸು ಅವರು ನಟ ಶಿವರಾಜ್ ಕುಮಾರ್ ಜೊತೆಗೆ ಸಿನಿಮಾ ಮಾಡುವ ಸುದ್ದಿ ಈ ಹಿಂದೆಯೇ ಹೊರಬಂದಿತ್ತು. ಇದೀಗ ಸಿನಿಮಾದ ಮುಹೂರ್ತ ಕಾರ್ಯಕ್ರಮಕ್ಕೆ ಡೇಟ್ ಫಿಕ್ಸ್ ಆಗಿದೆ. ಅಲ್ಲದೆ ಇಬ್ಬರ ಕಾಂಬಿನೇಷನ್ ಕುರಿತು ನಿರೀಕ್ಷೆ ಸಹ ಹೆಚ್ಚಾಗಿದೆ.

  • ಜಗಪತಿ ಬಾಬುರಿಂದ ಡಾ. ರಾಜ್, ಅಂಬಿ ಸಮಾಧಿಗೆ ಪೂಜೆ

    ಜಗಪತಿ ಬಾಬುರಿಂದ ಡಾ. ರಾಜ್, ಅಂಬಿ ಸಮಾಧಿಗೆ ಪೂಜೆ

    ಬೆಂಗಳೂರು: ಟಾಲಿವುಡ್ ನಟ ಜಗಪತಿ ಬಾಬು ಅವರು ಇಂದು ಬೆಳಗ್ಗೆ ಕಂಠೀರವ ಸ್ಟುಡಿಯೋಗೆ ಭೇಟಿ ಕೊಟ್ಟಿದ್ದಾರೆ.

    ಈ ವೇಳೆ ಜಗಪತಿ ಬಾಬು ಅವರು ಡಾ. ರಾಜ್ ಕುಮಾರ್, ಅಂಬರೀಶ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ದಾರೆ. ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ಶೂಟಿಂಗ್‍ಗೆ ಬೆಂಗಳೂರಿಗೆ ಆಗಮಿಸಿರೋ ಜಗಪತಿ ಬಾಬು, ಮೊದಲ ಬಾರಿಗೆ ಕಂಠೀರವ ಸ್ಟುಡಿಯೋಗೆ ತೆರಳಿದ್ದಾರೆ.

    ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ ಟಾಲಿವುಡ್‍ನ ಕಲಾವಿದನಿಗೆ ಜೊತೆಯಾಗಿದ್ದಾರೆ. ನಾಲ್ಕು ದಿನ ಕಂಠೀರವದಲ್ಲಿ ನಡೆಯುವ ಶೂಟಿಂಗ್‍ನಲ್ಲಿ ಜಗಪತಿ ಬಾಬು ಭಾಗಿಯಾಗಲಿದ್ದಾರೆ.

  • ಡಿಸಿಪಿ ಅಣ್ಣಾಮಲೈ ವಿರುದ್ಧ ನಟಿ ಜಯಪ್ರದಾ ಆಕ್ರೋಶ

    ಡಿಸಿಪಿ ಅಣ್ಣಾಮಲೈ ವಿರುದ್ಧ ನಟಿ ಜಯಪ್ರದಾ ಆಕ್ರೋಶ

    ಬೆಂಗಳೂರು: ದಿವಂಗತ ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಶ್ ಅಂತ್ಯಕ್ರಿಯೆಯ ಸಮಯದಲ್ಲಿ ನಟಿ ಜಯಪ್ರದಾ ಅವರು ಖಡಕ್ ಅಧಿಕಾರಿ ಡಿಸಿಪಿ ಅಣ್ಣಾಮಲೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅವರ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆಯುತ್ತಿತ್ತು. ಈ ವೇಳೆ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ಆದ್ದರಿಂದ ಬೆಂಗಳೂರು ಪೊಲೀಸರು ಬಿಗಿ ಭದ್ರತೆಯನ್ನು ಒದಗಿಸಿದ್ದರು. ಆಗ ಕಂಠೀರವ ಸ್ಟುಡಿಯೋದ ಗೇಟ್ ಬಳಿ ಜಯಪ್ರದಾ ಅವರು ನಿಂತಿದ್ದರು. ನೂಕುನುಗ್ಗಲು ಉಂಟಾಗುತ್ತಿದ್ದಂತೆ ಅಣ್ಣಾಮಲೈ, ಕಾರಿನಲ್ಲಿ ಕುಳಿತುಕೊಳ್ಳುವಂತೆ ಜಯಪ್ರದಾ ಅವರಿಗೆ ಸೂಚಿಸಿದ್ದಾರೆ.

    ಡಿಸಿಪಿ ಅಣ್ಣಾಮಲೈ ಅವರು ಹೇಳಿದ್ದ ಮಾತನ್ನು ತಪ್ಪಾಗಿ ತಿಳಿದುಕೊಂಡ ನಟಿ ಜಯಪ್ರದಾ, ಸ್ಥಳದಲ್ಲಿಯೇ ಅವರ ವಿರುದ್ಧ ಕೂಗಾಡಿದ್ದಾರೆ. ಅಣ್ಣಾಮಲೈ ಡಿಸಿಪಿ ಆದರೆ ನಾನು ಮಾಜಿ ಸಂಸದೆಯಾಗಿದ್ದಾನೆ. ಅದರಲ್ಲೂ ನಾನೊಬ್ಬ ಮಹಿಳೆ. ನಮಗೆ ಭದ್ರತೆ ಒದಗಿಸಬೇಕು ಅವರು. ಯಾವುದೇ ತೊಂದರೆಯಾಗದಂತೆ ಭದ್ರತೆ ನೀಡುವುದು ಪೊಲೀಸರ ಕರ್ತವ್ಯವಾಗಿದೆ ಎಂದು ಹೇಳುವ ಮೂಲಕ ಅಣ್ಣಾಮಲೈ ವಿರುದ್ಧ ಜಯಪ್ರದಾ ಕಿಡಿಕಾರಿದ್ದಾರೆ.

    ದಿವಂಗತ ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಶ್ ಅನಾರೋಗ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ವಿಧಿವಶರಾಗಿದ್ದರು. ಅಂದಿನಿಂದಲೂ ಅಂತ್ಯಸಂಸ್ಕಾರದವರೆಗೆ ಬೆಂಗಳೂರು ಪೊಲೀಸರು ಭದ್ರತೆ ನೀಡುವ ಮೂಲಕ ಶಾಂತಿಯನ್ನು ಕಾಪಾಡಿದ್ದಾರೆ. ಇದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡಿರುವುದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೂಡ, ರೆಬೆಲ್ ಸ್ಟಾರ್ ಅಂಬರೀಶ್ ನಿಧನದಿಂದ ಹಿಡಿದು ಅಂತ್ಯಕ್ರಿಯೆಯವರೆಗೂ ಅಚ್ಚುಕಟ್ಟಾಗಿ ಬಂದೋಬಸ್ತ್ ಒದಗಿಸಿದ ಪೊಲೀಸ್ ಇಲಾಖೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು.

    ಕಂಠೀರವ ಸ್ಟೇಡಿಯಂ ಬಳಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಬೆಂಗಳೂರು ಹಾಗೂ ಮಂಡ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಯ ಎಲ್ಲರೂ ಎರಡು ದಿನಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಮಾರ್ಗದರ್ಶನದಲ್ಲಿ ಭದ್ರತೆ ಒದಗಿಸಿದ್ದಾರೆ. ಬಹಳ ಶಾಂತಿಯುತವಾಗಿ ಪರಿಸ್ಥಿತಿ ನಿಭಾಯಿಸಿದ್ದಾರೆ ಎಂದು ಹೇಳಿ ಎಲ್ಲರಿಗೂ ಧನ್ಯವಾದ ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂಬಿ ಚಿತೆಗೆ ಕಟ್ಟಿಗೆ ಹಾಕುವಾಗ ಬಿಕ್ಕಿ ಬಿಕ್ಕಿ ಅತ್ತ ಆಪ್ತ

    ಅಂಬಿ ಚಿತೆಗೆ ಕಟ್ಟಿಗೆ ಹಾಕುವಾಗ ಬಿಕ್ಕಿ ಬಿಕ್ಕಿ ಅತ್ತ ಆಪ್ತ

    ಬೆಂಗಳೂರು: ನಟ ಅಂಬರೀಶ್ ಚಿತೆಗೆ ಸಕಲ ಸಿದ್ಧತೆಯನ್ನು ನಗರದ ಕಂಠೀರವ ಸ್ಟೂಡಿಯೋದಲ್ಲಿ ಮಾಡಲಾಗಿತ್ತು. ಈ ವೇಳೆ ಅಂಬಿಯ ಆಪ್ತ ಗೆಳೆಯ ನಟ ಮೋಹನ್ ಬಾಬು ಅವರು ಅವರ ಚಿತೆಗೆ ಕಟ್ಟಿಗೆ ಹಾಕುವಾಗ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

    ನಗರದ ಕಂಠೀರವ ಸ್ಟುಡಿಯೋದಲ್ಲಿ ಅಂಬಿಯ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡುತ್ತಿದ್ದರು. ಈ ವೇಳೆ ಗಣ್ಯರು ಬಂದು ಅಂಬರೀಶ್ ಅವರಿಗೆ ಕಟ್ಟಿಗೆ ಹಾಕುವ ಮೂಲಕ ಅಂತಿಮ ನಮನ ಸಲ್ಲಿಸುತ್ತಿದ್ದರು. ಆಗ ಮೋಹನ್ ಬಾಬು ಅವರು ತಮ್ಮ ಮಗ ಮತ್ತು ಮಗಳ ಜೊತೆ ಬಂದಿದ್ದು, ಅಂಬರೀಶ್ ಅವರಿಗೆ ಸಿದ್ಧಮಾಡಿದ್ದ ಚಿತೆಯ ಬಳಿ ಹೋಗಿದ್ದಾರೆ. ಬಳಿಕ ಕಟ್ಟಿಗೆಯನ್ನು ಕೈಯಲ್ಲಿ ಕೊಟ್ಟ ತಕ್ಷಣ ಭಾವುಕರಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಬಳಿಕ ಅವರು ಕುಟುಂಬದವರು ಒಟ್ಟಿಗೆ ಸೇರಿ ಚಿತೆಗೆ ಕಟ್ಟಿಗೆಯನ್ನು ಹಾಕಿದ್ದಾರೆ. ಕೊನೆಗೆ ಕಟ್ಟಿಗೆ ಹಾಕಿ ಕೈ ಮುಗಿದು ಅತ್ತಿದ್ದಾರೆ.

    ನಟ ಅಂಬರೀಶ್ ಅನಾರೋಗ್ಯದ ಕಾರಣ ಶನಿವಾರ ರಾತ್ರಿ ವಿಧಿವಶರಾಗಿದ್ದರು. ಭಾನುವಾರ ಬೆಳಗ್ಗೆ ಗಣ್ಯರಿಗೆ ಬೆಂಗಳೂರಿನಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಅಂದು ಸಿನಿಮಾರಂಗ ಗೆಳೆಯನಾಗಿದ್ದ ಮೋಹನ್ ಬಾಬು ಅವರು ಸುದ್ದಿ ತಿಳಿದು ಬಂದು ಅಂಬಿಯ ಅಂತಿಮ ದರ್ಶನ ಪಡೆದಿದ್ದರು. ಭಾನುವಾರ ಸಹ ಅಂಬರೀಶ್ ನೋಡಿ ಅವರ ಪಾರ್ಥಿವ ಶರೀರವನ್ನು ಅಪ್ಪಿಕೊಂಡು ಗಳಗಳನೇ ಅತ್ತಿದ್ದರು.

    ನಟ ಚಿರಂಜೀವಿ, ರಜಿನಿಕಾಂತ್, ಸುದೀಪ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಯಶ್ ಸೇರಿದಂತೆ ಇಡೀ ಚಿತ್ರರಂಗವೇ ಅಂಬರೀಶ್ ಅಗಲಿಕೆಯಿಂದ ಕಣ್ಣೀರು ಹಾಕುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂಬಿ ಅಂತ್ಯಸಂಸ್ಕಾರದ ವೇಳೆ ಕಾಣಿಸಿಕೊಂಡ ನಾಗರಾಜ

    ಅಂಬಿ ಅಂತ್ಯಸಂಸ್ಕಾರದ ವೇಳೆ ಕಾಣಿಸಿಕೊಂಡ ನಾಗರಾಜ

    – ಜಲೀಲನ ಕಳುಹಿಸಿಕೊಡಲು ನಾಗರಹಾವು ಬಂತಂತೆ
    – ಆಪ್ತ ಗೆಳೆಯ ವಿಷ್ಣು ಬಂದಿದ್ದಾರೆ ಎಂದ ಅಭಿಮಾನಿಗಳು

    ಬೆಂಗಳೂರು: ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅಂತ್ಯಸಂಸ್ಕಾರದ ವೇಳೆ ನಾಗರಹಾವು ಕಾಣಿಸಿಕೊಂಡಿತ್ತು. ನಾಗಾರಹಾವು ಕಂಡ ಅಭಿಮಾನಿಗಳು ಜಲೀಲನನ್ನು ನೋಡಲು ಆಪ್ತ ಗೆಳೆಯ ವಿಷ್ಣುವರ್ಧನ್ ಬಂದಿದ್ದಾರೆಂದು ಮಾತನಾಡಲು ಆರಂಭಿಸಿದ್ದಾರೆ.

    ಅಂಬರೀಶ್ ಅವರ ಮೊದಲ ಚಿತ್ರ ನಾಗರಹಾವು. ಹಾಗಾಗಿ ಕಾಕತಾಳೀಯ ಎನ್ನುವಂತೆ ಕಾಣಿಸಿಕೊಂಡ ನಾಗರಹಾವು ನೋಡುಗರಲ್ಲಿ ಆಶ್ಚರ್ಯಚಕಿತರನ್ನಾಗಿ ಮಾಡುವಂತೆ ಮಾಡಿತು. ಈ ಹಿಂದೆ ಹಲವು ಬಾರಿ ವಿಷ್ಣುವರ್ಧನ್ ಸಮಾಧಿ ಬಳಿ ನಾಗರಹಾವು ಕಾಣಿಸಿಕೊಳ್ಳುತ್ತಿತ್ತು. ಹಾವು ಕಾಣಿಸಿಕೊಳ್ಳುತ್ತಿದ್ದಂತೆ ಉರಗ ತಜ್ಞರಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕಾಗಮಿಸಿದ ಉರಗ ತಜ್ಞ ನಾಗರಹಾವನ್ನು ರಕ್ಷಣೆ ಮಾಡಿದ್ದಾರೆ.

    ಫೆಬ್ರವರಿಯಲ್ಲಿ ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ, ಏನು ಬೇಕಾದರೂ ಕೇಳಿ, ವಿಷ್ಣು ಬಗ್ಗೆ ಕೇಳಬೇಡಿ ಅಂತ ಹೇಳಿದ್ದರು. ವಿಷ್ಣು ಬಗ್ಗೆ ಮಾತನಾಡುವಾಗ ಮನಸ್ಸು ಭಾರವಾಗುತ್ತದೆ. ಏನೇ ಹೇಳಬೇಕೆಂದು ಪದಗಳೇ ತೋಚಲ್ಲ. ಕೇವಲ ಕಣ್ಣೀರು ಬಂದ್ರೆ ಸ್ನೇಹಿತರಲ್ಲ, ಚಿತ್ರರಂಗದಲ್ಲಿ ನನಗೂ ಮತ್ತು ಅವನ ನಡುವಿನ ಸ್ನೇಹಕ್ಕೆ ಪದಗಳೇ ಇಲ್ಲ. ಆ ಕಾಲದಲ್ಲಿ ನಾವಿಬ್ಬರು ಹೀರೋಗಳು. ಬೇರೆ ಯಾರಾದರೂ ಆಗಿದ್ದರೆ ಸಿನಿಮಾಗಾಗಿ ಗಲಾಟೆ ಮಾಡುತ್ತಿದ್ದರು. ಸಿನಿಮಾ ಬಗ್ಗೆ ಒಂದು ದಿನವೂ ನಾವಿಬ್ಬರು ಮಾತನಾಡುತ್ತಿರಲಿಲ್ಲ ಎಂದು ಹೇಳಿದ್ದರು.

    ಸೆನ್ಸ್ ಅಫ್ ಹ್ಯೂಮರ್ ನಲ್ಲಿ ವಿಷ್ಣು ನನಗಿಂತ ಎತ್ತರದಲ್ಲಿದ್ದಾನೆ. ಯಾರಾದರೂ ಇದ್ದರೆ ಸುಮ್ಮನೆ ಇರುತ್ತಿದ್ದ, ನಾನು ಮತ್ತು ಸುಮಲತಾ ಇದ್ದಾಗ ಬೇರೆಯವರು ಹೇಗೆ ಮಾತಾಡ್ತಾರೆ ಎಂಬುದನ್ನು ಮಿಮಿಕ್ರಿ ಮಾಡಿ ತೋರಿಸುತ್ತಿದ್ದನು. ಇಬ್ಬರು ಏಕಕಾಲದಲ್ಲಿ ಸಿನಿಮಾಗೆ ಎಂಟ್ರಿ ಕೊಟ್ಟಿದ್ದು, ಅವನಿಗೂ ಇಷ್ಟು ದೊಡ್ಡ ಹೀರೋ ಅಗ್ತೀನಿ ಅಂತಾ ಗೊತ್ತಿರಲಿಲ್ಲ. ನಾನು ಹೀರೋ ಆಗ್ತೀನಿ ಅಂತ ನನಗೂ ಗೊತ್ತಿರಲಿಲ್ಲ. ಅಂದಿನಿಂದ ಶುರುವಾದ ಸ್ನೇಹ ಇಂದಿಗೂ ಮುಂದುವರಿದುಕೊಂಡು ಬಂದಿದೆ ಎಂದು ವಿಷ್ಣು ಮತ್ತು ತಮ್ಮ ಸ್ನೇಹದ ಬಗ್ಗೆ ಮಾತುಗಳನ್ನಾಡಿದ್ದರು.

    https://www.youtube.com/watch?v=y7BaiZ-wkck

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv